text
stringlengths
0
61.5k
ಆಟ aṭa N. / Chitji : ಅಟೊ atochitj cf ಹಟ hata n. 1 ಮೊಂಡುತನ; ಹಠ obstinacy ೨ ಹಗೆ, ಪ್ರತಿಕಾರ Retaliation revenge Skt. hatha ಇದರ ಅಡಿಯಲ್ಲಿ
ಅಟತಾಯೆ – aṭataaye ಹಟಗಾರ An obstinate person
ಅಟಮಾರಿ – aṭamari; ಹಟಮಾರಿ an obstinate person
ಅಟವಾದಿ – aṭvaadi ಹಟವಾದಿ An extremely obstinate person
'ಆಟ' ಹಾಗೂ ಅದರಿಂದ ನಿಷ್ಪನ್ನವಾದ ಸಾಧಿತ ರೂಪಗಳನ್ನು ಅದರ ಅಡಿಯಲ್ಲಿ ಕೊಟ್ಟಿದ್ದಾರೆ. ಅದರಂತೆ 'ಬೆಲ್ಲ' ಎಂಬ ಪದದ ಉಪು ಉಲ್ಲೇಖವಾಗಿ ಅರಿಬೆಲ್ಲ, ಅಚ್ಚಿಬೆಲ್ಲ, ಊರಬೆಲ್ಲ, ನೀರ್ಬೆಲ್ಲ ಪಾತ್ರೆಬೆಲ್ಲ ಮುಂತಾದ ಸಮಾಸ ಪದಗಳನ್ನು ಕೊಟ್ಟ ನಂತರ 'ಬೆಲ್ಲ ತಾರಾಯಿ' (ತೆಂಗಿನ ಕಾಯಿ ತುರಿ ಮತ್ತು ಬೆಲ್ಲದ ಮಿಶ್ರಣ) 'ಬೆಲ್ಲ ತೆಲ್ಲವು' (ಬೆಳ್ತಿಗೆ ಅಕ್ಕಿಯೊಂದಿಗೆ ಬೆಲ್ಲದ ತೆಂಗಿನ ತುರಿಯನ್ನು ಬೆರಸಿ, ರುಬ್ಬಿ ಮಾಡಿದ ದೋಸೆ) ಬೆಲ್ಲದಿಂದ ನಿಷ್ಪನ್ನವಾದ ಸಮಸ್ತ ಪದಗಳನ್ನು ಒಂದೆಡೆ ಕೊಡಲಾಗಿದೆ. ಇದರಿಂದ ತುಳು ಭಾಷೆಯಲ್ಲಿ ಬಳಕೆಯಲ್ಲಿರುವ ವಾಕ್ಯಾಂಶಗಳನ್ನು ಶೈಲಿಯ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಮುಖ್ಯ ನಮೂದುಗಳ ಅರ್ಥವನ್ನು ಅತ್ಯಂತ ಸರಳವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರೂಪಿಸಿದ್ದಾರೆ.
ಆಡ್ಡದೇವಿ aḍḍa deruni (ಅಡ್ಡಲಾಗಿ ಉಳಲಿಕ್ಕೆ ಎತ್ತುಗಳನ್ನು) ಒಂದು ಪಕ್ಕಕ್ಕೆ ಹೊಡೆಯುವುದು; ಅಡ್ಡಕ್ಕೆ ಅಟ್ಟುವುದು. Driving bullocks (cross -wise when ploughing)
ಅಡ್ಡನಲಿಕೆ aḍḍanalike ಅಡ್ಡ ಕುಣಿತ; ಅಡ್ದ ಅಡ್ಡಲಾಗಿ ಕುಣಿಯುವ ಭೂತದ ನೃತ್ಯದ ಒಂದು ವಿಧಾನ. A type of cross -dance performed by the Bhuta impersonator.
ಭಾಷೆಯಲ್ಲಿ ಪದಗಳು ಬೇರೆ ಬೇರೆ ಸಂದರ್ಭದಲ್ಲಿ (ಔಪಚಾರಿಕ -ಅನೌಪಚಾರಿಕ) ವಿಶೇಷ ಅರ್ಥವನ್ನು ಹೊಂದಿರುತ್ತವೆ. ಪದಗಳಿಗೆ ಕೇವಲ ವಾಚ್ಯಾರ್ಥ, ಅಲಂಕಾರಿಕಾರ್ಥ, ಗೌಣಾರ್ಥಗಳು ಮಹತ್ವಪೂರ್ಣವೆನಿಸುತ್ತವೆ. ತುಳು ನಿಘಂಟಿನಲ್ಲಿ ಪದಗಳು ಪಡೆದುಕೊಳ್ಳುವ ಎಲ್ಲ ಅರ್ಥಗಳನ್ನು ಮುಖ್ಯ ಉಲ್ಲೇಖದ ಅಡಿಯಲ್ಲಿ ಕೊಟ್ಟು ವಿವರಿಸಲಾಗಿದೆ.ಉದಾ -ಕುಳ (Kula) ಎನ್ನುವ ಅರ್ಥವನ್ನು ಕೊಡುವ ತುಳು ಶಬ್ಧ ಕೆಲವು ಸೀಮಿತ ಸಂದರ್ಭದಲ್ಲಿ ಮಾತ್ರ 'ಕುಳ' ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಇತರ ಸಂದರ್ಭದಲ್ಲಿ ರಸವನ್ನು ಕುದಿಸಿ ಪಾತ್ರಕ್ಕೆ ಬರಿಸಿದ ಸ್ಥಿತಿ. ಗಣ್ಯವ್ಯಕ್ತಿತ್ವ, ಕೆರೆ, ತಗ್ಗು ಪ್ರದೇಶ, ಹೆರಿಗೆಯಾದ ಸ್ಥಳ, ಭೂಮಾಲೀಕ, ತೆರಿಗೆ ಇಂತಹ ಅರ್ಥಗಳನ್ನು ಸೂಚಿಸುತ್ತದೆ. ರೂಪಸಾಮ್ಯ ಹೊಂದಿದ ಅರ್ಥ ವ್ಯತ್ಯಾಸವಿರುವ ಮೂಲ ರೂಪಗಳನ್ನು ೧, ೨…. ಹೀಗೆ ಪ್ರತ್ಯೇಕ ಮುಖ್ಯ ನಮೂದುವನ್ನಾಗಿಸಿದೆ.
ಅಡೆಕ / ಅಡಕ aḍeka / aḍaka, N ಅಡೆಕ್ಕೊ aḍekko s. aḍi ಅಗಲ ಕಿರಿದಾದ; ಇಕ್ಕಟ್ಟಾದ Narrow close ೨ ಚಿಕ್ಕ: ಅಡಕ small; short; brifka. adaka
ಆನೆಡ್ಡ್‌ ಅಡಕಾಯಿ ಕುದುರೆಡ್ದ್‌ ಬಲವಾಯಿ ಮೀನ್‌ (ಪಾಡ್ದನ) aaneddu adakaayi kudureddu balavayi minu ಅನೆಗಿಂತ ಕಿರಿದಾದ ಕುದುರೆಗಿಂತ ಬಲಶಾಲಿಯಾದ ಮೀನು
೨. ಆಡೆಕ / ಅಡಕ adeka / adaka n. adi ೧. ಒಪ್ಪವಾದ; ಸರಿ ಹೊಂದುವ Appropriate Suitable ೨. ವಿದೇಯ ವಿನಯ ಶೀಲ Loyal; Modest
ಒಂದು ಪದಕ್ಕೆ ಒಂದು ಪ್ರದೇಶಲ್ಲಿ ಒಂದು ರೀತಿಯ ಅರ್ಥಗಳಿದ್ದರೆ ಇನ್ನೊಂದು ಪ್ರದೇಶದಲ್ಲಿ ಇನ್ನೊಂದು ರೀತಿಯ ಅರ್ಥಗಳಿರುವುದು ಸಾಧ್ಯವಿದೆ. ತುಳುವಿನಲ್ಲಿ 'ಮಡ್ಡಿ' ಎಂಬ ಪದಕ್ಕೆ ಕದಳೆ ಬೇಳೆಗೆ ಸಕ್ಕರೆ ಅಥವಾ ಬೆಲ್ಲ ಬೆರೆಸಿ ತಯಾರಿಸಿದ ಸಿಹಿತಿಂಡಿ ಎನ್ನುವ ಅರ್ಥ ಒಂದು ಪ್ರದೇಶದಲ್ಲಿದ್ದರೆ, ಇನ್ನೊಂದು ಪ್ರದೇಶದಲ್ಲಿ ದನಗಳ ಆಹಾರ ಎನ್ನುವ ಅರ್ಥವಿದೆ. ಒಂದೇ ವಸ್ತುವನ್ನು ನಿರ್ದೇಶಿಸಲು ಬೇರೆ ಬೇರೆ ಪಂಗಡದವರು ಬೇರೆ ಬೇರೆ ಪದಗಳನ್ನು ಉಪಯೋಗಿಸುವರು 'ಮನೆ' ಎಂಬ ಅರ್ಥಕ್ಕೆ ತುಳುವಿನಲ್ಲಿ ಇಲ್ಲ್‌, ಗುಡಿಲ್‌, ಕೊಟ್ಟ ಮುಂತಾದ ಪದಗಳಿವೆ. ಇವು ಬೇರೆ ಬೇರೆ ಪಂಗಡದವರು ಬಳಸುವ ಪದಗಳಾಗಿವೆ. ಇವೆಲ್ಲವೂ ಈ ನಿಘಂಟಿನಲ್ಲಿ ದಾಖಲಾಗಿವೆ ಎಂಬುದನ್ನು ಗಮನಿಸಬೇಕು. ಉಪಾಭಾಷಾ ಸಾಮಗ್ರಿಗಳಲ್ಲಿ ಕೋಶಕಾರರಿಗೆ ವಿಶಿಷ್ಟ ರೀತಿಯ ಸಾಧಿತ ಪದಗಳು ಸಿಕ್ಕುತ್ತವೆ. ಅವುಗಳಲ್ಲಿ ಸಂಸ್ಕೃತಿ – ಸಮಾಜ ವೃತ್ತಿಗಳಿಗೆ ಸಂಬಂಧಿಸಿದ ಅರ್ಥವು ವಿಶೇಷವಾಗಿ ಅಭಿವ್ಯಕ್ತವಾಗುತ್ತದೆ. ಉದಾ ತುಳುವಿನಲ್ಲಿ 'ಅರಿ' ಎಂದರೆ 'ಅಕ್ಕಿ' ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪದಪುಂಜಗಳನ್ನು ಕಾಣಬಹುದು.
ಅರಿಕುರ್ಕುನಿ / ಮೃತನ ಪತ್ನಿಯು ಒಂದು ಬುಟ್ಟಿ ಅಕ್ಕಿಯನ್ನು ತೊಳೆಯುವುದು /
ಅರಿಪಾವುನಿ / ಅಕ್ಕಿಯನ್ನು ತಲೆಯ ಮೇಲೆ ಎರಚಿ ಆಶೀರ್ವದಿಸುವುದು /
ಅರಿಪಣಪು / ಕನ್ಯಾ ಶುಲ್ಕ
ಪದಗಳ ಬಳಕೆಯ ಸಂದರ್ಭವನ್ನು ಅನುಲಕ್ಷಿಸಿ ಸಾಂಸ್ಕೃತಿಕ ಟಿಪ್ಪಣಿಗಳೊಂದಿಗೆ ಅವುಗಳನ್ನು ದಾಖಲಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಶಬ್ಧಗಳಿಗೆ ಅರ್ಥವನ್ನು ಕೊಡುವಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಸುಂದರವಾದ ದೃಷ್ಟಾಂತಗಳನ್ನು ಉಪಮೇಯಗಳನ್ನು ಕೊಟ್ಟಿದ್ದಾರೆ.
ಉದಾ : ಪತ್ತ್‌ (ಹತ್ತು) ಪದವನ್ನು ವಿವರಿಸುವಾಗ ಸಂದರ್ಭಕ್ಕನುಗುಣವಾಗಿ 'ಪತ್ತ್‌ ಬಿರಲ್‌ ಪಂದ್‌ಂಡ್‌ ಆಯಿನ್‌ ಬಿರೆಲ್‌ ಬಾಯಿಡ್‌ ಪೋವು' (ಹತ್ತು ಬೆರಳು ಅಲ್ಲಾಡಿಸಿದರೆ ಐದು ಬೆರಳು ಬಾಯಿಗೆ ಹೋದೀತು). ಅಂದರೆ ಕಷ್ಟ ಪಟ್ಟರೆ ಫಲ ಸಿಕ್ಕೀತು. ಇಂತಹ ನುಡು ಮುತ್ತುಗಳು ಪದಾರ್ಥ ವಿವೇಚನೆಗೆ ಅಡ್ದಿಯಾಗುವ ಬದಲು ಅದನ್ನು ಸಾಧುಗೊಳಿಸಬಲ್ಲ ಎಂಬುದಕ್ಕೆ ಅಲ್ಲಲ್ಲಿ ನುಸುಳಿ ಬಂದಿರುವ ಇಂತಹ ಉಪಮೆಗಳು ಸಾಕ್ಷಿಯಾಗಿವೆ.
ಕೋಶದುದ್ದಕ್ಕೂ ತುಳು ಪ್ರದೇಶದಲ್ಲಿಯೂ ಮೀನುಗಳ, ಭೂತಗಳ ಹೆಸರುಗಳು, ಸ್ಥಳನಾಮ ಹಾಗೂ ಕುಲನಾಮಗಳು ದಾಖಲಾಗಿರುವುದರಿಂದ ತುಳು ಪ್ರದೇಶದ ಸಂಸ್ಕೃತಿಯ ಅಧ್ಯಯನಕ್ಕೂ ಇದು ಮಹತ್ವದ ಆಕರವಾಗಿದೆ. ತುಳುವಿನಲ್ಲಿ ಮುಖ್ಯ ಶಬ್ಧ -ಜ್ಞಾತಿ ರೂಪಗಳು ಇತರ ದ್ರಾವಿಡ ಭಾಷೆಗಳಲ್ಲಿ ಯಾವ ರೂಪದಲ್ಲಿ ಇವೆಯೆಂಬುದನ್ನು ಪ್ರತ್ಯೇಕವಾಗಿ ನಿರೂಪಿಸಲಾಗಿದೆ.
ಅಲೆಪು alepu ಬಳಲು; ಆಯಾಸಗೊಳ್ಳು Ta: alu;
Ma: alayaru, alasuka. alampuka ka : aiv ka: alasu:
Te. : alayuL Kol: alay
ಅಡೆ ade vn. ೧ ಸೇರು : ತಲಪು Join: reach ೨. ಒದಗಿಬರು Come to hand :be of use Ta. atai; Ma. ata, ka-ade tc. ada
ಇಂತಹ ಜ್ಞಾತಿ ರೂಪಗಳಿಂದ ಮೂಲ ದ್ರಾವಿಡವನ್ನು ಪುನಾರಚಿಸಲು ನೆರವಾಗುತ್ತದೆ. ತುಳು ಭಾಷೆಯ ಚಾರಿತ್ರಿಕ ಪುನರ್‌ ನಿರ್ಮಾಣ ಮಾಡುವವರಿಗೂ ತುಳು ಹಾಗೂ ಇತರ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ ತುಳು ಸಂವಾದಿ ಜ್ಞಾತಿ ರೂಪಗಳು ಸಾಕಷ್ಟು ಮಾಹಿತಿ ನೀಡುತ್ತವೆ.
ಹಳೆಗನ್ನಡದ ಅನೇಕ ರೂಪಗಳನ್ನು ನಾವು ತುಳುವಿನಲ್ಲಿ ಕಾಣಬಹುದು. ಉದಾ -ಬರ್ಪೆ-ಪೋಪೆ, ಕನ್ನಡದಂತೆ ತುಳುವಿನಲ್ಲಿ ಪ > ಹ ಆಗಿಲ್ಲ ಪತ್ತು -ಹತ್ತು ಪರಕೆ -ಹರಕೆ, ಪುಲ್ಲ್‌ಹುಲ್ಲು ತುಳುವಿನಲ್ಲಿ 'ಎ' ಸ್ವರ ಎರಡು ಬಗೆಯಲ್ಲಿದೆ. ಉದಾ : ಆಯೆಬತ್ತೆ (ಅವನು ಬಂದನು) ಯಾನ್‌ಬತ್ತೆ (ನಾನು ಬಂದೆನು) ತುಳುವಿನ ಧ್ವನಿರಚನೆ ಸ್ವರೂಪವನ್ನು ಪ್ರಸ್ತುತ ನಿಘಂಟಿನಲ್ಲಿ ದಾಖಲಿಸಲಾಗಿದೆ. ತುಳುವಿನ ಉಪಭಾಷಿಕ ವೈಶಿಷ್ಟ್ಯಗಳನ್ನು ಅರಿಯಲಿಕ್ಕೆ ಇದು ನೆರವಾಗುತ್ತದೆ. ಒಂದೊಂದು ಪದಕ್ಕೆ ಅನುಗುಣವಾಗಿ ಅರ್ಥವಿವರಣೆಯನ್ನು ಕೊಡಲಾಗಿದೆ. ಅನಗತ್ಯ ವಿವರಣೆಯಾಗಲಿ, ಉದಾಹರಣೆಯಾಗಲಿ ಎಲ್ಲಿಯೂ ಬಂದಿಲ್ಲ. ಒಂದು ಪದಕ್ಕೆ ನಾನಾರ್ಥಗಳಿದ್ದರೆ ೧, ೨, ೩…… ಎಂದು ಉಲ್ಲೇಖಿಸಿ ಅರ್ಥ ಮತ್ತು ಉದಾಹರಣೆಗಳನ್ನು ಕೊಟ್ಟಿರುವುದರಿಂದ ಗೊಂದಲಕ್ಕೆ ಅವಕಾಶವಿಲ್ಲ.
೧. ಕುರು Kuru-ಚಿಗುರು; ಎಳೆ ಎಲೆ A sprout; Spike of corn
೨. ಕುರು Kuru n ads. ೧. ಚಿಕ್ಕ; ಸಣ್ಣದಾದ little; small
೩. ಎಳೆಯ young; tender
೪. ಕುರು Kuru adi ಅದೃಷ್ಟವಾದ; ಗುಸುಗುಸು Indisitinct
ಒಟ್ಟಿನಲ್ಲಿ ಈ ಬಹು ಭಾಷಿಕ ನಿಘಂಟು ಸರ್ವ ಸಂಗ್ರಾಹಕವಾಗಿದ್ದು ತುಳುಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಮಹತ್ವದ ಆಕರ ಗ್ರಂಥವಾಗಿದೆ. ಈ ಕೋಶದ ಹಿಂದಿರುವ ಶಿಸ್ತು, ಶ್ರಮ, ವ್ಯಾಪಾರ ಕ್ಷೇತ್ರ ಕಾರ್ಯದ ನೆಲೆ ಯಾರೂ ಮೆಚ್ಚಬೇಕಾಗಿದೆ. ಕನ್ನಡಲ್ಲಿ ಅಥವಾ ಭಾರತೀಯ ಭಾಷೆಗಳಲ್ಲಿ ಇಷ್ಟೊಂದು ಏಕಪ್ರಕಾರದ ಮಟ್ಟವನ್ನು ಕಾಯ್ದುಕೊಂಡ ನಿಘಂಟುವಿಗೆ ಮತ್ತೊಂದು ಉದಾಹರಣೆ ದೊರಕಲಾರದು. ಒಂದು ಪ್ರದೇಶದ ವಿವಿಧ ಜನ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಗತಿಗಳನ್ನು ಬಿಂಬಿಸುವ ಈ ತೆರನಾದ ನಿಘಂಟು, ಇತರ ಭಾರತೀಯ ಭಾಷೆಗಳಲ್ಲೂ ರಚಿತವಾಗಬೇಕಾಗಿದೆ. ನಿಘಂಟುಗಳ ರಚನೆ ಮತ್ತು ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿ ಕೊಂಡವರಿಗೆ ತುಂಬ ತೃಪ್ತಿತರುವ ಈ ಸಂಪುಟಗಳ ಪ್ರಧಾನ ಸಂಪಾದಕರು ಹಾಗೂ ಪ್ರಕಟಿಸಿದ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರವು ಅಭಿನಂದನಾರ್ಹವಾಗಿದೆ. ಈ ಸಂಪುಟಗಳ ಪ್ರಕಟಣೆಯಿಂದ ನಿಘಂಟು ಶಾಸ್ತ್ರಕ್ಕೆ ಹೊಸತಿರುವು ಪ್ರಾಪ್ತವಾಗಿದೆ. ಒಟ್ಟಿನಲ್ಲಿ ಮಿಶನರಿ ಪಂಡಿತರಿಂದ ಅರಂಭವಾದ ತುಳು ನಿಘಂಟು ಕಾರ್ಯ ದೇಶಿಯ ಪಂಡಿತರಿಂದ ಶಾಸ್ತ್ರೀಯತೆ ಪಡೆದುಕೊಂಡು ಗೋವಿಂದಪೈ ಸಂಶೋಧನ ಕೇಂದ್ರದಲ್ಲಿ ಕ್ರಮಬದ್ಧತೆ ಮತ್ತು ವ್ಯಾಪಕತೆಯನ್ನು ಪಡೆದುಕೊಂಡಿತು.
ನಿಘಂಟು ಕಾರ್ಯ ಎಂದೂ ಪರಿಪೂರ್ಣವಾಗುವುದಿಲ್ಲ. ಭಾಷೆ ಬೆಳೆದಂತೆ ಹಳೆಯ ಶಬ್ಧಗಳು ಬಿದ್ದು ಹೋಗುತ್ತವೆ. ಇಲ್ಲವೇ ಹೊಸ ಅರ್ಥದಲ್ಲಿ ಬಳಕೆ ಬರುತ್ತವೆ. ಹೊಸ ಪದಗಳು ಸಂಕೀಕರಣಗೊಂಡು ಚಲಾವಣೆಗೆ ಬರುತ್ತವೆ. ಇದು ಜೀವಂತ ಭಾಷೆಯಲ್ಲಿ ನಡೆಯುವ ಪ್ರಕ್ರಿಯೆ. ಇದಕ್ಕೆ ತುಳು ಭಾಷೆಯೂ ಹೊರತಲ್ಲ. ತುಂಬ ಶ್ರಮವಹಿಸಿ ಸಿದ್ಧಪಡಿಸಿದ ತುಳು ನಿಘಂಟು ಸಂಪುಟಗಳನ್ನು ಕಂಪ್ಯೂಟರ್‌ನಲ್ಲಿ ಒಳಪಡಿಸಿದರೆ ನಿಘಂಟುಗಳ ಪರಿಷ್ಕರಣಕ್ಕೆ ಅನುಕೂಲವಾಗುತ್ತದೆಯಲ್ಲದೆ ತುಳು ಭಾಷೆಯ ಚಲನ ಶೀಲತೆಯನ್ನು ಅರಿಯಲು ನೆರವಾಗುತ್ತದೆ.
'ಅಚ್ಚೆದಿನ್' ಬೊಗಸ್ ಆಶ್ವಾಸನೆ ನೀಡಿ ವಂಚಿಸಿದ ಪ್ರಧಾನಿ -ರಾಹುಲ್ ಗಾಂಧಿ – janadhvani
'ಅಚ್ಚೆದಿನ್' ಬೊಗಸ್ ಆಶ್ವಾಸನೆ ನೀಡಿ ವಂಚಿಸಿದ ಪ್ರಧಾನಿ -ರಾಹುಲ್ ಗಾಂಧಿ
ನವದೆಹಲಿ,ಆ.7: ಭ್ರಷ್ಟಾಚಾರ, ಆರ್ಥಿಕ ವಿಫಲತೆ, ಸಮಾಜ ಇಬ್ಭಾಗಗಳು ಈ ಸರ್ಕಾರದಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅವರು ಸಂಸತ್ ಭವನದಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ (ಸಿಪಿಪಿ) ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶದ ಜನರಿಗೆ ಅಚ್ಚೆ ದಿನ್ ಎಂಬ ಬೊಗಸ್ ಆಶ್ವಾಸನೆ ನೀಡಿ ವಂಚಿಸಿದ್ದಾರೆ. ಇದರ ವಿರುದ್ಧ ಪರ್ಯಾಯ ಕ್ರಮವನ್ನು ಅನುಸರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಪಕ್ಷದ ಸಂಸದರಿಗೆ ಕರೆ ನೀಡಿದರು.
ಬಿಜೆಪಿ ಸರ್ಕಾರದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ, ಆತಂಕದ ವಾತಾವರಣ ತಾಂಡವವಾಡುತ್ತಿದೆ. ಜನರು ಮೋದಿ ಆಡಳಿತದಿಂದ ಭ್ರಮನಿರಸನಗೊಂಡಿದ್ದು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಅಂತ್ಯಗೊಳಿಸಿ ಪರ್ಯಾಯ ಉತ್ತಮ ಸರ್ಕಾರ ರಚನೆಯಾಗಬೇಕೆಂಬುದು ಜನರ ಬಯಕೆಯಾಗಿದೆ. ಇದನ್ನು ಸಾಕಾರಗೊಳಿಸಲು ಸಂಸದರು ಶ್ರಮಿಸಬೇಕು ಎಂದು ರಾಹುಲ್ ಕರೆ ನೀಡಿದರು. ಇಂದು ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇದನ್ನು ನಾವು ಅರಿತುಕೊಂಡು ಜನರಿಗೆ ಉತ್ತಮ ಸರ್ಕಾರ ನೀಡುವತ್ತ ಕಾರ್ಯೋನ್ಮುಖವಾಗಬೇಕು. ಈಗ ಪ್ರಜಾಪ್ರಭುತ್ವ ಪರ ಪಕ್ಷ ಮತ್ತು ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದರು.
ಮೌನಯಾನ Mounayaana: ಮಾರ್ಚ್ 2017
ಕೆಲಸ ಮಾಡಿಸುವುದಕ್ಕೆ ಉರಿಗೋಪವೇ ಆಗಬೇಕೇ?
"ಒಂದೊಳ್ಳೆ ಕೆಲಸ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು; ಅದೇ ಒಳ್ಳೇ ಬಾಸ್ ಸಿಗಬೇಕಂದ್ರೆ ಹಿಂದಿನ ಜನ್ಮದ ಪುಣ್ಯ ಬೇಕು!"
ಈ ಮಾತು ಕೇಳಿ ಸಾಮಾನ್ಯರು ನಗಬಹುದು. ಆದರೆ ಇಂದಿನ ಐಟಿ ಹಾಗೂಕಾರ್ಪೋರೇಟ್ ಪ್ರಪಂಚದಲ್ಲಿ ದುಡಿಯುತ್ತಿರುವ ಒಬ್ಬನೇ ಒಬ್ಬನೂ ಈ ವಾಕ್ಯ ಸುಳ್ಳೆಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಹಾಗಿದೆ ಔದ್ಯೋಗಿಕ ಬದುಕಿನಲ್ಲಿ ಬಾಸ್ ಗಳ ಪಾತ್ರ.
ಮೊದಲು ಮ್ಯಾನೇಜರ್/ಬಾಸ್ ಬಗ್ಗೆ ತಿಳಿದುಕೊಳ್ಳೋಣ. ಆಧುನಿಕ ಜಗತ್ತಿನ, ಪೈಪೋಟಿಯನ್ನೇ ಉಸಿರಾಗಿಸಿಕೊಂಡು ಚಲಿಸುತ್ತಿರುವ ಖಾಸಗೀ ವಲಯದಲ್ಲಿ ಯಾವುದೇ ವಿಭಾಗದಲ್ಲಿ 'ಬಾಸ್' ಆಗುವುದೆಂದರೆ ತಮಾಷೆಯ ಮಾತಲ್ಲ. ಇಲ್ಲಿ ಯಾರದೋ ಕೈ 'ಬೆಚ್ಚಗೆ' ಮಾಡುವುದರಿಂದ ಅಥವಾ ಯಾವುದೋ ಒಂದು ಜಾತಿಯಲ್ಲಿ ಜನಿಸುವುದರಿಂದ ಮ್ಯಾನೇಜರ್ ಗಳಾಗುವದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ವರ್ಷಗಳ ಅನುಭವ ಬೇಕು. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಚುರುಕುತನ ಬೇಕು. ಕೊರಡನ್ನು ತೇಯ್ದು ಗಂಧವನ್ನು ತೆಗೆಯುವ ಉಪಾಯ ಗೊತ್ತಿರಬೇಕು. ನುಗ್ಗಿ ಬರುವ ಅಲೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರಲ್ಲೇ ಕೊಳೆ ತೊಳೆದುಕೊಳ್ಳುವ ಜಾಣತನವೂ ಇರಬೇಕು! ಆಗಲೇ ಒಬ್ಬ ಸಾಮಾನ್ಯ ಕೆಲಸಗಾರನೊಬ್ಬ 'ಬಾಸ್' ಆಗಲು ಸಾಧ್ಯ. ಆದರೆ ಇಷ್ಟಲ್ಲಾ ದೊಡ್ಡ ಗುಣಗಳನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ತನ್ನ ಕೈಕೆಳಗಿನವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ 'ಸಣ್ಣ' ವಿಷಯವನ್ನವರು ಮರೆಯುತ್ತಿದ್ದಾರಾ?
ಬಹುಷಃ ಹೆಚ್ಚಿನ ಉತ್ತರಗಳು 'ಹೌದು' ಎಂದೇ ಬರುತ್ತವೆ. ಒಂದು ತಂಡವನ್ನಾಗಲೀ, ವ್ವವಸ್ಥೆಯನ್ನಾಗಲೀ ಮುನ್ನಡಿಸಬೇಕೆಂದರೆ ಅಲ್ಲಿ ಒತ್ತಡ ಹಾಕಬೇಕು, ಅಧಿಕಾರಯುತವಾದ ಅಪ್ಪಣೆಯಿರಬೇಕು, ತಪ್ಪುಗಳನ್ನು ತಡೆಯುವ ಗದರಿಕೆಯಿರಬೇಕು.... ಇದೆಲ್ಲಾ ನಿಜವೇ. ಆದರೆ ಎಷ್ಟರಮಟ್ಟಿಗೆ? ಒತ್ತಡವೇ ವಾತಾವರಣವಾಗಿಬಿಟ್ಟರೆ? ಪ್ರತೀ ಮಾತೂ ಗದರಿಕೆಯೇ ಆಗಿಹೋದರೆ? ಪ್ರತಿಯೊಂದು ಕೆಲಸವನ್ನೂ ನಡುಗುವ ಕೈಯ್ಯಲ್ಲೇ ಮಾಡುವಂತಾದರೆ? ಆಗ ಉದ್ಯೋಗವೆನ್ನುವುದು ಕೇವಲ ಯಂತ್ರಗಳೊಂದಿಗೆ ಒಡನಾಡುವ 'ಕರ್ಮ'ವಾಗುತ್ತದೇ ಹೊರತು ಮನಸ್ಸಿಗೆ ನೆಮ್ಮದಿಕೊಡುವ 'ಕಾಯಕ'ವಾಗುವುದೇ ಇಲ್ಲ!
ಐಟಿ,ಕಾರ್ಪೋರೇಟ್ ಉದ್ಯೋಗಿಗಳ ಬದುಕೆನ್ನುವ ದೂರದ ಬೆಟ್ಟದಲ್ಲಿ ಅದೆಷ್ಟೋ ಕಲ್ಲುಮುಳ್ಳುಗಳು. ಬೆಳಗ್ಗೆ ಎದ್ದೊಡನೆಯೇ ತಯಾರಾಗಿ ಓಡಬೇಕು. ರುಚಿಯಿರಲೇಬೇಕು ಎಂದೇನೂ ಇಲ್ಲದ ಬೆಳಗಿನ ಉಪಹಾರ; ತಡವಾದರೆ ಅದೂ ಇಲ್ಲ. ಚಲಿಸುವುದಕ್ಕಿಂತ ನಿಲ್ಲುವುದೇ ಜಾಸ್ತಿಯಿರುವ ಟ್ರಾಫಿಕ್ನಲ್ಲಿ, ಸಂದಣಿಭರಿತ ಬಸ್ನಲ್ಲಿ ಒಂಟಿ ಕಾಲಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಚಾಚಿಕೊಂಡ ತೆಂಗಿನಮರಗಳಂತೆ ನಿಂತು ತಮ್ಮ ಪರ್ಸ್, ಮೊಬೈಲ್ ಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುತ್ತಾ ಆಫೀಸು ತಲುಪಬೇಕು. (ದಿನದ ಮೂರ್ನಾಲ್ಕು ಗಂಟೆಗಳನ್ನು ಅತ್ತ ಆಫೀಸಿನಲ್ಲೂ ಅಲ್ಲದೇ, ಇತ್ತ ಮನೆಯಲ್ಲೂ ಅಲ್ಲದೇ ನಡುದಾರಿಯ ಟ್ರಾಫಿಕ್ನಲ್ಲಿ ತೂಕಡಿಸುತ್ತ ವ್ಯಯಿಸಬೇಕಾದ ಕರ್ಮ ಎಷ್ಟೋ ಜನರಿಗಿದೆ) ದಿನವಿಡೀ ಕಂಪ್ಯೂಟರ್ ಒಳಗಿನ ಲೆಕ್ಕಾಚಾರದ ಆಳದಲ್ಲಿ ಕೈಕಾಲು ಬಡಿಯಬೇಕು. ಮಧ್ಯದಲ್ಲಿ ಮತ್ತದೇ ರುಚಿ-ಶುಚಿಗಳರಿಯದ ಹೊರಗಿನೂಟ. ಸಂಜೆ ಮತ್ತೆ ಟ್ರಾಫಿಕ್ ಎನ್ನುವ ಸಮುದ್ರವನ್ನು ದಾಟಿ ಮನೆ/ರೂಮು ತಲುಪುವಷ್ಟರಲ್ಲಿ ಜೀವ 'ಹಾಸಿಗೆ ಮೇಲೆ ಬಿದ್ದರೆ ಸಾಕು' ಎನ್ನುವಷ್ಟು ದಣಿದುಹೋಗಿರಿತ್ತದೆ. ಆರು ದಿನಗಳು ಕಾದಮೇಲೆ ಸಿಕ್ಕ ವೀಕೆಂಡ್ ಕೇವಲ ಬಟ್ಟೆ ತೊಳೆದು, ಕಸ-ಜಿರಲೆಗಳನ್ನು ಹೊಡೆದಟ್ಟಿ, ಊಟ ತಿಂಡಿ ಮುಗಿಸುವಷ್ಟರಲ್ಲೇ ಮುಗಿದು ಹೋಗುತ್ತದೆ. ಇನ್ನು ನೈಟ್ ಡ್ಯೂಟಿ ಮಾಡುವವರಂತೂ ಈ ಲೋಕದವರಾಗಿಯೇ ಉಳಿದಿರುವುದಿಲ್ಲ. ನಿದ್ರೆಯ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ರೆ. ಯಾವುದಕ್ಕೂ ನಿಗದಿತ ಸಮಯವಿಲ್ಲದೇ ಯಾವುದು ತಿಂಡಿಯೋ, ಯಾವುದು ಊಟವೋ, ಯಾವುದು ನಿನ್ನೆಯೋ, ಯಾವುದು ನಾಳೆಯೋ...ಎಲ್ಲಾ ಅಯೋಮಯವಾಗಿಹೋಗಿರುತ್ತದೆ!
ಹೀಗೆ ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮೀ ಯಾಂತ್ರಿಕತೆಯ ಬಗ್ಗೆ ಸಣ್ಣದಾಗಿ ದೂರುತ್ತಾರಾದರೂ ತಮ್ಮ ಪಾಲಿನ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧರಾತ್ರಿಯ ತನಕ ಗೇಯ್ದರೂ ಸರಿಯೇ, ಮಾಡಬೇಕಾದುದನ್ನು ಮಾಡಿಯೇ ತೀರುತ್ತಾರೆ. ವಿಶ್ರಾಂತಿಗೆಂದು ಇರುವ ಒಂದೇ ಒಂದು ಭಾನುವಾರವನ್ನೂ ಕೆಲವೊಮ್ಮೆ ಉದಾರವಾಗಿ ಬಿಟ್ಟುಕೊಡುತ್ತಾರೆ. ಮುಖದಲ್ಲಿ ಕಾಣುವ ಬೇಸರ ಮಾಡುವ ಕೆಲಸದಲ್ಲೂ ಪ್ರತಿಫಲಿಸಲು ಬಿಡುವುದಿಲ್ಲ. ಆದರೆ ಔದ್ಯೋಗಿಕ ಜೀವನವೊಂದು ಯಾವಾಗ ನರಕವೆನಿಸತೊಡಗುತ್ತದೆ ಗೊತ್ತಾ? ಯಾವಾಗ ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿಯಿರುವುದಲ್ಲವೋ, ಗೌರವವಿರುವುದುಲ್ಲವೋ, ಮಾಡಿದ ಕೆಲಸಕ್ಕೊಂದು ಬೆಲೆ ಅನ್ನುವುದು ದೊರೆಯುವುದಿಲ್ಲವೋ ಆಗ.
ಎಷ್ಟೋ ಬಾರಿ ದಿನವಿಡೀ ಕುಳಿತು ಶ್ರಧ್ದೆಯಿಂದ ಮಾಡಿ ಮುಗಿಸಿದ ಹತ್ತಾರು 'ಎಫರ್ಟ್'ಗಳು ಚಿಕ್ಕದೊಂದು 'ಗುಡ್' ಎಂಬ ಮೆಚ್ಚುಗೆಯನ್ನೂ ಪಡೆಯುವುದಿಲ್ಲ. ಆದರೆ ದಿನದ ಕೊನೆಯಲ್ಲಿ ಮಾಡಿದ ಸಣ್ಣದೊಂದು ತಪ್ಪು ಮೇಲಾಧಿಕಾರಿಯ ಕ್ಯಾಬಿನ್ ತನಕ ಎಳೆದುಬಿಡುತ್ತದೆ. ಚಿಕ್ಕ ಗೌರವವೂಬಿಲ್ಲದೇ ತಾರಾಮಾರೀ ಬೈಗುಳಗಳಿಗೊಳಗಾಗುತ್ತದೆ. ಇಲ್ಲಿ ತನ್ನ 'ಸರಿ' ಗಳಿಗಿಂತ 'ತಪ್ಪು'ಗಳೇ ಹೆಚ್ಚು ಗುರುತಿಸಲ್ಪಡುತ್ತವೆ ಎಂಬ ಭಾವನೆ ಒಮ್ಮೆ ಬಂದುಬಿಟ್ಟರೆ ಮುಗಿದೇ ಹೋಯಿತು, ಆ ವಾತಾವರಣದ ಮೇಲೆ 'ನನ್ನದು' ಎನ್ನುವ ಪ್ರೀತಿ ಹುಟ್ಟುವುದಾದೇ ಇಲ್ಲ. ವರ್ಷವಿಡೀ ಗೇಯ್ದು, ತಮ್ಮ ಜೀವನದ ಅಮೂಲ್ಯ ಸಮಯ, ಬುದ್ಧಿ, ಶ್ರಮಗಳನ್ನೆಲ್ಲಾ ಕಂಪನಿಗಾಗಿ ವ್ಯಯಿಸಿ, ವರುಷದುದ್ದಕ್ಕೂ ಕಾದ 'ಸಂಬಳ ಏರಿಕೆ'ಯ ದಿನ ಆಸೆಯಿಂದ ಮೇಲಾಧಿಕಾರಿಯ ಕ್ಯಾಬಿನ್ ಹೊಕ್ಕಾಗ ಅವರು ನೀವು ವರುಷವಿಡೀ ಮಾಡಿದ ತಪ್ಪುಗಳನ್ನಷ್ಟೇ ಪಟ್ಟಿ ಮಾಡಿಕೊಂಡು ಕೂತಿದ್ದರೆ ಹೇಗಾಗಬೇಡ!?
ಕೆಲವು ಬಾಸ್ ಗಳೇಕೆ ಹಾಗಿರುತ್ತಾರೆ? ಎಲ್ಲರೂ ಎಲ್ಲರೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕೆಂಬ ಹಠಕ್ಕೋ? 'ಕ್ರೋಧಂ ಸರ್ವರ್ಥ ಸಾಧನಂ' ಎಂಬ ತಪ್ಪು ತಿಳುವಳಿಕೆಗೋ? ಬಹುಷಃ ಕಾರಣ ಅವರಿಗೂ ಗೊತ್ತಿರಲಿಕ್ಕಿಲ್ಲ. ಹೆಚ್ಚಿನಸಲ ಒಬ್ಬ ಉರಿಗೋಪದ ಬಾಸ್ ಕೈಕೆಳಗೆ ಪಳಗಿದ ಶಿಷ್ಯನೇ ಮುಂದೆ ಮತ್ತೊಬ್ಬ ಉರಿಗೋಪದ ಬಾಸ್ ಆಗಿ ರೂಪುಗೊಳ್ಳುತ್ತಾನೆ. 'ಅಂದು ನಾನು ಅನುಭವಿಸದ್ದರೆದುರು ಇದೇನೂ ಅಲ್ಲ' ಎನ್ನುವ ಭಾವನೆ ಬೇರೂರಿರುತ್ತದೋ ಅಥವಾ 'ಹೀಗೆ ನಡೆದುಕೊಳ್ಳುವುದೇ ಸರಿಯಾದ ರೀತಿ' ಎಂದುಕೊಂಡಿರುತ್ತಾರೋ ಗೊತ್ತಿಲ್ಲ. ಎಂದೋ ಯಾರೋ ಕಟ್ಟಿಸಿಕೊಂಡ ದಂಡ ಇಂದು ವಸೂಲಾಗುತ್ತಿರುತ್ತದೆ. ದುರಂತವೆಂದರೆ ಇಂದು ತನ್ನ ಕೈಕೆಳಗಿನವರ ಮೇಲೆ ಎಗರಾಡುವಾಗ ಅಂದು ತನ್ನ ಮೇಲಾಧಿಕಾರಿಯ ಕಡುಗೋಪದಿಂದ ತನಗೆಷ್ಟು ನೋವಾಗುತ್ತಿತ್ತೆಂಬುದು ಅವರಿಗೆ ನೆನಪಾಗುವುದೇ ಇಲ್ಲ! ಅಲ್ಲದೇ ಕೆಲವೊಮ್ಮೆ ಅನುಭವದ 'ಆಳ'ಕ್ಕಿಂತ ಹಿರಿತನದ 'ಎತ್ತರ'ವೇ ಹೆಚ್ಚಾಗಿ ಕೆಲಸಮಾಡತೊಡಗುತ್ತದೆ. ತನ್ನ ಮನದೊಳಗೇ ಹಾಕಿಕೊಂಡಿರುವ ಅಥವಾ ಹತ್ತಾರು ವರ್ಷಗಳಿಂದ ಆಚರಿಸುತ್ತಾ, ಆಚರಿಸುತ್ತಾ ಡಿಫಾಲ್ಟ್ ಆಗಿಹೋಗಿರುವ ಸಿದ್ಧಸೂತ್ರದಂತೇ ತನ್ನ ಕೈಕೆಳಗಿನವರೂ ನಡೆಯಬೇಕೆಂದು ಅದು ಬಯಸುತ್ತದೆ.
ಹಾಗಂತ ಎಲ್ಲಾ ಮೇಲ್ವಿಚಾರಕರೂ ಹೀಗೇ ಅನ್ನಲಿಕ್ಕಾಗುವುದಿಲ್ಲ. ಸಂಬಳ, ಪದವಿಗಳ ಬೇಧವಿಲ್ಲದೆ ಗೆಳೆಯನಂತೆ ನಡೆದುಕೊಳ್ಳುವವರಿದ್ದಾರೆ. 'ಏನ್ರೀ, ಹೇಗಿದಾಳ್ರೀ ನಿಮ್ಮ ಗರ್ಲ್ ಫ್ರೆಂಡ್?" ಎಂದು ತಮಾಷೆಮಾಡುವ ಹಗುರ ಮನಸ್ಸಿನವರಿದ್ದಾರೆ. "ಇದೊಂದು ಶನಿವಾರ ವರ್ಕ್ ಮಾಡಿ ಆಯ್ತಾ?" ಎಂದು ಗೌರವಯುತವಾಗಿ ದುಡಿಸಿಕೊಳ್ಳುವ ಜಾಣರಿದ್ದಾರೆ. ಕೆಲಸದಾಚೆಗಿನ ವಿಚಾರಗಳನ್ನೂ ಚರ್ಚಿಸುತ್ತಾ ಮನಸ್ಸಿಗೆ ಹತ್ತಿರವಾಗುವವರಿದ್ದಾರೆ. ಇಂಥವರ ಮಾತನ್ನ ತೆಗೆದು ಹಾಕುವುದು ಎಂತಹವರಿಗೂ ಕಷ್ಟವೇ. ನನ್ನ ಪ್ರಯತ್ನಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿಯೊಬ್ಬ ನನ್ನ ತಪ್ಪುಗಳನ್ನೂ ಗುರುತಿಸಿದಾಗ ನಾನದನ್ನು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ತನ್ನ ಮೇಲೆ ಭರವಸೆಯಿಟ್ಟಿದ್ದಾರೆನ್ನುವುದನ್ನು ಅರಿತುಕೊಂಡ ಪ್ರತಿಯೊಬ್ಬನೂ ಹೆಚ್ಚೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆ ಭರವಸೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲೇ ಯೋಚಿಸುತ್ತಾನೆ.
ಕೆಲಸ ಮಾಡಿಸುವುದೇ ಒಬ್ಬರ ಕರ್ತವ್ಯವಾಗಿರುವಾಗ ಅದನ್ನು ಗೌರವಯುತವಾಗಿಯೇ ಮಾಡಿಸಬಹುದಲ್ಲ? ತಪ್ಪನ್ನು ತಿದ್ದುವ ರೀತಿ ಶಿಲ್ಪಿ ಉಳಿಯಿಂದ ಕೊಟ್ಟ ಏಟಿನಂತಿರಬೇಕಲ್ಲದೇ, ಚಾಲಕ ಚಾವಟಿಯಿಂದ ಕೊಟ್ಟ ಒದೆಯಂತಲ್ಲ ಅಲ್ವಾ? ತಿದ್ದಬೇಕು, ಬೆಳೆಯಲು ಬಿಡಬೇಕು. ಆ ಮೂಲಕ ನಾವು ಬೆಳೆಯಬೇಕು' ಎನ್ನುವ ಉದಾರಗುಣ ಹೊಂದಿರುವ ಬಾಸ್ ಸಿಕ್ಕಿದರೆಂದರೆ ಉದ್ಯೋಗ ಜೀವನದ ಅರ್ಧ ಕಷ್ಟಗಳು ಮುಗಿದಂತೆಯೇ.
ಬಿಎಂಟಿಸಿ ಬಸ್ ಕಂಡಕ್ಟರ್ ಈಗ ಚಿತ್ರ ನಿರ್ದೇಶಕ | Director Nandana Prabhu | BMTC Bus Conductor | Film Preethiya Loka | Vinay | Archana | ಬಿಎಂಟಿಸಿ ಬಸ್ ಕಂಡಕ್ಟರ್ ಈಗ ಚಿತ್ರ ನಿರ್ದೇಶಕ - Kannada Filmibeat
» ಬಿಎಂಟಿಸಿ ಬಸ್ ಕಂಡಕ್ಟರ್ ಈಗ ಚಿತ್ರ ನಿರ್ದೇಶಕ
Published: Friday, June 25, 2010, 17:26 [IST]
ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಸಹ ಚಿತ್ರರಂಗಕ್ಕೆ ಬರುವ ಮುನ್ನ ಕಂಡಕ್ಟರ್ ಆಗಿದ್ದವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಬಿಎಂಟಿಸಿ ಕೊಡುಗೆ ಎಂಬಂತೆ ಮತ್ತೊಬ್ಬ ನಿರ್ವಾಹಕರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ನಟನಾಗಿ ಅಲ್ಲ ನಿರ್ದೇಶಕನಾಗಿ. ರೈಟ್ ರೈಟ್ ಎನ್ನುತ್ತಿದ್ದವರು ಈಗ ಆಕ್ಷನ್, ಕಟ್ ಹೇಳಲಿದ್ದಾರೆ. ಚಿತ್ರದ ಹೆಸರು ಪ್ರೀತಿಯ ಲೋಕ.
ಬಿಎಂಟಿಸಿ ಕಂಡಕ್ಟರ್ ಎಂದ ಮೇಲೆ ಬರಿ ಟಿಕೆಟ್ ಹರಿಯುತ್ತಾ ಹತ್ರಿ, ಇಳೀರಿ, ಮುಂದೆ ಹೋಗ್ರಿ ಅನ್ನೋದಷ್ಟೆ ಅಲ್ಲ ಸಮಯ ಬಿದ್ದರೆ ಡ್ರೈವರ್ ಸೀಟಲ್ಲೂ ಕೂರಬೇಕಾಗುತ್ತದೆ. ಹಾಗಾಗಿ ಇವರಿಗೆ ಬೆಂಗಳೂರಿನ ಹಲವಾರು ರೂಟ್ ಗಳ ಪರಿಚಯ ಅಂಗೈ ನೆಲ್ಲಿ ಇದ್ದಂತೆ. ಹೆಸರು ಏನು ಅಂದ್ರಾ? ಅದೇ ರೀ ನಂದನ ಪ್ರಭು ಅಂತ. ಚಿತ್ರದ ಹೆಸರು ಪ್ರೀತಿಯ ಲೋಕ.
ಸ್ವತಃ ಕತೆಯನ್ನು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ ನಂದನ ಪ್ರಭು. ಚಿತ್ರದ ಮುಖ್ಯಭೂಮಿಕೆಯಲ್ಲಿ ವಿನಯ್ ಮತ್ತು ಅರ್ಚನಾ ಇದ್ದಾರೆ. ಚಿತ್ರದಲ್ಲಿ ಇವರು ಖಳನಟನಾಗಿಯೂ ಕಾಣಿಸಲಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.
ಚಿತ್ರದ ಹೀರೋ ವಿನಯ್ ಇಂಜಿನಿಯರಿಂಗ್ ವಿದ್ಯಾರ್ಥಿ. ಕ್ಯಾಮೆರಾಗೆ ಮುಖ ಮಾಡುವುದಕ್ಕೂ ಮುನ್ನ ನಿರ್ದೇಶಕರು ಮೂರು ತಿಂಗಳ ಕಾಲ ತಮಗೆ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಉತ್ತಮ ಪ್ರೇಮಗೀತೆಗಳು ಇವೆ ಎನ್ನುತ್ತಾರೆ ವಿಜಯ್.
ಚಿತ್ರಕ್ಕೆ ಸಾಯಿ ಕಿರಣ್ ಅವರ ಸಂಗೀತವಿದೆ. ಇದು ಅವರ ಮೊದಲ ಸಂಗೀತ ಸಂಯೋಜನೆಯ ಚಿತ್ರ. ಸುಮಾರು ಒಂದು ಕೋಟಿ ಬಜೆಟ್ ಚಿತ್ರ ಇದಾಗಿದ್ದು ಪಿಡಬ್ಲ್ಯು ಡಿ ಗುತ್ತಿಗೆದಾರ ಮಾಧವ ರೆಡ್ಡಿ ನಿರ್ಮಾಪಕರು. ಚಿತ್ರಕ್ಕ್ಕೆ ಹಣ ಹೂಡಲು ನಿರ್ದೇಶಕರ ಬದ್ಧತೆಯೇ ಕಾರಣ ಎಂದಿದ್ದಾರೆ ನಿರ್ಮಾಪರು.
Read more about: ಪ್ರೀತಿಯ ಲೋಕ ರಜನಿಕಾಂತ್ ಬಿಎಂಟಿಸಿ ವಿನಯ್ ಅರ್ಚನಾ ಬಸ್ ಕಂಡಕ್ಟರ್ ಡ್ರೈವರ್ ನಂದನ ಪ್ರಭು ಮಾಧವ ರೆಡ್ಡಿ ಸಾಯಿ ಕಿರಣ್ ಚಿತ್ರ ನಿರ್ದೇಶನ preethiya loka vinay archana madhava reddy rajinikanth nandana prabhu
ಈ ನಾಲ್ಕು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹುಟ್ಟಿನಿಂದಲೇ ಶ್ರೀಮಂತರಾಗುವ ಅದೃಷ್ಟವನ್ನ ಪಡೆದುಕೊಂಡಿದ್ದಾರೆ.?? - INDIANSPOST.COM
ಸಾಮಾನ್ಯವಾಗಿ ಅದೃಷ್ಟ ಎನ್ನುವುದು ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಬಂದಿರುವುದಿಲ್ಲ. ಗ್ರಹಗತಿಗಳ ಅನುಗುಣವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ಅದೃಷ್ಟ ಸಮಯ ಬರುತ್ತದೆ. ಆಗ ಮಾತ್ರ ಆ ವ್ಯಕ್ತಿಯು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಲೂ ಪ್ರಯತ್ನಿಸುತ್ತಾನೆ. ಆದರೆ ಈ ನಾಲ್ಕು ರಾಶಿಯ ಜನರು ಹುಟ್ಟಿದಾಗಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷವಾಗಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಇಂತಹ ಅನುಭವಗಳನ್ನು ಕಂಡಿರುತ್ತೀರಿ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಅತಿಯಾಗಿ ಬಡತನದಿಂದ ಇರುತ್ತರೆ ಹಾಗೂ ಊಟಕ್ಕೆ ತುಂಬಾ ಕಷ್ಟಪಡುತ್ತಿರುತ್ತಾರೆ. ಆದರೆ ಆ ಮನೆಯಲ್ಲಿ ಯಾವುದಾದರೂ ಒಂದು ಮಗು ಜನಿಸಿದಾಗ ಕುಟುಂಬಕ್ಕೆ ಇರುವ ಕಷ್ಟಗಳು ನಿವಾರಣೆಯಾಗಿ ಹಣಕಾಸಿನ ಅಭಿವೃದ್ಧಿ ಆರ್ಥಿಕ ಅನುಕೂಲತೆಗಳು ಕಂಡುಬರುತ್ತದೆ.
ಆದ್ದರಿಂದ ಅವರು ಉತ್ತಮವಾದ ಜೀವನವನ್ನು ನಡೆಸುವ ಅಂತಕ್ಕೆ ಬರುತ್ತಾರೆ. ಸಾಮಾನ್ಯವಾಗಿ ಕೆಲವರು ಮಗು ಹುಟ್ಟಿದ ಮೇಲೆ ಮನೆಯಲ್ಲಿ ಅಭಿವೃದ್ಧಿ ಕಂಡುಬಂದಿದ್ದು. ಈ ಮಗು ಅದೃಷ್ಟವನ್ನು ತಂದುಕೊಟ್ಟಿತ್ತು ಎಂದು ಮಾತಾಡುತ್ತಾರೆ. ಇಂತಹ ರಾಶಿಯವರಿಗೆ ಹುಟ್ಟಿನಿಂದಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿದ್ದಾರೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಈ ಸಮಯದಲ್ಲಿ ಹುಟ್ಟಿದ ಕೆಲ ಮಕ್ಕಳು ಮನೆಯ ಕಷ್ಟಗಳನ್ನು ಪರಿಹಾರ ಮಾಡುತ್ತವೆ ಮತ್ತು ಮನೆಗೆ ಅದೃಷ್ಟವನ್ನು ತಂದುಕೊಡುತ್ತವೆ. ಹಾಗಾದರೆ ಆ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಯಾವುವು ಎಂದು ಹೇಳುವುದಾದರೆ ಕುಂಭ ರಾಶಿ,ತುಲಾ ರಾಶಿ,ಸಿಂಹ ರಾಶಿ ಮತ್ತು ಕನ್ಯಾ ರಾಶಿ.
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅದೃಷ್ಟವಂತರು ಎಂದು ಹೇಳಬಹುದು. ಇವರ ಜೊತೆಗೆ ಜನಿಸಿದ ಸಮಯ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತದೆ.ಕೆಲವರ ಮನೆಯಲ್ಲಿ ವಿಪರೀತ ಕಷ್ಟ ಇರುತ್ತದೆ. ಇನ್ನು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಗ ಮನೆಯಲ್ಲಿ ಶುಭ ಕಾರ್ಯ ನಡೆದು ಆ ಮನೆಯಲ್ಲಿ ಹೊಸ ವ್ಯಕ್ತಿ ಆಗಮನವಾದರೆ ಅಥವಾ ಒಂದು ಮಗುವಿನ ಜನನವಾದರೆ ಆ ಮನೆಯಲ್ಲಿ ಕಷ್ಟಗಳೆಲ್ಲ ಪರಿಹಾರವಾಗುತ್ತದೆ. ಆದರೆ ಕಷ್ಟ ಪರಿಹಾರ ಆಗುವುದು ಶ್ರಮದಿಂದ ವರೆತು ಯಾವುದೇ ಸಮಯ ಸಂದರ್ಭ ಕೂಡಿ ಬಂದಾಗ.
ಆದ ಕಾರಣ ಸಮಯವನ್ನು ನಂಬಬೇಕು ಮತ್ತು ಅದೃಷ್ಟವನ್ನು ನಂಬಬೇಕು ಹಾಗೂ ಪರಿಶ್ರಮವನ್ನು ನಂಬಬೇಕು.ಹಾಗಾಗಿ ಎಷ್ಟೋ ಜನರ ಜೀವನದಲ್ಲಿ ಇಂತಹ ಘಟನೆಗಳು ನಡೆದಿದೆ.ಇಂತಹ ಜ್ಯೋತಿಷ್ಯರ ಮಾತುಗಳನ್ನು ನಂಬಲು ಬಲವಾದ ಕಾರಣ ಇರುತ್ತದೆ.ಒಟ್ಟಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿದ್ದು ಮನೆಯಲ್ಲಿ ಇರುವಂತಹ ಕಷ್ಟಗಳನ್ನು ನಿವಾರಣೆ ಮಾಡುವಂತಹ ಯೋಗ ಫಲಗಳನ್ನು ಈ ರಾಶಿಯವರು ಪಡೆದುಕೊಂಡು ಬಂದಿದ್ದಾರೆ.
ಪರಿಷತ್ ಚುನಾವಣಾ ಪೂರ್ವಭಾವಿ ಸಭೆ: ನೀತಿ ಸಂಹಿತೆ ಜಾರಿ-ಎಡಿಸಿ | Sanjevani
Home ಜಿಲ್ಲೆ ರಾಯಚೂರು ಪರಿಷತ್ ಚುನಾವಣಾ ಪೂರ್ವಭಾವಿ ಸಭೆ: ನೀತಿ ಸಂಹಿತೆ ಜಾರಿ-ಎಡಿಸಿ
ರಾಯಚೂರು,ನ.೧೩- ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾವಣೆ ಘೋಷಣೆಯಾಗಿದ್ದು, ಸಾರ್ವತ್ರಿಕ ಚುನಾವಣೆ ರೀತಿಯಲ್ಲಿಯೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಹೇಳಿದರು.
ಅವರು ನ.೧೨ರ ಶುಕ್ರವಾರ ದಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀತಿ ಸಂಹಿತೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಡಿಸೆಂಬರ್ ೧೬ರ ವರೆಗೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳು ಸೇರಿ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ನೀತಿ ಸಂಹಿತೆ ಉಲ್ಲಂಘಿಸದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.
ನ.೧೬ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನ.೨೩ರವರೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನ. ನ.೨೪ರಂದು ನಾಮಪತ್ರ ಪರಿಶೀಲನೆ, ನ.೨೬ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಡಿ.೧೦ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಡಿ೧೪ರಂದು ಮತಗಳ ಎಣಿಕೆ ನಡೆಯಲಿದ್ದು, ಡಿ೧೬ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಹೇಳಿದರು.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಮತ ದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ಮುಗಿದ ತಕ್ಷಣ ಅರ್ಹ ಮತದಾರರ ಅಂತಿಮ ವಿವರಗಳನ್ನು ಸಲ್ಲಿಸಲಾಗುವುದು. ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳಿಗೂ ಅನ್ವಯವಾಗುತ್ತದೆ ಎಂದರು.
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಕಚೇರಿಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗುವುದು. ಈ ಬಾರಿ ಒಟ್ಟು ೩೩೯ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸದಸ್ಯರು ಸೇರಿ ೬೫೦೩ ಮತದಾರರು ಇದ್ದಾರೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯಗೊಂಡಿರುವುದರಿಂದ ಮತ ಚಲಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದರು.
ಸಿಎಸ್‌ಡಿಎಸ್ ಸಮೀಕ್ಷೆ | ಕುಸಿದ ಮೋದಿ ಅಲೆ, ಏರಿದೆ ರಾಹುಲ್ ಜನಪ್ರಿಯತೆ
ಮೋದಿ ಅಲೆ ದೇಶದಾದ್ಯಂತ ಕಡಿಮೆಯಾಗಿರುವ ಸಂಕೇತವನ್ನು ಸಿಎಸ್‌ಡಿಎಸ್ ಸಮೀಕ್ಷೆ ಹೇಳಿದೆ. ಹಾಗೆಯೇ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಹತಾಶಭಾವ ಮೂಡಿದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಬೇಡ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ
2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೇ ಬಿಜೆಪಿಯ ಪ್ರಭಾವ ದೇಶದಲ್ಲಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪ್ರಗತಿ ಕುಂಠಿತವಾಗಿದೆ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಷ್ಟಸಾಧ್ಯವಾಗಲಿದೆ ಎಂದು ಸಿಎಸ್‌ಡಿಎಸ್-ಲೋಕನೀತಿ ನಡೆಸಿರುವ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕ್ರಮವಾಗಿ ಶೇ. ೫ ಮತ್ತು ಶೇ. ೧೫ರಷ್ಟು ಬಿಜೆಪಿಗಿಂತ ಮುಂದಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ದ್ವಿಪಕ್ಷೀಯ ಸ್ಪರ್ಧೆ ಇರುವ ಕಾರಣದಿಂದ ಮತಪ್ರಮಾಣದಲ್ಲಿ ಸಣ್ಣ ಅಂತರವೂ ಸ್ಥಾನಗಳ ವಿಚಾರದಲ್ಲಿ ದೊಡ್ಡ ವ್ಯತ್ಯಾಸ ತರುವ ಸಾಧ್ಯತೆಯಿದೆ.
ಸಿಎಸ್ಡಿಎಸ್-ಲೋಕನೀತಿ ಸಮೀಕ್ಷೆಯಲ್ಲಿ ೧೯ ರಾಜ್ಯಗಳಲ್ಲಿ ಏಪ್ರಿಲ್ ೨೦ರಿಂದ ಮೇ ೧೭ರ ನಡುವೆ ಐವತ್ತು ಸಾವಿರ ಜನರನ್ನು ಸಂದರ್ಶಿಸಲಾಗಿದೆ. ಇದೇ ಸಂಸ್ಥೆ 2017 ಮೇ ಮತ್ತು 2018 ಜನವರಿಯಲ್ಲಿ ನಡೆಸಿದ ಸಮೀಕ್ಷೆಯ ಜೊತೆಗೆ ಈಗಿನ ಸಮೀಕ್ಷೆಯನ್ನು ಹೋಲಿಸಿ ನೋಡಿದಾಗ ದೇಶವಾಸಿಗಳ ಅಭಿಪ್ರಾಯದಲ್ಲಿ ದೊಡ್ಡ ಮಟ್ಟಿನ ಬದಲಾವಣೆಯಾಗಿರುವುದು ಕಂಡುಬಂದಿದೆ. ಇತ್ತೀಚೆಗಿನ ಮೂರು ಸಮೀಕ್ಷೆಗಳನ್ನು ಹೋಲಿಸಿ ನೋಡಿದಾಗ ಕಂಡುಬಂದ ಪ್ರಮುಖ ಬದಲಾವಣೆಗಳು ಹೀಗಿವೆ:
ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಸಿತ
ಮೋದಿ ಅಲೆ ದೇಶದಾದ್ಯಂತ ಕಡಿಮೆಯಾಗಿರುವ ಸಂಕೇತವನ್ನು ಸಿಎಸ್‌ಡಿಎಸ್ ಸಮೀಕ್ಷೆಯಿಂದ ಬಹಿರಂಗವಾಗಿದೆ. ಹಾಗೆಯೇ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಹತಾಶಭಾವ ಮೂಡಿದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಬೇಡ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ೧೯ ರಾಜ್ಯಗಳ ೧೭೫ ಲೋಕಸಭಾ ಕ್ಷೇತ್ರಗಳ ೧೫,೮೫೯ ಜನರನ್ನು ಮಾತನಾಡಿಸಿದಾಗ ಸುಮಾರು ಶೇ. ೪೭ರಷ್ಟು ಮಂದಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಆರಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಬಿಜೆಪಿ ಮಟ್ಟಿಗೆ ಈ ಸಂಖ್ಯೆ ನಿರಾಶಾದಾಯಕ. ೨೦೧೪ರ ಚುನಾವಣೆಗೆ ಮೊದಲು ೨೦೧೩ರ ಜುಲೈನಲ್ಲಿ ನಡೆದ ಸಮೀಕ್ಷೆಯಲ್ಲಿ ಯುಪಿಎ ಸರ್ಕಾರ ಶೇ.೩೯ರಷ್ಟು ಮಂದಿ ಮಾತ್ರ ಯುಪಿಎ ಸರ್ಕಾರಕ್ಕೆ ಮತ್ತೊಂದು ಬಾರಿ ಅವಕಾಶ ಕೊಡುವ ವಿರುದ್ಧ ಅಭಿಪ್ರಾಯವ್ಯಕ್ತಪಡಿಸಿದ್ದರು. ಅಷ್ಟು ಪ್ರಮಾಣದ ಆಕ್ರೋಶವಿದ್ದಾಗಲೇ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಗಳಿಗೆ ಸೀಮಿತವಾಗಿದ್ದು ಈಗ ಇತಿಹಾಸ. ಹಿಂದೂ ಮತದಾರರಲ್ಲಿ ಶೇ. ೪೨ರಷ್ಟು ಮಂದಿ ಮೋದಿ ಸರ್ಕಾರಕ್ಕೆ ಮತ್ತೊಂದು ಬಾರಿ ಅವಕಾಶ ಕೊಡಲು ಸಿದ್ಧರಿಲ್ಲ. ಮುಖ್ಯವಾಗಿ ದಲಿತ ಮತ್ತು ಆದಿವಾಸಿ ಹಿಂದೂಗಳಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಅತೀವ ಆಕ್ರೋಶವಿದೆ. ೨೦೧೮ರ ಮೇನಿಂದ ಜೂನ್ ನಡುವೆ ಬಿಜೆಪಿ ಶೇ.೫ರಷ್ಟು ಪಾಯಿಂಟುಗಳ ಬೆಂಬಲವನ್ನು ಕಳೆದುಕೊಂಡಿದೆ. ಇದೇ ವೇಗದಲ್ಲಿ ಬೆಂಬಲ ಕಳೆದುಕೊಂಡಲ್ಲಿ ೨೦೧೯ರ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಯ ಬೆಂಬಲಿಗರ ಪ್ರಮಾಣ ಶೇ. ೩೦ರ ಆಸುಪಾಸಿನಲ್ಲಿರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಪ್ರಾದೇಶಿಕವಾಗಿ ಪ್ರಬಲವಾಗುತ್ತಿದೆ ಕಾಂಗ್ರೆಸ್
ಪ್ರಾದೇಶಿಕವಾಗಿ ನೋಡಿದಲ್ಲಿ ದಕ್ಷಿಣಭಾರತದಲ್ಲಿ ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಭಾರತವೂ ಈ ಆಕ್ರೋಶಕ್ಕೆ ಹೊರತಾಗಿಲ್ಲ. ಐದು ದಕ್ಷಿಣ ರಾಜ್ಯಗಳಲ್ಲಿ ಶೇ. ೧೮ರಷ್ಟು ಮಾತ್ರ ಮತಪ್ರಮಾಣವನ್ನು ಬಿಜೆಪಿ ಹೊಂದಿದೆ. ಕಳೆದ ಜನವರಿಯಿಂದ ಜೂನ್ ನಡುವೆ ಈ ಪ್ರಮಾಣದಲ್ಲಿ ಶೇ. ೭ರಷ್ಟು ತೀವ್ರ ಕುಸಿತವಾಗಿದೆ. ಟಿಡಿಪಿ, ಡಿಎಂಕೆ, ಜೆಡಿಎಸ್ ಮತ್ತು ಎಡಪಕ್ಷಗಳ ರಾಜಕೀಯ ಕುಶಲತೆ ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಉತ್ತರ ಭಾರತದಲ್ಲಿಯೂ ಬಿಜೆಪಿ ಐದು ತಿಂಗಳ ಹಿಂದಿನ ಜನಪ್ರಿಯತೆಯನ್ನು ಈಗ ಉಳಿಸಿಕೊಂಡಿಲ್ಲ. ಜನವರಿಯಲ್ಲಿ ಎನ್ಡಿಎಗೆ ಶೇ. ೪೫ರಷ್ಟು ಬೆಂಬಲವಿದ್ದರೆ, ಈಗ ಶೇ. ೩೯ರಷ್ಟೇ ಬೆಂಬಲ ವ್ಯಕ್ತವಾಗುತ್ತಿದೆ. ಈ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಬಿಜೆಪಿ ಅತೀ ಪ್ರಮುಖ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಪ್ರಾಬಲ್ಯ ಕಳೆದುಕೊಂಡಿರುವುದು. ಎರಡು ತಿಂಗಳ ಹಿಂದಿನ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯೇ ಬಿಜೆಪಿಗಿಂತ ಮುಂದಿದೆ. ರಾಜಸ್ಥಾನದಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ಹಿಡಿತ ಉಳಿಸಿಕೊಂಡಿದ್ದರೂ, ಕಳೆದ ಜನವರಿಯಿಂದ ಕಾಂಗ್ರೆಸ್ ತನ್ನ ಪ್ರಭಾವವನ್ನು ವೇಗವಾಗಿ ವಿಸ್ತರಿಸಿಕೊಂಡಿದೆ. ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಎನ್‌ಡಿಎ ಮತ್ತು ಯುಪಿಎ ಪ್ರಭಾವದಲ್ಲಿ ಇದ್ದ ಅಂತರ ಕಡಿಮೆಯಾಗುತ್ತಲೇ ಬಂದಿದೆ. ೨೦೧೭ ಮೇನಲ್ಲಿ ಈ ಪ್ರಾಂತದಲ್ಲಿ ಎನ್‌ಡಿಎ ಮತ್ತು ಯುಪಿಎ ನಡುವೆ ಶೇ. ೨೪ರಷ್ಟು ಪಾಯಿಂಟುಗಳ ಅಂತರವಿತ್ತು. ೨೦೧೮ ಜನವರಿಗೆ ಈ ಅಂತರ ೮ ಪಾಯಿಂಟುಗಳಿಗೆ ಇಳಿದಿದೆ. ಈಗ ಅದು ೫ ಪಾಯಿಂಟುಗಳಿಗೆ ಕುಸಿದಿದೆ. ಗುಜರಾತ್ ಹೊರತಾಗಿ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಪ್ರಭಾವ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಗೆ ಕಾಂಗ್ರೆಸ್- ಎಸ್‌ಪಿ ಮೈತ್ರಿ ಕಠಿಣ ಸವಾಲನ್ನೊಡ್ಡಿದೆ. ಬಿಹಾರ ಮತ್ತು ಒಡಿಶಾದಲ್ಲಿ ಎನ್‌ಡಿಎ ಪ್ರಭಾವ ಚೆನ್ನಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ಎದುರು ಪಶ್ಚಿಮ ಬಂಗಾಳದಲ್ಲಿ ತಣ್ಣಗಿದೆ. ಜಾರ್ಖಂಡ್ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್ ಮರುಜೀವ ಪಡೆದುಕೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಮೋದಿ ಜನಪ್ರಿಯತೆ ಕುಸಿದಂತೆ ಹೆಚ್ಚಾಗುತ್ತಿದೆ ರಾಹುಲ್ ಪ್ರಭಾವ
ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡುವಿನ ಜನಪ್ರಿಯತೆಯ ಅಂತರ ನಿಧಾನವಾಗಿ ಕಡಿಮೆಯಾಗುತ್ತಿದೆ. ದೇಶದ ದಲಿತರು ಮತ್ತು ಆದಿವಾಸಿಗಳು ಬಿಜೆಪಿಯಿಂದ ದೂರವಾಗಿರುವುದು ಮಾತ್ರವಲ್ಲ, ತಮ್ಮ ನಾಯಕನ ಆದ್ಯತೆಯನ್ನೂ ಬದಲಿಸಿಕೊಳ್ಳುತ್ತಿದ್ದಾರೆ. ೨೦೧೮ ಜನವರಿಯಲ್ಲಿ ಸುಮಾರು ಶೇ. ೧೮ರಷ್ಟು ದಲಿತರು ಮತ್ತು ಶೇ. ೨೭ರಷ್ಟು ಆದಿವಾಸಿಗಳು ರಾಹುಲ್ ಗಾಂಧಿಯನ್ನು ತಮ್ಮ ನಾಯಕನೆಂದು ಹೇಳಿದ್ದರೆ, ಈಗ ಶೇ. ೨೫ರಷ್ಟು ದಲಿತರು ಮತ್ತು ಶೇ. ೩೦ರಷ್ಟು ಆದಿವಾಸಿಗಳು ರಾಹುಲ್‌ರನ್ನು ಪ್ರಧಾನಿಯಾಗಿ ಬಯಸಿದ್ದಾರೆ. ಪ್ರಧಾನಿ ಮೋದಿಯವರನ್ನು ಬಯಸುವವರ ಸಂಖ್ಯೆ ಇದೇ ಅವಧಿಯಲ್ಲಿ ಕುಸಿದಿದೆ. ಜನವರಿಯಲ್ಲಿ ಶೇ. ೩೫ರಷ್ಟು ದಲಿತರು ಮೋದಿಯನ್ನು ಬಯಸಿದರೆ, ಈಗ ಶೇ. ೨೫ರಷ್ಟು ಮಂದಿ ಮಾತ್ರ ಮೋದಿಯವರನ್ನು ಪ್ರಧಾನಿಯಾಗಿ ಬಯಸಿದ್ದಾರೆ. ಹಾಗೆಯೇ ಆದಿವಾಸಿಗಳಲ್ಲೂ ಮೋದಿ ಜನಪ್ರಿಯತೆ ಶೇ. ೪೭ರಿಂದ ಶೇ. ೩೭ಕ್ಕೆ ಇಳಿದಿದೆ. ಇತರ ಸಮುದಾಯಗಳಲ್ಲೂ ರಾಹುಲ್ ಗಾಂಧಿಯವರನ್ನು ನಾಯಕರನ್ನಾಗಿ ನೋಡುವವರ ಪ್ರಮಾಣ ಹೆಚ್ಚಾಗಿರುವಂತೆಯೇ, ಮೋದಿ ಜನಪ್ರಿಯತೆ ಇಳಿದಿದೆ. ಹೀಗಾಗಿ ರಾಷ್ಟ್ರವಾರು ಅಂಕಿ ಅಂಶಗಳನ್ನು ನೋಡಿದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಜನವರಿಯಲ್ಲಿ ಜನಪ್ರಿಯತೆಯ ವ್ಯತ್ಯಾಸ ಶೇ. ೧೭ರಷ್ಟು ಇದ್ದರೆ, ಈಗ ಅದು ಶೇ. ೧೦ ಪಾಯಿಂಟುಗಳಿಗೆ ಇಳಿದಿದೆ. ಲೋಕಸಭಾ ಚುನಾವಣೆಯ ಆಯ್ಕೆಯಲ್ಲಿಯೂ ಪ್ರಧಾನಿಯಾಗಿ ಮೋದಿ ಜನಪ್ರಿಯತೆ ಕುಸಿದಿದೆ. ೨೦೧೪ರಲ್ಲಿ ಶೇ. ೩೬ರಷ್ಟು ಮತದಾರರು ಮೋದಿಯವರನ್ನು ಪ್ರಧಾನಿಯಾಗಿ ಬಯಸಿದರೆ, ಶೇ.೮ರಷ್ಟು ಮತದಾರರು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಬಯಸಿದ್ದರು. ಜನವರಿಯ ಸಮೀಕ್ಷೆಗೆ ಹೋಲಿಸಿದಲ್ಲಿ ಮೋದಿಯವರನ್ನು ಪ್ರಧಾನಿಯಾಗಿ ಬಯಸುವವರ ಸಂಖ್ಯೆ ಕಡಿಮೆಯಾದರೆ, ರಾಹುಲ್ ಗಾಂಧಿಯವರನ್ನು ಆರಿಸುವವರ ಸಂಖ್ಯೆ ಹೆಚ್ಚಾಗಿದೆ. ಈಗಲೂ ಮತದಾರರ ನಡುವೆ ನರೇಂದ್ರ ಮೋದಿಯವರೇ ರಾಹುಲ್ ಗಾಂಧಿಗಿಂತ ಹೆಚ್ಚು ಜನಪ್ರಿಯರು. ಆದರೆ ಸಮೀಕ್ಷೆಯಲ್ಲಿ ಇಬ್ಬರೂ ನಾಯಕರನ್ನು ಸಮಾನ ಅಂದರೆ ಶೇ. ೪೩ರಷ್ಟು ಪ್ರಮಾಣದಲ್ಲಿ ಜನರು ಇಷ್ಟಪಡುತ್ತಿರುವುದು ಪತ್ತೆಯಾಗಿದೆ. ನಾವು ಇಷ್ಟಪಡದವರ ಪ್ರಮಾಣವನ್ನು ಪರಿಗಣಿಸಿದರೂ ಸಹ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲಿ ಏರಿಕೆ ಕಾಣುತ್ತಿದೆ. ರಾಹುಲ್ ಗಾಂಧಿಯವರ ಸಂಖ್ಯೆ ಶೇ. ೧೧ (ಶೇ. ೪೩ರಿಂದ ಶೇ. ೩೨ ಕಳೆದರೆ) ಪಾಯಿಂಟುಗಳು. ಆದರೆ ನರೇಂದ್ರ ಮೋದಿಯವರ ಸಂಖ್ಯೆ ಶೇ.೭ (ಶೇ. ೪೩ರಿಂದ ಶೇ. ೩೬ ಕಳೆದರೆ) ಪಾಯಿಂಟುಗಳು.
ಮೋದಿ ಸರ್ಕಾರದ ಬಗ್ಗೆ ಜನ ಭರವಸೆ ಕಳೆದುಕೊಳ್ಳಲು ಕಾರಣ
ಆರ್ಥಿಕ ಪ್ರಗತಿಗೆ ಸಂಬಂಧಿಸಿ ಮೋದಿ ಸರ್ಕಾರದ ಮೇಲೆ ಜನರ ಭರವಸೆ ಕುಸಿಯುತ್ತಲೇ ಇದೆ. ಉದ್ಯೋಗ, ತೆರಿಗೆ ಮತ್ತು ಖಾಸಗಿ ಹಣಕಾಸು ಭದ್ರತೆ ವಿಚಾರವಾಗಿ ಸರ್ಕಾರ ಜನರ ಭರವಸೆ ಕಳೆದುಕೊಂಡಿದೆ. ಸಂದರ್ಶಿಸಿದ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬರು ನಿರುದ್ಯೋಗವನ್ನೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಜಿಎಸ್ಟಿ ಮತ್ತು ಸರ್ಕಾರದ ತೆರಿಗೆ ನೀತಿಯ ಬಗ್ಗೆಯೂ ಜನಸಾಮಾನ್ಯರು ಅಸಮಾಧಾನ ಹೊಂದಿದ್ದಾರೆ.
ದಲಿತ ಸಮುದಾಯ ಬಿಜೆಪಿಯ ಬಗ್ಗೆ ಅಸಮಧಾನ ಹೊಂದಿದ್ದಾರೆ. ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬಿಜೆಪಿ ಸರ್ಕಾರದ ಮೌನ ಮತ್ತು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ಮೃದುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆಕ್ರೋಶ ದಲಿತ ಸಮುದಾಯವು ಬಿಜೆಪಿಯಿಂದ ದೂರವಾಗಲು ಕಾರಣವಾಗಿದೆ. ಸಮೀಕ್ಷೆಯಲ್ಲಿ ಶೇ. ೬೦ರಷ್ಟು ದಲಿತರು ಮತ್ತು ಶೇ. ೫೪ರಷ್ಟು ಆದಿವಾಸಿಗಳು ತಮ್ಮ ಸಮುದಾಯದ ಕುರಿತು ಬಿಜೆಪಿಯ ಅಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕಾರ್ಯವೈಖರಿಯ ಬಗ್ಗೆಯೂ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ೨೦೧೭ ಮೇನಿಂದ ೨೦೧೮ ಜನವರಿ ನಡುವೆ ಈ ಅಸಮಾಧಾನ ಶೇ. ೨೭ರಿಂದ ಶೇ. ೪೦ಕ್ಕೇರಿದೆ. ಮೇ ಅಂತ್ಯಕ್ಕಾಗುವಾಗ ಈ ಅಸಮಧಾನದ ಪ್ರಮಾಣ ಶೇ. ೪೭ರಷ್ಟಿತ್ತು. ಒಂದೇ ವರ್ಷದಲ್ಲಿ ಶೇ. ೨೦ ಪಾಯಿಂಟುಗಳ ಪ್ರಮಾಣದಲ್ಲಿ ಅಸಮಧಾನ ಏರಿರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ ಸರ್ಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸುವವರ ಪ್ರಮಾಣ ಶೇ. ೬೪ರಿಂದ ಶೇ. ೪೭ಕ್ಕೆ ಇಳಿದಿದೆ. ಮುಖ್ಯವಾಗಿ ದಕ್ಷಿಣದ ರಾಜ್ಯಗಳಲ್ಲಿ ಈ ಪ್ರಮಾಣ ವ್ಯಾಪಕವಾಗಿದೆ.
ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಡುತ್ತಿರುವವರ ಪ್ರಮಾಣವೂ ಹೆಚ್ಚಾಗಿದೆ. ಕಟುವಾ ಮತ್ತು ಉನ್ನಾವೋದಂತಹ ಪ್ರಕರಣಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಅಧಿಕವಾಗಿದೆ. ಪ್ರತೀ ಮೂವರು ಪ್ರತಿಸ್ಪಂದಿಗಳಲ್ಲಿ ಒಬ್ಬರು ನ್ಯಾಯಮೂರ್ತಿ ಲೋಯಾ ಮರಣದ ವಿವಾದದ ಬಗ್ಗೆಯೂ ತಿಳಿದಿರುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಶೇ. ೪೪ರಷ್ಟು ಪ್ರತಿಸ್ಪಂದಿಗಳು ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರೆ, ಶೇ. ೩೫ರಷ್ಟು ಮಂದಿ ಮಾತ್ರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ Narendra Modi BJP Dalits ಕಾಂಗ್ರೆಸ್ ರಾಹುಲ್ ಗಾಂಧಿ UPA ಪ್ರಧಾನಿ ನರೇಂದ್ರ ಮೋದಿ Modi Government ಮೋದಿ ಸರ್ಕಾರ ಎನ್‌ಡಿಎ NDA Kathua Congress president Rahul Gandhi Unnao Rape Case ಸಿಎಸ್‌ಡಿಎಸ್‌-ಲೋಕನೀತಿ 2019ರ ಲೋಕಸಭಾ ಚುನಾವಣೆ Lokniti-CSDS 2019 Lok Sabha Election Anti-Modi Sentiment SC-ST Act Adivasis Judge Loya Death
ಅಮೇರಿಕಾದಲ್ಲಿ ಶ್ರೀನಾಥ್ ಗೆ ಸಿಕ್ಕಿದೆ ಹೊಸ ಬಿರುದು | kannada actor srinath has been reward as abhinaya manikya - Kannada Filmibeat
11 min ago ನಟಿ ನವ್ಯಾ ಸ್ವಾಮಿ ಸಹ ನಟ ರವಿಕೃಷ್ಣಗೆ ಕೊರೊನಾ ಪಾಸಿಟಿವ್: ನಟ ಹೇಳಿದ್ದೇನು?
ಹಿರಿಯ ನಟ ಶ್ರೀನಾಥ್ ಪ್ರಣಯರಾಜ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಆದರೆ, ಈ ನಟನಿಗೆ ಈಗ ಹೊಸ ಬಿರುದು ಸಿಕ್ಕಿದೆ. ಅದು ಅಮೇರಿಕಾದಲ್ಲಿ ಎನ್ನುವುದು ವಿಶೇಷ.
ಅಮೇರಿಕಾದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ಕನ್ನಡ ಅನೇಕ ನಟರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಈಗ ನಟ ಶ್ರೀನಾಥ್ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಮಾಡಿರುವ ಸಾಧನೆಯನ್ನು ಗಮನಿಸಿ 'ಅಭಿನಯ ಮಾಣಿಕ್ಯ' ಎಂಬ ಬಿರುದನ್ನು ನೀಡಲಾಗಿದೆ.
ಅಮೆರಿಕದ ಡಲ್ಲಾಸ್ ನಗರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಬಿರುದನ್ನು ಅವರಿಗೆ ನೀಡಿ ಸನ್ಮಾನಿಸಲಾಗಿದೆ. ಈ ಸುಂದರ ಕ್ಷಣಗಳಲ್ಲಿ ಅವರ ಪತ್ನಿ ಗೀತಾ ಕೂಡ ಭಾಗಿಯಾಗಿದ್ದರು.
1967ರಲ್ಲಿ ಬಂದ 'ಲಗ್ನ ಪತ್ರಿಕೆ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ಈ ನಟ ಇಂದಿಗೂ ಬಣ್ಣದ ಜಗತ್ತಿನ ನಂಟಿನಲ್ಲಿ ಇದ್ದಾರೆ. ಪುಟ್ಟಣ್ಣ ಕಣಗಾಲ್ ರೀತಿಯ ಶ್ರೇಷ್ಟ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಕಿರುತೆರೆಯ ಕಾರ್ಯಕ್ರಮ ಹಾಗೂ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ವಿಶ್ವಕಪ್ ಕ್ರಿಕೆಟ್: ಭಾರತ ಮಹಿಳೆಯರಿಗೆ ಗೆಲುವು | Prajavani
ವಿಶ್ವಕಪ್ ಕ್ರಿಕೆಟ್: ಭಾರತ ಮಹಿಳೆಯರಿಗೆ ಗೆಲುವು
ಕೊಲಂಬೊ (ಪಿಟಿಐ): ಭಾರತ ಮಹಿಳಾ ತಂಡ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ `ಪ್ಲೇ ಆಫ್~ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ಪಡೆಯಿತು. ಈ ಮೂಲಕ 2014ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 100 ಪೇರಿಸಿತು. ಹ್ಯಾಟ್ರಿಕ್ ವಿಕೆಟ್ ಪಡೆದ ಏಕ್ತಾ ಬಿಸ್ಟ್ (16ಕ್ಕೆ 3) ಭಾರತದ ಪರ ಸಮರ್ಥ ಬೌಲಿಂಗ್ ನಡೆಸಿದರು. ಈ ಗುರಿ ಭಾರತಕ್ಕೆ ಕಠಿಣ ಎನಿಸಲಿಲ್ಲ. 14.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿ ಜಯ ಸಾಧಿಸಿತು.
ಭಾರತ ಮಹಿಳೆಯರು ಲೀಗ್ ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಲು ವಿಫಲರಾಗಿದ್ದರು. ಇದರಿಂದ ಮುಂದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲು `ಪ್ಲೇ ಆಫ್~ನಲ್ಲಿ ಆಡಬೇಕಾಯಿತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 100 (ಚಾಮರಿ ಅಟಪಟ್ಟು 28, ಶಶಿಕಲಾ ಸಿರಿವರ್ದನೆ 23, ಏಕ್ತಾ ಬಿಸ್ಟ್ 16ಕ್ಕೆ 3). ಭಾರತ: 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 102 (ಪೂನಮ್ ರಾವತ್ ಔಟಾಗದೆ 45, ಮಿಥಾಲಿ ರಾಜ್ ಔಟಾಗದೆ 28)
ರಿಲೀಸ್ ಆಗಲಿದೆ ಮದಗಜ ತೆಲುಗು ವರ್ಷನ್ ಟೀಸರ್ - Kannada Updates