text
stringlengths
0
61.5k
ಆಲ್ಟ್ರಾವಯೊಲೆಟ್ ಕಂಪನಿಯ ಸದ್ಯ ಅನಾವರಣಗೊಳಿಸಿರುವ ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ ಕನಿಷ್ಠ 140ಕಿ.ಮಿನಿಂದ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರು...
ಹೀರೋ ಎಇ47 ಇವಿ
ಬಿಡುಗಡೆಯಾಗಲಿರುವ ಪ್ರಮುಖ ಇವಿ ಬೈಕ್ ಮಾದರಿಗಳಲ್ಲಿ ಹೀರೋ ಎಇ 47 ಎಲೆಕ್ಟ್ರಿಕ್ ಬೈಕ್ ಕೂಡಾ ಒಂದಾಗಿದ್ದು, ಹೊಸ ಬೈಕ್ ಮುಂಬರುವ ಮಾರ್ಚ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕಿನಲ್ಲಿ 3.5 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಪವರ್ ಮೋಡ್‌ನಲ್ಲಿ 85 ಕಿ.ಮೀ ಹಾಗೂ ಇಕೋ ಮೋಡ್‌ನಲ್ಲಿ 160 ಕಿ.ಮೀಗಳವರೆಗೆ ಚಲಿಸುತ್ತದೆ...
ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಕ್ರೂಸ್ ಕಂಟ್ರೋಲ್ ಸಿಸ್ಟಂ, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ರಿವರ್ಸ್ ಗೇರ್ ಪಡೆದುಕೊಂಡಿದ್ದು, ಈ ಬೈಕಿನ ಬೆಲೆಯನ್ನು ಕಂಪನಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.25 ಲಕ್ಷಗಳಿಗೆ ನಿಗದಿಪಡಿಸುವ ಸಾಧ್ಯತೆಗಳಿವೆ.
ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕ್
ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ಇವಿ ಬೈಕ್‌ ಉತ್ಪಾದನಾ ಕಂಪನಿಗಳಲ್ಲಿ ಎಂಫ್ಲಕ್ಸ್ ಕೂಡಾ ಒಂದಾಗಿದ್ದು, ಕಂಪನಿಯು ಶೀಘ್ರದಲ್ಲೇ ವಿವಿಧ ಪ್ರೀಮಿಯಂ ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
ಎಂಫ್ಲಕ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟೂ ಹಾಗೂ ಟೂ ಪ್ಲಸ್ ಎಲೆಕ್ಟ್ರಿಕ್ ಬೈಕ್‌ಗಳ ಟೀಸರ್ ಅನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಎಂಫ್ಲಕ್ಸ್ ಇವಿ ಬೈಕ್ ಮಾದರಿಗಳು ಪ್ರತಿ ಚಾರ್ಜ್‌ಗೆ 160 ರಿಂದ 200 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸಲಿವೆ.
ರಿವೋಲ್ಟ್ ಆರ್‌ವಿ 1 ಇವಿ ಬೈಕ್
ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ರಿವೋಲ್ಟ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಇವಿ ಬೈಕ್ ಮಾರಾಟ ಮಾಡಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.
ರಿವೋಲ್ಟ್ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ 2019ರಲ್ಲಿ ಆರ್‌ವಿ400 ಮತ್ತು ಆರ್‌ವಿ300 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಹೊಸ ಬೈಕ್‌ಗಳಲ್ಲಿ ಆರ್‌ವಿ400 ಮಾದರಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕಡಿಮೆ ಬೇಡಿಕೆ ಹೊಂದಿರುವ ಆರ್‌ವಿ300 ಬೈಕ್ ಮಾದರಿಯನ್ನು ಸ್ಥಗಿತಗೊಳಿಸಿ ಅದೇ ಬೈಕ್ ಮಾದರಿಯನ್ನೇ ಬಿಟುಬಿ ವಾಣಿಜ್ಯ ಬೈಕ್ ಮಾದರಿಯನ್ನಾಗಿ ಮರು ಬಿಡುಗಡೆ ಮಾಡಲು ನಿ...
ಒಕಿ100 ಎಲೆಕ್ಟ್ರಿಕ್ ಬೈಕ್
ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಒಕಿನಾವ ಕಂಪನಿಯು 2022ರಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ದ್ವಿಚಕ್ರ ವಾಹನಗಳಲ್ಲಿ ಒಕಿ100 ಇವಿ ಬೈಕ್ ಸೇರಿದಂತೆ ಒಟ್ಟು ನಾಲ್ಕು ಹೊಸ ಇವಿ ವಾಹನಗಳನ್ನು ರಸ್ತೆಗಿಳಿಯಲಿವೆ.
125 ಸಿಸಿ ಸಾಮರ್ಥ್ಯದ ಸಾಮಾನ್ಯ ಬೈಕ್‌ಗಳಿಗೆ ಸಮನಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ ಮಾದರಿಗೆ ಪೈಪೋಟಿ ನೀಡಲಿದ್ದು, ಪ್ರತಿ ಚಾರ್ಜ್‌ಗೆ ವೇಗದ ಆಧಾರದ ಮೇಲೆ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎನ್ನಲಾಗಿದೆ. ಹೊಸ ಇವಿ ಬೈಕ್ ಮಾದರಿಯು ಸ್ಥಳೀಯವಾಗಿ ಅಭಿವೃದ್ದಿ ಹೊಂದಿರುವ ಗರಿಷ್ಠ ಬಿಡಿಭಾಗಗಳನ್ನು ಪಡೆದುಕೊಂಡಿದ್ದು, ಹೊಸ ಬೈಕ್ ಬೆಲ...
ಗೆಲುವಿನ ಹಾದಿಯಲ್ಲಿಗೀತಾ
ಮೊದಲವಾರದಲ್ಲೆ ಕೋಟಿಗಳನ್ನು ಬಾಚಿರುವ'ಗೀತಾ' ಸಿನಿಮಾದ ನಿರ್ಮಾಪಕ ಸೈಯದ್‍ಸಲಾಂ ನಮ್ಮ ನಿರೀಕ್ಷೆ ಮಟ್ಟತಲುಪಿಲ್ಲವೆಂದುಒಪ್ಪಿಕೊಂಡರು. ನಟಿ ಶಾನ್ವಿಶ್ರೀವಾತ್ಸವ್ ಸಾಮಾಜಿಕಜಾಲತಾಣದಲ್ಲಿ ಬರೆದಿರುವ ಬೇಸರದ ಪತ್ರಕ್ಕೆ ಸಮಂಜಸಉತ್ತರ ನೀಡಿದರು. ಚಿತ್ರದಲ್ಲಿಗಣೇಶ್, ಅವರೊಂದಿಗೆಇರಲಾದಡ್ಯುಯೆಟ್ ಹಾಡು ಸಿನಿಮಾ ಲೆಂಥ್ ಜಾಸ್ತಿಯಾಗಿದೆ ಎಂದು ಸೇರಿಸಿಲ್ಲ. ಇದಕ್ಕಾಗಿ 35 ಲಕ್ಷಖರ್ಚು ಮಾಡಲಾಗಿತ್ತು. ಲಕ್...
ನೂರು ಕೇಂದ್ರಗಳಲ್ಲಿ ಪ್ರದರ್ಶನವಾಗುತ್ತಿದ್ದರೂಜಾಹಿರಾತುದಲ್ಲಿ ಮೂರು ಕೇಂದ್ರಗಳೆಂದು ತಪ್ಪಾಗಿ ಮುದ್ರಿತವಾಗಿದೆ.ಎರಡನೇ ವಾರದಿಂದ ಮತ್ತಷ್ಟು ಹೆಚ್ಚಾಗುವ ಸಾದ್ಯತೆಇದೆ, ಕತೆಯ ಪರಿಕಲ್ಪನೆ, ಗೋಕಾಕ್ ಚಳುವಳಿ ಸನ್ನಿವೇಶಗಳು ಚೆನ್ನಾಗಿರುವಕಾರಣಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯಯೋಗರಾಜ್‍ಭಟ್‍ಅವರೊಂದಿಗೆ 'ಗಾಳಿಪಟ-2, ಸಿಂಪಲ್‍ಸುನಿ ಅವರಚಿತ್ರದಲ್ಲಿ ನಟಿಸಲುಒಂದು ಸುತ್...
ಕನ್ನಡತನ+ಪ್ರೀತಿ=ಗೀತಾ
ಗೋಕಾಕ್ ಚಳಿವಳಿ ಮಾಹಿತಿ, ಸುಂದರ ಮುಗ್ದ ಪ್ರೀತಿಕತೆ 'ಗೀತಾ' ಚಿತ್ರದಲ್ಲಿ ಸೊಗಸಾಗಿ ಮೂಡಿಬಂದಿದೆ.ಗೋಕಾಕ್ ವರದಿ ಸನ್ನಿವೇಶಗಳು ಚಿತ್ರದಅರ್ಧ ಭಾಗ ಕಾಣಿಸಿಕೊಳ್ಳುತ್ತದೆ. ಇಂದಿನ ಯುವಜನಾಗಂಕ್ಕೆಇದರ ಬಗ್ಗೆ ಮಾಹಿತಿಇಲ್ಲ. ವಿಷಯದಬಗ್ಗೆ ಆಸಕ್ತಿ ಇರುವವರುಚಿತ್ರ ನೋಡಬಹುದು. ಸಿನಿಮಾದಲ್ಲಿಚೌಕಟ್ಟು ಮೀರದ ಪಾತ್ರಗಳು ಇರಲಿದೆ. ನೋಡುಗನಿಗೆಅರ್ಥವಾಗುವಂತೆಚಿತ್ರಕತೆಇರುವುದು ಪ್ಲಸ್ ಪಾಯಿಂಟ್‍ಆಗಿದೆ. ಕ...
ಗಣೇಶ್‍ಮೊದಲ ಬಾರಿಆ್ಯಂಗ್ರ್ರಿಯಂಗ್ ಮ್ಯಾನ್‍ಆಗಿಗಮನ ಸೆಳೆಯುತ್ತಾರೆ.ಚಳುವಳಿ ಹೋರಾಟಗಾರ, ಪ್ರೀತಿಯಲ್ಲಿ ಬೀಳುವ ಮುಗ್ದನಾಗಿ ಎರಡು ಶೇಡ್‍ಗಳಲ್ಲಿ ಸುಲಲಿತವಾಗಿ ನಟನೆ ಮಾಡಿದ್ದಾರೆ. ಶಾನ್ವಿಶ್ರೀವಾತ್ಸವ್ ಎರಡುಕಾಲದಲ್ಲಿಚೆನ್ನಾಗಿ ನಟಿಸಿದ್ದಾರೆ.ಪ್ರಯಾಗ್‍ರಾವ್, ಪಾರ್ವತಿಅರುಣ್, ಸುಧಾರಾಣಿ, ದೇವರಾಜ್‍ಗೆ ಹೆಚ್ಚು ಸ್ಕೋಪ್ ಸಿಕ್ಕಿದೆ.ಅಚ್ಯುತಕುಮಾರ್, ರಂಗಾಯಣರಘುಅವರಿಗೆಕಡಿಮೆ ಅವಕಾಶ. ಸಂತೋಷ್‍ಆ...
ನಿರ್ಮಾಣ: ಶಿಲ್ಪಗಣೇಶ್-ಸೈಯದ್‍ಸಲಾಂ
ಪರ ಭಾಷಾ ಚಿತ್ರಗಳಿಗೆ ಗಣೇಶ್‍ಖಡಕ್‍ಎಚ್ಚ ರಿಕೆ
'ಗೀತಾ' ಚಿತ್ರಮಹಿಳಾ ಪ್ರಧಾನಕತೆಯು 80ರ ಕಾಲಘಟ್ಟದಿಂದ ಪ್ರಸಕ್ತಕಾಲದವರೆಗೂ ಕಾಣಿಸಿಕೊಳ್ಳುತ್ತದೆ.ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದಗಣೇಶ್‍ನಿರ್ದೇಶಕರು ಹೇಳಿದ ಒನ್ ಲೈನ್‍ಕತೆ ಮಿಂಚು ಬಂದಂತೆಆಯಿತು.ಶಂಕರ್‍ನಾಗ್ ನಟಿಸಿದ ಚಿತ್ರದ ಹೆಸರುಇಡಲಾಗಿದೆ.ಕರ್ನಾಟಕದಲ್ಲಿಕನ್ನಡಿಗನೇಯಜಮಾನ, ಸಾರ್ವಭೌಮ.ಯುವಕನಾಗಿದ್ದಾಗಕನ್ನಡ ಚಳುವಳಿ ನಾಯಕ.ಮೊದಲಬಾರಿಆ್ಯಂಗ್ರಿಯಂಗ್‍ಮ್ಯಾನ್ ಆಗಿ ಕಾಣಸಿಕೊ...
ಪ್ರೀತಿ ಮತ್ತುಗೋಕಾಕ್‍ಘಟನೆ ಹೀಗೆ ಎರಡುತಲೆಮಾರಿನಲ್ಲಿಚಿತ್ರವು ಸಾಗುತ್ತದೆ. ಹಳೇ ಗೀತಾ ಹಾಡನ್ನು ಬಳಸಲಾಗಿದೆ. ಹಿರಿಯ ನಟಿ ಸುಧಾರಾಣಿ ಸೇರಿದಂತೆ ಶಾನ್ವಿಶ್ರೀವಾತ್ಸವ್ ಎರಡು ಪಾತ್ರ, ಮೂರು ಶೇಡ್‍ಗಳಲ್ಲಿ ಬರುತ್ತಾರೆ. ಉಳಿದಂತೆ ಪ್ರಯೋಗ್‍ಮಾಲ್ಟಿನ್, ಪಾರ್ವತಿಅರುಣ್ ನಾಯಕಿಯರು.ಇವರೊಂದಿಗೆದೇವರಾಜ್, ರಂಗಾಯಣರಘುಅಚ್ಯುತಕುಮಾರ್ ನಟಿಸಿದ್ದಾರೆ. ಕನ್ನಡಅಂತ ಬಂದಾಗ ವಿಷಯವುಗಂಭೀರವಾಗುತ್ತದೆ.ಇಂತಹು...
ಪೈರಸಿ ತಡೆಯಲು ವಿಶೇಷ ಯೋಜನೆ ಹಾಕಲಾಗಿದೆ. ಮುಂಜಾಗ್ರತಕ್ರಮವಾಗಿ ಪೋಲೀಸ್‍ಆಯುಕ್ತರಿಗೆದೂರು ನೀಡಲಾಗಿದ್ದು, ಪೈರಸಿ ಆದತಕ್ಷಣಇದನ್ನುತೆಗೆದುಹಾಕಲು ಸಂಸ್ಥೆಯೊಂದಿಗೆಒಪ್ಪಂದ ಮಾಡಿಕೊಳ್ಳಲಾಗಿದೆ. ವಿದೇಶದಲ್ಲಿ ಪ್ರದರ್ಶನ ಹಾಕಿದರೂ ಶೇಕಡ ಹದಿನೈದರಷ್ಟು ಲಾಭ ಬರುತ್ತದೆ.ಆದರೆ ಏಕಕಾಲಕ್ಕೆ ಅಲ್ಲಿ ಬಿಡುಗಡೆ ಮಾಡಿದರೆ ನಕಲು ಮಾಡುವ ಸಂದೇಹ ಬರುತ್ತದೆ.ಅದರಿಂದಲೇ ಮೂರು ವಾರದ ನಂತರಜನರಿಗೆತೋರಿಸಲಾಗುವುದು...
ಗಣೇಶ್ ಮುಂದಿನ ಚಿತ್ರ ಗೀತಾ
ಗಣೇಶ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಅದರ ಸಾಲಿಗೆ 'ಗೀತಾ' ಚಿತ್ರವು ಸೇರ್ಪಡೆಯಾಗಿದೆ. ಶೀರ್ಷಿಕೆ ಕೇಳಿದಾಗ ಶಂಕರ್‍ನಾಗ್ ಮತ್ತು ನಾಯಕಿಯಾಗಿ ಪತ್ನಿ ತಂಗಿ ಅಕ್ಷತರಾವ್ ಅಭಿನಯದಲ್ಲಿ ಇದೇ ಹೆಸರಿನ ಚಿತ್ರವೊಂದು ತೆರೆಕಂಡಿತ್ತು. ಇಳಯರಾಜ ಸಂಗೀತದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿ ಇಂದಿಗೂ ಗುನುಗುವಂತೆ ಮಾಡಿದೆ. ಹಾಗಂತ ಆ ಚಿತ್ರಕ್ಕೂ ಇದರ ಕತೆಗೂ ಸಂಬಂದವಿಲ್ಲ. ಮಿಸಸ್ ಅಂಡ್ ...
ಪೋಷಕರ ಮದುವೆ ಒತ್ತಡಕ್ಕೆ ತನ್ನನ್ನು ತಾನೇ ಮದುವೆಯಾದಳು ಯುವತಿ..! – Page 15 – Welcome to First News
ಪೋಷಕರ ಮದುವೆ ಒತ್ತಡಕ್ಕೆ ತನ್ನನ್ನು ತಾನೇ ಮದುವೆಯಾದಳು ಯುವತಿ..!
ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಬಹುತೇಕ ಪೋಷಕರು ಬೆಳೆದು ನಿಂತ ಹೆಣ್ಣು ಮಕ್ಕಳನ್ನು ಧಾರೆ ಎರೆದು ಕೊಟ್ಟರೇ ಸಾಕು ಎಂದುಕೊಳ್ಳುತ್ತಾರೆ. ಅವರ ಆ ಅಭಿಪ್ರಾಯದಲ್ಲಿ ಮಕ್ಕಳ ಬದುಕಿನ ಬಂಡಿ ಸರಾಗವಾಗಿ ಸಾಗಲಿ ಎನ್ನುವ ಇರಾದೆ ಇರುತ್ತದೆ. ಕೆಲವರ ಮನೆಯಲ್ಲಿ ಮದುವೆ ಆಗು, ಮದುವೆ ಆಗು ಎಂದು ಒತ್ತಡ ಹೇರುತ್ತಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಾದರೇ ಮುಗಿದೇ ಹೋಯಿತು. ಬೇಗ ಮದುವೆಯಾಗು ಎನ್ನು...
ಆಕ್ಸ್​​ಫರ್ಡ್​ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಉಗಾಂಡ ಮೂಲದ ಲುಲು ಜೆಮಿಮಾ(32) ಆಗಸ್ಟ್​ 27 ರಂದು ತನ್ನ ಅಣಕು ಮದುವೆಯನ್ನು ಏರ್ಪಡಿಸಿದ್ದಳು. ಮದುವೆ ನಿಗದಿಯಾಗಿದ್ದ ಸ್ಥಳಕ್ಕೆ ವೆಡ್ಡಿಂಗ್​​ ಗೌನ್​​​ನಲ್ಲಿ ಹೋಗಿದ್ದಳು. ಅಲ್ಲದೆ ರೂಢಿಯಂತೆ ಮದುವೆಯಲ್ಲಿ ಸ್ಪೀಚ್ ಕೂಡ ಕೊಟ್ಟಳು. ಈ ವೇಳೆ ಆಕೆ ವರ ಸಿಗದಿರುವ ಕುರಿತು ಅತಿಥಿಗಳಿಗೆ ವಿವರಣೆ ನೀಡಿದಳು.
ಜೆಮಿಮಾಳ ಪೋಷಕರು ಮದುವೆಗೆ ಬಂದಿರಲಿಲ್ಲ. ಆದರೆ ಸಮಾರಂಭದ ಬಳಿಕ ಲುಲು ತನ್ನ ತಾಯಿ ಜೊತೆ ಮಾತನಾಡಿ ಆಕೆಗೆ ವಿಷಯವನ್ನು ವಿವರಿಸಿದ್ದಾಳೆ. ನಾವು ಮರುದಿನ ಮಾತನಾಡಿದಾಗ ನನ್ನ ತಾಯಿ ಸ್ವಲ್ಪ ಗೊಂದಲಕ್ಕೊಳಗಾಗಿದ್ದರು. ಸ್ವಲ್ಪ ನೋವಾದಂತೆ ಮಾತನಾಡುತ್ತಿದ್ದರು, ಆದರೆ ವಿವಾಹದ ಉಡುಪನ್ನು ಧರಿಸುವುದರ ಮೂಲಕ ನಾನು ಮದುವೆಗೆ ಸಿದ್ಧವಾಗಿದ್ದನೆಂದು ವಿವರಿಸಿದೆ ಎಂದು ಲುಲು ಹೇಳುತ್ತಾಳೆ.
ನಾನು 16 ವರ್ಷದವಳಿದ್ದಾಗಲೇ ನನ್ನ ತಂದೆ ಮದುವೆಯ ಭಾಷಣವನ್ನು ಬರೆದಿದ್ದರು. ಪ್ರತಿ ಜನ್ಮದಿನದಂದು ನನ್ನ ತಾಯಿ ನನಗೆ ಒಳ್ಳೆಯ ಗಂಡ ಸಿಗಲೆಂದು ಪ್ರಾರ್ಥಿಸುತ್ತಿದ್ದಳು. ನನ್ನ 32ನೇ ಹುಟ್ಟುಹಬ್ಬದಂದು ನನ್ನನ್ನು ನಾನೇ ಮದುವೆಯಾಗುವ ಮೂಲಕ ಅವರನ್ನು ಸುಲಭವಾಗಿ ಸಮಾಧಾನ ಮಾಡಲು ನಿರ್ಧರಿಸಿದೆನು ಎಂದು ಲುಲು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾಳೆ.
ಇನ್ನು ಲುಲು ಮದುವೆಗೆ ಖರ್ಚಾಗಿದ್ದು ಎಷ್ಟು ಅಂತೀರಾ? ಕೇವಲ 2.62 ಡಾಲರ್( ಅಂದಾಜು ₹194 ) ಅದೂ ಆಕೆ ಮದುವೆಯ ಸ್ಥಳಕ್ಕೆ ಹೋಗಲು ಖರ್ಚು ಮಾಡಿದ ಟ್ರಾವೆಲಿಂಗ್​ ಚಾರ್ಜಸ್​ ಅಷ್ಟೇ. ಲುಲುಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಆಕೆಯ ಸ್ನೇಹಿತೆ ವೆಡ್ಡಿಂಗ್​ ಗೌನ್​ ತರಿಸಿದ್ದಳು. ಲುಲು ಅಣ್ಣ ಮದುವೆಗೆ ಕೇಕ್​ ತಯಾರಿದ್ದರು. ಇನ್ನು ಬಾರ್​ವೊಂದರಲ್ಲಿ ಈ ಮದುವೆ ನಡೆದಿದ್ದು, ಅಲ್ಲಿಗೆ ಬಂದಿದ್ದ ಅತಿಥಿಗಳ...
ಸಮಸ್ಯೆಗಳ ಆಗರ ಹುಡಗಿ ಗ್ರಾಮ | Prajavani
ಸಮಸ್ಯೆಗಳ ಆಗರ ಹುಡಗಿ ಗ್ರಾಮ
Published: 26 ಡಿಸೆಂಬರ್ 2017, 12:35 IST
Updated: 26 ಡಿಸೆಂಬರ್ 2017, 12:35 IST
ಹುಮನಾಬಾದ್‌: ಸರ್ಕಾರಿ ಆಸ್ಪತ್ರೆಗಳ ಆಸುಪಾಸು ಸಂಗ್ರಹಗೊಂಡಿರುವ ತ್ಯಾಜ್ಯ. ನಂದಗಾಂವ್‌ ಮಾರ್ಗದಲ್ಲಿ ಮಹಿಳೆಯರ ಬಯಲು ಶೌಚ. ಹಂದಿಗಳ ತಾಣವಾಗಿರುವ ಸರ್ಕಾರಿ ಶಾಲೆ ಅಕ್ಕಪಕ್ಕದ ಸ್ಥಳ. ರಸ್ತೆಯ ಮೇಲೆ ಹರಿಯುವ ಚರಂಡಿ ನೀರು. ಬಸ್‌ ನಿಲ್ದಾಣ ತೆರವುಗೊಳಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲುವ ವಿದ್ಯಾರ್ಥಿ ಹಾಗೂ ಪ್ರಯಾಣಿಕರು. ಇದು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಹುಡಗಿ ಗ್ರಾಮ...
ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ಅಂತರದಲ್ಲಿರುವ ಈ ಗ್ರಾಮ ಪವಾಡ ಪುರುಷ ದಿಗಂಬರ ಕರಿಬಸವೇಶ್ವರರು ನೆಲೆಸಿದ ಪುಣ್ಯಭೂಮಿ. ತರಕಾರಿ ಬೇಸಾಯ, ಸಾವಯವ ಕೃಷಿ ಮೂಲಕ ಜಿಲ್ಲೆ ಗಮನಸೆಳೆದ ಮಾದರಿ ಕೃಷಿಕರು ಇಲ್ಲಿದ್ದಾರೆ. ಹುಡಗಿ ಗ್ರಾಮವನ್ನು ಒಂದೊಮ್ಮೆ ರಾಜ್ಯಕ್ಕೆ ಮಾದರಿ ಗ್ರಾಮವಾಗಿಸಲು ಪಣತೊಟ್ಟು ಹಗಲಿರುಳು ಶ್ರಮಿಸಿದ ಗ್ರಾಮ ಶಿಲ್ಪಿಗಳ ಖ್ಯಾತಿ ಇದೆ.
'ಬದಲಾದ ದಿನದಲ್ಲಿ ಗ್ರಾಮದಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಶ್ರಮಿಸುವ ಮನಸ್ಸುಗಳಿಲ್ಲ. ಗ್ರಾಮ ಶಿಲ್ಪಿ ಖ್ಯಾತಿ ಹೊಂದಿದ್ದ ದೇವೀಂದ್ರ ಪಂಚಾಳ, ಕಾಶಿನಾಥರಾವ ಪಾಟೀಲ ಅಂಥ ವ್ಯಕ್ತಿಗಳು ಈಗ ನೆನಪು ಮಾತ್ರ. ಅವರ ಜತೆಗೆ ಕೈಜೋಡಿಸಿದ್ದ ಕಂಟೆಪ್ಪಾ ದಾನಾ ಅವರು ಅವರ ಆದರ್ಶವನ್ನು ಮುಂದುವರಿಸಿಕೊಂಡು ಬರುತ್ತಿರುವುದು ನೆಮ್ಮದಿ ವಿಷಯ' ಎಂದು ಗ್ರಾಮಸ್ಥರು ತಿಳಿಸುತ್ತಾರೆ.
'ಸರ್ಕಾರಿ ಆಸ್ಪತ್ರೆಯಿಂದ ಸರ್ಕಾರಿ ಆಯುರ್ವೇದ ಆಸ್ಪತ್ರೆವರೆಗಿನ ₹16 ಲಕ್ಷದ ರಸ್ತೆ ಅಭಿವೃದ್ಧಿಗೆ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ವರ್ಷದ ಹಿಂದೆ ಕೈಗೊಂಡ ಸಿಂಧನಕೇರಾ ರಸ್ತೆ ಹದಗೆಟ್ಟಿದೆ. ವಾರ್ಡ್‌ ಸಂಖ್ಯೆ– 1 ಮತ್ತು 8ರಲ್ಲಿ ಶೌಚಾಲಯ ಸೌಲಭ್ಯವಿಲ್ಲದ ಕಾರಣ ಮಹಿಳೆಯರು ಈಗಲೂ ಬಯಲು ಶೌಚಕ್ಕೆ ಹೋಗುತ್ತಾರೆ' ಎನ್ನುತ್ತಾರೆ ದಶರಥ ಬು...
'ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜನತಾನಗರದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ನೀಡಿದ ಪ್ರಾಮುಖ್ಯತೆ ಚರಂಡಿಗೆ ನೀಡದ ಕಾರಣ ರಸ್ತೆ ಮಧ್ಯೆ ಗಲೀಜು ನೀರು ಹರಿಯುತ್ತದೆ' ಎನ್ನುತ್ತಾರೆ ಸಂದೀಪ ಸೋಲಪುರೆ, ಸಚ್ಚಿದಾನಂದ ಹಿರೇನಾಗಾಂವ್‌.
'ದಶಕ ಹಿಂದೆ ಅಸ್ತಿತ್ವಕ್ಕೆ ಬಂದ ಪಂಚಾಯಿತಿ ವ್ಯಾಪ್ತಿಯ ರಾಮನಗರ ನಿವಾಸಿಗಳು ರಸ್ತೆ, ಚರಂಡಿ, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳ ಬಳಿ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದು, ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಆದರೆ, ನಮ್ಮ ಹೆಸರು ಪಂಚಾಯಿತಿ ದಾಖಲಾಗಿಲ್ಲ. ಆ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು' ಎಂದು ಅಲ್ಲಿನ ನಿವಾಸಿಗ...
'ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ₹1 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಶಾಸಕ ಪಾಟೀಲರು ತಿಳಿಸಿದ್ದಾರೆ. ಗ್ರಾಮದ ಸಮಸ್ಯೆಗಳೂ ಬಗೆಹರಿಸಲಾಗುವುದು' ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭು ಮಾಳನಾಯಕ.
ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ | ನಿಲುಮೆ
ಜುಲೈ 3, 2020
– ವಿಶ್ವನಾಥ ಸುಂಕಸಾಲ
ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.
ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ 'ಭಾರತ ದರ್ಶನ ಪ್ರಕಾಶನ'.
ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನ...
ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.
ಕಳೆದ 64 ವರ್ಷಗಳಿಂದ ಸಂಸ್ಥೆಯು ಇದೇ ಸೇವಾ ಮನೋಭಾವದಿಂದ, ಭಗವದ್ಭಕ್ತಿಯ ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ. ಈ ಪ್ರಕಾಶನದಿಂದ ಪ್ರಕಟವಾದ ಸಂಪುಟಗಳ ವಿವರ ಹೀಗಿದೆ:
* ರಾಮಾಯಣದ 11 ಸಂಪುಟಗಳು – 1,100 ರೂ
* ಮಹಾಭಾರತ – 32 ಸಂಪುಟಗಳು – 3,200 ರೂ
* ಭಾಗವತ – 9 ಸಂಪುಟಗಳು = 900 ರೂ
* ಹರಿವಂಶ – 6 ಸಂಪುಟ = 600 ರೂ
* ಮಾರ್ಕಂಡೇಯ ಪುರಾಣ – 4 ಸಂಪುಟ= 400 ರೂ.
* ಶ್ರೀವಿಷ್ಣುಪುರಾಣ – 2 ಸಂಪುಟ- 200 ರೂ.
ಒಟ್ಟೂ 64 ಸಂಪುಟಗಳ ಬೆಲೆ 6,000 ರೂಪಾಯಿಗಳು.
ಇವುಗಳ ಜೊತೆ ಈ ಸಂಪುಟಗಳ ಈ ಬುಕ್ ಗೆ 3000,
ಇದೇ ಸಂಸ್ಥೆ ಅನೇಕ ದಶಕಗಳಿಂದ ಹೊರತರುತ್ತಿರುವ ಭಾರತ ದರ್ಶನವೆಂಬ ಮಾಸಪತ್ರಿಕೆಗೆ 15ವರ್ಷಗಳ ಪೋಷಕ ಸದಸ್ಯತ್ವಕ್ಕೆ 2,000.
ಇವಷ್ಟನ್ನೂ ಒಮ್ಮೆಲೇ ಕೊಂಡರೆ ಬರೀ 10,000 ಕ್ಕೆ ಇವೆಲ್ಲವೂ ಮನೆಬಾಗಿಲಿಗೆ ಬರುವುದು.ಅಂಚೆವೆಚ್ಚವೂ ಉಚಿತ.
ಮುಂದೊಂದು ಕಾಲದಲ್ಲಿ ಇಷ್ಟು ವಿಶದವೂ, ವಿಶುದ್ಧವೂ, ಸರಳವೂ ಆದ ರಾಮಾಯಣ, ಮಹಾಭಾರತಗಳನ್ನು ಪ್ರಕಾಶಿಸುವಷ್ಟು ತಾಳ್ಮೆ ಮುಂದಿನ ತಲೆಮಾರಿಗಿರುತ್ತೋ ಇಲ್ಲವೋ ಗೊತ್ತಿಲ್ಲ. ಮುದ್ರಣ, ಸಂಸ್ಕರಣ, ಪ್ರಸರಣದ ವ್ಯಯಗಳೆಲ್ಲ ತೀರಾ ಏರುತ್ತಿರುವ ಈ ಸ್ಥಿತಿಯಲ್ಲೂ ಅತ್ಯಂತ ಕಡಿಮೆ ಬೆಲೆಗೆ ರಾಮಾಯಣ, ಮಹಾಭಾರತ, ಪುರಾಣಗಳನ್ನೆಲ್ಲ ಮನೆಮನೆಗೆ ತಲುಪಿಸುತ್ತಿರುವ ಭಾರತ ದರ್ಶನ ಹಾಗೂ ಅದರಂಥ ಇನ್ನಿತರ ಸಂಸ್ಥೆಗಳಿಗೆ...
ಇಂಥ ಸಂಸ್ಥೆಗಳನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ನಾವು ಗ್ರಾಹಕರಾಗಬೇಕು. (ಸಾಧ್ಯವಾದರೆ ದಾನಿಗಳಾಗಿ ಪುಣ್ಯ ಕಟ್ಟಿಕೊಳ್ಳಲೂಬಹುದು).
ಭಾರತ ದರ್ಶನ ಪ್ರಕಾಶನವನ್ನು ಪುತ್ರರಾದ ಯೋಗ ನರಸಿಂಹರು ನೋಡಿಕೊಳ್ಳುತ್ತಿದ್ದಾರೆ. ವಿದೇಶದಲ್ಲಿ ಕೆಲಸದಲ್ಲಿದ್ದ ಇವರೀಗ ತಂದೆಯವರು ಆರಂಭಿಸಿದ ಈ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ನೊಂದು ವರ್ಷದೊಳಗೆ ಎಲ್ಲ ಸಂಪುಟಗಳನ್ನೂ ಉತ್ಕೃಷ್ಟ ಕಾಗದದಲ್ಲಿ ಮರುಮುದ್ರಣ ಮಾಡುವ ಕಾರ್ಯವನ್ನು ಆರಂಭಿಸುವ ಉದ್ದೇಶವಿಟ್ಟುಕೊಂಡಿದ್ದಾರೆ. ಆಗ ಅನಿರ್ವಾಹವಾಗಿ ದರವನ್ನು ಏರಿಸಲೇಬೇಕಾಗುತ್ತದೆ.
ಈಗಿರುವ ಪ್ರತಿಗಳಿಗೆ ಮಾತ್ರ ಈ ಮೇಲಿನ ರಿಯಾಯಿತಿ ದರ ಅನ್ವಯಿಸುತ್ತದೆ.
ಸಂಸ್ಕೃತಿಪ್ರಿಯರು, ಜಿಜ್ಞಾಸುಗಳು, ಧಾರ್ಮಿಕರು, ತಮ್ಮ ಗ್ರಂಥಾಲಯದಲ್ಲಿ ಈ ಪ್ರತಿಗಳನ್ನಿಟ್ಟುಕೊಳ್ಳಬೇಕು. ನಮ್ಮ ಮುಂದಿನ ತಲೆಮಾರಿಗೆ ಇಂಥ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸಬೇಕು.ಇದನ್ನು ನಮ್ಮ ಮನೆಯಲ್ಲೂ ಇಟ್ಟುಕೊಳ್ಳಬೇಕು. ಜೊತೆಗೆ, ಶಾಲಾ-ಕಾಲೇಜುಗಳಿಗೆ, ಸಂಸ್ಥೆಗಳಿಗೆ, ಬಂಧುಗಳಿಗೆ ಕೊಡುಗೆಯ ರೂಪದಲ್ಲಿಯೂ ಕೊಡಬಹುದು.
ರಾಮಾಯಣ, ಮಹಾಭಾರತಗಳ ಉಪಕಥೆಗಳನ್ನು ಈ ಪುಸ್ತಕಗಳ ಸಹಾಯದಿಂದ ಮಕ್ಕಳಿಗೆ ಹೇಳಬಹುದು. ಈ ಮೂಲಕ ಸಂಸ್ಕೃತಿಯನ್ನು ಬೆಳೆಸುವ ನಮ್ಮ ಕರ್ತವ್ಯ ನಿರ್ವಹಣೆಯ ಜೊತೆಗೆ, ಭಾರತ ದರ್ಶನ ಪ್ರಕಾಶನದ ಪುಣ್ಯ ಕಾರ್ಯದಲ್ಲೂ ಶ್ರೇಯೋಭಾಜರಾಗಬಹುದು.
ಹಿಜಬ್ ಧರಿಸಿದ್ದ ಮಹಿಳೆಗೆ ಚೂರಿ ಇರಿತ | Prajavani
ಹಿಜಬ್ ಧರಿಸಿದ್ದ ಮಹಿಳೆಗೆ ಚೂರಿ ಇರಿತ
ಹ್ಯೂಸ್ಟನ್: ಹಿಜಬ್ ಧರಿಸಿದ್ದ ನರ್ಸ್‌ ಮೇಲೆ ಇಬ್ಬರು ಯುವಕರು ಚೂರಿಯಿಂದ ಇರಿದಿದ್ದಾರೆ. ಅವರು ಮುಸ್ಲಿಂ ವಿರೋಧಿ ಚಟುವಟಿಕೆಯಿಂದ ಪ್ರೇರಿತಗೊಂಡು ಈ ದಾಳಿ ನಡೆಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ವಾಯವ್ಯ ಹ್ಯೂಸ್ಟನ್‌ನಲ್ಲಿ ಈ ಘಟನೆ ನಡೆದಿದೆ.
'ಗುರುವಾರ ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಮಹಿಳೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕೆಂಪು ವಾಹನವೊಂದು ಇವರ ಕಾರಿಗೆ ತಾಗಿಸಿಕೊಂಡು ಹೋಗಿದೆ. ಇದರಿಂದ ಗಾಬರಿಯಾಗಿ, ಕಾರಿನಿಂದ ಕೆಳಗಿಳಿದು ವಾಹನಕ್ಕೆ ಏನಾಗಿದೆ ಎಂದು ಮಹಿಳೆ ನೋಡುತ್ತಿದ್ದರು. ಮತ್ತೆ ತಿರುಗಿ ಬಂದ ಇಬ್ಬರು ದುಷ್ಕರ್ಮಿಗಳು, ಚಾಕುವಿನಿಂದ ಮಹಿಳೆಯ ಮುಖ, ಕೈ ಮೇಲೆ ದಾಳಿ ಮಾಡಿದ್ದಾರೆ' ಎಂದು ಅಮೆರಿಕನ್–ಇಸ್ಲಾಮಿಕ್ ರಿಲೇ...
ನೀರಿನ ಗುಣಮಟ್ಟ ಪರೀಕ್ಷೆ: ಜಲಮಂಡಳಿ ಆಗ್ರಹ | Prajavani
ನೀರಿನ ಗುಣಮಟ್ಟ ಪರೀಕ್ಷೆ: ಜಲಮಂಡಳಿ ಆಗ್ರಹ
ಪ್ರಜಾವಾಣಿ ವಾರ್ತೆ Updated: 20 ಜೂನ್ 2013, 01:18 IST
ಬೆಂಗಳೂರು: ನಗರದಲ್ಲಿ ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳ ಪ್ರಮಾಣ ಗಣನೀಯ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ `ಶುದ್ಧ ನೀರು' ಬಳಕೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಜಲಮಂಡಳಿ ಮುಂದಾಗಿದೆ.
ಮುಂಗಾರು ಮಳೆಯ ವಿಳಂಬ ಹಾಗೂ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಜಲಾಶಯಗಳು ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೆಲವು ಭಾಗಗಳಲ್ಲಿ ಕೊಡ ನೀರಿಗೂ ಪರದಾಡುವ ಸ್ಥಿತಿ ಇದೆ. ದುಬಾರಿ ಬೆಲೆಗೆ ನೀರು ಖರೀದಿ ಮಾಡುವ ಪ್ರಮೇಯ ಎದುರಾಗಿದೆ. ಇದೇ ಹೊತ್ತಿನಲ್ಲಿ ಸಾರ್ವಜನಿಕರು ಶುದ್ಧ ನೀರು ಬಳಕೆ ಮಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಸುರಕ್ಷತಾ ಸೂಚನೆಗಳ...
`ಮನೆ ಸಮೀಪದ ನೀರಿನ ಪೈಪ್‌ನಲ್ಲಿ ದೋಷ ಕಾಣಿಸಿಕೊಂಡು ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುವ ಉದಾಹರಣೆಗಳು ಇವೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ನೀರು ನಿಧಾನವಾಗಿ ಸಾಗುವ ಮಾರ್ಗಗಳಲ್ಲಿ ಜನರು ಗುಂಡಿಗಳನ್ನು ನಿರ್ಮಾಣ ಮಾಡಿ ಬಕೆಟ್ ಮೂಲಕ ನೀರು ಎತ್ತುತ್ತಾರೆ. ಈ ಗುಂಡಿಯಲ್ಲಿ ಮಳೆ ನೀರು, ಕೊಳಚೆ ನೀರು ಸೇರಿ ಕುಡಿಯುವ ನೀರಿನೊಂದಿಗೆ ಸೇರುತ್ತದೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗ...
`ನೀರು ಕಲುಷಿತವಾಗಿದೆ ಎಂಬ ಸಂಶಯ ಮೂಡಿದ ಕೂಡಲೇ ಸಮೀಪದಲ್ಲಿರುವ ಜಲಮಂಡಳಿಯ ಸೇವಾ ಠಾಣೆ ಹಾಗೂ ಕಚೇರಿಗೆ ಮಾಹಿತಿ ನೀಡಬೇಕು. ಸ್ಥಳದಲ್ಲಿ ನೀರು ಮಲಿನವಾಗಿದ್ದರೆ ತಕ್ಷಣ ಸರಿಪಡಿಸಿ ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧತೆಯನ್ನು ಕಾತರಿಪಡಿಸಲಾಗುತ್ತದೆ' ಎಂದು ಅವರು ತಿಳಿಸಿದರು.
`ಜಲಮಂಡಳಿ 85 ಸೇವಾ ಠಾಣೆಗಳನ್ನು ಹೊಂದಿದ್ದು, ಈ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ನಲ್ಲಿ, ಮನೆಗಳ ನೀರಿನ ಸಂಪರ್ಕ ಅಥವಾ ಭೂಮಟ್ಟದ ಜಲಾಗಾರಗಳಿಂದ ಪ್ರತಿ ವಾರಕ್ಕೆ ನಾಲ್ಕು ನೀರಿನ ಮಾದರಿಗಳನ್ನು ಸಂಗ್ರಹಿಸಿ ಮಂಡಳಿಯ ಕೇಂದ್ರ ಪರೀಕ್ಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಪ್ರತಿ ಸೇವಾ ಠಾಣೆ ವ್ಯಾಪ್ತಿಯಿಂದ ತಿಂಗಳಲ್ಲಿ 16 ನೀರಿನ ಮಾದರಿಗಳಂತೆ 85 ಸೇವಾ ಠಾಣೆಗಳಿಂದ ಪ್ರತಿತಿಂಗಳು ...
`ಕೇಂದ್ರ ಸರ್ಕಾರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆಯ ಮಾನದಂಡದ ಪ್ರಕಾರ ಪ್ರತಿ ತಿಂಗಳೂ 10,000 ಜನರಿಗೆ ಒಂದು ಮಾದರಿಯಂತೆ, ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಪ್ರಕಾರ ನಗರ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸುಮಾರು 800ರಿಂದ 1,000 ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ಕುಡಿಯುವ ನೀರಿನ ಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಮಂಡಳ...
`ಪರೀಕ್ಷೆ ವೇಳೆ ನೀರಿನಲ್ಲಿನ ಪಿ.ಎಚ್ ಮತ್ತು ಟರ್ಬಿಡಿಟಿ ಪರೀಕ್ಷೆ (ನೀರಿನ ಬಣ್ಣ) ಹಾಗೂ ನೀರಿನ ಕ್ಲೋರಿನ್ ಪ್ರಮಾಣವನ್ನು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ ಕ್ಲೋರಿನ್ ಪ್ರಮಾಣ 0.20 ಮಿಲಿಗ್ರಾಂ ಇದ್ದರೆ ಆ ನೀರು ಸುರಕ್ಷಿತ ಎಂದು ಅರ್ಥ. ಒಂದು ವೇಳೆ ಕ್ಲೋರಿನ್ ಪ್ರಮಾಣ ಪತ್ತೆಯಾಗದೆ ಇದ್ದಲ್ಲಿ ಅಂತಹ ನೀರು ಕಲುಷಿತವಾಗಿರುವ ಸಾಧ್ಯತೆ ಇರುವ ಕಾರಣ ಅಂ...
'); $('#div-gpt-ad-165482-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-165482').addClass('inartprocessed'); } else $('#in-article-165482').hide(); } else { _taboola.push({article:'auto', url:'https://www.prajavani.net/article/ನೀರಿನ-ಗುಣಮಟ್ಟ-ಪರೀಕ್ಷೆ-ಜಲಮಂ...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-165482 .field-name-body .field-items div.field-item > p'); if(x1 != null && x1.length != 0) { $('#node-165482 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-165482 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-165482'); }); } else { $('#in-article-mob-165482').hide(); $('#in-article-mob-3rd-165482').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು! | Flipkart: Binny Bansal replaces Sachin Bansal as new CEO - Kannada Oneindia
» ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!
ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!
Updated: Monday, January 11, 2016, 15:38 [IST]
ಬೆಂಗಳೂರು, ಜ. 11: ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬದಲಿಸಲಾಗಿದೆ ಎಂದು ಸೋಮವಾರ ಪ್ರಕಟಿಸಲಾಗಿದೆ. ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದಿದ್ದು ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಿಇಒ ಆಗಿ ತಕ್ಷಣದಿಂದ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಬ್ಲಾಗಿನಲ್ಲಿ ಹೇಳಲಾಗಿದೆ.
ಸಚಿನ್ ಬನ್ಸಾಲ್ ಅವರು ಸಂಸ್ಥೆಯ ಕಾರ್ಯಕಾರಿ ಚೇರ್ಮನ್ ಆಗಿ ಇನ್ಮುಂದೆ ಕಾರ್ಯನಿರ್ವಹಿಸಲಿದ್ದಾರೆ. ಬಿನ್ನಿ ಬನ್ಸಾಲ್ ಅವರು ಕಾಮರ್ಸ್, ಇಕಾರ್ಟ್(ಈ ಹಿಂದಿನ ಫ್ಲಿಪ್ ಕಾರ್ಟ್ ಲಾಜಿಸ್ಟಿಕ್ಸ್) ಹಾಗೂ ಮಿಂಟ್ರಾ(ಫ್ಯಾಷನ್ ಪೋರ್ಟಲ್) ಹೊಣೆ ಹೊತ್ತಿದ್ದಾರೆ.[ಫ್ಲಿಪ್ ಕಾರ್ಟಿಗೆ ಉಂಡೆನಾಮ ತಿಕ್ಕಿದ ಐನಾತಿ ಗ್ರಾಹಕ]
ಚಿತ್ರದಲ್ಲಿ ಎಡದಿಂದ ಬಲಕ್ಕೆ: ಬಿನ್ನಿ ಬನ್ಸಾಲ್, ಸಚಿನ್ ಬನ್ಸಾಲ್
ಮುಖೇಶ್ ಬನ್ಸಾಲ್ ಅವರು ಮಿಂಟ್ರಾ.ಕಾಂನ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ. ಮಿಂಟ್ರಾ.ಕಾಂನ ಸಿಇಒ ಅನಂತ್ ನಾರಾಯಣ್ ಅವರು ಇನ್ಮುಂದೆ ಬಿನ್ನಿ ಬನ್ಸಾಲ್ ಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂದು ಸಚಿನ್ ಬನ್ಸಾಲ್ ಅವರು ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್, ಫ್ಯಾಷನ್ ಸೇರಿದಂತೆ ಆನ್ ಲೈನ್ ಶಾಪಿಂಗ್, ಎಂ ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್ ಶೇ 60ರಷ್ಟು ಪಾಲು ಹೊಂದಿದೆ. 2007ರಲ್ಲಿ ಆರಂಭವಾದ ಬೆಂಗಳೂರು ಮೂಲದ ಕಂಪನಿ ಈಗ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತಿದೊಡ್ಡ ಐಪಿಒ ಬಿಡುಗಡೆ ಮಾಡುವ ತಯಾರಿಯಲ್ಲಿದೆ.[ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್, 'ನೋ ವೆಬ್ ಸರ್ವೀಸ್']
Read in English: Binny Bansal appointed Flipkart CEO