text stringlengths 0 61.5k |
|---|
16 min ago ಪಶ್ಚಿಮ ಬಂಗಾಳದಲ್ಲಿ 4 ಹಂತ ಸೇರಿಸಿ ಒಂದೇ ದಿನ ಚುನಾವಣೆ ನಡೆಸುವ ಚಿಂತನೆ ಇಲ್ಲ: ಚುನಾವಣಾ ಆಯೋಗ |
hd kumaraswamy jds maski basavakalyan basavakalyana ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಮಸ್ಕಿ ಬಸವಕಲ್ಯಾಣ politics |
| Published: Monday, November 23, 2020, 12:50 [IST] |
ಬೆಂಗಳೂರು, ನ 23: ಜೆಡಿಎಸ್ ಭದ್ರಕೋಟೆಯಾಗಿದ್ದ ಶಿರಾ ಮತ್ತು ಒಕ್ಕಲಿಗ ಮತಬ್ಯಾಂಕ್ ನಿರ್ಣಾಯಕವಾಗಿರುವ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಸೋತ ನಂತರ, ಮುಂಬರುವ ಎರಡು ಕ್ಷೇತ್ರದ ಅಸೆಂಬ್ಲಿ ಉಪಚುನಾವಣೆಯಲ್ಲಿ ಎಚ್ಚರಿಕೆಯ ನಡೆಯಿಡಲು ಪಕ್ಷ ನಿರ್ಧರಿಸಿದೆ. |
ಎರಡು ಕಡೆ ಅದರಲ್ಲೂ ಆರ್.ಆರ್.ನಗರದಲ್ಲಿ ಜೆಡಿಎಸ್ ಠೇವಣಿಯನ್ನು ಕಳೆದುಕೊಂಡಿತ್ತು. ಸೋಲಿನಿಂದಾಗುವ ಸಂಘಟನಾತ್ಮಕ ಹಿನ್ನಡೆಯನ್ನು ಗಮನದಲ್ಲಿ ಇಟ್ಟುಕೊಂಡು, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸದೇ ಇರಲು ನಿರ್ಧರಿಸಿದೆ. |
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ಮಂಡ್ಯ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಸೋಲಿನ ನಂತರ ನಮ್ಮ ಮುಂದೆ ದೊಡ್ಡ ಸವಾಲು ಇದೆ. ನಾವೀಗ, ಪಕ್ಷ ಸಂಘಟನೆಯ ವಿಚಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದೇವೆ"ಎಂದು ಎಚ್ಡಿಕೆ ಹೇಳಿದ್ದಾರೆ. |
"ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಸ್ಪರ್ಧಿಸದೇ ಇರುವುದೇ ಉತ್ತಮ ಎನ್ನುವ ನಿರ್ಣಯಕ್ಕೆ ಬಂದಿದ್ದೇವೆ. ಆದರೆ, ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಚರ್ಚಿಸಿ, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ. |
"ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷ ಬಲವೃದ್ದನೆಯ ಕೆಲಸ ನಡೆಯಬೇಕಿದೆ. ಈ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದು ವ್ಯರ್ಥ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಡ ಎಂದು ನಿರ್ಧರಿಸಿದ್ದೇವೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ. |
ಶಾಲಾ ಕಾಲೇಜು ತೆರೆಯುವ ಬಗ್ಗೆ ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯ ಬಗ್ಗೆ ಪ್ರಸ್ತಾವಿಸಿದ ಕುಮಾರಸ್ವಾಮಿ, "ಮುಂದಿನ 2 ತಿಂಗಳು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ, ಸರ್ಕಾರ ಜನರ ಮತ್ತು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಬಾರದು"ಎನ್ನುವ ಎಚ್ಚರಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. |
ದಲಾಯಿ ಲಾಮಾಗೆ ಚಿತ್ರದುರ್ಗ ಮುರುಘಾಮಠದ ಬಸವಶ್ರೀ ಪ್ರಶಸ್ತಿ | ThatsKannada.com - Dalai Lama will be honored with Basavashree Award - Kannada Oneindia |
ದಲಾಯಿ ಲಾಮಾಗೆ ಚಿತ್ರದುರ್ಗ ಮುರುಘಾಮಠದ ಬಸವಶ್ರೀ ಪ್ರಶಸ್ತಿ |
ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರತಿವರ್ಷ ನೀಡುವ ಬಸವಶ್ರೀ ಪ್ರಶಸ್ತಿಗೆ ಈ ಬಾರಿ ಟಿಬೆಟ್ ಧರ್ಮಗುರು ದಲಾಯಿ ಲಾಮಾ ಅವರನ್ನು ಆಯ್ಕೆ ಮಾಡಲಾಗಿದೆ. |
ಪರಿಸರ ಪ್ರೇಮಿ, ಬೌದ್ಧ ಸನ್ಯಾಸಿ ಹಾಗೂ 14ನೇ ದಲಾಯಿ ಲಾಮಾ, ಟೆಂಜಿನ್ ಗ್ಯಾತ್ಸೋ ಅವರು ಬಸವಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಾಗಿ ಮುರುಘಾಮಠದ ಪ್ರಕಟಣೆ ತಿಳಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಫಲಕವನ್ನೊಳಗೊಂಡಿರುತ್ತದೆ. |
1950ರಿಂದ ದೇಶಭ್ರಷ್ಟರಾಗಿ ತಮ್ಮ ಲಕ್ಷಗಟ್ಟಲೆ ಅನುಯಾಯಿಗಳೊಂದಿಗೆ ಟಿಬೆಟ್ ಬಿಟ್ಟು ಹೊರಹೋದ ಲಾಮಾ ಅವರು 33 ದೇಶಗಳಲ್ಲಿ ಚದುರಿ ಹೋಗಿದ್ದ ದೇಶಪ್ರೇಮಿ ಜನರನ್ನು ಒಗ್ಗೂಡಿಸಲು ಶ್ರಮಿಸಿದವರು. ನಂತರ ಅನಿವಾಸಿ ಟಿಬೆಟ್ ಸರಕಾರ ರಚಿಸಿ ಅದರ ನೇತೃತ್ವವನ್ನು ವಹಿಸಿ ಬೌದ್ಧ ತತ್ವವನ್ನು ಪಾಲಿಸುತ್ತಿದ್ದಾರೆ. |
2002 ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭ, ಸೆಪ್ಟೆಂಬರ್ ಐದರಂದು ಚಿತ್ರದುರ್ಗ ಮಠದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಹಾಗೂ ಶರಣರ ಸ್ಮರಣೋತ್ಸವ ಕಾರ್ಯಕ್ರಮಗಳೂ ನಡೆಯಲಿವೆ. |
ಡಿಕೆಶಿ ಕೆಟ್ಟ ರಾಜಕಾರಣ ಮಾಡುವುದು ಸರಿಯಲ್ಲ: ಸಚಿವ ಈಶ್ವರಪ್ಪ | Kannadamma |
Home ಬೆಳಗಾವಿ ಡಿಕೆಶಿ ಕೆಟ್ಟ ರಾಜಕಾರಣ ಮಾಡುವುದು ಸರಿಯಲ್ಲ: ಸಚಿವ ಈಶ್ವರಪ್ಪ |
ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಆತ್ಮಹತ್ಯೆ ಯತ್ನದ ಹಿಂದೆ ಬಿಜೆಪಿ ನಾಯಕರ ಕೈವಾಡವೇ ಕಾರಣ ಎಂದಿರುವ ಡಿ.ಕೆ.ಶಿವಕುಮಾರ ಹೇಳಿಕೆಗೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಪ್ರತ್ಯುತ್ತರ ನೀಡಿದರು. |
ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರು. ಅವರು ಆರೋಪ ಮಾಡಲು ಅಧಿಕಾರ ಇದೆ. ಅದಕ್ಕೆ ನಾವು ಪ್ರಶ್ನಿಸುವುದಿಲ್ಲ. ಹೈಕಮಾಂಡ್ ಗೆ ಏನೋ ಲೀಕ್ ಆಗಿದೆ ಅಂತಿದ್ದಾರೆ. ಅವರ ಹತ್ತಿರ ಇರಬೇಕಲ್ಲ ಎಂದು ಪ್ರಶ್ನಿಸಿದ ಅವರು, ಏನೋ ಲೀಕ್ ಆಗಿದೆ ಎಂದು ರಾಜದ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. |
ಕಾಂಗ್ರೆಸ್ ನವರಿಗೆ ಹತಾಶೆ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ಎಲ್ಲ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಹತಾಶೆ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಎರಡು ಬಣ ಆಗಿವೆ. ಅದೇನೋ ಲೀಕ್ ಆಗಿದೆ ಅಂತಾರಲ್ಲ. ಅದೇನಾದರೂ ನಿಮ್ಮ ಕಡೆ ಕಾಫಿ ಇದ್ದರೆ ಅದನ್ನು ಬಹಿರಂಗ ಮಾಡಿ ಎಂದು ಡಿಕೆಶಿಗೆ ಸವಾಲ್ ಹಾಕಿದರು. |
ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿ ಹೋಗಿದೆ. ಅದ್ಯಾವ ವಿಡಿಯೋ ಇದೆಯೋ ಅದನ್ನು ಡಿಕೆಶಿ ಬಹಿರಂಗ ಪಡಿಸಲಿ. ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಇಲ್ಲದ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. |
ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ | Axis Bank denies media report of threat to its banking licence - Kannada Oneindia |
» ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ |
Updated: Monday, December 12, 2016, 20:17 [IST] |
ಮುಂಬೈ, ಡಿಸೆಂಬರ್ 12: ಆಕ್ಸಿಸ್ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಲು ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸಿದೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯು ಸುಳ್ಳು ಹಾಗೂ ದುರುದ್ದೇಶಪೂರಿತವಾದದ್ದು, ಬ್ಯಾಂಕ್ ನಲ್ಲಿ ಎಲ್ಲವೂ ಹತೋಟಿಯಲ್ಲಿದೆ. ರಿಸರ್ವ್ ಬ್ಯಾಂಕ್ ನ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ನಲ್ಲಿ ಸೋಮವಾರ ಸಂಜೆ ವರದಿ ಮಾಡಿದೆ. |
ಆಕ್ಸಿಸ್ ಬ್ಯಾಂಕ್ ಭಾರತದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್. ಸರಕಾರದ ಹಣ ಬದಲಾವಣೆ ನಿಯಮವನ್ನು ಮುರಿದ ಕಾರಣಕ್ಕಾಗಿ ಕಳೆದ ವಾರ ಆಕ್ಸಿಸ್ ಬ್ಯಾಂಕ್ ಶಾಖೆಯೊಂದರಲ್ಲಿ ಹತ್ತೊಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿತ್ತು. ಶನಿವಾರ ದೋ ಪಹಾರ್ ಹಿಂದಿ ಪತ್ರಿಕೆಯಲ್ಲಿ ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಆಗುತ್ತದೆ ಎಂದು ವರದಿಯಾಗಿತ್ತು. ಅದಕ್ಕೆ ಬ್ಯಾಂಕ್ ಪ್ರತಿಕ್ರಿಯೆ ನೀಡಿದೆ.[ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!] |
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ, ಬ್ಯಾಂಕ್ ಉದ್ಯೋಗಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕಾರಣಕ್ಕೆ ಇಂಥ ಸುದ್ದಿ ಹಬ್ಬಿಸಲಾಗುತ್ತದೆ. ಮತ್ತು ಬ್ಯಾಂಕ್ ನ ಹೆಸರು ಕೆಡಿಸುವ ಉದ್ದೇಶ ಇದೆ ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಲಾಗಿದೆ. ಸೋಮವರ ಮಧ್ಯಾಹ್ನದ ಅವಧಿಯಲ್ಲಿ ಶೇ 2.5ರಷ್ಟು ಇಳಿದ ಆಕ್ಸಿಸ್ ಬ್ಯಾಂಕ್ ಷೇರುಗಳು 445ಕ್ಕೆ ಕುಸಿಯಿತು.[ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ] |
axis bank, rbi, demonetisation, india, mumbai, ಆಕ್ಸಿಸ್ ಬ್ಯಾಂಕ್, ಆರ್ ಬಿಐ, ಅಪನಗದೀಕರಣ, ಭಾರತ, ಮುಂಬೈ |
Axis Bank on Monday slammed a regional newspaper report stating authorities were preparing to revoke the bank's licence as "false and malafide", saying it had strong systems and controls in place as per central bank rules. |
ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ | Kannada Dunia | Kannada News | Karnataka News | India News |
HomeLive NewsInternationalಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ |
ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ |
09-07-2017 10:09AM IST / No Comments / Posted In: Latest News, International |
ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. ನಂತರ ಸಲಿಂಗಿಯಾಗಲು ಚಿಕಿತ್ಸೆ ಪಡೆದಿದ್ದ. ಮೂರು ವರ್ಷಗಳ ಕಾಲ ಪುರುಷನಾಗಿದ್ದ. |
ಮಗುವನ್ನು ಹೊಂದಬೇಕೆಂಬ ಆಸೆಯಿಂದ ಸಲಿಂಗ ಹಾರ್ಮೋನ್ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ. ಫೇಸ್ಬುಕ್ ಮೂಲಕ ಭೇಟಿಯಾದ ದಾನಿಯೊಬ್ಬನ ವೀರ್ಯದ ಮೂಲಕ ಹೇಡಿನ್ ಗರ್ಭ ಧರಿಸಿದ್ದ. ಕಳೆದ ಜನವರಿಯಲ್ಲೇ ತಾನು ಗರ್ಭ ಧರಿಸಿರೋದಾಗಿ ಪ್ರಕಟಿಸಿದ್ದ. |
ಈಗ ಜನಿಸಿರೋ ಹೆಣ್ಣು ಮಗುವಿಗೆ ಟ್ರಿನಿಟಿ ಅಂತಾ ಹೆಸರಿಟ್ಟಿದ್ದಾನೆ. ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿದ್ದಾನೆ, ಆದ್ರೆ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ. ತನ್ನ ಎಗ್ ಅನ್ನು ಫ್ರೀಝ್ ಮಾಡಿಟ್ಟು ಭವಿಷ್ಯದಲ್ಲಿ ಮಗು ಹೊಂದಬೇಕೆಂಬುದು ಅವನ ಆಸೆಯಾಗಿತ್ತು. |
ಆದ್ರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಆ ಪ್ರಕ್ರಿಯೆಗೆ ಒಪ್ಪಲಿಲ್ಲ. ಖಾಸಗಿಯಲ್ಲಿ ಮಾಡಿಸಲು ಹಣವಿಲ್ಲದ ಕಾರಣ ಈಗಲೇ ಮಗುವನ್ನು ಹೊಂದಲು ಕ್ರಾಸ್ ನಿರ್ಧರಿಸಿದ್ದ. ಮತ್ತೆ ಲಿಂಗ ರೂಪಾಂತರ ಚಿಕಿತ್ಸೆಯನ್ನು ಮುಂದುವರಿಸಲು ಕ್ರಾಸ್ ತೀರ್ಮಾನಿಸಿದ್ದಾನೆ. ಬ್ರಿಟನ್ ನಲ್ಲಿ ಸಲಿಂಗಿಗೆ ಮಗು ಜನಿಸಿರೋದು ಇದೇ ಮೊದಲು ಎನ್ನಲಾಗ್ತಿದೆ. |
ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್ | Kannada actor Pratham slams to sruthi hariharan fan in social media - Kannada Filmibeat |
54 min ago ಶಂಕರ್ ನಾಗ್ ಗೆ 'ಕೋತಿ' ಎಂದಿದ್ದ ಆ ಬಜಾರಿ ನಟಿ ಯಾರು.? |
| Updated: Thursday, July 18, 2019, 14:45 [IST] |
ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್ | Filmieat Kannada |
ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರಿಹನ್ ಇತ್ತೀಚಿಗಷ್ಟೆ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮೀ ಟೂ ಅಭಿನಯದ ನಂತರ ಶ್ರುತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಶ್ರುತಿ ಬಳಿ ಯಾವುದೆ ಸಿನಿಮಾಗಳಿಲ್ಲ. ಹಾಗಾಗಿ ಶ್ರುತಿ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. |
ಆದ್ರೀಗ ತಿಂಗಳುಗಳ ಬಳಿಕ ಶ್ರುತಿ ಗುಡ್ ನ್ಯೂಸ್ ಜೊತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯ ಖುಷಿಯಲ್ಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ ಶ್ರುತಿ ಈ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ. |
ಕೆಟ್ಟಕೆಟ್ಟದಾಗಿ ಕಮೆಂಟ್ ಗಳು ಹರಿದು ಬರುತ್ತಿರುವುದುನ್ನು ನೋಡಿ ನಟ ಪ್ರಥಮ್ ರೊಚ್ಚಿಗೆದ್ದಿದ್ದಾರೆ. ನೆಟ್ಟಿಗರ ಕೆಳ ಮಟ್ಟದ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಥಮ್ "ಮುಖ್ಯವಾದ ವಿಷಯ. ಸಾಮಾನ್ಯವಾಗಿ ನಾನು ಯಾರ ಪ್ರೊಫೈಲ್ ನಲ್ಲು ಕಮೆಂಟ್ ಮಾಡಲ್ಲ. ನಿಮ್ಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ರೂ ಇಟ್ಕೊಳಿ, ನಿಮ್ಮಿಷ್ಟ.ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವಾ? ಗುರು ಆ ಮಗುವಿನ character certificate ಕೊಡೋಕೆ ನೀವೆಲ್ಲ ಯಾರಪ್ಪ?" ಎಂದು ಖಾರವಾಗಿ ಹೇಳಿದ್ದಾರೆ. |
"ಮುಖ್ಯವಾದ ವಿಚಾರ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿ. ಪ್ರಪಂಚನೇ ನೋಡದೇ ಇರೋ ಮಗು ಬಗ್ಗೆ ಯಾಕ್ರೋ ಪಾಪದ ಮಾತಾಡ್ತೀರಾ? ನೆನಪಿರಲಿ..ನಿಮ್ಮಿಷ್ಟ ನಿಮ್ಮ ಲೈಫು. ಆದ್ರೆ ಇನ್ನು ಹುಟ್ಟದೇ ಇರೋ ಮಗುಗೆ character certificate ಬೇಡ. ಅವ್ರ ಲೈಫು ಅವ್ರಿಷ್ಟ. ಯಾರನ್ನೂ ಮುಜಗರ ಮಾಡ್ಬೇಡಿ. ಇದರ ಬಗ್ಗೆ ಯಾರು ಮಾತಾಡ್ಲಿಲ್ಲ. ನಾನು ಮಾತಾಡಿದೆ" ಎಂದು ನೆಟ್ಟಿಗರ ವಿರುದ್ಧ ರೊಚ್ಚಿಗೊದ್ದಿದ್ದಾರೆ ಪ್ರಥಮ್. |
ಪ್ರಥಮ್ ನೀಡಿರುವ ಪ್ರತಿಕ್ರಿಯೆಗೆ ಶ್ರುತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಹೇಳಿಕೆಯನ್ನು ಪ್ರಶಂಸಿಸುತ್ತೇನೆ ಎಂದು ಶ್ರುತಿ ಪ್ರಥಮ್ ಗೆ ಹೇಳಿದ್ದಾರೆ. ಶ್ರುತಿ ಹಾಕಿರುವ ಫೋಸ್ಟ್ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ತೀರ ಕೆಳಮಟ್ಟದ ಕಮೆಂಟ್ಸ್ ಗಳು ಹರಿದುಬರುತ್ತಿವೆ. ಅಲ್ಲದೆ ಶ್ರುತಿ ಪೋಸ್ಟ್ ಅನ್ನು ಅರ್ಜುನ್ ಸರ್ಜಾ ಅವರಿಗೆ ಟ್ಯಾಗ್ ಮಾಡಿ ವಿಕ್ರುತಿ ಮೆರೆಯುತ್ತಿದ್ದಾರೆ. |
Read more about: pratham sruthi hariharan ಪ್ರಥಮ್ ಶ್ರುತಿ ಹರಿಹರನ್ |
Kannada actor Pratham slams to Sruthi Hariharan fan in social media. Fans are trolling the shruti pregnant news. |
ಸಂದೇಶ ಮರೆತು ಸಂದೇಶವಾಹಕರ ಬೆನ್ನತ್ತಿರುವ ಪೊಲೀಸರು | Prajavani |
ಸಂದೇಶ ಮರೆತು ಸಂದೇಶವಾಹಕರ ಬೆನ್ನತ್ತಿರುವ ಪೊಲೀಸರು |
ದಿನೇಶ್ ಅಮೀನ್ ಮಟ್ಟು Updated: 30 ಜುಲೈ 2012, 01:00 IST |
`ನಗರದಲ್ಲಿ ನಡೆಯುವ ಅಪರಾಧಗಳ ಮಾಹಿತಿ ನಮಗೆ ಗೊತ್ತಾಗದೆ ಪತ್ರಕರ್ತರಿಗೆ ಹೇಗೆ ಗೊತ್ತಾಗುತ್ತದೆ?~ ಎಂದು ಯಾರಾದರೂ ಪೊಲೀಸರು ಕೇಳಿದರೆ ಅವರು ತಮಗೆ ಗೊತ್ತಿಲ್ಲದೆಯೇ ತಾವು ಅದಕ್ಷರೆಂದು ಒಪ್ಪಿಕೊಂಡ ಹಾಗೆ. ಈಗ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್‌ಸಿಂಗ್ ಈ ಪ್ರಶ್ನೆ ಕೇಳಿದ್ದಾರೆ. ಅಷ್ಟು ಮಾತ್ರವಲ್ಲ ಕಳೆದ ಶನಿವಾರ ಪಡೀಲ್‌ನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಹುಡುಗಿಯರೂ ಸೇರಿದಂತೆ ಹನ್ನೆರಡು ಮಂದಿ ನಿರಪರಾಧಿಗಳ ಮೇಲೆ ಹಲ್ಲೆ ನಡೆಸಿದ ಪಾಶವೀ ಕೃತ್ಯವನ್ನು ಚಿತ್ರೀಕರಿಸಿಕೊಂಡ ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. |
ಸಂದೇಶವನ್ನು ಪಕ್ಕಕ್ಕಿಟ್ಟು ಸಂದೇಶವಾಹಕರ ತಲೆಗೆ ಬಂದೂಕು ಇಡುವುದು ಪೊಲೀಸರ ಹಳೆಯ ಚಾಳಿ. ಅರಣ್ಯದಲ್ಲಿಯೇ ಹೋಗಿ ಟೆಂಟ್‌ಹಾಕಿದ್ದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾವಿರಾರು ಪೊಲೀಸರ ಕಣ್ಣಿಗೆ ಬೀಳದ ಪಾತಕಿ ವೀರಪ್ಪನ್‌ನನ್ನು ತಮಿಳುನಾಡಿನ `ನಕ್ಕೀರನ್~ಪತ್ರಿಕೆಯ ಸಂಪಾದಕ ಸಲೀಸಾಗಿ ಅತ್ತೆಮನೆಯಂತೆ ಹೋಗಿ ಸಂದರ್ಶನ ಮಾಡಿಬರುತ್ತಿದ್ದರು. ಆಗಲೂ ಪೊಲೀಸರು ಈ ಪ್ರಶ್ನೆ ಕೇಳಿದ್ದರು. |
ಪತ್ರಕರ್ತರೆಲ್ಲರೂ ಸಂಭಾವಿತರಿರಲಾರರು, ಟಿಆರ್‌ಪಿಗಾಗಿ ಕಿಡಿಗೇಡಿತನ ಮಾಡುತ್ತಿರುವ ಟಿವಿ ಚಾನೆಲ್‌ಗಳು ಅತಿರಂಜನೆ, ರೋಚಕತೆಯ ಬೆನ್ನುಹತ್ತಿ ಪತ್ರಿಕಾವೃತ್ತಿಯ ಮೂಲವ್ಯಾಖ್ಯೆಯನ್ನೇ ಬದಲಿಸಲು ಹೊರಟಿರುವುದೂ ನಿಜ. ಆದರೆ ಪೊಲೀಸರು ತಮ್ಮ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಪತ್ರಕರ್ತರ `ಅಧಿಕಪ್ರಸಂಗ~ವನ್ನು ಗುರಾಣಿಯಾಗಿ ಬಳಸುತ್ತಿರುವುದು ಅಕ್ಷಮ್ಯ. ಮಂಗಳೂರು ನಗರದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿರುವುದು ಹೆಚ್ಚು ಪೊಲೀಸರೋ, ಪತ್ರಕರ್ತರೋ? ಅಲ್ಲಿನ ನಗರ ವ್ಯಾಪ್ತಿಯಲ್ಲಿ ಕನಿಷ್ಠ 25 ಪೊಲೀಸ್‌ಠಾಣೆಗಳಿರಬಹುದು, ಒಂದೊಂದು ಠಾಣೆಯಲ್ಲಿ ಕನಿಷ್ಠ 50 ಸಿಬ್ಬಂದಿ ಇರಬಹುದು. ಅಂದರೆ ಅಂದಾಜು 1250 ಪೊಲೀಸರಿದ್ದಾರೆ. ನಗರದಲ್ಲಿರುವ ಹಿರಿಯ-ಕಿರಿಯ ವರದಿಗಾರರನ್ನು ಒಟ್ಟು ಸೇರಿಸಿದರೂ ಸಂಖ್ಯೆ 50 ದಾಟಲಾರದು. ಈ 50 ಪತ್ರಕರ್ತರಿಗೆ ಅಪರಾಧಿ ಕೃತ್ಯಗಳು ತಕ್ಷಣ ಗೊತ್ತಾಗುವುದಿದ್ದರೆ, ಮೊಬೈಲ್, ವಾಕಿಟಾಕಿ, ಕಾರು-ಜೀಪು ಮತ್ತು ಶಸ್ತ್ರಾಸ್ತ್ರಗಳ ಜತೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿಯೇ ಇರುವ ಗುಪ್ತಚರ ವಿಭಾಗವನ್ನೂ ಹೊಂದಿರುವ 1250 ಸಿಬ್ಬಂದಿ ಸಾಮರ್ಥ್ಯದ ಪೊಲೀಸರಿಗೆ ಯಾಕೆ ಗೊತ್ತಾಗುತ್ತಿಲ್ಲ? |
ಪೊಲೀಸರು ಪತ್ರಕರ್ತರ ಮೇಲೆ ಹೊರಿಸುತ್ತಿರುವ ಆರೋಪ ಆತ್ಮರಕ್ಷಣೆಯ ಹತಾಶ ಪ್ರಯತ್ನ ಅಷ್ಟೆ. ವಾಸ್ತವ ಸಂಗತಿ ಏನೆಂದರೆ ದಕ್ಷಿಣಕನ್ನಡದಲ್ಲಿ ಪೊಲೀಸ್ ಇಲಾಖೆಯೇ ಇಲ್ಲ. ಯಾಕೆಂದರೆ ಅಲ್ಲಿ ಆಡಳಿತಾರೂಢ ಪಕ್ಷ ಮತ್ತು ಸಂಘ ಪರಿವಾರದ ನಾಯಕರ ಮಧ್ಯಪ್ರವೇಶದಿಂದಾಗಿ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡುವ ಪೊಲೀಸರಿಗೆ ಜಾಗವೇ ಇಲ್ಲದಂತಾಗಿದೆ. ಈಗ ಸಿಬಿಐಗೆ ವರ್ಗಾವಣೆಯಾಗಿರುವ ಸುಬ್ರಹ್ಮಣ್ಯೇಶ್ವರ ರಾವ್ ಎಂಬುವವರು ಸುಮಾರು ಎರಡೂವರೆ ವರ್ಷಗಳ ಕಾಲ ದಕ್ಷಿಣಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ಕಾಲದಲ್ಲಿ ಹಿಂದೂ ಸಂಸ್ಕೃತಿಯ `ಮಾನ ಉಳಿಸುವ~ ಹಾವಳಿ ಕಡಿಮೆ ಇತ್ತು. ಆದರೆ ಅವರಿಗೆ ಬಹಳ ದಿನ ಅಲ್ಲಿ ಉಳಿಯಲು ಆಗಲಿಲ್ಲ. ಸಂಘ ಪರಿವಾರದ ಸದಸ್ಯರ ವಿರುದ್ಧ ಕ್ರಮ ಕೈಗೊಂಡ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಯ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಆಡಳಿತಾರೂಢ ಪಕ್ಷಕ್ಕೆ ಸೇರಿದ ಸ್ಥಳೀಯ ರಾಜಕಾರಣಿಗಳ ಕಣ್ಣುಕೆಂಪಾಯಿತು. ಕೊನೆಗೆ ಅವರ ವರ್ಗಾವಣೆಯಾಯಿತು. ಈಗ ಹಿಂದೂ ಹುಡುಗಿಯ ಜತೆ ಮಾತನಾಡುತ್ತಿರುವ ಮುಸ್ಲಿಮ್ ಹುಡುಗರನ್ನು ಬೇಟೆಯಾಡುವ ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಿದೆ. `ಈ ರೀತಿ ಪಾರ್ಟಿಗಳು ನಡೆಯುತ್ತಿರುವ ಸ್ಥಳಕ್ಕೆ ನುಗ್ಗಿ ದಾಂಧಲೆಗಳು ವಾರಕ್ಕೆ ಒಂದೆರಡಾದರೂ ಅಲ್ಲಿ ನಡೆಯುತ್ತಿವೆ. ಆದರೆ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳದಿರುವ ಕಾರಣ ಅವುಗಳನ್ನೂ ವರದಿ ಮಾಡಲೂ ಆಗುತ್ತಿಲ್ಲ~ ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು. |
ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಮ್ ಯುವಕರಲ್ಲಿ ತಮ್ಮದೇ ಆಗಿರುವ `ಗುಪ್ತಚರ ವ್ಯವಸ್ಥೆ~ ಇದೆ. ಹಿಂದೂ ಹುಡುಗಿಯ ಜತೆಗಿರುವ ಮುಸ್ಲಿಮ್ ಹುಡುಗರನ್ನು ಹುಡುಕಿಕೊಂಡು ಹಿಂದೂ ಯುವಕರು ಅಡ್ಡಾಡುತ್ತಿದ್ದರೆ, ಅವರನ್ನು ಹಿಂಬಾಲಿಸಿಕೊಂಡೇ ಇರುವ ಮುಸ್ಲಿಮ್ ಯುವಕರ ಗುಂಪು ಕೂಡಾ ಇದೆ. ಇದೇ ರೀತಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಹಿಂಬಾಲಿಸುತ್ತಿದ್ದ ಮುಸ್ಲಿಮ್ ಯುವಕರಿಗೆ, ಅವರು ನಡೆಸಲು ಯೋಜಿಸಿರುವ `ಆಪರೇಷನ್ ಹೋಮ್-ಸ್ಟೇ~ಯ ಸುಳಿವು ಸಿಕ್ಕಿದೆ. ತಕ್ಷಣ ಅವರು ತಮಗೆ ಪರಿಚಯ ಇದ್ದ ಕೆಲವು ಚಾನೆಲ್ ವರದಿಗಾರರಿಗೆ ಸುದ್ದಿ ರವಾನಿಸಿದ್ದಾರೆ. ಪೊಲೀಸರಿಗೆ ತಿಳಿಸುವುದರಿಂದ ಏನೂ ಆಗಲಾರದು ಎಂದು ತೀರ್ಮಾನಕ್ಕೆ ಬರಲು ಅವರ ಅನುಭವ ಕಾರಣ ಇರಬಹುದು. ಇದು ದಕ್ಷಿಣ ಕನ್ನಡದ ಪೊಲೀಸ್ ವ್ಯವಸ್ಥೆ ತಲುಪಿರುವ ಸ್ಥಿತಿ. ಅಪರಾಧ ಪತ್ತೆಯಲ್ಲಿ ನೆರವಾಗುವುದು ಲಾಠಿ, ಬಂದೂಕು, ಗುಂಡುಗಳಲ್ಲ. ಅದು ಸಾರ್ವಜನಿಕವಾಗಿ ಪೊಲೀಸರು ಗಳಿಸುವ ವಿಶ್ವಾಸ. ಅದನ್ನು ಕಳೆದುಕೊಂಡರೆ ಹೀಗಾಗುತ್ತದೆ. |
ಪೊಲೀಸ್ ವ್ಯವಸ್ಥೆಗೆ ಹಿಡಿದಿರುವ `ನಿಷ್ಕ್ರಿಯತೆಯ ರೋಗ~ದ ಮೂಲ ಭ್ರಷ್ಟ ಮತ್ತು ಸ್ವಾರ್ಥ ರಾಜಕಾರಣದಲ್ಲಿದೆ. ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಪೊಲೀಸರು ಕಾನೂನಿಗೆ ನಿಷ್ಠರಾಗಿ ಕರ್ತವ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಈಗ ಜಾರಿಯಲ್ಲಿರುವ ಬ್ರಿಟಿಷರು 1861ರಲ್ಲಿ ರಚಿಸಿದ್ದ ಪೊಲೀಸ್ ಕಾಯ್ದೆ. ಆ ಕಾಲದಲ್ಲಿ `ಸಿಪಾಯಿ ದಂಗೆ~ಯಿಂದ ಭೀತಿಗೀಡಾಗಿದ್ದ ಬ್ರಿಟಿಷರು ತಮಗೆ `ರಾಜಕೀಯವಾಗಿ ಉಪಯೋಗವಾಗಬಲ್ಲ~ ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಕಟ್ಟಲು ರೂಪಿಸಿದ ಕಾಯ್ದೆ ಈಗಿನ ರಾಜಕಾರಣಿಗಳಿಗೆ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಹೇಳಿಮಾಡಿಸಿದಂತಿದೆ. ಇದರ ಸುಧಾರಣೆಗಾಗಿ ಧರ್ಮವೀರ, ಜ್ಯುಲಿಯೊ ರೆಬಿರೋ ಹಾಗೂ ಪದ್ಮನಾಭಯ್ಯ ಅವರ ನೇತೃತ್ವದ ಆಯೋಗಗಳು ಪ್ರತ್ಯೇಕವಾಗಿ ಮೂರು ವರದಿಗಳನ್ನು ನೀಡಿವೆ. ಎನ್‌ಡಿಎ ಸರ್ಕಾರ ಹಿರಿಯ ವಕೀಲ ಸೋಲಿ ಸೊರಾಬ್ಜಿ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿತ್ತು. ಕ್ರಿಮಿನಲ್ ನ್ಯಾಯವ್ಯವಸ್ಥೆಯ ಸುಧಾರಣೆಗಾಗಿ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರೂ ಒಂದು ವರದಿ ನೀಡಿದ್ದರು. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವುದು ಈ ಎಲ್ಲ ಸಮಿತಿ-ಆಯೋಗಗಳ ವರದಿಗಳ ಮೂಲ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ ಯಾವ ರಾಜ್ಯ ಸರ್ಕಾರ ಕೂಡಾ ಇದನ್ನು ಜಾರಿಗೆ ತರಲು ಆಸಕ್ತಿ ತೋರುತ್ತಿಲ್ಲ. |
ಈ ವರದಿಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಅವುಗಳನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಇದನ್ನು ನೇರವಾಗಿ ವಿರೋಧಿಸಲಾಗದ ರಾಜಕೀಯ ಪಕ್ಷಗಳು `ಇದು ಒಕ್ಕೂಟ ವ್ಯವಸ್ಥೆಗೆ ಕೊಡಲಿಯೇಟು~, `ನ್ಯಾಯಾಂಗದ ಅತಿಕ್ರಮಣಕಾರಿ ನಿಲುವು~ ಇತ್ಯಾದಿ ಜನಪ್ರಿಯ ಆರೋಪಗಳ ಮೂಲಕ ವಿರೋಧಿಸುತ್ತಾ ಕಾಲ ತಳ್ಳುತ್ತಿವೆ. ಪೊಲೀಸರಿಗೆ ತಮ್ಮ ಅಸಹಾಯಕತೆಯ ಕಾರಣಗಳು ಗೊತ್ತಿದ್ದರೂ ಅದನ್ನು ಹೇಳಲಾಗದೆ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಕೊಳ್ಳಲು ಹೊಸ ಹೊಸ ಬಲಿಪಶುಗಳನ್ನು ಹುಡುಕುತ್ತಿರುತ್ತಾರೆ. ಮಂಗಳೂರಿನ ಪೊಲೀಸರ ಕೈಗೆ ಪತ್ರಕರ್ತರು ಸಿಕ್ಕಿದ್ದಾರೆ, ಆದರೆ ಇದು ಕೈಸುಡುವ ಕೆಂಡ ಎಂದು ಅವರಿಗೂ ಗೊತ್ತು. |
'); $('#div-gpt-ad-106937-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-106937'); }); googletag.cmd.push(function() { googletag.display('gpt-text-700x20-ad2-106937'); }); },300); var x1 = $('#node-106937 .field-name-body .field-items div.field-item > p'); if(x1 != null && x1.length != 0) { $('#node-106937 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-106937').addClass('inartprocessed'); } else $('#in-article-106937').hide(); } else { _taboola.push({article:'auto', url:'https://www.prajavani.net/columns/ಸಂದೇಶ-ಮರೆತು-ಸಂದೇಶವಾಹಕರ-ಬೆನ್ನತ್ತಿರುವ-ಪೊಲೀಸರು'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-106937', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-106937'); }); googletag.cmd.push(function() { googletag.display('gpt-text-300x20-ad2-106937'); }); // Remove current Outbrain //$('#dk-art-outbrain-106937').remove(); //ad before trending $('#mob_rhs1_106937').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-106937 .field-name-body .field-items div.field-item > p'); if(x1 != null && x1.length != 0) { $('#node-106937 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-106937 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-106937'); }); } else { $('#in-article-mob-106937').hide(); $('#in-article-mob-3rd-106937').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-106937','#in-article-158266','#in-article-157196','#in-article-151960','#in-article-150523']; var twids = ['#twblock_106937','#twblock_158266','#twblock_157196','#twblock_151960','#twblock_150523']; var twdataids = ['#twdatablk_106937','#twdatablk_158266','#twdatablk_157196','#twdatablk_151960','#twdatablk_150523']; var obURLs = ['https://www.prajavani.net/columns/ಸಂದೇಶ-ಮರೆತು-ಸಂದೇಶವಾಹಕರ-ಬೆನ್ನತ್ತಿರುವ-ಪೊಲೀಸರು','https://www.prajavani.net/columns/ಜಾತಿ-ಮೀರಿ-ಯೋಚನೆ-ಮಾಡಿದ-ರಾಜ್ಯದ-ಮತದಾರ','https://www.prajavani.net/columns/ಕಾಂಗ್ರೆಸ್-ಸರ್ಕಾರ-ರಚಿಸಬಹುದು-ಆದರೆ','https://www.prajavani.net/columns/ರಾಹುಲ್-ಗಾಂಧಿ-ಕಳೆದುಕೊಳ್ಳುತ್ತಿರುವ-ಅವಕಾಶ','https://www.prajavani.net/columns/ಮುಲಾಯಂ-ಮುಲಾಮಿನಿಂದ-ಎದ್ದು-ನಿಂತ-ಅಡ್ವಾಣಿ']; var vuukleIds = ['#vuukle-comments-106937','#vuukle-comments-158266','#vuukle-comments-157196','#vuukle-comments-151960','#vuukle-comments-150523']; // var nids = [106937,158266,157196,151960,150523]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಸಿದ್ದರಾಮಯ್ಯ ಕುರಿತು ಅವಹೇಳನಕಾರಿ ಬರಹ: ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿದ ಕಾಂಗ್ರೆಸ್ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Aug 05, 2020, 9:23 PM IST |
ಬೆಂಗಳೂರು, ಆ.5: ಕೋವಿಡ್-19 ಸೋಂಕು ತಗುಲಿರುವ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಕಾರಿ ಬರಹ ಪ್ರಕಟಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಕಾನೂನು ಘಟಕದಿಂದ ನಗರ ಪೊಲೀಸರಿಗೆ ದೂರು ನೀಡಲಾಗಿದೆ. |
ಕಾನೂನು ಘಟಕದಿಂದ ವಕೀಲ ಸೂರ್ಯ ಮುಕುಂದರಾಜ್ ಅವರು ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯ ಮಾಡಿದ್ದಾರೆ. |
ಕೋವಿಡ್-19 ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದು, ಈ ವೇಳೆ ಉದ್ದೇಶ ಪೂರಕವಾಗಿ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಮತ್ತು ಅವಹೇಳನಕಾರಿಯಾಗಿ ಬರಹಗಳನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. |
ಪ್ರೊ. ಕೆಎಂ ಕಾವೇರಿಯಪ್ಪನವರಿಗೆ ನಮಸ್ಕಾರಗಳು | Prof KM Kaveriappa|Vice-Chancellor|Mangalore University|Super Annuation|Mangala Gangotri| - Kannada Oneindia |
ಪ್ರೊ. ಕೆಎಂ ಕಾವೇರಿಯಪ್ಪನವರಿಗೆ ನಮಸ್ಕಾರಗಳು |
| Published: Monday, January 11, 2010, 13:55 [IST] |
ಮಂಗಳೂರು, ಜ. 11 : ನಾಲಕ್ಕು ದಶಕಗಳ ದೀರ್ಘ ಸೇವೆಯ ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಸೇಸೆ ಸಲ್ಲಿಸಿದ ಪ್ರಾಧ್ಯಾಪಕ ಕೆಎಂ ಕಾವೇರಿಯಪ್ಪ ಇಂದು ನಿವೃತ್ತಿ ಆಗುತ್ತಿದ್ದಾರೆ. ಇಂದು ಅವರ ಸೇವೆಯ ಕೊನೆಯ ದಿವಸ. ಜೀವವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ವೃತ್ತಿ ಜೀವನ ಆರಂಭಿಸಿದ ಕಾವೇರಿಯಪ್ಪ ಉಪಕುಲಪತಿ ಸ್ಥಾನದವರೆಗೆ ಸಾಗಿಬಂದ ದಾರಿ ಆದರ್ಶಪ್ರಾಯವಾಗಿದೆ. |
ಶೈಕ್ಷಣಿಕ ವೃತ್ತಿಯಾತ್ರೆಯಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸುತ್ತ, ಒಂದು ಜನಾಂಗದ ವಿದ್ಯಾರ್ಥಿ ಸಮೂಹಕ್ಕೆ ಸತತ ಮಾರ್ಗದರ್ಶನ ನೀಡುತ್ತ ಬಂದ ಮೇಷ್ಟ್ರಿಗೆ ಮಂಗಳ ಗಂಗೋತ್ರಿಯ ಕಾಲೇಜು ಪರಿಸರದಿಂದ ಇವತ್ತು ವಿದಾಯ ಹೇಳುವ ದಿನವಾಗಿದೆ. ಅವರ ನಿವೃತ್ತ ಬದುಕು ವಿಶ್ರಾಂತಿ ಮತ್ತು ಆರೋಗ್ಯ ಭರಿತವಾಗಿರಲೆಂದು ದಟ್ಸ್ ಕನ್ನಡ ಹಾರೈಸುತ್ತದೆ. |
ಡಿಜಿಟಲ್ ಯುಗದಲ್ಲಿ ಭಾರತಕ್ಕೆ ಮುನ್ನಡೆ | Udayavani – ಉದಯವಾಣಿ |
Monday, 23 May 2022 | UPDATED: 11:38 AM IST |
ಡಿಜಿಟಲ್ ಯುಗದಲ್ಲಿ ಭಾರತಕ್ಕೆ ಮುನ್ನಡೆ |
"ಪ್ರೇರಣಾ-2020' ಸಮಾವೇಶದಲ್ಲಿ ಟಿ.ವಿ. ಮೋಹನದಾಸ ಪೈ |
Team Udayavani, Mar 8, 2020, 6:22 AM IST |
ಮಂಗಳೂರು: ಜಗತ್ತನ್ನು ಡಿಜಿಟಲ್ ಸಂಪರ್ಕ ವ್ಯಾಪಿಸಿದೆ. ಭಾರತ ಕೂಡ ಇದರಲ್ಲಿ ಮುಂಚೂಣಿಯಲ್ಲಿದ್ದು, ದೇಶ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಚೇರ್‌ಮನ್ ಟಿ.ವಿ. ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. |
ವಿಶ್ವಕೊಂಕಣಿ ವಿದ್ಯಾರ್ಥಿ ವೇತನ ನಿಧಿ, ವಿಕೆಎಸ್ ಎಸ್‌ಎಫ್ ಅಲುಮ್ನಿ ಅಸೋಸಿಯೇಶನ್ ಮತ್ತು ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಶನಿವಾರ ಕೊಡಿಯಾಲ್‌ಬೈಲ್‌ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಪ್ರೇರಣಾ- 2020 ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು. |
ಸಾಫ್ಟ್ವೇರ್ ಕೋಡಿಂಗ್ ತರಗತಿ |
ಮುಂದಿನ ವರ್ಷದಿಂದ ವಿಶ್ವಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೂ ಸಾಫ್ಟ್ವೇರ್ ಕೋಡಿಂಗ್ ತರಗತಿ ಆಯೋಜಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಉದ್ಯಮಕ್ಷೇತ್ರ, ತಂತ್ರಜ್ಞಾನ ಅಳವಡಿಕೆ ಕುರಿತು ಹೆಚ್ಚು ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಮೋಹನದಾಸ ಪೈ ಹೇಳಿದರು. |
ವಿಶ್ವಕೊಂಕಣಿ ಕೇಂದ್ರ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ್ ಶೆಣೈ ಅವರು ಸಮಾವೇಶ ಉದ್ಘಾಟಿಸಿದರು.ಬೆಂಗಳೂರು ಮೂಲದ "ಸೇತು' ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಸಾಹಿಲ್ ಕಿಣಿ, ಮೆಡ್‌ವೆಲ್‌ವೆಂಚರ್ ಸ್ಥಾಪಕ ಮತ್ತು ಸಿಇಒ ಲಲಿತ್ ಪೈ, ಡೊವ್ ಕೆಮಿಕಲ್ಸ… ಸಂಸ್ಥೆಯ ಸಿಇಒ ಸುಧೀರ್ ಶೆಣೈ, ಭಾರತೀಯ ನೌಕಾದಳದ ಅಧಿಕಾರಿ ಕಮಾಂಡರ್ ಎನ್.ಪಿ. ಶೆಣೈ, ಪ್ರಸಿದ್ಧ ಹಿನ್ನೆಲೆ ಧ್ವನಿ ಕಲಾವಿದ ಚೇತನ್ ಸಶಿತಲ್, ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯ ಸಿಒಒ. ಅಜಯ್ ಪ್ರಭು, ಜ್ಯೋತಿ ಲ್ಯಾಬೋರೇಟರೀಸ್ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ ಕಾಮತ್ ಉಪನ್ಯಾಸ ನೀಡಿದರು. ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ ಚೇರ್‌ಮನ್ ರಾಮದಾಸ್ ಕಾಮತ್ ಯು., ಕಾರ್ಯದರ್ಶಿ ಪ್ರದೀಪ್ ಜಿ. ಪೈ, ಉಪಾಧ್ಯಕ್ಷ ಗಿಲ್ಬರ್ಟ್ ಡಿ'ಸೋಜಾ, ಕಾರ್ಯದರ್ಶಿ ನಂದಗೋಪಾಲ ಶೆಣೈ, ಖಜಾಂಚಿ ಬಿ.ಆರ್. ಭಟ್, ಪ್ರಭಾಕರ ಪ್ರಭು, ಪ್ರೇರಣಾ ಮುಖ್ಯಗುರು ಸಂದೀಪ್ ಶೆಣೈ ಉಪಸ್ಥಿತರಿದ್ದರು. |
ಸನಿಹದಲ್ಲೇ ಬೆಂಗಳೂರು... ತಪ್ಪಲಿಲ್ಲ ಬಸ್ಸಿನ ದೂರು | Prajavani |
ಸನಿಹದಲ್ಲೇ ಬೆಂಗಳೂರು... ತಪ್ಪಲಿಲ್ಲ ಬಸ್ಸಿನ ದೂರು |
ವಿಜಯಪುರ: ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ನಮ್ಮೂರಿಗೆ ಇನ್ನೂ ಬಸ್‌ವ್ಯವಸ್ಥೆ ಕಲ್ಪಿಸಲಾಗಿಲ್ಲ. ರಸ್ತೆಯ ಅವ್ಯವಸ್ಥೆಯಿಂದಾಗಿ ಬರುತ್ತಿದ್ದ ಖಾಸಗಿ ಬಸ್‌ಕೂಡ ಬರುತ್ತಿಲ್ಲ... |
ಹೀಗೆ ತಮ್ಮ ಅಳಲನ್ನು ತೋಡಿಕೊಳ್ಳುವವರು ಸಮೀಪದ ಕೋರಮಂಗಲ ಗ್ರಾಮಸ್ಥರು. `ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿಯೇ ಇದ್ದರೂ, ನಮ್ಮೂರಿಗಿನ್ನೂ ಇನ್ನೂ ಸರ್ಕಾರಿ ಬಸ್ಸಿನಲ್ಲಿ ಸಂಚರಿಸುವ ಯೋಗವಿಲ್ಲ. |
ಎಲ್ಲಿಗೆ ಹೋಗಬೇಕಾದರೂ ಆವತಿ ಬಳಿಯ ರಾಷ್ಟ್ರೀಯ ಹೆದ್ದಾರಿ ಅಥವಾ ವಿಜಯಪುರಕ್ಕೆ ಹೋಗಬೇಕು. ಅಲ್ಲಿಗೆ ಹೋಗಲು ಇರುವುದೊಂದೇ ಸಂಪರ್ಕ ರಸ್ತೆ. ಅದು ಹಳ್ಳಗುಂಡಿಗಳಿಂದ ಕೂಡಿದೆ. ಅವ್ಯವಸ್ಥೆಯಿಂದಾಗಿ ಬರುತ್ತಿದ್ದ ಬಸ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಸದ್ಯ ಆಟೊಗಳನ್ನೇ ಅವಲಂಬಿಸಬೇಕು~ ಎನ್ನುತ್ತಾರೆ ಹಿರಿಯ ಗ್ರಾಮಸ್ಥ ನಾರಾಯಣಪ್ಪ. |
ಆವತಿಯಿಂದ ಕೋರಮಂಗಲದವರೆಗೆ ಕಳೆದ 25 ವರ್ಷಗಳಿಂದಲೂ ರಸ್ತೆಡಾಂಬರು ಮಾಡಲಾಗಿಲ್ಲ. ಅದೇ ರಸ್ತೆಯಲ್ಲಿಯೇ ರಾಜ್ಯದ ಪ್ರಸಿದ್ಧ ಬಯಲು ಬಂಧೀಖಾನೆಯಿದೆ. ಆಗಿಂದಾಗ್ಗೆ ಅಧಿಕಾರಿಗಳು, ಸಚಿವರು ಬಂಧೀಖಾನೆಗೆ ಭೇಟಿನೀಡಿ ಪರಿಶೀಲಿಸುತ್ತಾರೆ. ಆದರೆ ಆ ರಸ್ತೆಯ ಅವ್ಯವಸ್ಥೆ ಹೇಳತೀರದಾಗಿದೆ. ಗೊಬ್ಬರಗುಂಟೆ ಬಳಿಯ ರಸ್ತೆ ಹಾಳಾಗಿದ್ದು ಶಾಲಾಕಾಲೇಜು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ತೆರಳಲು, ವೃದ್ಧರು-ಮಹಿಳೆಯರು, ರೈತರು ಸಂಚರಿಸಲು ಅನುಕೂಲವೇ ಇಲ್ಲವಾಗಿದೆ ಎಂಬುದು ಗ್ರಾಮಸ್ಥರ ಅಳಲು. |
`2007 ರಲ್ಲಿ ಸರ್ಕಾರವು ಜಾರಿಗೆ ತಂದ ಸುವರ್ಣ ಗ್ರಾಮೋದಯ ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ತಯಾರಿಕಾ ಸಂಸ್ಥೆ-ಎನ್.ಆರ್.ಡಿ.ಎಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಅಂತಿಮಗೊಳಿಸುವ ಗ್ರಾಮಸಭೆಯಲ್ಲಿ ಮಂಡಿಸಿದ್ದ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ~ ಎನ್ನುತ್ತಾರೆ ಮುನಿರಾಜು. |
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಾಂಪೌಂಡ್, ಆಟೊಟಗಳಿಗೆ ಕ್ರೆಡಾಂಗಣ, ಶೌಚಾಲಯ ಮತ್ತು ಮಳೆಕೊಯ್ಲು ಅಳವಡಿಕೆ, ಸ್ತ್ರೀಶಕ್ತಿ ಗುಂಪುಗಳ ಆದಾಯೋತ್ಪನ್ನ ಹೆಚ್ಚಳಕ್ಕೆ ಯೋಜನೆ, ಮಹಿಳಾ ಭವನ ನಿರ್ಮಾಣ, ಸುಗಮ ವಿದ್ಯುತ್ ಪೂರೈಕೆಗಾಗಿ ಅಗತ್ಯವಿರುವಷ್ಟು ವಿದ್ಯುತ್ ಪರಿವರ್ತಕಗಳ ಅಳವಡಿಕೆ.. ಈ ಎಲ್ಲ ಸೌಲಭ್ಯಗಳು ಗ್ರಾಮದಲ್ಲಿ ಕನಸಾಗಿಯೇ ಉಳಿದಿವೆ. ಗ್ರಾಮದಲ್ಲಿ 15 ಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. |
ಪುನರ್ವಸತಿ, ಸಾಧನ-ಸಲಕರಣೆಗಳ ವಿತರಣೆ, ಉದ್ಯೋಗ ತರಬೇತಿ ದೊರೆಯಬೇಕಿದೆ. ಎಂ.ಪಿ.ಸಿ.ಎಸ್‌ನ ಉನ್ನತೀಕರಣ, ಹಾಲಿನ ಚಿಲ್ಲಿಂಗ್ ಸೆಂಟರ್ ಪ್ರಾರಂಭ, ಪಶು ಆಸ್ಪತ್ರೆ ನಿರ್ಮಾಣ, ಸಿಬ್ಬಂದಿ ವಸತಿ ಗೃಹನಿರ್ಮಾಣ ಆಗಬೇಕಿದೆ. ಸಮುದಾಯ ಒಕ್ಕಣೆ ಕಣ ನಿರ್ಮಾಣವಾಗಬೇಕೆಂಬುದು ಕೆಂಪೇಗೌಡ ಅವರ ಅಭಿಪ್ರಾಯ. |
ಗ್ರಾಮದಲ್ಲಿ 122 ಕ್ಕೂ ಅಧಿಕ ಮಂದಿ ರೇಷ್ಮೆ ಬೆಳೆಗಾರರಿದ್ದು, ಹನಿನೀರಾವರಿ, ಸಾಮೂಹಿಕ ಮೌಂಟಿಂಗ್ ಹಾಲ್ ನಿರ್ಮಾಣ, ಮಣ್ಣು ಪರೀಕ್ಷೆಯ ಸಂಚಾರಿ ಪ್ರಯೋಗಾಲಯ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥರು. |
ಪಂಚ ರಾಜ್ಯಗಳ ಚುನಾವಣೆ ಘೋಷಣೆಗೂ ಮುನ್ನ ಪಂಜಾಬ್ ಗೆ ನೂತನ ಡಿಜಿಪಿ! – UNI ಕನ್ನಡ |
ಚಂಡೀಗಢ : ಜನೆವರಿ 08 (ಯು.ಎನ್.ಐ.) ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಮಹಾ ಸಮರಕ್ಕೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಒಂದೆಡೆ ರಾಜಕೀಯ ಪಕ್ಷಗಳು ಕಾರ್ಯತಂತ್ರದಲ್ಲಿ ಮಗ್ನರಾಗಿದ್ದರೆ, ಇತ್ತ ಪಂಜಾಬ್ ಪೊಲೀಸ್ ಇಲಾಖೆಯಲ್ಲ ಮೇಜರ್ ಸರ್ಜರಿ ಆಗಿದೆ. |
ಪಂಜಾಬ್ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಸಿಎಂ ಚರಂಜಿತ್ ಸಿಂಗ್ ಚನ್ನಿ ಹೊಸ ಪೊಲೀಸ್ ಮಹಾನಿರ್ದೇಶಕ ಅಂದರೆ ರಾಜ್ಯದ ನೂತನ ಡಿಜಿಪಿ ಹೆಸರಿಗೆ ಮುದ್ರೆ ಒತ್ತಿದ್ದಾರೆ. 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವಿಕೆ ಭಾವ್ರಾ ಪಂಜಾಬ್ ನ ನೂತನ ಡಿಜಿಪಿ ಆಗಿ ಆಯ್ಕೆಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ವಿ.ಕೆ.ಭಾವ್ರಾ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ನೂತನ ಡಿಜಿಪಿ ನಿವೃತ್ತಿಯಾಗಿರುವ ಬಾವ್ರಾ ಅವರ ನಿವೃತ್ತಿ ಅವಧಿ ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ವಿ ಕೆ ಭಾವ್ರಾ ಅವರ ನೇತೃತ್ವದಲ್ಲಿ ಪಂಜಾಬ್ ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ. |
ಪ್ರಧಾನಿ ಭದ್ರತಾ ಲೋಪ |
ಈ ಹಿಂದೆ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಪಂಜಾಬ್ ನ ಹಂಗಾಮಿ ಡಿಜಿಪಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರ ಭೇಟಿ ನೀಡಿದ್ದಾಗ ಭದ್ರತಾ ಲೋಪ ಉಂಟಾಗಿ, ಡಿಜಿಪಿ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ, ಪಂಜಾಬ್ ಪೊಲೀಸರು ಪ್ರಧಾನಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ತಂಡವೂ ಆರೋಪ ಮಾಡಿತ್ತು. ಹೀಗಾಗಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಡಿಜಿಪಿ ಹುದ್ದೆಯಿಂದ ತೆಗೆದು ಹಾಕಲಾಗಿದೆ. |
Subsets and Splits
No community queries yet
The top public SQL queries from the community will appear here once available.