text stringlengths 0 61.5k |
|---|
ನವದೆಹಲಿ, ಮಾರ್ಚ್ 11: ಲೋಕಸಭೆ ಚುನಾವಣಾ ಪ್ರಚಾರ ನಿರತವಾಗಿರಬೇಕಿದ್ದ ಭಾರತೀಯ ಜನತಾ ಪಕ್ಷಕ್ಕೆ ತನ್ನ ಅಧಿಕೃತ ವೆಬ್ ತಾಣವನ್ನು ಸರಿಪಡಿಸಲು ಆಗುತ್ತಿಲ್ಲ. ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ, ಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಚಾರ ನೀಡಬೇಕಿದ್ದ ಸಂದರ್ಭದಲ್ಲಿ ವೆಬ್ ಸೈಟ್ ದುರಸ್ತಿ ಕಾರ್ಯದಲ್ಲಿದೆ. ವೆಬ್ ಸೈಟ್ ಹ್ಯಾಕ್ ಆಗಿ ಸುಮಾರು 6 ದಿನಗಳು ಕಳೆದರೂ ಬಿಜೆಪಿ ಅಧಿಕೃತ ವೆಬ್ ಸೈಟ್ ಸರಿ ಹೋಗಿಲ್ಲವೇಕೆ ಎಂದು ವಿಪಕ್ಷದವರು ಗೇಲಿ ಮಾಡುತ್ತಿದ್ದಾರೆ. |
ಬ್ರೌಸರ್ ನಲ್ಲಿ ಬಿಜೆಪಿ.ಆರ್ಗ್ ಎಂದು ಹಾಕಿ ಗೋ ಎಂದರೆ "We'll be back soon! Sorry for the inconvenience but we're performing some maintenance at the moment. We'll be back online shortly!"ಎಂಬ ಸಂದೇಶ ನಿಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಪರದೆ ಮೇಲೆ ಕಾಣಿಸುತ್ತದೆ. |
ಮಂಗಳವಾರ ಬೆಳಗ್ಗೆ 11.30ರಿಂದ ಈ ಸಂದೇಶ ಕಾಣಿಸುತ್ತಿದೆ. ವೆಬ್ ಸೈಟ್ ಹ್ಯಾಕ್ ಆಗಿದೆ, ಅಥವಾ ತಾಂತ್ರಿಕ ದೋಷದಿಂದ ಡೌನ್ ಆಗಿದೆ ಎಂಬುದನ್ನು ಬಿಜೆಪಿ ಇನ್ನು ಒಪ್ಪಿಕೊಂಡಿಲ್ಲ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಬಿಜೆಪಿಯ ಸಾಮಾಜಿಕ ಜಾಲ ತಾಣ ಖಾತೆಗಳು ಮಾತ್ರ ಸಕ್ರಿಯವಾಗಿವೆ. |
ಕಾಂಗ್ರೆಸ್ ನ ಐಟಿ ಸೆಲ್ ಕಣ್ಣಿಗೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದು ಕಾಣುತ್ತಿದ್ದಂತೆ ಸ್ಕ್ರೀನ್ ಶಾಟ್ ತೆಗೆದುಕೊಂಡು, ಟ್ವೀಟ್ ಮಾಡಿದೆ. ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ ಎಂದು ಗೇಲಿ ಮಾಡಿ ಟ್ವೀಟ್ ಮಾಡಿದ್ದರು. |
Hey, btw, the official website of @BJP4India is still in maintenance. It's taking time to rebuild a website from scratch 😂 #Oopsie #WhereAreMyBackups #DigitalIndia |
— Elliot Alderson (@fs0c131y) March 10, 2019 |
ಫ್ರಾನ್ಸಿನ್ ಎಥನಿಕಲ್ ಹ್ಯಾಕರ್ ಅಲ್ಡರ್ಸನ್ |
ಫ್ರೆಂಚ್ ಹ್ಯಾಕರ್ ಎಲಿಯಟ್ ಆಲ್ಡರ್ಸನ್ ಅವರು ಟ್ವೀಟ್ ಮಾಡಿ, ಬಿಜೆಪಿ ವೆಬ್ ಸೈಟ್ ಇನ್ನು ಸರಿ ಹೋಗಿಲ್ಲವೇ, ಹೊಸದಾಗಿ ವೆಬ್ ಸೈಟ್ ಕಟ್ಟಬೇಕಿದೆ. ಎಂದು ಡಿಜಿಟಲ್ ಇಂಡಿಯಾ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. |
ಬಿಜೆಪಿ ಟ್ವಿಟ್ಟರ್ ಖಾತೆ ಸಕ್ರಿಯ |
ಬಿಜೆಪಿ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ. ಬಿಜೆಪಿ ವೆಬ್ ಸೈಟ್ ಹ್ಯಾಕ್ ಆದ ದಿನವೂ ಕೂಡಾ ತಮಿಳುನಾಡಿನಲ್ಲಿ ನಡೆದ ಮೋದಿ ಸಮಾವೇಶದ ಬಗ್ಗೆ ಟ್ವೀಟ್ ಮಾಡಲಾಗಿದೆ. ಕಂದಹಾರ್ ಅಪಹರಣದ ಸಂದರ್ಭದಲ್ಲಿ ಉಗ್ರರನ್ನು ಬಿಟ್ಟು ಕಳಿಸಿದ ಅಜಿತ್ ದೋವಲ್ ಬಗ್ಗೆ ವಿಡಿಯೋ ಹಾಕಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ, ಬಿಜೆಪಿ ತಕ್ಕ ಉತ್ತರ ನೀಡಿದೆ. |
ಮೋದಿ ಇರುವ ವಿಡಿಯೋ ಹಾಕಿದ್ದ ಹ್ಯಾಕರ್ಸ್ |
ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ದಿವ್ಯಸ್ಪಂದನ |
ಭಾಯಿಯೋ ಔರ್ ಬೆಹನೋ ಎಂದು ಮೋದಿ ಶೈಲಿಯಲ್ಲಿ ಟ್ವೀಟ್ ಶುರು ಮಾಡಿ, ಬಿಜೆಪಿ ವೆಬ್ ಸೈಟ್ ಸಿಗುತ್ತಿಲ್ಲ ಎಂದರೆ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ ಎಂದು ಟ್ವೀಟ್ ಮಾಡಿದ ದಿವ್ಯಸ್ಪಂದನ |
lok sabha elections 2019 bjp website hacking ಲೋಕಸಭೆ ಚುನಾವಣೆ 2019 ಹ್ಯಾಕಿಂಗ್ ಬಿಜೆಪಿ ವೆಬ್ ಸೈಟ್ |
It has been over 5 days ever since an alleged hacking attempt took it down but the Bharatiya Janata Party (BJP)'s official website is yet to become operational after going into "maintenance mode". |
ರಂಗೇರಿದ ಚುನಾವಣೆ, ಮುಗಿಲು ಮುಟ್ಟಿದ ಪ್ರಚಾರದ ಭರಾಟೆ | Kannada Dunia | Kannada News | Karnataka News | India News |
HomeLive NewsKarnatakaರಂಗೇರಿದ ಚುನಾವಣೆ, ಮುಗಿಲು ಮುಟ್ಟಿದ ಪ್ರಚಾರದ ಭರಾಟೆ |
31-03-2018 8:29PM IST / No Comments / Posted In: Karnataka, Latest News |
ಬಿಸಿಲ ಬೇಗೆಯೊಂದಿಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರತೊಡಗಿದೆ. ರಾಜ್ಯದ ಪ್ರಮುಖ ನಾಯಕರು, ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಡುವಿಲ್ಲದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಮಠ, ಮಂದಿರಗಳಿಗೂ ಭೇಟಿ ನೀಡುತ್ತಿದ್ದಾರೆ. ಹಳ್ಳಿ, ಹಳ್ಳಿಗಳಲ್ಲಿಯೂ ಪ್ರಚಾರದ ಭರಾಟೆ ಮುಗಿಲು ಮುಟ್ಟಿದೆ. |
ಈಗಾಗಲೇ ಅನೇಕ ಕ್ಷೇತ್ರಗಳ ಅಭ್ಯರ್ಥಿಗಳು ಯಾರೆಂಬುದು ಫೈನಲ್ ಆಗಿದೆ. ಟಿಕೆಟ್ ಫೈನಲ್ ಆದ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಆಕಾಂಕ್ಷಿಗಳು ಕೂಡ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. |
ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಈಗಾಗಲೇ ಹಲವು ಹಂತದಲ್ಲಿ ಪ್ರಚಾರ ನಡೆಸಿದ್ದು, ಏಪ್ರಿಲ್ 3 ರಿಂದ ಮತ್ತೊಂದು ಸುತ್ತಿನ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ. |
ಇನ್ನು ರಾಜ್ಯ ನಾಯಕರೂ ಕೂಡ ಬಿಡುವಿಲ್ಲದೇ ಪ್ರಚಾರದಲ್ಲಿ ತೊಡಗಿದ್ದಾರೆ. ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡುವಿಲ್ಲದೇ ಬಿರುಸಿನ ಪ್ರಚಾರ ನಡೆಸಿದ್ದಾರೆ. 3 ಪಕ್ಷಗಳ ನಾಯಕರಿಂದ ಬಿರುಗಾಳಿ ಪ್ರಚಾರ ನಡೆಯುತ್ತಿದೆ. |
ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ರಾಜ್ಯದಲ್ಲಿ ಹಣ, ಮದ್ಯದ ಹೊಳೆ ಹರಿಯತೊಡಗಿದೆ. ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಅನೇಕ ಕಡೆಗಳಲ್ಲಿ ನಗದು, ಮದ್ಯವನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಆಯೋಗ ಕ್ರಮ ಕೈಗೊಂಡಿದ್ದು, ಹಲವೆಡೆ ದಿಢೀರ್ ದಾಳಿ ನಡೆಸಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದೆ. |
Tags: ಕಾಂಗ್ರೆಸ್ | BJP | Congress | JDS | ವಿಧಾನಸಭೆ ಚುನಾವಣೆ | campaign | ಜೆ.ಡಿ.ಎಸ್. | ಬಿ.ಜೆ.ಪಿ. | karnataka election | ಪ್ರಚಾರದ ಭರಾಟೆ |
ನೂತನ ಆಸ್ಪತ್ರೆ ಶೀಘ್ರವೇ ಲೋಕಾರ್ಪಣೆ | Prajavani |
ನೂತನ ಆಸ್ಪತ್ರೆ ಶೀಘ್ರವೇ ಲೋಕಾರ್ಪಣೆ |
Published: 20 ಫೆಬ್ರವರಿ 2018, 11:38 IST |
Updated: 20 ಫೆಬ್ರವರಿ 2018, 11:38 IST |
ಮದ್ದೂರು: '₹ 5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಆಸ್ಪತ್ರೆ ಕಟ್ಟಡವನ್ನು ಶೀಘ್ರದಲ್ಲಿಯೇ ಲೋಕಾರ್ಪಣೆಮಾಡಲಾಗುವುದು' ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು. |
ಪಟ್ಟಣದ ಕೆ. ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದ ಅವರು, 'ಹಳೆ ಕಟ್ಟಡದ ನವೀಕರಣಕ್ಕೆ ₹ 1.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಕಾಂಪೌಂಡ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ' ಎಂದರು. |
'ಬಹು ವರ್ಷಗಳ ಹಿಂದೆಯೇ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆಯವಂತೆ ಇಲ್ಲಿನ ಜನರ ಬೇಡಿಕೆ ಇಟ್ಟಿದ್ದರು. ರೋಗಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ 2 ಹಾಸಿಗೆಯ ಡಯಾಲಿಸಿಸ್ ಕೇಂದ್ರವನ್ನು ಆರಂಭ ಮಾಡಲಾಗದೆ. ಮೂತ್ರಪಿಂಡ ಕಾಯಿಲೆಗೆ ತುತ್ತಾದ ರೋಗಿಗಳು ಈ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಮನವಿ ಮಾಡಿದರು. |
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಶಿಕಲಾ, ಡಾ.ಅಶ್ವತ್ಥ, ಡಾ. ಬೆಟ್ಟಸ್ವಾಮಿ, ಡಾ.ಭವಾನಿಶಂಕರ್, ಡಾ.ಮೋಹನ್ ಮುಖಂಡರಾದ ಕೆ.ದಾಸೇಗೌಡ, ಗುಂಡ ಮಹೇಶ್ ಇನ್ನಿತರರು ಹಾಜರಿದ್ದರು. |
ಬಿಗ್ 3 ಇಂಪ್ಯಾಕ್ಟ್ : 4 ವರ್ಷದ ಟ್ಯಾಂಕ್‌ಗೆ ನಾಲ್ಕೇ ದಿನದಲ್ಲಿ ನೀರು..ತುರುವೆಕೆರೆ ಜನರ ನಿಟ್ಟುಸಿರು |
30, Jul 2018, 10:17 PM IST |
ನಾಲ್ಕು ವರ್ಷದ ಹಿಂದೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದರೂ ತುರುವೆಕೆರೆಯ ಜನರಿಗೆ ನೀರು ಇರಲಿಲ್ಲ. ಆದರೆ ಈ ವಿಚಾರದಲ್ಲಿ ಬಿಗ್-3 ವರದಿ ಮಾಡಿದ್ದೇ ತಡ ಜನರಿಗೆ ಪರಿಹಾರ ಸಿಕ್ಕಿದೆ. ನಾಲ್ಕೆ ದಿನದಲ್ಲಿ ಬೋರ್ ವೆಲ್ ಕೊರೆಸಿ ನೀರಿನ ಟ್ಯಾಂಕ್ ಗೆ ಮರುಜೀವ ಬಂದಿದೆ. ಹಾಗಾದರೆ ಏನಿದು ಸುದ್ದಿ.. ಪೂರ್ಣ ವಿವರ ಇಲ್ಲಿದೆ... ಇದು ಬಿಗ್-3 ಇಂಪ್ಯಾಕ್ಟ್.. |
53 ಕುವೈತ್ ಸಂತ್ರಸ್ತರ ಪ್ರಕರಣ ಇತ್ಯರ್ಥ | VIJAYAVANI - ವಿಜಯವಾಣಿ |
ಕುವೈತ್‌ನ ಶೋನ್(ನ್ಯಾಯಾಲಯ ಮಾದರಿ ಸರ್ಕಾರಿ ಸ್ವಾಮ್ಯದ ಸಂಸ್ಥೆ)ನಲ್ಲಿ ಭಾನುವಾರ ಸಾಯಂಕಾಲ ಜರುಗಿದ ಮಹತ್ವದ ಸಭೆಯಲ್ಲಿ 53 ಭಾರತೀಯ ಸಂತ್ರಸ್ತರ ಪ್ರಕರಣ ಇತ್ಯರ್ಥಗೊಂಡಿದೆ. ಯಾವ ರೀತಿ ಇತ್ಯರ್ಥಗೊಂಡಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಾಗಿದೆ. |
ಅರೇಬಿಕ್ ಭಾಷೆಯಲ್ಲಿದ್ದ ಇತ್ಯರ್ಥ ಪತ್ರಕ್ಕೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಹಾಗೂ ಅವರ ನಿರ್ದೇಶನದಂತೆ ಸಂತ್ರಸ್ತರು ಸಹಿ ಹಾಕಿದ್ದಾರೆ. ಸೋಮವಾರ ಮತ್ತೆ ಸಭೆ ಮುಂದುವರಿಯಲಿದ್ದು, ಉಳಿದ 22 ಮಂದಿ ಸಂತ್ರಸ್ತರ ವಿಷಯ ಸಂಬಂಧಿಸಿ ನಿರ್ಣಯ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅನಿವಾಸಿ ಕನ್ನಡಿಗರ ಸಂಘಟನೆ ಮೂಲ ತಿಳಿಸಿದೆ. |
ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಉಪ ಕಾರ್ಯದರ್ಶಿ ಶಿಬಿ ಯು.ಎಸ್., ಶೋನ್, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್(ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಾಂಟ್ರಾಕ್ಟ್ ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. |
15 ಮಂದಿ ಗೈರು: ಪೂರ್ವ ನಿಗದಿಯಂತೆ ಭಾನುವಾರ ನಡೆದ ಸಭೆಯಲ್ಲಿ ಎಲ್ಲ 75 ಭಾರತೀಯ ಸಂತ್ರಸ್ತರು ಭಾಗವಹಿಸಬೇಕಾಗಿತ್ತು. ಆದರೆ ಇದರಲ್ಲಿ 15 ಮಂದಿ ಕಂಪನಿ ಸೊತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಹಸ್ತಾಂತರಿಸಿಲ್ಲ ಎನ್ನುವ ಕಾರಣ ನೀಡಿ ಅವರು ಸಭೆಯಲ್ಲಿ ಭಾಗವಹಿಸಲು ಉದ್ಯೋಗ ನೀಡಿದ್ದ ಸಂಸ್ಥೆ ಅವಕಾಶ ನೀಡಿಲ್ಲ. ಆ ನೌಕರರು ಕಂಪನಿಯ ಮೊಬೈಲ್, ಬೈಕ್ ಮುಂತಾದ ವಸ್ತುಗಳಲ್ಲಿ ಕೆಲವನ್ನು ಹಸ್ತಾಂತರಿಸಿಲ್ಲ ಎಂದು ಕಂಪೆನಿ ತಗಾದೆ ತೆಗೆದಿದೆ ಎಂದು ಆಕ್ಷೇಪಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರ ಕಂಪೆನಿಗೆ ರಜೆ ಇದ್ದ ಕಾರಣ ಕೆಲವರಿಗೆ ತಮ್ಮ ವಶದಲ್ಲಿದ್ದ ವಸ್ತುಗಳನ್ನು ಹಸ್ತಾಂತರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. |
7 ಮಂದಿ ರಾಜೀನಾಮೆ: ಸಭೆಯಲ್ಲಿ ಭಾಗವಹಿಸಿದವರ ಪೈಕಿ ತೆಲಂಗಾಣದ ಏಳು ಮಂದಿ ಕಂಪನಿಯವರ ಸಲಹೆಯಂತೆ ಈಗಾಗಲೇ ರಾಜೀನಾಮೆ ನೀಡಿದ ಕಾರಣ ಅವರ ವಿಷಯ ಶೋನ್‌ನಲ್ಲಿ ಇತ್ಯರ್ಥಪಡಿಸುವ ಪ್ರಮೇಯ ಉಂಟಾಗಿಲ್ಲ. |
ಶೋನ್‌ನಲ್ಲಿಯೇ ವೇತನ ಹಸ್ತಾಂತರ: ಉದ್ಯೋಗ ಒದಗಿಸಿದ್ದ ಕಂಪನಿಯು ಸಂತ್ರಸ್ತ ನೌಕರರಿಗೆ ನೀಡಬೇಕಾದ ಬಾಕಿ ವೇತನವನ್ನು ಭಾರತೀಯ ರಾಯಭಾರಿ ಕಚೇರಿಯಲ್ಲಿ ಒದಗಿಸುವ ಭರವಸೆ ನೀಡಿದ್ದರೂ, ರಾಯಭಾರಿ ಅಧಿಕಾರಿಗಳು ಇದಕ್ಕೆ ಒಪ್ಪಿಲ್ಲ. ಸಂಧಾನ ನಡೆಯುತ್ತಿರುವ ಶೋನ್‌ನಲ್ಲಿಯೇ ಹಣ, ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ಹಸ್ತಾಂತರಿಸಬೇಕು ಎಂದು ರಾಯಭಾರಿ ಕಚೇರಿ ಅಧಿಕಾರಿ ತಾಕೀತು ಮಾಡಿದೆ. ಎಲ್ಲ ನೌಕರರ ಪ್ರಕರಣ ಸೋಮವಾರ ಇತ್ಯರ್ಥಗೊಂಡರೆ ಪ್ರಯಾಣ ಟಿಕೆಟ್ ವ್ಯವಸ್ಥೆ ಮಾತ್ರ ಬಾಕಿ ಉಳಿಯಲಿದೆ. |
ಕಾನೂನು ಹೋರಾಟಕ್ಕೆ ಅವಕಾಶ |
ಸಂತ್ರಸ್ತರು ಕಾನೂನು ಹೋರಾಟ ನಡೆಸುವುದಿದ್ದರೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಶೋನ್‌ನ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ ಇದು ಪ್ರಾಯೋಗಿಕವಾಗಿ ಕಠಿಣ. ಕಾನೂನು ಹೋರಾಟ ಮುಂದುವರಿಸಿದರೆ ಮತ್ತೆ ಕೆಲವು ತಿಂಗಳು ಕುವೈತ್‌ನಲ್ಲಿಯೇ ಉಳಿಯಬೇಕು. ಇರುವ ದಾಖಲೆಗಳು ನಮಗೆ ಪೂರಕವಾಗಿ ಇರಬೇಕು. ಆದ್ದರಿಂದ ಸಿಗುವಷ್ಟು ಸೌಲಭ್ಯ ಪಡೆದುಕೊಂಡು ಸ್ವದೇಶಕ್ಕೆ ಮರಳುವುದು. ಸಾಧ್ಯವಾದರೆ ಸ್ವದೇಶಕ್ಕೆ ಮರಳಿದ ಬಳಿಕ ಕಾನೂನು ಹೋರಾಟ ನಡೆಸಬಹುದು. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕೋರಿಕೆಗಳು ಬಂದರೆ ಅಗತ್ಯ ದಾಖಲೆ, ಮಾಹಿತಿ ಒದಗಿಸಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ ಎಂದು ಮೂಲ ತಿಳಿಸಿದೆ. |
ತೂಕ ಇಳಿಸಲು ರಾಮಬಾಣ ನಿಂಬೆ ರಸ - News Kannada |
News Kannada / ಇತರೆ / ಆರೋಗ್ಯ / ತೂಕ ಇಳಿಸಲು ರಾಮಬಾಣ ನಿಂಬೆ ರಸ |
Friday, September 3rd, 2021 at 9:01 AM |
ನಿಂಬೆ ರಸದ ಉಪಯೋಗಗಳು |
ಟಾಕ್ಸಿನ್ ಹೊರ ಹಾಕಲು ಸಹಾಯ : ಈ ಮಿಶ್ರಣದಲ್ಲಿ ಸಾಕಷ್ಟು ಆಮ್ಲೀಯ ಗುಣಗಳಿರುವುದರಿಂದ ಇದನ್ನು ಕ್ಷಾರೀಯ(ಆಲ್ಕೈನ್) ಪಾನೀಯದ ಉತ್ತಮ ಮೂಲ ಎಂದು ಹೇಳಬಹುದು. ಇದು ದೇಹದ ಪಿಎಚ್‍ಅನ್ನು ಸಮತೋಲನಗೊಳಿಸುತ್ತದೆ. ಯಕೃತ್ತಿನಲ್ಲಿರುವ ಟಾಕ್ಸಿನ್‍ಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದು ಒಂದು ಉತ್ತಮ ಅಭ್ಯಾಸ ಎನ್ನಬಹುದು. |
ಸ್ಥೂಲಕಾಯ ನಿವಾರಣೆ : ನೀವೇನಾದರೂ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸುಲಭ ಉಪಾಯ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಬಿಸಿನೀರಿಗೆ ನಿಬೆ ಹಣ್ಣಿನ ರಸ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿಯಾದರೂ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಿತ ನೀರು ಸೇವನೆ ಮತ್ತು ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿದರೆ, ಉತ್ತಮ ಫಲಿತಾಂಶ ಕಾಣಬಹುದು. |
ಮಲಬದ್ಧತೆ ನಿವಾರಣೆ : ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ. ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ. |
ಮಧುಮೇಹ ನಿಯಂತ್ರಣ : ಮಧುಮೇಹ ಸಂಬಂಧಿ ಕಣ್ಣಿನ ರೋಗಗಳನ್ನು ನಿವಾರಿಸುವುದರೊಂದಿಗೆ, ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್ಟಿನ್(hesperetin) ಎಂಬ ರಾಸಾಯನಿಕ ರಕ್ತದಲ್ಲಿರುವ ಸಕ್ಕರೆಯ ಅಂಶ (ಸಕ್ಕರೆಯ ಪ್ರಮಾಣವು ರಕ್ತದಲ್ಲಿ ಹೆಚ್ಚು ಇದ್ದಾಗ)ವನ್ನು ಸಹ ಕಡಿಮೆ ಮಾಡುತ್ತದೆ. |
ಹೊಟ್ಟೆ ನೋವು ನಿವಾರಣೆ : ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ. ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. |
ಚರ್ಮ ಸಮಸ್ಯೆಗಳಿಗೆ ರಾಮಬಾಣ : ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗಿರುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ. |
Previous Article ಪೂರ್ಣ ಪ್ರಮಾಣ ಶಾಲೆ ಆರಂಭ ಕುರಿತು ಶೀಘ್ರ ನಿರ್ಧಾರ: ಸಚಿವ ಬಿ.ಸಿ.ನಾಗೇಶ್ |
Next Article ಪಿಓಪಿ, ಬಣ್ಣದ ಗಣಪತಿ ಮೂರ್ತಿ ಬಳಕೆ ನಿರ್ಬಂಧ: ಪುರಾಣಿಕ |
ಖಾಲಿ ಹೊಟ್ಟೆಗೆ ಬಿಸಿ ನೀರು ಸೇವಿಸಿದರೆ ಏನೆಲ್ಲ ಪ್ರಯೋಜನವಿದೆ ಅಲೂವೆರಾದಿಂದ ತ್ವಜೆಯ ಕಾಂತಿ ಹೆಚ್ಚಾಗುತ್ತದೆ ಮನುಷ್ಯ ಬದುಕು ಹಾಳುಗೆಡುವ ಪ್ರಲೋಭನೆ |
'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ವಿರೋಧಿಸುವವರಿಗೆ ಮೋದಿಯದ್ದೇ ಭಯ | News13 |
News13 > ಅಂಕಣಗಳು > ಪ್ರಚಲಿತ > 'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ವಿರೋಧಿಸುವವರಿಗೆ ಮೋದಿಯದ್ದೇ ಭಯ |
Thursday, June 20th, 2019 Admin |
ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಗೆಲುವು ಸಾಧಿಸಿದ ನಂತರ ಮತ್ತೊಮ್ಮೆ 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕಿದೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮಹತ್ವದ ಸಂಗತಿಯೆಂದೆರೆ, ಬಿಜು ಜನತಾದಳದ ನವೀನ್ ಪಟ್ನಾಯಕ್ ಅವರ ಗೆಲುವಿನ ಮೂಲಕ ತುಲನಾತ್ಮಕವಾಗಿ ಹಿಂದುಳಿದ ರಾಜ್ಯವಾಗಿರುವ ಒರಿಸ್ಸಾದ ಮತದಾರರು ಕೂಡ ರಾಜ್ಯದಲ್ಲಿ ಯಾರಿಗೆ ಮತ ಹಾಕಬೇಕು ಮತ್ತು ಕೇಂದ್ರದಲ್ಲಿ ಯಾರಿಗೆ ಮತಹಾಕಬೇಕು ಎಂಬುದನ್ನು ಗುರುತಿಸಲು ಸಮರ್ಥರಿದ್ದೇವೆ ಎಂಬುದನ್ನು ಕಳೆದ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. |
ಏಕಕಾಲದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ನಡೆಸುವ ಕಲ್ಪನೆಯನ್ನು ಅನೇಕ ವಿರೋಧ ಪಕ್ಷಗಳು ವಿರೋಧಿಸಲು ಎರಡು ಕಾರಣಗಳಿವೆ. ಒಂದು ರಾಜ್ಯ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳು ಮೇಲುಗೈ ಸಾಧಿಸಬಹುದು ಎಂಬ ಭಯ; ಎರಡನೆಯದು – ಈ ಬದಲಾವಣೆಯು ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ನೇರವಾಗಿ ಪ್ರಯೋಜನವನ್ನು ನೀಡಬಲ್ಲದು ಎಂಬ ಭಯ. |
ಈ ಕಲ್ಪನೆಯನ್ನು ಬೆಂಬಲಿಸುವವರು, ಏಕಕಾಲದಲ್ಲಿ ಚುನಾವಣೆ ನಡೆದರೆ ಎರಡು ಪ್ರಮುಖ ಪ್ರಯೋಜನಗಳು ಇದೆ ಎಂಬುದನ್ನು ಮಾತ್ರ ನಿರೀಕ್ಷೆ ಮಾಡುತ್ತಿದ್ದಾರೆ. ಎರಡು ಪ್ರಯೋಜನೆಗಳೆಂದರೆ, |
ಮೊದಲನೆಯದು-ಎರಡು ಚುನಾವಣೆ ಒಟ್ಟಿಗೆ ನಡೆದರೆ ಖರ್ಚು ಕಡಿಮೆಯಾಗುತ್ತದೆ ಎಂಬುದು. ಆದರೆ ಪ್ರಜಾಪ್ರಭುತ್ವದಲ್ಲಿ ವೆಚ್ಚದ ಬಗೆಗಿನ ಚರ್ಚೆಯನ್ನು ನಾವು ಮುಖ್ಯವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಇದು ಕೇವಲ 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಇತರ ಲಾಭಗಳಲ್ಲಿ ಒಂದಷ್ಟೇ. ಇದು ಒಂದು ರಾಷ್ಟ್ರ, ಒಂದು ಚುನಾವಣೆಯ ಪರವಾದ ವಾದದ ಕೇಂದ್ರವಾಗಿರಲು ಸಾಧ್ಯವಿಲ್ಲ. |
ಎರಡನೆಯದು- ಆಡಳಿತ ಸುಧಾರಣೆಗೊಳ್ಳುತ್ತದೆ ಎಂಬುದು. ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ಆಡಳಿತ ಪಕ್ಷಗಳ ಗಮನವನ್ನು ಅಭಿವೃದ್ಧಿಯಿಂದ ಬೇರೆಡೆಗೆ ಸೆಳೆಯಲು ಪ್ರತಿವರ್ಷ ಯಾವುದೇ ಇತರ ಚುನಾವಣೆಗಳು ಇರುವುದಿಲ್ಲ. ಚುನಾವಣಾ ನೀತಿ ಸಂಹಿತೆಯು ಪ್ರತಿ ವರ್ಷ ಹಲವಾರು ತಿಂಗಳುಗಳವರೆಗೆ ಜಾರಿಯಲ್ಲಿರುವುದಿಲ್ಲ, ಕೇವಲ ಐದು ವರ್ಷಗಳಲ್ಲಿ ಒಮ್ಮೆ ಮಾತ್ರ ಇರುತ್ತದೆ. |
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆಡಳಿತವು ಉತ್ತಮಗೊಳ್ಳುತ್ತದೆ. ಅಧಿಕಾರದಲ್ಲಿರುವ ಪಕ್ಷಗಳಿಗೆ ಪ್ರತಿ ವರ್ಷ ಚುನಾವಣೆಯ ನಂತರ ಚುನಾವಣೆಗೆ ಅಜೆಂಡಾ ಸಿದ್ಧ ಮಾಡುವ ಅಗತ್ಯ ಬೀಳುವುದಿಲ್ಲ. ಜನರನ್ನು ಓಲೈಸಲು ಅಲ್ಪಾವಧಿಯ ಜನಪ್ರಿಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಸಂಪೂರ್ಣ ಅಧಿಕಾರಾವಧಿಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ತಲುಪಿಸುವತ್ತ ಗಮನ ಹರಿಸಬಹುದು. ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಪ್ರತಿವರ್ಷ ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬಹುದು. |
'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ವಿರೋಧಿಸುವವರಿಗೆ ಈ ಕೆಳಗಿನ ಅಂಶಗಳು ಪ್ರಮುಖವಾಗಿರುತ್ತದೆ. |
1. ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರ ಪತನಗೊಂಡರೆ ಏನು ಮಾಡುವುದು? ಯಾವುದೇ ಪಕ್ಷವು ಸರ್ಕಾರ ರಚಿಸುವ ಸ್ಥಿತಿಯಲ್ಲಿರದಿದ್ದರೆ ಅಥವಾ ಅತಂತ್ರ ವಿಧಾನಸಭೆ ರಚನೆಯಾದರೆ ಏನು ಮಾಡುವುದು? |
2.ರಾಷ್ಟ್ರೀಯ ಪಕ್ಷಗಳಿಗೆ ನ್ಯಾಯಸಮ್ಮತವಲ್ಲದ ಲಾಭಗಳಾಗಬಹುದು, ಚುನಾವಣೆಯ ವೇಳೆ ಪ್ರಾದೇಶಿಕ ವಿಷಯಗಳಿಗಿಂತ ರಾಷ್ಟ್ರೀಯ ವಿಷಯಗಳೇ ಪ್ರಮುಖವಾಗಬಹುದು. |
ಇದು ತಾರ್ಕಿಕ ವಿರೋಧಗಳೇ ಆಗಿವೆ. ಆದರೆ ಆಡಳಿತ ಸುಧಾರಣೆಯ ಪ್ರಮುಖ ಗುರಿ ಎಂಬುದುನ್ನು ಒಪ್ಪಿಕೊಳ್ಳುವವರೆಗೂ ಮೇಲಿನ ಅಂಶಗಳನ್ನು ನಿಭಾಯಿಸಬಹುದು. |
ಪ್ರತಿ ಐದು ವರ್ಷಗಳಿಗೊಮ್ಮೆ ಎರಡು ಚುನಾವಣೆಗಳನ್ನು, ಅಂದರೆ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಒಂದು ಚುನಾವಣೆಯನ್ನು ಆಯೋಜನೆಗೊಳಿಸುವುದು ಹೆಚ್ಚು ತಾರ್ಕಿಕವಾಗಿದೆ. |
ಸರ್ಕಾರ ಬಿದ್ದರೆ, ನಾವು ಕೆಲವು ತಿಂಗಳುಗಳವರೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹೊಂದಬಹುದು. ಆದರೆ ಆ ಅವಧಿ ಮುಗಿದಾಗ ಮಾಡಬೇಕಾದ ತಾರ್ಕಿಕ ವಿಷಯವೆಂದರೆ, ಶಾಸಕಾಂಗಕ್ಕೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತೆ ಸೂಚಿಸಲು ರಾಜ್ಯಪಾಲರಿಗೆ ಮನವಿ ಮಾಡುವುದು ಮತ್ತು ಮುಂದಿನ ಸುತ್ತಿನ ಚುನಾವಣೆ ನಡೆಯುವವರೆಗೂ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳದೆ, ಎಲ್ಲಾ ಪಕ್ಷಗಳನ್ನು ಒಳಗೊಳ್ಳುವಂತೆ ಸರ್ಕಾರದ ಮುಖ್ಯಸ್ಥರಿಗೆ ಸೂಚಿಸುವುದು. ಮುಂದಿನ ಚುನಾವಣೆಗಳವರೆಗೆ ನಾವು ಕೇವಲ ನೀತಿ-ತಟಸ್ಥ ಸರ್ಕಾರವನ್ನು ಹೊಂದುವಂತೆ ಮಾಡುವುದು. |
ಇನ್ನೊಂದು ಆಯ್ಕೆ, ನಾವು ಒಂದು ರಾಷ್ಟ್ರ ಒಂದು ಚುನಾವಣೆಗೆ ಅಂಟಿಕೊಂಡ ಬಳಿಕ ಸರ್ಕಾರ ಪತನಗೊಂಡರೆ ಕೂಡಲೇ ಚುನಾವಣೆಗಳನ್ನು ನಡೆಸುವುದು, ಆದರೆ ಚುನಾಯಿತ ಸರ್ಕಾರದ ಅವಧಿ ಮುಂದಿನ ನಿಗದಿತ ಚುನಾವಣೆಯವರೆಗೆ ಮಾತ್ರ ಇರುವಂತೆ ನೋಡಿಕೊಳ್ಳುವುದು. ಅಂದರೆ, ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ 2019 ರಲ್ಲಿ ನಡೆದರೆ, ರಾಜ್ಯ ಸರ್ಕಾರವು 2019 ರ ಅಕ್ಟೋಬರ್‌ನಲ್ಲಿ ಪತನಗೊಂಡರೆ, ಮಧ್ಯಕಾಲೀನ ಚುನಾವಣೆಯನ್ನು ನಡೆಸುವುದು. ಈ ವೇಳೆ ಆರಿಸಿ ಬಂದ ಸರ್ಕಾರದ ಅವಧಿಯು ಮುಂಬರುವ ಸಾರ್ವತ್ರಿಕ ಚುನಾವಣೆ ಅಂದರೆ 2024 ರ ಮೇ ವರೆಗೆ ಮಾತ್ರ ಇರುವಂತೆ ಮಾಡುವುದು ಮತ್ತು ಐದು ವರ್ಷಗಳ ಪೂರ್ಣಾವಧಿಯನ್ನು ಹೊಂದುವುದಿಲ್ಲ. |
ಎರಡನೆಯದಾಗಿ, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬ ಊಹೆಯೂ ತಪ್ಪಾಗಿದೆ. ಕಾರಣ- ಮತದಾರನು ಏಕಕಾಲದಲ್ಲಿ ಮತ ಚಲಾಯಿಸಿದರೂ ಪ್ರತ್ಯೇಕವಾಗಿಯೇ ಮತ ಚಲಾಯಿಸುತ್ತಾನೆ. ರಾಜ್ಯ ಮತ್ತು ಕೇಂದ್ರ ಏನು ಸಾಧನೆ ಮಾಡಿದೆ ಎಂಬುದರ ಸ್ಪಷ್ಟ ತಿಳುವಳಿಕೆ ಆತನಿಗಿರುತ್ತದೆ. ಹೀಗಾಗಿ ಕೇಂದ್ರದಲ್ಲಿ ಯಾರನ್ನು ಬೇಕೋ ಅವರನ್ನು, ರಾಜ್ಯದಲ್ಲಿ ಯಾರನ್ನು ಬೇಕೋ ಅವರನ್ನು ಆಯ್ಕೆ ಮಾಡುತ್ತಾನೆ. ರಾಷ್ಟ್ರೀಯ ಪಕ್ಷವೊಂದಕ್ಕೆ ಇರುವ ಏಕೈಕ ಪ್ರಯೋಜನವೆಂದರೆ, ಅದು ಕೇಂದ್ರಕ್ಕೆ ಒಂದು ರೀತಿಯ ಅಜೆಂಡಾವನ್ನು ಮತ್ತು ರಾಜ್ಯಕ್ಕೆ ಇನ್ನೊಂದು ರೀತಿಯ ಅಜೆಂಡಾವನ್ನು ರಚಿಸುವುದು. ಆದರೆ ಮತದಾರನು ಅದನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾನೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ರಾಜ್ಯ ಮತ್ತು ಕೇಂದ್ರ ಚುನಾವಣೆಗಳಲ್ಲಿ ಮತದಾರರು ಬೇರೆ ಬೇರೆ ದೃಷ್ಟಿಕೋನ ಇಟ್ಟುಕೊಂಡೇ ಮತ ಚಲಾಯಿಸುತ್ತಾರೆ ಎಂಬುದು ದೆಹಲಿ (2014 ಮತ್ತು 2015), ಬಿಹಾರ (2014 ಮತ್ತು 2015), ಮತ್ತು ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ಕರ್ನಾಟಕ ಮತ್ತು ತೆಲಂಗಾಣ (2018 ಮತ್ತು 2019) ಗಳಲ್ಲಿ ನಿರಂತರವಾಗಿ ತಿಳಿದು ಬಂದಿದೆ. |
ಮತ್ತೊಂದೆಡೆ, ಪ್ರಾದೇಶಿಕ ಪಕ್ಷಗಳು ಒಮ್ಮೆ ಚುನಾಯಿತರಾದ ನಂತರ ರಾಷ್ಟ್ರೀಯ ಪಕ್ಷಗಳ ಮಾದರಿಯ ಆಡಳಿತ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬುದನ್ನು ಹೇಳಲು ಬರುವುದಿಲ್ಲ. ಸ್ಥಳೀಯಾಡಳಿತ ಮತ್ತು ಪುರಸಭೆಯ ಚುನಾವಣೆಗಳಲ್ಲಿ ರಾಷ್ಟ್ರೀಯ ಚುನಾವಣೆಗಳ ಕುರಿತು ಮಾತನಾಡದೇ ಇರಲೂ ಆಗುವುದಿಲ್ಲ. ಪ್ರತಿ ಚುನಾವಣೆಯಲ್ಲೂ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯ ಮುಖ್ಯವೇ ಆಗಿರುತ್ತದೆ. |
ಆದರೆ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ವಿರೋಧಿಸುವವರ ನಿಜವಾದ ಸಮಸ್ಯೆ ಅಂತಿಮವಾಗಿ ಮೋದಿಯೇ ಆಗಿದ್ದಾರೆ. ಮೋದಿಯವರ ಜನಪ್ರಿಯತೆ ಕಂಡು ಪ್ರತಿಪಕ್ಷಗಳು ಭಯಭೀತರಾಗಿದ್ದಾರೆಯೇ ಹೊರತು ಕೇವಲ ಒಂದು ರಾಷ್ಟ್ರ, ಒಂದು ಚುನಾವಣೆಯಿಂದಲ್ಲ. |
ಆದರೆ ರಾಜಕೀಯದಲ್ಲಿ ಜನಪ್ರಿಯತೆ ಶಾಶ್ವತವಾಗಿರುವುದಿಲ್ಲ, ಮೋದಿಯ ಬಳಿಕ ಸನ್ನಿವೇಶಗಳು ಬದಲಾಗಬಹುದು. ಪ್ರತಿಪಕ್ಷಗಳೂ ಜನಪ್ರಿಯ ನಾಯಕನನ್ನು ಪಡೆಯಬಹುದು. ಆದರೆ ಪ್ರಸ್ತುತ ಪ್ರತಿಪಕ್ಷಗಳು ದೂರದೃಷ್ಟಿಯಿಲ್ಲದೆಯೇ ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಆಡಳಿತಕ್ಕೆ ಸಹಕಾರಿಯಾಗಬಲ್ಲ, ಆಡಳಿತವನ್ನು ಸುಧಾರಿಸಬಲ್ಲ ಪ್ರತಿ ಹೆಜ್ಜೆಯನ್ನೂ ಬೆಂಬಲಿಸಬೇಕಾದುದು ಎಲ್ಲರ ಕರ್ತವ್ಯ. |
1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 166/2016 ಕಲಂ: 394 ಐ.ಪಿ.ಸಿ. |
ದಿ :02.08.2016 ರಂದು ಬೆಳೆಗ್ಗೆ 09.00 ಗಂಟೆಗೆ ಫಿರ್ಯಾದಿದಾರರಾದ ಶಂಕರಾಚಾರ್ಯ ತಂದೆ ಪುಟ್ಟು ಆಚಾರ್ಯ ಸಾ: ರಾಜೀವನಗರ, ಮಣಿಪಾಲ ತಾಜಿ: ಉಡುಪಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ-01.08.2016 ರಂದು ಸಂಜೆ 06.00 ಗಂಟೆಗೆ ಸುಮಾರು 20-25 ವರ್ಷದ ನಾಲ್ಕು ಜನ ಅಪರಿಚಿತ ಗಂಡಸು ವ್ಯಕ್ತಿಗಳು ಫಿರ್ಯಾದಿದಾರರ ಕಾರ್ ನಂ-ಕೆಎ-20/ಡಿ-1726 ನೇದ್ದನ್ನು ಉಡುಪಿಯಿಂದ ರಾಯಚೂರ ಜಿಲ್ಲೆ ಲಿಂಗಸಗೂರಿಗೆ ಹೋಗಲು ಕಿ.ಮೀ ಗೆ 10/- ರೂ ದಂತೆ ಬಾಡಿಗೆ ಮುಗಿಸಿ ಫಿರ್ಯಾದಿ ಚಾಲಕನನ್ನು ಕರೆದುಕೊಂಡು ಬರುವಾಗ ಇಂದು ದಿ-02.08.16 ರಂದು ಬೆಳಗಿನ ಜಾವ 04.00 ಗಂಟೆ ಸುಮಾರಿಗೆ ಕೊಪ್ಪಳ ದಿಂದ ಸುಮಾರು 10 ಕಿ.ಮೀ ಅಂತರದಲ್ಲಿ ಕುಷ್ಟಗಿ ಕಡೆಗೆ ಹೋಗುವಾಗ ಕಾರಿನಲ್ಲಿದ್ದ ಒಬ್ಬನಿಗೆ ವಾಂತಿ ಬಂದಿದೆ ಅಂತಾ ಫಿರ್ಯಾದಿಗೆ ಹೇಳಿ ಕಾರನ್ನು ನಿಲ್ಲಿಸಿ ರಕ್ತದ ವಾಂತಿ ಆಗಿದೆ ಎಂದು ಹೇಳಿದಾಗ ಫಿರ್ಯಾದಿ ಚಾಲಕನು ಕೆಳಗಡೆ ಇಳಿದಾಗ ಆತನಿಗೆ 4 ಜನರು ಕೂಡಿ ಜಬರದಸ್ತ ದಿಂದ ಪಕ್ಕದ ಹೊಲದಲ್ಲಿ ಎಳೆದುಕೊಂಡು ಹೋಗಿ ಟವಲ್ ಕುತ್ತಿಗಿಗೆ ಹಾಕಿ ಎಳೆದಾಡಿ ಕೈಗಳಿಂದ ಹೊಡಿ ಬಾಡಿ ಚಾಕು ತೋರಿಸಿ ಹೆದರಿಸಿ ಫಿರ್ಯಾದಿ ಜೇಬಿನಲ್ಲಿದ್ದ ನಗದು ಹಣ 2000/-, 1 ಪಾನ್ ಕಾರ್ಡ ಅಂ.ಕಿ ಇಲ್ಲಾ, 1 ಮೊಬೈಲ್ , 1 ಓಟರ್ ಐಡಿ ಅಂ.ಕಿ ಇಲ್ಲಾ, 1 ಸಿಂಡಿಕೇಟ್ ಬ್ಯಾಂಕ್ ಹಾಗೂ 1 ಕರ್ನಾಟಕ ಬ್ಯಾಂಕಿನ ಒಟ್ಟು 2 ಎ.ಟಿ.ಎಂ ಕಾರ್ಡ ಅಂ.ಕಿ ಇಲ್ಲಾ, ಇವುಗಳನ್ನು ಕಳ್ಳತನ ಮಾಡಿಕೊಂಡು ಫಿರ್ಯಾದಿಗೆ ಕೆಳಗಡೆ ಕೆಡವಿ ಫಿರ್ಯಾದಿಯ ಮಾಲೀಕತ್ವದ 4,50,000/- ರೂ ಬೆಲೆ ಬಾಳುವ ಕಾರ್ ನಂ-ಕೆಎ-20/ಡಿ-1726 ನೇದ್ದನ್ನು ಕಳ್ಳತನ ಮಾಡಿ ಕುಷ್ಟಗಿ ಕಡೆಗೆ ಓಡಿಸಿಕೊಂಡು ಹೋಗಿರುತ್ತಾರೆ. ಕಾರಣ 4 ಜನ ಅಪರಿಚಿತ ಗಂಡಸು ವ್ಯಕ್ತಿಗಳನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ :166/2016. ಕಲಂ : 394 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ. |
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 126/2016 ಕಲಂ: DOWRY PROHIBITION ACT, 1961 U/s 3,4 and IPC 1860 U/s 304B,109,498A,302 |
ದಿನಾಂಕ: 02-08-2016 ರಂದು 1-00 ಪಿ.ಎಮ್. ಕ್ಕೆ ಫಿರ್ಯಾದಿ ಅಮ್ಜದಖಾನ್ ಜಮಾದಾರ ಸಾ: ಕೊಪ್ಪಳ ರವರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂಗಿ ಮುನ್ನಿಬೇಗಂ ಅಂತಾ ಇದ್ದು, ಇವಳನ್ನು ಈಗ್ಗೆ ಸುಮಾರು 03 ವರ್ಷಗಳ ಹಿಂದೆ ಕುಷ್ಟಗಿಯ ಅಹ್ಮದಹುಸೇನ ಅನ್ಸಾರಿ ಇವರ 3ನೇ ಮಗನಾದ ಸುಲೇಮಾನ ಅನ್ಸಾರಿ ಈತನಿಗೆ ಕೊಟ್ಟು ನಮ್ಮ ಮನೆಯ ಮುಂದೆ ಮದುವೆ ಮಾಡಿದ್ದು, ಸದ್ಯ ಅವರಿಗೆ ಮಿಸ್ಬಾ ಫರ್ವಿನ್ 02ವರ್ಷ, ಮತ್ತು ರಾಹಿನ ಫರ್ವಿನ್ 02 ತಿಂಗಳು ಎಂಬ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ತಂಗಿಗೆ ಮದುವೆಯಾದಾಗಿನಿಂದ ಆಕೆಯ ಗಂಡನಾದ ಸುಲೇಮಾನ ಮತ್ತು ಆತನ ತಾಯಿ ರಹಮತ್ ಭೀ ಇಬ್ಬರೂ ಕೂಡಿ ನಿನ್ನ ತವರು ಮನೆಯಿಂದ ಮತ್ತು ನಿಮ್ಮ ಅಣ್ಣಂದಿರ ಕಡೆಯಿಂದ ವರದಕ್ಷಿಣೆ ಹಣ 50,000/- ರೂಪಾಯಿ ಮತ್ತು ಒಂದೂವರೆ ತೊಲೆ ಬಂಗಾರ ತರುವಂತೆ ಮತ್ತು ತನಗೆ ಒಂದು ಟಾಟಾ ಏಸ್ ವಾಹನವನ್ನು ಕೊಡಿಸುವಂತೆ ಒತ್ತಾಯ ಮಾಡಿ ಲೇ ಬೋಸೂಡಿ ನೀನು ಮನೆಗೆಲಸ ಸರಿಯಾಗಿ ಮಾಡುತ್ತಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹೊಡಿಬಡಿ ಮಾಡುತ್ತಿರುವ ಬಗ್ಗೆ ಮತ್ತು ಸುಲೇಮಾನ್ ಅಕ್ಕಂದಿರಾದ ಗೌಶಿಯಾ, ಸುಲ್ತಾನಾ, ಅಣ್ಣ ಶಾಲಮ್ ಇವರು ಆಗಾಗ್ಗೆ ಕುಷ್ಟಗಿಗೆ ಬಂದು ಇವಳನ್ನು ಯಾಕೇ ಇನ್ನೂ ಮನೆಯಲ್ಲಿ ಇಟ್ಟುಕೊಂಡಿರಿ ಇವಳನ್ನು ಮನೆಯಿಂದ ಹೊರೆಗೆ ಹಾಕಿರಿ ಅಂತಾ ಹೊಡೆಬಡಿ ಮಾಡಿ ದೈಹಿಕ ಮತ್ತು ಮಾನಶೀಕ ಕಿರುಕುಳ ನೀಡುತ್ತಾರೆ ಅಂತಾ ನಮ್ಮ ತಂಗಿ ಊರಿಗೆ ಬಂದಾಗ ನಮ್ಮ ಮುಂದೆ ಹೇಳುತ್ತಿದ್ದಳು. ನಮ್ಮ ತಮ್ಮನ ಮದುವೆ ಇದ್ದುದರಿಂದ ನಮ್ಮ ತಂಗಿ ಮುನ್ನಿಬೇಗಂ ಇವಳನ್ನು ಕರೆದುಕೊಂಡು ಬಾ ಅಂತಾ ಸುಲೇಮಾನಗೆ ಹೇಳಿದ್ದರಿಂದ ದಿ: 26-07-2016 ರಂದು ಸುಲೇಮಾನ ನಮ್ಮ ತಂಗಿಯನ್ನು ಕರೆದುಕೊಂಡು ಕೊಪ್ಪಳಕ್ಕೆ ಬಂದಿದ್ದನು. ನಂತರ ದಿನಾಂಕ: 02-08-2016 ರಂದು ರಾತ್ರಿ 01-30 ಗಂಟೆಯಿಂದ ದಿನಾಂಕ: 02-08-2016 ರಂದು ಬೆಳಗಿನ ಜಾವ 9-00 ಗಂಟೆಯ ನಡುವಿನ ಅವಧಿಯಲ್ಲಿ ನನ್ನ ತಂಗಿ ಮುನ್ನಿಬೇಗಂ ಮತ್ತು ಆಕೆಯ 02 ತಿಂಗಳ ಹೆಣ್ಣು ಮಗು ರಾಹಿನಫರ್ವಿನ್ ಇವರನ್ನು ಆಕೆಯ ಗಂಡ ಸುಲೇಮಾನ ಅನ್ಸಾರಿ ಈತನು ತನಗೆ ವರದಕ್ಷಿಣೆ ಹಣ 50 ಸಾವಿರ ರೂಪಾಯಿ ಹಾಗೂ 02 ತೊಲೆ ಬಂಗಾರ ಹಾಗೂ ತಾನು ಕೇಳಿದ ಟಾಟಾ ಏಸ್ ವಾಹನ ಕೊಡಿಸಿರುವುದಿಲ್ಲ ಅಂತಾ ಆತನ ತಾಯಿ ರಹಮತ್ಬೀ, ಹಾಗೂ ಅತನ ಅಕ್ಕಂದಿರಾದ ಗೌಸಿಯಾ, ಸುಲ್ತಾನಾ, ಆತನ ಅಣ್ಣ ಶ್ಯಾಲಮ್ ಇವರ ಪ್ರಚೋಧನೆಯಿಂದ ಸುಲೇಮಾನ್ ಈತನು ನನ್ನ ತಂಗಿ ಮುನ್ನಿಬೇಗಂ ಇವಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ನಮ್ಮ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆದಿಂಬು ತೆಗೆದುಕೊಂಡು ಉಸಿರುಗಟ್ಟಿಸಿ ನನ್ನ ತಂಗಿ ಮುನ್ನಿಬೇಗಂ, ಹಾಗೂ ಆಕೆಯ 02 ತಿಂಗಳ ಹೆಣ್ಣು ಮಗು ರಾಹಿನಫರ್ವಿನ್ ಇವರನ್ನು ಸುಲೇಮಾನ್ ಕೊಲೆ ಮಾಡಿದ್ದು ಇರುತ್ತದೆ. ಕಾರಣ ಕೊಲೆ ಮಾಡಿದ ಸುಲೇಮಾನ ಅನ್ಸಾರಿ, ಹಾಗೂ ಇದಕ್ಕೆ ಪ್ರಚೋದನೆ ನೀಡಿದ ರಹಮತಬೀ, ಶಾಲಮ್, ಗೌಶೀಯಾ, ಸುಲ್ತಾನಾ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. |
3] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 91/2016 ಕಲಂ: 87 Karnatka Police Act. |
ಪಿ.ಎಸ್.ಐ. ಕುಕನೂರ ಠಾಣೆರವರು ರಾಜೂರು ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ 1] ರಾಜಾಸಾಬ್ ಯಮನೂರುಸಾಬ್ ನಧಾಫ್ ವಯಾ: 28 ಜಾ: ಪಿಂಜಾರ ಸಾ: ರಾಜುರು 2] ಬೋಜಪ್ಪ ತಂ.ಯಲಪ್ಪ ಉಪ್ಪಾರ ವಯಾ: 43 ಜಾ: ಉಪ್ಪಾರ ಸಾ: ರಾಜೂರು 3] ಮಹ್ಮದ್ ತಂ.ಅಲ್ಲಾಸಾಬ್ ನಧಾಫ ವಯಾ: 35 ಜಾ: ಪಿಂಜಾರ ಸಾ: ರಾಜುರು 4] ಸಂಗಪ್ಪ ತಂ.ಹನುಮಪ್ಪ ಮಾದಿನೂರು ವಯಾ: 49 ಜಾ: ರಟ್ಟಿ ಸಾ: ರಾಜೂರು 5] ಶರಣಪ್ಪ ತಂ.ಬಸವಂತಪ್ಪ ಹರಾರಿ ವಯಾ: 50 ಜಾ: ಹರಾರಿ ಸಾ: ಆಡೂರು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1300/-ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಪ್ರಕರಣ ದಾಖಲಿ ತನಿಖೆ ಕೈಗೊಂಡಿದ್ದು ಇರುತ್ತದೆ. |
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 93/2016 ಕಲಂ: 78(3) Karnatka Police Act. |
ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 670-00, ಜಪ್ತ ಮಾಡಿಕೊಂಡಿದ್ದು ಸಿಕ್ಕಿಬಿದ್ದ ಒಬ್ಬ ಆರೋಪಿ ರಾಮಾನಾಯಕ ತಂದೆ ದೇವಪ್ಪನಾಯಕ ರಾಥೋಡ ಸಾ: ಕಿಲಾರಟ್ಟಿ ತಾಂಡಾ ತಾ: ಕುಷ್ಟಗಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ದಶರಥಸಿಂಗ್ ರಜಪೂತ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ಅಪರಾಧವು ಅಸಂಜ್ಞೆಯವಗಿದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಪಾರವಾನಿಗೆಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. |
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ? | Jackie Chan Explains Why He Is Not Giving His Wealth to his son - Kannada Filmibeat |
Sports ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್! |
News ಗಂಗಾ ನದಿ ಬಳಿ ಶವಕ್ಕೆ ಪೆಟ್ರೋಲ್, ಟೈರ್ ಬಳಸಿ ಅಂತ್ಯಸಂಸ್ಕಾರ: 5 ಮಂದಿ ಪೊಲೀಸರ ಅಮಾನತು |
Education Happy Buddha Purnima 2021: ಬುದ್ಧ ಪೂರ್ಣಿಮಾ ದಿನದ ಶುಭಾಶಯ ಕೋರಲು ಇಲ್ಲಿದೆ ಉಲ್ಲೇಖ ಮತ್ತು ಸಂದೇಶಗಳು |
Lifestyle ಕೂದಲಿಗೆ ತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ? |
Automobiles ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು |
Read more about: jackie chan money hollywood ಜಾಕಿ ಚಾನ್ ಹಣ ಹಾಲಿವುಡ್ |
| Updated: Sunday, April 18, 2021, 8:28 [IST] |
ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಜಾಕಿ ಚಾನ್. 2016 ರಲ್ಲಿ ಬಿಡುಗಡೆ ಆಗಿದ್ದ ಫೋರ್ಬ್ಸ್ ಪಟ್ಟಿಯ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆವ ವಿಶ್ವದ ಎರಡನೇ ನಟ ಎನಿಸಿಕೊಂಡಿದ್ದರು ಜಾಕಿ. |
ಮಗನ ಹೆಸರಿಗೆ ಆಸ್ತಿ ಬರೆಯದೆ ಚಾರಿಟಿಗೆ ನೀಡಿದ್ಯಾಕೆ ನಟ Jackie Chan | Filmibeat Kannada |
ಜಾಕಿ ಒಟ್ಟು ಆಸ್ತಿ ಮೌಲ್ಯ ಅಂದಾಜು 3000 ಕೋಟಿಗೂ ಹೆಚ್ಚು. ಇಷ್ಟೊಂದು ಆಸ್ತಿ ಹೊಂದಿರುವ ಜಾಕಿ ಸರಳವಾದ ಜೀವನವನ್ನು ಇಷ್ಟಪಡುತ್ತಿದ್ದವರು. ಹೆಚ್ಚು ಐಶಾರಾಮಿತನವನ್ನು ಇಷ್ಟ ಪಡದಿದ್ದ ಜಾಕಿ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ಅಭ್ಯಾಸ ಇಟ್ಟುಕೊಂಡಿದ್ದರು. ಈ ಬಗ್ಗೆ ಸಂದರ್ಶನಗಳಲ್ಲಿಯೂ ಅವರು ಹೇಳಿಕೊಂಡಿದ್ದರು. |
ಹಣದ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರದ ಜಾಕಿ ಚಾನ್ ತಮ್ಮ ಸಾವಿರಾರು ಕೋಟಿ ಆಸ್ತಿಯನ್ನು ತಮ್ಮ ಮಗ ಜಾಯ್ಸಿ ಚಾನ್‌ಗೆ ಕೊಡುತ್ತಿಲ್ಲ. ಹೌದು, ಜಾಕಿ ತಮ್ಮ ಆಸ್ತಿಯನ್ನು ಅನಾಥಾಶ್ರಮಗಳಿಗೆ ಹಾಗೂ ಇನ್ನಿತರೆ ಸಾಮಾಜಿಕ ಕಾರ್ಯ ಮಾಡುವ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಇದಕ್ಕೆ ಕಾರಣವನ್ನು ನೀಡಿದ್ದಾರೆ ಜಾಕಿ. |
ತಾವು ತಮ್ಮ ಆಸ್ತಿಯನ್ನು ದಾನ ನೀಡುವ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಮತ್ತೆ ಇದೇ ಮಾತನ್ನು ಹೇಳಿದ್ದಾರೆ. 'ನನ್ನ ಮಗ ಉತ್ತಮನಾಗಿದ್ದರೆ ಅವನ ಹಣವನ್ನು ಅವನೇ ದುಡಿದುಕೊಳ್ಳುತ್ತಾನೆ. ಒಂದು ವೇಳೆ ಅಪ್ರಯೋಜಕನಾಗಿದ್ದರೆ ನನ್ನ ಕಷ್ಟದ ದುಡಿಮೆಯನ್ನು ಹಾಳು ಮಾಡುತ್ತಾನೆ' ಎಂದಿದ್ದರು. |
ಜಾಕಿ ಚಾನ್ ಅವರ ಮಗ ಜೇಯ್ಸಿ ಈ ಹಿಂದೆ ಒಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಆಗ ಜಾಕಿ ಚಾನ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. 'ನನ್ನ ಮಗನಿಗೆ ಸರಿಯಾದ ಜೀವನ ಶಿಕ್ಷಣ ನೀಡುವುದರಲ್ಲಿ ನಾನು ಸೋತಿದ್ದೀನಿ. ನೀವು ಜೆಯ್ಸಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ಅವನು ಮಾಡಿದ ತಪ್ಪನ್ನು ಎಂದೂ ಮಾಡಬೇಡಿ' ಎಂದಿದ್ದರು. |
ಆರು ತಿಂಗಳು ಜೈಲು ವಾಸ ಅನುಭವಿಸಿ ಹೊರಬಂದ ಮಗನನ್ನು ಭೇಟಿಯಾಗಿದ್ದ ಜಾಕಿ ಚಾನ್, ಜಾಯ್ಸಿ ಈಗ ಬದಲಾಗಿದ್ದಾನೆ ಎನಿಸುತ್ತದೆ ಎಂದಿದ್ದರು. ಜೇಯ್ಸಿ ಈಗ ಲಾಸ್ ಏಂಜಲಿಸ್‌ನಲ್ಲಿದ್ದಾನೆ. |
Subsets and Splits
No community queries yet
The top public SQL queries from the community will appear here once available.