text
stringlengths
0
61.5k
ನವದೆಹಲಿ, ಮೇ 27: ಜಿಎಸ್‌ಟಿ ಕೌನ್ಸಿಲ್ ಸಭೆ ಮೇ 28 ರಂದು ನಡೆಯಲಿದ್ದು ಇದಕ್ಕೂ ಮುಂಚಿತವಾಗಿ ರಾಜಸ್ಥಾನ ಸಚಿವ ಶಾಂತಿ ಕುಮಾರ್ ಧರಿವಾಲ್ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರುಗಳು ಜಿಎಸ್‌ಟಿ ನಷ್ಟ ಪರಿಹಾರ ಬೇಡಿಕೆ ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಆಡಳಿತವಿರುವ ಏಳು ರಾಜ್ಯಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಜ್ಯಗಳಿಗೆ ತೆರಿಗೆ ನಷ್ಟವನ್ನು ಸರಿದೂಗಿಸಬೇಕು ಮತ್ತು ರಾಜ್ಯ ದೇಶೀಯ ಉತ್ಪನ್ನಗಳಿಗೆ ಹೆಚ್ಚುವರಿ ಸಾಲ ಮಿತಿಯನ್ನು ಒಟ್ಟು ಶೇ. 5 ರಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.
ಮೇ 28 ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಮುಂಚಿತವಾಗಿ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಹಣಕಾಸು ಸಚಿವರುಗಳು ರಾಜಸ್ಥಾನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿ ಕುಮಾರ್ ಧರಿವಾಲ್ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಈ ರಾಜ್ಯಗಳು ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದು ಜಿಎಸ್‌ಟಿ ನಷ್ಟ ಪರಿಹಾರ ಬೇಡಿಕೆಯನ್ನು ಎತ್ತಿಹಿಡಿದೆ. ಹಾಗೆಯೇ ಕೋವಿಡ್‌ ಸಾಂಕ್ರಾಮ...
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಸ್ಥಾನದ ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಆದರೆ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜಸ್ಥಾನ ಸರ್ಕಾರವನ್ನು ಧರಿವಾಲ್ ಪ್ರತಿನಿಧಿಸಲಿದ್ದಾರೆ. ಈ ಹಿನ್ನೆಲೆ ಧರಿವಾಲ್ ಸಭೆ ಆಯೋಜಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಪರಿಣಾಮಕಾರಿಯಾಗಿ ತಮ್ಮ ಬೇಡಿಕೆಯನ್ನು ಪ್ರಸ್ತಾಪಿಸಲು ಈ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
"ಕೇಂದ್ರ ಸರ್ಕಾರವು ಸಹಕಾರಿ ಫೆಡರಲಿಸಂನ ಮನೋಭಾವವನ್ನು ಗೌರವಿಸಬೇಕು. ಜಿಎಸ್‌ಟಿ ಆದಾಯ ನಷ್ಟಗಳಿಗೆ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು. ಇದು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಕೆಲವು ತೆರಿಗೆ ನಷ್ಟವನ್ನು ತಗ್ಗಿಸಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ" ಎಂದು ಧರಿವಾಲ್ ಹೇಳಿದ್ದಾರೆ. ಹಾಗೆಯೇ ಪರಿಹಾರದ ನಿಯಮವನ್ನು 2022 ಮೀರಿ ಐದು ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಕೂಡಾ ಒತ...
ಧರಿವಾಲ್ ಜೊತೆಗೆ ಹಣಕಾಸು ಸಚಿವರಾದ ಅಮಿತ್ ಮಿತ್ರಾ (ಪಶ್ಚಿಮ ಬಂಗಾಳ), ಮನ್‌ಪ್ರೀತ್ ಸಿಂಗ್ ಬಾದಲ್ (ಪಂಜಾಬ್), ರಾಮೇಶ್ವರ ಒರಾನ್ (ಜಾರ್ಖಂಡ್), ಟಿ.ಎಸ್. ಸಿಂಗ್ ಡಿಯೋ (ಛತ್ತೀಸ್‌ಗಢ), ಕೆ.ಎನ್. ಬಾಲಗೋಪಾಲ್ (ಕೇರಳ) ಮತ್ತು ಪಿ.ಟಿ.ಆರ್. ಪಳನಿವೇಲ್ ತ್ಯಾಗರಾಜನ್ (ತಮಿಳುನಾಡು) ಸಭೆಯಲ್ಲಿ ಭಾಗವಹಿಸಿದ್ದರು.
gst goods and service tax central government nirmala sitharaman newdelhi west bengal punjab jharkhand chhattisgarh kerala tamil nadu rajasthan ಜಿಎಸ್ ಟಿ ಕೇಂದ್ರ ಸರ್ಕಾರ ನವದೆಹಲಿ ಪಶ್ಚಿಮ ಬಂಗಾಳ ಜಾರ್ಖಂಡ್ ಕೇರಳ ತಮಿಳುನಾಡು
Seven non-BJP-ruled States raised demand to grant GST loss compensation in at a virtual meeting hosted by Rajasthan Minister Shanti Dhariwal.
ಭ್ರಷ್ಟಾಚಾರ ವಿರುದ್ಧ ಸಮರ ಸಾರಿ ·
Haveri December 17, 2018 2:49 AM
ಶಿಗ್ಗಾಂವಿ: ಇಂದಿನ ಯುವಜನ ಜಾಗೃತಗೊಂಡು ಭ್ರಷ್ಟಾಚಾರ ನಿಮೂಲನೆಗೆ ತೊಡೆ ತಟ್ಟಿ ನಿಂತಾಗ ನಾಡಿನ ಅಭಿವೃದ್ಧಿ ಸಾಧ್ಯ. ಅಪರಾಧ ಮುಕ್ತ ಸಮಾಜ ನಮ್ಮದಾಗಬೇಕು ಎನ್ನುವ ಕಲ್ಪನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ ಎಂದು ಬೆಳಕು ಟ್ರಸ್ಟ್ ಗೌರವಾಧ್ಯಕ್ಷ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಪಟ್ಟಣದ ವಾಲ್ಮೀಕಿ ಸಭಾಭವನದಲ್ಲಿ ಭಾನುವಾರ ಜರುಗಿದ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ರಂಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ತಡೆಯುವ ಶಕ್ತಿ ಯುವ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇದನ್ನು ಅಭಿಯಾನದ ರೂಪದಲ್ಲಿ ಪ್ರತಿ ಗ್ರಾಮದಲ್ಲೂ ಪ್ರಯೋಗಿಸಬೇಕು. ನಾಡು, ನುಡಿ, ಸಾಹಿತ್ಯದ ಸಂರಕ್ಷಣೆಯ ಜತೆಗೆ ನಮಗೆ ಅಂಟಿಕೊಂಡ...
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಅಂತಹ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆಗಾಗಿ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ಬಂಕಾಪುರದಲ್ಲಿ ರನ್ನ, ಸವಣೂರಿನಲ್ಲಿ ವಿ.ಕೃ. ಗೋಕಾಕ ಸ್ಮಾರಕ ನಿರ್ವಣವಾಗಬೇಕು ಎಂದರು.
25 ಕಿ.ಮೀ. ದೂರದ ಬೇಡ್ತಿ-ವರದಾ ನದಿಯನ್ನು ಜೋಡಣೆ ಮಾಡುವ ಮೂಲಕ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರೆ, ದೇಶದಲ್ಲೇ ನದಿ ಜೋಡಣೆಯ ಪ್ರಥಮ ಪ್ರಯೋಗ ಇದಾಗಲಿದೆ ಎಂದರು.
ಜಾವಿವಿ ಕುಲಪತಿ ಪೊ›.ಡಿ.ಬಿ. ನಾಯಕ ಮಾತನಾಡಿದರು. ಹಿರಿಯ ಸಾಹಿತಿ ವಿ.ಸಿ. ಐರಸಂಗ ಸಮ್ಮೇಳನ ಉದ್ಘಾಟಿಸಿದರು. ವಿರಕ್ತಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷೆ ನಿರ್ಮಲಾ ಯಲಿಗಾರ, ಜಾನಪದ ತಜ್ಞ ಡಾ.ಶ್ರೀಶೈಲ ಹುದ್ದಾರ, ಬೆಳಕು ಟ್ರಸ್ಟ್​ನ ಜಿಲ್ಲಾಧ್ಯಕ್ಷ ನಾಗಪ್ಪ ಬೆಂತೂರ, ಬಸವರಾಜ ಹಡಪದ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ...
ಇದೇ ಸಂದರ್ಭದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ಕಚೇರಿ ಮೈದಾನದಿಂದ ಸಮ್ಮೇಳನಾಧ್ಯಕ್ಷೆ ನಿರ್ಮಲಾ ಯಲಿಗಾರ ಅವರನ್ನು ವಿವಿಧ ವಾದ್ಯ ವೈಭವ ಕಲಾ ರೂಪಕಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಹೊರ ಜಗತ್ತಿಗೆ ಜ್ಞಾನ ಪರಿಚಯಿಸಲಿ: ಶರೀಫರು ತಮ್ಮ ನುಡಿಯಲ್ಲಿ ಮಹಿಳೆಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಹೆಣ್ಣು ಮಗಳು ಹೊಸ್ತಿಲ ಮೇಲಿಟ್ಟಿರುವ ದೀಪ, ಅದು ಹೊರಗೂ, ಒಳಗೂ ಬೆಳಕು ನೀಡುತ್ತದೆ. ಇದನ್ನು ಅರ್ಥೈಸಿಕೊಂಡಾಗ ಮಹಿಳೆ ಬಗ್ಗೆ ನಿಜವಾದ ಗೌರವ ಮೂಡಲು ಸಾಧ್ಯ ಎಂದು ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ನಿರ್ಮಲಾ ಯಲಿಗಾರ ಹೇಳಿದರು.
ತಮ್ಮ ಭಾಷಣದುದ್ದಕ್ಕೂ ಮಹಿಳೆಯರು ಮನೆಗೆ ಸೀಮಿತವಾಗದೆ, ತಮ್ಮಲ್ಲಿರುವ ಜ್ಞಾನವನ್ನು ಹೊರ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡಬೇಕು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ಅಕ್ಷರದ ಮೂಲಕ ನಾಡಿನ ಸಾಹಿತ್ಯ ಬೆಳೆಸುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ತಮ್ಮ ಸ್ವರಚಿತ ಕವನ 'ನಾಕಾಣೆ ಕಾಸಿನಲಿ ಏನೇನು ಕನಸು ಕಂಡೆ' ಎಂಬುದನ್ನು ವಿವರಿಸಿದರು.
ಏಕೀಕರಣದ ಧ್ವನಿಗೆ ಜನ್ಮ ನೀಡಿದ ಉತ್ತರ ಕರ್ನಾಟಕ ಎಂದೂ ಪ್ರತ್ಯೇಕತೆ ಬಯಸುವುದಿಲ್ಲ. ಆದರೆ, ಅನ್ನದಾತನ ಸಮಸ್ಯೆ, ಆತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವಂತಾಗಬೇಕು. ನಂಜುಂಡಪ್ಪ, ಸರೋಜಿನಿ ಮಹಿಷಿ ವರದಿ, ಮಹದಾಯಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ಜನರ ಧ್ವನಿಯನ್ನು ಅಲಕ್ಷಿಸದೆ ಅನುಷ್ಠಾನಕ್ಕೆ ತಂದಾಗ ವಿಶ್ವಾಸ ಗಳಿಸಲು ಸಾಧ್ಯ. ಇಲ್ಲದಿದ್ದರೆ, ಪ್ರಜಾಪ್ರಭುತ್ವದ ಮೇಲೆ ಇದ್ದ ...
AgainstConferenceCorruptionDistrictLightLiterarytripleWarಜಿಲ್ಲಾತ್ರಿವಳಿಬೆಳಕುಭ್ರಷ್ಟಾಚಾರವಿರುದ್ಧಸಮರಸಮ್ಮೇಳನಸಾಹಿತ್ಯ
ಸ್ವತಂತ್ರ ಭಾರತದ ಮೊದಲ ಮತದಾರ ನೇಗಿಯಿಂದ ಮತದಾನ | 102-Year-Old Who Voted In Independent India's 1st Polls Votes In Himachal - Kannada Oneindia
6 hrs ago ಮೊಬೈಲ್ ಫೋನ್ ಸಂಖ್ಯೆಯನ್ನು 10 ರಿಂದ 11 ಅಂಕಿಗೇರಿಸಿ: ಟ್ರಾಯ್
7 hrs ago ಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆ
| Updated: Sunday, May 19, 2019, 16:44 [IST]
'ನನ್ನ ಹಾಗೆ ಈ ಪವಿತ್ರ ಮತ್ತು ಜವಾಬ್ದಾರಿಯುತ ಹಕ್ಕನ್ನು ಎಲ್ಲರೂ ಅದರಲ್ಲೂ ಇಂದಿನ ಯುವಕರು ತಪ್ಪದೆ ಚಲಾಯಿಸಬೇಕು' ಎಂದು ಪ್ರತಿ ಬಾರಿ ಕಿವಿಮಾತು ಹೇಳುವ ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರ 102 ವರ್ಷ ವಯಸ್ಸಿನ ಶ್ಯಾಮ್ ಶರಣ್ ನೇಗಿ ಅವರು ಭಾನುವಾರದಂದು ತಮ್ಮ ಹಕ್ಕು ಚಲಾಯಿಸಿದರು.
ಹಿಮಾಚಲದ ಸೇಬು ತೋಟಗಳ ಮಧ್ಯೆಯಿರುವ ಕಿಣ್ಣಾರ್ ಜಿಲ್ಲೆಯ ಮಂಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ಪ ಗ್ರಾಮದ ನಿವಾಸಿ ಎಸ್ಎಸ್ ನೇಗಿ. ಪತ್ನಿ ಜತೆಗೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ. ಹಾಗೆಯೇ, ಮೊಮ್ಮಕ್ಕಳು ಅನೇಕ ಮರಿಮೊಮ್ಮಕ್ಕಳು ಸಹ ಇದ್ದಾರೆ. ಶಿಮ್ಲಾದಿಂದ 250 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ನೆಲೆಸಿರುವ ಹಿರಿಯಜ್ಜ ತಮ್ಮ ಊರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಒಟ...
ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇವರೇ...
ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಯಲ್ಲಿ ನೇಗಿ ತಮ್ಮ ಮತ ಚಲಾಯಿಸಿದ್ದಾರೆ. 2007ರಲ್ಲಿ ಐಎಎಸ್ ಅಧಿಕಾರಿ ಮನೀಶ್ ನಂದಾ (ಈಗ ಹಿಮಾಚಲ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಅವರು ಮೊದಲ ಬಾರಿಗೆ ನೇಗಿ ಅವರ ಗುರುತು ಪತ್ತೆ ಹಚ್ಚಿ, ಭಾರತದ ಮೊದಲ ಮತದಾರ ಎಂದು ಗುರುತಿಸಿದರು.
2012ರಲ್ಲಿ ಆಗಿನ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಸ್ವತಃ ನೇಗಿ ಅವರ ಮನೆಗೆ ತೆರಳಿ, ಸನ್ಮಾನ ಕೂಡ ಮಾಡಿದ್ದರು. 2014ರ ಚುನಾವಣೆ ವೇಳೆ ಗೂಗಲ್ ನಿಂದ 'ಮತದಾನಕ್ಕೆ ಬದ್ದ' ಅಭಿಯಾನದ ಭಾಗವಾಗಿ ನೇಗಿ ಅವರ ಬಗ್ಗೆ ವಿಡಿಯೋ ಮಾಡಲಾಗಿತ್ತು.
ಮತದಾನದ ಹಕ್ಕನ್ನು ಚಲಾಯಿಸಿ, ಪ್ರಾಮಾಣಿಕ ನಾಯಕನ ಕೈಗೆ ಸರಕಾರದ ಚುಕ್ಕಾಣಿ ನೀಡುವಂತಾಗಬೇಕು. ಮುಂದೆ, ಭಷ್ಟಾಚಾರವನ್ನು ಕೊನೆಗಾಣಿಸುವುದು ಮತ್ತು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸುವುದು ಆ ಪ್ರಾಮಾಣಿಕ ನಾಯಕನ ಆದ್ಯ ಕರ್ತವ್ಯವಾಗಬೇಕು ಎಂದು ಎಸ್ಎಸ್ ನೇಗಿ ಆಶಿಸಿದ್ದಾರೆ ಎಂದು ಅವರ ಪುತ್ರ ಹೇಳಿದರು.
ಇನ್ನಷ್ಟು himachal pradesh ಸುದ್ದಿಗಳು
ಏಪ್ರಿಲ್.20ರಿಂದ ಬದಲಾಗುತ್ತಾ ಭಾರತದ ಚಿತ್ರಣ; ಟೀ ಬೆಳೆಗಾರರ ನಿರೀಕ್ಷೆ
ಪತ್ರಕರ್ತನಿಗೂ ಅಂಟಿಕೊಂಡಿತು ಕೊರೊನಾ ಸೋಂಕು
ಇಲ್ಲಿ ಅಜ್ಜನೇ ಟೋಲ್‌ಗೇಟ್: ಸುಂಕ ಕೊಡದೆ ಮುಂದೆ ಹೋಗುವಂತೆ ಇಲ್ಲ!
ಬಹುಮಹಡಿ ಕಟ್ಟಡ ಕುಸಿತ, ಅವಶೇಷದಡಿ 35 ಮಂದಿ ಯೋಧರು!
ಕಮರಿಗೆ ಉರುಳಿದ ಬಸ್: ಕನಿಷ್ಠ 25 ಪ್ರಯಾಣಿಕರು ಸಾವು
himachal pradesh shimla lok sabha elections 2019 voter ಮತದಾರ ಶಿಮ್ಲಾ ಲೋಕಸಭೆ ಚುನಾವಣೆ 2019
Shyam Saran Negi, a 102-year-old voter who also participated in the the country's first general elections in 1951, voted today in a picturesque hamlet in Kinnaur district of Himachal Pradesh where voting is being held in four parliamentary seats.
ಪ್ರಸ್ತುತ ವಿವಾದಿತ ಕೃಷಿ ಕಾನೂನು ಹಿಂಪಡೆಯದಿದ್ದಲ್ಲಿ ಭಗತ್ ಸಿಂಗ್ ಸಂಬಂಧಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ – Prasthutha
ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿವಾದಿತ ಕೃಷಿ ಕಾನೂನು ಹಿಂಪಡೆಯುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸಂಬಂಧಿ ಅಭಯ್ ಸಂಧು ಎಚ್ಚರಿಕೆ ನೀಡಿದ್ದಾರೆ.
1906ರಲ್ಲಿ ಬ್ರಿಟಿಷರು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿ ರೈತರು ಪಗಡಿ ಸಂಭಾಲ್ ಜಟ್ಟಾ ಆಂದೋಲವನ್ನು ಕಟ್ಟಿದ್ದರು. ಈಗ ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತೆ ಶತಮಾನದ ಹಿಂದಿನ ಆಂದೋಲನವಾದ ಪಗಡಿ ಸಂಭಾಲ್ ಜಟ್ಟಾವನ್ನು ಸ್ಮರಿಸಿ ಅದಕ್ಕೆ ಚಾಲನೆ ನೀಡಿದ್ದಾರೆ.
ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಆಯೋಜನೆಗೊಂಡಿದ್ದ ಈ ಪ್ರತಿಭಟನೆಯಲ್ಲಿ ಸಂಧು ಕೂಡ ಭಾಗಿಯಾಗಿದ್ದಾರೆ.
ಮಾ.23ರಂದು ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ದಿನವಾಗಿದೆ. ಈ ದಿನದ ವರೆಗೆ ಅಭಯ್ ಸಂಧು ಕೇಂದ್ರಕ್ಕೆ ಗಡುವು ನೀಡಿದ್ದು, ಒಂದು ವೇಳೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಂಧು ಹೇಳಿದ್ದಾರೆ.
6582 ಕೇರಳ ಮಹಿಳೆಯರಿಂದ ಗಿನ್ನಿಸ್ ವಿಶ್ವ ದಾಖಲೆ | News13
News13 > ಸುದ್ದಿಗಳು > ರಾಷ್ಟ್ರೀಯ > 6582 ಕೇರಳ ಮಹಿಳೆಯರಿಂದ ಗಿನ್ನಿಸ್ ವಿಶ್ವ ದಾಖಲೆ
6582 ಕೇರಳ ಮಹಿಳೆಯರಿಂದ ಗಿನ್ನಿಸ್ ವಿಶ್ವ ದಾಖಲೆ
ಕಜಿಕ್ಕಂಬಳಮ್ : 21 ರಾಜ್ಯಗಳ ಸುಮಾರು 6582 ಮಹಿಳೆಯರು ನೃತ್ಯ ಪ್ರದರ್ಶನ ನೀಡಿದ್ದು, ಇದೀಗ ಗಿನ್ನಿಸ್ ವಿಶ್ವ ದಾಖಲೆ ಸೇರಿದೆ.
ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ರಾಜ್ಯಗಳ 10 ರಿಂದ 75 ವರ್ಷ ವಯೋಮಾನದ 6582 ಮಹಿಳೆಯರು 16 ನಿಮಿಷಗಳ ನೃತ್ಯವನ್ನು ಪ್ರದರ್ಶಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವಾತಿರಕ್ಕಳಿಯನ್ನು ಪ್ರದರ್ಶಿಸಲಾಯಿತು.
ಕೇರಳದ ಸಂಪ್ರದಾಯಿಕ ತೊಡುಗೆಯಾದ ಗೋಲ್ಡ್ ಬಾರ್ಡರ್ ಇರುವ ಮುಂಡು ಮತ್ತು ನೆರಿಯಟ್ಟು ತೊಟ್ಟು, ವೃತ್ತಾಕಾರದಲ್ಲಿ ಸಾಂಪ್ರದಾಯಿಕ ಗೀತೆಗೆ ಎಲ್ಲರೂ ಹೆಜ್ಜೆ ಹಾಕಿದರು.
ಈ ಕಾರ್ಯಕ್ರಮವನ್ನು ಟ್ವೆಂಟಿ೨೦, ಕಿಟೆಕ್ಸ್ ಗ್ರೂಪ್ಸ್, ಚವಾರಾ ಕಲ್ಚರಲ್ ಸೆಂಟರ್ ಮತ್ತು ಪರ್ವನೇಂದು ಸ್ಕೂಲ್ ಆಫ್ ತಿರುವತ್ತಿರ ಜಂಟಿಯಾಗಿ ಆಯೋಜಿಸಿದ್ದವು.
ಕೇರಳೀಯರನ್ನು ಒಗ್ಗೂಡಿಸಲು, ಕೋಮು ಸೌಹಾರ್ದತೆ, ಮಹಿಳೆಯರ ಸಬಲೀಕರಣ ಮತ್ತು ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯಾವುದೇ ದಾಖಲೆಗಾಗಿ ಇದನ್ನು ಆಯೋಜಿಸಿದ್ದಲ್ಲ ಎಂದು ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಟ್ವೆಂಟಿ20 ಅಧ್ಯಕ್ಷ ಸಬು ಜಾಕೋಬ್ ಅವರು ಹೇಳಿದರು.
ಸಂಸದರಿಂದ ಬೆದರಿಕೆ : ಜಿಲ್ಲಾಧಿಕಾರಿ ಎದುರೇ ಅಧಿಕಾರಿಗೆ ಅವಾಜ್ ಹಾಕಿದ ಮಂಡ್ಯ ಸಂಸದ... - Just Kannada - Online Kannada News
Home FrontPage ಸಂಸದರಿಂದ ಬೆದರಿಕೆ : ಜಿಲ್ಲಾಧಿಕಾರಿ ಎದುರೇ ಅಧಿಕಾರಿಗೆ ಅವಾಜ್ ಹಾಕಿದ ಮಂಡ್ಯ ಸಂಸದ…
ಸಂಸದರಿಂದ ಬೆದರಿಕೆ : ಜಿಲ್ಲಾಧಿಕಾರಿ ಎದುರೇ ಅಧಿಕಾರಿಗೆ ಅವಾಜ್ ಹಾಕಿದ ಮಂಡ್ಯ ಸಂಸದ…
ಮಂಡ್ಯ, ನ.14, 2017 : (www.justkannada.in news ): ಅಕ್ರಮ ಗಣಿಕಾರಿಕೆಗೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಸಂಸದರು ಬೆದರಿಕೆ ಹಾಕಿದ ಘಟನೆ ನಡೆದಿದೆ.
ಮಂಡ್ಯ ಜೆಡಿಎಸ್ ಸಂಸದ ಸಿ.ಎಸ್. ಪುಟ್ಟರಾಜು ಅವರೇ , ಏಕವಚನ ಪ್ರಯೋಗ ಮಾಡಿ ಅಧಿಕಾರಿಗೆ ಬೆದರಿಕೆ ಹಾಕಿದವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ್ ಗೆ ಬೆದರಿಕೆ. ಈ ವೇಳೆ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳದಲ್ಲೇ ಇದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಂಡು ಬಂದಿದೆ.
'ಏಯ್ ಏನ್ ಮಾಡ್ತೀಯಾ ಇಲ್ಲಿ. ನಿನ್ನನ್ನ ಸುಲಭವಾಗಿ ಬಿಡ್ತೀವಾ ಎಂದು ಗಣಿ ಮಾಲೀಕರ ಪರವಾಗಿ ಸಂಸದರು ಬೆದರಿಕೆ ಹಾಕಿದ್ದು, ಎಷ್ಟು ಸಾವಿರ ಜನರನ್ನು ಕರೆಸಬೇಕೋ ಕರಿಸ್ತೀನಿ. ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದರು. ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಅಧಿಕಾರಿಗಳಿಗೆ ಈ ಬೆದರಿಕೆ.
ಜಿಲ್ಲೆಯ ಬೇಬಿ ಬೆಟ್ಟ, ಚಿನಕುರಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ.ಎರಡು ತಿಂಗಳ ನಿಷೇಧ ಹೇರಿದ್ದ ಜಿಲ್ಲಾಧಿಕಾರಿ ಮಂಜುಶ್ರೀ. ಪರಿಣಾಮ ಸಂಸದರ ಒಡೆತನದ ಗಣಿಯೂ ಬಂದ್ . ಈ ಹಿನ್ನಲೆಯಲ್ಲಿ ಅಧಿಕಾರಿಗೆ ಬೆದರಿಕೆ ಆರೋಪ.
ಪರಿಸರ ಇಲಾಖೆಯ ಸಿ ಫಾರಂ ಹಾಗೂ ಅಕ್ರಮದ ಹಿನ್ನಲೆಯಲ್ಲಿ ಬಂದ್ ಮಾಡಿಸಿರೋ ಜಿಲ್ಲಾಡಳಿತ. ಗಣಿ ಮಾಲೀಕರನ್ನು ಡಿಸೀ ಕಚೇರಿಗೆ ಕರೆತಂದಿದ್ದ ಸಂಸದ ಪುಟ್ಟರಾಜು. ಡಿಸಿ, ಅಪರ ಡಿಸಿ, ಇಬ್ಬರು ಎಸಿ ಗಳ ಸಮ್ಮುಖದಲ್ಲೇ ಅಧಿಕಾರಿಗೆ ಬೆದರಿಕೆ ಹಾಕಿದ ಸಂಸದ ಪುಟ್ಟರಾಜು. ಹೇರಿಕೆ ಮಾಡಿರುವ ನಿಷೇದಾಜ್ಞೆ ಹಿಂಪಡೆಯಲು ಒತ್ತಡ. ಒತ್ತಡಕ್ಕೆ ಮಣಿಯದಕ್ಕೆ ಅಧಿಕಾರಿಗಳಿಗೆ ಧಮಕಿ.
ಇಲ್ಲಿದೆ ನೋಡಿ ಆವಾಜ್ ಹಾಕಿದ ವಿಡೀಯೋ….
key words : mandya-mining-mp-putaraju-threat-police
mandya mp takes government officer in front of dc
Previous articleಸಾಯಿ ಎಕ್ಸ್‌ಫೋರ್ಟ್ ಗಾರ್ಮೆಂಟ್ಸ್ ಕಾರ್ಖಾನೆ ಸ್ಥಳಾಂತರಕ್ಕೆ ವಿರೋಧ: ಮಹಿಳಾ ಕಾರ್ಮಿಕರ ಅಹೋರಾತ್ರಿ ಧರಣಿ
ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್‌! | Muslim youth Yakub stand with his friend Amrit till his last breath
Bangalore, First Published May 18, 2020, 7:53 AM IST
ಭೋಪಾಲ್(ಮೇ.18)‌: ಆ ಟ್ರಕ್‌ನಲ್ಲಿ 50-60 ಜನರಿದ್ದರು. ಎಲ್ಲರೂ ವಲಸೆ ಕಾರ್ಮಿಕರು. ಗುಜರಾತ್‌ನ ಸೂರತ್‌ನಿಂದ ಉತ್ತರ ಪ್ರದೇಶದಲ್ಲಿರುವ ತಮ್ಮೂರಿಗೆ ಹೊರಟಿದ್ದರು. ಸಾವಿರಾರು ಕಿ.ಮೀ. ಪ್ರಯಾಣ. ನಿಂತುಕೊಂಡು ಹೋಗುವುದಕ್ಕೇ ಅವರೆಲ್ಲ ತಲಾ 4000 ರು. ಪಾವತಿಸಿದ್ದರು! ಈ ಪ್ರಯಾಣದ ಮಧ್ಯೆ ನಡೆದ ಘಟನೆಯೊಂದು ಇಂಟರ್ನೆಟ್‌ನಲ್ಲೀಗ ವೈರಲ್‌ ಆಗಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಟ್ರಕ್‌ ಸಾಗುತ್ತಿದ್ದಾಗ ಅಮೃತ್‌ ಎಂಬ ಕಾರ್ಮಿಕನಿಗೆ ವಾಂತಿ ಆರಂಭವಾಗಿದೆ. ಕೊರೋನಾ ಇರಬಹುದು ಎಂದು ಹೆದರಿದ ಇತರ ಕಾರ್ಮಿಕರು ಬಲವಂತ ಮಾಡಿ ಅವನನ್ನು ಇಳಿಸಿದ್ದಾರೆ. ಟ್ರಕ್‌ ಮುಂದೆ ಹೊರಡುತ್ತಿದ್ದಂತೆ ಅದರಲ್ಲಿದ್ದ ಅವನ ಸ್ನೇಹಿತ ಯಾಕೂಬ್‌ ಮೊಹಮ್ಮದ್‌ ಕೆಳಗೆ ಜಿಗಿದು ಅಮೃತ್‌ನ ರಕ್ಷಣೆಗೆ ಧಾವಿಸಿದ್ದಾನೆ. ಅಮೃತ್‌ ಉಸಿರಾಡ...
ನಂತರ ದಾರಿಹೋಕರೊಬ್ಬರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಶಿವಪುರಿ ಜಿಲ್ಲಾಸ್ಪತ್ರೆಯಲ್ಲಿ ಕೃತಕ ಉಸಿರಾಟ ನೀಡಿದರೂ ಅಮೃತ್‌ ಕೆಲವೇ ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ. ಸ್ನೇಹಿತರಿಬ್ಬರಿಗೂ ಕೊರೋನಾ ಟೆಸ್ಟ್‌ ಮಾಡಿದ್ದು, ವರದಿ ಬರುವವರೆಗೆ ಯಾಕೂಬ್‌ಗೆ ಆಸ್ಪತ್ರೆಯಲ್ಲೇ ಇರಲು ಸೂಚಿಸಲಾಗಿದೆ. ಶವಾಗಾರದಲ್ಲಿರುವ ಗೆಳೆಯನ ಶವವನ್ನು ಯಾವಾಗ ತನಗೆ ಹಸ್ತಾಂತರಿಸುತ್ತಾರೆಂದು ಕಾಯುತ್ತಾ ಯಾಕೂಬ್‌ ಅಲ...
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಎಸ್.ಬಿ. ಸಿದ್ನಾಳ್ ನಿಧನ | Udayavani – ಉದಯವಾಣಿ
Team Udayavani, Apr 27, 2021, 9:54 AM IST
ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಮಾಜಿ ಸಂಸದ, ಹಿರಿಯ ರಾಜಕಾರಣಿ ಎಸ್.ಬಿ.‌ ಸಿದ್ನಾಳ(85) ಅವರು ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಬಿ. ಸಿದ್ನಾಳ ಅವರು ಮನೆಯಲ್ಲಿಯೇ ಇದ್ದರು.‌ ಕೆಲ‌ ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗುರುತಿಸಿಕೊಂಡಿರಲಿಲ್ಲ. ಬೈಲಹೊಂಗಲ ತಾಲೂಕಿನ‌ ಸಾಣೆಕೊಪ್ಪ ಗ್ರಾಮದ ಫಾರ್ಮ್‌ ಹೌಸ್ ನಲ್ಲಿ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ12ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಯ ಸುಮಾರಿಗೆ ಸಾಣೆಕೊಪ್ಪದ ಹೊಲದಲ್ಲಿಯೇ ಅಂತ್ಯಕ್ರಿಯೆ ನೆರವೇರ...
ಮೂಲತಃ ಬೈಲಹೊಂಗಲ ತಾಲೂಕಿನ‌ ಸಂಪಗಾಂವ ಗ್ರಾಮದ ಎಸ್.ಬಿ.‌ಸಿದ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರಾಗಿದ್ದಾರೆ. ಇವರ ತಂದೆ ಬಸಪ್ಪ ಸಿದ್ನಾಳ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮೂಲತಃ ಕೃಷಿಕರು ಹಾಗೂ ವಕೀಲರಾಗಿದ್ದ ಎಸ್.ಬಿ. ಸಿದ್ನಾಳ 1978ರಲ್ಲಿ ಬೆಳಗಾವಿಗೆ ಬಂದು 1979ರಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ:ಮೇ 1ರಂದು ಭಾರತಕ್ಕೆ ಮೊದಲ ಹಂತದ ಸ್ಫುಟ್ನಿಕ್-5 ಲಸಿಕೆ ಸರಬರಾಜು: ರಷ್ಯಾ
ನಂತರ 1980ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.‌ ಬಳಿಕ 1984, 1989 ಹಾಗೂ 1991ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ನಡೆದ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಸಿಗಲಿಲ್ಲ.‌ ಇದಕ್ಕೂ ಮುನ್ನ ಕಿತ್ತೂರು ಮತ ಕ್ಷೇತ್ರದಿಂದ ವಿಧಾನಸಭೆಗೆ 1972ರಲ್ಲಿ ಬಿ.ಡಿ.‌ ಇನಾಮದಾರ ಅವರ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು.
ವ್ಯಾಸ ಪೂಜೆ, 31 ಆಗಸ್ಟ್, 2021 – ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ
ವ್ಯಾಸ ಪೂಜೆ, 31 ಆಗಸ್ಟ್, 2021
ಇಸ್ಕಾನ್‌ನ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಆವಿರ್ಭಾವ ದಿನವನ್ನು ವ್ಯಾಸ ಪೂಜೆಯಾಗಿ ಆಚರಿಸಲಾಗುತ್ತದೆ. ಶ್ರೀಲ ಪ್ರಭುಪಾದರು 1896 ರಲ್ಲಿ, ನಂದೋತ್ಸವದಂದು (ಜನ್ಮಾಷ್ಟಮಿಯ ಮರುದಿನ) ಜನಿಸಿದರು.
ವೇದಗಳು ಮೂಲತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಂದ ಹೊರಹೊಮ್ಮಿದವು. ಶ್ರೀ ಕೃಷ್ಣನು ವೈದಿಕ ಜ್ಞಾನವನ್ನು ವಿಶ್ವದ ಸೃಷ್ಟಿಕರ್ತ ಬ್ರಹ್ಮನಿಗೆ ನೀಡಿದನು. ಬ್ರಹ್ಮನು ಅದನ್ನು ತನ್ನ ಪುತ್ರ ನಾರದದೇವರಿಗೆ ಬೋಧಿಸಿದನು. ನಾರದರು ಅದನ್ನು ವ್ಯಾಸದೇವರಿಗೆ ಬೋಧಿಸಿದರು. ವ್ಯಾಸದೇವರು ವೈದಿಕ ಜ್ಞಾನವನ್ನು ಬರೆದಿಟ್ಟರು. ತಮ್ಮ ಆಧ್ಯಾತ್ಮಿಕ ಗುರು ಶ್ರೀ ನಾರದರ ಆದೇಶದಂತೆ ವ್ಯಾಸದೇವರು ಶ್ರೀಮದ್ ಭಾಗ...
ವ್ಯಾಸದೇವರಿಂದ ಬರುವ ಗುರು ಪರಂಪರೆಯ ಆಧ್ಯಾತ್ಮಿಕ ಗುರುವನ್ನು ವ್ಯಾಸದೇವರ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ಈ ಗುರು ಶಿಷ್ಯ ಪರಂಪರೆಯಲ್ಲಿ ಶ್ರೀಲ ಪ್ರಭುಪಾದರು 32 ನೆಯ ಆಚಾರ್ಯರಾಗಿದ್ದಾರೆ ಮತ್ತು ಅವರ ಶಿಷ್ಯರು ಅವರ ಆವಿರ್ಭಾವ ದಿನವನ್ನು ವ್ಯಾಸ ಪೂಜೆಯಾಗಿ ಆಚರಿಸುವರು.
ಇಸ್ಕಾನ್ ಭಕ್ತರಿಗೆ ಇದು ವರ್ಷದ ಅತ್ಯಂತ ಮುಖ್ಯ ಉತ್ಸವವಾಗಿದೆ. ಭಕ್ತರು ಮಧ್ಯಾಹ್ನದವರೆಗೆ ಉಪವಾಸ ಇರುತ್ತಾರೆ. ಆಧ್ಯಾತ್ಮಿಕ ಗುರುಗಳಿಗೆ ಅರ್ಪಿಸಲು ಅನೇಕ ವಿಧವಾದ ಭಕ್ಷ್ಯಗಳನ್ನು ತಯಾರಿಸಲಾಗುವುದು ಮತ್ತು ಆಚಾರ್ಯರು ಅದನ್ನು ಶ್ರೀ ಕೃಷ್ಣನಿಗೆ ಸಮರ್ಪಿಸುವರು. ಶ್ರೀಲ ಪ್ರಭುಪಾದರನ್ನು ಕೊಂಡಾಡಿ ಬರೆದಿರುವ ಗೌರವ ಸಮರ್ಪಣೆಯನ್ನು ಭಕ್ತರು ಓದುವರು. ಭವ್ಯವಾದ ಅಭಿಷೇಕವನ್ನು ನೆರವೇರಿಸಲಾಗುವುದು. ...
ಗುಲ್ಬರ್ಗ: 69 ಪಿಡಿಒಗಳ ರಾಜೀನಾಮೆ | Prajavani
ಗುಲ್ಬರ್ಗ: 69 ಪಿಡಿಒಗಳ ರಾಜೀನಾಮೆ
Published: 18 ಅಕ್ಟೋಬರ್ 2011, 01:00 IST
Updated: 18 ಅಕ್ಟೋಬರ್ 2011, 01:00 IST
ಗುಲ್ಬರ್ಗ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಜನಪ್ರತಿನಿಧಿಗಳು ಅವಕಾಶ ನೀಡುತ್ತಿಲ್ಲ. ಅಲ್ಲದೆ, ಪಿಡಿಒಗಳ ಮೇಲೆ ಹಲ್ಲೆ ನಡೆದ ಘಟನೆಗಳ ಬಗ್ಗೆ ಸರ್ಕಾರ ಕ್ರಮ ಜರುಗಿಸುತ್ತಿಲ್ಲ ಎಂದು ಮನನೊಂದು ಜಿಲ್ಲೆಯ 69 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಸೋಮವಾರ ಇಲ್ಲಿ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.
ತಾಲ್ಲೂಕಿನ ಸಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಮಂದಾಕಿನಿ ಭಾನುವಾರ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಮರುದಿನವೆ ಜಿಲ್ಲೆಯ ಒಟ್ಟು 89 ಪಿಡಿಒಗಳಲ್ಲಿ 69 ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಬೀದರ್, ಕೊಪ್ಪಳ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಿಡಿಒಗಳ ಮೇಲೆ ತೀವ್ರ ಹಲ್ಲೆ ಘಟನೆ ನಡೆದ ಸಂದರ್ಭದಲ್ಲಿ ಸರ್ಕಾರವು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ಲೇಷಣೆ ಒಳಗೊಂಡ ಒಂದೇ ಪತ್ರದಲ್ಲಿ ಎಲ್ಲ ಪಿಡಿಒಗಳು ಸಹಿ ಮಾಡಿರುವ ರಾಜೀನಾಮೆ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರ ಸ್ವೀಕರಿಸಿರುವ ಸಿಇಒ ವಿಜಯಕುಮಾರ್, ~ಈ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಔಪಚಾರಿಕವಾಗಿ ಎಲ್ಲರೂ ಪ್ರತ್ಯೇಕವಾಗಿ ರಾಜೀನಾಮೆ ನೀಡಿದರಷ್ಟೇ ಅದನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ~ ಎಂ...
ಸಾಮೂಹಿಕ ರಜೆ
ಮುದ್ದೇಬಿಹಾಳ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ಜಿಲ್ಲೆಯ ವಿವಿಧೆಡೆ ಆಗಾಗ್ಗೆ ಹಲ್ಲೆ ನಡೆಯುತ್ತಿದ್ದರೂ ಯಾವುದೇ ಕ್ರಮ ಜರುಗಿಸದಿರುವುದನ್ನು ಖಂಡಿಸಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ ನೌಕರರು ಸಾಮೂಹಿಕ ರಜೆ ಹಾಕುವ ನಿರ್ಧಾರ ತೆಗೆದುಕೊಂಡರು.
ಧಾರವಾಡ ವರದಿ: ಧಾರವಾಡದಲ್ಲಿಯೂ ಪಿಡಿಒಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಪ್ರತಿಭಟಿಸಿದರು.
ಶೃಂಗೇರಿಯಲ್ಲಿ ಸಿಎಂಗೆ ಸಿಕ್ತಾ ಪುತ್ರನ ಸೋಲಿನ ಸೂಚನೆ ? ಅಲ್ಲಿ ಸಂಭವಿಸಿದ ಅಪಶಕುನವೇನು? | The News 24 Kannada
Homeರಾಜ್ಯಶೃಂಗೇರಿಯಲ್ಲಿ ಸಿಎಂಗೆ ಸಿಕ್ತಾ ಪುತ್ರನ ಸೋಲಿನ ಸೂಚನೆ ? ಅಲ್ಲಿ ಸಂಭವಿಸಿದ ಅಪಶಕುನವೇನು?
March 19, 2019 - 7:02 AM
ಶೃಂಗೇರಿಯಲ್ಲಿ ಸಿಎಂಗೆ ಸಿಕ್ತಾ ಪುತ್ರನ ಸೋಲಿನ ಸೂಚನೆ ? ಅಲ್ಲಿ ಸಂಭವಿಸಿದ ಅಪಶಕುನವೇನು?
ಮಾರ್ಚ್ 19, ಶೃಂಗೇರಿ : ಮಗನ ಬಿ ಫಾರಂಗೆ ಪೂಜೆ ಸಲ್ಲಿಸಲೆಂದು ಶೃಂಗೇರಿಗೆ ತೆರಳಿದ್ದ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಿಂತೆ ಹೆಚ್ಚಾದಂತಿದೆ. ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಕುಟುಂಬಕ್ಕೆ ಅಶುಭ ಸೂಚನೆ ಸಿಕ್ಕಿದೆ.
ತೋರಣ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಹರಕೆ ಸಲ್ಲಿಕೆಗಾಗಿ 9 ಇಡುಗಾಯಿ ಒಡೆಯಬೇಕಿತ್ತು. ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಒಂದೊಂದು ಕಾಯಿಯನ್ನು ಒಡೆದರು. ಇದೇ ವೇಳೆ ನಿಖಿಲ್ 5 ತೆಂಗಿನ ಕಾಯಿ ಒಡೆಯಲು ಮುಂದಾದರು. ಈ ಪೈಕಿ ಒಂದು ಕಾಯಿ ಒಡೆಯಲಿಲ್ಲ ಎನ್ನಲಾಗಿದೆ. ಬಳಿಕ ಅರ್ಚಕರು ಒಡೆಯದ ಕಾಯಿಯನ್ನು ತೆಗೆದುಕೊಂಡು ಮತ್ತೆ ಒಡೆದರು ಎನ್ನಲಾಗಿದೆ.
ಇದು ಅಶುಭ ಸೂಚನೆ ಎಂದು ಸ್ಥಳೀಯರು ಮಾತನಾಡಿಕೊಳ್ಳಲಾರಂಭಿಸಿದ್ದಾರೆಆದರೆ ಗಣಪತಿ ಸನ್ನಿಧಾನದಲ್ಲಿ ನಾಲ್ಕು ಒಡೆದರೂ ಒಂದು ಕಾಯಿ ಒಡೆಯದಿರುವುದು ಶುಭ ಸೂಚನೆಯಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದು ತೋರಣ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾಯಿ ಒಡೆದಾಗ ಒಂದು ಕಾಯಿ ಒಡೆದಿರಲಿಲ್ಲ. ಈಗ ಇತಿಹಾಸ ಮರುಕಳಿಸಿರುವುದು ತಳಮಳಕ್ಕೆ ಕಾರಣವಾಗಿದೆ.