text
stringlengths
0
61.5k
Educational Qualification ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
Job Location ರಾಯಚೂರು
Application Start Date June 17, 2019
ಕರ್ನಟಕ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಸೀನಿಯರ್ ದರ್ಜೆಯ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಹೊರಡಿಸಿದ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ಗರಿಷ್ಠ 35 ವರ್ಷ , ಪ್ರವರ್ಗ-2A,ಪ್ರವರ್ಗ-2B,ಪ್ರವರ್ಗ-3A ಮತ್ತು ಪ್ರವರ್ಗ 3B ಯ ಗರಿಷ್ಠ 38 ವರ್ಷ ಮತ್ತು ಎಸ್ ಸಿ/ಎಸ್ ಟಿ ಪ್ರವರ್ಗ-1ರ ಗರಿಷ್ಠ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಶೀಘ್ರಲಿಪಿಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 27,650/- ರಿಂದ 52,650/-ರೂ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು.
ಶೀಘ್ರಲಿಪಿಗಾರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ನಿಮಿಷ ಒಂದಕ್ಕೆ 120 ಶಬ್ದಗಳಂತೆ 5 ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಅನುಲಿಪಿ ಮಾಡುವ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಅರ್ಹತೆ, ಪ್ರವರ್ಗ-1, ಪ್ರವರ್ಗ-2ಎ,2 ಬಿ,3ಎ,3ಬಿ ಅಭ್ಯರ್ಥಿಗಳು 200/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಅರ್ಜಿ ಶುಲ್ಕವನ್ನು ಚಲನ್ ಮುಖಾಂತರ ಪಾವತಿಸಲು ಜುಲೈ 17,2019 ಕೊನೆಯ ದಿನವಾಗಿರುತ್ತದೆ
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ https://districts.ecourts.gov.in/raichur ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 16,2019 ರ ರಾತ್ರಿ 11:59 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ನೋಡಿ
More COURT JOBS News
ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 9 ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳ ನೇಮಕಾತಿ
ಕರ್ನಾಟಕ ಉಚ್ಚ ನ್ಯಾಯಾಲಯ ನೇಮಕಾತಿ: 27 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
40 min ago KPSC: ಸಹಾಯಕ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಪ್ರಕಟ
54 min ago KPSC: ಕಾನೂನು ಸಹಾಯಕ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಪ್ರಕಟ
13 hrs ago Schools Reopening: ದೇಶದಲ್ಲಿ ನ.30ರ ವರೆಗೆ ಯಾವುದೇ ಶಾಲೆಗಳು ರೀ ಓಪನ್ ಆಗಲ್ಲ
18 hrs ago Online Education Guidelines: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಶಿಕ್ಷಣ ಕುರಿತು ಮಾರ್ಗ ಸೂಚಿ ರಿಲೀಸ್
ಅಭಿವೃದ್ದಿ ಕಾರ್ಯಗಳಿಗೆ ಮರುಚಾಲನೆ: ಸಚಿವ ಎಚ್.ಡಿ.ರೇವಣ್ಣರಿಂದ ಸ್ಥಳಪರಿಶೀಲನೆ – ಮೈಸೂರು ಟುಡೆ
Home/ ಪ್ರಮುಖ ಸುದ್ದಿ/ ಕರ್ನಾಟಕ/ಅಭಿವೃದ್ದಿ ಕಾರ್ಯಗಳಿಗೆ ಮರುಚಾಲನೆ: ಸಚಿವ ಎಚ್.ಡಿ.ರೇವಣ್ಣರಿಂದ ಸ್ಥಳಪರಿಶೀಲನೆ
ಅಭಿವೃದ್ದಿ ಕಾರ್ಯಗಳಿಗೆ ಮರುಚಾಲನೆ: ಸಚಿವ ಎಚ್.ಡಿ.ರೇವಣ್ಣರಿಂದ ಸ್ಥಳಪರಿಶೀಲನೆ
CTBUREAU_NB June 13, 2018
ಹಾಸನ (ಜೂನ್ 13): ಲೋಕೋಪಯೋಗಿ ಇಲಾಖೆ ಸಚಿವರಾದ ಹೆಚ್.ಡಿ ರೇವಣ್ಣ ಅವರು ಜಿಲ್ಲೆಯ ಅಭಿವೃದ್ದಿ ಕಾಮಗಾರಿಗಳಿಗೆ ಚುರುಕು ನೀಡುವ ಸೂಚನೆ ನೀಡಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯ ಹೊಳೆನರಸೀಪುರ ಹಾಗೂ ಹಾಸನ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಹಲವು ಅಭಿವೃದ್ದಿ ಕಾರ್ಯಗಳನ್ನು ಕೂಡಲೆ ಪ್ರಾರಂಭಿಸಲು ಸೂಚಿಸಿದರು.
ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಸ್ಥಗಿತಗೊಂಡಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನ ಕೇಂದ್ರದ ಭೇಟಿ ನೀಡಿದ ಸಚಿವರು ಇನ್ನಷ್ಟು ವಿನೂತನತೆ ಸೇರ್ಪಡೆಗೊಳಿಸಿ ಕಾಮಗಾರಿ ಮುಕ್ತಾಯಗೊಳಿಸಲು ತಾವು ಚಿಂತಿಸಿದ್ದು ಇದಕ್ಕಾಗಿ ಲೋಕೋಪಯೋಗಿ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಪ್ರವಾಸಿ ಹೋಟೆಲ್ ಕಾಮಗಾರಿ ಮುಕ್ತಾಯಗೊಳಿಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ತಿಳಿಸಿದರು.
ಹಾಲಿ ನಿರ್ಮಾಣಗೊಂಡಿರುವ ಕಟ್ಟಡದ ಸುತ್ತ ಇರುವ ಸರೋವರವನ್ನು ಅಭಿವೃದ್ದಿಪಡಿಸಿ ಬೋಟಿಂಗ್ ಹಾಗೂ ಇತರ ಜಲಸಾಹಸ ಕ್ರೀಡೆ ಚಟುವಟಿಕೆಗಳ ಅಗತ್ಯ ವ್ಯವಸ್ಥೆ ಮಾಡಬೇಕು ಕಟ್ಟಡದ ಎರಡು ಬದಿಗಳಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಾಣ, ವರ್ಷವಿಡಿ ಹೂ ಬಿಡುವ ಪುಷ್ಪೋಧ್ಯಾನ ಹಾಗೂ ಅರಣ್ಯೀಕರಣ ಮಾಡುವಂತೆ ಹಾಗೂ ಅದಕ್ಕೆ ಅಗತ್ಯವಿರುವ ಸಮಗ್ರ ಅಂದಾಜು ಪಟ್ಟಿಯನ್ನು ಒಂದೆರಡು ದಿನಗಳೊಳಗೆ ಸಿದ್ದಪಡಿಸಿ ಸಲ್ಲಿಸುವಂತೆ...
ಪ್ರವಾಸಿ ಹೋಟೆಲ್ ಅಭಿವೃದ್ದಿಗೆ ಸಂಬಂದಿಸಿದಂತೆ ಬೆಂಗಳೂರಿನಲ್ಲಿ ಇನ್ನೊಂದು ಹಂತದ ಸಭೆ ನೆಡೆಸಲಾಗುವುದು. ಇದರ ಸುತ್ತ ಮನರಂಜನಾ ರೈಲು ಸಂಚಾರ ವ್ಯವಸ್ಥೆ ಜವಾಬ್ದಾರಿಯನ್ನು ಮೆಟ್ರೋ ಸಂಸ್ಥೆಗೆ ವಹಿಸಲು ಚಿಂತಿಸಲಾಗಿದೆ ಎಂದು ಸಚಿವರು ಹೇಳಿದರು.
ಇದೇವೇಳೆ ಸಚಿವ ರೇವಣ್ಣ ಅವರು ಬಸ್ ನಿಲ್ದಾಣದಿಂದ ಸರ್ಕಾರಿ ಆಸ್ಪತ್ರೆವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಕುರಿತಂತೆ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಲು ನಿರ್ದೇಶನ ನೀಡಿದರು.
ನಂತರ ಸಚಿವರು ಜಿಲ್ಲಾ ಆಸ್ಪತ್ರೆ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ವಸತಿ ನಿಲಯದ ಹಿಂಭಾಗ ಇರುವ ಖಾಲಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಲ್ಲಿ ಬಹು ಅಂತಸ್ತಿನ ವಸತಿ ನಿಲಯ ಸ್ಥಾಪಿಸಿ ಸುಮಾರು 600 ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಯೋಜನೆ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಸಚಿವರು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯಗಳ ಸ್ಥಳ ಪರೀಶೀಲನೆ ಕೂಡ ನೆಡೆಸಿದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಮಾಹಿತಿ ಪಡೆದ ಸಚಿವರು ಕಾಲೇಜಿನ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಕಾಲೇಜು ಪ್ರಾರಂಭವಾಗಿ 10 ವರ್ಷ ಕಳೆದರು ಇನ್ನೂ ಸ್ವಂತ ಲ್ಯಾಬ್ ಇಲ್ಲದೆ ಎಂ.ಸಿ.ಇ ಕಾಲೇಜನ್ನು ಅವಲಂಭಿಸಿರುವ ಬಗ್ಗೆ ವಿವರ ಪಡೆದ ಸಚಿವರು ಶೀಘ್ರವೇ ಕಾಲೇಜಿನಲ್ಲಿ ಪ್ರಯೋಗಾಲಯ ಪ್ರಾರಂಭಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಗರದ ಗಂಧದಕೋಠಿ ಆವರಣದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ರೇವಣ್ಣ ಅವರು ಈಗಾಗಲೇ ಮಂಜೂರಾಗಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡವನ್ನು ತಕ್ಷಣವೇ ಪ್ರಾರಂಭಿಸಿ 2 ತಿಂಗಳಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಹಾಲಿ 5 ಕೋಟಿ ರೂಪಾಯಿ ಹಣ ಲಭ್ಯವಿದ್ದು ಹೆಚ್ಚವರಿಯಾಗಿ 3.5 ಕೋಟಿ ರೂಪಾಯಿಗಳನ್ನು ಕೆಲವೇ ದಿನಗಳಲ್ಲಿ ಒದಗಿಸುವುದಾಗಿ ಸಚಿವರು ಹೇಳಿದರು.
ಗಂಧದ ಕೋಠಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಮರಗಳನ್ನು ವಿಲೇವಾರಿ ಮಾಡಿ ಕಟ್ಟಡ ತೆರವುಗೊಳಿಸಿಕೊಡುವಂತೆ ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಕೃಷ್ಣರೆಡ್ಡಿ, ಮುಖ್ಯ ಕಾರ್ಯನಿರ್ವಹಕ ಇಂಜಿನಿಯರ್ ಶ್ರೀನಿವಾಸ್, ಅಧೀಕ್ಷಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ,ಮುಖ್ಯ ವಾಸ್ತು ಶಿಲ್ಪಿ ಸಾವಿತ್ರಿ, ಕಾರ್ಯಪಾಲಕ ಇಂಜಿನಿಯರ್ ಗುರುಲಿಂಗಪ್ಪ, ನಗರಸಭೆ ಅಧ್ಯಕ್ಷರಾದ ಅನಿಲ್‍ಕುಮಾರ್, ನಗರಸಭೆ ಆಯುಕ್ತರಾದ ಪರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಧುಸೂದನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್‍ಬಾಬು, ...
ಬಿಟ್ ಕಾಯಿನ್ ಹಗರಣ ಯಾರೇ ಭಾಗಿಯಾಗಿದರೂ ಬಲಿ ಹಾಕ್ತಿವಿ – ಸಿ ಎಂ - Saaksha TV
ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮಿಲಾಗಿದ್ದರು ಬಿಡುವುದಿಲ್ಲ. ಸರ್ಕಾರ ಅಂಥವರನ್ನು ಬಲಿ ಹಾಕೇ ಹಾಕುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.
ನೆಹರು ಜನ್ಮ ದಿನದ ಪ್ರಯುಕ್ತ ಪುತ್ಥಳಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರ ಬಳಿ ದಾಖಲೆಗಳಿದ್ದರೆ ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನೀಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು
ನಾವು ಆತನನ್ನು ಹಿಡಿದಿದ್ದು ಡ್ರಗ್ ಕೇಸ್​ನಲ್ಲಿ. ನೀವು ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ. ನಾವು ಆತನನ್ನು ಡ್ರಗ್ ಕೇಸ್​ನಲ್ಲಿ ಹಿಡಿದು ವಿಚಾರಣೆ ಮಾಡಿ ಎಲ್ಲ ಬಹಿರಂಗಗೊಳಿಸಿದ್ರೆ, ನಮಗೇ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
2016 ರಿಂದ ಪ್ರಕರಣ ಇದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಅಂದು ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿತ್ತು? ಕಾಂಗ್ರೆಸ್ ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ?. 2018 ರಲ್ಲಿ ಶ್ರೀಕಿ ಬಂಧಿಸಿ ಬಿಟ್ಟದ್ದು ಯಾಕೆ ಆತನ ಹಿನ್ನೆಲೆ ಬಗ್ಗೆ ಯಾಕೆ ಆಗಲೇ ವಿಚಾರಣೆ ಮಾಡಲಿಲ್ಲ​?.. ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ತನಿಖೆ ನಡೆಸುವಂತೆ ನೀವು ಏಕೆ ಹೇಳಲಿಲ್ಲ ಎಂದು ಸಿಎಂ ತರಾಟೆಗೆ ತೆಗ...
ಅಷ್ಟು ಕೋಟಿ ಹಗರಣವಾಗಿದೆ, ಇಷ್ಟು ಕೋಟಿ ಬಿಟ್ ಕಾಯಿನ್ ಇದೆ ಎಂದು ಆರೋಪ ಮಾಡುತ್ತೀದ್ದೀರಿ. ಒಂದು ಟ್ವೀಟ್ ಆಧಾರದ ಮೇಲೆ ತನಿಖೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದರು.
ಒಂದು ಟ್ವಿಟರ್ ಇಟ್ಟುಕೊಂಡು ಕಾಂಗ್ರೆಸ್​ನವರು ಆರೋಪ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಆ ಟ್ವಿಟರ್​ಗೆ ದಾಖಲೆ, ಸಾಕ್ಷಿ ಇಟ್ಟು ಮಾತನಾಡಿ. ಟ್ವಿಟರ್ ಮೇಲೆ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ತಿರುಗೇಟು ನೀಡಿದ್ರು.
ಶಾರುಖ್ ಖಾನ್ ಪುತ್ರಿ ಸುಹಾನಾಗೆ ಕಿಸ್ ಕೊಟ್ಟ 'ಸೂರ್ಯ'; ಫೋಟೋ ವೈರಲ್..! - ಸವಿ ಕನ್ನಡ ನ್ಯೂಸ್
ಬಾಲಿವುಡ್ ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್. ಈಕೆ ಇನ್ನೂ ಚಿತ್ರರಂಗಕ್ಕೆ ಕಾಲಿಡದಿದ್ದರೂ ಸೋಷಿಯಲ್​​ ಮೀಡಿಯಾದಲ್ಲಿ ಮಾತ್ರ ಸೆಲೆಬ್ರಿಟಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​​ ಫೋಟೋಗಳನ್ನು ಪೋಸ್ಟ್​ ಮಾಡುವ ಸುಹಾನಾ ಖಾನ್​​​ ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಾರ್ಟ್ ಫಿಲ್ಮ್ ಮೂಲಕ ಶಾರುಖ್ ಪುತ್ರಿ ಸುಹಾನಾ ಌಕ್ಟಿಂಗ್ ಡೆಬ್ಯೂ
ಯಾವಾಗ ಫ್ರೆಂಡ್ಸ್ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಒಂದಷ್ಟು ಫೋಟೋಗಳನ್ನು ಸುಹಾನಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಫೋಟೋಗಳು ಕೂಡ ಎಲ್ಲರ ಗಮನ ಸೆಳೆಯುತ್ತವೆ. ಈಗ ಯೂರೋಪ್​​ ಟ್ರಪ್​​ಗೆ ಹೋಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ 'ಸನ್​'ಕಿಸ್ಡ್ ಫೋಟೋ ಹಂಚಿಕೊಂಡು ಯೂರೋಪ್​​ಗೆ ಗುಡ್​ ಬೈ ಹೇಳಿದ್ದಾರೆ.
ಯೂರೋಪ್​​​ನಲ್ಲಿ ಯಾವುದೋ ಪ್ಲೇಸಲ್ಲಿ ಸುಹಾನಾ ಕೆಂಪು ಟೀ ಶರ್ಟ್ ಧರಿಸಿ ತೆಗೆಸಿಕೊಂಡ ಫೋಟೋ ಸಿಕ್ಕಾಪಟ್ಟೆ ಹಾಟ್‌ ಆಗಿದೆ. ಇದು ಅಭಿಮಾನಿಗಳ ಮೈ ಬಿಸಿಯೇರಿಸಿದೆ. ಇಷ್ಟು ದಿನ ವೆಕೇಷನ್‌ ಮೂಡಿನಲ್ಲಿದ್ದ ಸುಹಾನಾ ಸನ್‌ ಕಿಸ್ಡ್ ಫೋಟೋ ಶೇರ್​​ ಮಾಡಿ ಸುದ್ದಿಯಾಗಿದ್ದಾರೆ.
ಸೇವೆಯ ದಿನ | Martech Zone
ಸೇವೆಯ ದಿನ
ಸೋಮವಾರ, ಜನವರಿ 15, 2007 ಭಾನುವಾರ, ಅಕ್ಟೋಬರ್ 4, 2015 Douglas Karr
ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರ ಪತ್ನಿ ಸೇವೆಯ ದಿನವಾಗಬೇಕೆಂದು ಹಾರೈಸಿದರು ಎಂದು ನಾನು ಇಂದು ಸುದ್ದಿಯಲ್ಲಿ ಕೇಳಿದೆ. ನಾನು ಈ ಪೋಸ್ಟ್ ಅನ್ನು ಸ್ಟಾರ್‌ಬಕ್ಸ್‌ನಿಂದ ಬರೆಯುವಾಗ ಸಂದೇಶದಲ್ಲಿ ಕೆಲವು ವ್ಯಂಗ್ಯವಿದೆ. ಇಂದು ನನ್ನ ದಿನ ಇಲ್ಲಿದೆ:
ಕಳೆದ 24 ಗಂಟೆಗಳ ಕಾಲ ನಾವು ಶುಶ್ರೂಷೆ ಮಾಡುತ್ತಿದ್ದ ಜ್ವರದಿಂದ ನನ್ನ ಮಗಳು ಕಳೆದ ರಾತ್ರಿ ಮನೆಗೆ ಬಂದಿದ್ದಳು. ಇದು ಅಪ್ಪ ಮತ್ತು ಸಹೋದರ ಸೇವೆಯ ರಾತ್ರಿ ಮತ್ತು ಹಗಲು! ಅಪ್ಪ ಹೆಚ್ಚಿನ ವಿಷಯಗಳಿಗಾಗಿ ಫಾರ್ಮಸಿಗೆ ಓಡುತ್ತಾರೆ, ಸಮಯಕ್ಕೆ ತಂಗಿಗೆ ಸ್ನಾನಗೃಹಕ್ಕೆ ಓಡಲು ಸಾಧ್ಯವಾಗದಿದ್ದಾಗ ಸಹೋದರ ಅವ್ಯವಸ್ಥೆಯನ್ನು ಸ್ವಚ್ ans ಗೊಳಿಸುತ್ತಾನೆ. ಅವಳ ಉಷ್ಣತೆಯು ಸಾಕಷ್ಟು ಹೆಚ್ಚಾಗಿದೆ, ನಾನು ವೈದ...
ಅದೇ ಸಮಯದಲ್ಲಿ, ನನ್ನ ಡಿಎಸ್ಎಲ್ 4 ವರ್ಷಗಳ ರಾಕ್-ಘನ ಸಂಪರ್ಕದ ನಂತರ ಡಂಪ್ ತೆಗೆದುಕೊಳ್ಳಲು ನಿರ್ಧರಿಸಿದೆ. ಹಾಗಾಗಿ ನಾನು AT&T ಯೊಂದಿಗೆ 8 ಕ್ಕಿಂತ ಕಡಿಮೆ ಫೋನ್ ಕರೆಗಳನ್ನು ಹೊಂದಿಲ್ಲ, 1 'ಲೈನ್' ತಂತ್ರಜ್ಞರ ಭೇಟಿ, ಮತ್ತು ನಾಳೆ ನಾನು 'ಡಿಎಸ್ಎಲ್' ತಂತ್ರಜ್ಞನನ್ನು ಹೊಂದಿದ್ದೇನೆ. ಧಾರಾವಾಹಿ ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ನಾನು 2 ದಿನಗಳಿಂದ ಪಿಡಿಎಯಿಂದ ಇಮೇಲ್ ಪರಿಶೀಲಿಸುತ್ತಿದ್...
ನಂತರ, ಅದನ್ನು ಮೇಲಕ್ಕೆತ್ತಲು, ಇಂದು ಸಹಾಯದ ಅಗತ್ಯವಿರುವ ಜನರಿಂದ ನಾನು ತಡೆರಹಿತ ಫೋನ್ ಕರೆಗಳನ್ನು ಹೊಂದಿದ್ದೇನೆ. ನನ್ನ ಡಿಎಸ್ಎಲ್ ಕೆಳಗಿರುವ ಕಾರಣ ನಾನು ನಿಜವಾಗಿಯೂ ಯಾರಿಗೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಇಂದು ರಾತ್ರಿ ಕೆಲವು ನಿಮಿಷಗಳ ಕಾಲ ತಪ್ಪಿಸಿಕೊಂಡು, ನನ್ನ ಮಗನನ್ನು ಮತ್ತು ನನ್ನ ಮಗಳನ್ನು ನಿದ್ದೆ ಮಾಡುತ್ತಿದ್ದೆ, ನಾನು ಎಲ್ಲರಿಗೂ ಸಾಧ್ಯವಾದಷ್ಟು ಉತ್ತಮವಾಗಿ ಸ...
ಶ್ರೀಮತಿ ಕಿಂಗ್, ನೀವು ಸೇವೆಯ ಬಗ್ಗೆ ಮಾತನಾಡುವಾಗ ನಿಮ್ಮ ಮನಸ್ಸಿನಲ್ಲಿ ಬೇರೆ ಏನಾದರೂ ಇದೆ ಎಂದು ನನಗೆ ತಿಳಿದಿದೆ… ಆದರೆ ನಾನು ಈಗ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದೇನೆ ಎಂದು ನೀವು ಅರ್ಥಮಾಡಿಕೊಳ್ಳುವಿರಿ ಎಂದು ನನಗೆ ತಿಳಿದಿದೆ. 🙂
ಇಂದು ಒಂದು ಒಳ್ಳೆಯ ಸುದ್ದಿ, ನಾನು ಟಾಡ್ ಮತ್ತು ಒಟ್ಟಿಗೆ ಸೇರಿಸಿದ ಟಾಪ್ 150 ಪವರ್ ಮಾರ್ಕೆಟಿಂಗ್ ಬ್ಲಾಗ್‌ಗಳಲ್ಲಿ ಪಟ್ಟಿಮಾಡಿದ್ದೇನೆ… ನಾನು ಪ್ರಸ್ತುತ # 80 ಆಗಿದ್ದೇನೆ!
ಒಂದು ದಿನ 'ಕುರುಕ್ಷೇತ್ರ' ಉಚಿತ ಪ್ರದರ್ಶನ..! | Digital Kannada
Home ಸಿನಿಮಾ ಒಂದು ದಿನ 'ಕುರುಕ್ಷೇತ್ರ' ಉಚಿತ ಪ್ರದರ್ಶನ..!
ಒಂದು ದಿನ 'ಕುರುಕ್ಷೇತ್ರ' ಉಚಿತ ಪ್ರದರ್ಶನ..!
ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್‌ ಮಾಡೋದಕ್ಕೆ ಮುಹೂರ್ತ ಕೂಡಿಬಂದಿಲ್ಲ. ಆದ್ರೆ ನಿರ್ಮಾಪಕ ಕಂ ಶಾಸಕ ಮುನಿರತ್ನ ಒಂದು ದಿನ ಉಚಿತವಾಗಿ ಪ್ರದರ್ಶನ ಮಾಡುವ ವಾಗ್ದಾನ ಮಾಡಿದ್ದಾರೆ.
ಪತ್ರಕರ್ತ ಕಂ ನಿರ್ದೇಶಕ ಚಕ್ರವರ್ತಿ‌ ಚಂದ್ರಚೂಡ್ ನೇತೃತ್ವದಲ್ಲಿ ಪೀಪಲ್ಸ್ ಫಾರ್ ಪೀಪಲ್ ಅನ್ನೋ ಸ್ನೇಹಿತರ ಬಳಗ ನವೆಂಬರ್ 11 ರಿಂದ 16ರ ತನಕ 'ಕೊಡಗಿಗಾಗಿ ರಂಗಸಪ್ತಾಹ' ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ರಂಗಸಪ್ತಾಹದಲ್ಲಿ ಸಂಗೀತ ಹಾಗೂ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ನಿರಾಶ್ರಿತರಾದ ಕುಟುಂಬಗಳು ತಮ್ಮ ನೋವನ್ನು ತೋಡಿಕೊಳ್ಳಲು ಅವಕಾಶ ಮಾಡಿಕೊಡ...
ಕುರುಕ್ಷೇತ್ರ ಸಿನಿಮಾ ಯಾವತ್ತು ರಿಲೀಸ್ ಆಗುತ್ತೋ ಅವತ್ತಿನ ಹಿಂದಿನ ದಿನ ಒಂದು ಶೋ ಉಚಿತ ಪ್ರದರ್ಶನದ ಘೋಷಣೆ ಮಾಡಿದ್ರು. ಉಚಿತ ಪ್ರದರ್ಶನದ ಆಯೋಜನೆ ಅಂದ್ರೆ ಪೀಪಲ್ಸ್ ಫಾರ್ ಪೀಪಲ್ ಸಂಸ್ಥೆ ಕೊಡಗಿಗಾಗಿ ಮಿಡಿಯುತ್ತಿರೋ ಹಿನ್ನೆಲೆಯಲ್ಲಿ ಒಂದು ಶೋ ಪ್ರದರ್ಶನ ಮಾಡಿ ಅಲ್ಲಿ ಸಂಗ್ರಹವಾಗುವ ಹಣವನ್ನು ಕೊಡಗಿಗಾಗಿ ಬಳಸಲು ಅನುಕೂಲ ಮಾಡಿಕೊಡ್ತೇನೆ ಎಂದು ಘೋಷಣೆ ಮಾಡಿದ್ರು. ದರ್ಶನ್ ಅಭಿಮಾನಿಗಳು ಚಿತ್ರ...
ಅತ್ಯುನ್ನತ 20 ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಸಮಿತಿ - Universal Coaching Center
ಅತ್ಯುನ್ನತ 20 ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಸಮಿತಿ
ಭಾರತದಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯದ 104 ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪೈಕಿ ಅತ್ಯುತ್ತಮ ಎನಿಸಿದ 20 ಸಂಸ್ಥೆಗಳನ್ನು ಆಯ್ಕೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಉನ್ನತಾಧಿಕಾರದ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ.
ಈ ಸಮಿತಿಯ ಅಧ್ಯಕ್ಷರಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಕಾರ್ಯ ನಿರ್ವಹಿಸುವರು. ಈ ಉನ್ನತಾಧಿಕಾರ ಸಮಿತಿಯ ಇತರ ಸದಸ್ಯರೆಂದರೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ತರುಣ್ ಖನ್ನಾ, ಯುನಿವರ್ಸಿಟಿ ಆಫ್ ಹಾಸ್ಟನ್‍ನ ಅಧ್ಯಕ್ಷ ರೇಣು ಖತೋರ್ ಮತ್ತು ಲಕ್ನೋ ಐಐಎಂನ ಮಾಜಿ ನಿರ್ದೇಶಕ ಪ್ರೀತಮ್ ಸಿಂಗ್.
ರಾಷ್ಟ್ರೀಯ ಮಹತ್ವದ ಸಂಸ್ಥೆಗಳು
ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂಬ ವಿಶೇಷ ಯೋಜನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಆರಂಬಿಸಿದೆ. ದೇಶದ 20 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಂದರೆ 10 ಖಾಸಗಿ ಹಾಗೂ 10 ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವದ 500 ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ತರುವುದು ಇದರ ಮುಖ್ಯ ಉದ್ದೇಶ. ಮುಂದಿನ 10 ವರ್ಷಗಳಲ್ಲಿ ಈ ಗುರಿಸಾಧನೆ ಮಾಡಲು ಉದ್ದೇಶಿಸಲಾಗಿದ್ದು, ಕ್ರಮೇಣ, ಶ್ರೇಷ...
ಹೀಗೆ ಆಯ್ಕೆ ಮಾಡಲಾದ 20 ಸಂಸ್ಥೆಗಳಿಗೆ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಿನ ಸ್ವಾಯತ್ತತೆ ನೀಡಲು ಉದ್ದೇಶಿಸಲಾಗಿದೆ. ದೇಶೀಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ವಿಧಿಸುವ ಶುಲ್ಕವನ್ನು ತಾವೇ ನಿಗದಿಪಡಿಸಲು ಇವುಗಳಿಗೆ ಅಧಿಕಾರ ನೀಡಲಾಗುತ್ತದೆ. ಕೋರ್ಸ್ ಕಾಲಾವಧಿ ಮತ್ತು ಸಂರಚನೆಯಲ್ಲಿ ಕೂಡಾ ಸ್ಥಿತಿಸ್ಥಾಪಕತ್ವ ಒದಗಿಸಲಾಗುತ್ತದೆ.
ಈ ಸಂಸ್ಥೆಗಳು ವಿದೇಶಿ ಸಂಸ್ಥೆಗಳ ಜತೆ ಸಹಭಾಗಿತ್ವ ಮಾಡಿಕೊಳ್ಳಲು ಸರ್ಕಾರ ಅಥವಾ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಅನುಮೋದನೆಯನ್ನು ಪಡೆಯಬೇಕಿಲ್ಲ. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಋಣಾತ್ಮಕ ದೇಶಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟ ದೇಶಗಳ ಜತೆ ಮಾತ್ರ ಇಂಥ ಸಹಭಾಗಿತ್ವ ಮಾಡಿಕೊಳ್ಳುವಂತಿಲ್ಲ.
ಹೀಗೆ 20 ಸಂಸ್ಥೆಗಳನ್ನು ಗುರುತಿಸಿದ ಬಳಿಕ, ಈ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಗುರಿ ಮುಂದಿನ 10 ವರ್ಷಗಳ ಒಳಗಾಗಿ ಅಂತರರಾಷ್ಟ್ರೀಯವಾಗಿ ಖ್ಯಾತ 100 ಸಂಸ್ಥೆಗಳ ಒಳಗಾಗಿ ಸ್ಥಾನವನ್ನು ಪಡೆಯುವುದು. ಆಯ್ಕೆಯಾದ 10 ಸರ್ಕಾರಿ ಸಂಸ್ಥೆಗಳು ತಲಾ 1000 ಕೋಟಿ ರೂಪಾಯಿ ಅನುದಾನವನ್ನು ಮಾನವ ಸಂಪನ್ಮೂಲ ಸಚಿವಾಲಯದಿಂದ ಪಡೆದು ವಿಶ್ವದರ್ಜೆಯ ಸ್ಥಾನಮಾನ ಸಾಧಿಸಲು ಅನುಕೂಲ ಕಲ್ಪಿಸಲಾಗುತ್ತದೆ. ಆದರೆ ಖಾಸಗಿ ಸ...
ಜಾಗತಿಕ ರ್ಯಾಂಕಿಂಗ್‍ನಲ್ಲಿ 500ನೇ ಸ್ಥಾನದ ಒಳಗಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಅಥವಾ ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನಲ್ಲಿ 50ನೇ ರ್ಯಾಂಕಿಂಗ್ ಒಳಗಿನ ರ್ಯಾಂಕಿಂಗ್ ಹೊಂದಿರುವ ಸಂಸ್ಥೆಗಳು ಮಾತ್ರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂಬ ಹಣೆಪಟ್ಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಖಾಸಗಿ ವಲಯದ ಮಹತ್ವದ ಸಂಸ್ಥೆಗಳು ಗ್ರೀನ್‍ಫೀಲ್ಡ್ ವೆಂಚರ್ ರೂಪದಲ್ಲಿ ಬರಬಹುದಾಗಿದ್ದು, ಮುಂದಿನ 1...
ಕರ್ನಾಟಕ ಗೆಲುವು ರಾಹುಲ್ ಗಾಂಧಿಗೆ ಮೊದಲ ಗಿಫ್ಟ್: ಸಿದ್ದರಾಮಯ್ಯ | Winning innings of Congress starts from Karnataka: Siddaramaiah - Kannada Oneindia
» ಕರ್ನಾಟಕ ಗೆಲುವು ರಾಹುಲ್ ಗಾಂಧಿಗೆ ಮೊದಲ ಗಿಫ್ಟ್: ಸಿದ್ದರಾಮಯ್ಯ
Updated: Friday, December 22, 2017, 17:44 [IST]
ಬೆಳಗಾವಿ, ಡಿಸೆಂಬರ್ 22: 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಗೆಲುವಿನೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮೊದಲ ಗೆಲುವಿನ ಗಿಫ್ಟ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಬೆಳಗಾವಿಯ ಹಾರೋಗೇರಿಯಲ್ಲಿ ಮಾತನಾಡಿದ ಅವರು, "ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ಸಾಧ್ಯವಿಲ್ಲ. ಕಾಂಗ್ರೆಸ್ 132 ವರ್ಷಗಳ ಇತಿಹಾಸ ಇರುವ ಪಕ್ಷ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ," ಎಂದು ಹೇಳಿದ್ದಾರೆ.
2018ರ ಕರ್ನಾಟಕ ಚುನಾವಣೆ : ಅಹಿಂದ V/S ಹಿಂದುತ್ವ!
"ಇವತ್ತು ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಮೊದಲನೇ ಚುನಾವಣೆ ಗುಜರಾತ್ ನಲ್ಲಿ ನಡೆಯಿತು. ಒಂದೊಮ್ಮೆ ಅಲ್ಲಿ ನಮಗೆ ಪಕ್ಷದ ನೆಟ್ವರ್ಕ್ ಇದ್ದಿದ್ದರೆ ರಾಹುಲ್ ಗಾಂಧಿಯವರಿಗೆ ಮೊದಲನೇ ಜಯ ಗುಜರಾತ್ ನಲ್ಲಿ ಸಿಗುತ್ತಿತ್ತು," ಎಂದು ಸಿದ್ದರಾಮಯ್ಯ ವಿಷಾದಿಸಿದರು.
ಕೈಕೊಟ್ಟ ವಘೇಲಾ
"ದುರಾದೃಷ್ಟಕ್ಕೆ ಗುಜರಾತ್ ನಲ್ಲಿ ಶಂಕರ್ ಸಿನ್ಹಾ ವಘೇಲಾ ಮತ್ತು ಗುಂಪಿನ 18 ಜನ ಶಾಸಕರು ಪಕ್ಷ ಬಿಟ್ಟು ಹೋದರು. ವಘೇಲಾ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದವರು. ಅವರೇ ಪಕ್ಷ ಬಿಟ್ಟು ಹೋದರು. ನಮಗೆ ನೆಟ್ವರ್ಕ್ ಕೂಡಾ ಇರಲಿಲ್ಲ," ಎಂದು ಮುಖ್ಯಮಂತ್ರಿ ಸೋಲಿನ ವಿಮರ್ಶೆ ನಡೆಸಿದ್ದಾರೆ.
ಕೈಕೊಟ್ಟ ನಗರ ಪ್ರದೇಶ
"ಬಿಜೆಪಿ ಗುಜರಾತ್ ನಲ್ಲಿ 22 ವರ್ಷ ಆಡಳಿತ ಮಾಡಿತ್ತು. ಹೀಗಿದ್ದೂ ನಮ್ಮ ಪಕ್ಷ ಗುಜರಾತ್ ನಲ್ಲಿ 80 ಸ್ಥಾನಗಳನ್ನು ಗೆದ್ದಿದೆ. ಇಡೀ ಗ್ರಾಮೀಣ ಪ್ರದೇಶದಲ್ಲಿ ನಮಗೆ ಬಹುಮತ ಬಂದಿದೆ. ಆದರೆ ನಗರ ಪ್ರದೇಶ ಮಾತ್ರ ಕೈಕೊಟ್ಟಿತು," ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
2018ರಲ್ಲಿ ಜಯಭೇರಿ
"ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಪಕ್ಷ ಇಲ್ಲಿ ಬಲವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ನಾಯಕತ್ವ ಇದೆ. ರಾಹುಲ್ ಗಾಂಧಿಯವರು ಇಲ್ಲಿಗೂ ಬರ್ತಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುತ್ತದೆ," ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೆಲುವಿನ ಉಡುಗೊರೆ
"ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ ರಾಹುಲ್ ಗಾಂಧಿಯವರಿಗೆ ಮೊದಲನೇ ಗೆಲುವಿನ ಕೊಡುಗೆಯನ್ನು ಕರ್ನಾಟಕದ ಮೂಲಕ ಕೊಡುತ್ತೇವೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ಕೂಡ ಅದೇ ಶಪಥ ಮಾಡಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
karnataka assembly elections 2018 siddaramaiah rahul gandhi congress belagavi ಕರ್ನಾಟಕ ವಿಧಾನಸಭೆ ಚುನಾವಣೆ 2018 ಸಿದ್ದರಾಮಯ್ಯ ರಾಹುಲ್ ಗಾಂಧಿ ಕಾಂಗ್ರೆಸ್ ಬೆಳಗಾವಿ
Chief Minister Siddaramaiah has said that Congress President Rahul Gandhi will get his first victorious gift from Karnataka Assembly elections 2018.
ಸಿಎಂ ಯಡಿಯೂರಪ್ಪ ಜೊತೆ ಕುಮಾರಸ್ವಾಮಿ ಕುಚುಕು-ಕುಚುಕು ಕರಾಮತ್ತು ಏನು?
ನಾಡು-ನುಡಿಯ ಕುರಿತ ಕಾಳಜಿ, ಕೇಂದ್ರ ಸರ್ಕಾರಗಳಿಂದ ರಾಜ್ಯಗಳಿಗೆ ಆಗುವ ನಿರಂತರ ಅನ್ಯಾಯಗಳನ್ನು ಪ್ರಶ್ನಿಸುವ ಛಾತಿಯ ಪ್ರಾದೇಶಿಕ ಪಕ್ಷ ಕರ್ನಾಟಕದ ಮಟ್ಟಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಜರೂರಿದೆ. ಆದರೆ, ವಿಪರ್ಯಾಸದ ಸಂಗತಿಯೆಂದರೆ; ಇಂತಹ ಹೊತ್ ...
Published on : 13 Oct, 2020 , 10:30 am
"ಯಾರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ ಹೇಳಿ?". ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಕೇಳಿಬಂದಿದ್ದ ಭಾರೀ ಭ್ರಷ್ಟಾಚಾರದ ಕುರಿತು ಎರಡು ವಾರದ ಹಿಂದೆ ಮಾಧ್ಯಮಗಳಿಗೆ ನೀಡಿದ್ದ ಪ್ರತಿಕ್ರಿಯೆ.
ಹಾಗೆ ನೋಡಿದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ಮಾತು ಹೊರಬಿದ್ದ ಸಂದರ್ಭ ಕೂಡ ಬಹಳ ಕುತೂಹಲಕಾರಿ. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಅನಿರೀಕ್ಷಿತ ಖಾಸಗೀ ಮಾತುಕತೆಯ ಹದಿನೈದು ದಿನಗಳ ಬಳಿಕ ಮತ್ತು ಮುಖ್ಯಮಂತ್ರಿ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಮುನ್ನ ಕುಮಾರಸ್ವಾಮಿ ಈ ಮಾತು ಆಡಿದ್ದರು!
ಜೊತೆಗೆ, ತಮ್ಮ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ ಒಂದೂ ಕಾಲು ವರ್ಷದ ಆಡಳಿತಾವಧಿಯಲ್ಲಿ ನೆರೆ ಇರಬಹುದು, ಬರವಿರಬಹುದು, ಸಾಲು ಸಾಲು ಹಗರಣಗಳಿರಬಹುದು, ಕರೋನಾ ನಿಯಂತ್ರಣ ಮತ್ತು ನಿರ್ವಹಣೆಯ ಯಡವಟ್ಟುಗಳಿರಬಹುದು,.. ಸರ್ಕಾರದ ಯಾವ ಲೋಪಗಳ ವಿಷಯದಲ್ಲಿಯೂ ಪ್ರತಿಪಕ್ಷದ ಮುಖಂಡರಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾದ ರ...
ಕರೋನಾ ಹಿನ್ನೆಲೆಯಲ್ಲಿ ಮೊಟಕುಗೊಂಡ ಸದನದಲ್ಲಿ ಈ ಬಾರಿ ಕಾಂಗ್ರೆಸ್ ಸಕ್ರಿಯ ಪ್ರತಿಪಕ್ಷವಾಗಿ ಸರ್ಕಾರದ ಹಲವು ವೈಫಲ್ಯಗಳು ಮತ್ತು ಹಗರಣಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಆ ಮೂಲಕ ಆ ಚರ್ಚೆಯ ಭಾಗವಾಗಿಯೇ ಅವಿಶ್ವಾಸ ಗೊತ್ತುವಳಿಯನ್ನೂ ಮಂಡಿಸಿ, ಸರ್ಕಾರದ ಪ್ರತಿ ನಡೆಯನ್ನೂ ಜನರ ಮುಂದಿಡುವ ಅವಕಾಶವಾಗಿ ಸಂದರ್ಭವನ್ನು ಬಳಸಿಕೊಂಡಿತು. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ...
ಅವರ ಆ ಧೋರಣೆಗೆ ಕಲಾಪಕ್ಕೆ ಮುನ್ನ ಅವರು ಸಿಎಂ ಯಡಿಯೂರಪ್ಪ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ್ದು ಮತ್ತು ಅದಾದ ಬಳಿಕ ಅವರು ಬಿಜೆಪಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ನೀಡಿದ್ದ ಹೇಳಿಕೆಯ ಮುಂದುವರಿದ ಭಾಗ ಎಂಬುದು ಗುಟ್ಟೇನಲ್ಲ.
ಪ್ರಮುಖವಾಗಿ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಅವರದೇ ಪಕ್ಷದಲ್ಲಿಯೇ ಅವರ ವಿರೋಧ ಬಣ ಕಳೆದ ಒಂದು ತಿಂಗಳಿನಿಂದ ತೀವ್ರ ಪ್ರಯತ್ನಗಳನ್ನು ಆರಂಭಿಸಿದೆ. ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷ್, ಜಗದೀಶ್ ಶೆಟ್ಟರ್ ಮತ್ತಿತರ ನಾಯಕರು ನಾಯಕತ್ವ ಬದಲಾವಣೆಯ ತಮ್ಮ ದನಿಯನ್ನು ಎತ್ತರಿಸಿದ್ಧಾರೆ. ಒಂದು ವೇಳೆ ನಾಯಕತ್ವ ಬದಲಾವಣೆಯ ಪ್ರಯತ್ನಗಳು ಫಲಕೊಟ್ಟು ಹೈಕಮಾಂಡ್ ಹಸಿರು ನಿಶಾನೆ ತೋರಿ...
ಇದೀಗ ಆ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಪ್ರಯತ್ನಿಸುತ್ತಿದ್ದು, ಮತ್ತೊಮ್ಮೆ ವಚನಭ್ರಷ್ಟ ಎನಿಸಿಕೊಳ್ಳುವ ಸಂದರ್ಭ ಬರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯ ವ್ಯಂಗ್ಯದ ಮಾತು.