text
stringlengths
0
61.5k
Abhimanyu Mithun 40*.#VHTrophy #KARvODI
ಇನ್ನು ಕರ್ನಾಟಕ ನೀಡಿದ್ದ 330 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಒಡಿಶಾ ತಂಡವು ಉತ್ತಮ ಆರಂಭ ಪಡೆಯಿತಾದರೂ ಆ ಬಳಿಕ ನಿರಂತರ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನತ್ತ ಮುಖ ಮಾಡಿತು. ಶುಬ್ರಾಂಶು ಸೇನಾಪತಿ(78) ಹಾಗೂ ಅಂಕಿತ್ ಯಾದವ್‌(56) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಪರಿಣಾಮ ಒಡಿಶಾ 44 ಓವರ್‌ಗಳಲ್ಲಿ 228 ರನ್‌ ಬಾರಿಸಿ ಸರ್ವಪತನ ಕಂಡಿತು
ಕರ್ನಾಟಕ ತಂಡದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರೆ, ವೈಶಾಕ್‌ ವಿಜಯ್ ಕುಮಾರ್ ಹಾಗೂ ಜೆ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.
'ಯಡಿಯೂರಪ್ಪ ರಾಜೀನಾಮೆ ನೀಡಲಿ -ಸಚಿವರೇ ಸಿಡಿದೆದ್ದಿದಾರೆ' | DK Shivakumar Slams BS Yediyurappa snr
'ಯಡಿಯೂರಪ್ಪ ರಾಜೀನಾಮೆ ನೀಡಲಿ -ಸಚಿವರೇ ಸಿಡಿದೆದ್ದಿದಾರೆ'
Bengaluru, First Published Apr 3, 2021, 9:10 AM IST
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ರಾಜಕೀಯ ವಲಯದಲ್ಲಿ ಹಲವು ಅಸಮಾಧಾನಗಳು ಹೊಗಡೆಯಾಗುತ್ತಿದೆ. ಇದೀಗ ರಾಜೀನಾಮೆಗೆ ಆಗ್ರಹಿಸಲಾಗಿದೆ.
ಬೆಂಗಳೂರು (ಮಾ.03): ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಇಲ್ಲಿರುವವರೆಲ್ಲ ಚಿಕ್ಕ ಮಕ್ಕಳೇ? ಸಾಮಾನ್ಯ ಪ್ರಜ್ಞೆ ಇರುವ ಹಳ್ಳಿ ಜನರಿಗೂ ಇದರ ಬಗ್ಗೆ ಅರ್ಥವಾಗುತ್ತದೆ.
ಮುಖ್ಯಮಂತ್ರಿ ವಿರುದ್ಧ ಬೇಸತ್ತು, ಎಲ್ಲ ಕಾನೂನು ನಿಯಮಗಳನ್ನು ನಮೂದಿಸಿ ರಾಜ್ಯಪಾಲರಿಗೆ ಪತ್ರ ಬರೆದು ಅವರು ಅವರ ಪಕ್ಷಕ್ಕೆ ನಿಷ್ಠರಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ನಿಷ್ಠೆ ತೋರುತ್ತಿಲ್ಲ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
ರಾಸಲೀಲೆ ಸಿಡಿ ಕೇಸ್ : ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶುರುವಾಯ್ತು ಸಂಕಷ್ಟ..!? .
ಶುಕ್ರವಾರ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿಗಳು ಯಾಕೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸದೇ ಸುಮ್ಮನೆ ಕೂತಿದ್ದಾರೆ? ಆ ಮೂಲಕ ಮುಖ್ಯಮಂತ್ರಿಗಳೇ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಶನಿವಾರ ನಾನು ಕೇರಳಕ್ಕೆ ತೆರಳಲಿದ್ದು, ಐದು ಕಡೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಆ ನಂತರ ರಾಜ್ಯಕ್ಕೆ ಮರಳಿ ಬೆಳಗಾವಿ, ಮಸ್ಕಿಯಲ್ಲಿ ಪ್ರಚಾರ ನಡೆಸಲಿದ್ದೇನೆ ಎಂದು ಹೇಳಿದರು.
ಸೇನೆಯ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ: ದೊಡ್ಡಣ್ಣ ನೀಡಿದ ಶಾಕ್ ಗೆ ಚೀನಾ ಹಾಗೂ ಪಾಕಿಸ್ತಾನಕ್ಕೆ ಗಡ ಗಡ - ಕರುನಾಡ ವಾಣಿ
ಸೇನೆಯ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ: ದೊಡ್ಡಣ್ಣ ನೀಡಿದ ಶಾಕ್ ಗೆ ಚೀನಾ ಹಾಗೂ ಪಾಕಿಸ್ತಾನಕ್ಕೆ ಗಡ ಗಡ
ಭಾರತೀಯ ಸೇನೆಯು ದಿನೇ ದಿನೇ ಬಲಗೊಳ್ಳುತ್ತಿದೆ ಹಿಂದೆಂದೂ ಕಾಣದ ಶಸ್ತ್ರಾಸ್ತ್ರಗಳನ್ನು ನರೇಂದ್ರ ಮೋದಿ ರವರ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಿಸಿದೆ. ಭಾರತ ರಾಷ್ಟ್ರದ ರಕ್ಷಣಾ ವಿಷಯದಲ್ಲಿ ಎಂದಿಗೂ ರಾಜಿಯಾಗದ ನರೇಂದ್ರ ಮೋದಿ ರವರ ಸರ್ಕಾರ ಈಗ ಮತ್ತೊಂದು ಬ್ರಹ್ಮಾಸ್ತ್ರವನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುತ್ತಿದೆ.ಮೇಕ್ ಇನ್ ಇಂಡಿಯಾದ ಯೋಜನೆಯ ಅಡಿಯಲ್ಲಿ ಈ ಯುದ್ಧ ವಿಮಾನ ತಯಾರಾಗುತ್ತಿರುವ ಕಾರಣ ಹಲವಾರು ಉದ್ಯೋಗಗಳು ಸಹ ಸೃಷ್ಟಿಯಾಗಲಿದೆ ಹಾಗೂ ಮೇಕ್ ಇನ್ ಇಂಡಿಯಾ ಗೆ ಮತ್ತೊಂದು ಬೃಹತ್ ಗರಿ ದೊರಕಲಿದೆ.
ಬೆಂಗಳೂರಿನಲ್ಲಿ ನಡೆದ ಯಲಹಂಕ ವಾಯುನೆಲೆಯಲ್ಲಿ ಅಮೇರಿಕಾ ದೇಶವು ಭಾರತೀಯ ವಾಯುಪಡೆ ಗಾಗಿ ಸಿದ್ಧಪಡಿಸಿರುವ ಎಫ್ 21 ಯುದ್ಧ ವಿಮಾನವನ್ನು ಪ್ರದರ್ಶಿಸಿತು, ಇದನ್ನು ಕಂಡು ಬೆರಗಾದ ಜನ ಒಂದು ಕ್ಷಣ ದಂಗಾಗಿದ್ದರು. ಯುದ್ಧ ವಿಮಾನದ ತಾಕತ್ತು ಕಂಡ ತಕ್ಷಣವೇ ಭಾರತವು ಈ ಒಪ್ಪಂದಕ್ಕೆ ಅಮೇರಿಕಾದ ಜೊತೆಗೆ ಸಹಿ ಹಾಕಿದೆ. ಅಮೇರಿಕಾ ದೇಶದ ಟೆಕ್ನಾಲಜಿ ಹೊಂದಿದ ಎಫ್ 21 ಯುದ್ಧ ವಿಮಾನ ವನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರು ಮಾಡಲಾಗುತ್ತದೆ. ಅಮೇರಿಕಾ ಟೆಕ್ನಾಲಜಿಯಲ್ಲಿ ಸ್ಥಳೀಯವಾಗಿ ಯುದ್ಧವಿಮಾನವನ್ನು ತಯಾರಿಸುವುದರಿಂದ ಹಲವಾರು ಉದ್ಯೋಗಗಳು ಸೃಷ್ಟಿಯಾಗಲಿವೆ.
ಎಫ್ 21 ಯುದ್ಧ ವಿಮಾನದ ತಾಕತ್ತು ಕಂಡ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳಿಗೆ ಖಂಡಿತವಾಗಿಯೂ ನಡುಕ ಆರಂಭವಾಗುತ್ತದೆ. ಕ್ಷಣ ಮಾತ್ರದಲ್ಲಿ ಯಾವುದೇ ದಾಳಿಯನ್ನು ಉಡೀಸ್ ಮಾಡಬಲ್ಲ ತಾಕತ್ತು ಹೊಂದಿರುವ ಎಫ್ 21 ಯುದ್ಧ ವಿಮಾನಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿವೆ.
ತದನಂತರ ಭಾರತದಲ್ಲಿ ಉತ್ಪಾದನೆಯಾಗುವ ಎಫ್ 21 ವಿಮಾನಗಳು ವಿದೇಶಕ್ಕೆ ರಫ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಿನಲ್ಲಿ ಭಾರತೀಯ ಸೇನೆಯು ದಿನೇದಿನೇ ಬಲಿಷ್ಠವಾಗುತ್ತಾ, ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸುತ್ತದೆ.
ಕೂಡಿ ಬಂದ ಮುಹೂರ್ತ : ಡಿ.7ರಿಂದ 14,'ಬೆಂಗಳೂರು ಹಬ್ಬ' | ThatsKannada.com - Bangalore Fest from Dec.7th to 14th, 2003 - Kannada Oneindia
33 min ago ಶಾಲೆಯಲ್ಲಿ ಗುಂಡಿನ ದಾಳಿ: ಏಳು ಮಂದಿಗೆ ಗಾಯ
36 min ago ಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನ
ಕೂಡಿ ಬಂದ ಮುಹೂರ್ತ : ಡಿ.7ರಿಂದ 14,'ಬೆಂಗಳೂರು ಹಬ್ಬ'
ಬೆಂಗಳೂರು ಹಬ್ಬಕ್ಕೆ ಬಿಸ್ಮಿಲ್ಲಾ ಖಾನ್‌, ಕೆರೆಮನೆ ಶಂಭುಹೆಗಡೆ ಇತ್ಯಾದಿ ಘಟಾನುಘಟಿಗಳು
ಬೆಂಗಳೂರು : ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಹಬ್ಬಕ್ಕೆ ಮುಹೂರ್ತ ಕೂಡಿಬಂದಿದ್ದು , ಡಿಸೆಂಬರ್‌ 7ರಿಂದ 14ರವರೆಗೆ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಆರ್ಟಿಸ್ಟ್ಸ್‌ ಫೌಂಡೇಶನ್‌ ಫಾರ್‌ ಆರ್ಟ್ಸ್‌ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಹಬ್ಬ ನಡೆಯಲಿದೆ. ಈ ಹಬ್ಬವು ಬೆಂಗಳೂರಿನ ನಾಗರಿಕರಿಗೆ ನೃತ್ಯ, ಸಂಗೀತ, ನಾಟಕ, ಪಾಪ್‌ ಸಂಗೀತದ ರಸದೌತಣ ಉಣಬಡಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಬೆಂಗಳೂರು ಹಬ್ಬದ ರೂಪುರೇಷೆಗಳನ್ನು ಸುದ್ದಿಗಾರರಿಗೆ ತಿಳಿಸಿದರು.
ನಾಡ ಸಂಸ್ಕೃತಿ ಪ್ರದರ್ಶನ ಮಾತ್ರವಲ್ಲದೆ ಸಮಕಾಲೀನ ಕಲೆಗಳಿಗೂ ಬೆಂಗಳೂರು ಹಬ್ಬದಲ್ಲಿ ಆದ್ಯತೆ ನೀಡಲಾಗುವುದು. ಇದು ಬೆಂಗಳೂರಿಗೆ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವ ಒಂದು ವೇದಿಕೆ ಎಂದು ಸಚಿವ ಇನಾಂದಾರ್‌ ಬೆಂಗಳೂರು ಹಬ್ಬದ ವೈಶಿಷ್ಟ್ಯ ಬಣ್ಣಿಸಿದರು.
ಆರ್ಟಿಸ್ಟ್ಸ್‌ ಫೌಂಡೇಶನ್‌ ಫಾರ್‌ ಆರ್ಟ್ಸ್‌ನ ಸದಸ್ಯರಾದ ನಂದಿನಿ ಆಳ್ವ ಅವರು ಬೆಂಗಳೂರು ಹಬ್ಬದ ಮೂಲಕ ಕಲೆಯ ಬಗೆಗೆ ಬದ್ಧತೆ ಹಾಗೂ ಜಾಗೃತಿಯನ್ನು ಕಲಾವಿದರಲ್ಲಿ ಮೂಡಿಸಲಾಗುವುದು ಎಂದರು.
ಬಿಸ್ಮಿಲ್ಲಾ ಖಾನ್‌, ನಿಶಾದ್‌ ಖಾನ್‌, ಹರಿಪ್ರಸಾದ್‌ ಚೌರಾಸಿಯಾ, ಎಲ್‌.ಸುಬ್ರಹ್ಮಣ್ಯಂ, ಎಂ.ಎಸ್‌.ಗೋಪಾಲಕೃಷ್ಣನ್‌, ಕೆರೆಮನೆ ಶಂಭು ಹೆಗಡೆ, ಶಂಕರ ಮಹದೇವನ್‌, ಮಾಸ್ಟರ್‌ ಹಿರಣ್ಣಯ್ಯ, ಕದ್ರಿ ಗೋಪಾಲನಾಥ್‌ ಮುಂತಾದ ಖ್ಯಾತ ಕಲಾವಿದರು ಬೆಂಗಳೂರು ಹಬ್ಬದಲ್ಲಿ ಭಾಗವಹಿಸುವರು.
ಪಬ್‌ ಉತ್ಸವ : ನಗರದ ಪಬ್‌ ಸಂಸ್ಕೃತಿಗೆ ತಕ್ಕಂತಹ ಪಬ್‌ ಉತ್ಸವವನ್ನೂ ಇದೇ ಸಂದರ್ಭದಲ್ಲಿ ನಡೆಸುವುದಾಗಿ ಇನಾಂದಾರ್‌ ಹೇಳಿದರು. ಈ ಉತ್ಸವದಲ್ಲಿ ಶಂಕರ್‌ ಮಹಾದೇವನ್‌, ಇಷನ್‌, ಲಾಯ್‌, ಸುಖಬೀರ್‌ಸಿಂಗ್‌, ಬಾಂಬೆ ವೈಕಿಂಗ್ಸ್‌ ಮೊದಲಾದವರು ಭಾಗವಹಿಸಲಿದ್ದಾರೆ. ಇದಲ್ಲದೆ ಪ್ರಸಾದ್‌ ಬಿದ್ದಪ್ಪ ಸಂಯೋಜಿಸಿರುವ ಫ್ಯಾಷನ್‌ ಷೋಗಳನ್ನೂ ನಡೆಸಲಾಗುವುದು ಎಂದರು.
ಹಬ್ಬದ ಎಲ್ಲಾ ಕಾರ್ಯಕ್ರಮಗಳು ಉಚಿತ. ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಮಾತ್ರ ಪಾಸ್‌ ಪಡೆಯಬೇಕಾಗುತ್ತದೆ. ಗೋವಾದಲ್ಲಿನ ಕಾರ್ನಿವಲ್‌ ಮಾದರಿಯಲ್ಲಿ ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆದಿವೆ.
ಭೂರಮೆ: ನೀನೊಮ್ಮೆ ಬಾಯ್ತುಂಬ ಬಯ್ದುಬಿಡು !!
ನೀನೊಮ್ಮೆ ಬಾಯ್ತುಂಬ ಬಯ್ದುಬಿಡು !!
ನಿನ್ನ ಅಮ್ಮ ನಿಜವಾಗ್ಲೂ ನಿನ್ನಮ್ಮನಲ್ಲ ಗೊತ್ತಾ?
..... ಆಚೆಮನೆ ಸುಭದ್ರಕ್ಕ ನಾನು ಸ್ಕೂಲಿಗೆ ಹೊರಟಾಗ ಕೇಳುವುದಿತ್ತು!
ನಿನ್ನ ಮಲತಾಯಿ ನಿನಗೆ ಊಟ, ತಿಂಡಿ ಸರಿಯಾಗಿ ಕೊಡ್ತಾಳೇನೆ?
.... ಈಚೆಮನೆ ವೆಂಕಜ್ಜಿ ನಾನು ಅವಳ ಮೊಮ್ಮಗಳೊಡನೆ ಆಡಲು ಹೋದಾಗ ಲೊಚಗುಡುತ್ತಿತ್ತು.
ಛೆ .. ನನ್ನಮ್ಮ ನಿಜವಾಗ್ಲೂ ನನ್ನಮ್ಮನೇ .. ಅವಳೆಷ್ಟು ಒಳ್ಳೆಯವಳು ಗೊತ್ತಾ!!
ಅವರೆದುರು ಕೂಗುತ್ತಾ ಓಡುತ್ತಿದ್ದೆ.
ಗೆಳತಿ ಕಲಾ ..ಮ್ಯಾತ್ಸ್ ಟೆಸ್ಟ್ ನಲ್ಲಿ ಮಾರ್ಕ್ಸ್ ಕಡಿಮೆ ಬಂದಾಗ ..ಅಮ್ಮ ಬಯ್ಯುತ್ತಾಳೆಂದು ಹೆದರಿದ್ದಳು. "ಏ ಹಾಗೆ ಬಯ್ಯುವವಳೆಂಥಾ ಅಮ್ಮ!" ನಾನೆಂದಂದಕ್ಕೆ , ಅವಳು ನನ್ನನ್ನು ವಿಚಿತ್ರವಾಗಿ ನೋಡುತ್ತಾ ನನ್ನ ಒಳ್ಳೆಯದಕ್ಕೇ ಬಯ್ಯುತ್ತಾಳೆ ಅಲ್ಲವಾ? .. ಎಂದಿಂದ್ದಳು . ನನಗೆ ಆಶ್ಚರ್ಯ. ನನಗೆ ಯಾವಾಗಲೂ ಕಮ್ಮಿ ಮಾರ್ಕ್ಸ್ ಬರುತ್ತಿತ್ತು . ಒಮ್ಮೆಯೂ ನೀನೆನ್ನ ಬಯ್ದಿರಲಿಲ್ಲ.
ಪಕ್ಕದ ಮನೆಯ ಅಮಿತಾಳ ಮನೆಯೆದುರಿನ ಮಾವಿನ ಮರದಲ್ಲಿ ಒಟ್ಟಿಗೇ ಜೋಕಾಲಿಯಾಡುತ್ತಾ ಬಿದ್ದು ಮೈ ಕೈ ತರಚಿಕೊಂಡೆವು. ಓಡಿ ಬಂದ ಅಮಿತಾಳ ಅಮ್ಮನ ಕಣ್ಣಿನಲ್ಲಿ ನೀರು . ಪೆಟ್ಟುಮಾಡಿಕೊಂಡೆಯಲ್ಲೇ ಪುಟ್ಟಾ ನೋಡಿಕೊಂಡು ಆಡಾಬಾರದಾ... ಬಾ .. ಗಾಯ ತೊಳೆದು ..ಔಷಧಿ ಹಚ್ಚುತ್ತೇನೆ , ಎಂದು ಗದರುತ್ತಾ ಒಳಹೊರಟರು . ನೀನೂ ಬಾ ಪುಟ್ಟ ಎಂದು ನನ್ನನ್ನು ಕರೆದರೂ ..ಇಲ್ಲ ಮನೆಗೆ ಹೋಗುತ್ತೇನೆ ..ಅಮ್ಮ ಔಷಧಿ ಹಚ್ಚುತ್ತಾರೆ.. ಎಂದು ಬಂದೆ.
ರಕ್ತ ಸುರಿಯುತ್ತಿದ್ದ ಮಂಡಿಯೊಡನೆ ಬಂದ ನನ್ನನ್ನು ನೋಡಿ ತಣ್ಣನೆಯ ಸ್ವರದಲ್ಲಿ "ಬಿದ್ದೆಯಾ" ಎಂದಷ್ಟೇ ಕೇಳಿದ ನೀನು ಗಾಯ ತೊಳೆದು , ಔಷಧಿ ಹಚ್ಚಿದೆ. ನಿನ್ನ ಮುಖ ಆಗ ಸರ್ಕಾರಿ ಆಸ್ಪತ್ರೆಯ ನರ್ಸ್ ಮುಖವನ್ನೇ ಹೋಲುತ್ತಿತ್ತು!!
ಹೀಗಿದ್ದಾಗಲೊಮ್ಮೆ .. ನಿನಗೆ ಪುಟ್ಟ ತಮ್ಮ ಬರುತ್ತಾನೆ ಎಂದು ಅಪ್ಪ ಹೇಳಿದರು . ಕಲಾಳ ತಮ್ಮ ಅವಳ ಚಾಕೊಲೇಟ್ ಕಸಿದುಕೊಂಡು ಓಡುತ್ತಿದ್ದುದು ನೆನಪಾಗಿ , ನನಗೆ ತಮ್ಮ ಬೇಡವೆಂದೆ. ಕೊನೆಗೆ ಅಪ್ಪ ನಿನ್ನ ಜೊತೆ ಆಡುತ್ತಾನೆ , ನಿನ್ನನ್ನು ಅಕ್ಕ ಎನ್ನುತ್ತಾನೆ ಎಂದೆಲ್ಲ ಹೇಳಿದಾಗ ... ಅರೆಮನಸ್ಸಿನಿಂದ ಒಪ್ಪಿದೆ.
ಸ್ವಲ್ಪ ದಿನಗಳಲ್ಲೇ ... ಪುಟ್ಟ ಗೊಂಬೆಯಂತಹ ಮಗುವೊಂದು ನಿನ್ನ ಮಡಿಲಲ್ಲಿ ಮಲಗಿತ್ತು. .. ನನಗೇ ಎತ್ತಿಕೊಳ್ಳಬೇಕೆಂಬಾಸೆ . ನಾನು ಹತ್ತಿರ ಬಂದರೆ ನೀನು ಮಗುವನ್ನು ಎತ್ತಿಕೊಂಡು ಹೋಗಿಬಿಡುತ್ತಿದ್ದೆ. "ನಂಗೆ ಕೊಡು" ನಾನೆಂದರೆ ... ಹಾಲು ಕುಡಿಸಿ ಕೊಡುವೆ , ಔಷಧಿ ಕುಡಿಸಿ ಕೊಡುವೆ ಎಂದೇನೊ ಹೇಳಿ ಕಳೆಯುತ್ತಿದ್ದೆ. ಕೊನೆಗೆ ನಾನೂ ಸುಮ್ಮನುಳಿದೆ.
ಆದರೆ ಅವನು ಬೆಳೆದಂತೆಲ್ಲ ನಿನ್ನ ಮುಖದಲ್ಲಿ ಭಾವನೆಗಳು ಅರಳುವುದನ್ನು ನಾನು ಗಮನಿಸಿದೆ.
ಅವ ಊಟ ಬೇಡವೆಂದರೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುವುದನ್ನು ನೋಡಿದ್ದೆ. ಆಗ ನಿನ್ನ ಮುಖದಲ್ಲಿನ ಮಿನುಗು .. ನನಗಿಷ್ಟವಾಗುತ್ತಿತ್ತು. ನನಗೂ ನೀನು ಊಟ ಮಾಡಿಸುತ್ತಿದ್ದೆ. ಆದರೆ ನಿನ್ನ ಮುಖವೆಂದೂ ಹೀಗಿರುತ್ತಿರಲಿಲ್ಲ.
ಅವನು ಬಿದ್ದರೆ ನಿನ್ನ ಕಣ್ಣಲ್ಲಿ ನೀರು ಬರುತ್ತಿತ್ತು . ಅದನ್ನು ನೋಡಲೆಂದೇ ನಾನು ಅವನನ್ನು ತಳ್ಳಿ ಬೀಳಿಸುತ್ತಿದ್ದೆ !!
ಈಗ ಅವನಿಗೆ ಮ್ಯಾತ್ಸ್ ಮಾರ್ಕ್ ಕಮ್ಮಿ ಬಂದರೆ ನೀನು ಗದರುವುದು ಕೇಳುತ್ತಿತ್ತು.
ನಾನು ಟೆನ್ತ್ ಫೇಲಾದೆ . ಹೋಗಲಿ ಬಿಡು ಮತ್ತೆ ಬರೆಯುವಿಯಂತೆ , ಹೇಳಿದ ನಿನ್ನದು ಮತ್ತೆದೇ ನಿರ್ಲಿಪ್ತ ಮುಖ .
ಕಾಲೇಜ್ ಸೇರಿದ ಮೇಲೆ ನನ್ನ ಹಠಮಾರಿತನವೂ ಬೆಳೆಯಿತು. ಸ್ಕೂಟಿ ಬೇಕೆಂದೆ , ಅಪ್ಪನಿಗೆ ಆತಂಕ . ನೀನೆ ಅವರನ್ನೂ ಒಪ್ಪಿಸಿ ಕೊಡಿಸಿದೆ.
ಗೆಳತಿ ಅಮಿತಾಳನ್ನು ಹಿಂದೆ ಕೂರಿಸಿಕೊಂಡು ಹೊರಡುವಾಗ ಅವರಮ್ಮ ನೂರೆಂಟು ಉಪದೇಶ ನೀಡುತ್ತಿದ್ದರು .... ನಿಧಾನವಾಗಿ ಹೋಗಿ ... ಹುಡುಗರ ಸಹವಾಸ ಬೇಡ... ಒಬ್ಬೊಬ್ಬರೇ ತಿರುಗಬೇಡಿ....
ನನಗಾರೂ ಏನೂ ಹೇಳಲಿಲ್ಲ ... ಗೆಳೆಯನನ್ನು ಹಿಂದೆ ಕೂರಿಸಿಕೊಂಡು ನೀನು ತರಕಾರಿ ತರುವಾಗ ನಿನ್ನೆದುರೇ ಗಾಡಿ ಓಡಿಸಿದೆ. ಮನೆಗೆ ಬಂದ ಮೇಲೆ ನೀನೇನೂ ನೋಡೇ ಇಲ್ಲವೆಂಬಂತೆ ವರ್ತಿಸಿದೆಯಲ್ಲಾ......
ನನ್ನ ಗೆಳತಿಯರು ಹೇಳುವುದಿತ್ತು . ನೋಡು ನೀನು ಪುಣ್ಯ ಮಾಡಿದ್ದಿ , ಮಲತಾಯಿಯಾದರೂ ನಿನ್ನಮ್ಮ ನಿನಗಾವ ತೊಂದರೆಯನ್ನೂ ಕೊಡುವುದಿಲ್ಲ , ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ! ...
ನಿಜ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ ನೀನು ಸಂಬಳಕ್ಕೆ ಕೆಲಸಮಾಡುವ ಆಯಾನಂತೆ ... ತಪ್ಪಿದಾಗ ತಿದ್ದಲಿಲ್ಲ ... ನೋವಾದಾಗ ಕಣ್ಣೊರೆಸಲಿಲ್ಲ ... ಸಂತೋಷವಾದಾಗ ನಿನ್ನ ಕಣ್ಣರಳಲಿಲ್ಲ. ನಾ ಬಯಸಿದ್ದೆ ಜೀವಂತ ಆಮ್ಮನನ್ನು . ಅಪ್ಪ ನನಗಿತ್ತಿದ್ದ ... ಕರ್ತವ್ಯಶಾಲಿ ಆಯಾನನ್ನು.
ಕೊನೆಗೆ ನನ್ನೆಲ್ಲ ಆಸೆಗಳನ್ನೂ ಕಟ್ಟಿ ಬದಿಗಿಟ್ಟು ಮನಸ್ಸಿಟ್ಟು ಓದಿ , ಕೆಲಸ ಸಂಪಾದಿಸಿದೆ ನಾನು . " ಕಂಗ್ರಾಟ್ಸ್ " ನಿನ್ನ ಕಣ್ಣಲ್ಲಿ ಅದೇ ನಿರ್ಲಿಪ್ತ ಭಾವ !!
ಇಷ್ಟಪಟ್ಟವನನ್ನು ವರಿಸಿ ನಿನ್ನ ನಿರ್ಜೀವ ಮುಖದಿಂದ ದೂರ ಹೊರಟೆ . ನನ್ನದೇ ಗೂಡಿನಲ್ಲಿ ನಾನಿಗ ಸುಖಿ.
ಈಗ ನಾನು ನಿನ್ನ ಮಗಳೆಂಬುದು ನಿನಗೆ ನೆನಪಾಗಿದೆ. ನಿನ್ನ ಗಂಡ ಅಂದರೆ ನನ್ನಪ್ಪ ಕಣ್ಮುಚ್ಚಿ ವರ್ಷ ಕಳೆದಿವೆ , ಮಗ ಸೊಸೆಗೀಗ ನೀನು ಕಾಲಕಸವಾಗಿದ್ದೀಯ ... ಈಗ ನಾನು ಮನೆಗೆ ಬಂದರೆ ..ನಿನ್ನ ಕಣ್ಣೂ ಮಿನುಗುತ್ತವೆ ... ಮಗಳೇ ಎಂದು ಪ್ರೀತಿಯಿಂದ ಕರೆಯುತ್ತೀಯ .....
ಈಗಲೂ ಕಾಲ ಮಿಂಚಿಲ್ಲವಮ್ಮಾ ನೀನೊಮ್ಮೆ ಬಾಯ್ತುಂಬ ನನ್ನನ್ನು ಬಯ್ದುಬಿಡು ... ನಾನು ಮಾಡದ ತಪ್ಪಿಗಾದರೂ ಸರಿ .. ಬಯ್ದುಬಿಡು ... ನಾನಿನ್ನ ಮನಸಾರೆ ಅಮ್ಮನೆಂದು ಒಪ್ಪಿಕೊಳ್ಳುತ್ತೇನೆ ... ನಿನಗೆ ಆಸರೆಯಾಗುತ್ತೇನೆ .... ನನ್ನ ಮಗನಿಗೆ ಪ್ರೀತಿಯ ಅಜ್ಜಿಯಾಗಿ .... ನನ್ನ ತಪ್ಪುಗಳನ್ನು ತಿದ್ದುವ ಅಮ್ಮನಾಗಿ ... ನನ್ನ ಗಂಡನ ಪ್ರೀತಿಯ ಅತ್ತೆಯಾಗಿ ನಮ್ಮೊಂದಿರುವೆಯಂತೆ.... ಅಮ್ಮ ...ಆದರೆ ಒಮ್ಮೆ ಬಾಯ್ತುಂಬ ಬಯ್ದುಬಿಡು !!!
Posted by ಸುಮ at 2:43 AM
Subrahmanya Bhat Thursday, 11 February, 2010
'ಬೈದು ಹೇಳೋರು ಬದುಕೋದಕ್ಕೆ ಹೇಳ್ತಾರೆ ಅನ್ನೋ ಮಾತಿದೆ'...ಕಥೆಯ ವಿಷಯ ವಾಸ್ತವವೂ ಹೌದು...ಮನಸ್ಸಿನ ಸಂವೇದನೆಯನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಿ...ಚೆನ್ನಾಗಿದೆ ಕಥೆ.
Uma Bhat Thursday, 11 February, 2010
ಆಪ್ತವಾದ ಕಥಾ ಶೈಲಿ ಖುಷಿ ಕೊಟ್ಟಿತು.
Karthik H.K Thursday, 11 February, 2010
helodakke enoo tochuttilla. manassina sarovaravannu kalakibittitu nimma baraha..
ಸಾಗರದಾಚೆಯ ಇಂಚರ Thursday, 11 February, 2010
ಒಮ್ಮೆ ಕಣ್ಣಲ್ಲಿ ನಿರು ಬಂತು
ತಾಯಿಯ ಬೈಗಳು ಯಾವಾಗಲು ಇಷ್ಟ
ಹೆತ್ತವಳಿಗೆ ಹೊಡೆಯುವ ಹಕ್ಕೂ ಇದೆ
ನಿರ್ಲಿಪ್ತ ಭಾವನೆ ಎಂಥವರನ್ನು ವಿಚಲಿತ ಗೊಳಿಸುತ್ತದೆ
VASANT Thursday, 11 February, 2010
oh! Great! Suma kaalakke entha taakattideyalla! ellavannu tiruchi maruchi haakibiduttade. baiydavarenna bandhugalembe nindisidavarenna tande taaygalembe...... aadare kelavomme baiyadeyoo mounavagi nirdeshisuvaduntalla adu namma anubhavavannu gattigolisuttade. baduku kalisuttade. amma hege irali yaavagaloo great! "tellagidroo majjige...malladroo tayi" emba gaade ideyalla!
sunaath Friday, 12 February, 2010
ಬೈಯುವದೂ ಸಹ ಆಪ್ತತೆಯನ್ನೇ ತೋರಿಸುತ್ತದೆ, ಅಲ್ಲವೆ? ಮಲಮಗಳ ಅಳಲನ್ನು ತುಂಬ ಚೆನ್ನಾಗಿ ತೋರಿಸಿರುವಿರಿ.
ವಿ.ಆರ್.ಭಟ್ Friday, 12 February, 2010
ಅಮ್ಮನ ಬಗ್ಗೆ ಒಂದು ಕಥನ-ಕವನವನ್ನು ಬರೆದಿದ್ದೆ, ತಾವು ಓದಿರಬಹುದು, ಅದು ಮಕ್ಕಳು ಮರೆಯದ ಗೀತೆ, ಅದನ್ನು ನಾನೇ ಓದಿಕೊಂಡು ಗಂಟೆಗಟ್ಟಲೆ ಅತ್ತಿದ್ದೆ ಅಂದರೆ ನಿಮಗೆ ತಮಾಷೆ ಅನ್ನಿಸಬಹುದು, ತಾಯಿಗೆ ತನ್ನ ಮಗ/ಮಗಳು ಎಂದಷ್ಟೇ ಗೊತ್ತು ಬಿಟ್ರೆ, ಅವರು ರಾಜಕಾರಣಿಯೋ, ಎಂಜಿನೀಯರೋ,ಡಾಕ್ಟರೋ ಇದೆಲ್ಲ ಅಮ್ಮ ನೋಡುವುದಿಲ್ಲ, ಅಮ್ಮನಿಗೆ ತನ್ನ ಕಂದಮ್ಮ ಚೆನ್ನಾಗಿದ್ದರೆ ಸಾಕು! ಇದು ಸೃಷ್ಟಿಯ ನಿಯಮ, ಇದು ನನ್ನ ಬಾಷೆಯಲ್ಲಿ ಭರಿಸಲಾಗದ ಋಣ, ಹೀಗೇ ಅಮ್ಮ ಅಥವಾ ತಾಯಿ ನಮಗೆ ಏನೇ ಮಾಡಿದರೂ ಅದು ನಮ್ಮ ಉನ್ನತಿಗಾಗಿ, ಅದರಲ್ಲಿ ತಪ್ಪೂ ಇಲ್ಲ, ಅದನ್ನು ಪ್ರಶ್ನಿಸುವ ಅಗತ್ಯವೇ ಬರುವುದಿಲ್ಲ, ಒಳ್ಳೆಯ ಲೇಖನ ಕೊಟ್ಟಿದ್ದೀರಿ,ಧನ್ಯವಾದಗಳು
ಇಲ್ಲಿ ಮಲಮಗಳ ಬಗ್ಗೆ ಮರೆತೆ, ಅನೇಕ ಅಮ್ಮಂದಿರು ಮಲಮಕ್ಕಳನ್ನೂ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಕೆಲವು ಮಾನವೀಯತೆ ಇಲ್ಲದವರು ತೊಂದರೆ ಕೊಡಬಹುದು!
ತೇಜಸ್ವಿನಿ ಹೆಗಡೆ- Friday, 12 February, 2010
ಹೃದಯಸ್ಪಶಿಯಾಗಿದೆ ಬರಹ. ಆದರೆ ಅಷ್ಟೊಂದು, ನಿರ್ಲಿಪ್ತತೆ, ನಿರ್ಮಮಕಾರ ತೋರಿದ ಮಲತಾಯಿಯ ಮೇಲೆ ಇನ್ನೂ ಪ್ರೀತಿ, ವಿಶ್ವಾಸವನ್ನು ಆಕೆ ಇಟ್ಟುಕೊಂಡಿರುವುದು ಮಾತ್ರ ಬಹು ಅಚ್ಚರಿಯೇ ಸರಿ.
ಸೀತಾರಾಮ. ಕೆ. Friday, 12 February, 2010
ಆಪ್ತತೆಯ ಕಥೆ. ಮನ ಕಲಕಿತು. ಭಾವನೆಗಳಿಲ್ಲದ ನಿರ್ಲಿಪ್ತ ಬದುಕಿನಲ್ಲಿ ಬೇಕಾದುದೆಲ್ಲ ಇದ್ದರೂ ಸುಖದ ಸೆಲೆ ಇಲ್ಲ. ಪ್ರೀತಿ ಭಾವನೆಗಳ ಬಯ್ಗುಳಗಳೂ ಅಪ್ಯಾಯಮಾನ. ಒಳ್ಳೇ ಸ೦ದೇಶವಿದೆ.
ಸಿಮೆಂಟು ಮರಳಿನ ಮಧ್ಯೆ Saturday, 13 February, 2010
ಪ್ರೀತಿ. ಪ್ರೇಮ
ಬಾಂಧವ್ಯ ದಲ್ಲಿ
ಬೈಯ್ಗಳನೂ ಇರಬೇಕು..
ಜಗಳನೂ ಆಗ ಬೇಕು..
ಆಗ ಪ್ರೀತಿಗೊಂದು ಅರ್ಥ..
ಅದರ ಬೇರುಗಳು ಆಳಕ್ಕಿಳಿಯತ್ತವೆ...
ನಿಮ್ಮ ಲೇಖನ ಓದಿ ಕಣ್ಣಲ್ಲಿ ನೀರು ಜಿನುಗಿತು....
umesh desai Saturday, 13 February, 2010
ಸುಮಾ ಇದು ಕಥೆನಾ....? ಭಾಳ ಛಲೋ ಅದ ಒಂದು ಹೊಸ ಆಯಾಮದ ಪರಿಚಯ ಮಾಡಿಸಿರುವಿರಿ...ತುಂಬಾ ಆಪ್ತ ವಿವರಣೆ.
ಗುರು-ದೆಸೆ !! Tuesday, 16 February, 2010
'ಸುಮಾ' ಅವ್ರೆ..,
ತುಂಬಾ ಭಾವನಾತ್ಮಕವಾಗಿದೆ...
Harish Athreya Thursday, 18 February, 2010
ಮನಮುಟ್ಟುವ೦ಥ ಕಥೆ
ಮಲತಾಯಿಯ ಬಗ್ಗೆ ಕ್ರೂರವಾಗಿ ಬರೆಯೋದನ್ನ ಕ೦ಡಿದೀನಿ ರೋದನೆಗಳನ್ನ ಓದಿದೀನಿ ಆದರೆ ತಣ್ಣನೆಯ
ಹಿ೦ಸೆ ಹೀಗೂ ಇರುತ್ತೆ ಅನ್ನೋದನ್ನ ತೋರಿಸಿಕೊಟ್ರಿ.ಹೆತ್ತವರು ಬೈದರೆ ಅಸಹನೆಯನ್ನ ತೋರಿಸೋ ಮಕ್ಕಳು ಇದಾರೆ
ಅದರೆ ಬೈಯುವಿಕೆ ಆತ್ಮೀಯತೆಯನ್ನ ತೋರಿಸುತ್ತೆ ಅನ್ನೋದನ್ನ ತೋರಿಸಿದ್ರೆ ಹ್ಯಾಟ್ಸಾಫ್
ಎಲ್ಲದಕ್ಕಿಂತ ದೊಡ್ಡ ಹಿಂಸೆ ಅಂದ್ರೆ ತಾತ್ಸಾರ ಮಾಡೋದು ಅಂತಾರೆ. ಅದನ್ನೇ ನೀನು ಎಷ್ಟು ಚೆನ್ನಾಗಿ ಹೇಳಿದೀಯಾ.. ನಾವು ಜಗಳ ಮಾಡೋದು, ಬೈಯ್ಯೋದು ಎಲ್ಲ ನಮ್ಮ 'ಹತ್ತಿರದವರ' ಜೊತೇನೆ. ಬೈದು ಹಕ್ಕನ್ನು ಸ್ತಾಪಿಸಿದ್ರೆ ಖುಷಿ ಅನ್ನೋದು ನಿಜ ಅಲ್ವಾ???
ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಗ್ರಾಮ ಸೇರ್ಪಡೆಗೆ ವಿರೋಧ - Sanjevani