text
stringlengths
0
61.5k
October 1, 2012 June 8, 2015
ತಾಯಿಗೊಬ್ಬ ಮಗ ಇದ್ದನು. "ಗಳಿಸಿಕೊಂಡು ಬರುತ್ತೇನೆ. ರೂಕ್ಕ ತರುತ್ತೇನೆ. ನೂರು ರೂಪಾಯಿಕೊಡು" ಎಂದು ಮಗನು ತಾಯಿಗೆ ಕೇಳುತ್ತಾನೆ. "ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು. ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಬಾರದೇ" - ಎಂದು...
September 17, 2012 June 8, 2015
ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ; ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ. ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರುದಿನಕ್ಕೊಮ್ಮೆ...
ಮಲವಯ್ಯ ಶೆಟ್ಟಿ
August 20, 2012 June 8, 2015
ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ. ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ...
ಅಭೇದಾ
August 13, 2012 June 8, 2015
ತಾಯಿತಂದಿಗಳಿಗೆ ಇಬ್ಬರು ಮಕ್ಕಳು- ಗಂಡೊಂದು ಹೆಣ್ಣೊಂದು. ಜಂಗಮನೊಬ್ಬ ಭಿಕ್ಷಾಕ್ಕ ಬಂದ - "ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ- ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ...
ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ: ಎಚ್ಚರಿಕೆ | Prajavani
ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ: ಎಚ್ಚರಿಕೆ
Published: 17 ಆಗಸ್ಟ್ 2018, 22:33 IST
Updated: 17 ಆಗಸ್ಟ್ 2018, 22:33 IST
ಚಿಕ್ಕಮಗಳೂರು: ಎರಡು ತಿಂಗಳಿನಿಂದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಭಾಗದ ಕಾಫಿ ಬೆಳೆಗಾರರು ಅತಿವೃಷ್ಟಿಗೆ ಸಿಲುಕಿದ್ದಾರೆ. ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಕ್ರಮ ವಹಿಸದಿದ್ದರೆ ಜನಪ್ರತಿನಿಧಿಗಳು ಮತ್ತು ಕಾಫಿ ಮಂಡಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಅಧ್ಯಕ್ಷ ಬಿ.ಎಸ್‌.ಜೈರಾಂ,...
ಅತೀವ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಅಡಿಕೆ, ಶುಂಠಿ, ಭತ್ತ, ಏಲಕ್ಕಿ, ಇತರ ಎಲ್ಲ ಬೆಳೆಗಳು ನಾಶವಾಗಿವೆ. ಕಾಫಿ ಗಿಡಗಳೂ ಎಲೆ ಉದುರಿ ಕೊಳೆಯುತ್ತಿವೆ. ಶೇ 80ರಷ್ಟು ಕಾಫಿ ಫಸಲು ನೆಲಕಚ್ಚಿದೆ. ಕಾಳುಮೆಣಸು ಬೆಳೆಯಲ್ಲಿ ಸೊರಗು ರೋಗ ಕಾಣಿಸಿದೆ. ಜೊತೆಗೆ ಮೆಣಸು ಗರಿಗಳು ಉದುರುತ್ತಿವೆ ಎಂದು ತಿಳಿಸಿದ್ದಾರೆ.
ಮೂರು ಜಿಲ್ಲೆಯಿಂದ ಅತಿವೃಷ್ಟಿಗೆ ಸುಮಾರು ₹ 160 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಸ್ಥಳ ಪರಿಶೀಲಿಸಿ ಬೆಳೆಗಾರರು, ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಹಾರ ರೂಪಿಸಬೇಕು. ಇಲ್ಲದಿದ್ದ ಕಾಫಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಒಗ್ಗೂಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
15 ಲಕ್ಷ ಕುಟುಂಬಗಳಿಗೆ ಆಸರೆಯಾಗಿಉವ ಕಾಫಿ ಉಧ್ಯಮಕ್ಕೆ ಪೆಟ್ಟು ಬಿದ್ದರೆ, ಸಮಸ್ಯೆಯಾಗುವುದರಲ್ಲಿ ಸಂದೇಹ ಇಲ್ಲ. 23 ವರ್ಷಗಳ ಹಿಂದೆ ಅರೇಬಿಕಾ ಕಾಫಿ ಬೆಲೆ 50 ಕೆ.ಜಿ.ಗೆ ₹ 8,000 ಇತ್ತು. ಪ್ರಸ್ತುತ ₹ 6,250 ಬೆಲೆ ಇದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಬಗ್ಗ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದ್ದರೂ ಗಮನ ಹರಿಸುತ್ತಿಲ್ಲ. ಕಾಫಿ ಮಂಡಳಿ ನಿಷ್ಕ್ರಿಯವಾಗಿದೆ ಎಂದು ದೂಷಿಸಿದ್...
2017-18 ನೇ ಸಾಲಿನಲ್ಲಿ ಕಾಫಿ ರಫ್ತಿನಿಂದ ವಿದೇಶಿ ವಿನಿಮಯ ಬಾಬ್ತಿನಲ್ಲಿ ಕೇಂದ್ರ ಸರ್ಕಾರಕ್ಕೆ 3,882 ಕೋಟಿ ಸಂದಾಯವಾಗಿದೆ.ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಅಂತಾರಾಷ್ಟ್ರೀಯಮಟ್ಟದಲ್ಲಿ ಕಾಫಿ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ಅಧ್ಯಯನ ನಡೆಸಿ, ಬೆಳೆಗಾರರಿಗೆ ಮಾಹಿತಿ ನೀಡಬೇಕು.
ಬೀಜ- ಬೆಳೆಯವರೆಗಿನ ವಿಮೆ ಚಾಲ್ತಿಗೆ ತರಬೇಕು. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ₹ 3 ಲಕ್ಷ ದವರೆಗೆ, ₹ 3 ಲಕ್ಷದಿಂದ 10 ಲಕ್ಷದವರೆಗೆ ಶೇ 3 ಬಡ್ಡಿದರದಲ್ಲಿ ಸಾಲ ಸೌಲಭ್ಯನೀಡಬೇಕು. ಬೆಳೆ ನಾಶವಾಗಿರುವುದರಿಂದ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆಗಾರರು ಪಡೆದಿರುವ ಸಾಲಮನ್ನಾ ಮಾಡಬೇಕು ಎಂ...
|ಸಂಘಟನೆಯಿಂದ ಸಮಾಜ ಮುಖ್ಯ ವಾಹಿನಿಗೆ - chitradurga - News in kannada, vijaykarnataka
ಸಂಘಟನೆಯಿಂದ ಸಮಾಜ ಮುಖ್ಯ ವಾಹಿನಿಗೆ
ವಿಕ ಸುದ್ದಿಲೋಕ | Updated: Apr 18, 2017, 08:41PM IST
ಚಿತ್ರದುರ್ಗ : ಸಂಘಟಿತ ಹೋರಾಟದ ಕಡೆ ಹೆಚ್ಚಿನ ಗಮನ ನೀಡಿದಾಗ ಮಾತ್ರ ಸವಿತಾ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಸವಿತಾ ಸಮಾಜದ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ರಾಜಣ್ಣ ತಿಳಿಸಿದರು.
ನಗರದ ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಸವಿತಾ ನೌಕರರ ತಾಲೂಕು ಶಾಖೆ ಉದ್ಘಾಟಿಸಿ ಮಾತನಾಡಿ, ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಸವಿತಾ ಸಮಾಜದ ಶಾಪ ವಿಮೋಚನೆಯಾಗಲು ಸಮಾಜದ ಸಂಘಟಿತ ಹೋರಾಟ ಅತ್ಯಗತ್ಯ ಎಂದು ಹೇಳಿದರು.
ಅತ್ಯಂತ ಕಡು ಬಡತನದಿಂದ ಜೀವನ ಸಾಗಿಸುತ್ತಿರುವ ನಮ್ಮ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ರಾಜಕೀಯ, ಶೈಕ್ಷ ಣಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಸಮಾಜ ಶೋಚನೀಯ ಸ್ಥಿತಿಯಲ್ಲಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಮುಖ್ಯವಾಗಿ ವಿದ್ಯಾಭ್ಯಾಸ ನೀಡಬೇಕು ಎಂದರು.
ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ಶಾಖೆಯಿಂದ ನಾನಾ ಕಾರ್ಯಕ್ರಮ ರೂಪಿಸಲಾಗಿದೆ. ಹಾಸ್ಟೆಲ್‌ ಸೌಲಭ್ಯ, ಧನ ಸಹಾಯ, ಕೌಶಲ್ಯ ತರಬೇತಿ ಹಾಗೂ ಐಎಎಸ್‌ ಮತ್ತು ಐಪಿಎಸ್‌ ಪರೀಕ್ಷೆ ಪಾಸು ಮಾಡಲು ಪೂರಕ ತರಬೇತಿ ನಡೆಸಲಾಗುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್‌.ಚಂದ್ರಶೇಖರ್‌ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಭಾಗಗಳಿಗೂ ಸಮಾಜದ ಶಾಖೆಗಳನ್ನು ವಿಸ್ತರಿಸಲಾಗುತ್ತಿದೆ. ಆ ಮೂಲಕ ಸಮಾಜ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳ ನೆರವಿಗೆ ಜಿಲ್ಲಾ ಸವಿತಾ ಸಮಾಜ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸರಕಾರದ ನೆರವಿನಿಂದ ನಗರದಲ್ಲಿ ಸುಸಜ್ಜಿತ ಸವಿತಾ ಭವನ ಮತ್ತು ವಿದ್ಯಾರ್...
ಸನ್ಮಾನಿತೆ ಅಫ್ಜಲ್‌ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಧ್ಯಾಪಕಿ ಡಾ.ರೇಖಾ ನರಸಿಂಹ ಮಾತನಾಡಿ, ನಮ್ಮ ಕುಲಬಾಂಧವರು ಮೊದಲು ಕೀಳಿರಿಮೆ ಬಿಡಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅದ್ಯತೆ ನೀಡುವುದರ ಮೂಲಕ ಶೈಕ್ಷ ಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಚಲಪತಿ, ಉಪಾಧ್ಯಕ್ಷ ಕೇಶವಮೂರ್ತಿ, ಖಜಾಂಚಿ ಲೋಕೇಶ್‌, ಕಾರ್ಗಿಲ್‌ ಯೋಧ ನರಸಿಂಹ, ಉಪನ್ಯಾಸಕ ಬಸವರಾಜಪ್ಪ, ಶಿಕ್ಷ ಕ ಕೆ.ಎನ್‌.ಶ್ರೀನಿವಾಸ ಮೂರ್ತಿ, ಶಾಂತಮ್ಮ, ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿದರು.
ಎಸ್‌.ಕಾವ್ಯ ಭರತನಾಟ್ಯ ಪ್ರದರ್ಶಿಸಿದರು. ನಿವೃತ್ತ ನೌಕರರಿಗೆ, ಪ್ರತಿಭಾವಂತರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಎ.ಲಕ್ಷ್ಮಿನಾರಾಯಣಪ್ಪ, ಅಂತರರಾಷ್ಟ್ರೀಯ ಕ್ರೀಡಾಪಟು ಎನ್‌.ಡಿ.ಕುಮಾರ್‌, ವಾಣಿಜ್ಯೋದ್ಯಮಿ ವೇಣುಗೋಪಾಲ್‌, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್‌.ಶ್ರೀನಿವಾಸ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್‌.ನಾಗರಾಜ್‌ ಮತ್ತಿತರರಿದ್ದರು.
ಭಾರತದಲ್ಲಿ ಹೂಡಿಕೆ ಮಾಡಿ: ಅಮೆರಿಕಕ್ಕೆ ಅಂಬಾನಿ ಸ್ವಾಗತ | Prajavani
ಭಾರತದಲ್ಲಿ ಹೂಡಿಕೆ ಮಾಡಿ: ಅಮೆರಿಕಕ್ಕೆ ಅಂಬಾನಿ ಸ್ವಾಗತ
ವಾಷಿಂಗ್ಟನ್ (ಐಎಎನ್‌ಎಸ್): 'ಭಾರತ ಮತ್ತು ಚೀನಾ ದಾಖಲೆಯ ಆರ್ಥಿಕ ಪ್ರಗತಿ ಕಾಣುತ್ತಿದ್ದು, ಅಮೆರಿಕದ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ' ಎಂದು ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಹೇಳಿದ್ದಾರೆ. 'ಜಾಗತಿಕ ಆರ್ಥಿಕತೆಯ ಪಲ್ಲಟ ಮತ್ತು ವ್ಯಾಪಾರ ಮೇಲೆ ಅದರ ಪ್ರಭಾವ' ಕುರಿತು ಇಲ್ಲಿ ನಡೆದ ಸಮ್ಮೇಳನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅನಿಲ್, ಅಮೆರಿಕದ ಕಂಪೆನಿಗಳು...
'ಮುಂದುವರೆಯುತ್ತಿರುವ ದೇಶಗಳು ಹೆಚ್ಚು ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸದ್ಯ ಆಹಾರ ಹಣದುಬ್ಬರ ದರ ಏರುತ್ತಿರುವುದು ಭಾರತದ ಮುಂದಿರುವ ಪ್ರಮುಖ ಸವಾಲು. ಆದರೆ, ದೇಶದ ಆರ್ಥಿಕತೆ ಸಧೃಡವಾಗಿದೆ' ಎಂದರು. ಇನ್ನೊಂದು ದಶಕದಲ್ಲಿ ಭಾರತದಲ್ಲಿ 30 ವರ್ಷದೊಳಗಿನವರ ಸಂಖ್ಯೆ ಅರ್ಧ ಶತಕೋಟಿಗೆ ಏರಲಿದೆ. ಮೂಲಸೌಕರ್ಯ ವೃದ್ಧಿ ಮತ್ತು ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ...
ಅ. 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ ಮತ್ತು ಆಚರಣೆಯ ವಿಷಯ | International Day of The Girl Child 2019: Theme And Significance - Kannada BoldSky
ಹೆಣ್ಣು ಮಕ್ಕಳ ಸಂಖ್ಯೆಯು ಇಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ, ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಮುಂದೊಂದು ದಿನ ಇದು ದೊಡ್ಡ ಮಟ್ಟದಲ್ಲಿ ಲಿಂಗಾನುಪಾತದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಭಾರತದಲ್ಲೂ ಈ ಸಮಸ್ಯೆಯು ಕಾಡುತ್ತಲಿದೆ. ಇಷ್ಟು ಮಾತ್ರವಲ್ಲದೆ ಹೆಣ್ಣು ಮಕ್ಕಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಹೆಣ್...
2019ರ ಧ್ಯೇಯ
ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಕ್ಕೆ ಪ್ರತ್ಯೇಕ ಧ್ಯೇಯಗಳನ್ನು ಇಟ್ಟುಕೊಳ್ಳಲಾಗುತ್ತದೆ. 2019ರ ಈ ದಿನಕ್ಕೆ ``ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ'' ಧ್ಯೇಯ ವಾಕ್ಯವಾಗಿದೆ.
ಮೊದಲ ಧ್ಯೇಯವು `ಬಾಲ್ಯ ವಿವಾಹ ಕೊನೆಗೊಳಿಸುವುದು' ಆಗಿತ್ತು. 2013ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೊಸ ಬದಲಾವಣೆ ಮತ್ತು 2014ರಲ್ಲಿ ಈ ಧ್ಯೇಯವು ಹದಿಹರೆಯದ ಹುಡುಗಿಯರನ್ನು ಸಶಕ್ತಗೊಳಿಸುವುದು: ಹಿಂಸೆಗೆ ಅಂತ್ಯ ಹಾಡುವುದು, 2016ರಲ್ಲಿ ಧ್ಯೇಯ ವಾಕ್ಯವು ಹುಡುಗಿಯ ಅಭಿವೃದ್ಧಿ - ಗುರಿಯ ಅಭಿವೃದ್ಧಿ: ಹುಡುಗಿಗೆ ಏನು ಮಹತ್ವದ್ದಾಗಿರುವುದು ಎಂಬ ಧ್ಯೇಯಗಳಡಿ ಆಚರಣೆ ಮಾಡಲಾಗಿತ್ತು.
ಈ ದಿನದಂದು ಹೆಣ್ಣು ಮಕ್ಕಳ ಉಳಿಸಲು, ಬಾಲ್ಯದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಗ್ಗಿಸಲು ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹರ್ಯಾಣಕ್ಕೆ ಪ್ರಶಸ್ತಿ
ಬೇಟಿ ಬಚಾವೋ ಬೇಟಿ ಪಡಾವೋ ರಾಷ್ಟ್ರೀಯ ಸರ್ಕಾರಿ ಕಾರ್ಯಕ್ರಮ ಉತ್ತಮ ಪ್ರದಹರ್ಯಾಣರ್ಶನಕ್ಕಾಗಿ ಹರ್ಯಾಣವು ಪ್ರಶಸ್ತಿ ಪಡೆದುಕೊಂಡಿದೆ. ರಾಜಸ್ಥಾನ ಕೂಡ ಇದೇ ವಿಭಾಗದಲ್ಲಿ ತನ್ನ ಪ್ರದರ್ಶನವನ್ನು ಉತ್ತಮ ನೀಡಿರುವುದಕ್ಕೆ ಪ್ರಶಸ್ತಿಯ ಗರಿಮೆ ಪಡೆದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಈ ಎರಡು ರಾಜ್ಯಗಳು ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ.
ಆಚರಣೆಗೆ ಕಾರಣಗಳು
ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಇದನ್ನು ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು. ಹಲವಾರು ರಾಜಕೀಯ ನಾಯಕರು ಮತ್ತು ಸಮುದಾಯದ ನಾಯಕರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಂವಿಧಾನಿಕ ಹಕ್ಕುಗಳ ಬಗ್ಗೆ ಜನರಿಗೆ ತಮ್ಮ ಭಾಷಣದಿಂದ ತಿಳಿಸಿಕೊಡುವರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವಗಳು
1. ಭಾರತದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವುದು ಮತ್ತು ಅದನ್ನು ನಿವಾರಣೆ ಮಾಡುವುದು.
2. ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಸೂಕ್ತ ಗೌರವ ಪಡೆಯುವುದು.
3. ಹೆಣ್ಣು ಮಕ್ಕಳ ಸಂಖ್ಯೆಯು ಕಡಿಮೆ ಆಗುತ್ತಿರುವ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಕ್ಕಳ ಬಗ್ಗೆ ಇರುವ ಮನಸ್ಥಿತಿ ಬದಲಾಯಿಸುವುದು.
4. ಹೆಣ್ಣು ಮಕ್ಕಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು.
5. ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಮತ್ತು ಸಂಕಷ್ಟವನ್ನು ದೂರ ಮಾಡುವುದು.
6. ಭಾರತದಲ್ಲಿ ಲಿಂಗ ತಾರತಮ್ಯವನ್ನು ದೂರ ಮಾಡುವ ಬಗ್ಗೆ ಅಭಿಯಾನ ಕೈಗೊಳ್ಳುವುದು. ಲಿಂಗದ ಬಗ್ಗೆ ಇರುತ ತಪ್ಪುಕಲ್ಪನೆ ಮತ್ತು ಮೂಢನಂಬಿಕೆ ದೂರ ಮಾಡುವುದು.
Read more about: insync life women ಜೀವನ ವಾಸ್ತವಾಂಶ ಹೆಣ್ಣು ಮಹಿಳೆ
International Day of The Girl Child 2019: Theme And Significance
In many countries in the world including India, girls face a lot of issues. From female infanticide to gender inequality to sexual abuse, there is no dearth of issues. To curb these menaces, there is a need for awareness on the importance of girl child. International Day of the Girl Child, which is also known as the Na...
ಅಸಮರ್ಪಕ ನಿರ್ವಹಣೆಗೆ ನಲುಗಿದ ಜಲಾಶಯ, ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳು | Prajavani
ಅಸಮರ್ಪಕ ನಿರ್ವಹಣೆಗೆ ನಲುಗಿದ ಜಲಾಶಯ, ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳು
ಮಿಣ್ಯತ್ತಹಳ್ಳ ಜಲಾಶಯ ಕುಡುಕರ ಹಾವಳಿ
ಹನೂರು: ನೂರಾರು ಎಕರೆ ಜಮೀನುಗಳಿಗೆ ನೀರುಣಿಸಿ, ಸಾವಿರಾರು ವನ್ಯಜೀವಿಗಳಿಗೆ ಜೀವನಾಡಿಯಾಗಿರುವ ಯರಂಬಾಡಿಯ ಮಿಣ್ಯತ್ತಹಳ್ಳ ಜಲಾಶಯ ನಿರ್ವಹಣೆಯ ಕೊರತೆಯಿಂದ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ.
ಇಲ್ಲಿನ ನೆಲ್ಲೂರು, ಹಂಚಿಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು, ಜಲ್ಲಿಪಾಳ್ಯ ಹಾಗೂ ಹೂಗ್ಯಂ ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ನೀರಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ 1983ರಲ್ಲಿ ಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಈ ಜಲಾಶಯವನ್ನು ಲೋಕಾರ್ಪಣೆಗೊಳಿಸಿದ್ದರು. ಅಂದಿನಿಂದ ಸಣ್ಣ ನೀರಾವರಿ ಇಲಾಖೆಯ ತೆಕ್ಕೆಯಲ್ಲಿರುವ ಜಲಾಶಯ, ಈ ಭಾಗದ ರೈತರ ಜಮೀನುಗಳಿಗೆ ಹಾಗೂ ಮಲೆಮಹದೇಶ್ವರ ವನ್ಯಧಾಮದ ಸಾವಿರಾರು ...
ತಮಿಳುನಾಡಿನ ಮಾಸನಪಾಳ್ಯ, ಗುಂಡರೆ ಹಾಗೂ ಕರ್ನಾಟಕದ ಪಿ.ಜಿ.ಪಾಳ್ಯ, ಅಂಡಕುರುಬನದೊಡ್ಡಿ, ಬೈಲೂರು ಮುಂತಾದ ಕಡೆ ಉತ್ತಮ ಮಳೆಯಾದರೆ ಈ ಜಲಾಶಯ ಭರ್ತಿಯಾಗುತ್ತದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಭರ್ತಿಯಾಗಿದ್ದ ಜಲಾಶಯಕ್ಕೆ ಚಿತ್ರನಟ ಪ್ರಕಾಶ್‌ ರೈ ಬಾಗಿನ ಅರ್ಪಿಸಿದ್ದರು. ಈ ಬಾರಿಯೂ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದಲೇ ಆವೃತವಾ...
ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ಜಲಾಶಯ ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಂದ ಸುದ್ದಿಯಾಗುತ್ತಿದೆ. ಜಲಾಶಯಕ್ಕೆ ಬರುವ ಕೆಲ ಕಿಡಿಗೇಡಿಗಳು ಕುಡಿದು ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಾರೆ. ವೀಕ್ಷಣಾ ಗೋಪುರದ ಮೇಲೆ ಕುಡುಕರ ಅಟ್ಟಹಾಸ ಎಲ್ಲೆ ಮೀರಿದೆ. ಬಾಟಲಿಗಳನ್ನು ಒಡೆದು ಬಿಸಾಡಿರುವುದರಿಂದ ಕುಟುಂಬ ಸಮೇತರಾಗಿ ಬರುವ ಪ್ರವಾ...
ವನ್ಯಜೀವಿಗಳ ಜೀವನಾಡಿ: ಮಲೆಮಹದೇಶ್ವರ ವನ್ಯಧಾಮದಲ್ಲಿರುವ ಉಡುತೊರೆ ಜಲಾಶಯ ಬಿಟ್ಟರೆ, ವನ್ಯಪ್ರಾಣಿಗಳ ದಾಹವನ್ನು ಇಂಗಿಸುವಲ್ಲಿ ಈ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಜಲಾಶಯದ ತೀರದಲ್ಲಿ ಕಿಡಿಗೇಡಿಗಳು ಎಸೆದಿರುವ ಮದ್ಯದ ಬಾಟಲಿ ಚೂರುಗಳು ವನ್ಯಪ್ರಾಣಿಗಳ ಕಾಲಿಗೆ ಚುಚ್ಚಿ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ಜರುಗಿವೆ.
ಇಲ್ಲಿಗೆ ಬರುವ ಕೆಲವು ಕಿಡಿಗೇಡಿಗಳು ಪಾನಮತ್ತರಾಗಿ ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆ ಧಕ್ಕೆ ಮಾಡುವುದಲ್ಲದೇ, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಹಾಗೂ ಗಾಜಿನ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ ಎಂದು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ದೂರುತ್ತಾರೆ.
'ತಡೆಯುವುದಕ್ಕೆ ಆಗುತ್ತದೆಯೇ?'
ಈ ವಿಚಾರವಾಗಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ವೆಂಕಟೇಶ್‌, 'ಕುಡಿದು ಬರುವವರನ್ನು ನಾವು ತಡೆಯುವುದಕ್ಕಾಗುತ್ತದೆಯೇ? ಜಲಾಶಯದಲ್ಲಿ ಗಿಡ ಗಂಟಿಗಳನ್ನು ತೆರವುಗೊಳಿಸುವಾಗ ಅವರು ಎಸೆದಿರುವ ಬಾಟಲಿಗಳನ್ನು ತೆಗೆಯುತ್ತೇವೆ. ಅನೈತಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಎರಡು ಸಾವಿರ ಪ್ರದೇಶದ ಸುತ್ತಲೂ ಸೌರಬೇಲಿ ಹಾಕಲು ಸಾಧ್ಯವೇ? ಅದಕ್ಕೆಲ್ಲಾ...
ಬೆಲೆ ಬಾಳುವ 'ವಜ್ರ' ಅದೃಷ್ಟವೇ ಅಥವಾ ದುರಾದೃಷ್ಟವೇ? | The Tale Behind Diamonds & Their Luck - Kannada BoldSky
| Published: Monday, August 1, 2016, 10:47 [IST]
ರಾಜರ ಕಾಲದಿಂದಲೂ ಭಾರತದಲ್ಲಿ ವಜ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಅದರಲ್ಲೂ ಕೊಯಿನೂರು ವಜ್ರವೂ ವಜ್ರಗಳಲ್ಲಿ ರಾಜನೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕೋಹಿನೂರ್‌ ವಜ್ರವು ಹಲವಾರು ರಾಜರ ಕೈಗೆ ಹೋದ ಬಳಿಕ ಈಗ ಇಂಗ್ಲೆಂಡಿನ ಮಹಾರಾಣಿಯ ಕೀರಿಟವೇರಿ ಕುಳಿತುಕೊಂಡಿದೆ. ಆದರೆ ವಜ್ರವು ಅದೃಷ್ಟವನ್ನು ತರುತ್ತದೆ ಮತ್ತು ಅದೃಷ್ಟವನ್ನು ಕೆಡಿಸುತ್ತದೆ ಎನ್ನುವ ಮಾತಿದೆ. ಇದರಿಂದಾಗಿಯೇ ಕೋಹಿನೂರ್‌ ...
ಭೂಮಿ ಮೇಲೆ ಅತ್ಯಂತ ದುಬಾರಿ ಹರಳಾಗಿರುವ ವಜ್ರದ ಬಗ್ಗೆ ಹಲವಾರು ಕಥೆಗಳು ಇವೆ. ಇದು ದೇಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಆಭರಣಗಳಲ್ಲಿ ಪೋಣಿಸಿದರೆ ತನಗೆ ಬೇರೆ ಸ್ಪರ್ಧೆಯೇ ಇಲ್ಲವೆನ್ನುವ ವಜ್ರದಿಂದ ಕೆಲವರು ನಷ್ಟ ಅನುಭವಿಸುತ್ತಾರೆ ಮತ್ತು ಕೆಲವರು ಅಭಿವೃದ್ಧಿ ಕಾಣುತ್ತಾರೆ ಎನ್ನುವ ನಂಬಿಕೆಯಿದೆ. ವಜ್ರ ಪ್ರತಿಯೊಬ್ಬರು ಹೊಂದಿಕೊಳ್ಳುತ್ತದೆಯಾ? ವಜ್ರದ ಬಗ್ಗೆ ಕೆಲವೊಂದು ಮಹತ್ವದ ...
ವಜ್ರದ ಬಗ್ಗೆ ಇರುವ ನಂಬಿಕೆ
ಹಿಂದೆ ವಜ್ರವನ್ನು ಸಾಮಾನ್ಯವಾಗಿ ನಿಶ್ಚಯ ಮತ್ತು ಮದುವೆಯ ಉಂಗುರಗಳಲ್ಲಿ ಬಳಸಲಾಗುತ್ತಿತ್ತು. ಇದು ಸಂಗಾತಿಗಳ ಮಧ್ಯೆ ಸಂಪರ್ಕವನ್ನು ಸಾಧಿಸುತ್ತದೆ ಎಂದು ನಂಬಲಾಗಿದೆ. ಪುರುಷರಲ್ಲಿ ಧೈರ್ಯ ಮತ್ತು ಮಹಿಳೆಯರಲ್ಲಿ ಗೌರವವನ್ನು ಉಂಟು ಮಾಡುತ್ತದೆ. ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?
ದುರಾದೃಷ್ಟವೇ?
ವಜ್ರವು ದುರಾದೃಷ್ಟವನ್ನು ಉಂಟು ಮಾಡಲಿದೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ವಜ್ರವನ್ನು ಧರಿಸುವುದರಿಂದ ವ್ಯಾಪಾರದಲ್ಲಿ ನಷ್ಟವಾಗಬಹುದು, ಅಪಘಾತವಾಗಬಹುದು ಅಥವಾ ಸಾವು ಸಂಭವಿಸಬಹುದು.
ಪ್ರತಿಫಲಿಸುವ ಹರಳನ್ನು ದೂರವಿಡಬೇಕೇ?
ವಜ್ರವನ್ನು ತುಂಬಾ ಶಕ್ತಿಶಾಲಿ ಹರಳೆಂದು ಪರಿಗಣಿಸಲಾಗಿದೆ. ಕನ್ಯಾ ರಾಶಿ ಮತ್ತು ತುಲಾ ರಾಶಿಯಲ್ಲಿ ಹುಟ್ಟಿರುವಂತವರು ವಜ್ರವನ್ನು ಧರಿಸಬಹುದು. ಅವರಿಗೆ ಇದರಿಂದ ಅದೃಷ್ಟ ಮತ್ತು ಸಮೃದ್ಧಿಯಾಗುತ್ತದೆ.
ನೀವು ವಜ್ರ ಧರಿಸಬೇಕೆಂದು ಚಿಂತಿಸುತ್ತಿದ್ದೀರಾ?
ವಜ್ರವು ನಿಮ್ಮ ರಾಶಿಗೆ ಹೊಂದಿಕೊಂಡರೆ ಆಗ ನಿಮಗೆ ಒಂದು ವಾರದೊಳಗೆ ಜೀವನದಲ್ಲಿ ಒಳ್ಳೆಯ ಹಾಗೂ ಧನಾತ್ಮಕ ಬದಲಾವಣೆ ಕಂಡುಬರುವುದು. ನಿಮಗೆ ಹೊಂದಿಕೊಳ್ಳದೆ ಇದ್ದರೆ ಆಗ ನಿಮಗೆ ಕೆಟ್ಟದಾಗುವುದು. ನೀವು ವಜ್ರವನ್ನು ಧರಿಸಬೇಕೇ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಹರಳು ನಿಮ್ಮ ಜೀವನವನ್ನು ಪರೀಕ್ಷಿಸಲಿದೆ.
ಇದರಲ್ಲಿ ಶಮನಕಾರಿ ಗುಣಗಳಿವೆಯಾ?
ಸ್ವಭಾವದಲ್ಲಿ ತುಂಬಾ ಬಲವಾಗಿರುವ ವಜ್ರವು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡಲಿದೆ. ವಜ್ರವನ್ನು ಧರಿಸುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಕಾಣಿಸುವಂತಹ ಫಲವತ್ತತೆ ಸಮಸ್ಯೆಯು ನಿವಾರಣೆಯಾಗುವುದು.
ಯಾವ ವಜ್ರ ಧರಿಸಬೇಕು?
ವಜ್ರದಲ್ಲಿ ಹಲವಾರು ಆಯ್ಕೆಗಳು ಇವೆಯಾದರೂ ಪಾರದರ್ಶಕವಾಗಿರುವ ವಜ್ರವನ್ನು ಧರಿಸಬೇಕು. ಇದು ತುಂಡಾಗಿರಬಾರದು ಅಥವಾ ಗೆರೆ ಬಿದ್ದಿರಬಾರದು.
ಶುಕ್ಲ ಪಕ್ಷದಲ್ಲಿ ಶುಕ್ರವಾರದಂದು ವಜ್ರವನ್ನು ಖರೀದಿಸಿದರೆ ತುಂಬಾ ಒಳ್ಳೆಯದು. ಭರಣಿ, ಪೂರ್ವ, ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರಗಳಲ್ಲಿ ವಜ್ರವನ್ನು ಖರೀದಿಸಬಹುದಾಗಿದೆ.
Women and diamonds, nothing on this earth can separate the relationship. It is said that this most expensive stone on the earth isn't lucky for few, and the reasons stated below might blow your mind. We all know that there are countless superstitions which have become associated with different gemstones throughout the ...
ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್? – Public TV
ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ವೀರ ಮದಕರಿ ಚಿತ್ರದ ವಿಚಾರವಾಗಿ ಪೈಪೋಟಿ ಶುರುವಾಗಿದೆ. ಇವರಿಬ್ಬರೂ ಮದಕರಿ ನಾಯಕನ ಜೀವನಾಧಾರಿತ ಚಿತ್ರದಲ್ಲಿ ನಟಿಸಿಯೇ ತೀರುವ ಪಣ ತೊಟ್ಟಿದ್ದಾರೆ. ಅತ್ತ ಸುದೀಪ್ ಚಿತ್ರದ ತಯಾರಿ ನಡೆಯುತ್ತಿರೋವಾಗಲೇ ಇತ್ತ ದರ್ಶನ್ ಸುದೀಪ್ ಅವರಿಗಿಂತ ಮೊದಲೇ ಮದಕರಿಯಾಗಿ ಆರ್ಭಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ವಿಚಾರವೇನಂದ್ರೆ ಸುದೀಪ್ ಚಿತ್ರಕ್ಕಿಂತಲೂ ಮೊದಲೇ ದರ್ಶನ್ ಚಿತ್ರ ಶುರುವಾಗಲಿದೆ. ಇಂಥಾದ್ದೊಂದು ವಿಚಾರ ಅಧಿಕೃತವೆಂಬಂತೆಯೇ ಹೊರ ಬಿದ್ದಿದೆ. ಈ ಬಗ್ಗೆ ದರ್ಶನ್ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನ ಆಧಾರದಲ್ಲಿ ಹೇಳೋದಾದರೆ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಸಂಪೂರ್ಣವಾಗಿದೆ. ಇನ್ನೇನು ಒಂದೂವರೆ ತಿಂಗಳಲ್ಲಿಯೇ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.
ಈ ಚಿತ್ರಕ್ಕೆ ಹಂಸಲೇಖಾ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಅವರು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದಾರೆ. ಆ ಬಳಿಕ ಚಿತ್ರಕ್ಕಾಗಿ ಅದ್ಧೂರಿ ಸೆಟ್‍ಗಳನ್ನು ಹಾಕಲು ರಾಕ್ ಲೈನ್ ವೆಂಕಟೇಶ್ ಅವರು ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಚಿತ್ರಕ್ಕಿಂತಲೂ ವೇಗವಾದ ಕೆಲಸ ಕಾರ್ಯಗಳು ದರ್ಶನ್ ಚಿತ್ರಕ್ಕಾಗಿ ಚಾಲ್ತಿಯಲ್ಲಿವೆ.
Related Topics:darshanKichcha SudeepMadakariPublic TVRajendra Singh Babusandalwoodಕಿಚ್ಚ ಸುದೀಪ್ದರ್ಶನ್ಪಬ್ಲಿಕ್ ಟಿವಿಮದಕರಿರಾಜೇಂದ್ರ ಸಿಂಗ್ ಬಾಬು
ಕನ್ನಡ ಮಾಧ್ಯಮದಲ್ಲೇ ಓದು ಕಡ್ಡಾಯ ಆಗಲಿ | ವಿಶ್ವ ಕನ್ನಡಿಗ ನ್ಯೂಸ್
ಗ್ರೀನ್‍ವ್ಯೂ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ 52 mins ago
ಡಿ.17: ಸುಳ್ಯದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಮಾಹಿತಿ ಕಾರ್ಯಾಗಾರ ಹಾಗೂ ಮಧುಮೇಹ ತಪಾಸಣೆ 54 mins ago
ಅನ್ಸಾರ್ ಸುಳ್ಯ: ಸಾಧನೆಯ ಹಾದಿ ಬಿಡುಗಡೆ 57 mins ago
Home ರಾಜ್ಯ ಸುದ್ದಿಗಳು ಚಿಕ್ಕಮಗಳೂರು ಕನ್ನಡ ಮಾಧ್ಯಮದಲ್ಲೇ ಓದು ಕಡ್ಡಾಯ ಆಗಲಿ
Posted By: ವಿಕೆ ನ್ಯೂಸ್ ಪ್ರತಿನಿಧಿon: November 23, 2017 In: ಚಿಕ್ಕಮಗಳೂರು
ಚಿಕ್ಕಮಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕನ್ನಡಿಗರು ಮಾತೃಭಾಷೆಯ ಬಗ್ಗೆ ಗೌರವ, ಪ್ರೀತಿ ಮತ್ತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು, ಕನ್ನಡ ಎಲ್ಲರ ಉಸಿರಾಗಬೇಕು ಎಂದು ಐಡಿಎಸ್‍ಜಿ ಕಾಲೇಜಿನ ಪ್ರಾಂಶುಪಾಲ ಪ್ರೊ|| ಟಿ.ಸಿ.ಬಸವರಾಜ್ ಸಲಹೆ ಮಾಡಿದರು.
ಐಡಿಎಸ್‍ಜಿ ಕಾಲೇಜಿನಲ್ಲಿ ಸಾಂಸ್ಕøತಿಕ ವೇದಿಕೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಎಂದರೆ ಬರೀ ಭಾಷೆಯಲ್ಲ ಅದೊಂದು ಸಂಸ್ಕøತಿ ಮತ್ತು ಪರಂಪರೆ, ಅದರ ಬಗ್ಗೆ ಕನ್ನಡಿಗರು ಪ್ರೀತಿ, ಗೌರವ ಮತ್ತು ಅಭಿಮಾನವನ್ನು ಬೆಳೆಸಿಕೊಂಡರೆ ಭಾಷೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣ ವಿಷಯ ಕುರಿತು ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ಪ್ರೊ|| ಯು.ಸಿ.ಮಹೇಶ್ ಕೇಂದ್ರ ಸರ್ಕಾರದ ಅವೈಜ್ಞಾನಿಕ ತ್ರಿಭಾಷಾ ನೀತಿಯಿಂದಾಗಿ ಕನ್ನಡಕ್ಕೆ ಕುತ್ತು ಬಂದಿದೆ ಎಂದರು.
ರಾಜ್ಯದಲ್ಲಿ ಎಲ್ಲರೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು, ಮತ್ತು 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯವಾಗಿ ಓದಬೇಕು ಎಂಬ ನಿಯಮವನ್ನು ಜಾರಿಗೆ ತಂದರೆ ನಾಡಿನಲ್ಲಿ ಮಾತೃಭಾಷೆ ಉಳಿಯುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ಪ್ರೊ|| ಹೆಚ್.ಎಂ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಇದೇ ವೇಳೆ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.