text stringlengths 0 61.5k |
|---|
ಬಾಲಕ ಶರೀಫನಿಗೆ ತಂದೆ ಇಮಾಮಭಾಯಿ ಉರ್ದು ಕಲಿಸಿದರೆ, ನೆರೆಮನೆಯ ವಿಭೂತಿ ಫಕೀರಯ್ಯನವರು ಕನ್ನಡ ಅಕ್ಷರಭ್ಯಾಸ ಮಾಡಿಸಿದರು. ತಂದೆ ತಾಯಿಗಳ ಮೂಲಕ ಹುಲಗೂರಿನ ಹಜರೇಶ ಖಾದರಿ ಅವರ ಬಗೆಗೆ ಬಾಲಕನಲ್ಲಿ ಭಕ್ತಿ ಬೆಳೆಯಿತು. ಫಕೀರಯ್ಯನವರ ಮೂಲಕ ವೀರಶೈವ ಪುರಾಣ ವಚನಗಳ ಪರಿಚಯ ಶರೀಫರಿಗೆ ಒದಗಿ ಬಂದಿತು. ಶಿವಶರಣರಲ್ಲಿ ಪ್ರಭುದೇವನ ಬಗೆಗೆ ಶರೀಫರಿಗೆ ಬಹಳ ಆಕರ್ಷಣೆ ಅನಿಸಿತು. ಶಿಶುನಾಳ ಗ್ರಾಮದೇವತೆ ಬಯಲು ಬ... |
ಜನಜೀವನದಲ್ಲಿ ಬೆರೆತರು |
ಆ ಕಾಲದಲ್ಲಿ ಈಗಿನಂತೆ ಸಿನಿಮಾ, ರೇಡಿಯೋ, ಪತ್ರಿಕೆಗಳು ಇರಲಿಲ್ಲ. ಶಿಶುನಾಳ ಹಳ್ಳಿಯ ಜನರ ಮನರಂಜನೆಗಾಗಿ, ವಿಕಾಸಕ್ಕಾಗಿ ಕೆಲವು ಸಾಧನಗಳು ಇದ್ದವು. ಭಜನೆಯ ಮೇಳ, ಪುರಾಣ ಹೇಳುವುದು, ಪ್ರವಚನ ಮಾಡುವುದು, ಬಯಲಾಟ ಆಡುವುದು, ಹೋಳೀ ಹಬ್ಬದ, ಮೊಹರಮ್ಮಿನ ಹಾಡು ಹೇಳುವುದು, ಕುಣಿಯುವುದು ಇತ್ಯಾದಿ ಅಂತಹ ಸಾಧನಗಳಾಗಿದ್ದವು. ಶರೀಫರು ಇವುಗಳಲ್ಲಿ ತಮ್ಮ ಆನಂದ ಹೆಚ್ಚಿಸಿಕೊಂಡರು. ಇತರರಿಗೆ ಹರುಷವನ್ನು ಒದ... |
ಶರೀಫರು ಶಿಕ್ಷಣ ಕನ್ನಡ ಏಳನೇಯ ತರಗತಿಯ ಪರೀಕ್ಷೆಯವರೆಗೆ ಮಾತ್ರ ನಡೆಯಿತು. ಮುಂದೆ ಅವರು ಖಾಸಗಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡಿದರು. ಶಾಲೆಯಲ್ಲಿ ಚಿಕ್ಕವರಿಗೆ, ಶಾಲೆಯ ಹೊರಗೆ ದೊಡ್ಡವರಿಗೆ ವಿದ್ಯಾದಾನ ಮಾಡಿದರು. ಹೀಗೆ ಗ್ರಾಮಜೀವನದಲ್ಲಿ ಒಂದಾಗಿ ಬೆರೆತು ಪ್ರೇಮಕ್ಕೆ, ಗೌರವಕ್ಕೆ ಪಾತ್ರರಾದರು. |
ಗುರುವಿಗಾಗಿ |
ಈ ಬಗೆಯ ಲೋಕದ ಬಾಳಿನ ಹರುಷವನ್ನು ಪಡೆದ ಶರೀಫರಿಗೆ ಇಷ್ಟರಿಂದಲೇ ತೃಪ್ತಿಯಾಗಲಿಲ್ಲ. ಪರಮಾತ್ಮನ ಸಾಧನೆಯ ದಾರಿಯಲ್ಲಿ ಸಾಗಿ ಆನಂದ ಪಡೆಯುವ ಆಸೆ ಅವರದಾಗಿತ್ತು. ಈ ಬಗೆಯ ಸಾಧನೆಯಲ್ಲಿ ಮುಂದುವರಿಯಬೇಕಾದರೆ ಗುರುವಿನ ಅವಶ್ಯಕತೆ ಅವರಿಗೆ ಕಂಡುಬಂದಿತು. ಗುರುವಿಗಾಗಿ ಹುಡುಕತೊಡಗಿದರು. |
ಶಿಶುನಾಳದ ನೆರೆ ಹಳ್ಳಿ ಕಳಸ. ಅಲ್ಲಿ ಗೋವಿಂದ ಭಟ್ಟರು ವಾಸಿಸುತ್ತಿದ್ದರು. ಅವರು ಧಾರ್ಮಿಕರು. ಶಕ್ತಿಯ ಉಪಾಸಕರು. ಸ್ವೇಚ್ಛೆಯಿಂದ ವರ್ತಿಸುವ ಲೀಲಾಮೂರ್ತಿಗಳು. ಶರೀಫರ ಬಾಲ್ಯದಲ್ಲಿ ಅವರಿಗೆ ಹೆಚ್ಚಿನ ಅಕ್ಷರಭ್ಯಾಸ ಮಾಡಿಸಿದವರು ಈ ಗೋವಿಂದ ಭಟ್ಟರೇ. ಶರೀಫರ ತಂದೆ ಇಮಾಮಭಾಯಿ ಮತ್ತು ಗೋವಿಂದಭಟ್ಟರು ಆತ್ಮೀಯ ಗೆಳೆಯರಾಗಿದ್ದರು. ಗುರುವಿನ ಶೋಧನೆಗೆ ತೊಡಗಿದ ಶರೀಫರು ಗೊವಿಂದ ಭಟ್ಟರನ್ನು ಗುರುವೆಂದು... |
ಗೋವಿಂದಭಟ್ಟರು ಶರೀಫರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. |
ಸಾಂಸಾರಿಕ ಜೀವನವು ಲೌಕಿಕದ ಬಾಳು. ಪರಮಾತ್ಮ ಸಾಧನೆಯ ಬಾಳನ್ನು ಪಾರಮಾರ್ಥಿಕ ಇಲ್ಲವೆ ಆಧ್ಯಾತ್ಮಿಕ ಜೀವನದ ಮಾರ್ಗದರ್ಶಿ. ಗುರುವನ್ನು ಶರೀಫರು ಆಧ್ಯಾತ್ಮಿಕ ಸಂಸಾರದ ಗಂಡನೆಂದು ಭಾವಿಸಿ ಹಾಡು ರಚಿಸಿದ್ದಾರೆ. ಆ ಗುರುವನ್ನು ಪಡೆದುಕೊಂಡದ್ದು ಗಂಡನ್ನು ಮಾರಿಕೊಂಡಂತೆ ಎಂದು ವರ್ಣಿಸಿದ್ದಾರೆ. |
"ನನ್ನೊಳಗೆ ನಾ ತಿಳಕೊಂಡೆ |
ನನಗೆ ಬೇಕಾದ ಗಂಡನ್ನ ಮಾಡಿಕೊಂಡೆ |
ಆರು ಮಕ್ಕಳನ್ನು ಅಡವಿಗಟ್ಟಿ |
ಮೂರು ಮಕ್ಕಳನ್ನು ಬಿಟ್ಟುಗೊಟ್ಟೆ |
ಇವನ ಮೇಲೆ ನಾ ಮನಸಿಟ್ಟೆ ಎನ್ನ |
ಬದುಕು ಬಾಳನ್ನೆಲ್ಲ ಬಿಟಗೊಟ್ಟೆ |
ಶಿವ ಶಿವಯೆಂಬ ಹಾದಿ ಬೇಡಿಕೊಂಡೆ ಈ |
ಭವಕ್ಕ ಬಾರದಂಗ ಮಾಡಿಕೊಂಡೆ |
ಗುರು ಉಪದೇಶವ ಪಡಕೊಂಡೆನಾ |
ಗುರು ಗೊವಿಂದನಾ ಪಾದ ಹಿಡಕೊಂಡೆ. |
ಈ ಹಾಡಿನಲ್ಲಿಯ ಪದಗಳು ಸಾಂಕೇತಿಕ ಅರ್ಥದಿಂದ ಕೂಡಿವೆ. "ಗುರುವಿನ ಉಪದೇಶ ಪಡಕೊಂಡೆ; ಗುರು ಗೋವಿಂದನ ಪಾದವ ಹಿಡಕೊಂಡೆ" ಎಂಬ ನುಡಿಯಲ್ಲಿ ಸಹಜವಾದ ಅರ್ಥವಿದೆ. ತನಗೆ ಬೇಕಾದ ಗುರುವನ್ನು ಪಡೆದ ಶರೀಫ "ನನಗೆ ಬೇಕಾದ ಗಂಡನ್ನ ಮಾಡಿಕೊಂಡೆ" ಎಂದಿದ್ದಾರೆ. "ಆರು ಮಕ್ಕಳು", "ಮೂರು ಮಕ್ಕಳು" ಈ ಪದಗಳಿಗೆ ಸಾಂಕೇತಿಕ ಅರ್ಥವಿದೆ. ಕಾಮ, ಕ್ರೋಧ, ಇತ್ಯಾದಿ ಆರು ವೈರಿಗಳು. ತಾಮಸ, ರಾಜಸ, ಸಾತ್ತ್ವಿಕ ಎಂಬ ಮೂರ... |
ಗುರುವು ಶಿಷ್ಯನ ಲೋಪದೋಷಗಳನ್ನು ತಿದ್ದುತ್ತಾನೆ, ಅವಗುಣಗಳನ್ನು ತೊಡೆದುಹಾಕುತ್ತಾನೆ. ಹೀಗೆ ಮಾಡುವಾಗ ಆತನು ಶಿಷ್ಯನೊಂದಿಗೆ ನಿಷ್ಠುರವಾಗಿ ನಡೆದುಕೋಳ್ಳಬಹುದು. ಇದನ್ನು ಕುರಿತು ಶರೀಫರು, |
……………………………………ನನಗಂಡ |
ನಡ-ಮುರಿದೊದೆದೆನ್ನ |
ಹುಡುಗಾಟ ಬಿಡಿಸಿ ಹೌದೆನಿಸಿದನೇ" |
ಎಂಬುದಾಗಿ ಹಾಡಿದ್ದಾರೆ. |
ಶಿಷ್ಯ ಶರೀಫ ಗುರು ಗೋವಿಂದಭಟ್ಟ ಇವರ ಜೋಡಿಯು ಜೀವನದ ಉದ್ದಕ್ಕೂ ಸಾಗಿತು. ಅವರಿಬ್ಬರಲ್ಲಿ ಪರಸ್ಪರ ವಿಶ್ವಾಸ ಕೊನೆಯವರೆಗೂ ಉಳಿದು ಬಂದಿತು. ಶರೀಫರ ಸಮಾಧಿಯ ಮೇಲೆ ಇವರಿಬ್ಬರ ಮೂರ್ತಿಗಳನ್ನಿಟ್ಟು ಪೂಜಿಸುವ ಸಂಪ್ರದಾಯ ಈಗಲೂ ಉಂಟು. |
ಮುಸಲ್ಮಾನ ಮನೆತನದಲ್ಲಿ ಹುಟ್ಟಿದ ಶರೀಫರು, |
"ಹಾಕಿದ ಜನಿವಾರವ ಸದ್ಗುರುರಾಯ |
ಹಾಕಿದ ಜನಿವಾರವ ಹಾಕಿದ ಜನಿವಾರ |
ನೂಕಿದ ಭವಭಾರ |
ಬೇಕೆನುತ ಬ್ರಹ್ಮಜ್ಞಾನ ಉಚ್ಚರಿಸೆಂದು" |
ಎಂದು ಹಾಡಿದ್ದಾರೆ. ಅವರು ನಿಜವಾಗಿ ಜನಿವಾರ ಧರಿಸಿದ್ದರೋ ಇಲ್ಲವೋ ಎಂಬ ಸಂಗತಿಯು ಮಹತ್ವದ್ದಲ್ಲ. ಮಹಾಪುರುಷರು ಹೊರಗಿನ ಧಾರ್ಮಿಕ ಸಂಕೇತಗಳಿಗೆ ಮಹತ್ವ ಕೊಡುವುದಿಲ್ಲ. "ಜನಿವಾರ" ಎಂಬ ಪದಕ್ಕೆ ಶರೀಫ ಸಂಪ್ರದಾಯದವರು ಹೇಳುವ ಅರ್ಥವು ಬೇರೆ ತರಹದ್ದಾಗಿದೆ. "ಜ"= ಹುಟ್ಟು-ಸಾವು "ನಿವಾರ"= ಅಳಿಯುವುದು. ಹುಟ್ಟು ಸಾವುಗಳ ಬಂಧನವನ್ನು ಮೀರಿ ನಿಲ್ಲುವ ಸ್ಥಿತಿಯನ್ನು ಶರೀಫರು ಪಡೆಯುವಂತೆ ಗುರುಗಳು ಮಾಡಿ... |
"ಇಂದು ಏಕಾದಶಿಯ ವ್ರತವ ತೀರಿಸಿದೆ |
ತಂದೆ ಗುರುಗೋವಿಂದಾಜ್ಞೆಯಲಿ" |
ಎಂಬ ನುಡಿಯಿದೆ. ಗೋವಿಂದಭಟ್ಟರನ್ನು ಗುರುವನ್ನಾಗಿ ಮಾಡಿಕೊಂಡ ಶರೀಫರು "ಜನಿವಾರ", "ಏಕಾದಶಿ ವ್ರತ" ಎಂಬ ವೈದಿಕ ಸಂಸ್ಕೃತಿಯ ಪದಗಳನ್ನು ಬಳಸಿದ್ದಾರೆ. ಮುಸಲ್ಮಾನ ಧಾರ್ಮಿಕ ಸಂಸ್ಕೃತಿಯನ್ನು ಹೊರಹೊಮ್ಮಿಸಿ ತೋರಿಸುವ ಹಾಡುಗಳನ್ನೂ ಶರೀಫರು ರಚಿಸಿದ್ದಾರೆ. ಅವರು ಹೆಚ್ಚಾಗಿ ವೀರಶೈವ ಧಾರ್ಮಿಕ ಸಂಪ್ರದಾಯವನ್ನೊಳಗೊಂಡ ಹಾಡುಗಳನ್ನು ಬರೆದಿದ್ದಾರೆ. ಆದರೆ ಆಯಾ ಮತದವರು ಬರಿಯ ಹೊರಗಿನ ಆಚರಣೆಯಲ್ಲಿ ತೊಡಗ... |
ಅಪ್ರತ್ಯಕ್ಷ ಗುರು |
ಗೋವಿಂದಭಟ್ಟರು ಶರೀಫರಿಗೆ ಕಣ್ಣಿಗೆ ಕಾಣುವ ಗುರುಗಳಾದರೆ ಪ್ರಭುದೇವರು ಕಣ್ಣಿಗೆ ಕಾಣದ ಗುರುವಾಗಿದ್ದರು. ಮಾಯಿಯನ್ನು ಗೆದ್ದು ಎತ್ತರದ ನಿಲುವನ್ನು ಪಡೆದ ಅತಿ ವಿಶಾಲವಾದ ದೃಷ್ಟಿಯಿಂದ, ವೀರ ವಿರಕ್ತಿಯಿಂದ ಕೂಡಿದ ಪ್ರಭುದೇವರಿಂದ ಶರೀಫರು ಬಹಳವಾಗಿ ಪ್ರಭಾವಿತರಾಗಿದ್ದರು. "ಪ್ರಭುಲಿಂಗ ಲೀಲೆ" ಕಾವ್ಯವು ಅವರಿಗೆ |
ಅಚ್ಚುಮೆಚ್ಚಿನದಾಗಿತ್ತು. ಆ ಕಾವ್ಯದ ಒಂದು ಪ್ರತಿಯನ್ನು ಅವರು ಸ್ವತಃ ಬರೆದಿಟ್ಟುಕೊಂಡು ಅಧ್ಯಯನ ಮಾಡುತ್ತಿದ್ದರು. ಆ ಪ್ರತಿಯು ಈಗಲೂ ಶಿಶುನಾಳದಲ್ಲಿದೆ. ಶರೀಫರು ಪದೇ ಪದೇ "ಆರು ಶಾಸ್ತ್ರ ಹದಿನೆಂಟು ಪುರಾಣ ನನ್ನ ಬಗಲಾಗ, ಪ್ರಭುಲಿಂಗಲೀಲಾ ನನ್ನ ತಲೆಯ ಮೇಲೆ" ಎಂದು ಹೇಳುತ್ತಿದ್ದರಂತೆ. |
ಒಮ್ಮೆ ವೀರಶೈವ ಸ್ವಾಮಿಗಳೊಬ್ಬರು ಪ್ರಭುಲಿಂಗಲೀಲೆಯ ಪ್ರವಚನ ಮಾಡುತಿದ್ದರು. ಅವರು ಆ ಕಾವ್ಯವನ್ನು ಸರಿಯಾಗಿ ಅರಿತುಕೊಂಡಿರಲಿಲ್ಲ. ಪ್ರವಚನದಲ್ಲಿ ಅವರು ಪ್ರಭುದೇವರ ವ್ಯಕ್ತಿತ್ವದ ಇಲ್ಲವೆ ಅವರ ತತ್ತ್ವಬೋಧೆಯ ಹಿರಿಮೆಯನ್ನು ಹೇಳದೆ ಅಗ್ಗದ ಮನರಂಜನೆಯ ಕಥೆ ಹೇಳುತ್ತಿದ್ದರು. ಆ ಹಾದಿಯಲ್ಲಿ ಹೊರಟಿದ್ದ ಶರೀಫರು ಅಲ್ಲಿ ಕೆಲಹೊತ್ತು ನಿಂತು ಅದನ್ನು ಕೇಳತೊಡಗಿದರು. ಅವರಿಗೆ ಸಹನೆ ಮೀರಿತು. ಸಿಡಿದೆದ್ದ... |
ಓದುವವಗೆಚ್ಚರಿಬೇಕೋ | ಪ್ರಭುಲಿಂಗಲೀಲಾ | |
ಓದುವವಗೆಚ್ಚರಿರಬೇಕೋ || |
ಅಭವ ಮೆಚ್ಚುವ ತೆರದೊಳರ್ಥವ |
ಶುಭದೆ ಕೆಡಿಸದೆ ಓದಲವನಿಗೆ |
ಉಭಯ ಭೇದವ ಕಳೆದು ಸ್ವರ್ಗದ |
ಸಭೆಯವರು ಅಹುದೆನ್ನುವಂತೆ………… |
ಪ್ರಭುಲಿಂಗ ಲೀಲೆಯನ್ನು ತುಂಬ ಎಚ್ಚರದಿಂದ ಓದಬೇಕು. ಅದರ ಶುಭದ ಅರ್ಥವನ್ನು ಕೆಡಿಸಬಾರದು. ಸರಿಯಾಗಿ ಓದಿ ಸಮರ್ಪಕವಾಗಿ ಅರ್ಥ ಹೇಳುವಾಗ ಶಿವನಿಗೆ ಮೆಚ್ಚುಗೆಯಾಗಬೇಕು. ಸ್ವರ್ಗದ ಸಭೆಯವರೂ "ಅಹುದು, ಅಹುದು" ಎನ್ನಬೇಕು. ಹೀಗೆಂದು ಶರೀಫರ ಅಭಿಪ್ರಾಯ. ಪ್ರಭುದೇವರ ಬಗೆಗೆ ಶರೀಫರಿಗಿದ್ದ ಭಕ್ತಿ-ಗೌರವಗಳು ಈ ಮಾತಿನಲ್ಲಿ ಸ್ಷಷ್ಟವಾಗಿ ಕಂಡು ಬರುತ್ತಿದೆ. |
ಬಸವಣ್ಣ ಚನ್ನಬಸವಣ್ಣನವರ ಬಗೆಗೂ ಶರೀಫರಿಗೆ ತುಂಬ ಭಕ್ತಿಯಿತ್ತು. ಅವರು ಆಗಾಗ ಉಳವಿಯ ಪುಣ್ಯಕ್ಷೇತ್ರದಲ್ಲಿ ನಡೆಯುವ ಚೆನ್ನಬಸವೇಶ್ವರ ಜಾತ್ರೆಗೆ ಹೋಗುತ್ತಿದ್ದರು. "ಉಳವಿಗೆ ಹೊಗುವವರು ಉಳಿಸಿಕೊಂಡು ಬರಬಾರದೋ, ಎಲ್ಲಾ ಅಳಿಸಿಕೊಂಡು ಬರಬೇಕೋ" ಎಂದು ಹೇಳುತ್ತಿದ್ದರು. ಜಾತ್ರೆಗೆ ಹೋಗುವವರು ಮೋಜಿಗಾಗಿ, ವಿಲಾಸಕ್ಕಾಗಿ ಹೋಗುವುದು ವಾಡಿಕೆಯಾಗಿದೆ. ಆದರೆ ಶರೀಫರ ದೃಷ್ಟಿಯೇ ಬೇರೆ. ಜಾತ್ರೆಗೆ ಹೋಗುವವರ... |
ವೀರಶೈವ ಧರ್ಮದ ಪ್ರಭಾವವು ಶರೀಫರ ಮೇಲೆ ಆದುದಕ್ಕೆ ಅವರ ಕಾಲದ ಶರಣರ ಸಂಪರ್ಕವೂ ಕಾರಣವಾಗಿದೆ. ಮುಳಗುಂದದ ಬಾಲಲೀಲಾ ಮಹಂತ ಶಿವಯೋಗಿ, ಗರಗದ ಮಡಿವಾಳಸ್ವಾಮಿ, ಹುಬ್ಬಳ್ಳಿಯ ಸಿದ್ಧಾರೂಢರು, ನವಿಲುಗುಂದ ನಾಗಲಿಂಗಸ್ವಾಮಿ ಇವರ ಸಂಪರ್ಕವನ್ನು ಶರೀಫರು ಪಡೆದಿದ್ದರು. ಮುರಗೋಡದ ಚಿದಂಬರ ದೀಕ್ಷಿತರೂ ಶರೀಫರ ಕಾಲದವರಾಗಿದ್ದರು. ಶರೀಫರು ಅವರ ಸಂಪರ್ಕವನ್ನು ಪಡೆದಿದ್ದರು. ಈ ಎಲ್ಲ ಪುಣ್ಯಪುರುಷರು ಆಗ ಆ ಪ್ರ... |
ಶರೀಫರು ದೊಡ್ಡ ಸಂಖ್ಯೆಯ ತತ್ತ್ವಪದಗಳನ್ನು ರಚಿಸಿದರು. ಆ ಪದಗಳು ಅಕ್ಷರಜ್ಞಾನವಿಲ್ಲದ ಅಸಂಖ್ಯ ಹಳ್ಳಿಗರ ನಾಲಿಗೆಯ ಮೇಲೆ ಈಗಲೂ ನಲಿಯುತ್ತಿವೆ. ಜನರು ಅಲ್ಲಿ ಸೇರಿ ಧಾರ್ಮಿಕ ಭಾವದಲ್ಲಿ ತನ್ಮಯರಾಗುತ್ತಾರೆ. ಸಂಸಾರದ ದುಃಖಗಳನ್ನು ಮರೆತು ಆನಂದದ ಬುತ್ತಿಯನ್ನು ಕಟ್ಟಿಕೊಂಡು ತಮ್ಮ ಊರುಗಳಿಗೆ ಮರಳುತ್ತಾರೆ. |
ಜನರಿಗೆ ಮಾರ್ಗದರ್ಶನ |
ಶರೀಫರದು ಬಡತನದ ಬಾಳು. ಮನೆಗಾಗಿ, ಮಡದಿಗಾಗಿ ತನಗಾಗಿ ಗಳಿಸಬೇಕೆಂಬ ದೃಷ್ಟಿಯೂ ಅವರದಾಗಿರಲಿಲ್ಲ. ಜನರನ್ನು ಮೆಚ್ಚಿಸುವ ಸ್ವಭಾವವೂ ಅವರದಲ್ಲ. ಜನರ ಲೋಪದೋಷಗಳನ್ನು ಕಂಡಾಗ ಯಾವ ಹಂಗು-ಹೆದರಿಕೆ ಇಲ್ಲದೆ ಅವುಗಳನ್ನು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು. ಆದುದರಿಂದ ಜನರ ನೆರವು ಅವರಿಗೆ ಕೊರೆಯುತ್ತಿರಲಿಲ್ಲ. ಹೀಗಾಗಿ ಅವರು ಬಾಳಿನಲ್ಲಿ ಎಷ್ಟೋ ಕಷ್ಟಗಳನ್ನು, ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ... |
ಶಿಶುನಾಳ ಶರೀಫರು ಜನಜೀವನದಲ್ಲಿ ಬೆರೆತರು. |
ತಮ್ಮ ಸುತ್ತಣ ಜನರ ಬಾಳನ್ನು ಶರೀಫರು ತೆರೆದ ಕಣ್ಣುಗಳಿಂದ ಕಂಡರು. ಮುಕ್ತಮನಸ್ಸಿನಿಂದ ಅನುಭವಿಸಿದರು. ಸಂಸಾರದ ಕೋಟಲೆಯಲ್ಲಿ ಆಸೆ – ಅಂಜಿಕೆಗಳಿಗೆ ಒಳಗಾಗಿ ಗೋಳಾಡುವವರನ್ನು, ಮೂಢನಂಬಿಕೆಗಳಿಗೆ ಬಲಿಯಾದವರನ್ನು ಕಂಡು ಅವರ ಹೃದಯ ಕರಗಿತು. ಧಾರ್ಮಿಕ ವ್ರತನೇಮಗಳ ಢಾಂಬಿಕ ಆಚಾರಗಳಲ್ಲಿ ತೊಡಗಿದವರನ್ನು ಕಂಡು ಅವರು ಮರುಗಿದರು. ತನ್ನೊಳಗೆ ಪರಮಾತ್ಮನ್ನು ಕಂಡುಕೊಳ್ಳುವ ಹಾದಿಯನ್ನು ಜನತೆಗೆ ಬೋಧಿಸುವ ಕ... |
ಗುಡಿಯ ನೋಡಿರಣ್ಣ | ದೇಹದ | |
ಎಂದು ಹಾಡಿದರು. ಪೊಡವಿಗಧಿಕ ಎನ್ನೊಡೆಯನು ಅಡಗಿಕೊಂಡು ಕಡು ಬೆಡಗಿನೊಳು ದೇಹದ ಗುಡಿಯಲ್ಲಿ ವಾಸಿಸುತ್ತಾನೆ ಎಂದು ಸಾರಿದರು. ದೇವರು ನಮ್ಮೊಳಗೇ ಇರುವಾಗ ಹೊರಗಿನ ವ್ರತನೇಮಗಳಿಗೆ ಮಹತ್ವವಿಲ್ಲ. ದೇವರಿಗೆ ನೈವೇದ್ಯ ಮಾಡುವ ಹೊರಗಿನ ಆಚಾರವನ್ನು ಕಂಡಾಗ, |
"ಎಡೆಯ ಒಯ್ಯುಣ ಬಾರೇ | ದೇವರಿಗೆ |
ಎಡೆಯ ಒಯ್ಯೂಣ ಬಾರೇ, ಮಡಿಗುಡಿಯಿಂದಲಿ |
ಪೊಡವಿಗಧಿಕ ಎನ್ನೋಡೆಯ ಅಲ್ಲಮನಿಗೇ" |
ಎಂದು ಹಾಡಿದರು. ಶುದ್ಧವಾದ ಮನಸ್ಸನ್ನೇ ಅವರು "ಮಡಿ" ಎಂದು ಭಾವಿಸಿದರು. ತನ್ನ ನಿಜವಾದ ತಿಳುವಳಿಕೆಯನ್ನೆ "ಎಡೆ" ಎಂದು ಅವರು ತಿಳಿಸಿದರು. ತನ್ನತನದ ಅರಿವೇ ಇಲ್ಲದ ಆಚರಣೆಯನ್ನು ಅವರು ಖಂಡಿಸಿದರು. |
ಕಾಲಿಗೆ ಜಂಗು ಕಟ್ಟಿಕೊಂಡು ಕೈಯಲ್ಲಿ ಜೋಳಿಗೆ ಹಿಡಿದು ಹಿಟ್ಟಿನ ಭಿಕ್ಷೆಗಾಗಿ ಮನೆ ಮನೆ ತಿರುಗಿದ ಶರಣ ಧರ್ಮವನ್ನು ರೂಢಿಸಿಕೊಳ್ಳದ ಜಂಗಮರನ್ನು ಕಂಡಾಗ ಅವರನ್ನು ವಿಡಂಬಿಸಿ ನುಡಿದರು. ಮತ್ತೊಮ್ಮೆ, |
"ಬಲ್ಲವರಾದರೆ ತಿಳಿದು ಹೇಳಿರಿ |
ಮುಲ್ಲಾನ ಮಸೂತಿ ಎಲ್ಲಿತ್ತೊ |
ಗುಲ್ಲ ಮಾಡಿ ಗುದ್ಯಾಟಲಾವಿಗೆ |
ಬೆಲ್ಲವೋದಿಸುವದೆಲ್ಲಿತ್ತೋ" |
ಎಂದು ಸವಾಲು ಹಾಕಿದರು. "ಅಲಾವಿ ಬೆಲ್ಲ ಓದಿಸುವುದು" ಇದು ಮುಸಲ್ಮಾನ ಧಾರ್ಮಿಕ ಸಂಪ್ರದಾಯದ ನುಡಿಗಳು. ವೀರಶೈವ ಜಂಗವರೇ ಆಗಲಿ ಮುಸಲ್ಮಾನ ಮುಲ್ಲಾಗಳೇ ಆಗಲಿ ನಿಜವಾದ ಅರಿವಿಲ್ಲದ ಅವರನ್ನು ಶರೀಫರು ಖಂಡಿಸಿ ನುಡಿದರು. |
ಸಾಮಾನ್ಯ ಸನ್ನಿವೇಶಗಳಲ್ಲಿ ಮಿಂಚಿಸಿದ ಅರ್ಥ |
ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಇಲ್ಲವೆ ಬೂಟಾಟಿಕೆಗಾಗಿ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳನ್ನು ಶರೀಫರು ಖಂಡಿಸಿ ನುಡಿದ ಹಾಡುಗಳು ಒಂದು ಬಗೆಯವು; ಬಾಳಿನಲ್ಲಿ ನಡೆದ ಸನ್ನಿವೇಶಗಳನ್ನು ತಾತ್ತ್ವಿಕ ಅರ್ಥವನ್ನು ಹೊರಹೊಮ್ಮಿಸುವ ಹಾಡುಗಳು ಇನ್ನೊಂದು ಬಗೆಯವು, ಈ ಬಗೆಯ ಹಾಡುಗಳನ್ನು ಶರೀಫರು ಹೆಚ್ಚಾಗಿ ರಚಿಸಿದ್ದಾರೆ. |
ಶರೀಫ ಸದಾ ಸಂಚಾರದಲ್ಲಿರುತ್ತಿದ್ದರು. ಮುಖ್ಯವಾಗಿ ಅವರು ಶಿಶುನಾಳದ ನೆರೆಯ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದರು. ಖಾಸಗಿ ಶಾಲೆಯ ಶಿಕ್ಷಕರಾಗಿ ಕೆಲವು ಹಳ್ಳಿಗಳಲ್ಲಿ ದುಡಿದರು. ದೊಡ್ಡಾಟ ಮಾಡಿಸಲು, ಆಲಾವಿ ಪದಗಳನ್ನು ಹಾಡಿಸಲು ಅಲ್ಲಲ್ಲಿಗೆ ಹೋಗುತ್ತಿದ್ದರು. ಸಂತೆ, ಜಾತ್ರೆ, ಭಜನೆ, ಪುರಾಣ ಪ್ರವಚನ ನಡೆಯುವಲ್ಲಿ ಅವರು ಇರುತ್ತಿದ್ದರು. ಹೀಗಾಗಿ ಅವರು ಹಲವು ಬಗೆಯ ಜನರ ಸಂಪರ್ಕ ಪಡೆದರು. ಬಾಳಿನ ಬ... |
ಶರೀಫರ ಪದಗಳು ವಿರಾಮವಾಗಿ ಯೋಚಿಸಿ ರೂಪುಗೊಂಡವುಗಳಲ್ಲ. ಬಾಳಿನ ಯಾವುದೊಂದು ಸಂಗತಿಯಿಂದ ಸಂತಸವಾದಾಗ ಇಲ್ಲವೆ ಯಾವುದೇ ವ್ಯಕ್ತಿ ಇಲ್ಲವೇ ಪ್ರಸಂಗ ಅವರನ್ನು ಕೆಣಕಿದಾಗ ದಿಢೀರನೆ ಹೊರಹೊಮ್ಮಿದ ಹಾಡುಗಳವು. ಹೊರಗಿನ ಪ್ರಸಂಗಕ್ಕೆ ಹೊಂದಿಕೆಯಾಗುವ ಮಾತುಗಳಿರುವ ಆ ಹಾಡುಗಳಲ್ಲಿ ತಾತ್ತ್ವಿಕವಾದ ಬೇರೊಂದು ಅರ್ಥ ತುಂಬಿರುವುದು ಶರೀಫರ ಹಾಡುಗಳ ವೈಶಿಷ್ಟ್ಯವಾಗಿದೆ. |
'ಸಾಲಿಯ ನೊಡಿದಿರಾ?' |
ಅವಿಭಜಿತ ಧಾರವಾಡ ಜಲ್ಲೆಯು (ಇಂದಿನ ಹಾವೇರಿ, ಗದಗ ಹಾಗೂ ಧಾರವಾಡ ಜಲ್ಲೆಗಳು) ಹಿಂದಿನ ಮುಂಬಯಿ ಪ್ರಾಂತ್ಯಕ್ಕೆ ಸೇರಿತ್ತು. ಶರೀಫರ ತಾರುಣ್ಯದ ಅವಧಿಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಹಳ್ಳಿಗಳಲ್ಲಿ ಕನ್ನಡ ಕಲಿಸುವ ಸರಕಾರಿ ಶಾಲೆಗಳು ಇನ್ನೂ ಆರಂಭವಾಗಿರಲಿಲ್ಲ. ಅಂತೆಯೇ ಅವರು ಖಾಸಗಿ ಶಾಲೆ ತೆರೆದು ಅಕ್ಷರಭ್ಯಾಸ ಮಾಡಿಸುವ ಕಾರ್ಯ ಕೈಗೊಂಡದ್ದರು. ಇಂತಹ ಶಾಲೆಗಳಿಗೆ ಒಳ್ಳೆಯ ಕಟ್ಟಡಗಳಾಗಲಿ, ಉಪಕರಣಗ... |
"ಸಾಲಿಯ ನೋಡಿದಿರಾ ಸರಕಾರದ |
ಸಾಲಿಯ ನೊಡಿದಿರಾ? |
ಸಾಲಿ ಸದ್ಗುರುವಿನ |
ಮಾಲು ಮಂಟಪವಿದು |
ಮೇಲು ಕುಣಿಸುವುದು ಭೊಲೋಕದೋಳು" |
ಸರ್ಕಾರಿ ಶಾಲೆಯ ಹೊಸ ಕಟ್ಟಡ ನೋಡಲು ಅಂದವಾಗಿತ್ತು. ಅದರ ವರ್ಣನೆಯಿಂದ ಹಾಡು ಆರಂಭವಾಯಿತು. ಹಾಡು ಮುಂದುವರಿದಂತೆ ಒಳಗೆ ತಾತ್ತ್ವಿಕ ಅರ್ಥವನ್ನು ತುಂಬಲಾಗಿದೆ. ಶಾಲೆಯಲ್ಲಿ ತುಂಟ ಬಾಲಕರು ಸದ್ಗುರುವಿನ ಮೂಲಕ ಅಕ್ಷರಾಭ್ಯಾಸ ಮಾಡುತ್ತಾರೆ. ನಮ್ಮ ದೇಹವೂ ಒಂದು ಶಾಲೆ. ಅಲ್ಲಿ ತುಂಟತನದ ಇಂದ್ರಿಯ ವಿಕಾರಗಳಿವೆ. "ಅರಿವು" ಎಂಬ ಸದ್ಗುರುವಿನ ಮಾರ್ಗದರ್ಶದಲ್ಲಿ ಇಂದ್ರಿಯ ವಿಕಾರವಳಿದು ಶಾಂತಿ ಸುಖ ಪಡೆಯು... |
'ಇದೇ ಮನಿ' |
ಹೊರಗೆ ಕಾಣುವ ದೇಹದ ಒಳಗೆ ಮಾನವನ ಹೃದಯವಿದೆ. ಆ ಹೃದಯದ ಮಧ್ಯದಲ್ಲಿ ಆತ್ಮನಿದ್ದಾನೆ. ಆ ಆತ್ಮನ ಮನೆಯಾಗಿದೆ, ನಮ್ಮ ದೇಹ. |
ಇದೇ ಮನಿ, ಇದೇ ಮನಿ ಹೃದಯದೊಳಗೆ ನಲಿ |
ದಾಡುವ ಆತ್ಮನಿಗೆ ಇದೇ ಮನಿ, ಇದೇ ಮನಿ ||ಪ|| |
ಆ ಆತ್ಮನನ್ನು ಶರೀಫರು ಸದ್ಗುರುವೆಂದು ಕರೆದಿದ್ದಾರೆ. ನಮ್ಮೊಳಗೆ ಇರುವ ಆತ್ಮನು ಪರಮಾತ್ಮನ ಪ್ರತಿನಿಧಿ. ಆತ್ಮನ ಮೂಲಕ ನಾವು ಪರಮಾತ್ಮನ ಪ್ರತಿನಿಧಿ. ಆತ್ಮನ ಮೂಲಕ ನಾವು ಪರಮಾತ್ಮನನ್ನು ಸಾಧಿಸಿಕೊಳ್ಳಬೇಕು. |
ಒಬ್ಬ ಶ್ರೀಮಂತ ಮಣಹೊದಿದ. ಅವನ ಹೆಣವನ್ನು ಸುಡುಗಾಡಿಗೆ ಒಯ್ಯುತ್ತಿರುವ ಶರೀಫರು ಕಂಡರು. ಕೂಡಲೇ ಹಾಡೊಂದು ಹೊರ ಹೊಮ್ಮಿ ಬಂದಿತು. |
ವಸ್ತಿ ಇರುವ ಮನಿಯೊ |
ಗಸ್ತಿ ತಿರುಗುವ ಮನಿಯೋ |
ಶಿಸ್ತಿಲೇ ಕಾಣುವದು ಶಿವನ ರುನಿಯೋ |
ವಸುಧಿಯೊಳು ನಮ್ಮ ಶಿಶುನಾಳಧೀಶನ |
ಹಸನಾದ ಪದಗಳ ಹಾಡುವ ಮನಿಯೋ |
ಅಲ್ಪಕಾಲದವರೆಗೆ ವಸತಿ ಮಾಡುವ ನಮ್ಮ ದೇಹ. ಅಲ್ಪಕಾಲ ನಾವು ಅಲ್ಲಿ ಮಾಸಿಸುವಾಗ ಎಚ್ಚರವಾಗಿದ್ದು ಗಸ್ತಿ ತಿರುಗಬೇಕು. ಹಾಗೆ ಎಚ್ಚರವಾಗಿದ್ದು ಶಿಸ್ತಿನಿಂದ ನಾವು ಬಾಳಿದರೆ ನಮ್ಮ ದೇಹವು ಶಿವನ ಮನೆಯಾಗುವುದು. ಇಂತಹ ದೇಹವನ್ನು ಶರೀಫರು ಶಿಶುನಾಳಧೀಶನ ಹಸನಾದ ಪದಗಳನ್ನು ಹಾಡುವದಕ್ಕಾಗಿ ಬಳಸಿಕೊಂಡರು. ಇದೇ ಮಾನವ ದೇಹವನ್ನು ಸಾರ್ಥಕಗೊಳಿಸುವ ಹಾದಿಯೆಂದು ಅವರು ತೋರಿಸಿಕೊಟ್ಟರು. |
ಗಿರಣಿ ನೋಡಮ್ಮಾ |
ಹುಬ್ಬಳ್ಳಿ ನಗರದಲ್ಲಿ ಹೊಸದಾಗಿ ನೂಲಿನ ಗಿರಣಿಯು ಆರಂಭವಾದುದನ್ನು ಶರೀಫರು ಕಂಡರು. ಆ ಗಿರಣಿ ಜನರಿಗೆ ಸೋಜಿಗವನ್ನು ಉಂಟುಮಾಡಿತು. ಎಲ್ಲರೂ ಅದನ್ನು ನೋಡುತ್ತ ನಿಂತರು. ಬಳಿಯಲ್ಲಿ ಇದ್ದ ಶರೀಫರು ಹಾಡತೊಡಗಿದರು: |
ಗಿರಣಿ ವಿಸ್ತಾರನೋಡಮ್ಮ | ಶರಣಿ ಕೂಡಮ್ಮಾ| |
ಕರ್ನಾಟಕ ರಾಜ್ಯದಿ ಮೆರಸಿದ ಮಹಾಚೋದ್ಯ |
ಚೀನಾ ದೇಶದ ವಿದ್ಯಾ ||೧|| |
ಜಲ ಅಗ್ನಿ ವಾಯು ಒಂದಾಗಿ ಕಲೆತು ಚಂದಾಗಿ |
ನೆಲದಿಂದ ಗಗನಕ್ಕೆ |
ಮುಟ್ಟದಂತೆಸೆವುದು ಚೆಲುವಾದ ಒಂದ ಕಂಬವೊ |
ಹೊಗಿಯ ಬಿಂಬವೊ ||೨|| |
ಒಳಗೊಂದು ಬ್ಯಾರೆ ಆಕಾರಾ ತಿಳಕೋ ಚಮತ್ಕಾರಾ |
ದಳಗಳ ಒಂಬತ್ತು |
Subsets and Splits
No community queries yet
The top public SQL queries from the community will appear here once available.