text
stringlengths
0
61.5k
ಬದಲಾದ ಜೀವನ ಶೈಲಿ, ಆದ್ಯತೆಯನ್ನು ಮುಗ್ಧತೆಯಿಂದಲೇ ಸ್ವೀಕರಿಸುತ್ತ ಬಂದ ಗಂಗಕ್ಕ ಪದ್ಮಶ್ರೀ ಪುರಸ್ಕಾರ ಪಡೆದ ಸಂದರ್ಭದಲ್ಲಿ ಏಳು ವರ್ಷದ ಅವರ ಮರಿಮೊಮ್ಮಗಳು ಒಮ್ಮೆ ಕೇಳಿದಳಂತೆ; 'ಅಜ್ಜಿ, ಈ ಅವಾರ್ಡ್ ಯಾಕ ಬಂತು ನಿಂಗ?' ಅದಕ್ಕೆ ಗಂಗೂಬಾಯಿ. 'ಸಂಗೀತಕ್ಕ' ಅಂದ್ರಂತ. 'ನಾನೂ ಈ ಅವಾರ್ಡ್‌ ತಗೋತೇನಿ ಆದ್ರ ಸಂಗೀತಕ್ಕಲ್ಲ. ನನಗೇನ್‌ ಸೇರ್‍ತದೋ ಅದರಾಗ್‌!' - ಆ ಪುಟ್ಟಿ ಹೇಳಿದಾಗ, 'ಈಗಿನ ಹುಡುಗೋರು...
ಚಿಕ್ಕಮಗಳೂರು: ನೆರೆ ಸಂತ್ರಸ್ತರ ಮನೆಗಳಿಗೆ ಹಾಸಿಗೆ, ಸ್ಟೌ, ಬಟ್ಟೆ
Bangalore, First Published 20, Aug 2019, 12:14 PM
ಚಿಕ್ಕಮಗಳೂರಿನಲ್ಲಿ ನೆರೆ ಸಂತ್ರಸ್ತರಿಗೆ ಹಾಸಿಗೆ, ಬಟ್ಟೆ, ಗ್ಯಾಸ್‌ ಸ್ಟೌಗಳನ್ನು ವಿತರಿಸಲಾಗಿದೆ. ಸಂತ್ರಸ್ತರ ಮನೆಗೆ ಅಗತ್ಯವಾಗಿ ಬೇಕಿದ್ದ ವಿವಿಧ ಪರಿಕರಗಳು, ಬಟ್ಟೆಮತ್ತಿತರರ ವಸ್ತುಗಳನ್ನು ಅವರ ಮನೆಗೆ ಬಾಗಿಲಿಗೆ ನೇರವಾಗಿ ತಲುಪಿಸಲಾಗಿದೆ. ಸಂತ್ರಸ್ತರಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಮೂಡಿಗೆರೆ ಭಾಗಕ್ಕೂ ಕಳಿಸಿಕೊಡಲಾಯಿತು.
ಚಿಕ್ಕಮಗಳೂರು(ಆ.20): ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆರೆ ಹಾವಳಿಗೆ ತುತ್ತಾಗಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ 'ಮಾಲ್ಗುಡಿ ಡೇಸ್‌' ಚಿತ್ರ ತಂಡ, ಬೆಂಗಳೂರಿನ ಹೆಲ್ಪಿಂಗ್‌ ಹ್ಯಾಂಡ್‌, ರಾವ್‌ ಅಂಡ್‌ ಕಂಪೆನಿ, ಎ.ಬಿ. ಪ್ರಾಪರ್ಟಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಎರಡನೇ ಹಂತದಲ್ಲಿ ಹಾಸಿಗೆ, ಗ್ಯಾಸ್‌ ಸ್ಟೌ, ಬೆಡ್‌ಶೀಟ್‌, ಬ್ಲಾಂಕೆಟ್‌ ಸೇರಿದಂತೆ ವಿವಿಧ ...
ಬಾಳೆಹೊನ್ನೂರಿನ ಪತ್ರಕರ್ತರ ಎಚ್‌.ಎನ್‌.ಸತೀಶ್‌ ಜೈನ್‌ ಹಾಗೂ ಬಜರಂಗದಳದ ಸಂದೀಪ್‌ ಶೆಟ್ಟಿ, ಲೋಹಿತ್‌ ಶೆಟ್ಟಿಅವರ ಸಂಯೋಜನೆಯಲ್ಲಿ ಸಂತ್ರಸ್ತರಿಗೆ ಅಗತ್ಯವಾದ ಬಟ್ಟೆ, ಬರೆಗಳನ್ನು ಮೊದಲ ಹಂತದಲ್ಲಿ ಇತ್ತೀಚೆಗೆ ತಲುಪಿಸಲಾಗಿತ್ತು. ಎರಡನೇ ಹಂತದಲ್ಲಿಯೂ ಸಂತ್ರಸ್ತರ ಮನೆಗೆ ಅಗತ್ಯವಾಗಿ ಬೇಕಿದ್ದ ವಿವಿಧ ಪರಿಕರಗಳು, ಬಟ್ಟೆಮತ್ತಿತರರ ವಸ್ತುಗಳನ್ನು ಅವರ ಮನೆಗೆ ಬಾಗಿಲಿಗೆ ನೇರವಾಗಿ ತಲುಪಿಸಿದ್ದಾರೆ...
ಬೆಂಗಳೂರಿನಲ್ಲಿರುವ ಶೃಂಗೇರಿ ಮೂಲದ ದೀಪಾಶೆಟ್ಟಿನೇತೃತ್ವದ ಹೆಲ್ಪಿಂಗ್‌ ಹ್ಯಾಂಡ್‌ ತಂಡದಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ, ಪಂಚೆ, ಶರ್ಟ್‌, ನೈಟಿ, ಬೆಡ್‌ಶೀಟ್‌ ಸೇರಿದಂತೆ ವಿವಿಧ ಬಟ್ಟೆಗಳನ್ನು ನೀಡಲಾಗಿದೆ.
300 ಹಾಸಿಗೆ ವಿತರಣೆ:
ಬೆಂಗಳೂರಿನಲ್ಲಿರುವ ಉದ್ಯಮಿ ಶೃಂಗೇರಿ ಮೂಲದ ಸ್ಮಿತಾ ವಿಜಯನಾಗೇಶ್‌ ಅವರ ರಾವ್‌ ಅಂಡ್‌ ಕಂಪೆನಿ ವತಿಯಿಂದ 1 ಲಕ್ಷ ಮೌಲ್ಯದ 80 ಗ್ಯಾಸ್‌ ಸ್ಟೌ, ಬೆಂಗಳೂರಿನ ಉಮಾನಾಥ್‌ ನೇತೃತ್ವದ ಎ.ಬಿ. ಪ್ರಾಪರ್ಟಿ ವತಿಯಿಂದ ಬಟ್ಟೆ, ಔಷಧ, ಬೆಡ್‌ಶೀಟ್‌, ಬ್ಲಾಂಕೆಟ್‌ ಸೇರಿದಂತೆ ವಿವಿಧ ಪರಿಕರಗಳು, 'ಮಾಲ್ಗುಡಿ ಡೇಸ್‌' ಚಿತ್ರ ತಂಡದ ವತಿಯಿಂದ 300 ಹಾಸಿಗೆ, ಬಟ್ಟೆಸೇರಿದಂತೆ ಲಕ್ಷಾಂತರ ಮೌಲ್ಯದ ಪರಿಕರಗಳನ್ನು ...
10ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಾಗ್ರಿ:
ಸಂತ್ರಸ್ತರಿಗೆ ಪರಿಕರಗಳನ್ನು ವಿತರಿಸಿದ ಸಂದರ್ಭ 'ಮಾಲ್ಗುಡಿ ಡೇಸ್‌' ಚಿತ್ರತಂಡದ ಕಾರ್ಯಕಾರಿ ನಿರ್ಮಾಪಕ ರವಿಶಂಕರ್‌ ಪೈ ಸುದ್ದಿಗಾರರೊಂದಿಗೆ ಮಾತನಾಡಿ, 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವಿತರಿಸಿದ್ದು, ನೆರೆ ಹಾವಳಿಗೆ ತುತ್ತಾದವರು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ನಮ್ಮದಾಗಿದೆ. ನಮ್ಮ ಚಿತ್ರತಂಡದ ವತಿಯಿಂದ ಈಗಾಗಲೇ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ...
ಮೂಡಿಗೆರೆ ಭಾಗಕ್ಕೂ ಸಾಮಾಗ್ರಿ ರವಾನೆ:
ಸಂತ್ರಸ್ತರಿಗೆ ಪರಿಕರಗಳ ವಿತರಣೆಗೆ ಜಿಲ್ಲಾ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌, ಸ್ಥಳೀಯ ಗ್ರಾಪಂ ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡಿದವು. ಸಂತ್ರಸ್ತರಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಮೂಡಿಗೆರೆ ಭಾಗಕ್ಕೂ ಕಳಿಸಿಕೊಡಲಾಯಿತು.
'ಮಾಲ್ಗುಡಿ ಡೇಸ್‌' ಚಿತ್ರ ತಂಡದ ನಿರ್ದೇಶಕ ಕಿಶೋರ್‌ ಮೂಡಬಿದ್ರೆ, ಸದಸ್ಯ ರಘುವೀರ್‌ ಉಡುಪಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್‌, ಕಾರ್ಯದರ್ಶಿ ವಿ.ಜೆ.ರಾಜೇಶ್‌, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಎನ್‌.ಎ. ಶೇಖಬ್ಬ, ಕುಮಾರ್‌, ಗ್ರಾಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಆರ್‌.ಡಿ.ಮಹೇಂದ್ರ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶಶಾಂಕ್‌ ಹೇರೂರ...
ಕನ್ನಡ ಚಲನಚಿತ್ರೋದ್ಯಮದಲ್ಲಿ ಭುಗಿಲೆದ್ದ ಭಿನ್ನಮತ | Dubbing Kannada film producers not supporting 27th January Bandh - Kannada Filmibeat
23 min ago 'ಲವ್ ಮಾಕ್ಟೇಲ್-2' ಸಿನಿಮಾ ಡಿಸೆಂಬರ್ ಗೆ ರಿಲೀಸ್?
ಕನ್ನಡ ಚಲನಚಿತ್ರೋದ್ಯಮದಲ್ಲಿ ಭುಗಿಲೆದ್ದ ಭಿನ್ನಮತ
| Published: Wednesday, January 22, 2014, 15:41 [IST]
ಕನ್ನಡ ಚಿತ್ರೋದ್ಯಮದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಮತ ಇದೀಗ ಭುಗಿಲೆದ್ದಿದೆ. ಡಬ್ಬಿಂಗ್ ಪರವಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸಲ್ಲಿಸಿರುವ ವರದಿಯನ್ನು ವಿರೋಧಿಸಿ ಕಲಾವಿದರ ಸಂಘ ಜನವರಿ 27ಕ್ಕೆ ಬಂದ್ ಗೆ ಕರೆನೀಡಿದೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಭಾಗವಹಿಸುತ್ತಿಲ್ಲ.
ಈ ಮೂಲಕ ಚಿತ್ರರಂಗದಲ್ಲಿ ಒಮ್ಮತವಿಲ್ಲ ಎಂಬುದು ಬಹಿರಂಗವಾಗಿದೆ. ಬುಧವಾರ (ಜ.22) ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ.ಗಂಗರಾಜು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್ ನಲ್ಲಿ ಭಾಗವಹಿಸಬಾರದು ಎಂಬ ಸೂಚನೆ ನೀಡಲಾಗಿದೆ. [ಶಿವಣ್ಣನ ಮಾತಿಗೆ ಚಿತ್ರರಂಗದಲ್ಲಿ ಬೆಲೆ ಸಿಕ್ಕುತ್ತಾ?]
ವಾಣಿಜ್ಯ ಮಂಡಳಿಯಿಂದ ಯಾರೂ ಭಾಗಿಯಾಗಬಾರದು ಎಂಬ ಸೂಚನೆಯನ್ನು ಕೊಡಲಾಗಿದೆ. ಪರಭಾಷಾ ಚಿತ್ರಗಳ ಡಬ್ಬಿಂಗ್ ವಿವಾದ ನ್ಯಾಯಾಲಯದ ಮುಂದಿದೆ. ಹಾಗಾಗಿ ಬಂದ್ ನಲ್ಲಿ ತಾವ್ಯಾರೂ ಭಾಗಿಯಾಗುತ್ತಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರಿನ ಸಿಟಿ ಕ್ಲಬ್ ನಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕರು, ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ವಿತರಕರು ಹಾಗೂ ಪ್ರದರ್ಶಕರು ಭಾಗಿಯಾಗಿದ್ದರು. ಬಂದ್ ಗೆ ವಿರೋಧ ವ್ಯಕ್ತಪಡಿಸಿರುವ ಗಂಗರಾಜು ಅವರ ನಿರ್ಣಯಕ್ಕೆ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸಾ.ರಾ.ಗೋವಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ ವಿರೋಧಿಸಿ ಜ.27ರ (ಸೋಮವಾರ) ಬೆಳಗ್ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 'ಡಾ.ರಾಜ್ ಕುಮಾರ್ ವೇದಿಕೆ'ಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ಕಾರ್ಮಿಕರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿ...
Read more about: dubbing bandh bangalore kfcc vatal nagaraj ಡಬ್ಬಿಂಗ್ ಬಂದ್ ಬೆಂಗಳೂರು ಕೆಎಫ್ ಸಿಸಿ ವಾಟಾಳ್ ನಾಗರಾಜ್
Kannada film producers not supporting bandh called by pro-Kannada activist and former MLA Vatal Nagaraj has called for a bandh to be observed by Sandalwood to protest against the 'dubbing culture' that has badly affected Kannada film industry on the January 27.
ಚುನಾವಣೆಯ ಬಳಿಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ, ರಾಜ್ಯಾಧ್ಯಕ್ಷರ ಬದಲಾವಣೆ ! | KANNADIGA WORLD
Home ಕನ್ನಡ ವಾರ್ತೆಗಳು ಕರ್ನಾಟಕ ಚುನಾವಣೆಯ ಬಳಿಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ, ರಾಜ್ಯಾಧ್ಯಕ್ಷರ ಬದಲಾವಣೆ !
ಚುನಾವಣೆಯ ಬಳಿಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ, ರಾಜ್ಯಾಧ್ಯಕ್ಷರ ಬದಲಾವಣೆ !
Posted By: Gulf ReporterPosted date: June 03, 2019 In: ಕರ್ನಾಟಕ
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ ಕೆಲವು ರಾಜ್ಯಗಳಲ್ಲಿ ಬಿಜೆಪಿ, ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವ ಮೂಲಕ ಪಕ್ಷದ ಮಟ್ಟದಲ್ಲಿ ಭಾರಿ ಬದಲಾವಣೆಗೆ ಚಾಲನೆ ನೀಡಲಿದೆ.
ಇಷ್ಟರಲ್ಲೇ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕೇಂದ್ರ ಸಚಿವ ಸಂಪುಟ ಸೇರಿದ್ದು ಒಬ್ಬರಿಗೆ ಒಂದೇ ಹುದ್ದೆ ನಿಯಮದ ಪ್ರಕಾರ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ನೇಮಕಾತಿಯು ಬಹಳ ತ್ವರಿತ ಗತಿಯಲ್ಲಿ ಆಗಬೇಕಿದೆ. ಬಿಜೆಪಿ ಮೂಲಗಳ ಪ್ರಕಾರ ಮಾಜಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ರಾಜ್ಯಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮೂರು ವರ್ಷಗಳ ಅಧಿಕಾರವಧಿ ಈಗಾಗಲೇ ಮುಗಿದು ಹೋಗಿದೆ. ಮೇಲಾಗಿ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಈಗ ಪ್ರಮುಖವಾಗಿ ಯುಪಿ, ಬಿಹಾರ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಬಿಜೆಪಿ ರಾಜ್ಯ ಅಧ್ಯಕ್ಷರುಗಳು ಲೋಕಸಭಾ ಸದಸ್ಯರಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ಮಾಡಬೇಕಿದೆ.
ಮತ್ತೆ ಕೆಲವರು ಜನಪ್ರತಿನಿಧಿಯ ಜೊತೆಗೆ ಪಕ್ಷದ ಸಂಘಟನೆಯಲ್ಲಿ ಹುದ್ದೆಗಳನ್ನು ಹೊಂದಿದ್ದು ಅವರನ್ನು ಬದಲಾವಣೆ ಮಾಡಲು ಪಕ್ಷದ ಮುಂದಾಗಿದೆ. ಮತ್ತೆ ಕೆಲವುರಾಜ್ಯಗಳಲ್ಲಿ ಈ ವರ್ಷದ ಕೊನೆಯ ವೇಳೆಗೆ ವಿಧಾನಸಭಾ ಚುನಾವಣೆ ನಡೆಯುವ ಕಾರಣ ಬಹಳ ತ್ವರಿತವಾಗಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಇದೇ ಕಾರಣದಿಂದ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷದ ಮಟ್ಟದಲ್ಲಿ ಮಹತ್ವದ ಬದಲಾವಣೆ ಮಾಡಲಿದೆ ಎಂ...
ಹಳೆಯ ಪ್ರಕರಣಕ್ಕೆ ಮರುಜೀವ : ಬಜೆಟ್‌ ದಿನವೇ ಕೋರ್ಟ್‌ಗೆ ಬರಲು ಎಚ್‌ಡಿಕೆಗೆ ಸಮನ್ಸ್‌
ಸಮ್ಮಿಶ್ರ ಸರ್ಕಾರ ಮುನ್ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದಿಂದ ಕಂಟಕವೊಂದು ಎದುರಾಗಿದೆ.
ಬೆಂಗಳೂರು : ಸಮ್ಮಿಶ್ರ ಸರ್ಕಾರ ಮುನ್ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದಿಂದ ಕಂಟಕವೊಂದು ಎದುರಾಗಿದ್ದು, ಡಿನೋಟಿಫಿಕೇಷನ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಬರುವ ಜು.5ಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.
ಆದರೆ, ಜು.5ರಂದೇ ಬಜೆಟ್‌ ಮಂಡನೆ ಮಾಡಬೇಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಸಲ್ಲಿಕೆ ಮಾಡಿರುವ ಆರೋಪಪಟ್ಟಿಸಂಬಂಧ ಹೇಳಿಕೆ ದಾಖಲಿಸುವ ಬೇಕಿರುವ ಕಾರಣ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಏನಿದು ಪ್ರಕರಣ?: ನಗರದ ಥಣಿಸಂದ್ರದ 3.24 ಎಕರೆ ಭೂಮಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಹಳೆಯ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀರಾಮ್‌ ಮತ್ತು ರವಿಪ್ರಕಾಶ್‌ ಎಂಬುವರಿಗೆ ಡಿನೋಟಿಫಿಕೇಷನ್‌ ಮಾಡಿಕೊಟ್ಟಿದ್ದರು ಎಂಬ ಆರೋಪ ಇದೆ. ಈ ಭೂಮಿಯನ್ನು ಬಿಡಿಎ ಸ್ವಾಧೀನ ಪಡೆದುಕೊಂಡು ಪರಿಹಾರ ನೀಡಲಾಗಿತ್ತು. ಅಲ್ಲದೇ, ನಿವೇಶನಗಳನ್ನು ಸಹ ಹಂಚಿ...
ಡಿನೋಟಿಫಿಕೇಷನ್‌ ಸಂಬಂಧ 2012ರಲ್ಲಿ ಮಹದೇವಸ್ವಾಮಿ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಪ್ರಕರಣ ರದ್ದು ಮಾಡುವಂತೆ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿ ತನಿಖೆ ನಡೆಸಲು ನಿರ್ದೇಶನ ನೀಡಿತು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಕೆ ಮಾಡಿದ್ದರು. ಆರೋಪಪಟ್ಟಿಸಂಬಂಧ ನ...
ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ - ಪಂಜು | ಪಂಜು
October 21st, 2019 editor
ಮಹಾ ಶರಣ ಹರಳಯ್ಯ ಪಾರಪಯ್ಯ ಹೊನ್ನಮ್ಮ ದಂಪತಿಗೆ ದವಣದ ಹುಣ್ಣಿಮೆಯೆಂದು ಬಿಜಾಪೂರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಹರಳಯ್ಯನದಾಗಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ...
ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿಗೂ ವಿಜೃಂಭನೆಯಿಂದ ಅವರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ "ದವಣದ ಹುಣ್ಣಿಮೆ ದಿನ ಬಂತು ಧರೆ ದೇವ ಹರಳಯ್ಯ ಧರೆಗೆ ಬಂದಾನೊ" ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು ಈ ರೀತಿ ಪದ ಕಟ್ಟಿ ಹಾಡುತ್ತಾರೆ. ಯಾವ ವ್ಯಕ್ತಿ ಸಮಾಜಕ್ಕೆ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೊ ಆತನೇ ಮಹಾತ್ಮ ಎನ್ನಲಿಕ್ಕೆ ಶರಣ ಹರಳಯ್ಯ ಆದರ್ಶಪ್ರಾಯ. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾ...
ಬಿಜ್ಜನಹಳ್ಳಿ ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿಯ ಒಂದು ಚಿಕ್ಕ ಗ್ರಾಮ. ಆದರೆ ಈ ಹಳ್ಳಿಯಲ್ಲಿರುವ ಪ್ರತೀಕಾತ್ಮಕ ಮೌಲ್ಯವುಳ್ಳ ಹಿರಿದಪ್ಪ ವಸ್ತುವೊಂದರ ಪ್ರಭಾ ವಲಯದಲ್ಲಿ ಅಲ್ಲಿಯ ಜನ ಜೀವಿಸುತ್ತಿದ್ದಾರೆ. 12ನೇಯ ಶತಮಾನದಲ್ಲಿ ನಡೆದ ಕ್ರಾಂತಿಯ ಕುರುಹಾದ ಶರಣ ಹರಳಯ್ಯ – ಕಲ್ಯಾಣಮ್ಮ ಇವರು ಜಗಜ್ಯೋತಿ ಬಸವೇಶ್ವರರಿಗೆ ಅರ್ಪಿಸಿದ ಪುಣ್ಯಕರವಾದ ಪಾದುಕೆಗಳು ಬಿಜ್ಜನ ಹಳ್ಳಿಯಲ್ಲಿ ಇಂದಿಗೂ ಪೂಜೆ...
ರಾಷ್ಟ್ರಕೂಟ ರಾಜಮನೆತನದ ಅರಸರಿಗೆ ರಾಜಧಾನಿಯಾಗಿದ್ದ ಮಾನ್ಯಖೇಟ (ಈಗ ಅದರ ಹೆಸರು ಮಳಖೇಡ) ನಗರದ ಅಂಚಿನಲ್ಲಿದ್ದ ಹಳ್ಳಿ ಇದು. ಈ ಬಿಜ್ಜನ ಹಳ್ಳಿಯಲ್ಲಿರುವ ಅಮೂಲ್ಯ ವಸ್ತು ಯಾವುದೆಂದರೆ ಒಂದು ಜೊತೆ ಪಾದರಕ್ಷೆಗಳು ಎಂಟನೂರು ವರ್ಷಗಳಿಂದಲೂ ಸಂರಕ್ಷಿಸಲ್ಪಟ್ಟ ಪೂಜೆಗೊಳ್ಳುತ್ತಿರುವ ಈ ಪಾದರಕ್ಷೆಗಳು ಬಸವಣ್ಣವರಿಗಾಗಿ ನಿರ್ಮಿಸಲ್ಪಟ್ಟಂಥ, ಆದರೆ ಬಸವಣ್ಣ ಅವುಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳದೆ ತಲೆಯ ಮ...
ಗುಲ್ಬರ್ಗಾದಿಂದ 56 ಕೀ.ಮಿ. ಅಂತರದಲ್ಲಿ ಕಾಗಿನಿ ನದಿಯ ದಡದಲ್ಲಿರುವ ಬಿಜ್ಜನಹಳ್ಳಿಗೆ ಈ ಪಾದರಕ್ಷೆಗಳು 12ನೇ ಶತಮಾನದಲ್ಲಿಯೇ ಬಂದು ತಲುಪಿದವು ಈ ಕುರಿತು ಪ್ರಚಲಿತದಲ್ಲಿರುವ ಅಖ್ಯಾಯಿಕೆಯ ಪ್ರಕಾರ ಕಲ್ಯಾಣದಲ್ಲಿ ವಿಪ್ಲವ ಉಂಟಾಗಿ ಬಸವಾನುಯಾಯಿ ಶರಣರೆಲ್ಲ ಚದುರಿಹೋಗುತ್ತಿರುವ ಸಮಯದಲ್ಲಿ ಚನ್ನಬಸವಣ್ಣನವರಿಗೆ ಈ ಪಾದರಕ್ಷೆಗಳ ಸಂರಕ್ಷಣೆಯ ಕುರಿತು ಚಿಂತೆಯುಂಟಾಯಿತು. ಅವರು ಒಬ್ಬ ಶರಣನನ್ನು ಕರೆದು ...
ಪಾದರಕ್ಷೆಗಳು "ಸೊಲಬ" ಎಂಬ ಹೆಸರಿನ ಮನೆತನದವರ ಸುಪರ್ದಿನಲ್ಲಿವೆ ಅವರಿಂದ ನಿತ್ಯವೂ ಶುಚಿರ್ಭೂತವಾಗಿ ಪೂಜೆ ನಡೆಯುತ್ತಿದೆ. ಆಧುನಿಕ ಕಾಲದಲ್ಲಿ ಒಂದು ಚಿಕ್ಕ ಮಂದಿರವನ್ನು ನಿರ್ಮಿಸಿ ಅದರಲ್ಲಿ ಈ ಪಾದರಕ್ಷೆಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಅವನ್ನು ಒಂದು ಗಾಜಿನ ಚೌಕೋನಿ ಪೆಟ್ಟಿಗೆಯಲ್ಲಿ ಇಡಲಾಗಿದೆ. ಬೇರಾವ ಜೋಪಾನೆಯ ತಾಂತ್ರಿಕ ವ್ಯವಸ್ಥೆ ಇಲ್ಲದೆ ಇದ್ದರೂ ಪಾದರಕ್ಷೆಗಳು ಸುಸ್ಥಿತಿಯಲ್ಲಿ ಇ...
ಈ ಪಾದರಕ್ಷೆಗಳಿಗೆ ಇರುವ ಮಹತ್ವ ಅವು ಯಾರಿಗಾಗಿ ತಯಾರಿಸಲ್ಪಟಂಥವು ಎನ್ನುವುದಕ್ಕೆ ಮಿಗಿಲಾಗಿ ಅವು ಯಾರಿಂದ ಹಾಗೂ ಹೇಗೆ ನಿರ್ಮಾಣಗೊಂಡವು ಎನ್ನವುದರಲ್ಲಿ ಇದೆ. ಈ ಪಾದರಕ್ಷೆಗಳನ್ನು ಬಸವಣ್ಣನವರ ದಲಿತ ಭಕ್ತರೊಲ್ಲೊಬ್ಬರಾದ ಸಮಗಾರ ಹರಳಯ್ಯ ಹಾಗೂ ಅವನ ಪತ್ನಿ ಕಲ್ಯಾಣಮ್ಮ ಅವರು ತಮ್ಮ ತೊಡೆಗಳಿಂದ ಸುಲಿದು ತೆಗೆದ ಚರ್ಮವನ್ನು ಜೋಡಿಸಿ ತಯಾರಿಸಿದ್ದರು ಈ ನಿರ್ಮಿತಿಗೆ ಹಿನ್ನಲೆಯಾಗಿ ಇರುವ ಕಥೆ ಹೀಗಿದೆ...
ಹರಳಯ್ಯ ಒಂದುಸಲ ಎದುರಿಗೆ ಬರುತ್ತಿರುವ ಬಸವಣ್ಣನವರನ್ನು ಕಂಡು 'ಶರಣಾರ್ಥಿ' ಎಂದ ಅದಕ್ಕೆ ಪ್ರತಿಯಾಗಿ ಬಸವಣ್ಣ ಹರಳಯ್ಯನಿಗೆ 'ಶರಣುಶರಣಾರ್ಥಿ'ಎಂದುಬಿಟ್ಟರು. ಸಾಮಾನ್ಯ ಹೀನಕುಲ-ಕಸುಬಿನವನಾದ ತನಗೆ ಬಸವಣ್ಣ ಎರಡುಸಲ ಶರಣಾರ್ಥಿ ಎಂದರಲ್ಲಾ ಎಂದು ಹರಳಯ್ಯನ ಮನಸ್ಸಿನಲ್ಲಿ ಕಳವಳ ಉಂಟಾಯಿತು. ನೊಂದ ಮನಸ್ಥಿತಿಯಲ್ಲಿ ಗೂಡಿಗೆ ಮರಳಿದ ಹರಳಯ್ಯನ ಖಿನ್ನ ಮುಖಚರ್ಯೆಯನ್ನು ಕಂಡು ಗಾಬರಿಗೊಂಡ ಕಲ್ಯಾಣಮ್ಮ ಏನಾ...
ಇತ್ತ ಹರಳಯ್ಯ ತಂದ ಪಾದರಕ್ಷೆಗಳನ್ನು ಕಂಡು ಬಸವಣ್ಣ ವಿಸ್ಮಿತರಾಗಿ ಹರ್ಷೋಲ್ಲಾಸದಲ್ಲಿ ಹರಳಯ್ಯನನ್ನು ಬಿಗಿದಪ್ಪಿ ಶರಣರ ಕುಲಕ್ಕೆ ತಿಲಕ ಪ್ರಾಯನಾದ ನೀನು ನಿರ್ಮಿಸಿ ತಂದ ಈ ಪಾದರಕ್ಷೆಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳಲು ಯೋಗ್ಯವಾದಂಥವಲ್ಲ ಇವುಗಳ ಸ್ಥಾನ ನನ್ನ ಶಿರಸ್ಸು ಎಂದು ಹೇಳುತ್ತಾ ಅವುಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡರು. ಈ ಪಾದರಕ್ಷೆಗಳೇ ಇಂದು ಬಿಜ್ಜನಹಳ್ಳಿಯಲ್ಲಿ ನಮಗೆ ನೋಡಲು ದೊರೆ...
ಜನಪದ ಸಾಹಿತ್ಯದಲ್ಲಿ ಮಾತ್ರ ಹರಳಯ್ಯನ ಸಮಗ್ರ ಜೀವನಚರಿತ್ರೆ ಅತೀವ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಶಿಷ್ಟ ಪ್ರಜ್ಞೆಯಲ್ಲಿ ಮಸುಕಾಗುತ್ತಿರುವ ಸಮತಾ ಕ್ರಾಂತಿಯ ಘಟನೆ ಜನಪದ ಪ್ರಜ್ಞೆಯಲ್ಲಿ ಜ್ವಲಂತವಾಗಿ ಉಳಿದುಕೊಂಡಿದೆ. ಇಂದು ಜನಮನದಲ್ಲಿ ಪ್ರಚಲಿತವಿರುವ ಹರಳಯ್ಯನ ಕಥೆಗೆ ಜನಪದ ಹಾಡುಗಳೇ ಮೂಲಾಧಾರವಾಗಿವೆ.
ಹರಳಯ್ಯನ ಮಗ ಮಧುವರಸರ ಮಗಳ ಮದುವೆಯ ಐತಿಹಾಸಿಕತೆಗೆ 12ನೇ ಶತಮಾನದ ಲಿಖಿತ ಆಧಾರವೇ ಇದೆ. ಸಿದ್ಧರಾಮೇಶ್ವರನ "ಕುಲಧಿಂಬಧಿಕವೆಂದು ಹೋರಾಡುವ ಅಣ್ಣಗಳಿರಾ ಕೇಳಿರಯ್ಯ" ಎಂಬ ವಚನದಲ್ಲಿದೆ ಈ ಆಧಾರ. ಕಥೆ ಹೇಳುವುದಾಗಲೀ ಘಟನೆಯನ್ನು ವಿವರಿಸುವುದಾಗಲೀ ಈ ವಚನದ ಉದ್ದೇಶವಲ್ಲದುದರಿಂದ ಮದುವೆ ಶಬ್ದ ಇಲ್ಲಿ ಬಂದಿರದೆ ಇದ್ದರೂ, ವಿವಾಹಕ್ಕೆ ಸಂಬಂಧಪಟ್ಟ ಜೋಡಿಗಳ ಜತೆಯಲ್ಲಿಯೇ ಹರಳಯ್ಯ-ಮಧುವಯ್ಯಗಳ ಹೆರಸನ್ನು ಎ...
ಇಷ್ಟೊಂದು ಐತಿಹಾಸಿಕ ಮಹತ್ವವುಳ್ಳ ಬಿಜ್ಜನಹಳ್ಳಿಯ ಪಾದತ್ರಾಣಗಳು ನಾಡಿನಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿಲ್ಲ ಎಂಬುದು ವಿಷಾದನಿಯ ಸಂಗತಿಯಾಗಿದೆ. ಆ ಸ್ಥಳದಲ್ಲಿಯ ಸಂದರ್ಶಕರ ನೋಟಬುಕ್ಕಿನ ಅವಲೋಕನವು ವ್ಯಥಿತಗೊಳಿಸುವ ಇನ್ನೊಂದು ಸಂಗತಿಯನ್ನು ಹೊರಗೆಡುಹುತ್ತದೆ. ಈ ಸ್ಥಳಕ್ಕೆ ಭೇಟ್ಟಿಕೊಡುವ ಜನರಲ್ಲಿ ಹೆಚ್ಚಿನವರೆಲ್ಲ ಹರಳಯ್ಯನ ಸಮಾಜಬಾಂಧವರೇ ಆಗಿದ್ದಾರೆ. ಬಸವಣ್ಣನ ಸಂಗಾತಿಗಳಾದ ಮಹಿಮಾನ್ವ...
ಸಮತಾ ಸಮಾಜ ನಿರ್ಮಾಣ ಆಂದೋಲನದ ಗೌರವಾರ್ಹ ಕೇಂದ್ರಗಳಾಗಿ ಬಾಗೇವಾಡಿ, ಕೂಡಲಸಂಗಮ ಹಾಗೂ ಬಸವಕಲ್ಯಾಣಗಳು ಮಾತ್ರ ಪ್ರಾಮುಖ್ಯವಾಗಿ ಪ್ರಸಿದ್ಧಿಯನ್ನು ಪಡೆಯುತ್ತಿವೆ. ಹಾಗೆಯೇ ಸಮತಾ ಕ್ರಾಂತಿಯ ಸಂಕೇತವಾಗಿ ಬಿಜ್ಜನಹಳ್ಳಿ ಬೆಳಕಿಗೆ ಬರಬೇಕಾದುದು ಅತ್ಯವಶ್ಯಕವಾಗಿದೆ. ಜತೆಯಲ್ಲಿ ಹರಳಯ್ಯನ ಹೆಂಡತಿ ಕಲ್ಯಾಣಮ್ಮಳ ಸಮಾಧಿ ಇರುವ ತಿಗಡಿ (ಬೆಳಗಾವಿ ಜಿಲ್ಲೆ)ಯೂ ತನ್ನ ಈಗಿನ ಅವಕಳೆಯನ್ನು ಕಳೆದುಕೊಂಡು ಸಮತೆ ಹ...
ಪ್ರಧಾನಿ ಮೋದಿ ಭದ್ರತಾ ಲೋಪ 'ದೊಡ್ಡ ನಾಟಕ': ನವಜೋತ್ ಸಿಂಗ್ ಸಿಧು – UNI ಕನ್ನಡ
ಪ್ರಧಾನಿ ಮೋದಿ ಭದ್ರತಾ ಲೋಪ 'ದೊಡ್ಡ ನಾಟಕ': ನವಜೋತ್ ಸಿಂಗ್ ಸಿಧು
ಬರ್ನಾಲಾ: ಜನೆವರಿ 06 (ಯು.ಎನ್.ಐ) ಪಂಜಾಬಿನಲ್ಲಿ ಸಂಭವಿಸಿದ ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರವನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಿರಾಕರಿಸಿದ್ದು, ಇದೊಂದು ದೊಡ್ಡ ನಾಟಕ ಎಂದು ಕಿಡಿಕಾರಿದ್ದಾರೆ.
ಬರ್ನಾಲಾದ ದನಾ ಮಂಡಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಧು, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಮತೆ ಒತ್ತಾಯಿಸಿ ರೈತರು ಸತತ ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಗಡಿಯಲ್ಲಿ ಕಾಯುತ್ತಿದ್ದರು. ಆದರೆ ಅವರು ಯಾರೂ ಗಲಾಟೆ ಮಾಡಲಿಲ್ಲ ಎಂದು ಪ್ರಧಾನಿ ಮೋದಿಗೆ ನೆನಪಿಸಿದರು.
ಪ್ರಧಾನ ಮಂತ್ರಿಯವರ ಭದ್ರತಾ ಪಡೆ ಫಿರೋಜ್‍ಪುರಕ್ಕೆ ಹೋಗುವ ಮಾರ್ಗದಲ್ಲಿ ಬಟಿಂಡಾದ ಮೇಲ್ಸೇತುವೆಯೊಂದರಲ್ಲಿ 15-20 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡಿತು, ಇದು ಪ್ರಮುಖ ಭದ್ರತಾ ಉಲ್ಲಂಘನೆಯಾಯಿತೇ? ಎಂದು ಪ್ರಶ್ನಿಸಿದ ಅವರು ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ರಸ್ತೆ ಮಾರ್ಗವಾಗಿ ಫಿರೋಜ್‍ಪುರಕ್ಕೆ ಹೋಗುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿದ್ದರು.
ಯೋಗರಾಜ್ ಭಟ್: Latest News, Photos, Videos on ಯೋಗರಾಜ್ ಭಟ್ | kannada.asianetnews.com
Sandalwood20, Mar 2019, 11:49 AM IST
ನಿರ್ದೇಶಕ ಯೋಗರಾಜ್ ಭಟ್ ಹಾಗೂ ಯಶ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುವ ತವಕದಲ್ಲಿದೆ. ಇಬ್ಬರು ಒಂದಾಗಿ ಸಿನಿಮಾ ಮಾಡುವ ಸಾಧ್ಯತೆಗಳನ್ನು ನಿರ್ದೇಶಕ ಯೋಗರಾಜ್ ಭಟ್ ಹೊರಗೆಡವಿದ್ದಾರೆ.
Sandalwood26, Feb 2019, 3:51 PM IST
ಚಾಲೆಂಜಿಂಗ್ ಸ್ಟಾರ್ ಅಭಿನಯದ 'ಯಜಮಾನ' ಚಿತ್ರದ 5 ನೇ ಹಾಡು ಬಿಡುಗಡೆ ಆಗಿದ್ದು, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ ' ಹತ್ತು ರೂಪಾಯಿಗೊಂದು' ಹಾಡನ್ನು ಯೋಗರಾಜ್ ಭಟ್ ದರ್ಶನ್ ಗೆ ಕೊಟ್ಟಿದ್ದಾರೆ.
ಕೊರೋನ ಹೆಚ್ಚಳ: ಬೆಂಗಳೂರಿನ ಎರಡು ಕಾಲೇಜುಗಳಿಗೆ 14 ದಿನ ರಜೆ ಘೋಷಣೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Feb 28, 2021, 5:13 PM IST
ಬೆಂಗಳೂರು, ಫೆ.28: ರಾಜಧಾನಿ ಬೆಂಗಳೂರಿನ ಸಮುದಾಯ ಭವನ, ಕಾಲೇಜುಗಳಲ್ಲಿ ಹಂತ ಹಂತವಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಲ್ಲಿನ ಯಲಹಂಕ ವಲಯದ ಎರಡು ಕಾಲೇಜುಗಳಿಗೆ 14 ದಿನಗಳ ಕಾಲ ರಜೆ ನೀಡಿ, ಕ್ಲಸ್ಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಕಳೆದ 24 ಗಂಟೆಗಳ ವರದಿ ಅನ್ವಯ ಯಲಹಂಕ ವಲಯದ ಎರಡು ಕಾಲೇಜು, ವಸತಿ ಸಮುಚ್ಚಯ ಹಾಗೂ ಅತಿಥಿ ಗೃಹ ಸೇರಿ ನಾಲ್ಕು ಸ್ಥಳಗಳಲ್ಲಿ 33 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರದೇಶಗಳನ್ನು ಕ್ಲಸ್ಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಅಟ್ಟೂರು ಬಳಿಯ ಸಂಭ್ರಮ್, ಅಗ್ರಗಾಮಿ ಕಾಲೇಜು, ವೆನಿಜಿಯಾ ಅಪಾರ್ಟ್ ಮೆಂಟ್ ನಲ್ಲಿ 28 ಮಂದಿ ಸೋಂಕಿಗೆ ಒಳಗಾಗಿದ್ದರು. ಶನಿವಾರ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಹರಡದಂತೆ ನಿಗಾ ವಹಿಸಲಾಗಿದೆ.
ಇನ್ನು, ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಯಲಹಂಕ ವಲಯದ ಸಂಭ್ರಮ್ ಕಾಲೇಜು ಹಾಗೂ ಅಗ್ರಗಾಮಿ ಕಾಲೇಜುಗಳಿಗೆ 14 ದಿನ ರಜೆ ನೀಡಲಾಗಿದ್ದು, ವೆನಿಜಿಯಾ ಅಪಾರ್ಟ್ ಮೆಂಟ್ ಅನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತ ಅಶೋಕ್ ತಿಳಿಸಿದ್ದಾರೆ.
ಪ್ರಸ್ತುತ ದಕ್ಷಿಣ ಕನ್ನಡ| ನಾಳೆಯಿಂದ ಮಧ್ಯಾಹ್ನ 2 ರವರೆಗೆ ಎಲ್ಲಾ ಅಂಗಡಿ ತೆರೆಯಲು ಅವಕಾಶ – Prasthutha
ದಕ್ಷಿಣ ಕನ್ನಡ : ವ್ಯಾಪಾರಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಬುಧವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜವಳಿ ವ್ಯಾಪಾರಸ್ಥರು, ಸೇರಿದಂತೆ ವಿವಿಧ ವ್ಯಾಪಾರಸ್ಥರು ಲಾಕ್ ಡೌನ್ ನಿಂದ ನಮ್ಮ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿದೆ ಎಂದು ಅಹವಾಲು ತೋಡಿಕೊಂಡಿದ್ದರು. ಈ ಬಗ್ಗೆ ಸಂಸದರು, ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಿ ಪಾಸಿಟಿವಿಟಿ ರೇಟ್ ಕಡಿಮೆ ಮ...
ಎಲ್‌ಇಟಿ ಸ್ಥಾಪಕ ಸಯೀದ್‌ ಜತೆ ರಾಂದೇವ್‌ ಆಪ್ತರ ಭೇಟಿ: ರಾಜ್ಯಸಭೆಯಲ್ಲಿ ಕೋಲಾಹಲ|ಸಂಸತ್ ಕಲಾಪಕ್ಕೆ ಕಾವೇರಿಸಿದ ಹಫೀಜ್-ವೈದಿಕ್ ಭೇಟಿ - india - News in kannada, vijaykarnataka
ಎಲ್‌ಇಟಿ ಸ್ಥಾಪಕ ಸಯೀದ್‌ ಜತೆ ರಾಂದೇವ್‌ ಆಪ್ತರ ಭೇಟಿ: ರಾಜ್ಯಸಭೆಯಲ್ಲಿ ಕೋಲಾಹಲ
ಸಂಸತ್ ಕಲಾಪಕ್ಕೆ ಕಾವೇರಿಸಿದ ಹಫೀಜ್-ವೈದಿಕ್ ಭೇಟಿ
ಏಜೆನ್ಸೀಸ್ | Updated: Jul 15, 2014, 12:25AM IST
-ಪತ್ರಕರ್ತ ನಡೆಸಿದ ಸಂದರ್ಶನಕ್ಕೂ ಸರಕಾರಕ್ಕೂ ಸಂಬಂಧವಿಲ್ಲ: ಜೇಟ್ಲಿ-
ಹೊಸದಿಲ್ಲಿ: ಮುಂಬಯಿ ದಾಳಿಯ ಸಂಚುಕೋರ, ಲಷ್ಕರೆ ಉಗ್ರ ಹಫೀಜ್ ಸಯೀದ್‌ನನ್ನು ಪತ್ರಕರ್ತ ವೇದ್‌ಪ್ರತಾಪ್ ವೈದಿಕ್ ಇತ್ತೀಚೆಗೆ ಪಾಕಿಸ್ತಾನದಲ್ಲಿ ಭೇಟಿ ಮಾಡಿರುವುದು ಸಂಸತ್ತಿನ ಉಭಯ ಸದನಗಳಲ್ಲಿ ಸೋಮವಾರ ಕಾವೇರಿದ ಚರ್ಚೆಗೆ ವೇದಿಕೆ ಕಲ್ಪಿಸಿತು.
ಹಲವು ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಉಗ್ರ ಸಯೀದ್‌ನನ್ನು ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಯೋಗಗುರು ಬಾಬಾ ರಾಮ್‌ದೇವ್ ಅವರ ಆಪ್ತರೆಂದು ಹೇಳಲಾದ ಫ್ರೀಲ್ಯಾನ್ಸ್ ಪತ್ರಕರ್ತ ವೇದ್‌ಪ್ರತಾಪ್ ಜುಲೈ 2ರಂದು ಭೇಟಿ ಮಾಡಿದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿರುಸಿನ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ''ಯಾರ ದೂತನಾಗಿ ಹಫೀಜ್‌ನನ್ನು ವೈದಿಕ್ ಭೇಟಿ ಮಾಡಿದ್ದಾರೆ?, ಎನ್‌ಡಿಎ ಸರಕಾರದ ದೂತನಾಗಿಯೇ ಅಥವಾ ಪ್ರಧಾನಿ ಮೋದಿ ಅವರ ಪ್ರತಿನಿಧಿಯಾಗಿಯೇ?, ಇದಕ್ಕೆ ಸಾಮಾಜಿಕ ಜಾಲ ತಾಣದ ಪ್ರತಿಕ್ರಿಯೆ ಏನು?,'' ಎಂದು ಕೆಣಕಿದ್ದರು.
ಇದೇ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ವೈದಿಕ್‌ಗೆ ಈ ಕಾರ‌್ಯಾಚರಣೆ ಒಪ್ಪಿಸಿದವರಾರು? ಎಂದು ಪ್ರಶ್ನಿಸಿದರು. ಲೋಕಸಭೆಯಲ್ಲೂ ಈ ವಿಷಯದ ಕುರಿತು ಪ್ರತಿಪಕ್ಷ ಸದಸ್ಯರು ಅನೇಕ ಪ್ರಶ್ನೆಗಳನ್ನೆತ್ತಿದರು.
ಸದಸ್ಯರ ಸಂದೇಹಗಳಿಗೆ ಉತ್ತರ ನೀಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ''ವೈದಿಕ್ ಮತ್ತು ಸಯೀದ್ ಭೇಟಿಯಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಒಬ್ಬ ಪತ್ರಕರ್ತನಾಗಿ ವೈದಿಕ್ ಈ ಸಂದರ್ಶನ ನಡೆಸಿದ್ದಾರೆ,'' ಎಂದು ಹೇಳಿದರು. ಜೇಟ್ಲಿ ಅವರ ಉತ್ತರದಿಂದ ಸಮಾಧಾನಗೊಳ್ಳದೆ, ಪ್ರತಿಪಕ್ಷ ಸದಸ್ಯರು ಗದ್ದಲ ನಡೆಸಿದ್ದರಿಂದ ಎರಡು ಬಾರಿ ಕಲಾಪ ಮುಂದೂಡಬೇಕಾಯಿತು.
ನಾನು ಯಾರ ದೂತನೂ ಅಲ್ಲ
ತಮ್ಮ ಮತ್ತು ಸಯೀದ್ ಭೇಟಿಗೆ ರಾಜಕೀಯ ತಿರುವು ಸಿಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಪತ್ರಕರ್ತ ವೈದಿಕ್, '' ಇದು ಯಾರ ಒತ್ತಾಸೆಯಿಂದ ನಡೆದ ಭೇಟಿಯಲ್ಲ. ಒಬ್ಬ ಪತ್ರಕರ್ತನಾಗಿ ಸಮಾಜದಲ್ಲಿ ನನಗೆ ಯಾರೂ ಅಸ್ಪೃಶ್ಯರಲ್ಲ. ನಾನು ಪ್ರಧಾನಿ ಮೋದಿ ಸೇರಿದಂತೆ ಯಾರ ದೂತನೂ ಅಲ್ಲ. ನಾನು ಪ್ರತಿನಿಧಿಸುವುದು ಕೇವಲ ನನ್ನನ್ನು ಮಾತ್ರ. ಪ್ರಾಣವನ್ನು ಒತ್ತೆಯಿಟ್ಟು ನಾನು ಈ ಭೇಟಿ ಮಾಡಿದ್ದೇನೆ. ಸದಾ ಭಾರತವನ್ನು...
ಮೋದಿ ಬಗ್ಗೆ ತಪ್ಪುಕಲ್ಪನೆ
''ಪ್ರಧಾನಿ ಮೋದಿ ಬಗ್ಗೆ ಲಷ್ಕರೆ ಉಗ್ರನಿಗೆ ತುಂಬಾ ತಪ್ಪು ತಿಳಿವಳಿಕೆ ಇದೆ. ಮೋದಿ ಪ್ರಧಾನಿ ಆಗಿರುವುದರಿಂದ ದಕ್ಷಿಣ ಏಷ್ಯಾ ಅಪಾಯಕ್ಕೆ ಸಿಲುಕಿದೆ. ಮೋದಿ ಒಬ್ಬ ಭಯಂಕರ ವ್ಯಕ್ತಿ ಎಂದು ಆತ ನಂಬಿದ್ದಾನೆ. ಆತನ ತಪ್ಪು ತಿಳಿವಳಿಕೆಯನ್ನು ನಾನು ನಿವಾರಿಸಿದ್ದೇನೆ. ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದರೆ ಸ್ವಾಗತಿಸುವುದಾಗಿ ಆತ ಹೇಳಿದ್ದಾನೆ. ಅಷ್ಟೇ ಅಲ್ಲ, ಆತನಿಗೂ ಭಾರತಕ್ಕೆ ಬರುವ ಹಂಬಲವಿದೆ,'' ...
ಆಪ್ತನ ಸಮರ್ಥನೆಗೆ ನಿಂತ ಬಾಬಾ
ಸಯೀದ್‌ನನ್ನು ವೈದಿಕ್ ಭೇಟಿ ಮಾಡಿರುವುದನ್ನು ಬಾಬಾ ರಾಮ್‌ದೇವ್ ಸಮರ್ಥಿಸಿಕೊಂಡಿದ್ದಾರೆ. ''ಪತ್ರಕರ್ತನಾಗಿ ವೈದಿಕ್ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ವೈದಿಕ್ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಅವರು ಸಯೀದ್ ಮನ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಲಿದ್ದಾರೆ,'' ಎಂದು ರಾಮ್‌ದೇವ್ ಹೇಳಿದ್ದಾರೆ.
Keywords: ಸಯೀದ್‌ ಭೇಟಿ ವಿವಾದ | ರಾಮ್‌ದೇವ್‌ ಸಹಾಯಕ | Row over meeting | between Ramdev's aide | and Hafiz Saeed
'₹30 ಕೋಟಿ ಷೇರು ಬಂಡವಾಳ' | Prajavani
'₹30 ಕೋಟಿ ಷೇರು ಬಂಡವಾಳ'
Published: 03 ಫೆಬ್ರವರಿ 2018, 10:48 IST
Updated: 03 ಫೆಬ್ರವರಿ 2018, 10:48 IST
ವಿಜಯಪುರ: 'ಸಹಕಾರಿ ವಲಯದಲ್ಲಿ ದೇಶಕ್ಕೆ ಮಾದರಿಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ, ರಾಜ್ಯ ಸರ್ಕಾರ ₹30 ಕೋಟಿ ಷೇರು ಬಂಡವಾಳ ಹೂಡಲು ಪ್ರಾಮಾ ಣಿಕವಾಗಿ ಶ್ರಮಿಸುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಭರವಸೆ ನೀಡಿದರು.
ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ರಜತ ಮಹೋತ್ಸವ, 50 ಕೆಎಲ್‌ಪಿಡಿ ಇಥೆನಾಲ್ ಘಟಕ, ಕೆ.ಎಚ್.ಪಾಟೀಲ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಮಾದರಿ, ಆದರ್ಶಮಯವಾದ ಸಕ್ಕರೆ ಕಾರ್ಖಾನೆ' ಎಂದು ಶ್ಲಾಘಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ 'ಕಾರ್ಖಾನೆಗೆ ಸರ್ಕಾರ ಅನುದಾನ ನೀಡಿದರೆ ಗೌರವ ಸಿಗಲಿದೆ. ಈ ಕಾರ್ಖಾನೆ