text stringlengths 0 61.5k |
|---|
ಹಾಗಾಗಿಯೇ ಕುಮಾರಸ್ವಾಮಿಯವರು ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಅಳಿಯ-ಮೊಮ್ಮಗನ ಸಾಲುಸಾಲು ಬಹುಕೋಟಿ ಹಗರಣಗಳ ವಿಷಯದಲ್ಲಿಯೂ ರಾಜಕೀಯ ಸನ್ಯಾಸ ಸ್ವೀಕರಿಸಿದ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದರು. ಯಾವ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪವಿಲ್ಲ ಹೇಳಿ? ಭ್ರಷ್ಟಾಚಾರ ಪ್ರಕರಣ ವಿಷಯದಲ್ಲಿ ಕೊನೆಗೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ? ಹಾಗಾಗಿ ಇಂತಹ ವಿಷಯಗಳ ಚರ... |
ಆದರೆ, ಹೀಗೆ ಭ್ರಷ್ಟಾಚಾರದ ಬಗ್ಗೆ ಒಂದು ರೀತಿಯಲ್ಲಿ ಅದನ್ನು ಒಪ್ಪಿಕೊಂಡಂತೆ, ಮತ್ತೊಂದು ಕಡೆ ಅದನ್ನು ಸರಿಪಡಿಸಲಾಗದು ಎಂಬಂತೆ ಮಾತನಾಡಿರುವ ಕುಮಾರಸ್ವಾಮಿಯವರು, ಕೆಲವು ವರ್ಷಗಳ ಹಿಂದೆ ಇದೇ ಯಡಿಯೂರಪ್ಪ ಸಿಎಂ ಆಗಿದ್ಧಾಗ, ಅವರ ಸಾಲುಸಾಲು ಹಗರಣಗಳನ್ನು ಧಾರಾವಾಹಿಯಂತೆ ಪತ್ರಿಕಾಗೋಷ್ಠಿಗಳಲ್ಲಿ ಬಹಿರಂಗಪಡಿಸುತ್ತಾ ಭ್ರಷ್ಟಾಚಾರದ ವಿರುದ್ಧದ ಸಮರ ಸಾರಿದ ಹುತಾತ್ಮನ ವೇಷ ತೊಟ್ಟಿದ್ದರು ಎಂಬುದನ್ನು ... |
ವಿಪರ್ಯಾಸವೆಂದರೆ; ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹಗರಣ, ಅವ್ಯವಹಾರ, ಲೋಪಗಳಷ್ಟೇ ಅಲ್ಲ; ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ಬದಲಾವಣೆ ಸೇರಿದಂತೆ ಹಲವು ರೈತ, ಕಾರ್ಮಿಕ ವಿರೋಧಿ ಕಾನೂನುಗಳ ವಿಷಯದಲ್ಲಿ ಕೂಡ 'ಮಣ್ಣಿನ ಮೊಮ್ಮಗ'ನ ವರಸೆ ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ. ಒಂದು ಪ್ರಾದೇಶಿಕ ಪಕ್ಷವಾಗಿ ನಾಡಿನ ನೆಲ-ಜಲ ಮತ್ತು ಜನರ ವಿಷಯದಲ್... |
ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣದ ವಿದ್ಯಾಗಮ ಯೋಜನೆ, ಮಹಿಳಾ ಸಾಂತ್ವನ ಕೇಂದ್ರಗಳ ಸಮಸ್ಯೆ ಮುಂತಾದ ವಿಷಯದಲ್ಲಿ ಕಳೆದೊಂದು ವಾರದಿಂದ ಯಡಿಯೂರಪ್ಪ ಸರ್ಕಾರದ ವಿರುದ್ಧ ಟ್ವಿಟರ್ ಸಮರ ಸಾರಿರುವ ಕುಮಾರ ಸ್ವಾಮಿ ಅವರು, ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಉಪ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಚುರುಕಾಗಿದ್ದಾರೆ. ಆದರೆ, ಅವರು ಸರ್ಕಾರದ ಲೋಪಗಳನ್ನು, ವೈಫಲ್ಯಗಳನ್ನು... |
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ ನಿಜ. ಆದರೆ, ಜೆಡಿಎಸ್ ವಿಷಯದಲ್ಲಿ ಇತ್ತೀಚಿನ ವರ್ಷಗಳಲ್ಲಂತೂ ಈ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕೇವಲ ವರ್ಷದ ಹಿಂದೆ ಕಾಂಗ್ರೆಸ್ ನಾಯಕರನ್ನು ಅಣ್ಣ- ಗೆಳೆಯ ಎಂದು ಕರೆಯುತ್ತಾ, ಸಮ್ಮಿಶ್ರ ಸರ್ಕಾರದ ಅಧಿಕಾರ ಅನುಭವಿಸಿದ್ದ ಕುಮಾರಸ್ವಾಮಿ ಅವರು, ಅಂದಿನ ತಮ್ಮದೇ ಸರ್ಕಾರವನ್ನ ಆಪರೇಷನ್ ಕಮಲದ ಮೂಲಕ ಕೆಡವಿ, ತಮ... |
ಅದೇನೇ ಇರಲಿ; ಒಂದಂತೂ ಸ್ಪಷ್ಟ. ನೈಜ ಪ್ರಾದೇಶಿಕ ನಾಡು-ನುಡಿಯ ಕುರಿತ ಕಾಳಜಿ, ಜನಪರ ಬದ್ಧತೆ, ಕೇಂದ್ರ ಸರ್ಕಾರಗಳಿಂದ ರಾಜ್ಯಗಳಿಗೆ ಆಗುವ ನಿರಂತರ ಅನ್ಯಾಯಗಳನ್ನು ಪ್ರಶ್ನಿಸುವ ಛಾತಿಯ ಪ್ರಾದೇಶಿಕ ಪಕ್ಷ ಕರ್ನಾಟಕದ ಮಟ್ಟಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಜರೂರಿದೆ. ಆದರೆ, ವಿಪರ್ಯಾಸದ ಸಂಗತಿಯೆಂದರೆ; ಇಂತಹ ಹೊತ್ತಲ್ಲಿ ತಾಂತ್ರಿಕವಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೂಡ, ನಾಡಿನ ನೈಜ ಹಿ... |
ಕುಡಿವ ನೀರಿಗಾಗಿ ಪಕ್ಕದ ಊರಿಗೆ ದಂಡಯಾತ್ರೆ | Udayavani – ಉದಯವಾಣಿ |
Monday, 16 May 2022 | UPDATED: 09:42 PM IST |
ಕುಡಿವ ನೀರಿಗಾಗಿ ಪಕ್ಕದ ಊರಿಗೆ ದಂಡಯಾತ್ರೆ |
ಚಂಚುರಾಯನಪಲ್ಲಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ |
Team Udayavani, Nov 6, 2020, 5:59 PM IST |
ಬಾಗೇಪಲ್ಲಿ ತಾ.ತಿಮ್ಮಂಪಲ್ಲಿ ಗ್ರಾಪಂನ ಚಂಚುರಾಯನಪಲ್ಲಿ ದಲಿತಕೇರಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವುದು. |
ಬಾಗೇಪಲ್ಲಿ: ತಾಲೂಕಿನ ತಿಮ್ಮಂಪಲ್ಲಿ ಗ್ರಾಪಂನ ಚಂಚುರಾಯನಪಲ್ಲಿ ದಲಿತ ಕೇರಿಯಲ್ಲಿ ಸುಮಾರು 110 ಕುಟುಂಬಗಳು ವಾಸವಿದ್ದು, ಈ ದಲಿತ ಕಾಲೋನಿಯಲ್ಲಿ 540 ಜನಸಂಖ್ಯೆ ಇದೆ. ಕಳೆದ 3-4 ವರ್ಷಗಳಿಂದ ಕುಡಿಯುವ ನೀರಿನ ಇವರನ್ನು ನಿತ್ಯ ಬೆಳಗಾದರೇ ಕಾಡುತ್ತಿದೆ. |
ಕುಡಿಯುವ ನೀರಿಗಾಗಿ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮನವಿಗೆ ಸ್ಪಂದಿಸದಿರುವುದು ದಲಿತ ಕೇರಿಯ ನಿವಾಸಿಗಳ ಆಕ್ರೋಶಕ್ಕೆಕಾರಣವಾಗಿದೆ. |
ಪಕ್ಕದ ಗ್ರಾಮಗಳಿಗೆ ಅಲೆದಾಟ: ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು, ಬಿಂದಿಗೆ ಹಿಡಿದು ನೀರಿಗಾಗಿ ಅಕ್ಕಪಕ್ಕದಲ್ಲಿರುವ ಹತ್ತಿರದ ಬೊಮ್ಮಯ್ಯಗಾರಿಪಲ್ಲಿ, ಮರಸನಪಲ್ಲಿ, ಗುಂಡ್ಲಪಲ್ಲಿ ಗ್ರಾಮಗಳಿಗೆ ಹೋಗಿ ನೀರು ತರಬೇಕಾದ ದುಸ್ಥಿತಿ ಇದೆ. |
ಪಿಡಿಒ ಸಿಗಲ್ಲ: ಚಂಚುರಾಯನಪಲ್ಲಿ ಕಾಲೋನಿಯಲ್ಲಿ ನೀರಿನ ಸಮಸ್ಯೆ ಜಟಿಲವಾಗಿದ್ದು, ಸಮಸ್ಯೆ ಬಗ್ಗೆ ಮನವಿ ಮಾಡಲು ಬರುವ ಸಾರ್ವಜನಿಕರಿಗೆ ತಿಮ್ಮಂಪಲ್ಲಿ ಗ್ರಾಪಂ ಪಿಡಿಒ ನಾರಾಯಣಸ್ವಾಮಿಯ ದರ್ಶನ ಭಾಗ್ಯ ಸಿಗುವುದಿಲ್ಲ ಎನ್ನಲಾಗಿದೆ. |
ಅನುದಾನ ದುರ್ಬಳಕೆ: 2018-19 ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು 70 ಲಕ್ಷಕ್ಕೂ ಹೆಚ್ಚು ಅನುದಾನ ಗ್ರಾಮದ ಅಭಿವೃದ್ಧಿಗೆ ಬಿಡುಗಡೆಯಾಗಿ ಹಣ ಖರ್ಚಾಗಿದ್ದರೂ, ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಿಲ್ಲ.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಯಾರೊಬ್ಬರೂ ಮುಂದಾಗಿಲ್ಲ. |
"ಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರಬೇಕಿದೆ' : ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಪ್ರತಿ ದಿನ ಕೂಲಿಗೆ ಹೋಗುವ ಮುನ್ನ ಅಕ್ಕಪಕ್ಕದ ಹಳ್ಳಿಗಳಿಂದ ನೀರು ತರಬೇಕಾಗಿದೆ. ನಮ್ಮ ಗ್ರಾಮಕ್ಕೆ ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೂ ನೀರಿನ ಸಮಸ್ಯೆ ಹೇಳಿದರೆ ತಾತ್ಕಾಲಿಕವಾಗಿ ಇತ್ಯರ್ಥಗೊಳಿಸಿ ಹೋಗುತ್ತಾರೆ. ನಂತರ ಯಥಾಸ್ಥಿತಿ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕು, ನೀರು ಕೊಡಲಿಕ್ಕೆ ... |
ಟ್ಯಾಂಕರ್ ನೀರು ಸರಬರಾಜು ಸ್ಥಗಿತ : ನೀರಿನ ಸಮಸ್ಯೆ ನೀಗಿಸುವಂತೆ ಮನವಿ ಮಾಡಿದಾಗ ಅಧಿಕಾರಿಗಳು ನಾಮ್‌ಕಾವಸ್ಥೆಗೆ ಖಾಸಗಿ ಟ್ಯಾಂಕರ್‌ನಿಂದ ನೀರನ್ನು ಹಾಗಾಗ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದರೂ, ಆದರೆ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲೀಕನಿಗೆ ಹಣ ನೀಡಿಲ್ಲ ಎಂದು ಇತ್ತೀಚೆಗೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. |
ಚಂಚುರಾಯನಪಲ್ಲಿ ಗ್ರಾಮದಲ್ಲಿ ಸಿಆರ್‌ಎಫ್ ಅನುದಾನದಲ್ಲಿಖಾಸಗಿ ಟ್ಯಾಂಕರ್ ಮೂಲಕ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಒಂದು ಕೊಳವೆ ಬಾಕೊರೆಯಲಾಗಿದೆ ಆದರೂ ನೀರು ಸಿಗಲಿಲ್ಲ.ಖಾಸಗಿ ಕೊಳವೆಬಾ ಮಾಲೀಕರೊಂದಿಗೆ ಪಿಡಿಒ ಒಮ್ಮೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. – ರಾಮ ಲಿಂಗಾರೆಡ್ಡಿ, ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್... |
ತಾಲೂಕಿನ ಚಂಚಯರಾಯನಪಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆನನಗೆ ಮಾಹಿತಿ ಇಲ್ಲ. ಪಿಡಿಒ ಅವರ ಬಳಿ ಚರ್ಚೆ ಮಾಡಿ ಕೂಡಲೇ ನೀರು ಸರಬರಾಜು ಮಾಡುವಂತೆ ಸೂಚಿಸುತ್ತೇನೆ. – ಎಚ್.ಎನ್.ಮಂಜುನಾಥ ಸ್ವಾಮಿ, ಇಒ, ತಾಪಂ ಬಾಗೇಪಲ್ಲಿ |
ಜಿಲ್ಲೆಯಲ್ಲಿ ಹಾಸ್ಟೆಲ್ ಅವ್ಯವಸ್ಥೆ: ಸಿಇಒ ಗರಂ | Prajavani |
ಜಿಲ್ಲೆಯಲ್ಲಿ ಹಾಸ್ಟೆಲ್ ಅವ್ಯವಸ್ಥೆ: ಸಿಇಒ ಗರಂ |
Published: 12 ಫೆಬ್ರವರಿ 2011, 11:00 IST |
Updated: 12 ಫೆಬ್ರವರಿ 2011, 11:00 IST |
ಚಿತ್ರದುರ್ಗ: ಜಿಲ್ಲೆಯಲ್ಲಿನ ಹಾಸ್ಟೆಲ್ ಅವ್ಯವಸ್ಥೆಗಳ ಕುರಿತು ಜಿಲ್ಲಾ ಪಂಚಾಯ್ತಿ ಸಿಇಒ ರಂಗೇಗೌಡ ಕೆಂಡಾಮಂಡಲವಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. |
ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಿಇಒ, ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಸ್ಥಿತಿ ಸರಿ ಇಲ್ಲ. ಬಯೋಮೆಟ್ರಿಕ್ ಇಲ್ಲದೆ ಹಣ ಪಾವತಿಸಿದರೆ ನೀವೇ ನೇರ ಹೊಣೆಯಾಗುತ್ತೀರಿ. ಕಳೆದ ಎರಡು ತಿಂಗಳಿಂದ ಹಾಸ್ಟೆಲ್ ತೆರೆದಿಲ್ಲ ಎಂದು ಗ್ರಾಮವೊಂದರ ಜನತೆ ತಿಳಿಸಿದ್ದಾರೆ. ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. |
ತಾಂತ್ರಿಕ ನೆಪಗಳನ್ನು ಹೇಳಿ ಬಯೋಮೆಟ್ರಿಕ್‌ನಿಂದ ತಪ್ಪಿಸಿಕೊಳ್ಳಬಾರದು. ಶೇ. 20ರಷ್ಟು ಹಾಜರಾತಿ ಇಲ್ಲದಿದ್ದರೂ ಶೇ. 100ರಷ್ಟು ಹಣ ಪಾವತಿಯಾಗುತ್ತಿವೆ. ಕೆಲವೆಡೆ ಶೂನ್ಯ ಹಾಜರಾತಿಯೂ ಇದೆ ಎಂದು ಕಿಡಿಕಾರಿದರು. |
ಇತ್ತೀಚೆಗೆ ಕಾರ್ಯದರ್ಶಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಸರ್ಕಾರದಿಂದ ಪರಿಶೀಲನೆಗೆ ತಂಡವನ್ನೇ ಕಳುಹಿಸುತ್ತಾರೆ. ಹಾಸ್ಟೆಲ್ ಸ್ಥಿತಿಗತಿ ಸುಧಾರಿಸದಿದ್ದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. |
ಚಳ್ಳಕೆರೆ ತಾಲ್ಲೂಕಿನಲ್ಲಿ ಎಷ್ಟು ಹಾಸ್ಟೆಲ್‌ಗಳಿವೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ತಾ.ಪಂ. ಇಒ ಅವರನ್ನು ಕೇಳಿದಾಗ ಇಬ್ಬರು ತಬ್ಬಿಬ್ಬಾದರು. ಇಬ್ಬರೂ ಮಾಹಿತಿ ನೀಡಲು ಪರದಾಡಿದರು. |
ಜಿ.ಪಂ. ಅಧ್ಯಕ್ಷ ಸಿ. ಮಹಲಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಸ್ಥಿತಿ ಉತ್ತಮವಾಗಿಲ್ಲ. ಮಕ್ಕಳಿಗೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ನಿಮ್ಮ ಮಕ್ಕಳ ರೀತಿಯಲ್ಲಿ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. |
ವಿತರಣೆಯಾಗದ ಸಾಮಗ್ರಿಗಳು: ಹಾಸ್ಟೆಲ್‌ಗಳಿಗೆ ಹೊದಿಕೆ, ನೀರಿನ ಫಿಲ್ಟರ್ ಮತ್ತಿತರರ ಸಾಮಗ್ರಿಗಳನ್ನು ಬಿಆರ್‌ಜಿಎಫ್ ಯೋಜನೆ ಅಡಿ ಖರೀದಿಸಿದ್ದರೂ, ವಿದ್ಯಾರ್ಥಿಗಳಿಗೆ ವಿತರಿಸದೆ ಕೊಠಡಿಯಲ್ಲಿಡಲಾಗಿದೆ. ಯಾವುದನ್ನೂ ಬಳಸುತ್ತಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ನಿಷ್ಪ್ರಯೋಜಕ ಆಗುತ್ತಿವೆ. |
ವಾರ್ಡನ್‌ಗಳಿಗೆ ಸಾಮಗ್ರಿಗಳ ಸದ್ಬಳಕೆ ಬಗ್ಗೆ ಸೂಚಿಸಬೇಕು. ನಿಮಗೆ ನೋಡಿಕೊಳ್ಳಲು ಆಗುವುದಿಲ್ಲವೇ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಿಇಒ ತರಾಟೆಗೆ ತೆಗೆದುಕೊಂಡರು. |
ಜಿಲ್ಲೆಯಲ್ಲಿ 39 ಖಾಸಗಿ ಹಾಸ್ಟೇಲ್‌ಗಳಿವೆ. ಮುಖ್ಯ ಯೋಜನಾ ಅಧಿಕಾರಿ ಈ ಹಾಸ್ಟೆಲ್‌ಗಳ ತಪಾಸಣೆ ಮಾಡಿ ವರದಿ ನೀಡಬೇಕು. ಈ ವರದಿಯ ನಂತರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷ ಮಹಲಿಂಗಪ್ಪ ಸೂಚಿಸಿದರು. |
ಬೆಂಗಳೂರು ಉತ್ತರ: ಸದಾನಂದ ಗೌಡರಿಗೆ ಭರ್ಜರಿ ಜಯ | Karnataka Lok Sabha election 2014 Results Bangalore North BJP candidate DV Sadananda Gowda wins, - Kannada Oneindia |
ಬೆಂಗಳೂರು, ಮೇ 16: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಭರ್ಜರಿಯಾಗಿ ಜಯ ಸಾಧಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು (22,24, 847) ಮತದಾರರನ್ನು ಹೊಂದಿರುವ ಬೆಂಗಳೂರು ಉತ್ತರದಲ್ಲಿ ಶೇ. 56.47 ರಷ್ಟು ಮತದಾನ ನಡೆದಿತ್ತು. ಸದಾನಂದ ಗೌಡರು 7,18,326 ಮತ ಗಳಿಸಿದ್ದಾರೆ. |
ಬಿಜೆಪಿಯ ಸದಾನಂದ ಗೌಡರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಾರಾಯಣಸ್ವಾಮಿ (ಪಡೆದಿರುವ ಮತ 4,88,562) ಮತ್ತು ಜೆಡಿಎಸ್ಸಿನ ಅಬ್ದುಲ್ ಅಜೀಂ (ಪಡೆದಿರುವ ಮತ 92,681) ಅವರಿಂದ ಸ್ಪರ್ಧೆ ಎದುರಿಸಿದ್ದರು. ಎಎಪಿ ವತಿಯಿಂದ ಬಾಬು ಮ್ಯಾಥ್ಯೂ ಸಹ ಸ್ಪರ್ಧಿಸಿದ್ದರು. (ಸಮಯ 2.50) (ಕ್ಷೇತ್ರ ಪರಿಚಯ) |
ಬೆಂಗಳೂರು ಉತ್ತರ ಪಡೆದ ಸ್ಥಾನ ಪಕ್ಷ ಪಡೆದ ಮತಗಳು |
ಡಿ.ವಿ ಸದಾನಂದ ಗೌಡ |
1 ಬಿಜೆಪಿ 718326 |
2 ಕಾಂಗ್ರೆಸ್ 488562 |
ಅಬ್ದುಲ್ ಅಜೀಂ 3 ಜೆಡಿಎಸ್ 92681 |
ಬಾಬು ಮ್ಯಾಥ್ಯೂ 4 ಎಎಪಿ 28,107 |
lok sabha election result 2014 sadananda gowda bjp elections 2014 bangalore north lok sabha election 2014 ಲೋಕಸಭೆ ಚುನಾವಣೆ 2014 ಬೆಂಗಳೂರು ಉತ್ತರ ಚುನಾವಣಾ ಫಲಿತಾಂಶ |
BJP candidate, Former chief minister DV Sadananda Gowda wins Bangalore North constituency. He defeated C Narayana Swamy of Congress. Sadananda Gowd secured 7,18,326 votes while Narayana Swamy got 488562. |
ಸಂಪುಟ ಸರ್ಕಸ್ ತುಸು ವಿಳಂಬ: ದಿಲ್ಲಿಗೆ ಹೋದ ಸಿಎಂ ಬರಿಗೈಲಿ ವಾಪಸ್! | Cabinet Expansion Will be Delayed BSY returns from Delhi without new Cabinet list pod |
ಸಂಪುಟ ಸರ್ಕಸ್ ತುಸು ವಿಳಂಬ: ದಿಲ್ಲಿಗೆ ಹೋದ ಸಿಎಂ ಬರಿಗೈಲಿ ವಾಪಸ್! |
Bangalore, First Published 19, Nov 2020, 7:38 AM |
ಸಂಪುಟ ಸರ್ಕಸ್ ತುಸು ವಿಳಂಬ| ದಿಲ್ಲಿಗೆ ಹೋದ ಸಿಎಂ ಬರಿಗೈಲಿ ವಾಪಸ್| ಈಗ ತುರ್ತು ಏನಿದೆ: ಜೆ.ಪಿ.ನಡ್ಡಾ ಪ್ರಶ್ನೆ| ಬಿಎಸ್‌ವೈ ಭೇಟಿಗೆ ಸಿಗದ ಅಮಿತ್ ಶಾ |
ಬೆಂಗಳೂರು(ನ.19): ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ತುಸು ವಿಳಂಬವಾಗುವ ಸಾಧ್ಯತೆಯಿದೆ. ಏಕೆಂದರೆ, ವಿಸ್ತರಣೆ ಬಗ್ಗೆ ರಾಜ್ಯ ನಾಯಕತ್ವಕ್ಕೆ ಇರುವ ಆತುರ ಬಿಜೆಪಿ ವರಿಷ್ಠರಲ್ಲಿ ಕಂಡುಬರುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಗೆ ದೌಡಾಯಿಸಿ ಸಾಧ್ಯವಾದ ಎಲ್ಲ ಪ್ರಯತ್ನ ನಡೆಸಿದರೂ ಹೈಕಮಾಂಡ್ ತಣ್ಣನೆಯ ಪ್ರತಿಕ್ರಿಯೆ ನೀಡಿದೆ. ಹೀಗಾಗಿ, ಸಂ... |
ಬುಧವಾರ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಸಂಪುಟ ವಿಸ್ತರಣೆ -ಪುನಾರಚನೆ ಬಗ್ಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಈಗ ಅಂಥ ತುರ್ತು ಏನಿದೆ ಎಂದು ನಡ್ಡಾ ಅವರು ಪ್ರಶ್ನಿಸಿ, ಈ ಬಗ್ಗೆ ಆಲೋಚನೆ ನಡೆಸಿ ಅನಂತರ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಯಡಿಯೂರಪ್ಪ ಅವರಿಗೆ ತಿಳಿಸಿದರು ಎಂದು ಮೂಲಗ... |
ಇದರಿಂದಾಗಿ ಬುಧವಾರದ ಮುಖ್ಯಮಂತ್ರಿಗಳ ದೆಹಲಿ ಪ್ರವಾಸವು ನಿರೀಕ್ಷೆಯಂತೆ ನಡೆದಿಲ್ಲ ಎನ್ನಲಾಗಿದೆ. ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಮಾಹಿತಿ ಹೊಂದಿರುವ ಪಕ್ಷದ ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಪ್ರಯತ್ನಿಸಿದರಾದರೂ, ಅದು ಸಫಲವಾಗಲಿಲ್ಲ. ಉಪ ಚುನಾವಣೆಗೂ ಮುನ್ನ ಯಡಿಯೂರಪ್ಪ ಅವರು ಸಂಪುಟ ಕಸರತ್ತಿನ ಸಂಬಂಧ ದೆಹಲಿಗೆ ಹೋದಾಗಲೂ ಅಮ... |
ದೆಹಲಿಯಲ್ಲಿ ಯಡಿಯೂರಪ್ಪ: |
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ನಡ್ಡಾ ಅವರಿಗೆ ಮನವರಿಕೆ ಮಾಡಿಕೊಟ್ಟಯಡಿಯೂರಪ್ಪ ಅವರು, ಸಂಪುಟ ಪುನಾರಚನೆಯ ಅಗತ್ಯವನ್ನು ಮನದಟ್ಟು ಮಾಡಿಕೊಡಲು ಪ್ರಯತ್ನ... |
3-4 ದಿನದಲ್ಲಿ ತೀರ್ಮಾನ: ಸಿಎಂ |
ದಿಲ್ಲಿಯಲ್ಲಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿದ್ದೇನೆ. ಇತರೆ ಹಿರಿಯ ನಾಯಕರ ಜತೆ ಚರ್ಚಿಸಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ವಿಸ್ತರಣೆಯೋ, ಪುನಾರಚನೆಯೋ ಎಂಬ ಬಗ್ಗೆ 3-4 ದಿನದಲ್ಲಿ ಹೈಕಮಾಂಡ್ ತನ್ನ ತೀರ್ಮಾನ ತಿಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಪುಟ ವಿಸ್ತರಣೆ ಬಗ್ಗೆ ನಡ್... |
ಇನ್ನೂ 3 ಉಪಚುನಾವಣೆಗಳು ನಡೆಯಬೇಕಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಕನ್ನಡಪ್ರಭ ನ.12ರಂದೇ ವರದಿ ಮಾಡಿತ್ತು. |
ಮೌನವೇ ನನ್ನ ಉತ್ತರ... | Prajavani |
ಮೌನವೇ ನನ್ನ ಉತ್ತರ... |
ನಿನ್ನೆ ಮುಂಬೈನಲ್ಲಿ 'ಇಂದಿನ ರಾಜಕೀಯ ತಲ್ಲಣ'ಗಳ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬೆಂಗಳೂರಿಗೆ ಹೊರಡುವ ವಿಮಾನ ಏರಿದ್ದೆ. ಇತ್ತೀಚೆಗಿನ ವಿದ್ಯಮಾನಗಳು, ದೊಡ್ಡವರೆನಿಸಿಕೊಂಡವರ ವಾದ ವಿವಾದಗಳು, ನಾಯಕರೆನಿಸಿಕೊಂಡವರ ಲಂಗು ಲಗಾಮಿಲ್ಲದ ಮಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಬಗ್ಗೆ ಎಲ್ಲರೂ ಸಂಕೋಚ– ಸೂಕ್ಷ್ಮತೆ ಇಲ್ಲದೆ, ತಾವಾಡುವ ಮಾತುಗಳ ಪರಿಣಾಮದ ಬಗ್ಗೆ ಯೋಚಿಸದೆ, ದೂರು... |
ಸ್ವೀಡಿಶ್ ನಾಟಕಕಾರ ಅಗಸ್ಟ್ ಸ್ಟ್ರಿನ್ಡ್‌ಬರ್ಗ್‌ನ 'ಫಾದರ್' ಎನ್ನುವ ನಾಟಕ ನೆನಪಾಯ್ತು. ಗಾಢವಾಗಿ ಪ್ರೀತಿಸುತ್ತಾ ಬದುಕಿದ್ದ ಗಂಡನೊಬ್ಬನಿಗೆ ಅವನಿಗಾಗಿಯೇ ಅವತರಿಸಿದಂಥ ಸುಂದರ ಹೆಂಡತಿ. ಅವರಿಗೆ ಐದು ಮಕ್ಕಳು. ಗಂಡನಿಗೆ ಮಕ್ಕಳೆಂದರೆ ಪ್ರಾಣ. ಎಲ್ಲರಿಗೂ ದೇವರು ಎರಡು ಕಣ್ಣುಗಳನ್ನು ಕೊಟ್ಟರೆ, ನನಗೆ ಐದು ಕಣ್ಣುಗಳನ್ನು ಕೊಟ್ಟಿದ್ದಾನೆಂದು ಬೀಗುತ್ತಿದ್ದ. ಮಕ್ಕಳೇ ತನ್ನ ಪ್ರಪಂಚವೆಂದು ನಂಬಿ... |
ಅವನಿಗೂ ಅವನ ಹೆಂಡತಿಗೂ ಒಂದು ದಿನ ಇದ್ದಕ್ಕಿದ್ದಂತೆ ಜಗಳ ಶುರುವಾಯಿತು. ಹೆಂಡತಿಯ ನಡತೆಯ ಬಗ್ಗೆ ಅವನಿಗೆ ಸಂದೇಹ ಬಂದಿದೆ. ಒಬ್ಬ ಒಳ್ಳೆಯವನೊಳಗೆ ಅಡಗಿರುವ ಕೆಟ್ಟವನಿದ್ದಾನಲ್ಲಾ, ಅವನು ತುಂಬಾ ಅಪಾಯಕಾರಿ. ತಾನು ತುಂಬಾ ಒಳ್ಳೆಯವನೆಂಬ ಭ್ರಮೆಯಲ್ಲಿಯೇ ಬಹಳ ತಪ್ಪುಗಳನ್ನು ಮಾಡುತ್ತಾ ಹೋಗುತ್ತಾನೆ. ಅದು ಕೊನೆಗೆ ಅವನನ್ನು ಕೆಟ್ಟವನನ್ನಾಗಿಯೇ ಬದಲಾಯಿಸಿಬಿಡುತ್ತದೆ. |
ಒಳ್ಳೆಯವನಾಗಿದ್ದ ಗಂಡನ ಸಂದೇಹವನ್ನು ಭರಿಸಲಾಗದ ಹೆಂಡತಿ, ಅವನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸುತ್ತಾಳೆ. 'ಹೌದು, ನಾನು ನಡತೆಗೆಟ್ಟವಳೇ. ನೀನು, ನಿನ್ನವು ಅಂದುಕೊಂಡಿದ್ದ ಐದು ಮಕ್ಕಳಲ್ಲಿ ಒಂದು ಮಗು ನಿನಗೆ ಹುಟ್ಟಿದ್ದಲ್ಲ, ಹೋಗೋ...' ಎಂದು ಹೊರಟುಬಿಡುತ್ತಾಳೆ. |
ಅಲ್ಲಿ ಅವನಿಗೆ ನರಕದ ಬಾಗಿಲು ತೆರೆದುಕೊಳ್ಳುತ್ತದೆ. ಹೆಂಡತಿಯ ಆ ಕೆಲವು ಮಾತುಗಳಿಂದ ಅವನ ಬದುಕೇ ನಾಶವಾಗತೊಡಗುತ್ತದೆ. ನಿದ್ದೆ ಕಳೆದುಕೊಳ್ಳುತ್ತಾನೆ. ಅವನಲ್ಲಿನ ಗಾಂಭೀರ್ಯ ಕಾಣೆಯಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. 'ತನಗೆ ಹುಟ್ಟದ ಮಗು ಯಾವುದು' ಎಂದು ಅವನಿಗರಿವಿಲ್ಲದೆಯೇ ಅವನ ಕಣ್ಣುಗಳು ಸಂದೇಹದಿಂದ ಹುಡುಕಲಾರಂಭಿಸುತ್ತವೆ. ತನ್ನನ್ನು ಹೋಲದ, ತನ್ನಂತೆ ತೋರದ ಮಗು ಯಾವುದೆಂದು ಹುಡುಕಲಾರಂಭ... |
ಮಕ್ಕಳಾಡುವ ಆಟದಲ್ಲಿಯೂ ತಪ್ಪು ಕಂಡುಹಿಡಿಯಲು ಪ್ರಾರಂಭಿಸುತ್ತಾನೆ. ಸಹಿಸಲಾಗದ ತೊಳಲಾಟ ಅವನನ್ನು ಮರಣದ ಹೊಸ್ತಿಲಿಗೇ ಕೊಂಡೊಯ್ಯುತ್ತದೆ. ಇಂದಿನವರೆಗೆ ಬದುಕಿದ್ದ ಬದುಕಿನ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ. ಕೊನೆಗೆ ಸತ್ಯವನ್ನು ಹೇಳು ಎಂದು ಹೆಂಡತಿಗೆ ಶರಣಾಗುತ್ತಾನೆ. 'ಸುಮ್ಮನೆ ನಿಮ್ಮ ಮೇಲಿನ ಕೋಪದಿಂದ ಆ ಮಾತು ಆಡಿದೆ' ಎನ್ನುತ್ತಾಳೆ ಹೆಂಡತಿ. ಅಷ್ಟರಲ್ಲಾಗಲೇ ಆ ಸತ್ಯವನ್ನು ನಂಬದ ಸ್ಥಿತಿಯನ... |
ನನ್ನನ್ನು ಈಗಲೂ ಕಾಡುವ ನಾಟಕವದು. |
ನನ್ನ ಪ್ರೇಯಸಿಯೊಬ್ಬಳಿದ್ದಳು. ಉತ್ಸಾಹದ ಚಿಲುಮೆಯಂತಿದ್ದಳು. ಪ್ರೇಮ, ಕಾಮ ಎರಡರಲ್ಲಿಯೂ ಅವಳಿಗೆ ಶರಣಾಗುವುದಲ್ಲದೆ ಬೇರೆ ದಾರಿ ಇರಲಿಲ್ಲ. ಆದರೆ ಜಗಳ ಅಂತ ಬಂದರೆ ರಾಕ್ಷಸಿ. ಮಕ್ಕಳು ಜಗಳವಾಡುವಂತೆ ಅರ್ಥವಿಲ್ಲದ ಗಾಯಗಳನ್ನು ಉಂಟುಮಾಡುವ ಜಗಳಗಳು. ಹೆತ್ತವರ ಮೇಲೆ ಧಾವಿಸಿ ಬಂದು ಬೀಳುವ ಮಕ್ಕಳಿಗೆ ಅವರಲ್ಲಿ ತಮ್ಮ ಭಾರವನ್ನು ಹೊರಬಲ್ಲ ಶಕ್ತಿ ಇದೆಯೇ ಇಲ್ಲವೇ ಎಂದು ಯೋಚಿಸುವುದು ಗೊತ್ತಿರುವುದಿಲ್ಲ... |
ಪ್ರೀತಿಯಾಗಲಿ ಕೋಪವಾಗಲಿ ಹಾಗೆಯೇ ಮೇಲೆ ಮುಗಿಬೀಳುವ ಪ್ರೇಯಸಿ, ಇದ್ದಕ್ಕಿದ್ದಂತೆ ಒಂದು ರಾತ್ರಿ 'ನಿನ್ನನ್ನು ಈಗಲೇ ನೋಡಬೇಕು' ಎಂದು ಕರೆಯುತ್ತಿದ್ದಾಳೆ. ನಾನು ಬೇರೆ ಊರಿನಲ್ಲಿ ಚಿತ್ರೀಕರಣದಲ್ಲಿದ್ದೇನೆ ಎಂದು ಹೇಳಿದರೆ ನಂಬಲು ನಿರಾಕರಿಸುತ್ತಿದ್ದಾಳೆ. 'ಇಲ್ಲಾ, ನೀನು ಬೇರೆ ಯಾರ ಜತೆಗೋ ಇದ್ದೀಯಾ. ನಾನು ನಿನಗೆ ಮುಖ್ಯಳಲ್ಲ' ಎಂದು ಸಿಡುಕುತ್ತಿದ್ದಾಳೆ. ಕೇಳಲೇ ಆಗದ ಒರಟು ಮಾತುಗಳಿಂದ ಬೈಯುತ್ತ... |
ನನ್ನ ಮನಸ್ಸು ಭಾರವಾಯಿತು. ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಕೋಪ ಮತ್ತು ನಿಜವಾಗಲೂ ಇನ್ನೊಬ್ಬನೊಡನಿದ್ದಾಳೆಯೇ ಎನ್ನುವ ಕಿರಿಕಿರಿ ಎರಡೂ ಇದೆ. ಒತ್ತಡದ ಶೂಟಿಂಗ್‌ನ ಹಗಲುಗಳು, ರಾತ್ರಿಗಳು ನನ್ನ ಕಣ್ಣ ಮುಂದಿರುವುದರಿಂದ ಅವಳಿಗೆ ಸಮಯ ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. 'ನನ್ನನ್ನು ಕೇಳುವ ಹಕ್ಕು ನಿನಗೆ ಇದೆಯಾ?' ಎಂದು ಕೇಳಿದರೆ ಉತ್ತರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅವಳು ಈಗ ಇನ... |
ಒಂದು ವಾರದ ಬಳಿಕ ನನ್ನ ಬಳಿ ಬಂದವಳು ನನ್ನ ಮೌನವನ್ನು ಕಂಡು ಹೆದರಿ 'ಛೀ, ಸುಮ್ಮನೇ ಹೇಳಿದೆ ಕಣೋ... ಅದನ್ನು ನೀನು ಹೇಗೆ ನಂಬಿದೆ?' ಎಂದು ಮತ್ತೆ ಜಗಳಕ್ಕೆ ನಿಂತಳು. ಆದರೆ ಅಲ್ಲಿಯವರೆಗೆ ಅವಳ ಪ್ರೇಮವೋ ಕಾಮವೋ ತಂದ ಎಲ್ಲ ಸಂತೋಷಗಳನ್ನು ಅವಳಾಡಿದ ಕೆಲವು ಮಾತುಗಳು ನುಂಗಿಹಾಕಿ ವಿಶ್ವರೂಪ ಪಡೆದು ನಿಂತಿವೆ. ಅವಳು ಹೇಳುತ್ತಿರುವ ಯಾವ ಕಾರಣಗಳೂ, ಸಮಾಧಾನಿಸುತ್ತಿರುವ ಮಾತುಗಳೂ ನನ್ನ ತಲೆಗೇರುತ್ತಿಲ... |
ಅವಳನ್ನು ಅಂದು ಕ್ಷಮಿಸಿದೆ. ಆದರೆ ಅಷ್ಟು ಸುಲಭದಲ್ಲಿ ಮರೆಯಲಾಗಲಿಲ್ಲ. ಅವಳಲ್ಲಿದ್ದ ಪ್ರೇಮವನ್ನೂ ಕಾಮವನ್ನೂ ಈ ಹಿಂದಿನ ಹಾಗೆ ರಸಿಕನಾಗಿ ಸುಖಿಸಲಾಗಲಿಲ್ಲ. ಎದೆಯ ಮೂಲೆಯಲ್ಲೆಲ್ಲೋ ಅವಳಾಡಿದ ಮಾತುಗಳಿವೆಯಲ್ಲ... |
ಕೆಲವು ವರ್ಷಗಳ ಹಿಂದೆ ಇದೇ ರೀತಿ ಒಂದು ನೋವಿನ ಸಂದಿಗ್ಧದಲ್ಲಿ ಸಿಲುಕಿದ್ದೆ. ಈ ಸಲ ಅಂಥ ಮಾತುಗಳನ್ನು ಹೇಳಿದವನೂ ನಾನಲ್ಲ, ಕೇಳಿಸಿಕೊಂಡವನೂ ನಾನಲ್ಲ. ಹೇಳಿದವರು ನನ್ನ ಅಮ್ಮ. ಕೇಳಿಸಿಕೊಂಡವಳು ನನ್ನ ಹೆಂಡತಿ. ನಾನು ಪ್ರೀತಿಸುವ ಎರಡು ಹೆಣ್ಣುಗಳ ಮಧ್ಯದಲ್ಲಿ ನಾನು ಯಾರ ಪಕ್ಕದಲ್ಲಿದ್ದೇನೆಂದು ಹೇಳಬೇಕಾದ ಸಂದಿಗ್ಧ. |
ಅತ್ತೆಗೂ ಸೊಸೆಗೂ ಮಾತಿನ ಜಗಳ. ವಿಷಯ ಏನಪ್ಪಾ ಅಂದರೆ, ಎಲ್ಲಾ ಅತ್ತೆಯಂದಿರಲ್ಲೂ ಇರುವ, 'ಸೊಸೆಯಂದಿರಿಗೆ ಮಕ್ಕಳನ್ನು ಬೆಳೆಸಲು ಬರುವುದಿಲ್ಲ' ಎಂಬ ಮೂರ್ಖ ಮುಗ್ಧತೆ. ಅದು ಬದಲಾಗಲೇ ಇಲ್ಲ. ಎಲ್ಲಾ ಸೊಸೆಯಂದಿರಿಗೂ 'ನಮಗೆ ಗೊತ್ತಿಲ್ವಾ?' ಎಂಬ ಮೂರ್ಖ ಸ್ವಾಭಿಮಾನವೂ ಬದಲಾಗಿಲ್ಲ. ಈ ಮುಗ್ಧತೆಗೂ ಸ್ವಾಭಿಮಾನಕ್ಕೂ ನಡೆಯುವ ಜಗಳದಲ್ಲಿ ಯಾರ ಪಕ್ಷ ನಿಲ್ಲಬೇಕು ನಾನು? |
ನನ್ನ ಎರಡನೇ ಮಗಳು ಮೇಘನಾ 'ಐಸ್ ಕ್ರೀಂ ಬೇಕು' ಎಂದಿದ್ದಕ್ಕೆ ತಂದುಕೊಟ್ಟಿದ್ದಾಳೆ ಹೆಂಡತಿ. 'ಹಾಗೆ ಕೇಳಿದ್ದೆಲ್ಲ ಕೊಡಿಸಬೇಡ. ಮಗುವಿಗೆ ಜ್ವರ, ನೆಗಡಿ ಬಂದೀತೆಂದು ತಾಯಿ ಹೇಳಿದ್ದಾಳೆ. 'ಮಗಳಿಗೆ ಏನೂ ಆಗುವುದಿಲ್ಲ' ಎಂದಿದ್ದಾಳೆ ಹೆಂಡತಿ. 'ನಿನ್ನ ಈ ಥರದ ಬುದ್ಧಿಯಿಂದಲೇ ಇದ್ದ ಮಗನನ್ನು ಬಲಿಕೊಟ್ಟೆ' ಎಂದು ತೀರಿಹೋದ ಮಗನನ್ನು ಮತ್ತೆ ನೆನಪಿಸಿದ್ದಾಳೆ ಅಮ್ಮ. 'ನನ್ನ ಮಗನನ್ನು ನಾನೇ ಕೊಂದೆ ಎಂದ... |
ಮೌನವೇ ನನ್ನ ಉತ್ತರ... ಮಾತುಗಳಿಂದ ಜೀವನವನ್ನೇ ಕಳೆದುಕೊಂಡವರ ಎಣಿಕೆಯಿದೆಯಲ್ಲಾ... ಅದು ಆಕಾಶದ ನಕ್ಷತ್ರಗಳಂತೆ, ಎಣಿಸಿ ಮುಗಿಸಲು ಸಾಧ್ಯವೇ ಆಗದ್ದು. |
ಚಂದ್ರಯಾನ 2 : ಇಸ್ರೋ ಕಳಿಸಿದ್ದ ರೋವರ್ ಸುರಕ್ಷಿತ ರೀತಿಯಲ್ಲಿ ಪತ್ತೆ..! | Chennai techie tracks movement of Chandrayaan-2 Pragyan rover waiting for ISRO Response |
ಭಾರತದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ್ 2 ನಲ್ಲಿ ಹಾರಿಬಿಟ್ಟಿದ್ದ ರೋವರ್ ಸುರಕ್ಷಿತವಾಗಿರುವುದನ್ನು ಚೆನ್ನೈ ಟೆಕ್ಕಿಯೊಬ್ಬರು ಪತ್ತೆ ಹಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. |
New Delhi, First Published Aug 2, 2020, 7:30 AM IST |
ನವದೆಹಲಿ(ಆ.02): ಚಂದ್ರಯಾನ 2 ಉಡ್ಡಯನದ ಭಾಗವಾಗಿ ಕಳೆದ ವರ್ಷ ಇಸ್ರೋ ಹಾರಿಬಿಟ್ಟಿದ್ದ ರೋವರ್ ಸುರಕ್ಷಿತವಾಗಿರಬಹುದು ಎಂಬ ಸಣ್ಣ ಸುಳಿವೊಂದು ಸಿಕ್ಕಿದೆ. |
ಕಳೆದ ಮೇ ತಿಂಗಳಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿರುವ ಕೆಲ ಚಿತ್ರಗಳನ್ನು ವಿಶ್ಲೇಷಿಸಿ ಚೆನ್ನೈ ಮೂಲದ ಟೆಕ್ಕಿ ಷಣ್ಮುಗ ಸುಬ್ರಮಣಿ ಈ ಮಾಹಿತಿ ನೀಡಿದ್ದಾರೆ. ಅವರ ಈ ವಿಶ್ಲೇಷಣೆಯನ್ನು ಇಸ್ರೋ ಕೂಡಾ ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ ಯಾದರೂ, ಈ ಕುರಿತು ನಾಸಾದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದೆ. |
ಚಂದ್ರಯಾನ 2 ಯೋಜನೆಯಲ್ಲಿ ರೋವರ್ ಹೊತ್ತಿದ್ದ ಲ್ಯಾಂಡರ್ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ನಿಗದಿತ ಸ್ಥಳದಲ್ಲಿ ಇಳಿಯಬೇಕಿತ್ತು. ಆದರೆ ಸಾಫ್ಟ್‌ವೇರ್ ತೊಂದರೆಯಿಂದಾಗಿ ಕಡೆಯ ಹಂತದಲ್ಲಿ ಲ್ಯಾಂಡರ್ ತನ್ನ ದಿಕ್ಕು ತಪ್ಪಿ ಬೇರೊಂದು ಜಾಗದ ಮೇಲೆ ಅಪ್ಪಳಿಸಿತ್ತು. ಈ ವೇಳೆ ಲ್ಯಾಂಡರ್ ಮತ್ತು ಇಳಿದ ಮೇಲೆ ಸಂಶೋಧನೆಗೆಂದು ಕಳುಹಿಸಿದ್ದ ರೋವರ್ ಛಿದ್ರವಾಗಿರಬಹುದು ಎಂದು ಎಣಿಸಲಾಗಿತ್ತು. |
ಆದರೆ ಕಳೆದ ಮೇ ನಲ್ಲಿ ಇಸ್ರೋ ಬಿಡುಗಡೆ ಮಾಡಿರುವ ಚಿತ್ರದಲ್ಲಿ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಎರಡೂ ಸುಸ್ಥಿತಿಯಲ್ಲಿರುವ ರೀತಿಯಲ್ಲಿ ಕಂಡುಬಂದಿದೆ. ಜೊತೆಗೆ ರೋವರ್ ತಾನು ಬಿದ್ದ ಸ್ಥಳದಿಂದ ಕೆಲ ದೂರ ಸಂಚರಿಸಿರುವ ಕುರುಹೂಗಳು ಕಾಣಿಸುತ್ತಿವೆ ಎಂದು ಸುಬ್ರಮಣಿ ಹೇಳಿದ್ದಾರೆ. |
ಸಾಗರ: ಸೀಲ್‌ಡೌನ್ ಪ್ರದೇಶದ ಕುಟುಂಬಗಳಿಗೆ ಸಮರ್ಪಕ ಆಹಾರ ಒದಗಿಸಿ: ಡಿಎಸ್‌ಎಸ್‌ಆಗ್ರಹ | Hosanavika |
Home ಆರೋಗ್ಯ ಸಾಗರ: ಸೀಲ್‌ಡೌನ್ ಪ್ರದೇಶದ ಕುಟುಂಬಗಳಿಗೆ ಸಮರ್ಪಕ ಆಹಾರ ಒದಗಿಸಿ: ಡಿಎಸ್‌ಎಸ್‌ಆಗ್ರಹ |
ಸಾಗರ: ಸೀಲ್‌ಡೌನ್ ಪ್ರದೇಶದ ಕುಟುಂಬಗಳಿಗೆ ಸಮರ್ಪಕ ಆಹಾರ ಒದಗಿಸಿ: ಡಿಎಸ್‌ಎಸ್‌ಆಗ್ರಹ |
ಸಾಗರ : ಕೊರೋನಾ ಹಿನ್ನೆಲೆ ಯಲ್ಲಿ ಸೀಲ್‌ಡೌನ್ ಪ್ರದೇಶದ ಒಳಗೆ ಇರುವ ಕುಟುಂಬಗಳಿಗೆ ಸರ್ಕಾರದಿಂದ ಆಹಾರ ಸಾಮಗ್ರಿಗಳನ್ನು ಸಮರ್ಪಕ ವಾಗಿ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕಷ್ಣಪ್ಪ ಬಣ) ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. |
ದೇಶಾದ್ಯಂತ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಸಾವುನೋವಿನ ಸಂಖ್ಯೆ ಸಹ ಜಸ್ತಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಾಗರ ತಾಲ್ಲೂಕಿನಲ್ಲಿ ಸಹ ಕೊರೋನಾ ಪ್ರಕರಣ ಜಸ್ತಿಯಾಗುತ್ತಿದ್ದು, ಸೋಂಕಿತರ ಮನೆ ಸುತ್ತಮುತ್ತಲೂ ಸೀಲ್‌ಡೌನ್ ಪ್ರದೇಶ ಮಾಡಲಾಗುತ್ತಿದೆ. ಆದರೆ ಸೀಲ್‌ಡೌನ್ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಮನೆಯಿಂದ ಹೊರಗೆ ಬರುವಂತೆ ಇರುವುದಿಲ್ಲ. ಆದರೆ ಇವರಿ... |
ಕೊರೋನಾ ಸೋಂಕು ಕಂಡು ಬಂದ ಸೀಲ್‌ಡೌನ್ ಪ್ರದೇಶದಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸಲು ಕೊರೋನಾ ವಾರಿಯರ್‍ಸ್ ತಂಡ ರಚಿಸಲಾಗಿದೆ. ಈ ತಂಡ ಸೀಲ್‌ಡೌನ್ ಪ್ರದೇಶದ ಪ್ರತಿ ಮನೆಗೆ ಭೇಟಿ ನೀಡಿ ಅವರ ಅಗತ್ಯ ಪೂರೈಸುವ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲ ವಾಗಿದೆ. ಅಧಿಕಾರಿಗಳು ಕಣ್ಣೊರೆಸುವ ಕೆಲಸ ಮಾಡುತ್ತಿzರೆ. ಪ್ರಾಮಾಣಿಕ ವಾಗಿ ಸೀಲ್‌ಡೌನ್ ಪ್ರದೇಶದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಮನವಿಯಲ್ಲಿ ಹೇಳಲಾಗ... |
ಸರ್ಕಾರ ಕೂಡಲೇ ಕೊರೋನಾ ವಾರಿಯರ್‍ಸ್ ತಂಡಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿ ಸೀಲ್‌ಡೌನ್‌ಗೆ ಒಳಪಟ್ಟ ಪ್ರತಿ ಕುಟುಂಬಗಳಿಗೆ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಸಮಿತಿ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳ ಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. |
ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ಲಕ್ಷ್ಮಣ ಸಾಗರ್, ಧರ್ಮರಾಜ್ ಬೆಳಲಮಕ್ಕಿ, ಎಸ್.ವಿ.ಹಿತಕರ ಜೈನ್, ರವಿ ಕುಗ್ವೆ, ನಾಗರಾಜಸ್ವಾಮಿ, ಗಣಪತಿ ಮಂಡಗಳಲೆ ಇನ್ನಿತರರಿದ್ದರು. |
ಶೂನ್ಯ ಪ್ರಕರಣ ದಾಖಲಾಗಲು ಎಲ್ಲರ ಶ್ರಮ ಅಗತ್ಯ: ಸಿಎಂ | Udayavani – ಉದಯವಾಣಿ |
Thursday, 06 Aug 2020 | UPDATED: 03:58 AM IST |
Team Udayavani, Jul 28, 2020, 4:59 PM IST |
ಮುಂಬಯಿ, ಜು. 27: ಆಗಸ್ಟ್ ಮೊದಲ ವಾರದಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಮತ್ತು ರೋಗಿಗಳಿಗೆ ಉತ್ತಮ ನಿರ್ವಹಣೆಯನ್ನು ನೀಡಲು ಎಲ್ಲರ ಶ್ರಮ ಅಗತ್ಯ ಎಂದು ಹೇಳಿದ್ದಾರೆ. |
ರಾಜ್ಯದ ಅನೇಕ ಜಿಲ್ಲೆಗಳು ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿವೆ. ಕಳಪೆ ದ್ವಿಗುಣ ದರ ಮತ್ತು ಹೆಚ್ಚಿನ ಸಾವಿನ ಪ್ರಮಾಣಕ್ಕೆ ಕಾರಣವಾಗಿದೆ. ಸಾವಿನ ಪ್ರಮಾಣವು ರಾಜ್ಯದಲ್ಲಿ ಶೇ. 3 ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಶೂನ್ಯಕ್ಕೆ ತರಬೇಕು. ಚಿಕಿತ್ಸೆಯ ಸಾಲಿನಲ್ಲಿ ಏಕರೂಪತೆಯನ್ನು ತರಲು ಸಹಾಯ ಮಾಡುತ್ತದೆ. ಇದು ಸಾವುನೋವುಗಳ ಕುಸಿತಕ್ಕೆ ಕಾರಣವಾಗುತ್ತದೆ ಠಾಕ್ರೆ ಹೇಳಿದ... |
ಆರೋಗ್ಯ ಮೂಲ ಸೌಕರ್ಯದತ್ತ ಚಿತ್ತ : ರಾಜ್ಯ ಸರಕಾರ ಲಾಕ್‌ಡೌನ್ ಸಡಿಲಿಕೆಯ ಚಿಂತನೆ ನಡೆಸುತ್ತಿದ್ದು ಈ ಹಿನ್ನಲೆಯಲ್ಲಿ ಎಲ್ಲ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸುವ ನಿರೀಕ್ಷೆಯಿದೆ. ಸಡಿಲಿಕೆ ಬಳಿಕ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತದೆ. ಆದರೆ ಇದು ಇತರ ಕೆಲವು ದೇಶಗಳಲ್ಲಿ ಕಂಡುಬರುವಂತೆ ಎರಡನೇ ತರಂಗವಾಗಿ ಬದಲಾಗಬಾರದು. ಆರೋಗ್ಯದ ಮೂಲಸೌಕರ್ಯಗಳ ಜಿಲ್ಲಾ ಮಟ್ಟದ... |
ಔಷಧಗಳ ಅನಗತ್ಯ ಬಳಕೆ ಸಲ್ಲದು : ಆ್ಯಂಟಿವೈರಲ್ ಔಷ ಗಳಾದ ರೆಮ್ಡೆಸಿವಿರ್ ಮತ್ತು ಫೆವಿಪಿರವಿರ್ ಅನ್ನು ಬಳಸುವ ಮಾರ್ಗಸೂಚಿಗಳನ್ನು ಅನುಸರಿಸಲು ಠಾಕ್ರೆ ಅವರು, ವೈದ್ಯರ ತಂಡಗಳಿಗೆ ನಿರ್ದೇಶನ ನೀಡಿದರು. ಆ್ಯಂಟಿವೈರಲ್ ಔಷಧಗಳ ಉಪಯುಕ್ತತೆ ಮತ್ತು ಆಮ್ಲಜನಕ ಹಾಸಿಗೆಗಳ ನಿರ್ವಹಣೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯರಿಗೆ ಮಾರ್ಗದರ್ಶನ ನೀಡಲಾಯಿತು. ಇದು ಜೀವಗಳನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರ ವ... |
ಆ್ಯಂಟಿವೈರಲ್ ಔಷಧಗಳ ಅನಗತ್ಯ ಬಳಕೆಯನ್ನು ವೈದ್ಯರು ತಪ್ಪಿಸಬೇಕು ಎಂದು ರಾಜ್ಯಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಿರುವ ಡಾ| ಸಂಜಯ್ ಓಕ್ ಹೇಳಿದರು. |
ಇಂದು... ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನ... |
ನನ್ನ ರಾಜಕೀಯ ಜೀವನದ ಇಂದಿನ ಸ್ಥಾನಮಾನಕ್ಕೆ ಸಹಕರಿಸಿದ ನನ್ನ ಎಲ್ಲ ಸಂಘಟಣ ಸದಸ್ಯರಿಗಳಿಗೆ, ಪಕ್ಷದ ನಿಸ್ಪ್ರಹ ಕಾರ್ಯಕರ್ತರಿಗೆ, ಮಾರ್ಗದರ್ಶನ ನೀಡಿದ ಸಂಘದ ವಿವಿಧ ಪ್ರಚಾರಕರಿಗೆ, ಪಕ್ಷದ ನಾಯಕರುಗಳಿಗೆ ಹಾಗು ಹಿರಿಯರಿಗೆ ಪಕ್ಷ ಸಂಸ್ಥಾಪನಾ ದಿನದಂದು ಕೃತಜ್ಞತೆಯಿಂದ ನೆನೆದು ಸಮಾಜಕ್ಕೆ ಮತ್ತೊಮ್ಮೆ ನನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದೇನೆ. |
Subsets and Splits
No community queries yet
The top public SQL queries from the community will appear here once available.