text
stringlengths
0
61.5k
ಪುರಸಭೆಗೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿದರೆ ಶೀಘ್ರ ಅಭಿವೃದ್ಧಿ ಸಾಧ್ಯ
ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ಪಟ್ಟಣದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪುರಸಭೆಯ ನೂತನ ಮುಖ್ಯಾಧಿಕಾರಿ ನಟರಾಜ್‌ ...
ಸವಲತ್ತು ಸದುಪಯೋಗ ಪಡೆದುಕೊಳ್ಳಲು ಸಲಹೆ
ಸರಕಾರದಿಂದ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುಂತೆ ತಾ.ಪಂ. ಇಓ ಕೆ.ಹೊಂಗಯ್ಯ ಸಲಹೆ ನೀಡಿದರು.
ಗ್ರಾ.ಪಂ. ಮೇಲೆ ಅಲಗು ಕತ್ತಿ
ಹಾವೇರಿ : ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನಗೊಳ್ಳುವ ಎಲ್ಲ ಯೋಜನೆಗಳನ್ನು ಅನುಮಾನದಿಂದ ನೋಡದೇ ಕೇವಲ 14ನೇ ಹಣಕಾಸು ಯೋಜನೆಯಡಿ ಜಾರಿಗೊಂಡಿರುವ ಕಾಮಗಾರಿ ಬಗ್ಗೆ ಮಾತ್ರ ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಡಿಸುವ ಸರಕಾರದ ನಿರ್ಣಯಕ್ಕೆ ಜಿಲ್ಲೆಯ ಎಲ್ಲ ಗ್ರಾ.ಪಂ. ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದು, ಜಿ.ಪಂ. ಸಿಇಒ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
May 31, 2019, 03.13 PM
ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರೂಪಿಸುವುದು ಹಾಗೂ ಅಪರ ಕಾರ‍್ಯದರ್ಶಿಗಳಾದ ಸ್ವಾಮಿ ವರದಿಯಂತೆ ಎಲ್ಲ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ವೇತನಕ್ಕೆ ಗ್ರಾಪಂ ನೌಕರರ ಒತ್ತಾಯ
May 27, 2019, 08.47 PM
ಗ್ರಾಮ ಪಂಚಾಯತಿ ನೌಕರರಿಗೆ ಬಾಕಿ ಇರುವ ಹಲವು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನಾ ಧರಣಿ ನಡೆಸಿದರು.
ಖಾತಾ ಪರಿವರ್ತನೆಗೆ ಕರಡು ಮಾರ್ಗಸೂಚಿ ರಚನೆಗೆ ನಗರಾಭಿವೃದ್ಧಿ ಇಲಾಖೆ ಸೂಚನೆ
ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಆದರೆ ಈಗಲೇ ಖಾತಾ ಪರಿವರ್ತನೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತೆರಿಗೆ ವಸೂಲಾತಿ ಹೆಚ್ಚಳದಿಂದ ಗ್ರಾಪಂ ಆರ್ಥಿಕ ಸದೃಢ
ಗ್ರಾಮ ಪಂಚಾಯಿತಿಗಳು ಸಬಲೀಕರಣವಾಗಬೇಕಾದರೆ ಅವು ತೆರಿಗೆ ವಸೂಲಾತಿ ಪ್ರಮಾಣದ ಹೆಚ್ಚಳಕ್ಕೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಸಲಹೆ ನೀಡಿದರು.
3 ತಿಂಗಳಲ್ಲಿ 24.50 ಲಕ್ಷ ತೆರಿಗೆ ವಸೂಲಿ
ಪಟ್ಟಣ ಪಂಚಾಯಿತಿ ಅಧಿಕಾರ ವಹಿಸಿಕೊಂಡ 3 ತಿಂಗಳಲ್ಲಿ ಪಟ್ಟಣ ಪಂಚಾಯಿತಿಗೆ 24,50,000 ತೆರಿಗೆ ವಸೂಲಾತಿ ಮಾಡಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಎಂ.ಸಿ ನಾಗರತ್ನ ತಿಳಿಸಿದ್ದಾರೆ.
19.18 ಲಕ್ಷ ರೂ. ಉಳಿತಾಯ ಬಜೆಟ್‌
ಹಿರೇಕೆರೂರ: ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರ ಜರುಗಿದ ಕೌನ್ಸಿಲ್‌ ಸಾಮಾನ್ಯ ಸಭೆಯಲ್ಲಿ 7.18ಕೋಟಿ ರೂ. ಆದಾಯ ಗುರಿ ಹಾಗೂ 19.18 ಲಕ್ಷ ರೂ. ಉಳಿತಾಯ ಆಯವ್ಯಯ ಮಂಡಿಸಲಾಯಿತು.
ತೆರಿಗೆ ಕಟ್ಟದ ಮತ್ತೊಬ್ಬ ಉದ್ಯಮಿಗೆ ಜೈಲು ದಾರಿ
ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸಿರುವ ಕರ್ನಾಟಕ ಮತ್ತು ಗೋವಾ ವಲಯದ ತೆರಿಗೆ ಅಧಿಕಾರಿಗಳು, 7.35 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದ ತುಮಕೂರು ಮೂಲದ ಉದ್ಯಮಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ನೀರಿನ ಸಮಸ್ಯೆ: ಪರ್ಯಾಯ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ
ತಾಲೂಕಿನಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡ ಗ್ರಾಮಗಳಿಗೆ ಕೂಡಲೇ ಟ್ಯಾಂಕರ್‌ ಮೂಲಕ ಅಥವಾ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಮಾಡಲು ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲದೇ ಇದ್ದ ಪಕ್ಷ ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.
ತೆರಿಗೆ ವಸೂಲಿ; ಪ್ರಗತಿಯಾಗದಿದ್ದರೆ ಪಿಡಿಒಗಳ ಸಂಬಳ ಕಟ್‌!
ತೆರಿಗೆ ವಸೂಲಿ ಸಮರ್ಪಕವಾಗಿ ಮಾಡದ ಬಿಲ್‌ ಕಲೆಕ್ಟರ್‌ಗಳ ಸಂಬಳ ತಡೆಯುವಂತೆ ಸೂಚಿಸಿದ್ದರೂ, ಪಿಡಿಒಗಳು ಮುಂದಾಗಿಲ್ಲ. ಇನ್ನಾದರೂ ಎಚ್ಚೆತ್ತು ಅವರಿಂದ ಉತ್ತಮವಾಗಿ ಕೆಲಸ ಮಾಡಿಸದಿದ್ದಲ್ಲಿ ಎಂದು ಪರಿಗಣಿಸಿ ನಿಮ್ಮ ಸಂಬಳ ಕಟ್‌ ಆಗುತ್ತದೆ ಎಂದು ಜಿಪಂ ಸಿಇಒ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯರು, ಪಿಡಿಓ ಜಟಾಪಟಿ: ರದ್ದಾದ ಸಾಮಾನ್ಯ ಸಭೆ
ಗ್ರಾಮ ಪಂಚಾಯಿತಿ ಸಭಾ ನಡವಳಿ ಪುಸ್ತಕದಲ್ಲಿ ರೆಕಾರ್ಡ್‌ ಆಗಿರುವ ಕೆಲವು ಸಾಲುಗಳನ್ನು ಹೊಡೆದು ಹಾಕಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಡುವೆ ನಡೆದ ಜಟಾಪಟಿಯಿಂದ ಸಾಮಾನ್ಯ ಸಭೆ ರದ್ದಾದ ಪ್ರಸಂಗ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದಿದೆ.
ಮನೆ ನಿರ್ಮಾಣವೇ ಕಷ್ಟ..ಕಷ್ಟ; ಅನುದಾನ ಪಾಯಕ್ಕೂ ಸಾಲದು
ಮನೆ ಇಲ್ಲದವರಿಗೆ ಮನೆ ನಿರ್ಮಿಸುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಗ್ರಹಣ ಬಡಿದಿದೆ...
ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಅನಾವರಣ
ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಆಗುತ್ತಿಲ್ಲ, ರಸ್ತೆಯಲ್ಲಿ ತೆರೆದ ಗುಂಡಿ ಮುಚ್ಚಿಸಿ, ಯುಜಿಡಿ ಸರಿಪಡಿಸಿ.
ಅಧಿಕಾರಿಗಳ ವಿರುದ್ಧ ಗರಂ
ಕಾರವಾರ :ಜಿಲ್ಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತೆರಿಗೆ ಬಾಕಿದ್ದರೆ ಅಧಿಕಾರಿಗಳು ಹಾಜರ್‌
ಸಮಯ ಬಂದಾಗ ತೆರಿಗೆ ಪಾವತಿಸಿದರಾಯ್ತು ಎಂದು ನಿರಾಳರಾಗಿರುವ ನಗರದ ಜನರ ಮನೆ ಮುಂದೆ ಜು.16ರಿಂದ ಪಾಲಿಕೆ ಅಧಿಕಾರಿಗಳು- ಸಿಬ್ಬಂದಿ ಹಾಜರಾಗಲಿದ್ದಾರೆ.
ಇಂಗುಗುಂಡಿ ಕಾಮಗಾರಿ ಸಮರ್ಪಕ
ಶಿರಸಿ :ಗ್ರಾಪಂ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಇಂಗುಗುಂಡಿಯನ್ನು ನಿರ್ಮಿಸುವ ಕಾರ್ಯವನ್ನು ತುರ್ತಾಗಿ ಆರಂಭಿಸಿದ್ದೇವೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕಾಮಗಾರಿ ಸಂಬಂಧಿಸಿ ಹಣ ಇನ್ನೂ ಸಂದಾಯ ಮಾಡಿಲ್ಲ. ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳುತ್ತೇವೆ ಎಂದು ಸೋಂದಾ ಗ್ರಾಪಂ ಅಧ್ಯಕ್ಷ ಮಂಜುನಾಥ ಭಂಡಾರಿ ಸ್ಪಷ್ಟಪಡಿಸಿದರು.
3.47ಕೋಟಿ ಆದಾಯ ನಿರೀಕ್ಷೆ
Feb 25, 2018, 05.00 AM
ಶಿರಸಿ: 2018-19ರ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 1.90 ಕೋಟಿ ರೂ. ಹಾಗೂ ನೀರು ಸರಬರಾಜು ಶುಲ್ಕದಿಂದ 1.57ಕೋಟಿ ರೂ.ಆದಾಯ ನಗರಸಭೆ ಬರಬಹುದೆಂದು ಅಂದಾಜಿಸಲಾಗಿದೆ.
ನಿರುಪಯುಕ್ತ ವಸ್ತುಗಳಿಂದ ಮೋಟಾರ್ ಸೈಕಲ್ ತಯಾರಿಸಿದ ಕೇರಳ ಬಾಲಕ | News13
News13 > ಸುದ್ದಿಗಳು > ರಾಷ್ಟ್ರೀಯ > ನಿರುಪಯುಕ್ತ ವಸ್ತುಗಳಿಂದ ಮೋಟಾರ್ ಸೈಕಲ್ ತಯಾರಿಸಿದ ಕೇರಳ ಬಾಲಕ
ನಿರುಪಯುಕ್ತ ವಸ್ತುಗಳಿಂದ ಮೋಟಾರ್ ಸೈಕಲ್ ತಯಾರಿಸಿದ ಕೇರಳ ಬಾಲಕ
ತಿರುವನಂತಪುರ: ಕೊರೋನಾ ಸಂಕಷ್ಟದಿಂದ ದೇಶ ಲಾಕ್‌ಡೌನ್ ಆದಾಗ ಅನೇಕ ಜನ ಮುಂದೇನಪ್ಪಾ ಎಂದು ತಲೆಗೆ ಕೈ ಹೊತ್ತು ಕೂತಿದ್ದರೆ, ಕೇರಳದ ಕೊಚ್ಚಿಯ 9 ನೇ ತರಗತಿಯ ಬಾಲಕ ಮಾತ್ರ ಈ ಲಾಕ್‌ಡೌನ್ ಸಂದರ್ಭವನ್ನು ಯಶಸ್ವಿಯಾಗಿ ಕಳೆದಿದ್ದಾನೆ. ಮಕ್ಕಳೆಲ್ಲಾ ಲಾಕ್‌ಡೌನ್ ರಜೆಯಲ್ಲಿ ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದರೆ, ಅರ್ಷದ್ ತನ್ನ ತಂದೆಯ ಅಟೊಮೊಬೈಲ್ ಅಂಗಡಿಯಲ್ಲಿದ್ದ ಗುಜರಿ ವಸ್ತುಗಳನ್ನೇ ಬಳಸಿ ಹಗುರ ಮೋಟರ್ ಸೈಕಲ್ ಒಂದನ್ನು ಸಿದ್ಧಪಡಿಸಿ ಎಲ್ಲರೂ ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದ್ದಾನೆ.
ಕೊಚ್ಚಿಯ ಪಲ್ಲುರುತ್ತಿಯಲ್ಲಿನ ಟಿ.ಜೆ ಹಸೀಮ್ ಎಂಬವರು ಜೀವನ ನಿರ್ವಹಣೆಗಾಗಿ ಅಟೋಮೊಬೈಲ್ ಶಾಪ್ ಒಂದನ್ನು ನಡೆಸುತ್ತಿದ್ದು, ಅವರ ಪುತ್ರ 9 ನೇ ತರಗತಿಯ ಅರ್ಷದ್ ಕೊರೋನಾ ಲಾಕ್‌ಡೌನ್ ಸಮಯವನ್ನು ಮೋಟಾರ್ ಸೈಕಲ್ ತಯಾರು ಮಾಡುವ ಮೂಲಕ ಸದುಪಯೋಗ ಮಾಡಿಕೊಂಡಿದ್ದಾನೆ. ತನ್ನ ತಂದೆಯ ಅಂಗಡಿಯಲ್ಲಿ ದೊರೆತ ಅನುಪಯುಕ್ತ ಎಂದು ಪರಿಗಣಿತವಾಗಿದ್ದ ಬಿಡಿ ಭಾಗಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾನೆ. ಲಾಕ್‌ಡೌನ್ ಸಮಯದ ಒಂದೂವರೆ ತಿಂಗಳನ್ನು ಸಾರ್ಥಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಇದನ್ನು ಅಭಿವೃದ್ಧಿ ಮಾಡಿದ್ದಾಗಿಯೂ ಹೇಳಿದ್ದಾನೆ. ಅಲ್ಲದೆ ಮುಂದಿನ ದಿನಗಳಲ್ಲಿ ಟ್ರೋಲಿ ಒಂದನ್ನು ತಯಾರಿಸುವ ಬಯಕೆ ಇರುವುದಾಗಿಯೂ ಅರ್ಷದ್ ತಿಳಿಸಿದ್ದಾನೆ.
ಇನ್ನು ಈತ ತಯಾರಿಸಿರುವ ಬೈಕ್ ನಲ್ಲಿ ಸೀಟು ಮತ್ತು ಹ್ಯಾಂಡಲ್ ಗಳಿಗೆ ಹೊಂದಿಕೊಂಡಂತೆ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಒಂದು ಲೀ. ಗಳಷ್ಟು ಪೆಟ್ರೋಲ್ ಹಾಕಬಹುದಾಗಿದೆ. ಅಲ್ಲದೆ ಫುಲ್ ಟ್ಯಾಂಕ್ ಪೆಟ್ರೋಲ್ ಇದ್ದರೆ ಈ ಬೈಕ್ ನಲ್ಲಿ 50 ಕಿ.ಮೀ. ಗಳಷ್ಟು ಪ್ರಯಾಣ ಮಾಡುವುದೂ ಸಾಧ್ಯ ಎಂದು ಇದರ ನಿರ್ಮಾತೃ ಅರ್ಷದ್‌ನ ಅಭಿಪ್ರಾಯ. ತಂದೆಯ ಅಂಗಡಿಯಲ್ಲಿದ್ದ ಬೇರೆ ಬೈಕ್ ಗಳ ಅನವಶ್ಯಕವೆನಿಸಿದ ಸ್ಕ್ರ್ಯಾಪ್ ಟಯರ್ಗಳು, ಡಿಸ್ಕ್ ಬ್ರೇಕ್, ಎಲ್ ಇ ಡಿ ಲೈಟ್ಸ್, ಹ್ಯಾಂಡಲ್, ಸೈಕಲ್‌ನ ಸೀಟ್ ಮೊದಲಾದವುಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಇದಕ್ಕಾಗಿ ಒಂದೂವರೆ ತಿಂಗಳು, 10,000 ರೂ. ಮತ್ತು ಬುದ್ಧಿಶಕ್ತಿ ಯನ್ನು ಬಳಕೆ ಮಾಡಿರುವುದಾಗಿಯೂ ತಿಳಿಸಿದ್ದಾನೆ.
"ತಂದೆಯ ಅಂಗಡಿಯಲ್ಲಿ ಕಬ್ಬಿಣದ ಪೈಪ್ ಮತ್ತು ಮೋಟಾರು ಬೈಕ್‌ಗಳ ಎಂಜಿನ್‌ಗಳನ್ನು ಕಂಡು, ತಾನಿದನ್ನು ಬಳಸಿಕೊಂಡು ಒಂದು ಬೈಕ್ ತಯಾರಿಸುವುದಾಗಿ ತಿಳಿಸಿದೆ. ಆದರೆ ಆರಂಭದಲ್ಲಿ ತಂದೆ ಇದಕ್ಕೆ ಒಪ್ಪಲಿಲ್ಲ. ಆದರೆ ನಾನು ಈ ಕೆಲಸವನ್ನು ಮಾಡಲೇ ಬೇಕೆಂದು ಹಠ ತೊಟ್ಟು ಆರಂಭಿಸಿದೆ. ನಂತರ ತಂದೆಯೂ ನನಗೆ ಮಾರ್ಗದರ್ಶನ ನೀಡಿದರು. ಸುಮಾರು ಒಂದೂವರೆ ತಿಂಗಳಿನ ಬಳಿಕ ಇದರ ಕೆಲಸ ಯಶಸ್ವಿಯಾಗಿ ಸಂಪೂರ್ಣವಾಯಿತು ಎಂದೂ ಅರ್ಷದ್ ತಿಳಿಸಿದ್ದಾನೆ.
ಮನಸ್ಸಿದ್ದರೆ ಮಾರ್ಗ ಇದೆ ಎಂಬುದಕ್ಕೆ ಅರ್ಷದ್ ಉದಾಹರಣೆ,, ಮೋಟಾರ್ ಸೈಕಲ್ ತಯಾರು ಮಾಡುವ ಮೂಲಕವೇ ಮಾದರಿ ಎನಿಸಿದ್ದಾನೆ. ತಂದೆಗೆ ಅನಗತ್ಯ ಎನಿಸಿದ ವಸ್ತುಗಳನ್ನೇ ಬಳಸಿ, ಒಂದು ಬಳಕೆಗೆ ಯೋಗ್ಯವಾದ ವಸ್ತುವನ್ನು ತಯಾರಿಸಿರುವ ಅರ್ಷದ್ ಕೆಲಸವನ್ನು ಮೆಚ್ಚಲೇ ಬೇಕು.
ನಿಮ್ಮ ಶಾರೀರಿಕ ಲಕ್ಷಣಗಳು ನಿಮ್ಮ ಮೇಲೆ ಶನಿಗ್ರಹ ಇರುವುದನ್ನು ಗುರುತಿಸಬಹುದಾಗಿದೆ. ಶನಿದೇವರು ನಿಮ್ಮ ಜೀವನದಲ್ಲಿ ಬಂದರೆ ನೀವು ಭಯ ಪಡಬೇಕಾಗಿಲ್ಲ ಅದು ನಿಮ್ಮ ಶನಿದೇವರ ಕೃಪೆ ಎಂದು ಭಾವಿಸಬೇಕು. ನಿಮ್ಮ ಕಷ್ಟಗಳ ಪರಿಹಾರಕ್ಕಾಗಿ ಶನಿದೆವರು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುತ್ತಾರೆ, ಸೂರ್ಯ ಪುತ್ರರಾಗಿರುವ ಶನಿದೆವರು ವ್ಯಕ್ತಿಗಳ ಸದ್ಗುಣ ಮತ್ತು ದುರ್ಗುಣಗಳನ್ನು ಆಧರಿಸಿ ಸಮಯವನ್ನು ನಿರ್ಧರಿಸಿ ಆ ವ್ಯಕ್ತಿಗೆ ಶಿಕ್ಷಿಸುತ್ತಾನೆ ಸಲಹುತ್ತಾನೆ. ಶನಿ ದೇವರು ನ್ಯಾಯ, ನೀತಿ ಸತ್ಯ, ಧರ್ಮದ ಸಂಕೇತವಾಗಿರುತ್ತಾರೆ. ಶನಿಯು ಪ್ರಾಮಾಣಿಕ ವ್ಯಕ್ತಿಗಳಿಗೆ ಸದಾ ಒಳ್ಳೆಯದನ್ನೆ ಬಯಸುತ್ತಾನೆ.
ಇನ್ನು ಧರ್ಮಗ್ರಂಥಗಳಲ್ಲಿ ತಿಳಿಸಿರುವ ಹಾಗೆ ಶನಿದೇವರು ಯಾರಲ್ಲಿ ಇರುತ್ತಾರೆ ಎಂಬುದನ್ನು ನಿಮ್ಮ ಶಾರೀರಿಕ ಲಕ್ಷಣಗಳನ್ನು ನೋಡಿ ತಿಳಿಯಬಹುದಾಗಿದೆ. ಈ ಶನಿ ಪ್ರಭಾವ ಇರುವ ವ್ಯಕ್ತಿಗಳು ತೆಳ್ಳಗೆ ಇರುತ್ತಾರೆ ಮತ್ತು ನೀಳವಾಗಿ ಸಮೃದ್ದವಾದ ಕೇಶವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಇನ್ನು ಕೆಲವರಿಗೆ ಬಾಲ್ಯದಲ್ಲಿ ಎಲುಬು, ಮೂಳೆ ಮುರಿತ ದಂತಹ ಸಮಸ್ಯೆ ಕಂಡು ಬರುತ್ತದೆ. ಶನಿ ಕೃಪೆ ಹೊಂದಿರುವಂತಹ ವ್ಯಕ್ತಿಗಳು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ, ಭಾವನಾತ್ಮಕ ಜೀವಿಯಾಗಿರುತ್ತಾರೆ. ಇವರು ಸುಳ್ಳು ಮೋಸ ಮಾಡುವ ವ್ಯಕ್ತಿಗಳಿಂದ ದೂರವಿರಲು ಇಷ್ಟಪಡುತ್ತಾರೆ.
ಯಶಸ್ಸಿಗಾಗಿ ನಿರಂತರ ಪ್ರಯತ್ನ ಇವರದ್ದಾಗಿರುತ್ತದೆ. ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವ ವ್ಯಕ್ತಿತ್ವ ಇವರದ್ದಲ್ಲ, ಎಂತಹ ಕಡು ಕಷ್ಟಗಳನ್ನು ಎದುರಿಸುವ ಸಾಮಾರ್ಥ್ಯ ಇವರಲ್ಲಿ ಉದುಗಿರುತ್ತದೆ. ಶನಿಗ್ರಹ ದೋಷ ಪರಿಹಾರಕ್ಕಾಗಿ ನೀವು ಪ್ರತಿ ಶನಿವಾರ ಶನಿದೇವರ ದರ್ಶನ ಪಡೆದು ಕಪ್ಪು ವಸ್ತ್ರವನ್ನು ದಾನ ಮಾಡಬೇಕು. ಮತ್ತು ಅರಳೀಮರದ ಕೆಳಗೆ ಎಳ್ಳೆಣ್ಣೆಯ ದೀಪ ಹಚ್ಚಿ ಪೂಜಿಸಬೇಕು ಜೊತೆಗೆ ಕೆಲವರಿಗೆ ಎಳ್ಳೆಣ್ಣೆಯನ್ನು ದಾನ ಮಾಡಿದರೆ ನಿಮ್ಮ ಎಲ್ಲಾ ಶನಿ ದೋಷಗಳು ನಿವಾರಣೆ ಆಗುತ್ತವೆ ಎಂದು ಹಿರಿಯರು ತಿಳಿಸುತ್ತಾರೆ.
ಇನ್ಸ್ಟಾಗ್ರಾಂನಲ್ಲಿ 6 ವರ್ಷದ ಹಿಂದೆಯೇ ಮತಾಂತರದ ಬಗ್ಗೆ ಸುಳಿವು ಕೊಟ್ಟಿದ್ದ ಸಂಜನಾ! | Sanjana Galrani Gave A Hint Of Converting To Islam In Her Instagram Post In 2014 pod
Bangalore, First Published 20, Sep 2020, 7:30 AM
ಬೆಂಗಳೂರು(ಸೆ.20): ಡ್ರಗ್ಸ್‌ ಪ್ರಕರಣದಲ್ಲಿ ಬಂಧಿ​ತ​ರಾಗಿ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ​ರುವ ಆರೋಪ ಹೊತ್ತಿ​ರು​ವ ನಟಿ ಸಂಜನಾ ಗಲ್ರಾನಿ, 2014ರಲ್ಲೇ ತಾನು ಮುಸ್ಲಿಂ ಧರ್ಮದ ಬಗ್ಗೆ ಒಲವು ಹೊಂದಿರುವ ಕುರಿತು ಸುಳಿವು ನೀಡಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸಂಜನಾ 2014ರ ಜುಲೈ 7ರಂದು ​'ಇ​ನ್‌​ಸ್ಟಾ​ಗ್ರಾಂ'​ನ​ಲ್ಲಿ ಒಂದು ಪೋಸ್ಟ್‌ ಮಾಡಿದ್ದರು. ಅದರಲ್ಲಿ, 'ಪ್ರೇಮಕಥೆ ಆಧರಿಸಿದ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದೇನೆ. ಈ ವೇಳೆ ಮುಸ್ಲಿಂ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ತೀವ್ರ ಪ್ರಭಾವಕ್ಕೊಳಗಾಗಿದ್ದೇನೆ' ಎಂದಿದ್ದರು. 'ನಾನು ಸಹ...??' ಎಂದು ಪೋಸ್ಟ್‌ ಮಾಡಿದ್ದರು.
ಹೀಗೆ 'ನಾನು ಸಹ' ಎನ್ನುವ ಮೂಲಕ ಅವರು ಮತಾಂತ​ರದ ಸುಳಿವು ನೀಡಿದ್ದರು ಎನ್ನಲಾಗಿದೆ.
ಇದಕ್ಕೆ ಪೂರಕ ಎಂಬಂತೆ ಸಂಜನಾ, 'ಇಸ್ಲಾಂ ಧರ್ಮಕ್ಕೆ ಮತಾಂತರಗೊಳುತ್ತಿದ್ದೇನೆ' ಎಂದು ನ್ಯಾಯಾಲಯಕ್ಕೆ 2018ರಲ್ಲಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ಈ ಬಗ್ಗೆ ಮಸೀದಿಯೊಂದಕ್ಕೂ ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ ಎಂಬ ದಾಖಲೆಗಳು ಮಾಧ್ಯಮ ಹಾಗೂ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ಹರಿ​ದಾ​ಡಿ​ವೆ.
ದಾರುಲ್‌ ಉಲೂಂ ಶಾಹ್‌ ವಲಿಉಲ್ಲಾ ಎಂಬ ಹೆಸರಿನಿಂದ ಬರೆಯಲಾಗಿರುವ ಪತ್ರದಲ್ಲಿ ಅರ್ಚನಾ ಮನೋಹರ್‌ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಇನ್ನು ಮುಂದೆ ಅವರನ್ನು ಮಹಿರಾ ಎಂದು ಕರೆಯಬೇಕು ಎಂದು ಬರೆಯಲಾಗಿದೆ.
ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್‌ ಜಿಹಾದ್‌ ತಾಂಡವವಾಡುತ್ತಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.
ಪ್ರತಿಮೆ - Public Tv
All posts tagged "ಪ್ರತಿಮೆ"
ನವದೆಹಲಿ: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಕೆಲ ಪುಂಡ ವಿದ್ಯಾರ್ಥಿಗಳು ವಿರೂಪಗೊಳಿಸಿದ್ದಾರೆ. ಜೆಎನ್‍ಯು ಆಡಳಿತ ವಿಭಾಗದಲ್ಲಿರುವ ನೆಹರು ಪ್ರತಿಮೆಯ ಮುಂಭಾಗದಲ್ಲಿದ್ದ ವಿವೇಕಾನಂದ ಪ್ರತಿಮೆಯ ಮೇಲೆ ಉಪ ಕುಲಪತಿ ಮಮಿದಲಾ...
ಬೆಂಗ್ಳೂರಲ್ಲಿ ಗಾಂಧೀಜಿ ಪ್ರತಿಮೆ ಮುಂದೆಯೇ ಬಾರ್ ಓಪನ್‍ಗೆ ಸಿದ್ಧತೆ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸು ಮದ್ಯಪಾನ ಮುಕ್ತ ಭಾರತ. ಮದ್ಯಪಾನ ವಿರೋಧಿ ಚಳುವಳಿ ಮಾಡಿ ಜಾಗೃತಿ ಮೂಡಿಸಿದಂತಹ ಮಹಾನಾಯಕ. ಆದರೆ ಈಗ ರಾಜಧಾನಿ ಬೆಂಗಳೂರಿನಲ್ಲಿ ಗಾಂಧೀಜಿಯ ಬೃಹತ್ ಪ್ರತಿಮೆ ಮತ್ತು ಚರ್ಚ್ ಮುಂದೆಯೇ...
ಎಂ.ಬಿ ಪಾಟೀಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಜೆಡಿಎಸ್ ಶಾಸಕ
ವಿಜಯಪುರ: ರಾಜ್ಯ ಸರ್ಕಾರದ ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಪ್ರತಿಮೆ ನಿರ್ಮಾಣ ಮಾಡಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್ ಮುಂದಾಗಿದ್ದಾರೆ. ಈ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಲಾಪುರ ರಾಷ್ಟ್ರೀಯ...
ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ- ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ
-ಫಳ ಫಳ ಅಂತಿದೆ 300 ಕೆ.ಜಿ ತೂಕದ ಕಂಚಿನ ವಿಗ್ರಹ ತುಮಕೂರು: ನಡೆದಾಡುವ ದೇವರು, ಕೋಟಿ ಕೋಟಿ ಭಕ್ತರ ಪ್ರತ್ಯಕ್ಷ ದೇವರಾಗಿದ್ದ, ಲಕ್ಷ ಲಕ್ಷ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು...
ಅಂತ್ಯಕ್ರಿಯೆಗೂ ಮುನ್ನವೇ ಅಂಬಿ ಪ್ರತಿಮೆ ಅನಾವರಣ- ಗ್ರಾಮಸ್ಥರಿಂದ ಪೂಜೆ
ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಂಬಿ ಪ್ರತಿಮೆ ಅನಾವರಣಗೊಳಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಪಿಒಪಿ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಅಂಬರೀಶ್ ಅವರ ಅಂತ್ಯಕ್ರಿಯೆಗೂ ಮುನ್ನವೇ...
ಬೆಂಗಳೂರು: ಅವರು ದೊಡ್ಡ ಜನ, ದೊಡ್ಡವರು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ. ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ...
ಭದ್ರಾವತಿ: ವಿವಿಧ ದೇಗುಲಗಳಲ್ಲಿ ವೈಕುಂಠ ದರ್ಶನ | Prajavani
ಭದ್ರಾವತಿ: ವಿವಿಧ ದೇಗುಲಗಳಲ್ಲಿ ವೈಕುಂಠ ದರ್ಶನ
Published: 30 ಡಿಸೆಂಬರ್ 2017, 11:23 IST
Updated: 30 ಡಿಸೆಂಬರ್ 2017, 11:23 IST
ಭದ್ರಾವತಿ: ವೈಕುಂಠ ಏಕಾದಶಿ ದಿನದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವೈಕುಂಠನಾಥನ ದರ್ಶನ ಹಾಗೂ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಾಗದ ನಗರದ ಶ್ರೀ ಕ್ಷೇತ್ರ ನಾಗರಕಟ್ಟೆ ದೇವಸ್ಥಾನದಲ್ಲಿ ಬೆಳಿಗ್ಗೆ 5.30ಕ್ಕೆ ವೈಕುಂಠನಾಥನ ದರ್ಶನಕ್ಕೆ ದೇವಸ್ಥಾನದ ಆವರಣದಲ್ಲಿ ಅದ್ದೂರಿವ್ಯವಸ್ಥೆ ಮಾಡಲಾಗಿತ್ತು. ಭಜನೆ, ಹೋಮ, ಹವನಗಳನ್ನು ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಏಳು ದ್ವಾರಗಳನ್ನು ನಿರ್ಮಿಸಲಾಗಿತ್ತು. ಭಕ್ತರು ಒಂದೊಂದೇ ದ್ವಾರವನ್ನು ಪ್ರವೇಶಿಸುವಂತೆ ಆಕರ್ಷಣೀಯವಾಗಿ ಸಿದ್ಧಪಡಿಸಲಾಗಿತ್ತು.
ನಾಗ ದೇಗುಲದಲ್ಲಿ ನಾಗತೀರ್ಥ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಂಜೆ ಸಹಸ್ರದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, 6–7 ಸಾವಿರ ಭಕ್ತರು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಮಿಲಿಟರಿ ಕ್ಯಾಂಪ್ ಶ್ರೀನಿವಾಸನ ಸನ್ನಿಧಿ: ಮಿಲಿಟರಿ ಕ್ಯಾಂಪ್‌ನಲ್ಲಿರುವ ಶ್ರೀನಿವಾಸನ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿತು. ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು.
ಲೋಯರ್ ಹುತ್ತಾ: ಇಲ್ಲಿನ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. ಶ್ರೀದೇವಿ ಭೂದೇವಿ ಸಮೇತ ವೆಂಕಟೇಶ್ವರನ ಮೂರ್ತಿಯ ಕೆಳಗೆ ಭಕ್ತರು ಹಾದುಹೋಗುವ ಮೂಲಕ ಮುಖ್ಯ ಸ್ವಾಮಿಯ ದರ್ಶನ ಪಡೆದರು. 15 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದವಾಗಿ ಲಡ್ಡು ಹಾಗೂ ಹಾಲು ವಿತರಿಸಲಾಯಿತು.
ಹಳೇನಗರ: ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಮುಂಜಾನೆ 4ಕ್ಕೆ ದೇವರ ದರ್ಶನ ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಗಿನ ಜಾವ 3ಕ್ಕೆ ಮೂಲದೇವರಿಗೆ ಪೂಜೆ ಸಲ್ಲಿಸಿದ ನಂತರ ದೇಗುಲದ ಒಳಾವರಣದಲ್ಲಿ ನಿರ್ಮಿಸಲಾದ ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕು ಆಡಳಿತದಿಂದ ನಡೆದ ಪೂಜಾಕಾರ್ಯದಲ್ಲಿ ದಂಪತಿ ಸಹಿತ ಹಾಜರಿದ್ದ ತಹಶೀಲ್ದಾರ್ ಎಂ.ಆರ್.ನಾಗರಾಜ್ ದೇವರ ದರ್ಶನ ಪಡೆದರು. ಶಾಸಕ ಎಂ.ಜೆ.ಅಪ್ಪಾಜಿ ಪತ್ನಿ ಶಾರದಾ ಅವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ ಕ್ಷೇತ್ರದ ಶಾಸಕ ಪ್ರಸನ್ನಕುಮಾರ್ ಕೂಡ ಪತ್ನಿ ಸಹಿತರಾಗಿ ಭೇಟಿ ನೀಡಿದರು.
ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಮತ್ತು ಸಹೋದರರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಲಾವಿದ ಸುಬ್ರಮಣಿ ತಂಡದವರು ನಿರ್ಮಿಸಿದ ಭೂ ವೈಕುಂಠ ಹಾಗೂ ಲಕ್ಷ್ಮೀ ಸಹಿತನಾದ ನಾರಾಯಣನ ಬೃಹತ್ ಮೂರ್ತಿ ಆಕರ್ಷಕವಾಗಿತ್ತು.
ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದವಾಗಿ ನೀಡಲು 10 ಸಾವಿರ ಲಾಡುಗಳನ್ನು ತಯಾರಿಸಲಾಗಿತ್ತು. ಕೆಲವು ಸಂಸ್ಥೆಗಳಿಂದ ಹಾಲು ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಹಾಲಮ್ಮ, ಉಪಾಧ್ಯಕ್ಷೆ ಮಹಾದೇವಿ, ಸುಧಾಮಣಿ ಭಾಗವಹಿಸಿದ್ದರು. ಕೂಡಲಿ ಸ್ವಾಮೀಜಿ ಭೇಟಿ: ದೇವಾಲಯಕ್ಕೆ ಆಗಮಿಸಿದ ಕೂಡಲಿ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ವಿಜಯ್ ಹಜಾರೆ ಟ್ರೋಫಿ: ಪಡಿಕ್ಕಲ್ ಅಬ್ಬರದ ಶತಕ, ಕರ್ನಾಟಕ್ಕೆ ಭರ್ಜರಿ ಜಯ | Vijay Hazare Trophy Devdutt Padikkal Century helps Karnataka 101 runs victory against Odisha kvn
ವಿಜಯ್ ಹಜಾರೆ ಟ್ರೋಫಿ: ಪಡಿಕ್ಕಲ್ ಅಬ್ಬರದ ಶತಕ, ಕರ್ನಾಟಕ್ಕೆ ಭರ್ಜರಿ ಜಯ
Bengaluru, First Published Feb 24, 2021, 6:06 PM IST
ವಿಜಯ್‌ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಮತ್ತೊಂದು ದೊಡ್ಡ ಗೆಲುವು ದಾಖಲಿಸಿದೆ. ಒಡಿಶಾ ಎದುರು ಕರ್ನಾಟಕ ತಂಡ 101 ರನ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಫೆ.24): ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌(152) ಭರ್ಜರಿ ಶತಕ ಹಾಗೂ ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್‌ ಗೋಪಾಲ್‌ ಮಿಂಚಿನ ಪ್ರದರ್ಶನದ ನೆರವಿನಿಂದ ಒಡಿಶಾ ವಿರುದ್ದ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ಕರ್ನಾಟಕ 101 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 'ಸಿ' ಗುಂಪಿನಲ್ಲಿ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಹೌದು, ಒಡಿಶಾ ಎದುರು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆ ಕರ್ನಾಟಕ ತಂಡಕ್ಕೆ ನಾಯಕ ರವಿಕುಮಾರ್ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 140 ರನ್‌ಗಳ ಜತೆಯಾಟ ನಿಭಾಯಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಮರ್ಥ್ ಈ ಬಾರಿ 83 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 60 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಪಡಿಕ್ಕಲ್‌ ಹಾಗೂ ಕೆ ಸಿದ್ದಾರ್ಥ್‌ ಜೋಡಿ ಚುರುಕಿನ ಬ್ಯಾಟಿಂಗ್‌ ಮೊರೆಹೋಯಿತು. ಸಿದ್ದಾರ್ಥ್‌ 32 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
Karnataka defeat Odisha by 101 runs in the 3rd league game of Vijay Hazare Trophy.
Devdutt Padikkal 152, Samarth 60.
Prasidh Krishna 3W, Shreyas Gopal 3W. #KARvODI #VHTrophy
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2021
ಪಡಿಕ್ಕಲ್‌ ಸಿಡಿಲಬ್ಬರದ ಶತಕ: 14ನೇ ಆವೃತ್ತಿಯ ಐಪಿಎಲ್‌ಗೆ ಭರ್ಜರಿ ತಾಲೀಮು ನಡೆಯುತ್ತಿರುವ ದೇವದತ್ ಪಡಿಕ್ಕಲ್‌ ಮತ್ತೊಂದು ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಕಳೆದ ಪಂದ್ಯದಲ್ಲಿ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಿದ್ದ ಪಡಿಕ್ಕಲ್ ಈ ಬಾರಿ ಆ ತಪ್ಪು ಮಾಡಲಿಲ್ಲ. ಬರೋಬ್ಬರಿ 140 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 152 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.
ವಿಜಯ್ ಹಜಾರೆ ಟ್ರೋಫಿ: ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿ ಕರ್ನಾಟಕ
ಇನ್ನು ಕರುಣ್‌ ನಾಯರ್ 25 ಹಾಗೂ ಕೊನೆಯಲ್ಲಿ ಅಭಿಮನ್ಯು ಮಿಥುನ ಬಾರಿಸಿದ ಸ್ಫೋಟಕ 40 ರನ್‌(17 ಎಸೆತ, 5 ಸಿಕ್ಸರ್)ಗಳ ನೆರವಿನಿಂದ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 329 ರನ್‌ ಕೆಲಹಾಕಿತ್ತು.
Karnataka finish with 329/5, 50 overs.
Devdutt Padikkal 152,
KV Siddharth 41,
Ravikumar Samarth 60,