text
stringlengths
0
61.5k
15 hrs ago ಇಬ್ಬರು ಸಲಿಂಗಿ ತಾಯಿಂದಿರ ಗರ್ಭದಲ್ಲಿ ಬೆಳೆದ ಮಗು
ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು
| Updated: Saturday, December 8, 2018, 11:47 [IST]
ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಈ 8 ಮಾರ್ಗಗಳನ್ನ ಅನುಸರಿಸಿ...ಪರಿಹಾರವಾಗುತ್ತೆ | BoldSky Kannada
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ವೃತ್ತಿ ಹಾಗೂ ವೈಯಕ್ತಿಕ ಜೀವನದ ಮಧ್ಯೆ ಸಮಯವೆನ್ನುವುದು ಶೂನ್ಯಕ್ಕೆ ಸಮಾನವಾಗಿದೆ. ತಮ್ಮ ದೇಹದ ಕಡೆ ಗಮನಹರಿಸಲು ಹೆಚ್ಚಿನವರಿಗೆ ಒಂದು ಗಂಟೆಯೂ ಸಮಯ ಸಿಗದು. ಮಹಿಳೆಯರು ಹೆಚ್ಚಾಗಿ ತಮ್ಮ ಸೌಂದರ್ಯದ ಕಡೆ ಗಮನಹರಿಸುವವರು. ಆದರೆ ಅವರಿಗೂ ಮನೆ ಹಾಗೂ ಕಚೇರಿ ಕೆಲಸದ ಮಧ್ಯೆ ಸಮಯವೇ ಸಿಗದು. ಸೌಂದರ್ಯದ ಆರೈಕೆ ಮಾಡದೆ ಇದ್ದರೆ ಆಗ ಸೌಂದರ್ಯವು ಅದಾಗಿಯೇ ಮಬ್ಬಾಗುವು...
ಇನ್ನು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಸಮಯ ಕಳೆಯುವಿರಿ. ಇದು ನಿಮ್ಮ ತಿಂಗಳ ಬಜೆಟ್ ನ್ನು ಮತ್ತೆ ಹೆಚ್ಚಾಗಿಸುವುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಕೂದಲು ಹಾಗೂ ತ್ವಚೆಯ ಆರೈಕೆ ಮಾಡಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗುವುದು. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ರಾತ್ರಿ ತಯಾರಿಸಿಕೊಂಡು ಹಚ್ಚಬಹುದಾಗಿರುವಂತಹ ಕೆಲವೊಂದು ಫೇಸ್ ಪ್ಯಾಕ್ ಗಳ ಬಗ್ಗೆ. ಇದು ನಿಮ್...
ಓಟ್ಸ್ ನಲ್ಲಿ ಇರುವಂತಹ ಕೆಲವೊಂದು ಪರಿಣಾಮಕಾರಿ ಗುಣಗಳಿಂದ ಇದನ್ನು ಮುಖದ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬಹುದು ಎಂದು ಪರಿಗಣಿಸಲಾಗಿದೆ. ಓಟ್ ಮೀಲ್ ನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ತ್ವಚೆಗೆ ಪುನರ್ಯೌವನ ನೀಡುವುದು ಮತ್ತು ಚರ್ಮವು ಯಾವುದೇ ಸೋಂಕು ಮತ್ತು ಉರಿಯೂತಕ್ಕೆ ಒಳಗಾಗದಂತೆ ತಡೆಯುವುದು.
2 ಚಮಚ ಓಟ್ಸ್
2-3 ಹನಿ ಲಿಂಬೆರಸ
• ಶುದ್ಧವಾಗಿರುವ ಪಿಂಗಾಣಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಓಟ್ಸ್ ನ್ನು ಹಾಕಿಕೊಳ್ಳಿ.
• ಇದರ ಬಳಿಕ ಜೇನುತುಪ್ಪ ಹಾಕಿ ಮತ್ತು ಕೆಲವು ಹನಿ ತಾಜಾ ಲಿಂಬೆರಸ ಹಾಕಿಕೊಂಡು ಮಿಶ್ರಣ ಮಾಡಿ.
• ಎಲ್ಲವನ್ನು ಒಂದು ಚಮಚ ಬಳಸಿಕೊಂಡು ಮಿಶ್ರಣ ಮಾಡಿ, ಸ್ಕ್ರಬ್ ನಂತಹ ಪೇಸ್ಟ್ ಮಾಡಿ.
• ಇದನ್ನು ಸ್ವಚಗೊಳಿಸುವ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
• ಈ ಪ್ಯಾಕ್ ಹಾಗೆ ಮುಖದ ಮೇಲೆ ಒಣಗಲಿ ಮತ್ತು ಬೆರಳುಗಳಿಂದ ನಿಧಾನವಾಗಿ ಸ್ಕ್ರಬ್ ಮಾಡುತ್ತಾ ಇದನ್ನು ತೆಗೆಯಿರಿ.
• ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.
ಹಾಲಿನ ಕೆನೆಯಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳ ನಿವಾರಣೆ ಮಾಡಿ ನಿಮಗೆ ಆರೋಗ್ಯಕಾರಿ ಮತ್ತು ಯೌವನಯುತ ತ್ವಚೆ ನೀಡುವುದು. ಇದರಿಂದ ನೀವು ಹಾಲಿನ ಕೆನೆಯನ್ನು ಹಚ್ಚಿಕೊಳ್ಳುವ ಮೂಲಕ ಕಾಂತಿಯುತ ತ್ವಚೆ ಪಡೆಯಬಹುದು.
Most Read: ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ
1 ಚಮಚ ತಾಜಾ ರೋಸ್ ವಾಟರ್
ಹಾಲಿನ ಕೆನೆಯ ಫೇಸ್ ಪ್ಯಾಕ್ ತಯಾರಿಸುವ ವಿಧಾನ
• ಒಂದು ಪಿಂಗಾಣಿಯಲ್ಲಿ ಹಾಲಿನ ಕೆನೆ ಮತ್ತು ಸ್ವಲ್ಪ ತಾಜಾ ರೋಸ್ ವಾಟರ್ ಹಾಕಿ.
• ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದನ್ನು ತುಂಬಾ ನಯ ಹಾಗೂ ಮೃಧುವಾದ ಪೇಸ್ಟ್ ಮಾಡಿಕೊಳ್ಳಿ.
• ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಇರಲಿ.
• 15 ನಿಮಿಷ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ವಿಟಮಿನ್ ಇ ಕ್ಯಾಪ್ಸೂಲ್ ಫೇಸ್ ಪ್ಯಾಕ್
ಚರ್ಮಕ್ಕೆ ಆಗಿರುವಂತಹ ಹಾನಿಯನ್ನು ವಿಟಮಿನ್ ಇ ಕ್ಯಾಪ್ಸೂಲ್ ನಿವಾರಣೆ ಮಾಡುವುದು ಮತ್ತು ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೇಟಿವ್ ಮತ್ತು ಉರಿಯೂತ ಶಮನಕಾರಿ ಗುಣದಿಂದ ತ್ವಚೆಗೆ ಪುನರ್ಶ್ಚೇತನ ನೀಡುವುದು. ಚರ್ಮದ ಮೇಲೆ ಆಗಿರುವಂತಹ ಯುವಿ ಹಾನಿಯಿಂದಲೂ ಇದು ರಕ್ಷಣೆ ನೀಡುವುದು.
2-3 ವಿಟಮಿನ್ ಇ ಕ್ಯಾಪ್ಸೂಲ್ಸ್
• ವಿಟಮಿನ್ ಇ ಕ್ಯಾಪ್ಸೂಲ್ ನ್ನು ತುಂಡು ಮಾಡಿ ಅದರ ಎಣ್ಣೆಯನ್ನು ನೀವು ಒಂದು ಪಿಂಗಾಣಿಗೆ ಹಾಕಿ.
• ಈಗ ಪಿಂಗಾಣಿಗೆ ರೋಸ್ ವಾಟರ್ ಹಾಕಿಕೊಳ್ಳಿ.
• ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
• ಮುಖ ಹಾಗೂ ಕುತ್ತಿಗೆ ಸರಿಯಾಗಿ ತೊಳೆಯಿರಿ ಮತ್ತು ಇದರ ಬಳಿಕ ಫೇಸ್ ಪ್ಯಾಕ್ ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಿ.
• 10-15 ನಿಮಿಷ ಕಾಲ ಹಾಗೆ ಬಿಡಿ.
• ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.
ಮೊಟ್ಟೆ ಬಿಳೆ ಲೋಳೆ ಫೇಸ್ ಪ್ಯಾಕ್
ಪ್ರೋಟೀನ್ ಗಳಿಂದ ಸಮೃದ್ಧವಾಗಿರುವಂತಹ ಮೊಟ್ಟೆಯನ್ನು ಹಾಗೆ ತ್ವಚೆಗೆ ಹಚ್ಚಿಕೊಂಡಾಗ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು. ಮೊಟ್ಟೆಯ ಬಿಳಿ ಲೋಳೆಯು ಚರ್ಮಕ್ಕೆ ಪೋಷಣೆ ನೀಡುವುದು. ಇದು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನ್ನು ತೆಗೆದು ಚರ್ಮಕ್ಕೆ ಪೋಷಣೆ ನೀಡುವುದು.
• ಒಂದು ಮೊಟ್ಟೆ ತೆಗೆದುಕೊಂಡು ಅದನ್ನು ಒಡೆದು ಅದರಿಂದ ಬಿಳಿ ಲೋಳೆಯನ್ನು ಬೇರ್ಪಡಿಸಿಕೊಳ್ಳಿ. ಇದನ್ನು ಶುದ್ಧವಾಗಿರುವ ಪಿಂಗಾಣಿಗೆ ಹಾಕಿ.
• ತಾಜಾ ಮತ್ತು ಸುಗಂಧ ಬೆರೆಸದೆ ಇರುವಂತಹ ಮೊಸರನ್ನು ಮೊಟ್ಟೆಯ ಬಿಳಿ ಭಾಗಕ್ಕೆ ಹಾಕಿ ಮತ್ತು ಎರಡು ಸರಿಯಾಗಿ ಕಲಸಿಕೊಳ್ಳಿ.
• ಈ ಫೇಸ್ ಪ್ಯಾಕ್ ನ್ನು ತೆಗೆದುಕೊಂಡು ಮುಖಕ್ಕೆ ಒಂದು ಪದರವಾಗಿ ಹಾಕಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.
• ಸಾಮಾನ್ಯ ನೀರಿನಿಂದ ತೊಳೆದು ಫೇಸ್ ಪ್ಯಾಕ್ ನ್ನು ತೆಗೆಯಿರಿ.
• ಬಿಸಿ ನೀರನ್ನು ಮುಖ ತೊಳೆಯಲು ಬಳಸಬೇಡಿ. ಇದರಿಂದ ಫೇಸ್ ಪ್ಯಾಕ್ ನಲ್ಲಿ ಇರುವಂತಹ ಮೊಟ್ಟೆಯು ಬೆಂದು ಹೋಗಬಹುದು.
ಚರ್ಮದಲ್ಲಿ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಂಡು ನೆರಿಗೆ ರಹಿತವಾಗಿ ಮಾಡುವಂತಹ ಕಾಲಜನ್ ನ್ನು ಅಲೋವೆರಾವು ಉತ್ಪತ್ತಿ ಮಾಡುವುದು. ಅಲೋವೆರಾದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮದಲ್ಲಿ ಆಗುವಂತಹ ಯಾವುದೇ ರೀತಿಯ ಉರಿಯೂತ ಮತ್ತು ಕಿರಿಕಿರಿ ಶಮನ ಮಾಡುವಲ್ಲಿ ಪ್ರಮುಖ ನಿರ್ವಹಿಸುವುದು. ಅಲೋವೆರಾದಲ್ಲಿ ಇರುವಂತಹ ಮೊಶ್ಚಿರೈಸರ್ ಚರ್ಮವನ್ನು ತೇವಾಂಶದಿಂದ ಇಟ್ಟು ಎಲ್ಲಾ ಸಮಯದಲ್ಲಿ ಚರ್ಮವ...
ತಯಾರಿಸಿಕೊಳ್ಳುವ ಮತ್ತು ಹಚ್ಚಿಕೊಳ್ಳುವ ರೀತಿ
• ತಾಜಾ ಅಲೋವೆರಾ ಎಲೆಯಿಂದ ನೀವು ಅದರ ಲೋಳೆಯನ್ನು ಹೊರಗೆ ತೆಗೆಯಿರಿ.
• ಇದನ್ನು ಒಂದು ಪಿಂಗಾಣಿಗೆ ಹಾಕಿ ಮತ್ತು ಅದಕ್ಕೆ ಆಲಿವ್ ತೈಲ ಹಾಕಿ.
• ಎರಡನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿ.
• ಈ ಅಲೋವೆರಾ ಫೇಸ್ ಪ್ಯಾಕ್ ನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ.
• 20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಮೃಧುವಾದ ಟವೆಲ್ ನಿಂದ ಸರಿಯಾಗಿ ಒರೆಸಿಕೊಳ್ಳಿ.
ಹಸಿ ಹಾಲಿನಂತೆ ಮೊಸರಿನಲ್ಲಿ ಕೂಡ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆದು ಹೊಸ ಕೋಶಗಳನ್ನು ಉತ್ಪತ್ತಿ ಮಾಡಿ ಚರ್ಮವು ಮತ್ತೆ ಪುನರ್ಯೌವನ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುವುದು. ಇದು ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ, ದಿನವಿಡಿ ಚರ್ಮವು ಮೊಶ್ಚಿರೈಸ್ ಆಗಿ ಉಳಿಯುವಂತೆ ಮಾಡುವುದು.
• ಒಂದು ಪಿಂಗಾಣಿಗೆ ತಾಜಾ ಮೊಸರು ಹಾಕಿಕೊಳ್ಳಿ.
• ಇದರ ಬಳಿಕ ಕೆಲವು ಹನಿ ತಾಜಾ ಲಿಂಬೆರಸ ಹಾಕಿ ಮತ್ತು ಎರಡು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ.
• ತೊಳೆದುಕೊಂಡಿರುವಂತಹ ಮುಖದ ಮೇಲೆ ಇದನ್ನು ನೀವು ಸರಿಯಾಗಿ ಹಚ್ಚಿಕೊಳ್ಳಿ.
• 10 ನಿಮಿಷ ಕಾಲ ಫೇಸ್ ಪ್ಯಾಕ್ ಮುಖದ ಮೇಲೆ ಹಾಗೆ ಇರಲಿ.
• ಟಿಶ್ಯೂ ಬಳಸಿಕೊಂಡು ಮೊಸರಿನ ಪ್ಯಾಕ್ ನ್ನು ನೀವು ಒರೆಸಿಕೊಳ್ಳಿ.
• ತಣ್ಣೀರಿನಿಂದಲೂ ಇದನ್ನು ತೊಳೆದುಕೊಳ್ಳಬಹುದು.
Natural Night Face Packs for Glowing Skin
Spending some time to maintain a healthy skin and hair does not only help in keeping ourselves groomed but also will enhance our self-confidence. Here are some face packs made of natural ingredients like oatmeal, curd, Vitamin E oil, etc., to get healthy and glowing skin. These face packs can be used during the night t...
ರ‍್ಯಾಪರ್ ಬಾದ್‌ಶಾ ಜೊತೆ ಹಾಡಲಿದ್ದಾನೆ ಅನುಷ್ಕಾ ಶರ್ಮಾ ನಿದ್ದೆಗೆಡಿಸಿದ ಹುಡುಗ | Bachpan ka Pyaar Fame Sahdev Dirdo Teams Up With Badshah For a Duet Song to Release soon dpl
ಬಚ್‌ ಪನ್‌ ಕಾ ಪ್ಯಾರ್ ಬಾಲಕನಿಗೆ ಸಿಕ್ತು ಬಂಪರ್ ಅವಕಾಶ
ಬಾದ್‌ ಶಾ ಜೊತೆ ಹಾಡಲಿದ್ದಾನೆ ಅನುಷ್ಕಾ ಶರ್ಮಾ ನಿದ್ದೆಗೆಡಿಸಿದ ಬಾಲಕ
Bangalore, First Published Aug 11, 2021, 9:08 AM IST
ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಚ್‌ ಪನ್‌ ಕಾ ಪ್ಯಾರ್ ಖ್ಯಾತಿಯ ಬಾಲಕನಿಗೆ ಬಂಪರ್ ಅವಕಾಶ ಸಿಕ್ಕಿದೆ. ಖ್ಯಾತ ರ‍್ಯಾಪರ್ ಬಾದ್‌ ಶಾ ಜೊತೆ ಹಾಡಲಿದ್ದಾನೆ ಈ ಇನ್‌ಸ್ಟಾಗ್ರಾಂ ಬಾಲಕ. ಇನ್‌ಸ್ಟಾಗ್ರಾಂನ ರೀಲ್ಸ್‌ ಸ್ಕ್ರಾಲ್ ಮಾಡುತ್ತಿದ್ದಂತೆ ಸದ್ಯ ಟ್ರೆಂಡ್ ಆಗುತ್ತಿರುವ ಹಾಡಿದು. ಎಲ್ಲಿ ನೋಡಿದರೂ ಈ ಬಾಲಕನ ಹಾಡಿನದ್ದೇ ಗದ್ದಲ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಈ...
ಈ ವೈರಲ್ ಹಾಡಿನ ಮೂಲಕ ಸಚ್‌ದೇವ್ ಡಿರ್ಡೋ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾನೆ. ಛತ್ತೀಸ್‌ಗಡ ಸಿಎಂ ಅವರಿಂದ ಅಭಿನಂದಿಸಲ್ಪಟ್ಟ ಈ ಬಾಲಕ ಇಂಡಿಯನ್ ಐಡಲ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾನೆ. ಬಾದ್‌ ಶಾ ಜೊತೆ ಸಿಂಗಿಂಗ್ ಡಿಬಟ್ ಮಾಡಲಿದ್ದಾನೆ ಈ ಪುಟ್ಟ ಹುಡುಗ. ಬಾದ್‌ ಶಾ ಜೊತೆ ಆಸ್ತಾ ಗಿಲ್, ರಿಕೋ ಕೂಡಾ ಒಂದಾಗಲಿದ್ದು ಗಾಲಾ ಟೈಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟ್‌ಗೆ ಈಗ ಪೂರ್ತಿಯಾಗಿ...
ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಶೇರ್ ಮಾಡಿದ ಬಾದ್‌ಶಾ ಸೋಮವಾರ ತನ್ನ ಮುಂಬರುವ ವೀಡಿಯೊದ ಟೀಸರ್ ಅನ್ನು ಡಿರ್ಡೊ ಜೊತೆ ಪೋಸ್ಟ್ ಮಾಡಿದ್ದಾರೆ. ಸಂಪೂರ್ಣ ಹಾಡನ್ನು ಬುಧವಾರ ಅಂದರೆ ಆಗಸ್ಟ್ 11 ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಬಾದ್‌ಶಾ ಜೊತೆಯಲ್ಲಿ, ಗಾಯಕ ಆಸ್ತಾ ಗಿಲ್ ಮತ್ತು ಸಂಗೀತಗಾರ ರಿಕೊ ಕೂಡ ಹಾಡಿನಲ್ಲಿ ಇದ್ದಾರೆ. 'ಅಬ್ ಪೂರ ಸುನೋ', ಅವರು ಪೋಸ್ಟ್ಗ...
ಬಾದಶಾಹ್ ಸಹದೇವ್ ಡಿರ್ಡೋ ಅವರ ಧ್ವನಿಯಿಂದ ಪ್ರಭಾವಿತನಾಗಿದ್ದು, ಚಂಡೀಗ .ದಲ್ಲಿ ಬಂದು ಭೇಟಿಯಾಗಲು ಮುಂದಾದ. ಆತನೊಂದಿಗೆ ಡ್ಯುಯೆಟ್ ಮಾಡಲು ಆಸಕ್ತಿ ಇದೆಯೇ ಎಂದು ಕೇಳಿದರು. ಸಹದೇವ್ ಈ ಪ್ರಸ್ತಾಪವನ್ನು ಒಪ್ಪಿಕೊಂಡರು ಮತ್ತು ಚತ್ತೀಸ್‌ಗhದಿಂದ ಚಂಡೀಗ .ದಲ್ಲಿ ಬಾದ್‌ಶಾ ಅವರನ್ನು ಭೇಟಿ ಮಾಡಲು ಹಾರಿದರು.
"ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ" : ಬೆಂಗಳೂರಲ್ಲಿ ಆಗಸ್ಟ್ 14-15 ರಂದು ಧರಣಿ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
"ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ" ಎಂದು ಒತ್ತಾಯಿಸಿ ಅಗಸ್ಟ್ 14 ಮತ್ತು 15 ರಂದು ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯ ಬಗ್ಗೆ ನಡೆಯಲಿದೆ.
ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖವಾದುದು. ಸಾಕಷ್ಟು ಉದ್ಯೋಗ ಸೃಷ್ಟಿಯಾಗದೇ ಇರುವುದು ಒಂದೆಡೆಯಾದರೆ ಇನ್ನೊಂದೆಡೆ ಇಲ್ಲಿ ಸೃಷ್ಟಿಯಾದ ಉದ್ಯೋಗಗಳನ್ನು ಪರಭಾಷಿಕರು ಬಂದು ಕಬಳಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮ ನೆಲದಲ್ಲಿನ ಉದ್ಯೋಗ ನಮ್ಮವರಿಗೆ ಸಿಗದಂತಾಗಿದೆ.
ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿಯೇ ಬೀಡುಬಿಟ್ಟಿದ್ದರೂ ಇಲ್ಲಿನ ಬಹುರಾಷ್ತ್ರೀಯ ಕಂಪನಿಗಳು, ಬ್ಯಾಂಕುಗಳು ಮತ್ತು ಇತರ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಮೀನಮೇಷ ಎಣಿಸುತ್ತಿವೆ. ಹಾಗಾಗಿ ನಮ್ಮ ಕನ್ನಡಿಗರ ಅನ್ನಕ್ಕೆ ಇನ್ನಷ್ಟು ಕುತ್ತು ಬರುವುದನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ನಿರ್ಧರಿಸಿ ಈ ಹೋರಾಟ ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್...
ಈ ಹೋರಾಟದ ಮತ್ತೊಬ್ಬ ಪ್ರಮುಖರಾದ ರಮಾನಂದ ಅಂಕೋಲಾರವರು ಮಾತನಾಡಿ, ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ನಮ್ಮನ್ನಾಳುವ ಸರ್ಕಾರಗಳ ಗಮನ ಸೆಳೆಯಲು ಮೇ ತಿಂಗಳ ೩ನೇ ತಾರೀಖಿನಂದು ನಾವು #KarnatakaJobsForKannadigas ಎಂಬ ಅಡಿಬರಹದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದೆವು. ಇಡಿ ದೇಶವೇ ನಮ್ಮತ್ತ ತಿರುಗಿ ನೋಡುವಂತೆ ನಾಡಾಭಿಮಾನಿಗಳ ಸಹಕಾರದಿಂದ ನಡೆದ ಈ ಅಭಿಯಾನಕ್ಕೆ ಬೆಂಬಲ‌ಸೂಚಿಸುತ್ತ...
ಅಭಿಯಾನದ ಯಶಸ್ಸು ಎನ್ನುವಂತೆ ಈ ಅಭಿಯಾನ ಶುರುವಾದ ಮೇಲೆಯೇ ಕರ್ನಾಟಕದ ಕೆಲವು ಲೋಕಸಭಾ ಸದಸ್ಯರು ನಮ್ಮ ಬೇಡಿಕೆಗಳಲ್ಲೊಂದಾಗಿದ್ದ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶಕೊಡುವ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರಿಂದ ನಮ್ಮ ತಾಯ್ನೆಲದ ಭಾಷೆಯಾದ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ. ಕಳೆದ ವಾರವಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ...
ಹಿಂದಿನ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಇದೂ ಸಹ ಕೇವಲ ಟ್ವಿಟರಿನಲ್ಲಿ ನೀಡಿದ ಭರವಸೆಯಾಗಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಕಳೆದ ತಿಂಗಳಷ್ಟೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಸರ್ಕಾರ ಸ್ಥಳಿಯರಿಗೆ ತನ್ನ ಉದ್ಯೋಗದಲ್ಲಿ ಶೇಕಡ 75 ಮೀಸಲಾತಿ ನೀಡಲು ಶಾಸನ ಜಾರಿ ಮಾಡುವತ್ತ ಹೆಜ್ಜೆ ಇಟ್ಟಿದೆ.ನಮ್ಮ ರಾಜ್ಯದಲ್ಲೂ ಸಹ ಇಂತಹ ಒಂದು ಕಾಯ್ದೆಯನ್ನು ಮಾಡಿ ಎಂದು ನಾವು ನಮ್ಮ ಮುಖ್ಯಮಂತ್ರಿಯನ್ನು...
ಅಗಸ್ಟ್ 14 ಮತ್ತು 15 ರಂದು ನಡೆಯುವ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯಲ್ಲಿ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಚಿತ್ರನಟ ಉಪೇಂದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ಖ್ಯಾತ ಚಿತ್ರನಟರು, ಹೋರಾ...
ಎಲ್ಲಾ ಖಾಸಗಿ ವಲಯದ ಉದ್ಯಮಗಳಿಗೆ ರಾಜ್ಯ ಸರ್ಕಾರ ಹಲವು ಮೂಲಭೂತ(ನೆಲ,ಜಲ,ವಿದ್ಯುತ್, ರಸ್ತೆ ಮುಂತಾದ) ಸವಲತ್ತುಗಳನ್ನು ನೀಡುತ್ತಿರುವುದರಿಂದ ಕಟ್ಟುನಿಟ್ಟಾಗಿ ಉದ್ಯೋಗಗಳು ಸ್ಥಳಿಯರಿಗೆ(ಕನ್ನಡಿಗರಿಗೆ) ಮೀಸಲಿಡಲು ಕರಾರು ಪತ್ರದಲ್ಲೇ ಪೂರ್ವಷರತ್ತು ಹಾಕಬೇಕು. ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರ ರಾಜ್ಯದವರ...
ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯ ಸರ್ಕಾರ ಸ್ಥಳೀಯರಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ರಾಜ್ಯದ ಖಾಸಗಿ ಉದ್ದಿಮೆಗಳಿಂದ ಪ್ರತಿವರ್ಷ ಘೋಷಣೆ ಪತ್ರ ಪಡೆಯಬೇಕು. ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಲು 15 ವರ್ಷಗಳ ಕಾಲ ಅವರು ರಾಜ್ಯದಲ್ಲಿ ವಾಸವಾಗಿದ್ದಲ್ಲದೇ ರಾಜ್ಯಭಾಷೆಯಾದ ಕನ್ನಡದಲ್ಲಿ ಮಾತನಾಡಲು,ಓದಲು ಮತ್ತು ಬರೆಯಲು ಬರಬೇಕು.
ರಾಜ್ಯದಲ್ಲಿ ವ್ಯವಹರಿಸುವ ಎಲ್ಲಾ ಬ್ಯಾಂಕುಗಳು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷಾಜ್ಞಾನವನ್ನು ಕಡ್ಡಾಯಗೊಳಿಸಬೇಕು.ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯು ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಯನ್ನು ಕನ್ನಡದಲ್ಲೂ ಬರೆಯುವ ಅವಕಾಶವಿರಬೇಕು.
ರಾಜ್ಯ/ಕೇಂದ್ರ ಸರ್ಕಾರಿ ಉದ್ಯಮಗಳು ಹಾಗೂ ಇಲಾಖೆಗಳಲ್ಲಿ ದಿನಗೂಲಿ ಕೆಲಸಗಳಿಗೆ ಕಾರ್ಮಿಕರನ್ನು/ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಂಸ್ಥೆಗಳಿಗೂ ಈ ಷರತ್ತು ವಿಧಿಸಬೇಕು.
ಕೇಂದ್ರ/ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ಇರಬೇಕು.
ಈ ಹೋರಾಟವು ಯಾವುದೇ ಬ್ಯಾನರಿನಡಿಯಲ್ಲಿ ನಡೆಯುತ್ತಿಲ್ಲ. ಹೋರಾಟದ ನೇತೃತ್ವವನ್ನು ಯಾವುದೇ ಸಂಘಟನೆ ಅಥವಾ ವ್ಯಕ್ತಿ ವಹಿಸಿಲ್ಲ. ಇದು ಸಮಗ್ರ ಕನ್ನಡಿಗರೆಲ್ಲಾರ ಹೋರಾಟ. ಎಲ್ಲರ ಭಾಗವಹಿಸುವಿಕೆ ಇರಲಿ ಎಂದು ಕರ್ನಾಟಕ ರಣಧೀರ ಪಡೆಯ ಪ್ರಮುಖರಾದ ದಾವಣಗೆರೆಯ ರಾಘು ದೊಡ್ಡಮನಿ, ಯವರು ಕೋರಿದ್ದಾರೆ.
ಮಾಜಿ ಪ್ರಧಾನಿ ನೆಹರೂ 128ನೇ ಜಯಂತಿ | ಸುದ್ದಿ ಟಿವಿ
ಮಾಜಿ ಪ್ರಧಾನಿ ನೆಹರೂ 128ನೇ ಜಯಂತಿ
ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟುಹಬ್ಬದಂದು ಪಂಡಿತ್ ಜವಾಹರ್​​ಲಾಲ್ ನೆಹರೂ ಅವರಿಗೆ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನೆಹರು ಅವರ ಸ್ಮಾರಕ ಶಾಂತಿವನಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ದೇಶದಲ್ಲಿ 128ನೇ ನೆಹರೂ ಜಯಂತಿಯನ್ನು ಆಚರಿಸಲಾಗುತ್ತಿದೆ. ನೆಹರೂ ಅವರು ಆಗಸ್ಟ್ 15, 1947ರಂದು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್ 14, 1889ರಂದು ಜನಿಸಿದ್ದ ಅವರು, ಉತ್ತರಪ್ರದೇಶದ ಅಲಹಾಬಾದ್​​ನಲ್ಲಿ ಮೇ 27, 1964ರಂದು ಇಹಲೋಕವನ್ನು ತ್ಯಜಿಸಿದ್ದರು. ಪಂಡಿತ್ ಜವಾಹರ್​​ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
1919ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಪಾದಾರ್ಪಣೆ ಮಾಡಿದ್ದರು. 1923ರಲ್ಲಿ ಅವರು ಕಾಂಗ್ರೆಸ್​​ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ದೇಶವನ್ನು ಅತಿ ದೀರ್ಘಕಾಲ ಮುನ್ನಡೆಸಿದ ಪ್ರಧಾನಿ ಕೂಡ ಹೌದು. ಅವರು ಒಟ್ಟು 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರು.
ಪತ್ನಿಯನ್ನು ಪ್ರಿಯಕರನಿಗೆ ಧಾರೆಯೆರೆದು ಕೊಟ್ಟು ಆದರ್ಶ ಮೆರೆದ ಪತಿ! | Tribal youth gets wife married to her lover in Odisha | Kannadaprabha.com
Wednesday, January 16, 2019 8:36 PM IST
ಪತ್ನಿಯನ್ನು ಪ್ರಿಯಕರನಿಗೆ ಧಾರೆಯೆರೆದು ಕೊಟ್ಟು ಆದರ್ಶ ಮೆರೆದ ಪತಿ!
Published: 12 Mar 2018 04:58 PM IST | Updated: 12 Mar 2018 05:11 PM IST
ರೂರ್ ಕೆಲಾ : ಪತಿಯೇ ಮುಂದೆ ನಿಂತು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರಿಗೆ ಮರು ಮದುವೆ ಮಾಡಿಸಿರುವ ಘಟನೆ ಇಲ್ಲಿ ನಡೆದಿದೆ. ಸುಂದರ್ ಘರ್ ಜಿಲ್ಲೆ ಬರ್ಗಾನ್ ಬಾರ್ಗೆನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶಾನ್ ಪಾಡ ಹ್ಯಾಮ್ಲೆಟ್ ನಲ್ಲಿ ನಡೆದಿದೆ.
ಬಸುದೇವ್ ತೊಪೊ ಎಂಬ ಯುವಕನೊಂದಿಗೆ 21 ವರ್ಷದ ಯುವತಿಯ ವಿವಾಹವಾಗಿತ್ತು, ಇಬ್ಬರು ಸ್ನೇಹಿತರೊಂದಿಗೆ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ ಯುವತಿಯ ಪ್ರಿಯಕರ ತನ್ನನ್ನು ದೂರದ ಸಹೋದರ ಎಂದು ಪರಿಚಯಿಸಿಕೊಂಡಿದ್ದಾನೆ. ಮತ್ತಿಬ್ಬರು ಸ್ನೇಹಿತರು ತೊಪೊವನ್ನು ಮದ್ಯಪಾನಕ್ಕೆ ಕರೆದೊಯ್ದಿದ್ದಾರೆ. ಆದರೆ, ಆತ ಹಿಂದುರಿಗಿ ಬಂದಾಗ ಆತನ ಹೆಂಡತಿ ಹಾಗೂ ಪ್ರಿಯಕರ ಪ್ರಧಾನ್ ಜೊತೆಗಿರುವುದು ಕಂಡುಬಂದಿದೆ. ಈ ಘಟನೆ...
ಈ ವೇಳೆ ಆ ಯುವತಿ ಪ್ರಧಾನ್ ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ಕುಟುಂಬದವರ ಒತ್ತಡಕ್ಕೆ ಮಣಿದು ತೊಪೊವನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ನಂತರ ಆ ಯುವತಿಯ ಪೋಷಕರು ಹಾಗೂ ಆಕೆಯ ಪ್ರಿಯಕರನ ಮನೆಯವರು ಕರೆದಿದ್ದಾರೆ. ಗಂಡನೇ ಮುಂದೆ ನಿಂತು ತನ್ನ ಹೆಂಡತಿ ವಿವಾಹ ಮಾಡಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಹೋದರಾದರೂ ಸಂಪ್ರದಾಯಂತೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾ...
ಮತ್ತೊಂದು ಘಟನೆಯಲ್ಲಿ 16 ವರ್ಷದ ಬಾಲಕಿಯನ್ನು 32 ವರ್ಷದ ಯುವಕನಿಗೆ ಕೊಟ್ಟು ವಿವಾಹ ಮಾಡಿಸಿರುವ ಘಟನೆ ಜಾರ್ಖಂಡ್ ಜಿಲ್ಲೆಯ ಪಶ್ಚಿಮ ಸಿಂಗಭುಮ್ ಜಿಲ್ಲೆಯಲ್ಲಿ ಮೊನ್ನೆ ನಡೆದಿದೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಆ ಬಾಲಕಿಯನ್ನು ರಕ್ಷಿಸಿದ್ದು ಮನೆಗೆ ಕರೆತಂದಿದ್ದಾರೆ.
ಆ ಬಾಲಕಿಯ ತಂದೆ ಹಿರಿಯ ಮಗಳನ್ನು ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 8 ಸಾವಿರ ಹಣ ಪಡೆದಿದ್ದಾನೆ. ಆದರೆ. ಈ ಮದುವೆಗೆ ಹಿರಿಯ ಮಗಳು ಒಪ್ಪದಿದ್ದಾಗ ಕಿರಿಯ ಮಗಳನ್ನು ಕೊಟ್ಟು ವಿವಾಹ ಮಾಡಲು ಯತ್ನಿಸಿರುವುದಾಗಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಗುರುನಂದನ್ ಜೊತೆ ನಟಿಸಲು ರಷ್ಯಾದಿಂದ ಬಂದ ರೂಪದರ್ಶಿ! | Russian model Angelina Desedina debuts in Gurunandan-starrer 'Raju Kannada medium' - Kannada Filmibeat
| Updated: Thursday, April 6, 2017, 12:14 [IST]
'ಫಸ್ಟ್ Rank ರಾಜು' ಖ್ಯಾತಿಯ Rank ಸ್ಟಾರ್ ಗುರುನಂದನ್ ಇತ್ತೀಚೆಗೆ ತಾನೆ 'ಸ್ಮೈಲ್ ಪ್ಲೀಸ್' ಚಿತ್ರದ ಮೂಲಕ 'ಜೀವಂತವಾಗಿ ಇರುವಷ್ಟು ದಿನ ನಮ್ಮ ಸುತ್ತಮುತ್ತಲಿನ ಜನರನ್ನು ನಗಿಸಬೇಕು. ಮುಖದಲ್ಲಿ ಮೂಡುವ ಸ್ಮೈಲ್ ಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ' ಎಂಬ ಸಂದೇಶವನ್ನು ಹೇಳಿದ್ರು.
ನಟ ಗುರುನಂದನ್ ತಮ್ಮ ಚೊಚ್ಚಲ ಚಿತ್ರದಿಂದಲೂ ಒಂದೊಳ್ಳೇ ಸಂದೇಶ ಇರುವಂತಹ ಚಿತ್ರಗಳಲ್ಲಿ ನಟಿಸುತ್ತಾ, ಚಿತ್ರಮಂದಿರದೊಳಗೆ ಕುಳಿತಷ್ಟು ಸಮಯ ಪ್ರೇಕ್ಷಕರನ್ನು ನಗಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.[100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?]
ಅಂದಹಾಗೆ Rank ಸ್ಟಾರ್ ಬಗೆಗಿನ ಲೇಟೆಸ್ಟ್ ಸುದ್ದಿ ಅಂದ್ರೆ, ತಮ್ಮ ಅಭಿನಯದಲ್ಲಿ ಮೂಡಿಬರುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ರಷ್ಯಾದ ಮಾಡೆಲ್ ಒಬ್ಬರು ನಾಯಕಿ ಆಗಿ ಬಣ್ಣಹಚ್ಚಿದ್ದಾರೆ. ಅವರು ಯಾರು ತಿಳಿಯುವ ಕುತೂಹಲ ನಿಮಗಿದ್ರೆ ಮುಂದೆ ಓದಿರಿ.
ಕನ್ನಡ ಮೀಡಿಯಂ ರಾಜು ಗೆ ರಷ್ಯಾ ರೂಪದರ್ಶಿ ನಾಯಕಿ
'ಸ್ಮೈಲ್ ಪ್ಲೀಸ್' ನಂತರ ನಟ ಗುರುನಂದನ್ 'ರಾಜು ಕನ್ನಡ ಮೀಡಿಯಂ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್ ಗೆ ಈಗ ಜೋಡಿಯಾಗಿ ರಷ್ಯಾದ ಮಾಡೆಲ್ ಏಂಜೆಲಿನಾ ಡೆಸೆಡಿನಾ ಎಂಬುವವರು ಕಾಣಿಸಿಕೊಳ್ಳಲಿದ್ದಾರೆ.[ವಿಮರ್ಶೆ: ತೊಂದರೆ ಇರಲಿ, ಸಾವು ಎದುರಿಗೆ ಬರಲಿ ಸ್ಮೈಲ್ ಪ್ಲೀಸ್.. ಮುಖದಲ್ಲಿರಲಿ]
ಮೂರನೇ ನಾಯಕಿ ಆಗಿ ಏಂಜೆಲಿನಾ
ಅಂದಹಾಗೆ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಈಗಾಗಲೇ 'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ತೆರೆ ಹಂಚಿಕೊಂಡಿದ್ದು, ರಷ್ಯಾದ ರೂಪದರ್ಶಿ ಏಂಜೆಲಿನಾ ಮೂರನೇ ನಾಯಕಿ ಆಗಿ Rank ಸ್ಟಾರ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.