text
stringlengths
0
61.5k
ಆಲೋಚಿಸಿ ನೋಡಿ.
ಮೇಲು-ಕೀಳು ಮೂಡುವಲ್ಲಿ ಭಾಷೆಯ ಪಾತ್ರ ಇಲ್ಲ ಎಂದು ನೀವು ಹೇಳಿದ್ದೀರ.
ಕೆಲವು ಉದಾಹರಣೆಗಳನ್ನು ನಿಮ್ಮ ಮುಂದಿಟ್ಟು, ಆ ಬಗ್ಗೆ ನೀವು ಆಲೋಚಿಸಿ ಎಂದು ಕೇಳಿಕೊಳ್ಳಬಲ್ಲೆನಷ್ಟೇ.
ತನ್ನ ಊರಿನಲ್ಲೇ 'ಹ'ಕಾರ ಕೇಳದ ಮಗು, ತನ್ನ ನುಡಿಯಲ್ಲೂ 'ಹ'ಕಾರ ಬಿಟ್ಟಿರುತ್ತದೆ. ಅದಕ್ಕೆ ಕನ್ನಡವೇ ಬರೋಲ್ಲ ಎನ್ನೋದು ಆ ಮಗುವಲ್ಲಿ ಕೀಳರಿಮೆ ಹುಟ್ಟು ಹಾಕಿದಂತೆ ತಾನೇ?
ಹ್ಯುಮಾನಿಟೀಸ್ ಬಗ್ಗೆ ತಿಳಿದವರಲ್ಲಿ ಈ ಮಾತು ಹೇಳಿ ನೋಡಿ, ಒಬ್ಬರ ನುಡಿಯನ್ನು ಆಡಿಕೊಳ್ಳುವುದು, ನುಡಿ ಚೆನ್ನಾಗಿಲ್ಲ ಎನ್ನುವುದು, ನುಡಿ ಸರಿಯಲ್ಲ ಎನ್ನೋದು, 'ರೇಷಿಯಲ್ ಬಿಹೇವಿಯರ್' ಎಂದೇ ಬಣ್ಣಿಸುತ್ತಾರೆ.
ಮಹಾಪ್ರಾಣ ಉಲಿಯಲಾರದ ಮಕ್ಕಳು, ಶಾಲೆಯಲ್ಲಿ ಅದೆಷ್ಟು ಬಾರಿ ಬೈಸಿಕೊಂಡಿರ್ತಾರೋ ದೇವರೇ ಬಲ್ಲ. ಅವರಲ್ಲಿ, ತಮ್ಮ ನುಡಿಯ ಬಗ್ಗೆ, ತಮ್ಮ ನಾಲಗೆಯ ಬಗ್ಗೆ ಕೀಳರಿಮೆ ಹುಟ್ಟು ಹಾಕಿದಂತೆ ತಾನೇ?
ಈ ವಿಚಾರವಾಗಿ ನಾನು ಮೇಷ್ಟ್ರುಗಳನ್ನು ದೂರುವುದಿಲ್ಲ. ಬದಲಾಗಿ, ಈ ವ್ಯವಸ್ಥೆ ನಿರ್ಮಾಣವಾಗಿದೆ, ಅದನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದರೆ ಒಳ್ಳೆಯ ವ್ಯವಸ್ಥೆ ತಾನಾಗೇ ಮೂಡುತ್ತದೆ ಎಂಬ ನಂಬಿಕೆ ನನ್ನದು.
ಇದೇ ವಿಷಯದಲ್ಲಿ ಮೂಡಿ ಬಂದಿದ್ದ ಈ ಬ್ಲಾಗನ್ನೊಮ್ಮೆ ನೋಡಿ: http://enguru.blogspot.com/2008/11/blog-post.html
> ಮಹಾಪ್ರಾಣ ಉಲಿಯಲಾರದ ಮಕ್ಕಳು, ಶಾಲೆಯಲ್ಲಿ ಅದೆಷ್ಟು ಬಾರಿ ಬೈಸಿಕೊಂಡಿರ್ತಾರೋ ದೇವರೇ ಬಲ್ಲ. ಅವರಲ್ಲಿ, ತಮ್ಮ ನುಡಿಯ ಬಗ್ಗೆ, ತಮ್ಮ ನಾಲಗೆಯ ಬಗ್ಗೆ ಕೀಳರಿಮೆ
> ಹುಟ್ಟು ಹಾಕಿದಂತೆ ತಾನೇ?
ಒಪ್ಪಿದೆ. ಆದರೆ, ಕೇವಲ ಮಹಾಪ್ರಾಣ ಉಲಿಯುವುದಕ್ಕಷ್ಟೇ ಇದು ಸೀಮಿತವಾಗಿರುವುದಿಲ್ಲವಲ್ಲ?
ನಾವು ಹುಟ್ಟು ಹಾಕುವ ಹೊಸ ಪದಗಳನ್ನು ಉಚ್ಚರಿಸಲಾಗದಿದ್ದಾಗಲೂ ಇದೇ ರೀತಿಯ ಬೈಗುಳ ಇದ್ದೇ ಇರುತ್ತದೆಯಲ್ಲವೆ?
ಉದಾಹರಣೆಗೆ, ಅಚ್ಚಕನ್ನಡದ ಪದ "ಚಿಕ್ಕಪ್ಪ" – ಇದನ್ನು ಸಾಕಷ್ಟು ಮಕ್ಕಳು "ಚಿಪ್ಪಕ್ಕ" ಎನ್ನುತ್ತಾರೆ. ಹೊರನೋಟಕ್ಕೆ ಇದೇನೂ ಕಠಿಣ ಪದವಲ್ಲ. ಈಗ ಈ ಸಮಸ್ಯೆಯನ್ನು ಪರಿಹರಿಸಲು ಹೊಸ ಪದವನ್ನು ಹುಟ್ಟುಹಾಕುವುದೋ ಅಥವಾ ಮಗುವಿಗೆ ಸರಿಯಾಗಿ ಉಚ್ಚರಿಸುವಂತೆ ಕಲಿಸುವುದೋ?
ನನಗನ್ನಿಸುವುದು, ಈ ಸಮಸ್ಯೆಯನ್ನು ಸರಿ ಪಡಿಸಲು, ನಾವು ಕಲಿಸುವ ರೀತಿಯನ್ನು ಬದಲಿಸಬೇಕು.
ಕೀಳರಿಮೆ ಬರದ ರೀತಿಯಲ್ಲಿ ತಿಳಿಸಿ ಹೇಳುವ ಶಿಕ್ಷಕರನ್ನು ತಯಾರಿಸಬೇಕು. ಕೇವಲ ಬೈಯ್ಯುವುದರಿಂದ ತಿದ್ದಲಾಗುವುದಿಲ್ಲ ಎನ್ನುವುದು ಶಿಕ್ಷಕರಿಗೆ ಮನವರಿಕೆಯಾಗಬೇಕು.
ಇಲ್ಲದಿದ್ದರೆ ಕೇವಲ ಪದಗಳ ಬದಲಾವಣೆಯಿಂದ ಬೈಗುಳನ್ನೂ ಮತ್ತು ತತ್ಪರಿಣಾಮವಾಗಿ ಉಂಟಾಗುವ ಕೀಳರಿಮೆಯನ್ನೂ ಹೋಗಲಾಡಿಸಲಾಗುವುದಿಲ್ಲ.
ಹೊಸದಾಗಿ ಹುಟ್ಟು ಹಾಕುವ ಪದಗಳು, ಆದಷ್ಟು ಆಡುನುಡಿಗೆ ಹತ್ತಿರ ಇರಬೇಕು.
ಆಗ, ಈ ತೊಂದರೆಗಳು ಬರುವುದಿಲ್ಲ. (ಸಾಧ್ಯವಾದಲ್ಲಿ) ಆಡುನುಡಿಯಲ್ಲಿ ಇರುವ ಪದಗಳ ಬಳಕೆ ಮಾಡುವುದೇ ಹೆಚ್ಚು ಸೂಕ್ತ.
ಚಿಪ್ಪಕ್ಕ ಎನ್ನುವ ಮಗು ಸ್ವಲ್ಪ ದಿನಗಳಲ್ಲೇ, ತನ್ನ ಪರಿಸರದಲ್ಲಿ 'ಚಿಕ್ಕಪ್ಪ' ಎನ್ನುವುದು ಕೇಳಿ, ಅದನ್ನು ಬಳಸಲು ತೊಡಗುತ್ತದೆ.
ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.
ನೀವು ಕಿವಿಗೊಟ್ಟು ಕೇಳಿದರೆ ನಿಮಗೆ ತಿಳಿಯುವುದು, ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲ ಎಂದು. ಅವರು ಮಾತಾಡುತ್ತಿರುವುದನ್ನೇ ಒಪ್ಪಿಕೊಳ್ಳುವ ಮನಸ್ಥಿತಿ ಸಾಕು.
ಕನ್ನಡಿಗರೆಲ್ಲರ ಬಾಯಲ್ಲಿ ಮಹಾಪ್ರಾಣ ಹೊರಡಿಸಲು ಹರಸಾಹಸ ಪಡಬೇಕಿಲ್ಲ, ನನಗನ್ನಿಸೋದು ಅದು ಸಾಧ್ಯವೂ ಇಲ್ಲ ಎಂದು.
ಮಕ್ಕಳ ಕಲಿಯುವ ಸಾಮರ್ಥ್ಯದ ಬಗ್ಗೆ ನಾನೊಂದು ವಿಷಯ ಗಮಮಿಸಿದ್ದೇನೆ. ನಾನು ಕಲಿಯುತ್ತಿದ್ದ ಸಮಯದಲ್ಲಿ ನನ್ನ ತರಗತಿಯಲ್ಲಿ ಕಲಿಯುತ್ತಿದ್ದ ಬಡಕುಟುಂಬದ ಕೆಲವು ಮಕ್ಕಳು 'ಹ' ಕಾರ ಉಚ್ಚರಿಸಲು ಕಷ್ಟಪಡುವುದನ್ನು ನೋಡಿದ್ದೇನೆ. ಮೂಲತಹ ಮನೆಯಲ್ಲಿ ತುಳು ಮಾತನಾಡುತ್ತಿದ್ದ ಮಕ್ಕಳಿಗೆ ಈ ಸಮಸ್ಯೆ ಇದ್ದಿತ್ತು. ಯಾಕೆಂದರೆ ತುಳುವಿನಲ್ಲಿ 'ಹ' ಕಾರದ ಬಳಕೆ ಇಲ್ಲ. ಅದಕ್ಕಾಗಿ ಅವರು ಬೈಗುಳ ತಿಂದಿದ್ದೂ ಹೌದು. ಈಗ ಅನಿಸುತ್ತಿದೆ ಅಧ್ಯಾಪಕರುಗಳು ಹಾಗೆ ಬೈಯಬಾರದಿತ್ತು ಎಂದು. ಆದರೆ ನಾನು ಹೇಳ ಹೊರಟಿರುವುದು ಅದಲ್ಲ. ನಾನು ನೋಡುತ್ತಿರುವಂತೆ ಈಗಿನ ಮಕ್ಕಳಿಗೆ ಈ ಸಮಸ್ಯೆ ಬಹಳ ಕಡಿಮೆ ಇದೆ. ಬಡ ಕುಟುಂಬದ ಮಕ್ಕಳೂ ಈಗ ಹಕಾರ ಇತ್ಯಾದಿಗಳನ್ನು ಚೆನ್ನಾಗಿ ಉಚ್ಚರಿಸಬಲ್ಲರು. ಇದಕ್ಕೆ ಕಾರಣ ಸಮಾಜ ಈಗ ಬೇರೆ ಭಾಷೆಗಳಿಗೆ ಹೆಚ್ಚು ತೆರೆದುಕೊಂಡಿದೆ. ಅದು ಸಾಧ್ಯವಾದದ್ದು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ. ಹಾಗಾಗಿ ಉಚ್ಚಾರಣೆ ಸಮಸ್ಯೆ ಮಕ್ಕಳ ಊನತೆ ಆಗಿರಲಾರದು ಅನ್ನುವುದು ತಿಳಿಯುತ್ತದೆ. ಸಮಸ್ಯೆಯಿರುವುದು ಕಲಿಸುವ ರೀತಿಯಲ್ಲಿ. ಕಲಿಸುವ ಜನರಿಗೆ ಕಲಿಕೆಯ ಮೂಲಭೂತ ತಿಳುವಳಿಕೆ ಇಲ್ಲದಲ್ಲಿ ಈ ಸಮಸ್ಯೆ. ಕಷ್ಟಕರವಾದ ಪದಗಳಿಗೆ ಪರ್ಯಾಯ ಹುಡುಕುವುದೇನೋ ಸರಿ, ಆದರೆ ಅದು ಕಲಿಕಾ ರೀತಿಯ ಒಂದು ಭಾಗವಾಗಿರಬೇಕೇ (Strategy) ಹೊರತಾಗಿ ಭಾಷೆಯ ರಚನೆಯನ್ನೇ ಬದಲಾಯಿಸುವ ಮಟ್ಟಕ್ಕೆ ಬೆಳೆಯಬಾರದು ಅಲ್ಲವೇ?
ಈ ವಿಚಾರವಾಗಿ ಅಷ್ಟು ತಿಳಿದವನಲ್ಲ ಎಂದು ನೀವು ಮೊದಲು ಒಪ್ಪಿಕೊಂಡಿದ್ರಿ.
ತಿಳಿಯುವ ಪ್ರಯತ್ನ ಮಾಡಿ ಎಂದು ನಾನು ಹೇಳಿದ್ದೆ. ಇರಲಿ.
ನೀವು ಮುಂದಿಟ್ಟಿರುವ ಪ್ರಶ್ನೆಗಳು ಮತ್ತು ತೀರ್ಪುಗಳ ಬಗ್ಗೆ ನನ್ನ ಕೆಲವು ಮಾತುಗಳು ನಿಮ್ಮೊಂದಿಗೆ ಹಂಚಿಕೊಳ್ತೀನಿ.
'ಹ'ಕಾರವನ್ನು ಉಲಿಯಬಲ್ಲ ಮತ್ತು ಉಲಿಯಲಾರದ ಕನ್ನಡಿಗರು ಇದ್ದಾರೆ. ನೀವು ಕರ್ನಾಟಕದ ಯಾವೆಲ್ಲಾ ಭಾಗಗಳಿಗೆ ಹೋಗಿ ಬಂದಿದ್ದೀರೋ ಗೊತ್ತಿಲ್ಲ, ಆದರೆ, ಹಲವು ಭಾಗಗಳಲ್ಲಿ 'ಹ'ಕಾರ ಬಿದ್ದು ಹೋಗಿರೋದು ನೀವು ನೋಡಬಹುದು.
ಇದರಲ್ಲಿ, ಬಡ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ವಿಂಗಡಣೆ ಏನಿಲ್ಲ. ಆ ಭಾಗದ ಹೆಚ್ಚಿನ ಜನರ ಮಾತಲ್ಲಿ 'ಹ'ಕಾರ ಬಿದ್ದು ಹೋಗಿದೆ. ನುಡಿಯರಿಗರೂ ಇದನ್ನೇ ಸಮರ್ಥಿಸುತ್ತಾರೆ.
ಇನ್ನೂ ಹಲವು ಭಾಗಗಳಲ್ಲಿ 'ಹ'ಕಾರ ಉಳಿದುಕೊಂಡಿದೆ.
ಪರಿಸರದಲ್ಲಿಲ್ಲದ ಉಲಿ ಕಲಿಯುವುದು ಕಷ್ಟ. ಇದಕ್ಕೆ ನಾನು 'ರಳ'ದ ಉದಾಹರಣೆ ಕೊಟ್ಟಿದ್ದೇನೆ – ಇದು ಏನಂದು ಗೊತ್ತಾಗದಿದ್ದರೆ ತಿಳಿಸಿ. ಇನ್ನೊಮ್ಮೆ ವಿವರಿಸ್ತೀನಿ.
ಪ್ರಶ್ನೆ ಇರುವುದು, ಇಲ್ಲದ ಉಲಿಗಳನ್ನು ಕಲಿಸುತ್ತಾ ಕೂರಬೇಕಾ? ಅಥವಾ, ಇದ್ದ ಉಲಿಗಳನ್ನು ಬಳಸಿಕೊಂಡೆ ನಮ್ಮ ಜನರ ಕಲಿಕೆ ಚೆನ್ನಾಗಿ ರೂಪಿಸಬೇಕಾ?
ಇಲ್ಲದ ಉಲಿಗಳನ್ನು ಕಲಿಸಲು ಪ್ರಯತ್ನ ಪಡುವುದು, ಆ ಹೊರೆಯನ್ನು ನಮ್ಮ ನುಡಿಯ ಬರಹದಲ್ಲಿ ಇಟ್ಟುಕೊಳ್ಳೋದು, ಉಲಿಯಲು ಬಾರದವರನ್ನು ಜರಿಯೋದು, ಇದರಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಮಾತುಗಳಾಗಿವೆ.
ನೀವು ಅವುಗಳನ್ನು ಓದಿ ಅರಿತುಕೊಂಡಿದ್ದೀರ ಎಂದು ನಂಬಿದ್ದೇನೆ.
ಇದ್ದ ಉಲಿಗಳನ್ನು ಬಳಸಿಕೊಂಡೆ ನಮ್ಮ ಜನರ ಕಲಿಕೆ ರೂಪಿಸೋದರಿಂದ, ಏನು ಲಾಭಗಳು ಎಂಬ ಬಗ್ಗೆಯೂ ಮಾತುಗಳಾಗಿವೆ.
ನಿಮಗೆ ಇದರಲ್ಲಿ ಗೊಂದಲವಿದ್ದರೆ ತಿಳಿಸಿ, ಚರ್ಚೆ ಮಾಡೋಣ.
ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲ ಎನ್ನುವುದು ಮೊದಲನೇ ತಪ್ಪು. ಮಾತಿನಲ್ಲಿ ಹೇಳುವುದಿಲ್ಲ ಎಂದ ಮಾತ್ರಕ್ಕೆ ಬರಹದಲ್ಲಿ ಇರಬಾರದು ಎನ್ನುವುದು ಎರಡನೇ ತಪ್ಪು.
ಮೊದಲ ತಪ್ಪಿಗೆ ಸಾಕ್ಷಿ :
"ಭಾರ", "ಖರೆ", "ಬರ್ಲಿಕ್ ಹತ್ತಾನ", "ಭಾಳ" ಮುಂತಾದ ಅಚ್ಚ ಹಳ್ಳಿ ಕನ್ನಡದ ಬಳಕೆಗಳು ಮಹಾಪ್ರಾಣಗಳೇ ಆಗಿವೆ ಅಲ್ಲವೇ?
ಇನ್ನು ಎರಡನೆಯದು. ಬರಹದಲ್ಲಿ ಯಾವತ್ತಿದ್ದರೂ ನುಡಿಗಿಂತ ಕಡಿಮೆ ಸ್ವಾತಂತ್ರ್ಯ ಇರುತ್ತದೆ. ಉದಾಹರಣೆಗೆ ಮಾತನಾಡುವಾಗ "ಬಾಶೆ" ಎಂದರೂ "ಭಾಷೆ" ಎಂದರೂ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ ಮಾತಿನ ಏರಿಳಿತಗಳಲ್ಲಿ ಒಂದು ರೀತಿಯ ಸಂಜ್ನೆ ಇರುತ್ತದೆ. ಅದನ್ನು ಬರಹದಲ್ಲಿ ಬರೆಯಲಾಗದು. ಅದಕ್ಕಾಗಿಯೇ ಬರಹದಲ್ಲಿ ಮಾತಿಗಿಂತ ಹೆಚ್ಚು specific ಆಗಿರುವ ಅಗತ್ಯತೆ ಇರುತ್ತದೆ. ಹಾಗಿದ್ದಲ್ಲಿ ಮಾತ್ರ ಅರ್ಥ ವ್ಯತ್ಯಾಸ ಆಗುವುದನ್ನು ತಪ್ಪಿಸಬಹುದು.
ಇನ್ನೊಂದು ಉದಾಹರಣೆಗೆ "ಕ್ಷಮೆ" ಮತ್ತು "ಶಮೆ" ತೆಗೆದುಕೊಳ್ಳಿ. ಮಾತಿನಲ್ಲಿ ಇವೆರಡಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಅಲ್ಲದೆ ಮಾತಿನ ಹರಿವಿನಲ್ಲಿ ಕ್ಷಮೆ ಎಂದು ಹೇಳಿದ್ದೋ ಅಥವಾ ಶಮೆ ಎಂದಿದ್ದೋ ಅರ್ಥವಾಗುತ್ತದೆ. ಆದರೆ ಬರಹದಲ್ಲಿ ಕ್ಷಮೆ ಬದಲಾಗಿ ಶಮೆ ಬಳಸಿದರೆ ಏನಾದೀತು? ಯೋಚಿಸಿ. ಹಾಗಾಗಿ ಆಡು ಮಾತಿನಂತೆಯೇ ಬರಹ ಇರಬೇಕು ಎನ್ನುವುದು ವೈಜ್ನಾನಿಕ ಅಂತ ನನಗನಿಸುವುದಿಲ್ಲ. ಆಡು ಮಾತಿನಲ್ಲಿ ಬಹಳಷ್ಟು ಅಕ್ಷರಗಳನ್ನು ನುಂಗುತ್ತೇವೆ. ಹಾಗಂತ ಬರಹದಲ್ಲೂ ಅವನ್ನು ನುಂಗಿದರೆ ನಮ್ಮ ಕನ್ನಡ ಭಾಷೆ ನುಂಗಣ್ಣರ ಭಾಷೆಯಾದೀತು. ಈ ಬಗ್ಗೆ ಎಚ್ಚರವಿರಬೇಕು. ನಾನು ಮೇಲೆ ಹೇಳಿದ ತುಳುವರ ಮಕ್ಕಳ 'ಹ' ಕಾರ ಉಚ್ಚರಣೆ ಸಮಸ್ಯೆಯನ್ನು ಪುನಹ ಅವಲೋಕಿಸುವುದಾದರೆ ಬಹಳಷ್ಟು ಮಕ್ಕಳಿಗೆ 'ಹ' ಕಾರ ಉಚ್ಚಾರಣೆ ಬರದಿದ್ದರೂ ಅವರಿಗೆ ಬರಹದಲ್ಲಿ ಎಲ್ಲಿ 'ಹ' ಬಳಸಬೇಕು, ಎಲ್ಲಿ 'ಅ' ಬಳಸಬೇಕೆಂದು ತಿಳಿದಿರುತ್ತದೆ! ನುಡಿ ಮತ್ತು ಬರಹದಲ್ಲಿನ ವ್ಯತ್ಯಾಸ ಆ ಸಣ್ಣ ಮಕ್ಕಳಲ್ಲೂ ಕಾಣಬಹುದು.
>>ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲಾ ಎನ್ನುವುದು ಮೊದಲನೇ ತಪ್ಪು..
ಇದು ಅರ್ದ ಸರಿ, ಯಾಕೆಂದರೆ ನನಗೆ ತಿಳಿದಿರುವ ಮಟ್ಟಿಗೆ ಮರಾಠಿ ಬಾಶೆ ಪ್ರಬಾವ ಹೊಂದಿರುವ ಪ್ರದೇಶದಲ್ಲಿ ಮಾತ್ರ ಮಹಾಪ್ರಾಣದ ಬಳಕೆಯನ್ನು ನಾವು ಕಾಣಬಹುದು. ಉದಾ: ಮುಂಬೈ ಕರ್ನಾಟಕ ಬಾಗದಲ್ಲಿ ಮಾತ್ರ ನಾವು ಕಾಣುತ್ತೇವೆ. ಹೈದ್ರಬಾದ ಕರ್ನಾಟಕಕ್ಕೆ ಬಂದರೆ ಭಾರ–ವಜ್ಜಿ, ಖರೆ — ಕರೆ, ಬರ್ಲಿಕ್ ಹತ್ತಾನ — ಬರಾಕುಂತಾನ, ಬರ್ಲಿಕುಂತಾನ, ಭಾಳ –ಜಗ್ಗು ಹೀಗೆ ನೀವು ಕೊಟ್ಟಿರುವ ಪದಗಳಿಗೆ ಅಲ್ಲಿ ಉಪಯೋಗಿಸುವ ಪದಗಳನ್ನು ಉದಾಹರಿಸಿದ್ದೇನೆ. ಇಲ್ಲಿ ಮಹಾಪ್ರಾಣದ ಪ್ರಬಾವ ಕಡಿಮೆ.
>>ಮಾತಿನಲ್ಲಿ ಹೇಳುವುದಿಲ್ಲ ಎಂದ ಮಾತ್ರಕ್ಕೆ ಬರಹದಲ್ಲಿ ಇರಬಾರದು ಎನ್ನುವುದು ಎರಡನೇ ತಪ್ಪು..
ಇದರ ಅರ್ತ ಆಗಲಿಲ್ಲ. ಹೇಳದನ್ನ ಬೆರೆದರೆ ಆಗುವ ಉಪಯೋಗವಾದರೂ ಏನು?? ದಯವಿಟ್ಟು ತಿಳಿಸಿ.
ನಿಮ್ಮ ಎರಡನೆಯ ವಾದದಲ್ಲಿ ಮುಕ್ಯವಾಗಿ ಕಂಡಿದ್ದು ಹೇಳಿದಂತೆ ಬರೆಯಬಾರದು ಎಂದು. ಹೇಳಿದಂತೆ ಬರೆದರೆ ಅದು ಅವೈಜ್ನಾನಿಕವೇ?? ನಾವು ಬಳಸುವ ನಾಮಪದಗಳು ಅತವಾ ಕ್ರಿಯಾಪದಗಳು ಸಂದರ್ಬಕ್ಕೆ ತಕ್ಕಂತೆ ಅರ್ತ ಪಡೆದುಕೊಳ್ಳುತ್ತವೆ.
ಬರಹಕ್ಕೆ ಕಟ್ಟಳೆಗಳು ಹೆಚ್ಚಾಗಿ ಬೇಕು, ನುಡಿಗೆ ಅಷ್ಟಾಗಿ ಬೇಡ ಎಂಬುದು ನಿಮ್ಮ ನಿಲುವು.
ಬರಹ ಮತ್ತು ನುಡಿ ಎರಡೂ ಬೇರೆ ಎಂಬುದನ್ನು ನೀವು ಅರಿತಿದ್ದೀರ ಎಂದು ತಿಳಿಯುತ್ತದೆ.
ಆದರೆ, ನಿಮ್ಮ ಹಿಂದಿನ ಕಾಮೆಂಟಿನಲ್ಲಿ 'ಭಾಷೆಯ ರಚನೆಯನ್ನೇ ಬದಲಾಯಿಸೋ ಮಟ್ಟಕ್ಕೆ ಬೆಳೆಯಬಾರದು' ಎಂದಿದ್ದೀರ. ಇಲ್ಲಿ ನೀವು ನುಡಿಯ ಬಗ್ಗೆ ಮಾತನಾಡುತ್ತಿದ್ರಿ ಎಂಬುದಾಗಿ ಮೇಲ್ನೋಟಕ್ಕೆ ಕಾಣುತ್ತಿದೆ.
ನುಡಿಯ ರಚನೆಯನ್ನು ಬದಲಾಯಿಸುವುದು ಯಾರೊಬ್ಬನಿಂದಲೂ ಸಾಧ್ಯವಿಲ್ಲ. ಬರಹದ ರಚನೆ ಬಗ್ಗೆ ತಾನೇ ಈ ಚರ್ಚೆ ನಡೆಯುತ್ತಿರೋದು !
ನಿಮಗೆ ಗೊಂದಲವಿದ್ದಲ್ಲಿ ತಿಳಿಸಿ.
ನೀವು ಮಹಾಪ್ರಾಣ ಕೆಲ ಭಾಗದ ಕನ್ನಡಿಗರ ಮಾತಿನಲ್ಲಿ ಇದೆ ಎಂಬುದನ್ನೂ ಹೇಳಿದ್ದೀರಿ. ಹೌದು. ಇದೆ.
ಶಂಕರ ಭಟ್ಟರೂ ಇದನ್ನು ತಿಳಿದಿದ್ದಾರೆ ಎಂದು ಅವರ ಪುಸ್ತಕ ಓದಿದರೆ ತಿಳಿಯುತ್ತೆ.
ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಬಳಕೆಯಲ್ಲಿರುವ ಮಹಾಪ್ರಾಣಗಳಿಗೆ ಕರ್ನಾಟಕದ ಎಲ್ಲಾ ಭಾಗದ ಜನರೂ ಮಹಾಪ್ರಾಣ ಕಲಿಯಬೇಕು ಎಂಬ ನಿಲುವು ನಿಮ್ಮದಾಗಿದೆ.
"ಇಲ್ಲದಿದ್ದರೆ, ಮಹಾಪ್ರಾಣ ಉಲಿಯುವ ಮಂದಿಗೆ ಕಲಿಕೆ ಕಷ್ಟವಾಗಲ್ವಾ" ಎಂಬುದೂ ಈ ಉದಾಹರಣೆ ಕೊಡುವ ಜನರ ಪ್ರಶ್ನೆಯಾಗಿರುತ್ತದೆ.
ಸ್ವಲ್ಪ ಜನರಿಗೆ ಕಷ್ಟ ಎಂಬುದು ನಿಮ್ಮ ಗಮನಕ್ಕೆ ಬರುತ್ತಿರುವಾಗ, (ಹೆಚ್ಚಿನ) ಉಲಿಯದ ಜನರಿಗೆ ಕಷ್ಟ ಎಂಬುದು ತಮ್ಮ ಗಮನಕ್ಕೆ ಯಾಕೆ ಬಾರದೇ ಹೋಯಿತು?
ಮಹಾಪ್ರಾಣಗಳನ್ನು ಮೊದಲ ತರಗತಿಯಲ್ಲೇ ಕಲಿಸಿ ಮಕ್ಕಳನ್ನು ಗೊಂದಲಕ್ಕೀಡು ಮಾಡದೇ, ಅವರಿಗೆ ಅಡಿಪಾಯ ಗಟ್ಟಿಯಾಗಿ ಬಿದ್ದ ನಂತರ ಮಹಾಪ್ರಾಣಗಳ ಪರಿಚಯ ಮಾಡಬಹುದು ಎಂಬುದನ್ನು ಶಂಕರ ಭಟ್ಟರೂ ಹೇಳುತ್ತಾರೆ.
ಹಳೆಗನ್ನಡದ 'ರಳ', 'ಕುಳ'ಗಳ ಪರಿಚಯ ೮ನೇ ತರಗತಿಯಲ್ಲಿ ಮಾಡುತ್ತಿರುವಂತೆ. ಇದು ಯಾಕೆ ಲಾಭದಾಯಕ ಎಂದು ನಾನು ಮುಂಚಿನ ಚರ್ಚೆಯಲ್ಲೂ ಹೇಳಿದ್ದೇನೆ. ತಾವು ಓದಿದ್ದೀರಿ ಎಂದು ನಂಬಿದ್ದೇನೆ.
ಬರಹವು ನುಡಿಯನ್ನು ಹಿಂಬಾಲಿಸಬೇಕು ಎಂಬುದನ್ನು ವೈಜ್ನ್ಯಾನಿಕವಾಗಿ ನುಡಿಯ ಬಗ್ಗೆ ಅರಿತ ನುಡಿಯರಿಗರೆಲ್ಲರೂ ಹೇಳುವ ಮಾತು.
ಆದರೆ, ಈ ವಿಚಾರವಾಗಿ ಹೆಚ್ಚು ತಿಳಿವು ಇರದ ನೀವು ನುಡಿಯರಿಗರ ಮಾತನ್ನು 'ವೈಜ್ನ್ಯಾನಿಕವಲ್ಲ' ಎಂದು ಕರೆಯುತ್ತಿದ್ದೀರ.
ಮೇಲಾಗಿ, ಬರಹದ ಬಗ್ಗೆ ನೀವು ಮುಂದಿಟ್ಟ ಕೆಲವು ಪ್ರಶ್ನೆಗಳು ಸಹಜವಾಗಿ ಮೂಡುವಂತ ಪ್ರಶ್ನೆಗಳೇ.
ನೀವು ಹೇಳಿದಂತೆ ಬರಹಕ್ಕೆ ಒಂದು ಕಟ್ಟಳೆ ಇರಬೇಕು. ಅದನ್ನೇ 'ಎಲ್ಲರಕನ್ನಡ' ಎಂದು ಶಂಕರ ಭಟ್ಟರು ಕರೆಯುತ್ತಾರೆ.
'ಎಲ್ಲರಕನ್ನಡ' ಬರಹವು ಎಲ್ಲರ ನುಡಿಗೆ/ಮಾತಿಗೆ ಆದಷ್ಟು ಹತ್ತಿರವಿರಬೇಕು, ಮತ್ತು ನೀವು ಹೇಳಿದಂತ ಕೆಲವು ಗೊಂದಲಗಳಿಗೆ ಅದರಲ್ಲಿ ಉತ್ತರವಿರಬೇಕು.
ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆಯಬೇಕಾಗಿದೆ. Standardization ಕೆಲಸ ಎಂದು ಇದನ್ನು ಕರೆಯಬಹುದು.
ನಿಮ್ಮಲ್ಲಿದ್ದ ಗೊಂದಲಗಳಿಗೆ ನನ್ನ ಮಾತುಗಳಲ್ಲಿ ಸಾಕಷ್ಟು ಉತ್ತರ ದೊರಕಿದೆ ಎಂದು ನಂಬಿದ್ದೇನೆ.
ಮಾಯ್ಸ :
ನಾನಾಗಲೇ ಹೇಳಿದಂತೆ, ಇಲ್ಲಿ ಯಾರೂ ಸಂಸ್ಕೃತವನ್ನು ಸಮರ್ಥಿಸುತ್ತಿಲ್ಲ.
ಸಂಸ್ಕೃತದಿಂದ ಬಂದದ್ದೆಂಬ ಕಾರಣಕ್ಕೆ ಪದಗಳಿರಬೇಕೆಂದೂ ಯಾರೂ ಹೇಳುತ್ತಿಲ್ಲ.
ಸಂಸ್ಕೃತದಿಂದ ಬಂದದ್ದೆಂಬ ಕಾರಣಕ್ಕೆ ಪದಗಳನ್ನು ತೆಗೆಯಬೇಕೆಂದು ಹೇಳುತ್ತಿರುವುದು ನೀವೊಬ್ಬರೇ!
ನಿಮ್ಮ ಪ್ರಶ್ನೆಗೆ ನೀವೇ ಉತ್ತರಿಸಿಕೊಳ್ಳಬೇಕು.
ಇಷ್ಟು ಹೊತ್ತೂ ಈ ಚರ್ಚೆಗೆ ಅಪ್ರಸ್ತುತವಾದ ಸಂಸ್ಕೃತವನ್ನು ತಂದು ಮಾತನಾಡುತ್ತಿದ್ದಿರಿ; ಇದೀಗ ಹಿಂದಿ ತರುತ್ತಿರುವಿರಿ.
ಮತ್ತು "ಹಿಂದಿ ದ್ವೇಷ ಯಾಕೆ ನರೇಂದ್ರ?" ಎಂದು ಪ್ರಶ್ನಿಸುವ ಮೂಲಕ ನಾನೇನೋ ಹಿಂದಿ ಧ್ವೇಷಿ ಎನ್ನುವಂತೆ ಮಾತನಾಡುತ್ತಿರುವಿರಿ.
ನಾನು ಹಿಂದಿ ಬೇಡ ಎಂಬ ಒಂದು ಸಾಲನ್ನಾದರೂ ತೋರಿಸಿ ಮತ್ತು ಅದೇ ರೀತಿ ಸಂಸ್ಕೃತ ಮಾತ್ರ ಬೇಕು ಎಂದದ್ದನ್ನೂ ತೋರಿಸಿ.
ನಿಮಗೆ ಅರ್ಥಪೂರ್ಣ ಚರ್ಚೆಯಲ್ಲಿ ಆಸಕ್ತಿಯಿಲ್ಲವೆನಿಸುತ್ತಿದೆ. ಹೀಗಾಗಿ, ಸಂಬಂಧವಿರದ ವಿಷಯಗಳನ್ನು ಚರ್ಚೆಗೆ ತರುತ್ತಿರುವಿರಿ ಮತ್ತು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಜಾರಿಕೊಳ್ಳುತ್ತೀರಿ.
ನಿಮಗೆ ನಿಜಕ್ಕೂ ನಿಮ್ಮ ಹಿಂದಿನ ಮಾತುಗಳು ಸರಿಯಾಗಿದೆ ಎಂದನ್ನಿಸಿದ್ದರೆ, ಅರ್ಥಪೂರ್ಣ ಚರ್ಚೆಯಲ್ಲಿ ನಂಬಿಕೆಯಿದ್ದರೆ, ನನ್ನ ಪ್ರಶ್ನೆಗೆ:
"ನಾನು ಹಿಂದಿ ಬೇಡ ಎಂಬ ಒಂದು ಸಾಲನ್ನಾದರೂ ತೋರಿಸಿ ಮತ್ತು ಅದೇ ರೀತಿ ಸಂಸ್ಕೃತ ಮಾತ್ರ ಬೇಕು ಎಂದದ್ದನ್ನೂ ತೋರಿಸಿ?"
ಉತ್ತರಿಸಿ. ಇದಕ್ಕೆ ಉತ್ತರ ಸಿಗದಿದ್ದರೆ, ನೀವು ಬರೆದ "ಹಿಂದಿ ದ್ವೇಷ ಯಾಕೆ ನರೇಂದ್ರ?" ಕಾಮೆಂಟಿನ ಉದ್ದೇಶವನ್ನು ವಿವರಿಸಿ.
ಅರೇ ಭಾಯ್ ನರೇಂದ್ರಜೀ..
ಯಾಕೆ ಗುಸ್ಸಾ? ನಾನು ಹೇಳೋದನ್ನ ಸಾವಧಾನ್ ಆಗಿ ಕೇಳಿಸಿಕೊಳ್ಳಿ..
ಸಂಸ್ಕ್ರುತ ಖಾಸ್ ಇಲ್ಲ ಅಂತ ನೀವು ಹೇಳಿದ್ರಿ. ನಂಗೆ ಸಂಸ್ಕ್ರುತದಿಂದ ಈಗಾಗಲೇ ಇರೋ ಪದ ಅಂದ್ರೆ ಏನು? ಅಠವೀ ಶತಾಬ್ದಿಯಲ್ಲಿ ಬರೆದ ಕನ್ನಡದ ಕವಿರಾಜಮಾರ್ಗದಲ್ಲಿ ಅನೇಕ್ ಸಂಸ್ಕ್ರುತ ಪದಗಳಿವೆ. ಅವರಲ್ಲಿ ನನಗೆ ಎಶ್ಟೊಂದು ಗೊತ್ತಿಲ್ಲ. ನಿಮಗೆ ಗೊತ್ತಿದೆ.. ಅದಕ್ಕೆ ನಿಮಗೆ ಸಂಸ್ಕ್ರುತ ಇದ್ದ ಚಲ್ತಾ ಇದೆ. ನನಗೆ ಅದು ತುಂಬಾ ಕಠಿಣ್. ನನ್ ಚೈಸೇ ಲೋಗ್ಗಳಿಗೂ ಅನುಕೂಲ್ ಆಗಲಿ.. ಅದಕ್ಕೆ ಹಿಂದಿ ಪದಗಳನ್ನು ಸೇರಿಸೋಣ ಅಂತ..
ಇಲ್ಲಿ ನಿಮ್ಮ ನಜರ್ ತನ್ನಿ..
"ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್"
ಅದು ಕವಿರಾಜಮಾರ್ಗ ಕಿತಾಬ್ನ ಒಂದ ಪದ್ಯಕಾಂಡ್. ಇಲ್ಲಿ ವಿಶೇಷಂ ಅಂದರೆ ಖಾಸ್ ಎಂದು ಅಲ್ಲವಂತೆ. ಅಲ್ಲಿ ವಿಶೇಷಂ ಅಂದ್ರೆ ಜಗಹ/ಸ್ಥಳ್ ಅಂತ ಅಂತೆ. ಹಾಗೆ ಸಧಭಿಮಸ್ತುತ ಅಂತ ಒಂದು ಸಂಸ್ಕೃತ್ ಶಬ್ದ ಬಂದಿದೆ. ಅದು ನನಗೆ ಸಮಜ್ ಆಗಲಿಲ್ಲ. ಆ ಸಧಭಿಮಸ್ತುತ ಸಂಸ್ಕೃತ್ ಶಬ್ದ ನೋಡಿ ಎಶ್ಟು ಪುರಾನ ಇದೆ. ಅದನ್ನೂ ನೀವು ಎಲ್ಲಾ ಕಡೆ ಬಳಸಿದ್ರೆ.. ನನ್ ಜೈಸೇ ಲೋಗ್ಗಳಿಗೆ ಹೇಗೆ ಜಮಜ್ ಆಗುತ್ತದೆ?
ಹಿಂದಿನಿಂದಲೂ ಇತ್ತು ಈಗಲೂ ಇರಲಿ ಎಂಬುದು ಒಂದು ಅಚ್ಛಾ ಕಾರಣ ಆದರೆ, ಪುರಾನ ಕನ್ನಡದಲ್ಲಿ ಇರುವ ಸಧಭಿಮಸ್ತುತ, ವಿದಿತ, ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ.. ಅದಕ್ಕೆ ನಮಗೆ ಹಿಂದೀ ಮೂಲದ ಆದತ್ ಇರುವ ಶಬ್ಧಗಳ ಇಸ್ತಮಾಲ್ ಮಾಡಕ್ಕೆ ಕನ್ನಡ ಪದನೆರಿಕೆಗೆ ಸೇರಿಸಲುಬಿಡಿ.
ನೀವು ಯಾಕೆ ಇದಕ್ಕೆ ವಿರೋಧ್ ಇದ್ದೀರಿ? ಹಿಂದಿ ಶಬ್ದಗಳು ಈಗಾಗಲೇ ಇರುವ ಕನ್ನಡ ಶಬ್ದಕೋಶ್ ಅಲ್ಲಿ ಇಲ್ಲ, ಎಂದು ಅದರ ಇಸ್ತಾಮಾಲ್ ಬೇಡ ಅನ್ನುವಿರಿ. ನೀವು ಕೇವಲ್ ಪುರಾನ ಶಬ್ದ ಇರಲೀ ಅಂದಿದ್ದೀರಿ.. ಇದು ಅಚ್ಚ ಬಾತ್ ಅಲ್ಲ. ಅದೇ ಯಾಕೆ ನಿಮಗೆ ಹೊಸತಾಗಿ ಹಿಂದಿ ಶಬ್ದ ಸೇರಿಸುವುದಕ್ಕೆ ಸರ್ಮಥನ್ ಕೊಡಲ್ಲ?
ಮೂರನೇ ದರ್ಜೆ ಸಿನಿಮಾ ಡೈಲಾಗು.. ಬರೆದವರ ಬುಧ್ಧಿಮಟ್ಟವನ್ನು ತೋರಿಸುತ್ತದೆ ಅಷ್ಟೆ.
ಹಸನಾ ಸೇಹತ್ಗೆ ಗುಡ್..
ಪ್ಲೀಸ್ ಸ್ಮೈಲ್ ಮಾಡಿ.. ಹಾಗೂ ಹೆಲ್ತೀ ಆಗಿ ಜೀವಿಸಿ.
ಸಾಹೇಬ್..
ನೀವು ಮಹಾನ್ ಇದ್ದೀರಿ. ನಾನ್ ತೋ ಒಬ್ಬ ಸಾಮಾನ್ಯ ದೇಹಾತೀ ಅದೀನಿ.. ನಿಮಗಾ ನಿಮ್ ಬುದ್ಧಿಮಟ್ಟು ಹೆಂಗೆ ಇರ್ತದ?
ನೋಡ್ರಲಾ. ನಿಮಗೂ ದರ್ಜಾ, ಡೈಲಾಗು ಅಂತ ಇಂಗ್ಲೀಶ್, ಹಿಂದೀ ಶಬ್ದಗಳು ಪಸಂದ್ ಇವೆ..
ಎಶ್ಟು ಮಸ್ತೀ ಇದೆ ಹಿಂಗೆ ಮಿಲಾಕರ್ ಬಾತ್ ಕರಿಸೋದರಲ್ಲಿ.. ಅಲ್ವಾ?
ಕ್ಯಾ ಬಾತ್ ಹೈ..ಜೀ ಹುಜೂರ್!
> ಹಾಗೆ ಸಧಭಿಮಸ್ತುತ ಅಂತ ಒಂದು ಸಂಸ್ಕೃತ್ ಶಬ್ದ ಬಂದಿದೆ.
ನಿಮಗೆ ಪದ ಅರ್ಥವಾಗುತ್ತಿಲ್ಲ ಎನ್ನುವುದು ಸಮಸ್ಯೆಯೋ ಅಥವಾ ಅದರ ಮೂಲ ಸಂಸ್ಕೃತದ್ದು ಎನ್ನುವ ಚಿಂತೆಯೋ ತಿಳಿಯುತ್ತಿಲ್ಲ?
ನಿಮಗೆ ಅರ್ಥವಾಗದ ಪದಗಳಿದ್ದರೆ, ಅದೇ ರೀತಿ ಹೇಳಿದರಾಯಿತು. ಅದು ಬಿಟ್ಟು, ಅದೊಂದು ಸಂಸ್ಕೃತ ಶಬ್ದ ಎನ್ನುವುದೇಕೆ?
ವ್ಯಕ್ತಿಯೊಬ್ಬನೊಡನೆ ಮಾತನಾಡುವಾಗ "ಅವನೊಬ್ಬ ಮುಸಲ್ಮಾನ", "ಅವನೊಬ್ಬ ಬ್ರಾಹ್ಮಣ", "ಅವನೊಬ್ಬ ಕುರುಬ" ಇತ್ಯಾದಿ ಪೂರ್ವಾಗ್ರಹಗಳನ್ನಿಟ್ಟುಕೊಂಡು
ಮಾತನಾಡುವಂತಿದೆ ನಿಮ್ಮ ಮಾತಿನ ಧಾಟಿ.
> ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ