text stringlengths 0 61.5k |
|---|
ಚಿನ್ನದ ಚೈನ್ ದೋಚಿದ್ದ ಇಬ್ಬರು ಆರೋಪಿಗಳ ಬಂಧನ - e-ಉತ್ತರಕನ್ನಡ |
Home › ಜಿಲ್ಲಾ ಸುದ್ದಿ › ಚಿನ್ನದ ಚೈನ್ ದೋಚಿದ್ದ ಇಬ್ಬರು ಆರೋಪಿಗಳ ಬಂಧನ |
ಶಿರಸಿ: ನಗರದ ಜ್ಯುವೆಲರಿ ವಕ್ರ್ಸ್ ಅಂಗಡಿಗೆ ಗ್ರಾಹಕರಂತೆ ಬಂದು ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದ ಪ್ರಕರಣ ಹಲವು ದಿನಗಳ ಹಿಂದೆ ಶಿರಸಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ. |
'ರತ್ನದೀಪ' ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಸರ ಕದ್ದು, ಪರಾರಿಯಾದ ಕಳ್ಳರನ್ನು ಬೇಟೆಯಾಡಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದರು. ಅದಂತೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿತರಿಂದ ಅಂದಾಜು 53,130 ರೂಪಾಯಿ ಮೌಲ್ಯದ 11. 50 ಗ್ರಾಂ ಚೈನ್,49, 000 ಸಾವಿರ ಮೌಲ್ಯದ 22. 28 ಗ್ರಾಂ ಚಿನ್ನ ಒಟ್ಟು 1. 02. 672 ರೂಪಾಯಿ ಮಾಲ್ಯದ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ ಮಾರುತಿ ಸುಝುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ನಿಲೇಶ ವಾಸುದೇವ ರೇವಣಕರ (32),ರಾಘವೇಂದ್ರ ಬಾಲಕೃಷ್ಣ ದೈವಜ್ಞ (35) ಬಂಧಿತ ಆರೋಪಿಗಳಾದ್ದು ಮುಂದಿನ ತನಿಖೆ ನಡೆಯಬೇಕಿದೆ. |
ಇದೇ 24ಕ್ಕೆ ಭಾರತದಲ್ಲಿ ಹಾನರ್ 9 ಎನ್ ಸ್ಮಾರ್ಟ್‌ಫೋನ್ ಲಾಂಚ್..! | Honor 9N smartphone with dual rear camera to launch in India on July 24 - Kannada Gizbot |
ಹುವಾಯಿಯ ಉಪ ಬ್ರ್ಯಾಂಡ್ ಆಗಿರುವ ಆಹಾನರ್ ಇತ್ತೀಚೆಗಷ್ಟೇ ಜುಲೈ 24 ರ ಸ್ಮಾರ್ಟ್ ಫೋನ್ ಬಿಡುಗಡೆ ಸಮರಂಭದ ಆಮಂತ್ರಣವನ್ನು ಎಲ್ಲರಿಗೂ ನೀಡುತ್ತಿದೆ ಎಂಬ ಸುದ್ದಿಯನ್ನು ನಾವೇ ನಿಮಗೆ ನೀಡಿದ್ದೆವು.ಸದ್ಯ ಕಂಪೆನಿಯು ಆ ದಿನದಂದು ಬಿಡುಗಡೆಗೊಳಿಸುವ ಫೋನಿನ ಬಗೆಗಿನ ವಿವರವನ್ನೂ ಪ್ರಕಟಿಸಿದೆ. ಇದಕ್ಕಾಗಿ ಕಂಪೆನಿಯು ತನ್ನ ಟ್ವೀಟರ್ ಖಾತೆಯನ್ನು ಬಳಸಿಕೊಂಡಿದೆ. |
ಅಂದು ಭಾರತದಲ್ಲಿ ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆಯಾಗುತ್ತದೆ ಎಂಬುದನ್ನು ತಿಳಿಸಿದೆ. ಈಗಾಗಲೇ ಎಲ್ಲರೂ ಊಹಿಸಿರುವಂತೆ ಈ ಫೋನ್ ಹಾನರ್ 9ಐ ನಂತಹ ಕೆಲವು ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಯಾಕೆಂದರೆ ಈ ಹಾನರ್ 9ಐ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಗೊಂಡಿದೆ. |
ಕಂಪೆನಿಯು ಟ್ವೀಟ್ ಹೀಗಿದೆ " ಸೌಂದರ್ಯ ಕೇವಲ ಕಣ್ಣಿಗೆ ಕಾಣುವುದಷ್ಟೇ ಅಲ್ಲ ಆದರೆ ನಮ್ಮ ಸುತ್ತಲಿನ ಎಲ್ಲಾ ಮೂಲಭೂತಗಳಲ್ಲೂ ಇದೆ! ಹಾಗಾದ್ರೆ ಇದುವರೆಗೂ ನೀವು ಕಾಣದ ಒಂದು ಸೌಂದರ್ಯವನ್ನು ಕಾಣಲು ತಯಾರಾಗಿ #ಹಾನರ್9ಎನ್ ಜುಲೈ 24ಕ್ಕೆ " |
ಈಗಾಗಲೇ ಹಬ್ಬಿರುವ ಸುದ್ದಿಯ ಅನುಸಾರವೇ ಹೇಳುವುದಾದರೆ ಕಂಪೆನಿಯು ಈ ಫೋನ್ ನ್ನು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಕಪ್ಪು, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳ ಆಯ್ಕೆಯಿರಬಹುದು. ಚೀನಾದಲ್ಲಿ ಹಾನರ್ 9ಐ(2018) ನ ಬೆಲೆ 1399 ಯುವನ್. ಇದನ್ನೇ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗೆ ಅಂದಾಜಿಸುವುದಾದರೆ ಸರಿಸುಮಾರು 14,460 ರುಪಾಯಿ ಆಗುತ್ತದೆ. ಹಾಗಾಗಿ ಭಾರತದಲ್ಲೂ ಕೂಡ ಹೆಚ್ಚುಕಡಿಮೆ ಇದೇ ಬೆಲೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯನ್ನು ಭಾರತೀಯರು ಇಟ್ಟುಕೊಳ್ಳಬಹುದು. |
5.84 ಇಂಚ್ ಫುಲ್ HD+ ಡಿಸ್‌ಪ್ಲೇ |
ವೈಶಿಷ್ಟ್ಯತೆಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುವುದಾದರೆ ಹಾನರ್ 9ಎನ್ 5.84-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2280 ಪಿಕ್ಸಲ್ ರೆಸಲ್ಯೂಷನ್ ಹೊಂದಿರಲಿದೆ. ಐಫೋನ್ ನಂತಹ ನಾಚ್ ನ್ನು ಡಿಸ್ಪ್ಲೇಯಲ್ಲಿ ಹೊಂದಿರುವ ನಿರೀಕ್ಷೆ ಇದೆ ಮತ್ತು ಇದರ ಅನುಪಾತ 18:9 ಆಗಿರಲಿದೆ. ಕಂಪೆನಿಯ ಸ್ವಂತ ಕಿರನ್ 659 ಚಿಪ್ ಸೆಟ್ 4ಜಿಬಿ ಮೆಮೊರಿಯೊಂದಿಗೆ ಪೇರ್ ಆಗಿರಲಿದೆ. ಎರಡು ರೀತಿಯ ಸ್ಟೋರೇಜ್ ಅವಕಾಶವನ್ನು ಫೋನ್ ಹೊಂದಿರಲಿದೆ. ಒಂದು 64ಜಿಬಿ ಮತ್ತೊಂದು 128ಜಿಬಿ ಮೆಮೊರಿ ಎಂದು ನಿರೀಕ್ಷಿಸಲಾಗಿದೆ. ಬಳಕೆದಾರರು ಮೈಕ್ರೋ ಎಸ್ ಕಾರ್ಡ್ ಮೂಲಕ 256ಜಿಬಿ ವರೆಗೂ ಹಿಗ್ಗಿಸಿಕೊಳ್ಳಲು ಅವಕಾಶವಿರುತ್ತದೆ. |
ಆಂಡ್ರಾಯ್ಡ್ 8.0 ಓರಿಯೋ ಒಎಸ್ |
ಹ್ಯಾಂಡ್ ಸೆಟ್ ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗಲಿದ್ದು EMUI 8.0 ಕಸ್ಟಮೈಸೇಷನ್ ನ್ನು ಹೊಂದಿರಲಿದೆ. ಹೈಬ್ರಿಡ್ ಡುಯಲ್ ಸಿಮ್ ಸ್ಮಾರ್ಟ್ ಫೋನ್ ಆಗಿರುವ ಇದರಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇರಲಿದ್ದು ಒಂದು 13ಎಂಪಿ ಮತ್ತೊಂದು 2ಎಂಪಿ ಸಾಮರ್ಥ್ಯವನ್ನು ಹೊಂದಿರಲಿದೆ. ಜೊತೆಗೆ ಸೆಲ್ಫೀ ಕ್ಯಾಮರಾವು 16ಎಂಪಿ ಸಾಮರ್ಥ್ಯವನ್ನು ಹೊಂದಿರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. |
ಬೆರಳಚ್ಚು ತಂತ್ರಜ್ಞಾನವನ್ನು ಒಳಗೊಂಡೇ ಬರುವ ಫೋನ್ 3,000 mAh ಬ್ಯಾಟರಿ ಸೌಲಭ್ಯವನ್ನು ಹೊಂದರಲಿದೆ. ಒಟ್ಟಾರೆ ಇದೆಲ್ಲ ವೈಶಿಷ್ಟ್ಯತೆಗಳು ಊಹಾಪೋಹಗಳೇ ವಿನಃ ಇದಕ್ಕೆಲ್ಲ ತೆರೆ ಬೀಳಬೇಕು ಅಂದರೆ ಜುಲೈ 24 ರ ವರೆಗೂ ಕಾಯಲೇಬೇಕು. |
Honor 9N smartphone with dual rear camera to launch in India on July 24. To know more this visit kannada.gizbot.com |
ವ್ಯವಸ್ಥೆ ವಿರುದ್ಧವೇ ಸಮರ ಸಾರಿದ ಅನುಪಮಾ ಶೆಣೈ! | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ವ್ಯವಸ್ಥೆ ವಿರುದ್ಧವೇ ಸಮರ ಸಾರಿದ ಅನುಪಮಾ ಶೆಣೈ! |
ಬಳ್ಳಾರಿ: ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಸಾಮಾಜಿಕ ಜಾಲತಾಣದಲ್ಲಿ 'ವ್ಯವಸ್ಥೆ' ವಿರುದ್ಧ ಶೀತಲ ಸಮರ ಮುಂದುವರಿಸಿದ್ದಾರೆ. |
'ನನ್ನ ಫೇಸ್ಬುಕ್ ಸ್ಟೇಟಸ್ಗಳನ್ನು ನೋಡಿ ನನ್ನ ಮೇಲೆ ಎಫ್ಐಆರ್ ದಾಖಲಿಸುತ್ತಾರಂತೆ ಬೃಹನ್ನಳೆಯರು' ಎಂದು ಹೇಳುವ ಮೂಲಕ ಶೆಣೈ ಟೀಕಾ ಪ್ರಹಾರ ತೀವ್ರಗೊಳಿಸಿದ್ದಾರೆ. |
ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆ ಗಮನಿಸಿದರೆ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲು ಮುಂದಾಗಿದೆ ಎಂಬ ಅನುಮಾನ ಮೂಡುವಂತೆ ಮಾಡಿದೆ. ಇದರಿಂದಾಗಿ ನ್ಯಾಯಾಲಯ ಮಾತ್ರ ನನ್ನನ್ನು ರಕ್ಷಿಸಲು ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆ ವಿರುದ್ಧವೂ ಶೆಣೈಗೆ ಬೇಸರ ಇರುವುದು ಸ್ಪಷ್ಟವಾಗುತ್ತಿದೆ. ಜೂ.4ರಂದು ಪ್ರತಿಭಟನೆಗೆ ಯತ್ನಿಸಿದ್ದ ಎಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯ ಡಿಎಆರ್ ಪೇದೆಯನ್ನು ಸೇವೆಯಿಂದ ವಜಾ ಮಾಡಿದ ಇಲಾಖೆ ಕ್ರಮಕ್ಕೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎಂದು ಹೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. |
ನಿಗೂಢ ನಡೆ. |
ರಾಜೀನಾಮೆ ನೀಡಿದ ದಿನದಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಅನುಪಮಾ ಶೆಣೈ ನಡೆ ಇನ್ನೂ ನಿಗೂಢವಾಗಿದೆ. ಶೆಣೈ ಅವರ ಅಸಮಾಧಾನ, ಆಕ್ರೋಶದ ಹೊರತಾಗಿಯೂ ಸರ್ಕಾರ ರಾಜೀನಾಮೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶೆಣೈ ಹೇಳಿಕೆಗಳನ್ನು ಗಮನಿಸುವುದಾದರೆ ಸರ್ಕಾರ ರಾಜೀನಾಮೆ ವಿಚಾರಕ್ಕಿಂತ ಅನುಪಮಾ ಅವರ ಪರೋಕ್ಷ ಸಮರದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. |
ಮುಂದೇನು..?: |
'ಅನ್ಯಾಯವೇ ಕಾನೂನಾದಾಗ ದಂಗೆಯೇ ಕರ್ತವ್ಯ ಆಗಲಿದೆ', 'ಮತದಾನ ಎಲ್ಲವನ್ನೂ ಬದಲಾಯಿಸುವುದಾದರೆ ಅವರು ಬದಲಾಗಿದ್ದನ್ನು ಕೂಡ ಅಕ್ರಮಗೊಳಿಸುತ್ತಾರೆ', 'ನೀವು ತಲೆತಗ್ಗಿಸುವುದೇ ಆದರೆ ಅದು ಕೇವಲ ನಿಮ್ಮ ಬೂಟುಗಳನ್ನು ನೋಡುವುದಕ್ಕೆ ಮಾತ್ರ ಆಗಿರಬೇಕು' ಎಂದು ಅರ್ಥೈಸುವಂಥ ಇಂಗ್ಲಿಷ್ ಹೇಳಿಕೆಗಳ ಮೂಲಕ ಅನುಪಮಾ ಶೆಣೈ ತಮ್ಮ ಮಾರ್ಗವನ್ನು ಬಹುತೇಕ ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದೇನು ಎಂಬ ಪ್ರಶ್ನೆಗೆ ನೇರ ಉತ್ತರ ಹೇಳಲು ಮುಂದಾಗುತ್ತಿಲ್ಲ. |
ಡಿಜಿಪಿ ಕೈ ಸೇರಿದ ರಾಜೀನಾಮೆ ಪತ್ರ |
ಅನುಪಮಾ ಶೆಣೈ ಅವರ ರಾಜೀನಾಮೆ ಪತ್ರ ಸೋಮವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಕೈ ಸೇರಿದೆ. ಇಲಾಖೆಯ ಯಾವುದೇ ಸಿಬ್ಬಂದಿ ರಾಜೀನಾಮೆ ಕೊಟ್ಟರೆ ಅದನ್ನು ಹಿಂಪಡೆಯಲು 90 ದಿನ ಕಾಲಾವಕಾಶ ಇರುತ್ತದೆ. ಗೃಹ ಇಲಾಖೆ ಅವಗಾಹನೆಗೆ ರಾಜೀನಾಮೆ ಪತ್ರ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಸೂಚನೆ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಡಿಜಿಪಿ ತಿಳಿಸಿದ್ದಾರೆ. |
ಅನುಪಮಾ ಶೆಣೈ ರಾಜೀನಾಮೆ ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ. ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದರೆ ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? |
| ಜಗದೀಶ ಶೆಟ್ಟರ್ , ಬಿಜೆಪಿ ನಾಯಕ |
ದಕ್ಷ ಅಧಿಕಾರಿಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಎಲ್ಲ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ದಿಟ್ಟತನ ಅಧಿಕಾರಿಗೆ ಇರಬೇಕು. ಯಾರೋ ನಾಲ್ಕು ಜನ ಪ್ರತಿಭಟನೆ ನಡೆಸಿದರೆ ರಾಜೀನಾಮೆ ನೀಡುವುದು ಪರಿಹಾರವಲ್ಲ. |
ಕಾರ್ಯಕರ್ತರು ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗಬಾರದು: ಕುಮಾರಸ್ವಾಮಿ | HD Kumaraswamy Conducts JDS Leaders Meeting in Bengaluru for BBMP elections strategies - Kannada Oneindia |
ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ |
ಇವಿ ವಾಹನಗಳ ವೆಚ್ಚ ಜನರಿಗೆ ನಿಲುಕಲಿ: ಬಸವರಾಜ ಬೊಮ್ಮಾಯಿ |
ವನಮಹೋತ್ಸವ: ಪ್ರತಿಯೊಬ್ಬರು 5 ಗಿಡ ನೆಡಲು ಮುಖ್ಯಮಂತ್ರಿಗಳ ಕರೆ |
ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ವೈದ್ಯನಿಗೆ 1.16 ಕೋಟಿ ರೂ. ವಂಚನೆ |
ಫ್ಲ್ಯಾಶ್ ಮಾಬ್ ಡ್ಯಾನ್ಸ್ ಮೂಲಕ ವೈದ್ಯರಿಗೆ ವಿಶೇಷ ಗೌರವ ಸಮರ್ಪಣೆ |
ಮೂರು ವರ್ಷದ ಕಂದಮ್ಮನಿಗೆ ನೇಣು ಬಿಗಿದು ಹತ್ಯೆ |
2 min ago ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ |
26 min ago ಹೊಸ ವೇತನ ಸಂಹಿತೆ: ಕೆಲಸ, ಸಂಬಳ, ಪಿಎಫ್‌ನಲ್ಲಿ ಆಗುವ ಬದಲಾವಣೆಗಳು |
30 min ago ಅಮಾವಾಸ್ಯೆಯಂದು ಅರಸೀಕರೆ ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ! |
| Published: Saturday, May 21, 2022, 21:51 [IST] |
ಬೆಂಗಳೂರು, ಮೇ 21: ಬೆಂಗಳೂರು ನಗರಕ್ಕೆ ನಾನು ಮಾತ್ರ ಸಾರಥಿ ಅಲ್ಲ. ಕಾರ್ಯಕರ್ತರ ಜೊತೆಗೆ ಸೇರಿ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಪಕ್ಷ ಕಚೇರಿ ಜೆಪಿ ಭವನದಲ್ಲಿ ಇಂದು ಶನಿವಾರ ಸಂಜೆ ಬಿಬಿಎಂಪಿ ಚುನಾವಣೆ ಹಾಗೂ ಪಕ್ಷದ ಸಂಘಟನೆ ಸಂಬಂಧಿಸಿದಂತೆ ನಗರದ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ ಒಳ್ಳೆಯ ಕಾರ್ಯಕರ್ತರು ಇದ್ದಾರೆ. ಅವರಿಗೆ ಅವಕಾಶ ಸಿಕ್ಕಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಕೆಲಸ ಮಾಡುವವರಿಗೆ ನಾನು ಪ್ರೋತ್ಸಾಹ ಕೊಡುವೆ ಎಂದರು. |
ನಗರದಲ್ಲಿ ಮಳೆಯಿಂದ ಆಗಿರುವ ಸಮಸ್ಯೆ ಕುರಿತು ನಮ್ಮ ಕಾರ್ಯಕರ್ತರಿಂದ ಮಾಹಿತಿ ಕೇಳಿದ್ದೇವೆ. ಪಕ್ಷದ ಸಂಘಟನೆ ಮಾಡಲು ಜನರ ಬಳಿ ಹೇಗೆ ಹೋಗಬೇಕು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮುಖ್ಯವಾಗಿ ನಗರದ ಪ್ರತಿ ಬಡಾವಣೆ ಜನರ ಸಮಸ್ಯೆ ಕೇಳುವ ಬಗ್ಗೆ ಚರ್ಚೆ ನಡೆದಿದೆ. ಇದರ ಜೊತೆಗೆ ಯಾವ ರೀತಿ ಕೆಲಸ ಆಗಬೇಕು. ಜನರ ಅಪೇಕ್ಷೆ ಏನಿದೆ. ಈ ಬಗ್ಗೆ ತಿಳಿದುಕೊಳ್ಳಲು ಆಂದೋಲನ ಮಾಡುತ್ತೇವೆ. ಆಂದೋಲನದ ದಿನಾಂಕ ಕೂಡ ನಿಗದಿ ಮಾಡುತ್ತೇವೆ ಎಂದರು. |
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ಸಭೆ ಚರ್ಚೆ ಆಗಿದೆ ಎಂದ ಹೆಚ್ ಡಿಕೆ, ನಗರ ಜನರ ಸಮಸ್ಯೆ ಕೇಳಬೇಕು. ನಾನೇ ಎಲ್ಲಾ ಕಡೆ ಹೋಗಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರು ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆ ಕುರಿತು ನನಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು. |
ಹಣ ಇದ್ದವರಿಗೆ ಕುಮಾರಸ್ವಾಮಿ ಅವರು ಟಿಕೆಟ್ ಕೊಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಣ ಇಲ್ಲದೆ ಇರುವವರನ್ನು ಈ ಪಕ್ಷ ಗುರುತಿಸಿದೆ. ನಿಷ್ಠಾವಂತರಿಗೂ ಶಕ್ತಿ ಕೊಡಲಾಗಿದೆ. ಹಣ ಇಲ್ಲದವರನ್ನು ಪಕ್ಷ ಗುರುತಿಸಿ ಸಹಾಯ ಮಾಡಿ ಗೌರವ ಕೊಡಲಾಗಿದೆ, ಅದಕ್ಕೆ ಬೇಕಾದ್ರೆ ನೂರಾರು ಉದಾಹರಣೆಗೆ ಕೊಡುತ್ತೇನೆ ಎಂದು ಅವರು ಹೇಳಿದರು. |
ಮುಖಂಡರಿಗೆ ಬುದ್ಧಿವಾದ ಹೇಳಿದ ಹೆಚ್ಡಿಕೆ: |
ಇದಕ್ಕೂ ಮುನ್ನ ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯರಾದ ಟಿ.ಎ.ಶರವಣ, ಎ.ಎಂ. ರಮೇಶ್ ಗೌಡ, ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರೆ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. |
ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಬರುತ್ತಿದೆ. ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕು. ಕಳೆದ ಎರಡು ದಿನಗಳಿಂದ ನಾನು ನಗರದಲ್ಲಿ ಸುತ್ತಾಡುತ್ತಿದ್ದೇನೆ. ಜೆಡಿಎಸ್ ಬಗ್ಗೆ ಜನರಿಗೆ ವಿಶ್ವಾಸ ಇದೆ. ಆದರೆ ಮತ್ತಷ್ಟು ವಿಶ್ವಾಸ ಮೂಡಿಸುವ ಕೆಲಸ ಕಾರ್ಯಕರ್ತರು ಹಾಗೂ ಮುಖಂಡರಿಂದ ಆಗಬೇಕು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನ ಬೇಸತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಪಕ್ಷ ಸಂಘಟಿಸುವ ಕೆಲಸ ಆಗಬೇಕು, ಜನರನ್ನು ಪಕ್ಷದ ಕಡೆ ಸೆಳೆಯುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಮುಖಂಡರಿಗೆ ಕುಮಾರಸ್ವಾಮಿ ಅವರು ತಾಕೀತು ಮಾಡಿದ್ದಾರೆ. |
ಜೆಡಿಎಸ್ ಕಾರ್ಯಕರ್ತರು ಕೇವಲ ವಿಸಿಟಿಂಗ್ ಕಾರ್ಡ್ ಮತ್ತು ಹೆಸರು ಹಾಕಿಸಿಕೊಳ್ಳುವುದಕ್ಕಷ್ಟೆ ಸೀಮಿತವಾಗಬಾರದು. ಜನರಿಗಾಗಿ ಕೆಲಸ ಮಾಡಿದರೆ ತಾನಾಗಿಯೇ ಹುದ್ದೆ, ಅಧಿಕಾರ ಎಲ್ಲವೂ ಸಿಗುತ್ತದೆ ಎಂದ ಅವರು, ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ಹಾಗೂ ತಮ್ಮ ಕಾಲದಲ್ಲಿ ನಗರಕ್ಕೆ ಆದಂತಹ ಕೆಲಸಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. |
ಬಿಬಿಎಂಪಿ ಚುನಾವಣೆಗೆ ತಯಾರಿ, ಚುನಾವಣಾ ದಿನಾಂಕ ಘೋಷಣೆ ಒಳಗೆ ಜೆಡಿಎಸ್ ಅನ್ನು ಸಂಘಟಿಸಿ ಬಲಪಡಿಸುವ ಕೆಲಸ ಮಾಡಬೇಕು ಸೂಚನೆ ನೀಡಿದ್ದಾರೆ. ಹುದ್ದೆ ಕೊಡಲಿಲ್ಲ, ಅಧಿಕಾರ ಸಿಗಲಿಲ್ಲ. ಅನ್ನೋದಕ್ಕಿಂತ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದ್ದಾರೆ. |
ಐಐಎಂಬಿ: ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಆರಂಭ |
ಬಿಬಿಎಂಪಿ: ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದ ಪೌರಕಾರ್ಮಿಕರು |
ವೈದ್ಯರ ದಿನಾಚರಣೆ, ಬೆಸ್ಕಾಂನಿಂದ ಇವಿ ಎಕ್ಸ್‌ಪೋ: ಜು.1ರ ಪ್ರಮುಖ ವಿದ್ಯಮಾನಗಳು |
48,440 ಕೋಟಿ ರು. ಜಿಎಸ್‌ಟಿ ಸಂಗ್ರಹ: ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ |
ಏಕ ಬಳಕೆಯ ಪ್ಲಾಸ್ಟಿಕ್‌ಗೆ ಮತ್ತೆ ನಿಷೇಧ: ಉಲ್ಲಂಘಿಸಿದರೆ ವ್ಯಾಪಾರಿಗಳಿಗೆ ಬೀಳಲಿದೆ ಭಾರಿ ದಂಡ |
ಸಭಿಕರ ಮೆಚ್ಚುಗೆಗೆ ಪಾತ್ರವಾದ ಪ್ರಣವಾಂಜಲಿ ನೃತ್ಯ ಕಾರ್ಯಕ್ರಮ |
jds politics hd kumaraswamy bbmp bbmp elections bengaluru ಬಿಬಿಎಂಪಿ ಬೆಂಗಳೂರು ಎಚ್ ಡಿ ಕುಮಾರಸ್ವಾಮಿ |
HD Kumaraswamy had called a meeting of JDS leaders in Bengaluru to give advise on poll strategies for upcoming BBMP elections. |
ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ | Prajavani |
ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ |
ಒಟ್ಟು 5,159 ಮತದಾರರು: 13 ಮತಗಟ್ಟೆಗಳಲ್ಲಿ ಮತದಾನ |
Published: 03 ಜೂನ್ 2018, 16:17 IST |
Updated: 03 ಜೂನ್ 2018, 16:17 IST |
ಯಾದಗಿರಿ: 'ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ಜಿಲ್ಲೆಯ 13 ಮತಗಟ್ಟೆಗಳಲ್ಲಿ ಜೂನ್ 8 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯಲಿದೆ' ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. |
ಈಶಾನ್ಯ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ಚುನಾವಣೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಮತ್ತು ಮತಗಟ್ಟೆ ಸಹಾಯಕ ಅಧಿಕಾರಿ (ಎಪಿಆರ್‌ಒ) ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. |
'ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ವಾಗದಂತೆ ಕಾರ್ಯ ನಿರ್ವಹಿಸಬೇಕು. ಅಹಿತಕರ ಸಂದರ್ಭ ಮತ್ತು ಸನ್ನಿವೇಶಗಳಿಗೆ ಅವಕಾಶ ನೀಡದೆ ಚುನಾವಣೆ ಯಶಸ್ವಿಗೊಳಿಸಬೇಕು. ಮತಗಟ್ಟೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮತದಾರರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ತರಬೇತಿ ಮತ್ತು ಚುನಾವಣಾ ವಿಷಯಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು' ಎಂದು ಸೂಚಿಸಿದರು. |
'ಜಿಲ್ಲೆಯಲ್ಲಿ ಒಟ್ಟು 5,159 ಮತದಾರರಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಚುನಾವಣಾ ಪ್ರಚಾರವನ್ನು ಮಾಡುವಂತಿಲ್ಲ. ಮತಗಟ್ಟೆಯಲ್ಲಿ ಆ ಮತಗಟ್ಟೆ ವ್ಯಾಪ್ತಿಯ ಮತದಾರ, ಚುನಾವಣಾ ವೀಕ್ಷಕರು, ಅಭ್ಯರ್ಥಿಗಳ ಏಜೆಂಟರು, ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶವಿಲ್ಲ' ಎಂದರು. |
ಪ್ರಾಶಸ್ತ್ಯ ಆಧಾರಿತ ಚುನಾವಣೆ: 'ಯಾವುದೇ ಮತದಾರ ತನಗಿಷ್ಟವಾದ ಅಭ್ಯರ್ಥಿ ಅಥವಾ ನೋಟಾಗೆ ಮೊದಲನೇ ಪ್ರಾಶಸ್ತ್ಯ ಮತವನ್ನು ನೀಡಲೇಬೇಕು. ತದ ನಂತರ ಎಷ್ಟು ಬೇಕಾದರೂ ಮತ ಚಲಾಯಿಸಬಹುದು. ಈ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಂದು ನೋಟಾ ಚಿಹ್ನೆ ಇರುತ್ತದೆ. ಅಭ್ಯರ್ಥಿ, ನೋಟಾ ಮುಂದೆ ಇಂಗ್ಲಿಷ್ ಅಂಕಿ (1,2,3) ಗಳಲ್ಲಿ ಸಂಖ್ಯೆ ಬರೆಯಬೇಕು. ಕನ್ನಡದಲ್ಲಿ ಒಂದು, ಎರಡು ಎಂದು ಬರೆಯುವಂತಿಲ್ಲ' ಎಂದು ವಿವರಿಸಿದರು. |
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, 'ಜಿಲ್ಲೆಯ 13 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತಗಟ್ಟೆಗಳ ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿಗಳು ಮಾಸ್ಟರಿಂಗ್ ಮತ್ತು ಡಿಮಾಸ್ಟರಿಂಗ್ ಕೇಂದ್ರಗಳಾಗಿರುತ್ತವೆ' ಎಂದರು. |
ಮತಗಟ್ಟೆ ಕೇಂದ್ರಗಳು: ಗುರುಮಠಕಲ್ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹೊಸ ಕಟ್ಟಡ, ಯಾದಗಿರಿಯ ತಹಶೀಲ್ದಾರ್ ಕಾರ್ಯಾಲಯ, ದೋರನಹಳ್ಳಿಯ ಯುಕೆಪಿ ಕ್ಯಾಂಪ್‌ನ ಸರ್ಕಾರಿ ಪ್ರೌಢಶಾಲೆ, ಗೋಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಶಹಾಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಎಡಭಾಗ, ಶಹಾಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಬಲಭಾಗ, ವಡಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯ, ಕೆಂಭಾವಿ ಸರ್ಕಾರಿ ಪದವಿಪೂರ್ವ ಕಾಲೇಜು, ಸುರಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಬಲಭಾಗ, ಹುಣಸಗಿ ವಿಶೇಷ ತಹಶೀಲ್ದಾರ್ ಕಾರ್ಯಾಲಯ, ಕೊಡೇಕಲ್ ನಾಡಕಚೇರಿ, ಕಕ್ಕೇರಾ ನಾಡಕಚೇರಿ ಮತಗಟ್ಟೆ ಕೇಂದ್ರಗಳಾಗಿವೆ ಎಂದು ಮಾಹಿತಿ ನೀಡಿದರು. |
'ಸಂಪನ್ಮೂಲ ವ್ಯಕ್ತಿಗಳಾದ ಹಣಮಂತ ಎಸ್.ಪೂಜಾರಿ ಅವರು ಪವರ್‌ಪಾಯಿಂಟ್ ಪ್ರಸೆಂಟೇಶನ್ ಮೂಲಕ ತರಬೇತಿ ನೀಡಿ, ಒಂದು ಮತಗಟ್ಟೆಯಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒ, ಇಬ್ಬರು ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೊ ಅಬ್ಸರ್ವರ್, ಒಬ್ಬರು ವಿಡಿಯೊಗ್ರಾಫರ್ ಹಾಗೂ ಅಭ್ಯರ್ಥಿಗಳ ಏಜೆಂಟರು ಇರುತ್ತಾರೆ. ಮತದಾರರು ಮತದಾನ ಮಾಡಲು ಸಿದ್ಧಪಡಿಸಿರುವ ಅಂಕಣದಲ್ಲಿ ಮತದಾನ ಮಾಡಿ, ಮತಪತ್ರವನ್ನು ಮಡಚಿ ನಂತರ ಪಿಆರ್‌ಒ ಬಳಿ ಇರುವ ಮತಪೆಟ್ಟಿಗೆಯಲ್ಲಿ ಹಾಕಬೇಕು' ಎಂದು ಹೇಳಿದರು. |
ಸಹಾಯಕ ಆಯುಕ್ತ ಜಿ.ಎನ್. ಮಂಜುನಾಥ್, ಚುನಾವಣೆ ಶಾಖೆ ತಹಶೀಲ್ದಾರ್ ಸಂಗಮೇಶ ಜಿಡಗೆ, ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತಗಟ್ಟೆ ಸಹಾಯಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. |
ವಿಧಾನ ಪರಿಷತ್‌ಗೆ ಪ್ರಾಶಸ್ತ್ಯ ಆಧಾರಿತ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಯಂತೆ ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುವುದಿಲ್ಲ |
ವಾರಕ್ಕೊಮ್ಮೆ ಶಾಲೆಯಿಂದ ಹೊರಗುಳಿದವರ ಸಮೀಕ್ಷೆ! | Udayavani – ಉದಯವಾಣಿ |
Sunday, 17 Oct 2021 | UPDATED: 01:36 AM IST |
ವಾರಕ್ಕೊಮ್ಮೆ ಶಾಲೆಯಿಂದ ಹೊರಗುಳಿದವರ ಸಮೀಕ್ಷೆ! |
ಶಿಕ್ಷಣ ಇಲಾಖೆಯಿಂದ ಹೊಸ ಪ್ರಯೋಗ |
Team Udayavani, Sep 24, 2019, 2:42 PM IST |
ಶಿವಮೊಗ್ಗ: ವರ್ಷಕ್ಕೊಮ್ಮೆ ನಡೆಯುತ್ತಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಸಜ್ಜಾಗಿದೆ. |
ಮೊದಲು ವರ್ಷಕ್ಕೊಮ್ಮೆ ಸರ್ವೆ ನಡೆಸಿ ನಂತರ ಶಾಲಾ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಲಾಗುತಿತ್ತು. ಈ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಈಗ ವಾರಕ್ಕೊಮ್ಮೆ ವರದಿ ನೀಡಲು ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆ. ಬಯಲು ಸೀಮೆ, ಬರ ಪೀಡಿತ ಜಿಲ್ಲೆಗಳಲ್ಲಿ ಗುಳೆ ಹೋಗುವ, ಮಕ್ಕಳನ್ನು ಕೂಲಿಗೆ ಕಳುಹಿಸುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದವು. |
ಅಲ್ಲದೆ ವಲಸೆ, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆಸಕ್ತಿ ಕೊರತೆ, ರೋಗ-ರುಜಿನ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇಂತಹ ಮಕ್ಕಳನ್ನು ವರ್ಷಕ್ಕೊಮ್ಮೆ ಪತ್ತೆ ಹಚ್ಚುವುದರಿಂದ ಅವರಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. 2017-18ರಲ್ಲಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಇದನ್ನು ತಡೆಗಟ್ಟಲೆಂದು ಈಗ ವಾರಕ್ಕೊಮ್ಮೆ ವರದಿ ನೀಡಲು ಮುಂದಾಗಲಾಗಿದೆ. ಆಗಸ್ಟ್ 15ರಿಂದ ಈ ಕಾರ್ಯ ಪ್ರಗತಿಯಲ್ಲಿದ್ದು ರಾಜ್ಯಾದ್ಯಂತ ಸಾವಿರಾರು ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. |
ಪತ್ತೆ ಹೇಗೆ? : ಒಂದು ವಾರ ಅಥವಾ ಅದಕ್ಕಿಂತ ಅಧಿ ಕ ಅವಧಿ ಯವರೆಗೆ ವಿದ್ಯಾರ್ಥಿಗಳು ಶಾಲೆಯ ಗಮನಕ್ಕೆ ತಾರದೆ ದೂರ ಉಳಿದ್ದಲ್ಲಿ ಅಂತಹವರನ್ನು ಡ್ರಾಪೌಟ್ ಎಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳ ಪಾಲಕರು, ಪೋಷಕರಿಗೆ ಹಾಜರಾತಿ ನೋಟಿಸ್ ನೀಡಲಾಗುತ್ತದೆ. ನಂತರ ಆಯಾ ಗ್ರಾಪಂ ಮಟ್ಟದ ಜನಪ್ರತಿನಿಧಿ ಗಳನ್ನು ವಿದ್ಯಾರ್ಥಿಗಳಿರುವ ಕಡೆ ಕರೆದೊಯ್ದು ಮನವೊಲಿಸಲಾಗುತ್ತದೆ. ಅಷ್ಟಕ್ಕೂ ಶಾಲೆಗೆ ಬಾರದಿದ್ದರೆ, ಹಾಜರಾತಿ ಆದೇಶ ಹೊರಡಿಸುವ ಅಧಿಕಾರ ಆಯಾ ಶಾಲೆಯವರಿಗಿದೆ. |
ನಂತರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ ಗೈರಾದ ವಿದ್ಯಾರ್ಥಿ ಸಮಿತಿ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಬಳಿಕವೂ ಮುಖ್ಯವಾಹಿನಿಗೆ ಬಾರದಿದ್ದರೆ ಜುವೆನೈಲ್ ಜಸ್ಟಿಸ್ ಬೋರ್ಡ್ (ಜೆಜೆಬಿ)ಯಲ್ಲಿರುವ ಪೊಲೀಸರ ಸಹಾಯ ಪಡೆಯಲಾಗುತ್ತದೆ. ಹೀಗೆ, ಡ್ರಾಪೌಟ್ ಆದವರನ್ನುಶಾಲೆಗೆ ಸೇರಿಸುವ ನಿಟ್ಟಿನಲ್ಲಿ ನಾನಾ ಹಂತಗಳಲ್ಲಿ |
ನಿರಂತರ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. |
ವಾರದ ವರದಿ: ಇತ್ತೀಚೆಗೆ ಶಾಲೆಯಿಂದ ಮಕ್ಕಳು ಹೊರಗುಳಿಯುತ್ತಿರುವ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ ಬಳಿಕ "ವಾರದ ವರದಿ' ಸಂಗ್ರಹಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶಿವಮೊಗ್ಗದಲ್ಲಿ 2019-20ನೇ ಸಾಲಿನಲ್ಲಿ ಸ್ಟೂಡೆಂಟ್ಸ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟ್‌ಂ (ಸ್ಯಾಟ್ಸ್) ಅಂಕಿ ಅಂಶದನ್ವಯ, ಒಟ್ಟು 1,172 ಮಕ್ಕಳು ಶಾಲೆಯಿಂದ |
ಹೊರಗೆ ಉಳಿದಿದ್ದಾರೆ. ಅದರಲ್ಲಿ 6 ರಿಂದ 14 ವಯೋಮಾನದ 118 ಮಕ್ಕಳಿದ್ದರೆ, 14 ಮತ್ತು 15 ವಯಸ್ಸಿನ 516 ಹಾಗೂ 16ರ ಮೇಲ್ಪಟ್ಟವರು 538 ಮಕ್ಕಳಿದ್ದಾರೆ. |
6 ರಿಂದ 14 ವಯೋಮಾನದ ಮಕ್ಕಳನ್ನು ಸುಲಭವಾಗಿ ಮರಳಿ ಶಾಲೆಗೆ ತರುವ ಕೆಲಸ ಮಾಡಬಹುದು. ಈಗಾಗಲೇ 118ರಲ್ಲಿ 50 ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಗೆ ತರಲಾಗಿದೆ. ಇನ್ನುಳಿದ ವಯೋಮಾನದಲ್ಲಿ 9ನೇ ತರಗತಿ ಅನುತ್ತೀರ್ಣರಾದ ನಂತರ ಶಾಲೆಗೆ ಬರಲು ಒಲವು ತೋರುವುದಿಲ್ಲ. ಹೀಗಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ ಮರು ಸೇರ್ಪಡೆ ಆಗುತ್ತಿಲ್ಲ ಎನ್ನುವುದು ಶಿಕ್ಷಣ ಇಲಾಖೆ ವಾದವಾಗಿದೆ. |
2018-19ನೇ ಸಾಲಿನಲ್ಲಿ 6-14 ವರ್ಷದ 272 ಮಕ್ಕಳು ಡ್ರಾಪೌಟ್ ಆಗಿದ್ದು, ಅದರಲ್ಲಿ ಇನ್ನೂರು ಮಕ್ಕಳು ಶಾಲೆಗೆ ಮರಳಿದ್ದರು. ಈ ಮುಂಚೆ ಸಮೀಕ್ಷೆ ಮಾಡುವ ಮೂಲಕ ಡ್ರಾಪೌಟ್ ಆದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪತ್ತೆ ಹಚ್ಚಲಾಗುತ್ತಿತ್ತು. |
ಆದರೆ, 2019ರ ಆಗಸ್ಟ್ 8ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದ್ದು, ಅದರನ್ವಯ ಆ.17ರಿಂದ ಪ್ರತಿ ವಾರ ವರದಿಯನ್ನು ಮುಖ್ಯ ಕಚೇರಿಗೆ ಕಳುಹಿಸಲಾಗುತ್ತಿದೆ. ಆಯಾ ಶಾಲೆಯ ತರಗತಿ ಶಿಕ್ಷಕರು ಗೈರಾದ ವಿದ್ಯಾರ್ಥಿಗಳ ಹಾಜರಾತಿ ವಿವರವನ್ನು ಹೆಡ್ ಮಾಸ್ಟರ್‌ಗೆ ನೀಡಬೇಕು. ಅವರು ಸಿಇಒಗಳಿಗೆ ಮಾಹಿತಿ ರವಾನೆ ಮಾಡುತ್ತಾರೆ. ತಾಲೂಕು ಹಂತದಲ್ಲಿ ಮಾಹಿತಿ ಕ್ರೋಢೀಕರಿಸಿ, ಜಿಲ್ಲಾ ಹಂತದ ಅ ಧಿಕಾರಿಗಳಿಗೆ ನೀಡಲಾಗುತ್ತದೆ. ಡಿಡಿಪಿಐಗಳಿಂದ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರಿಗೆ ಕಳುಹಿಸಲಾಗುತ್ತಿದೆ. ಪ್ರತಿ ಶನಿವಾರ ವಾರವಿಡೀ ತರಗತಿಗೆ ಗೈರಾದ ವಿದ್ಯಾರ್ಥಿಗಳ ಹಾಜರಾತಿ ವಿವರ ನೀಡಲಾಗುತ್ತದೆ. |
395 ಮಕ್ಕಳು ಗೈರು: ಜಿಲ್ಲೆಯಲ್ಲಿ ಸೆ.9ರಿಂದ 14ರವರೆಗೆ ಒಟ್ಟು 395 ಮಕ್ಕಳು ಗೈರು ಹಾಜರಾಗಿದ್ದು ಅದರಲ್ಲಿ 26 ಮಂದಿ ಶಾಲೆಗೆ ಮತ್ತೆ ಹಾಜರಾಗಿದ್ದಾರೆ. ಸೆ.16ರಿಂದ 21ರವರೆಗೆ 377 ಮಕ್ಕಳು ಗೈರು ಹಾಜರಾಗಿದ್ದಾರೆ. ಪ್ರತಿ ಶನಿವಾರ ಹಾಜರಾತಿ ಅಧಿಕಾರಿಗಳು ಶಾಲೆಗಳಿಂದ ಮಾಹಿತಿ ಪಡೆದು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳಿಗೆ ಸಲ್ಲಿಸುತ್ತಾರೆ. ನಂತರ ಮುಂದಿನಕ್ರಮಕ್ಕೆ ಸೂಚಿಸಲಾಗುತ್ತದೆ. ಗೈರಾದ ಮಕ್ಕಳಲ್ಲಿ ಭದ್ರಾವತಿ ಹಾಗೂ ಶಿವಮೊಗ್ಗದಲ್ಲಿ ಹೆಚ್ಚಿರುವುದು ವಿಶೇಷವಾಗಿದೆ. ಕಳೆದ ವಾರಶಿವಮೊಗ್ಗದಲ್ಲಿ ಭದ್ರಾವತಿ 110, ಹೊಸನಗರ 16, ಸಾಗರ 20, ಶಿಕಾರಿಪುರ 3, ಶಿವಮೊಗ್ಗ 191, ಸೊರಬ 7, ತೀರ್ಥಹಳ್ಳಿ 30 ಮಕ್ಕಳು ಗೈರಾಗಿದ್ದಾರೆ. 2019-20ನೇ ಸಾಲಿನಲ್ಲಿ ಈವರೆಗೆ ಒಟ್ಟು 42 ಗಂಡು, 26 ಹೆಣ್ಣು ಸೇರಿ 68 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. |
ಮಲೇಬೆನ್ನೂರಿನ 3 ಕಾಲೇಜುಗಳು ವಾರ ಬಂದ್ - Janathavani - Davanagere |
ಮಲೇಬೆನ್ನೂರು, ಜ.17- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬೀರಲಿಂಗೇಶ್ವರ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಸೋಮವಾರ ವಿವಿಧ ಶಾಲೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲಾಯಿತು. ಸೋಂಕು ಕಾಣಿಸಿಕೊಂಡಿರುವ ಎರಡು ಕಾಲೇಜುಗಳ ನಡುವೆ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳ ಸಂಖ್ಯೆ ದಿಢೀರ್ ಕುಸಿತ ಕಂಡಿತ್ತು. |
333 ವಿದ್ಯಾರ್ಥಿಗಳ ಪೈಕಿ 75 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಆಗಮಿಸಿದ್ದರು. ಅವರೆಲ್ಲರಿಗೂ ಮತ್ತು ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ 8 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ಅಲ್ಲದೆ, ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 9 ಶಿಕ್ಷಕರು ಟೆಸ್ಟಿಗೆ ಒಳಗಾದಾಗ ಇಬ್ಬರಿಗೆ ಮತ್ತು ಪಿಡಬ್ಲ್ಯೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರಿಗೆ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ. |
ಜಾಮಿಯಾ ನ್ಯಾಷನಲ್ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 83 ಜನರಿಗೆ ಟೆಸ್ಟ್ ಮಾಡಿದಾಗ ಮೂವರಿಗೆ ಸೋಂಕು ತಗುಲಿದೆ. |
ಅಂಚೆ ಕಛೇರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸರ್ಕಾರಿ ಪ್ರೌಢಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ. ಇದರಿಂದಾಗಿ ಆ ಇಡೀ ಕ್ಯಾಂಪಸ್ ಬಿಕೋ ಎನ್ನುತ್ತಿತ್ತು. |
ಸೋಮವಾರ ಪಟ್ಟಣದಲ್ಲಿ ಎಲ್ಲಾ ಶಾಲೆಗಳಲ್ಲಿ ಸೇರಿ ಒಟ್ಟು 279 ಕೋವಿಡ್ ಟೆಸ್ಟ್ ಆಗಿದ್ದು, 18 ಜನರಿಗೆ ಸೋಂಕು ದೃಢಪಟ್ಟಿದೆ. |
ಟಿಹೆಚ್‌ಓ ಡಾ. ಚಂದ್ರಮೋಹನ್, ತಾಲ್ಲೂಕು ಹಿರಿಯ ಆರೋಗ್ಯ ವಿಸ್ತರಣಾಧಿಕಾರಿ ಎಂ. ಉಮ್ಮಣ್ಣ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಉಪಪ್ರಾಚಾರ್ಯ ರಾಮಣ್ಣ ಸೋಮಣ್ಣನವರ್ ಈ ವೇಳೆ ಹಾಜರಿ ದ್ದರು. ಬೀರಲಿಂಗೇಶ್ವರ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳನ್ನು ಪುರಸಭೆಯ ಪೌರ ಕಾರ್ಮಿಕರು ಸ್ಯಾನಿಟೈಜ್ ಮಾಡಿದರು. |
Previous Postತರಳಬಾಳು ಕೃಷಿ ಕೇಂದ್ರದಿಂದ ಎಣ್ಣೆಕಾಳು ಬೆಳೆಗಳ ಪ್ರಾತ್ಯಕ್ಷಿಕೆNext Postದೇಶವನ್ನು ಕಟ್ಟಲು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ |
"ಆಸ್ಪತ್ರೆಯಿಂದ ಬಂದ ಕೂಡಲೆ ತಮ್ಮನನ್ನು ಎತ್ತಿಕೊಳ್ಳೋಣ ಎಂದು ಹೋದೆ... ನನಗೆ ಕೈಗಳಿಲ್ಲ ಎಂದುನೆನಪಾಯಿತು, ಅಲ್ಲೇ ನಿಂತುಬಿಟ್ಟೆ" - Chandamama Kannada |
Home / Get Inspired / "ಆಸ್ಪತ್ರೆಯಿಂದ ಬಂದ ಕೂಡಲೆ ತಮ್ಮನನ್ನು ಎತ್ತಿಕೊಳ್ಳೋಣ ಎಂದು ಹೋದೆ... ನನಗೆ ಕೈಗಳಿಲ್ಲ ಎಂದುನೆನಪಾಯಿತು, ಅಲ್ಲೇ ನಿಂತುಬಿಟ್ಟೆ" |
"ಆಸ್ಪತ್ರೆಯಿಂದ ಬಂದ ಕೂಡಲೆ ತಮ್ಮನನ್ನು ಎತ್ತಿಕೊಳ್ಳೋಣ ಎಂದು ಹೋದೆ... ನನಗೆ ಕೈಗಳಿಲ್ಲ ಎಂದುನೆನಪಾಯಿತು, ಅಲ್ಲೇ ನಿಂತುಬಿಟ್ಟೆ" |
Subsets and Splits
No community queries yet
The top public SQL queries from the community will appear here once available.