text stringlengths 0 61.5k |
|---|
2007ರಲ್ಲಿ ನಡೆದ ಸಂಝೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟದಲ್ಲಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಭಾರತದಲ್ಲಿ ದೇವಾಲಯಗಳ ಮೇಲೆ ಭಯೋತ್ಪಾದಕರು ನಡೆಸುತ್ತಿದ್ದ ದಾಳಿಯ ವಿರುದ್ಧವಾಗಿ ಇಂತಹ ಕೃತ್ಯ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಸ್ವಾಮಿ ಆಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಣ್ ಮತ್ತು ರಜೀಂದ್ರ ಚೌಧರಿ ವಿರುದ್ಧ ಎನ್‍ಐಎ ಪ್ರಕರಣ ದಾಖಲಿಸಿ... |
2007ರ ಫೆಬ್ರವರಿ 18 ರಂದು ದೆಹಲಿಯಿಂದ ಪಾಕಿಸ್ತಾನದ ಲಹೋರ್‍ಗೆ ತೆರಳುತ್ತಿದ್ದ ರೈಲಿಗೆ ಹರಿಯಾಣದ ಪಣಿಪಾತ್ ಬಳಿ ಬಾಂಬ್ ದಾಳಿ ನಡೆಸಲಾಗಿತ್ತು. ಪರಿಣಾಮ ರೈಲಿನ ಎರಡು ಬೋಗಿಗಳು ಹಾನಿಯಾಗಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. |
ಮೊದಲು ಹರಿಯಾಣ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಆದರೆ 2010 ರಲ್ಲಿ ಪ್ರಕರಣ ಎನ್‍ಐಎಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದಲ್ಲಿ ಸುನೀಲ್ ಜೋಶಿ ಎಂಬಾತನ್ನು ಮಾಸ್ಟರ್ ಮೈಡ್ ಎಂದು ಅನುಮಾನಿಸಲಾಗಿತ್ತು. ಆದರೆ 2007ರ ಡಿಸೆಂಬರ್ ತಿಂಗಳಿನಲ್ಲಿ ಆತನನ್ನು ಮನೆಯ ಮುಂದೆಯೇ ಗುಂಡಿಟ್ಟು ಕೊಲೆ ಮಾಡಲಾಗಿತ್ತು. |
ಉಗ್ರರು ದೇವಾಲಯಗಳನ್ನು ಗುರಿಯಾಗಿಸಿ ದಾಳಿಗೆ ಪ್ರತೀಕಾರವಾಗಿ ಅಸೀಮಾನಂದ ಸೇರಿ ಇತರರು ಪಾಕಿಸ್ತಾನ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಎನ್‍ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು. |
Tags: Panchkula, Public TV, Samjhauta Express, swami aseemanand, ಎನ್‍ಐಎ, ನ್ಯಾಯಾಲಯ, ಪಬ್ಲಿಕ್ ಟಿವಿ, ಸಂಝೋತ ಎಕ್ಸ್ ಪ್ರೆಸ್ |
ಮಿಸೈಲ್ ಲಾಂಚ್ ಮಾಡಿದ್ರೆ ಹುಷಾರ್: ಉ.ಕೊರಿಯಾಗೆ ವಿಶ್ವ ಸಂಸ್ಥೆ ಎಚ್ಚರಿಕೆ - Hosadigantha |
Home NEWS FLASH ಮಿಸೈಲ್ ಲಾಂಚ್ ಮಾಡಿದ್ರೆ ಹುಷಾರ್: ಉ.ಕೊರಿಯಾಗೆ ವಿಶ್ವ ಸಂಸ್ಥೆ ಎಚ್ಚರಿಕೆ |
ವಿಶ್ವಸಂಸ್ಥೆ: ಜಪಾನ್ ಮೇಲೆ ಬಾಲಿಸ್ಟಿಕ್ ಮಿಸೈಲ್ ಹಾರಿಸಿದ ಉತ್ತರ ಕೊರಿಯಾದ ಅತಿರೇಕದ ನಡೆಯನ್ನು ಖಂಡಿಸಿರುವ ವಿಶ್ವ ಸಂಸ್ಥೆ ಭದ್ರತಾ ಮಂಡಳಿ, ಉತ್ತರ ಕೊರಿಯಾ ಇನ್ನು ಮುಂದೆ ಯಾವುದೇ ಮಿಸೈಲ್‌ಗಳನ್ನು ಲಾಂಚ್ ಮಾಡುವಂತಿಲ್ಲ ಮತ್ತು ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕಾರ್ಯಕ್ರಮಗಳನ್ನು ನಿಶೇಧಿಸಬೇಕು ಎಂದು ಆಗ್ರಹಿಸಿದೆ. ಆತಂಕವನ್ನು ಕಡಿಮೆ ಮಾಡಲು ಉತ್ತರ ಕೊರಿಯಾ ತಕ್ಷಣವೇ ಕ್ರಮ ಕೈಗೊ... |
ಶಾಂತಿಯುತ, ರಾಜತಾಂತ್ರಿಕ ಮತ್ತು ರಾಜಕೀಯ ಪರಿಹಾರಕ್ಕಾಗಿ ತನ್ನ ಬದ್ಧತೆಯನ್ನು ಸಮಿತಿ ವ್ಯಕ್ತಪಡಿಸಿದೆ. ಉತ್ತರ ಕೊರಿಯಾ ಅತಿರೇಕದ ಕ್ರಮವು ಕೇವಲ ಆ ಪ್ರದೇಶಕ್ಕೆ ಸೀಮಿತವಾದ ಬೆದರಿಕೆಯಲ್ಲ, ಎಲ್ಲಾ ವಿಶ್ವ ಸಂಸ್ಥೆ ಸದಸ್ಯ ರಾಷ್ಟ್ರಗಳಿಗೂ ಇದು ಬೆದರಿಕೆ ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. |
ಜಪಾನ್ ಮೇಲೆ ಕೊರಿಯಾ ತೆಗೆದುಕೊಂದ ಕ್ರಮಕ್ಕೆ ಹಾಗೂ ಇತ್ತೀಚೆಗೆ ಕೊರಿಯಾ ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆಯೂ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಕಳವಳ ವ್ಯಕ್ತಪಡಿಸಿದ್ದು, ಇದು ಪ್ರಾಂತ್ಯದಲ್ಲಿ ಉದ್ದೇಶ ಪೂರಿಯವಾಗಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕೆಡಿಸುತ್ತದೆ ಎಂದು ಹೇಳಿದೆ. ಈ ಮಧ್ಯೆ ವಿಶ್ವಸಂಸ್ಥೆಯ ಹೇಳಿಕೆಗೆ ಸಮ್ಮತಿ ಸೂಚಿಸಿರುವ ಅಮೆರಿಕ, ಕೊರಿಯಾ ಮೇಲೆ ಯಾವುದೇ ಹೊಸ ನಿರ್ಬಂಧಗ... |
ಇತ್ತ ಉತ್ತರ ಕೊರಿಯಾ ಆಪ್ತ ರಾಷ್ಟ್ರವಾಗಿರುವ ಚೀನಾವೂ ಕೊರಿಯಾದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಕ್ಷಿಪಣೆ ಉಡಾವಣೆ ಮಾಡಿರುವುದರ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ ಚೀನಾ ರಕ್ಷಣಾ ಸಂಸ್ಥೆಯು ಕಾಯುತ್ತಿದೆ. ಇಷ್ಟಾಗಿಯೂ ಕೊರಿಯಾದ ಇತ್ತಿಚಿನ ಬೆಳವಣಿಗೆಗಳ ಬಗ್ಗೆ ಇನ್ನಿತರೆ ರಾಷ್ಟ್ರಗಳೊಂದಿಗೆ ಚರ್ಚೆ ಮಾಡುತ್ತಿರುವುದಾಗಿಯೂ ಚೀನಾ ಹೇಳಿಕೊಂಡಿದೆ. |
ಯುಪಿಸಿಎಲ್ ಗುತ್ತಿಗೆ ಆಧಾರಿತ ಕಾರ್ಮಿಕರ ಪ್ರತಿಭಟನೆ: ಸಮಸ್ಯೆ ಪರಿಹರಿಸಲು ಶನಿವಾರ ಸಭೆ | Vartha Bharati- ವಾರ್ತಾ ಭಾರತಿ |
ಯುಪಿಸಿಎಲ್ ಗುತ್ತಿಗೆ ಆಧಾರಿತ ಕಾರ್ಮಿಕರ ಪ್ರತಿಭಟನೆ: ಸಮಸ್ಯೆ ಪರಿಹರಿಸಲು ಶನಿವಾರ ಸಭೆ |
ವಾರ್ತಾ ಭಾರತಿ Jul 30, 2019, 10:46 PM IST |
ಪಡುಬಿದ್ರಿ: ಇಲ್ಲಿನ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಕಂಪನಿಯಲ್ಲಿ ಗುತ್ತಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆಯ ಹಿನ್ನಲೆಯಲ್ಲಿ ಶನಿವಾರ ಸಭೆ ಕರೆಯಲಾಗಿದೆ. |
ಸಿಐಟಿಯು ಸಂಯೋಜಿತ ಯುಪಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಸಂಘಟನೆ ನೇತೃತ್ವದಲ್ಲಿ ಕಂಪನಿಯ ಗೇಟ್ ಎದುರು ಸುಮಾರು 500 ಕ್ಕೂ ಅಧಿಕ ಕಾರ್ಮಿಕರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಈ ವೇಳೆ ಕಂಪೆನಿ ಅಧಿಕಾರಿಗಳಾದ ಸಂಜಯ್ ಹರ್ಗಡೆ, ಶಶಿಧರ್, ನೀಲ ಕಂಠ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. |
ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರ ನೇತೃತ್ವದಲ್ಲಿ ಸಮಸ್ಯೆ ಪರಿಹರಿಸುವ ಸಲುವಾಗಿ ಶನಿವಾರ ಕಾರ್ಮಿಕ ಮುಖಂಡರ ಸಭೆ ಕರೆಯಲಲಾಗಿದೆ ನಡೆಸಲಾಗುವುದು ಎಂದು ಮನವಿ ಸ್ವೀಕರಿಸಿದ ಕಂಪೆನಿ ಪ್ರತಿನಿಧಿಗಳು ಭರವಸೆ ನೀಡಿದರು. |
ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾರ್ಚ್ 23 ಹಾಗೂ ಜುಲೈ 5ರಂದು ಕಂಪೆನಿಗೆ ಮನವಿ ಪತ್ರ ಸಲ್ಲಿಸಿದರೂ, ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. |
ಕಳೆದ 14ವರ್ಷಗಳಿಂದ ಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸೂಕ್ತ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ವೇತನ, ಬೋನಸ್ ನೀಡದೆ ತಾರತಮ್ಯ ನೀತಿ ಅನುಸರಿಸಿ ವಂಚನೆ ಮಾಡಲಾಗುತ್ತಿದೆ. ಎಲ್ಲಾ ಕಾರ್ಮಿಕರಿಗೂ ಶೇ. 15ರಷ್ಟು ವಾರ್ಷಿಕ ವೇತನ ಹೆಚ್ಚಳ ಮಾಡಬೇಕು. ಹೆಚ್ಚುವರಿ ಕೆಲಸದ ಅವಧಿಯಲ್ಲಿ ಕರ್ತವ್ಯ ನಿರ್ವ ಹಿಸುವವರಿಗೆ ಹೆಚ್ಚುವರಿ ಭತ್ಯೆ ನೀಡಬೇಕು. ಸರಳ ಮೊಬೈಲ್... |
ಕಂಪೆನಿಯ ಒಳಗೆ ಅಜಾಗರೂಕತೆಯಿಂದ ಅವಘಡದಲ್ಲಿ ಸಂಕಷ್ಟ ಅನುಭವಿಸುವ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಪರಿಹಾರ, ಯಾವುದೇ ಕಾರ್ಮಿಕ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೊದಲ ಪ್ರಾಶಸ್ತ್ಯ ಕಲ್ಪಿಸಬೇಕು. ಪ್ರಸ್ತುತ ಕೆಲಸದಲ್ಲಿರುವ ಯಾವುದೇ ಗುತ್ತಿಗೆದಾರ ಪದನಾಮ ಹೊಂದಿರುವ ಕಾರ್ಮಿಕರನ್... |
ಸ್ಥಳೀಯ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ವಿಶ್ವಾಸ್, ವಿನಾಯಕ ಪ್ರಭು, ಸುಧಾಮ ಶೆಟ್ಟಿ, ನಿತಿನ್ ಕಾಂಚನ್, ಪ್ರತೀಕ್, ಸುನಿಲ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. |
ಅಂಗಾಂಗ ದಾನ ಮಾಡಿ 6 ಜೀವ ಉಳಿಸಿದ ಮಂಡ್ಯದ ರೈತ | 39 year old Mandya farmer donated organs - Kannada Oneindia |
| Published: Sunday, February 24, 2019, 10:01 [IST] |
ಬೆಂಗಳೂರು, ಫೆಬ್ರವರಿ 24 : ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ರೈತರೊಬ್ಬರು ಅಂಗಾಂಗ ದಾನ ಮಾಡಿ ಹಲವು ಜೀವಗಳನ್ನು ಉಳಿಸಿದ್ದಾರೆ. ಕುಟುಂಬದ ಒಪ್ಪಿಗೆಯ ಬಳಿಕ ಅಂಗಾಂಗಳನ್ನು ದಾನ ಮಾಡಲಾಗಿದೆ. |
ಮಂಡ್ಯ ಜಿಲ್ಲೆಯ ತಟ್ಟಹಳ್ಳಿ ಗ್ರಾಮದ ರೈತ ರಾಜು (39) ಅಂಗಾಂಗಳನ್ನು ದಾನ ಮಾಡಿದವರು. ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ಎಡಭಾಗದ ಮೂತ್ರಪಿಂಡ ದಾನ ಮಾಡಿ ಜೀವ ಉಳಿಸಿದ್ದಾರೆ. |
ಬಲಭಾಗದ ಮೂತ್ರಪಿಂಡ, ಯಕೃತ್, ಶ್ವಾಸಕೋಶ, ಹೃದಯ ಕವಾಟ, ಕಾರ್ನಿಯಾಗಳನ್ನು ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ದಾನ ಮಾಡಿ ಆರು ಜನರ ಜೀವವನ್ನು ಉಳಿಸಿದ್ದಾರೆ. |
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 'ಜೀವ ಸಾರ್ಥಕತೆ' ಸಹಯೋಗದಲ್ಲಿ ಶುಕ್ರವಾರ ಅಂಗಾಂಗದಾನ ಮತ್ತು ಕಸಿ ಯಶ್ವಸ್ವಿಯಾಗಿದೆ. ರೈತನ ಕುಟುಂಬದವರ ಒಪ್ಪಿಗೆ ಪಡೆದು, ಅಂಗಾಂಗಗಳನ್ನು ದಾನ ಮಾಡಲಾಗಿದೆ. |
ರಾಜು ಅವರು ಫೆ.17ರಂದು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಯಶವಂತಪುರದ ಸ್ಪರ್ಶ್ ಸೂಪರ್ ಸೆಷ್ಪಾಲಿಟಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಣೆ ಮಾಡಿದ್ದರು. |
39 year old farmer Raju who injured in road accident and announced brain dead donated organs. Raju from Mandya district and injured in bike accident on February 17, 2019. |
ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್ - ಸವಿ ಕನ್ನಡ ನ್ಯೂಸ್ |
ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳಲ್ಲಿ ಕೆಲವರು ಮುಖವಾಡ ಹಾಕಿಕೊಂಡು ನಟಿಸಿದರೆ, ಇನ್ನೂ ಕೆಲವರು ತಾವು ಇದ್ದಂತೆಯೇ ಸಹಜ ರೀತಿಯಲ್ಲಿ ವರ್ತಿಸುತ್ತಾರೆ. ಸದ್ಯ ಬಿಗ್‍ಬಾಸ್ ಮನೆಯಲ್ಲಿ ಅರವಿಂದ್ ತಾವು ಮುಖವಾಡ ಧರಿಸಿರುವುದರ ಬಗ್ಗೆ ಬಹಿರಂಗವಾಗಿ ಕ್ಯಾಮೆರಾ ಮುಂದೆ ಹೇಳಿದ್ದಾರೆ. |
ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ, ಮಂಜು, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆ ಶುಭಾ ಮಂಜುಗೆ ನೀನು ಗೋಂಗ್ರು ಕಪ್ಪೆ ತರ ಇದ್ಯಾ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನಮ್ಮ ಊರಿನಲ್ಲಿ ಅದನ್ನು ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ ಎಂದು ಹೇಳಿತ್ತಾರೆ. |
ಈ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಈಜುತ್ತಿದ್ದ ಅರವಿಂದ್‍ಗೆ ಶುಭಾ, ಇಲ್ಲಿ ನೋಡು ಅರವಿಂದ್ ನಾನು ಏನಾದರೂ ಹೇಳಿದರೆ ನಮ್ಮ ಊರಿನಲ್ಲಿ ಹೀಗೆ, ಹಾಗೆ ಅಂತಾಳೆ ಎಂದು ಕಂಪ್ಲೇಂಟ್ ಮಾಡುತ್ತಾರೆ. ನಿಜವಾಗಿಯೂ ನಮ್ಮ ಕಡೆ ದಪ್ಪಗಿರುವ ಕಪ್ಪೆಗೆ ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ. ಸರಿ ಕಪ್ಪೆ ಇನ್ನೂ ಚಿಕ್ಕದಾಗಿರುವಾಗ ಅದಕ್ಕೆ ಏನೆಂದು ಕರೆಯುತ್ತಾರೆ ಎಂದು ದಿವ್ಯಾ ಉರುಡುಗ ಮಂಜುಗೆ ಕೇಳುತ್ತಾರೆ. |
ಇದಕ್ಕೆ ಮಂಜು ನಮ್ಮ ಕಡೆ ಆ ಕಪ್ಪೆಗೆ ದಿವ್ಯಾ ಉರುಡುಗ ಎಂದು ಕರೆಯುತ್ತೇವೆ ಎನ್ನುತ್ತಾರೆ. ಈ ವೇಳೆ ಅರವಿಂದ್ ಚಪ್ಪಾಳೆ ತಟ್ಟುತ್ತಾ ನಗುತ್ತಾರೆ. ಆಗ ದಿವ್ಯಾ ಉರುಡುಗ ನನ್ನನ್ನು ಕಪ್ಪೆ ಅಂದಿದ್ದಕ್ಕೆ ಸೆಲೆಬ್ರೆಟ್ ಮಾಡುತ್ತಿದ್ದಾರಾ ಎಂದಾಗ ಮಂಜು, ಸತ್ಯ ಹೇಳಿದರೆ ನಮ್ಮ ಹುಡುಗ ತುಂಬಾ ಎಕ್ಸೈಟ್ ಆಗಿಬಿಡುತ್ತಾನೆ. ಸತ್ಯ ಅವನ ಮನಸ್ಸಿನಲ್ಲಿಯೂ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಅವನು ಎಷ್ಟು ದ... |
ಈ ವೇಳೆ ಅರವಿಂದ್ ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ ಎಂದು ಹೇಳುತ್ತಾರೆ. ಈ ವೇಳೆ ಎಲ್ಲರೂ ಜೋರಾಗಿ ನಕ್ಕರೆ, ದಿವ್ಯಾ ಉರುಡುಗ, ಓ ಮೈ ಗಾಡ್ ಎಂದು ಹೇಳಿ ನಗುತ್ತಾರೆ. ನಂತರ ಮಂಜು ನೀನು 'ಕೆ' ಎಂದು ಕರೆಯುವುದು ಕಪ್ಪೆ ಅಂತ ನಾ, ಅಯ್ಯೋ ನನಗೆ ಇಷ್ಟು ದಿನ ಗೊತ್ತೆ ಆಗಲಿಲ್ವಾಲ್ಲ, ಒ.. ಕೆ… ಕಪ್ಪೆ ಎಂದು ದಿವ್ಯಾ ಅವರನ್ನು ಅಣುಕಿಸುತ್ತಾರೆ. |
ಗ್ರಾಫಿಕ್ಸ್ | ಒಲೆಗ್ Soloviev ಕಲಾವಿದ |
• ಹಚ್ಚೆ ಸ್ಕೆಚ್; |
ವಿಶೇಷವಾಗಿ ಕೆಲಸ |
ನಾನು ಯಾವುದೇ ಮಾಡಿಕೊಡಲು ಸಿದ್ಧ am! ವಿಳಾಸ, ಮರೆಯಬೇಡಿ: |
• ಗಡುವನ್ನು; |
• ನೀವು ಯಾವುದೇ ಕಂಪ್ಯೂಟರ್ ಗ್ರಾಫಿಕ್ಸ್ ಅಗತ್ಯವಿದ್ದರೆ, ನಂತರ ಆಯ್ದ ವಸ್ತುಗಳನ್ನು, ನೀವು ಕೆಲಸ ನೋಡಲು ಬಯಸುತ್ತೀರಿ (ಹಲಗೆಯ, ಕ್ಯಾನ್ವಾಸ್, ನುಣುಪಾಗಿ; ಚಿತ್ರವನ್ನು ಮಾರ್ಕರ್, ಪೆನ್ಸಿಲ್ ನಲ್ಲಿ, ಜೆಲ್ ಪೆನ್ನುಗಳು, ಶಾಯಿ, ಇತ್ಯಾದಿ); |
• ರೂಪದಲ್ಲಿ; |
• ಚಿತ್ರ ಎಲ್ಲಾ ಅವಶ್ಯಕತೆಗಳನ್ನು, ಉದಾಹರಣೆಗೆ, ಅಪೇಕ್ಷಿತ ಶೈಲಿ, ವಿವರಗಳು, ಇತ್ಯಾದಿ ಗಮನ. |
ನನ್ನದು - ಯಾವಾಗಲೂ ವೃತ್ತಿಪರತೆಯ ಕ್ವಿಂಟ್ಎಸ್ಸೆನ್ಸ್ ಆಗಿದೆ, ಸೃಜನಶೀಲತೆ ತನ್ನ ಸಹಜೀವನದ, ಆದ್ದರಿಂದ ರೇಖಾಚಿತ್ರಗಳು ಮತ್ತು ಗ್ರಾಫಿಕ್ಸ್ - ಇದು ಕೇವಲ ಆಂತರಿಕ ಅಲಂಕಾರ, ಆದರೆ ಒಂದು ಲಾಭಕ್ಕಾಗಿ ಉಪಕರಣವನ್ನು, ನೀವು ವಾಣಿಜ್ಯ ಉದ್ದೇಶಗಳಿಗಾಗಿ ಅವುಗಳನ್ನು ಬಳಸುತ್ತಿದ್ದರೆ! |
ಮುಂಗಾರು ಇಳಿಕೆ: ಬಿತ್ತನೆಗೆ ಹಿನ್ನಡೆ : ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆ | Udayavani – ಉದಯವಾಣಿ |
Thursday, 27 Jan 2022 | UPDATED: 10:58 PM IST |
Team Udayavani, Jul 18, 2021, 6:55 AM IST |
ಹೊಸದಿಲ್ಲಿ: ಈ ಬಾರಿಯ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸದೇ ಇರುವುದು, ನೇರವಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷದಲ್ಲಿ ಈವರೆಗೆ ವಾಡಿಕೆಗಿಂತ ಶೇ. 7ರಷ್ಟು ಕಡಿಮೆ ಮಳೆಯಾಗಿದೆ. ಕೆಲವು ಭಾಗದಲ್ಲಿ ಮಳೆಯಾಗಿದ್ದರೆ, ಇನ್ನೂ ಕೆಲವು ಕಡೆ ಮಳೆಗಾಗಿ ರೈತರು ಕಾದು ಕುಳಿತಿದ್ದಾರೆ. ಇದರಿಂದಾಗಿ, ಬಿತ್ತನೆಯ ಪ್ರಮಾಣ ಇಳಿಮುಖವಾಗಿದೆ. |
ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜು. 16ರ ಹೊತ್ತಿಗೆ ದೇಶಾದ್ಯಂತ 61.19 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ ಮತ್ತು ಸೋಯಾಬೀನ್‌ಗಳ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 12ರಷ್ಟು ಇಳಿಮುಖವಾದಂತಾಗಿದೆ. ಕಳೆದ ಮುಂಗಾರುವಿನಲ್ಲಿ ದೇಶಾದ್ಯಂತ 5.37 ಮಿಲಿಯನ್ ಹೆಕ್ಟೇರ್ ಪ್ರದೇಶಗಳಲ್ಲಿ ಕಬ್ಬು ಬಿತ್ತನೆ ಮಾಡಲಾಗಿತ್ತು. ಈ ಬಾರ... |
ಆಗಷ್ಟ್ 20, 2020 – ಶ್ರೀನಿವಾಸ |
Day: ಆಗಷ್ಟ್ 20, 2020 |
ಆಚಾರ-ವಿಚಾರ - Rituals ಲೇಖನಗಳು |
ಗೌರಿ ಗಣಪತಿ ಹಬ್ಬ |
Post date ಆಗಷ್ಟ್ 20, 2020 |
ಯಾವುದೇ ಪ್ರತಿಕ್ರಿಯೆಗಳಿಲ್ಲ ಇದಕ್ಕೆ ಸಂಬಂಧಿಸಿದಂತೆ ಗೌರಿ ಗಣಪತಿ ಹಬ್ಬ |
ಗೌರಿ ಎಂಬ ಪದ ಪಾರ್ವತೀದೇವಿಗೆ ಪರ್ಯಾಯವಾದ ಪದ. ಆಕೆಯು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಕೊನೆಯದನ್ನು ತನ್ನ ಅಧಿಕಾರದಲ್ಲಿ ಪ್ರಧಾನವಾಗಿ ಹೊಂದಿರುವ ಮಹಾದೇವನ ಅರ್ಧಾಂಗಿ, ಮಹಾದೇವಿ. ಆಕೆಯು ಸಂಹಾರ ಮಾಡುವಾಗ ಕೃಷ್ಣವರ್ಣವನ್ನು ಅಲಂಕರಿಸಿರುವ ಕಾಳೀ ಮಾತೆ, ವಿದ್ಯಾಪ್ರದಾನ ಮಾಡುವಾಗ ಶ್ಯಾಮಲ ವರ್ಣದ ಶ್ಯಾಮಲಾಂಬಿಕೆಯಂತೆ, ಸೌಮಂಗಲ್ಯ, ಸೌಭಾಗ್ಯ ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣ... |
ಭಾದ್ರಪದ ಶುಕ್ಲ ತೃತೀಯ ತಿಥಿಯಂದ (ತದಿಗೆ) ಶ್ರೀ ಗೌರಿ ಹಬ್ಬ. ಅಂದು ಸೂರ್ಯೋದಯ ಸಮಯದಲ್ಲಿ ತೃತೀಯ ತಿಥಿ ಇರಬೇಕು. ಗಣಪತಿಯ ಪೂಜೆಗೆ ಯೋಗ್ಯವಾಗಿರುವ ಚತುರ್ಥೀ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯದೊಡನೆ ಚತುರ್ಥೀ ಯೋಗವು ಕೂಡಿ ಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿದೇವಿಯು ಪರ್ವತ ಸಾರ್ವಭೌಮನಾದ ಹಿಮವಂತನ ಮಗಳು. ವರುಷಕ್ಕೊಮ್ಮೆ ತವರಿಗೆ ಬರುವ ಅವ... |
ಗೌರೀ ದೇವಿಯನ್ನು ಹೃದಯದಲ್ಲಿ ಧ್ಯಾನ ಮಾಡಿ ಅನಂತರ ಮಾತೆಗೆ ಬಾಹ್ಯಪೂಜೆ ಅರ್ಪಿಸಬೇಕು. ಗೌರಿದೇವಿಯ ಪ್ರತಿಮೆಯನ್ನು ಸುವರ್ಣ ರೂಪದಲ್ಲಿ, ಕಲಶ ರೂಪದಲ್ಲಿ, ಅರಿಶಿನ ರೂಪದಲ್ಲಿ ಅಥವಾ ಮಣ್ಣಿನ ರೂಪದಲ್ಲಿ ನಿರ್ಮಿಸಿ ಪೂಜೆ ಸಲ್ಲಿಸಬೇಕು. ಮರಳಿನಲ್ಲೂ ಗೌರಿಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವಿದೆ. ನದಿತಟದಲ್ಲಿರುವ ಮರಳನ್ನು ಅರಿಶಿನದ ಬಟ್ಟೆಯಲ್ಲಿ ಇರಿಸಿ ಗಂಟು ಹಾಕಿ ಷೋಡಶೋಪಚಾರ ಪೂಜೆಯನ್ನು ಅರ್ಪಿ... |
ಪುಷ್ಪಾಕ್ಷತೆಯಿಂದ ಆವಾಹಿಸಿ, ರತ್ನಸಿಂಹಾಸನವನ್ನು ಸಮರ್ಪಿಸಬೇಕು. ಹೊಸದಾದ ಹದಿನಾರು ಗಂಟುಗಳ ದಾರವನ್ನೂ ದೇವಿಯೊಂದಿಗೆ ಪೂಜೆಗಿಡಬೇಕು. ಯಥಾವತ್ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಮತ್ತಿತರೇ ಸೌಭಾಗ್ಯ ದ್ರವ್ಯಗಳನ್ನು ದೇವಿಗೆ ಅರ್ಪಿಸಬೇಕು. ಆಭರಣವೆಂದು ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವ... |
ಮಾರನೆಯದಿನ ಮಗನಾದ ಗಣಪತಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಬರುವನು. ಅವನಿಗೆ ಪೂಜೆ ಸಲ್ಲಿಸುವುದೇ ಗಣಪತಿ ಹಬ್ಬ. ಮನೆಯ ಮಗಳಾದ ಗೌರಿಯನ್ನು ಕಳುಹಿಸಿಕೊಡುವಾಗ ಸೋಬಲಕ್ಕಿ ಇಡುವರು. ಅವಳನ್ನು ಕಳುಹಿಸುವದಕ್ಕೆ ವಿಶೇಷದಿನವನ್ನು ನೋಡುವುದು ಪರಿಪಾಠ. ಮಂಗಳವಾರ, ಶುಕ್ರವಾರ, ಪಂಚಮೀ, ನವಮೀ ತಿಥಿಗಳಂದು ಮನೆಯ ಮಗಳನ್ನು ಕಳುಹಿಸುವುದಿಲ್ಲ. |
ಗಣಪತಿ ಪೂಜೆ |
ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ| |
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: ಸೀದ ಸಾದನಮ್ |
ಇದು ವೇದ ಮಂತ್ರವಾದರೆ, ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂಬುದು ಬೀಜಾಕ್ಷರ ಮಂತ್ರ. |
ತ್ವಮೇವ ಕೇವಲಂ ಕರ್ತಾಸಿ |
ತ್ವಮೇವ ಕೇವಲಂ ಧರ್ತಾಸಿ |
ತ್ವಮೇವ ಕೇವಲಂ ಹರ್ತಾಸಿ |
ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ |
ತ್ವಂ ಸಾಕ್ಷಾದಾತ್ಮಾಸಿ ಆತ್ಮಂ |
ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್. |
ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ. |
ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ. |
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನ... |
ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ. |
ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು... |
ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ. |
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. |
ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. |
ನೀರಿನ ಸದುಪಯೋಗಕ್ಕೊಂದು ಮಾದರಿ ಡಾ. ಮೋಹನ ನಾರಾಯಣ್ | News13 |
News13 > ಅಂಕಣಗಳು > ವ್ಯಕ್ತಿ ವಿಶೇಷ > ನೀರಿನ ಸದುಪಯೋಗಕ್ಕೊಂದು ಮಾದರಿ ಡಾ. ಮೋಹನ ನಾರಾಯಣ್ |
ನೀರಿನ ಸದುಪಯೋಗಕ್ಕೊಂದು ಮಾದರಿ ಡಾ. ಮೋಹನ ನಾರಾಯಣ್ |
'ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ' ಎಂದು ಪ್ರತಿನಿತ್ಯ ಸರ್ಕಾರ, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯ. 'ಬರ' ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯ ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯ. |
ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ, ಬರುವ ಮಳೆ ನೀರನ್ನು ಸಂಗ್ರಹಿಸಿ ನಿತ್ಯದ ಬಳಕೆಗೆ ಉಪಯೋಗಿಸುವ ಮತ್ತು ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ವಿಧಾನ ಅನುಸರಿಸುತ್ತಿರುವ ಜನ ನಮ್ಮ ಮಧ್ಯೆ ಇದ್ದಾರೆ. ಅಂಥವರಲ್ಲಿ ಎಸ್.ಡಿ.ಎಮ್. ಕಾಲೇಜು ಉಜಿರೆಯ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನ ನಾರಾಯಣ ಒಬ್ಬರು. |
'ಇದ್ದ ನೀರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ, ಈಗ ನೀರಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಮಳೆಗಾಲದಲ್ಲಿ ಬರುವ ನೀರನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದರೆ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ, ವರ್ಷಪೂರ್ತಿ ಅಲ್ಲದೇ ಬರುವ ವರ್ಷದಲ್ಲೂ ನೀರಿನ ಅಭಾವವಿರುವುದಿಲ್ಲ' ಎನ್ನುತ್ತಾರೆ ಅವರು. |
ಸುಮಾರು 12 ವರ್ಷಗಳಿಂದ ಮಳೆಗಾಲದಲ್ಲಿ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ನೀರನ್ನೇ ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ. ತಮ್ಮ ಮನೆಯ ಮೇಲೆ ಬೀಳುವ ನೀರನ್ನು ಪೈಪ್‌ಗಳ ಮೂಲಕ ಬಾವಿಗೆ ಹರಿಸುವ ವ್ಯವಸ್ಥೆ ಮಾಡಿದ್ದಾರೆ. ಮೇಲ್ಛಾವಣಿಗೆ 4 ಇಂಚು ದಪ್ಪದ ಪೈಪ್‌ಗಳನ್ನು ಅಳವಡಿಸಿ ಅದನ್ನು ಬೇರೆ ಬೇರೆ ಪೈಪ್‌ಗಳ ಮೂಲಕ ಮನೆಯ ಬಾವಿಗೆ ಜೋಡಿಸಿದ್ದಾರೆ. ಪೈಪ್‌ಗಳಿಗೆ ಜೋಡಿಸಿರುವ ಜಾಲಿಗಳಲ್ಲಿ ಸೋಸಿ ಒಳ್... |
ಕುಡಿಯಲು, ಮನೆಯ ಇನ್ನಿತರ ಕೆಲಸಗಳಿಗೆ ಉಪಯೋಗವಾಗುವುದೊಂದೇ ಅಲ್ಲದೆ ಮನೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ. ಮನೆಯ ಹತ್ತಿರದ ಜಾಗಗಳಲ್ಲಿ ಬೋರ್‌ವೆಲ್‌ಗಳಿದ್ದರೂ ಪ್ರತಿ ಮಳೆಗಾಲದಲ್ಲಿ ಮನೆಯ ಬಾವಿ ನೀರು 2-3 ಫೂಟ್ ಜಾಸ್ತಿಯಾಗುತ್ತಿದೆ. ಹೀಗಾಗಿ ಅವರ ಮನೆಯ ಮೇಲೆ ಬೀಳುವ ಮಳೆನೀರು ಸ್ವಲ್ಪವೂ ವ್ಯರ್ಥವಾಗದೇ, ಸದುಪಯೋಗಗೊಳ್ಳುತ್ತಿರುವುದು ವಿಶೇಷ. |
ನೀರಿನ ಅಭಾವ ಕಾಡಿಲ್ಲ |
'3-4 ಜನ ವಾಸಿಸುವ ಸಣ್ಣ ಮನೆಗಳಿಗೆ ಪ್ರತಿನಿತ್ಯ ಸುಮಾರು 250-300 ಲೀಟರ್‌ಗಳಷ್ಟು ನೀರು ಸಾಕು. ಮನೆಯಲ್ಲಿ ನೀರಿನ ಬಳಕೆಯ ಬಗ್ಗೆ ಗೃಹಿಣಿಯರಿಗೆ ತುಸು ಜಾಗೃತಿ ಇರಬೇಕು. ಪ್ರತಿ ಮಳೆಗಾಲದ ಮೊದಲ ಮಳೆಯ ನೀರನ್ನು ಬಿಟ್ಟು, ಬಾಕಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ ಉಪಯೋಗಿಸುತ್ತೇವೆ. ಇದು ನಮಗೆ ನಿತ್ಯದ ಉಪಯೋಗಗಳಿಗೆ ಸಾಕು. 12 ವರ್ಷದ ಹಿಂದೆಯೆ ಮಳೆ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಅನುಸ... |
ತೋಟದಲ್ಲಿ ಇಂಗುಗುಂಡಿ |
ತಮ್ಮ 3.50 ಎಕರೆಯ 'ಚೈತನ್ಯ ಪ್ಲಾಂಟೇಶನ್ 'ರಬ್ಬರ್ ತೋಟದಲ್ಲಿ 20 ವರ್ಷಗಳ ಹಿಂದೆಯೇ 'ಇಂಗು ಗುಂಡಿ'ಯನ್ನು ಮಾಡಲಾಗಿದೆ. ಬೆಟ್ಟದಿಂದ ಹರಿದು ಬರುವ ನೀರನ್ನು ಇಂಗಿಸುವ ವಿಧಾನದಿಂದ, ಪೂರ್ತಿ ತೋಟ ಈ ಬಿರು ಬಿಸಿಲಿನಲ್ಲೂ ತಂಪಾಗಿದೆ. ತೋಟದ ಇಳಿಜಾರುಗಳಲ್ಲಿ ಸಾಲಾಗಿ ಇಂಗುಗುಂಡಿ ತೆಗೆದು ಮಳೆಗಾಲದಲ್ಲಿ ಇಳಿಜಾರಿಗೆ ಹರಿದು ಬರುವ ನೀರು ಗುಂಡಿಗಳಲ್ಲಿ ಇಂಗುವ ಹಾಗೆ ಮಾಡಿದ್ದಾರೆ. ಈ ವಿಧಾನವನ್ನು ತೋಟದ... |
ಭೂಮಿಯಲ್ಲಿ ಅಂತರ್ಜಲ ಸರಿಯಾದ ಪ್ರಮಾಣದಲ್ಲಿ ಇದ್ದರೆ, ಬೆಳೆ ಚೆನ್ನಾಗಿ ಬರುತ್ತದೆ. ತೋಟ ತಂಪಾಗಿರುವ ಕಾರಣ, ಕಾಳು ಮೆಣಸು, ರಬ್ಬರ್ ಹೆಚ್ಚು ಬೆಳೆಯುತ್ತಾರೆ. ರಬ್ಬರ್ ಮರಗಳ ಬುಡಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ಹರಿದು ಬರುವ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗದ ಹಾಗೆ ಮತ್ತು ನೀರು ಅಲ್ಲೆ ಇಂಗುವ ಹಾಗೆ ವ್ಯವಸ್ಥೆ ಮಾಡಿದ್ದಾರೆ. 3.50 ಎಕರೆ ಜಾಗದಲ್ಲಿ 100-120 ಇಂಗು ಗುಂಡಿಗಳಿರುವುದು ಗಮನಾ... |
ಇದು ಯಾವುದೇ ಸರ್ಕಾರದ ಯೋಜನೆಯಿಂದ ಅಥವಾ ಇನ್ನೊಬ್ಬರ ಹೇಳಿಕೆ ಮೇರೆಗೆ ಮಾಡಿದ ಕೆಲಸವಲ್ಲ. ತಮ್ಮ ಜಾಗದಲ್ಲಿ ಬೀಳುವ ಮಳೆ ನೀರು ಸದ್ಬಳಕೆ ಆಗಬೇಕು. ಭೂಮಿಯಿಂದ ನೀರು ತೆಗೆದ ಹಾಗೆ, ಭೂಮಿಗೆ ನೀರು ಇಂಗಿಸುವ ಕೆಲಸವೂ ಆಗಬೇಕು ಎಂಬುದು ಮೋಹನ ನಾರಾಯಣರ ಆಶಯ. |
ಪ್ರತಿಯೊಬ್ಬರು ಮನೆ ನಿರ್ಮಿಸುವ ಸಮಯದಲ್ಲಿ ಸೋಲಾರ್ ಅಳವಡಿಸುವ ಹಾಗೆ, ಮೇಲ್ಛಾವಣಿ ಮೇಲೆ ಬೀಳುವ ನೀರನ್ನು ಸಂಗ್ರಹಿಸುವ ವಿಧಾನವನ್ನು ಅಳವಡಿಸಿಕೊಂಡರೆ, ಎಂತಹ ಸಂದರ್ಭದಲ್ಲೂ ನೀರಿನ ಕೊರತೆಯಾಗದು. ತೋಟ ಮುಂತಾದ ಜಾಗಗಳಲ್ಲಿ ಇಂಗು ಗುಂಡಿ ನಿರ್ಮಿಸುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಡಾ.ಕೆ.ಎಸ್.ಮೋಹನ ನಾರಾಯಣ ಅವರು. |
ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ - Public TV |
ಕೋಲಾರ: ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಐದು ಜನರಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. |
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸಮೀಪದ ಕದಿರೇನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಹಾಗೂ ಕುಟುಂಬಸ್ಥರು ಶೌಚಾಲಯ ನೀರನ್ನು ಮನೆ ಮುಂದೆ ಬಿಡಲಾಗುತ್ತಿದೆ ಎಂದು ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. |
ಅಪ್ಪಿರೆಡ್ಡಿ, ಶ್ರೀರಾಮಪ್ಪ, ಬಾಲ, ಆನಂದ, ಶ್ರೀರಾಮಪ್ಪ ಎಂಬವರು ದಲಿತ ಕುಟುಂಬದ ಗೌರಮ್ಮ, ನಾಗವೇಣಿ, ಮಲ್ಲಿಕಾ, ಮಹೇಶ್ ಹಾಗೂ ಶ್ರೀನಿವಾಸ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. |
ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಗ್ರಾಮದಲ್ಲಿ ಒಂದು ಡಿಎಅರ್ ತುಕಡಿ ಸೇರಿದಂತೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. |
ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ! | Fans Slams Sharad Pawar after he warns Sachin tendulkar over Farmer Protest and foreign tweet campaign ckm |
Bengaluru, First Published Feb 6, 2021, 10:46 PM IST |
Subsets and Splits
No community queries yet
The top public SQL queries from the community will appear here once available.