text
stringlengths
0
61.5k
7 min ago ನೆಹರೂ ಕುಟುಂಬದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನಟಿ ಬಂಧನ
30 min ago ರೋಬೋಟ್ ಶಿಕ್ಷಕರನ್ನು ಹೊಂದಿರುವ ಭಾರತದ ಮೊದಲ ಶಾಲೆ
43 min ago ದೆಹಲಿಯಲ್ಲಿ ಪೌರತ್ವ ಕಾಯ್ದೆಯ ಬೆಂಕಿಗೆ ಹೊತ್ತಿ ಉರಿದ ಬಸ್
| Published: Tuesday, August 22, 2017, 17:52 [IST]
ಬೆಂಗಳೂರು, ಆಗಸ್ಟ್ 22: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಗಣ್ಯರು ಹಾಗೂ ಜನಪ್ರತಿನಿಧಿಗಳು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಏತನ್ಮಧ್ಯೆ, ಒನ್ ಇಂಡಿಯಾ ಕನ್ನಡ ಕೂಡ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದರ ಒಂದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.
''ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಸ್ವಾಗತಾರ್ಹ. ಆದರೆ, ಈ ತೀರ್ಪನ್ನು ಹಲವಾರು ಮಂದಿ ಒಪ್ಪದಿರಬಹುದು. ಆದರೆ, ಎಲ್ಲರೂ ಈ ವಿಚಾರವನ್ನು ಹೆಣ್ಣು ಹೆತ್ತವರ ನೋವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಆಲೋಚಿಸಿದರೆ ಈ ತೀರ್ಪು ಸಮಂಜಸ ಎಂದು ಗೊತ್ತಾಗುತ್ತದೆ. ಏಕೆಂದರೆ, ಇಂಥ ಹಲವಾರು ಘಟನೆಗಳಿಂದ ಹಲವಾರು ಹೆಂಗಸರ ಜೀವನ ಹಾಳಾಗಿದೆ. ಇಂಥ ಅವಗಢಗಳು ತಪ್ಪಬೇಕು. ಮಹಿಳೆಯರ ಬಾಳು ಸುರಕ್ಷಿತವಾಗಿರಬ...
- ಸಾಅವುದಿಯಾ, ಪತ್ರಕರ್ತೆ
''ಗಂಡು ವಿಚ್ಛೇದನ ನೀಡಿದರೆ ಅದು ತಲಾಖ್. ಹೆಂಡತಿಯೇ ಮುಂದಾಗಿ ವಿಚ್ಛೇದನ ನೀಡಿದರೆ ಅದು ಖುಲಾಸಾ. ಈ ಎರಡಕ್ಕೂ ಶೆರಿಯಾ ಕಾನೂನಿನ ಮಾನ್ಯತೆಯಿದೆ. ಅಪ್ಪಟ ಧಾರ್ಮಿಕ ಚೌಕಟ್ಟಿನಲ್ಲಿ ಇಂಥ ಪ್ರಕರಣಗಳನ್ನು ನಿಭಾಯಿಸಲು ಪ್ರತ್ಯೇಕವಾದ ಮಾರ್ಗಗಳೂ ಇವೆ. ಆದರೆ, ಶೆರಿಯಾ ಕಾನೂನುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಈ ವಿಚಾರದಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಾರೆ. ಮೂರು ಬಾರಿ ಸತತವಾಗಿ ತಲಾಖ್ ಹೇಳಿ...
- ರಫೀಕ್, ಬೆಂಗಳೂರು ನಿವಾಸಿ
''ಮಹಿಳೆಯರ ರಕ್ಷಣೆ ಹಾಗೂ ಜೀವನ ಭದ್ರತೆ ದೃಷ್ಟಿಕೋನದಲ್ಲಿ ಆಲೋಚಿಸುವುದಾದರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಮದುವೆ, ಪತಿ-ಪತ್ನಿ ಬಾಂಧವ್ಯವನ್ನು ಹಗುರುವಾಗಿ ಯಾರೂ ತೆಗೆದುಕೊಳ್ಳಕೂಡದು ಎಂಬ ಕಾಳಜಿ ಈ ತೀರ್ಪಿನ ಹಿಂದಿದೆ. ವಿಚ್ಛೇದನ ನೀಡುವಿಕೆ ಯಾರದೋ ಒಬ್ಬರ ಕ್ಷಣಿಕ ಅಸಮಾಧಾನದ ಕೈಗೊಂಬೆಯಾಗಬಾರದು ಎಂಬುದುನ್ನು ಈ ತೀರ್ಪು ಪುಷ್ಟೀಕರಿಸಿದೆ''
- ರಿಜ್ವಾನಾ, ಶಿಕ್ಷಕಿ (ಬೆಂಗಳೂರು)
''ಮುಸ್ಲಿಂ ಧರ್ಮದ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ, ತ್ರಿವಳಿ ತಲಾಖ್ ಪದ್ಧತಿಯಿಂದ ಹಲವಾರು ಹೆಂಗಳೆಯರಿಗೆ ತೊಂದರೆಯಾಗಿದ್ದನ್ನಂತೂ ನಾನು ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮುಸ್ಲಿಂ ಮಹಿಳೆಯರ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಇನ್ನಾದರೂ, ಅಲ್ಪ ಅಸಮಾಧಾನಗಳಿಗೆ ದಿಢೀರ್ ವಿಚ್ಛೇಧನದಂಥ ಪದ್ಧತಿಗಳಿಗೆ ಮುಕ್ತಿ ಸಿಗಲಿ''
- ರೋಸ್ ಮೇರಿ, ಮಂಗಳೂರು
triple talaq supreme court talaq ತಲಾಖ್ ಸುಪ್ರೀಂ ಕೋರ್ಟ್
Many of the people have expressed their pleasure about the Supreme Court's judgement on Triple Talaq on August 22, 2017.
ಸ್ಯಾಂಡಲ್‌ವುಡ್‌ ಆಯ್ತು ಈಗ ಬಾಲಿವುಡ್‌ನಲ್ಲೂ ಸಂಯುಕ್ತಾ ಹೆಗಡೆ ಕಿರಿಕ್ | ಏನಾದರೂ ಮಾಡದೇ ಇದ್ದರೆ ಸಮಾಧಾನವೇ ಇಲ್ಲ ಈ ಹುಡುಗಿಗೆ? ಲವ್ ಬರ್ಡ್ಸ್ ನಡುವೆ ರಾಂಗ್ ಎಂಟ್ರಿ ಕೊಟ್ರಾ ಸಂಯುಕ್ತಾ?
Bengaluru, First Published Oct 16, 2018, 11:49 AM IST
ಬೆಂಗಳೂರು (ಅ. 16): ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಹೋದಲ್ಲೆಲ್ಲಾ ಏನಾದರೂ ಕಿರಿಕ್ ಇದ್ದದ್ದೇ. ಏನಾದರೂ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ಗೆ ಹೋದಾಗಲೂ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಇನ್ನೊಂದು ರಿಯಾಲಿಟಿ ಶೋ ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಎಂಟಿವಿಯಲ್ಲಿ ಪ್ರಸಾರವಾಗುವ ಸ್ಪ್ಲಿಟ್ಸ್ ವಿಲ್ಲಾ ಡೇಟಿಂಗ್ ರಿಯಾಲಿಟಿ ಶೋಗೆ ಸಂಯುಕ್ತಾ ಹೆಗಡೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು. ಇತರ ಸ್ಪರ್ಧಿಗಳಿಗೆ ಶುರುವಾಗಿದೆ ತಲೆನೋವು. ಈಗ ಎಲ್ಲರೂ ಸೇರಿ ಇವರನ್ನೇ ಹೊರ ಹಾಕಲು ಪ್ಲಾನ್ ನಡೆಸಿದ್ದಾರೆ. ಅಷ್ಟಕ್ಕೂ ಅಂತದ್ದೇನು ಮಾಡಿದ್ರು ಸಂಯುಕ್ತಾ ಅಂತಿರಾ? ಇಲ್ಲೇ ಇದೆ ಮ್ಯಾಟ್ರು..!
ಈ ಶೋ ಸ್ಪರ್ಧಿಗಳಾದ ಸಿಂಬಾ ಹಾಗೂ ಮೈರಾ ನಡುವೆ ಕುಚ್ ಕುಚ್ ಹೋತಾ ಹೈ ಶುರಯವಾಗಿತ್ತು. ಸಂಯುಕ್ತಾ ಎಂಟ್ರಿಯಿಂದ ಸಿಂಬಾ ಮನಸ್ಸು ಈಕೆಯತ್ತ ಜಾರಿದೆ. ಇದರಿಂದ ಮೈರಾ ಗರಂ ಆಗಿದ್ದಾರೆ. ಲವ್ ಬರ್ಡ್ಸ್ ಮಧ್ಯೆ ರಾಂಗ್ ಎಂಟ್ರಿ ಕೊಟ್ಟಿದ್ದಾರೆ ಕಿರಿಕ್ ಹುಡುಗಿ.
ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷ ಜನಾರ್ದನ ರೆಡ್ಡಿಗೆ ಸೇರಿದ್ದಾ? | 60 lakhs seized in Hubballi, belongs to Janardhana reddy? - Kannada Oneindia
» ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷ ಜನಾರ್ದನ ರೆಡ್ಡಿಗೆ ಸೇರಿದ್ದಾ?
ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷ ಜನಾರ್ದನ ರೆಡ್ಡಿಗೆ ಸೇರಿದ್ದಾ?
Published: Monday, November 14, 2016, 13:53 [IST]
ಹುಬ್ಬಳ್ಳಿ, ನವೆಂಬರ್ 14: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಸೋಮವಾರ ಕೇಶ್ವಾಪುರ ಪೊಲೀಸರು ಹೊಸಪೇಟೆಯಿಂದ ಬರುತ್ತಿದ್ದ ವಾಹನವನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಹಣ ಜಪ್ತಿ ಮಾಡಿದ್ದಾರೆ ಎಂಬ ಸುದ್ದಿ ನಗರದಾದ್ಯಂತ ಹರಿದಾಡುತ್ತಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ರುಪಾಯಿ ಹಣವನ್ನು ನಗರದ ಕೇಶ್ವಾಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆಯಿಂದ ಬಂದ ಸ್ಕಾರ್ಪಿಯೋ (ಕೆಎ-35-ಎಂ-8395) ವಾಹನದಲ್ಲಿ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸ ಮೂರ್ತಿ ಎಂಬುವರು ಹಣ ಸಾಗಿಸುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.[ಜನಾರ್ದನ ರೆಡ್ಡಿ ಮಗಳ ಮದುವೆ ಒಟ್ಟು ಎಷ್ಟು ದಿನ?]
ಹೊಸಪೇಟೆಯಿಂದ ಹುಬ್ಬಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹಣ ವಿನಿಮಯಕ್ಕೆ 60 ಲಕ್ಷ ರುಪಾಯಿ ತರಲಾಗುತ್ತಿತ್ತು. ಆದರೆ ಹಣದ ವಿನಿಮಯ ಸಾಧ್ಯವಾಗದಿದ್ದಾಗ ಮರಳಿ ಹೊಸಪೇಟೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಪೊಲೀಸರ ವಿಚಾರಣೆ ವೇಳೆ ಪ್ರವೀಣ್, ಶ್ರೀನಿವಾಸ ತಿಳಿಸಿದ್ದಾರೆ.
ಕೇಶ್ವಾಪುರದ ಅರಿಹಂತ ನಗರದಿಂದ ಹೊಸಪೇಟೆಗೆ ಹಣ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಹಣದಲ್ಲಿ ರದ್ದಾದ 500 ಹಾಗೂ 1000 ರು. ಮುಖಬೆಲೆಯ ನೋಟುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.[ಚಿಲ್ಲರೆ ಹಣಕ್ಕೆ ಜನರ ಪರದಾಟ! ಆದರೆ ಬಳ್ಳಾರಿಯಲ್ಲಿ ಗಣಿಹಣದ ಚೆಲ್ಲಾಟ]
ಯುವತಿ ನಾಪತ್ತೆ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಳಮಡ್ಡಿಯ ಗೌಳಿಗಲ್ಲಿ ನಿವಾಸಿ ವರ್ಷಾ ಪ್ರಕಾಶ ಪತ್ತಾರ (21) ಎಂಬ ಯುವತಿ ನವೆಂಬರ್ 11ರಂದು ಭರತನಾಟ್ಯ ಕ್ಲಾಸ್ ಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವಳು ಮರಳಿ ಬಂದಿಲ್ಲ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.
janardhana reddy, hubballi, currency note, rupee, district news, ಜನಾರ್ಧನ ರೆಡ್ಡಿ, ಹುಬ್ಬಳ್ಳಿ, ಬ್ಯಾಂಕ್, ನೋಟು, ರುಪಾಯಿ, ಜಿಲ್ಲಾಸುದ್ದಿ
60 lakhs rupees of 500, 1000 rupees note seized by Hubballi police on Monday. There is a rumor that, amount belongs to former minister Janardhana reddy.
ಅವೆನ್ಯೂ ರಸ್ತೆಯಲ್ಲೊಂದು 'ದಿ ಗ್ರೇಟ್ ರಾಬರಿ' | Gold Robbery | Micro International Loot | Joint Commissioner Alok Kumar | Burglary |Crime Beat | ಅವೆನ್ಯೂ ರಸ್ತೆಯಲ್ಲೊಂದು 'ದಿ ಗ್ರೇಟ್ ರಾಬರಿ' - Kannada Oneindia
ಅವೆನ್ಯೂ ರಸ್ತೆಯಲ್ಲೊಂದು 'ದಿ ಗ್ರೇಟ್ ರಾಬರಿ'
| Published: Tuesday, August 10, 2010, 11:21 [IST]
ಬೆಂಗಳೂರು, ಆ 10 : ಚಿನ್ನದ ಸಗಟು ವ್ಯಾಪಾರ ಮಳಿಗೆಯೊಂದರ ಸೇಫ್ ಲಾಕರ್ ನಲ್ಲಿ ಇಟ್ಟಿದ್ದ ಬರೋಬ್ಬರಿ 3.5 ಕೋಟಿ ರೂಪಾಯಿ ನಗದು ಹಣವನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ಜನನಿಬಿಡ ಅವೆನ್ಯೂ ರಸ್ತೆಯಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚೆಮ್ಮನೂರು ಜ್ಯುವೆಲರ್ಸ್, ಮುತ್ತೂಟ್ ಫೈನಾನ್ಸ್ ಕಂಪೆನಿ ದರೋಡೆ ಪ್ರಕರಣದ ನಂತರ ನಡೆದ ಭಾರೀ ಹಣ ಲೂಟಿ ಪ್ರಕರಣ ಇದಾಗಿದ್ದು ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಂಧ್ರ ಮೂಲದ ವ್ಯಾಪರಸ್ಥರೊಬ್ಬರು ಇಲ್ಲಿ ಚಿನ್ನದ ಸಗಟು ವ್ಯಾಪಾರ ಆರಂಭಿಸಿದ್ದರು. ಶನಿವಾರ (ಆ.7) 3.5 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಸಕಾಲದಲ್ಲಿ ಬ್ಯಾಂಕ್ ಗೆ ಜಮಾ ಮಾಡಲು ಆಗದ ಕಾರಣ ಕಚೇರಿಯ ಲಾಕರ್ ನಲ್ಲಿ ಇಡಲಾಗಿತ್ತು.
ಭಾನುವಾರ ಕಚೇರಿಗೆ ರಜಾ ಇದ್ದು ಸೋಮವಾರ (ಆ.9) ಬೆಳಗ್ಗೆ ಬಾಗಿಲು ತೆಗೆದಾಗ ಹಣ ನಾಪತ್ತೆಯಾಗಿದ್ದು ಬೆಳಕಿಗೆ ಬಂತು. ಕಚೇರಿಯ ಸೆಕ್ಯುರಿಟಿ ಗಾರ್ಡ್ ಕಾಣೆಯಾಗಿದ್ದು ರಕ್ಷಣಾ ಸಿಬ್ಬಂದಿ ಕೈವಾಡವನ್ನು ಶಂಕಿಸಲಾಗಿದೆ.
ಅವೆನ್ಯೂ ರಸ್ತೆಯ ಜಯಂತಿ ಬಹುಮಹಡಿ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಮೈಕ್ರೋ ಇಂಟರ್ ನ್ಯಾಷನಲ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರದಂದು ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದನ್ನು ಅಕ್ಕಪಕ್ಕದ ಅಂಗಡಿಯವರು ನೋಡಿದ್ದಾರೆ.
ಭಾನುವಾರ ರಾತ್ರಿ ದರೋಡೆ ಎಸಗಿ ಪರಾರಿಯಾಗಿರಬಹುದು ಮತ್ತು ಇಬ್ಬರಿಗಿಂತ ಹೆಚ್ಚು ಮಂದಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಕಚೇರಿಯ ಒಳಗೆ ಸಿಸಿಟಿವಿ ಕ್ಯಾಮೆರಾ ಇದ್ದು ಕೃತ್ಯ ಎಸಗುವಾಗ ಅದನ್ನು ಬಂದ್ ಮಾಡಲಾಗಿತ್ತೆ ಎಂದು ಇನ್ನೂ ತಿಳಿದು ಬಂದಿಲ್ಲ.
ಕಳ್ಳತನ ಬೆಂಗಳೂರು ಕ್ರೈಂ ಅಲೋಕ್ ಕುಮಾರ್ ಚಿನ್ನ ಆಭರಣ ದರೋಡೆ robbery bangalore crime beat alok kumar gold jewellary
ಪ್ರತಿಪಕ್ಷಗಳ ಏಕತೆಯೊಂದೇ ಉಳಿದ ದಾರಿ - Varthabharati
ಚುನಾವಣೆಯ ಮೂಲಕ ದೊರೆತ ಅಧಿಕಾರವನ್ನು ಬಳಸಿಕೊಂಡು ಬಹುತ್ವ ಭಾರತದ ಅಡಿಪಾಯಕ್ಕೆ ಬಾಂಬಿಡುತ್ತಿರುವ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಟ್ಟರೆ ಮಾತ್ರ ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬಹುದು. ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಒಂದಾದರೆ ಮಾತ್ರ ಬಿಜೆಪಿಯ ಜೈತ್ರಯಾತ್ರೆಯನ್ನು ತಡೆಯಬಹುದಾಗಿದೆ.
ಜನಸಾಮಾನ್ಯರ ಜೀವನಮಟ್ಟ ಕುಸಿಯುತ್ತಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ನಿತ್ಯದ ಬದುಕು ಅಸಹನೀಯವಾಗಿದೆ. ಕೊರೋನ ಎರಡು ಸಲ ಅಪ್ಪಳಿಸಿತು. ಅದನ್ನು ಸರಿಯಾಗಿ ನಿಭಾಯಿಸಲಾಗದ ಸರಕಾರ ಅವೈಜ್ಞಾನಿಕವಾದ ಲಾಕ್ ಡೌನ್ ಹೇರಿತು. ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿ ಹಳಿ ತಪ್ಪಿತು. ಕೈಯಲ್ಲಿನ ಉದ್ಯೋಗ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ರಾಷ್ಟ್ರೀಯ ನಗರೀಕರಣ ಯೋಜನೆಯ ಹೆಸರಿನಲ್ಲಿ ಸರಕಾರ...
ಭಾರತದ ಅಧಿಕಾರ ಸೂತ್ರವನ್ನು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಿಡಿದಾಗ ಅನೇಕ ಪ್ರಜ್ಞಾವಂತರಲ್ಲಿ ಮೂಡಿದ ಆತಂಕ ನಿಜವಾಗುತ್ತಿದೆ. ಆ ಬದಲಾವಣೆ ಬರೀ ರಾಜಕೀಯ ಅಧಿಕಾರ ಹಸ್ತಾಂತರ ಆಗಿರಲಿಲ್ಲ. ವಿವಿಧ ಸಮುದಾಯ, ಭಾಷೆಗಳಿಗೆ, ಧರ್ಮಗಳಿಗೆ ಸೇರಿದ ಭಾರತದ ಕೋಟ್ಯಂತರ ಜನರ ಬದುಕು ಇನ್ನು ಮುಂದೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂಬ ಆತಂಕ, ಭೀತಿ ಎಲ್ಲೆಡೆ ಆವರಿಸಿದೆ.
ಕಳೆದ 70 ವರ್ಷಗಳಲ್ಲಿ ಅಪಾರ ಪರಿಶ್ರಮದಿಂದ ಗಳಿಸಿದ ಸಂಪತ್ತನ್ನು ಈ ರೀತಿ ಖಾಸಗಿ ರಂಗದ ಮಾರಾಟ ಮಾಡುವುದನ್ನು ಜನ ಪ್ರಶ್ನಿಸಬಾರದು ಎಂದು ಅವರನ್ನು ಮತಾಂಧತೆ, ಕೋಮು ದ್ವೇಷದ ವಿಷ ಸಾಗರದಲ್ಲಿ ಮುಳುಗಿಸಲಾಗುತ್ತಿದೆ.
ರಾಷ್ಟ್ರೀಯ ನಗರೀಕರಣದ ಹೆಸರಿನಲ್ಲಿ 1.6 ಲಕ್ಷ ಕೋಟಿ ರೂ. ಮೌಲ್ಯದ 26,700 ಕಿ.ಮೀ. ಹೆದ್ದಾರಿ, 1.4 ಲಕ್ಷ ಕೋಟಿ ಮೌಲ್ಯದ ರೈಲು ನಿಲ್ದಾಣಗಳು ಮತ್ತು 150 ರೈಲುಗಳು, 67 ಲಕ್ಷ ಕೋಟಿ ಮೌಲ್ಯದ 42,300 ವಿದ್ಯುತ್ ವಾಹಕ ಲೈನುಗಳು, ಇವುಗಳಲ್ಲದೆ ವಿಮಾನ ನಿಲ್ದಾಣಗಳು ಸೇರಿ ಎಲ್ಲವನ್ನೂ ಗುತ್ತಿಗೆ ನೀಡಲು ಈ ಸರಕಾರ ಹೊರಟಿದೆ.ಗುತ್ತಿಗೆಗೆ ಕೊಡುವುದೆಂದರೆ ಸಾರ್ವಜನಿಕ ಸಂಪತ್ತನ್ನು ಖಾಸಗಿ ರಂಗದ ಅಂಬಾನ...
ಮುಂದಿನ ಲೋಕಸಭಾ ಚುನಾವಣೆ 2023-24ರಲ್ಲಿ ನಡೆಯಲಿದೆ. ಅದಕ್ಕಿಂತ ಮೊದಲು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭೆಗೆ ಬರುವ ವರ್ಷ ಮೊದಲ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲು ಬಿಜೆಪಿ ಅದರಲ್ಲೂ ವಿಶೇಷವಾಗಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಷಡ್ಯಂತ್ರ ರೂಪಿಸಿದೆ.
ಇದು ಕೊನೆಗೆ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಳ ವಿನಾಶದತ್ತ ಭಾರತವನ್ನು ಕೊಂಡೊಯ್ಯುತ್ತದೆ. ಇದನ್ನು ತಡೆಯವುದು ಬರೀ ಹೋರಾಟದಿಂದ ಮಾತ್ರ ಸಾಧ್ಯವಿಲ್ಲ. ಹೋರಾಟದ ಜೊತೆಗೆ ಚುನಾವಣೆ ಮೂಲಕ ಅವರು ಪಡೆದ ರಾಜಕೀಯ ಅಧಿಕಾರವನ್ನು ಕಿತ್ತುಕೊಳ್ಳಬೇಕಾಗಿದೆ. ಇದಕ್ಕಾಗಿ ಅದೇ ಚುನಾವಣಾ ಅಸ್ತ್ರವನ್ನು ಬಳಸಬೇಕಾಗಿದೆ.
ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲೂ ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಂತಹ ಜನಪ್ರಿಯತೆ ಹೊಂದಿರಲಿಲ್ಲ. ಆದರೆ ಪ್ರತಿಪಕ್ಷಗಳ ಅನೈಕ್ಯತೆ ಬಿಜೆಪಿಗೆ ವರದಾನವಾಯಿತು. ಅನೇಕ ಕಡೆ ಬಹುಕೋನ ಸ್ಪರ್ಧೆ ಏರ್ಪಟ್ಟು ಬಿಜೆಪಿ ವಿರೋಧಿ ಮತಗಳು ವಿಭಜನೆಗೊಂಡವು. ಇದರ ಲಾಭ ಬಿಜೆಪಿಗೆ ಆಯಿತು. ಆದರೆ, ಪಶ್ಚಿಮ ಬಂಗಾಳ ಮತ್ತು ದಿಲ್ಲಿಯಲ್ಲಿ ಮಾತ್ರ ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸರ...
ಕೋವಿಡ್ 2ನೇ ಅಲೆ ಬಂದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಕೊರೋನ ಎರಡನೇ ಅಲೆಯಲ್ಲಿ ಸಾವಿರಾರು ಅಮಾಯಕರು ಸರಕಾರದ ನಿರ್ಲಕ್ಷದಿಂದ ಸಾವಿಗೀಡಾದ ಬಗ್ಗೆ ಜನಸಾಮಾನ್ಯರಲ್ಲಿ ಆಕ್ರೋಶವಿದೆ. ಇದರ ಜೊತೆಗೆ ಕಳೆದ ಒಂದು ವರ್ಷದಿಂದ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವ ಐತಿಹಾಸಿಕ ರೈತ ಹೋರಾಟ ಸರಕಾರಕ್ಕೆ ದಿಗಿಲು ಉಂಟು ಮಾಡಿದೆ. ಇದರ ಜೊತೆಗೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶಾಂತಿಯುತ...
ಆದರೆ, ಇದೇ ಕಾರಣದಿಂದ ಬಿಜೆಪಿಯು ಉತ್ತರ ಪ್ರದೇಶ ಮತ್ತು ಇತರ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುತ್ತದೆ ಎಂದು ಯಾರಾದರೂ ಅಂದುಕೊಂಡರೆ ಅದು ಮೂರ್ಖತನವಾಗುತ್ತದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಅದರಲ್ಲೂ ಪ್ರಿಯಾಂಕಾ ಗಾಂಧಿಯವರು ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ನಡೆದಲ್ಲಿಗೆ ಹೋಗಿ ನೊಂದ ಕುಟುಂಬದವರ ಕಣ್ಣೀರು ಒರೆಸಿದ್ದು ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ನೀಡುವುದಾಗಿ ಘೋಷಿಸಿದ್ದು ನಿಜಕ್ಕೂ ದಿಟ್ಟ ಕ್ರಮಗಳಾಗಿವೆ.
ಆದರೆ, ಇದು ತುಂಬಾ ತಡವಾಯಿತು. ಚುನಾವಣೆ ಹೊತ್ತಿಗೆ ಇದು ಜನರಿಗೆ ತಲುಪಿ ಫಲ ನೀಡುವ ಸಾಧ್ಯತೆ ಕಡಿಮೆ. ಇದರ ಜೊತೆಗೆ ಇತರ ಬಿಜೆಪಿಯೇತರ ಪಕ್ಷಗಳ ಜೊತೆ ಚುನಾವಣಾ ಹೊಂದಾಣಿಕೆ ಅಗತ್ಯವಾಗಿದೆ.
ಕಾಂಗ್ರೆಸನ್ನು ಬಿಟ್ಟರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ಇನ್ನೆರಡು ಪಕ್ಷಗಳೆಂದರೆ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ. ಇವರೆಡೂ ಪಕ್ಷಗಳು ಪರಸ್ಪರ ಎದುರಾಳಿಗಳಾಗಿವೆ. ಚುನಾವಣೆಯಲ್ಲಿ ಪರಸ್ಪರ ಎದುರು ಬದುರಾಗಿ ಸ್ಪರ್ಧಿಸುತ್ತವೆ. ಹೀಗಾಗಿ ಬಿಜೆಪಿ ವಿರೋಧಿ ಮತಗಳು ಸಹಜವಾಗಿ ವಿಭಜನೆಯಾಗುತ್ತವೆ. ಯಾದವ ಸಮುದಾಯದವರು ಸಮಾಜವಾದಿ ಪಕ್ಷದ...
ಉತ್ತರಾಖಂಡ, ಗೋವಾ, ಮಣಿಪುರಗಳಲ್ಲೂ ಪ್ರತಿಪಕ್ಷಗಳು ಒಂದುಗೂಡಿದರೆ ಬಿಜೆಪಿಗೆ ಪಾಠ ಕಲಿಸಲು ಸಾಧ್ಯವಾಗುತ್ತದೆ. ಉತ್ತರ ಪ್ರದೇಶ ಭಾರತದ ಅತ್ಯಂತ ದೊಡ್ಡ ರಾಜ್ಯ. ಅಲ್ಲಿನ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅದನ್ನು ಹೇಗಾದರೂ ಉಳಿಸಿಕೊಳ್ಳಲು ಬಿಜೆಪಿ ಅದರಲ್ಲೂ ವಿಶೇಷವಾಗಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಹರ ಸಾಹಸ ಮಾಡುತ್ತಿದೆ.
ಅಲ್ಲಿ ಮುಲಾಯಂ ಮತ್ತು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷ, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ,ಕಾಂಗ್ರೆಸ್ ಪಕ್ಷ,ರಾಷ್ಟ್ರೀಯ ಲೋಕದಳಗಳು ಒಂದಾಗಿ ಚುನಾವಣೆ ಎದುರಿಸಿದರೆ ಆದಿತ್ಯನಾಥ್‌ಮಾತ್ರವಲ್ಲ, ಅವರ ದಿಲ್ಲಿ ಬಾಸ್‌ಗಳು ಏನೇ ಸರ್ಕಸ್ ಮಾಡಿದರೂ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳುವುದು ಸುಲಭವಲ್ಲ. ಕಳೆದ ಬಾರಿ ಜಯಶಾಲಿಯಾದ ಬಿಜೆಪಿ ಪಡೆದ ಮತಗಳು ಶೇ.39.6. ಪ್ರತಿಪಕ್ಷಗಳು ಒಂದಾಗಿ, ಬ...
ಅದರೆ ಪ್ರತಿಪಕ್ಷಗಳು ಒಂದಾಗದಂತೆ ಮೋದಿ, ಅಮಿತ್ ಶಾ, ಆದಿತ್ಯನಾಥ್ ನಾನಾ ಮಸಲತ್ತು ಮಾಡುತ್ತಾರೆ. ಪ್ರತಿಪಕ್ಷ ನಾಯಕರನ್ನು ಹೆದರಿಸಲು ಸಿಬಿಐ, ಜಾರಿ ನಿರ್ದೇಶನಾಲಯದಂತಹ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ಹುನ್ನಾರ ಎದುರಿಸಿ ಒಂದು ಗೂಡಿದರೆ ಮಾತ್ರ ಪ್ರತಿಪಕ್ಷಗಳಿಗೆ ಒಳ್ಳೆಯ ಅವಕಾಶವಿದೆ.
2004ರಲ್ಲಿ ಮತ್ತು ಅದಕ್ಕಿಂತ ಮೊದಲು ಬಿಜೆಪಿ ಕೇಂದ್ರದ ಅಧಿಕಾರ ಸೂತ್ರ ಹಿಡಿಯುವುದನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ ಹರಕಿಷನ್ ಸಿಂಗ್ ಸುರ್ಜಿತ್ ಮತ್ತು ಜ್ಯೋತಿ ಬಸು. ಆಗ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಸುರ್ಜಿತರನ್ನು ಚಾಣಕ್ಯ ಎಂದು ಕರೆಯಲಾಗುತ್ತಿತ್ತು. ಆಗ ಪ್ರತಿಪಕ್ಷಗಳ ಪ್ರಮುಖ ನಾಯಕರಾಗಿದ್ದ ಸೋನಿಯ...
ಸ್ವಾತಂತ್ರಾ ನಂತರದ ಭಾರತದ ಇತಿಹಾಸವನ್ನು ಅವಲೋಕಿಸಿದರೆ ಯಾವುದೇ ಬಲಾಢ್ಯ ಪಕ್ಷ ಅಧಿಕಾರದ ಮದದಿಂದ ಪ್ರಜಾಪ್ರಭುತ್ವ ವಿರೋಧಿ ದಮನ ಕಾಂಡ ನಡೆಸಿದರೆ ಅದನ್ನು ಮಣಿಸಲು ಪ್ರತಿಪಕ್ಷ ಏಕತೆಯಿಂದ ಮಾತ್ರ ಸಾಧ್ಯವಾಗಿದೆ.
1977ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದ್ದು ವಿರೋಧ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯಿಂದ ಮಾತ್ರ. 2004-2009ರಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಎದುರಿಸಿದ್ದು ಉಳಿದ ಸಮಾನ ಮನಸ್ಕ ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಎಂಬುದನ್ನು ಮರೆಯಬಾರದು.
ಬಿಜೆಪಿಗೆ ಆರೆಸ್ಸೆಸ್‌ನ ಬಹುದೊಡ್ಡ ಕಾರ್ಯಕರ್ತರ ಪಡೆ ಇದೆ. ಚಿಕ್ಕ ಮಗುವಾಗಿದ್ದಾಗಿನಿಂದ ಶಾಖೆಗೆ ಸೇರಿಸಿಕೊಂಡು ಬೆಳಸುತ್ತಾರೆ.
ಹೀಗೆ ಬೆಳೆದವರು ಕಾರ್ಯಾಂಗ, ನ್ಯಾಯಾಂಗ, ಶೈಕ್ಷಣಿಕ ಕ್ಷೇತ್ರ, ಸೇನೆ, ಪೊಲೀಸ್ ಎಲ್ಲೆಡೆ ನುಸುಳಿದ್ದಾರೆ. ಯಾವುದೇ ಸರಕಾರ ಬಂದರೂ ಇವರು ತಮ್ಮ ಅಜೆಂಡಾ ಜಾರಿಗೆ ತರುತ್ತಾರೆ. 70 ವರ್ಷಗಳ ಹಿಂದೆ ಸಾವರ್ಕರ್ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದರು. ಅದೇನೆಂದರೆ ಸೇನೆ, ಪೊಲೀಸ್, ಸರಕಾರ ಎಲ್ಲೆಡೆ ನಮ್ಮವರು ಸೇರಿಕೊಳ್ಳಬೇಕು ಎಂದಿದ್ದರು. ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಆರೆಸ್ಸೆಸ್ ...
ಹಳ್ಳಿ ಹಳ್ಳಿಗೂ ಹೋಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು, ಬೆಲೆ ಏರಿಕೆ, ರೈತರ ಸಮಸ್ಯೆ, ದಲಿತರ ಮೇಲೆ ನಡೆಯುವ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ವಿವರಿಸಿ ಹೇಳಬೇಕು. ಸಂಘಪರಿವಾರ ಸೃಷ್ಟಿಸಿದ ಸುಳ್ಳುಗಳನ್ನು ಬಯಲುಗೊಳಿಸಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಮೂಲಕ ರಾಜಕೀಯ ಅಧಿಕಾರದಿಂದ ಅವುಗಳನ್ನು ದೂರವಿಡಬೇಕು. ಕಾಂಗ್ರೆಸ್, ಜೆಡಿಎಸ್‌ನಂತಹ ಪಕ್ಷಗಳಲ್ಲೂ ಸಂಘಪರಿವಾರದ ಬೆಂಬಲಿಗರಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಿದ್ದಾರೆ. ಅಂತಹವರನ್ನೆಲ್ಲ ಗುರುತಿಸಿ ಹೊರದಬ್ಬಬೇಕು. ಕಾಂಗ್ರೆಸ್ ಸರಕಾರ ಇದ್ದಾಗಲೂ ಒಳ ನುಸುಳಿ ತಮ್ಮ ಅಜೆಂಡಾ ಜಾರಿಗೆ ತರುವ ಅಪಾಯದ ಬಗ್ಗೆ ...
ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅವಳಿ ಶತ್ರುಗಳು ಎಂಬ ಹಳೆಯ ರಾಜಕೀಯ ನಿಲುವನ್ನು ಬಿಟ್ಟು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಮನುವಾದಿ ಫ್ಯಾಶಿಸ್ಟ್ ವ್ಯವಸ್ಥೆಯನ್ನು ಹೇರಲು ಹೊರಟಿರುವ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಒಂದಾಗಿ ಚುನಾವಣೆಯನ್ನು ಎದುರಿಸಿ ಆ ಶಕ್ತಿಗಳನ್ನು ಸೋಲಿಸುವುದು ತುರ್ತು ಅಗತ್ಯವಾಗಿದೆ.
ಆಂಧ್ರ ಸ್ಥಳೀಯರಿಗೆ ಶೇ.75 ಉದ್ಯೋಗ ಮೀಸಲು ನಿಗದಿ!
ಆಂಧ್ರ ಕೈಗಾರಿಕೆಗಳ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75 ಮೀಸಲು| ಜಗನ್‌ ಸಂಪುಟ ನಿರ್ಧಾರ ಈ ವಾರ ಮಸೂದೆ ಮಂಡನೆ
Bangalore, First Published Jul 23, 2019, 8:16 AM IST
ಅಮರಾವತಿ[ಜು.23]: ಆಂಧ್ರಪ್ರದೇಶದಲ್ಲಿ ನಿರುದ್ಯೋಗವನ್ನು ನಿರ್ಮೂಲನೆ ಮಾಡಲು ಮಹತ್ತರ ಕ್ರಮಕ್ಕೆ ಮುಂದಾಗಿರುವ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ, ಕೈಗಾರಿಕೆಗಳ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲಾತಿ ಒದಗಿಸಲು ನಿರ್ಧರಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಜಾರಿಗೆ ಬರುವ ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೇ ವಾರ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ...
ಚುನಾವಣೆಪೂರ್ವದಲ್ಲಿ ರಾಜ್ಯಾದ್ಯಂತ ನಡೆಸಿದ ಪಾದಯಾತ್ರೆ ಸಂದರ್ಭ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲು ನೀಡುವುದಾಗಿ ಜಗನ್‌ ಭರವಸೆ ನೀಡಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಹಲವು ಬಾರಿ ಇದನ್ನು ಪ್ರಸ್ತಾಪಿಸಿದ್ದರು. ಇದೀಗ ಅದು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಹಂತ ತಲುಪಿದೆ.
ಹಾಲಿ ಇರುವ ಹಾಗೂ ಮುಂದೆ ಸ್ಥಾಪನೆಯಾಗಲಿರುವ ಕೈಗಾರಿಕೆಗಳಲ್ಲಿ ಈ ಮೀಸಲು ಜಾರಿಗೆ ಬರಲಿದೆ. ಆದರೆ ಸ್ಥಳೀಯರ ಬದಲು ಕೌಶಲ್ಯ ಹೊಂದಿದವರಿಗೆ ಆದ್ಯತೆ ನೀಡುವ ಕೈಗಾರಿಕೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಂಬಂಧ ಕಾರ್ಖಾನೆಗಳ ಜತೆ ಮಾತುಕತೆ ನಡೆಸಲು ಜಗನ್‌ ಸರ್ಕಾರದ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡಾ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.70ರಷ್ಟುಮೀಸಲು ನೀಡುವ ಕಾನೂನು ಜಾರಿ ಮಾಡಲಿದೆ ಎಂದು ಘೋಷಿಸಿದ್ದರು.
ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ – Public TV
ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು - ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ
– ಸಂಯಮ ಕಾಪಾಡುವಂತೆ ಮೋದಿ ಮನವಿ
– ಪ್ರಧಾನಿ, ಶಾ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ
ನವದೆಹಲಿ: ಹಿಂಸಾಚಾರ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ಛೀಮಾರಿ ಹಾಕಿವೆ.
1984ರ ಸಿಖ್ ದಂಗೆಯಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಅಂತ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗ್ತಿರೋ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ಕ್ಲಿಪ್ಪಿಂಗ್ಸ್ ಗಳನ್ನು ಕೋರ್ಟ್ ನಲ್ಲಿ ಪ್ಲೇ ಮಾಡಲಾಯಿತು.
ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡೋವ್ರ ಮೇಲೆ ಎಫ್‍ಐಆರ್ ಹಾಕೋ ನೀವ್ಯಾಕೆ ಇಂಥ ಹೇಳಿಕೆ ಕೊಡೋವ್ರ ಮೇಲೆ ಹಾಕಲ್ಲ. ಸಮಾಜಕ್ಕೆ ತಪ್ಪು ಸಂದೇಶ ಹೋಗಲ್ವಾ ಅಂತ ಪೊಲೀಸರನ್ನು ಪ್ರಶ್ನಿಸಿದ್ರು.
ಇದಕ್ಕೆ ಉತ್ತರಿಸಿದ ದೆಹಲಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಪೊಲೀಸರೇನು ಪಿಕ್‍ನಿಕ್‍ಗೆ ಹೋಗಿರಲಿಲ್ಲ. ಅವರ ಮೇಲೂ ಆ್ಯಸಿಡ್ ದಾಳಿಗಳು ನಡೆದಿವೆ ಎಂದರು
ಇನ್ನೊಂದು ಕಡೆ ನಿಮ್ಮಲ್ಲಿ ವೃತ್ತಿಪರತೆ ಇಲ್ಲವೇ? ಅಂತ ದೆಹಲಿ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತ ಆಗಿದ್ರೆ ಇಷ್ಟು ಹಾನಿಯನ್ನು ತಡೆಯಬಹುದಿತ್ತು. ಇದು ನಿಮ್ಮ ವಿಫಲತೆಯನ್ನು ತೋರಿಸ್ತಿದೆ ಅಂತ ಜಡ್ಜ್ ಕೆ.ಎಂ. ಜೋಸೆಫ್ ಬಿಸಿಮುಟ್ಟಿಸಿದ್ದಾರೆ.
ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಯಾರಿಗಾಗಿ ಕಾಯುತ್ತಾ ಕೂತಿದ್ದೀರಿ ಅಂತ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ಹೈಕೋರ್ಟೇ ತೀರ್ಮಾನ ಕೈಗೊಳ್ಳಲಿದೆ ಅಂತ ಸುಪ್ರೀಂಕೋರ್ಟ್ ಹೇಳಿದೆ.
ಮೋದಿ ಮನವಿ:
ಶಕ್ತಿಕೇಂದ್ರದಲ್ಲೇ ಸೃಷ್ಟಿಯಾಗಿರೋ ಇಂಥಾ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.
ಇನ್ನು,ಸಾವು-ನೋವಿನಲ್ಲೂ ರಾಜಕೀಯ ಕೆಸರೆರಚಾಟ ನಡೀತಿದೆ. ಇಷ್ಟೆಲ್ಲಾ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಗೃಹ ಸಚಿವರೇ ನೇರಹೊಣೆ. ಅವರು ಎಲ್ಲೋಗಿದ್ರು. ಈ ಕ್ಷಣವೇ ರಾಜೀನಾಮೆ ಕೊಡ್ಬೇಕು ಅಂತ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ರು.
ದ್ವೇಷ ಭಾಷಣಗಳ ಮೂಲಕ ಉದ್ದೇಶ ಪೂರ್ವಕವಾಗಿಯೇ ದೆಹಲಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗ್ತಿದೆ ಅಂತ ದೂರಿದ್ರು. ನಾಳೆ ಪ್ರತಿಭಟನೆ ಮಾಡಲಿರುವ ಕಾಂಗ್ರೆಸ್, ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ಆದರೆ, ಸೋನಿಯಾ ಗಾಂಧಿ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದರು.
LIVE: #Cabinet briefing by Union Ministers @PrakashJavdekar and @smritiirani at #PIB Conference Hall Shastri Bhawan #NewDelhi
YouTube: https://t.co/6JkYWLHy0G
Facebook: https://t.co/p9g0J6q6qvhttps://t.co/9iAvAqbz01
— PIB India (@PIB_India) February 26, 2020
ಸೋನಿಯಾ ಗಾಂಧಿ ಅವರ ಹೇಳಿಕೆ ದುರಾದೃಷ್ಟ. ಖಂಡನೀಯ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿ ಕಾಪಾಡುವಂತೆ ಮನವಿ ಮಾಡ್ಬೇಕು. ಅದನ್ನು ಬಿಟ್ಟು ಸರ್ಕಾರವನ್ನು ನಿಂದಿಸೋದು, ಕೊಳಕು ರಾಜಕೀಯ ಸರಿಯಲ್ಲ ಅಂದ್ರು. ಈ ಮಧ್ಯೆ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಎನ್‍ಸಿಪಿಯ ಸುಪ್ರಿಯಾ ಸುಳೆ ಹೇಳಿದ್ರೆ, ದೆಹಲಿಯಲ್ಲಿ ಸೇನೆಯ ನಿಯೋಜನೆ ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಸಿಪಿಎಂ ಸೀತಾರಾಂ ಯೆಚೂರಿ ಹೇಳಿ...
Related Topics:Anurag ThakurDelhi High CourtKapil MishraNew DelhiPublic TVSupreme Courtಅನುರಾಗ್ ಠಾಕೂರ್ಕಪಿಲ್ ಮಿಶ್ರಾದೆಹಲಿ ಹೈಕೋರ್ಟ್ನವದೆಹಲಿಪಬ್ಲಿಕ್ ಟಿವಿಸುಪ್ರೀಂ ಕೋರ್ಟ್
ಅಭಿಮನ್ಯುವಿನಂತೆ ಹೋರಾಟಕ್ಕಿಳಿದವರು ಉತ್ತರ ಕುಮಾರನಂತೆ ವರ್ತಿಸಿದ್ದೇಕೆ? – BV Kakkilaya : ಬಿ ವಿ ಕಕ್ಕಿಲ್ಲಾಯ
(ವಾರ್ತಾಭಾರತಿ, ಜುಲೈ 13, 2010)
ಭಾಜಪ ಮತ್ತು ಅದರ ಪರಿವಾರದವರು ಜೆಡಿಎಸ್‌ನ ನಂಟು ಕಳೆದುಕೊಂಡು ಕಾನೂನು ಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ 'ಆಪರೇಷನ್ ಕಮಲ'ದ ಹೆಸರಲ್ಲಿ ಕೋಟ್ಯಂತರ ರೂ. ಹಣ ಭ್ರಷ್ಟರೆಲ್ಲರ ಪ್ರತಿನಿಧಿಗಳಾಗಿ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದವು. ಈ 2 ವರ್ಷಗಳಲ್ಲಿ ಕರ್ನಾಟಕದ ನೆಲ ಜಲ ಖನಿಜ ಸಂಪತ್ತು ಇಂದಿನ ಮಟ್ಟಿಗಷ್ಟೇ ಅಲ್ಲ ಸಾರ್ವಕಾಲಿಕವಾಗಿ ದೋಚಿ ಕೊಳ್ಳೆ ಹೋಗುವ ಸ್ಥಿತಿಗೆ ತಲುಪಿದೆ.
ವಿ.ವಿ.ಗಳು ಭೂಮಿ ಕಬಳಿಕೆದಾರರ ಮತ್ತು ಸಾರ್ವಜನಿಕ ಸೊತ್ತಿನ ಬಳಕೆದಾರರ ದಾಳಿಗೆ ಒಳಗಾಗಿವೆ. ವಿದ್ಯಾಭ್ಯಾಸವನ್ನು ಕೋಮುವಾದಿ ಗಳ ಆಡಳಿತಕ್ಕೊಳಪಡಿಸುವ ದಿಸೆಯಲ್ಲಿ ಮತ್ತು ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಪರಿಗಣಿತ ವಿ ವಿ ನಿಲಯಗಳಾಗಿ ಮಾರ್ಪಡಿಸುವ ದಂಧೆ ಸಾಗಿದೆ. ಸಾಮ್ರಾಜ್ಯಗಳ ಪಾಳೆಯಗಾರಿಕೆಯ ಗುಲಾಮಗಿರಿಯ ವೈಭವದ ಪ್ರದರ್ಶನಕ್ಕೆ ಭೊಕ್ಕಸದ ಕೋಟ್ಯಂತರ ಹಣವನ್ನು ದೋಚಿ ವ್ಯಯಿಸಲಾಗಿದೆ.
ಇವುಗಳ ವಿರುದ್ದ ಪ್ರಜ್ಞಾವಂತ ನಾಗರಿಕರು ಸಿಡಿದೆದ್ದಿದ್ದು ನಾವು ಕಂಡಿದ್ದೇವೆ. ಈ ವಾತಾವರಣದಲ್ಲಿ ಭ್ರಷ್ಟ ಮತ್ತು ಬೇಜವ್ದಾರಿ ಪರಿವಾರದ ನಾಯಕರ ದಾಂಧಲೆಗಳು ಸಹ ರಾಜ್ಯದ ಮತ್ತು ದೇಶದ ಸಮಚಿತ್ತವುಳ್ಳ ಜನರಲ್ಲಿ ಕಳವಳವನ್ನು ಮೂಡಿಸಿದೆ. ಈ ದುರವಸ್ಥೆಯನ್ನು ತಡೆಗಟ್ಟುವ ಕ್ರಮಗಳನ್ನು ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ಆಯುಕ್ತರು ದಿಟ್ಟತನದಿಂದ ಕೈಗೊಂಡಿದ್ದನ್ನು ಬೆಂಬಲಿಸಲು ಜನರು ಪಕ್ಷ ಪಂಗಡ, ಜಾತಿ...