text stringlengths 0 61.5k |
|---|
ರಿಲೀಸ್ ಆಗಲಿದೆ ಮದಗಜ ತೆಲುಗು ವರ್ಷನ್ ಟೀಸರ್ |
ಬೆಂಗಳೂರು: ಅಯೋಗ್ಯ ಚಿತ್ರದ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರದ ತೆಲುಗು ಟೀಸರ್ ಜನವರಿ 1 ರಂದು ರಿಲೀಸ್ ಆಗಲಿದೆ ಎಂಬ ಮಾಹಿತಿ ದೊರೆತಿದೆ. |
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ಹವಾ ಸೃಷ್ಟಿ ಮಾಡಿತ್ತು. ಇದೀಗ ತೆಲುಗು ಭಾಷೆಯಲ್ಲೂ ಸಹ ಮದಗಜನ ಆರ್ಭಟ ಶುರುವಾಗಲಿದೆ. ಆ ಮೂಲಕ ಆಂಧ್ರ-ತೆಲಂಗಾಣಕ್ಕೂ ಮದಗಜನ ಹವಾ ವಿಸ್ತಾರವಾಗಲಿದೆ ಎನ್ನಲಾಗುತ್ತಿದೆ. |
ಇನ್ನೂ ಈ ಕುರಿತು ಮದಗಜ ಚಿತ್ರದ ನಾಯಕ ರೋರಿಂಗ್ ಸ್ಟಾರ್ ಶ್ರೀಮುರಳಿ ರವರೇ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜನವರಿ 1 ರಂದು ಬೆಳಿಗ್ಗೆ 10.10 ನಿಮಿಷಕ್ಕೆ ಆನಂದ್ ಆಡಿಯೋದಲ್ಲಿ ಮದಗಜ ಟೀಸರ್ ರಿಲೀಸ್ ಆಗಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. |
ಇನ್ನೂ ಈಗಾಗಲೇ ಮದಗಜ ಸಿನೆಮಾ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಶೀಘ್ರವೇ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದು, ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಶ್ರೀಮುರಳಿ ಹುಟ್ಟುಹಬ್ಬದಂದು ಮದಗಜ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಹೊಸ ವರ್ಷಕ್ಕೆ ಮುಂದೆ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ. |
ಭಗವಾನ್ ಬುದ್ಧ - India For You |
ವಾರಾಣಸಿಯ ಬಳಿಯಿರುವ ಸಾರನಾಥದಲ್ಲಿ ಉಪನ್ಯಾಸ ನೀಡುವುದರ ಮೂಲಕ ತನ್ನ ವಿಚಾರಗಳ ಮೊದಲು ಪ್ರಚಾರವನ್ನು ಭಗವಾನ್ ಬುದ್ಧ ಪ್ರಾರಂಭಿಸಿದ. ನಲವತ್ತೈದು ವರ್ಷಗಳ ಕಾಲ ಸಂಚರಿಸುತ್ತ ತನ್ನ ಅದ್ಭುತ ಸಂದೇಶವನ್ನು ಜನರಿಗೆ ತಿಳಿಸುತ್ತ ಜೀವನದ ಪ್ರಮುಖ ಕಾರ್ಯವನ್ನು ಭಗವಾನ್ ಬುದ್ಧ ಪೂರ್ಣಗೊಳಿಸಿದ. ತನ್ನ ಅನುಯಾಯಿಗಳಾದ ಭಿಕ್ಷುಗಳ ಸಂಘವನ್ನು ಚೆನ್ನಾಗಿ ಸ್ಥಾಪಿಸಿ ಕುಶೀ ನಗರದಲ್ಲಿ ಎಂಬತ್ತನೆಯ ವಯಸ್ಸಿನಲ್ಲಿ ವೈಶಾಖ ಪೂರ್ಣಿಮೆಯ ದಿನದಂದು ದೇಹವನ್ನು ತ್ಯಜಿಸಿದ. ಅವನು ಹುಟ್ಟಿದ್ದು, ಬುದ್ಧನಾದದ್ದು ಹಾಗೂ ದೇಹವನ್ನು ಬಿಟ್ಟಿದ್ದು ಈ ದಿನದಂದೇ-ಮೂರು ಕಾರಣಗಳಿಂದ ಪವಿತ್ರವಾದ ದಿನವಿದು. |
ಭಗವಾನ್ ಬುದ್ಧನು ಕೇವಲ 'ಏಷ್ಯಾ ಖಂಡದ ಜ್ಯೋತಿ'ಯಲ್ಲ, 'ಇಡೀ ಜಗತ್ತಿನ ಜ್ಯೋತಿ'. ಮಾನವತೆಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಭಗವಾನ್ ಬುದ್ಧ ನೀಡಿದ ಕೊಡುಗೆ ಅಪಾರ. ಸಾವಿರಾರು ವರ್ಷಗಳಿಂದ ನೂರಾರು ಲಕ್ಷ ಜನರ ಜೀವನ ಹಾಗೂ ಭಾವನೆಗಳ ಮೇಲೆ ಭಗವಾನ್ ಬುದ್ಧ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಬೀರುತ್ತಾ ಬಂದಿದ್ದಾನೆ. |
ಅನೇಕ ಆಧಾರಗಳಿಂದ ಸಂಗ್ರಹಿಸಿರುವ ಭಗವಾನ್ ಬುದ್ಧನ ನುಡಿಗಳನ್ನು ಈ ಕಿರುಹೊತ್ತಿಗೆಯಲ್ಲಿ ನೀಡುತ್ತಿದ್ದೇವೆ. ನಮೆಲ್ಲರ ಜೀವನಕ್ಕೆ ಇದು ಬೆಳಕು ಹಾಗೂ ಶ್ರೀಮಂತಿಕೆಯನ್ನು ತರಲಿ ಎಂದು ಹಾರೈಸುತ್ತೇವೆ. |
ಭಗವಾನ್ ಬುದ್ಧ ನನ್ನು ಕುರಿತು ಸ್ವಾಮಿ ವಿವೇಕಾನಂದರು |
ಕರ್ಮ ಯೋಗದ ವಿಚಾರಗಳನ್ನು ಅನುಷ್ಠಾನಕ್ಕೆ ತಂದ ಒಬ್ಬ ವ್ಯಕ್ತಿಯ ಕೆಲವು ನುಡಿಗಳನ್ನು ನಾನು ನಿಮಗೆ ಹೇಳಬಯಸುವೆ…ಅವನೇ ಬುದ್ಧ. ಸಮರ್ಪಕವಾಗಿ ಈ ವಿಚಾರಗಳನ್ನು ಕಾರ್ಯರೂಪಕ್ಕೆ ತಂದವನು ಇವನೊಬ್ಬನೇ. ಭಗವಾನ್ ಬುದ್ಧನ ಹೊರೆತು ಬೇರೆಲ್ಲ ಪ್ರವಾದಿಗಳಿಗೂ ತಮ್ಮ ನಿಸ್ವಾರ್ಥ ಕ್ರಿಯೆಗೆ ಹೊರಗಿನ ಪ್ರಚೋದನೆ ಬೇಕಿತ್ತು… ಯಾವುದೇ ಅಪೇಕ್ಷೆಯಿಲ್ಲದ ಆದರ್ಶ ಕರ್ಮಯೋಗಿ ಈತ. ಮತ್ತಾರಿಗೂ ಹೋಲಿಸಲಾರದಂತಹ ಅತ್ಯದ್ಭುತ ಮಾನವನೆಂದು ಮಾನವತೆಯು ಇತಿಹಾಸವು ಸಾರುತ್ತಿದೆ. ಹೃದಯ ಹಾಗೂ ಮಸ್ತಿಷ್ಕಗಳ ಅತ್ಯುತ್ತಮ ಸಮಾಗಮ ಹಾಗೂ ಚೈತನ್ಯ ಶಕ್ತಿಯ ಅಭಿವ್ಯಕ್ತಿಗಳಲ್ಲಿ ಇವನನ್ನು ಮೀರಿಸುವ ಮತ್ತೊಂಬ್ಬ ವ್ಯಕ್ತಿ ಹುಟ್ಟಿಲ್ಲ… |
ಕಲ್ಲಂಗಡಿಯಲ್ಲಿ ಅರಳಿದ ಟ್ರಂಪ್-ಮೋದಿ – EESANJE / ಈ ಸಂಜೆ |
ಕಲ್ಲಂಗಡಿಯಲ್ಲಿ ಅರಳಿದ ಟ್ರಂಪ್-ಮೋದಿ |
February 24, 2020 Sunil Kumar TN Artist Carves Modi, Trump |
ಚೆನ್ನೈ, ಫೆ. 24- ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್‍ಗೆ ಅಭೂತಪೂರ್ವ ಸ್ವಾಗತ ಕೋರಲು ಹಣ್ಣು ಹಾಗೂ ತರಕಾರಿ ಕಲಾವಿನ್ಯಾಸಕಾರ ಎಂ. ಎಲಾಂಚೆಜಿಯನ್ ಅವರು ವಿನೂತನ ರೀತಿಯ ಕಲಾಕೃತಿ ಯನ್ನು ಅರಳಿಸಿದ್ದಾರೆ. ವಿಶ್ವದ ಅದ್ಭುತಗಳಲ್ಲಿ ಒಂದೆನಿಸಿರುವ ತಾಜ್‍ಮಹಲ್‍ನ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನ ಮೇಲೆ ಅರಳಿಸುವ ಮೂಲಕ ಗಮನ ಸೆಳೆದಿದ್ದಾರೆ. |
ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿ ಮಮಲ್ಲಾಪುರಂಗೆ ಆಗಮಿಸಿದಾಗ ಅವರ ಫೋಟೋವನ್ನು 4 ಕೆಜಿ ಗಾತ್ರದ ಕಲ್ಲಂಗಡಿ ಮೇಲೆ ಅವರ ಫೋಟೋವನ್ನು ಅರಳಿಸಿದ್ದ ಎಲಾಂಚೆಜಿಯನ್ ಈ ಬಾರಿ 5 ಕೆಜಿ ಕಲ್ಲಂಗಡಿ ಹಣ್ಣನ್ನು ಬಳಸಿ ಟ್ರಂಪ್‍ರ ಫೋಟೋವನ್ನು ಅರಳಿಸುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಎಂಜಿನಿಯರ್ ಪದವೀಧರ ನಾಗಿರುವ ಎಲಾಂಚೆಜಿಯನ್ ಹಣ್ಣು ಹಾಗೂ ತರಕಾರಿಗಳ ಮೇಲೆ ಗಣ್ಯರ ಭಾವಚಿತ್ರವನ್ನು ಮೂಡಿಸುವ ಕಲೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದು ಈ ಕಲೆಯ ಬಗ್ಗೆ ಆಸಕ್ತಿ ಇರುವವರಿಗೆ ತರಬೇತಿಯನ್ನು ನೀಡುತ್ತಿದ್ದಾನೆ. |
ಎಲಾಂಚೆಜಿಯನ್ ಈ ಹಿಂದೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಮಾಬಾ, ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ.ರಾಮಚಂದ್ರನ್‍ರ ಭಾವಚಿತ್ರಗಳನ್ನು ಹಣ್ಣುಗಳ ಮೇಲೆ ಬಿಂಬಿಸುವ ಮೂಲಕ ಗಮನ ಸೆಳೆದಿದ್ದರು. |
ಬೀಗ ಹಾಕುವಿರೆಲ್ಲಿ?: ನನ್ನ ಶಾಲೆಗೆ ಗೋಡೆ, ಬಾಗಿಲೇ ಇಲ್ಲ! | Udayavani - ಉದಯವಾಣಿ |
#ನನ್ನಶಾಲೆನನ್ನಹೆಮ್ಮೆ 2 |
ಸಚಿವರೇ, ನನ್ನ ಪಕ್ಕ ಕುಂತು 1 ತಾಸು ಪಾಠ ಕೇಳ್ತೀರಾ? |
ಸರ್ಕಾರಿ ಶಾಲೆ ಹೇಗಿದ್ದರೂ ಸೈ, ಅದರ ಮೇಲೆ ನಮಗೆ ಅಪಾರ ಪ್ರೀತಿಯಿದೆ ಎನ್ನುವ ಮಕ್ಕಳ ಧ್ವನಿಯಿದು. ಹರಪನಹಳ್ಳಿ ತಾಲೂಕಿನ ಚಿಗಟೇರಿ ಶಾಲೆಯ ಈ ವಿದ್ಯಾರ್ಥಿನಿಯ ಬಹುದೊಡ್ಡ ನೋವಿನ ಹಿಂದೆಯೂ ಅಂಥದ್ದೇ ಪ್ರೀತಿಯಿದೆ. ಕಾನ್ವೆಂಟ್ ತೊರೆದು ತಾನೇಕೆ ಗೋಡೆ, ಬಾಗಿಲೇ ಇಲ್ಲದ ಈ ಸರ್ಕಾರಿ ಶಾಲೆಗೆ ಬಂದೆ? ಇಲ್ಲೇಕೆ ಮಳೆ, ಬಿಸಿಲಲ್ಲಿ ಮಿಂದು ಪಾಠ ಕೇಳುವೆ? ನನ್ನ ಶಾಲೆ, ನನಗೇಕೆ ಹೆಮ್ಮೆ? ಎನ್ನುವ ಆಕೆಯ ಧ್ವನಿಗೆ ಇಲ್ಲಿ ಅಕ್ಷರರೂಪ ನೀಡಲಾಗಿದೆ... |
ನನ್ನ ಹೆಸರು ವೀಣಾ ಅಂತ. ನಿಮಗ್ಯಾರಿಗೂ ನನ್ನ ಪರಿಚಯ ಇದ್ದಂತಿಲ್ಲ. ಹರಪನಹಳ್ಳಿ ತಾಲೂಕಿನ ಚಿಗಟೇರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದರೆ, ಅಲ್ಲಿ ನಾನು ನಾಲ್ಕನೇ ತರಗತಿಯಲ್ಲಿ ಮೋಟುದ್ದ ಜಡೆ ಬಿಟ್ಕೊಂಡು, ಹುಡುಗರ ಥರ ನಡುವೆ ಕ್ರಾಪು ತೆಗೆದು, ಪಾಠ ಕೇಳುತ್ತಾ ಕೂತಿರುತ್ತೇನೆ. ಚಿಗಟೇರಿ ಅಂದಾಕ್ಷಣ, ನಾರದಮುನಿ ನಿಮ್ಮ ಕಣ್ಣೆದುರು ನಿಲ್ಲುತ್ತಾರೆಂದು ನಂಗೆ ಗೊತ್ತು. ನಾಡಿನ ಏಕೈಕ ನಾರದ ಮುನಿಯ ದೇವಸ್ಥಾನದ ಎದುರೇ ನನ್ನ ಶಾಲೆ ಇರೋದು. 5ನೇ ತರಗತಿವರೆಗಿನ ಈ ಶಾಲೆಯಲ್ಲಿ ನನ್ನೊಂದಿಗೆ 273 ಮಕ್ಕಳು ಇದ್ದಾರೆ. |
ಎಲ್ಲದಕ್ಕೂ ಮೊದಲು ನಾನು ಅಪ್ಪನಿಗೊಂದು ಥ್ಯಾಂಕ್ಸ್ ಹೇಳ್ಬೇಕು. ನಾನು ಕಾನ್ವೆಂಟಿನಲ್ಲಿ ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪೂರೈಸಿದವಳು. ಅಲ್ಲಿ ಸರಿಯಾಗಿ ಪಾಠ ಮಾಡೋಲ್ಲವೆಂದು ಅಪ್ಪ ನನ್ನನ್ನು ಈ ಸರ್ಕಾರಿ ಶಾಲೆಗೆ ಸೇರಿಸಿದರು. ನಿತ್ಯವೂ ಈ ಶಾಲೆಗೆ ಬರೋದಂದ್ರೆ ನಂಗೇನೋ ಖುಷಿ. ಮೊನ್ನೆ ಯಾರೋ ನನ್ನ ಕಿವಿಗೆ ಗಾಳಿಸುದ್ದಿ ಹಾಕಿದ್ರು: "ಮಕ್ಕಳು ಕಮ್ಮಿ ಇರೋ ಸರ್ಕಾರಿ ಶಾಲೆಗೆ ಬೀಗ ಹಾಕ್ತಾರಂತೆ' ಅಂತ. ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ನಕ್ಕಿದ್ದೆ. ನಮ್ಮ ಹೆಡ್ಮ್ಷ್ಟ್ರು ಮಂಜುನಾಥ ಪೂಜಾರ ಸರ್ ಬಳಿ ಹೋಗಿ ಕೇಳಿದ್ದೆ: "ನಮ್ ಕ್ಲಾಸಿಗೆ ಬೀಗ ಹಾಕಕ್ಕಾಗೋಲ್ಲ, ಅಲ್ವಾ ಸ್ಸಾ...?' ಅಂದಿದ್ದೆ. ಪಾಪ, ಅವರ ಮುಖ ಬಾಡ್ಹೊಯ್ತು. ಯಾಕೆ ಗೊತ್ತಾ? ಬೀಗ ಹಾಕಲು ನನ್ನ ತರಗತಿಗೆ ಬಾಗಿಲುಗಳೇ ಇಲ್ಲ! ಬಾಗಿಲು ಜೋಡಿಸಲು ಕನಿಷ್ಠ ಗೋಡೆಗಳಾದರೂ ಬೇಕಲ್ಲ, ಆ ನಾಲ್ಕು ಗೋಡೆಗಳೂ ನಮ್ಮ ಸುತ್ತಮುತ್ತ ಇಲ್ಲ. ನಾವು ಮೇಲಕ್ಕೆ ನೋಡಿದರೆ, ಹೆಂಚುಗಳು ಕಾಣೊÕàದಿಲ್ಲ; ಮೋಡ ಕಪ್ಪಿಟ್ಟ ಆಕಾಶ ಕಾಣುÕತ್ತೆ. ನಾವು ಕೂರುವುದು ಟೈಲ್ಸ್, ಸಿಮೆಂಟಿನ ನೆಲದಲ್ಲಲ್ಲ; ಕೊಚ್ಚೆ ಅಂಗಳದಲ್ಲಿ. ಈ ಮಳೆಗಾಲದ ಎಲ್ಲೋ ಅಪರೂಪದ ದಿನಗಳಲ್ಲಿ ಸೂರ್ಯನೂ ಇಣುಕುತ್ತಾ, ನಮ್ಮೊಂದಿಗೆ ನಮ್ಮ ಮೇಷ್ಟ್ರ ಪಾಠ ಕೇಳ್ತಿರ್ತಾನೆ. |
ನಾನು ಪಾಠ ಕೇಳುವಾಗಿನ ಪರಿಪಾಟಲನ್ನು ಹೇಳುತ್ತೇನೆ ಕೇಳಿ. ಮೇಷ್ಟ್ರು ಶ್ರದ್ಧೆಯಿಂದ ಪಾಠ ಶುರುಮಾಡಿದಾಗ, ಹೊರಗಡೆ ಜನ ಲೋಕಾಭಿರಾಮವಾಗಿ ಮಾತಾಡ್ತಾ ಓಡಾಡ್ತಿರ್ತಾರೆ. ಮೇಷ್ಟ್ರ ಪಾಠಕ್ಕಿಂತ ನಮಗೆ ಕೇಳ್ಸೋದು, ಅವರ ಜೋರು ಮಾತುಗಳೇ. ಯಾರೋ ದನ ಹೊಡ್ಕೊಂಡು ಹೋಗ್ತಿರ್ತಾರೆ. ಅವರ ಕೂಗು ಆಕಾಶ ಮುಟಿ¤ರುತ್ತೆ. ಅಕ್ಕಪಕ್ಕದ ಕೆಲವು ಮನೆಗಳಲ್ಲಿ ಆಗಾಗ್ಗೆ ಜೋರು ಜಗಳವಾಗುತ್ತೆ. ಆಗ ನಮ್ಮ ಮನಸ್ಸಿಗೆ ಪಿಚ್ಚೆನಿಸುತ್ತೆ. ಕೆಟ್ಟದ್ದನ್ನ ಕೇಳಬೇಡವೆಂದು ಬಾಪೂಜಿ ಹೇಳಿದ್ದು ನೆನಪಾಗಿ, ಅವರಾಡುವ ಅಶ್ಲೀಲ ಮಾತುಗಳು ಕೇಳದಿರಲಿಯೆಂದು, ಕಿವಿ ಮುಚ್ಚಿಕೊಳ್ತೀನಿ. ಬ್ಯಾ ಬ್ಯಾ ಎನ್ನುತ್ತಾ ಕುರಿಗಳು ಬಂದಾಗ, ಮೇಷ್ಟ್ರು ಹತ್ತು ನಿಮಿಷ ಪಾಠ ನಿಲ್ಲಿಸಿ ಮೌನಿ ಆಗ್ತಾರೆ. ನಮ್ಮನ್ನು ಕಂಡರೆ ಬೀದಿನಾಯಿಗಳಿಗೆ ಅದೇನು ಮುಧ್ದೋ, ಸಿಟ್ಟೋ ಗೊತ್ತಿಲ್ಲ... ಪಾಠ ಮಾಡೋವಾಗ, ಅವು ಜೋರಾಗಿ ಕಚ್ಚಾಡ್ತಾ, ನಮ್ಮ ನಡುವೆಯೇ ಉರುಳಾಡಿಕೊಂಡು, ಗಾಬರಿ ಹುಟ್ಟಿಸುತ್ತವೆ. |
ನೆಲದ ಮೇಲೆ ಕುಳಿತಾಗ ಆ ಥಂಡಿಗೆ ಜ್ವರ ಬರೋದು, ಶೀತವಾಗೋದು, ಅಲರ್ಜಿ ಆಗೋದೆಲ್ಲ ನಮ್ಗೆ ಮಾಮೂಲಿ. ಈಗಂತೂ ಜೋರು ಮಳೆ ಹೊಯ್ಯುತ್ತಿದೆ. ಮಳೆ ಬಂದಾಗ ಪುಸ್ತಕ, ಬ್ಯಾಗು ಹಿಡಿದು ಓಡಿಬಂದು, ಕಾರಿಡಾರಿನಲ್ಲಿ ನಿಲ್ಲೋದು; ಮಳೆ ಬಿಟ್ಟಾಗ, ಮತ್ತೆ ಹೋಗಿ ಆ ಕೆಸರಿನಲ್ಲಿ ಕೂರೋದೂ ರೂಢಿಯಾಗಿದೆ. ಕೆಲವರು ಈ ಕೊಳಕು ಮಣ್ಣಿನಲ್ಲಿ ಕೂರಲಾಗದೇ, ಮನೆಯಿಂದಲೇ ಚಾಪೆ ತರ್ತಾರೆ. ಬಹುತೇಕರಿಗೆ ಚಾಪೆ ತರಲಾಗದಷ್ಟೂ ಬಡತನ. ಮನೆಗೆ ಮರಳುವಾಗ, ನಮ್ಮ ಬಟ್ಟೆಗೆಲ್ಲ ಕೊಳಕು ಮೆತ್ಕೊಂಡು, ಯೂನಿಫಾರಂನ ಬಣ್ಣವೇ ಬದಲಾಗಿರುತ್ತೆ. ಎಲ್ಲ ಋತುಗಳ ಬಗ್ಗೆಯೂ ನನಗೆ ಕಡುಕೋಪವಿದೆ. ಬೇಸಿಗೆಯಲ್ಲಿ ಘೋರ ಬಿಸಿಲು ನಮ್ಮನ್ನು ನುಂಗಿಯೇ ಬಿಡುತ್ತೆ. ಬಿಸಿಗಾಳಿಗೆ ಮೈಯ್ಯೊಡ್ಡಿ ಹೈರಾಣಾಗಿರ್ತಿವಿ. ಚಳಿಯಲ್ಲಿ ಕುಳಿರ್ಗಾಳಿಗೆ ಚರ್ಮ ಬಿರುಕುಬಿಟ್ಟು, ರಕ್ತ ಬರುತ್ತೆ. ನಮ್ಮ ಈ ಅವಸ್ಥೆ ನೋಡಿ, ಮೇಷ್ಟ್ರಿಗೆ ಸಾಕ್‌ಸಾಕಾಗಿ ಹೋಗಿದೆ. |
ಮೊನ್ನೆ ಒಂದು ಕತೆಯಾಯ್ತು. ಪಾಠ ಕೇಳ್ತಾ ಕೂತಿದ್ವಾ... ಅಲ್ಲೇ ಕಲ್ಲುಚಪ್ಪಡಿಯ ಅಡಿಯಿದ್ದ ಒಂದು ಹಾವು ನಮ್ಮ ಮಧ್ಯೆ ಬಂದಿದ್ದೇ ಗೊತ್ತಾಗ್ಲಿಲ್ಲ. ಮೇಷ್ಟ್ರು ಗಣಿತ ಲೆಕ್ಕ ಹೇಳಿಕೊಡೋದ್ರಲ್ಲಿ ಮುಳುಗಿದ್ರು. ನಮ್ಮೆಲ್ಲರ ಚಿತ್ತ ಬೋರ್ಡಿನ ಮೇಲಿತ್ತು. ನನ್ನ ಗೆಳತಿಯ ಬ್ಯಾಗ್‌ನೊಳಗೆ ಆ ಹಾವು ನುಸುಳಿದ್ದೇ ಗೊತ್ತಾಗ್ಲಿಲ್ಲ. ಅದು ಅಲ್ಲಿಂದ ಹೊರಬಂದ ಮೇಲೆ ಎಲ್ಲರೂ ಜೋರಾಗಿ ಕೂಗುತ್ತಾ ಹೊರಗೋಡಿ ಬಂದೆವು. ಮೇಷ್ಟ್ರು ಆ ದಿನ ದಿಕ್ಕೆಟ್ಟು ಕುಳಿತಿದ್ದರು. ಇಂಥ ಪ್ರಸಂಗಗಳಿಗೆ ಲೆಕ್ಕವೇ ಇಲ್ಲ, ಬಿಡಿ. ಹೀಗಾದಾಗಲೆಲ್ಲ ಮರುದಿನ ಪೋಷಕರು ಬಂದು, ತರಗತಿಯ ಮಧ್ಯೆಯೇ ಮೇಷ್ಟ್ರೊಂದಿಗೆ ಜಗಳವಾಡಿ, ಪಾಠ ಕೇಳ್ತಾ ಕೂತಿದ್ದ ನನ್ನ ಸಹಪಾಠಿಗಳನ್ನು ಮನೆಗೆ ಕರೆದೊಯ್ಯುತ್ತಾರೆ. ಆಗ ನನಗೆ ದುಃಖವಾಗುತ್ತೆ. ಕನಿಷ್ಠ ನಮ್ಮನೆಗಳಲ್ಲಿ ಕುರಿ, ಹಸುಗಳಿಗೂ ಸುತ್ತ ಗೋಡೆ ಅನ್ನೋದು ಇರುತ್ತೆ. ಹರುಕೋ, ಮುರುಕೋ ಬಾಗಿಲಾದರೂ ಕಟ್ಟಿರ್ತಾರೆ. ಆದರೆ, ಅಂಥ ಬೆಚ್ಚಗಿನ ಸೂರು ನಮಗೇಕಿಲ್ಲ? ಅದು ನಂಗೆ ಗೊತ್ತಿಲ್ಲ. |
ಈ ವರ್ಷ ಮಾತ್ರವಲ್ಲ, ಕಳೆದ ನಾಲಕ್ಕು ವರ್ಷದಿಂದ ನಮ್ಮ ಬಯಲ ತರಗತಿ, ಘೋರ ಮಳೆಗೆ ನೆನೆದು, ಚಳಿಗೆ ಮುದುಡಿ, ಬಿಸಿಲಿಗೆ ಬೆಚ್ಚಿ ಪಾಠ ಕೇಳಿಸಿಕೊಳ್ಳುತ್ತಲೇ ಇದೆ. ಇರುವಂಥ ನಾಲ್ಕು ಕೊಠಡಿಗಳು ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ (1, 2, 3ನೇ ಕ್ಲಾಸು) "ನಲಿಕಲಿ' ಅಭ್ಯಾಸಕ್ಕೆ ಹಂಚಿಹೋಗಿದೆ. ಹಾಗಾಗಿ, ನಾಲ್ಕನೇ ತರಗತಿ ದಾಟಿದವರೆಲ್ಲ ಹೀಗೆ ಬಯಲಲ್ಲೇ ಕುಳಿತು ಪಾಠ ಕೇಳ್ಳೋದು 4 ವರ್ಷದಿಂದ ನಡೆದುಬಂದಿದೆ. ನನ್ನಂತೆ ಹೀಗೆ ಪಾಠ ಕೇಳಿ ನೂರಾರು ವಿದ್ಯಾರ್ಥಿಗಳು ಒಳ್ಳೇ ಅಂಕ ಪಡೆದು, ಮುಂದಿನ ತರಗತಿಗೆ ದಾಟಿದ್ದಾರೆ. |
ಇಷ್ಟೆಲ್ಲ ಆದರೂ, ನನಗೆ ನನ್ನ ಶಾಲೆ ಅಂದ್ರೆ ತುಂಬಾ ಇಷ್ಟ. ಚಿತ್ತಾಕರ್ಷಕ ವಾಚಕಗಳು, ಚಿತ್ರಗಳನ್ನು ತೋರಿಸುತ್ತಾ ಇಲ್ಲಿ ಎಷ್ಟು ಚೆನ್ನಾಗಿ "ನಲಿಕಲಿ' ಪಾಠ ಹೇಳಿಕೊಡ್ತಾರೆ ಗೊತ್ತೇ? ಆ ನಾಯಿಗಳು ನಮ್ಮ ನಡುವೆ ಎಷ್ಟೇ ಕಚ್ಚಾಡಲಿ, ಹೊರಗಿನ ವಾತಾವರಣ ನಮಗೆಷ್ಟೇ ಭಂಗ ಮಾಡಲಿ, ನಮ್ಮ ಏಕಾಗ್ರತೆ ಹಾಳುಗೆಡವಲು ಅವುಗಳಿಂದ ಸಾಧ್ಯವೇ ಇಲ್ಲ. ಏಕೆಂದರೆ, ನಮಗಿರೋದು ಸರ್ಕಾರಿ ಶಾಲೆಯ ಮೇಲಿನ ಪ್ರೀತಿ. ಪ್ರತಿಸಲ "ಎ ಪ್ಲಸ್' ಅಂಕಗಳು ಬಂದಾಗ, ಪಕ್ಕದ ಮನೆಯ ಕಾನ್ವೆಂಟ್ ಹುಡುಗಿಗೆ ಹೋಗಿ ಹೊಟ್ಟೆ ಉರಿಸುವೆನು. ನಮ್ಮ ಈ ಯಶಸ್ಸಿಗೆಲ್ಲ ಕಾರಣ ನಮ್ಮ ಮೇಷ್ಟ್ರು. ನಾನು ಮೊದಲಿದ್ದ ಆ ಕಾನ್ವೆಂಟ್ ಶಾಲೆಗಿಂತ ಇಲ್ಲಿಯೇ ಪಾಠ ಚೆನ್ನಾಗಿ ಮಾಡ್ತಾರೆ. ಸಿ.ಎಂ. ಚೆನ್ನಮ್ಮ ಮಿಸ್ಸು, ಅಂಗಡಿ ಕೊಟ್ರೇಶ್ ಮೇಷ್ಟ್ರ ಪಾಠವನ್ನು ನೀವೂ ಒಮ್ಮೆ ಕೇಳಬೇಕೆಂಬ ಆಸೆ ನನುª. ಈ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಬಡ ಕುಟುಂಬದವರೇ ಹೆಚ್ಚು. ಮಧ್ಯಾಹ್ನ ಬಿಸಿಯೂಟ ಕೊಟ್ಟಾಗ, ಅವರಿಗಾಗುವ ಆನಂದವನ್ನು ನೀವು ನೋಡಬೇಕು. ಮನೆಯಿಂದ ಅಮ್ಮನೇ ಬಂದು ಅಡುಗೆ ಮಾಡಿದ್ದಾಳ್ಳೋ ಎಂದು ಚಪ್ಪರಿಸ್ಕೊಂಡು ತಿಂತಿರ್ತಾವೆ. ಬಟ್ಟೆಯನ್ನೇ ಕಾಣದಿದ್ದವರಿಗೆ ಇಲ್ಲಿ ಸಮವಸ್ತ್ರ ಸಿಗುತ್ತೆ, ಪುಸ್ತಕ ಕೊಡ್ತಾರೆ, ಅವರು ಕೊಡುವ ಬ್ಯಾಗೂ ಚೆನ್ನಾಗಿರುತ್ತೆ. ಇವೆಲ್ಲಕ್ಕಿಂತ ಮಿಗಿಲಾಗಿ, ನಮ್ಮನ್ನು ಒಳ್ಳೆಯ ವಿದ್ಯಾರ್ಥಿಯಾಗಿ ರೂಪಿಸಲು, ನಮ್ಮೊಂದಿಗೆ ಮೇಷೂó, ಮಳೆಯಲ್ಲಿ ನೆಂದು, ಬಿಸಿಲಲ್ಲಿ ಬೆಂದು, ಚಳಿಯಲ್ಲಿ ಮೀಯುತ್ತಾರೆ ನೋಡಿ, ಆಗ ಅಯ್ಯೋ ಅನ್ಸುತ್ತೆ. |
ಇರಲಿ, ನಾವು ಈ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಗಟ್ಟಿ ಆಗಿರೋದಕ್ಕೆ ನಮ್ಮ ಮೇಷ್ಟ್ರೇ ಕಾರಣ. ನಮಗೆ ಈ ಶಾಲೆ ಮೇಲೆ ಮಹಾನ್ ಪ್ರೀತಿ, ಅಪಾರ ಹೆಮ್ಮೆಯಿದೆ. ಅದಕ್ಕೇ ನಾನು ಕಾನ್ವೆಂಟ್ ತೊರೆದು ಇಲ್ಲಿಗೆ ಬಂದೆ. |
ಎಚ್ಚರ! 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ | Phone Numbers, Private Details of Over 500 Million Facebook Users Leaked Online - Kannada Oneindia |
5 min ago ವಾರ್ ರೂಂನಲ್ಲಿ ಬೆಡ್ ಬ್ಲಾಕ್; ಬಿಬಿಎಂಪಿಗೆ ವರದಿ ಸಲ್ಲಿಕೆ |
facebook ಫೇಸ್ಬುಕ್ ಸೈಬರ್ ಕ್ರೈಂ |
| Published: Sunday, April 4, 2021, 10:26 [IST] |
ಬೆಂಗಳೂರು, ಏಪ್ರಿಲ್ 4: ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಬಳಕೆದಾರರಿಗೆ ಆಘಾತಕಾರಿ ಸುದ್ದಿ ಇಲ್ಲಿದೆ. ಸರಿ ಸುಮಾರು 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ, ಕಾಳ ಸಂತೆಯಲ್ಲಿ ಮಾಹಿತಿಯನ್ನು ಹರಾಜಿಗಿಡಲಾಗಿದೆ ಎಂದು 'ಹಡ್ಸನ್ ರಾಕ್ ಸೈಬರ್ ಕ್ರೈಮ್ ಇಂಟೆಲಿಜೆನ್ಸ್' ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್ ಟ್ವೀಟ್ ಮಾಡಿದ್ದಾರೆ. |
2019ರಲ್ಲಿ ಆನ್‌ಲೈನ್ ವೇದಿಕೆ ಮುಖಾಂತರ ಅಪಾರ ಸಂಖ್ಯೆಯ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಸೋರಿಕೆಯಾದ ಮಾಹಿತಿಯಲ್ಲಿ ಫೋನ್ ನಂಬರ್, ಪೂರ್ತಿ ಹೆಸರು, ವಿಳಾಸ, ಇಮೇಲ್ ವಿಳಾಸ, ಹುಟ್ಟುಹಬ್ಬ ದಿನಾಂಕ, ಸ್ವ ವಿವರಗಳು ಸೇರಿವೆ. |
ಸರಿ ಸುಮಾರು 106 ದೇಶಗಳಿಗೆ ಸೇರಿದ 533 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಭಾರತದ 60 ಲಕ್ಷ ಮಂದಿ ಮಾಹಿತಿ, ಯುಎಸ್ 32 ಮಿಲಿಯನ್ ಹಾಗೂ ಯುಕೆಯೆ 11 ಮಿಲಿಯನ್ ಖಾತೆ ಮಾಹಿತಿ ಲೀಕ್ ಆಗಿದೆ. |
ಹ್ಯಾಕರ್ಸ್ ಕಳೆದ ಜನವರಿಯಿಂದ ಅನೇಕ ಕದ್ದ ಮಾಹಿತಿಯನ್ನು ಹಂತ ಹಂತವಾಗಿ ಕಾಳಸಂತೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದಾರೆ ಎಂದು ಇಸ್ರೇಲಿ ಸೈಬರ್ ಕ್ರೈಂ ಗುಪ್ತಚರ ಸಂಸ್ಥೆಯ ಅಲಾನ್ ಗಾಲ್ ತಿಳಿಸಿದ್ದಾರೆ. ಆದರೆ, ಅಚ್ಚರಿಯೆಂದರೆ ಮಾಹಿತಿಗಳಿಗೆ ಅತ್ಯಂತ ಕಡಿಮೆ ಯುರೋ ಬೆಲೆ ಟ್ಯಾಗ್ ಮಾಡಿ ಹರಾಜಿಗಿಡಲಾಗಿದೆ. |
ಲಭ್ಯ ಮಾಹಿತಿಯನ್ನು ಫೇಸ್ಬುಕ್ ಡೇಟಾಬೇಸ್ ಜೊತೆ ಹೋಲಿಕೆ ಮಾಡಿ ನೋಡಿ, ಸೋರಿಕೆಯಾಗಿರುವ ಮಾಹಿತಿ ಫೇಸ್ಬುಕ್ ನಿಂದಲೇ ಆಗಿದೆ ಎಂದು ಖಚಿತಪಡಿಸಿಕೊಳಲಾಗಿದೆ. ಆದರೆ, ಹ್ಯಾಕರ್ಸ್ ಗುಂಪಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಸ್ವ ವಿವರ ಹಂಚಿಕೊಳ್ಳದಿರುವುದು ಒಳ್ಳೆಯದು, ಆದಷ್ಟು ಸುರಕ್ಷಿತ ನಿಯಮಗಳನ್ನು ಪಾಲಿಸಿ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಸಲಹೆ ನೀಡಿದ್ದಾರೆ. |
ಇನ್ನಷ್ಟು facebookಸುದ್ದಿಗಳು |
In a massive data leak, the personal information of more than 500 million Facebook users was published online on Saturday by a user in a low-level hacking forum. |
ಕೇಂದ್ರ ಸರಕಾರದ ಜನವಿರೋಧಿ ಸಾರಿಗೆ ನೀತಿಗೆ ಯು. ಆರ್. ಸಭಾಪತಿ ಖಂಡನೆ – Udupi Times |
ಕೇಂದ್ರ ಸರಕಾರದ ಜನವಿರೋಧಿ ಸಾರಿಗೆ ನೀತಿಗೆ ಯು. ಆರ್. ಸಭಾಪತಿ ಖಂಡನೆ |
ಕೇಂದ್ರ ಸರಕಾರವು ಜ್ಯಾರಿಗೆ ತಂದಿರುವ ಜನವಿರೋಧಿ ಸಾರಿಗೆ ನೀತಿಯು ಸುರಕ್ಷತೆಯ ಹೆಸರಿನಲ್ಲಿ ಜನರ ಮೇಲೆ ಮಾಡಿರುವ ದಬ್ಬಾಳಿಕೆಯಾಗಿದೆ. ಬಹುಮತ ಇದೆಯೆಂದು ತಾವೇನು ಮಾಡಿದರೂ ಜನ ಒಪ್ಪುತ್ತಾರೆ ಎಂದು ಸಾರಿಗೆ ನೀತಿಗೆ ತಿದ್ದುಪಡಿ ತಂದು ಬೇಕಾಬಿಟ್ಟಿ ದಂಡ ವಿಧಿಸುವ ಕೇಂದ್ರ ಸರಕಾರದ ದುರಾಡಳಿತವನ್ನು ಮಾಜಿ ಶಾಸಕ ಹಾಗೂ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಯು. ಆರ್. ಸಭಾಪತಿ ತೀವ್ರವಾಗಿ ಖಂಡಿಸಿದ್ದಾರೆ. |
ಕೇಂದ್ರದ ಹೊಸ ಸಾರಿಗೆ ನೀತಿಯಲ್ಲಿ ಸಮಾನ್ಯ ನೀಯಮ ಉಲ್ಲಂಘನೆಗೆ ಈ ಹಿಂದೆ ಇದ್ದ100 ರೂಪಾಯಿ ದಂಡ ಈಗ 500,ರಸ್ತೆ ನೀಯಮ ಉಲ್ಲಂಘನೆಗೆ 100 ರೂ. 1000ರೂಪಾಯಿ. ಸೀಟ್ ಬೆಲ್ಟ್ ಧರಿಸದಿದ್ದರೆ ಈ ಮೊದಲು ಇದ್ದ 100ರೂಪಾಯಿಗೆ 1000 ರೂಪಾಯಿ; ಹೆಲ್ಮೆಟ್ ಧರಿಸದೆ ಇದ್ದರೆ 100 ರೂಪಾಯಿಯಿಂದ1000 ರೂಪಾಯಿ, ಅಪ್ರಾಪ್ತರು ವಾಹನ ಚಾಲನೆಗೈದರೆ 25000 ರೂಪಾಯಿ ದಂಡ ಮತ್ತು3 ವರ್ಷ ಜೈಲುವಾಸ, 12 ತಿಂಗಳು ಲೈಸನ್ಸ್ ರದ್ದು ಸೇರಿದಂತೆ ಹಲವಾರು ಹೊಸ ಜನಪೀಡನಾ ನೀಯಮಗಳನ್ನು ತಂದು ಜನರನ್ನು ಸಂಕಷ್ಟಕ್ಕೆ ಈಡು ಮಾಡಿರುವುದು ತೀರ ಶೋಚನೀಯ. ಕೇಂದ್ರಸರಕಾರ ಈ ತಿದ್ದುಪಡಿಗಳನ್ನು ಕೂಡಲೇ ಹಿಂದಕ್ಕೆ ಪಡೆದು ವೈಜ್ನಾನಿಕವಾಗಿ ದಂಡನೀಯಮಗಳ ಪರಿಷ್ಕರಣೆ ಮಾಡಬೇಕೆಂದು ಸಭಾಪತಿ ಅಗ್ರಹಿಸಿದ್ದಾರೆ |
ಬ್ಯಾಂಕುಗಳ ವಿಲಯನ ದೇಶದ ಆರ್ಥಿಕ ದಿವಾಳಿತನದ ಸಂಕೇತ |
ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಾ ಮುಂದುವರಿದಿದ್ದು ಇದರಿಂದಾಗಿ ದೇಶದಲ್ಲಿ ಭೀಕರ ಆರ್ಥಿಕ ಹಿಂಜರಿತವುಂಟಾಗಿದೆ. ಅದರ ಪರಿಣಾಮ ಜಿಡಿಪಿ ಶೇಕಡಾ 5 ಕ್ಕೆ ಇಳಿದ್ದಿದು ಐತಿಹಾಸಿಕ ಕುಸಿತ ಕಂಡಿದೆ. |
ಇದನ್ನು ನಿಯಂತ್ರಿಸಲಾಗದೆ ಕೇಂದ್ರ ಸರಕಾರ ಇದೀಗ ರಿಸರ್ವ್ ಬ್ಯಾಂಕ್ ನಲ್ಲಿದ್ದ ಆಪತ್ಕಾಲ ನಿಧಿ ರೂಪಾಯಿ1ಕೋಟಿ 72ಲಕ್ಷ ಕೋಟಿ ಹಣಕ್ಕೂ ಕನ್ನಹಾಕಿ ದೇಶದ ಅರ್ಥಿಕವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದೂ ಶ್ರೀ ಸಭಾಪತಿ ಟೀಕಿಸಿದ್ದಾರೆ. |
ಇದಕ್ಕಾಗಿಯೇ ದೇಶದ ಪ್ರಮುಖ ರಾಷ್ಟ್ರೀಕೄತ ಬ್ಯಾಂಕುಗಳನ್ನು ವಿಲಯನ ಮಾಡಿರುವುದೂ ಅಕ್ಷೇಪಾರ್ಹವಾಗಿದೆಯೆಂದು ಅವರು ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರದ ದುರಾಡಳಿತ ವಿರುಧ್ಧ ಪ್ರತಿಭಟನೆಯನ್ನು ಮಾಡುವುದರ ಮೂಲಕ ಜನಾಂದೋಲನಕ್ಕೆ ನೀಡಲಿದೆಯೆಂದು ಸಭಾಪತಿ ಹೇಳಿದ್ದಾರೆ. |
ಆತನ ದಯೆ ಯುಗದಿಂದ ಯುಗಕ್ಕೆ ಇರುತ್ತದೆ! - Manna Ministry |
ಆತನ ದಯೆ ಯುಗದಿಂದ ಯುಗಕ್ಕೆ ಇರುತ್ತದೆ! |
Posted on December 27, 2016 by MannaMinistries No comments |
"ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವನ ಮೇಲೆ ಆತನ ದಯವು ಯುಗಯುಗಾಂತರಗಳವರೆವಿಗೂ ಇರುತ್ತದೆ" (ಕೀರ್ತ. 103:17). |
ದೇವರು ಅಬ್ರಹಾಮನನ್ನು ಕರೆದನು (ಆದಿ. 12:1). ಮತ್ತು ಅಬ್ರಹಾಮನು ಆತನೊಡನೆ ಹತ್ತಿರವಾಗಿ ವಾಸಿಸಿದ್ದರಿಂದ ಆತನ ಸ್ನೇಹಿತನಾದನು. ಆದ್ದರಿಂದ, ದೇವರು ಅವನನ್ನು ಹೆಚ್ಚಾಗಿ ಆಶೀರ್ವದಿಸಿ ಅವನೊಡನೆಯೂ ಯುಗಯುಗಾಂತರಗಳಲ್ಲಿ ಅವನ ಕುಟುಂಬದವರೊಡನೆಯೂ ತನ್ನ ಕೃಪೆ ಉಳಿಯುವಂತೆ ಮಾಡಿದನು. ಈ ದಿನದಲ್ಲಿ, ನೀವು ಒಂಟಿಯಾದ ಮನುಷ್ಯನಾಗಿರಬಹುದು ಅಥವಾ ಸ್ತ್ರೀಯಾಗಿರಬಹುದು ಆದರೆ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಯುಗಯುಗಾಂತರಗಳವರೆವಿಗೂ ಆಶೀರ್ವದಿಸಲು ಕೃಪೆಯುಳ್ಳವನಾಗಿದ್ದಾನೆ? (ಯೆಶಾ. 61:9). ಆದ್ದರಿಂದ ಅಬ್ರಹಾಮನಂತೆ, ನೀವು ಸಹ ನಿಮ್ಮ ಜೀವನದಲ್ಲಿ ದೇವರಿಗೆ ಪರಿಪೂರ್ಣವಾಗಿ ಸಮರ್ಪಿಸಿರಿ (ಯೆಶಾ. 51:2). |
ಒಬ್ಬ ಯೌವನಸ್ಥ ಮನುಷ್ಯನು ದೇವರ ಬಗ್ಗೆ ಕೇಳಿ ಅವನನ್ನು ಪ್ರೀತಿಸಲು ಆರಂಭಿಸಿದನು. ಆದರೆ ದೇವರ ಬಗ್ಗೆ ಆತನ ಪ್ರೀತಿ ಆಳವಾಗಿಯೂ ಅರ್ಥಪೂರ್ಣವಾಗಿಯೂ ಇರಲಿಲ್ಲ. ಆತನು ಧೂಮಪಾನ ಮಾಡುತ್ತಿದ್ದು ನಿಲ್ಲಿಸಲು ಇಷ್ಟಪಡಲಿಲ್ಲ. ಶೀಘ್ರದಲ್ಲಿ ಆತನು ಮದುವೆಯಾಗಿ ಒಬ್ಬ ಒಳ್ಳೇ ಹೆಂಡತಿಯನ್ನು ಪಡೆದನು. ಮನೆಯಲ್ಲಿ ಕಷ್ಟಗಳು ಆರಂಭವಾಯಿತು. ಆಗ್ಗಿಂದ್ದಾಗೆ, ಜಗಳಗಳು ಇದ್ದು ಮನೆಯಲ್ಲಿ ಸಮಾಧಾನವಿರಲಿಲ್ಲ. ಆ ಸಮಯದಲ್ಲಿ, ಒಬ್ಬ ದೇವರ ಮನುಷ್ಯ ಇವನನ್ನು ಸಂಧಿಸಿದನು. ಆತನು ಹೇಳಿದನು "ಅದು ನಿಜ ನೀನು ದೇವರನ್ನು ಪ್ರೀತಿ ಮಾಡುತ್ತೀ ಎಂದು ಆದರೆ, ಆತನನ್ನು ನಿನ್ನ ಸ್ವಂತ ಬಿಡುಗಡೆಗಾರನನ್ನಾಗಿ ಒಪ್ಪಿಕೊಂಡಿಲ್ಲ. ಈಗಲೇ ಮೊಣಕಾಲೂರಿ ದೇವರಿಗೆ ಪ್ರಾರ್ಥಿಸು 'ಕರ್ತನೇ, ನನ್ನ ತಪ್ಪುಗಳನ್ನು ಮನ್ನಿಸು, ನನ್ನ ಕುತ್ತಿಗೆ ಹಿಡಿದಿರುವ ಎಲ್ಲಾ ಕೆಟ್ಟ ಚಟಗಳಿಂದ ಬಿಡುಗಡೆ ಹೊಂದಿ ನನಗೆ ಬೇಕಾಗಿರುವ ಸ್ವಾತಂತ್ರ್ಯವನ್ನು ಕೊಡು. ನಿನ್ನ ದೈವೀಕ ಸಮಾಧಾನದಿಂದ ನನ್ನನ್ನು ತುಂಬಿಸಿ ನಾನು ನಿನ್ನಲ್ಲಿ ನೆಲೆಸಿರುವಂತೆ ಸಹಾಯಮಾಡು. ಆಗ ಆತನು ನಿನ್ನನ್ನು ಆಶೀರ್ವದಿಸುತ್ತಾನೆ! ಈ ಮನುಷ್ಯನು ಅದನ್ನೇ ಮಾಡಿದನು. ಆಗ ದೈವೀಕ ಸಮಾಧಾನ ಆತನನ್ನು ತುಂಬಿತು. ಬೇಗನೇ, ಅವನ ಮನೆಯಲ್ಲೂ ಸಮಾಧಾನ ತುಂಬಿತು. ನಂತರ, ಆತನ ಮಗನು ಪ್ರಾಪಂಚಿಕ ದುರಾಶೆಗಳಿಗೆ ಗುಲಾಮನಾದನು. ಈಗ, ತಂದೆ ತನ್ನ ಮಗನನ್ನು ಪ್ರಾಪಂಚಿಕ ದುರಾಶೆಗಳಿಂದ ಬಿಡಿಸುವಂತೆ ದೇವರನ್ನು ಶ್ರದ್ದೆಯಿಂದ ಬೇಡಿದನು. ದೇವರು ಆತನ ಪ್ರಾರ್ಥನೆಯನ್ನು ಕೇಳಿ ಆತನ ಮಗನನ್ನು ಬಿಡಿಸಿದನು. ಮುಂದಿನ ದಿನಗಳಲ್ಲಿ, ಮುಂದಿನ ಪೀಳಿಗೆಯವರು ಆಶೀರ್ವದಿಸಲ್ಪಟ್ಟರು ಮತ್ತು ಅವರೆಲ್ಲರೂ ದೇವರಿಗೆ ಭಯಪಡುವಂತಹ ಕುಟುಂಬಗಳಾಗಿ ಮಾಡಲ್ಪಟ್ಟರು. ಕೇವಲ ಈ ಮನಷ್ಯನ ನೀತಿಯಿಂದ ಇಡೀ ಸಂತಾನವೇ ದೇವರಿಂದ ಆಶೀರ್ವದಿಸಲ್ಪಟ್ಟದ್ದಕ್ಕಾಗಿ ಪುಳಕಿತಗೊಂಡರು. |
ಪ್ರಿಯ ಸ್ನೇಹಿತನೇ! ಈ ರೀತಿಯ ಸಂತೋಷಕ್ಕಾಗಿ ನೀವು ಆಶೆಪಡುವಿರಾ? ಅಥವಾ ಈ ಪ್ರಾಪಂಚಿಕ ದುರಾಶೆಗಳಿಗೆ ದೇವರನ್ನು ತೊರೆಯಲು ಇಷ್ಟಪಡುವಿರಾ? ದಯಮಾಡಿ ದೇವರನ್ನು ಹುಡುಕಿ, ಆತನನ್ನು ನಿಮ್ಮ ರಕ್ಷಕನನ್ನಾಗಿ ಸ್ವೀಕರಿಸಿರಿ. ದೇವರು ನಿಜವಾಗಲೂ ನಿಮ್ಮ ನಂಬಿಕೆಯನ್ನು ಗೌರವಿಸಿ, ನಿಮ್ಮ ಕುಟುಂಬವನ್ನು ಯುಗ ಯುಗಾಂತರಗಳವರೆವಿಗೂ ಆಶೀರ್ವಾದಿಸತ್ತಾನೆ. |
ಪ್ರಾರ್ಥನೆ :- |
ಪ್ರಿಯ ಪರಲೋಕದ ತಂದೆಯೇ, ನಿನಗೆ ನನ್ನ ಪ್ರೀತಿ ಪೂರ್ಣವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಅದೇ ಸಮಯದಲ್ಲಿ ಈ ಪ್ರಾಪಂಚಿಕ ಆನಂದಗಳೂ ನನಗೆ ಬೇಕು. ನಾನು ನನ್ನ ಎರಡು ಮನಸ್ಸಿಗಾಗಿ ನಾಚಿಕೆಪಡುತ್ತೇನೆ. ತಂದೆಯೇ, ಈ ದಿನ ನೀನು ನನ್ನ ಹೃದಯವನ್ನು ಬಲದಾಯಿಸಿ ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿ ಮಾಡುವಂತೆ ಸಹಾಯಮಾಡು. ಅಬ್ರಹಾಮನು ನಡೆದಂತೆ ನಾನು ನಿನ್ನ ಸಂಗಡ ನಡೆಯುವಂತೆ ಅವಕಾಶಕೊಡು. ನನ್ನನ್ನು ನನ್ನ ಕುಟುಂಬವನ್ನು ಯುಗಯುಗಾಂತರಗಳಲ್ಲಿ ಆಶೀರ್ವಸಿದಿಸು ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್. |
ರಾಹುಲ್ ಗಾಂಧಿ ಮತ್ತೆ ವಿವಾದದಲ್ಲಿ! - Oneindia Kannada |
Published : August 24, 2018, 01:53 |
ರಾಹುಲ್ ಗಾಂಧಿ ಮತ್ತೆ ವಿವಾದದಲ್ಲಿ! |
ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಂಬರ್ಗ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, 'ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ವಿಫಲವಾಗಿರುವುದಕ್ಕೆಯೇ ಐಸಿಸ್ ನಂಥ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಉದ್ಯೋಗವಿಲ್ಲದೆ ಕಂಗೆಟ್ಟ ಜನರು ಐಸಿಸ್ ಗೆ ಸೇರುವಂತಾಗಿದೆ' ಎಂದಿದ್ದರು.ಪರೋಕ್ಷವಾಗಿ ಐಸಿಸ್ ಅನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ ಅವರ ನಡೆಯನ್ನು ಟ್ವಿಟ್ಟಿಗರು ಖಂಡಿಸಿದ್ದಾರೆ. |
ಸರಗಳ್ಳರಿಗೆ ಭಾನುವಾರದ ರಜೆ ಇಲ್ಲ, 3 ಕಡೆ ಸರಗಳವು | Chain snatching : 3 more incidents reported in Bengaluru - Kannada Oneindia |
» ಸರಗಳ್ಳರಿಗೆ ಭಾನುವಾರದ ರಜೆ ಇಲ್ಲ, 3 ಕಡೆ ಸರಗಳವು |
ಸರಗಳ್ಳರಿಗೆ ಭಾನುವಾರದ ರಜೆ ಇಲ್ಲ, 3 ಕಡೆ ಸರಗಳವು |
Published: Sunday, February 7, 2016, 17:56 [IST] |
ಬೆಂಗಳೂರು, ಫೆಬ್ರವರಿ 07 : ಉದ್ಯಾನ ನಗರಿ ಬೆಂಗಳೂರಿಗೆ ಇಂದು ಮತ್ತೆ ಸರಗಳ್ಳರು ಬಂದಿದ್ದು ಬೆಳಗ್ಗೆ 2 ಕಡೆ ಮತ್ತು ಸಂಜೆ 1 ಕಡೆ ಸರಗಳ್ಳತನ ನಡೆದಿದೆ. ಶನಿವಾರವೂ ನಗರದ ಐದು ಕಡೆ ಸರಗಳ್ಳತನ ನಡೆದಿತ್ತು. |
ಯಶವಂತಪುರ, ಅಮೃತಹಳ್ಳಿ, ವಿಜಯಗನರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸರಗಳ್ಳತನ ನಡೆದಿದೆ. ಬ್ಲಾಕ್ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. [ಬೆಂಗಳೂರು : 1 ಗಂಟೆಯಲ್ಲಿ 10 ಕಡೆ ಸರಗಳ್ಳತನ] |
ವಿಜಯನಗರ : ಭಾನುವಾರ ಸಂಜೆ ವಿಜಯನಗರ ಸಮೀಪದ ವಿನಾಯಕ ಲೇಔಟ್‌ಗೆ ಸರಗಳ್ಳರು ಬಂದಿದ್ದು, ವಿಳಾಸ ಕೇಳುವ ನೆಪದಲ್ಲಿ ಜಯಲಕ್ಷಮ್ಮ ಎಂಬುವವರನ್ನು ಮಾತನಾಡಿಸಿ 65 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ] |
ಯಶವಂತಪುರ : ಭಾನುವಾರ ಬೆಳಗ್ಗೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿವಾನರಪಾಳ್ಯ ಬಳಿ ಮನೆಯ ಮುಂದೆ ನಿಂತಿದ್ದ ಅನುಸೂಯಮ್ಮ ಅವರ ಬಳಿ ವಿಳಾಸ ಕೇಳಿದ ದುಷ್ಕರ್ಮಿಗಳು ಅವರ ಕೊರಳಿನಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. |
ಅಮೃತಹಳ್ಳಿ : ಅಮೃತಹಳ್ಳಿಯ ಕಾಫಿಬೋರ್ಡ್ ಬಡಾವಣೆಯಲ್ಲಿ ಬೆಳಗ್ಗೆ ರಜನಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾಗಿಯಾಗಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. |
ಶನಿವಾರ ಜ್ಞಾನಭಾರತಿ, ಕೆ.ಆರ್.ಪುರಂ, ಚನ್ನಮ್ಮನಕೆರೆ ಅಚ್ಚುಕಟ್ಟು, ಚಂದ್ರಾಲೇಔಟ್ ಪೊಲೀಸ್ ಠಾಣೆ ಸೇರಿದಂತೆ 5 ಕಡೆ ಸರಗಳ್ಳತನ ನಡೆದಿತ್ತು. |
bengaluru, yeshwanthpur, vijayanagar, bangalore police, gold, ಯಶವಂತಪುರ, ಬೆಂಗಳೂರು, ಬೆಂಗಳೂರು ಪೊಲೀಸ್, ಚಿನ್ನ, ವಿಜಯನಗರ |
3 chain snatching incidents reported in Bengaluru city on Sunday, February 7, 2016. Case registered in Yeshwanthpur, Amruthahalli and Vijayanagar police station. |
1) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 13/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:. |
ದಿನಾಂಕ 22-03-2016 ರಂದು ಸಂಜೆ 5-10 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 22-03-2016 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾದಿಯು ತಮ್ಮ ತಮ್ಮನಾದ ಪ್ರಕಾಶ ಇತನನ್ನು ಮಾತನಾಡಿಸಲು ಕಿಮ್ಸ ಆಸ್ಪತ್ರೆಗೆ ಬಂದಿದ್ದು ಅಲ್ಲಿ ಪ್ರಕಾಶನನ್ನು ಮಾತನಾಡಿಸಿಕೊಂಡು ವಾಪಾಸ ರೂಮಿಗೆ ಹೊಗಲು ಕಿಮ್ಸ ಆಸ್ಪತ್ರೆಯ ಮುಂದೆ ಚಂದ್ರು ಸಾ. ದದೇಗಲ್ಲ ಇತನ ಆಟೋವನ್ನು ಹತ್ತಿ ಕುಳಿತುಕೊಂಡು ಚಂದ್ರು ಇತನು ಆಟೋವನ್ನು ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಬಿ.ಎಸ್ ಫವಾರ ಹೊಟೆಲ್ ಮುಂದೆ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊಗಿದ್ದರಿಂದ ಆಟೋ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಪಲ್ಟಿಯಾಗಿ ಬಿದ್ದದ್ದರಿಂದ ಫಿರ್ಯಾದಿಯ ಎಡಗಾಲಿಗೆ ಗಂಭೀರ ಗಾಯ ಆಗಿರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. |
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 51/2016 ಕಲಂ: 78(3) Karnataka Police Act:. |
ದಿನಾಂಕ: 22-03-2016 ರಂದು ಸಂಜೆ 8-00 ಗಂಟೆಯ ಸುಮಾರಿಗೆ ಆರೋಪಿತನು ಅಳವಂಡಿ ಗ್ರಾಮದ ಶ್ರೀ ಯಮನೂರಸಾಬ ದಗರ್ಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿಯರ್ಾದಿದಾರರು ತಮ್ಮ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 360=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಜರುಗಿಸುವ ಕುರಿತು ಒಂದು ವರದಿ ಮತ್ತು ಆರೋಪಿತನನ್ನು ಹಾಜರಪಡಿಸಿದ್ದು, ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. |
ಕರುಣಾನಿಧಿಗೆ ಕಾಡುತ್ತಿತ್ತು ಅತೀವ ಅಭದ್ರತೆ: ಡಾ. ಸುಬ್ರಮಣಿಯನ್ ಸ್ವಾಮಿ– News18 Kannada |
ಕರುಣಾನಿಧಿಗೆ ಕಾಡುತ್ತಿತ್ತು ಅತೀವ ಅಭದ್ರತೆ: ಡಾ. ಸುಬ್ರಮಣಿಯನ್ ಸ್ವಾಮಿ |
Updated:August 7, 2018, 9:29 PM IST |
ಕರುಣಾನಿಧಿ ಅವರ ಭಾವಚಿತ್ರ |
Updated: August 7, 2018, 9:29 PM IST |
- ಡಿ.ಪಿ. ಸತೀಶ್, ನ್ಯೂಸ್18 |
ಬೆಂಗಳೂರು: ಕರುಣಾನಿಧಿ ಅವರ ದ್ರಾವಿಡ ಹೋರಾಟ ಹಾಗೂ ಬ್ರಾಹ್ಮಣ-ವಿರೋಧಿ ಹೋರಾಟದ ಹಾದಿಯಲ್ಲಿ ಹೆಚ್ಚಾಗಿ ಕಾಡಿದ್ದು ಬಿಜೆಪಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಅವರೇ ಇರಬೇಕು. ಕರುಣಾನಿಧಿ ಮತ್ತು ಸುಬ್ರಮಣಿಯನ್ ಸ್ವಾಮಿ ಇಬ್ಬರಲ್ಲೂ 1991ರವರೆಗೂ ಉತ್ತಮ ಸಂಬಂಧವೇ ಇತ್ತು. ಕರುಣಾನಿಧಿ ಬಗ್ಗೆ ಬಹಳ ಆತ್ಮವಿಶ್ವಾಸದಿಂದ ಮಾತನಾಡುವ ಕೆಲವೇ ಮಂದಿಗಳಲ್ಲಿ ಸ್ವಾಮಿ ಕೂಡ ಒಬ್ಬರು. ನ್ಯೂಸ್18 ವಾಹಿನಿ ಜೊತೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ತಮ್ಮ ತಾತ್ವಿಕ ವಿರೋಧಿ ಕರುಣಾನಿಧಿ ಬಗ್ಗೆ ಒಂದಷ್ಟು ವಿಚಾರಗಳು ಹಾಗೂ ಅಭಿಪ್ರಾಯಗಳನ್ನ ಹಂಚಿಕೊಂಡಿದ್ಧಾರೆ. ಒಂದೆಡೆ, ಕರುಣಾನಿಧಿ ಅವರನ್ನು ಅಪೂರ್ವ ಸಂಘಟಕ ಎಂದು ಹೊಗಳುವ ಸ್ವಾಮಿ, ಇನ್ನೊಂದೆಡೆ ಅವರನ್ನು ಅಪ್ರಾಮಾಣಿಕ ಎಂದು ಟೀಕಿಸುತ್ತಾರೆ. |
"ಕರುಣಾನಿಧಿ ಒಬ್ಬ ಒಳ್ಳೆಯ ಸಂಘಟಕ ಎಂಬುದು ಹೌದು. ಜೊತೆ ಒಳ್ಳೆಯ ವಾಗ್ಮಿ ಕೂಡ. ಅವರ ತಮಿಳು ಉಚ್ಛಾರ ಅದ್ಭುತ. ಇಷ್ಟೆಲ್ಲಾ ಉತ್ತಮ ಗುಣವಿದ್ದರೂ ಅವರಲ್ಲಿ ಕಿಂಚಿತ್ತೂ ಪ್ರಾಮಾಣಿಕತೆ, ನೈತಿಕತೆ ಇರಲಿಲ್ಲ. ಅವರಲ್ಲಿ ಅಭದ್ರತೆ ಅತೀವವಾಗಿ ಕಾಡುತ್ತಿತ್ತು" ಎಂದು ಮಾಜಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟರು. |
ಸ್ವಾಮಿ ಹೇಳಿಕೊಂಡ ಪ್ರಕಾರ ಅವರು ಮತ್ತು ಕರುಣಾನಿಧಿ ಮೊದಲು ಭೇಟಿಯಾಗಿದ್ದು 1974ರಲ್ಲಿ, ಅಂದರೆ ಇಂದಿರಾ ಗಾಂಧಿ ತುರ್ತುಸ್ಥಿತಿ ಹೇರುವ ಒಂದು ವರ್ಷ ಮುನ್ನ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ ಡಾ. ಸ್ವಾಮಿ ಆ ಸಂದರ್ಭದಲ್ಲಿ ವಿಭಿನ್ನ ಆರ್ಥಿಕ ಚಿಂತನೆ ಮತ್ತು ವಿಚಾರಧಾರೆಗಳಿಗೆ ಖ್ಯಾತರಾಗಿದ್ದರು. ಸಂಸತ್ತಿನಲ್ಲಿ ಅವರ ವಾಗ್ಝರಿ ಅಮೋಘವಾಗಿರುತ್ತಿತ್ತು. ಬಿಜೆಪಿಯ ಪೂರ್ವಾಶ್ರಮದ ಪಕ್ಷವಾದ ಜನಸಂಘದ ಸಂಸದರಾಗಿದ್ದ ಸುಬ್ರಮಣಿಯನ್ ಸ್ವಾಮಿ ಬಗ್ಗೆ ಕರುಣಾನಿಧಿ ಅವರಿಗೆ ಒಂದು ರೀತಿಯ ಕುತೂಹಲ ಮನೆ ಮಾಡಿತ್ತು. ಅದುವೇ ಅವರನ್ನು ಭೇಟಿಯಾಗಲು ಕಾರಣವಾಯಿತು. |
"ಆಗ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಆರೆಸ್ಸೆಸ್ನವರು ಆ ದಿನಗಳಲ್ಲಿ 'ಮದರ್ ಲ್ಯಾಂಡ್' ಎಂಬ ಪತ್ರಿಕೆ ಪ್ರಕಟಿಸುತ್ತಿದ್ದರು. ಈ ಪತ್ರಿಕೆಗೆ ಜಾಹೀರಾತು ಕೊಡಲು ಸಾಧ್ಯವೇ ಎಂದು ಕರುಣಾನಿಧಿ ಅವರಲ್ಲಿ ಕೇಳಿದೆ. ಅವರಿಗೆ ಶಾಕ್ ಆಯಿತು. ಆರ್ಯರ ಒಂದು ಪಕ್ಷದ ವ್ಯಕ್ತಿ ದ್ರಾವಿಡನ್ ಪಕ್ಷದ ಮುಖ್ಯಮಂತ್ರಿ ಬಳಿಯೇ ಜಾಹೀರಾತು ಕೇಳುತ್ತಿದ್ದಾನಲ್ಲ…! ಆದರೂ ಕರುಣಾನಿಧಿ ನನ್ನ ಮಾತನ್ನ ತಳ್ಳಿಹಾಕಲಿಲ್ಲ. 'ಮದರ್ ಲ್ಯಾಂಡ್' ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನ ನೀಡುವ ಮನಸು ಮಾಡಿದರು," ಎಂದು 1974ರ ಆ ಭೇಟಿಯನ್ನು ಸ್ವಾಮಿ ಮೆಲುಕು ಹಾಕಿದರು. |
ಅದಾಗಿ ಒಂದು ವರ್ಷದಲ್ಲಿ ತುರ್ತುಪರಿಸ್ಥಿತಿ ಜಾರಿ ಆಯಿತು. ಪ್ರಧಾನಿ ಇಂದಿರಾ ಗಾಂಧಿ ತನ್ನ ಸರಕಾರವನ್ನೂ ಕಿತ್ತೊಗೆಯುವ ಭಯ ಕರುಣಾನಿಧಿ ಅವರಲ್ಲಿತ್ತು. ಆದರೂ ಕೂಡ ಅವರು ತುರ್ತುಪರಿಸ್ಥಿತಿ ವಿರುದ್ಧ ಹೋರಾಡುವ ಜನರನ್ನ ಬಂಧಿಸುವ ಕೆಲಸ ಮಾಡಲಿಲ್ಲ. ಅಂದುಕೊಂಡಂತೆ, ಇದೇ ಕಾರಣಕ್ಕೆ ಕರುಣಾನಿಧಿ ಸರಕಾರವನ್ನ ಇಂದಿರಾ ಗಾಂಧಿ ವಜಾಗೊಳಿಸಿದರೆಂದು ಸ್ವಾಮಿ ಹೇಳುತ್ತಾರೆ. |
"ತುರ್ತು ಪರಿಸ್ಥಿತಿ ಆದ ನಂತರ ನಾನು ಅವರನ್ನು ಮತ್ತೊಮ್ಮೆ ಭೇಟಿಯಾದೆ. ಆಗ ನಾನು ತುರ್ತುಸ್ಥಿತಿ ವಿರುದ್ಧ ಹೋರಾಡಿ ಹೀರೋ ಆಗಿದ್ದೆ. ನನ್ನ ಬಗ್ಗೆ ಕರುಣಾನಿಧಿಗೆ ಮೆಚ್ಚುಗೆ ಇತ್ತು. 1977ರ ಲೋಕಸಭಾ ಚುನಾವಣೆಯಲ್ಲಿ ಮದ್ರಾಸ್ ದಕ್ಷಿಣ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸುವ ಇಂಗಿತ ಅವರಲ್ಲಿತ್ತು. ನನಗೂ ಇದು ಒಪ್ಪಿಗೆ ಎನಿಸಿತು. ಆದರೆ, ನನ್ನ ಫ್ಯಾಮಿಲಿ ಪ್ರೆಂಡ್ ಆದ ಶಾಸ್ತ್ರೀಯ ಸಂಗಿತದ ದಿಗ್ಗಜೆ ಎಂ.ಎಸ್. ಸುಬ್ಬುಲಕ್ಷ್ಮೀ ಅವರು ಆ ಕ್ಷೇತ್ರದಿಂದ ರಾಜಮೋಹನ್ ಗಾಂಧಿ ಸ್ಪರ್ಧಿಸಬೇಕೆಂದು ಬಯಸಿದರು. ಆ ಕ್ಷೇತ್ರದಲ್ಲಿ ನಿಲ್ಲದಂತೆ ನನಗೆ ಮನವಿ ಮಾಡಿದರು. ಮೊರಾರ್ಜಿ ದೇಸಾಯಿ ಅವರು ಬಾಂಬೆಯಲ್ಲಿ ನಾನು ಸ್ಪರ್ಧಿಸಬೇಕೆಂದು ಅಪೇಕ್ಷಿಸಿದ್ದರು. ಮೊರಾರ್ಜಿ ಮಾತಿಗೆ ಒಪ್ಪಿ ನಾನು ಬಾಂಬೆಗೆ ಹೋದೆ. ಇದು ಕರುಣಾನಿಧಿಗೆ ಗೊತ್ತಾಗಿ ಕೋಪಗೊಂಡರು. ರಾಜಮೋಹನ್ ಗಾಂಧಿ ಅವರಿಗೆ ಟಿಕೆಟ್ ಕೊಡುವುದಿಲ್ಲವೆಂದು ನನಗೆ ಹೇಳಿದರು. ಅವರನ್ನು ಕಂಡರೆ ಅದೇಕೋ ಅವರಿಗೆ ಇಷ್ಟವಿರಲಿಲ್ಲವೆನಿಸುತ್ತದೆ. ಕೊನೆಗೆ ಕರುಣಾನಿಧಿ ಅವರ ಸಂಬಂಧಿಕ ಮುರಸೋಳಿ ಮಾರನ್ ಅವರು ಮದ್ರಾಸ್ ಸೌತ್ ಕ್ಷೇತ್ರದಿಂದ ಡಿಎಂಕೆ ಪಕ್ಷದ ಪರವಾಗಿ ಕಣಕ್ಕಿಳಿದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ನ ಆರ್. ವೆಂಕಟರಾಮನ್ ಎದುರು ಮಾರನ್ ಸೋಲಪ್ಪಿದರು. ಆರ್. ವೆಂಕಟರಾಮನ್ ಅವರು ಮುಂದೆ ಭಾರತದ ರಾಷ್ಟ್ರಪತಿಗಳಾಗುತ್ತಾರೆ. ನಾನೇನಾದರೂ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ವೆಂಕಟರಾಮನ್ ಅವರನ್ನ ಸೋಲಿಸಿರುತ್ತಿದ್ದೆ. ಬಾಂಬೆಯಲ್ಲಿ ಸ್ಪರ್ಧಿಸಿ ನಾನು ಗೆದ್ದಿದ್ದೆ," ಎಂದು ಸುಬ್ರಮಣಿಯನ್ ಸ್ವಾಮಿ ವಿವರಿಸಿದರು. |
ಬ್ರಾಹ್ಮಣ್ಯದ ಕಟುವಿರೋಧಿಯಾಗಿದ್ದ ಕರುಣಾನಿಧಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಜೊತೆ ಇಷ್ಟೊಳ್ಳೆ ಸಂಬಂಧ ಇತ್ತಾ ಎಂಬುದು ಅಚ್ಚರಿ ಮೂಡಿಸುತ್ತದೆ. ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಕಲ್ಲು ಬಿದ್ದದ್ದು ಎಲ್ಟಿಟಿಇ ಮತ್ತು ಜಯಲಲಿತಾ ವಿಚಾರಗಳಿಂದಲಂತೆ. |
"ಎಂಬತ್ತರ ದಶಕದಲ್ಲಿ ಶ್ರೀಲಂಕಾದಲ್ಲಿ ತಮಿಳು ವಿಚಾರವೇ ಪ್ರಮುಖವಾಗಿ ಸುಡುತ್ತಿತ್ತು. ಆಗ ಕರುಣಾನಿಧಿ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಇಂದಿರಾ ಗಾಂಧಿಯಿಂದ ತರಬೇತು ಪಡೆದ ತಮಿಳ್ ಈಳಂ ಮುಕ್ತಿ ಸಂಘಟನೆ(ಟಿಇಎಲ್ಒ)ಯ ನಾಯಕ ಸಬರತ್ನಮ್ ಕೂಡ ಈ ಸಮಿತಿಯ ಸದಸ್ಯರೊಲ್ಲೊಬ್ಬರಾಗಿದ್ದರು. ನಾನು ಹಾಗೂ ದ್ರಾವಿಡ ಕಳಗಂ ಪಕ್ಷದ ವೀರಮಣಿ ಮತ್ತು ಅನ್ಬಳಗನ್ ಅವರೂ ಈ ಸಮಿತಿಯಲ್ಲಿದ್ದೆವು. ಸಮಿತಿಯಲ್ಲಿ ಒಬ್ಬ ಬ್ರಾಹ್ಮಣ ವ್ಯಕ್ತಿಯು ತಮಿಳು ವಿಚಾರದ ಬಗ್ಗೆ ಚರ್ಚೆ ನಡೆಸುವುದು ಆ ಸಂದರ್ಭದಲ್ಲಿ ವಿಚಿತ್ರದಂತೆ ಭಾಸವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇದೇ ಸಬರತ್ನಮ್ ಅವರನ್ನು ಎಲ್ಟಿಟಿಇ ಹತ್ಯೆಗೈಯ್ಯುತ್ತದೆ. ಕರುಣಾನಿಧಿ ಅವರು ಎಲ್ಟಿಟಿಇಗೆ ಬೆಂಬಲ ನೀಡುತ್ತಿರುವುದು ನನ್ನ ಅರಿವಿಗೆ ಬಂತು. ವಿ. ಪ್ರಭಾಕರನ್ ಮತ್ತಾತನ ಎಲ್ಟಿಟಿಇ ಸಂಘಟನೆಯ ಪ್ರಬಲ ವಿರೋಧಿ ನಾನಾಗಿದ್ದೆ. ಹೀಗಾಗಿ, ನಾನು ಆ ಸಮಿತಿಯಿಂದ ಹೊರಬಂದುಬಿಟ್ಟೆ. ಅದಾದ ನಂತರ ನನ್ನ ಮತ್ತು ಕರುಣಾನಿಧಿ ಭೇಟಿ ಅಪರೂಪವಾಯಿತು," ಎಂದು ಸ್ವಾಮಿ ತಿಳಿಸಿದರು. |
"1990ರಲ್ಲಿ ಚಂದ್ರಶೇಖರ್ ಸರಕಾರ ರಚನೆಯಾದಾಗ ನಾನು ಕಾನೂನು ಮತ್ತು ವಾಣಿಜ್ಯದಂತಹ ಪ್ರಮುಖ ಖಾತೆಗಳನ್ನ ಹೊಂದಿದ ಪ್ರಭಾವಿ ಸಚಿವನಾದೆ. ಎಲ್ಟಿಟಿಇಗೆ ನಿಕಟ ಬೆಂಬಲ ನೀಡುತ್ತಿರುವ ಕಾರಣಕ್ಕೆ ಕರುಣಾನಿಧಿ ನೇತೃತ್ವದ ಡಿಎಂಕೆ ಸರಕಾರವನ್ನ ವಜಾಗೊಳಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಇದೇ ಕಾರಣವಾಗಿ ತಮಿಳುನಾಡಿನಲ್ಲಿ ಎಲ್ಲಿಯೂ ಗಲಭೆಯಾಗದಂತೆ ಪರಿಸ್ಥಿತಿ ನಿಭಾಯಿಸಿದೆ. ಇದರಿಂದ ಕರುಣಾನಿಧಿ ಕುದಿದುಹೋದರು. ಆ ಬಳಿಕ ನಮ್ಮಿಬ್ಬರ ಭೇಟಿ ಮತ್ತಷ್ಟು ಅಪರೂಪವಾಯಿತು"ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಡಾ. ಸ್ವಾಮಿ ತಿಳಿಸಿದರು. |
"1991-96ರವರೆಗಿನ ಜಯಲಲಿತಾ ಅವರ ಭ್ರಷ್ಟ ಆಡಳಿತದ ವಿರುದ್ಧ ನಾನು ಮಾಡಿದ ಹೋರಾಟವು ಕರುಣಾನಿಧಿ ಅವರನ್ನು ವಿಚಲಿತಗೊಳಿಸಿತು. ಅಲ್ಲಿಯವರೆಗೂ ನನ್ನ ಕುರಿತು ಕರುಣಾನಿಧಿ ಅವರಿಗೆ ಯಾವ ಆತಂಕವೂ ಇರಲಿಲ್ಲ. ನಿರ್ಭೀತಿಯಿಂದ ಜಯಲಲಿತಾ ಅವರನ್ನ ಎದುರಿಸಿ ನಿಂತ ನಾನು ಬೃಹತ್ತಾಗಿ ಬೆಳೆಯುತ್ತಿರುವಂತೆ ಕರುಣಾನಿಧಿಗೆ ಭಾಸವಾಯಿತು. ಅವರಿಗೆ ಅದೆಂಥದ್ದೋ ಕೆಟ್ಟ ಅಭದ್ರತೆಯ ಭಾವನೆ ಕಾಡಲಾರಂಭಿಸಿತು. ತಮಿಳುನಾಡಿನಲ್ಲಿ ಜಯಲಲಿತಾಗೆ ನಾನು ಪ್ರಮುಖ ಎದುರಾಳಿ ಆಗುವುದು ಅವರಿಗೆ ಬೇಡವಾಗಿತ್ತು. ಈ ವಿಚಾರದ ಬಗ್ಗೆ ಅವರು ಕಾಂಗ್ರೆಸ್ ಮುಖಂಡ ಜಿ.ಕೆ. ಮೂಪನಾರ್ ಜೊತೆ ಮಾತನಾಡಿದ್ದರು. ಬ್ರಾಹ್ಮಣನಾದ ನನಗೆ ಒಂಚೂರು ಅವಕಾಶ ಸಿಕ್ಕರೂ ಇಡೀ ರಾಜ್ಯವನ್ನೇ ವಶಕ್ಕೆ ತೆಗೆದುಕೊಂಡುಬಿಡಬಹುದು ಎಂದನಿಸಿತ್ತು ಅವರಿಗೆ. ಬ್ರಾಹ್ಮಣನಾದ ನಾನು ಇದ್ದಕ್ಕಿದ್ದಂತೆ ತಮಿಳು ವ್ಯಕ್ತಿತ್ವದನಾಗಿ ಬದಲಾಗಿಬಿಟ್ಟಿದ್ದೆ. ಬ್ರಾಹ್ಮಣರನ್ನು ಕಂಡರೆ ಆಗದ ಅವರಿಗೆ ನಾನು ಜಯಲಲಿತಾರ ಭ್ರಷ್ಟಾಚಾರವನ್ನು ಬಯಲಿಗೆಳೆದು ಜೈಲಿಗೆ ಹೋಗುಂತೆ ಮಾಡಿದ ಸಂಗತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಸ್ವಾಮಿ ಅಭಿಪ್ರಾಯಪಟ್ಟರು. |
ಸೇತು ಸಮುದ್ರಂ ಯೋಜನೆ ವಿರುದ್ಧ ಕರುಣಾನಿಧಿ ಹೋರಾಟ ಮಾಡುತ್ತಿದ್ದರು. ನಾನು ಕರುಣಾನಿಧಿಯವರ ಪಕ್ಷದವರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೆ. ಇದು ತಮ್ಮಿಬ್ಬರ ಮಧ್ಯೆ ಇದ್ದ ಕಂದಕವನ್ನು ಇನ್ನಷ್ಟು ಹೆಚ್ಚಿಸಿತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು. |
ಇನ್ನು, ಕರುಣಾನಿಧಿ ಅವರ ಪುತ್ರ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಬಗ್ಗೆಯೂ ಸ್ವಾಮಿ ಮಿಶ್ರ ಪ್ರತಿಕ್ರಿಯೆ ಕೊಡುತ್ತಾರೆ. "ಅಪ್ಪನಂತೆ ಸ್ಟಾಲಿನ್ ಕೂಡ ಒಳ್ಳೆಯ ಸಂಘಟಕರೇನೋ ಹೌದು. ಆದರೆ, ಅಪ್ಪನ ವಾಕ್ಚಾತುರ್ಯ ಸ್ಟಾಲಿನ್ರಲ್ಲಿಲ್ಲ" ಎಂಬುದು ಸ್ವಾಮಿ ಅಭಿಪ್ರಾಯ. |
ಸುಬ್ರಮಣಿಯನ್ ಸ್ವಾಮಿ ಪ್ರಕಾರ, ತಮಿಳುನಾಡಿನಲ್ಲಿ ಮುಂದಿನ ದಿನಗಳಲ್ಲಿ ಜಾತಿ ಆಧಾರಿತ ರಾಜಕಾರಣವೇ ಮುನ್ನೆಲೆಗೆ ಬರುತ್ತವೆ. ತೇವರ್ನಂತಹ ಪ್ರಬಲ ಜಾತಿಗಳ ನಾಯಕರಾದ ಶಶಿಕಲಾ ನಟರಾಜನ್, ಟಿ.ಟಿ.ವಿ. ದಿನಕರನ್ ಮೊದಲಾದವರು ತಮಿಳುನಾಡಿನ ರಾಜಕೀಯದಲ್ಲಿ ಮುಖ್ಯಸ್ಥಾನಕ್ಕೆ ಬರಲಿದ್ದಾರಂತೆ. |
"ತಮಿಳುನಾಡಿನಲ್ಲಿ ಜಾತಿ ರಾಜಕಾರಣಕ್ಕೆ ಕಡಿವಾಣ ಹಾಕಲು ಹಿಂದುತ್ವದ ರಾಜಕಾರಣದಿಂದ ಸಾಧ್ಯ. ಆದರೆ, ಇಲ್ಲಿಯ ಬಿಜೆಪಿಯ ಚುಕ್ಕಾಣಿ ಹಿಡಿದವರಿಗೆ ಆ ಮಟ್ಟದ ಸಾಮರ್ಥ್ಯ ಇಲ್ಲ," ಎಂದು ಸ್ವಾಮಿ ವಿಷಾದಿಸುತ್ತಾರೆ. |
ಹ್ಯಾಕ್ ಆಗಿ 6 ದಿನವಾದರೂ ಬಿಜೆಪಿ ವೆಬ್ ಸೈಟ್ ದುರಸ್ತಿ ಕಂಡಿಲ್ಲ! | 6 days after alleged hacking attempt, BJP's official website still under 'maintenance' - Kannada Oneindia |
18 min ago ಯತ್ನಾಳ್ ಗೆ ಬಿಸಿಮುಟ್ಟಿಸಿದ ಸಿಎಂ ಯಡಿಯೂರಪ್ಪ: ನೀವೇ ಹೊಣೆಯೆಂದ ಯತ್ನಾಳ್ |
| Published: Monday, March 11, 2019, 13:38 [IST] |
Subsets and Splits
No community queries yet
The top public SQL queries from the community will appear here once available.