text
stringlengths
0
61.5k
Siva January 07, 2019 Get Inspired
ಪಾಕಿಸ್ತಾನ ಮೂಲದ ಈ ಬಾಲಕಿ ಹೆಸರು ಸಬಾ ಗುಲ್. ಐದು ವರ್ಷ ವಯಸ್ಸಿನಲ್ಲಿ ಪ್ರಮಾದವಶಾತ್ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಆಕೆಯ ಆತ್ಮವಿಶ್ವಾಸ ಮಾತ್ರ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಪ್ರಸ್ತುತ ಆಕೆಯ ವಯಸ್ಸು 15 ವರ್ಷ.
"ನನಗೆ ಕೈಗಳಿಲ್ಲ. ಆದರೆ ಕಾಲುಗಳಿವೆಯಲ್ಲಾ!" ಎಂದು ಎಲ್ಲಾ ಕೆಲಸಗಳನ್ನೂ ಕಾಲುಗಳಿಂದಲೇ ಮಾಡುತ್ತಾಳೆ ಸಬಾ. ಎಲ್ಲರೊಂದಿಗೆ ಶಾಲೆಗೆ ಹೋಗಿ ಓದಿಕೊಳ್ಳುತ್ತಿದ್ದಾಳೆ. ಚೆನ್ನಾಗಿ ಓದಿ ಪಾಕಿಸ್ತಾನದ ಸಮಾಜದಲ್ಲಿ ಬದಲಾವಣೆ ತರುತ್ತೇನೆಂದು, ಮಾನವ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾಳೆ.
ಆಕೆ ಕೈಗಳನ್ನು ಹೇಗೆ ಕಳೆದುಕೊಂಡಳು? ತನ್ನ ಗುರಿಯೇನು? ಎಂಬುದು ಆಕೆಯ ಮಾತುಗಳಲ್ಲೇ.
(ಚೆನ್ನಾಗಿ ಓದಿಕೊಂಡು ಪಾಕಿಸ್ತಾನ ಸಮಾಜದಲ್ಲಿ ಬದಲಾವಣೆ ತರುತ್ತೇನೆ.)
"ಆಗ ನಗೆ ಐದು ವರ್ಷ. ಒಂದು ದಿನ ಆಟ ಆಡಿಕೊಳ್ಳಲು ನಮ್ಮ ಮನೆಯ ಮೇಲೆ ಹೋದೆ. ಮಾಳಿಗೆ ಮೇಲೆ ಕರೆಂಟ್ ತಂತಿ ಇತ್ತು. ಅಚಾನಕ್ ಆಗಿ ಎರಡೂ ಕೈಗಳಿಂದ ಆ ತಂತಿಯನ್ನು ಹಿಡಿದು ಎಳೆದೆ. ಅದರಿಂದ ಶಾಕ್ ಹೊಡೆದು ನನ್ನ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಕೂಡಲೆ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಏನು ಮಾಡಬೇಕು ಎಂದು ವೈದ್ಯರಿಗೂ ಅರ್ಥವಾಗಲಿಲ್ಲ. ನನ್ನ ಕೈಗಳನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಎರಡೂ ಕೈಗಳನ್ನು ತೆಗೆದರು.
ಆ ಅಪಘಾತ ನಡೆದಾಗ ನನಗೆ ಮೂರು ತಿಂಗಳ ತಮ್ಮ ಇದ್ದ. ಕೆಲವು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದ ಕೂಡಲೆ ಅವನನ್ನು ಎತ್ತಿಕೊಂಡು ಮುದ್ದಾಡಲು ಓಡೋಡಿ ಬಂದೆ. ನನಗೆ ಕೈಗಳಿಲ್ಲದ ಕಾರಣ ಅವನನ್ನು ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಆಗ ಅರ್ಥವಾಯಿತು. ಸ್ವಲ್ಪ ಹೊತ್ತು ಅಲ್ಲೇ ನಿಂತುಬಿಟ್ಟೆ. ಆ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ನನ್ನ ಪರಿಸ್ಥಿತಿಯನ್ನೂ ನೋಡಿ ನಮ್ಮ ತಾಯಿ ಸಹ ತಡೆದುಕೊಳ್ಳಲಾಗಲಿಲ್ಲ. ದುಃಖದ ಕಟ್ಟೆ ಹೊಡೆಯಿತು. ಯಾವಾಗಲೂ ಗೊಳೋ ಎಂದು ಅಳುತ್ತಿದಳು. ಅಳಬೇಡಮ್ಮಾ.. ಎಂದು ನಾನು ಹೇಳುತ್ತಿದ್ದೆ. ಕೈಗಳಿಲ್ಲದ ಹುಡುಗಿಯನ್ನು ಶಾಲೆಗೆ ಕಳುಹಿಸಿದರೂ ಏನೂ ಪ್ರತಿಫಲ ಇರಲ್ಲ ಎಂದು ಅಕ್ಕಪಕ್ಕದವರು ನಮ್ಮ ತಂದೆತಾಯಿಗೆ ಹೇಳುತ್ತಿದ್ದರು. ಆ ಮಾತಿನಿಂದ ನನ್ನಲ್ಲಿ ಛಲ ಇನ್ನಷ್ಟು ಹೆಚ್ಚಾಯಿತು. ಅವರ ಅಭಿಪ್ರಾಯ ತಪ್ಪು ಎಂದು ನಿರೂಪಿಸಬೇಕು ಎಂದುಕೊಂಡೆ. ಎಲ್ಲರ ಜತೆಗೆ, ನಾನೂ ಸಹ ಏನಾದರೂ ಸಾಧಿಸಬಹುದು ಎಂದು ಸಾರಿ ಹೇಳಬೇಕು ಎಂದುಕೊಂಡೆ.
ಲಾ ಓದಿ ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳಿಗಾಗಿ ಕೆಲಸ ಮಾಡಬೇಕೆಂದಿದ್ದೇನೆ. ವಿವಿಧ ಪ್ರದೇಶಗಳನ್ನು ತಿರುಗಿ ನಮ್ಮ ಸಂಸ್ಕೃತಿಗಳ ನಡುವೆ ಯಾವ ರೀತಿಯ ವ್ಯತ್ಯಾಸಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದಿದೆ. ಪಾಕಿಸ್ತಾನದ ಸಮಾಜದಲ್ಲಿ ಬದಲಾವಣೆಗಳನ್ನು ತರಬೇಕೆಂದು ಬಯಸಿದ್ದಾರೆ.
ಜಗನ್‌ ಸಂಪುಟ; ಹಿಂದುಳಿದ ವರ್ಗಗಳಿಗೆ ಮಣೆ | Prajavani
ಜಗನ್‌ ಸಂಪುಟ; ಹಿಂದುಳಿದ ವರ್ಗಗಳಿಗೆ ಮಣೆ
ಸಚಿವರಾಗಿ 25 ಮಂದಿ ಪ್ರಮಾಣ; ಐವರು ಉಪಮುಖ್ಯಮಂತ್ರಿಗಳು
ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ತಮ್ಮ ಸಚಿವ ಸಂಪುಟವನ್ನು ಶನಿವಾರ ವಿಸ್ತರಿಸಿದರು. 25 ಶಾಸಕರಿಗೆ ಅವರು ಸಚಿವ ಸ್ಥಾನ ನೀಡಿದ್ದಾರೆ. ಚುನಾವಣೆ ಭರವಸೆಯಂತೆ ಹಿಂದುಳಿದವರು, ಪರಿಶಿಷ್ಟರನ್ನು ಪ್ರತಿನಿಧಿಸುವ ಶಾಸಕರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ.
ಪಮುಲಾ ಪುಷ್ಪಾ ಶ್ರೀವಾಣಿ, ಪಿಲ್ಲಿ ಸುಭಾಷ್‌ಚಂದ್ರ ಬೋಸ್, ಅಲ್ಲಾ ನಾನಿ, ಕೆ.ನಾರಾಯಣ ಸ್ವಾಮಿ, ಅಮ್ಜದ್ ಭಾಶಾ ಶೇಖ್‌ ಬೇಪರಿ ನೂತನ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಮೇಕಟೊಟಿ ಸುಚಾರಿತಾ ರಾಜ್ಯದ ನೂತನ ಗೃಹ ಸಚಿವರಾಗಿದ್ದಾರೆ.
ಮುಂದುವರಿದ ಜಾತಿಗಳನ್ನು ಪ್ರತಿನಿಧಿಸುವ 11, ಹಿಂದುಳಿದ ವರ್ಗದ ಏಳು, ಪರಿಶಿಷ್ಟ ಜಾತಿಯ 5, ಪರಿಶಿಷ್ಟ ವರ್ಗ ಮತ್ತು ಮುಸ್ಲಿಂ ಸಮುದಾಯದ ತಲಾ ಒಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರೆಡ್ಡಿ ಸಮುದಾಯದ ನಾಲ್ವರಿಗಷ್ಟೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ವೆಲಗಪುಡಿಯಲ್ಲಿರುವ ರಾಜ್ಯ ಸಚಿವಾಲಯದ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಎಸ್.ವೆಂಕಟಚಿನ್ನ ಅಪ್ಪಾಲ ನಾಯ್ಡು ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ಸ್ವೀಕರಿಸಿದರು.
ಕಡತಗಳಿಗೆ ಸಹಿ: ಇದಕ್ಕೂ ಮುನ್ನ ಜಗನ್‌ ಮೋಹನ್‌ ರೆಡ್ಡಿ ವೇದ–ಮಂತ್ರ ಘೋಷದ ನಡುವೆಯೇ ಬೆಳಿಗ್ಗೆ ಸಚಿವಾಲಯದ ಮೊದಲ ಬ್ಲಾಕ್‌ನಲ್ಲಿರುವ ಕಚೇರಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ಮೇ 30ರಂದು ವಿಜಯವಾಡ‌ದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಅಧಿಕಾರ ವಹಿಸಿಕೊಂಡ ದಿನ ಮೊದಲನೆಯದಾಗಿ ಆಶಾ ಕಾರ್ಯಕರ್ತರ ಗೌರವಧನ ಏರಿಕೆ, ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ಪತ್ರಕರ್ತರ ಆರೋಗ್ಯ ಯೋಜನೆಗೆ ಸಂಬಂಧಿಸಿದ ಮೂರು ಕಡತಗಳಿಗೆ ಸಹಿ ಹಾಕಿದರು.
ರೆಡ್ಡಿ ಸಮುದಾಯಕ್ಕೆ ಸೀಮಿತ ಪ್ರಾತಿನಿಧ್ಯ: 'ಕಷ್ಟಕಾಲದಲ್ಲಿ ಜೊತೆಗಿದ್ದವರು ಸೇರಿದಂತೆ ಹಿಂದುಳಿದ ಎಲ್ಲ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಜಗನ್‌ ರೆಡ್ಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಂಪುಟ ವಿಸ್ತರಣೆಯ ಪ್ರಕ್ರಿಯೆಯನ್ನು ರಾಜಕೀಯ ವಲಯದಲ್ಲಿ ಬಣ್ಣಿಸಲಾಗಿದೆ.
ರೆಡ್ಡಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ದೊರೆತಿಲ್ಲ ಎಂಬ ಬೇಸರವೂ ವ್ಯಕ್ತವಾಗಿದೆ. ರೆಡ್ಡಿ ಸಮುದಾಯಕ್ಕೆ ಸೇರಿದ ಶಾಸಕಿ ರೋಜಾ ಈ ಬೆಳವಣಿಗೆಯಿಂದ ಬೇಸರಗೊಂಡು ಶುಕ್ರವಾರ ರಾತ್ರಿಯೇ ವಿಜಯವಾಡದಿಂದ ನಿರ್ಗಮಿಸಿದ್ದರು. ನೂತನ ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ಬಳ್ಳಾರಿ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಭೀಕರ ಹತ್ಯೆ! | Maharashtra After Palghar lynching, two Sadhus brutally killed inside ashram in Nanded
Bangalore, First Published May 25, 2020, 7:11 AM IST
ಮುಂಬೈ((ಮೇ.25): ಮೂಲತಃ ತಾಲೂಕಿನ ನಂದಿಪುರದವರಾದ, ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಸ್ವಾಮೀಜಿಯಾಗಿದ್ದ ರುದ್ರಪಶುಪತಿ ಶಿವಚಾರ್ಯರನ್ನು (35) ದುಷ್ಕರ್ಮಿಗಳು ಶನಿವಾರ ರಾತ್ರಿ ಅಮಾನುಷವಾಗಿ ಹತ್ಯೆಗೈದಿದ್ದಾರೆ.
ರುದ್ರಪಶುಪತಿ ಶಿವಾಚಾರ್ಯರು ಶನಿವಾರ ರಾತ್ರಿ ಎಂದಿನಂತೆ ಧರ್ಮಸಭೆಗೆ ಹೋಗಿ ಮಠಕ್ಕೆ ಹಿಂದಿರುಗಿದ್ದರು. ಶಿಷ್ಯಂದಿರು ಮಹಡಿಯಲ್ಲಿ ಮಲಗಿದ್ದು, ಇವರು ಕೆಳಗಿರುವ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಧ್ಯರಾತ್ರಿಯ ನಂತರ ಬಂದ ದುಷ್ಕರ್ಮಿಗಳು ಸ್ವಾಮೀಜಿ ಹಾಗೂ ಅವರ ಶಿಷ್ಯರೊಬ್ಬರ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಮೊಬೈಲ್‌ ಚಾರ್ಜರ್‌ನ್ನು ಅವರು ಕುತ್ತಿಗೆಗೆ ಬಿಗಿಯಾಗಿ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಶವವನ್ನು ಕಾರಿನಲ್ಲಿ ಹಾಕಿಕೊಂಡು ಹೋಗುವಾಗ ಕಾರು ಇದ್ದಕ್ಕಿದ್ದಂತೆ ಕೆಟ್ಟು ನಿಂತ ಪರಿಣಾಮ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಕುರಿತಂತೆ ಮಠದ ಶಿಷ್ಯಂದಿರು, ಶ್ರೀಗಳ ಸಹೋದರರೂ ಆಗಿರುವ ಇಲ್ಲಿಯ ನಂದಿಪುರ ದೊಡ್ಡ ಬಸವೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.
ಶ್ರೀ ಮಹೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಕೊಟ್ಟೂರಿನ ಚಾನುಕೋಟಿ ಸ್ವಾಮೀಜಿ, ಹನಸಿ ಮಠದ ಶಂಕರ ಸ್ವಾಮೀಜಿ ಸೇರಿದಂತೆ ಹತ್ತಾರು ಸ್ವಾಮೀಜಿಗಳು ಮಹಾರಾಷ್ಟ್ರಕ್ಕೆ ತೆರಳಿದರು.
ಈ ಘಟನೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ನಂದಿಪುರದ ಶ್ರೀದೊಡ್ಡ ಬಸವೇಶ್ವರ ಮಠದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಈಗ ಮಠದಲ್ಲಿ ಸ್ಮಶಾನ ಮೌನ ಆವರಿಸಿದೆ.
ಶ್ರೀ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳು ತಾಲೂಕಿನ ನಂದಿಪುರ ಗ್ರಾಮದವರು. ಇವರ ಮೂಲ ಹೆಸರು ನಂದೇಶ. ನಂದಿಪುರ ಮಠದ ಲಿಂಗೈಕ್ಯ ಶ್ರೀ ಚರಂತೇಶ್ವರ ಸ್ವಾಮೀಜಿಗಳ ಪುತ್ರರು. ಇವರ ಸಹೋದರ ಮಹೇಶ್ವರ ಸ್ವಾಮೀಜಿ ಸದ್ಯ ನಂದಿಪುರ ದೊಡ್ಡ ಬಸವೇಶ್ವರ ಮಠದ ಶ್ರೀಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಬಳಿಕ, ಸಂಸ್ಕೃತ, ಪಾಠ ಪ್ರವಚನಗಳನ್ನು ಕಾಶಿ ಪೀಠದಲ್ಲಿ ಮುಗಿಸಿ, ಕಳೆದ 12 ವರ್ಷಗಳ ಹಿಂದೆ ಕೇದಾರ ಪೀಠದ ಶಾಖಾ ಮಠವಾದ ಮಹಾರಾಷ್ಟ್ರದ ನಾಗಠಾಣದ ನಿರ್ವಾಣಿ ಮಠಕ್ಕೆ ಪಟ್ಟಾಧಿಕಾರ ಹೊಂದಿದ್ದರು. ಮಹಾರಾಷ್ಟ್ರ ಹಾಗೂ ಕರ್ನಾಟಕದ ಅಪಾರ ಭಕ್ತರನ್ನು ಹೊಂದಿದ್ದು, ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರ ನಿಕಟವರ್ತಿಗಳಾದ ಪತ್ರೇಶ್‌ ಹಿರೇಮಠ್‌ ಹೇಳುತ್ತಾರೆ.
ಆಧಾರ್‌ಗೆ ಮತ್ತೆ "ಇ- ಕೆವೈಸಿ' ನೋಂದಣಿ | Udayavani – ಉದಯವಾಣಿ
Thursday, 27 Jan 2022 | UPDATED: 08:48 PM IST
Team Udayavani, Feb 26, 2020, 3:07 AM IST
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಬಿಪಿಎಲ್‌ ಪಡಿತರ ಚೀಟಿಗೆ ಕಡಿವಾಣ ಹಾಕಲು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ "ಇ- ಕೆವೈಸಿ' (ಎಲೆಕ್ಟ್ರಾನಿಕ್‌- ನೋ ಯುವರ್‌ ಕಸ್ಟಮರ್‌) ನೋಂದಣಿ ಪ್ರಕ್ರಿಯೆಗೆ ಬುಧ ವಾರದಿಂದ ಮರು ಚಾಲನೆ ಸಿಗಲಿದ್ದು, ಎರಡು ತಿಂಗ ಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಇಲಾಖೆಯ ನಿರ್ದೇಶಕರು, ಉಪನಿರ್ದೇಶಕರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ರೀತಿಯ ಸೌಕರ್ಯವಿದ್ದವರೂ ಬಿಪಿಎಲ್‌ ಪಡಿತರ ಚೀಟಿ ಪಡೆಯುವುದನ್ನು ನಿಯಂತ್ರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ಪಡಿತರ ಚೀಟಿಗಳನ್ನು ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಿ "ಇ- ಕೆವೈಸಿ' ನೋಂದಣಿ ಪ್ರಕ್ರಿಯೆಯನ್ನು ಬುಧವಾರ ದಿಂದ ಮತ್ತೆ ಆರಂಭಿಸಲಾಗುವುದು.
ನ್ಯಾಯಬೆಲೆ ಅಂಗಡಿಗಳು ಮಂಗಳವಾರ ಹೊರತುಪಡಿಸಿ ಇತರೆ ರಜಾ ದಿನಗಳಲ್ಲಿಯೂ "ಇ- ಕೆವೈಸಿ' ನೋಂದಣಿ ಕಾರ್ಯ ನಿರ್ವಹಿಸಿ 2 ತಿಂಗಳಲ್ಲಿ ಪೂರ್ಣಗೊಳಿಸು ವಂತೆ ಸೂಚನೆ ನೀಡಲಾಗಿದೆ ಎಂದರು. "ಇ-ಕೆವೈಸಿ' ನೋಂದಣಿಯಿಂದ ಅಕ್ರಮ ಬಿಪಿ ಎಲ್‌ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಅನುಕೂಲಸ್ಥ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಗಳನ್ನು ಎರಡು ತಿಂಗಳಲ್ಲಿ ಹಿಂತಿರುಗಿಸಬೇಕು. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಜಾಹೀರಾತುಗಳ ಮೂಲಕವೂ ಮಾಹಿತಿ ನೀಡಲಾಗು ವುದು ಎಂದು ಹೇಳಿದರು.
62,922 ಕಾರ್ಡ್‌ ರದ್ದು: ಸರ್ಕಾರಿ ನೌಕರರು, ನಿವೃತ್ತ ನೌಕರರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಆರ್ಥಿಕವಾಗಿ ಅನುಕೂಲಸ್ಥ 62,922 ಕುಟುಂಬಗಳು ಪಡೆದಿದ್ದ ಪಡಿತರ ಚೀಟಿಯನ್ನು ರದ್ದು ಪಡಿಸಲಾಗಿದೆ. 43,000 ಬಿಪಿಎಲ್‌ ಕಾರ್ಡ್‌ ದಾರರು ಎಪಿಎಲ್‌ಗೆ ವರ್ಗಾವಣೆಯಾಗಿದ್ದಾರೆ. ಒಂದು ಲಕ್ಷಕ್ಕಿಂತ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳನ್ನು ಅಕ್ರಮವೆಂದು ಪರಿಗಣಿಸಿ ರದ್ದುಪಡಿಸಲಾಗಿದೆ. ಅನುಕೂಲಸ್ಥರಾಗಿದ್ದರೂ ಬಿಪಿಎಲ್‌ ಕಾರ್ಡ್‌ ಪಡೆ ದಿದ್ದ ಕುಟುಂಬಗಳಿಗೆ ಒಟ್ಟು 96 ಲಕ್ಷ ರೂ.ಗಿಂತ ಹೆಚ್ಚು ದಂಡ ವಿಧಿಸಲಾಗಿದೆ ಎಂದು ವಿವರ ನೀಡಿದರು.
ರಾಜ್ಯಾದ್ಯಂತ ಬಿಪಿಎಲ್‌ ಪಡಿತರ ಚೀಟಿಗಾಗಿ 2.17 ಲಕ್ಷ ಮಂದಿ ಹಾಗೂ ಎಪಿಎಲ್‌ ಪಡಿತರ ಚೀಟಿ ಗಾಗಿ 1.21 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎರಡು ತಿಂಗಳಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಹಿರಿಯ ನಾಗರಿಕ ಪಡಿತರದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ಪಡೆಯಲು ಸಾಧ್ಯವಾಗದ ಕಾರಣ ಅವರ ಬದಲಿಗೆ ನೆರೆಹೊರೆಯವರು ಪಡೆದುಕೊಳ್ಳಲು ಅವಕಾಶವಿದೆ.
ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಇತರರು ಪಡೆದು ಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ರಾಜ್ಯ ದಲ್ಲಿ 1.40 ಲಕ್ಷ ಹಿರಿಯ ನಾಗರಿಕ ಪಡಿತರದಾರರನ್ನು ಗುರುತಿಸಲಾಗಿದೆ ಎಂದರು. ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ರಾಜ್ಯದ ಯಾವುದೇ ಜಿಲ್ಲೆಯ ಲ್ಲಾದರೂ ಪಡಿತರ ಪಡೆದು ಕೊಳ್ಳುವ ವ್ಯವಸ್ಥೆ ಇದೆ. ಕೂಲಿ ಅರಸಿ ನಗರ ಪ್ರದೇಶ ಗಳಿಗೆ ವಲಸೆ ಹೋಗುವ ಗ್ರಾಮೀಣ ಜನರು ಸ್ವಗ್ರಾ ಮಕ್ಕೆ ತೆರಳಿ ಪಡಿತರ ಪಡೆದು ಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ವ್ಯವಸ್ಥೆ ಜಾರಿ ಗೊಳಿಸ ಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ದಾಸೋಹ ಯೋಜನೆಯಡಿ ಸರ್ಕಾರಿ, ಅನುದಾನಿತ, ಅನುದಾನೇತರ, ಎನ್‌ಜಿಒ ಹಾಗೂ ಖಾಸಗಿ ಸಂಸ್ಥೆಗಳನ್ನು ಒಳಗೊಂಡ ಅರ್ಹ 400ಕ್ಕೂ ಹೆಚ್ಚು ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ, ಗೋಧಿಯನ್ನು ಉಚಿತ ವಾಗಿ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಇದನ್ನು ಸೀಮಿತಗೊಳಿಸಿದ ಹಿನ್ನೆಲೆಯಲ್ಲಿ 351 ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ, ಗೋಧಿ ಹಂಚಿಕೆ ಮುಂದು ವರಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದಲೇ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಅನ್ಯ ರಾಜ್ಯದಲ್ಲೂ ಪಡಿತರ: ಕೇಂದ್ರ ಸರ್ಕಾರದ ಸೂಚನೆಯಂತೆ ಅಂತಾರಾಜ್ಯದಲ್ಲೂ ಪಡಿತರ ಪಡೆದು ಕೊಳ್ಳುವ ವ್ಯವಸ್ಥೆಯನ್ನು ಮುಂದಿನ ತಿಂಗಳು ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಕೇರಳದಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಹೇಳಿದರು.
"ಸಿಎಂ ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ': ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಪ್ರಮಾಣ ಇಳಿಕೆ ಮಾಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಸ್ಪಷ್ಟ ಉತ್ತರ ನೀಡಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡು ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ. ಈ ಹಂತದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಜೆಟ್‌ ಮಂಡನೆ ಬಳಿಕ ಈ ಬಗ್ಗೆ ಗೊತ್ತಾಗಲಿದೆ ಎಂದು ಸಚಿವರು ಹೇಳಿದರು.
`ಡಿಸಿ, ಎಸ್‌ಪಿ ವಿರುದ್ಧದ ಆರೋಪ ನಿರಾಧಾರ' | Prajavani
`ಡಿಸಿ, ಎಸ್‌ಪಿ ವಿರುದ್ಧದ ಆರೋಪ ನಿರಾಧಾರ'
ಬೆಂಗಳೂರು: `ಲಂಚ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಅವರನ್ನು ಪಾರು ಮಾಡಲು ಯತ್ನಿಸಿದ್ದರು' ಎಂಬ ಆರೋಪದಡಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗದ ಹಿಂದಿನ ಎಸ್‌ಪಿ ಪಿ.ಕೆ.ಶಿವಶಂಕರ್ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನಲ್ಲಿ ಹುರುಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಗುರುವಾರ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ರಾಜೇಶ್ವರಿ ಈ ಪ್ರಕರಣದಲ್ಲಿ ದೂರುದಾರರಿಂದ 3.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತಪಟ್ಟಿದೆ. ಆದರೆ, ಜಿಲ್ಲಾಧಿಕಾರಿಗೂ ಲಂಚ ಪ್ರಕರಣಕ್ಕೂ ಸಂಬಂಧ ಕಲ್ಪಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ತನಿಖಾ ತಂಡ ಹೇಳಿದೆ.
ಸೆಪ್ಟೆಂಬರ್‌ನಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿದ್ದ ಶ್ರೀನಿವಾಸಮೂರ್ತಿ, `ಜಿಲ್ಲಾಧಿಕಾರಿಯ ಪರವಾಗಿ ರಾಜೇಶ್ವರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ' ಎಂದು ಮಾಹಿತಿ ನೀಡಿದ್ದರು. ಅಯ್ಯಪ್ಪ ಅವರೇ ಖುದ್ದಾಗಿ ಬೇಡಿಕೆ ಇಡುತ್ತಿರುವುದನ್ನು `ರೆಕಾರ್ಡ್' ಮಾಡಿಕೊಂಡು ತರುವಂತೆ ಶಿವಶಂಕರ್ ಅವರು ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಿದ್ದರು.
`ನಾನು ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಮುನ್ನವೇ ಅಯ್ಯಪ್ಪ ಅವರಿಗೆ ಪ್ರಕರಣದ ಬಗ್ಗೆ ತಿಳಿದಿತ್ತು. ಶಿವಶಂಕರ್ ಅವರೇ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿದ್ದರು' ಎಂದು ಶ್ರೀನಿವಾಸಮೂರ್ತಿ ದೂರಿದ್ದರು.
ಈ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ, ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
ಪ್ರಕರಣ ಕುರಿತು ತನಿಖೆ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಯು.ಪಿ.ಶಿವರಾಮ ರೆಡ್ಡಿ, ಗುರುವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. `ಅಯ್ಯಪ್ಪ ಮತ್ತು ಶಿವಶಂಕರ್ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ. ರಾಜೇಶ್ವರಿ ಲಂಚಕ್ಕೆ ಒತ್ತಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ' ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಬಾಲಿಯಲ್ಲಿ ಅಮ್ಮನಿಗೆ ಪೂಜೆ | Udayavani – ಉದಯವಾಣಿ
Sunday, 12 Jul 2020 | UPDATED: 03:15 AM IST
ಇಂಡೋನೇಶ್ಯಾದ ಪ್ರಸಿದ್ಧ ದ್ವೀಪ ಬಾಲಿಯಲ್ಲಿ, ಭತ್ತದ ಗದ್ದೆ ನೋಡುತ್ತ ಹಳ್ಳಿಗಳನ್ನು ಸುತ್ತುವಾಗ, ದೇಗುಲಗಳನ್ನು ಸಂದರ್ಶಿ ಸುವಾಗ ಅಲ್ಲಲ್ಲಿ ಜನರು ಪೂಜಿಸುತ್ತಿದ್ದ ಶಿಲ್ಪವೊಂದು ಕಂಡು ಬಂತು. ನಂತರ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಉಬುಡ್‌ನ‌ಲ್ಲಿ ಕಲಾವಿದರ ಕೆತ್ತನೆ, ಚಿತ್ರಗಳಲ್ಲಿಯೂ ಮತ್ತದೇ ವ್ಯಕ್ತಿ. ಅದರಲ್ಲಿದ್ದುದು ಮಹಿಳೆ ಮತ್ತು ಆಕೆಯನ್ನು ಸುತ್ತುವರಿದ ವಿವಿಧ ವಯಸ್ಸಿನ ಮಕ್ಕಳು. ಬೆನ್ನ ಮೇಲೆ, ಕಂಕುಳಲ್ಲಿ, ಕೈ-ಕಾಲ ಬಳಿ, ಎದೆ ಹಾಲು ಚೀಪುತ್ತ ಹೀಗೆ ಎಲ್ಲೆಡೆ ಮಕ್ಕಳು! ಆಶ್ಚರ್ಯದಿಂದ ಕಡೆಗೊಮ್ಮೆ ಅಲ್ಲಿದ್ದ ಕಲಾವಿದವರ‌ನ್ನು ವಿಚಾರಿಸಿದಾಗ, "ಅದು ಅಮ್ಮ ಬ್ರಾಯುತ್‌! ಬಾಲಿಯ ಗ್ರಾಮೀಣ ಮಹಿಳೆ. ಆಕೆಗಿಲ್ಲಿ ಪೂಜೆ ಸಲ್ಲುತ್ತದೆ' ಎಂದು ವಿವರಿಸಿದ.
"ಬ್ರಾಯುತ್‌ಎಂಬುದು ಬಹುಮಕ್ಕಳ ಹೊರೆ ಹೊತ್ತ' ಎಂಬ ಅರ್ಥ ಬರುವ ಕುಟುಂಬದ ಹೆಸರು. ಈ ಕುಟುಂಬದ ದಂಪತಿ, ಪಾನ್‌ ಮತ್ತು ಮೇನ್‌ ಬ್ರಾಯುತ್‌ (ಅಪ್ಪ-ಅಮ್ಮ).ಬಡ ಕುಟುಂಬ, ಹೊಟ್ಟೆಗೆ ಬಟ್ಟೆಗೆ ಕಷ್ಟಪಡುವ ಪರಿಸ್ಥಿತಿ. ಆದರೆ, ಮನೆ ತುಂಬಾ ಮಕ್ಕಳು, ಒಂದೆರಡಲ್ಲ, ಹದಿನೆಂಟು! ಮಕ್ಕಳನ್ನು ಹೆರುತ್ತ ಅವರನ್ನು ಸಾಕುವ ಸಂಪೂರ್ಣ ಹೊಣೆ ಹೊತ್ತ ಅಮ್ಮ ಬ್ರಾಯುತ್‌ ಗದ್ದೆಯ ಜತೆ ನೇಯುವ ಕೆಲಸವನ್ನೂ ಮಾಡುತ್ತಾಳೆ. ಇತ್ತ ಅಪ್ಪನನ್ನು ಅಂಗಳ ಗುಡಿಸಿ, ಪೂಜೆಗೆ ಬೇಕಾದ ವಿಶೇಷ ಖಾದ್ಯ ಸಿದ್ಧಪಡಿಸುವಂತೆ ಮನ ಒಲಿಸುತ್ತಾಳೆ. ಹೀಗೆ ಬಡತನ, ಕಷ್ಟವಿದ್ದರೂ ಕಂಗೆಡದೆ ಪತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಗೆ-ಹೊರಗೆ ದುಡಿದು, ಮನೆಯಲ್ಲಿ ಶಾಂತಿ ಕಾಪಾಡಿಕೊಂಡು ತನ್ನ ಹದಿನೆಂಟು ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತರಲು ಅಮ್ಮ ಶ್ರಮಿಸುತ್ತಾಳೆ.ಆಕೆಯ ಶಿಸ್ತು ಮತ್ತು ಪ್ರೀತಿಯ ಕಣ್ಗಾವಲಲ್ಲಿ ಬೆಳೆದು ಮಕ್ಕಳು ದೊಡ್ಡವರಾಗುತ್ತಾರೆ. ತಮ್ಮದೇ ಕುಟುಂಬದ ನಾಟಕ ತಂಡವನ್ನು ಕಟ್ಟಿ ಬರೊಂಗ್‌ ನಾಟಕವನ್ನು ಪ್ರದರ್ಶಿಸುತ್ತಾರೆ. ಬರೊಂಗ್‌ ನಾಟಕವೆಂದರೆ ಒಳ್ಳೆಯ ಶಕ್ತಿ ಕೆಟ್ಟದ್ದನ್ನು ಮಣಿಸುವ ವಸ್ತುವುಳ್ಳದ್ದು.ಹೀಗೆ ಮಕ್ಕಳು ಶ್ರೀಮಂತರಾಗಿ, ಸಮಾಜದಲ್ಲಿ ಗಣ್ಯರೆನಿಸಿಕೊಂಡಾಗ ಅಮ್ಮನಿಗೆ ಹೆಮ್ಮೆ ಮತ್ತು ಸಂತೋಷ. ಆದರೆ ತನ್ನ ಕರ್ತವ್ಯ ಮುಗಿಯಿತೆಂದು ಆಕೆ ಪತಿಯೊಂದಿಗೆ ಈ ಲೌಕಿಕ ಜಗತ್ತಿನ ಮೋಹ ತೊರೆದು ವಾನಪ್ರಸ್ಥಕ್ಕೆ ತೆರಳುತ್ತಾಳೆ.
ಅಮ್ಮಂದಿರ ಪ್ರತಿನಿಧಿ
ಸಾಮಾನ್ಯ ಮಹಿಳೆಯೊಬ್ಬಳ ಜೀವನ ಕತೆ ಎಂದು ಭಾಸವಾದರೂ ಬಾಲಿಯ ಜನರಿಗೆ ಆಕೆ ಎಲ್ಲ ಅಮ್ಮಂದಿರ ಸಂಕೇತ. ಪುರುಷ ಪ್ರಧಾನ ಸಮಾಜವಾದ ಬಾಲಿಯಲ್ಲಿ ಮಳೆ ಅಡಿಗೆ-ಮನೆ-ಮಕ್ಕಳು ಎಂಬ ಪಾರಂಪರಿಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಮಕ್ಕಳು ಮನೆಯ ಸಂಪತ್ತು; ಹಾಗಾಗಿ, ಹೆಚ್ಚಿದ್ದಷ್ಟೂ ಒಳ್ಳೆಯದು ಎನ್ನುವ ನಂಬಿಕೆಯೂ ಜಾರಿಯಲ್ಲಿದೆ.ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದವಳಾದರೂ ಮೇನ್‌ ಬ್ರಾಯುತ್‌ ಕಂಗೆಡಲಿಲ್ಲ. ತನ್ನ ಕೆಲಸಗಳ ಜತೆ ಮಕ್ಕಳಿಗಾಗಿ ಪುರುಷರ ಕೆಲಸವನ್ನೂ ಮಾಡಿದಳು, ಬಿಡುವಿಲ್ಲದೇ ದುಡಿದಳು.ಗಂಡನ ಮೇಲಷ್ಟೇ ಹೊಣೆ ಹೊರಿಸಲಿಲ್ಲ, ಬದಲಾಗಿ ತಾನೇ ಹೊತ್ತಳು. ಕುಟುಂಬ ತೊರೆದು ಹೋಗದೇ ಎಲ್ಲವನ್ನೂ ಎದುರಿಸಿದಳು.
ಯಾರಲ್ಲದಿದ್ದರೂ ತನ್ನನ್ನು ದೈವ ಕಾಪಾಡುತ್ತದೆ ಎಂಬ ಅಚಲ ನಂಬಿಕೆಯೊಂದೇ ಆಕೆಗಿದ್ದ ಆಧಾರ. ಹಾಗಾಗಿ, ನಿತ್ಯವೂ ಪೂಜೆ ಮಾಡಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಅಭ್ಯುದಯ ಆಕೆಯ ಏಕೈಕ ಗುರಿಯಾಗಿತ್ತು. ಅದನ್ನು ನಿಷ್ಠೆಯಿಂದ ಮಾಡಿ ಯಶಸ್ಸು ಪಡೆದಳು. ತನ್ನ ಕರ್ತವ್ಯ ಮುಗಿಸಿದ ನಂತರ ಮಕ್ಕಳಿಂದ ಏನನ್ನೂ ಅಪೇಕ್ಷಿಸದೇ ಯೋಗಸಮಾಧಿ ಪಡೆದದ್ದು ಎಲ್ಲರಿಗೂ ಆದರ್ಶ ಎಂದು ಅಲ್ಲಿನವರು ನಂಬುತ್ತಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಧರ್ಮೀಯರ ಜತೆ ಬೌದ್ಧಧರ್ಮೀಯರೂ ಈಕೆಯನ್ನು ಮಕ್ಕಳನ್ನು ಕಾಪಾಡುವ ಹಾರಿತಿ ಎಂಬ ದೇವತೆಯನ್ನಾಗಿ ಪೂಜಿಸುತ್ತಾರೆ.
ಸರ್ಕಾರಿ ಕೆಲಸದ ಆಮಿಷ: ವಂಚಿಸಿದ ಹಣದಲ್ಲಿ ಚಿನ್ನಾಭರಣ ಖರೀದಿಸಿ ಎಸ್‌ಡಿಎ ದರ್ಬಾರ್..! | SDA Arrested for Fraud Case in Bengaluru grg
* ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಕೃತ್ಯ
* 50ಕ್ಕೂ ಹೆಚ್ಚು ಜನರಿಗೆ 60 ಲಕ್ಷ ವಂಚನೆ
* ಅಭಿಯೋಜಕ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಸೇರಿ ಇಬ್ಬರು ಸರ್ಕಾರಿ ನೌಕರರ ಸೆರೆ
Bengaluru, First Published Sep 30, 2021, 10:30 AM IST
ಬೆಂಗಳೂರು(ಸೆ.30): ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಜನರಿಗೆ ವಂಚನೆ ಪ್ರಕರಣ ಸಂಬಂಧ ಅಭಿಯೋಜಕ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ(SDA) ಸೇರಿದಂತೆ ಇಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಭಿಯೋಜಕ ಇಲಾಖೆ ಸಹಾಯಕ ದರ್ಜೆ ಸಹಾಯಕಿ ಶ್ರೀಲೇಖ ಹಾಗೂ ವಿಧಾನಸೌಧ ಗ್ರೂಪ್‌ ಡಿ ನೌಕರ ಮೋಹನ್ ಅಲಿಯಾಸ್‌ ಸಂಪತ್‌ ಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಸೇರಿದಂತೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದೇ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ರಾಜ್ಯ ಕಾಂಗ್ರೆಸ್‌ ಪಕ್ಷದ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕುಮಾರಸ್ವಾಮಿ ಲೇಔಟ್‌ನ ಜಿ.ಮಂಜುನಾಥ್ ಅವರಿಂದ ಹಣ ಪಡೆದು ಆರೋಪಿಗಳು ವಂಚಿಸಿದ್ದರು.(Fraud) ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂಗಾವತಿ: ಅಮಾಯಕ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ರಾ ಶಾಸಕರ ಪತ್ನಿ?
ವಂಚಿಸಿದ ದುಡ್ಡಲ್ಲಿ ಚಿನ್ನ ಖರೀದಿ:
ಅಭಿಯೋಜಕ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಶ್ರೀಲೇಖ, ಐಷರಾಮಿ ಜೀವನದಾಸೆಗೆ ಬಿದ್ದು ಅಡ್ಡದಾರಿ ತುಳಿದಿದ್ದಳು. ಹಣದಾಸೆ ತೋರಿಸಿ ಡಿ ಗ್ರೂಪ್ನೌಕರ ಮೋಹನ್ನನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಳು. ತನಗೆ ರಾಜ್ಯ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಪರಿಚಯಸ್ಥರಿದ್ದಾರೆ. ಅವರ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಜನರಿಗೆ ಹೇಳಿ ಶ್ರೀಲೇಖ ಹಣ ಪಡೆದು ವಂಚಿಸಿದ್ದರು. ಆಕೆ ಇದುವರೆಗೆ ಸುಮಾರು .60 ಲಕ್ಷ ವಂಚಿಸಿರುವುದಕ್ಕೆ ಪುರಾವೆ ಸಿಕ್ಕಿದೆ. ಹೀಗೆ ಸಂಪಾದಿಸಿದ ಹಣದಲ್ಲಿ ಏಳೆಂಟು ಲಕ್ಷ ಸಾಲ ತೀರಿಸಿದ್ದ ಆಕೆ, ಇನ್ನುಳಿದ ಹಣದಲ್ಲಿ ಚಿನ್ನ ಹಾಗೂ ಹೊಸ ಸ್ಕೂಟರ್‌ ಖರೀದಿಸಿ ಮೋಜು ಮಸ್ತಿ ಮಾಡಿದ್ದಳು ಎಂದು ಪೊಲೀಸರು(Police) ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಶ್ರೀಲೇಖಳಿಗೆ ಮಂಜುನಾಥ್ ಅವರನ್ನು ಕೆಪಿಸಿಸಿ(KPCC) ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್ಪರಿಚಯ ಮಾಡಿಸಿದ್ದರು. ಬಳಿಕ ಗೃಹ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಆಕೆ, ಮಂಜುನಾಥ್ ಅವರಿಂದ .15 ಲಕ್ಷ ವಸೂಲಿ ಮಾಡಿ ವಂಚಿಸಿದ್ದಳು. ಇದಾದ ನಂತರ ಮಂಜುನಾಥ್ಮೂಲಕ ಸುಮಾರು 50ಕ್ಕೂ ಹೆಚ್ಚು ಜನರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಶ್ರೀಲೇಖ ವಂಚಿಸಿದ್ದಳು ಎಂದು ಮೂಲಗಳು ಹೇಳಿವೆ.
ಕೇಸರ್ಕರ್‌ ಕಹಾನಿ ಬಂದದ್ದೇ ಭಾಗ್ಯ | Udayavani - ಉದಯವಾಣಿ
ಅದು ಕೊಳ್ಳೆಗಾಲ ತಾಲೂಕಿನ ವಂಡರಬಾಳು ಗ್ರಾಮ. ಆ ಊರ ಶಾಲೆಯಲ್ಲಿ ಆ ಹುಡುಗ ಆಗ 8 ನೇ ತರಗತಿ ಓದುತ್ತಿದ್ದ. ಆ ದಿನಗಳಲ್ಲೇ ಆ ಹುಡುಗನಿಗೆ ಕಲೆ ಮೇಲೆ ಎಲ್ಲಿಲ್ಲದ ಪ್ರೀತಿ. ಶಾಲಾ ವಾರ್ಷಿಕೋತ್ಸವಗಳಲ್ಲಿ ಬೇರೆ ಹುಡುಗರು ನಾಟಕ ಮಾಡಲು ಅಣಿಯಾಗುವಾಗ, ಆ ಹುಡುಗನನ್ನು ಯಾರೊಬ್ಬರೂ ಸೇರಿಸಿಕೊಳ್ಳುತ್ತಿರಲಿಲ್ಲ. ಕಾರಣ, ಅವನು ಆಜಾನುಬಾಹು. ಅಂದರೆ ಸಿಕ್ಕಾಪಟ್ಟೆ ಎತ್ತರ ಇದ್ದಾನೆಂಬುದು. ಕೊನೆಗೆ ಕಾಡಿ, ಬೇಡಿದ್ದಕ್ಕೆ ಆ ಹುಡುಗನಿಗೊಂದು ಹುಡುಗಿ ಪಾತ್ರ ಕೊಡುತ್ತಾರೆ.
ಒಳ್ಳೇ ಎತ್ತರದ ನಿಲುವಲ್ಲಿದ್ದ ಆ ಹುಡುಗ ನಾಟಕ ಮಾಡಿಸುತ್ತಿದ್ದ ಮಾಸ್ಟರ್‌ ಕಣ್ಣಿಗೆ ಬೀಳುತ್ತಾನೆ. ಅಭ್ಯಾಸ ವೇಳೆ ಆ ಹುಡುಗನಲ್ಲಿರುವ ಶ್ರದ್ಧೆ,ಭಕ್ತಿ ನೋಡಿ, ಹುಡುಗಿ ಪಾತ್ರ ಬಿಟ್ಟು, ಆ ನಾಟಕದ ಹೀರೋ ಪಾತ್ರವನ್ನು ಕೊಡುತ್ತಾರೆ. ನಾಟಕದಲ್ಲಿ ಆ ಹುಡುಗ ಮಿಂಚುತ್ತಾನೆ. ಮುಂದಿನ ಮೂರು ವರ್ಷ ನಡೆದ ವಾರ್ಷಿಕೋತ್ಸವದ ನಾಟಕದಲ್ಲೂ ಆ ಹುಡುಗನೇ ಲೀಡ್‌ ರೋಲ್‌ ಮಾಡುತ್ತಾನೆ. ಅಷ್ಟೇ ಅಲ್ಲ, ಮೈಸೂರಲ್ಲಿ ನಡೆದ ಅಂತಾರಾಜ್ಯ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಿಟ್ಟಿಸಿಕೊಂಡು ಪ್ರಶಂಸೆ ಪಡೆಯುತ್ತಾನೆ.
ಆ ಶಾಲೆ, ಆ ಊರಲ್ಲಿ ಹುಡುಗನ ಬಗ್ಗೆ ಮೆಚ್ಚುಗೆ ಸಿಗುತ್ತೆ. ಅಲ್ಲಿಂದ ಕಲೆ ಮೇಲಿನ ಪ್ರೀತಿ ಹೆಚ್ಚಿಸಿಕೊಂಡ ಆ ಹುಡುಗ ಇದೀಗ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 180 ಚಿತ್ರಗಳಲ್ಲಿ ನಟಿಸಿದ್ದಾಗಿದೆ. ಡಾ.ರಾಜ್‌ಕುಮಾರ್‌ ಹೊರತುಪಡಿಸಿ ಎಲ್ಲಾ ಸ್ಟಾರ್‌ನೊಂದಿಗೂ ಪರದೆ ಹಂಚಿಕೊಂಡಾಗಿದೆ. ಅದು ಬೇರಾರೂ ಅಲ್ಲ, ಗಣೇಶ್‌ರಾವ್‌ ಕೇಸರ್ಕರ್‌. ಇವರು ಚಿತ್ರರಂಗಕ್ಕೆ ಕಾಲಿಟ್ಟು ಒಂದುವರೆ ದಶಕದ ಆಸುಪಾಸು. ಇಷ್ಟು ವರ್ಷಗಳ ಸಿನಿಪಯಣದಲ್ಲಾದ ಅನುಭವ ಕುರಿತು "ರೂಪತಾರ" ಜತೆ ಮಾತನಾಡಿದ್ದಾರೆ.
ಕಿರುತೆರೆಯಲ್ಲಿ ಸಿಕ್ಕ ಭಾಗ್ಯ!: ನನ್ನ ತಂದೆ ಆರ್ಮಿ ಆಫೀಸರ್‌. ನಾನು ಹುಟ್ಟಿದ್ದು ಹಲಸೂರು ಕಮಾಂಡ್‌ ಆಸ್ಪತ್ರೆಯಲ್ಲಿ. ತಂದೆ ಆರ್ಮಿಯಲ್ಲಿದ್ದುದರಿಂದ ಅಲ್ಲಲ್ಲಿ ವರ್ಗಾವಣೆ ಆಗುತ್ತಿತ್ತು. ಆಗ, ನನ್ನ ತಾಯಿ ಹುಟ್ಟೂರಾದ ಕೊಳ್ಳೆಗಾಲ ತಾಲೂಕಿನ ವಂಡರಬಾಳುವಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ಪಿಯುಸಿವರೆಗೆ ಓದಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆ. ಇಲ್ಲಿ ಬಂದವನಿಗೆ ಮತ್ತೆ ಕಲೆಯ ಮೇಲೆ ಪ್ರೀತಿ ಹೆಚ್ಚಾಯ್ತು. ರಂಗಭೂಮಿಯತ್ತ ಮುಖ ಮಾಡಿದೆ. ದಿವ್ಯಜ್ಯೋತಿ ಕಲಾಸಂಘ ಎಂಬ ರಂಗತಂಡ ಸೇರಿಕೊಂಡು ಹಲವು ನಾಟಕ ಪ್ರಯೋಗ ಮಾಡಿದೆ.
ಅದೇ ವೇಳೆಗೆ ದೂರದರ್ಶನ (ಡಿಡಿ1)ದಲ್ಲಿ "ಭಾಗ್ಯಚಕ್ರ' ಧಾರಾವಾಹಿ ಶುರುವಾಗಿತ್ತು. ಅಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ಅದು ನನ್ನ ಮೊದಲ ಧಾರಾವಾಹಿ. ಅದೇ ಮೊದಲ ಸಲ ನಾನು ಟಿವಿಯಲ್ಲಿ ಕಾಣಿಸಕೊಂಡೆ. ಆ ಬಳಿಕ "ಮಂಜು ಕರಗಿತು', "ಮಮಕಾರ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದೆ. ಅಲ್ಲಿಂದ ಗಾಂಧಿನಗರದ ಅಂಗಳಕ್ಕೂ ಕಾಲಿಟ್ಟೆ. ಅಲ್ಲಿ ಸಿಕ್ಕ ಮೊದಲ ಸಿನಿಮಾ ಅವಕಾಶ "ಚಾಮುಂಡಿ'. ಮಾಲಾಶ್ರೀ ಮತ್ತು ಖುಷು³ ಅಭಿನಯದ ಆ ಚಿತ್ರದಲ್ಲಿ ಚಿಕ್ಕ ಡಾಕ್ಟರ್‌ ಪಾತ್ರ ಮಾಡಿದೆ.
ಅಲ್ಲಿಂದ ನನ್ನ ಸಿನಿ ಜರ್ನಿ ಶುರುವಾಗಿ, ಇಲ್ಲಿಯವರೆಗೆ ಸುಮಾರು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ಪಾತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ನಾಯಕನಾಗಿ "ನಮ್ಮವರು' ಚಿತ್ರದಲ್ಲಿ ನಟಿಸಿದೆ. ಅದು ನನ್ನ 150 ನೇ ಚಿತ್ರ. ಅದೊಂದು ಭಾವನಾತ್ಮಕ ಸಂಬಂಧದ ಕಥೆ. ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು ಎಂದು ಹೇಳುತ್ತಾರೆ ಗಣೇಶ್‌ರಾವ್‌ ಕೇಸರ್ಕರ್‌. ನನ್ನ ಈ ಪಯಣಕ್ಕೆ ಮನೆಯವರು ಸಾಥ್‌ ಕೊಟ್ಟಿದ್ದಾರೆ. ಮೊದ ಮೊದಲು ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ.
ಕಲೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಯಾಕೆಂದರೆ, ಅಪ್ಪ ಮಿಲಿಟರಿಯಲ್ಲಿದ್ದವರು. ತುಂಬಾ ಶಿಸ್ತಿನಿಂದ ಬೆಳೆಸಿದ್ದರು. ನನ್ನನ್ನೂ ಮಿಲಿಟರಿಗೆ ಸೇರಿಸಬೇಕೆಂಬ ಆಸೆ ತಂದೆಯದ್ದು. ಆದರೆ, ನನ್ನ ತಾಯಿಗೆ ಆ ಆಸೆ ಇರಲಿಲ್ಲ. ಕಾರಣ, ತಂದೆ ಕಷ್ಟಪಡುತ್ತಿದ್ದನ್ನು ನೋಡಿದ್ದರು. ಅಲ್ಲದೆ, ತಿಂಗಳಿಗೊಂದು ಪತ್ರದ ಮೂಲಕ ಯೋಗಕ್ಷೇಮ ವಿಚಾರಿಸುತ್ತಿದ್ದರು. ವರ್ಷದಲ್ಲಿ ಹದಿನೈದು ದಿನ ಮಾತ್ರ ನಮ್ಮನ್ನು ನೋಡಲು ಬರುತ್ತಿದ್ದರು. ಹೀಗಾಗಿ ನನ್ನ ತಾಯಿ, ನನ್ನನ್ನು ಆರ್ಮಿಗೆ ಕಳುಹಿಸಲು ಇಷ್ಟಪಡಲಿಲ್ಲ. ನಮ್ಮನೆಯಲ್ಲಿ ನಟರ್ಯಾರೂ ಇಲ್ಲ. ಹಾಗಾಗಿ ಮೊದಲು ಯಾರೂ ಸಹಕರಿಸಲಿಲ್ಲ. ನಂತರದ ದಿನಗಳಲ್ಲಿ ಫೇಮ್‌ ಬರುವುದನ್ನು ಗಮನಿಸಿ, ಅಕ್ಕ, ತಮ್ಮ ಎಲ್ಲರೂ ಪ್ರೋತ್ಸಾಹಿಸಿದರು ಎಂಬುದು ಅವರ ಮಾತು.
ವಜ್ರಮುನಿ ರೀತಿ ಖಳನಟನಾಗಬೇಕು...!: ನಟನೆಯೊಂದಿಗೆ ನಿರ್ದೇಶನದ ಮೇಲೂ ಆಸೆ ಇಟ್ಟುಕೊಂಡಿದ್ದೆ. ಹಾಗಾಗಿ ನಾನು "ಪುನಾರಂಭ' ಎಂಬ ಚಿತ್ರದಲ್ಲಿ ನಿರ್ದೇಶನ ಕೆಲಸ ಮಾಡಿದೆ. ಆ ಆಸಕ್ತಿ ಮೂಡಿದ್ದು, ಸಿನಿಮಾಗಳಲ್ಲಿ ಕೆಲಸ ಮಾಡುವಾಗ, ನಿರ್ದೇಶಕರು ಮಾಡುತ್ತಿದ್ದ ಕೆಲಸವನ್ನು ನೋಡುತ್ತಿದ್ದೆ. ನಾನು ನನ್ನ ದೃಶ್ಯ ಮುಗಿದ ಮೇಲೂ, ಆ ನಿರ್ದೇಶಕ ಯಾವ ದೃಶ್ಯವನ್ನು ಹೇಗೆ ಕಂಪೋಸ್‌ ಮಾಡ್ತಾರೆ, ಕ್ಯಾಮೆರಾ ಎಲ್ಲಿ ಹಿಡಿಸಿ ದೃಶ್ಯವನ್ನು ಸೆರೆ ಹಿಡಿಯುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.
ಒಬ್ಬೊಬ್ಬ ನಿರ್ದೇಶರಕದ್ದು ಒಂದೊಂದು ಶೈಲಿಯಲ್ಲಿ ನಿರ್ದೇಶನದ ಕೆಲಸವಿರುತ್ತಿತ್ತು. ಅವರೆಲ್ಲರ ಕೆಲಸ ನೋಡಿಕೊಂಡೇ ನಾನು ನಿರ್ದೇಶನ ಮಾಡುವ ಮನಸ್ಸು ಮಾಡಿದೆ. ಅದೊಂದು ಹೊಸತರಹದ ಅನುಭವ. ಇನ್ನು, ನಾನು ಡಾ.ರಾಜ್‌ಕುಮಾರ್‌ ಅವರನ್ನು ಹೊರತುಪಡಿಸಿ ಬಹುತೇಕ ಸ್ಟಾರ್‌ ನಟರ ಜತೆ ನಟಿಸಿದ್ದೇನೆ. ಶಿವಣ್ಣ, ಸುದೀಪ್‌, ಪುನೀತ್‌,ದರ್ಶನ್‌, ಗಣೇಶ್‌ ಸೇರಿದಂತೆ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ಆದರೆ, ಎಲ್ಲಾ ಕಲಾವಿದರಿಗೂ ಇದ್ದಂತೆ ನನಗೂ ಒಂದು ಆಸೆ ಇದೆ.
ಅದು ಖಳನಟ ವಜ್ರಮುನಿ ಅವರ ರೀತಿ ಪ್ರಮುಖ ಖಳ ಪಾತ್ರ ಮಾಡುವ ಆಸೆ ಇದೆ. ಯಾವುದೇ ದೊಡ್ಡ ಹೀರೋ ಇದ್ದರೂ, ಅಲ್ಲಿ ವಿಲನ್‌ಗೂ ಅಷ್ಟೇ ಜಾಗ ಇರುತ್ತೆ. ಹಾಗಾಗಿ ನಾನು ಅಂಥದ್ದೊಂದು ಖಳನಟನ ಪಾತ್ರ ಮಾಡುವ ತವಕದಲ್ಲಿದ್ದೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಗಣೇಶ್‌ರಾವ್‌. ಇಲ್ಲಿಯವರೆಗೆ ನಾನು ಹೆಚ್ಚಾಗಿ ಗುರುತಿಸಿಕೊಂಡಿದ್ದು ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರಗಳಲ್ಲಿ. ಒಳ್ಳೆಯ ಪೊಲೀಸ್‌ ಆಗಿಯೂ, ಕೆಟ್ಟ ಪೊಲೀಸ್‌ ಆಗಿಯೂ ಕಾಣಿಸಿಕೊಂಡಿರುವುದುಂಟು.
ಹಾಗೆ ಹೇಳುವುದಾದರೆ, ನನಗೆ ಸಿಕ್ಕಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರಗಳೆಲ್ಲವೂ ತೃಪ್ತಿ ಕೊಟ್ಟಿವೆ. ದರ್ಶನ್‌ ಜೊತೆ "ಸಾರಥಿ' ಚಿತ್ರದಲ್ಲಿ ಮಾಡಿದ ಇನ್ಸ್‌ಪೆಕ್ಟರ್‌ ಪಾತ್ರ ನನಗೆ ತುಂಬಾನೇ ಮೈಲೇಜ್‌ ಕೊಟ್ಟಿತು. ಕೆಲ ನಿರ್ದೇಶಕರು ಸ್ಕ್ರಿಪ್ಟ್ ಮಾಡುವಾಗ, ಇನ್ಸ್‌ಪೆಕ್ಟರ್‌ ಅಂದರೆ, ಗಣೇಶ್‌ರಾವ್‌ ಅಂತ ಫಿಕ್ಸ್‌ ಮಾಡಿಬಿಟ್ಟಿರುತ್ತಾರೆ. ಕಾಲ್‌ ಮಾಡಿ ನಿನಗೆ ಪೊಲೀಸ್‌ ಅಧಿಕಾರಿ ಪಾತ್ರ ಇದೆ ಮಾಡಿ ಅಂತಾರೆ. ನಾನೊಬ್ಬ ಕಲಾವಿದ ಬಂದ ಪಾತ್ರವನ್ನು ಒಪ್ಪಿ ಮಾಡುವುದಷ್ಟೇ ಕೆಲಸ. ಎಷ್ಟೋ ಜನ ಒಂದೇ ಪಾತ್ರಕ್ಕೆ ಬ್ರಾಂಡ್‌ ಆಗಿಬಿಟ್ಟಿದ್ದೀಯ ಅಂತಾರೆ,
ಏನ್ಮಾಡೋದು, ನಿರ್ದೇಶಕರು ಬಯಸಿ ಅಂತಹ ಪಾತ್ರ ಕೊಟ್ಟರೆ ಬೇಡ ಅನ್ನುವುದಕ್ಕಾಗಲ್ಲ. ಚಿತ್ರರಂಗ ಕಲಾದೇಗುಲವಿದ್ದಂತೆ. ಇಲ್ಲಿ ಎಲ್ಲರಿಗೂ ಸುಲಭವಾಗಿ ಜಾಗ ಸಿಗುವುದಿಲ್ಲ. ನಾನೂ ಸಾಕಷ್ಟು ಕಷ್ಟಪಟ್ಟು ಇಲ್ಲಿ ಒಂದಷ್ಟು ಜಾಗ ಮಾಡಿಕೊಂಡಿದ್ದೇನೆ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಕೊಟ್ಟು ಆ ಬಳಿಕ ಅವು ಮಿಸ್‌ ಆಗಿದ್ದುಂಟು. ಒಂದು ಪಾತ್ರಕ್ಕೆ ಮೂವರನ್ನು ಕರೆಸಿ, ಯಾರಧ್ದೋ ರೆಕ್ಮಂಡ್‌ನಿಂದ ಆ ಪಾತ್ರ ಬೇರೆಯವರಿಗೆ ಸಿಕ್ಕಾಗಲೂ ಮನಸ್ಸಿಗೆ ಬೇಸರವಾಗಿದ್ದೂ ಇದೆ.
ಅಂತಹ ಸಂದರ್ಭ ಎದುರಿಸಿ, ಅವಮಾನಗಳನ್ನು ಸಹಿಸಿಕೊಂಡು ಕಲೆಯನ್ನು ಗೌರವಿಸಿಕೊಂಡು ಬಂದಿದ್ದರಿಂದ ಇಂದು ಎಲ್ಲರೂ, ಗುರುತಿಸಿ, ಒಳ್ಳೆಯ ಪಾತ್ರ ಕೊಡುತ್ತಿದ್ದಾರೆ. ಆ ಪ್ರೀತಿ ಉಳಿಸಿಕೊಂಡು ಬಂದಿರುವುದಕ್ಕೆ ಇದೆಲ್ಲಾ ಸಾಧ್ಯವಾಗಿದೆ. ನನಗೆ ನಿರ್ದೇಶನದಲ್ಲೂ ಆಸಕ್ತಿ ಇದೆ. ಆದರೆ, ನಟನೆಗೆ ಮೊದಲ ಆದ್ಯತೆ ಕೊಡ್ತೀನಿ. ಅವಕಾಶ ಸಿಕ್ಕಾಗ ನಿರ್ದೇಶನ ಮಾಡುತ್ತೇನೆ. ಇನ್ನು, "ನಮ್ಮವರು' ಮೂಲಕ ಹೀರೋ ಆಗಿಬಿಟ್ಟೆ ಅಂತ, ಪೋಷಕ ಪಾತ್ರ ಮಾಡುವುದನ್ನು ಬಿಡುವುದಿಲ್ಲ. ಸಣ್ಣ ಪಾತ್ರ, ದೊಡ್ಡ ಪಾತ್ರ ಅನ್ನದೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡ್ತೀನಿ ಎನ್ನುತ್ತಾರೆ ಅವರು.
ಲೈಫ‌ಲ್ಲಿ ಮರೆಯದ ಅನುಭವ...: ಇಷ್ಟು ವರ್ಷಗಳ ಸಿನಿಮಾ ಪಯಣದಲ್ಲಿ ನನಗೆ ಸಾಕಷ್ಟು ಅನುಭವಗಳಾಗಿವೆ. ಅಂತಹ ಅನುಭವಗಳನ್ನು ಮರೆಯುವುದಕ್ಕಾಗುವುದಿಲ್ಲ. ಆದರೆ, ಒಂದೇ ಒಂದು ಘಟನೆ ಮಾತ್ರ ನನ್ನ ಬದುಕಿನಲ್ಲಿ ಮರೆಯಲಾರದ ಅನುಭವ ಆಗಿದೆ. ಅದು "ಅಣ್ಣಾವ್ರು' ಚಿತ್ರದ ಚಿತ್ರೀಕರಣದಲ್ಲಿ ನಡೆದದ್ದು. ಆ ಚಿತ್ರದಲ್ಲಿ ಅಂಬರೀಷ್‌ ಮತ್ತು ದರ್ಶನ್‌ ನಟಿಸಿದ್ದಾರೆ. ಅದರಲ್ಲಿ ನಾನು ಅಂಬರೀಷ್‌ ಅವರ ಅಸಿಸ್ಟೆಂಟ್‌ ಆಗಿರುವ ಪಾತ್ರ ಮಾಡಿದ್ದೇನೆ. ಅದು ಕನ್ನಂಬಾಡಿ ಕಟ್ಟೆ ಬ್ರಿಡ್ಜ್.
ಅಲ್ಲಿ ಅಂಬರೀಷ್‌ ಮತ್ತು ದರ್ಶನ್‌ ಅವರ ಇಂಟ್ರಡಕ್ಷನ್‌ ದೃಶ್ಯ ಚಿತ್ರೀಕರಣವಾಗುತ್ತಿತ್ತು. ರಾತ್ರಿ ಎಫೆಕ್ಟ್‌ನಲ್ಲಿ ಮಳೆ ಬರುವ ದೃಶ್ಯವದು. ನಾನು ಅಂಬರೀಷ್‌ ಅವರಿಗೆ ಛತ್ರಿ ಹಿಡಿದು ಹಿಂದಿಂದೆ ಬರುವ ಪಾತ್ರ. ಜೋರು ಮಳೆಗೆ ಮೈಯೆಲ್ಲಾ ಒದ್ದೆಯಾಗಿತ್ತು. ಆ ಶಾಟ್‌ ಓಕೆ ಆದಾಗ, ಅಂಬರೀಷ್‌, ದರ್ಶನ್‌ ಅವರ ಅಸಿಸ್ಟೆಂಟ್‌ಗಳು ಓಡೋಡಿ ಬಂದು, ಒದ್ದೆಯಾಗಿದ್ದ ಅವರ ತಲೆಯನ್ನು ಟವೆಲ್‌ನಿಂದ ಒರೆಸುತ್ತಾ, ಕೈ, ಕಾಲು ಉಜ್ಜುತ್ತಿದ್ದರು. ಇನ್ನು ಕೆಲವರು ಕಾಫಿ ಕೊಡುತ್ತಿದ್ದರು.
ಆದರೆ, ನಾನು ಮಾತ್ರ ಆ ರಾತ್ರಿಯಲ್ಲಿ ಕೊರೆವ ಛಳಿಯಲ್ಲೇ ಒದ್ದೆಯಾಗಿದ್ದ ದೇಹದೊಂದಿಗೆ ನಡುಗುತ್ತ ಕುಳಿತಿದ್ದೆ. ನನ್ನನ್ನು ಗಮನಿಸಿದ ಅಂಬರೀಷ್‌ ಅವರು, ನಿರ್ದೇಶಕರು ಸೇರಿದಂತೆ ಅಲ್ಲಿದ್ದವರನ್ನೆಲ್ಲಾ ಕರೆದು ಬೈಯ್ದರು. ನಮಗಷ್ಟೇ, ನೋಡಿಕೊಳ್ಳೋದಲ್ಲ, ಆ ಹುಡುಗ ಕೂಡ ನೀರಲ್ಲಿ ನೆಂದು, ಛಳಿಯಲ್ಲಿ ನಡುಗುತ್ತಿದ್ದಾನೆ. ಅವನಿಗೂ ಟವೆಲ್‌ ಕೊಟ್ಟು, ಕಾಫಿ ಕೊಡ್ರಯ್ಯ ಅಂದಿದ್ದರು ಎಂದು ಆ ಘಟನೆ ನೆನಪಿಸಿಕೊಂಡು ಹಾಗೊಮ್ಮೆ ಕಣ್ತುಂಬಿಕೊಂಡ ಗಣೇಶ್‌ರಾವ್‌, ಆ ಘಟನೆ ಮತ್ತು ಅನುಭವ ಮರೆಯುವುದಕ್ಕಾಗುವುದಿಲ್ಲ ಎನ್ನುತ್ತಾರೆ.
ಶಿವಾಜಿ ಸಿನಿಮಾದ ಹಿಂದೆ ನಿಂತು...: ನಾನೊಬ್ಬ ಕಲಾವಿದ ಆಗಿದ್ದೇನೆಂದರೆ, ಅದು ನನ್ನ ಮನೆಯವರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಸಿನಿಮಾ ಚಿತ್ರೀಕರಣವೆಂದರೆ, ಇಡೀ ದಿನ ಹೊರಗೇ ಇರಬೇಕು. ನಿತ್ಯವೂ ಹಾಗೇ ಇದ್ದರೆ, ಮನೆಯವರ ಜತೆ ಕಾಲ ಕಳೆಯಲು ಆಗಲ್ಲ. ಮನೆ ಬಗ್ಗೆ ಯೋಚಿಸಿದರೆ, ಅಲ್ಲಿ ಕೆಲಸ ಮಾಡೋಕ್ಕಾಗುವುದಿಲ್ಲ. ಹಾಗಾಗಿ ನನ್ನ ಪತ್ನಿ, ನನಗೆ ಯಾವುದೇ ಟೆನÒನ್‌ ಕೊಡದೆ, ಇಡೀ ಸಂಸಾರವನ್ನು ತೂಗಿಸಿಕೊಂಡು ಹೋಗಿದ್ದರಿಂದಲೇ ನಾನು ಕಲಾವಿದನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
ನನ್ನ ಮಗಳು ಮಧು ಕೇಸರ್ಕರ್‌ ಎಂ.ಕಾಂ ಮುಗಿಸಿದ್ದಾಳೆ. ಅವಳು ಸುವರ್ಣದಲ್ಲಿ ಬಂದ "ಆ್ಯಕ್ಷನ್‌ ಸ್ಟಾರ್‌' ರಿಯಾಲಿಟಿ ಶೋನ ವಿನ್ನರ್‌, ಉದಯ ಟಿವಿಯಲ್ಲಿ ಬಂದ ಕಬಡ್ಡಿ ಶೋನಲ್ಲಿ ವಿನ್ನರ್‌ ಆಗಿದ್ದಾಳೆ. ಮಗ ಬಿಇ ಓದುತ್ತಿದ್ದಾನೆ. ನ್ಯಾಷನಲ್‌ಲೆವೆಲ್‌ನ ಕರಾಟೆ ಪಟು ಕೂಡ ಹೌದು. ಮಕ್ಕಳಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ನನ್ನ ಚಿತ್ರ ನೋಡಿ ಕಾಮೆಂಟ್‌ ಮಾಡ್ತಾರೆ. ನೆಗೆಟಿವ್‌ ಪಾತ್ರ ಮಾಡಿದಾಗ ಅಂತಹ ಪಾತ್ರ ಮಾಡಬೇಡಿ ಅನ್ನುತ್ತಾರೆ.
ನಾನು ಕಲಾವಿದನಾಗಿ ಬಂದ ಪಾತ್ರ ಮಾಡಬೇಕಲ್ವಾ ಅಂದಾಗ ಸುಮ್ಮನಾಗುತ್ತಾರೆ. ಬಹಳಷ್ಟು ನಿರ್ದೇಶಕರು ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲೂ ಗುರುತಿಸಿಕೊಳ್ಳುವ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಿರ್ದೇಶನ, ಪ್ರೊಡಕ್ಷನ್ಸ್‌ ಯೋಚನೆ ಇದೆ. ಯಾವಾಗ ಕೂಡಿ ಬರುತ್ತೋ ಗೊತ್ತಿಲ್ಲ. ಈಗಾಗಲೇ "ಸ್ವರಾಷ್ಟ್ರ ಸೂರ್ಯ ಶಿವಾಜಿ' ಎಂಬ ಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಯುತ್ತಿದೆ. ಸ್ಕ್ರಿಪ್ಟ್ ಪೂಜೆಯೂ ನೆರವೇರಿದೆ.
ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಅವರ ಸಹಕಾರ ಆ ಚಿತ್ರಕ್ಕಿದೆ ಎಂದು ವಿವರಿಸುವ ಗಣೇಶ್‌ರಾವ್‌, ಕನ್ನಡ ನಿರ್ದೇಶಕರಲ್ಲಿ ಒಂದು ವಿನಂತಿ. ಇಲ್ಲಿ ನಮ್ಮವರೇ ಸಾಕಷ್ಟು ಪೋಷಕ ಕಲಾವಿದರಿದ್ದಾರೆ. ಅಂತಹವರನ್ನು ಗುರುತಿಸಿ ಅವಕಾಶ ಕೊಡಿ. ಕಲೆಯನ್ನೇ ನಂಬಿದವರಿದ್ದಾರೆ. ಬೇರೆ ಕಡೆಯಿಂದ ಕರೆದುಕೊಂಡು ಬಂದು ಪಾತ್ರ ಕೊಡಲು ಅಭ್ಯಂತರವಿಲ್ಲ. ಆದರೆ, ನಮ್ಮವರನ್ನೂ ಗಣನೆಗೆ ತೆಗೆದುಕೊಳ್ಳಿ. ಸ್ಟಾರ್ ಚಿತ್ರಗಳಲ್ಲಿ ಇಲ್ಲಿಯ ಪೋಷಕ ಕಲಾವಿದರನ್ನು ಉಪ್ಪು, ಖಾರ, ಸಾಸಿವೆಯಂತಾದರೂ ಉಪಯೋಗಿಸಿಕೊಳ್ಳಿ ಎಂದು ಮನವಿ ಮಾಡುತ್ತಾರೆ.
ತೆರಿಗೆ ವಸೂಲಾತಿ: Latest ತೆರಿಗೆ ವಸೂಲಾತಿ News & Updates, Photos & Images, Videos | Vijaya Karnataka
ಅರುಣ್ ಜೇಟ್ಲಿ ಅಂತಿಮ ಯಾತ್ರೆ: ಅಸಂಖ್...
ಪ್ರಧಾನಿ ಮೋದಿ ಮನ್ ಕಿ ಬಾತ್ ಮುಖ್ಯಾಂ...
Man vs Wild: ಬೇರ್ ಗ್ರಿಲ್ಸ್‌‌ಗೆ ಹ...
ಸಿದ್ದರಾಮಯ್ಯನವರು ನನ್ನ ಮೊದಲ ಶತ್ರುವಲ್ಲ: ಮಾಜಿ ಸಿಎಂ ಎಚ್...
ಮಂಗಳವಾರ ಬಿಜೆಪಿ ನೂತನ ರಾಜ್ಯಾಧ್ಯಕ್ಷ...
ಮತ್ತೆ ಒಂದಾಗಲಿದ್ದಾರೆ ವಿರಾಟ್ ಕೊಹ್ಲಿ- ಸಂಜಯ್ ಬಂಗಾರ್?
ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ದಾ...
ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಮಹೇಂ...
August,25,2019, 17:01:12
ತೆರಿಗೆ ವಸೂಲಾತಿ