text
stringlengths
0
61.5k
ಪ್ರಸ್ಥುತ ಸುಜುಕಿ ವಿಟಾರ ಎಸ್‍‍ಯುವಿ ಕಾರು 191 ರಾಷ್ಟ್ರದ ಮಾರುಕಟ್ಟೆಗಳಲ್ಲಿ ಮಾರಾಟವಾಗಿದ್ದು, ಸುಮಾರು 3.7 ಮಿಲಿಯನ್ ಯೂನಿಟ್‍‍ಗಳಿಗಿಂತಲೂ ಹೆಚ್ಚಾಗಿ ಮಾರಾಟವಾಗಿದೆ.
ಆದರೆ ಭಾರತದಲ್ಲಿ 2015ರ ವರೆಗು ಗ್ರ್ಯಾಂಡ್ ವಿಟಾರ ಕಾರು ಮಾರಾಟಗೊಂಡಿತ್ತು, ಮರುತಿ ಸುಜುಕಿ ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆ ಹೊಂದಿದ್ದರೆ, ವಿಟಾರಾ ಫೇಸ್‍‍ಲಿಫ್ಟ್ ಎಸ್‍‍ಯುವಿ ಕಾರುಗಳು ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಮಹೀಂದ್ರಾ XUV500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.
ಸ್ಪರ್ಶ ರೇಖಾ ಈಗ ವಿಲನ್‌ | Udayavani – ಉದಯವಾಣಿ
Tuesday, 07 Dec 2021 | UPDATED: 09:44 PM IST
ಸ್ಪರ್ಶ ರೇಖಾ ಈಗ ವಿಲನ್‌
Team Udayavani, Jun 20, 2018, 11:02 AM IST
"ಬಿಗ್‌ ಬಾಸ್‌' ಮನೆಯಿಂದ ಹೊರ ಬಂದ ನಟಿ "ಸ್ಪರ್ಶ' ರೇಖಾ, ಏಕಾಏಕಿ ನಿರ್ಮಾಣಕ್ಕಿಳಿದರು. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ರೇಖಾ ಅವರಿಗೆ, ಎಲ್ಲೋ ಒಂದು ಕಡೆ ಸಿನಿಮಾದ ಸೆಳೆತವಿತ್ತು. ಒಂದೊಳ್ಳೆಯ ಕಥೆ ಸಿಕ್ಕರೆ ನಿರ್ಮಾಣ ಮಾಡಬೇಕು ಎಂಬ ಆಸೆಯೂ ಅವರೊಳಗಿತ್ತು. ಅದಕ್ಕೆ ತಕ್ಕಂತೆ ಹೊಸಬರ ತಂಡ ಅವರ ಬಳಿ ಒಂದು ಕಥೆ ಹೇಳಿಕೊಂಡಿತು. ಆ ಕಥೆ ಕೇಳಿದ ಸ್ಪರ್ಶ ಅವರು ಗ್ರೀನ್‌ಸಿಗ್ನಲ್‌ ಕೊಟ್ಟರು.
ಚಿತ್ರಕ್ಕೆ "ಡೆಮೋ ಪೀಸ್‌' ಎಂದು ನಾಮಕರಣ ಮಾಡಿ, ಮುಹೂರ್ತವನ್ನೂ ನಡೆಸಿಬಿಟ್ಟರು. ಹೊಸಬರ ಪ್ರಯತ್ನಕ್ಕೆ ಸಾಥ್‌ ಕೊಟ್ಟ "ಸ್ಪರ್ಶ' ರೇಖಾ ಅವರು ಸಿನಿಮಾಗಳಲ್ಲಿ ನಟಿಸೋಕೆ ಗ್ರೀನ್‌ ಸಿಗ್ನಲ್‌ ಕೂಡ ಕೊಟ್ಟಿದ್ದಾರೆ. ಈಗಾಗಲೇ ಅವರು ಸದ್ದಿಲ್ಲದೆಯೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದು "ಎಂಎಲ್‌ಎ'. ಈ ಚಿತ್ರದಲ್ಲಿ "ಸ್ಪರ್ಶ' ರೇಖಾ ಅವರ ಪಾತ್ರವೇನು? ಅದಕ್ಕೆ ಉತ್ತರ "ವಿಲನ್‌'.
ಹೌದು, ರೇಖಾ ಅವರು ಈ ಚಿತ್ರದಲ್ಲಿ ವಿಲನ್‌ ಆಗಿ ನಟಿಸಿದ್ದಾರಂತೆ. ಇದುವರೆಗೆ ರೇಖಾ ಸಾಫ್ಟ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು. ಆದರೆ, "ಎಂಎಲ್‌ಎ' ಚಿತ್ರದಲ್ಲಿ ಮಾತ್ರ ವಿಲನ್‌ ಆಗಿ ನಟಿಸಿದ್ದಾರೆ. ರೇಖಾ ಅವರು ಮೊದಲ ಸಲ ಇಡೀ ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರದ ನಿರ್ದೇಶಕರು ಹೇಳಿಕೊಂಡರೆ, ರೇಖಾ ಅವರು, "ನಾನು ಇಲ್ಲಿ "ವಿಲನ್‌' ಅಲ್ಲ.
ಆದರೆ, ಒಂದು ಸ್ಟ್ರಾಂಗ್‌ ಪೊಲಿಟಿಕಲ್‌ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ರೀತಿ ನೆಗೆಟಿವ್‌ ಶೇಡ್‌ ಎನ್ನಬಹುದು ಎಂದು ಹೇಳುವ ಮೂಲಕ ವಿಲನ್‌ ಪಾತ್ರ ಅಂತ ಒಪ್ಪಿಕೊಳ್ಳುತ್ತಾರೆ. ಅದೇನೆ ಇರಲಿ, ರೇಖಾ ಅವರು "ಎಂಎಲ್‌ಎ' ಚಿತ್ರದಲ್ಲಿ ಫ‌ುಲ್‌ಫ್ಲೆಡ್ಜ್ "ವಿಲನ್‌' ಅಂತೂ ಹೌದು. ಅವರನ್ನು ಆ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳಲಾಗದಿದ್ದರೂ, ಸಿನಿಮಾ ನೋಡಿದ ಮೇಲೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಅಂದುಕೊಳ್ಳುವುದಂತೂ ಗ್ಯಾರಂಟಿ.
ಅಷ್ಟರಮಟ್ಟಿಗೆ ರೇಖಾ ಕಾಣಿಸಿಕೊಂಡಿದ್ದಾರೆ. ರೇಖಾ ಆ ಚಿತ್ರದ ಪೊಲಿಟಿಕಲ್‌ ಪಾತ್ರವನ್ನು ಎಂಜಾಯ್‌ ಮಾಡಿಕೊಂಡು ನಟಿಸಿದ್ದಾರಂತೆ. ನಿಜವಾಗಿಯೂ ಆ ಚಿತ್ರದ ಕೆಲಸ ಖುಷಿಕೊಟ್ಟಿದೆಯಂತೆ. ಒಂದು ಮನರಂಜನೆ ಜೊತೆಗೆ ಕೆಲ ಸಂದೇಶ ಇರುವ ಚಿತ್ರವಿದು ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಅವರು.
ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸನ್‌ಗೆ ಆತ್ಮೀಯ ಸ್ವಾಗತ ನೀಡಿದ ಮೋದಿ, ಮಹತ್ವದ ದ್ವಿಪಕ್ಷೀಯ ಮಾತುಕತೆ! | PM Narendra modi meets Denmark Prime minister Mette Frederiksen on her 3 day visit India ckm
First Published Oct 9, 2021, 3:57 PM IST
ಇದೇ ಮೊದಲ ಭಾರಿಗೆ ಡೆನ್ಮಾರ್ಕ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮೆಟ್ಟೆ ಫ್ರೆಡೆರಿಕ್ಸನ್ ಭಾರತ ಪ್ರವಾಸ ಹಲವು ವಿಶೇಷತೆಗಳಿಂದ ಕೂಡಿದೆ. ರಾಷ್ಟ್ರಪತಿ ಭವನದಲ್ಲಿ ಮೆಟ್ಟೆ ಫ್ರೆಡೆರಿಕನ್ಸ್ ಜೊತೆ ನರೇಂದ್ರ ಮೋದಿ ದ್ವಿಪಕ್ಷೀಯ ಸಹಕಾರ ವೃದ್ಧಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಡೆನ್ಮಾರ್ಕ್ ಹಾಗೂ ಭಾರತ ನಡುವಿನ ವ್ಯಾಪಾರ ವಹಿವಾಟು, ಹೂಡಿಕೆ, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ಕ್ಷೇತ್ರದ ಕುರಿತು ಮಾತುಕತೆ ನಡೆಸಿದ್ದಾರೆ.ಡೆನ್ಮಾರ್ಕ್‌ನಲ್ಲಿ ಭಾರತದ 60ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಇನ್ನು 200ಕ್ಕೂ ಹೆಚ್ಚು ಡೆನ್ಮಾರ್ಕ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಉಭಯ ನಾಯಕರ ಮಾತುಕತೆಯಿಂದ ಡೆನ್ಮಾರ್ಕ್ ಹಾಗೂ ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಈ ವರ್ಷದ ಆರಂಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಡೆನ್ಮಾರ್ಕ್‌ಗೆ ಭೇಟಿ ನೀಡಿದ್ದರು. ಈ ಭೇಟಿಯ ಫಲವಾಗಿ ಇದೀಗ ಡೆನ್ಮಾರ್ಕ್ ಪ್ರಧಾನಿ ಭಾರತಕ್ಕೆ ಆಗಮಿಸಿದ್ದಾರೆ.
ಮೆಟ್ಟೆ ಫ್ರೆಡೆರಿಕ್ಸನ್ ಇಂದು ಸಿವಿಲ್ ಸೊಸೈಟಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯಲ್ಲಿ ಮತ್ತೊಂದು ವಿಶೇಷತೆ ಇದೆ. ಕೊರೋನಾ ವಕ್ಕರಿಸಿದ ಬಳಿಕ ಇತರ ರಾಷ್ಟ್ರನಾಯಕರು ಭಾರತಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಸರಿಸುಮಾರು ಎರಡು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಇತರ ದೇಶದ ಮೊದಲ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇಂದು ಬೆಳಗ್ಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಟ್ಟೆ ಫ್ರೆಡಿರಿಕ್ಸನ್ ಅವರನ್ನು ಕೇಂದ್ರ ವಿದೇಶಾಂಗ ವ್ಯವಾಹರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಬರಮಾಡಿಕೊಂಡರು. ಪ್ರಧಾನಿ ಮೋದಿ ಭೇಟಿಗೂ ಮುನ್ನ ಫ್ರೆಡೆರಿಕ್ಸನ್ ರಾಜ್‌ಘಾಟ್‌ಗೆ ತೆರಳಿ ಮಹತ್ಮಾ ಗಾಂಧಿಗೆ ಗೌರವ ನಮನ ಸಲ್ಲಿಸಿದರು.
ವಿದೇಶಾಂಗ ವ್ಯವಾಹರ ಸಚಿವ ಡಾ.ಎಸ್. ಜೈಶಂಕರ್ ಅವರನ್ನು ಭೇಟಿಯಾದ ಮೆಟ್ಟೆ ಫ್ರೆಡಿರಿಕ್ಸನ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ರಸ್ತೆ ತುಂಬ ಗುಂಡಿಗಳು... | Prajavani
ರಸ್ತೆ ತುಂಬ ಗುಂಡಿಗಳು...
Published: 16 ಏಪ್ರಿಲ್ 2011, 12:35 IST
Updated: 16 ಏಪ್ರಿಲ್ 2011, 12:35 IST
ಸಕಲೇಶಪುರ: ಪಶ್ಚಿಮಘಟ್ಟದ ಪ್ರವಾಸಿ ತಾಣಗಳಲ್ಲಿ ಒಂದಾದ ಬಿಸಿಲೆ ರಕ್ಷಿತ ಅರಣ್ಯ ಹಾಗೂ ಕುಕ್ಕೆ ಸುಬ್ರಹ್ಮಣಕ್ಕೆ ಪಟ್ಟಣದಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ದೋಣಿಗಾಲ್‌ನಿಂದ ಸುಬ್ರಮಣ್ಯವರೆಗೆ ಸುಮಾರು 73 ಕಿ.ಮೀ. ಉದ್ದವಿರುವ ಈ ರಸ್ತೆಯಲ್ಲಿ ಮೂರು ರಾಜ್ಯ ಹೆದ್ದಾರಿಗಳು ಒಳಪಡುತ್ತವೆ. ದೋಣಿಗಾಲ್-ಬ್ಯಾಕರವಳ್ಳಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಗೆ, ಬ್ಯಾಕರವಳ್ಳಿ-ವಣಗೂರು ಜನ್ನಾಪುರ-ವಣಗೂರು ರಾಜ್ಯ ಹೆದ್ದಾರಿಗೂ, ವಣಗೂರು-ಸುಬ್ರಹ್ಮಣ್ಯ ನಡುವೆ ಬೆಂಗಳೂರು-ಜಾಲ್‌ಸೂರು ರಾಜ್ಯ ಹೆದ್ದಾರಿಗೆ ಒಳಪಡುತ್ತದೆ. ಹೆಸರಿಗೆ ಮೂರು ರಾಜ್ಯ ಹೆದ್ದಾರಿಯನ್ನು ಒಳಗೊಂಡಿದ್ದರೂ ಸಹ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಕ್ಕೆ ಮಾತ್ರ ಸಾಧ್ಯವಿಲ್ಲ.
ಬ್ಯಾಕರವಳ್ಳಿಯಿಂದ ಸುಬ್ರಹ್ಮಣ್ಯದ ವರೆಗೆ ರಸ್ತೆಯ ಉದ್ದಕ್ಕೂ ಗುಂಡಿಗಳು ಬಾಯ್ತೆರೆದುಕೊಂಡಿವೆ. ವಣಗೂರಿನಿಂದ ಜಿಲ್ಲೆಯ ಗಡಿಭಾಗದ ಬಿಸಿಲೆ ವರೆಗೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ 20 ಕೋಟಿ ರೂಪಾಯಿಗಳ ಪ್ರಸ್ತಾವ ಸಲ್ಲಿಸಿ ಎರಡು ವರ್ಷಗಳು ಕಳೆದಿದ್ದು, ರಸ್ತೆ ಅಭಿವೃದ್ಧಿ ಇರಲಿ ಗುಂಡಿ ಮುಚ್ಚುವ ಕೆಲಸ ಕೂಡ ಆಗಿಲ್ಲ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹೊರನಾಡು-ಸುಬ್ರಹ್ಮಣ್ಯ ನಡುವೆ 180 ಕಿ.ಮೀ. ರಸ್ತೆಯನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿವ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತು, ಟೆಂಡರ್ ಹಂತಕ್ಕೆ ತಲುಪಿತ್ತು. ನಂತರ ಬಂದ ಬಿ.ಎಸ್.ಯಡಿಯೂರಪ್ಪ ಸರ್ಕಾರ ಈ ಯೋಜನೆಯನ್ನೇ ರದ್ದುಗೊಳಿಸಿದ್ದರಿಂದ ರಸ್ತೆ ಪುನಃ ನೆನೆಗುದಿಗೆ ಬಿತ್ತು.
ಬಿಸಿಲೆ ಬ್ಯೂಟಿ ಸ್ಪಾಟ್, ರಕ್ಷಿತ ಅರಣ್ಯ, ಅಬ್ಬಿ ಪಾಲ್ಸ್, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಸರ್ಕಾರ ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ.
ನ್ಯಾಮತಿಯಲ್ಲಿ ಸಿಎಂ ಕಾರ್ಯಕ್ರಮದ ಸಮೀಪ ಬೆಂಕಿ ಅವಘಡ | Fire Accident Near The CM Programme In Nyamati - Kannada Oneindia
| Updated: Friday, February 14, 2020, 21:21 [IST]
ದಾವಣಗೆರೆ, ಫೆಬ್ರವರಿ 14: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣವೇ ಎಚ್ಚೆತ್ತಗೊಂಡ ಅಗ್ನಿಶಾಮಕ, ಪೋಲಿಸ್ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸುರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ನಡೆಯಿತು. ಸೇವಾಲಾಲ್ ಜಯಂತಿಗೆ ಆಗಮಿಸಿದ್ದ ಭಕ್ತಾಧಿಗಳಿಂದ ಕಿಡಿಗೇಡಿಗಳು ಬೀಡಿ ಸಿಗರೇಟ್ ಸೇದಿ ಬೆಂಕಿ ನಂದಿಸದೆ ಎಸೆದಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ.
ಮೆಕ್ಕೆಜೋಳ ಕಟಾವು ಮಾಡಿ ಉಳಿದ ಒಣ ದಂಟುಗಳಿಗೆ ಬೆಂಕಿ ಆವರಿಸಿದೆ. ಗಾಳಿಯಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದನಕರುಗಳ ಮೇವಿಗೆ ಮೀಸಲಿಡಲಾಗಿದ್ದ ಅಲ್ಪ ಸ್ವಲ್ಪ ಮೇವು ಬೆಂಕಿಗೆ ಆಹುತಿಯಾಗಿದ್ದು, ಜಮೀನಿನ ಮಾಲೀಕರು ಭಕ್ತಾಧಿಗಳಿಗೆ ಇಡಿಶಾಪ ಹಾಕಿದ್ದಾರೆ.
yediyurappa fire accident police davanagere ಯಡಿಯೂರಪ್ಪ ಪೊಲೀಸ್ ದಾವಣಗೆರೆ
The fire accident near site of the Sewalal Jayanti event where Chief Minister BS Yediyurappa attended in Nyamathi.
ಮೋದಿ ಹೆಸರಲ್ಲಿ ಮತ ಯಾಚನೆ ಅಪಾಯ- ಕಲ್ಲಡ್ಕ ಪ್ರಭಾಕರ್‌ ಭಟ್‌ – janadhvani
ಮೋದಿ ಹೆಸರಲ್ಲಿ ಮತ ಯಾಚನೆ ಅಪಾಯ- ಕಲ್ಲಡ್ಕ ಪ್ರಭಾಕರ್‌ ಭಟ್‌
ಮಡಿಕೇರಿ: 'ಬಿಜೆಪಿ ಅಭ್ಯರ್ಥಿಗಳು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿ ಆಗಲಿದೆ' ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಇಲ್ಲಿ ಶನಿವಾರ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 'ಇದು ರಾಷ್ಟ್ರಮಟ್ಟದ ಚುನಾವಣೆಯಾದರೂ ಮೋದಿಯನ್ನೇ ತೋರಿಸಿ ಮತ ಕೇಳುತ್ತಿರುವುದು ಒಳ್ಳೆಯ ಪ್ರಕ್ರಿಯೆ ಅಲ್ಲ. ಆರ್‌ಎಸ್‌ಎಸ್‌ ಸ್ವಯಂ ಸೇವಕರು ಎಂದೂ ವ್ಯಕ್ತಿಪೂಜೆ ಮಾಡುವುದಿಲ್ಲ' ಎಂದು ಹೇಳಿದರು.
'ಮೋದಿ ಅವರು ಕಳೆದ 65 ವರ್ಷಗಳಲ್ಲಿ ಆಗದ ಕೆಲಸಗಳನ್ನು ಐದು ವರ್ಷದಲ್ಲಿ ಮಾಡಿದ್ದಾರೆ. ಎಲ್ಲ ಹಂತದಲ್ಲೂ ಸಾಧನೆ ತೋರಿದ್ದಾರೆ. ಹಾಗಾಗಿಯೇ ಮೋದಿಗೆ ವೋಟು ಕೊಡುವಂತೆ ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ನೈಜವಾಗಿ ಅಭ್ಯರ್ಥಿಗಳು ತಮ್ಮ ಸಾಧನೆಯ ಆಧಾರದಲ್ಲಿ ಮತಯಾಚಿಸಬೇಕಿತ್ತು. ಮೋದಿ ಸಾಧನೆ ಎದುರು ಅಭ್ಯರ್ಥಿಗಳು ಗೌಣವಾಗಿದ್ದಾರೆ' ಎಂದರು.
'ಮೋದಿ ಅವರು ಕ್ಷೇತ್ರದ ಅಭಿವೃದ್ಧಿಗೆಂದು ಸಂಸದರು ಏನು ಕೇಳಿದರೂ ನೀಡುತ್ತಿದ್ದರು. ಅದನ್ನು ಸಂಸದರು ಬಳಕೆ ಮಾಡಿಕೊಳ್ಳಬೇಕಿತ್ತು. ಕೆಲವರು ಆ ಸಾಧನೆ ಮಾಡಿರಲೂಬಹುದು. ಆದರೆ, ಮೋದಿ ಹೆಸರು ಮಾತ್ರ ಬಳಸಿಕೊಳ್ಳುತ್ತಿರುವುದು ಅಪಾಯಕಾರಿ' ಎಂದು ಅಭಿಪ್ರಾಯಪಟ್ಟರು.
ಗುಜರಾತ್ ನಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ತಂತ್ರ…? | Kannada Dunia | Kannada News | Karnataka News | India News
HomeLive NewsIndiaಗುಜರಾತ್ ನಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ತಂತ್ರ…?
30-12-2017 8:53PM IST / No Comments / Posted In: Latest News, India
ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎರಡು ದಶಕಗಳ ಬಳಿಕ ಉತ್ತಮ ಸಾಧನೆ ಮಾಡಿದೆಯಾದರೂ ಅಧಿಕಾರ ಗದ್ದುಗೆ ಏರಲು ಸಾಧ್ಯವಾಗಿಲ್ಲ. 99 ಸ್ಥಾನ ಗಳಿಸಿದ ಬಿಜೆಪಿ ಈ ಬಾರಿಯೂ ಅಧಿಕಾರಕ್ಕೇರಿದೆ.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಮುಂದುವರೆಸಿರುವ ಬಿಜೆಪಿ ಮತ್ತೊಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಿರುವ ವಿಜಯ್ ರೂಪಾನಿ, ಖಾತೆ ಹಂಚಿಕೆ ವೇಳೆ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ರನ್ನು ಕಡೆಗಣಿಸಿರುವುದಾಗಿ ಮಾತುಗಳು ಕೇಳಿ ಬರುತ್ತಿವೆ.
ತಮಗೆ ಸಿಕ್ಕ ಖಾತೆಗಳ ಕುರಿತು ಖುದ್ದು ನಿತಿನ್ ಪಟೇಲ್ ರವರೇ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಬಿಜೆಪಿ ವರಿಷ್ಟರ ತಲೆ ಬಿಸಿಗೆ ಕಾರಣವಾಗಿದೆ. ಈ ಮಧ್ಯೆ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸೌರಾಷ್ಟ್ರ ಅಮ್ರೇಲಿ ಜಿಲ್ಲೆ ಲಥಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ವಿರ್ಜಿ ತೊಮ್ಮರ್, ನಿತಿನ್ ಪಟೇಲ್ 10 ರಿಂದ 15 ಶಾಸಕರ ಬೆಂಬಲದೊಂದಿಗೆ ಬಿಜೆಪಿಯಿಂದ ಹೊರ ಬಂದರೆ ಅವರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ವಿರ್ಜಿ ತೊಮ್ಮರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್ ವಕ್ತಾರರು, ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅವರ ಆಂತರಿಕ ವಿಚಾರವಾಗಿದ್ದು, ವಿರ್ಜಿ ತೊಮ್ಮರ್ ಅವರ ಹೇಳಿಕೆ ವೈಯಕ್ತಿಕವಾದದ್ದಾಗಿದೆ. ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಕಾಂಗ್ರೆಸ್ ಕಾದು ನೋಡುತ್ತದೆ ಎಂದು ಹೇಳಿದ್ದಾರೆ.
Tags: Narendra modi | ನರೇಂದ್ರ ಮೋದಿ | ಕಾಂಗ್ರೆಸ್‌ | ಚುನಾವಣೆ | BJP | ಬಿಜೆಪಿ | Congress | ಗುಜರಾತ್ | Gujarat election
ಕಿಕ್ಕೇರಿ ಕೃಷ್ಣಮೂರ್ತಿ - ವಿಕಿಪೀಡಿಯ
ಜಾನಪದ, ಸುಗಮ ಸಂಗೀತ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕೃಷ್ಣಮೂರ್ತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಿಕ್ಕೇರಿ. ತಂದೆ ಬಿ.ಎಸ್. ನಾರಾಯಣ ಭಟ್, ತಾಯಿ ರುಕ್ಮಿಣಮ್ಮ. ಓದಿದ್ದು ವಾಣಿಜ್ಯ ಡಿಪ್ಲೊಮ. ಬಿ.ಕಾಂ. ಪದವಿಯ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ.
ಶಾಲಾ ಕಾಲೇಜು ದಿನಗಳಿಂದಲೂ ಹಾಡಿನ ಬಗ್ಗೆ ಮೂಡಿದ ವಿಶೇಷ ಒಲವು, ಹಲವಾರು ವರ್ಷ ಜಾನಪದ ತಜ್ಞ ಎಸ್.ಕೆ. ಕರೀಂ ಖಾನರ ಸಹವರ್ತಿ. ಕರೀಂಖಾನರ ಸಾಹಿತ್ಯಕ್ಕೆ ಸಂಗೀತ ನೀಡಿ ಮೊಟ್ಟಮೊದಲ ಧ್ವನಿಸುರಳಿಯನ್ನು ಹೊರತಂದ ಹೆಗ್ಗಳಿಕೆ. ಆಕಾಶವಾಣಿ, ದೂರದರ್ಶನದಲ್ಲಿ ಮನ್ನಣೆ ಪಡೆದ ಗಾಯಕರಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು ಹಲವಾರು. ದಸರಾ ಸಾಂಸ್ಕೃತಿಕ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಮುಂತಾದ ಉತ್ಸವಗಳಲ್ಲಿ ನಡೆಸಿಕೊಟ್ಟ ಪ್ರಮುಖ ಕಾರ್ಯಕ್ರಮಗಳು.
ರಂಗಭೂಮಿ ನಟರಾಗಿ, ನಿರ್ದೇಶಕರಾಗಿ, ಗಾಯಕರಾಗಿಯೂ ಸಲ್ಲಿಸಿದ ಸೇವೆ. ಮೈಲಿಗಲ್ಲುಗಳು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು, ಸಂಬಂಧಮಾಲೆ, ಗಲಿಬಿಲಿ ಕಲ್ಲೇಶಿ ಮುಂತಾದ ಧಾರಾವಾಹಿಗಳ ನಟ, ಎಲ್ಲರೂ ನಮ್ಮವ್ರೇ, ಸಮಕ್ಷಮ, ಅಂತರ ನಿರಂತರ ನಾಟಕಗಳಿಗೆ, ದೂರದರ್ಶನ ಧಾರಾವಾಹಿಗಳಿಗೆ ನೀಡಿದ ಸಂಗೀತ.
ಸುಗಮ ಸಂಗೀತದ ಸರ್ವತೋಮುಖ ಬೆಳವಣಿಗೆಗಾಗಿ ಪ್ರಾರಂಭಿಸಿದ್ದು 'ಆದರ್ಶ ಸುಗಮ ಸಂಗೀತ ಅಕಾಡಮಿ ಟ್ರಸ್ಟ್'. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ತರಬೇತಿ. ಉಚಿತ ವಾದ್ಯ ಪರಿಕರಗಳ ಕೊಡುಗೆ ಟ್ರಸ್ಟ್‌ನ ಪ್ರಮುಖ ಕಾರ್ಯಗಳಲ್ಲೊಂದು. ವಿದ್ಯಾರ್ಥಿಗಳ ಸುಪ್ತ ಪ್ರತಿಭಾ ಪ್ರದರ್ಶನಕ್ಕೆ ರೂಪಿಸಿದ 'ನವಸುಮ-ವನಸುಮ' ವೇದಿಕೆ.
ಗೀತಸಾಹಿತಿ ಕವಿರಾಜ್ ಅವರಿಗೆ ಹ್ಯಾಟ್ರಿಕ್ ಸಂಭ್ರಮ | Lyricist Kaviraj got music mirchi award - Kannada Filmibeat
ಗೀತಸಾಹಿತಿ ಕವಿರಾಜ್ ಅವರಿಗೆ ಹ್ಯಾಟ್ರಿಕ್ ಸಂಭ್ರಮ
| Published: Monday, August 18, 2014, 13:17 [IST]
ಕನ್ನಡ ಚಿತ್ರರಂಗದ ಜನಪ್ರಿಯ ಗೀತಸಾಹಿತಿ ಕವಿರಾಜ್ ಅವರು ಹ್ಯಾಟ್ರಿಕ್ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಮಿರ್ಚಿ ಮ್ಯೂಸಿಕ್ ಅವಾರ್ಡ್ ನಲ್ಲಿ ಅವರು ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ "ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ" ಹಾಡಿಗೆ 2013ನೇ ಸಾಲಿನ ವರ್ಷದ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ದೊರಕಿದೆ. ಇದಕ್ಕೂ ಮುನ್ನ ಅವರು 2009, 2011ರಲ್ಲೂ ಮಿರ್ಚಿ ಮ್ಯೂಸಿಕ್ ಅವಾರ್ಡ್ ಪ್ರಶಸ್ತಿ ಪಡೆದಿದ್ದರು. [ಬದುಕಿನ ಹೊಸ ಅಧ್ಯಾಯ ಆರಂಭಿಸಿದ ಕವಿರಾಜ್]
ಬುಲ್ ಬುಲ್ ಚಿತ್ರದ ಎಲ್ಲಾ ಹಾಡುಗಳನ್ನೂ ಕವಿರಾಜ್ ಅವರೇ ಬರೆದಿದ್ದಾರೆ. ಅವರು ಬರೆದಿರುವ 'ಮೈನಾ' ಚಿತ್ರವೂ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಪ್ರಶಸ್ತಿಗಳು ಸಹಜವಾಗಿ ಕವಿರಾಜ್ ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ.
Read more about: kaviraj lyricist song music ಕವಿರಾಜ್ ಗೀತ ಸಾಹಿತಿ ಹಾಡು ಸಂಗೀತ
Kannada lyricist Kaviraj gets the award for Best Lyricist for 'Bul Bul' during Mirchi Music awards 2013 in Hyderabad. This is the third time he is getting the same award. Earlier he got the same award in 2009 and 2011. He is considered one of the top five lyricists of Kannada cinema in the present times.
ತುಳು ಸಾಹಿತ್ಯ ಚರಿತ್ರೆ: ಭಾಷೆ: ತುಳು ನಿಘಂಟುಗಳು – ಕಣಜ
ತುಳು ಸಾಹಿತ್ಯ ಚರಿತ್ರೆ: ಭಾಷೆ: ತುಳು ನಿಘಂಟುಗಳು
Home/ಇತಿಹಾಸ, ಕರ್ನಾಟಕ ಇತಿಹಾಸ, ಭಾಷಾ ಸಾಹಿತ್ಯ ಮತ್ತು ವ್ಯಾಕರಣ, ಸಾಹಿತ್ಯ/ತುಳು ಸಾಹಿತ್ಯ ಚರಿತ್ರೆ: ಭಾಷೆ: ತುಳು ನಿಘಂಟುಗಳು
ತುಳು ಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಸಮೃದ್ಧವಾದ ಹಾಗೂ ವಿಕಸಿತವಾದ ಭಾಷೆ. ಅದಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ತುಳು ಭಾಷೆಗೆ ಕನ್ನಡ ಲಿಪಿ ಬಳಸುವ ರೂಢಿಯಿದೆ. ಆ ಭಾಷೆಯಲ್ಲಿ ವಿಪುಲ ಜನಪದ ಸಾಹಿತ್ಯವೂ ಲಭ್ಯವಿದೆ. 'ಪಾಡ್ದನ'ಗಳೆಂಬ ಹಾಡಗಬ್ಬಗಳನ್ನು ಹೇರಳವಾಗಿ ಹಾಡುವ ತುಳು ಭಾಷೆಯಲ್ಲಿ ಮಂಗಳೂರು, ಪುತ್ತೂರು, ಉಡುಪಿ ಹಾಗೂ ಕಾಸರಗೋಡು ಇಲ್ಲಿ ತುಳು ಎಂಬ ಪ್ರಾದೇಶಿಕ ಭಾಷೆಗೆ ಬ್ರಾಹ್ಮಣ – ಬ್ರಾಹ್ಮಣೇತರ ತುಳು ಎಂದು ಸಾಮಾಜಿಕ ಉಪಭಾಷೆಗಳ ತುಳುನಾಡಿನಲ್ಲಿವೆ.
ಸುಮಾರು ನೂರು ಐವತ್ತು ವರ್ಷಗಳ ಹಿಂದೆ ಧರ್ಮ ಪ್ರಸಾರವನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ತುಳುನಾಡಿಗೆ (ಭಾರತಕ್ಕೆ) ಬಂದ ಪಾಶ್ಚಾತ್ಯ ಮಿಶನರಿಗಳು ಈ ನಾಡಿನ ವಿವಿಧ ಪ್ರಾದೇಶಿಕ ಭಾಷೆಗಳನ್ನು ಅಧ್ಯಯನ ಮಾಡಬೇಕಾಗಿ ಬಂದಾಗ ತಮ್ಮ ಅನುಕೂಲ ಹಾಗೂ ಅಧ್ಯಯನಕ್ಕೆ ಅನುಗುಣವಾಗಿರುವ ವ್ಯಾಕರಣ ಹಾಗೂ ನಿಘಂಟುಗಳಿಲ್ಲದಿರುವುದನ್ನು ಕಂಡುಕೊಂಡು ಹೊಸ ರೀತಿಯ ನಿಘಂಟು – ವ್ಯಾಕರಣ ರಚನೆಗೆ ಕಾರ್ಯಪ್ರವೃತ್ತರಾದರು. ಅವರ ಉದ್ದೇಶ ಏನೇ ಆಗಿದ್ದರೂ, ಅವರ ಪ್ರಯತ್ನದ ಫಲವಾಗಿ ತುಳು ಭಾಷೆಯಲ್ಲಿ ಶಿಷ್ಟ ಸಾಹಿತ್ಯದ ರಚನೆಗೆ ನಾಂದಿಯಾಯಿತು. ಅವರು ನೀಡಿದ ನಿಘಂಟುಗಳು ತುಳು ಭಾಷೆಯ ಪುನರುಜ್ಜೀವನದ ಘಟ್ಟದಲ್ಲಿ ಅತಿ ಮಹತ್ವದ ಪಾತ್ರವಹಿಸಿವೆ. ಅವರ ಪ್ರಭಾವದಿಂದ ದೇಶೀಯ ವಿದ್ವಾಂಸರು ಆ ನಿಕ್ಷೇಪದತ್ತ ಗಮನಹರಿಸಿದರು. ತುಳುವಿನ ಪುನರುಜ್ಜೀವನವಾಯಿತು.
ತುಳು ಭಾಷೆಗೆ ಮಿಶನರಿ ವಿದ್ವಾಂಸರು ನೂರ ಹತ್ತು ವರ್ಷಗಳ ಹಿಂದೆಯೇ ಶಬ್ದಕೋಶವನ್ನು ರಚಿಸಿದ್ದರು. ಮಿಶನರಿಗಳಲ್ಲಿ ಕೆಮರೆರ್‌ ಮತ್ತು ರೆ. ಅಮ್ಮನ್‌ ಅವರು ಮೊತ್ತಮೊದಲಿಗೆ ಆ ಭಾಷೆಯ ಕಡೆಗೆ ದೃಷ್ಟಿ ಹರಿಸಿದರು. ಕೆಮರೆರ್‌ ಎನ್ನುವವರು ೧೮೫೮ರ ಹೊತ್ತಿಗೆ ಸು. ೨೦೦೦ ಶಬ್ದಗಳನ್ನು ಸಂಗ್ರಹಿಸಿ ತೀರಿಹೋದರು. ಮ್ಯಾನರ್‌ರು ಈ ಕಾರ್ಯವನ್ನು ಮುಂದುವರಿಸಿದರು. ಕಾಪು ಮಧ್ವರಾಯ, ಮೂಲ್ಕಿ ಸೀತಾರಾಮ ಮುಂತಾದ ಸ್ಥಳೀಯ ವಿದ್ವಾಂಸರ ಸಹಕಾರದಿಂದ ೧೮,೦೦೦ ಶಬ್ದಗಳನ್ನೊಳಗೊಂಡ 'ತುಳು-ಇಂಗ್ಲೀಷ್‌' ನಿಘಂಟನ್ನು ರಚಿಸಿದರು (೧೮೮೬). ಮುಂದೆ ಅದಕ್ಕೆ ಸಂವಾದಿಯಾಗಿ 'ತುಳು-ಇಂಗ್ಲೀಷ್‌' ನಿಘಂಟನ್ನು ರಚಿಸಿದರು (೧೮೮೮). ಮುಂದಿನ ಒಂದು ಶತಮಾನದವರೆಗೆ ಮ್ಯಾನರ್‌ನಿಘಂಟುಗಳು ತುಳು ಅಧ್ಯಯನಕ್ಕೆ ಮಹತ್ವದ ಆಕರಗಳಾದವು. ದ್ರಾವಿಡ ಭಾಷೆ ನಿಘಂಟುಕಾರರಲ್ಲಿ ಮ್ಯಾನರ್‌ತುಳುವನ್ನು ಪ್ರತಿನಿಧಿಸುವವರಲ್ಲಿ ಮೊದಲಿಗನಾದರು.
ಮ್ಯಾನರರು ಮಂಗಳೂರು ಸುತ್ತಮುತ್ತಲಿನ ಪರಿಸರದ ತುಳು ಭಾಷೆಯ ರೂಪಗಳನ್ನು ಸಂಗ್ರಹಿಸಿದರು. ಇವುಗಳನ್ನು ಕನ್ನಡ ಲಿಪಿಯಲ್ಲಿಯೂ ಪರಿಷ್ಕೃತ ರೋಮನ್‌ ಲಿಪಿಯಲ್ಲಿಯೂ ನಮೂದಿಸಿದರು. ತುಳು ಶಬ್ದಗಳ ಸರಿಯಾದ ಉಚ್ಚಾರಣೆಯನ್ನು ಸೂಚಿಸಲು ಲಿಪಿಯಲ್ಲಿ ವಿಶೇಷ ಚಿಹ್ನೆಗಳನ್ನು ಉಪಯೋಗಿಸಿ ಶಬ್ದಗಳಿಗೆ ಅರ್ಥವನ್ನು ನಮೂದಿಸಿದರು. ಮ್ಯಾನರ ತುಳು – ಇಂಗ್ಲಿಷ್‌ ಕೋಶದ ವಿನ್ಯಾಸ ಹೀಗಿದೆ.
ಒರಗ್‌ Woragu s. – A cushion to lean back upon – ಮಣೆ – a wooden seat with a back
ಒರೆಕಲ್ಲು Wore kallu s. – A touch stone; also ಉರೆಕಲ್ಲ್‌
ಅದಗ್‌ adaga. adv. Then at that time; if ಅಪಗ, ಆಪಗ
ಅನಾಥ anātha adv. Fororn, helpless, destitute, ಅನಾಥೆ one who is unprotected helpless, (female) an orphan ಅನಾಥೆದಿ a window, poor woman
ಅನರ್ಥ anartha s. Bad forlorn, calamity disaster
ನೂರು ವರ್ಷಗಳ ಹಿಂದೆ ತುಳು ಭಾಷೆಗೆ ಪ್ರಥಮವಾಗಿ ರಚಿತವಾದ ಈ ನಿಘಂಟಿನಲ್ಲಿ ದೋಷಗಳಿಲ್ಲದಿರುವುದು ಸಾಧ್ಯವಿಲ್ಲ. ಸಮರ್ಪಕವಾದ ನಿಘಂಟಿಗೆ ತುಳುವಿನ ಎಲ್ಲ ಪ್ರಭೇದಗಳ ಪರಿವೀಕ್ಷಣೆ ಆಗಬೇಕು. ವಿವಿಧ ವೃತ್ತಿ ಪದಗಳನ್ನು ಸಂಗ್ರಹಿಸಬೇಕು. ಆದರೆ ಮ್ಯಾನರ್‌ರಿಗೆ ಅದಕ್ಕೆ ಬೇಕಾದ ಅನುಕೂಲತೆಗಳಿರಲಿಲ್ಲ. ಮ್ಯಾನರರು ತುಳುವಿನ ಮುಖ್ಯ ಪ್ರಭೇದಗಳಾದ ಸಾಮಾನ್ಯ ತುಳು ಮತ್ತು ಶಿವಳ್ಳಿ ತುಳು ಎಂಬ ಭೇದವನ್ನು ಪರಿಗಣಿಸಲಿಲ್ಲ. ಗಾದೆ, ನುಡಿಗಟ್ಟು ಮುಂತಾದ ವಾಗ್ರೂಢಿಗಳನ್ನು ಬಳಸಿಲ್ಲ. ಆದರೂ ಭಾಷಾವಿಜ್ಞಾನ, ಕೋಶರಚನೆ ಬೆಳೆದಿರದ ಕಾಲದಲ್ಲಿ ಇಂತಹ ಒಂದು ಮಹತ್ವ ಪೂರ್ಣ ಕಾಣಿಕೆಯನ್ನು ಸಲ್ಲಿಸಿದ ಮ್ಯಾನರ್‌ ಅವರು ನಿಜವಾಗಿಯೂ ಪ್ರಾತಃಸ್ಮರಣೀಯರು.
ತುಳುವಿನಲ್ಲಿ ನಿಘಂಟು ರಚನೆಗೆ ಎರಡನೆಯ ಪ್ರಯತ್ನ ಮಾಡಿದವರು ಎಂ. ಮರಿಯಪ್ಪ ಭಟ್‌ಮತ್ತು ಶಂಕರ ಕೆದಿಲಾಯರು. ಅವರು ಜೊತೆ ಸೇರಿ 'ತುಳು-ಇಂಗ್ಲೀಷ್‌' ಕೋಶವನ್ನು ರಚಿಸಿದರು (೧೯೬೭). ಮರಿಯಪ್ಪ ಭಟ್‌ರ ಈ ನಿಘಂಟು ಬರುವವರೆಗೆ ತುಳು ಅಧ್ಯಯನಕಾರರ ಅಗತ್ಯವನ್ನು ಮ್ಯಾನರ್‌ನಿಘಂಟುಗಳೇ ಪೂರೈಸಬೇಕಾಗಿತ್ತು. ಕಾಲಕ್ರಮದಲ್ಲಿ ಪೂರೈಕೆಯಿಂದ ಬೇಡಿಕೆ ಹೆಚ್ಚಾದಾಗ ಮ್ಯಾನರ್‌ನಿಘಂಟು ಪ್ರತಿಗಳು ಅಲಭ್ಯವಾದವು. ಆ ಕೋಶದಲ್ಲಿ ಅನ್ಯಭಾಷೆಯ ಶಬ್ದಗಳು ಹೆಚ್ಚಾಗಿರುವುದರಿಂದ ಅವುಗಳನ್ನು ತೆಗೆದು ಹಾಕಿ ತುಳುವಿನ ಸಹಜ ಶಬ್ದಗಳು ಮತ್ತು ಹೆಚ್ಚು ರೂಢಿಯಲ್ಲಿರುವ ಶಬ್ದಗಳನ್ನೊಳಗೊಂಡ ಕೋಶವೊಂದು ಅವಶ್ಯಕತೆಯಿತ್ತು. ಅಂತಹ ಅಗತ್ಯವನ್ನು ಈ ನಿಘಂಟು ಪೂರೈಸಿತು.
ಮರಿಯಪ್ಪ ಭಟ್‌ಮತ್ತು ಕೆದಿಲಾಯರು ತುಳು ಪರಿಸರದಲ್ಲಿ ಉಸಿರಾಡಿದವರು, ಪುತ್ತೂರು ಪ್ರದೇಶದವರು. ಪುತ್ತೂರು ಪ್ರದೇಶದಲ್ಲಿ ಉಸಿರಾಡಿದವರು, ಪುತ್ತೂರು ಪ್ರದೇಶದವರು. ಪುತ್ತೂರು ಪ್ರದೇಶದಲ್ಲಿ ಬಳಕೆಯಲ್ಲಿರುವ ತುಳು ರೂಪಗಳನ್ನು ಕಲೆ ಹಾಕಿ ಶಾಸ್ತ್ರೀಯವಾಗಿ ಸಂಯೋಜಿಸಿ ಅವುಗಳನ್ನು ಕನ್ನಡ ಲಿಪಿಯಲ್ಲಿಯೂ ಪರಿಷ್ಕೃತ ರೋಮನ್‌ಲಿಪಿಯಲ್ಲಿಯೂ ಶಬ್ದಗಳನ್ನು ದಾಖಲಿಸಿದ್ದಾರೆ. ಅವರ ಕೋಶದ ರಚನೆಯ ಸ್ವರೂಪ ಹೀಗಿದೆ.
ನಾವಡ NAvada n. a. family name among Kota Brahmins.
ಕೊಂಬರ್‌ Kombar – A kind of cap worn by Koragas
ಕೊಂಬರ್‌ ಕೂಳಿ Kombzr Kuli – n. protruding tooth (Kombaru + kulli)
ರೂಪ ಸಾಮ್ಯವಿದ್ದು ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ೧, ೨, ೩ ಹೀಗೆ ಸಂಖ್ಯೆ ಹಾಕಿ ಪ್ರತ್ಯೇಕ ನಮೂನೆಗಳಾಗಿ ನೀಡಿದೆ.
ಕೊಂಡೆ ೧ – Konde – n A liquid measure
ಕೊಂಡೆ ೨ – Konde – n A hollow piece of bamboo
ಕೊಂಡೆ ೩ – Konde – n The bush or socket of a wheel
ಕೊಂಡೆ ೪ – Konde – n A family name among the Jains.
ಈ ನಿಘಂಟಿನಲ್ಲಿ ತುಳುನಾಡಿನ ಸೀಮಿತ ವಲಯದ ಶಬ್ದಗಳನ್ನು ಮಾತ್ರ ಕಲೆ ಹಾಕಲಾಗಿದೆ. ತುಳು ಪರಿಸರದ ವೃತ್ತಿ ಪದಗಳು, ಜಾನಪದ ಕಲೆ, ವಿನೋದಗಳಲ್ಲಿ ಬಳಸುವ ಸಾವಿರಾರು ಪದಗಳನ್ನು ಸಂಗ್ರಹ ಮಾಡುವ ಪ್ರಯತ್ನ ನಡೆಯಲಿಲ್ಲ. ಮ್ಯಾನರ್‌ಕೋಶದಲ್ಲಿರುವಂತೆ ಈ ಕೋಶದಲ್ಲಿಯೂ ವಾಗ್ರೂಢಿಗಳನ್ನು, ಜ್ಞಾತಿರೂಪಗಳನ್ನು ಕೊಟ್ಟಿಲ್ಲ. ಭಟ್ಟರು ತಮಗೆ ಲಭ್ಯವಿರುವ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಯೋಜಿಸಿದ್ದಾರೆ. ತಮ್ಮ ಕೋಶಕ್ಕೆ ತುಳು ಭಾಷೆ-ಸಾಹಿತ್ಯವನ್ನು ಕರಿತು ಅಭ್ಯಾಸಪೂರ್ಣ ಪ್ರಸ್ತಾಪನೆ ಬರೆದಿದ್ದಾರೆ.
ಈ ಎರಡು ನಿಘಂಟುಗಳ ಪರಸ್ಪರ ಸಮಾನಾಂಶಗಳನ್ನು ಹೀಗೆ ಗುರುತಿಸಬಹುದು. ಇವೆರಡು ದ್ವಿಭಾಷಿಕ ನಿಘಂಟುಗಳು. ತುಳು ಶಬ್ದಗಳಿಗೆ ಇಂಗ್ಲಿಷಿನಲ್ಲಿ ಅರ್ಥ ವಿವರಣೆ ನೀಡಲಾಗಿದೆ. ಎರಡರಲ್ಲೂ ಮುಖ್ಯ ಉಲ್ಲೇಖಗಳನ್ನು ಕನ್ನಡ ಲಿಪಿಯಲ್ಲೂ ಅದರ ಲಿಪ್ಯಂತರವನ್ನು ಪರಿಷ್ಕೃತ ಮತ್ತು ಕನ್ನಡ ಶಬ್ದಗಳು ಹೇರಳವಾಗಿವೆ. ಇದಕ್ಕೆ ಕಾರಣವಿಲ್ಲದಿಲ್ಲ. ಅವರಿಗೆ ಸಾಮಗ್ರಿ ಒದಗಿಸಿದವರು ಮಂಗಳೂರು ಪರಿಸರದ ವೈದಿಕ ವಿದ್ವಾಂಸರು. ಭಟ್ಟರು ತುಳು ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿರುವುದರಿಂದ ಸಂಸ್ಕೃತ ಕನ್ನಡ ಶಬ್ದಗಳು ಬಹು ವಿರಳ. ಮ್ಯಾನರ್‌ನ ನಿಘಂಟುವಿನಲ್ಲಿ ಕುಲನಾಮ, ವ್ಯಕ್ತಿನಾಮ ಹಾಗೂ ಸ್ಥಳನಾಮಗಳನ್ನು ಕೊಟ್ಟಿಲ್ಲ. ಭಟ್ಟರು ಅವುಗಳನ್ನು ಕೊಟ್ಟಿದ್ದಾರೆ. ಶಬ್ದಗಳ ವ್ಯಾಕರಣ ವರ್ಗಗಳನ್ನು ಕೊಡುವಾಗ ನಾಮ ರೂಪಗಳಿದ್ದರೆ, ಮ್ಯಾನರ್‌ನಿಘಂಟಿನಲ್ಲಿ n ಎಂದೂ ಭಟ್ಟರ ನಿಘಂಟಿನಲ್ಲಿ n ಎಂಬ ಸಂಕೇತವನ್ನೂ ಬಳಸಲಾಗಿದೆ.
ಟಿ. ಬರೋ ಮತ್ತು ಎಂ. ಬಿ. ಎಮಿನೊ ಅವರು 'ದ್ರಾವಿಡ ಜ್ಞಾತಿ ಪದಕೋಶ' ಸಿದ್ಧಪಡಿಸುವಾಗ ತುಳುವಿನ ಉಲ್ಲೇಖಗಳನ್ನು ದಾಖಲಿಸುವಾಗ ಮ್ಯಾನರ್‌ಮತ್ತು ಭಟ್ಟರ ಕೋಶಗಳನ್ನು ಮುಖ್ಯ ಆಕರಗಳನ್ನಾಗಿ ಬಳಸಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಚಲನಶೀಲತೆ ಜೀವಂತ ಭಾಷೆಯ ಆರೋಗ್ಯದ ಲಕ್ಷಣ. ಭಾಷೆ ಚಲನಶೀಲವಾಗುವಾಗ ಹಲವು ಅಂಶಗಳನ್ನು ಸ್ವೀಕರಿಸುತ್ತದೆ. ಹಲವು ಅಂಶಗಳನ್ನು ತ್ಯಜಿಸುತ್ತದೆ. ಶಬ್ದಗಳ ಅರ್ಥ ವಿಸ್ತಾರ ಮತ್ತು ಅರ್ಥ ಸಂಕೋಚದ ಕ್ರಿಯೆ ನಿರಂತರವಾಗಿ ನಡೆಯುತ್ತದೆ. ಒಂದು ಭಾಷೆಗೆ ಒಂದು ಕಾಲಘಟ್ಟದಲ್ಲಿ ರಚಿತವಾದ ನಿಘಂಟುಗಳು ಕಾಲಕ್ರಮೇಣ ತನ್ನ ಉಪಯುಕ್ತತೆ ಮತ್ತು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಅದು ಆಯಾ ಕೋಶಕಾರರ ದೋಷವಲ್ಲ. ಅದು ಆ ಭಾಷೆಯ ಚಲನಶೀಲತೆಯ ಪರಿಣಾಮವಾಗಿದೆ. ಅದಕ್ಕೆ ತುಳು ನಿಘಂಟುಗಳು ಹೊರತಲ್ಲ, ತುಳುನಾಡಿನ ಭಾಷಾ ಸಂಸ್ಕೃತಿಯನ್ನು ಪ್ರತಿನಿಧಿಸುವ ತುಳುವಿನ ಪುನರುಜ್ಜೀವನದ ಸಂದರ್ಭದಲ್ಲಿ ಅಧ್ಯಯನಯೋಗ್ಯ ಆಕರ ಗ್ರಂಥವಾಗಬಲ್ಲಂತಹ ಒಂದು ಸರ್ವ ಸಂಗ್ರಾಹಕ ನಿಘಂಟಿನ ಅವಶ್ಯಕತೆಯಿತ್ತು.
ಆಧುನಿಕ ಭಾಷಾ ವಿಜ್ಞಾನದ ಬೆಳಕಿನಲ್ಲಿ ತುಳುನಾಡಿನ ಸಾಂಸ್ಕೃತಿಕ ಆಯಾಮವನ್ನೊಳಗೊಂಡ ಬೃಹತ್‌ ಕೋಶವೊಂದರ ಕನಸನ್ನು ತುಳು ಭಾಷಿಕರು ಬಹುದಿನಗಳಿಂದ ಕಾಯುತ್ತಿದ್ದರು. ಅದೀಗ ನನಸಾಗಿ ಯು.ಪಿ. ಉಪಾಧ್ಯಾಯರ ಸಂಪಾದಕತ್ವದಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನ ಸಂಸ್ಥೆ ಪ್ರಕಟಿಸಿದ ತುಳು ನಿಘಂಟು ಸಂಪುಟಗಳು (ಒಟ್ಟು ಆರು) ತುಂಬ ಮೌಲಿಕವಾಗಿವೆ. ಈ ನಿಘಂಟುಗಳ ರಚನೆ ಬಹಳ ಶ್ರಮದಿಂದಲು, ವಿಚಾರಪೂರ್ವಕವಾಗಿಯೂ ನಡೆದಿರುವುದರಿಂದ ಆ ನಿಘಂಟುಗಳ ಪರಿಶೀಲನದಿಂದ ಯಾರಿಗಾದರೂ ವಿಷಯ ಹೊಳೆಯದಿರದು. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಯಾವ ಭಾಷೆಗಳಿಗೂ (ಶಿಷ್ಟ ಭಾಷೆ / ಆಡುಭಾಷೆ) ಇಂತಹ ನಿಘಂಟುಗಳು ಸಿದ್ಧವಾಗಿಲ್ಲ. ಭಾರತದ ಇತರ ಕಡೆಗಳಲ್ಲೂ ಇಂತಹ ಪ್ರಯತ್ನಗಳು ನಡೆದಿಲ್ಲವೆಂದೇ ಹೇಳಬೇಕು. ತುಳು ನಿಘಂಟು ಇಂತಹ ಕಾರ್ಯಕ್ಕೆ ಮಾದರಿಯಾಗಿದೆ. ಈ ನಿಘಂಟಿನ ಉದ್ದೇಶ ಇಂತಿವೆ:
೧. ತುಳುವಿನ ಅನೇಕ ಸಾಮಾಜಿಕ ಪ್ರಾದೇಶಿಕ ನೆಲೆಗಳಲ್ಲಿ ಬಳಕೆಯಲ್ಲಿರುವ ಎಲ್ಲಾ ಆಡುಭಾಷೆಗಳ ಪ್ರಕಾರಗಳನ್ನು ಗುರುತಿಸುವುದು.
೨. ತುಳುವಿನ ಆಡುಭಾಷೆಗಳಲ್ಲಿರುವ ಶಬ್ದರೂಪಗಳನ್ನು ವೃತ್ತಿ ಪದಗಳನ್ನೂ ಸಂಗ್ರಹಿಸಿ, ಅವುಗಳನ್ನು ಕನ್ನಡ ಹಾಗೂ ಅಂತಾರಾಷ್ಟ್ರೀಯ ಧ್ವನಿಲಿಪಿಯಲ್ಲಿ ಕ್ರೋಢೀಕರಿಸಿ ಅವುಗಳ ಅರ್ಥವನ್ನು ಇಂಗ್ಲಿಷ್‌ಹಾಗೂ ಕನ್ನಡದಲ್ಲಿ ಕೊಡುವುದು.
೩. ಈ ಶಬ್ದಕೋಶ ತುಳುವಿನ ಅಧಿಕೃತ ವ್ಯಾಕರಣ ರಚನೆಗೆ ಸಹಾಯ ಮಾಡುವುದು.
೪. ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ತುಳುವನ್ನು ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸುವ ನಿಟ್ಟಿನಲ್ಲಿ ರಚಿಸಬೇಕಾದ ಪ್ರಾಥಮಿಕ ಪಠ್ಯಪುಸ್ತಕ ಮತ್ತು ಇತರ ಪುಸ್ತಕಗಳಿಗೆ ಅಗತ್ಯವಿರುವ ಮೂಲ ಶಬ್ದ ಭಂಡಾರವನ್ನು ಒದಗಿಸುವುದು.
೫. ತುಳು ಭಾಷೆಗೆ ಒಂದು ಪ್ರಾತಿನಿಧಿಕ ರೂಪದ ರಚನೆ – ಈ ಪ್ರಾತಿನಿಧಿಕ ರೂಪ ಸಾಹಿತ್ಯ ಸೃಷ್ಟಿಗೆ, ಆಕಾಶವಾಣಿಯ ವಾರ್ತಾ ಪರಸಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಪತ್ರಿಕಾ ಪ್ರಕಟಣೆ, ಸಿನೆಮಾ, ನಾಟಕ ಇತ್ಯಾದಿಗಳಿಗೆ ಒಂದು ನಿರ್ದಿಷ್ಟವಾದ ರೂಪವನ್ನು ಕೊಡುತ್ತದೆ.
ಈ ಉದ್ದೇಶ ಸಿದ್ಧಿಗಾಗಿ ನಿಘಂಟು ವ್ಯಾಪಕವಾಗಿರಬೇಕೆಂದು ಇರಾದೆಯಿಂದ ಅದು ಕೇವಲ ನಾಮರೂಪ, ವಿಶೇಷಣಗಳಿಗೆ ಸೀಮಿತವಾಗಿರುವಂತಿಲ್ಲ. ನುಡಿಗಟ್ಟುಗಳು, ಗಾದೆಗಳು ಮೊದಲಾದ ಇತರ ಭಾಷಾ ಜೀವಾಳದ ವಿಷಯಗಳನ್ನು ಒಳಗೊಂಡಿರಬೇಕು. ಜನಪದ ಕಲೆ, ವಿನೋದ, ವೃತ್ತಿ, ಧಾರ್ಮಿಕ ಚಟುವಟಿಕೆಗಳೂ ಇತ್ಯಾದಿಗಳಿಗೆ ಸಂಬಂಧಿಸಿದ ಶಬ್ದ ಸಂಪತ್ತು ಅದರಲ್ಲಿ ಶೇಖರಣೆಯಾಗಿದೆ.
ಈ ನಿಘಂಟಿನ ವೈಶಿಷ್ಟ್ಯಗಳನ್ನು ಹೀಗೆ ಕಲೆ ಹಾಕಬಹುದಾಗಿದೆ. ಶಿಷ್ಟ ಸಾಹಿತ್ಯ, ಜಾನಪದ ಹಾಗೂ ಉಪಭಾಷೆಗಳ ಬಳಕೆ ಎಲ್ಲ ವರ್ಗದ ಆಡುನುಡಿಗಳಿಗೂ ಸಮಾನ ಸ್ಥಾನ, ಪ್ರಾಚೀನ ಸಾಹಿತ್ಯ, ಪಾಡ್ದನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯದ ಉದ್ಧರಣೆ, ಗಾದೆ, ಒಗಟು, ನುಡಿಗಟ್ಟುಗಳ ಉಲ್ಲೇಖ ಕನ್ನಡ ಲಿಪಿಯೊಂದಿಗೆ ಪರಿಷ್ಕೃತ ರೋಮನ್‌ಲಿಪಿಯ ಬಳಕೆ, ಇಂಗ್ಲಿಷ್‌ಮತ್ತು ಕನ್ನಡದಲ್ಲಿ ಅರ್ಥ ವಿವರಣೆ, ವಾಚ್ಯಾರ್ಥ, ವ್ಯಂಗ್ಯಾರ್ಥ, ವಿಶೇಷಾರ್ಥ, ಹೀನಾರ್ಥ, ಅನ್ಯಾರ್ಥ ಮುಂತಾದ ಹಲವಾರು ಅರ್ಥಗಳ ಉಲ್ಲೇಖ. ವೃತ್ತಿ, ಕಲೆ, ವಿನೋದ ಆಚರಣೆ, ನಂಬಿಕೆಗಳ ಬಗ್ಗೆ ವಿವರಣೆಗಳು, ವ್ಯಾಕರಣ ಸಂಧಿ ವಿವರಗಳು, ಪದಗಳ ಸಾಂದರ್ಭಿಕ ರೂಪಭೇದಗಳು, ಸಮಾನಾರ್ಥಕ ಪದಗಳು ಮುಂತಾದವುಗಳ ಉಲ್ಲೇಖ. ಪ್ರತ್ಯಯಗಳ ಭಾವೋದ್ಗಾರಗಳು, ಬಾಲಭಾಷೆಯ ಪದಗಳು ಗುಪ್ತ ಭಾಷೆಯ ಪದಗಳು ಮುಂತಾದವುಗಳ ಉಲ್ಲೇಖ ಸಮಾಸ ಪದಗಳು, ಸಾಧಿತ ರೂಪಗಳು, ನುಡಿಗಟ್ಟುಗಳು ಇವುಗಳ ವಿವರಣೆಗಳನ್ನು ಉದಾಹರಣೆಗಳೊಂದಿಗೆ ಕೊಡಲಾಗಿದೆ.
ಒಂದು ರೂಪ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ರೂಪ ಛಾಯೆಯನ್ನು ಪಡೆದುಕೊಳ್ಳುತ್ತದೆ. ಉಡುಪಿಯ 'ತೌಡು' ಕಾರ್ಕಳ ಜೈನರ ಮಾತಿನಲ್ಲಿ 'ಹೌಡು' ಪುತ್ತೂರಿನ ಹರಿಜನರ ಮಾತಿನಲ್ಲಿ 'ಚೌಡು' ಎಂಬ ರೂಪಗಳಲ್ಲಿ ಕಂಡುಬರುತ್ತದೆ. ಅಂದರೆ ಒಂದು ನಿರ್ದಿಷ್ಟವಾದ ಧ್ವನಿ ಪರಿಸರದಲ್ಲಿ ಉಡುಪಿ ಪ್ರಭೇದದ ಶಬ್ದದ ಆದಿ'ತ' ಕಾರಕ್ಕೆ ಪ್ರತಿಯಾಗಿ ಕಾರ್ಕಳ ಜೈನರ ಪ್ರಭೇದದಲ್ಲಿ 'ಚ'ಕಾರ ಕಂಡುಬರುತ್ತದೆ. ಈ ಎಲ್ಲ ಅಂಶಗಳು ಪ್ರಸ್ತುತ ನಿಘಂಟಿನಲ್ಲಿ ದಾಖಲಾಗಿವೆ.
ನಿಘಂಟುಗಳಲ್ಲಿ ಸಾಮಾನ್ಯವಾಗಿ ಮೂಲಧಾತುಗಳನ್ನು ಸಮಸ್ತ ಪದಗಳನ್ನು ಮಾತ್ರ ಕೊಡುತ್ತಾರೆ. ಆದರೆ ಈ ನಿಘಂಟಿನಲ್ಲಿ ತುಳು ಭಾಷೆಯ ಪ್ರತ್ಯಗಳನ್ನು ಬೇರೆ ಬೇರೆ ಉಪಭಾಷೆಗಳಲ್ಲಿ ಕಂಡುಬರುವ ಆ ಪ್ರತ್ಯಗಳ ರೂಪ ಭೇದಗಳನ್ನೂ ಅವುಗಳ ಕನ್ನಡ-ಇಂಗ್ಲಿಷ್‌ಅರ್ಥ ಮತ್ತು ಪ್ರಯೋಗಗಳನ್ನೂ ಕೊಡಲಾಗಿದೆ. ಮುಖ್ಯ ಉಲ್ಲೇಖಗಳ ಉಪ ಉಲ್ಲೇಖಗಳಾಗಿ ಸಾಧಿತ ಪದ, ಸಮಾಸ ಪದಗಳು ಮಾತ್ರವಲ್ಲದೆ ಆ ಪದದಿಂದ ಸಾಧಿತವಾದ ವಾಗ್ರೂಢಿ ಹಾಗೂ ನುಡಿಗಟ್ಟುಗಳನ್ನು ಕೊಡಲಾಗಿದೆ.