text
stringlengths
0
61.5k
ಭಾರತ ಏರ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೆ ಪ್ರಿಯಾಂಕ ಅವರು ಕೂಡ ಟ್ವೀಟ್ ಮಾಡಿದ್ದರು. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುವುದು ಪಾಕ್ ವಾದವಾಗಿದೆ. ಈ ಆನ್ ಲೈನ್ ಅರ್ಜಿಗೆ ಸಾವಿರಾರರು ಮಂದಿ ಸಹಿ ಕೂಡ ಮಾಡಿದ್ದಾರೆ. ಪ್ರಮುಖವಾಗಿ ಯೂನಿಸಿಫ್ ಹ್ಯಾಶ್ ಟ್ಯಾಗ್ ಬಳಿಸಿ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಪಾಕ್ ನೆಟ್ಟಿಗರ ಈ ಆನ್ ಲೈನ್ ಪಿಟಿಷನನ್ನು ಹೇಗೆ ಸ್ವೀಕಾರ ಮಾಡು...
ಅಂದಹಾಗೇ ಪ್ರಿಯಾಂಕ ಚೋಪ್ರಾ ಅವರ ಇಬ್ಬರು ಪೋಷಕರು ಕೂಡ ಭಾರತ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಈ ಹಿಂದೆಯೂ ಕೂಡ ಪ್ರಿಯಾಂಕರ ಹಿಂದಿಯವರು ಎಂದು ಗೂಗಲ್ ಮಾಡಿ ಪ್ರಶ್ನಿಸಿದ್ದ ಮಂದಿಗೆ ತಿರುಗೇಟು ನೀಡಿದ್ದ ಅವರು, ಹಿಂದಿ ಎಂದರೆ ಭಾಷೆ ಅಷ್ಟೇ, ನಾನು ಹಿಂದೂ, ಅದು ಧರ್ಮ ಎಂದಿದ್ದರು.
Related Topics:New Delhipakistanpriyanka chopraPublic TVtwitterUnited Nationsಟ್ವಿಟ್ಟರ್ನವದೆಹಲಿಪಬ್ಲಿಕ್ ಟಿವಿಪಾಕಿಸ್ತಾನಪ್ರಿಯಾಂಕ ಚೋಪ್ರಾವಿಶ್ವಸಂಸ್ಥೆ
ಸುರಪುರ: ಪ್ರಗತಿ ಪರಿಶೀಲನಾ ಸಭೆ | Prajavani
ಸುರಪುರ: ಪ್ರಗತಿ ಪರಿಶೀಲನಾ ಸಭೆ
Published: 19 ಫೆಬ್ರವರಿ 2011, 12:15 IST
Updated: 19 ಫೆಬ್ರವರಿ 2011, 12:15 IST
ಸುರಪುರ: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ ಪ್ರೊ. ಮುಮ್ತಾಜ ಅಲಿಖಾನ್ ತಾ.ಪಂ. ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಅಧಿಕಾರ ಜನ ಕಲ್ಯಾಣಕ್ಕಾಗಿ ಸ್ವಹಿತಾಸಕ್ತಿಗೆ ಅಲ್ಲ ಎಂದು ಅಧಿಕಾರಿಗಳಿಗೆ ಉಪದೇಶ ನೀಡಿದರು. ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ನಮ್ಮ ಅಧಿಕಾರಿಗಳು ಸಿದ್ಧಹಸ್ತರು. ಆದರೆ ಅನ...
ದಕ್ಷತೆ ಮತ್ತು ಪ್ರಾಮಾಣಿಕತೆಯ ಕೊರತೆ ಇದಕ್ಕೆ ಕಾರಣ. ಸರ್ಕಾರದ ಯೋಜನೆಗಳನ್ನು ಜನರತ್ತ ತಲುಪಿಸುವ ಗುರುತರ ಜವಾಬ್ದಾರಿ ನಿಮ್ಮ ಮೇಲೆ ಇದೆ. ಅಡ್ಡದಾರಿ ಹಿಡಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು. ಕ್ರೀಯಾ ಯೋಜನೆ ವರದಿ ನನಗೆ ಬೇಕಿಲ್ಲ. ಯೋಜನೆ ಬಳಕೆ ಬಗ್ಗೆ ಎಷ್ಟು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ವರದಿ ನೀಡಿ. ವಾಮಮಾರ್ಗದಿಂದ ಹಣ ಮಾಡುವ ಗೋಜಿಗೆ ಹೋಗಬೇಡಿ. ನಾವು ಸತ್ತಾಗ ಏನನ್ನು ...
60 ವರ್ಷಗಳಿಂದ ದಲಿತರಿಗಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಆದರೆ ಇಂದಿಗೂ ದಲಿತರ ಸ್ಥಿತಿ ಗತಿ ಬಗ್ಗೆ ಯಾವುದೆ ಬದಲಾವಣೆ ಆಗಿಲ್ಲ ಎಂದು ವಿಷಾದಿಸಿದರು. ಇದಕ್ಕೆ ಅಧಿಕಾರಿಗಳ ಪ್ರಾಮಾಣಿಕತೆಯ ಕೊರತೆ ಕಾರಣ. ಯೋಜನೆಗಳ ಸಮರ್ಪಕ ಅನುಷ್ಠಾನ ಆಗದಿರುವುದು ಇನ್ನೊಂದು ಕಾರಣ ಎಂದರು. ನಾಯಿ ತನ್ನ ಬಾಲವನ್ನು ಅಲ್ಲಾಡಿಸುವದು ಸಹಜ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಹೇಗೆ. ನಮ್ಮ ಪ...
ಶಾಸಕ ರಾಜೂಗೌಡ ಮಾತನಾಡಿ, ತಾಲ್ಲೂಕಿನ ಮುರಾರ್ಜಿ ಮತ್ತು ಕಿತ್ತೂರ ವಸತಿ ಶಾಲೆಗಳ ಸಿಬ್ಬಂದಿಗೆ ವಿಜಾಪುರದ ಕಲಾ ಚೇತನ ಸರ್ಕಾರೇತರ ಸಂಸ್ಥೆ 4 ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳ ಕೇಳಿದರೆ ಗುಂಡಾಗಿರಿ ಮಾಡುತ್ತಾರೆ. ನಿಗದಿತ 7600 ವೇತನದ ಬದಲಿಗೆ 5 ಸಾವಿರ ವೇತನ ನೀಡುತ್ತಾರೆ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಜಿ.ಪಂ. ಉಪಕಾರ್ಯದರ್ಶಿ ಬಿ.ವಿ. ಭೊಸ್ಲೆ ಅವರಿ...
ಕಕ್ಕೇರಾ ಮತ್ತು ದೇವಪುರದ ವಿದ್ಯುತ್ ಘಟಕಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಸುರಪುರ ಯಾದಗಿರಿ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಬೇಕು. ಸುರಪುರದಲ್ಲಿ ಶಾದಿಮಹಲ್‌ಗಾಗಿ ರೂ. 50 ಲಕ್ಷ ಬಿಡುಗಡೆ ಮಾಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಜಿ.ಪಂ. ಸದಸ್ಯ ಎಚ್.ಸಿ. ಪಾಟೀಲ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ್, ಜಿ.ಪಂ. ಉಪಕಾರ್ಯದರ್ಶಿ ಬಿ.ವಿ. ಭೊಸ್ಲೆ, ಇ.ಓ. ಚನ್ನಬಸಪ್ಪ ಮೆಕಾಲೆ, ತಹ...
'ವೆಂಕಟೇಶ್ವರನಿಗೂ ನಮಗೂ ಹತ್ತಿರದ ಸಂಬಂಧ' | Prajavani
'ವೆಂಕಟೇಶ್ವರನಿಗೂ ನಮಗೂ ಹತ್ತಿರದ ಸಂಬಂಧ'
ನನ್ನ ಹೆಸರು ಟಿ.ಎ.ಪಿ.ನಾಗರಾಜ್‌. ಅವೆನ್ಯೂ ರಸ್ತೆಯ ಚೌಡಮ್ಮನ ಗುಡಿ ಬೀದಿಯಲ್ಲಿ ಟಿ.ಎ.ಪದ್ಮನಾಭಯ್ಯ ಶೆಟ್ಟಿ ಆ್ಯಂಡ್‌ ಕಂಪೆನಿ ಆಭರಣದ ಅಂಗಡಿ ನಡೆಸುತ್ತಿದ್ದೇನೆ. ಅದರೊಂದಿಗೆ ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವವಾಗಿರುವ ತಿರುಮಲದ ವೆಂಕಟೇಶ್ವರರಿಗೆ ವಿಶೇಷ ಸೇವೆಯೊಂದನ್ನು ಸಲ್ಲಿಸುತ್ತಿದ್ದೇನೆ. ಅದೆಂದರೆ, ದೇವರ ವಿಗ್ರಹಕ್ಕೆ ಧಾರಣೆ ಮಾಡುವ ಆಭರಣಗಳ ಪಾಲಿಷ್ ಮತ್ತು ರಿಪೇರಿ ಮಾಡುವುದು. ದೇವಸ...
2000ರಲ್ಲಿ ಒಮ್ಮೆ ಪರಿಚಯಸ್ಥರೊಬ್ಬರು ಅಂಗಡಿಗೆ ಬಂದಾಗ, ಹಾಗೇ ಮಾತನಾಡುತ್ತ, ತಿರುಮಲದ ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುವ ಚಿನ್ನವನ್ನು ಪರೀಕ್ಷಿಸಲು ಸಮಿತಿಯೊಂದನ್ನು ರಚಿಸುತ್ತಿದ್ದಾರೆ. ನೀವೂ ಒಂದು ಬಯೋಡೆಟಾ ಕೊಡಿ ಎಂದು ತೆಗೆದುಕೊಂಡು ಹೋದರು. ಒಂದೇ ವಾರದಲ್ಲಿ ದೇವಸ್ಥಾನದಿಂದ ಕೆಲಸಕ್ಕೆ ಕರೆಬಂತು. ನಮ್ಮ ಮನೆದೇವರು ಕೂಡ ವೆಂಕಟೇಶ್ವರಸ್ವಾಮಿ. ದೇವರೇ ಕರುಣಿಸಿದ ಸೇವೆಯ ಸೌಭಾಗ್ಯವೆಂದು ಸಂತಸ...
ಭಕ್ತಾದಿಗಳಲ್ಲಿ ಬಹುತೇಕರು ಚಿನ್ನವನ್ನು ಹುಂಡಿಯಲ್ಲಿ ಹಾಕುತ್ತಾರೆ, ಕೆಲವರು ಅಫೀಷಿಯಲ್‌ ಆಗಿ ಟಿಟಿಡಿಗೆ ಕೊಡುತ್ತಾರೆ. ಅವುಗಳಲ್ಲಿ ಉಂಗುರ, ಶಂಖ, ಓಲೆ, ನೆಕ್ಲೆಸ್‌, ಬಳೆ, ನಾಣ್ಯ ಹಾಗೂ ವಜ್ರಗಳು ಇರುತ್ತವೆ. ಅವುಗಳನ್ನು ವಿಶೇಷ ಸಿಬ್ಬಂದಿ ಪ್ರಾಥಮಿಕ ಪರೀಕ್ಷೆ ಮಾಡಿ, ಅವು ಅಸಲಿ ಚಿನ್ನ, ಬೆಳ್ಳಿ, ವಜ್ರವೆಂದು ಖಚಿತಪಡಿಸಿಕೊಳ್ಳುತ್ತಾರೆ. ಅವರು ಪರೀಕ್ಷಿಸಿದ್ದು ಸರಿಯಾಗಿದೆ ಎಂಬುದನ್ನು ದೃಢಿಕ...
ಕಾಣಿಕೆಗಳ ಪರಿಶೀಲನೆಗೆಂದು ವರ್ಷಕ್ಕೆ ಹನ್ನೆರೆಡು ಬಾರಿ ತಿರುಪತಿಗೆ ಹೋಗಿ ಬರುತ್ತೇನೆ. ಒಂದು ಬಾರಿ ಹೋದರೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಎರಡು ಮೂರು ದಿನ ಚಿನ್ನ, ಬೆಳ್ಳಿ, ವಜ್ರಗಳಲ್ಲೇ ಕೈಯಾಡಿಸುತ್ತಿರಬೇಕು. ಬೆಲೆಬಾಳುವ ಲೋಹಗಳ ಕೆ.ಜಿ.ಗಟ್ಟಲೇ ಪರಿಕರಗಳನ್ನು ಪರಿಶೀಲಿಸಬೇಕು.
ನನ್ನ ಕೆಲಸದ ವೈಖರಿ ಮತ್ತು ಭಕ್ತಿಯನ್ನು ಗಮನಿಸಿ 2009ರಲ್ಲಿ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳ ಆಭರಣಗಳ ಕ್ಲೀನಿಂಗ್‌, ಪಾಲಿಷಿಂಗ್ ಮತ್ತು ರಿಪೇರಿಯ ಜವಾಬ್ದಾರಿ ವಹಿಸಿದರು. ನನಗೆ ಬಹಳ ಖುಷಿಯಾಯಿತು. ನವರಾತ್ರಿ ಸಮಯದಲ್ಲಿ ಅಲ್ಲಿ ಬ್ರಹ್ಮೋತ್ಸವ ನಡೆಯುತ್ತೆ. ಆ ಉತ್ಸವಕ್ಕೆ ಮೂರು ವಾರಗಳ ಮುಂಚಿತವಾಗಿ ಬುಲಾವ್‌ ಬರುತ್ತದೆ. ನಾನು, ನನ್ನ ಅಂಗಡಿಯ 18 ಜನ ನುರಿತ ಅಕ್ಕಸಾಲಿಗರ ತಂಡವನ್ನು ಕರೆದುಕೊ...
ಒಂದು ವರ್ಷದ ಹಿಂದೆ ದೇವಸ್ಥಾನದ ಧ್ವಜಸ್ತಂಭ ಮೇಲಿನ 20 ಕೆ.ಜಿ. ಚಿನ್ನದ ಕಳಸಕ್ಕೆ ರಂಧ್ರವಾಗಿತ್ತು, ಅದನ್ನು ತುಂಬಾ ಕಷ್ಟಾಪಟ್ಟು ಸರಿಪಡಿಸಿದೆವು. ನಾಲ್ಕು ವರ್ಷದ ಹಿಂದೆ ದೇವಸ್ಥಾನದಲ್ಲಿದ್ದ ರಾಮನ ಚಿನ್ನದ ಬಿಲ್ಲು–ಬಾಣಗಳು ಬಿರುಕು ಬಿಟ್ಟಿದ್ದವು. ಅವುಗಳನ್ನು ರಿಪೇರಿ ಮಾಡಿದೆವು.
ಪರಿಶೀಲನಾ ಕೆಲಸದ ವೇಳೆಯಲ್ಲಿ ಕೆಲ ಭಕ್ತಾದಿಗಳು ನೀಡಿದ ಅಪರೂಪದ ಕಾಣಿಕೆಗಳನ್ನು ಕಂಡಿದ್ದೇನೆ. ವಿದೇಶಿ ಭಕ್ತರೊಬ್ಬರು ಪದ್ಮಾವತಿ ದೇವಿಗೆ ಚಿನ್ನದ ಫ್ರಾಕ್‌ ಮಾಡಿಸಿದ್ದರು. ಫುಟ್‌ಬಾಲ್‌ ಆಟಗಾರರೊಬ್ಬರು 12 ಸಾವಿರ ವಜ್ರಗಳನ್ನು ಜೋಡಿಸಿದ ಚಿನ್ನದ ಕಾಲ್ಚೆಂಡನ್ನು ನೀಡಿದ್ದರು. ಸ್ವಾಮೀಜಿಯೊಬ್ಬರು 10 ಕೆ.ಜಿ. ಚಿನ್ನದ ಬಲಮುರಿ ಶಂಖವನ್ನು ಕೊಟ್ಟಿದ್ದರು. ಯಾರೋ ನಾಲ್ಕು ಕೋಟಿ ರೂಪಾಯಿ ಬೆಲೆಬಾಳುವ ...
ನಾನು ಐದಾರು ವರ್ಷದವನಿದ್ದಾಗ ಮೊದಲ ಬಾರಿಗೆ ತಿರುಪತಿಗೆ ಹೋಗಿದ್ದು ಇಂದಿಗೂ ನೆನಪಿದೆ. ಆದರೆ ಈ ರೀತಿ ದೇವರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ದೇವರು ನನ್ನ ಮೇಲೆ ಇಟ್ಟಿರುವ ಕರುಣೆ ಮತ್ತು ನನ್ನ ಪುಣ್ಯದಿಂದ ಮಾತ್ರ ಇಂಥ ಭಾಗ್ಯ ದೊರೆತಿದೆ. ನನ್ನ ಮಗ ಟಿ.ಎನ್‌.ಸಂದೀಪ್‌ ಕೂಡ ದೇವರ ಸೇವೆಗೆ ಸಾತ್‌ ನೀಡುತ್ತಿದ್ದಾನೆ.
ನಾನು ಚಿನ್ನಾಭರಣಗಳ ಕೆಲಸಕ್ಕೆ ಬರಲು ತಂದೆಯೇ ಪ್ರೇರಣೆ. 22ನೇ ವಯಸ್ಸಿಗೆ ಕಸುಬು ಆರಂಭಿಸಿದೆ, ಈಗ ನನಗೆ 68 ವರ್ಷ. ಓದಿದ್ದು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌. ನನ್ನೆಲ್ಲಾ ಕೆಲಸಗಳಿಗೂ ಜೀವನ ಸಂಗಾತಿಯಾದ ಹೇಮಾವತಿ ಬೆಂಬಲ ನೀಡುತ್ತಾರೆ. ಈ ಕೆಲಸಗಳ ನಡುವೆ ಸಾಹಿತ್ಯ ಅಧ್ಯಯನವನ್ನೂ ರೂಢಿಸಿಕೊಂಡಿದ್ದೇನೆ. ಬಿಡುವಿದ್ದಾಗ ಚಾಮರಾಜಪೇಟೆಯಲ್ಲಿನ ಮನೆಯಲ್ಲಿ ಕೂತು ಓದುತ್ತೇನೆ, ಬರೆಯುತ್ತೇನೆ. ನನ್ನ ಮ...
80 ಕೆಲಸಗಾರರ ಸಹಕಾರದಿಂದ ವ್ಯಾಪಾರ ಬೆಳೆಯುತ್ತಿದೆ. ದೇವರ ಸೇವೆಯಿಂದ ಗೌರವ ಸಿಗುತ್ತಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗಂಪಲಹಳ್ಳಿಯವನಾದ ನನಗೆ ಈವರೆಗಿನ ಜೀವನ ಪಯಣ ತೃಪ್ತಿ ನೀಡಿದೆ.
ನಮ್ಮದು ವಿಶಿಷ್ಟ ಕಾಯಕ
ನಮ್ಮನ್ನು ಬೆಳಿಗ್ಗೆ 4 ಗಂಟೆಗೆ ಒಳಗೆ ಬಿಡುತ್ತಾರೆ. ಒಳಹೊಕ್ಕ ನಾವು ಭಕ್ತಿಯಿಂದ ದೇವರಿಗೆ ಕೈಮುಗಿದು, ನಂತರ ಕಾಯಕ ಶುರುಮಾಡುತ್ತೇವೆ. ದೇವರಿಗೆ ಧರಿಸುವ ಶಂಖಚಕ್ರ, ಕಿರೀಟ, ಕಾಸಿನ ಸರ, ಸಾಲಿಗ್ರಾಮದ ಹಾರ, ಮೂರೆಳೆ ಸರ, ತೋಳುಬಂದಿ, ಹಸ್ತಬಂಧಿ, ಪೀತಾಂಬರ, ಭುಜಕೀರ್ತಿ, ನಾಗಾಭರಣ, ಕಂಠಿಹಾರಗಳನ್ನು ಶುಚಿಗೊಳಿಸುತ್ತೇವೆ. ನಾಜೂಕಾಗಿ ಪಾಲೀಷ್ ಮಾಡುತ್ತೇವೆ.
‌ಯಾವುದಾದರೂ ಆಭರಣಕ್ಕೆ ಡ್ಯಾಮೆಜ್‌ ಆಗಿದ್ರೆ, ರಿಪೇರಿ ಮಾಡ್ತೇವೆ. ಇಷ್ಟೆಲ್ಲಾ ಕೆಲಸವನ್ನು ಮಧ್ಯಾಹ್ನ 1.30ರೊಳಗೆ ಮುಗಿಸಿ ಹೊರಬರುತ್ತೇವೆ. ರಿಪೇರಿಗೆ ಬೇಕಾದ ಚಿನ್ನವನ್ನು ನಮ್ಮ ಅಂಗಡಿಯಿಂದಲೇ ತೆಗೆದುಕೊಂಡು ಹೋಗುತ್ತೇವೆ. ಇದನ್ನು ನಾವು ದೈವಸೇವೆ ಎಂದು ಪರಿಗಣಿಸಿದ್ದೇವೆ. ಹಾಗಾಗಿ ಈ ಕೆಲಸಗಳಿಗಾಗಿ ದೇವಸ್ಥಾನದಿಂದ ಒಂದು ರೂಪಾಯಿ ಗೌರವಧನವನ್ನೂ ಪಡೆಯಲ್ಲ.
ಇನ್ಫೋಸಿಸ್ ಸಾಧಕಿಯ ಮನೆಗೆ ತೆರಳಿ ಬರ್ತ್'ಡೇ ಗಿಫ್ಟ್ ನೀಡಿದ ಯು.ಟಿ.ಖಾದರ್ ಪುತ್ರಿ | Vartha Bharati- ವಾರ್ತಾ ಭಾರತಿ
ಸುಧಾಮೂರ್ತಿಗೆ ಫಿದಾ ಆದ ಹವ್ವ ನಸೀಮಾ
ವಾರ್ತಾ ಭಾರತಿ Sep 11, 2019, 7:54 PM IST
ಇನ್ಫೋಸಿಸ್ ನ ಸುಧಾಮೂರ್ತಿ ಅವರ ಸರಳತೆ, ವೈಚಾರಿಕತೆ ಹಾಗೂ ಅವರ ಜೀವನಕ್ರಮ, ಸಾಹಿತ್ಯಾಭಿರುಚಿಗೆ ಮಾಜಿ ಸಚಿವ, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಮತ್ತು ಲಾಮಿಸ್ ದಂಪತಿಯ ಏಕೈಕ ಪುತ್ರಿ ಹತ್ತನೇ ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿನಿ ಹವ್ವ ನಸೀಮಾ ಫಿದಾ ಆಗಿದ್ದಾರೆ.
ಬುಧವಾರ ಬೆಳಗ್ಗೆ ಸುಧಾಮೂರ್ತಿಯವರ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಿವಾಸಕ್ಕೆ ತಂದೆ ಯು.ಟಿ.ಖಾದರ್ ಜೊತೆಗೆ ತೆರಳಿ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಸುಧಾಮೂರ್ತಿ ಯಾರು, ಹೇಗೆ ಮತ್ತವರ ವ್ಯಕ್ತಿತ್ವದ ಬಗ್ಗೆ ತಿಳಿದಿರದ ಹವ್ವಳಿಗೆ ಕ್ರಮೇಣ ಅವರ ಪುಸ್ತಕ ಅಂದರೆ ಪಂಚಪ್ರಾಣವಾಗಿ ಪರಿಣಮಿಸಿತು. ಸುಧಾಮೂರ್ತಿ ಅವರು ಬರೆದ ಅಥವಾ ಅವರ ಬಗ್ಗೆ ಪ್ರಕಟವಾದ ಪುಸ್ತಕ, ಲೇಖನಗಳನ್ನು ಹವ್ವ ನಸೀಮಾ ಆಸಕ್ತಿಯಿಂದ ಓದುತ್ತಿದ್ದರು.
ಆದರೆ ಈ ವಿಚಾರ ಹೆತ್ತವರಿಗೆ ಗೊತ್ತಿರಲಿಲ್ಲ. ಒಂದಿನ ವಿಮಾನ ನಿಲ್ದಾಣದಲ್ಲಿ ಸುಧಾಮೂರ್ತಿಯವರ ಸಾಹಿತ್ಯ ಪುಸ್ತಕವನ್ನು ಹವ್ವ ಎತ್ತಿಕೊಂಡು ಓದುವಾಗ ತಂದೆ ಯು.ಟಿ.ಖಾದರ್ ಮಗಳನ್ನು ಕುತೂಹಲದಿಂದ ವಿಚಾರಿಸಿದರು. ಸುಧಾಮೂರ್ತಿಯನ್ನು ಭೇಟಿಯಾಗಬೇಕೆಂಬ ಅದಮ್ಯ ಬಯಕೆ ಹೊಂದಿದ್ದ ಪುತ್ರಿಯ ಕನಸನ್ನು ಯು.ಟಿ.ಖಾದರ್ ಬುಧವಾರ ಈಡೇರಿಸಿದ್ದಾರೆ.
ಹವ್ವ ಹಾಗೂ ಸುಧಾಮೂರ್ತಿ ಅವರ ಜನ್ಮದಿನಕ್ಕೆ ಎರಡೇ ದಿನದ ವ್ಯತ್ಯಾಸ. ಸುಧಾಮೂರ್ತಿಯವರದ್ದು ಆಗಸ್ಟ್ 19 ಆದರೆ ಹವ್ವ ಜನ್ಮದಿನ ಆಗಸ್ಟ್ 22. ಪ್ರತಿವರ್ಷ ತಂದೆ ಯು.ಟಿ.ಖಾದರ್ ಹವ್ವ ಬರ್ತ್'ಡೇಗೆ ಏನು ಬೇಕೆಂದು ವಿಚಾರಿಸುತ್ತಿದ್ದರು. ಆಕೆ ಪವಿತ್ರ ಮಕ್ಕಾ ಯಾತ್ರೆ ಅಥವಾ ಬೇರೆ ಯಾವುದಾದರೂ ಧಾರ್ಮಿಕ ಹಿನ್ನೆಲೆಯ ಗಿಫ್ಟ್ ಕೇಳುತ್ತಿದ್ದಳು. ಆದರೆ ಈ ವರ್ಷದ ಜನ್ಮದಿನಕ್ಕೆ ಸುಧಾಮೂರ್ತಿಯವರನ್ನು ಭೇಟಿ ...
"ನನ್ನ ಪ್ರೀತಿಯ ಸುಧಾಮೂರ್ತಿಯವರಿಗೆ,
ಹೆಚ್ಚಿಸಿರುವಿರಿ ನೀವು ನಮ್ಮ ನಾಡಿನ ಕೀರ್ತಿ; ನೀಡುತಿರುವಿರಿ ನೀವು ಹಲವರಿಗೆ ಸ್ಪೂರ್ತಿ.
ನಿಮ್ಮ ನಡೆ ನುಡಿ ಬರಹ ನಮಗೆ ದಾರಿದೀಪ; ಸದಾ ನಗುಮುಖ ನಿಮ್ಮದು ನಿಮಗಿಲ್ಲ ಕೋಪ.
ನಿಮ್ಮನ್ನು ನೋಡುವ ಆಸೆ ಬಂದಿತ್ತು ನನಗೆ; ಇದೋ ಇಂದು ನಿಮ್ಮೆದುರು ನಮಸ್ಕಾರ ನಿಮಗೆ" ಎಂದು ಬರೆದ ಸ್ಮರಣಿಕೆಯನ್ನು ಹವ್ವ ಸುಧಾಮೂರ್ತಿಯವರಿಗೆ ಹಸ್ತಾಂತರ ಮಾಡಿದ್ದಾರೆ.
ಇದಕ್ಕೆ ಸಂತೋಷದಿಂದಲೇ ಸ್ವಾಗತಿಸಿ, ಪ್ರತಿಕ್ರಿಯಿಸಿದ ಸುಧಾಮೂರ್ತಿಯವರು, ಮೌಲ್ಯಯುತ ಶಿಕ್ಷಣವನ್ನು ಮನೋಜ್ಞವಾಗಿ ಕಲಿತು ಜೀವನದಲ್ಲಿ ಅಳವಡಿಸಿರುವ ಹವ್ವಳ ಸರಳತೆಯನ್ನು ಶ್ಲಾಘಿಸಿದರಲ್ಲದೆ ಎಳೆಯದರಲ್ಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ತಂದೆಯಂತೆ ಮಗಳು ಕೂಡಾ ಸಿಂಪ್ಲಿಸಿಟಿಗೆ ಮಾರು ಹೋಗಿರುವುದನ್ನು ಪ್ರಶಂಸಿಸಿದರು. ಧಾರ್ಮಿಕ ಮತ್ತು ಲೌಕಿಕ ವಿಧ್ಯಾಭ್ಯಾಸ ಜೊತೆಜೊತೆಗೆ ಕಲಿಯುವ ಅನುಭವವನ್ನು ಸುಧಾಮೂರ್ತಿ ಹವ್ವರಲ್ಲಿ ಕೇಳಿದರು. ಹಿಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ ವಂಚಿತರಾಗುತ್ತಿದ್ದರು. 1968 ರಲ್ಲಿ ಎಂಜಿನಿಯರಿಂಗ್ ವಿಧ್ಯಾಭ್ಯಾಸ ಮಾಡುವಾಗ ಇಡೀ ಕ್ಲಾಸಿಗೆ ತಾನೊಬ್ಬಳೇ ಹುಡುಗಿ ಇದ್ದೆ. ಉಳಿದವರೆಲ್ಲಾ ಹುಡುಗರೇ. ಆದರೆ ಈಗ ಬ...
ಸುಧಾಮೂರ್ತಿಯವರು ಬರೆದ "ತ್ರೀ ತೌಸೆಂಡ್ ಸ್ಟಿಚಸ್", "ದಿ ಮ್ಯಾಜಿಕ್ ಆಫ್ ದಿ ಲೋಸ್ಟ್ ಟೆಂಪಲ್", "ಮ್ಯಾಜಿಕ್ ಡ್ರಮ್", "ಹೌ ದ ಸೀ ಬಿಕಾಮ್ ಸಾಲ್ಟಿ" ಎಂಬ ನಾಲ್ಕು ಆಂಗ್ಲ ಕೃತಿಗಳನ್ನು ಹವ್ವ ನಸೀಮಾ ಅವರಿಗೆ ನೀಡಿದರು.
ಹವ್ವ ನಸೀಮಾ ಎಳೆಯದರಲ್ಲೇ ಧಾರ್ಮಿಕ ಕಲಿಕೆಗಾಗಿ ಕಾಸರಗೋಡಿನ ಅಡ್ಕತ್ತಬೈಲ್ ಹಾಗೂ ದೇರಳಕಟ್ಟೆಯ "ಮದ್ರಸತ್ತಿಬಿಯಾನ್" ಸಂಸ್ಥೆಯಲ್ಲಿ ಕುರ್ ಆನ್ ಕಂಠಪಾಠ ಮಾಡಿ "ಹಾಫಿಝಾ" ಬಿರುದು ಪಡೆದರು. ನಂತರ ಉನ್ನತ ಇಸ್ಲಾಮಿಕ್ ವಿಧ್ಯಾಭ್ಯಾಸಕ್ಕಾಗಿ ಹಾಗೂ ಅತೀ ಕಿರಿಯ ಕುರ್ ಆನ್ ಶಿಕ್ಷಕಿಯಾಗಿ ಕೇರಳದ ಮಲಪ್ಪುರಂ ನಲ್ಲಿರುವ ಕಡಲುಂಡಿ ಖಲೀಲ್ ತಂಙಳ್ ಅವರ ಮಅದಿನ್ ವಿದ್ಯಾಸಂಸ್ಥೆಯ "ಕ್ಯೂ ಲ್ಯಾಂಡ್" ಗೆ ದಾಖಲಾ...
ಪ್ರಸ್ತುತ ಅಲ್ಲೇ ಸಮೀಪದ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಹವ್ವ ನಸೀಮಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏತನ್ಮಧ್ಯೆ 2018ರಲ್ಲಿ ವಿಶ್ವಪ್ರಸಿದ್ಧ "ದುಬೈ ಹೋಲಿ ಕುರ್ ಆನ್ ಅವಾರ್ಡ್" ಸ್ಪರ್ಧೆಯಲ್ಲಿಯೂ ಹವ್ವ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಯು.ಟಿ.ಖಾದರ್ ಅವರು ತನ್ನ ತಾಯಿಯ ಹೆಸರನ್ನೇ ಏಕೈಕ ಮಗಳಿಗೆ ನಾಮಕರಣ ಮಾಡಿದ್ದಾರೆ.
ಮಾನಸಿಕ ಪ್ರಗತಿ ನಮಗೆ ಬೇಕು: ಅನಂತಮೂರ್ತಿ | Vijaya Karnataka
Chandrakanth M | ವಿಕ ಸುದ್ದಿಲೋಕ | Updated: 28 Nov 2012, 10:23:00 PM
ಉಡುಪಿ: ಡೆವಲಪ್‌ಮೆಂಟ್ ಅನ್ನುವ ಪ್ರಗತಿ ನಮಗೆ ಬೇಡ. ಯಾಕೆಂದ್ರೆ ಅದು ಸರ್ವನಾಶಕ್ಕೆ ಕಾರಣವಾಗುತ್ತದೆ. ಅದರ ಬದಲು ನಮಗೆ ಮಾನಸಿಕ ಪ್ರಗತಿ ಬೇಕು ಎಂದು ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿದರು.
ಅಭಿನವ ಬೆಂಗಳೂರು, ಉಡುಪಿ ರಥಬೀದಿ ಗೆಳೆಯರು, ಉಡುಪಿ ಗೋವಿಂದ ಪೈ ಸಂಶೋಧನೆ ಕೇಂದ್ರ ವತಿಯಿಂದ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಬುಧವಾರ ನಡೆದ ಯು.ಆರ್.ಅನಂತಮೂರ್ತಿ ಅವರ 'ಶತಮಾನದ ಕವಿ ವಿಲಿಯಂ ಬ್ಲೇಕ್' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಯಲ್ಲಿ ರಸ್ತೆ ಅಗಲೀಕರಣ, ವಿದ್ಯುತ್ ಉತ್ಪಾದನೆ ಹೀಗೆ ಜಾಸ್ತಿಯಾಗುತ್ತಾ ಹೋಗುತ್ತದೆ. ಅಭಿವೃದ್ಧಿ ಕಲಿಕೆಯನ್ನು ಸುಲಭ ಮಾಡುತ್ತದೆ. ಸುಲಭ ಹೋಗಿ ಸರಳವಾಗುತ್ತದೆ, ದೋಷವಾಗುತ್ತದೆ. ಹಿಂದೆ ನಿರಕ್ಷರಿಗಳಾಗಿದ್ದ ನಮ್ಮ ಹಿರಿಯರು ಅಸಂಸ್ಕೃತರಾಗಿರಲಿಲ್ಲ. ಆದರೆ ಈಗ ಕಲಿತವರು ಜಾಸ್ತಿಯಾಗಿದ್ದಾರೆ ಮತ್ತು ಸಂಸ್ಕೃತಿ ಇಲ್ಲದವರಾಗಿದ್ದಾರೆ ಎಂದು ಹೇಳಿದರು.
ಕಲಿತಿರುವುದನ್ನು ಮರೆತವನು ಕವಿಯಾಗುತ್ತಾನೆ. ಕಲಿತದ್ದನ್ನೇ ಹೇಳುವವನು ಪ್ರಚಾರಕನಾಗುತ್ತಾನೆ. ವಿಲಿಯಂ ಬ್ಲೇಕ್ ಆ ರೀತಿ ಮರೆತು ಹೊಸತನವನ್ನು ಕಂಡ ಕವಿ. 18ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಕಂಡ ಕೈಗಾರಿಕಾ ಕ್ರಾಂತಿಯನ್ನು ಎಲ್ಲರೂ ಹೊಗಳುವಾಗ ಬ್ಲೇಕ್ ಅದಕ್ಕೆ ಪ್ರತಿರೋಧವಾಗಿ ಬರೆಯುತ್ತಾನೆ. ನಮ್ಮಲ್ಲಿ ವಿಜಯನಗರ ಅರಸರ ಕಾಲದಲ್ಲಿ ಚಿನ್ನ ಬೀದಿಯಲ್ಲಿಟ್ಟು ಮಾರುತ್ತಿದ್ದರು ಎಂಬಷ್ಟು ಪ್ರಖ್ಯಾತ...
ಮಾವೋತ್ಸೆತುಂಗ್, ಲೆನಿನ್, ಸ್ಟಾಲಿನ್ ಯಾರ ಕಾಲವೂ ಉತ್ತಮ ಪ್ರಭುತ್ವ ಆಗಿರಲಿಲ್ಲ. ಅಲ್ಲಿ ನಡೆದಷ್ಟು ಕೊಲೆ ಮತ್ತೆಲ್ಲೂ ನಡೆಯಲಿಲ್ಲ. ಇಂಗ್ಲೆಂಡ್‌ನ ರಾಜರ ಕಾಲವನ್ನು ಹಾಡಿ ಹೊಗಳುವಾಗ ಗಂಡು ಹೆರಲಿಲ್ಲ ಎಂದು ತನ್ನ ಪತ್ನಿಯರನ್ನೇ ಕೊಲೆ ಮಾಡಿದ, ಚಿಂತಕರನ್ನು ಕೊಲೆ ಮಾಡಿದ ಅವರ ಕೃತ್ಯಗಳು ನಮಗೆ ನೆನಪಾಗುವುದಿಲ್ಲ ಎಂದು ಹೇಳಿದರು.
ರಾಷ್ಟ್ರೀಯವಾದಕ್ಕೆ ಗಾಂಧಿ ಮತ್ತು ಠಾಗೋರ್ ಸಿಲುಕಿಕೊಳ್ಳಲಿಲ್ಲ. ರಾಷ್ಟ್ರೀಯವಾದ ಎಂಥ ಪರಿಸ್ಥಿತಿಯನ್ನು ತರುತ್ತದೆ ಎಂಬುದಕ್ಕೆ ಜರ್ಮನಿಯ ಹಿಟ್ಲರ್, ಇಟಲಿಯ ಮುಸಲೊನಿ ಮತ್ತಿತರರನ್ನು ನೋಡಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ತರುವುದಕ್ಕಾಗಿ ಉಪವಾಸ ಮಾಡುತ್ತಿದ್ದ ಗಾಂಧಿ, ಸ್ವಾತಂತ್ರ್ಯ ಬಂದಾಗ ಭಾರತ ಸರಕಾರದ ವಿರುದ್ಧವೇ ಉಪವಾಸ ಕುಳಿತಿದ್ದು ಇದಕ್ಕೆ ಉದಾಹರಣೆ ಎಂದರು.
ದೇವರನ್ನು ಅತಿ ಹೆಚ್ಚು ಬೈದವ ನಾಸ್ತಿಕನಲ್ಲ. ಆಸ್ತಿಕ. ದೇವರ ಇರುವಿಕೆ ಬಗ್ಗೆ ಸಂಶಯ ಕಾಡಿದ್ದು ಕೂಡ ಆಸ್ತಿಕನಿಗೇ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ಬರಹಗಾರ್ತಿ ವೈದೇಹಿ ಮಾತನಾಡಿ, ಬಿಎಂಶ್ರೀಯಿಂದ ಹಿಡಿದು ಇಲ್ಲಿವರೆಗೆ ಇತರ ಭಾಷಿಕರನ್ನು ಕನ್ನಡಕ್ಕೆ ತಂದು ಕನ್ನಡವನ್ನು ಬೆಳೆಸಿದರು. ಬ್ಲೇಕ್ ಕೂಡ ನಮ್ಮವನಾಗಿದ್ದಾನೆ ಎಂದು ಹೇಳಿದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಇಂಗ್ಲಿಷ್ ಪ್ರಾಧ್ಯಾಪಕ ಟಿ. ಅವಿನಾಶ್ ಪುಸ್ತಕ ಪರಿಚಯಿಸಿದರು. ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜಶವಂತ್ ಜಾದವ್ ಉಪಸ್ಥಿತರಿದ್ದರು. ಅಭಿನವ ಬೆಂಗಳೂರಿನ ರವಿಕುಮಾರ್ ಸ್ವಾಗತಿಸಿದರು. ಪ್ರೊ.ಸುಬ್ರಹ್ಮಣ್ಯ ಜೋಷಿ ಕಾರ್ಯಕ್ರಮ ನಿರೂಪಿಸಿದರು.
ನಾಟಕೀಯ ಅಂತ್ಯ: ವೆಲೋಸಿಟಿ ಜಯಭೇರಿ | Prajavani
ನಾಟಕೀಯ ಅಂತ್ಯ: ವೆಲೋಸಿಟಿ ಜಯಭೇರಿ
ಶಫಾಲಿ–ಡ್ಯಾನಿಯಲಿ ಉತ್ತಮ ಜೊತೆಯಾಟ; 4 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾಗೆ
Published: 09 ಮೇ 2019, 00:18 IST
Updated: 09 ಮೇ 2019, 00:34 IST
ಜೈಪುರ: ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ವೆಲೋಸಿಟಿ ತಂಡ ಜಯ ಗಳಿಸಿ ಸಂಭ್ರಮಿಸಿತು.
ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ಟ್ವೆಂಟಿ–20 ಚಾಲೆಂಜ್ ಕ್ರಿಕೆಟ್ ಟೂರ್ನಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ತಂಡ ಟ್ರೇಲ್ ಬ್ಲೇಜರ್ಸ್‌ ವಿರುದ್ಧ ಮೂರು ವಿಕೆಟ್‌ಗಳಿಂದ ಗೆದ್ದಿತು.
ಮೊದಲ ಪಂದ್ಯದಲ್ಲಿ ಸೂಪರ್‌ ನೋವಾ ವಿರುದ್ಧ ಐದು ವಿಕೆಟ್‌ಗಳಿಂದ ಗೆದ್ದಿದ್ದ ಟ್ರೇಲ್‌ಬ್ಲೇಜರ್ಸ್‌ ಟಾಸ್‌ ಸೋತು ಬ್ಯಾಟಿಂಗ್ ಮಾಡಿತು. ಸೂಸಿ ಬೇಟ್ಸ್ ಮತ್ತು ಹರ್ಲೀನ್ ಡಿಯೋಲ್ ಉತ್ತಮ ಆಟವಾಡಿದರೂ ಇತರ ಆಟಗಾರ್ತಿಯರು ವೈಫಲ್ಯ ಅನುಭವಿಸಿದ ಕಾರಣ ತಂಡ ಕೇವಲ 112 ರನ್ ಕಲೆ ಹಾಕಿತು.
ಗುರಿ ಬೆನ್ನತ್ತಿದ ವೆಲೋಸಿಟಿ 17ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು 111 ರನ್‌ ಗಳಿಸಿತ್ತು. ಈ ಸಂದರ್ಭದಲ್ಲಿ ರಾಜೇಶ್ವರಿ ಗಾಯಕವಾಡ್‌ ಮತ್ತು ದೀಪ್ತಿ ಶರ್ಮಾ ತೋರಿದ ಅಮೋಘ ಬೌಲಿಂಗ್ ದಾಳಿಯ ಪರಿಣಾಮ ತಂಡ ನಿರಂತರ ವಿಕೆಟ್ ಕಳೆದುಕೊಂಡಿತು. ಆರು ಎಸೆತಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ದಿಟ್ಟತನ ತೋರಿದ ಸುಷ್ಮಾ ವರ್ಮಾ ಮತ್ತು ಸುಶ್ರೀ ಪ್ರಧಾನ್ ತಂ...
ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಆರಂಭದಲ್ಲೇ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಆದರೆ ತಂಡದ ಮೊತ್ತ 25 ಆಗಿದ್ದಾಗ ಅವರ ಜೊತೆಗಾರ್ತಿ ಹ್ಯಾಲಿ ಮ್ಯಾಥ್ಯೂಸ್‌ ಔಟಾಗಿ ಮರಳಿದರು. ಶೆಫಾಲಿ ಜೊತೆಗೂಡಿದ ಡ್ಯಾನಿಯಲಿ ವ್ಯಾಟ್‌ ಎರಡನೇ ವಿಕೆಟ್‌ಗೆ 38 ರನ್‌ ಜೋಡಿಸಿದರು. ವರ್ಮಾ ಔಟಾದ ನಂತರ ನಾಯಕಿ ಮಿಥಾಲಿ ರಾಜ್ ಜೊತೆ ಸೇರಿದ ಡ್ಯಾನಿಯಲಿ 48 ರನ್‌ಗಳ ಜೊತೆಯಾಟ ಆಡಿದರು.
ಆದರೆ ಅರ್ಧಶತಕದತ್ತ ದಾಪುಗಾಲು ಹಾಕಿದ್ದ ವ್ಯಾಟ್‌ (46; 35 ಎಸೆತ, 2 ಸಿಕ್ಸರ್‌, 5 ಬೌಂಡರಿ) ವಿಕೆಟ್ ಉರುಳಿಸಿದ ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಟ್ರೇಲ್‌ಬ್ಲೇಜರ್ಸ್‌ ಪಾಳಯದಲ್ಲಿ ಭರವಸೆ ಮೂಡಿಸಿದರು. ನಂತರ ದೀಪ್ತಿ ಶರ್ಮಾ ಮ್ಯಾಜಿಕ್ ಮಾಡಿದರು.
ವೇದಾ ಕೃಷ್ಣಮೂರ್ತಿ, ಮಿಥಾಲಿ ರಾಜ್‌, ಶಿಖಾ ಪಾಂಡೆ ಮತ್ತು ಅಮೆಲಿಯಾ ಕೇರ್ ಅವರು ದೀಪ್ತಿಗೆ ಬಲಿಯಾದರು. ಒಂಬತ್ತನೇ ಕ್ರಮಾಂಕದ ಸುಶ್ರೀ ಪ್ರಧಾನ್‌ 18ನೇ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್‌ ಗಳಿಸಿ ತಂಡಕ್ಕೆ ಜಯ ಗಳಿಸಿಕೊಟ್ಟರು.
ಹರ್ಲೀನ್ ಡಿಯೋಲ್‌ ಮೋಡಿ: ಮೊದಲು ಬ್ಯಾಟಿಂಗ್ ಮಾಡಿದ ಟ್ರೇಲ್‌ಬ್ಲೇಜರ್ಸ್‌ ತಂಡದ ಪರ ಹರ್ಲೀನ್ ಡಿಯೋಲ್ (43; 40 ಎ, 5 ಬೌಂ) ಮಿಂಚಿದರು. ಆರಂಭಿಕ ಬ್ಯಾಟ್ಸ್‌ವುಮನ್‌ ಮತ್ತು ನಾಯಕಿ ಸ್ಮೃತಿ ಮಂದಾನ ಕೇವಲ 10 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.
ಬುಧವಾರ ವೆಲೋಸಿಟಿ ಗೆಲ್ಲುವುದರೊಂದಿಗೆ ಮೂರು ತಂಡಗಳು ಕೂಡ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಗುರುವಾರ ನಡೆಯಲಿರುವ ವೆಲೋಸಿಟಿ ಮತ್ತು ಸೂಪರ್‌ನೋವಾ ನಡುವಿನ ಪಂದ್ಯದ ನಂತರವಷ್ಟೇ ಫೈನಲ್ ಹಣಾಹಣಿಯಲ್ಲಿ ಸೆಣಸುವ ತಂಡಗಳು ಯಾವುವು ಎಂಬುದು ಖಚಿತವಾಗಲಿದೆ.
ವೆನೆಝುವೆಲಾದ ನೈಟ್‌ಕ್ಲಬ್‌ನಲ್ಲಿ ನೂಕುನುಗ್ಗಲಿಗೆ 17 ಜೀವಗಳು ಬಲಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jun 17, 2018, 1:18 PM IST
ಕಾರಾಕಸ್,ಜೂ.17: ವೆನೆಝುವೆಲಾದ ರಾಜಧಾನಿ ಕಾರಾಕಸ್‌ನ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ರಾತ್ರಿ ಮಿಡ್ಲ್ ಸ್ಕೂಲ್‌ವೊಂದರ ಗ್ರಾಜ್ಯುಯೇಷನ್ ಪಾರ್ಟಿಯಲ್ಲಿ ಎರಡು ಗುಂಪುಗಳು ಹೊಡೆದಾಡಿಕೊಂಡ ಸಂದರ್ಭ ಅಶ್ರುವಾಯು ಗ್ರೆನೇಡ್ ಸ್ಫೋಟಿಸಿದ ಬಳಿಕ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ ಪ್ಯಾರಾಸಿಯೊ ಪ್ರದೇಶದಲ್ಲಿನ 'ಲಾಸ್ ಕೊಟೊರಸ್' ಕ್ಲಬ್‌ನಲ್ಲಿ ನಡೆದ ದುರಂತದಲ್ಲಿ ಎಂಟು ಅಪ್ರಾಪ್ತ ವಯಸ್ಕರು ಮೃತಪಟ್ಟಿದ್ದು,ಐವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ನೆಸ್ಟರ್ ರೆವೆರಲ್ ಅವರು ಘಟನೆಯ ಬೆನ್ನಲ್ಲೇ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು. ಅಶ್ರುವಾಯು ಬಾಂಬ್‌ನ್ನು ಸ್ಫೋಟಿಸಿದ್ದರೆನ್ನಲಾದ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ತೆಗೆದ...
ಸಮೀಪದಲ್ಲಿಯ ಆಸ್ಪತ್ರೆಯಲ್ಲಿ ತಮ್ಮ ಪ್ರೀತಿಪಾತ್ರರ ಶವಗಳನ್ನು ಕಂಡು ದುಃಖತಪ್ತ ಕುಟುಂಬ ಸದಸ್ಯರು ರೋದಿಸುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಕ್ಲಬ್‌ನ ಹೊರಗೆ ಫುಟ್‌ಪಾತ್‌ನಲ್ಲಿ ನೂರಾರು ಶೂಗಳು ಅನಾಥವಾಗಿ ಬಿದ್ದಿದ್ದವು.
ಹೊಡೆದಾಟ ಸಂಭವಿಸಿದಾಗ 500ಕ್ಕೂ ಅಧಿಕ ಜನರು ನೈಟ್‌ಕ್ಲಬ್‌ನಲ್ಲಿದ್ದರು. ಬಾತ್‌ರೂಮಿನಲ್ಲಿ ಅಶ್ರುವಾಯು ಬಾಂಬ್‌ನ್ನು ಸಿಡಿಸಲಾಗಿತ್ತು ಮತ್ತು ಜನರು ಜೀವವುಳಿಸಿಕೊಳ್ಳಲು ಏಕಕಾಲದಲ್ಲಿ ಮುಚ್ಚಿದ್ದ ಬಾಗಿಲುಗಳತ್ತ ಧಾವಿಸಿದ್ದು ನೂಕುನುಗ್ಗಲಿಗೆ ಕಾರಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಮತ್ತು ಅಶ್ರುವಾಯು ಬಾಂಬ್ ಒಳಗೆ ತರುವುದನ್ನು ತಡೆಯದಿದ್ದಕ್ಕಾಗಿ ಕ್ಲಬ್‌ನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಾವು ಕಡಿತದಿಂದ ಸಾವನ್ನು ತಪ್ಪಿಸುವ ಮಹಾನ್ ಸಾಧನ ಕಂಡುಹಿಡಿದಿದ್ದಾರೆ ಈ ಪ್ರೊಫೆಸರ್!! TheNewsism | Kannada usefull Information \n
Home ಉಪಯುಕ್ತ ಜಾಗೃತಿ ಹಾವು ಕಡಿತದಿಂದ ಸಾವನ್ನು ತಪ್ಪಿಸುವ ಮಹಾನ್ ಸಾಧನ ಕಂಡುಹಿಡಿದಿದ್ದಾರೆ ಈ ಪ್ರೊಫೆಸರ್!!
ಭಾರತದಲ್ಲಿ ಹಾವನ್ನು ನೋಡಿದರೆ ಜನ ಓಡುತ್ತಾರೆ , ಹಿಡಿಯಲು ಪ್ರಯತ್ನಿಸುತ್ತಾರೆ , ಇನ್ನು ಕೆಲವರು ಅದನ್ನು ಹೊಡೆಯಲು ಮುಂದಾಗುತ್ತಾರೆ , ಇವೆಲ್ಲದರ ನಡುವೆ ಹಾವು ಯಾರಿಗಾದರೂ ಹಾವು ಕಚ್ಚಿದರೆ ಅವನ ಸಾವು ಖಚಿತವಾದಂತೆ , ಯಾಕೆ ಹಾಗೆ ಹಾವು ಕಡಿತ್ತಕ್ಕೆ ಚಿಕಿತ್ಸೆಯೇ ಇಲ್ವಾ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡೋದು ಸಹಜ.
ಭಾರತದಲ್ಲಿ ಪ್ರತಿವರ್ಷ ೨ ಲಕ್ಷ ಜನ ಹಾವು ಕಡಿತಕ್ಕೆ ಗುರಿಯಾಗುತ್ತಿದ್ದಾರೆ ಜಗತ್ತಿನಲ್ಲಿ ಈ ಸಂಖ್ಯೆ ೫೦ ಲಕ್ಷ. ನಮ್ಮ ದೇಶದಲ್ಲಿ ೨೫೦ ವಿಧದ ಹಾವುಗಳಿದ್ದು ಅದರಲ್ಲಿ ೫೨ ವಿಷ ಸರ್ಪಗಳು ಇವೆ , ಹಾಗು ಅತ್ಯಂತ ವಿಷಕಾರಿಯಾದ ೫ ಹಾವುಗಳಿವೆ. ಅವು ಕಚ್ಚಿದರೆ ಮನುಷ್ಯ ಕೇವಲ ೩ ರೇ ಗಂಟೆಗಳಲ್ಲಿ ಸಾಯುತ್ತಾನೆ.
Also read: ನಿಮಗೆ ಎಲ್ಲಾದರೂ ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ..!
ಹಾವು ಕಡಿತದಿಂದ ದೇಹದಲ್ಲಿ ವಿಷ ಸೇರಿಕೊಂಡರೆ "ಆಂಟಿ ಸ್ನೇಕ್ ವೀನಮ್" ಬಿಟ್ಟರೆ ಇನ್ಯಾವ ಚಿಕಿತ್ಸೆಯಿಂದಲೂ ಬದುಕುವ ಅವಕಾಶ ಇಲ್ಲ. ಹಾವು ಕಚ್ಚಿದ ವ್ಯಕ್ತಿಗೆ ೩ ಗಂಟೆಗಳ ಒಳಗೆ ಪ್ರಥಮ ಚಿಕಿತ್ಸೆ ಮಾಡಿದರೆ ಉಳಿಯುವ ಸಾಧ್ಯತೆ ಇರುತ್ತದೆ. ನಮ್ಮ ರಾಜ್ಯದಲ್ಲಿ ಪರಿಚಿತವಾದ ೧೦೮ ನಂತಹ ಆಂಬ್ಯುಲೆನ್ಸ್‌ನಲ್ಲಿ "ಆಂಟಿ ಸ್ನೇಕ್ ವೀನಮ್‌" ಲಭ್ಯವಾಗುವಂತೆ ಆದರೆ , ಅಪಾಯದಿಂದ ಬಹಳಷ್ಟು ಜನರನ್ನು ಕಾಪಾಡಬಹುದ...
ಹಾವಿನ ಕಡಿತಕ್ಕೆ ಗುರಿಯಾದ ವ್ಯಕ್ತಿಯನ್ನು ಗಂಟೆಯೊಳಗೆ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಪ್ರಾಣವನ್ನು ಕಾಪಾಡುವ ಅವಕಾಶ ಇದೆ. ಆದರೆ ನಮ್ಮಲ್ಲಿ ಆಂಬ್ಯುಲೆನ್ಸ್‌ನಲ್ಲಿ ಈ ಅವಕಾಶ ಇಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಸಮಗ್ರ ದೃಷ್ಟಿಕೋನ ಇಲ್ಲ. ಈ ವಿಷಯವನ್ನು ಗಮನಿಸಿದ ಒಮೇಶ್ ಕುಮರ್ , ಹಿಮಾಚಲ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತಂದು ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ ೪೨ ಜನರ ಪ್ರಾಣ ಕಾಪಾ...
ಇದರ ಬಗ್ಗೆ ಒಂದು ಸಂಶೋಧನಾ ಪತ್ರವನ್ನು ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ರೀಸರ್ಚ್ ೨೦೧೫ ಕ್ಕೆ ಸಲ್ಲಿಸಿದರು. ಅದನ್ನು ದೇಶದಲ್ಲಿ ಅಷ್ಟೇ ಅಲ್ಲದೆ , ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಇದನ್ನು ಹೊಗಳಿತ್ತು. ಈ ವಿಷಯವನ್ನು ಕಳೆದ ವರ್ಷ ಜೆನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ (WHO) ಶೃಂಗದಲ್ಲಿ ಪ್ರಸ್ತಾಪಿಸದರು , ಆ ವಿವರಗಳನ್ನು ಕೇಂದ್ರ ಸರ್ಕಾರ ಸಹ ತೆಗೆದುಕೊಂಡಿದೆ.
ಹಾವು ಕಚ್ಚುವುದರಿಂದ ಆಗುವ ಸಾವಿನಲ್ಲಿ ನೂರಕ್ಕೆ ಶೇ.೯೫ ರಷ್ಟು ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುವುದಿಲ್ಲ , ಒಂದು ವೇಳೆ ಆಂಬುಲೆನ್ಸ್‌ಗಳಲ್ಲಿ "ಆಂಟಿ ಸ್ನೇಕ್ ವೀನಮ್" ಇರುವಂತೆ ಆದರೆ , ಈ ಮರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಡಾಕ್ಟರ್ ಒಮೇಶ್. ಈಗಾಗಲೆ ಇದು ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಜಾರಿಯಾಗಿದೆ ಇದರಿಂದ ಸಾಕಷ್ಟು ಜನರ ಪ್ರಾಣ ಉಳಿಸಿದಂತಾಗಿದೆ. ಇದೆ ರೀತಿ ಎಲ್ಲ ರಾಜ್...
Also read: ಹಾವಿನ ವಿಷವನ್ನೂ ಇಳಿಸಬಲ್ಲ ಕರ್ಪೂರ ಅನೇಕ ರೋಗಗಳಿಗೆ ರಾಮಬಾಣ
Previous articleಸರ್ಕಾರಿ ಶಾಲೆಯ ಮಕ್ಕಳನ್ನು ಅರಮನೆಗೆ ಆಹ್ವಾನಿಸಿ ಅತಿಥಿ ಸತ್ಕಾರ ಮಾಡಿದ ಮೈಸೂರಿನ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು..
Next articleಕೆಲವೊಮ್ಮೆ ಪ್ರಾಣಿಗಳಿಗೆ ಇರುವ ಮಾನವೀಯತೆ ಮನುಷ್ಯನಿಗಿರುವುದಿಲ್ಲ.. ಈ ಕಥೆ ಓದಿ ನೀವೆ ನಿಜ ಎನ್ನುವಿರಿ..
ಅದೇ ಲೋಕ, ಅದೇ ಕಾಲ | Prajavani
'ಸಮಾಜ ಕೆಟ್ಟಿಲ್ಲ: ಬದಲಾಗಲಿ ದೃಷ್ಟಿಕೋನ' ಎಂಬ ಜಯಂತ್ ಕೆ.ಎಸ್. ಅವರ ಲೇಖನ (ಸಂಗತ, ಆ. 21) ಓದಿದಾಗ 'ಕಾಲ ಕೆಟ್ಟಿತೆಂದು ಹೇಳುತ್ತಾರೆ. ಆದರೆ ಕಾಲ ಕೆಡದು, ಅದೇ ಸೂರ್ಯ– ಚಂದ್ರರು, ಅದೇ ಭೂಮಿ, ಅದೇ ಲೋಕ, ಅದೇ ಕಾಲ. ಆದರೆ ಕೆಡುವುದು ಜನರ ನಡೆ ನುಡಿ ಮಾತ್ರ' ಎಂಬ ಸ್ವಾಮಿ ವಿವೇಕಾನಂದರ ಮಾತು ನೆನಪಾಯಿತು. ಎಷ್ಟೋ ವರ್ಷಗಳಿಂದಲೂ ಜೀವನ ಮೌಲ್ಯಗಳು ತಮ್ಮದೇ ಆದ ರೀತಿ ನೀತಿಯಲ್ಲಿ, ಚೌಕಟ್ಟಿನಲ್ಲಿ ...
'ಕಾಲ ಕೆಟ್ಟೋಗಿದೆ' ಎಂಬುದು, ಜನ ಸೇರಿದಾಗ ಆಡಿಕೊಳ್ಳುವ ಕಾಯಂ ಮಾತಾಗಿಬಿಟ್ಟಿದೆ. ಸಾಹಿತ್ಯದ ವಿಷಯ ಬಂದಾಗ ಸಾಹಿತ್ಯ ಕೆಟ್ಟೋಗಿದೆ, ಮೌಲ್ಯ ಕಳೆದುಕೊಂಡಿದೆ ಎನ್ನುವುದು, ಸಂಗೀತದ ವಿಷಯ ಬಂದಾಗಲೂ ಹೀಗೇ ಹೇಳುವುದು... ಯಾವುದೂ ನಾವು ಅಂದುಕೊಂಡಿರುವ ರೀತಿಯಲ್ಲಿ ಅಸ್ತಿತ್ವ ಕಳೆದುಕೊಂಡಿಲ್ಲ. ಸಾಹಿತ್ಯ– ಸಂಗೀತ ಕ್ಷೇತ್ರಗಳು ಚೆನ್ನಾಗಿಯೇ ಬೆಳೆಯುತ್ತಿವೆ. ಕಾಲ ಬದಲಾದಂತೆ ಬದಲಾವಣೆ ಸಹಜ. ಒಳಿತು ಕೆಡ...
ದೇಶದ ವಿವಿಧೆಡೆ ಕ್ಯಾಬ್ ಪ್ರತಿಭಟನೆ, ಅನೇಕ ರಾಜ್ಯಗಳಲ್ಲಿ ಭುಗಿಲೆದ್ದ ಆಕ್ರೋಶ – EESANJE / ಈ ಸಂಜೆ
December 14, 2019 Sunil Kumar Citizenship Act, Citizenship Act: Protests Across Country; Delhi Police
ನವದೆಹಲಿ/ಕೋಲ್ಕತ್ತಾ, ಡಿ.14-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸೋಂ-ತ್ರಿಪುರಾ ಸೇರಿದಂತೆ ಈಶಾನ್ಯ ಪ್ರಾಂತ್ಯಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ವಿವಿಧ ರಾಜ್ಯಗಳಿಗೂ ಹಬ್ಬತೊಡಗಿದೆ. ದೆಹಲಿಯಲ್ಲಿ ನಿನ್ನೆಯಿಂದ ಸಿಎಬಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಸಹ ಮುಂದುವರಯಿತು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ರಾಷ್ಟ್ರ ರಾಜಧಾನಿಯ ಕೆಲವ...
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಈ ವಿಧೇಯಕ ವಿರೋಧಿಸಿ ಜಮೀಯಾ ಮಿಲಿಯಾ ಇಸ್ಲಾಮೀಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದು, ಪೊಲೀಸರು ಆಶ್ರುವಾಯು ಪ್ರಯೋಗಿಸಿದರು. ನಂತರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.
ಪ್ರತಿಭಟನೆ ಮತ್ತು ವಿದ್ಯಾರ್ಥಿಗಳ ಬಂಧನ ಹಿನ್ನೆಲೆಯಲ್ಲಿ ಜಾಮೀಯ ಮಿಲಿಯಾ ಇಸ್ಲಾಮಿಯದ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲೂ ಕೂಡ ಬಿಗುವಿನ ಪರಿಸ್ಥಿತಿ ಮುಂದುವರೆದಿದ್ದು, ಸೇನೆ ಕಟ್ಟೆಚ್ಚರ ವಹಿಸಿದೆ. ನಾಗಾ ಸ್ಟುಡೆಂಟ್ ಫೆಡರೇಶನ್‍ನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಪೊಲೀಸರು ಚದುರಿಸಿದ್ದಾರೆ.
ಅತ್ತ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳಲ್ಲಿ ಮಸೂದೆ ವಿರೋಧಿಸಿ ಇಂದು ಪ್ರತಿಭಟನೆ ಮುಂದುವರೆದು ಹಿಂಸಾಚಾರ ನಡೆದ ವರದಿಗಳಿವೆ. ಮುಶಿರಾಬಾದ್, 24 ಪರಗಣ ಜಿಲ್ಲೆ , ಗ್ರಾಮೀಣ ಹೋರಾ ಪ್ರದೇಶಗಳಲ್ಲಿ ಅನೇಕ ಪ್ರತಿಭಟನಾಕಾರರು ರಸ್ತೆಗಿಳಿದು ವಾಹನ ಮತ್ತು ರೈಲು ಸಂಚಾರಗಳಿಗೆ ಅಡ್ಡಿ ಪಡಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು....
21 ರಂದು ಬಿಹಾರ್ ಬಂದ್ ಕರೆ:
ಮಸೂದೆಯನ್ನು ವಿರೋಧಿಸಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ (ಆರ್‍ಜೆಡಿ) ಡಿ.21 ರಂದು ಬಿಹಾರ ಬಂದ್‍ಗೆ ಕರೆ ನೀಡಿದೆ. ಈ ವಿವಾದಾತ್ಮಕ ಮಸೂದೆ ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಜನತೆಯ ಹಿತರಕ್ಷಿಸುವ ಉದ್ದೇಶದಿಂದ ಪ್ರತಿಭಟನೆ ದಾಖಲಿಸಲು ಡಿ.21 ರಂದು ಬಂದ್‍ಗೆ ಕರೆ ನೀಡಲಾಗಿದೆ ಎಂದು ಆರ್‍ಜೆಡಿ ತಿಳಿಸಿದೆ.
ಸೌದಿ ಅರೇಬಿಯಾದ ರಾಜಕುಮಾರ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳು (ಎಂ.ಒ.ಯು.) / ಒಪ್ಪಂದಗಳ ಪಟ್ಟಿ