text
stringlengths
0
61.5k
ಚಕ್ರಾ ಸುಳಿವ ಸುಸ್ತರದ ಧಾರಾ ನಳಿಮೂರು ಕೊಳವಿಯೊಳು ಎಳೆ ತುಂಬಿತು ಅದರೊಳು ||೩||
ಹೀಗೆಯೇ ಹಾಡು ಮುಂದುವರೆಯುತ್ತದೆ.
ದೊಡ್ಡ ಆಕಾರದ ಗಿರಣಿ, ಉಗಿಯಂತ್ರ, ಹೊಗೆ ಕಂಬ, ನೀರು, ಬೆಂಕಿ, ಗಾಳಿ ಒಂದಾಗಿ ಕಲೆತು ಯಂತ್ರ ನಡೆಯುವಂತಿದೆ. ಹೊಗೆಯು ಗಗನಕ್ಕೆ ಏರುತ್ತಿದೆ. ಇದರ ಹೊರಗಿನ ಆಕಾರ ವರ್ಣನೆ. ಆದರೆ ಒಳಗೊಂದು ಬೇರೆ ಆಕಾರ. ಅದು ಚಮತ್ಕಾರದಿಂದ ಕೂಡಿದೆ. ಶರೀಫರ ಹಾಡುಗಳ ರೀತಿಯೇ ಹೀಗೆ. ಹೊರಗಿನ ಆಕಾರದ ವರ್ಣನೆಯಿಂದ ಆರಂಭವಾಗಿ ಒಳಗಿನ ಬೇರೊಂದು ಚಮತ್ಕಾರವನ್ನು, ಅರ್ಥವನ್ನು ಆ ಹಾಡುಗಳು ಹೊರಹಮ್ಮಿಸುತ್ತವೆ. ಒಂಬತ್ತು ಚ...
ಅಲ್ಲೀಕೇರಿ
ವನಭೋಜನಕ್ಕೆ ಹೋಗುವುದನ್ನು "ಅಲ್ಲೀಕೇರಿಗೆ ಹೋಗುವುದು" ಎನ್ನುತ್ತಾರೆ. ಬೆಳವಲದ ಸೀಮೆಯಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಗೊಳಿಸಿಕೊಂಡು ಅಲ್ಲೀಕೇರೆಗೆ ಹೋಗುವ ಸಂಭ್ರಮವನ್ನು ಕಂಡಾಗ ಶರೀಫರು ಆ ಬಗೆಗೆ ಒಂದು ಹಾಡನ್ನು ರಚಿಸಿದರು.
ಅಲ್ಲೀಕೇರಿಗೆ ಹೋಗೂಣು ಬರ್ತಿರೇನ್ರೇ
ಒಲ್ಲದಿದ್ದರೆ ಇಲ್ಲೇ ಇರ್ತಿರೇನ್ರೇ
ಕಲ್ಲಾ ಬಿಲ್ಲಿ ಗೆಳತೀರೆಲ್ಲ ಜೀವನ ಹಬ್ಬದುಲ್ಲಾಸದಲ್ಲಿ
ಅಲ್ಲಮ ಪ್ರಭುವಿನ ಮರೆತೀರೇನ್ರೆ…..
ಮಡಿಯನುಟ್ಟು ಮೀಸಲದಡಿಗಿ ಮಾಡಬೇಕ್ರೇ |ಅದಕ|
ತಡವು ಆದ್ರೆ ನಿಮ್ಮ ಗೊಡವಿ ನಮಗೆ ಬ್ಯಾಡ್ರೇ
ವಡಿ, ಗಾರಗಿ, ಹೊರಣಗಡಬು, ಕಡಲಿ ಪಚ್ಚಡಿ, ಕಟ್ಟಿನಾಮ್ರ,
ಚಟಕಿ ಮುಚ್ಚಳ ಬಾನದ ಗಡಿಗಿ ಹೆಡಿಗೀ ಜ್ವಾಕ್ರೇ |ನೀವು|
ದೃಢದಿ ಹೋಗಿ ದೇವರ ಗುಡಿಗೆ ದೀಪಾ ಹಾಕ್ರೇ
ಈ ಹಾಡಿನ ಶಬ್ದಾರ್ಥವು ಸ್ಪಷ್ಟವಿದೆ. ತಿನ್ನುಣ್ಣುವ ಸಂಭ್ರಮದಲ್ಲಿ ಅಲ್ಲಮಪ್ರಭುವನ್ನು ಮರೆಯಬಾರದು ಎಂಬ ಎಚ್ಚರಿಕೆಯ ಮಾತೂ ಇಲ್ಲಿದೆ. ತಿಂಡಿ ತುಂಬಿದ ಹೆಡಿಗೆ (ದೊಡ್ಡ ಬುಟ್ಟಿ)ಯನ್ನು ತಲೆಯ ಮೇಲಿಟ್ಟುಕೊಂಡು ಹೆಣ್ಣು ಮಕ್ಕಳು ಅವಸರದಿಂದ ನಡೆಯುತ್ತಿರುವಾಗ ಹೆಡಿಗೆಯನ್ನು ಜೋಕೆಯಾಗಿಟ್ಟುಕೊಂಡಿರಬೇಕೆಂಬ ಸಲಹೆಯೂ ಇದೆ. ಅದರಂತೆ ತಿಂಡಿಮಾಡುವಾಗ ಮಡಿಯಾಗಿರಬೇಕು. ಅಲ್ಲೀಕೇರಿಗೆ ಹೋಗುವಾಗ ದೇವರ ಗುಡಿಗೆ...
'ಎದ್ದ ಹೋಗತೀನಿ'
ಲೌಕಿಕ ವ್ಯವಹಾರದಲ್ಲಿ ಜನರು ತೋರುವ ಅಲ್ಪಮನಸ್ಸಿನಿಂದ, ಕೆಟ್ಟತನದೆಂದ ಶರೀಫರು ಸಿಡಿಮಿಡಿಗೊಳ್ಳುವ ಸಂದರ್ಭಗಳೂ ಇದ್ದವು. ಅಂತಹ ಸಂದರ್ಭಗಳಲ್ಲಿಯೂ ಅರ್ಥಪೂರ್ಣವಾದ ಹಾಡುಗಳು ರೂಪುಗೊಂಡಿವೆ.
ಬರಗಾಲದಲ್ಲಿ ಒಮ್ಮೆ ಶರೀಫರಿಗೆ ಜೋಳ ದೊರೆತಿರಲಿಲ್ಲ. ಮನೆಯವರೆಲ್ಲ ಉಪವಾಸದಿಂದ ಬಳಲುತ್ತಿದ್ದರು. ಸಿರಿವಂತ ಕರಣಿಕನಲ್ಲಿ ಜೋಳದ ಸಂಗ್ರಹವಿತ್ತು. ಅವನ ಬಳಿ ಹೋಗಿ ಶರೀಫರು ಕಾಳು ಕೊಡಬೇಕೆಂದು ಕೇಳಿಕೊಂಡರು. ಆ ಕರಣಿಕ ಜಿಪುಣನಾಗಿದ್ದ. ತೀರ ಸಣ್ಣ ಪ್ರಮಾಣದಲ್ಲಿ ಮಾತ್ರ ಕಾಳು ಕೊಟ್ಟ. ಅವು ಮನೆಯವರ ಹಸಿವನ್ನು ಹಿಂಗಿಸಲು ಸಾಲುವಷ್ಟಿರಲಿಲ್ಲ. ಮಾನವನ ಈ ಬಗೆಯ ಅಲ್ಪತನದಿಂದ ಕೆರಳಿದ ಶರೀಫರು ಹಾಡಿದರು:
ಕರಣಿಕ ಕೊಟ್ಟ ಅರಪಾವು ಜೋಳದಿಂದ ಹೊಟ್ಟೆ
ಬರ ಹಿಂಗುವದ್ಯಾಂಗಲೋ ಮನಸೇ ||ಪ||
…….ಬರಿದೆ ಆಶೇಕ ಬಿದ್ದೆಲೋ ಮನಸೇ
ಸತಿಸುತರ ಹಸಿವಿಗೊದಗದ ಕಾಳು | ಮನಿಗೊಯ್ಯೊ
ಮತಿಗೇಡಿಯೆನ್ನುತಿಹರೋ ಮನಸೆ.
ಅರ ಬೇಡಿದರಿಲ್ಲಾ| ಅರ ಕಾಡಿದರಿಲ್ಲಾ | ಪ್ರಾರಬ್ಧ
ಕೃತಭೋಗವು ಮನಸೇ.
ಚಾರುತರವಾದ ವೃಷಭನ ಮಂತ್ರಬಲವಿರಲು ನರರ
ಹಂಗೇನೆಲೊ ಮನಸೇ ||
ಹೀಗೆ ಹಾಡುತ್ತ ಕರಣಿಕರು ಕೊಟ್ಟ ಅರಪಾವು ಜೋಳವನ್ನು ಮರಳಿ ಕೊಟ್ಟು ಶರೀಫರು ಸಾಗಿದರು.
ಅತ್ತಿಗೇರಿಯ ಹಿರೇಮಠಕ್ಕೆ ಶರೀಫರು ಆಗಾಗ ಹೊಗುತ್ತಿದ್ದರು. ಆ ಮಠದ ಸ್ವಾಮಿಗಳಿಗೆ ಶರೀಫರ ಬಗೆಗೆ ವಿಶ್ವಾಸವೂ ಇತ್ತು. ಶ್ರಾವಣ ಮಾಸದಲ್ಲಿ ಆ ಮಠದಲ್ಲಿ ಪುರಾಣ ಪ್ರವಚನ ನಡೆಯುತ್ತಿತ್ತು. ಒಮ್ಮೆ ಪ್ರವಚನ ಮಾಡಲು ಬಂದ ವ್ಯಕ್ತಿ ಅಷ್ಟೊಂದು ಪಂಡಿತನಾಗಿರಲಿಲ್ಲ, ದುರಭಿಮಾನಿಯೂ ಆಗಿದ್ದ. ಶರೀಫರು ಪ್ರವಚನ ಕೇಳಲೆಂದು ಹೋಗಿ ಆತನ ಮುಂದೆ ಕುಳಿತರು. ಪ್ರವಚನಕಾರನಿಗೆ ಇದು ಇಷ್ಟವಾಗಲಿಲ್ಲ. ಶರೀಫ ಅಲ್ಲಿಂದ ಎ...
ಎದ್ದು ಹೋಗತೀನಿ ತಾಳೆಲೋ ಛೀ ಬುದ್ಧಿಗೇಡಿ
ಎದ್ದು ಹೋಗತೀನಿ ತಾಳೆಲೋ||
ಇದ್ದು ಇಲ್ಲೇ ಭವಕೆ ಭೀಳೋ
ಸದ್ಯ ಸದ್ಗುರು ಶಾಪ ನಿನಗೆ
ಸಿದ್ಧಲಿಂಗನ ಪಾದ ಸಾಕ್ಷಿ
-ಹೀಗೆ ಹಾಡು ಹೇಳುತ್ತ ಅಲ್ಲಿಂದ ಹೊರಟು ಹೋದರು. "ನಾನು ಈ ಜಗತ್ತಿನ ಬಂಧನದಿಂದ ಎದ್ದು ಹೋಗುತ್ತೇನೆ. ನೀನು ಈ ಜಗದ ಬಂಧನದಲ್ಲಿಯೇ ಬಿದ್ದುಕೋ" ಹೀಗೆಂಬುದು ಅವರ ಹಾಡಿನ ಅರ್ಥ. ಶರೀಫರಿಗೆ ಮಾತಿನ ಸಿದ್ಧಿ ಸಿಕ್ಕಿತ್ತು. ಅವರು ನುಡಿದಂತೆ ನಡೆಯುತ್ತಿತ್ತು. ಸದ್ಗುರುವಿನ ಶಾಪ ಪ್ರವಚನಕಾರರಿಗೆ ತಟ್ಟದೆ ಹೋಗಲಿಲ್ಲ.
ಗಂಡನ ಮನೆಗೆ ಹೊರಟ ಹೆಣ್ಣು
ನಿತ್ಯದ ಬಾಳಿನಲ್ಲಿಯ ಘಟನೆಗಳ ಮೂಲಕ ರೂಪುಗೊಂಡ ಶರೀಫರ ಹಾಡುಗಳು ರಮ್ಯವಾಗಿವೆ, ಅರ್ಥಪೂರ್ಣವಾಗಿವೆ.
ಅತ್ತಿಗೇರಿ ಗ್ರಾಮದ ಹೆಣ್ಣುಮಗಳೊಬ್ಬಳು ಮೊದಲ ಸಲ ಗಂಡನ ಮನೆಗೆ ಹೊರಟು ನಿಂತಿದ್ದಳು. ತವರು ಮನೆಯನ್ನು ತೊರೆದು ಮೊದಲ ಸಲ ಹೊರಟಾಗ ಆಕೆ ಅಳುತ್ತಿದ್ದಳು. ಸುತ್ತ ನೆರೆದವರು ಆಕೆಯನ್ನು ಸಮಾಧಾನ ಮಾಡುತ್ತಿದ್ದರು. ಶರೀಫರು ಈ ಸನ್ನಿವೇಶವನ್ನು ಕಂಡರು. ಆಗ ಹಾಡೊಂದು ರೂಪುಗೊಂಡಿತು.
ಅಳಬೇಡಾ ತಂಗಿ ಅಳಬೇಡ |ನಿನ್ನ|
ಕಳುಹ ಬಂದವರಿಲ್ಲಿ
ಉಳುಹಿಕೊಂಬುವರಿಲ್ಲ
ಖಡಕಿಲೆ ಉಡಿಯಕ್ಕಿ ಹಾಕಿದರವ್ವ | ಒಳ್ಳೆ
ದುಡುಕಿಲೆ ಮುಂದಕ್ಕ ದೂಕಿದರವ್ವ
ಹುಡುಕ್ಯಾಡಿ ಮದುವ್ಯಾದಿ ಮೊಜು ಕಾಣವ್ವ
ಮಿಡಿಕ್ಯಾಡಿ ಮಾಯಾದ ಮದವೇರಿದವ್ವ
ಕಂಡವರ ಕಾಲು ಬಿದ್ದು ಕಥಮುಗಿದು ನಿಂತರೇ
ಗಂಡನ ಮನಿ ನಿನಗ ಬಿಡದಾಯಿತವ್ವ ತಂಗೀ
"ಮದುವೆಯಾದ ಹೆಣ್ಣು ಮಗಳು ಗಂಡನ ಮನೆಗೆ ಹೋಗಲೇಬೇಕು. ಅಳುತ್ತ ನಿಂತರೂ ಅದು
ತಪ್ಪುವಂತಿಲ್ಲ . ಕಳುಹಿಸಲು ಬಂದವರು ಯಾರೂ ಉಳಿದುಕೊಳ್ಳಲಾರರು" ಹೀಗೆ ಈ ಹಾಡಿನ ಶಬ್ದಾರ್ಥ. ಆದರೆ ಸಾಂಕೇತಿಕವಾಗಿ ಇದು ಸಂಸಾರಕ್ಕೆ ಬಂದ ಜೀವಿಯನ್ನು ಕುರಿತು ಹೇಳುವ ಮಾತಾಗಿದೆ. ಈ ಲೋಕದಲ್ಲಿ ಹುಟ್ಟಿಬಂದ ಮೇಲೆ ಸಂಸಾರ, ಸಾವು ಅನಿವಾರ್ಯ. ಅಳುವುದರಿಂದ ಪ್ರಯೋಜನವೇನೂ ಇಲ್ಲ. ಯಾರೂ ನಮ್ಮನ್ನು ಉಳಿಸಿಕೊಳ್ಳಲಾರರು. ಸಂಸಾರದಲ್ಲಿಯ ದುಃಖವನ್ನು, ಮರಣವನ್ನು ನಾವು ಎದುರಿಸಲೇಬೇಕು. ಪರಮಾತ್ಮನನ್ನು ಸಾಧ...
ಹುಲುಗೂರಿನಲ್ಲಿ ದೊಡ್ಡ ಸಂತೆ ನಡೆಯುತ್ತಿತ್ತು. ಮಳೆಗಾಲದಲ್ಲಿ ಒಬ್ವ ಮುದುಕಿ ಆ ಸಂತೆಗೆಂದು ಬಂದಿದ್ದಾಳೆ. ಅಲ್ಲಿ ದೊಡ್ಡ ಜನಸಂದಣಿ ಸೇರಿದೆ. ಗದ್ದಲೋ ಗದ್ದಲ. ಅಲ್ಲಿ ಕಳ್ಳರೂ ಇದ್ದಾರೆ. ಮಳೆಯಿಂದಾಗಿ ನೆಲವೆಲ್ಲ ಕೆಸರಾಗಿದೆ. ವಯಸ್ಸು ಹೆಚ್ಚಾಗಿ, ಶಕ್ತಿಗುಂದಿದ ಈ ಮುದುಕಿ ಅಸಹಾಯಕ ಸ್ಥಿತಿಯಲ್ಲಿದ್ದಾಳೆ. ಆಕೆಯನ್ನು ಕಂಡ ಶರೀಫರು ಹಾಡತೊಡಗಿದರು.
ಬಿದ್ದೀಯಬೇ ಮುದುಕಿ
ನೀ ದಿನಾ ಹೋದಾಕಿ ಇರು ಬಹಳ ಜ್ವಾಕಿ||
ಸದ್ಯಕ್ಕಿದು ಹುಲಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ
ಬಿದ್ದಗಿದ್ದರ ನಿನ್ನ ಎಬ್ಬಿಸುವರುಯಾರಿಲ್ಲ
ಬುದ್ಧಿಗೇಡಿ ಮುದುಕಿ ಜ್ವಾಕಿ ||೧||
ಬುಟ್ಟಿಯೊಳಗೆ ಪಟ್ಟೇವ ನಿಟ್ಟಿ
ಉಟ್ಟರದೊಳಗಿನ ರೊಕ್ಕ ಜ್ವಾಕಿ
ಕೆಟ್ಟ ಗಂಟೀ ಚೌಡ್ಯಾರು ನಿನ್ನ
ಗಂಟ ಬಿದ್ದಗಿದ್ದಾರು ಮುದುಕಿ ||೨||
ಶಿಶುನಾಳದೊಡೆಯನನ್ನು
ಹಸನಾಗಿ ಸ್ಮರಿಸು ನೀನು
ಕೆಸರೊಳು ಜಾರಿಗೀರೀ
ವಸುಧಿಗೆ ಹೌಹಾರಿ ಹಾರಿ ||೩||
ಸಂತೆಯಲ್ಲಿ ಕಂಡ ಮುದುಕಿ ಶರೀಫರಿಗೆ ಒಂದು ಸಂಕೇತ. ಅನೇಕ ಜನ್ಮಗಳಲ್ಲಿ ಹುಟ್ಟಿಬಂದ ಜೀವಿಗೆ ಸಂಸಾರದ ಮೋಹವಿನ್ನೂ ಅಳಿದಿಲ್ಲ. ಬೀಳುವ ಹೆದರಿಕೆಯಿರುವುದರಿಂದ ಜೋಕೆಯಾಗಿರಬೇಕು. ಬಿದ್ದರೆ ಬೇರೆ ಯಾರೂ ಎಬ್ಬಿಸಲಾರರು. ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕು. ಕಾಮ, ಕ್ರೋಧ ಇತ್ಯಾದಿ
ಕಳ್ಳರಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಪರಮಾತ್ಮನನ್ನು ಸ್ಮರಿಸುವುದರಿಂದ ಮಾತ್ರ ನಾವು ಪಾರಾಗಬಲ್ಲೆವು. ಈ ಬಗೆಯ ಬೋಧೆಯು ಸಂತೆಯಲ್ಲಿಯ ಮುದುಕಿಯ ದೃಶ್ಯದಿಂದಾಗಿ ಶರೀಫರು ಹಾಡಿನಲ್ಲಿ ಹೊರಹೊಮ್ಮಿ ಬಂದಿತು.
ಸಹಜ ಆನಂದದಲ್ಲೇ ಬಾಳಿದರು
ಹುಟ್ಟಿದ ಜೀವಿಗೆ ಸಾವು ತಪ್ಪಿದ್ದಲ್ಲ. ಆದರೆ ಸಾವು ಯಾವಾಗ ಬರುವುದೆಂಬುದು ಸಾಮಾನ್ಯರಿಗೆ ತಿಳಿಯುವುದಲ್ಲ. ಜ್ಞಾನಿಗಳು ಅದನ್ನು ತಿಳಿಯಬಲ್ಲರು. ಶರೀಫರಿಗೆ ಅದು ತಿಳಿದಿತ್ತು. ಎಪ್ಪತ್ತು ವರ್ಷತುಂಬು ಬಾಳನ್ನು ನಡೆಸಿದ ಶರೀಫರು ೧೮೮೯ ರ ಜುಲೈ ೩ ರಂದು ಮರಣ ಹೊಂದಿದರು. ಮರಣ ಹೊಂದುವ ದಿನ ತಮ್ಮ ಮೆಚ್ಚಿನವರನ್ನು, ಶಿಷ್ಯರನ್ನು ಕರೆಯಿಸಿಕೊಂಡರು. ಅವರೆಲ್ಲರ ಎದುರು ಹಾಡತೊಡಗಿದರು.
ಬಿಡತೀನಿ ದೇಹಾ ಬಿಡತೀನಿ | ಬಿಡತೀನಿ ದೇಹವ
ಕೊಡತೇನಿ |
ಭೂಮಿಗೆ ಇಡತೇನಿ ಮಹಿಮರ ನಡತಿಯ ಹಿಡಿದು
ದೇಹ || ೧ ||
ಪಾವಕಗಾಹುತಿ ಮಾಡಿ ಜೀವನದನುವು ಬ್ಯಾರೆ | ನಾ
ಬಯಲು ಬ್ರಹ್ಮದೊಳಾಡುತಲಿ
ಅವನಿಯೊಳು ಶಿಶುನಾಳಧೀಶನೆಗತಿಯಿಂದು | ಜವನ
ಬಾಧೆಯ ಗೆದ್ದು ಶಿವಲೋಕದೊಳು ದೇಹಾ
ಬಿಡತೀನಿ ||೩||
"ಬಿಡತೇನಿ ದೇಹಾ ಬಿಡತೇನಿ"
ನಾನು ದೇಹವನ್ನು ಬಿಡುತ್ತೇನೆ; ಬಯಲು ಬ್ರಹ್ಮದೋಳು ಆಡುತ್ತೇನೆ. ಯಮನ ಬಾಧೆಯನ್ನು ಗೆಲ್ಲುತ್ತೇನೆ. ಶಿವಲೋಕವ ಪಡೆಯುತ್ತೇನೆ. ಹೀಗೆಂದು ಶರೀಫರು ಹಾಡಿದರು. ಮರಣದ ಕಾಲಕ್ಕೆ ಹೀಗೆ ಹೇಳಬಲ್ಲವರು, ಹಾಡಬಲ್ಲವರು ಮಹಾ ಪುರುಷರೇ ಸರಿ.
ಶರೀಫರು ದೇಹ ಬಿಟ್ಟಾಗ ಶಿಶುನಾಳದ ನೆರೆಯ ಹಳ್ಳಿಗಳ ಸಾವಿರಾರು ಜನ ಸೇರಿದರು. ಬೇರೆಬೇರೆ ಜಾತಿಗಳ ಜನರೆಲ್ಲ ಒಂದಾಗಿ ಶರೀಫರ ಸಮಾಧಿ ಮಾಡಿದರು. ಶರೀಫರು ಜೀವಿಸಿದಾಗ ಅವರನ್ನು ಅಲಕ್ಷಿಸಿದವರು, ನಿಂದಿಸಿದವರು, ಅವರಿಗೆ ಕೀಟಲೇ ಮಾಡಿದವರು ಎಲ್ಲರೂ ಅವರ ಮಹಿಮೆಗೆ ತಲೆಬಾಗಿದರು. ಶರೀಫರ ಸಮಾಧಿಯ ತಾಣವೀಗ ಸ್ಫೂರ್ತಿಕೇಂದ್ರವಾಗಿದೆ.
ಸಾಧುಗಳ ಸಹಜ ಪಥವಿದು | ಆನಂದದಿಂದಿರುವುದು
ಬೇಕು-ಬ್ಯಾಡ ಎಂಬುದೆಲ್ಲ ಸಾಕು ಮಾಡಿ |
ವಿಷಯ ನೂಕಿ
ಲೋಕದೊಳು ಏಕವಾಗಿ ಮೂಕರಂತೆ
ಚರಿಸುತಿಹರು ||೧||
ಎಲ್ಲಿ ಕುಳಿತರಲ್ಲೇ ದೃಷ್ಟಿ | ಎಲ್ಲಿ ನಿಂತರಲ್ಲೆ ಲಕ್ಷ್ಯ
ಅಲ್ಲಿ, ಇಲ್ಲಿ, ಎಂಬುದಳಿದು | ಎಲ್ಲ ತಾವೆ
ಚರಿಸುತಿಹರು ||೨||
ದೇಹ ಧರಿಸಿ ದೇಹಭೋಗ ನೀಗಿ ನಿತ್ಯ ನಿರ್ಮಳಾತ್ಮ
ಶಿಶುನಾಳೇಶನ ಬೆಳಕಿನೊಳು ಬೆಳಗುತಿಹರು
ದೇಹ ಧರಿಸಿದ ಶರೀಫರು ದೇಹದ ಸುಖದತ್ತ ಮನಸ್ಸನ್ನು ಹರಿಯಬಿಡಲಿಲ್ಲ. ಬಾಳಿನಲ್ಲಿ ಪರಮಾತ್ಮನ ಚಿಂತನೆ ಹೊರತು ಬೇರೆ ಏನನ್ನೂ ಗಮನಿಸಲಿಲ್ಲ. ಅವರು ಸಂಸಾರದ "ಬೇಕು-ಬೇಡ" ಗಳನ್ನು ಮೀರಿ ನಿಂತು ಸಹಜ ಆನಂದದ ನಿಲುವಿನಲ್ಲಿ ಬಾಳಿದರು.
ರಸ್ತೆಯಲ್ಲೇ ಕುಳಿತುಕೊಂಡು ಓದಿದ ವಿದ್ಯಾರ್ಥಿಗಳು | in dharamshala, students hold unique protest by studying on roads - Vijaya Karnataka
ರಸ್ತೆಯಲ್ಲೇ ಕುಳಿತುಕೊಂಡು ಓದಿದ ವಿದ್ಯಾರ್ಥಿಗಳು
ಕಂಗ್ರಾದ ಧರ್ಮಶಾಲಾ ಸರಕಾರಿ ಜಿಲ್ಲಾ ಗ್ರಂಥಾಲಯದಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವುದನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕುಳಿತು ಓದುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
<iframe mozallowfullscreen="true" webkitallowfullscreen="true" allowfullscreen="true" src="//navbharattimes.indiatimes.com/feeds/vod_player.cms?msid=62473244&videosection=article-show&dim=0&autoplay=0&userInitiated=1&source=article" align="left" scrolling="no" frameborder="0" width="630" height="390"></iframe>
ಸಂಝೋತಾ ರೈಲು ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ನಾಲ್ವರು ಆರೋಪಿಗಳು ಖುಲಾಸೆ – Public TV News
ಸಂಝೋತಾ ರೈಲು ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ನಾಲ್ವರು ಆರೋಪಿಗಳು ಖುಲಾಸೆ
Wednesday, 20.03.2019, 9:17 PM Public TV No Comments
ಪಂಚಕುಲಾ: ಸಂಝೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಎನ್‍ಐಎ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಸಾಭೀತು ಪಡಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎನ್‍ಐಎ ಕೌನ್ಸಿಲ್ ರಾಜನ್ ಮಲ್ಹೋತ್ರ ತಿಳಿಸಿದ್ದಾರೆ.