text stringlengths 0 61.5k |
|---|
ಪೂರ್ಣವುಸಿರಿನಾಟ ಪೂರ್ಣ |
ಪೂರ್ಣಗೊಳ್ಳದಿದ್ದಪೂರ್ಣ |
ಪೂರ್ಣಗೀಯಲೆಲ್ಲ ಪೂರ್ಣ |
ಯತ್ಕೃತಮ್ ತು ಮಯಾ ದೇವ |
ಪರಿಪೂರ್ಣಮ್ ತದಸ್ತು ಮೇ |
'ಕೆಲಸ ಆದ ಕೂಡ್ಲೆ ಎದ್ದು ಬಿಡೋದನ್ನ ನಮ್ಮಪ್ಪ ಮತ್ತ ನಮ್ಮಣ್ಣ ಯಾವಾಗಲೂ ಪಾಲಸ್ತಾರ' ಅಂತ ನನ್ನಪ್ಪ ಎಷ್ಟೋ ಬಾರಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ 'ಕೆಲಸಾದ ಕೂಡ್ಲೆ ಜಾಗ ಬಿಟ್ಬಿಡ್ತೀನಿ' ಅಂತ ದೊಡ್ಡಪ್ಪನೇ ಹೇಳಿದ್ದಾರೆ ಮತ್ತು ಅದರಂತೆ ಮಾಡ್ತಾರೆ. 'ನಮ್ಮದೇನ ಕೆಲಸದ ಅಲ್ಲೆ. ನೀವು ಹೋಗಿ ಬರ್ರಿ' ಅಂತ ಹೇಳಿ ಮನೆಯಲ್ಲೇ ಉಳಿಯುತ್ತಿದ್ದ ತಾತನ ನೆನಪೂ ಇದೆ. |
ಇಂಟರ್ನೆಟ್ಟನ್ನೋ ಜಗತ್ತಿನ ಕಿಟಕಿ ಮೂಲಕ ನನ್ನ ಆಫೀಸಿನ ಕೆಲಸವೂ ಆಗ್ತದೆ ಮತ್ತು ಏನೆಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೂ ಆಗ್ತದೆ. ಮನಸ್ಸು ಪಾತರಗಿತ್ತಿಯಂತೆ ಹಾರಿಕೊಂಡೆ ಇರಬಹುದು. ಅಂತ್ಯ ಪಾರವಿಲ್ಲದ ಲೋಕದೊಳಗೆ ಕಳೆದು ಹೋಗುವದು ಬಹಳ ಸುಲಭ. ಒಂದು ಕೆಲಸ ಮಾಡಿ ಮುಗಿಸುವ ಮುನ್ನವೇ ಮನಸ್ಸು ಮುಂದಿನ ಹತ್ತು ಕೆಲಸಗಳ ಬಗ್ಗೆ ಯೋಚಿಸುತ್ತಿರುತ್ತದೆ. ಎಷ್ಟೋ ಸಾರಿ ಇಲ್ಲಿಂದ ಯಾವಾಗಲೋ ಅಲ್ಲಿ ಹಾ... |
ಭಗವಂತನಂತೂ ಆಗಲು ಸಾಧ್ಯವಿಲ್ಲ. ಆದರೆ ನನ್ನದೇ ಒಂದು 'virtual me' ಮಾಡಬಹುದೆ? ಮಾಡಿದರೆ ಹೇಗೆ ಮಾಡ ಬಹುದು? |
ಮೊದಲಿಗೆ 'real me' ಕೆಲಸವೇನು, ಅದರ ಉಪಕೆಲಸಗಳೇನು, ಅವುಗಳನ್ನು ಮಾಡುವ ಕ್ರಮ ಏನು ಎನ್ನುವದನ್ನ ನೋಡಿಕೊಳ್ಳಬೇಕು. ಆ ಕೆಲಸಕ್ಕೆ ವೇಳೆಯನ್ನೂ, ಬೇಕಾಗುವ ಸಲಕರಣೆಗಳನ್ನೂ ಹೊಂದಿಸಿಕೊಳ್ಳಬೇಕು. ಆ ವೇಳೆಗೆ ಕೆಲಸದ ಸಂಕಲ್ಪ ಮಾಡಬೇಕು. ಕೆಲಸವನ್ನು (ಅಥವಾ ಉಪಕೆಲಸಗಳನ್ನು ಕ್ರಮಬದ್ಧವಾಗಿ) 'virtual me' ಗೆ ವಹಿಸಿಕೊಡಬೇಕು. ಎಲ್ಲ ಉಪಕೆಲಸಗಳೂ ಮುಗಿಯುತ್ತ ಬಂದಂತೆ ಕೆಲಸವೂ ಮುಗಿಯುತ್ತಿರುತ್ತದೆ. '... |
'Operation successful but the patient died' ಅನ್ನುವಂತೆ ಆ ಕೆಲಸಕ್ಕೆ ಅಂದುಕೊಂಡ ಪರಿಣಾಮ ಸಿಗದಿದ್ದರೆ? ನಾನೆಂಬ 'real me' ಯ ಕೆಲಸವೇನು ಮತ್ತೆ? ಒಂದು ಪೂರ್ತಿ ಕೆಲಸವನ್ನು ಒಟ್ಟಿಗೆ ನಡೆಸಬೇಕೆ, ಪ್ರತಿಯೊಂದು ಘಟ್ಟದಲ್ಲೂ 'virtual me' ಯ ಕೆಲಸದ ಪರಿಣಾಮ ಗಮನಿಸಿ ಬೇಕಾದ ಬದಲಾವಣಗಳೊಡನೆ ಮುಂದಿನ 'virtual me' ಯನ್ನು ಶುರುಮಾಡಬೇಕೆ ಎನ್ನುವ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳಬೇ... |
'virtual me' ಎಂಬ ಕೂಲಿ ಆಳಿನ್ನೂ ಮತ್ತು 'real me' ಎಂಬ ಮಾಲೀಕನನ್ನೂ ಪ್ರತ್ಯೇಕಿಸುವದು ಹೇಗೆ? ಪ್ರತ್ಯೇಕಿಸಬೇಕೆ? ಆಳಿನಲ್ಲೊಬ್ಬ ಮಾಲೀಕ, ಮಾಲೀಕನಲ್ಲೊಬ್ಬ ಆಳು ಇರಲೇಬೇಕು. ಉಪಕೆಲಸಗಳ ಪ್ರತಿ ಹಂತವನ್ನೂ ಮೊದಲೇ ನಿರ್ಧರಿಸಿ ಆಳಿಗೆ ಕೊಡಬೇಕೆಂತಿಲ್ಲ. ಮಾಲೀಕನ ಮೂಲಭೂತ ತತ್ವಗಳ ಪ್ರಶ್ನೆ ಬಂದಾಗ ಮಾಲೀಕನದ್ದೇ ನಿರ್ಣಯ. ಉಳಿದಂತೆ 'Things seem more right when you are doing them than... |
ಕೊನೆಗೊಂದು ದಿವಸ ಕರೆ ಬಂದಾಗ ಯಾವ ಯಾವ 'virtual me' ಗಳು ಎಲ್ಲೆಲ್ಲಿ ಇದ್ದವೋ ಅಲ್ಲಲ್ಲೇ ಬಿಟ್ಟು ಹೊರಡಬೇಕಾಗುತ್ತದೆ. ಯಾಕೆಂದರೆ ಮಾಲೀಕನೂ ನಿಜವಾದ ಮಾಲೀಕನಲ್ಲವಲ್ಲ! ಆ ಕ್ಷಣಕ್ಕೆ 'virtual me' ಮತ್ತು 'real me' ಗಳು ಮಾಡ್ತಾ ಇದ್ದದ್ದು ಅಲ್ಲಿಗೇ ಪೂರ್ಣ. 'ಯತ್ಕೃತಂ ತು ಮಯಾ ದೇವ ಪರಿಪೂರ್ಣಮ್ ತದಸ್ತು ಮೇ'. ಇಲ್ಲಿ ಯಾವುದೂ ವ್ಯರ್ಥವಲ್ಲ, 'ನೇಹಾಭಿಕ್ರಮ ನಾಶೋಸ್ತಿ, ಪ್ರತ್ಯವಾಯೋ ನ ವಿದ... |
ಈ 'virtual' ವಿಚಾರ ಎಲ್ಲಿಗೆ ಕೊಂಡೊಯ್ಯುವುದೋ ನೋಡೋಣ ಅಂತ ಇದನ್ನೆಲ್ಲಾ ಬರೆಯುತ್ತ ಹೊರಟವನಿಗೆ ಕೊನೆಗೆ ಅನಿಸಿದ್ದು, ಇಷ್ಟೆಲ್ಲಾ ಕಷ್ಟ ಏಕೆ? ದಿವಸ ಸಂಧ್ಯಾ ವಂದನೆ ಮಾಡಿದರೆ ಆಯಿತು. ಆಚಮನ, ಸಂಕಲ್ಪ, ಮಾರ್ಜನ, ಭೂತೋಚ್ಛಾಟನ, ಧ್ಯಾನ, ಜಪ, ಸಮರ್ಪಣಗಳೆಲ್ಲವನ್ನ ಕ್ರಮವಾಗಿ ಮಾಡುವದನ್ನೇ ಅಭ್ಯಾಸ ಮಾಡ್ತಾ ಅದನ್ನೇ ಉಳಿದ ಕೆಲಸಗಳಿಗೂ ಅನ್ವಯಿಸಿದರೆ ಬೇಕಾದಷ್ಟು ಪ್ರೊಡಕ್ಟಿವ್ ಆಗುವದು ಅಂತ. ಸ್ಟೀವ... |
(* – 'Things seem more right …' is a line I picked up from one of the short stories by John Steinbeck. I think the story is 'To kill a white quail' ) |
(ಒಂದಾರು ತಿಂಗಳಿಂದ ಡ್ರಾಫ್ಟಾಗಿ ಉಳಿದಿತ್ತು. ಇವತ್ತು ಕಡೆಗೂ ಇದಕ್ಕೊಂದು ರೂಪ ಕೊಟ್ಟು ಪೋಸ್ಟ್ ಮಾಡುತ್ತಿರುವೆ!) |
This entry was posted in ಕವನ, ನೆನಪು, ನೋಡಿದ್ದು, ಸ್ವಗತ and tagged John Steinbeck, Virtual machine. Bookmark the permalink. |
← ಬೆರಗು ನೆನಪಿನಲಿ |
One thought on "ಕೆಲಸವಾದ ಬಳಿಕ" |
Indiresh Joshi ಹೇಳುತ್ತಾರೆ: ಏಪ್ರಿಲ್ 23, 2012 ರಲ್ಲಿ 5:56 ಫೂರ್ವಾಹ್ನ |
ಪದಗಗಳನ್ನು ನೋಡಿದಾಗ ತಿಳಿದುಕೊಂಡ ಅರ್ಥ ಗದ್ಯ ಓದುತ್ತಿದ್ದಂತೆ ಬದಲಾಗುತ್ತ ಹೋಯಿತು.ಕೊನೆಕೊನೆಗೆ ಅರ್ಥ ಮುದುಡಲು ಪ್ರಾರಂಭವಾಯ್ತು.ಕೊನೆ ಹಂತ ತಿಳಿಯಿತು ಅನಿಸುತ್ತಿದೆ-ಆದರದು virtuvallo?reallo?ಆ ಭಗವಂತನೇ ಬಲ್ಲ.ಕಳೆದ ಭಾನುವಾರ ಶೋಭಾ ಅವರನ್ನು ನೋಡಲು ಹೋದಾಗ ಬಂದದ್ದು ಇವೆ ಭಾವಗಳು.ಹಾಗಾಗಿ ಏನು ಮಾತಾಡಬೇಕೆಂದು ತಿಳಿಯದೆ ಎದ್ದು ಹೋಗಲು ಮನ ಬಾರದೆ ಮೂರು ತಾಸು ಒದ್ದಾಡಿದೆನು. |
ಹೊಸ ಪುಸ್ತಕ ಓದು: ನಮನಾಂಜಲಿ | Times of Karnataka |
ನಮನಾಂಜಲಿ |
ಲೇಖಕರು : ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ |
ಪ್ರಕಾಶಕರು : ರಾಜಗುರು ಪ್ರಕಾಶನ, ಗಂದಿಗವಾಡ-೨೦೨೧ |
ಮೊ: ೯೯೪೫೦೧೨೦೩೭ |
(ಪ್ರಸ್ತುತ ಕೃತಿಯು ಇನ್ನೂ ಬಿಡುಗಡೆ ಆಗಿಲ್ಲ. ಈ ಕೃತಿಗೆ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರೀತಿಯ ಒತ್ತಾಸೆಯ ಮೇರೆಗೆ ಮುನ್ನುಡಿ ರೂಪದ ನಾಲ್ಕು ಸದಾಶಯದ ನುಡಿಗಳನ್ನು ನಾನು ಬರೆದಿರುವೆ. ಅದನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿರುವೆ.) |
ನವ್ಯ ಕಾವ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರು ತಮ್ಮ ಒಂದು ಕಾವ್ಯ ಸಂಕಲನಕ್ಕೆ, ತಮ್ಮ ಪ್ರೀತಿಯ ಶಿಷ್ಯ ಡಾ. ಯು. ಆರ್. ಅನಂತಮೂರ್ತಿ ಅವರಿಂದ ಮುನ್ನುಡಿ ಬರೆಯಿಸಿದ್ದರು. ಹಿರಿಯರಾದವರು ಮುನ್ನುಡಿ ರೂಪದಲ್ಲಿ ಹಾರೈಸುವ ಪರಂಪರೆಯನ್ನು ಮುರಿದು, ತಮ್ಮ ಶಿಷ್ಯನ ಕೈಯಲ್ಲಿ ಆ ಕಾರ್ಯವನ್ನು ಅಡಿಗರು ಮಾಡಿಸಿದ್ದು ಇಂದು ಸಾಹಿತ್ಯ ಲೋಕದಲ್ಲಿ ಇತಿಹಾಸವಾಗಿ ಉಳಿದಿದೆ. ಇಂದು ಅಂತಹದೇ ಒಂದು ಪ್ರಸಂಗ ಎದು... |
ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ. ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್... |
ನಿರಾಕಾರ ಪರಬ್ರಹ್ಮ ಸ್ವರೂಪಿ ಪರಶಿವನ ಸ್ವರೂಪ, ಲಕ್ಷಣ, ವೈಭವ, ವೈವಿಧ್ಯ-ವೈಶಿಷ್ಟ್ಯಗಳನ್ನು ಪ್ರಸ್ತುತ ಕೃತಿಯಲ್ಲಿ ಮೃತ್ಯುಂಜಯ ಸ್ವಾಮಿಗಳು ಸಾದ್ಯಂತವಾಗಿ ತಲಸ್ಪರ್ಶಿಯಾಗಿ ಮೊದಲಬಾರಿಗೆ ವಿವೇಚನೆಗೆ ಒಳಪಡಿಸಿರುವುದರಿಂದ ವ್ಯಾಖ್ಯಾನ ಕ್ಷೇತ್ರಕ್ಕೆ ಇದೊಂದು ಅಪೂರ್ವ ಉತ್ತಮ ಕೊಡುಗೆಯಾಗಿದೆ. |
ಶ್ರೀ ಮೃತ್ಯುಂಜಯ ಸ್ವಾಮಿಗಳು ರಾಜಗುರು ಹಿರೇಮಠ ಗಂದಿಗವಾಡ ಅವರು ಮೂಲತಃ ಅಧ್ಯಾತ್ಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆದವರು. ವೃತ್ತಿಯಿಂದ ಶಿಕ್ಷಕರು. ವಿಜಯ ಕರ್ನಾಟಕ ಪತ್ರಿಕೆಯ 'ಸತ್ಸಂಗ' ಅಂಕಣ ಬರಹದಲ್ಲಿ ನೂರಾರು ಲೇಖನಗಳನ್ನು ಬರೆದು, ಅವುಗಳ ಸಂಕಲನ '೧೦೮ ಸತ್ಸಂಗ' ಎಂಬ ಕೃತಿಯನ್ನು ಪ್ರಕಟಿಸಿ ಈಗಾಗಲೇ ನಾಡವರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ 'ಸದ್ಯೋನ್ಮುಕ್ತೆ' ಎಂಬ ನಾಟಕವೊಂದನ್ನು ರ... |
ಈ ಚಿಂತನೆಗಳೆಲ್ಲ ಕೇವಲ ಭಾವುಕತೆಯಿಂದ ಮೂಡಿಬಂದುವಾಗಿರದೆ, ತರ್ಕ, ವೈಚಾರಿಕತೆ, ವಸ್ತುನಿಷ್ಠತೆಗಳಿಂದ ಕೂಡಿ ಚಿಂತನಪರವೆನಿಸಿವೆ. ವಿವರಣೆ, ವಿಶ್ಲೇಷಣೆಗಳು ಇಲ್ಲಿ ಬೆರೆತುಕೊಂಡಿವೆ. |
ಕೇವಲ ನಾಮಪಠಣ ಮಾಡಿ ಬಿಡಬಹುದಾಗಿದ್ದ ಈ ಅಷ್ಟೋತ್ತರ ಶತನಾಮ ಪಂಚಾಕ್ಷರಿಯ ಪ್ರತಿಯೊಂದು ಶಬ್ದಗಳನ್ನು ತುಂಬಾ ಆಸಕ್ತಿಯಿಂದ ಸಮಗ್ರ ಅಧ್ಯಯನ ಕೈಕೊಂಡು, ಅದರ ನೆಲೆ-ಬೆಲೆಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅವರ ಅಧ್ಯಯನದ ವ್ಯಾಪ್ತಿ, ವಿಷಯ ಸಂಗ್ರಹದಲ್ಲಿ ತೋರಿದ ಆಸಕ್ತಿ, ಭಾಷೆಯ ಬಳಕೆಯಲ್ಲಿ, ನಿರೂಪಣಾ ವಿಧಾನದಲ್ಲಿ ಅನುಸರಿಸಿದ ನೇರ-ಸರಳತೆ ಇವೆಲ್ಲ ಕೃತಿಯ ಸಮ... |
ಇಲ್ಲಿಯ ಕೆಲವು ಪದಗಳು ಸರಳವೆನಿಸಿದರೂ ವ್ಯಾಖ್ಯಾನಿಸುವುದು ತುಂಬ ಕಷ್ಟ. ಇನ್ನೂ ಕೆಲವು ಪದಗಳ ಅರ್ಥವನ್ನು ನಿಘಂಟುವಿನಲ್ಲಿಯೇ ಹುಡುಕಬೇಕು. ಹೀಗಾಗಿ ಇಂಥ ಕಠಿಣ ಪದಗಳಿಗೆ ಪೂಜ್ಯ ಶ್ರೀ ಮೃತ್ಯುಂಜಯ ಶ್ರೀಗಳು ತುಂಬ ಸರಳವಾದ ವ್ಯಾಖ್ಯಾನವನ್ನು ಮಾಡಿ, ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಉದಾ: 'ಅವಿನಾಶಾದ್ಯ ನಮಃ ಶಿವಾಯ' ಎಂಬ ಪದಕ್ಕೆ ಅವರು ನೀಡುವ ವ್ಯಾಖ್ಯಾನ ಹೀಗಿದೆ- "ಜಗತ್ತಿನ ಮೂಲಕಣವಾದ 'ದೇವ... |
ಮಾನವನ ಜೀವನದ ಪರಮಗುರಿ ಮೋಕ್ಷ ಸಾಧನೆ ಅಥವಾ ಕೈವಲ್ಯಪ್ರಾಪ್ತಿ. ಇದನ್ನು ಸಂಪಾದಿಸಲು ಬಹು ಹಿಂದಿನಿ0ದಲೂ ಮಾನವನು ಪ್ರಯತ್ನಿಸುತ್ತ, ಯೋಗ ಭಕ್ತಿ ಇತ್ಯಾದಿ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾನೆ. ಕೆಲವರಿಗೆ ಅದು ಸುಲಭಪ್ರಾಪ್ತವೆನಿಸಿದರೆ ಹಲವರಿಗೆ ಗಗನ ಕುಸುಮವಾಗಿದೆ. ಇದರಿಂದ ಮೋಕ್ಷವೆಂಬುದು ಎಲ್ಲರಿಗೂ ಸುಲಭಸಾಧ್ಯವಲ್ಲದುದು, ಅಗೋಚರವಾದುದು, ಅಳಿದ ಮೇಲೆ ಕೇವಲ ಕೆಲವರಿಗೆ ಮಾತ್ರ ದೊರಕುವಂತ... |
ಬೆಳಗಾವಿ ಮಹಾನಗರದಲ್ಲಿ ೨೦೧೬ ಮಾರ್ಚ ತಿಂಗಳಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಒಂದು ತಿಂಗಳ ಕಾಲ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಈ ಪ್ರಾರ್ಥನಾ ರೂಪದ ಈ ಶತನಾಮಗಳಿಗೆ ವ್ಯಾಖ್ಯಾನವನ್ನು ಬರೆಯಬೇಕೆಂದು ಸಂಕಲ್ಪಿಸಿದ್ದರು. ಪರಶಿವನ ಈ ನಾಮದ ಹಿಂದಿನ ಆಶಯಗಳು ಮಾನವನ ನೈತಿಕ ಬದುಕಿಗೆ ಅವು ಹೇಗೆ ದಾರಿದೀಪವಾಗಿವೆ ಎಂಬುದನ್ನು ತೋರಿಸುವ ಆಶಯ ಶ್ರೀ ಮೃತ... |
ಗುಣಗ್ರಾಹಕ ದೃಷ್ಟಿಯುಳ್ಳ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಪಾರ ತಾಳ್ಮೆಯನ್ನು ಬಯಸುವ ಈ ಕಾರ್ಯವನ್ನು ತುಂಬ ಶ್ರಮ-ಶ್ರದ್ಧೆಯಿಂದ ಪೂರ್ಣಗೊಳಿಸಿದ್ದಾರೆ. ವಚನ ಸಾಹಿತ್ಯದ ಸಮಸ್ತ ತಿರುಳನ್ನು ಕಡಲನ್ನು ಕೊಡದೊಳಗೆ ಹಿಡಿದಿಟ್ಟಂತಿರುವ ಈ ನುಡಿರಾಶಿ ಆಧುನಿಕ ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. |
ಮೂಲ ಪಠ್ಯವನ್ನು ರಚಿಸಿದ ಕುಮಾರ ನಿಜಗುಣರು, ಈ ಪಠ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಮತ್ತು ಈ ಪಠ್ಯಕ್ಕೆ ಸೂಕ್ತವಾದ ವ್ಯಾಖ್ಯಾನ ನೀಡಿ ಈ ಕೃತಿಯ ಮೂಲಕ ವಾಗ್ದೇವಿಯ ಭಂಡಾರದ ಮುದ್ರೆಯನ್ನು ಒಡೆದು ತೋರಿಸಿದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಈ ಮೂವರು ಮಹಾನುಭಾವರು ಸಮಸ್ತ ಕನ್ನಡಿಗರ ಗೌರವಾಭಿನಂದನೆಗಳಿಗೆ ಪಾತ್ರರಾಗಿದ್ದಾರೆ. |
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ - ನಟಿ ಗಾಯತ್ರಿ ಐಯ್ಯರ್ - Saaksha TV |
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್ |
ನಟಿ ಗಾಯತ್ರಿ ಐಯ್ಯರ್ ಜಗ್ಗು ದಾದಾ ನಾಯಕ ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ದರ್ಶನ್ ಮೇಲೆ ತಾನು ಹೊಂದಿದ್ದ ಸೀಕ್ರೆಟ್ ಕ್ರಶ್ ಬಗ್ಗೆ ಬಹಿರಂಗಪಡಿಸಿದ್ದಾರೆ. 2016 ರಲ್ಲಿ ಗಾಯತ್ರಿ ಕೊನೆಯದಾಗಿ ದರ್ಶನ್ ಅವರೊಂದಿಗೆ ಜಗ್ಗು ದಾದ ಎಂಬ ಕನ್ನಡ ಚಿತ್ರ ಮಾಡಿದರು. ಅರ್ಜುನ್ ರಾಂಪಾಲ್ ಅವರೊಂದಿಗೆ ಅಬ್ಬಾಸ್-ಮುಸ್ತಾನ್ ಅವರ ಒಟಿಟಿ ಪ್ರಾಜೆಕ್ಟ್, ಪೆಂಟ್ ಹೌಸ್ ನಲ್ಲಿ ಶೀಘ್ರದಲ್... |
ಕನ್ನಡ ಉದ್ಯಮವು ನನ್ನ ಹೃದಯಕ್ಕೆ ಹತ್ತಿರವಾಗಿದೆ ಏಕೆಂದರೆ ಅದು ನನಗೆ ತುಂಬಾ ಆತ್ಮೀಯ ಮತ್ತು ನನ್ನನ್ನು ಸ್ವಂತ ಮಗುವಿನಂತೆ ನೋಡಿಕೊಂಡಿದೆ. ನಾನು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೇನೆ ಮತ್ತು ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಚಲನಚಿತ್ರ ನಿರ್ಮಾಪಕರು ಮತ್ತು ಅಭಿಮಾನಿಗಳಿಂದ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದ್ದೇನೆ. |
ಟೈಸನ್ (2015), ನಮೋ ಭೂತಾತ್ಮ (2014) ಅಥವಾ ಜಗ್ಗು ದಾದಾ ಚಿತ್ರೀಕರಣದ ಸಮಯದಲ್ಲಿ ನಾನು ಅನುಭವಿಸಿದ ಅನುಭವಗಳನ್ನು ಎಂದಿಗೂ ಮರೆಯುವುದಿಲ್ಲ. ಏಕೆಂದರೆ ಅದು ಕಲಾವಿದನಾಗಿ ನನ್ನ ಜೀವನದ ಅತ್ಯುತ್ತಮ ಸಮಯಗಳು. ಆದ್ದರಿಂದ, ನಾನು ಖಂಡಿತವಾಗಿಯೂ ಕನ್ನಡ ಚಲನಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದಾರೆ. |
ಹಿಂದಿ ಚಿತ್ರ ಘೋಸ್ಟ್ (2019) ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಕನ್ನಡ ಇಂಡಸ್ಟ್ರಿಯಿಂದ ತಾನು ತೆಗೆದುಕೊಂಡ ಬ್ರೇಕ್ ಬಗ್ಗೆ ವಿವರಿಸುತ್ತಾ, ನಾನು ರೈಡ್ (2018) ನಲ್ಲಿ ಅಭಿನಯಿಸಲು ಪ್ರಾರಂಭಿಸಿದಾಗ ಹಿಂದಿ ಬಗ್ಗೆ ಗಮನಹರಿಸಲು ಪ್ರಾರಂಭಿಸಿದೆ. ನಾನು ಬೆಂಗಳೂರಿಗೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನಾನು ಕನ್ನಡದಿಂದ ಕೆಲವು ಆಫರ್ ಗಳನ್ನು ಪಡೆಯುತ್ತಿದ್ದರೂ, ದಿನಾಂಕಗಳನ್ನು ನಿ... |
ಸ್ಯಾಂಡಲ್ ವುಡ್ ನಲ್ಲಿ ಯಾರ ಜೊತೆ ಕೆಲಸ ಮಾಡಲು ಬಯಸುತ್ತೀರಾ? ಎಂದಾಗ 'ಹೌದು, ಕನ್ನಡ ಚಿತ್ರಗಳಲ್ಲಿ ನಟಿಸಲು ಇಷ್ಟ ಪಡುವ ಕೆಲವು ಹೆಸರುಗಳಿವೆ. ನಾನು ದರ್ಶನ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ಇಷ್ಟಪಡುತ್ತೇನೆ, ಏಕೆಂದರೆ ಅವರು ತುಂಬಾ ಚುರುಕಾದ, ಸೂಪರ್ ಸುಂದರ ಸ್ಟಾರ್ ಆಗಿದ್ದು, ನಾನು ಅವರ ಮೇಲೆ ಬಹಳ ಕ್ರಶ್ ಹೊಂದಿದ್ದೇನೆ. ನಾನು ಗಣೇಶ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ನಾನು ಯಾವ... |
ತನ್ನ ನೆಚ್ಚಿನ ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಗಾಯತ್ರಿ, 'ಇದು ಟೈಸನ್ ಆಗಿರಬೇಕು, ಏಕೆಂದರೆ ನಾವು ತಂಡದ ಇತರರೊಂದಿಗೆ ಸುಂದರ ಸಂಬಂಧ ಹೊಂದಿದ್ದೇವು … ಆ ರೀತಿಯ ಆತ್ಮೀಯತೆ ನಾನು ಬೇರೆ ಸೆಟ್ ಗಳಲ್ಲಿ ನಾನು ಅನುಭವಿಸಿಲ್ಲ. ಆದ್ದರಿಂದ, ಅದು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಐದು ದಿನಗಳ ಕಾಲ ನಮ್ಮ ಹಾಡುಗಳಿಗಾಗಿ ಮಲೇಷ್ಯಾದಲ್ಲಿ ಚಿತ್ರೀಕರಣದಲ್ಲಿ ಇದ್ದೆವು. |
ಅಲ್ಲಿ ನಾವು ಬಸ್‌ನಲ್ಲಿ ಪ್ರಯಾಣಿಸಬೇಕಾಗಿತ್ತು ಮತ್ತು ದೂರದ ಸ್ಥಳಗಳಿಗೆ ಹೋಗಬೇಕಾಗಿತ್ತು. ವಿನೋದ್ (ನಟ ವಿನೋದ್ ಪ್ರಭಾಕರ್) ನಾನು ಮತ್ತು ಉಳಿದ ತಂಡದ ಸದಸ್ಯರು ಒಬ್ಬರಿಗೊಬ್ಬರು ರ‍್ಯಾಗಿಂಗ್ ಮಾಡುತ್ತಿದ್ದೇವು. ಅಕ್ಷರಶಃ ಪಿಕ್ನಿಕ್ ಬಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳಂತೆ. ಟೈಸನ್‌ನಲ್ಲಿ, ನಾನು ನಟಿಸಿದ ಪಾತ್ರವನ್ನು ಪ್ರೀತಿಸುತ್ತೇನೆ. ಪಕ್ಕದ ಮನೆ ಬಬ್ಲಿ ಹುಡುಗಿ, ಆದರೆ ಸೊಕ್ಕಿನ ಸ್ವಭಾವದ ... |
ಸದ್ಯಕ್ಕೆ ನಾನು ಒಂದೆರಡು ಸೌತ್ ಪ್ರಾಜೆಕ್ಟ್ ಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಹಿಂದಿಯಲ್ಲಿ ಎರಡು ವೆಬ್ ಸರಣಿಗಳಿವೆ. ಆದರೆ ಈಗಿನವರೆಗೆ ಯೋಜನೆಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಏಕೆಂದರೆ ಯಾವುದಕ್ಕೂ ಸಹಿ ಮತ್ತು ಲಾಕ್ ಆಗಿಲ್ಲ ಎಂದು ಅವರು ಹೇಳಿದರು. |
ಶೌಚಕ್ಕೆ ಹೋದ ಯುವಕನ ಕೈ ಸಿಕ್ಕಿ ಹಾಕಿಕೊಂಡಿದ್ದೆಲ್ಲಿ ಗೊತ್ತಾ…? | Kannada Dunia | Kannada News | Karnataka News | India News |
HomeLive NewsIndiaಶೌಚಕ್ಕೆ ಹೋದ ಯುವಕನ ಕೈ ಸಿಕ್ಕಿ ಹಾಕಿಕೊಂಡಿದ್ದೆಲ್ಲಿ… |
17-07-2018 11:41AM IST / No Comments / Posted In: Latest News, India |
ಮುಂಬೈ: ಶೌಚಾಲಯಕ್ಕೆ ಹೋದ ಯುವಕ ಎಷ್ಟು ಹೊತ್ತಾದರೂ ಹೊರ ಬರಲೇ ಇಲ್ಲ….ಕಡೆಗೆ ಯುವಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಬರಬೇಕಾಯಿತು. |
ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಗಿಸಿದ್ದ 19 ವರ್ಷದ ಯುವಕ ಫೋನ್ ತೆಗೆದುಕೊಂಡು ಶೌಚಾಲಯಕ್ಕೆ ಹೋಗಿದ್ದಾನೆ. ಕೈ ಜಾರಿದ ಮೊಬೈಲ್ ಕಮೋಡ್ ಒಳಕ್ಕೆ ಬಿದ್ದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕ, ಕಮೋಡ್‌ನ ಗುಂಡಿಯೊಳಕ್ಕೆ ಕೈ ಹಾಕಿ ಮೊಬೈಲ್ ತೆಗೆಯಲು ಪ್ರಯತ್ನಿಸಿದ್ದಾನೆ. ಕೈ ಸಿಕ್ಕಿ ಹಾಕಿಕೊಂಡಿದೆ. ಕೈ ವಾಪಾಸ್ ಬಾರದಾದಗ ಸಹಾಯಕ್ಕಾಗಿ ಮನೆಯವರನ್ನು ಕೂಗಿದ್ದಾನೆ. |
ಉತ್ತರ ಪ್ರದೇಶ ಮೂಲದ ಯುವಕ ರೋಹಿತ್ ರಾಜ್ ಭರ್, ಮುಂಬೈನಲ್ಲಿನ ತನ್ನ ಅಂಕಲ್ ಲಾಲ್‌ಮಣಿ ತ್ರಿಮುರತ್ ವರ್ಮ ಮನೆಗೆ ಬಂದಿದ್ದ. ವಿನೋಬ ಭಾವೆ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ವರ್ಮ ಕುಟುಂಬ ರೋಹಿತ್‌ನ ಕೂಗು ಕೇಳಿ, ಶೌಚಾಲಯಕ್ಕೆ ದೌಡಾಯಿಸಿದ್ದಾರೆ. ಹುಡುಗನ ಅವಸ್ಥೆ ಕಂಡು ಕಕ್ಕಾಬಿಕ್ಕಿಯಾದ ಕುಟುಂಬ ಸದಸ್ಯರು ಬಾಲಕನ ಕೈಯನ್ನು ಹೊರತೆಗೆಯುವಲ್ಲಿ ಸಫಲರಾಗಿಲ್ಲ. ನೆರೆಯವರೂ ರಕ್... |
ವಿಚಾರ ತಿಳಿದು ಹುಡುಗನ ರಕ್ಷಣೆಗೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಒಳ ಹೊಕ್ಕುವಷ್ಟರಲ್ಲಿ ಕಮೋಡ್ ಒಡೆದು, ಹುಡುಗನ ಕೈಯನ್ನು ಹೊರತೆಗೆಯಲಾಗಿದೆ. ಅಗ್ನಿಶಾಮಕ ವಿಭಾಗದ ಮುಖ್ಯ ಪೇದೆ ರವೀಂದ್ರನಾಥ್ ಸೂರ್ಯವಂಶಿ ಘಟನೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. |
ಮುಂಗೈ ನೋವು ಎನ್ನುತ್ತಿದ್ದ ಹುಡುಗನ್ನು ರಾಜ್ ವಾಡಿ ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ತೆಗೆಸಿ, ತಪಾಸಣೆ ಮಾಡಲಾಗಿದೆ. ಎಲುಬಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂಬುದು ಖಚಿತಗೊಂಡ ಬಳಿಕ ಹುಡುಗನನ್ನು ಆಸ್ಪತ್ರೆಯಿಂದ ಕಳುಹಿಸಿದ್ದಾರೆ. ಈ ಜಂಜಾಟದಲ್ಲಿ 14 ಸಾವಿರ ರೂ. ಮೊಬೈಲ್ ಫೋನ್ ಮಾತ್ರ ಸಿಕ್ಕಿಲ್ಲ. |
ಮೂಡುಬಿದಿರೆ: ಆಳ್ವಾಸ್‌ನಲ್ಲಿ ಗಣರಾಜ್ಯೋತ್ಸವದ ಸಂಭ್ರಮ – Kundapra.com ಕುಂದಾಪ್ರ ಡಾಟ್ ಕಾಂ |
ಮೂಡುಬಿದಿರೆ: ಆಳ್ವಾಸ್‌ನಲ್ಲಿ ಗಣರಾಜ್ಯೋತ್ಸವದ ಸಂಭ್ರಮ |
26/01/2020 26/01/2020 ನ್ಯೂಸ್ ಬ್ಯೂರೋ |
ಮೂಡುಬಿದಿರೆ, ಜ.26: ದೇಶದಲ್ಲಿ ನೂರ ಮೂವತ್ತು ಕೋಟಿ ಜನಸಂಖ್ಯೆ ಇದ್ದರೂ ಅಬ್ದುಲ್ ಕಲಾಂ ಕಂಡ 2020ಯ ಕನಸನ್ನು ಪೂರ್ಣವಾಗಿ ಸಾಕಾರಗೊಳಿಸಲು ವಿಫಲರಾಗಿದ್ದೇವೆ. ಸಾಧಿಸಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಭಾರತದಲ್ಲಿ ಪ್ರತಿದಿನವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ 40ಕೋಟಿ ಜನರು ತಿನ್ನಲು ಅನ್ನ ಸಿಗದೆ ನರಳುತ್ತಿದ್ದಾರೆ. ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾ... |
ಪುತ್ತಿಗೆಯ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 71ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 'ಗಣರಾಜ್ಯೋತ್ಸವ ಆಚರಿಸುವುದು ನಮ್ಮ ಕರ್ತವ್ಯಗಳನ್ನು ತಿಳಿಯಲು. ದೊಡ್ಡ ಮಟ್ಟಿನ ದೇಶ ಸೇವೆ ಸಾಧ್ಯವಾಗದಿದ್ದರೂ ನಮ್ಮ ಊರಿನಲ್ಲಿ ಪರಿಸರಕ್ಕಾಗಿ ಅಥವಾ ಜನರಿಗಾಗಿ ಮಾಡುವ ಸೇವೆಗಳು ದೇಶಕ್ಕಾಗಿ ಮಾಡುವ ಕರ್ತವ್ಯಗಳು. ... |
ಅತಿಥಿಗಳನ್ನು ಕೆಡೆಟ್ ಕ್ಯಾಪ್ಟನ್ ಚಂದನ ಎಸ್, ಪಿಟಿ ಆಫೀಸರ್ ಗಳಾದ ಕೀರ್ತನ ಶೆಟ್ಟಿ, ಶರಣ್ಯ ಎಂ.ಎನ್, ಸೇಜಲ್ ಅವರು ವೇದಿಕೆಗೆ ಕರೆತಂದರು. ಪರೇಡ್ ಕಮಾಂಡರ್ ಸೀನಿಯರ್ ಅಂಡರ್ ಆಫೀಸರ್ ಮುತ್ತಮ್ಮ ವರದಿ ನೀಡಿದರು. ಗಾರ್ಡ್ ಕಮಾಂಡರ್ ಜ್ಯೂನಿಯರ್ ಅಂಡರ್ ಆಫೀಸರ್ ಮನೋಜ್ ನೇತೃತ್ವದಲ್ಲಿ ಆಕ?ಕ ಪಥ ಸಂಚಲನ ನಡೆಯಿತು. ವಂದೇ ಮಾತರಂ ಗೀತೆಯ ಬಳಿಕ ಧ್ವಜಾರೋಹಣ ಮಾಡಲಾಯಿತು. ರಾ?ಗೀತೆ ಹಾಡುವುದರ ಮೂಲಕ ದೇ... |
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಎ.P. ಶರ್ಮ ವಹಿಸಿದ್ದರು. ವಿಶೇ? ಆಹ್ವಾನಿತರಾದ ಕರ್ನಲ್ ಮನೋಜ್ ವಿ ಯು, ಗ್ರೂಪ್ ಕ್ಯಾಪ್ಟನ್ ಆರ್ ಶ್ರೀನಿವಾಸನ್, ಕಮಾಂಡರ್ ವಿಫುಲ್ ಗುಪ್ತ, ಆಳ್ವಾಸ್ ಶಿಕ್ಷಣ ಪ್ರತಿ?ನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ| ವಿನಯ್ ಆಳ್ವ ಉಪಸ್ಥಿತರಿದ್ದರು. |
ಪಥ ಸಂಚಲನದಲ್ಲಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗಿನ ವಿವಿಧ ಕಾಲೇಜುಗಳ ಭೂಸೇನೆ, ನೌಕಾದಳ ಮತ್ತು ವಾಯುದಳದ 2400 ಎನ್‌ಸಿಸಿ ಕೆಡೆಟ್‌ಗಳು, ಎನ್‌ಸಿಸಿ ಬೆಟಾಲಿಯನ್‌ಗಳ ಕ್ಯಾಪ್ಟನ್‌ಗಳು, ಜತೆಗೆ 400 ರೋವರ್- ರೇಂಜರ್ ಹಾಗೂ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು, 1300 ಎನ್ ಎಸ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. |
ಸಂಭ್ರಮಕ್ಕೆ ಸಾಕ್ಷಿಯಾದ ನಾಗರಿಕರು |
ಆಳ್ವಾಸ್‌ನಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 25000 ಜನ; ಗಣ್ಯರು, ವಿಶೇಷ ಆಹ್ವಾನಿತರು, ಸಂಸ್ಥೆಯ ಪಾಲಕರು ಹಾಗೂ ಮೂಡುಬಿದಿರೆಯ ಸಾರ್ವಜನಿಕರು ಸೇರಿ 5000 ಹೀಗೆ ಒಟ್ಟು 30000ಜನ ಆಳ್ವಾಸ್ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. |
ತ್ರಿವರ್ಣದ ಮೆರುಗು |
'ಕೋಟಿಕಂಠೊ ಸೆ' ಏಕತಾ ಹಾಡಿಗೆ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹ ದನಿಗೂಡಿಸಿ, ತ್ರಿವರ್ಣಧ್ವಜವನ್ನು ಹಾಡಿನ ತಾಳಕ್ಕೆ ಲಯಬದ್ಧವಾಗಿ ಬೀಸಿ ಸಂಭ್ರಮಿಸಿದರು. ನೆರೆದವರೆಲ್ಲರ ಕೈಯಲ್ಲಿದ್ದ ರಾ?ಧ್ವಜ, ತ್ರಿವರ್ಣ ಬಣ್ಣದ ಟೀ- ಶರ್ಟ್ ಧರಿಸಿದ್ದ ವಿದ್ಯಾರ್ಥಿಗಳು ಸಭೆಯ ಮಧ್ಯದಲ್ಲಿ ಮೂಡಿಸಿದ್ದ 'ಇಂಡಿಯಾ', ತ್ರಿವರ್ಣದ ಕೊಡೆಗಳು, ಬಾನಂಗಳದಿ ಹಾರಿಬಿಟ್ಟ ತ್ರಿವರ್ಣದ ಬೆಲೂನ್‌ಗಳು…….ಹೀ... |
ಫೈನಲ್ ಪ್ರವೇಶದ ಕನಸಿನಲ್ಲಿ ಬುಲ್ಸ್ | Udayavani – ಉದಯವಾಣಿ |
Sunday, 23 Jan 2022 | UPDATED: 12:17 PM IST |
ಇಂದು ಪ್ರೊ ಕಬಡ್ಡಿ: ಸೆಮಿಫೈನಲ್ ಸಮರ |
Team Udayavani, Oct 16, 2019, 5:23 AM IST |
ಅಹ್ಮದಾಬಾದ್: ಪ್ರೊ ಕಬಡ್ಡಿ 7ನೇ ಆವೃತ್ತಿ ಸೆಮಿಫೈನಲ್ ಕಾಳಗ ಬುಧವಾರ ಜರಗಲಿದೆ. ಅಹ್ಮದಾಬಾದ್‌ನ ಟ್ರಾನ್ಸ್ ಸ್ಟೇಡಿಯಾದಲ್ಲಿನ ಪಂದ್ಯ ಭಾರೀ ಕುತೂಹಲ |
ಕೆರಳಿಸಿದೆ. |
ಸೆಮಿಫೈನಲ್ ಒಂದರಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯ ಅಗ್ರಸ್ಥಾನಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಎರಡರಲ್ಲಿ ಯು ಮುಂಬಾ ತಂಡವು ಬೆಂಗಾಲ್ ವಾರಿಯರ್ ವಿರುದ್ಧ ಸೆಣಸಲಿದೆ. ಸೋಮವಾರ ನಡೆದಿದ್ದ ಮೊದಲ ಎಲಿಮಿನೇಟರ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವು ಯುಪಿ ಯೋಧಾವನ್ನು ಮಣಿಸಿದ್ದರೆ, ಎರಡನೇ ಎಲಿಮಿನೇಟರ್‌ನಲ್ಲಿ ಯು ಮುಂಬಾ ತಂಡವು ಹರ... |
ಗೆಲುವಿಗಾಗಿ ಹಾತೊರೆಯುತ್ತಿರುವ ಅಗ್ರ ನಾಲ್ಕು ತಂಡಗಳು ಇದೀಗ ಅ.19ರಂದು ನಡೆಯಲಿರುವ ಫೈನಲ್‌ಗೆ ಪ್ರವೇಶಿಸುವತ್ತ ಚಿತ್ತ ನೆಟ್ಟಿವೆ. ಆದರೆ ಬುಲ್ಸ್ ತಂಡವನ್ನು ಎದುರಿಸುತ್ತಿರುವ ಡೆಲ್ಲಿ ಹಾಗೂ ಯು ಮುಂಬಾ ತಂಡಕ್ಕೆ ಎದುರಾಗುತ್ತಿರುವ ಬೆಂಗಾಲ್ ತಂಡವನ್ನು ಅಷ್ಟು ಸುಲಭದಲ್ಲಿ ಮಣಿಸುವುದು ಅಸಾಧ್ಯ, ಇದು ಕಬಡ್ಡಿ ಪಂಡಿತರ ಲೆಕ್ಕಾಚಾರ. |
ಪವನ್ ಬಲಿಷ್ಠ ಆಟಗಾರ |
ಪವನ್ ಸೆಹ್ರಾವತ್ ಬಲಿಷ್ಠ ಆಟಗಾರರಾಗಿ ಮೂಡಿ ಬಂದಿದ್ದಾರೆ. ಎದುರಾಳಿ ತಂಡಕ್ಕೆ ಬಿಡಿಸಲಾರದ ಒಗಟಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ "ವನ್ ಮ್ಯಾನ್ ಆರ್ಮಿ'. ರೈಡಿಂಗ್‌ನಲ್ಲಿ ಮಿಂಚಿನಂತೆ ಅಂಕ ಕಲೆ ಹಾಕಬಲ್ಲ ವೇಗದೂತ. ಅಂತಹ ಆಟಗಾರನನ್ನು ನಿಯಂತ್ರಿಸುವುದು ಸುಲಭವಲ್ಲ. ಇದನ್ನು ಈಗಾಗಲೇ ಎದುರಾಳಿ ತಂಡವು ಸರಿಯಾಗಿ ಅರಿತುಕೊಂಡಂತಿದೆ. ಪಂದ್ಯದಿಂದ ಪಂದ್ಯಕ್ಕೆ ಪವನ್ ರೈಡಿಂಗ್ ಗುಣಮಟ್ಟ ದ್ವ... |
ರಕ್ಷಣಾ ವಿಭಾಗದಲ್ಲಿ ಬುಲ್‌ಗೆ ಸೌರಭ್, ಅಮಿತ್ ಹಾಗೂ ಮಹೇಂದರ್ ಸಾಥ್ ನೀಡಿದ್ದೇ ಆದರೆ ಬೆಂಗಳೂರು ಫೈನಲ್‌ಗೆ ಲಗ್ಗೆ ಇಡುವುದರಲ್ಲಿ ಯಾವುದೇ ಅನುಮಾನ ಬೇಡ. |
ಡೆಲ್ಲಿ ಪ್ರಬಲ ಸ್ಪರ್ಧಿ |
ಡೆಲ್ಲಿ ತಂಡವು ಸಂಘಟಿತ ಆಟವಾಡುತ್ತಿದೆ. ಈ ಲೆಕ್ಕದಲ್ಲಿ ನೋಡುವುದಾದರೆ ಬೆಂಗಳೂರಿಗಿಂತ ಡೆಲ್ಲಿಗೆ ಗೆಲುವಿನ ಅವಕಾಶ ಹೆಚ್ಚಿದೆ. ನವೀನ್ ಕುಮಾರ್ ರೈಡಿಂಗ್‌ನಲ್ಲಿ ಡೆಲ್ಲಿ ತಂಡದ ಬೆನ್ನೆಲುಬು, ಅವರನ್ನು ಕಟ್ಟಿಹಾಕುವುದು ಸುಲಭವಲ್ಲ. ಚಂದ್ರನ್ ರಂಜಿತ್, ವಿಜಯ್, ಮೆರಾಜ್ ಶೇಖ್ ಅಪ್ರತಿಮ ಫಾರ್ಮ್ನಲ್ಲಿದ್ದು ಡೆಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿಸಿದ್ದಾರೆ. |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರಿಟ್ರಿಯ - ವಿಕಿಸೋರ್ಸ್ |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರಿಟ್ರಿಯ |
ಎರಿಟ್ರಿಯ: 1952ರಿಂದ ಇಥಿಯೋಪಿಯದ ಚಕ್ರವರ್ತಿಯ ಅಧೀನದಲ್ಲಿರುವ ಒಂದು ಸ್ವಯಮಾಡಳಿತ ಪ್ರಾಂತ್ಯ. ಹಿಂದೆ ಇಟಲಿಯ ವಸಾಹತು ಆಗಿತ್ತು. 1993ರ ಮೇ 24ರಂದು ಸ್ವತಂತ್ರ್ಯ ರಾಷ್ಟ್ರವಾಯಿತು. ಆಗ್ನೇಯ ಆಫ್ರಿಕದಲ್ಲಿ ಕೆಂಪು ಸಮುದ್ರದ ದಡದ ಮೇಲಿದೆ. ವಾಯವ್ಯದಲ್ಲಿ ಸುಡಾನ್ ಗಣರಾಜ್ಯವೂ ಆಗ್ನೇಯದಲ್ಲಿ ಹಿಂದೆ ಫ್ರೆಂಚ್ ಸೋಮಾಲಿ ಲ್ಯಾಂಡ್ ಆಗಿದ್ದ ಪ್ರದೇಶವೂ ದಕ್ಷಿಣದಲ್ಲಿ ಇಥಿಯೋಪಿಯವೂ ಇವೆ, ಉತ್ತರ ಅಕ್ಷಾಂ... |
ಎರಿಟ್ರಿಯದ ಉತ್ತರ ಭಾಗ ಸುಡಾನಿನ ಮೈದಾನದಿಂದ ಕೆಂಪು ಸಮುದ್ರದ ಕರಾವಳಿಯವರೆಗೆ ಇಥಿಯೋಪಿಯ ಪ್ರಸ್ಥಭೂಮಿಯನ್ನು ಹಾಯ್ದು ಹಬ್ಬಿದೆ. ಎರಿಟ್ರಿಯದ ಸಮುದ್ರ ತೀರದ ಉದ್ದ 1079 ಕಿಮೀ. ತೀರದ ಬಂiÀÄಲು ಪ್ರದೇಶ ಸು. 35-80 ಕಿಮೀ ಅಗಲ. ಇಲ್ಲಿ ಸೆಕೆ ಹೆಚ್ಚು, ಆದರ್ರ್‌ತೆಯೂ ಹೆಚ್ಚು; ಮಳೆ ಅನಿಶ್ಚಿತ. ಈ ಬಂiÀÄಲಿನಿಂದ ಪಶ್ಚಿಮದ ಪರ್ವತಗಳ ಕಡೆಗೆ ಭೂಮಿ ಏರುತ್ತ ಹೋಗುತ್ತದೆ. ಈ ಪರ್ವತಗಳಲ್ಲಿ ಸೋನ (ಸು. 3... |
ಹೊಗೆಸೊಪ್ಪು, ಹಣ್ಣು ತರಕಾರಿ - ಇವು ಮುಖ್ಯ ಬೆಳೆಗಳು, ಮಳೆ ಕಡಿಮೆಯಿರುವ ತಗ್ಗಿನ ಪ್ರದೇಶಗಳಲ್ಲಿ ಮರಗೋಂದು, ಎಣ್ಣೆ ಬೀಜಗಳು, ಖರ್ಜೂರ-ಇವು ಮುಖ್ಯ ಉತ್ಪನ್ನಗಳು, ಪಶುಪಾಲನೆಯೂ ನಡೆಯುತ್ತದೆ. |
ಕಣಿವೆಗಳಲ್ಲಿ ನೀರಾವರಿಯಿಂದ ಹತ್ತಿ ಬೆಳೆಸುತ್ತಾರೆ; ಮಸಾವದ ಸುತ್ತಮುತ್ತಲೂ ಇದರ ಬಳಿ ಇರುವ ಡಾಹ್ಲಾಕ್ ದ್ವೀಪ ಸ್ತೋಮದಲ್ಲೂ ಮೀನು ಹಿಡಿಯುವುದು ಜನರ ಮುಖ್ಯ ಉದ್ಯೋಗ. ಉಗಾರೋ ಮತ್ತು ಮಸಾವಗಳ ಹತ್ತಿರ ಸ್ವಲ್ಪ ಚಿನ್ನ ದೊರಕಿದೆ. ಕೈಗಾರಿಕೆ ಅತ್ಯಲ್ಪ. ಹತ್ತಿ ಮತ್ತು ಸಿಮೆಂಟ್ ಕಾರ್ಖಾನೆಗಳು ಕೆಲವಿವೆ. ಉಪ್ಪನ್ನೂ ತಯಾರಿಸುತ್ತಾರೆ. ಎರಿಟ್ರಿಯದ ಪ್ರಸ್ಥಭೂಮಿ ಪ್ರದೇಶದಲ್ಲಿ ಕಾಪ್ಟ್ ಕ್ರೈಸ್ತ ಪಂಗಡ... |
"https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಎರಿಟ್ರಿಯ&oldid=19957" ಇಂದ ಪಡೆಯಲ್ಪಟ್ಟಿದೆ |
ಆಲಾಪ: August 2009 |
ಮೂರ್ತಿ ಚಿಕ್ಕದೆ...! |
ಸಂಗೀತದಿಂದ ಗಂಗೂಬಾಯಿ ಹಾನಗಲ್ ದೊಡ್ಡವರಾದರು. ಗಂಗೂಬಾಯಿ ಅವರಿಂದ ಸಂಗೀತದ ಘನತೆ ಹೆಚ್ಚಾಯಿತು. ಗಂಡಸರು ಮತ್ತು ಕೆಳದರ್ಜೆಯ ಹೆಣ್ಣುಮಕ್ಕಳಿಗೆ ಸಂಗೀತ ಸೀಮಿತ ಎನ್ನುವ ಚೌಕಟ್ಟು ಮುರಿದರು. ಬಡತನದ ನಡುವೆಯೂ ಸಂಗೀತದ ಎವರೆಸ್ಟ್ ಏರಿದರು. ಗಂಗೆಯ ಹರಿವಿನುದ್ದಕ್ಕೂ ನೂರೆಂಟು ಕಥೆಗಳಿವೆಯಲ್ಲ, ಗಂಗೂಬಾಯಿ ಅವರ ಬದುಕು-ಸಾಧನೆಯ ಹಾದಿಯಲ್ಲೂ ಅಂಥವೇ ನೂರೆಂಟು ಕಥೆಗಳು. ಅಗಲಿದ ಸ್ವರಸಾಮ್ರಾಜ್ಞಿಗೆ ಅಕ್... |
ಮೊನ್ನೆ, ಒಂದ್ ನಾಲ್ಕೈದ ಸಾಲಿ ಹುಡುಗೋರು ನಮ್ ಮನೀ ಗೇಟಿನ ಹೊರಗ ನಿಂತು, ಗ್ವಾಡಿಮ್ಯಾಲಿನ ಬೋರ್ಡ್ ಓದ್ಕೊಂತ್ ನಿಂತಿದ್ವು. ಅವ್ರು ಒಳಗ ಬರ್‍ಲಿಕ್ಕೆ ಯಾಕೋ ಹಿಂದ ಮುಂದ ಮಾಡ್ಲಿಕ್ಹತ್ತಿದ್ದ ನೋಡಿ, 'ಯಾಕ್ರೋ ಹುಡುಗುರ್‍ಯಾ ಒಳಗ ಬರ್‍ರಿ ಏನ್ ಬೇಕಾಗಿತ್ತು ಅಂದೆ. ಅದಕ್ಕ 'ಗಂಗೂಬಾಯಿಯವರು ಬೇಕಾಗಿತ್ರಿ' ಅಂದ್ರು. ನಾನರೋ ಗಂಗೂಬಾಯಿ. ಏನಾಗ್ಬೇಕಿತ್ತು ಹೇಳ್ರಿ ಅಂದೆ'. 'ಐ ನೀವ ಏನ್ರಿ..! ಮೂ... |
ಧಾರವಾಡದ ಕರ್ನಾಟಕ ಕಾಲೇಜಿನ ಅಮೃತಮಹೋತ್ಸವದ ಸಂದರ್ಭದಲ್ಲಿ ಗಂಗಕ್ಕ ಈ ಸಂಗತಿ ಹೇಳಿದಾಗ ಸಭೆಯಲ್ಲಿ ನಗೆಯಲೆ. ಅವತ್ತು ಗಂಗಕ್ಕ ಈ ಘಟನೆಯನ್ನ ಕಣ್ಮುಂದೆ ತಂದುಕೊಂಡು ಮತ್ತೆ ಮತ್ತೆ ನಕ್ಕಿದ್ದರು. ನೋಡಿದವರಿಗೆ, ಅವರು ಹೆಚ್ಚು ನಕ್ಕರೆ ಎಲ್ಲಿ ಆಯಾಸವಾಗುತ್ತದೋ ಎನ್ನುವಷ್ಟು ಸಣ್ಣ, ತೆಳ್ಳನೆ ದೇಹ. ಅಂದು ಆ ಚಿಕ್ಕ ಸ್ವರಮೂರ್ತಿ ನೋಡಲು ಬಂದಿದ್ದ ಆ ಹುಡುಗರಿಗೆ ಸಿಕ್ಕಿದ್ದುಗಂಗಜ್ಜಿಯ ರವೆ ಉಂಡಿ! |
ತಾಹಿ ಹೃದಯದ ಗಂಗಜ್ಜಿ ಬದುಕಿದ್ದೇ ಹಾಗೆ; ತುಂಬು ಪ್ರೀತಿಯಿಂದ. ತುಳುಕದಂಥ ವ್ಯಕ್ತಿತ್ವದೊಂದಿಗೆ. ಸ್ವರವೈಚಿತ್ರ್‍ಯ, ರಂಜನೀಯತೆ, ಪ್ರಯೋಗ, ವಿಜೃಂಭಣೆಯನ್ನೂ ದೂರ ನಿಲ್ಲಿಸಿ ತನ್ನೊಳಗಿನ ನಾದಸರಸ್ವತಿಯನ್ನು ಜೋಪಾನ ಕಾಯ್ದುಕೊಂಡರು. ಪರಂಪರಾ ಹಾಗೂ ಘರಾಣಾದ ನಿಲುವಿಗೆ ಬದ್ಧರಾಗಿ ಕಿರಾಣಾ ಘರಾಣಾದ ಪರಿಶುದ್ಧತೆ ಪ್ರತಿಪಾದಿಸಿದರು. ಅದಕ್ಕೇ ಅವರು ಎಂದಿಗೂ ಠುಮ್ರಿ, ಠಪ್ಪಾದಂಥ ಲಘುಶಾಸ್ತ್ರೀಯ ಸಂಗೀತ... |
ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ ಪೂರ್ತಿ ಬೆಂಗಳೂರು ಕರ್ನಾಟಕ ಸಂಗೀತವನ್ನೇ ಉಸಿರಾಡುತ್ತಿದ್ದ ಸಂದರ್ಭದಲ್ಲಿ ಪಂ. ವಿನಾಯಕ ತೊರವಿ, ಪಂ. ಪರಮೇಶ್ವರ ಹೆಗಡೆ, ಡಾ, ನಾಗರಾಜ ಹವಾಲ್ದಾರ ಅವರ ಮೂಲಕ ಬೆಂಗಳೂರಿನಲ್ಲೂ ಹಿಂದೂಸ್ತಾನಿ ಸಂಗೀತದ ಎಳೆ ಹರಡಲು ಕಾರಣೀಕರ್ತರಾದರು. |
'Masterly tribute to the great master gayanacharya gururao deshpande' ಅವತ್ತ ಹಿಂಗ ಡೆಕ್ಕನ್ ಹೆರಾಲ್ಡ್ ನೊಳಗ ಗಂಗಕ್ಕನ ಗಾಯನದ ಬಗ್ಗೆ ಹೆಡ್‌ಲೈನ್ ಬರೂದರ ಹಿಂದಿನ ಘಟನಾ ನೆನಪಾಗ್ತದ.. ಎನ್ನುತ್ತಾ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ವಿನಾಯಕ ತೊರವಿ ಎರಡೂವರೆ ದಶಕಗಳ ಹಿಂದು ಸ್ಪೂರ್ತಿ ಸುರುಳಿ ಬಿಚ್ಚಿದರು. 'ನೀ ಬೆಂಗಳೂರಿನ್ಯಾಗ ಹಿಂದೂಸ್ತಾನಿ ಬೆಳಸ್ತೀನಿ ಅನ್ನೂಹಂಗಿದ್ರ ಮಾತ್... |
'ಬರೇ ನಾವಷ್ಟ ಹಾಡಿದ್ರ ಹೆಂಗೋ? ನಾವ್ ಹೋದಮ್ಯಾಲೂ ಸಂಗೀತ ಉಳಿಬೇಕಂದ್ರ ಶಿಷ್ಯರನ್ನ ತಯಾರು ಮಾಡಬೇಕಪಾ. ಯಾವತ್ತೂ ಗುರುವಿನ ಸಾನಿಧ್ಯ ಭಾಳ ಮುಖ್ಯಾ ಅನ್ನೂದನ್ನ ನೆನಪಿಟ್ಕೊ. ಇನ್ನ .. ಅವ್ರ ಹಿಂಗ್ ಹಾಡ್ತಾರು, ಅವ್ರ ಹಂಗ್ ಹಾಡ್ತಾರೂ ಅನ್ನೂಕಿಂತ. ಅವರ ಹಾಡಿನೊಳಗಿನ ವಿಶೇಷತಾ ಏನ ಅದ? ಅದನ್ನ ನಾವು ಹೆಂಗ ಅಳವಡಿಸ್ಕೋಬೋದು ಅನ್ನೂದನ್ನ ವಿಚಾರ ಮಾಡಬೇಕು, ಅನುಭವಿಸ್ಕೋತ ಹಾಡಬೇಕು.ಆಗ ಹೆಸರು ಪ್ರ... |
ಅವರೆಂದೂ ಹುಟ್ಟಿದ ನೆಲವನ್ನು ಬಿಟ್ಟು ಕದಲಲಿಲ್ಲ. ಸಂಭಾವನೆ ನೆಚ್ಚಲಿಲ್ಲ. ಕಲೆ ಉಳಿಸಿ ಬೆಳೆಸಬೇಕೆನ್ನುವ ಇರಾದೆಯನ್ನು ನಿಂತ ನೆಲದಲ್ಲೇ ಹಸಿರಾಗಿಸಿದರು. ಗಂಟಲು ಬೇನೆಯಿಂದ ಧ್ವನಿ ಪೂರ್ತಿ ಕೈಕೊಟ್ಟಾಗ, ದೈಹಿಕ ಸ್ಥಿತಿ ಕ್ಷೀಣೀಸಿದ್ದಾಗಲೆಲ್ಲ ಅದಕ್ಕೆ ಮದ್ದಾಗಿದ್ದು ಸಂಗೀತವೇ. |
ಹಿಂದೊಮ್ಮೆ ಗಂಗೂಬಾಯಿ ಫ್ರಾನ್ಸ್‌ನಲ್ಲಿ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಾಗ ಅವರಿಗೆ ಎಂಬತ್ತೇಳು. ಆಗ ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಡಾ. ರವೀಂದ್ರ ಕಾಥೋಟಿಯವರು. ಅವರ ನೆನಪು ಕೇಳಿ; 'ಸಂಜೀಕ ಕಾರ್ಯಕ್ರಮ ಇತ್ತು. ಗಂಗೂಬಾಯಿಯವರಿಗೆ ಜೋರ ಜ್ವರಾ. ಮೈಕ್ ಇಲ್ಲದಂಥ ಮಾಡರ್ನ್ ವ್ಯವಸ್ಥಾ ಆ ಆಡಿಟೋರಿಯಮ್‌ದು. ಏನ್ ಮಾಡೂದಪಾ ಅಂತ ಚಿಂತಿ ಶುರುವಾತು. ಅವರ ಆತ್ಮಸ್ಥೈರ್ಯ ಅವತ್ತ ಪವಾಡನ ಮಾಡಿ... |
ಇನ್ನ ಸಣ್ಣವರಿಗೆಲ್ಲ ಭಾಳ ಪ್ರೋತ್ಸಾಹ ಕೊಡ್ತಿದ್ರು. 'ಏನರ ತಪ್ಪಾತಂದ್ರ ಕ್ಷಮಿಸಿಬಿಡ್ರಿ ಅಂತ ಕೈಮುಗದ್ರ-'ತಪ್ಪು ಎಲ್ಲಾರೂ ಮಾಡ್ಲಿಕ್ಕೇ ಬೇಕು. ಆದ್ರ ಛಲೋತ್ನಂಗ ಪ್ರಾಕ್ಟೀಸ್ ಮಾಡಬೇಕು ಅಷ್ಟ' ಅಂತ ನಕ್ಕಬಿಡ್ತಿದ್ರು. |
ಗಂಗಕ್ಕ ಎಂದಿಗೂ ಸಾಥಿದಾರರ ಬಗ್ಗೆ ನಿರ್ದಿಷ್ಟ ಆಯ್ಕೆ ಇಟ್ಟುಕೊಂಡಿರಲಿಲ್ಲ. ಚಿಕ್ಕವರೇ ಆದರೂ ಅವರನ್ನು ಹುರಿದುಂಬಿಸುತ್ತ ಅವರಿಗೆ ಸಭಾಮನ್ನಣೆ ದೊರಕಿಸಿಕೊಡುತ್ತಿದ್ದರು. ಇದಕ್ಕೆ ಸಾಕ್ಷಿ ತಬಲಾವಾದ ಉದಯರಾಜ್ ಕರ್ಪೂರ್. ೧೯೯೨ರಲ್ಲಿ ಉದಯರಾಜ್ ಮೊದಲ ಬಾರಿ ಬರೋಡಾ ಕಾರ್ಯಕ್ರಮವೊಂದರಲ್ಲಿ ಗಂಗೂಬಾಯಿಯವರಿಗೆ ಸಾಥ್ ಕೊಡುವ ಸಂದರ್ಭ ಬಂತು. 'ಅವತ್ ನಮ್ ಗುರುಗಳು ಶೇಷಗಿರಿ ಹಾನಗಲ್‌ರಿಗೆ ಅಚಾನಕ್... |
Subsets and Splits
No community queries yet
The top public SQL queries from the community will appear here once available.