text stringlengths 0 61.5k |
|---|
ರೈತರ ಪ್ರತಿಭಟನೆ, ವಿದೇಶಿ ಸೆಲೆಬ್ರೆಟಿಗಳ ಷಡ್ಯಂತ್ರ ವಿರುದ್ಧ ಮಾತನಾಡಿದ ಸಚಿನ್ ತೆಂಡುಲ್ಕರ್‌ಗೆ ರಾಜಕೀಯ ನಾಯಕ ಶರದ್ ಪವರ್ ನಾಲಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಸಿದ್ದಾರೆ. ಹಳೇ ಸಿನಿಮಾ ವಿಲರ್ ರೀತಿ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರು ಮಂಗಳಾರತಿ ಮಾಡಿದ್ದಾರೆ. |
ಮುಂಬೈ(ಫೆ.06): ಕ್ರಿಕೆಟ್ ಹೊರತು ಪಡಿಸಿ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಧಮ್ಕಿ ಹಾಕಿದ ಎನ್‌ಸಿಪಿ ನಾಯಕ, ಹಿರಿಯ ರಾಜಕಾರಣಿ ಶರದ್ ಪವರ್‌ಗೆ ಭಾರತೀಯರು ಮಂಗಳಾರತಿ ಮಾಡಿದ್ದಾರೆ. ಭಾರತದ ಪರ, ಭಾರತೀಯತೆ ಕುರಿತು, ದೇಶದ ಸಾರ್ವಭೌಮತ್ವ ಕುರಿತು ಮಾತನಾಡಿದ ಸಚಿನ್‌ಗೆ ಧಮ್ಮಿ ಹಾಕಲಾಗುತ್ತಿದೆ ಎಂದು ಅಭಿಮಾನಿಗಳ ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ! |
ರೈತ ಪ್ರತಿಭಟನೆ ಹಾಗೂ ವಿದೇಶಿ ಸೆಲೆಬ್ರೆಟಿಗಳ ಟ್ವೀಟರ್ ಅಭಿಯಾನದ ಕುರಿತ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ತೆಂಡುಲ್ಕರ್‌ಗೆ ನಾನು ಎಚ್ಚರಿಸುತ್ತಿದ್ದೇನೆ. ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಶರದ್ ಪವಾರ್ ಹೇಳಿದ್ದಾರೆ. |
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶರದ್ ಪವಾರ್ ಬಹಿರಂಗವಾಗಿ ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡುತ್ತಿದ್ದಾರೆ. ದೇಶದ ಪರ ಮಾತನಾಡಿದ ಸಚಿನ್‌ಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
Darling of the liberals openly threatening SRT for expressing solidarity with his country 😑😑 https://t.co/qH5A5Pxste |
— ಹನುಮಂತಪ್ಪ ಲಕ್ಷಮಪ್ಪ ಲಮಾಣಿ (@hannulamani) February 6, 2021 |
Sharad Pawar is in power in Maharashtra. Here he is openly threatening a resident of the state for using his right to speak on an issue. |
Of course per media Sharad Pawar is beacon of liberalism, those criticising Rihanna are villains and those reforming agriculture are evil. https://t.co/imUhaHkWca |
— Akhilesh Mishra (@amishra77) February 6, 2021 |
Have you heard Modi/Shah or any BJP leaders threatening the anti-nationals, left liberals, urban naxals who are campaigning for the separatists and terr0rists. But here Pawar is threatening Sachin for taking pro-India stand. Who is fascist? https://t.co/rPVkA8NUrG |
ಅವಳಿ ಸ್ಫೋಟ- ಮಹತ್ವದ ಸುಳಿವು | Prajavani |
ಅವಳಿ ಸ್ಫೋಟ- ಮಹತ್ವದ ಸುಳಿವು |
ಹೈದರಾಬಾದ್: ಜವಳಿ ಮಳಿಗೆಗೆ ಯಾಸಿನ್ ಭಟ್ಕಳ್ ಭೇಟಿ |
ಹೈದರಾಬಾದ್: ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹತ್ವದ ಸುಳಿವು ಕಲೆಹಾಕಿದೆ. ಈ ವಿಧ್ವಂಸಕ ಕೃತ್ಯದ ಹಿಂದೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆ ಕೈವಾಡ ಇರುವ ಸಾಧ್ಯತೆ ಈ ಸುಳಿವಿನಿಂದ ಬಲಗೊಂಡಿದೆ. |
`ಸ್ಫೋಟ ಸಂಭವಿಸಿದ ಫೆ.21ರಂದು `ಐಎಂ' ಪ್ರಮುಖ ಉಗ್ರ ಯಾಸಿನ್ ಭಟ್ಕಳ್ ಹೈದರಾಬಾದ್‌ನಲ್ಲಿ ಇದ್ದ. ಈತ ಸ್ಫೋಟ ಸಂಭವಿಸಿದ ಸ್ಥಳದ ಸಮೀಪ ಇರುವ ಜವಳಿ ಮಳಿಗೆಗೆ ಭೇಟಿ ನೀಡಿದ್ದ. ಇದು ಮಳಿಗೆಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಘಟನಾ ಸ್ಥಳದ ಹತ್ತಿರ ಇರುವ ಟ್ರಾಫಿಕ್ ಸ್ನಿಗಲ್ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಶಂಕಿತರ ಚಲನವಲನಗಳು ದಾಖಲಾಗಿವೆ' ಎಂದು `ಎನ್‌ಐಎ' ಇ... |
`ಜವಳಿ ಮಳಿಗೆಯಲ್ಲಿನ ದೃಶ್ಯಗಳಲ್ಲಿ ಕಾಣಿಸಿರುವ ಶಂಕಿತ ವ್ಯಕ್ತಿ ಚಹರೆಯು ಕರ್ನಾಟಕ ಮೂಲದ ಅಹ್ಮದ್ ಸಿದ್ದಬಪ್ಪ ಅಲಿಯಾಸ್ ಯಾಸಿನ್ ಭಟ್ಕಳ್‌ನ ಚಹರೆಗೆ ನಿರ್ದಿಷ್ಟವಾಗಿ ಹೋಲಿಕೆ ಆಗುತ್ತದೆ. ಆತ ಚೀಲ ಇತ್ತು. ಬಹುಶಃ ಅದರಲ್ಲೇ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇದ್ದಿರಬಹುದು. ಅದನ್ನು ವೆಂಕಟಾದ್ರಿ ಸಿನಿಮಾ ಮಂದಿರ ಬಳಿಯ ಬಸ್ ನಿಲ್ದಾಣದಲ್ಲಿ ಇಟ್ಟು ಸ್ಫೋಟಿಸಲಾಗಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾ... |
`ಆದರೆ, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಗಾವಹಿಸಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರು ಶಂಕಿತರ ಚಲನವಲನ ದಾಖಲಾಗಿದೆ. ಇದರಲ್ಲಿ ಭಟ್ಕಳ್‌ನ ಚಹರೆ ಅಷ್ಟು ಸ್ಪಷ್ಟವಾಗಿಲ್ಲ. ಶಂಕಿತರಲ್ಲಿ ಒಬ್ಬ ಪಾದಚಾರಿಯಾದರೆ, ಮತ್ತೊಬ್ಬ ಸೈಕಲ್ ಸವಾರ. ಈ ದೃಶ್ಯಾವಳಿಯನ್ನು ಗಾಂಧಿನಗರದಲ್ಲಿರುವ ವಿಶೇಷ ತಂತ್ರಜ್ಞಾನ ಪ್ರಯೋಗಾಲಯಕ್ಕೆ ಮತ್ತು ಅಮೆರಿಕದ ಎಫ್‌ಬಿಐ ಪ್ರಯೋಗಾಲಕ್ಕೆ ಕಳುಹಿಸಿ, ಅಭಿಪ್ರಾಯ ಕ... |
ವಿಸ್ಡನ್ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಆಯ್ಕೆ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Apr 05, 2017, 11:23 PM IST |
ಹೊಸದಿಲ್ಲಿ, ಎ.5: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2016ನೆ ಸಾಲಿನ ವಿಸ್ಡನ್ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಕೊಹ್ಲಿಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. |
ಕೊಹ್ಲಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 75.93ರ ಸರಾಸರಿಯಲ್ಲಿ 1,251 ರನ್ ಕಲೆ ಹಾಕಿ ಭರ್ಜರಿ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 92.37ರ ಸರಾಸರಿಯಲ್ಲಿ 739 ರನ್ ಗಳಿಸಿದ್ದರು. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 106.83ರ ಸರಾಸರಿಯಲ್ಲಿ ಒಟ್ಟು 641 ರನ್ ಕಲೆ ಹಾಕಿದ್ದರು. |
ಕ್ಯಾಲೆಂಡರ್ ವರ್ಷವೊಂದರಲ್ಲಿ ಕೇವಲ ಆರು ಬ್ಯಾಟ್ಸ್‌ಮನ್‌ಗಳು ಗರಿಷ್ಠ ಅಂತಾರಾಷ್ಟ್ರೀಯ ಸ್ಕೋರ್ ಗಳಿಸಿದ್ದಾರೆ. ಆದರೆ, ಭಾರತದ ನಾಯಕ ಕೊಹ್ಲಿಯಷ್ಟು ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿಲ್ಲ. |
2016ರ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿರುವ ಕೊಹ್ಲಿಯ ಚಿತ್ರ 2017ರ ಆವೃತ್ತಿಯ 'ವಿಸ್ಡನ್ ಕ್ರಿಕೆಟರ್ಸ್ ಅಲ್‌ಮಾನಕ್' ಮುಖಪುಟದಲ್ಲಿ ಪ್ರಟವಾಗಿದೆ. 2003ರಲ್ಲಿ ರಿಕಿ ಪಾಂಟಿಂಗ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದರು ಎಂದು ವಿಸ್ಡನ್ ಘೋಷಿಸಿದೆ. |
ಕಳೆದ ವರ್ಷ ಬ್ಯಾಟ್‌ನಲ್ಲಿ ರನ್ ಹೊಳೆ ಹರಿಸಿರುವ ಕೊಹ್ಲಿ ಪ್ರತಿಷ್ಠಿತ 'ಪಾಲಿ ಉಮ್ರಿಗಾರ್ ಪ್ರಶಸ್ತಿ' ಹಾಗೂ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ. |
371 ಕಲಂ: ಕೊಪ್ಪಳ, ಬಳ್ಳಾರಿ ಬೇರ್ಪಡಿಸಿ | Prajavani |
371 ಕಲಂ: ಕೊಪ್ಪಳ, ಬಳ್ಳಾರಿ ಬೇರ್ಪಡಿಸಿ |
ಭಾಲ್ಕಿ: ಕೊಪ್ಪಳ ಮತ್ತು ಬಳ್ಳಾರಿಯ ವಕೀಲರು ಗುಲ್ಬರ್ಗಾದ ಸಂಚಾರಿ ನ್ಯಾಯಪೀಠದ ಬದಲು ಧಾರವಾಡದ ನ್ಯಾಯಪೀಠವನ್ನು ಆರಿಸಿಕೊಂಡಿದ್ದರಿಂದ ಆ ಎರಡೂ ಜಿಲ್ಲೆಗಳನ್ನು 371 ಕಲಂನಿಂದ ಬೇರ್ಪಡಿಸುವಂತೆ ಆಗ್ರಹಿಸಿ ಬುಧವಾರ ಭಾಲ್ಕಿಯ ವಕೀಲರ ಸಂಘದಿಂದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಲಾಯಿತು. |
ನಂತರ ವಕೀಲರೆಲ್ಲರೂ ಸೇರಿ ತಹಸೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು. |
ವಕೀಲರ ಸಂಘದ ಅಧ್ಯಕ್ಷ ಎನ್.ಬಿ ಪಾಟೀಲ ಮಾತನಾಡಿ, ದಶಕಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 371 ಕಲಂ ಜಾರಿಗೆ ತರಲು ಒಪ್ಪಿಕೊಂಡಿದೆ. ಅಂಥದರಲ್ಲಿ ಕೊಪ್ಪಳ ಮತ್ತು ಬಳ್ಳಾರಿಯ ವಕೀಲರು ಸ್ವಯಂ ನಿರ್ಧಾರ ತೆಗೆದುಕೊಂಡು ಗುಲ್ಬರ್ಗಾದ ಸಂಚಾರಿ ನ್ಯಾಯಪೀಠದ ಬದಲು ಧಾರವಾಡದಲ್ಲಿನ ನ್ಯಾಯಪೀಠವನ್ನು ಆಯ್ಕೆ ಮಾಡಿಕೊಂಡಿರುವದು ಅಕ್ಷಮ್ಯ ಎಂದು ಖಂಡಿಸಿದರು. |
ಕೂಡಲೇ ಈ ನಿರ್ಧಾರದಿಂದ ಹಿಂದಕ್ಕೆ ಪಡೆಯದಿದ್ದರೆ 371 ಕಲಂ ನ ಸೌಲಭ್ಯಗಳಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. |
ಉಪಾಧ್ಯಕ್ಷ ಶ್ರೀಶೈಲ ಪಾಟೀಲ, ಕಾರ್ಯದರ್ಶಿ ಶತ್ರುಘ್ನ ನೆಲವಾಡೆ, ಉಮಾಕಾಂತ ವಾರದ, ಎನ್.ಎನ್. ಸ್ವಾಮಿ, ವೆಂಕಟರಾವ ಭುರಾಳೆ, ಬಿ.ಎನ್. ಮೂಲಗೆ, ಶಿವಶಂಕರ ಲದ್ದೆ, ವಿಜಯಕುಮಾರ ಭುಸಗುಂಡೆ, ಮಾಣಿಕರಾವ ಜಾನಾಪುರಕರ್, ವೈಜಿನಾಥ ಸಿರ್ಸ್ಗಿ, ಸತೀಶ ಲದ್ದೆ, ರಾಮಶಟ್ಟಿ ಜಾಂತೆ, ಸಂಜೀವಕುಮಾರ ಸಾಳುಂಕೆ, ಶ್ರೀಕಾಂತ ಭುರಾಳೆ, ಪ್ರಸನ್ನ ದೇಶಪಾಂಡೆ, ರಾಜಕುಮಾರ ವಾಘಮಾರೆ ಮುಂತಾದವರು ಇದ್ದರು. |
ರಫೇಲ್ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್ |
August 18, 2018 11:25 PM |
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದ ದಿಕ್ಕು-ದಿಸೆ ಬದಲಿಸಬಹುದಾದ ರಫೇಲ್ ಹಗರಣದಲ್ಲಿ ಬಿಜೆಪಿಯನ್ನು ಸಿಲುಕಿಸಲು ಕಾಂಗ್ರೆಸ್ ತಯಾರಿ ಆರಂಭಿಸಿದೆ. ಇದಕ್ಕಾಗಿ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ |
ಬಿಜೆಪಿಯ ಬೊಫೋರ್ಸ್ ಎಂದೇ ಬಣ್ಣಿಸಲಾಗುತ್ತಿರುವ ರಫೇಲ್ ಯುದ್ದವಿಮಾನ ಖರೀದಿ ಹಗರಣವನ್ನು ಬಯಲಿಗೆಳೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯತಂತ್ರ ರೂಪಿಸಿದ್ದಾರೆ. ಇದಕ್ಕಾಗಿ ಮಾಜಿ ಸಚಿವ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಾಹುಲ್ ರಚಿಸಿದ್ದು, ದೇಶಾದ್ಯಂತ ಜನಜಾಗ... |
ಈಚೆಗೆ, ರಫೇಲ್ ಹಗರಣದ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು; ಮಾಧ್ಯಮ ಮ... |
ಕರ್ನಾಟಕ ವಿಧಾನಸಭೆ ಚುನಾವಣೆಯಿಂದಲೇ ರಾಹುಲ್ ಗಾಂಧಿ ಅವರು ರಫೇಲ್ ಹಗರಣವನ್ನು ವ್ಯಾಪಕವಾಗಿ ಪ್ರಸ್ತಾಪಿಸಿದ್ದು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರದ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಂಡಿದೆ. ೪೫ ಸಾವಿರ ಕೋಟಿ ರುಪಾಯಿ ಮೌಲ್ಯದ ಹಗರಣದಲ್ಲಿ ಮೋದಿ ಅವರು ತಮ್ಮ ಉದ್ಯಮಿ ಸ್ನೇಹಿತ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ದೇಶದ ಹಿತಾಶಕ್ತಿ ಬಲಿಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್... |
ಇದನ್ನೂ ಓದಿ : ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ; ಸಿಎಜಿ ತನಿಖೆಗೆ ಸಿನ್ಹಾ, ಶೌರಿ ಆಗ್ರಹ |
ಈಚೆಗೆ ಮುಕ್ತಾಯವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ಮೇಲೆ ಮಾತನಾಡಿದ್ದ ರಾಹುಲ್, ಮೋದಿ ಸರ್ಕಾರದ ವಿರುದ್ಧ ರಫೇಲ್ ಹಗರಣದ ಅಸ್ತ್ರ ಪ್ರಯೋಗಿಸಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಕ್ಕೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಆರೋಪಿಸಿದ್ದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಆನ... |
ಬಿಜೆಪಿ ಕಾಂಗ್ರೆಸ್ congress BJP ಪ್ರಧಾನಿ ನರೇಂದ್ರ ಮೋದಿ PM Narendra Modi Rafale Deal ರಾಫೇಲ್ ಒಪ್ಪಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ AICC President Rahul Gandhi ರಿಲಯನ್ಸ್ ಡಿಫೆನ್ಸ್ Reliance Defence |
ಬಿಎಂಟಿಸಿ ಸಾಮಾನ್ಯ ನೌಕರನಿಗೆ ನೂರಾರು ಕೋಟಿ ಆಸ್ತಿ ಬಂದದ್ದು ಹೇಗೆ ? - Newsnap Kannada |
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ ಆಪ್ತ ಸಹಾಯಕ ಉಮೇಶ್ ನಿವಾಸದ ಮೇಲೆ ಐಟಿ ದಾಳಿ ವೇಳೆ ಆತನಿಗೆ ಸೇರಿದ ನೂರಾರು ಕೋಟಿ ಆಸ್ತಿ ಪತ್ತೆಯಾಗಿದೆ |
ಬಿಎಂಟಿಸಿಯಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಉಮೇಶ್, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದನು. |
ದಾಳಿಯ ಹಿನ್ನೆಲೆ ? |
ನೀರಾವರಿ ಇಲಾಖೆಯಲ್ಲಿ ಕೋಟಿಗಟ್ಟಲೇ ಟೆಂಡರ್ ಕರೆಯಲಾಗುತ್ತದೆ. ಈ ಟೆಂಡರ್ಗಳಲ್ಲಿ ಗೋಲ್ಮಾಲ್ ಮಾಡಿರುವ ಆರೋಪ ಬಿಎಸ್ ಯಡಿಯೂರಪ್ಪರ ಆಪ್ತ ಉಮೇಶ್ ಮೇಲಿದೆ ಎನ್ನಲಾಗಿದೆ. |
ಅದರಂತೆ ಕಾವೇರಿ ನೀರಾವರಿ ನಿಗಮದ ಟೆಂಡರ್, ಕೃಷ್ಣ ಭಾಗ್ಯ ಜಲ ನಿಗಮದ ಟೆಂಡರ್ ಸೇರಿದಂತೆ ಅನೇಕ ಟೆಂಡರ್ಗಳಲ್ಲಿ ಗೋಲ್ಮಾಲ್ ಮಾಡಿದ್ದಾರೆ ಅನ್ನೋ ಆರೋಪವೂ ಇದೆ. |
ಬಿಡುಗಡೆಯಾದ ಹಣಕ್ಕೂ, ಮಾಡಿರುವ ಕಾಮಗಾರಿಯ ಹಣದಲ್ಲಿಯೂ ಭಾರೀ ವ್ಯತ್ಯಾಸ ಇದೆಯಂತೆ. ಅದರಲ್ಲೂ ಗುತ್ತಿಗೆದಾರನ ಆದಾಯದಲ್ಲಿ ಭಾರೀ ವ್ಯತ್ಯಾಸ ಆಗಿದೆ ಎಂದು ಹೇಳಲಾಗಿದೆ. |
ಇದರಲ್ಲಿ ಪ್ರಮುಖವಾಗಿ ಉಮೇಶ್ ವ್ಯವಹಾರದಲ್ಲಿ ಭಾರೀ ವ್ಯತ್ಯಾಸ ಆಗಿದ್ಯಂತೆ. ಕಳೆದ ಎರಡೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆದಿದೆ ಅನ್ನೋ ಆರೋಪ ಇದೆ. |
ಉಮೇಶ್ ಮೊದಲು ಬಿಎಂಟಿಸಿ ನೌಕರರಾಗಿ ಕೆಲಸ ಮಾಡುತ್ತಿದ್ದರು. 2008ರಲ್ಲಿ ಬಿಎಸ್ವೈ ಸಿಎಂ ಆದ ಮೇಲೆ ಆ ಕೆಲಸಕ್ಕೆ ಗುಡ್ಬೈ ಹೇಳಿದ್ದರು. ನಂತರ ಇಡೀ ಬಿಎಸ್ವೈ ಕುಟುಂಬದ ಆಪ್ತರಾಗಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಸಹೋದರ ಮಾಲತೇಶ ಪಿಡಿಓ ಆಗಿದ್ದಾರೆ. |
ಉಮೇಶ್ ಅಕ್ರಮ ಆಸ್ತಿ ಎಷ್ಟು..? |
ಕಳೆದ ಎರಡು ವರ್ಷಗಳಲ್ಲಿ ಉಮೇಶ್ ಅವರ ಆದಾಯದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ . ಉಮೇಶ್ ಸದ್ಯ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯಿರುವ ಪ್ಲಾಟ್ನಲ್ಲಿ ವಾಸವಿದ್ದಾರೆ. ಸಹಕಾರ ನಗರದಲ್ಲಿ ಕೋಟ್ಯಾಂತರ ಮೌಲ್ಯದ ಮನೆ ನಿರ್ಮಾಣ ಮಾಡಿದ್ದಾರೆ. ಬಾಗಲಗುಂಟೆಯಲ್ಲಿ ಸೈಟ್ಗಳನ್ನು ಹೊಂದಿದ್ದಾರೆ. |
ಜೊತೆಗೆ ನೆಲಮಂಗಲದಲ್ಲಿ ಜಮೀನು ಇದೆ. ಬಿಡಿಎನಲ್ಲಿ ಅನೇಕ ಸೈಟ್ಗಳನ್ನು ಕೂಡ ಮಂಜೂರು ಮಾಡಿಸಿಕೊಂಡಿದ್ದಾರೆ. ಉಮೇಶ್ ಹೆಸರಲ್ಲಿ ಮತ್ತು ಅವರ ಕುಟುಂಬಸ್ಥರ ಹೆಸರಲ್ಲಿ ಆಸ್ತಿ ಹೊಂದಿದ್ದಾನೆ. |
ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ: ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧಾರ | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ: ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧಾರ |
ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ: ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧಾರ |
Posted By: Karnataka News BureauPosted date: January 25, 2019 In: ಕರ್ನಾಟಕ |
ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಅವರದೇ ಪಕ್ಷದ ಶಾಸಕ ಜೆ.ಎನ್.ಗಣೇಶ್ ಹಲ್ಲೆ ನಡೆಸಿರುವ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿ ನಾಯಕರು ಸದ್ಯ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದಂತಿದೆ. |
ಪ್ರಕರಣದಲ್ಲಿ ಶಾಸಕ ಗಣೇಶ್ ವಿರುದ್ಧ ಕೈಗೊಳ್ಳಲಿರುವ ಕ್ರಮ ಹಾಗೂ ಮುಂದಿನ ಬೆಳವಣಿಗೆ ಆಧರಿಸಿ ಕಾದು ನೋಡುವ ತಂತ್ರ ಅನುಸರಿಸಿ ರೂಪಿಸಲು ತೀರ್ಮಾನಿಸಿದೆ. ಹಾಗಾಗಿ ನಾಯಕರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತಿಮಿತಿಯೊಳಗೇ ಮಾತನಾಡುತ್ತಿದ್ದಾರೆ. |
ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ಪ್ರಯತ್ನ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಕಾಂಗ್ರೆಸ್ ಶಾಸರಕ ಪೈಕಿ ಕಂಪ್ಲಿ ಶಾಸಕ ಗಣೇಶ್ ಹೆಸರು ಸಹ ಕೇಳಿ ಬಂದಿತ್ತು. ಬಿಜೆಪಿಗೆ ಸೇರಲು ಬಯಸಿದ್ದ ಗಣೇಶ್, ಭೀಮಾನಾಯ್ಕ ಅವರ ಚಿಂತನೆ ಬಗ್ಗೆ ಆನಂದ್ ಸಿಂಗ್ ಅವರೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡಿ ಇಬ್ಬರು ಶಾಸಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮ... |
ಕಾಂಗ್ರೆಸ್ ವಿರುದ್ಧ ಟೀಕೆ: ಹಲ್ಲೆ ಘಟನೆ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ಧಾಳಿ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಬಗ್ಗೆ ಸಾಂತ್ವನ ತೋರಿದ್ದರು. ಆದರೆ ಬಹಳಷ್ಟು ನಾಯಕರು ಹಲ್ಲೆ ನಡೆಸಿದ ಆರೋಪ ಹೊತ್ತ ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕ... |
ಹಲ್ಲೆ ಘಟನೆ ನಂತರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಬಿಜೆಪಿಯು ಸದ್ಯ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಚಿಂತಿಸಿದೆ. ಗಣೇಶ್ ವಿರುದ್ಧ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಕ್ರಮ ಆಧರಿಸಿ ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದೆ. ಗಣೇಶ್‌ನ ನಡೆಯನ್ನೂ ಗಮನಿಸುತ್ತಿರುವ ಬಿಜೆಪಿ ನಾಯಕರು ಪರಿಸ್ಥಿತಿಗೆ ತಕ್ಕೆ ಮುಂದಿನ ಹಿಜ್ಜೆ ಹಿಡಲು ನಿರ್ಧರಿಸಿದ್ದಾರೆ. |
ಎನ್ ಎಂ ಸುರೇಶ್ ವಿರುದ್ಧ ವಂಚನೆ ದೂರು ದಾಖಲು | Cheating Case Against | Kannada Film Producer NM Suresh | Advaitha Audio Rights | ಚಲನಚಿತ್ರ ನಿರ್ಮಾಪಕ ಎನ್ ಎಂ ಸುರೇಶ್ | ವಂಚನೆ ಕೇಸ್ ದಾಖಲು - Kannada Filmibeat |
Read more about: ಆಡಿಯೋ ವಿಡಿಯೋ ಎನ್ ಎಂ ಸುರೇಶ್ ಪೊಲೀಸ್ audio video nm suresh police |
ಎನ್ ಎಂ ಸುರೇಶ್ ವಿರುದ್ಧ ವಂಚನೆ ದೂರು ದಾಖಲು |
| Published: Tuesday, May 15, 2012, 12:20 [IST] |
ಶನಿವಾರವಷ್ಟೇ (ಮೇ12) ಎನ್ ಎಂ ಸುರೇಶ್ ನಿರ್ಮಾಣದ 'ಅದ್ವೈತ' ಸಿನಿಮಾದ ಆಡಿಯೋ ಬಿಡುಗಡೆಯಾಯ್ತು. ಅಶ್ವಿನಿ ಮೀಡಿಯಾ ನೆಟ್‌ವರ್ಕ್ಸ್ ಕಂಪನಿ ಈ ಚಿತ್ರ ಆಡಿಯೋ ಹಕ್ಕುದಾರ. ಹೊಸ ವಿಷಯವೇನೆಂದರೆ ಇದೇ ಸಂಬಂಧಿತವಾಗಿ ಎನ್ ಎಮ್ ಸುರೇಶ್ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. |
'ಅದ್ವೈತ' ಸಿನಿಮಾದ ಆಡಿಯೋ ರೈಟ್ಸು ತನಗೆ ಕೊಡುವುದಾಗಿ ಹೇಳಿ, ಕೊನೆಗೆ ಬೇರೆಯವರಿಗೆ ಮಾರಲಾಗಿದೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋದ ಮಾಲೀಕ ನವೀನ್ ಯಜಮಾನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅವರ ದೂರಿನಲ್ಲಿ 'ಗಾಂಧಿಸ್ಮೈಲ್ಸ್' ನಿರ್ದೇಶಕ ರಾಘವೇಂದ್ರ ಕಾಮತ್ ಹೆಸರು ಕೂಡಾ ಇರುವುದು ವಿಶೇಷ. |
ರಾಘವೇಂದ್ರ ಕಾಮತ್ ಪ್ರಕಾರ ಎನ್ ಎಮ್ ಸುರೇಶ್ ಎರಡೂವರೆ ವರ್ಷಗಳ ಹಿಂದೆ ಅವರ ಬಳಿಯಿಂದ ಇಪ್ಪತ್ತೆರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ 'ಅದ್ವೈತ' ಚಿತ್ರದ ಆಡಿಯೋ- ವೀಡಿಯೋ ಹಕ್ಕುಗಳನ್ನ ಕಾಮತ್‌ಗೆ ಕೊಡುವುದಾಗಿ ಸುರೇಶ್ ಬರೆದುಕೊಟ್ಟಿದ್ದರಂತೆ. ಅದ್ನನೇ ನಂಬಿಕೊಂಡು ಕಾಮತ್ 'ಅದ್ವೈತ' ಚಿತ್ರದ ಆಡಿಯೋ ಹಕ್ಕನ್ನ ಸ್ವರ್ಣಾ ಸಂಸ್ಥೆಗೆ ಮಾರಿಕೊಂಡಿದ್ದರು. ಆದರೆ ಪ್ರಸ್ತುತ ಏನಾಗ... |
ಅಶ್ವಿನಿ ಮೀಡಿಯಾ ಬ್ಯಾನರ್‌ನಲ್ಲೇ ಮೊನ್ನೆ ಚಿತ್ರದ ಧ್ವನಿಸುರುಳಿ ಸಮಾರಂಭ ಕೂಡಾ ನಡೆದುಹೋಗಿದೆ. ಹಾಗಾಗಿ ರಾಘವೇಂದ್ರ ಕಾಮತ್ ಮತ್ತು ಎನ್ ಎಂ ಸುರೇಶ್ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋ ಮಾಲೀಕ ನವೀನ್ ದೂರು ದಾಖಲಿಸಿದ್ದಾರೆ. ಎನ್ ಎಂ ಸುರೇಶ್ ಮಾತು ತಪ್ಪಿದ್ದಾರೆ ಅನ್ನೋದು ಈಗ ಕಾಮತ್ ಕೊಡುತ್ತಿರುವ ಹೇಳಿಕೆ. ಆದರೆ ಸುರೇಶ್ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ. |
ಕಾಮತ್ ನನ್ನ ಸಹಿ, ಲೆಟರ್ ಹೆಡ್‌ನ್ನ ಫೋರ್ಜರಿ ಮಾಡಿ ದಾಖಲೆಗಳನ್ನ ಸೃಷ್ಟಿಸಿಕೊಂಡಿದ್ದಾರೆ. ಅದನ್ನೇ ಸ್ವರ್ಣಾ ಆಡಿಯೋಗೆ ಮಾರಿ ಅವರನ್ನೂ ಮೋಸ ಮಾಡಿದ್ದಾರೆ. ಇದಕ್ಕೆಲ್ಲ ಕಾಮತ್‌ರೇ ಕಾರಣ. ಸ್ವರ್ಣಾ ಆಡಿಯೋದವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಸುರೇಶ್. ಸತ್ಯ ಇನ್ನಷ್ಟೇ ಬಯಲಿಗೆ ಬರಬೇಕು. (ಒನ್‌ಇಂಡಿಯಾ ಕನ್ನಡ) |
MORE ಆಡಿಯೋ NEWS |
ದಾವಣಗೆರೆಯಲ್ಲಿ ಪೊಗರು ಹವಾ: ಅಭಿಮಾನದ ಅಲೆಯಲ್ಲಿ ತೇಲಿದ ಧ್ರುವ |
ಸಿದ್ದರಾಮಯ್ಯರನ್ನು ಭೇಟಿಯಾದ ನಟ ಧ್ರುವ ಸರ್ಜಾ, ಪ್ರಥಮ್ |
ಯಶ್ 'ಕೆಜಿಎಫ್' ಎದುರು ತೊಡೆ ತಟ್ಟಿ ನಿಂತ 'ಉಡುಂಬಾ' |
'ಪುಂಡಿಪಣವು' ಚಿತ್ರದ ಧ್ವನಿ ಸುರುಳಿ ಬಿಡುಗಡೆ |
ಉಡುಂಬಾನ 'ಏಪ್ರಿಲ್ ಫೂಲ್' ಹಾಡಿಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಫಿದಾ |
ತುಳು ಚಿತ್ರರಂಗದಲ್ಲಿ ಖಾತೆ ತೆರೆದ 'ಪಿ ಆರ್ ಕೆ' ಆಡಿಯೋ |
ಬಾಲಿವುಡ್ ಮಾರ್ಕೆಟ್ ನಲ್ಲಿ ಸದ್ದು ಮಾಡಿದ ಕನ್ನಡದ 'ಉಡುಂಬಾ' |
A cheating case was registered against Kannada film producer N M Suresh, according to police. The case was registered by Jnana Bharathi police on a complaint by a Swarna Audio company owner Naveen for cheating a film 'Advaitha' audio rights. |
ಮಾನವ ಸಹಿತ ಗಗನಯಾನಕ್ಕೆ ಗಗನಯಾತ್ರಿಗಳ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಪೂರ್ಣ | News13 |
News13 > ಸುದ್ದಿಗಳು > ರಾಷ್ಟ್ರೀಯ > ಮಾನವ ಸಹಿತ ಗಗನಯಾನಕ್ಕೆ ಗಗನಯಾತ್ರಿಗಳ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಪೂರ್ಣ |
Friday, September 6th, 2019 ರಾಷ್ಟ್ರೀಯ Admin |
ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಸಂಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಶುಕ್ರವಾರ ಹೇಳಿದೆ. |
ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಆಯ್ದ ಪೈಲಟ್‌ಗಳನ್ನು, ದೈಹಿಕ ವ್ಯಾಯಾಮ ಪರೀಕ್ಷೆಗಳು, ಲ್ಯಾಬ್ ಪರಿಶೀಲನೆಗಳು, ರೆಡಿಯೋಲಾಜಿಕಲ್ ಟೆಸ್ಟ್, ಕ್ಲಿನಿಕಲ್ ಟೆಸ್ಟ್ಗಳಿಗೆ ಒಳಪಡಿಸಲಾಗಿದೆ. ಮಾತ್ರವಲ್ಲದೇ, ಹಲವಾರು ಮಾನಸಿಕ ಪರೀಕ್ಷೆಗಳಿಗೂ ಒಳಪಟ್ಟಿದ್ದಾರೆ ಎಂದು ವಾಯುಸೇನೆ ಹೇಳಿದೆ. |
"ಮಿಷನ್ ಗಗನಯಾನಕ್ಕಾಗಿ ಐಎಎಫ್ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನಲ್ಲಿ ಭಾರತೀಯ ಗಗನಯಾತ್ರಿಗಳ ಆಯ್ಕೆಯ ಹಂತ -1 ಅನ್ನು ಪೂರ್ಣಗೊಳಿಸಲಾಗಿದೆ. ಆಯ್ದ ಟೆಸ್ಟ್ ಪೈಲಟ್‌ಗಳು ಮಾನಸಿಕ ಮತ್ತು ದೈಹಿಕ ಪರೀಕ್ಷೆಗಳಿಗೆ ಒಳಪಟ್ಟಿದ್ದಾರೆ. ರೆಡಿಯೋಲಾಜಿಕಲ್ ಟೆಸ್ಟ್, ಕ್ಲಿನಿಕಲ್ ಟೆಸ್ಟ್ಗಳಿಗೆ ಮತ್ತು ಮೌಲ್ಯಮಾಪನಗಳಿಗೆ ಒಳಗಾಗಿದ್ದಾರೆ" ಎಂದು ಭಾರತೀಯ ವಾಯುಸೇನೆ ಟ್ವಿಟ್ ಮಾಡಿದೆ. |
2022ರ ವೇಳೆ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಭಾರತ ಹಮ್ಮಿಕೊಳ್ಳುತ್ತಿದೆ. 2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಈ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದಾರೆ. ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಯೋಜನೆಯನ್ನು ನಡೆಸಲು ಇಸ್ರೋ ಸಜ್ಜಾಗಿದೆ. ಈ ಯೋಜನೆ ಇಸ್ರೋಗೆ ದೊಡ್ಡ ಸವಾಲಿನದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. |
ರೂ.10,000 ಕೋಟಿಗಳ ಮಾನವ ಸಹಿತ ಗಗನಯಾನದಲ್ಲಿ ಮೂವರು ಸಿಬ್ಬಂದಿಗಳು ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ. 6 ದಿನಗಳ ಕಾಲ ಅಲ್ಲಿ ತಂಗಲಿದ್ದಾರೆ. ಬಾಹ್ಯಾಕಾಶ ನೌಕೆಯನ್ನು 300-400 ಕಿ.ಮೀ ಕೆಳ ಭೂ ಕಕ್ಷೆಯಲ್ಲಿ ಇಡಲಾಗುತ್ತದೆ. ಗಗನಯಾನ ಕಾರ್ಯಕ್ರಮದ ಅಂಗವಾಗಿ ಎರಡು ಮಾನವರಹಿತ ವಿಮಾನಗಳು ಮತ್ತು ಒಂದು ಮಾನವಸಹಿತ ಹಾರಾಟವನ್ನು ನಡೆಸಲಿವೆ. |
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಂಟನೆ ಆರೋಪಿ | Vartha Bharati- ವಾರ್ತಾ ಭಾರತಿ |
ಬೆಂಗಳೂರು, ಡಿ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಎಂಟನೆ ಆರೋಪಿ ಎನ್.ಮೋಹನ್ ನಾಯಕ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. |
ಈ ಅರ್ಜಿ ನ್ಯಾಯಮೂರ್ತಿ ಕೆ.ಸ್.ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಾಗ, ಪ್ರಾಸಿಕ್ಯೂಷನ್ ಪರ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ನಮಿತಾ ಕಲ್ಲೇಶ್ ಮತ್ತು ವಿಚಾರಣಾ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಬಾಲನ್ ಇಬ್ಬರೂ ಹಾಜರಾದರು. |
ಇದಕ್ಕೆ ನ್ಯಾಯಪೀಠ ಇಬ್ಬರಲ್ಲಿ ಯಾರು ಹಾಜರಾಗುತ್ತೀರಿ ಎಂಬ ಬಗ್ಗೆ ಮೆಮೊ ಸಲ್ಲಿಸಿ ಎಂದು ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ನಿವಾಸಿಯಾದ ಎನ್.ಮೋಹನ್ ನಾಯಕ್‌ಗೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ. |
ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಅ.30ರಂದು ಸೇವಾ ನಿವೃತ್ತಿ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಉಪ್ಪಿನಂಗಡಿಯಲ್ಲಿ ೩೦ ವರ್ಷ ಸೇರಿದಂತೆ ಒಟ್ಟು ೩೮ ವರ್ಷಗಳ ಸುದೀರ್ಘ ಸೇವೆ |
ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ದಿವಾಕರ ಆಚಾರ್ಯ ಗೇರುಕಟ್ಟೆ ಅ. ೩೦ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. |
ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ವಿಜ್ಞಾನ-ಗಣಿತ ಶಿಕ್ಷಕರಾಗಿ ೧೮ ವರ್ಷ ಹಾಗೂ ೨೦೦೮ರಿಂದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿ ಒಟ್ಟು ೩೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. |
೩೮ ವರ್ಷಗಳ ಸುದೀರ್ಘ ಸೇವೆ: |
ದಿವಾಕರ ಆಚಾರ್ಯರವರು ೧೯೮೨ರಲ್ಲಿ ಉಡುಪಿಯ ಬೆಳ್ಳಂಪಳ್ಳಿ ಶ್ರೀ ವಿಶ್ವಕರ್ಮ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ೨ ವರ್ಷ ಸೇವೆ ಸಲ್ಲಿಸಿ, ಬಳಿಕ ೧೯೮೫ರ ಸೆಪ್ಟಂಬರ್ ೫ರಂದು ಬೆಳ್ತಂಗಡಿ ತಾಲ್ಲೂಕಿನ ಪುತ್ತಿಲದ ಸರ್ಕಾರಿ ಪ್ರೌಢ ಶಾಲೆಗೆ ಸರ್ಕಾರಿ ಸೇವೆಗೆ ನೇಮಕವಾದರು. ೫ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ೧೯೯೧ರಲ್ಲಿ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆ ಹೊಂದಿ ಆಗಮಿಸಿದವ... |
ಬೆಳ್ತಂಗಡಿ ತಾಲ್ಲೂಕು ಗೇರುಕಟ್ಟೆಯ ಸ್ವರ್ಣಶಿಲ್ಪಿ ಕೆ. ಮೋನಪ್ಪ ಆಚಾರ್ಯ ಮತ್ತು ವಾರಿಜ ದಂಪತಿಯ ತೃತೀಯ ಪುತ್ರನಾಗಿ ೧೯೬೧ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆ, ಬಿ.ಎಸ್ಸಿ., ಪದವಿಯನ್ನು ಉಜಿರೆ ಯಸ್.ಡಿ.ಯಂ. |
ಕಾಲೇಜಿನಲ್ಲಿ ಹಾಗೂ ಬಿ.ಇಡಿ. ತರಬೇತಿಯನ್ನು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಮೈಸೂರು ಹಿಂದಿ ಪ್ರಚಾರ ಪರಿಷತ್ತು ಬೆಂಗಳೂರು ಇವರು ನಡೆಸುವ "ಹಿಂದಿರತ್ನ" ಪರೀಕ್ಷೆಯಲ್ಲಿ ರಾಜ್ಯದಲ್ಲಿ ೪ನೇ ರ್‍ಯಾಂಕ್ ಗಳಿಸಿದ್ದಾರೆ. |
Subsets and Splits
No community queries yet
The top public SQL queries from the community will appear here once available.