text stringlengths 0 61.5k |
|---|
ಹೊಸದಿಲ್ಲಿ: ಇಂಡಿಯನ್ ಮುಜಾಹಿ ದೀನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಕರ್ನಾಟಕದಲ್ಲಿ ಐದು ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. |
ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಮಂಗಳೂರಿನಲ್ಲಿ ಈ ದಾಳಿ ನಡೆಸಿ ಆಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಧೀರಜ್ ಸಾವೋ ಎಂಬಾತನ ಹಣದ ವ್ಯವಹಾರವನ್ನು ಗಮನಿಸಿ, ಈತನಿಗೆ ಸೇರಿದ ಆಸ್ತಿ ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತನ ಅಕೌಂಟ್‌ಗೆ ದೇಶದ ವಿವಿಧ ಭಾಗಗಳಿಂದ ಹಣ ಹರಿದುಬಂದಿದೆ. ಈ ಹಣದಲ್ಲಿ ತನ್ನ ಕಮಿಷನ್ ಇರಿಸಿಕೊಳ್ಳುತ್ತಿದ್ದ ಸಾವೋ ಉಳಿದ ಹಣವನ್ನು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಜುಬೈರ್ ಹುಸೇನ್, ಅಯೆಶಾ ಬಾನು, ರಾಜು ಖಾನ್ ಮತ್ತು ಇತರರ ಖಾತೆಗೆ ರವಾನಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. |
ಈತನ ವಹಿವಾಟಿನ ಮೇಲೆ ಸಂದೇಹ ಬಂದಿದ್ದು, ಹೀಗಾಗಿ ಚಲನವಲನ ಗಮನಿಸುತ್ತಿದ್ದೆವು. ಈತನ ಹಣದ ಸಹಾಯದಿಂದಲೇ ಬಾನು ಮತ್ತು ಹುಸೇನ್ ಮಂಗಳೂರಿನ ಪಂಜಿ ಮೊಗರುವಿನಲ್ಲಿ ಖರೀದಿಸಿದ್ದ ವಸತಿಯೋಗ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. |
ಈ ಎಲ್ಲ ಆರೋಪಿಗಳು ಪಾಕಿಸ್ಥಾನ ನಾಗರಿಕ ಖಾಲಿದ್ ಜತೆ ಸಂಪರ್ಕದಲ್ಲಿದ್ದಾರೆ. ಈತನ ನಿರ್ದೇಶನದ ಮೇರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಉಗ್ರರಿಗೆ ಹಣವನ್ನು ಕಳುಹಿಸ ಲಾಗುತ್ತಿತ್ತು. ಜತೆಗೆ ತಮಗೆ ಸೇರಬೇಕಾದ ಕಮಿಷನ್ ಅನ್ನೂ ಪಡೆದುಕೊಳ್ಳುತ್ತಿದ್ದರು. ಈ ಎಲ್ಲ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಅನಾಮಧೇಯ ವ್ಯಕ್ತಿಗಳು ಹಣ ಹಾಕುತ್ತಿದ್ದರು. ಎಲ್ಲಿ ಅಕೌಂಟ್ ಓಪನ್ ಆಗಿರುತ್ತದೆಯೋ ಆ ಬ್ರ್ಯಾಂಚ್ ಬಿಟ್ಟು ಉಳಿದ ಕಡೆಗಳಲ್ಲಿ ತತ್‌ಕ್ಷಣವೇ ಎಟಿಎಂಗಳನ್ನು ಬಳಸಿಕೊಂಡು ಹಣ ತೆಗೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. |
ಜನಪದ ಶಿಲ್ಪ - ವಿಕಿಪೀಡಿಯ |
ಜನಪದ ಶಿಲ್ಪವೆಂದರೆ ಯಾವುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟಸಾಧ್ಯ. ಅದರ ಹರಹಿನ ಸೀಮೆ, ಲಕ್ಷಣ ಇತ್ಯಾದಿಗಳನ್ನು ನಿರೂಪಿಸುವ ಪ್ರಯತ್ನವನ್ನು ಹಲವು ವಿದ್ವಾಂಸರು ಮಾಡಿರುವರಾದರೂ ಈ ವಿಷಯದಲ್ಲಿ ಒಮ್ಮತ ಇನ್ನೂ ಮೂಡಿಲ್ಲ. ಘನವಸ್ತುಗಳಿಂದ ಆಕೃತಿಗಳನ್ನು ಮೂಡಿಸುವ ಶಿಲ್ಪಕಲೆ ನಿತ್ಯಜೀವನ ನಿರ್ವಹಣೆಯ ಅತ್ಯಾವಶ್ಯಕತೆಗಳಿಂದ ಹೊರಗಿರುವ ಒಂದು ವ್ಯಾಪಾರ. ಇದರ ನೆಲೆ ಇರುವುದು ಮಾನವನ ಸೃಷ್ಟ್ಯಾತ್ಮಕ ಮನೋವಾಂಛೆಯಲ್ಲಿ. ಹೊಸದನ್ನು ಸೃಷ್ಟಿಸಬೇಕೆಂಬ ಆಸಕ್ತಿ ನಾನಾಸ್ತರಗಳಲ್ಲಿ ಅಂದರೆ ಕೆಲವು ಬಾರಿ ಸೌಂದರ್ಯಾನುಭವಕ್ಕೆ ಪ್ರೋತ್ಸಾಹಕವಾಗಿ, ಹಲವು ಬಾರಿ ಧರ್ಮ, ಅಂತಸ್ತಿನ ಪ್ರಜ್ಞೆ, ವಿನೋದ ಮುಂತಾದ ಮನೋರಂಗದ ಇತರ ವ್ಯಾಪಾರಗಳಿಗಾಗಿ ಉಪಯೋಗವಾಗುತ್ತದೆ. ಈ ಧೋರಣೆಗಳು ಮಾನವನ ಎಲ್ಲ ವರ್ಗ-ಸ್ತರಗಳಲ್ಲೂ ಕಲಾನಿರ್ಮಾಣದ ನೆಲಗಟ್ಟಾಗಿ ಕಾಣಿಸುವುದರಿಂದ, ಧೋರಣೆಯ ಆಧಾರದ ಮೇಲೆ ಜನಪದ ಶಿಲ್ಪ ಯಾವುದು, ಅದು ಅಲ್ಲದ್ದು ಯಾವುದು ಎಂಬುದನ್ನು ನಿರ್ಧರಿಸಲಾಗುವುದಿಲ್ಲ. |
೧ ಸಂಪ್ರದಾಯ |
೨ ಕರ್ನಾಟಕದಲ್ಲಿ ಜನಪದ ಶಿಲ್ಪಗಳ ಅಧ್ಯಯನ |
೩ ಸಮಸ್ಯೆಗಳು |
ಭಾರತದಲ್ಲಿ ಜನಪದ ಶಿಲ್ಪದ ಅನೂಚಾನ ಸಂಪ್ರದಾಯವಿದೆ.[೧] ಮಣ್ಣು, ಮರ ಮರದ ಹೊಟ್ಟು, ಬಟ್ಟೆ ಕೆಲವು ಬಾರಿ ಹಿತ್ತಾಳೆ ಇಂಥ ಸುಲಭವಾಗಿ ದೊರೆಯುವ ವಸ್ತುಗಳು ಶಿಲ್ಪರಚನೆಗೆ ಇಲ್ಲಿ ಉಪಯೋಗದಲ್ಲಿವೆ. ಹೆಚ್ಚಿನ ಶಿಲ್ಪಗಳು ಧಾರ್ಮಿಕ ಅಥವಾ ಮಾಟ-ಮಂತ್ರಗಳಿಗೆ ಸಂಬಂಧಿಸಿದವು. ಕೆಲವು ಅಲಂಕರಣ, ಹಾಗೂ ವಿನೋದಕ್ಕಾಗಿ ಮಾಡಿದವೂ ಕಂಡುಬರುತ್ತವೆ. ಇವುಗಳ ನಿರೂಪಣೆಯಲ್ಲೂ ಸರಳತೆ ಮತ್ತು ವಿವರಕ್ಕಿಂತ ಭಾವಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ. ನಾಗಾಲ್ಯಾಂಡಿನ ಕೋನ್ಯೂಕ್ ಆದಿವಾಸಿಗಳ ಒಂದು ಸ್ತ್ರೀವಿಗ್ರಹ ಮತ್ತು ದಂಪತಿ ವಿಗ್ರಹಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ದಕ್ಷಿಣ ಭಾರತದ ಹಿತ್ತಾಳೆಯ ಒಂದು ದೈತ್ಯ ವಿಗ್ರಹ ಭಯಂಕರತೆಯನ್ನು ಶಿಲ್ಪೀಕರಿಸಿರುವ ಉತ್ತಮ ಕೃತಿ. ಹಿಮಾಚಲ ಪ್ರದೇಶ, ಮತ್ತು ಇತರ ಹಿಮಾಲಯದ ತಪ್ಪಲು ಭಾಗಗಲಲ್ಲಿ, ಈ ವೈಶಿಷ್ಟಗಳನ್ನು ಹೊಂದಿರುವ, ನೃತ್ಯಗಳಲ್ಲಿ ಉಪಯೋಗಿಸುವ ಮುಖವಾಡಗಳು ಹಾಗೂ ಗ್ರಾಮೀಣ ದೇವ ವಿಗ್ರಹಗಳು ಬಹುಸಂಖ್ಯೆಯಲ್ಲಿ ಕಂಡುಬರುತ್ತವೆ. ಭಾರತದ ಹಲವೆಡೆಗಳಲ್ಲಿ ಅದರಲ್ಲೂ ಹೆಚ್ಚಾಗಿ ಗುಜರಾತ್, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಈ ಸುತ್ತಿನಲ್ಲಿ ಹಿತ್ತಾಳೆಯಲ್ಲಿ ಮಾಡಿದ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ವಿಶೇಷವಾಗಿ ಕಾಣಬಹುದು. ಕುಲದವರ ಮೂಲಪುರಷರನ್ನು ಪ್ರತೀಕರಿಸುವ ಈ ವಿಗ್ರಹಗಳು ಶ್ರಾದ್ಧಕ್ರಿಯೆಯಲ್ಲಿ ಉಪಯೋಗಿಸುವಂಥವು. ತಮಿಳುನಾಡು ಮತ್ತು ಕೇರಳದಲ್ಲಿ ಸುಮಾರು ಇದೇ ರೀತಿಯ ಆದರೆ ಎತ್ತರದ ವಿಗ್ರಹಗಳನ್ನು ಗ್ರಾಮಗಳ ಸಮೀಪದಲ್ಲಿ ನಿಲ್ಲಿಸಿರುತ್ತಾರೆ. ಈ ವಿಗ್ರಹಗಳು ಅಯ್ಯಪ್ಪನ್ ಮತ್ತು ಅವನ ಅನುಚರ ಕರುಪ್ಪನ್ ದೇವರುಗಳವು. ಇವು ಸಾಮಾನ್ಯವಾಗಿ ಮಣ್ಣಿನಲ್ಲಿ ಮಾಡಿ ಉತ್ತಮವಾಗಿ ಬಣ್ಣ ಹಾಕಿದ ಬೃಹತ್ ವಿಗ್ರಹಗಳು. ದನಗಳಿಗೆ ಅಥವಾ ಜನಗಳಿಗೆ ಕಾಯಿಲೆ ಬಂದಾಗ, ಮಣ್ಣಿನಲ್ಲಿ ಆಯಾ ಪ್ರತಿಕೃತಿಗಳನ್ನು ಮಾಡಿ ಈ ದೇವರ ಬಳಿ ಇಡುವ ರೂಢಿ ಇದೆ. ಇಂಥ ನೂರಾರು ಬೊಂಬೆಗಳನ್ನು ಅಯ್ಯಪ್ಪನ್ ವಿಗ್ರಹಗಳ ಬಳಿ ಕಾಣಬಹುದು. ಇವುಗಳ ನಿರೂಪಣಾತಂತ್ರ ಗಮನಾರ್ಹ. ಇವು ನೋಡುಗರ ಮೇಲೆ ಬೀರುವ ಪ್ರಭಾವ ಅಸಾಧಾರಣವಾದುದು. ಅಯ್ಯಪ್ಪನ್ ಗ್ರಾಮರಕ್ಷಕ. ಇವನ ಮಹತ್ತ್ವ ಮತ್ತು ಶಕ್ತಿ. ಈ ಸಮೂಹಗಳಲ್ಲಿ ಕ್ರೋಡೀಕೃತ ರೂಪದಲ್ಲಿ ಎದ್ದು ಕಾಣುತ್ತದೆ.[೨] |
ಕರ್ನಾಟಕದಲ್ಲಿ ಜನಪದ ಶಿಲ್ಪಗಳ ಅಧ್ಯಯನ[ಬದಲಾಯಿಸಿ] |
ಜಾನಪದ ದೃಷ್ಟಿಯಿಂದಾಗಲಿ ಕಲಾ ಇತಿಹಾಸದ ದೃಷ್ಟಿಯಿಂದಾಗಲಿ ಹೊಸದಾಗಿ ಪ್ರಾರಂಭವಾಗಬೇಕಾಗಿದೆ. ಸದ್ಯಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಪಟ್ಟಿ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಾರಾಧನೆಗೆ ಸಂಬಂಧಿಸಿದ ಹಿತ್ತಾಳೆಯ ಮುಖವಾಡಗಳು, ಆಯಾ ಭೂತದ ದೇವತೆಗಳ ಸ್ವರೂಪ ಕಲ್ಪನೆಗೆ ತಕ್ಕಂಥ ಭಾವಗಳನ್ನು ಬಹುಮಟ್ಟಿಗೆ ನಿರೂಪಿಸುತ್ತವೆ.[೩] ಇದೇ ಜಿಲ್ಲೆಯ ಮೆಕ್ಕಕಟ್ಟೆ ಎಂಬಲ್ಲಿನ ಮರದ ವಿಗ್ರಹಗಳು ಅಸಾಧಾರಣ ಕಲಾಕೃತಿಗಳು. ಮನುಷ್ಯ ಸ್ವಭಾವದಲ್ಲಿನ ಅನೇಕ ಮುಖಗಳು, ಅನೇಕ ಬಗೆಯ ಗುಣಸ್ವಭಾವಗಳು, ಪರಿಣಾಮಕಾರಿಯಾಗಿ ಶಿಲ್ಪರೂಪವನ್ನು ಧರಿಸಿ ನಿಂತಿವೆ. ಕರ್ನಾಟಕದ ಹಲವೆಡೆ ಮಾರಮ್ಮ ಇತ್ಯಾದಿ ಜನಪದ ದೇವತೆಗಳನ್ನು ಹಿತ್ತಾಳೆಯಲ್ಲಿ ಮಾಡುವ ರೂಢಿ ಇದೆ. ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿರುವಂಥ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ದಕ್ಷಿಣ ಕರ್ನಾಟಕದಲ್ಲೂ ಕಾಣಬಹುದು. ಇವನ್ನು ಬೀರೇದೇವರು ಎಂದು ಕರೆಯುತ್ತಾರೆ. ಇವು ಸಾಮಾನ್ಯವಾಗಿ ಹಿತ್ತಾಳೆಯಲ್ಲಿ ಮಾಡಿದವು. ಉತ್ತರ ಕರ್ನಾಟಕದ ಹಲವೆಡೆ ಮಾರಿಯಮ್ಮ, ಮರಗಮ್ಮ ಮುಂತಾದ ಮರದ ವಿಗ್ರಹಗಳು ಸಿಗುತ್ತವೆ. ಮಲೆನಾಡಿನಲ್ಲಿ ಬಳಕೆಯಲ್ಲಿರುವ ಮಾರಿಕಾಂಬಾ ವಿಗ್ರಹಗಳು ಹಾಗೂ ಗಡಿ ಮಾರಿ, ಉಡುಗೋಲಜ್ಜಿ, ಹಲ್ಲುಬೀರಿ, ಮುಂತಾದ ಶಿಲ್ಪಗಳನ್ನೂ, ವೀರಗಲ್ಲು ಮಾಸ್ತಿಕಲ್ಲು ಮುಂತಾದ ಶಿಲ್ಪಗಳನ್ನೂ, ಇಲ್ಲಿ ಸ್ಮರಿಸಬಹುದು. ಶಿಲ್ಪಕಲೆಯ ಯಾವ ನಿಯಮಗಳಿಗೂ ಯಾವ ಕಟ್ಟುಪಾಡುಗಳಿಗೂ ಯಾವ ವಿಧಿನಿಷೇಧಗಳಿಗೂ ಸ್ಪಂದಿಸದ ಅಪ್ಪಟ ಜನಪದ ಸೃಜನಶೀಲ ಶಕ್ತಿ ಕರ್ನಾಟಕದಾದ್ಯಂತ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ. ಇವಲ್ಲದೆ ನಾಗರಿಕ ಸಂಪ್ರದಾಯಗಳಿಂದ ಬಂದ ಗಣೇಶ, ಗೌರಿ ಇತ್ಯಾದಿಗಳನ್ನು ಗ್ರಾಮೀಣರೇ ಮಾಡಿ ಉಪಯೋಗಿಸುವುದು ಕರ್ನಾಟಕದ ಹಲವೆಡೆಯಲ್ಲಿ ಕಂಡುಬರುತ್ತದೆ. ಇವೆಲ್ಲ ಧರ್ಮ, ಸಂಪ್ರದಾಯಗಳಿಗೆ ಸಂಬಂಧಿಸಿದ್ದಾದರೆ, ಮಕ್ಕಳ ವಿನೋದಕ್ಕಾಗಿ ಮಾಡಿದ, ಮರ ಅಥವಾ ಮಣ್ಣಿನ ಆಟಿಕೆಗಳು ಅದರಲ್ಲೂ ಬಸವ ಇತ್ಯಾದಿ ಪ್ರಾಣಿಗಳ ಬೊಂಬೆಗಳು, ಕಿಸುಕಾಲು ಬೊಂಬೆಗಳು, ಇವೂ ಬಹುಸಾಮಾನ್ಯವಾಗಿ ಕಂಡುಬರುವ ಜನಪದ ಶಿಲ್ಪಗಳು, ನವರಾತ್ರಿಯ ಕಾಲದಲ್ಲಿ ಈ ರೀತಿಯ ಅನೇಕ ಬೊಂಬೆಗಳನ್ನು ಇಟ್ಟು ಅಲಂಕರಿಸುವ ಸಂಪ್ರದಾಯ ಈ ನಾಡಿನಲ್ಲಿದೆ. |
ಪರಂಪರಾನುಗಣತೆ, ಅಲಿಖಿತತೆ, ಇತ್ಯಾದಿ ಜನಪದದ ಇತರ ರಂಗಗಳಲ್ಲಿ ಉಪಯೋಗಿಸುವ ಮಾನದಂಡಗಳು, ಕಲಾರಂಗದಲ್ಲಿ ಅರ್ಥಹೀನವಾಗುತ್ತವೆ. ಶಿಲ್ಪ ಮೂಲತಃ ವೃತ್ತಿಜನ್ಯವಾದುದರಿಂದ, ಇದರ ಸೃಷ್ಟಿಗೆ ಲಿಖಿತಶಾಸ್ತ್ರಗಳ ಉಪಯೋಗ ಅಲ್ಪ; ಇದು ಬಹುಮಟ್ಟಿಗೆ ಗುರು-ಶಿಷ್ಯ ಪರಂಪರೆಯಲ್ಲಿ ಕಲಿಕೆ ಅನುಭವದ ಸೂತ್ರದ ಮೇಲೆ ಮುಂದುವರಿಯುತ್ತದೆ. ಜನಪದ ಸಮಾಜಗಳಲ್ಲಿ ಪ್ರಚಲಿತವಾಗಿರುವ ಶಿಲ್ಪ ಜನಪದ ಶಿಲ್ಪ ಎಂಬ ವಿವರಣೆ ಸಾಧುವಾಗಿ ಕಂಡರೂ ಶಿಲ್ಪಗಳ ಆಳ ಅಧ್ಯಯನಕ್ಕೆ ತೊಡಗಿದಾಗ ಈ ವಿವರಣೆ ಅನಿರ್ದಿಷ್ಟವಾಗುತ್ತದೆ. ಜನಪದದಂಥ ತೆರೆದ ಸಮಾಜದಲ್ಲಿ ಹಲವಾರೆಡೆಗಳಿಂದ ಬಂದ ಅನುಭವ, ಜ್ಞಾನ ಮತ್ತು ವಿಧಾನಗಳು ತಮ್ಮದೆ ಆದ ಮಾರ್ಗದಲ್ಲಿ ರೂಪುಗೊಂಡು ಜನಪದದ ಸ್ವತ್ತಾಗಿ ಹೋಗುತ್ತವೆ. ಹೊರಪ್ರಪಂಚದ ಸಾಂಸ್ಕøತಿಕ ಪ್ರಭಾವಗಳ ಸೊಂಕಿಲ್ಲದೆಯೇ ಕೆಲವು ವೇಳೆ ಅವನ್ನು ಪ್ರತಿಭಟಿಸಿಯೋ ನಿಂತ ಸಂಕುಚಿತ ಪ್ರದೇಶದಲ್ಲಿ ಚಿಕ್ಕ ಸಮೂಹಗಳಲ್ಲಿ ವಾಸಿಸುವ ಆದಿವಾಸಿ ಜನಾಂಗಗಳಲ್ಲಿ ಗಾಢವಾಗಿ ಕಾಣುವ ವೃತ್ತಿ, ವಿಧಾನ, ಕಲ್ಪನೆ, ಇತ್ಯಾದಿಗಳೂ ಮೂಲತಃ ಈ ವರ್ಗಗಳನ್ನೇ ಹಿನ್ನೆಲೆಯಾಗಿ ಹೊಂದಿರುವ ಜನಪದ ವರ್ಗಗಳಲ್ಲೂ ಕಂಡು ಬರುವುದರಿಂದ, ಆದಿವಾಸಿ ಶಿಲ್ಪಗಳ ಮತ್ತು ಜನಪದ ಶಿಲ್ಪಗಳ ನಡುವಿನ ವಿಭಜನ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಲಾಗುವುದಿಲ್ಲ. ಭಾರತದ ಭಿಲ್ಲರೇ ಮೊದಲಾದ ಆದಿವಾಸಿ ಜನಾಂಗಗಳು ತಮಗೆ ಅವಶ್ಯವಾದ ಶಿಲ್ಪ ನಿರ್ಮಾಣಕ್ಕೆ ಪಕ್ಕದ ಗ್ರಾಮೀಣ ಕಲೆಗಾರರನ್ನೇ ಅವಲಂಬಿಸಿರುತ್ತಾರಾಗಿ ಇಂಥ ಸಂದರ್ಭಗಳಲ್ಲಿ ಆದ ನಿರ್ಮಾಣಗಳು ಜನಪದದ್ದೋ ಆದಿವಾಸಿಗಳದೋ ಎಂದು ಹೇಳುವುದು ಅಸಾಧ್ಯವಾಗುತ್ತದೆ. ನಾಗರಿಕ ಸಮಾಜಗಳ ಕೆಲವೊಂದು ಭಾವನೆಗಳು ಸ್ವಲ್ಪಸ್ವಲ್ಪವಾಗಿ ಜನಪದ ವರ್ಗಗಳಿಗೆ ಹರಿಯುವ ಸತತಕ್ರಿಯೆಯಿಂದಾಗಿ ಹಲವಾರು ನಾಗರಿಕ ಮೂಲದ ಶಿಲ್ಪಗಳು ಅಥವಾ ಅವುಗಳ ಬಡ ಅನುಕರಣೆಗಳು ಜನಪದ ಶಿಲ್ಪಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಇವೆಲ್ಲ ಜನಪದ ಶಿಲ್ಪದ ಸ್ಪಷ್ಟ ಸೀಮೆಯನ್ನು ನಿರ್ಧರಿಸುವಲ್ಲಿ ಹಲವು ತೊಂದರೆಗಳನ್ನು ಒಡ್ಡುತ್ತವೆ. |
↑ "Essay on the Traditional Indian Folk Culture". World's Largest Collection of Essays! Published by Experts. 12 March 2012. Retrieved 11 January 2020. |
↑ "ಶಬರಿಮಲೆ ಶಾಸ್ತ: ಇಲ್ಲಿದೆ ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ". Prajavani (in ಇಂಗ್ಲಿಷ್). 9 January 2019. Retrieved 11 January 2020. |
↑ "exorcism items - Yahoo Search Results Image Search results". in.images.search.yahoo.com. Retrieved 11 January 2020. |
ಹಾವು ಕಚ್ಚಿ ಸ್ಮಶಾನ ಸೇರಿದವರ ಮನೆಯಲ್ಲಿ ನಾಗ-ನಾಗಿಣಿ ನೃತ್ಯ….ನಂತರ ಏನಾಯ್ತು ಗೊತ್ತ..?ತಪ್ಪದೆ ಇದನ್ನು ಓದಿ…! – HalliHudugaru |
September 20, 2019 By ಹಳ್ಳಿ ಹುಡುಗರು 21 |
ಸತ್ತ ವ್ಯಕ್ತಿ ಜೀವಂತವಾಗಿ ಬರುವುದಿಲ್ಲ ಎನ್ನುವ ಮಾತಿದೆ. ಆದ್ರೆ ರಾಜಸ್ಥಾನದ ಭಾರತ್ಪುರದಲ್ಲಿ ಚಮತ್ಕಾರಿ ಘಟನೆ ನಡೆದಿದೆ. ಹಾವು ಕಚ್ಚಿ ಸ್ಮಶಾನ ಸೇರಿದ್ದವಳು ಮನೆಗೆ ವಾಪಸ್ ಆಗಿದ್ದಾಳೆ. ಆಕೆಗೆ ಚಿಕಿತ್ಸೆ ಮುಂದುವರೆದಿದೆ. |
21 ವರ್ಷದ ಶ್ವೇತಾಗೆ ಹಾವು ಕಚ್ಚಿತ್ತು. ವೈದ್ಯರು ಶ್ವೇತಾ ಸಾವನ್ನಪ್ಪಿದ್ದಾಳೆ ಎಂದಿದ್ದರು. ದುಃಖದಲ್ಲಿದ್ದ ಕುಟುಂಬಸ್ಥರು ಶ್ವೇತಾ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. |
ಸ್ಮಶಾನಕ್ಕೆ ಶ್ವೇತಾ ಶವವನ್ನು ತೆಗೆದುಕೊಂಡು ಹೋಗ್ತಿದ್ದಂತೆ ಮನೆಯಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿತ್ತು. ಶ್ವೇತಾ ಮನೆಯಲ್ಲಿ ನಾಗ-ನಾಗಿಣಿ ನೃತ್ಯ ಮಾಡಿದ್ದಾರೆ. ಈ ವಿಷ್ಯವನ್ನು ಸ್ಮಶಾನಕ್ಕೆ ಹೋದ ಜನರಿಗೆ ಮನೆಯಲ್ಲಿದ್ದ ಮಹಿಳೆಯರು ಫೋನ್ ಮಾಡಿ ತಿಳಿಸಿದ್ದಾರೆ. |
ಇಷ್ಟರ ಮಧ್ಯೆ ಶ್ವೇತಾ ಉಸಿರಾಡುತ್ತಿರುವುದು ಮನೆಯವರಿಗೆ ಗೊತ್ತಾಗಿದೆ. ತಕ್ಷಣ ಮನೆಗೆ ಕರೆತಂದು ಚಿಕಿತ್ಸೆ ನಡೆಸಿದ್ದಾರೆ. ತಜ್ಞರು ಶ್ವೇತಾಗೆ ಚಿಕಿತ್ಸೆ ನೀಡ್ತಿದ್ದಾರೆ. ಈ ವಿಷ್ಯ ಇಡೀ ಊರಿಗೆ ಆವರಿಸಿದೆ. |
'ವೃಷಭಾವತಿ ಉಳಿಸಿ' ಅಭಿಯಾನಕ್ಕೆ ಮತ್ತು ಮ್ಯಾರಥಾನ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್…! September 20, 2019 By ಹಳ್ಳಿ ಹುಡುಗರು |
"ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲ ಅಷ್ಟೇ" – EESANJE / ಈ ಸಂಜೆ |
"ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲ ಅಷ್ಟೇ" |
October 14, 2021 Sunil Kumar Covid vaccine, Davangere |
ದಾವಣಗೆರೆ,ಅ.14- ಕೊರೊನಾ ವ್ಯಾಕ್ಸಿನ್ ಪಡೆಯಲು ವೃದ್ದೆಯೊಬ್ಬರು ರಂಪಾಟಮಾಡಿರುವ ಘಟನೆ ನಡೆದಿದೆ. ತಾಲೂಕಿನ ಅಣಜಿ ಗ್ರಾಮದಲ್ಲಿ ತಹಸೀಲ್ದಾರ್ ಗಿರೀಶ್ ನೇತೃತ್ವದ ಆರೋಗ್ಯ ತಂಡ ಕೊರೊನಾ ಲಸಿಕಾ ಅಭಿಯಾನ ಕೈಗೊಂಡ ವೇಳೆ ಅಕ್ಕಮ್ಮ ಎಂಬ ಹೈಡ್ರಾಮ್ ಮಾಡಿದ್ದಾರೆ. |
ನಾನು ಬೆಂಗಳೂರಿನ ಡಾಕ್ಟರ್ ಒಬ್ಬರ ಬಳಿ ತೋರಿಸ್ಕೋತೀನಿ, ನಂಗೆ ಏನು ಆಗಿಲ್ಲ ತುಂಬಾ ಚೆನ್ನಾಗಿದೀನಿ, ನಾನು ಬಿಪಿ ಮಾತ್ರೆ ಬಿಟ್ಟು ಬೇರೇನೂ ತಗೊಳ್ಳೊಂಗಿಲ್ಲ, ಕೋವಿಡ್ ಲಸಿಕೆ ಹಾಕಿಸಿಕೊಂಡು ಏನಾದರೂ ಹೆಚ್ಚುಕಮ್ಮಿ ಆದ್ರೆ ನನ್ನ ಮಕ್ಕಳಿಗೆ ಊಟಕ್ಕೆ ಹಾಕೋರೋ ಯಾರು..? |
ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲಷ್ಟೇ. ಈ ಗುಳಿಗಿ ಬಿಟ್ಟು ಬೇರೆ ತಗೋಳಲ್ಲ, ನೀವೇನೇ ಹೇಳಿದ್ರು ಇಂಜೆಕ್ಷನ್ ಮಾಡಿಸ್ಕೊಳ್ಳಲ್ಲ ಎನ್ನುತ್ತಾ ಅಕ್ಕಮ್ಮ ರಂಪಾಟ ಮಾಡುತ್ತಾ ಶೂಶ್ರೂಷಕರು ಮತ್ತು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. |
ಹಳ್ಳಿಗಳಲ್ಲಿ ಹಿಂದೇಟು: |
ಕೋವಿಡ್ ಮೂರನೇ ಅಲೆ ತಡೆಗಟ್ಟಲು ಶತಾಯ ಗತಾಯ ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ, ಲಸಿಕಾಕರಣ ಚುರುಕುಗೊಳಿಸಿದೆ. |
ಲಸಿಕೆ ಪಡೆಯಲು ಆರಂಭದಲ್ಲಿ ಜನರು ನಿರ್ಲಕ್ಷ್ಯ ತೋರಿದರಾದರೂ ಎರಡನೇ ಅಲೆಯಲ್ಲಿ ಉಂಟಾದ ಸಾವು-ನೋವು ಅರಿತುಕೊಂಡು ಲಸಿಕೆ ಕೊರತೆ ಉಂಟಾಗುವ ಮಟ್ಟಕ್ಕೆ ತಾ ಮುಂದು ನೀ ಮುಂದು ಎಂದು ಲಸಿಕೆ ಪಡೆದರು. |
ಆದರೆ, ಗ್ರಾಮೀಣ ಭಾಗದ ಜನರಲ್ಲಿ ಮಾತ್ರ ಲಸಿಕೆ ಬಗ್ಗೆ ಇನ್ನೂ ಪೂರ್ವಗ್ರಹ ಹೊದಂತೆ ಕಾಣುತ್ತಿಲ್ಲ. ಹಳ್ಳಿಗಳಲ್ಲಿ ಬಹುಪಾಲು ಜನರು ಲಸಿಕೆಗೆ ಹಿಂದೇಟು ಹಾಕುವುದು ಮುಂದುವರಿದಿದೆ ಎನ್ನುವುದಕ್ಕೆ ಈ ವೃದ್ಧೆ ಸಾಕ್ಷಿಯಾಗಿದ್ದಾಳೆ. |
ಮನವೊಲಿಸಿದ ತಹಸೀಲ್ದಾರ್: |
ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಅಕ್ಕಮನ್ನನು ಎಷ್ಟೇ ಮನವೊಲಿಸಿದರೂ ತನ್ನ ಹಠ ಬಿಡಲಿಲ್ಲ. ತಹಶೀಲ್ದಾರ್ ಗಿರೀಶ್ ನಿನಗೆ ಏನು ಆಗೋದಿಲ್ಲ ನಾನ್ ಇರ್ತಿನಿ ಎಂದು ಧೈರ್ಯ ಹೇಳಿ ಲಸಿಕೆ ಹಾಕಿಸಿದ್ದಾರೆ. |
ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ? – ಹೊನಲು |
Home › ನಾಡು › ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ? |
ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ? By ನಾಡು on 31-07-2014 • ( 4 ) |
ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಸಬೆಯೊಂದರಲ್ಲಿ ಶ್ರೀ ಎಸ್. ಎಲ್. ಬಯ್ರಪ್ಪನವರು 'ಸಂಸ್ಕ್ರುತವಿಲ್ಲದೆ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ', 'ಕನ್ನಡವು ಸಂಸ್ಕ್ರುತದಿಂದ ಸತ್ವಯುತವಾಗಿದೆ' ಎಂಬಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂಬ ವರದಿ ಬಂದಿದೆ. ಕನ್ನಡದ ವಿಶಯದಲ್ಲಿ ಸಂಸ್ಕ್ರುತವನ್ನು ಕುರಿತಾದ ಬಯ್ರಪ್ಪನವರ ಈ ನಿಲುವು ಹೊಸತೇನಲ್ಲ. ಹಿಂದೆಯೂ ಅವರು ಇಂತಹುದೇ ಕೆಲವು ಮಾತುಗಳನ್ನಾಡಿದ್ದರು. ಇರಲಿ, ಆದರೆ ಅವರ ಈ ಅನಿಸಿಕೆಗಳು ಎಶ್ಟು ಸರಿ ಎಂಬುದನ್ನು ಒರೆಗೆ ಹಚ್ಚೋಣ. ಮುಕ್ಯವಾಗಿ ನುಡಿಯ ಎರಡು ರೂಪಗಳಾದ ಮಾತು ಮತ್ತು ಬರಹಗಳೆರಡನ್ನೂ ಗಮನಿಸೋಣ. |
ಎಳೆಯ ವಯಸ್ಸಿನಲ್ಲೇ ತಾಯ್ನುಡಿಯಲ್ಲಿ ಮಾತನಾಡಲು ಕಲಿಯುವ ನಾವು, ಮುಂದೆ ಮನೆಯವರ ಜೊತೆ ಮತ್ತು ಕೂಡಣದ ಇತರೆ ಮಂದಿಯ ಜೊತೆಗಿನ ಒಡನಾಟದಿಂದ ನುಡಿಯನ್ನು ಮತ್ತು ಅದರ ಬಳಕೆಯನ್ನು ಹೆಚ್ಚಾಗಿ ಕಲಿಯುತ್ತ ಹೋಗುತ್ತೇವೆ. ನಮ್ಮ ನಾಡಿನ ಉದ್ದಗಲಕ್ಕೂ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು, ಮುದಿಯರ ವರೆಗೂ ಎಲ್ಲ ವರ‍್ಗದ ಕನ್ನಡಿಗರೂ ಕನ್ನಡವನ್ನು ಹೀಗೇ ಕಲಿತು ಮಾತಲ್ಲಿ ಬಳಸುತ್ತ ಬಂದಿರುತ್ತಾರೆ. ಇದಕ್ಕಾಗಿ ಅವರಾರಿಗೂ ಸಂಸ್ಕ್ರುತವನ್ನು ಕಲಿಯುವ ಅಗತ್ಯ ಬರುವುದಿಲ್ಲ. ನಿಜವಾಗಿಯೂ, ಇಂದು ಬೆರೆಳೆಣಿಕೆಯಶ್ಟು ಮಂದಿಗೆ ಮಾತ್ರ ಸಂಸ್ಕ್ರುತದ ತಿಳಿವಿದೆ. ಆದರೆ ಇವರನ್ನು ಬಿಟ್ಟು ಸುಮಾರು ಅಯ್ದಾರು ಕೋಟಿಯ ಎಣಿಕೆಯಲ್ಲಿರುವ ಕನ್ನಡಿಗರಿಗೆ ಕನ್ನಡ ಮಾತನ್ನು ಸರಿಯಾಗಿ ಕಲಿತು ಬಳಸಲು ಸಂಸ್ಕ್ರುತದ ಅರಿವು ಬೇಕಾಗಿಲ್ಲ, ಹಿಂದೆಯೆಂದೂ ಕೂಡ ಬೇಕಿರಲಿಲ್ಲ. |
ಮಾತಲ್ಲಿ, ಸಂಸ್ಕ್ರುತ ಸೇರಿದಂತೆ ಮರಾಟಿ, ಹಿಂದೂಸ್ತಾನಿ, ಸ್ಪ್ಯಾನಿಶ್, ಇಂಗ್ಲಿಶ್ ಮುಂತಾದ ಹಲವು ನುಡಿಗಳಿಂದ ಕನ್ನಡಕ್ಕೆ ಪದಗಳು ಬಂದಿವೆ, ಇಂದಿಗೂ ಬರುತ್ತಲೇ ಇವೆ. ಕನ್ನಡಿಗರ ನಾಲಿಗೆಗೆ ಹೊಂದಿಕೊಂಡ, ಅಂದರೆ ಕನ್ನಡ ಉಲಿಕೆಗೆ ತಕ್ಕಂತೆ ಮಾರ‍್ಪಾಟು ಹೊಂದಿ ಬಳಕೆಯಾಗುತ್ತಿರುವ ಈ ಪದಗಳು ಕನ್ನಡದ ಪದಗಳಂತೆಯೇ ಬಳಸಲಾಗುತ್ತಿವೆ. ಇವುಗಳನ್ನು ಬಳಸಲು ಕನ್ನಡಿಗರಿಗೆ ಆಯಾ ನುಡಿಗಳನ್ನು ಕಲಿಯುವ ಅಗತ್ಯವಿಲ್ಲ. ಉದಾಹರಣೆಗೆ, ಇಂದು ಇಂಗ್ಲಿಶ್ ನುಡಿಯಿಂದ ಕನ್ನಡಕ್ಕೆ ಬರುತ್ತಿರುವ ಎರವಲುಗಳ ಎಣಿಕೆ ತೀರಾ ಹೆಚ್ಚಿದೆ. ಹಾಗೆಂದ ಮಾತ್ರಕ್ಕೆ ಕನ್ನಡವನ್ನು ಸರಿಯಾಗಿ ಕಲಿಯಲು ಇಂಗ್ಲಿಶ್ ಅಗತ್ಯ ಎಂದು ಹೇಳಲು ಬರುವುದಿಲ್ಲ. |
ಮಾತಿನಂತೆ ನುಡಿಯ ಇನ್ನೊಂದು ರೂಪ ಬರಹ. ಈ ರೂಪದಲ್ಲಿಯೂ, ಒಬ್ಬ ಬರಹಗಾರನಿಗೆ ತನ್ನ ಅನಿಸಿಕೆಗಳನ್ನು ತಿಳಿಹೇಳಲು ಕನ್ನಡವನ್ನು ಚೆನ್ನಾಗಿ ತಿಳಿದಿರಬೇಕಾಗುತ್ತದೆಯೇ ಹೊರತು ಸಂಸ್ಕ್ರುತವನ್ನಲ್ಲ. ಮಾತಿಗೆ ಹೋಲಿಸಿಕೊಂಡರೆ ಕನ್ನಡ ಬರಹದಲ್ಲಿ ಸಂಸ್ಕ್ರುತದ ಎರವಲುಗಳು ಹೆಚ್ಚಿವೆ ನಿಜ. ಆದರೆ ಹೀಗೆ ಹೆಚ್ಚು ಸಂಸ್ಕ್ರುತದಿಂದ ತುಂಬಿದ ಕನ್ನಡ ಬರಹವು ಕನ್ನಡಿಗರಿಗೆ ತೊಡಕಿನದ್ದಾಗಿದ್ದು, ಬರಹಗಾರನ ಆಶಯವನ್ನು ಸರಿಯಾಗಿ ತಿಳಿಸಲು ಅಡ್ಡಿಯುಂಟು ಮಾಡುತ್ತದೆ ಮತ್ತು ಹೆಚ್ಚು ಮಂದಿಯನ್ನು ತಲುಪುವುದಿಲ್ಲ. ಹೀಗೆ ಬರಹವು ಹೆಚ್ಚು ಮಂದಿಗೆ ತಲುಪದಿದ್ದರೆ ಬರಹಗಾರನಿಗೆ ಮಂದಿ ಮೆಚ್ಚುಗೆಯೂ ದೊರೆಯುವುದಿಲ್ಲ. |
ಈ ಮಾತು ಅರಿಮೆಯ ಬರಹಗಳ ವಿಶಯದಲ್ಲೂ ನಿಜ, ಇತರೆ ಬರಹಗಳ ವಿಶಯದಲ್ಲೂ ನಿಜ. ಇಲ್ಲಿ ಅರಿಮೆಯ ಮಾತೆತ್ತಿರುವುದಕ್ಕೆ ಕಾರಣ, ಬೇರೆ ಯಾವುದೇ ಬಗೆಯ ಬರಹಕ್ಕಿಂತ ಅರಿಮೆಯ ಬರಹಗಳಲ್ಲಿ ಹೆಚ್ಚು ಸಂಸ್ಕ್ರುತದ ಬಳಕೆಯಿಂದ ಉಂಟಾಗುತ್ತಿರುವ ತೊಂದರೆಗಳನ್ನು ನಾವು ತಿಳಿಯಾಗಿ ಗಮನಿಸಬಹುದು. ಉದಾಹರಣೆಗೆ ಅಯ್ದನೇತರಗತಿಯ ಅರಿಮೆಯ ಪುಸ್ತಕದಲ್ಲಿನ ಈ ಕೆಲವು ಪದಗಳನ್ನು ಗಮನಿಸಿ: |
"ಪುನರಾವರ‍್ತಿತ ವ್ಯವಕಲನ", "ಆಂದೋಲನ ಚಲನೆ", "ಘರ್ಷಣ ಬಲ" |
ನಿಜವಾಗಿಯೂ ಹೆಚ್ಚಿನ ಕಲಿಸುಗರಿಗೂ, ಕಲಿಯುವ ಮಕ್ಕಳಿಗೂ ಇದೇನೆಂದು ತಿಳಿದುಕೊಳ್ಳುವುದು ತೀರಾ ತೊಡಕಿನ ಕೆಲಸ. ಇದನ್ನೇ ಹೀಗೆ ಕನ್ನಡದ ಪದಗಳನ್ನು ಬಳಸಿ ಸರಳವಾದ ಬಗೆಯಲ್ಲಿ ತಿಳಿಸಬಹುದು: |
"ಮತ್ತೆ ಮತ್ತೆ ಕಳೆಯುವುದು", "ತೂಗಾಡುವಿಕೆ/ ತೂಗಾಟ", "ಉಜ್ಜುವಿಕೆಯ ಬಲ" |
ಹಾಗಾಗಿ ಅಗತ್ಯಕ್ಕೆ ಮೀರಿದ ಸಂಸ್ಕ್ರುತದ ಬಳಕೆಯಿಂದ ತೊಡಕುಗಳೇ ಹೆಚ್ಚು ಎಂಬುದು ಇದರಿಂದ ತಿಳಿಯಾಗುತ್ತದೆ. |
ಮಾತಲ್ಲಿ ಮಂದಿಯು ತಮಗೆ ತಿಳಿಯದಂತೆಯೇ ವ್ಯಾಕರಣದ ನಿಯಮಗಳನ್ನು ಬಳಸುತ್ತಾರೆ, ಹಾಗಾಗಿ ವ್ಯಾಕರಣದ ಅರಿವು ಅವರಿಗೆ ಹೆಚ್ಚಾಗಿ ಬೇಕಾಗುವುದಿಲ್ಲ. ಆದರೆ ಕನ್ನಡ ಪದಗಳ ಕಟ್ಟಣೆ, ಮತ್ತು ವಾಕ್ಯಗಳ ಕಟ್ಟಣೆಯ ಗುಟ್ಟು ಮತ್ತು ಹಿನ್ನೆಲೆ, ಹಾಗೂ ಕನ್ನಡ ವ್ಯಾಕರಣದ ಇತರೆ ನಿಯಮಗಳನ್ನು ಅರಿತ ಬರಹಗಾರನು ಅವುಗಳನ್ನು ಬಳಸಿಕೊಂಡು ಓದುಗರಿಗೆ ತನ್ನ ಅನಿಸಿಕೆಗಳು ಹೆಚ್ಚು ಸರಿಯಾಗಿ ತಟ್ಟುವಂತೆ ಬರೆಯಬಹುದು. ಆದುದರಿಂದ ಕನ್ನಡ ವ್ಯಾಕರಣದ ಕಲಿಕೆ ಒಂದು ಬಗೆಯಲ್ಲಿ ಬರಹಗಾರರಿಗೆ ನೆರವಾಗಬಲ್ಲುದು. |
ಆದರೆ ಕನ್ನಡ ವ್ಯಾಕರಣದಲ್ಲಿ ಸುಮಾರು ನೂರಕ್ಕೆ 70-80ರಶ್ಟು ಸಂಸ್ಕ್ರುತವಿದೆ ಎಂಬ ಮಾತನ್ನು ಬಯ್ರಪ್ಪನವರೇ ಈ ಮೊದಲು ಹೇಳಿದ್ದಾರೆ. ಅವರಂತೆಯೇ ಹಲವು ಮಂದಿ ಇಂತಹ ನಂಬಿಕೆಗಳನ್ನಿಟ್ಟುಕೊಂಡಿದ್ದಾರೆ. ಇಂತಹ ಮಾತುಗಳು ಇಂದು ಶಾಲೆಗಳಲ್ಲಿ 'ಕನ್ನಡ ವ್ಯಾಕರಣ' ಎಂದು ಕಲಿಸಲಾಗುವ ವ್ಯಾಕರಣವನ್ನು ಗಮನಿಸಿದರೆ ನಿಜ ಎನಿಸಬಹುದು. ಆದರೆ ನಿಜಕ್ಕೂ ಈ ವ್ಯಾಕರಣಗಳಾವುವೂ ಕನ್ನಡದ ವ್ಯಾಕರಣಗಳಲ್ಲ. ಬದಲಾಗಿ ಸಂಸ್ಕ್ರುತ ವ್ಯಾಕರಣದ ಕನ್ನಡ ಅಳವಡಿಕೆಗಳು ಮಾತ್ರ. ದ್ರಾವಿಡ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣವು ಸಂಸ್ಕ್ರುತದಿಂದ ಹಲವು ಬಗೆಯಲ್ಲಿ ಬೇರೆಯಾಗಿದೆ. ಈ ಕಾರಣದಿಂದಾಗಿ ಸಂಸ್ಕ್ರುತ ನುಡಿಯನ್ನಾಗಲಿ, ಅದರ ವ್ಯಾಕರಣವನ್ನಾಗಲಿ ಕಲಿತವರಿಗೆ ಕನ್ನಡ ವ್ಯಾಕರಣವನ್ನು ಅರಿತುಕೊಳ್ಳುವಂತಹ ವಿಶೇಶ ಪ್ರಯೋಜನವೇನೂ ಆಗುವುದಿಲ್ಲ. |
ಸಂಸ್ಕ್ರುತದ ಬಳಕೆಯಿಂದ ಕನ್ನಡವು ಸತ್ವಯುತವಾಗುತ್ತದೆ ಎಂಬ ಮಾತನ್ನೂ ಬಯ್ರಪ್ಪನವರು ಹೇಳಿದ್ದಾರೆ. ಆದರೆ ಈ ಸತ್ವ ಎಂಬುದು ಪ್ರತಿ ವ್ಯಕ್ತಿಯ ಅನಿಸಿಕೆ, ಹುರುಳುಸಿಕೆಗೆ ಬಿಟ್ಟಿದ್ದು. ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದರೆ ಬರಹವು ಹೆಚ್ಚು ಸತ್ವಯುತವಾದುದಾಗುತ್ತದೆ ಎಂಬ ನಂಬಿಕೆಯು ಹಲವರಲ್ಲಿದೆ. ಆ ಪದಗಳು ತಿಳಿಯಲು ಹೆಚ್ಚು ತೊಡಕಾದಶ್ಟೂ ಆ ಬರಹದ ಸತ್ವ ಹೆಚ್ಚಾಗುತ್ತದೆ ಎಂಬುದೂ ಒಂದು ಕುರುಡು ನಂಬಿಕೆ. ಆದರೆ ಮೇಲೆ ಹೇಳಿದಂತೆ ಇಂತಹ ಬರಹಗಳು ಹೆಚ್ಚು ಮಂದಿಯನ್ನು ತಲುಪುವುದಿಲ್ಲ. ಒಂದು ಮಾತು ಇಲ್ಲವೇ ಬರಹ ಎಶ್ಟು ಸತ್ವಯುತವಾದದ್ದು ಎಂದು ಅಳೆಯಲು ನಿಕ್ಕಿಯಾದ ಅಳತೆಗೋಲುಗಳಿಲ್ಲ. ಆದರೆ ತಿಳಿಸಬೇಕಾದ ವಿಶಯವನ್ನು ಅಚ್ಚುಕಟ್ಟಾಗಿ, ಸರಳವಾಗಿ, ಗೊಂದಲಗಳಿಲ್ಲದ ಬಗೆಯಲ್ಲಿ ಹೇಳಿ ಹೆಚ್ಚು ಮಂದಿಯನ್ನು ತಲುಪಬಲ್ಲ ಮಾತು ಇಲ್ಲವೇ ಬರಹ ಸತ್ವಯುತವಾದುದು ಎನಿಸಿಕೊಳ್ಳಬಹುದೇನೋ. ಈ ಬಗೆಯಲ್ಲಿ ಕನ್ನಡದಲ್ಲಿ ಹೇಳುವುದಕ್ಕೆ ಸಂಸ್ಕ್ರುತ ಪದಗಳು ಇಲ್ಲವೇ ವ್ಯಾಕರಣದಿಂದ ಯಾವುದೇ ವಿಶೇಶವಾದ ಪ್ರಯೋಜನವಾಗುವುದಿಲ್ಲ ಎಂಬುದನ್ನು ನಾವೀಗಲೇ ನೋಡಿದ್ದೇವೆ. |
ಹಾಗಿದ್ದರೆ ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಕಲಿಯಲು ಯಾವುದೇ ಪ್ರಯೋಜನವಿಲ್ಲವೇ ಎಂಬ ಕೇಳ್ವಿ ಏಳುತ್ತದೆ. ಇನ್ನುಡಿಗತನ(bilingualism)ದಿಂದ ಇಲ್ಲವೇ ಹಲನುಡಿಗತನ(multilingualism)ದಿಂದ ಹಲವು ಪ್ರಯೋಜನಗಳಿವೆ. ಒಬ್ಬ ವ್ಯಕ್ತಿಯ ಮನಸ್ಸಿಗೆ ನುಡಿಯು ಪ್ರಪಂಚವನ್ನು ನೋಡಿ ಬಗೆಯುವ ಕಣ್ಣುಗಳಿದ್ದಂತೆ. ಬೇರೊಂದು ನುಡಿಯನ್ನು ಕಲಿಯುವುದರಿಂದ ಪ್ರಪಂಚದ ಇನ್ನೊಂದು ಬಗೆಯ ನೋಟ ನಮ್ಮದಾಗುತ್ತದೆ. ಆ ನುಡಿಯಲ್ಲಿ ಬಳಸುವ ಕೆಲವು ಹೇಳಿಕೊಳ್ಳುವ ಬಗೆಗಳನ್ನು, ಸಾದನಗಳನ್ನು ಕಲಿಯುವುದರಿಂದ ನಮ್ಮ ಹೇಳಿಕೊಳ್ಳುವ ಅಳವು, ಮತ್ತು ಪ್ರಪಂಚವನ್ನು ತಿಳಿದುಕೊಳ್ಳುವ ಅಳವು ಹೆಚ್ಚುತ್ತದೆ. ಇದರಿಂದಾಗಿ ನಮ್ಮ ತಾಯ್ನುಡಿಯಲ್ಲೂ ನಮ್ಮ ಹೇಳಿಕೊಳ್ಳುವ, ತಿಳಿಹೇಳುವ ಚಳಕವು ಬೆಳವಣಿಗೆಯನ್ನು ಕಾಣಬಹುದು. ಆದರೆ ಈ ಬಗೆಯ ಪ್ರಯೋಜನಗಳು ಸಂಸ್ಕ್ರುತವೊಂದನ್ನು ಕಲಿಯುವುದರಿಂದಲೇ ಹೆಚ್ಚುತ್ತದೆ ಎಂದು ಹೇಳಲು ಬರುವುದಿಲ್ಲ. |
ವಾಡಿಕೆಯಿಂದ, ನುಡಿಯ ವಿಚಾರವಾಗಿ ಹಲವು ತಪ್ಪು ನಂಬಿಕೆಗಳು, ವಿಚಾರಗಳು ನಮ್ಮ ಸಮಾಜದ ಹಲವರಲ್ಲಿ ಬೇರೂರಿವೆ. ನಾಡಿನ ಮೇಲು ಮತ್ತು ಹಿರಿಯ ನಲ್ಬರಹಗಾರರಾದ ಬಯ್ರಪ್ಪನವರೂ ಇದಕ್ಕೆ ಹೊರತಲ್ಲ. ಇಂತಹ ನಂಬಿಕೆಗಳನ್ನು ಇಂದು ಅರಿಮೆಯ ನೆಲೆಯಲ್ಲಿ ನಿಂತು, ಬಗೆದು ಸತ್ಯವನ್ನು ತೋರಿಸಿಕೊಡಬೇಕಿದೆ. ತಿಳಿವಿಗೆ ಎಂದೂ ಇಲ್ಲದ ಹೆಚ್ಚುಗಾರಿಕೆ ಬಂದಿರುವ ಈ ಹೊತ್ತಲ್ಲಿ ನುಡಿಯ ಪಾತ್ರ ಹಿರಿಯದು. ನುಡಿಯನ್ನು ಬೆಳೆಸುವಲ್ಲಿ ತಪ್ಪು ಹೆಜ್ಜೆಗಳನ್ನಿಡುವುದು ನಮ್ಮ ಇಡೀ ಕನ್ನಡ ಸಮಾಜದ ಹಿನ್ನಡೆಗೆ ಕಾರಣವಾಗಬಹುದು. ಸಂಸ್ಕ್ರುತವೇ ಇರಲಿ ಬೇರೆ ಯಾವ ನುಡಿಯೇ ಇರಲಿ, ಅವುಗಳಲ್ಲಿ ನಮಗೆ ಪ್ರಯೋಜನವಾಗುವಂತಹವುಗಳನ್ನು ಯಾವುದೇ ಹಿಂಜರಿರಿಕೆಯಿಲ್ಲದೆ ಬಳಸೋಣ. ಆದರೆ ನಂಬಿಕೆಗಳಿಗೆ ಕಟ್ಟುಬಿದ್ದು ಅಗತ್ಯಕ್ಕೂ ಮೀರಿ ಒಂದು ನುಡಿಯನ್ನು ನಮ್ಮ ನುಡಿಯಲ್ಲಿ ಬೆರೆಸುವುದು ನಮ್ಮ ತಲೆಯ ಮೇಲೆ ನಾವೇ ಕಲ್ಲೆಳೆದುಕೊಂಡಂತೆ. |
ಹಂಚಿಕೊಳ್ಳಿ:FacebookTwitterWhatsAppGoogleEmail‹ ಮಂಗಳೂರು ಮೀನ್ ಸಾರುನುಡಿ ಸಮಾನತೆ ಕಾಪಾಡುವಲ್ಲಿ ಎಡವಿದ ಪಾಕಿಸ್ತಾನ ›Categories: ನಾಡುTags: :: ಸಂದೀಪ್ ಕಂಬಿ ::, ಆಡು ನುಡಿ, ಇನ್ನುಡಿಗತನ, ಎಸ್.ಎಲ್.ಬಯ್ರಪ್ಪ, ಕನ್ನಡ, ಕನ್ನಡ ವ್ಯಾಕರಣ, ನುಡಿ, ಬರಹ, ಮಾತು, ಸಂಸ್ಕ್ರುತ, ಸಂಸ್ಕ್ರುತ ವ್ಯಾಕರಣ, ಸತ್ವ, ಹಲನುಡಿಗತನ, ಹುಬ್ಬಳ್ಳಿ, bilingualism, Kannada, Kannada grammar, multilingualism, S. L. Bhairappa, Sanskrit, Sanskrit grammar Related Articles |
ರಾಯಚೂರಿನಲ್ಲಿ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ 'ನೋಬೆಲ್' – ಗೊತ್ತಿರದ ಕೆಲ ಸಂಗತಿಗಳು ಬಾರತದಲ್ಲಿ ಹುಟ್ಟಿ ನೋಬೆಲ್ ಪಡೆದವರು ರಾಯಚೂರು ನಗರ – ಒಂದು ಕಿರುಪರಿಚಯ 4 replies Nagaraja Chekkere Puttegowda 01-08-2014 • 5:53 am " ನುಡಿಯನ್ನು ಬೆಳೆಸುವಲ್ಲಿ ತಪ್ಪು ಹೆಜ್ಜೆಗಳನ್ನಿಡುವುದು ನಮ್ಮ ಇಡೀ ಕನ್ನಡ ಸಮಾಜದ ಹಿನ್ನಡೆಗೆ ಕಾರಣವಾಗಬಹುದು. ಸಂಸ್ಕ್ರುತವೇ ಇರಲಿ ಬೇರೆ ಯಾವ ನುಡಿಯೇ ಇರಲಿ, ಅವುಗಳಲ್ಲಿ ನಮಗೆ ಪ್ರಯೋಜನವಾಗುವಂತಹವುಗಳನ್ನು ಯಾವುದೇ ಹಿಂಜರಿರಿಕೆಯಿಲ್ಲದೆ ಬಳಸೋಣ. ಆದರೆ ನಂಬಿಕೆಗಳಿಗೆ ಕಟ್ಟುಬಿದ್ದು ಅಗತ್ಯಕ್ಕೂ ಮೀರಿ ಒಂದು ನುಡಿಯನ್ನು ನಮ್ಮ ನುಡಿಯಲ್ಲಿ ಬೆರೆಸುವುದು ನಮ್ಮ ತಲೆಯ ಮೇಲೆ ನಾವೇ ಕಲ್ಲೆಳೆದುಕೊಂಡಂತೆ " – |
ಸಂದೀಪ್ ಕಂಬಿ ಅವರೇ , ನಿಮ್ಮ ಅನಿಸಿಕೆ ಹಾಗೂ ವಿಚಾರಗಳು ತುಂಬಾ ಚೆನ್ನಾಗಿವೆ . ಕನ್ನಡವನ್ನು ಚೆನ್ನಾಗಿ ಕಲಿಯಬೇಕಾದರೆ ಸಂಸ್ಕ್ರುತದ ಅಗತ್ಯವಿದೆ ಎಂಬ ಬಯ್ರಪ್ಪನವರ ನಿಲುವು ಸರಿಯಲ್ಲ . |
Reply ↓ Sandeep Kn 02-08-2014 • 4:21 pm ನಿಮ್ಮ ಮೆಚ್ಚುಗೆಗೆ ನನ್ನಿ! |
Reply ↓ Shashanka Gajjarahalli 03-08-2014 • 2:56 pm ಹಿನ್ನಡುವಳಿ(ಇತಿಹಾಸ/history), ಮಿಂಬಾಗಿಲು (website), ಮಾಡುಗತನ (ಕೃತಿಶೀಲತೆ)…. ಹೊಸತೆನಿಸಿದರೂ ಸುಂದರವೆನಿಸುವಂತದ್ದು. ಸಾಮಾನ್ಯವಾಗಿ ಎಲ್ಲರೂ ಹೊರಭಾಷೆಗಳಿಂದ ಎರವಲು ಪಡೆದೇ ಉಪಯೋಗಿಸುವಂತ ಪದಗಳಿಗೆ ಸಮಾನವಾದ ಕನ್ನಡದ್ದೇ ಆದ ಪದಗಳಪ್ರಯೋಗ, ಮೆಚ್ಚುವಂತದ್ದೇ. ಆದರೆ; ಅದ್ಯಾತ್ಮ (ಅಧ್ಯಾತ್ಮ), ದರ‍್ಮ (ಧರ್ಮ) ಇನ್ನಿತರ ಪದಗಳನ್ನು ಬಲವಂತವಾಗಿ ತತ್ಸಮದಿಂದ (ಸಂಸ್ಕೃತ) ತದ್ಭವಗೊಳಿಸಿ (ಕನ್ನಡೀಕರಣ) ಪ್ರಚಾರಗೊಳಿಸುವುದು, ನವಿಲು ನೋಡಿ ಕೆಂಬೂತ ಪುಕ್ಕ ತರಕ್ಕೊಂಡಷ್ಟೇ ಸುಂದರ. ಮಹಾಪ್ರಾಣಗಳು ಅಚ್ಚಕನ್ನಡದಲ್ಲಿಲ್ಲದಿದ್ದರೆ ಏನಾಯ್ತು? ಸಂಸ್ಕೃತದಿಂದ ಎರವಲು ಪಡೆದ ಪದಗಳನ್ನು ಅವುಗಳ ಮೂಲರೂಪದಲ್ಲೇ ಬಳಸಲು ಇರುವ ಅಡ್ಡಿಯಾದರೂ ಏನು? ನಮ್ಮ ಹಿಂದಿನವರು ಅಂಥ ಉದಾರ ಮನೋಭಾವ ಹೊಂದಿದ್ದರಿಂದಲೇ ನಮ್ಮ ಅಕ್ಷರಕೋಶ ಇಷ್ಟು ಸಮೃದ್ಧವಾಗಿರುವುದು. ಜಗತ್ತಿನ ಯಾವ ಭಾಷೆಯ ಪದವೇ ಆದರೂ, ಅದನ್ನು ಕನ್ನಡದಲ್ಲಿ ಉಚ್ಚಾರ ಮಾಡಲಾಗದಿರುವ ಸಂಭವವೇ ಇಲ್ಲ. ಇಂಗ್ಲಿಷ್'ನ f, z ಪದಗಳನ್ನು ಉಚ್ಚರಿಸಲೂ ಕೂಡ ನಮಗೆ ಅಕ್ಷರಗಳ ಬರವಿಲ್ಲ. ಮಹಾಪ್ರಾಣಗಳನ್ನು ಬಿಟ್ಟು ಸಂಸ್ಕೃತ ಪದಗಳನ್ನು ಉಪಯೋಗಿಸುವ ಪ್ರಯತ್ನ, ಆ ಭಾಷೆಗೆ ನಾವು ತೋರುತ್ತಿರುವ ಅಗೌರವವಷ್ಟೇ ಅಲ್ಲ, ನಮ್ಮ ಧ್ವನಿಕೋಶದ ಸಂಪೂರ್ಣ ಅಭಿವ್ಯಕ್ತಿಗೆ ನಮಗೆ ನಾವೇ ಎಳ್ಳು ನೀರು ಬಿಟ್ಟಂತೆ. ಒಂದೊಮ್ಮೆ ಎರವಲು ಪಡೆದು ಉಪಯೋಗಿಸುತ್ತಿರುವ ಪದಗಳಿಗೆ ಸಮಾನವಾಗಿ ಕನ್ನಡ ಪದಗಳಿದ್ದೂ ನಾವು ಅವುಗಳನ್ನು ಬಳಸದೇ ಇರುವುದು ತಪ್ಪೇ. ಅದರಿಂದ ಜಗತ್ತಿನಲ್ಲಿ ಏಕರೂಪತೆ ಬೆಳೆದೀತು, ವಿವಿಧತೆಯ ಸೊಬಗು ಹಾಳಾದೀತು. ಸಂಸ್ಕೃತ ಭಾರತವನ್ನು ಜೋಡಿಸುವ ಸೂತ್ರ. ಅದನ್ನೊಂದು ಆರ್ಯರ ಭಾಷೆ ಎಂಬುದಾಗಿ ಬಿಂಬಿಸಿ, ನಮ್ಮ ದೇಶವನ್ನು ಆರ್ಯದ್ರಾವಿಡ ಎಂದು ಸುಳ್ಳೇಸುಳ್ಳಾಗಿ ವಿಭಜಿಸಿ ಆಳಿದಂತಹ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗುವುದನ್ನು ಈಗಲಾದರೂ ಬಿಡದಿದ್ದರೆ, ಎಂಥ ಮೂರ್ಖರು ನಾವು. ಹಾಗೆ ನೋಡಿದರೆ, ಮಲಯಾಳಂ, ಕನ್ನಡ, ಮರಾಠಿ ಭಾಷೆಗಳಲ್ಲಿಯೇ ಅತಿ ಹೆಚ್ಚು ಸಂಸ್ಕೃತ ಪದಗಳಿರುವುದು. ಜನಪದದ ಸೊಡರನ್ನು ಉಳಿಸಿಕೊಂಡೇ ಪ್ರಕಾಂಡ ಪಾಂಡಿತ್ಯಪೂರ್ಣ ಸಾಹಿತ್ಯಿಕ ಅಭಿವ್ಯಕ್ತಿಯನ್ನು ಜಗತ್ತಿನೆದುರು ಯಾವ ಭಾಷೆಗೂ ಕಡಿಮೆ ಇಲ್ಲದಂತೆ ಸಾಬೀತುಪಡಿಸುವುದು ಕನ್ನಡದಲ್ಲಿ ಸಾಧ್ಯವಾಗಿರುವುದು ಸಂಸ್ಕೃತದ ನೆರವಿನಿಂದಲೇ ಎಂಬುದನ್ನು ಮರೆಯದಿರಿ. ಕನ್ನಡವನ್ನು ಸಂಸ್ಕೃತ ಮುಕ್ತಗೊಳಿಸುವ ಭರದಲ್ಲಿ, ಇಂಗ್ಲಿಷ್, ತಮಿಳು ಭಾಷೆಗಳು ಬಂದು ತೂರಿಕೊಂಡಾವು ಎಚ್ಚರ. ಕುವೆಂಪು, ಬೇಂದ್ರೆ ಬರಹಗಳನ್ನೊಮ್ಮೆ ನೋಡಿ. ಅದೆಷ್ಟು ಅಚ್ಚಗನ್ನಡ ಪದಗಳು! ಜೊತೆ ಜೊತೆಗೇ "ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ" ಸಂಸ್ಕೃತ ಪದಗಳು. ಯಾವುದನ್ನೂ ಅತಿರೇಕಕ್ಕೆ ಕೊಂಡೊಯ್ಯಬೇಡಿ. ಜಗತ್ತಿನಲ್ಲಿ ತಲೆ ಕೆಡಿಸಕೊಳ್ಳಲಿಕ್ಕೆ / ಕೆಡಿಸಿಕೊಳ್ಳಲೇಬೇಕಾದಂಥ ಅನೇಕ ಸಂಗತಿಗಳಿವೆ. __ |
ಶಶಾಂಕ |
Reply ↓ ಕಿರಣ್ ಬಾಟ್ನಿ 04-08-2014 • 10:38 am ಶಶಾಂಕ ಅವರೇ, ನಿಮ್ಮ ಅನಿಸಿಕೆಗಾಗಿ ನನ್ನಿ. ನೀವು ಇಲ್ಲಿ ನಿಮಗೆ ಇಶ್ಟವೆನಿಸಿದ ರೀತಿಯ ಪದಗಳನ್ನು ಕಟ್ಟಲು ಮುಂದೆ ಬನ್ನಿ. ಅವುಗಳನ್ನು ಇಲ್ಲಿಯವರೆಗೆ ನಾವು ಕಟ್ಟುತ್ತಿರುವಶ್ಟು ವೇಗದಲ್ಲಿ ಏಕೆ ಕಟ್ಟಲಾಗಿಲ್ಲ ಎಂದು ಯೋಚಿಸಿಕೊಳ್ಳಿ. ಸಂಸ್ಕ್ರುತದ ಬಗ್ಗೆ ನಿಮ್ಮ ವಾದಗಳಿಗೆ ನಮ್ಮ ಉತ್ತರಗಳನ್ನು ಇಲ್ಲಿ ಮೊದಲೇ ಕೊಟ್ಟಾಗಿದೆ. ಅವುಗಳನ್ನು ಓದಿಕೊಳ್ಳಿ. ಹಿಡಿಸಿದರೆ ಒಳ್ಳೆಯದು, ಇಲ್ಲವಾದರೆ ಬಿಟ್ಟುಬಿಡಿ; ಪದ ಕಟ್ಟುವ ಕೆಲಸವನ್ನು ಮುಂದುವರೆಸಿ: ಅದು ಒಳ್ಳೆಯದೆಂದೇ ನಿಮ್ಮ ಅನಿಸಿಕೆಯಲ್ಲವೇ? ಇದಕ್ಕಿಂತ ದೊಡ್ಡ ಉತ್ತರವನ್ನು ಬರೆಯಲು ಪುರಸೊತ್ತಿಲ್ಲ, ದಯವಿಟ್ಟು ಮನ್ನಿಸಿ. |
'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್‌ಡಿಕೆ | Karnataka's New CM Kumaraswamy pressmeet in Vidhan Soudha - Kannada Oneindia |
30 min ago ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್ ಮೇಲೆ ಕಣ್ಣು |
43 min ago ಲಾಕ್‌ಡೌನ್ ತೆರವಿನ ಬಳಿಕ ಚೀನಾದಲ್ಲಿ ಎರಡನೇ ಹಂತದ ಕೊರೊನಾ! |
48 min ago ಮಂಡ್ಯದಲ್ಲಿ ಗಿಡದಲ್ಲೇ ಒಣಗಿ ಹೋಗುತ್ತಿದೆ ಲಕ್ಷಾಂತರ ಕ್ಯಾಪ್ಸಿಕಂ ಬೆಳೆ |
| Published: Wednesday, May 23, 2018, 19:53 [IST] |
ಬೆಂಗಳೂರು, ಮೇ 23: ಬಹುಮತ ಬರದಿದ್ದರೆ ವಿರೋಧಪಕ್ಷದಲ್ಲಿ ಕೂರುತ್ತೇನೆ ಎಂದಿದ್ದೆ ಆದರೆ ರಾಜಕೀಯದ ಸಾಂಧರ್ಭಿಕ ಶಿಶುವಾಗಿ ನಾನಿಂದು ಅಧಿಕಾರ ಹಿಡಿಯುವ ಅನಿರ್ವಾರ್ಯತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಹಿಂದಿರುವ ಕಾರಣ ಹೇಳಿದರು. |
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಹಿತ ದೃಷ್ಠಿಯಿಂದ ನಾನು ಮೈತ್ರಿಯ ನಿರ್ಣಯ ಕೈಗೊಳ್ಳಬೇಕಾಯಿತು, ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಹಲವು ರಾಷ್ಟ್ರ ನಾಯಕರು ಕರೆ ಮಾಡಿ ದೇಶದ ಹಿತದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು ನಾನು ಅದನ್ನು ಪಾಲಿಸಿದೆ ಎಂದು ಮೈತ್ರಿ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟರು. |
ಸರ್ಕಾರದ ಕಾರ್ಯಕ್ರಮಗಳು, ನೀತಿ ನಿರೂಪಣೆ, ಪ್ರಣಾಳಿಕೆ, ಸ್ಥರ ಸರ್ಕಾರ ನೀಡಲು ತೆಗೆದುಕೊಳ್ಳುವ ನಿರ್ಣಯಗಳು, ಜಲ ವಿವಾದಗಳು, ಬಿಜೆಪಿಯ ಆರೋಪಗಳು ಎಲ್ಲ ವಿಷಯಗಳ ಬಗ್ಗೆ ಕುಮಾರಸ್ವಾಮಿ ಮಾತನಾಡಿದರು. ನೂತನ ಮುಖ್ಯಮಂತ್ರಿಗಳ ಮಾತಿನ ವಿವರ ತಿಳಿಲು ಮುಂದೆ ಓದಿ.... |
ಮೋದಿ ಅಶ್ವಮೇಧ ಕಟ್ಟಿಹಾಕಿದ್ದೇವೆ |
ಸತತ ಗೆಲುವು ಸಾಧಿಸಿದ್ದ ಮೋದಿ ಅವರ ಅಶ್ವಮೇಧವನ್ನು ಕರ್ನಾಟಕದಲ್ಲಿ ಕಟ್ಟಿಹಾಕಿದ್ದೇವೆ, ಇಲ್ಲಿನಿಂದ ಅವರ ಪಥನ ಶುರುವಾಗುತ್ತದೆ ಎಂದ ಕುಮಾರಸ್ವಾಮಿ, ಅಮಿತ್ ಶಾ ಈಗ ಜೀವವಿಲ್ಲದ ಅಶ್ವಮೇಧದ ಕುದುರೆ ಇಟ್ಟುಕೊಂಡಿದ್ದಾರಷ್ಟೆ ಎಂದರು. |
ಸಾಲಮನ್ನಾದ ಬ್ಲೂಪ್ರಿಂಟ್ |
ನಾನು ಸಾಲಮನ್ನಾ ಮಾಡುವ ವಚನ ನೀಡಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನೊಬ್ಬನೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ, ಹಾಗೆಂದು ಸಾಲಮನ್ನಾ ಮಾಡಲಾರೆ ಎಂದು ಹೇಳಲಾರೆ, ಆರ್ಥಿಕ ತಜ್ಞರ ಜೊತೆ ಮಾತನಾಡುತ್ತಿದ್ದೇನೆ, ಸಾಲಮನ್ನಾದ ಬ್ಲೂಪ್ರಿಂಟ್ ತಯಾರಿದ್ದು ಅನುಷ್ಠಾನ ಮಾಡುತ್ತೇವೆ ಸಮಯದ ಅವಶ್ಯಕತೆ ಇದೆ ಎಂದರು. |
ದೇಶಕ್ಕೆ ಸಂದೇಶ ನೀಡಲು ಬಂದಿದ್ದ ನಾಯಕರು |
ಇಂದಿನ ಪ್ರಮಾಣ ವಚನಕ್ಕೆ ಪ್ರಾದೇಶಿಕ ಪಕ್ಷಗಳ ಮುಖಂಡರುಗಳು ಆಗಮಿಸಿದ್ದರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಅವರು ಕೇವಲ ನಮಗೆ ಶುಭ ಹಾರೈಸಲು ಬಂದಿರಲಿಲ್ಲ, ಕರ್ನಾಟಕದ ಮೂಲಕ ದೇಶಕ್ಕೆ ಒಂದು ಸಂದೇಶ ನೀಡಬೇಕಿತ್ತು ಹಾಗಾಗಿ ಬಂದಿದ್ದರು, ಅವರು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು. |
ಸಾಂಧರ್ಭಿಕ ಶಿಶು ನಾನು |
ಪ್ರಚಾರ ಸಮಯದಲ್ಲಿ ಬಹುಮತ ಬರದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇನೆ ಎಂದು ಹೇಳಿದ್ದೆ ಆದರೆ ನಾನು ಇಲ್ಲಿ 'ಸಾಂದರ್ಭಿಕ ಶಿಶು' ಆಗಿದ್ದೇನೆ ಎಂದರು. ರಾಷ್ಟ್ರ ಮಟ್ಟದ ಸಮಾನ ಮನಸ್ಕ ನಾಯಕರು ಫಲಿತಾಂಶ ಕೂಡಲೇ ಮೈತ್ರಿ ಸಲಹೆ ನೀಡಿದರು, ದೇಶವನ್ನು ಕಾಪಾಡುವ ದೃಷ್ಠಿಯಿಂದ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಹೋಗಿದ್ದೇನೆ ಎಂದು ಅವರು ಹೇಳಿದರು. |
ನನ್ನಿಂದಲೇ ಬಿಜೆಪಿಗೆ ಅಧಿಕಾರ ದೊರೆಯಿತು |
12 ವರ್ಷಗಳ ಹಿಂದೆ ನಾನೇ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಒಡೆದಿದ್ದೆ, ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ವಿಶ್ವಾಸ ಮೂಡುತ್ತದೆಯಾ? ಎಂಬ ಅನುಮಾನ ಜನರಲ್ಲಿದೆ. ಅತ್ಯಂತ ಸುಭದ್ರವಾದ ಸರ್ಕಾರವಾಗಿ ನಡೆಯುತ್ತದೆ, ಭಿನ್ನಾಬಿಪ್ರಾಯಗಳಿಗೆ ಅವಕಾಶ ಕೊಡದೆ, ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಲಿದೆ. ಆಗ ನಾನು ಮಾಡಿದ ಕಾರ್ಯದಿಂದಲೇ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು, ಬಿಜೆಪಿ ತಾನು ಬೆಳೆಯಲು ನನ್ನನ್ನು ಬಳಸಿಕೊಂಡಿತು ಎಂದರು ಕುಮಾರಸ್ವಾಮಿ. |
ಇಬ್ಬರು ಪ್ರಣಾಳಿಕೆಯೂ ಜಾರಿಗೆ |
ಕಾಂಗ್ರೆಸ್-ಜೆಡಿಎಸ್ ಇಬ್ಬರ ಪ್ರಣಾಳಿಕೆಯನ್ನೂ ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಈಗಾಗಲೇ ತಂದಿರುವ ಜನಪ್ರಿಯ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದರು. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮುಂದುವರೆಯುವ ಪೂರ್ಣ ಲಕ್ಷಣ ಇದೆ. |
ಮುಖ್ಯಮಂತ್ರಿ ಕಚೇರಿ ತೆರೆದ ಬಾಗಿಲು |
ಗ್ರಾಮ ವಾಸ್ಥವ್ಯ, ಜನತಾ ದರ್ಶನ ಮುಂದುವರೆಸುತ್ತೇನೆ ಎಂದು ನೂತನ ಮುಖ್ಯಮಂತ್ರಿಗಳು. ಮುಖ್ಯಮಂತ್ರಿ ಕಚೇರಿ ಬಾಗಿಲೂ ಸದಾ ತೆರೆದಿರುತ್ತದೆ, ಮಾಧ್ಯಮದವರಲ್ಲಿ ವಿಶೇಷ ಮನವಿ ಮಾಡಿದ ಕುಮಾರಸ್ವಾಮಿ ಅವರು ತಪ್ಪಿದ್ದರೆ ನೇರವಾಗಿ ಕಚೇರಿಗೆ ಬಂದು ಪ್ರಶ್ನಿಸಬಹುದು ಸಲಹೆ ನೀಡಬಹುದು ಎಂದರು. |
ಡಿ.ಕೆ.ಶಿವಕುಮಾರ್‌ಗೆ ಅಸಮಾಧಾನ ಇಲ್ಲ |
ಡಿ.ಕೆ.ಶಿವಕುಮಾರ್ ವಿಷಯದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಅವರಿಗೆ ಅಸಮಾಧಾನ ಎಂಬ ಸುದ್ದಿ ಸುಳ್ಳು ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲೇ ಇದ್ದರು ಎಂದರು. ಉಪಮುಖ್ಯಮಂತ್ರಿ ಪರಮೇಶ್ವರ್ ಬಗ್ಗೆ ಮಾತನಾಡಿದ ಅವರು, ಪರಮೇಶ್ವರ್ ನನ್ನ 10 ವರ್ಷದ ಗೆಳೆಯ. ಅವರಷ್ಟು 'ಅಡ್ಜೆಸ್ಟೆಬಲ್' ವ್ಯಕ್ತಿ ಯಾರೂ ಇಲ್ಲ, ಈಗಾಗಲೇ ನಾವು ಹಲವು ದಿನದಿಂದ ಚರ್ಚೆ ನಡೆಸಿದ್ದೇವೆ, ನಮ್ಮ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ ಎಂದರು. |
ಟೀಕೆ ಮಾಡುವ ಖಾವಿಧಾರಿಗಳು ರಾಜಕೀಯಕ್ಕೆ ಬರಲಿ |
ರಾಜಕೀಯ ಟೀಕೆಗಳನ್ನು ಮಾಡುವ ಸ್ವಾಮೀಜಿಗಳ ಬಗ್ಗೆ ತೀವ್ರ ಆಕ್ರೋಶ ಪ್ರಕಟಿಸಿದ ಮುಖ್ಯಮಂತ್ರಿಗಳು, ರಾಜಕೀಯವಾಗಿ ಟೀಕೆ ಮಾಡುವ ಖಾವಿಧಾರಿಗಳು ಮಠ ಬಿಟ್ಟು ಚುನಾವಣೆಗೆ ಬರಲಿ ಎಂದರು. ಸ್ವಾಮೀಜಿಗಳ ಕಾರ್ಯ ಟೀಕೆ ಮಾಡುವುದಲ್ಲ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವುದು ಎಂದು ಅವರು ಹೇಳಿದರು. |
ಮೋದಿ ಸುಳ್ಳು ಹೇಳಿ ಹೋಗಿದ್ದಾರೆ |
ಮೋದಿ ಅವರು ಚುನಾವಣೆ ನಂತರ ಮಹದಾಯಿ ವಿವಾದ ಬಗೆಹರಿಸುತ್ತೇನೆ ಎಂದಿದ್ದರು. ಇಲ್ಲಿಗೆ ಬಂದಿದ್ದಾಗ ಮಹದಾಯಿ ಬಗ್ಗೆ ಸುಳ್ಳು ಹೇಳಿದ್ದರು ಅವರ ಕೈಲಿ ಅಧಿಕಾರ ಇದ್ದಾಗ ಮಹದಾಯಿ ಬಗ್ಗೆ ಏನೂ ಮಾಡಲಿಲ್ಲ ಈಗ ಟ್ರಿಬ್ಯುನಲ್ ತೀರ್ಪು ಬರುವವರೆಗೆ ಕಾಯಲೇ ಬೇಕಾಗಿದೆ. ತೀರ್ಪು ಬಂದ ನಂತರ ಸರ್ಕಾರ ಏನು ಮಾಡಬೇಕಾಗುತ್ತದೆಯೋ ಅದನ್ನು ಮಾಡುತ್ತೇವೆ ಸರ್ಕಾರದ ನಿರ್ಣಯ ರೈತರ ಪರ ಇರುತ್ತದೆ ಎಂದನು. |
ವೀರಶೈವ-ಲಿಂಗಾಯತದ ಬಗ್ಗೆ ಮಾತನಾಡಲಿಲ್ಲ |
ಲಿಂಗಾಯತ-ವೀರಶೈವ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನೂತನ ಮುಖ್ಯಮಂತ್ರಿ, ವೀ-ಲಿಂಗಾಯತ ವಿವಾದಕ್ಕಿಂತಲೂ ದೊಡ್ಡ ಸಮಸ್ಯೆ ನನ್ನ ಮುಂದಿದೆ, ಜನರ ಸಮಸ್ಯೆಯೇ ನನಗೆ ದೊಡ್ಡದು ಎಂದು ಜಾಣ್ಮೆಯ ಉತ್ತರ ನೀಡಿದರು. ಎರಡೂ ಕಡೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ ಎಂದರು. |
ರಾಹುಲ್, ಸೋನಿಯಾಗೆ ಧನ್ಯವಾದ |
ತಮಗೆ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಗುಲಾಂ ಸಬಿ ಆಜಾದ್ ಅವರಿಗೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರಾದ ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದ ಹೇಳಿದರು. |
karnataka hd kumaraswamy jds congress politics narendra modi karnataka assembly elections 2018 |
CM Kumaraswamy said i'm a 'Occasional child' of politics. He said many national leaders advised me to go with congress for country sake so i made this decision. |
ಶ್ವಾನ ಚಟುವಟಿಕೆ ಉದ್ಯಾನವನಕ್ಕೆ ಭಾಸ್ಕರ್‌ರಾವ್ ಚಾಲನೆ – EESANJE / ಈ ಸಂಜೆ |
May 26, 2020 Sunil Kumar Bengaluru: City Police Commissioner inaugurates Dog activity Park at City Armed Reserve #Gallery, Bhaskar Rao IPS, CCB Police, dog activity, Police Dog |
ಬೆಂಗಳೂರು, ಮೇ 26-ರಾಜ್ಯ ಶಿಸ್ತು ಹಾಗೂ ಸುರಕ್ಷಿತವಾಗಿ ಇರುವಲ್ಲಿ ಪೊಲೀಸ್ ಇಲಾಖೆಯ ಶ್ವಾನಗಳ ಪಾತ್ರ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ನಗರದ ಆಡುಗೋಡಿಯ ಸಿಎಆರ್ ಕೇಂದ್ರದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದು ಉದ್ಘಾಟಿಸಿದರು. |
ಈ ಶ್ವಾನ ಚಟುವಟಿಕೆಯ ಪಾರ್ಕ್ ನಿರ್ಮಾಣಕ್ಕೆ ಹ್ಯಾಂಡ್ಲರ್‍ಗಳಾದ ಅಶೋಕ್ ರಾಥೋಡ್, ಜಿತೇಂದರ್ ರಾಥೋಡ್, ರವಿ ಬಳೂದ್, ರವಿ ಬಂಡಾರಿ ಸೇರಿದಂತೆ ಮತ್ತಿತರರು ಹೊಸ ತರಬೇತಿ ವಿಧಾನಗಳನ್ನು ಕಲಿತುಕೊಂಡು ಅಪಾರ ಕೊಡುಗೆ ನೀಡಿದ್ದಾರೆ. |
1968 ನೇ ಇಸವಿಯಲ್ಲಿ ಡಿವೈಎಸ್ಪಿ ವಿಲಿಯಮ್ಸ್ ಎಂಬುವರು ಪ್ರಾರಂಭಿಸಿದ ಶ್ವಾನ ಇಲಾಖೆ, ಸಿಎಆರ್ ಸೌತ್ ಬೆಂಗಳೂರು ಕರ್ನಾಟಕ ಪೆÇಲೀಸ್ ಅಡಿಯಲ್ಲಿ ಇಂದು 60 ಕ್ಕೂ ಹೆಚ್ಚು ಮಾದಕ ಹಾಗೂ ಸ್ಪೋಟಕ ವಸ್ತುಗಳನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದೆ. ಕ್ರೈಂ ಐಡೆಂಟಿಫಿಕೇಷನ್ ಹಾಗೂ ಇತರ ಡಿಸಿಪ್ಲಿನ್‍ಗಳನ್ನು ಶ್ವಾನಗಳು ಚೆನ್ನಾಗಿ ಕಲಿತು ನಮ್ಮ ರಾಜ್ಯ ಶಿಸ್ತು ಹಾಗೂ ಸುರಕ್ಷತೆಯಿಂದಿರಲು ಪ್ರಮುಖ ಪಾತ್ರ ವಹಿಸಿವೆ. |
ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಟಿ ಸುನೀಲ್ ಕುಮಾರ್ ಅವರು ಶ್ವಾನ ಮನೋ ವೈದ್ಯರಾದ ಡಾಗ್ ಗುರು ಅಮೃತ್ ಅವರನ್ನು ನೇಮಕ ಮಾಡಿದ್ದರು. ಇದರಿಂದ ಶ್ವಾನಗಳಿಗೆ ಆಟ, ಊಟದ ತರಬೇತಿ ಕೊಟ್ಟು ಪಾಸಿಟಿವ್ ರಿ ಇನ್ಪೋರ್ಸ್‍ಮೆಂಟ್ ಎಂಬ ಶೈಲಿಯ ತರಬೇತಿಯಲ್ಲಿ ಶ್ವಾನಗಳಿಗೆ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಿಂದ ತರಬೇತಿ ನೀಡಲು ಸಾಧ್ಯವಾಗಿದೆ. |
ಡಿಸಿಪಿ ಯೋಗೇಶ್ ಹಾಗೂ ಅಮೇರಿಕಾನಲ್ಲಿ ತರಬೇತಿ ಹೊಂದಿ ಬಂದಿರುವ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರು ಈಗಿನ ಶ್ವಾನದಳವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದಂತೆ ಎಲ್ಲಾ ರೀತಿಯಲ್ಲೂ ಉನ್ನತೀಕರಣಗೊಳಿಸುತ್ತಿದ್ದಾರೆ. ಬೆಲ್ಜಿಯಂ ಶೆಪರ್ಡ್ ಎಂಬ ಒಂದು ತಳಿ ಪ್ರಪಂಚದ ಅತಿ ಬುದ್ದಿವಂತ ಪೊಲೀಸ್ ನಾಯಿ ಎಂದು ಹೆಸರು ಪಡೆದಿದೆ. ಒಸಾಮ ಬಿನ್ ಲಾಡೇನ್ ಹಾಗೂ ಹಲವಾರು ಪ್ರಪಂಚ ಪ್ರಸಿದ್ದಿ ಉಳ್ಳ ಭಯೋತ್ಪಾದಕರನ್ನು ಕಂಡು ಹಿಡಿದು ಮಟ್ಟ ಹಾಕಲು ಸಹಾಯ ಮಾಡಿದ್ದುಂಟು. |
Subsets and Splits
No community queries yet
The top public SQL queries from the community will appear here once available.