text stringlengths 0 61.5k |
|---|
Rank ಸ್ಟಾರ್ ಗೆ ಮೂರು ಹಂತಗಳಲ್ಲಿ ಮೂವರು ಹೀರೋಯಿನ್ |
ಚಿತ್ರದಲ್ಲಿ ನಟ ಗುರುನಂದನ್ ಮೂರು ವಿಭಿನ್ನ ಹಂತದ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂರು ಹಂತಗಳಿಗೂ ಸರಿಹೊಂದುವ ಮೂವರು ನಾಯಕಿಯರನ್ನು ನಿರ್ಮಾಪಕರು ಆಯ್ಕೆ ಮಾಡಿದ್ದಾರಂತೆ. |
ಥೈಲ್ಯಾಂಡ್ ನಲ್ಲಿ ಚಿತ್ರೀಕರಣ |
'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಇತ್ತೀಚೆಗಷ್ಟೇ ಥೈಲ್ಯಾಂಡ್ ನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದೆ. |
ಟೀಸರ್ ನಿಂದಲೇ 100% ಮನರಂಜನೆ ನೀಡುವ ಭರವಸೆ ನೀಡಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ನಟ ಗುರುನಂದನ್ ಗೆ ಅವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಏಂಜೆಲಿನಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಮಿಡಿ ಕಿಂಗ್ ಸಾಧು ಕೋಕಿಲ, ಕುರಿ ಪ್ರತಾಪ್, ಹಿರಿಯ ನಟ ಚಂದ್ರಶೇಖರ್ ಅಭಿನಯಿಸಿದ್ದಾರೆ. |
'ರಾಜು ಕನ್ನಡ ಮೀಡಿಯಂ' ತೆರೆ ಮೇಲೆ ಯಾವಾಗ? |
ಗುರುನಂದನ್ ಮತ್ತು ಏಂಜೆಲಿನಾ ಜೊತೆಯ ಸಾಂಗ್ ಶೂಟಿಂಗ್ ಒಂದು ಬಾಕಿ ಉಳಿದಿದ್ದು, ಚಿತ್ರತಂಡ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ನಲ್ಲಿಯೂ ತೊಡಗಿಕೊಂಡಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. |
More SADU KOKILA News |
ಗಾಂಧೀ ತಾತ ನಗ್ತಾ ನಗ್ತಾ ಕೈತುಂಬಾ ಬಂದ್ರು |
Read more about: sadu kokila kannada cinema ಅವಂತಿಕಾ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ |
Russian model Angelina Desedina has been selected, after clearing auditions, for Kannada Actor Gurunandan-starrer 'Raju Kannada Medium' Movie. |
ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆ | satyasandesha |
ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆಯ ಸ್ವರೂಪವೇನು ಮತ್ತು ಒಟ್ಟು ಜೀವನ ವ್ಯವಸ್ಥೆಯೊಂದಿಗೆ ಅದರ ಸಂಬಂಧ ಎಂತಹದು? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕಿದ್ದರೆ ನಾವು ಪ್ರಥಮವಾಗಿ ಆಧ್ಯಾತ್ಮಿಕತೆಯ ವಿಷಯದಲ್ಲಿ ಬೇರೆ ಮತ ಧರ್ಮಗಳ ಹಾಗು ಸೈದ್ಧಾಂತಿಕ ವ್ಯವಸ್ಥೆಗಳ ಕಲ್ಪನೆಗಳಿಗು ಇಸ್ಲಾಮಿನ ಕಲ್ಪನೆಗೂ ಇರುವ ಮೂಲಭೂತ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾದುದು ಅಗತ್ಯ. ಏಕೆಂದರೆ ಸಾಮಾನ್ಯವಾಗಿ ಈ ವ್... |
ಆದ್ದರಿಂದ ಅಂತಹ ಜನರು ಆಧ್ಯಾತ್ಮಿಕ ಶ್ರೇಯಸ್ಸನ್ನು ಗಳಿಸುವ ಮಾರ್ಗ ಎಂಬ ಹೆಸರಲ್ಲಿ ತಮ್ಮ ಶರೀರವನ್ನೇ ಹಿಂಸಿಸಿ, ಪೀಡಿಸಿ, ಮರ್ದಿಸಿ ನಾಸಪಡಿಸುವ ಚಿತ್ರವಿಚಿತ್ರ ಭಕ್ತಿ ಮಾರ್ಗಗಳನ್ನು ಕಂಡುಕೊಂಡರು. ತಮ್ಮ ಧ್ಯಾನ, ಜಪ-ತಪಗಳಿಗೆಲ್ಲಾ ಯಾವುದೇ ಬಗೆಯ ನಾಗರಿಕ ಚಟುವಟಿಕೆಗಳು ಮತ್ತು ಸದ್ದುಗದ್ದಲಗಳಿಂದ ಭಂಗ ಬರದಂತಹ, ಏಕಾಂತ ಕೊಡುವ ನಿರ್ಜನ ಗುಡ್ಡ ಗಾಡುಗಳು ಮತ್ತು ಘೋರಾರಣ್ಯಗಳೇ ಆಧ್ಯಾತ್ಮಿಕ ಸಂಸ್... |
ಆತ್ಮ ಮತ್ತು ಶರೀರಗಳ ವೈರುಧ್ಯದ ಈ ಕಲ್ಪನೆಯು ಜೀವನ ಸಾರ್ಥಕತೆ ಅಥವಾ ಪರಿಪೂರ್ಣತೆಯ ಎರಡು ವಿಭಿನ್ನ ವ್ಯಾಖ್ಯೆಗಳನ್ನು, ಎರಡು ವಿಭಿನ್ನ ಗುರಿಗಳನ್ನು ಮನುಷ್ಯರ ಮುಂದಿಟ್ಟಿತು. ಒಂದೆಡೆ, ಲೌಕಿಕ ಜೀವನದಲ್ಲಿನ ಸಾರ್ಥಕತೆ ಎಂದರೆ ಮನುಷ್ಯನು ಕೇವಲ ಭೌತಿಕವಾಗಿ ಶ್ರೀಮಂತನಾಗಿ ಬಿಡುವುದು ಎಂದೂ ಮನುಷ್ಯನು ಒಬ್ಬ ಉತ್ತಮ ಪಕ್ಷಿಯಾಗಿ, ಒಳ್ಲೆಯ ಮೊಸಳೆಯಾಗಿ, ಚೆನ್ನಾದ ಕುದುರೆಯಾಗಿ, ಯಶಸ್ವೀ ತೋವಾಗಿ ಮಾರ್... |
ಮನುಷ್ಯಾತ್ಮವು ಭೂಮಿಯಿ ಮೇಲೆ ದೇವನ ಪ್ರತಿನಿಧಿಯಾಗಿದೆ. ಅದರ ಮೇಲೆ ಕೆಲವು ಬಾಧ್ಯತೆಗಳು ಮತ್ತು ಹೊಣೆಗಾರಿಕೆಗಳಿವೆ. ಈ ಹೊಣೆಗಾರಿಕೆಗಳ ಈಡೇರಿಕೆಗಾಗಿ ಈ ಆತ್ಮಕ್ಕೆ ಅತ್ಯಂತ ಸೂಕ್ತ ಹಾಗೂ ಪೂರಕವಾದ ಒಂದು ಶರೀರವನ್ನು ಕೊಡಲಾಗಿದೆ. ಈ ಕೊಡುಗೆಯ ಉದ್ದೇಶ, ಆತ್ಮವು ತನ್ನ ಅಧಿಕಾರಗಳ ಬಳಕೆ ಮತ್ತು ಹೊಣೆಗಾರಿಕೆಗಳ ಈಡೇರಿಕೆಗಾಗಿ ಶರೀರವನ್ನು ಬಳಸಬೇಕೆಂಬುದೇ ಆಗಿದೆ. ಆದ್ದರಿಂದಲೇ ಶರೀರವು ಆತ್ಮದ ಬಂದೀಖ... |
ಅಲ್ಲದೆ ಈ ಲೋಕವೇನೂ ಮನುಷ್ಯನ ಆತ್ಮವನ್ನು ಬಂಧನದಲ್ಲಿಡುವ ಯಾತನೆಗಳ ಲೋಕವಲ್ಲ. ಬದಲಾಗಿ ಲೋಕವು ಆತ್ಮದ ಕಾರ್ಯಕ್ಷೇತ್ರವಾಗಿದೆ. ತನ್ನ ಹೊಣೆಗಾರಿಕೆಗಳ ಈಡೇರಿಕೆಗಾಗಿ ಆತ್ಮವನ್ನು ದೇವನು ಲೋಕಕ್ಕೆ ಕಳಿಸಿದ್ದಾನೆ. ಲೋಕದಲ್ಲಿನ ಅಪಾರ ವಸ್ತುಗಳನ್ನು ಅದರ ಬಳಕೆಗಾಗಿ ಕೊಡಲಾಗಿದೆ. ಅಲ್ಲದೆ ಅದೇ ಪ್ರಾತಿನಿಧ್ಯ ಅಥವಾ ರಾಯಭಾರದ ಹೊಣೆಗಾರಿಕೆಯನ್ನು ಈಡೇರಿಸಲಿಕ್ಕಾಗಿ ಇನ್ನೂ ಅಸಂಖ್ಯ ಮನುಷ್ಯರನ್ನು ಲೋಕಕ್ಕ... |
ನಿಜವಾಗಿ ಈ ಪ್ರಶ್ನೆಯ ಉತ್ತರವು ಮೇಲೆ ಹೇಳಿದಂತಹ ಪ್ರಾತಿನಿಧ್ಯ ಅಥವಾ ರಾಯಭಾರದ ಕಲ್ಪನೆಯಲ್ಲೇ ಅಡಗಿದೆ. ಮನುಷ್ಯನು ಭುಮಿಯಲ್ಲಿ ದೇವನ ಖಲೀಫ ಅರ್ಥಾತ್ ಪ್ರತಿನಿಧಿ ಎಂಬ ನೆಲೆಯಲ್ಲಿ ಜೀವನದಾದ್ಯಂತ ತಾನು ಮಾಡು ಎಲ್ಲ ಕರ್ಮಗಳಿಗೆ ದೇವನ ಮುಂದೆ ವಿಚಾರಣಾರ್ಹನಾಗಿದ್ದಾನೆ. ಭೂಮಿಯಲ್ಲಿ ತನಗೆ ಕೊಡಲಾಗಿರುವ ಅಧಿಕಾರ ಮತ್ತು ಸಂಪನ್ಮೂಲಗಳನ್ನು ದೇವೇಚ್ಛೆಯ ಪ್ರಕಾರವೇ ಬಳಸಬೇಕಾದುದು ಅವನ ಕರ್ತವ್ಯವಾಗಿದೆ.... |
ಈಮಾನ್ ಅಥವಾ ಸತ್ಯವಿಶ್ವಾಸವೇ ಈ ಆಧ್ಯಾತ್ಮಿಕ ಪ್ರಗತಿಯ ಮೊದಲ ಹೆಜ್ಜೆಯಾಗಿದೆ. ಒಬ್ಬ ದೇವನೇ ನನ್ನ ಒಡೆಯ, ಪಾಲಕ, ಸೃಷ್ಟಿಕರ್ತ, ಅವನ ಸಂಪ್ರೀತಿಯನ್ನು ಗಳಿಸವುದೇ ನನ್ನೆಲ್ಲಾ ಶ್ರಮಗಳ ಪರಮ ಧ್ಯೇಯ, ಅವನ ಆದೇಶಗಳೇ ನನ್ನ ಜೀವನದ ನಿಯಮಗಳು ಅಥವಾ ಕಾನೂನು ಎಂಬ ವಿಶ್ವಾಸವು ಮನುಷ್ಯನ ಮನ-ಮಸ್ತಿಷ್ಕಗಳಲ್ಲಿ ಅತ್ಯಮತ ಆಳವಾಗಿ ಬೇರೂರಬೇಕು. |
ತಕ್ವಾ ಅರ್ಥಾತ್ ಭಕ್ತಿ ಮತ್ತು ಶ್ರದ್ಧೆಯ ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿನ ಮೂರನೆಯ ಮಜಲಾಗಿದೆ. ಮನುಷ್ಯನು ತನ್ನ ಜೀವನದ ಸರ್ವ ರಂಗಗಳಲ್ಲೂ ತಾನು ತನ್ನ ಆಚಾರ-ವಿಚಾರಗಳಿಗೆಲ್ಲಾ ದೇವನ ಮುಂದೆ ಜವಾಬ್ದಾರನೆಂಬ ಜಾಗೃತ ಪ್ರಜ್ಞೆಯೊಂದಿಗೆ ಕರ್ಮನಿರತನಾಗಬೇಕು. ದೇವನು ಆದೇಶಿಸಿರುವ ಎಲ್ಲ ಕರ್ಮಗಳನ್ನು ಕಿಂಚಿತ್ತೂ ವಿಳಂಬವಿಲ್ಲದೆ ದಕ್ಷ ರೀತಿಯಲ್ಲಿ ಮಾಡಲು ಸದಾ ಸನ್ನದ್ಧನಾಗಿರಬೇಕು. ಹಾಗೆಯೇ ಅವನು ... |
ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಅತ್ಯಂತ ಪ್ರಧಾನ ಹಾಗೂ ಉನ್ನತ ಘಟ್ಟ `ಇಹ್ಸಾನ್'ನದು. `ಇಹ್ಸಾನ್' ಎಂದರೆ ಮನುಷ್ಯನ ಇಚ್ಛೆಗಳೆಲ್ಲವೂ ಸಂಪೂರ್ಣವಾಗಿ ದೇವೇಚ್ಛೆಯೊಂದಿಗೆ ವಿಲೀನಗೊಳಿಸಬೇಕು. ದೇವನ ಇಚ್ಛೆಯೇ ಅವನ ಇಚ್ಛೆಯಾಗಬೇಕು. ದೇವನು ಯಾವುದನ್ನು ಮೆಚ್ಚುವುದಿಲ್ಲವೋ ಅದನ್ನು ಅವನೂ ಮೆಚ್ಚುವುದಿಲ್ಲ. ಯಾವೆಲ್ಲ ಕೆಡುಕುಗಳನ್ನು ದೇವನು ಈ ಲೋಕದಲ್ಲಿ ಬಯಸುವುದಿಲ್ಲವೊ ಆ ಕೆಡುಕುಗಳನ್ನು ಅವನು ಕೇವ... |
ಆಧ್ಯಾತ್ಮಿಕ ಔನ್ನತ್ಯವನ್ನು ಸಾದಿಸುವ ಈ ಮಾರ್ಗವು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ಜನಾಂಗ, ಸಮಾಜ ಮತ್ತು ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಯಂತೆ ಒಂದು ಸಮಾಜ ಕೂಡಾ ವಿಶ್ವಾಸ, ಅನುಸರಣೆ ಮತ್ತು ಶ್ರದ್ಧೆಯ ಮಜಲುಗಳನ್ನು ದಾಟಿ `ಇಹ್ಸಾನ್'ನ ಅತ್ಯುನ್ನತ ಮಟ್ಟವನ್ನು ತಲುಪಲು ಸಾಧ್ಯವಿದೆ. ಹಾಗೆಯೇ ಒಂದು ಇಡೀ ರಾಷ್ಟ್ರವು ಕೂಡಾ ತನ್ನ ಸಂಪೂರ್ಣ ವ್ಯವಸ್ಥೆಯೊಂದಿಗೇ ಮೂಮಿನ್, ಮುಸ್ಲಿ... |
ಈ ಪೈಕಿ ಮೊದಲನೆಯ ಅಂಗ ನಮಾರಝ್, ಇದು ದಿನನಿತ್ಯ ಐದು ಹೊತ್ತು ಮನುಷ್ಯನ ಮನಸ್ಸಿನಲ್ಲಿ ದೇವಸ್ಮರನೆಯನ್ನು ಬೆಳಗಿಸುತ್ತಾ ಅದನ್ನು ಜೀವಂತವಾಗಿಡುತ್ತದೆ. ಮನುಷ್ಯನ ಮನಸ್ಸಿನಲ್ಲಿ ದೇವಭಕ್ತಿಯನ್ನೂ ದೇವ ಪ್ರೇಮವನ್ನೂ ಬೆಳೆಸುತ್ತದೆ. ಆಗಾಗ ದೇವಾಜ್ಞೆಗಳನ್ನು ಅವನಿಗೆ ನೆನಪಿಸಿ ಅವುಗಳ ಪಾಲನೆಯ ಅಭ್ಯಾಸ ಮಾಡಿಸುತ್ತದೆ. ಈ ಕಡ್ಡಾಯ ನಮಾಝ್ ಕೇವಲ ವ್ಯಕ್ತಿಗತವಲ್ಲ. ಈ ಪಂಚ ನಮಾರಝ್‌ಗಳನ್ನು ಸಾಮೂಹಿಕವಾಗಿ ... |
ಮೂರನೆಯದು ಝಕಾತ್. ಇದು ಮುಸಲ್ಮಾನರಲ್ಲಿ ಆರ್ಥಿಕ ವಿಷಯಗಳಲ್ಲಿ ಔದಾರ್ಯ ತೋರುವ ಮತ್ತು ಪರಸ್ಪರ ಅನುಕಂಪ ಮತ್ತು ಸಹಾನುಭೂತಿಯ ಮನೋಭಾವವನ್ನು ಬೆಳೆಸುತ್ತದೆ. ಕೆಲವರು ಝಕಾತ್ ಎಂದರೆ ಕೇವಲ ಸರಕಾರೀ ತೆರಿಗೆ ಎಂದು ತಪ್ಪಾಗಿ ತಿಳಿದಿದ್ದಾರೆ. ನಿಜವಾಗಿ ಝಕಾತ್‍ನ ಹಿಂದಿನ ಪ್ರೇರಣೆಯು ನಿರ್ಜೀವ ತೆರಿಗೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಝಕಾತ್ ಅಂದರೆ ಬೆಳವಣಿಗೆಗೆ ಅಥವಾ ಶುದ್ಧೀಕರಣ ಎಂದರ್ಥ. ಈ ಶಬ್ದ... |
ನಾಲ್ಕನೆಯ ಅಂಗ ಹಜ್ಜ್. ಇದು ದೇವಭಕ್ತಿಯ ಬುನಾದಿಯಲ್ಲಿ ಸತ್ಯವಿಶ್ವಾಸಿಗಳ ಜಾಗತಿಕ ಭ್ರಾತೃತ್ವವನ್ನು ಸ್ಥಾಪಿಸುತ್ತದೆ. ಮಾತ್ರವಲ್ಲದೆ ಲೋಕದಲ್ಲಿ ಹಲವು ಶತಮಾನಗಳಿಂದ ಸತ್ಯದ ಕೆರೆಗೆ ಓಗೊಡುತ್ತಿರುವಂತಹ ಒಂದು ಸಕ್ರಿಯ ಅಂತಾರಾಷ್ಟ್ರೀಯ ಆಂದೋಲನವಾಗಿದೆ. ದೇವನಿಚ್ಛಿಸಿದರೆ ಈ ಆಂದೋಲನವು ಅಂತ್ಯದಿನದವರೆಗೂ ಜೀವಂತವಾಗಿ ಮುಂದುವರಿಯುವುದು. |
ಜಕ್ಕಣ ಮತ್ತು ಇತರ ಏಕಾಂಕ ನಾಟಕಗಳು : ಜಕ್ಕಣ : ದೃಶ್ಯ ಐದು – ಕಣಜ |
ಜಕ್ಕಣ ಮತ್ತು ಇತರ ಏಕಾಂಕ ನಾಟಕಗಳು : ಜಕ್ಕಣ : ದೃಶ್ಯ ಐದು |
Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಚಂದ್ರಶೇಖರ ಕಂಬಾರ/ಜಕ್ಕಣ ಮತ್ತು ಇತರ ಏಕಾಂಕ ನಾಟಕಗಳು : ಜಕ್ಕಣ : ದೃಶ್ಯ ಐದು |
(ಮಾರನೆ ಮುಂಜಾನೆ ಅದೇ ಸ್ಥಳ, ವಿಷ್ಣುವರ್ಧನ, ಶಾಂತಲೆಯರು ಪೀಠಸ್ಥರಾಗಿದ್ದಾರೆ. ಸುತ್ತ ಅವರ ಪರಿವಾರ. ಜಕ್ಕಣ ಡಂಕಣರು ಚೆನ್ನಕೇಶವನ ಮೂರ್ತಿಯ ಬಳಿ ನಿಂತಿದ್ದಾರೆ. ಮೂರ್ತಿಯ ಮೈತುಂಬ ಗಂಧ ಲೇಪಿಸಲಾಗಿದೆ. ಒಣಗಲೆಂದು ಎಲ್ಲರೂ ಕಾಯುತ್ತಿದ್ದಾರೆ.) |
ಮೇಳ : ಯಾಕೆ ಕುಂತಿದ್ದೀರಿ ಹೀಗೆ ಕೈ ಕಟ್ಟಿಕೊಂಡು, ಮೊಳಕಾಲುಗಳಲ್ಲಿ ತಲೆ ಹುದುಗಿಕೊಂಡು? ಹಿರೀಕರ್ಯಾಕೆ ಹಿರಿತನವ ಮಾಡುತ್ತಿಲ್ಲ? ಯಾಕೆ ಕುಂತಿದ್ದೀರಿ ಹೀಗೆ ಎದುರು ನೋಡದೆ ಆಸುಪಾಸಿನವರೊಂದಿಗೆ ಮಾತಾಡದೆ? ನಿಯಮಗಳು ಇವೆಯಣ್ಣ ಯಾವುದಕ್ಕೂ, ಮ್ಯಾಲೆ ಕೈಲಾಸಕೂ ಕೆಳಗೆ ಭೂಲೋಕಕೂ. ಅವನ್ನು ತಕ್ಕಡಿಯಲ್ಲಿಟ್ಟು ತೂಗಿ ಕೊಳೆತ ಆತ್ಮಗಳ, ಮುರಿದ ಮನಸುಗಳ ಹೇಳಿಕೆ ಕೇಳಿಕೆ ಕೇಳಿಕೊಂಡು ನ್ಯಾಯ ನಿರ್ಣಯ ತಿಳಿ... |
ಶಿಲೆಯೊಳಗಿನ ನಿಜವ ಎಬ್ಬಿಸಿರಯ್ಯಾ ನಂಬಿದವರ ಗತಿಯೇನೆಂದು ಅಂಜಿ ಆಲಸಿಯಾಗಿ ಮಲಗಿದರೆ ಕೇಳಿರಯ್ಯಾ- |
ವಿಷ್ಣುವರ್ಧನ : ಯಾಕೆ ಆರೋಗ್ಯ ಸರಿಯಿಲ್ಲವೆ ದೇವಿ? |
ಶಾಂತಲೆ : ಬೆಳ್ಳಂ ಬೆಳಗು ನಿದ್ರೆಯಿಲ್ಲ ಸ್ವಾಮಿ. ಎರಡು ಗಾಳಿಗಳು ಎದುರೆದುರೆ ಅಪ್ಪಳಿಸಿ ಸುಂಟರಗಾಳಿಯಾಗಿ ಸುತ್ತಿ, ಕೇಶವನ ಕಲ್ಲಿನ ಕಣ್ಣಿನಲ್ಲಿ ಮಿಂಚಿನ ಬೆಳಕಾಡಿದಂತೆ ಕನಸಾಯಿತು. |
ವಿಷ್ಣುವರ್ಧನ : ಕನಸು ಚೆನ್ನಾಗಿದೆಯಲ್ಲ? ಕೇಶವನ ಕಣ್ಣಿನ ಬೆಳಕಿನಲ್ಲಿ ಸತ್ಯವಾದದ್ದು ಕಂಡೇ ಕಾಣುತ್ತದೆ, ಚಿಂತೆ ಬೇಡ. |
ಗಂಧದ ಲೇಪನ ಬಹುಭಾಗ ಒಣಗಿದೆ. ಇನ್ನೊಂದು ಗಳಿಗೆಯಲ್ಲಿ ಪೂರ್ತಿ ಒಣಗಬಹುದು. ಆಮೇಲೇನು ರೂವಾರಿಗಳೆ? |
ಡಂಕಣ : ಮಹಾಪ್ರಭು, ಮೂರ್ತಿಯ ಒಳಗೆ ದೋಷವಿದ್ದರೆ ಅಷ್ಟು ಭಾಗ ಒಣಗುವುದಿಲ್ಲ. ಪರೀಕ್ಷೆಯ ನಿರ್ಣಯವನ್ನು ಮೂರ್ತಿಯೇ ನಮಗೆ ನೀಡುತ್ತದೆ. |
ವಿಷ್ಣುವರ್ಧನ : ಆಯ್ತು, ವಿಗ್ರಹದ ಕೊಂಚ ಭಾಗ ಒಣಗುವುದಿಲ್ಲ ಅಂತ ಅಂದುಕೊಳ್ಳೋಣ. ಅಂದರೆ ಮೂರ್ತಿ ಅಶುದ್ಧವೆಂದಾಯಿತು ಅಲ್ಲವೆ? |
ಡಂಕಣ : ಹೌದು ಮಹಾಪ್ರಭು. |
ವಿಷ್ಣುವರ್ಧನ : ಮೂರ್ತಿಯ ಅಷ್ಟು ಭಾಗ ಒದ್ದೆಯಾಗಿರಲು ಏನು ಕಾರಣ ಎಂದು ನೋಡಬೇಡವೆ? |
ಡಂಕಣ : ಅದು ಸ್ಥಪತಿಗಳಿಗೂ ತಮಗೂ ಬಿಟ್ಟ ವಿಚಾರ. |
ವಿಷ್ಣುವರ್ಧನ : ಒದ್ದೆಯಾಗುಳಿದ ಮೇಲೆ ಅಷ್ಟು ಭಾಗ ಒಡೆದರೂ ಅಷ್ಟೇ, ಬಿಟ್ಟರೂ ಅಷ್ಟೇ, ಆ ಮೂರ್ತಿ ಪೂಜೆಗೆ ಅರ್ಹವವಾಗುವುದಿಲ್ಲ. ಅಲ್ಲವೆ ಸ್ಥಪತಿಗಳೆ? |
ಜಕ್ಕಣ : ಹೌದು ಮಹಾಪ್ರಭು. |
ವಿಷ್ಣುವರ್ಧನ : ನಿಮ್ಮ ಪರೀಕ್ಷೆ ಮುಗಿದ ಮೇಲೆ ನಮ್ಮ ಪರೀಕ್ಷೆ ಸುರುವಾಗುವುದಲ್ಲ? ಅದಕ್ಕೇನು ಪರಿಹಾರ? |
ಶಾಂತಲೆ : ಹೌದು. ಪರೀಕ್ಷೆಯಲ್ಲಿ ಒಬ್ಬರು ಸೋಲುತ್ತಾರೆ, ಒಬ್ಬರು ಗೆಲ್ಲುತ್ತಾರೆ, ಇಬ್ಬರೂ ಚೆನ್ನಕೇಶವನ ನಿರ್ಣಯವನ್ನು ಒಪ್ಪಿಕೊಂಡು ಮುನ್ನಡೆಯುವುದು ಜಾಣತನ. ಸೋಲಿನ ಸೇಡು ಉಳಿಯಬಾರದು. |
ವಿಷ್ಣುವರ್ಧನ : ದೇವೀ, ಅದರ ಚಿಂತೆ ನನಗಿರಲಿ. ನಿರ್ಣಯವನ್ನು ಮೂರ್ತಿ ಕೊಡುತ್ತದಾದರೂ ಅದಕ್ಕೆ ಮಾತು ಕೊಡುವವರು ನಾವು. ಅದನ್ನು ಸಾರುವವರೂ ನಾವೇ! ನಾವು ಕೇಳುವುದಿಷ್ಟು; ನಿರ್ಣಯ ಏನು ಬೇಕಾದರು ಬರಲಿ; ಈ ಮೂರ್ತಿ ಶುದ್ಧವಾಗಿದೆಯೆಂದೇ ನಂಬಿ ನಾವಾಗಲೇ ಅದರ ಪ್ರತಿಷ್ಠಾಪನೆಗೆ ದಿನ, ಗಳಿಗೆ, ಮುಹೂರ್ತಗಳನ್ನು ನಿರ್ಣಯಿಸಿದ್ದೇವೆ. ಆ ದಿನ ಅದನ್ನು ನೋಡಲು ನೆರೆ ರಾಜ್ಯದ ಗಣ್ಯರನ್ನು ಆಮಂತ್ರಿಸಿದ್ದೇವ... |
ಜಕ್ಕಣ : ಅದಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ ಮಹಾಪ್ರಭು. |
ವಿಷ್ಣುವರ್ಧನ : ಹಾಗಾದರೆ ಸರಿ. |
(ಮೂರ್ತಿಯ ಬಹುಭಾಗ ಒಣಗಿ ತೊಡೆದು ಹತ್ತಿರ ಒಣಗಿಲ್ಲ.) |
ಡಂಕಣ : ಮಹಾಪ್ರಭು, ತೊಡೆಯ ಭಾಗದಲ್ಲಿ ಹಸಿ ಉಳಿದಿದೆ. ಇನ್ನೂ ಸ್ವಲ್ಪ ಹೊತ್ತು ಕಾಯೋಣ. |
ಜಕ್ಕಣ : ಅಗತ್ಯವಿಲ್ಲ ಮಹಾಪ್ರಭು. ದೋಷವಿದ್ದದ್ದು ನಿಜ, ಆದರೆ ಅದು ಏನೆಂದು ತಿಳಿಯಬೇಕು. ಅಪ್ಪಣೆಯಾದರೆ ನಾನೇ ಅಲ್ಲಿ ಒಡೆದು ನೋಡಲೆ? |
ವಿಷ್ಣುವರ್ಧನ : ಸ್ಥಪತಿಗಳ ದುಡಕಬಾರದು. ಇನ್ನೂ ಸ್ವಲ್ಪ ಹೊತ್ತು ಕಾಯೋಣ. ಚೈತ್ರಮಾಸದ ಬಿಸಿಲು ಕಾಯುತ್ತಿದೆ. ಈಗ ಒಣಗಿದರೂ ಒಣಗಬಹುದು. ಸಮಾಧಾನವಿರಲಿ. |
ಜಕ್ಕಣ : ಅಸಹನೆಯಿಂದ ನನ್ನ ತಲೆ ಕಾಯುತ್ತಿದೆ ಪ್ರಭು, ನಾನೇ ನೋಡುತ್ತೇನೆ. |
(ಜಕ್ಕಣ ಸಣ್ಣ ಸುತ್ತಿಗೆಯಿಂದ ಒದ್ದೆಯಿದ್ದಲ್ಲಿ ಹೊಡೆಯುತ್ತಾನೆ. ಮೂರ್ತಿಯ ಶಿಲೆಯ ತುಂಡೊಂದು ಹಾರುತ್ತದೆ. ಒಳಗೆ ಹಿಡಿ ಮರಳು, ನೀರು ಮತ್ತು ಒಂದು ಕಪ್ಪೆ ಕಾಣತ್ತದೆ. ಕಪ್ಪೆ ಜಿಗಿದು ಹೊರಬರುತ್ತದೆ. ಎಲ್ಲರೂ ಮಂತ್ರಮುಗ್ಧರಾಗುತ್ತಾರೆ.) |
ಜಕ್ಕಣ : ಪರೀಕ್ಷೆ ಮುಗಿಯಿತು. ನಾನು ಸೋತೆ ಪ್ರಭು, ತಾವು ನಿರ್ಣಯ ಹೇಳಬಹುದು. |
ವಿಷ್ಣುವರ್ಧನ : ನಿರ್ಣಯ ಕಣ್ಣೇದುರಿಗೇ ಇದೆ ಸ್ಥಪತಿಗಳೇ. ಮುಂದಿನದನ್ನು ಪಟ್ಟಮಹಾದೇವಿಯವರು ಹೇಳುತ್ತಾರೆ. ಅವರಿಗೆ ಶಿಲ್ಪಶಾಸ್ತ್ರವೂ ಗೊತ್ತು; ಮನುಷ್ಯ ವ್ಯಕ್ತಿತ್ವದ ಶಿಲ್ಪವು ಗೊತ್ತು; ಎರಡರ ಅಂತರಂಗ ಬಹಿರಂಗಗಳೂ ಗೊತ್ತು. ಮುಂದಿನ ಕ್ರಮವನ್ನು ಅವರೇ ಹೇಳಲಿ. |
ಶಾಂತಲೆ : ಯುವ ರೂವಾರಿ ಗೆದ್ದ. ಆದರೆ ಇಬ್ಬರ ಪರೀಕ್ಷೆ ಮುಗಿಯುವುದು ಮುಹೂರ್ತದ ಒಳಗೆ ಚೆನ್ನಕೇಶವನ ಇನ್ನೊಂದು ಮೂರ್ತಿ ಸಿದ್ಧವಾದಾಗ. ಆದರೆ ಒಂದು ಮಾತು ರೂವಾರಿ. ನಿನ್ನ ಹೆಸರು ಗೊತ್ತಿಲ್ಲ ನಿಜ. ಆದರೆ ನಮ್ಮ ಬೇಹುಗಾರರು ನಿನ್ನೆಯಿಂದ ಕೆಲವು ಸಂಗತಿಗಳನ್ನು ಸಂಗ್ರಹಿಸಿ ಹೇಳಿದ್ದಾರೆ. ನಿನ್ನ ಹೆಸರು ಡಂಕಣ. ನಿನ್ನ ಊರು ಕ್ರೀಡಾಪುರ, ನೀನೀಗ ಒಂದು ವರ್ಷದಿಂದ ಕಳೆದುಕೊಂಡ ತಂದೆಯನ್ನು ಹುಡುಕುತ್ತ ... |
ಡಂಕಣ : (ತಲೆ ತಗ್ಗಿಸಿ) ಹೌದು ಪಟ್ಟಮಹಾದೇವಿಯವರೆ. |
ಜಕ್ಕಣ : ನೀನು ಕ್ರೀಡಾಪುರದವನೆ? |
ಡಂಕಣ : ಹೌದು ಸ್ಥಪತಿಗಳೆ. ನಾನು ಕ್ರೀಡಾಪುರದಲ್ಲಿ ಹುಟ್ಟಿ ಬೆಳೆದವನು. |
ಶಾಂತಲೆ : ರೇವಿಮಯ್ಯ ನೀನು ತಂದ ಸುದ್ದಿಯನ್ನು ಹೇಳು. |
ರೇವಿಮಯ್ಯ : ನಾನು ಈಗೊಂದು ವರ್ಷದ ಹಿಂದೆ ಕ್ರೀಡಾಪುರಕ್ಕೆ ಹೋಗಿದ್ದೆ. ಅಲ್ಲಿ ರೂವಾರಿ ಡಂಕಣನ ತಾಯಿ ಸಿಕ್ಕಳು. ತನ್ನ ಮಗ ಡಂಕಣ ರೂವಾರಿತನದಲ್ಲಿ ಜನ್ಮಜಾತ ಪ್ರತಿಭೆಯುಳ್ಳವನೆಂದು ಹೆಮ್ಮೆಯಿಂದ ಹೇಳಿದ್ದಳು. ಆಮೇಲೆ ನಾನು ಗೌಂಡರನ್ನು ಕರೆಸಿ ವಿಚಾರಸಿದೆ. ತಾಯಿ ಹೇಳಿದಿದ್ದುದನ್ನು ಗೌಂಡರು ಹೇಳಿದರು. ಡಂಕಣನ್ನು ಅವರು ಬಾಲ್ಯದಿಂದ ಬಲ್ಲವರಂತೆ. ತಂದೆಯಂತೆಯೇ ಇವನೂ ಪ್ರತಿಭಾವಂತ ಎಂದರು. ವಯಸ್ಸಿಗೆ... |
ಶಾಂತಲೆ : ತಂದೆ ಯಾರೆಂದು ಹೆಸರು ಕೇಳಿದೆಯ? |
ರೇವಿಮಯ್ಯ : ಕೇಳಿದೆ ಪಟ್ಟ ಮಹಾದೇವಿಯವರೆ. (ಜಕ್ಕಣನ ಕಡೆಗೆ ನೋಡುತ್ತ) ಅವರ ಹೆಸರು ಜಕ್ಕಣನಂತೆ. |
ಜಕ್ಕಣ : ಒಂದೇ ಹೆಸರಿನವರು ಹಲವಾರು ಜನರಿರಬಹುದು |
ಡಂಕಣ : ದಕ್ಷಿಣಕ್ಕೆಲ್ಲ ಜಕ್ಕಣಾಚಾರಿ ಒಬ್ಬನೇ ಅಂದಿರಿ! |
ಜಕ್ಕಣ : ವಿಶೇಷವಾಗಿ ಒಬ್ಬನೆ ಅಂದೆ. ಆದರೆ ಒಂದೇ ಹೆಸರಿನವರು ಹಲವರು ಇರುವುದು ಸಾಧ್ಯ; ಅಲ್ಲವೆ? |
ಶಾಂತಲೆ : ನಿಮಗೆ ಹಾಗನಿಸಿತೆ ಸ್ಥಪತಿಗಳೆ? ನಿಮ್ಮ ಹೆಸರನ್ನು ನೀವು ಈವರೆಗೆ ಹೇಳಿಲಿಲ್ಲ. ನಾವೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಈಗ ನಾನೊಂದು ಮಾತು ಕೇಳುತ್ತೇನೆ. ರಾಜ್ಯದ ಹಿತ ದೃಷ್ಟಿಯಿಂದ ಹೇಳಿ; ನೀವು ಮನೆ ಬಿಟ್ಟು ಬಂದಿರಂತೆ. ಅದು ಸ್ವಂತದ ವಿಷಯ ಕೇಳಬೇಡಿ ಎಂದು ನಿರ್ಬಂಧ ಹಾಕಿದಿರಿ. ಈಗ ದಯವಿಟ್ಟು ಹೇಳಿರಿ; ನೀವು ಮನೆ ಬಿಟ್ಟು ಬಂದದ್ದು ಯಾಕೆ? |
ಜಕ್ಕಣ : ನಾನು ಮೊದಲೇ ಹೇಳಿದ್ದೇನೆ ಮಹಾದೇವಿಯವರೇ, ಅದು ನನ್ನ ಸ್ವಂತ ವಿಷಯ, ಹೇಳುವಂತಿಲ್ಲ. ಅಲ್ಲದೆ ರಾಜ್ಯದ ಹಿತಕ್ಕೂ ಇದಕ್ಕೂ ಸಂಬಂಧವಿಲ್ಲ. ದಯಮಾಡಿ ನಿರ್ಬಂಧಪಡಿಸಿಬಾರದು. |
ವಿಷ್ಣುವರ್ಧನ : ಸಂಬಂಧವಿದೆ ಸ್ಥಪತಿಗಳೇ. ರಾಜ್ಯದವೆಂದರೆ ಶತ್ರುಗಳನ್ನು ಗೆದ್ದು ಬರೀ ಬೊಕ್ಕಸ ತುಂಬಿಕೊಳ್ಳವುದಲ್ಲ, ರಾಜ್ಯದ ಸೀಮೆಯ ವಿಸ್ತಾರವು ಅಲ್ಲ, ವೈಭವ ಪ್ರದರ್ಶನವು ಅಲ್ಲ. ಪ್ರಜೆಗಳನ್ನು ನೆಮ್ಮದಿಯಿಂದ ಇಡುವುದೇ ರಾಜ್ಯ. |
ಶಾಂತಲೆ : ಸ್ಥಪತಿಗಳೇ. ನಮ್ಮ ರೇವಿಮಯ್ಯ ತಂದಿರುವ ಬೇಹು ನಿನ್ನೆ ಮೊನ್ನೆಯದಲ್ಲ. ನೀವು ದೇವಸ್ಥಾನದ ಸ್ಥಾಪತ್ಯವನ್ನು ಒಪ್ಪಿಕೊಂಡಾಗಲೇ ಪ್ರಾರಂಭವಾಗಿದೆ. ನಿಮ್ಮ ಪ್ರತಿಭೇ ಅಗಾಧವಾದದ್ದು. ಅದನ್ನು ನಾವು ಮೆಚ್ಚಿಕೊಂಡಾಗಲೆ ವಿಷಯ ಸಂಗ್ರಹಣೆ ಮಾಡಿದೆವು. ನೀವು ಕ್ರೀಡಾಪುರದವರೆಂದು ಅಂದೇ ಗೊತ್ತಾಗಿತ್ತು. ಮಗ ಹುಟ್ಟಿದಾಗ ಜಾತಕದ ಶಾಸ್ತ್ರ ನೋಡಿ, ಹುಟ್ಟಿದವನು ನನ್ನ ಮಗನಲ್ಲವೆಂದು ನಂಬಿ ಮನೆ ಬಿಟ್ಟು... |
ಜಕ್ಕಣ : ನಾನು ಹಾಕಿದ ಜಾತಕ ಶಾಸ್ತ್ರ ಸುಳ್ಳಾಯಿತಲ್ಲ… ಎಂದು….. |
ಶಾಂತಲೆ : ಅದು ಸುಳ್ಳು ಎಂದು ನಮಗಾಗಲೇ ತಿಳಿದಿತ್ತು. ನಿಮ್ಮನ್ನು ಅವಮಾನಿಸಬಾರದೆಂದು ಸುಮ್ಮನಿದ್ದೆವು. ನೀವು ನಮ್ಮ ಪ್ರಜೆ ಹೌದು. ಕ್ರೀಡಾಪುರ ನಮ್ಮ ರಾಜ್ಯದಲ್ಲಿದೆ. ಆದರೆ ನೀವು ಸಾಮಾನ್ಯ ಪ್ರಜೆಯಲ್ಲ. ನಿಮ್ಮ ಪ್ರತಿಭೆ ರಾಜ್ಯಕ್ಕಿಂತ ಹೆಚ್ಚು ಬೆಲೆಯುಳ್ಳದ್ದು. ಆದ್ದರಿಂದ ಕಾಲ ಕೂಡಿ ಬರುವವರೆಗೆ ಸುಮ್ಮನಿರಬೇಕಾಯಿತು. |
ಜಕ್ಕಣ : ಈ ಯುವಕನ ಪ್ರತಿಭೆ ಅಸಾಮಾನ್ಯವೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಹಾಕಿದ ಜಾತಕದ ಶಾಸ್ತ್ರ ಸುಳ್ಳಾಯಿತೆಂಬ ಬಗ್ಗೆ ನನಗಿನ್ನೂ ಅನುಮಾನವಿದೆ. (ಗೊಲ್ಲರ ಹುಡುಗ ಬರುವನು. ಅವನ ಹಿಂದೆ ಹುಚ್ಚಿಯೂ ಬರುತ್ತಾಳೆ. ಹುಡುಗ ಹುಚ್ಚಿಯನ್ನು ತೋರಿಸಿ.) |
ಗೊ.ಹುಡುಗ : ಈಕೆ ಯಾರು ಗೊತ್ತೇ ಸ್ಥಪತಿಗಳೇ? |
(ಹುಚ್ಚಿಯನ್ನು ನೋಡಿ ಜಕ್ಕಣನಿಗೆ ಈಕೆ ತನ್ನ ಮಡದಿಯೆಂದು ಗುರುತಾಗಿ ಆಘಾತವಾಗುತ್ತದೆ. ಆದರೆ ಗೊಲ್ಲರ ಹುಡುಗನನ್ನು ಶಂಕಿಸುತ್ತಾನೆ.) |
ಜಕ್ಕಣ : ನಿಜ ಹೇಳು ಯಾರು ನೀನು? |
ಗೊ.ಹುಡುಗ: ನಾನು ನಿಮ್ಮ ಹಿತಚಿಂತಕನೆಂದು ಸಾರಿ ಹೇಳುತ್ತೇನೆ, ಸ್ಥಪತಿಗಳೆ. ನಿಮ್ಮ ಪ್ರತಿಭೆಗೆ ಮನಸೋತವನು ನಾನು. ನೀವೊಂದು ದೇವರ ಪ್ರತಿಭೆ ಮಾಡುತ್ತೇನೆಂದರೆ ಸ್ವಯಂ ಆ ದೇವರೇ ಬಂದು ನಿಮ್ಮೆದುರಿಗೆ ರೂಪದರ್ಶಿಯಾಗಿ ನಿಲ್ಲುವನೆಂದರೆ ಸಾಮಾನ್ಯ ಮಾತೇ ಇದು? ಆದರೆ ಒಂದು ತಿಂಗಳು ನಿಮ್ಮೆದುರು ನಾನು ನಿಂತರೂ ನಿಮಗೆ ನನ್ನ ಗುರುತಿಲ್ಲ! ಭೇಟಿಯಾದಾಗೊಮ್ಮೆ ಯಾರು ನೀನು ಅಂತೀರಿ! ಹೋಗಲಿ, ನಿಮಗೆ ಜೋತುಬ... |
(ಗೊಲ್ಲರ ಹುಡುಗ ಮೇಲಿನ ಮಾತುಗಳನ್ನು ಹೇಳುತ್ತಿರುವಂತೆ ಜಕ್ಕಣನಿಗೆ ಹುಡುಗನ ಪರಿಚಯ ಹೆಚ್ಚಾಗುತ್ತ ಹೋಗುತ್ತದೆ. ಒಂದೊಂದೇ ಹೆಜ್ಜೆ ಹುಡುಗನತ್ತ ಹಾಕುತ್ತ ಬಂದು.) |
ಜಕ್ಕಣ : ನಿಲ್ಲು! |
(ಹೊರಟ್ಟಿದ್ದ ಹುಡುಗ ನಿಂತುಕೊಳ್ಳುತ್ತಾನೆ. ಜಕ್ಕಣ ಅವನ ಮುಂದೆ ಕೈಮುಗಿದು ಕುಸಿದು ಕೂತು.) |
ಕೊನೆಗೂ ಕಾರಣ ಶಕ್ತಿಯನ್ನು ದಯಪಾಲಿಸಿದ ಚೆನ್ನಕೇಶವಾ, ತಂದೇ ನನಗೆ ನಿನ್ನ ಗುರುತೂ ಸಿಕ್ಕಲಾರದಾಯಿತೆ! ನಾನೊಬ್ಬ ಶಪಿತ ನಿಶಾಚಾರನಾಗಿದ್ದೆ ಕೇಶವಾ, ಹೆಣ್ಣಿನ ಪ್ರತಿಷ್ಠೆ ಗೌರವಗಳನ್ನು ನೋಯಿಸಿದವನು. ಡಂಕಣನನ್ನು ನೋಡಿ ನನ್ನ ಯೌವನ ನೆನಪಾಯಿತು : ನಾನು ಹುಡುಗನಾಗಿ ಮೂರ್ತಿಗಳ ಕಡೆಯುವಾಗ ಹಿಟ್ಟಿನ ಮುದ್ದೆ ಹುರುಳೀ ಕಾಳಿನ ಸಾರು ತಗೊಂಡು ನಾನಿದ್ದಲ್ಲಿಗೆ ಬರುತ್ತಿದ್ದಳು ಈ ನನ್ನ ಸತಿ ಭವಾನಿ! ನಮ್ಮ... |
(ಹುಡುಗನ ಕಾಲು ಹಿಡಿಯಲು ಹೋಗುವನು. ಗೊಲ್ಲರ ಹುಡುಗ ಮಾಯವಾಗುವನು) |
ಚೆನ್ನಕೇಶವಾ, ನನ್ನನ್ನು ಪುನರ್ಜಾತನ ಮಾಡಿ ಮಾಯಾವಾದಿರಾ ತಂದೇ! ಭವಾನೀ, ಡಂಕಣಾ ಕ್ಷಮಿಸಬೇಕಾದ ಚೆನ್ನಕೇಶವ ಮಾಯವಾದ, ನೀನಾದರೂ ನನ್ನನ್ನು ಕ್ಷಮಿಸಿಯಪ್ಪಾ…… |
(ಡಂಕಣ, ಭವಾನಿ, ಜಕ್ಕಣ ಪರಸ್ಪರ ತಬ್ಬಿಕೊಳ್ಳುವರು) |
ಮಗನೇ ಡಂಕಣಾ, ನಿನ್ನೆದುರು ಸೋತು ಧನ್ಯನಾದೆನಪ್ಪಾ! ಮಹಾಪ್ರಭು, ಪಟ್ಟಮಹಾದೇವಿಯವರೇ ನನ್ನನ್ನು ಕ್ಷಮಿಸಿ. |
ವಿಷ್ಣುವರ್ಧನ : ನಮಗೆ, ಇಡೀ ರಾಜ್ಯಕ್ಕೆ ಇದಕ್ಕಿಂತ ಸಂತೋಷದ ಗಳಿಗೆ ಯಾವುದಿದೆ ಸ್ಥಪತಿಗಳೆ? ನಾವೇ ಧನ್ಯರು; ನಮ್ಮ ರಾಜ್ಯವೇ ಧನ್ಯವಾಯಿತು! ಸ್ವಯಂ ಚೆನ್ನಕೇಶವನೇ ಪ್ರತ್ಯಕ್ಷನಾಗಿ ನಮ್ಮನ್ನು ಧನ್ಯನಾಗಿಸಿದ. ಇದಕ್ಕೆಲ್ಲ ನೀವು ಕಾರಣರು ಸ್ಥಪತಿಗಳೇ. ಇಡೀ ರಾಜ್ಯ ನಿಮಗೆ ಅಭಾರಿಯಾಗಿದೆ. |
ಜಕ್ಕಣ : ಆದರೆ ಅಖಂಡ ಕಲ್ಲಿನಲ್ಲಿ ಕಪ್ಪೆ, ನೀರು, ಮಳಲು- ಈ ರೂಪಕದ ಅರ್ಥ ಹಾಗೇ ಉಳಿಯಿತಲ್ಲ ಪಟ್ಟ ಮಹಾದೇವಿಯವರೆ? |
ಶಾಂತಲೆ : ನಮ್ಮ ನಮ್ಮ ಕಲೆಗಳ ಮೂಲಕ ಚೆನ್ನಕೇಶವನ ಆ ರೂಪಕದ ಅರ್ಥವನ್ನು ಶೋಧಿಸಬೇಕು ಸ್ಥಪತಿಗಳೆ. ಮುಹೂರ್ತಕ್ಕೆ ಸರಿಯಾಗಿ ಹೊಸ ಮೂರ್ತಿ ಸಿದ್ಧವಾಗಬೇಕಲ್ಲವೆ? ಶೋಧನೆಯನ್ನು ಸುರು ಮಾಡಿ. |
By kanaja|2015-06-23T19:52:03+05:30June 23, 2015|ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ|0 Comments |
ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2019 : 40 ಸಬ್-ಇನ್ಸ್‌ಪೆಕ್ಟರ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ | KSP Recruitment 2019 : For 40 SI And KSRP Posts - Kannada Careerindia |
» ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2019 : 40 ಸಬ್-ಇನ್ಸ್‌ಪೆಕ್ಟರ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ |
ಕರ್ನಾಟಕ ರಾಜ್ಯದ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 40 ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (ಕೆ.ಎಸ್.ಆರ್.ಪಿ)(ಪುರುಷ) ಹಾಗೂ ಸೇವಾನಿರತ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. |
ಆಸಕ್ತರು ಆನ್‌ಲೈನ್‌ನಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆಗಸ್ಟ್ 28,2019 ರ ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ. |
Name Of The Posts ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (ಕೆ.ಎಸ್.ಆರ್.ಪಿ) (ಪುರುಷ) ಹಾಗೂ ಸೇವಾನಿರತ ಹುದ್ದೆಗಳು |
ಸೇವಾ ನಿರತ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ ಜೊತೆಯಲ್ಲಿ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ೫ ವರ್ಷಗಳ ಕನಿಷ್ಟ ಸೇವೆಯನ್ನು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ /ಹೆಡ್ ಕಾನ್ಸ್‌ಟೇಬಲ್ / ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೂರ್ಣಗೊಳಿಸಿರಬೇಕು. |
ಆಗಸ್ಟ್ 28,2019ರ ಅನ್ವಯ ಅಭ್ಯರ್ಥಿಗೆ ಕನಿಷ್ಟ 21 ವರ್ಷ ಆಗಿರಬೇಕು. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ 28 ವರ್ಷದೊಳಗಿನ ಅಭ್ಯರ್ಥಿಗಳು ಮತ್ತು 26 ವರ್ಷ ವಯೋಮಿತಿಯೊಳಗಿನ ಇತರೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. |
ಸೇವಾ ನಿರತ ಅಭ್ಯರ್ಥಿಗಳಿಗೆ: |
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ ಮತ್ತು ಇತರೆ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. |
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಮತ್ತು ಓಬಿಸಿ (2ಎ,2ಬಿ,3ಎ ಮತ್ತು 3ಬಿ) ಅಭ್ಯರ್ಥಿಗಳು 250/-ರೂ ಮತ್ತು ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ,ಪ್ರವರ್ಗ-1ರ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಆಗಸ್ಟ್ 30,2019 ರೊಳಗೆ ಪಾವತಿಸಬಹುದು. |
ನಿಗದಿತ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್‌ನ 'ಅಭ್ಯರ್ಥಿ ಪ್ರತಿ'ಯನ್ನು ಇಟ್ಟುಕೊಂಡಿರತಕ್ಕದ್ದು. |
Subsets and Splits
No community queries yet
The top public SQL queries from the community will appear here once available.