text stringlengths 0 61.5k |
|---|
Home ಜಿಲ್ಲೆ ರಾಯಚೂರು ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಗ್ರಾಮ ಸೇರ್ಪಡೆಗೆ ವಿರೋಧ |
ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಗ್ರಾಮ ಸೇರ್ಪಡೆಗೆ ವಿರೋಧ |
ದೇವದುರ್ಗ.ಏ.೧೮-ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಹಾಗೂ ಲಿಂಗದಹಳ್ಳಿ ಗ್ರಾಮಗಳ ಸೇರ್ಪಡೆಗೆ ವಿರೋಧಿಸಿ ಇಲ್ಲಿನ ಪರಮಾನಂದ ದೇವಸ್ಥಾನದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಶಾಸಕರ ಮುಂದೆ ಮಹಿಳೆಯರು ಅಳಲು ತೋಡಿಕೊಂಡರು. |
ಜಾಲಹಳ್ಳಿ ಗ್ರಾಪಂಯನ್ನು ಪಪಂಯಾಗಿ ಮೇಲ್ದರ್ಜೆಗೇರಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಪಪಂ ವ್ಯಾಪ್ತಿಗೆ ಚಿಂಚೋಡಿ ಗ್ರಾಪಂಗೆ ಒಳಪಡುವ ಲಿಂಗದಹಳ್ಳಿ ಹಾಗೂ ಕರಡಿಗುಡ್ಡ ಗ್ರಾಪಂಗೆ ಒಳಪಡುವ ಮುದಗೋಟ್ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು. |
ಎರಡೂ ಗ್ರಾಮಗಳ ಜನರು ಕೃಷಿ ಅವಲಂಬಿಸಿದ್ದು, ಗ್ರಾಪಂಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಪಪಂ ಸೇರ್ಪಡೆಯಿಂದ ಬಹುತೇಕ ಜನರು ಉದ್ಯೋಗವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವ ಸ್ಥಿತಿ ಎದುರಾಗಲಿದೆ. ಅಲ್ಲದೆ ವಸತಿ ಯೋಜನೆ ಸೇರಿ ಸರ್ಕಾರದ ವಿವಿಧ ಯೋಜನೆಗಳು ಕೈತಪ್ಪಲಿವೆ ಎಂದು ದೂರಿದರು. |
ಜಾಲಹಳ್ಳಿಗೆ ೩ಕಿಮೀ ಅಂತರವಿರುವ ಗ್ರಾಮಗಳನ್ನು ಬಿಟ್ಟು ೮ಕಿಮೀ ದೂರದ ಲಿಂಗದಹಳ್ಳಿ, ಮುದಗೋಟ್ ಗ್ರಾಮ ಸೇರ್ಪಡೆ ಮಾಡಲಾಗಿದೆ. ಇದರ ಹಿಂದೆ ಅವೈಜ್ಞಾನಿಕ ಉದ್ದೇಶವಿದ್ದು, ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ನೋವು ತೋಡಿಕೊಂಡರು. ಇದಕ್ಕೆ ಶಾಸಕ ಕೆ.ಶಿವಗನೌಡ ನಾಯಕ ಪ್ರತಿಕ್ರಿಯಿಸಿ, ಸರ್ಕಾರ ಆದೇಶ ನೀಡಿರುವ ಹಿನ್ನೆಲೆ ಈಗ ಏನು ಮಾಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. |
ಸಭೆಯಲ್ಲಿ ಮಹಿಳೆಯರು ಮಾಸಾಶನ ಸೇರಿ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಜಾಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೧೦೮ವಾಹನ, ಅಗತ್ಯ ವೈದ್ಯಾಧಿಕಾರಿ ಕೊರತೆ ಸೇರಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು. ದೂರದ ಲಿಂಗದಹಳ್ಳಿದಲ್ಲಿ ಕುಂದುಕೊರತೆ ಸಭೆ ಆಯೋಜಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. |
ಜಿಪಂ ಸದಸ್ಯ ವೀರಣ್ಣ ಪಾಣಿ, ಮುದಗೋಟ್ ಗ್ರಾಮದ ಮಹಿಳೆಯರಾದ ಅಂಜಳಮ್ಮ ಮೇಟಿ, ಮಹಾದೇವಮ್ಮ ಪೊಪಾ, ಲಕ್ಷ್ಮಿಮಾಳಿ, ಗಂಗಮ್ಮ, ಹನುಮಂತಿ, ಯಲ್ಲಮ್ಮ ಮಾಪಾ, ಎಂ.ಎಸ್.ಪಾಟೀಲ್ ಇತರರಿದ್ದರು. |
ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು | Udayavani – ಉದಯವಾಣಿ |
Monday, 17 Jan 2022 | UPDATED: 01:17 AM IST |
ರಾಜ್ಯದಲ್ಲೇ ಮಾದರಿ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಜಾರಿಗೊಳಿಸಲು ಸರಕಾರದಿಂದ ಸಿದ್ಧತೆ |
Team Udayavani, Nov 27, 2021, 7:11 AM IST |
ಉಡುಪಿ: ಸರಕಾರಿ ಹಾಸ್ಟೆಲ್‌ಗಳ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು, ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಅರಿಯಲು ಜಿಲ್ಲಾಮಟ್ಟದ ಅಧಿಕಾರಿಗಳೇ ಇನ್ನು ಮುಂದೆ "ಮೆಂಟರ್' (ಮಾರ್ಗದರ್ಶಕರು)ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. |
ರಾಜ್ಯದಲ್ಲೇ ಮೊದಲ ಬಾರಿಗೆ ಈ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಸಿಇಒ ಡಾ| ನವೀನ್ ಭಟ್ ಸಹಿತ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಒಂದು ಅಥವಾ ಎರಡು ಸರಕಾರಿ ವಿದ್ಯಾರ್ಥಿನಿಲಯಗಳನ್ನು ಹಂಚಿಕೆ ಮಾಡಲಾಗಿದೆ. |
ಈ ಅಧಿಕಾರಿಗಳು ತಮಗೆ ಹಂಚಿಕೆಯಾಗಿರುವ ವಿದ್ಯಾರ್ಥಿ ನಿಲಯಗಳಿಗೆ ತಿಂಗಳಿಗೆ ಒಮ್ಮೆ ಭೇಟಿ ನೀಡಿ, ಅಲ್ಲಿರುವ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲಿದ್ದಾರೆ. |
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ, ನವೋ ದಯ ವಸತಿ ಶಾಲೆ, ಆಶ್ರಮ ಶಾಲೆಗಳನ್ನು ನಡೆಸಲಾಗುತ್ತಿದೆ. ಉಡುಪಿಜಿಲ್ಲೆಯಲ್ಲಿ 86 ಸರಕಾರಿ ವಿದ್ಯಾರ್ಥಿನಿಲಯಗಳಿವೆ. ಇವನ್ನೆಲ್ಲ ಇನ್ನಷ್ಟು ಸುಧಾರಿಸಿ, ಮೇಲ್ದರ್ಜೆಗೆ ಏರಿಸಲು, ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕ (ವಾರ್ಡನ್)ರಿಗೆ ಸಮರ್ಪಕ ನಿರ್ವಹಣೆಯ ಸಲಹೆ ನೀಡಲು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಿತ ವಿವಿಧ ವಿಷಯಗಳ ತರಬೇತಿಗೆ ಅಗತ್ಯ ಮಾರ್ಗದರ್ಶನ ನೀಡಲು ಮೆಂಟರ್ ಪರಿಕಲ್ಪನೆ ಜಾರಿ ಮಾಡಲಾಗುತ್ತಿದೆ. |
ವ್ಯವಸ್ಥೆ ಜಾರಿಯ ಅನಂತರ ಪ್ರತೀ ಅಧಿಕಾರಿ ತನಗೆ ಹಂಚಿಕೆಯಾದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ವ್ಯವಸ್ಥೆ ಸುಧಾರಣೆಗೆ ಪೂರಕವಾದ ಮಾರ್ಗದರ್ಶನ ನೀಡಿ, ಅಲ್ಲಿನ ಸಮಸ್ಯೆಬಗೆಹರಿಸಲು ನಿರ್ದಿಷ್ಟ ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆಯನ್ನು ಜಿಲ್ಲಾಡಳಿತದಿಂದ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. |
ಮಕ್ಕಳೊಂದಿಗೆ ಬೆರೆಯಬೇಕು |
ವಿದ್ಯಾರ್ಥಿನಿಲಯಗಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅನೇಕ ರೀತಿಯ ಸಮಸ್ಯೆ, ಖಿನ್ನತೆ ಎದುರಿಸುತ್ತಿರುತ್ತಾರೆ. ಮಾರ್ಗ ದರ್ಶಕರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಮಾಲೋಚನೆ ನಡೆಸಬೇಕು. ವಿದ್ಯಾರ್ಥಿ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಇಲಾಖೆಗೆ ನೀಡಿ, ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ ಊಟದ ವ್ಯವಸ್ಥೆ, ನೀರು ಪೂರೈಕೆ, ಅಧ್ಯಯನಕ್ಕೆ ಪೂರಕವಾದ ವಾತಾವರಣ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಟ್ಟಾರೆಯಾಗಿ ಮಾರ್ಗದರ್ಶಕರು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಬೆರೆಯಬೇಕು. |
ಬಹುತೇಕ ಅಧಿಕಾರಿಗಳು ವಿದ್ಯಾರ್ಥಿನಿಲಯಗಳಲ್ಲಿ ಓದಿ ಬಂದಿರುವುದರಿಂದ ಅಲ್ಲಿನ ವ್ಯವಸ್ಥೆಯ ಸುಧಾರಣೆಗೆ ಅವರಲ್ಲಿ ಅನೇಕ ರೀತಿಯ ಕಲ್ಪನೆಗಳಿರುತ್ತವೆ. ಅವುಗಳ ಅನುಷ್ಠಾನದ ದೃಷ್ಟಿಯಿಂದ ಮತ್ತು ಸರಕಾರಿ ವಿದ್ಯಾರ್ಥಿನಿಲಯಗಳಿಗೆ ಇನ್ನಷ್ಟು ಶಕ್ತಿ ತುಂಬಲು, ವಿದ್ಯಾರ್ಥಿಗಳು ಎದುರಿಸು ತ್ತಿರುವ ಸಮಸ್ಯೆ ಅರಿಯಲು ಮೆಂಟರ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. |
-ಕೂರ್ಮಾ ರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ |
ಜಿಲ್ಲಾಮಟ್ಟದ ಅಧಿಕಾರಿಗಳು ಸರಕಾರಿ ವಿದ್ಯಾರ್ಥಿ ನಿಲಯಗಳಿಗೆ ಮಾರ್ಗದರ್ಶಕ ರಾಗುವುದರಿಂದ ವ್ಯವಸ್ಥೆ, ಸೌಲಭ್ಯ ಸುಧಾರಣೆಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ನೇರ ಸಂವಹನ ನಡೆಸಲು ಇದು ವೇದಿಕೆಯಾಗಲಿದೆ. |
ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು - Kannada DriveSpark |
9 min ago ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ ಖರೀದಿಸುವ ನಿರ್ಮಾಣ ಕಾರ್ಮಿಕರಿಗೆ ಸಿಗಲಿದೆ 30% ಸಬ್ಸಿಡಿ |
Published: Wednesday, October 13, 2021, 10:09 [IST] |
ಕಾರು ಪ್ರಯಾಣದ ಇದ್ದಕ್ಕಿದ್ದಂತೆ ಕಾರಿನ ಟಯರ್‌ನಲ್ಲಿ ಸಮಸ್ಯೆ ಉಂಟಾದರೆ ತಕ್ಷಣವೇ ಕಾರ್ ಅನ್ನು ನಿಲ್ಲಿಸಿ ಏನು ಸಮಸ್ಯೆಯಾಗಿದೆ ಎಂದು ಪರಿಶೀಲಿಸುತ್ತೇವೆ. ನಂತರ ಕಾರಿನ ಬೂಟ್'ನಲ್ಲಿರುವ ಸ್ಪೇರ್ ಟಯರ್ ತೆಗೆದು ಟಯರ್ ಬದಲಿಸುತ್ತೇವೆ. ಗಮನಿಸ ಬೇಕಾದ ಸಂಗತಿಯೆಂದರೆ ಸ್ಪೇರ್ ಟಯರ್, ಕಾರಿನ ಇತರ ಟಯರ್‌ಗಳಿಗಿಂತ ಚಿಕ್ಕದಾಗಿರುತ್ತದೆ. |
ಕಾರಿನ ಇತರ ಟಯರ್‌ಗಳಿಗೆ ಹೋಲಿಸಿದರೆ ಸ್ಪೇರ್ ಟಯರ್ ಏಕೆ ಚಿಕ್ಕದಾಗಿರುತ್ತದೆ. ಇತರ ಟಯರ್‌ಗಳಂತೆಯೇ ಸ್ಪೇರ್ ಟಯರ್‌ಗಳನ್ನು ಏಕೆ ಒಂದೇ ಪ್ರಮಾಣದಲ್ಲಿ ನೀಡಲಾಗುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. |
ಕಾರಿನ ಮೇಲೆ ಹೆಚ್ಚು ತೂಕ ಬೀಳದಿರಲಿ ಎಂಬ ಕಾರಣಕ್ಕೆ ಸ್ಪೇರ್ ಟಯರ್‌ಗಳನ್ನು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ನೀಡಲಾಗುತ್ತದೆ. ಸ್ಪೇರ್ ಟಯರ್‌ಗಳು ಕಡಿಮೆ ತೂಕ ಹೊಂದಿದ್ದರೆ ಹಾಗೂ ಚಿಕ್ಕದಾಗಿದ್ದರೆ ಪ್ರತಿಯೊಬ್ಬರೂ ಅವುಗಳನ್ನು ಸುಲಭವಾಗಿ ಎತ್ತಬಹುದು. ಇದರಿಂದ ಟಯರ್ ಬದಲಿಸುವ ಸಂದರ್ಭ ಬಂದಾಗ ಸುಲಭವಾಗಿ ಬದಲಾಯಿಸಬಹುದು. |
ಜೊತೆಗೆ ಸ್ಪೇರ್ ಟಯರ್‌ಗಳನ್ನು ಚಿಕ್ಕದಾಗಿಸುವುದರಿಂದ ಉತ್ಪಾದನಾ ಕಂಪನಿಗಳಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಇದರಿಂದ ಕಾರಿನ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಕಾರು ತಯಾರಕ ಕಂಪನಿಗಳು ಕಾರಿನ ಬೆಲೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತವೆ. ಕಾರಿನ ಬೆಲೆ ಕಡಿಮೆಯಿದ್ದರೆ ಮಾತ್ರ ಗ್ರಾಹಕರು ಕಾರ್ ಅನ್ನು ಖರೀದಿಸಲು ಮುಂದಾಗುತ್ತಾರೆ. |
ಕಾರು ತಯಾರಕ ಕಂಪನಿಗಳು ಕಾರುಗಳ ಬೆಲೆ ಇಳಿಸಲು ಮಾಡುವ ವಿವಿಧ ತಂತ್ರಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಕಾರಿನ ನಿಯಮಿತ ಟಯರ್ ಗಳನ್ನು ದೀರ್ಘಾವಧಿವರೆಗೂ ಬಳಸಬಹುದು. ಆದರೆ ಅದಕ್ಕಿಂತ ಚಿಕ್ಕ ಪ್ರಮಾಣದಲ್ಲಿರುವ ಸ್ಪೇರ್ ಟಯರ್‌ಗಳನ್ನು ಹಾಗೆ ಬಳಸಲು ಸಾಧ್ಯವಿಲ್ಲ. ಸಣ್ಣ ಗಾತ್ರದ ಸ್ಪೇರ್ ಟಯರ್‌ಗಳಲ್ಲಿ ಹೆಚ್ಚು ಎಂದರೆ 150 ಕಿ.ಮೀಗಳವರೆಗೆ ಚಲಿಸಬಹುದು. |
ಜೊತೆಗೆ ಈ ಟಯರ್ ಹೊಂದಿರುವ ಕಾರುಗಳನ್ನು ಪ್ರತಿ ಗಂಟೆಗೆ 80 ಕಿ.ಮೀಗಳಿಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಬೇಕಾಗುತ್ತದೆ. ಕಾರಿನಲ್ಲಿ ಸಣ್ಣ ಸ್ಪೇರ್ ಟಯರ್‌ಗಳನ್ನು ಅಳವಡಿಸುವಾಗ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಸ್ಪೇರ್ ಟಯರ್‌ಗಳನ್ನು ಕಾರಿನ ಟ್ರಂಕ್ ಪ್ರದೇಶದಲ್ಲಿ, ಅಂದರೆ ಬೂಟ್ ಪ್ರದೇಶದಲ್ಲಿ ಇರಿಸಲಾಗುತ್ತದೆ. |
ಒಂದು ವೇಳೆ ಸ್ಪೇರ್ ಟಯರ್ ಕಾರಿನ ಇತರ ಟಯರ್ ಗಳಷ್ಟು ದೊಡ್ಡದಾಗಿದ್ದರೆ, ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಸ್ಪೇರ್ ಟಯರ್ ಚಿಕ್ಕದಾಗಿದ್ದರೆ, ಅದು ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಈಗಾಗಲೇ ಹೇಳಿದಂತೆ ಕಾರಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಜಾಗವನ್ನು ಸಹ ನೀಡುತ್ತದೆ. ಇದರಿಂದ ಹೆಚ್ಚು ಲಗೇಜ್ ಸಂಗ್ರಹಿಸಲು ಸಾಧ್ಯವಾಗುತ್ತದೆ. |
ಸಣ್ಣ ಸ್ಪೇರ್ ಟಯರ್ ಅಳವಡಿಸಿ ದೂರದ ಪ್ರಯಾಣ ಮಾಡುವುದು ಸರಿಯಲ್ಲ. ಇತರ ಟಯರ್‌ಗಳಿಗೆ ಹೋಲಿಸಿದರೆ ಸ್ಪೇರ್ ಟಯರ್‌ನ ಗಾತ್ರವು ವಿಭಿನ್ನವಾಗಿರುವುದರಿಂದ ಜೋಡಣೆ ಹಾಗೂ ನಿರ್ವಹಣೆಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಅಂದ ಹಾಗೆ ಕಾರು ತಯಾರಕ ಕಂಪನಿಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಪೂರ್ಣ ಗಾತ್ರದ ಬಿಡಿ ಟಯರ್‌ಗಳಿಗೆ ಬದಲಿಗೆ ಸಣ್ಣ ಗಾತ್ರದ ಟಯರ್‌ಗಳನ್ನು ನೀಡುತ್ತಿವೆ. |
ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಅಥವಾ ಡೋನಟ್ ಟಯರ್ ಎಂದು ಸಹ ಕರೆಯಲಾಗುತ್ತದೆ. ಸ್ಪೇರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂಅನಾನುಕೂಲಗಳೇನು ಎಂಬುದನ್ನು ನೋಡುವುದಾದರೆ, ಸಾಮಾನ್ಯ ಸ್ಪೇರ್ ಟಯರ್ ಕಾರಿನ ಬೂಟ್ ಸ್ಪೇಸ್'ನಲ್ಲಿ ಹೆಚ್ಚು ಜಾಗವನ್ನು ಪಡೆಯುತ್ತದೆ. ಆದರೆ ಸ್ಪೇಸ್ ಸೇವರ್ ಟಯರ್‌ಗಳು ಸಣ್ಣದಾಗಿರುವುದರಿಂದ ಹೆಚ್ಚು ಜಾಗವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಎಂದು ಕರೆಯಲಾಗುತ್ತದೆ. |
ಸ್ಪೇರ್ ಟಯರ್‌ಗಳ ತೂಕ ಕಡಿಮೆ ಇರುವುದರಿಂದ, ಕಾರಿನ ಒಟ್ಟಾರೆ ತೂಕವೂ ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಹೊರಸೂಸುವಿಕೆಯು ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಮೈಲೇಜ್ ಹೆಚ್ಚುತ್ತದೆ. ಕಾರು ಹೆಚ್ಚು ತೂಕ ಹೊಂದಿದ್ದರೆ ಮೈಲೇಜ್ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ. ಸ್ಪೇರ್ ಟಯರ್‌ಗಳ ಮೇಲೆ ಸಾಮಾನ್ಯವಾಗಿ ಕಿತ್ತಳೆ, ಹಳದಿ, ಕೆಂಪು ಬಣ್ಣಗಳಿಂದ ಗುರುತು ಹಾಕಿರಲಾಗುತ್ತದೆ. ಸ್ಪೇರ್ ಟಯರ್ ಎಂಬುದನ್ನು ಸೂಚಿಸಲು ಈ ರೀತಿ ಗುರುತು ಹಾಕಲಾಗಿರುತ್ತದೆ. ಸ್ಪೇರ್ ಟಯರ್‌ನಲ್ಲಿ ಚಲಿಸುತ್ತಿದ್ದರೆ ಆದಷ್ಟು ಬೇಗ ಸಾಮಾನ್ಯ ಟಯರ್‌ಗೆ ಬದಲಿಸಿಕೊಳ್ಳುವುದು ಸೂಕ್ತ. |
ಇನ್ನು ಸ್ಪೇರ್ ಟಯರ್‌ಗಳಿಂದಾಗುವ ಅನಾನುಕೂಲಗಳನ್ನು ನೋಡುವುದಾದರೆ ಸ್ಪೇರ್ ಟಯರ್‌ಗಳು ಸಾಮಾನ್ಯ ಟಯರ್‌ಗಳಂತೆ ಕಾರ್ಯನಿರ್ವಹಿಸುವುದಿಲ್ಲ. ಸ್ಪೇರ್ ಟಯರ್‌ಗಳ ಮೂಲಕ ಚಾಲನೆ ಮಾಡುವುದು ಸುರಕ್ಷಿತವಲ್ಲ. ಬ್ರೇಕ್ ಹಾಕಿದಾಗ ಸ್ಪೇಸ್ ಸೇವರ್ ಟಯರ್‌ಗಳು ಕಾರಿನ ನಿಲುಗಡೆ ದೂರವನ್ನು ಹೆಚ್ಚಿಸುತ್ತವೆ. ಸ್ಪೇರ್ ಟಯರ್ ಅಳವಡಿಸಿ ನಡೆಸಲಾದ ಪರೀಕ್ಷೆಗಳಲ್ಲಿ ಕಾರುಗಳು 50%ನಷ್ಟು ದೂರ ನಿಲ್ಲುವುದು ಕಂಡು ಬಂದಿದೆ. |
ಕಾರಿನ ಬ್ರೇಕ್ ಹಿಡಿದರೆ ಕಾರು ತಕ್ಷಣ ನಿಲ್ಲುವುದಿಲ್ಲ. ಕಾರು ನಿಲ್ಲುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು ಸ್ಪೇರ್ ಟಯರ್‌ನ ಪ್ರಮುಖ ಸಮಸ್ಯೆಯಾಗಿದೆ. ಸ್ಪೇರ್ ಟಯರ್‌ಗಳು ಕಾರಿನ ಕಾರ್ನರ್ ಗ್ರಿಪ್ ಅನ್ನು 13%ನಷ್ಟು ಕಡಿಮೆಗೊಳಿಸುತ್ತವೆ. ಕಾರಿನಲ್ಲಿ ಸ್ಪೇರ್ ಟಯರ್ ಅಳವಡಿಸಿದ್ದಾಗ ಕಾರನ್ನು ಎಚ್ಚರಿಕೆಯಿಂದ ಚಾಲನೆ ಮಾಡುವುದು ಅವಶ್ಯಕ. |
ಕೋವಿಡ್ 19 ಹಾಗೂ ಲಸಿಕೆ: ಸ್ತನಪಾನ ನೀಡುವುದರ ಬಗ್ಗೆ ತಾಯಂದಿರಿಗೆ ಕಾಡುತ್ತಿರುವ ಪ್ರಶ್ನೆಗಳಿವು | World Breastfeeding Week: COVID Hit Pregnant And Breastfeeding Mothers And Vaccination For Them - Kannada BoldSky |
42 min ago ಯಾವೆಲ್ಲಾ ಹಣ್ಣುಗಳು ಮಧುಮೇಹಿಗಳಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು? |
ಮಗುವಿಗೆ ಎದೆ ಹಾಲಿನಷ್ಟು ಪೋಷಕಾಂಶ ಇರುವ ಆಹಾರ ಮತ್ತೊಂದಿಲ್ಲ. ಮಗುವಿಗೆ 6 ತಿಂಗಳವರೆಗೆ ಎದೆ ಹಾಲನ್ನು ಕಡ್ಡಾಯವಾಗಿ ನೀಡುವಂತೆ ಮಕ್ಕಳ ತಜ್ಞರು ಸೂಚಿಸುತ್ತಾರೆ. ಆದರೆ ಅನೇಕರಲ್ಲಿ ಕೋವಿಡ್ 19 ಸೋಂಕಿತ ಗರ್ಭಿಣಿ ಮಗುವಿಗೆ ಜನ್ಮ ನೀಡಿದರೆ ಎದೆ ಹಾಲು ಕೊಡಬಹುದೇ? ಕೋವಿಡ್ 19ನಿಂದ ಚೇತರಿಸುತ್ತಿರುವ ತಾಯಿ ಮಗುವಿಗೆ ಎದೆ ಹಾಲು ಕೊಡಬಹುದೇ ಎಂಬ ಪ್ರಶ್ನೆ ಅನೇಕರಲ್ಲಿದೆ. |
ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ತಾಯಂದಿರರು ಹೆಚ್ಚಾಗಿ ಕೇಳುತ್ತಿರುವ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರ ಇಲ್ಲಿವೆ: |
ಕೋವಿಡ್ 19 ಸೋಂಕಿತ ತಾಯಿ ಮಗುವಿಗೆ ಎದೆ ಹಾಲು ಕೊಡಬಹುದೇ? |
ಕೋವಿಡ್ 19 ಸೋಂಕಿತ ತಾಯಿ ಮಗುವಿಗೆ ಎದೆ ಹಾಲು ಕೊಡುವುದರಿಂದ ಮಗುವಿಗೆ ಸೋಂಕು ಹರಡುವುದಿಲ್ಲ ಎಂಬುವುದು ಸಾಬೀತಾಗಿದೆ. ಎದೆ ಹಾಲಿನ ಮೂಲಕ ಸೋಂಕು ಹರಡುವುದಿಲ್ಲ, ಆದರೆ ಎದೆ ಹಾಲು ಕೊಡುವಾಗ ತಾಯಿ ಅಗ್ಯತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖಕ್ಕೆ N95 ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಗ್ಲೌಸ್ ಹಾಕಿ ಒಂದು ಟವಲ್ ಕೈ ಮೇಲೆ ಹಾಕಿ ಮಗುವನ್ನು ಎತ್ತಿಕೊಂಡು ಹಾಲು ಕೊಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮಗುವನ್ನು ಎತ್ತಿಕೊಂಡು ತಾಯಿ ಕೆಮ್ಮುವುದು, ಸೀನುವುದು ಮಾಡಬಾರದು. ಈ ರೀತಿಯ ಎಚ್ಚರಿಕೆ ವಹಿಸಿದರೆ ಮಗುವಿಗೆ ಸೋಂಕು ಹರಡುವುದಿಲ್ಲ. |
ಹುಟ್ಟಿದಾಗಲೇ ಮಗುವಿಗೆ ನೀಡಬೇಕು ಕಾಂಗೆರೋ ಕೇರ್ |
ತಾಯಿ ಎದೆಗೆ ಮಗುವನ್ನು ತಾಗುವಂತೆ ಹಿಡಿದು ಹಾಲುಣಿಸುವುದನ್ನು ಕಾಂಗೆರೋ ಕೇರ್ ಎಂದು ಹೇಳಲಾಗುವುದು. ಮಗು ಜನಿಸಿದ ಅರ್ಧ ಗಂಟೆಯ ಒಳಗಾಗಿ ಎದೆ ಹಾಲುಣಿಸಬೇಕು. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಎದೆ ಹಾಲಿನ ಮೂಲಕ ತಾಯಿಂದ ಮಗುವಿಗೆ ದೊರೆಯುವುದು. |
ಎದೆ ಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ |
ತಾಯಿಯ ಎದೆ ಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ. ಇದು ಮಗುವನ ಆರೋಗ್ಯಕರ ಬೆಳವಣಿಗೆಗೆ ತುಂಬಾ ಮುಖ್ಯ. ಎದೆ ಹಾಲಿನಲ್ಲಿರುವ ಪೋಷಕಾಂಶ ಮಗುವಿನ ಬೆಳವಣಿಗೆಗೆ ಸಹಕಾರಿ. ಒಂದು ವೇಳೆ ಯಾವುದೋ ವೈದ್ಯಕೀಯ ಕಾರಣಕ್ಕೆ ತಾಯಿಗೆ ಮಗುವಿಗೆ ನೇರವಾಗಿ ಹಾಲುಣಿಸಲು ಸಾಧ್ಯವಾಗದಿದ್ದರೆ ಎದೆ ಹಾಲನ್ನು ತೆಗೆದು ಮಗುವಿಗೆ ಕುಡಿಸಬಹುದಾಗಿದೆ. ಹೀಗೆ ಮಾಡುವುದರಿಂದ ತಾಯಿಗೆ ಎದೆ ನೋವೂ ಉಂಟಾಗುವುದಿಲ್ಲ, ಮಗುವಿಗೆ ಅಗ್ಯತವಾಗಿರುವ ಪೋಷಕಾಂಶದ ಆಹಾರ ಸಿಕ್ಕಂತಾಗುವುದು. |
ಕೊರೊನಾ ಲಸಿಕೆ ತೆಗೆದುಕೊಂಡ ತಕ್ಷಣ ಮಗುವಿಗೆ ಎದೆ ಹಾಲುಣಿಸಬಹುದಾ? |
ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಕೂಡ ಮಗುವಿಗೆ ಹಾಲುಣಿಸಬಹುದು. ತಾಯಿ ಕೋವಿಡ್ ಲಸಿಕೆ ತೆಗೆದುಕೊಂಡರೆ ಪ್ರತಿಕಾಯಗಳು ಎದೆ ಹಾಲಿನ ಮೂಲಕ ಮಗುವಿಗೂ ದೊರೆಯುವುದರಿಂದ ಮಗುವಿನಲ್ಲಿ ಕೋವಿಡ್ 19 ವಿರುದ್ಧ ಹೋರಾಡುವ ಪ್ರತಿಕಾಯಗಳ ಸಾಮರ್ಥ್ಯ ಹೆಚ್ಚುವುದು. ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಕೋವಿಡ್ 19 ವಿರುದ್ಧ ಹೋರಾಡುವ IgA (Immunoglobulin A) ಮತ್ತು IgG (Immunoglobulin G) ಪ್ರತಿಕಾಯಗಳು ಲಸಿಕೆ ತೆಗೆದುಕೊಂಡ 6 ವಾರಗಳ ಬಳಿಕ ಎದೆ ಹಾಲಿನಲ್ಲಿರುತ್ತವೆ ಎಂಬುವುದು ತಿಳಿದು ಬಂದಿದೆ. |
ಆದ್ದರಿಂದ ಎದೆ ಹಾಲುಣಿಸುವ ತಾಯಿ ಕೋವಿಡ್ ಲಸಿಕೆ ಪಡೆಯುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. |
ಗರ್ಭಿಣಿ ಕೋವಿಡ್ 19 ಲಸಿಕೆ ಪಡೆಯುವುದು ಸುರಕ್ಷಿತವೇ? |
NTAGI (National Technical Advisory Group on Immunisation)ಪ್ರಕಾರ ಗರ್ಭಿಣಿಯರು ಕೋವಿಡ್ 19 ಲಸಿಕೆ ತೆಗೆಯುವುದು ಸುರಕ್ಷಿತವಾಗಿದೆ. ಗರ್ಭಿಣಿಯರು ಈ ಲಸಿಕೆ ಪಡೆಯುವುದರಿಂದ ಸೋಂಕಿನ ಅಪಾಯ ತಪ್ಪಿಸುವುದು. |
ಗರ್ಭಿಣಿಯರಿಗೆ ಸೋಂಕು ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗುವ ಸಾಧ್ಯತೆ ಹೆಚ್ಚು. ಗರ್ಭಿಣಿಯರು ಕೋವಿಡ್ 19 ಲಸಿಕೆ ಪಡೆಯುವುದರಿಂದ ಅವರಲ್ಲಿ ಕೋವಿಡ್ 19 ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುವುದು. |
Read more about: covid 19 coronavirus corona vaccine mothers health babies health ಮಕ್ಕಳ ಆರೋಗ್ಯ ತಾಯಿಯ ಆರೋಗ್ಯ ಕೋವಿಡ್ 19 ಕೊರೊನಾವೈರಸ್ ಕೊರೊನಾ ಲಸಿಕೆ |
World Breastfeeding Week: COVID Hit Pregnant And Breastfeeding Mothers And Vaccination For Them |
World Breastfeeding Week: COVID Hit Pregnant And Breastfeeding Mothers And Vaccination For Them, read on... |
ಇಂದಿನ ಐಕಾನ್: ನಡುಹಗಲಿನಲಿ 'ಸೂರ್ಯ' ಅಸ್ತಂಗತ- ರವಿ ಬೆಳಗೆರೆ - ಉಪಯುಕ್ತ ನ್ಯೂಸ್ |
by Upayuktha November 13, 2020 November 13, 2020 0321 |
"ನನ್ನ ಬದುಕನ್ನು ಯಾರೂ ಕಾಪಿ ಮಾಡುವುದು ಬೇಡ. ಆದರೆ ನನ್ನ ನವಿರು ಬರವಣಿಗೆಯನ್ನು ಓದಲು ಹಿಂಜರಿಕೆ ಬೇಡ. ರವಿ ಎಂದಿಗೂ ಅಕ್ಷರ ಹಾದರ ಮಾಡುವುದಿಲ್ಲ" ಎಂದು ಹೇಳಿದ ರವಿ ಬೆಳಗೆರೆ ನಡುಹಗಲಿನಲ್ಲಿಯೇ ತನ್ನ ಅಕ್ಷರಯಾತ್ರೆಯನ್ನು ಮುಗಿಸಿದ್ದಾರೆ. ಖಾಸ್ ಬಾತ್ ಮುಗಿದಿದೆ! ಬಾಟಮ್ ಐಟಮ್ ಬಾಕಿ ಉಳಿದಿಲ್ಲ! ರವಿ ಬೆಳಗೆರೆ ಬಾರದ ಲೋಕಕ್ಕೆ ಕಾರಣವನ್ನು ಹೇಳದೆ ತೆರಳಿದ್ದಾರೆ. |
ನಾನಿಂದು ಅವರ ಪುಸ್ತಕಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಾನು ಓದಿದ್ದು ಅವರ ಬರೋಬ್ಬರಿ 70 ಪುಸ್ತಕಗಳನ್ನು. ಪ್ರತೀ ಪುಸ್ತಕವನ್ನು ಎರಡೆರಡು ಸಲ ಓದಿದ್ದೇನೆ. ನನ್ನ ಹದಿಹರೆಯ ಮತ್ತು ಯೌವ್ವನದ ಹೊತ್ತಲ್ಲಿ ನನ್ನ ಮೇಲೆ ಅತೀ ಹೆಚ್ಚು ಪ್ರಭಾವ ಬೀರಿದ್ದು ಅವರ ಪುಸ್ತಕಗಳು.1995ರಲ್ಲಿ ಅವರು ಆರಂಭಿಸಿದ "ಹಾಯ್ ಬೆಂಗಳೂರು" ಪತ್ರಿಕೆಯು ಕನ್ನಡದ ಅತ್ಯಂತ ಜನಪ್ರಿಯ ವಾರಪತ್ರಿಕೆ ಆದದ್ದು ಅವರ ಲೇಖನಗಳ ಶಕ್ತಿಯಿಂದ! ವಿಠ್ಠಲ ಮೂರ್ತಿ, ಜೋಗಿ ಮೊದಲಾದ ಲೇಖಕರನ್ನು ಸ್ಟಾರ್ ಮಾಡಿದ್ದು ಅದೇ ಪತ್ರಿಕೆ. ಅದನ್ನು ಜನರು ಕೃಷ್ಣ ಸುಂದರಿ ಎಂದು ಬಹಳ ಪ್ರೀತಿಯಿಂದ ಕರೆದರು. ಜನರು ಆ ಪತ್ರಿಕೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರ ಲವ್ ಲವಿಕೆ, ಬಾಟಮ್ ಐಟಮ್, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಮೊದಲಾದ ಕಾಲಂಗಳು ಓದುಗರಿಗೆ ಹುಚ್ಚು ಹಿಡಿಸಿದ್ದು ಸುಳ್ಳಲ್ಲ. |
ನಂತರ ಕೇವಲ ಯುವ ಓದುಗರನ್ನು ಗಮನದಲ್ಲಿರಿಸಿ "ಓ ಮನಸೇ" ಎಂಬ ಹೆಸರಿನ ಪಾಕ್ಷಿಕವನ್ನು ಆರಂಬಿಸಿದರು. ಅದು ಕೂಡ ಕನ್ನಡಿಗರ ಕಣ್ಮಣಿ ಆಯಿತು. ಪತ್ರಿಕೆಗಳ ಅಕಾಡೆಮಿಕ್ ಭಾಷೆಯಿಂದ ಹೊರಬಂದು ಹೆಚ್ಚು ಆಲಂಕಾರಿಕ ಮತ್ತು ಹೃದಯಕ್ಕೆ ಲಗ್ಗೆ ಇಡುವ ಭಾಷೆಯನ್ನು ಬಳಕೆ ಮಾಡಿದ್ದು ರವಿ ಅವರ ಹೆಗ್ಗಳಿಕೆ. ಶಬ್ದಗಳ ಬಳಕೆಯಲ್ಲಿ ಅವರು ಅದ್ಭುತವೇ ಹೌದು! ಆದ್ದರಿಂದ ಅವರು ಶಬ್ದ ಗಾರುಡಿಗ. |
ಬಿರುಬಿಸಿಲಿನ ಜಿಲ್ಲೆಯಾದ ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಬಡತನದ ಕಾರಣಕ್ಕೆ ತುಮಕೂರು ಸಿದ್ದಗಂಗಾ ಶಾಲೆಯಲ್ಲಿ ಓದಿದವರು. SSLC ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್ ಆದವರು ರವಿ! ನಂತರ ಹೊಟ್ಟೆಪಾಡಿಗಾಗಿ ಹೊಟೇಲು ಮಾಣಿ, ರೂಮ್ ಬಾಯ್, ಹಾಲು ಮಾರುವ ಹುಡುಗ, ಸಿನೆಮಾ ಮಂದಿರದ ಗೇಟ್ ಕೀಪರ್, ಸ್ವಾಗತಕಾರ, ಮೆಡಿಕಲ್ ರೆಪ್ ಹೀಗೆ 13 ವೃತ್ತಿಗಳನ್ನು ಮಾಡಿದರು. ಮುಂದೆ ಇತಿಹಾಸದಲ್ಲಿ ಎಂ.ಎ. ಮಾಡಿ ಕಾಲೇಜು ಉಪನ್ಯಾಸಕ ವೃತ್ತಿಯನ್ನು ಮಾಡಿದ್ದರು. ನಂತರ ಬರವಣಿಗೆಯೇ ಅವರ ವೃತ್ತಿಯಾಯಿತು. ಅದು ಕನ್ನಡದ ಭಾಗ್ಯ ಎಂದು ಹೇಳಬಹುದು. |
ತನ್ನದೇ ಬರವಣಿಗೆಯ ವೈಭವದ ಬಗ್ಗೆ ರವಿ ಸರ್ ಹೀಗೆ ಹೇಳಿದ್ದಾರೆ. "ಒಮ್ಮೆ ಬರೆಯಲು ಕೂತರೆ 20-30 ಪುಟ ಒಂದು ಚಿತ್ತಿಲ್ಲದೇ, ಒಂದೇ ಒಂದು ಕಾಟ್ ಕೂಡ ಹಾಕದೆ ಬರೆಯುತ್ತೇನೆ. ರಾತ್ರಿ ಇಡೀ ಕೂತು ಬರೆಯುವೆ. ಯಾವ ರೆಫರೆನ್ಸ್ ಇಲ್ಲದೆ, ಗೂಗಲ್ ಇಣುಕಿ ನೋಡದೆ ನಾನು ಬರೆಯುತ್ತೇನೆ!" ಎಂದು ಹೇಳಿದ್ದಾರೆ. ಐತಿಹಾಸಿಕ, ಭೂಗತ ಜಗತ್ತಿನ ನೂರಾರು ಕಥೆಗಳು, ಆತ್ಮಕಥೆಗಳು ಕಾದಂಬರಿಗಳನ್ನು ಅವರು ಅಷ್ಟು ನಿಖರವಾಗಿ ಮತ್ತು ವಾಸ್ತವವಾಗಿ ಹೇಗೆ ಬರೆದರು? ಅದು ನಿಜಕ್ಕೂ ಅಚ್ಚರಿಯೆ ಸರಿ! |
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯುದ್ಧಭೂಮಿಗೆ ಹೋಗಿ ವರದಿ ಮಾಡಿದ್ದು, ಪಾಕಿಸ್ತಾನದ ಭಯ ಹುಟ್ಟಿಸುವ ಅಡಗುತಾಣಗಳಲ್ಲಿ ಓಡಾಡಿ "ನೀನಾ ಪಾಕಿಸ್ತಾನ" ಬರೆದದ್ದು, ಚಂಬಲ್ ಕಣಿವೆ ಇಡೀ ಓಡಾಡಿ ಫೂಲನ್ ದೇವಿಯ ಕಥೆಯನ್ನು ಬರೆದದ್ದು, ಭೂಗತ ಲೋಕದ ಉದ್ದಗಲದಲ್ಲಿ ಓಡಾಡಿ ಭೀಮಾ ತೀರದಲ್ಲಿ, ಪಾಪಿಗಳ ಲೋಕದಲ್ಲಿ, ದಂಗೆಯ ದಿನಗಳಲ್ಲಿ ಬರೆದು ಮುಗಿಸಿದ್ದು, ಚೀನಾ ಯುದ್ಧದಲ್ಲಿ ಬದುಕು ಕಳೆದುಕೊಂಡ ಸೈನಿಕನ ಕಥೆ ಹಿಡಿದು 'ಹಿಮಾಲಯನ್ ಬ್ಲಂಡರ್' ಕಣ್ಣೀರು ಸುರಿಸುತ್ತ ಬರೆದದ್ದು, ರಕ್ತ ಸಿಕ್ತ ಇತಿಹಾಸದ ದಾವೂದ್ ಬದುಕಿನ 'D ಕಂಪೆನಿ' |
ಬರೆದದ್ದು, ಸಂದೀಪ್ ಉನ್ನಿ ಕೃಷ್ಣನ್ ಅವರ ರಾಷ್ಟ್ರ ಪ್ರೇಮವನ್ನು ಸುಂದರವಾಗಿ ಬರೆದದ್ದು, ನವಿರು ಪ್ರೇಮ ಕಥೆಯ 'ನೀ ಹೀಂಗ ನೋಡಬ್ಯಾಡ ನನ್ನ' 'ಹೇಳಿ ಹೋಗು ಕಾರಣ' ಬರೆದದ್ದು, ರಾಜಕುಮಾರ್ ಲೀಲಾವತಿ ಅವರ ಪ್ರಣಯ ಆಧಾರಿತವಾದ |
'ರಾಜ್ ಲೀಲಾ ವಿನೋದ' ವನ್ನು ಮುಜುಗರವಿಲ್ಲದೆ ಜಗತ್ತಿಗೆ ತೆರೆದು ಇಟ್ಟದ್ದು, ಗಾಂಧಿ ಹತ್ಯೆಯ ಸತ್ಯಗಳನ್ನು ಅನಾವರಣ ಮಾಡಿದ್ದು, ತನ್ನದೇ ಬದುಕಿನ ಕಥೆ ಖಾಸ್ ಬಾತನ್ನು ಹಲವು ಸಂಪುಟಗಳಲ್ಲಿ ಬರೆದದ್ದು… ಹೀಗೆ ಎಲ್ಲ ಪುಸ್ತಕಗಳಲ್ಲಿ ಮಿಂಚಿದ್ದು ರವಿ ಬೆಳಗೆರೆ ಅವರ ಮೊನಚು ಬರವಣಿಗೆ, ಧೈರ್ಯ, ದಿಟ್ಟತನ ಮತ್ತು ಸತ್ಯಶೋಧನೆಯ ಹಂಬಲ! ಅದು ರವಿ ಅವರ ಹೆಗ್ಗಳಿಕೆ! |
ನನ್ನ ಮೊದಲ ಪುಸ್ತಕವಾದ 'ಯಶಸ್ಸು ಆಕಸ್ಮಿಕವಲ್ಲ' ವನ್ನು ಬಿಡುಗಡೆ ಮಾಡಿದ್ದು ರವಿ ಸರ್. ನಂತರ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಕೋಟಕ್ಕೆ ಬಂದಾಗಲೂ ಅವರ ಜೊತೆ ಮಾತಾಡಿದ್ದೆ. ನಂತರ ಅವರ 'ಎಂದೂ ಮರೆಯದ ಹಾಡು' ಟಿವಿ ಕಾರ್ಯಕ್ರಮದ ನಿರೂಪಣೆಗೆ ಮಾರು ಹೋಗಿದ್ದೆ. ಅವರು ನನ್ನ ಬರವಣಿಗೆ ಮತ್ತು ನಿರೂಪಣೆಯ ಕ್ಷೇತ್ರದ ಐಕಾನ್ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವೆ. |
ಅವರ ಖಾಸಗಿ ಬದುಕಿನ ಬಗ್ಗೆ ಅವರು ಎಲ್ಲಿ ಕೂಡ ಮುಚ್ಚಿಡುವ ಪ್ರಯತ್ನವನ್ನು ಮಾಡಲಿಲ್ಲ! ಅದರ ಬಗ್ಗೆ ಒಂದಿಷ್ಟೂ ಹೇಸಿಗೆ ಇಲ್ಲದೆ ಅವರು ಹೇಳಿದ ಮಾತು "ನನಗೆ ಜೀವನದಲ್ಲಿ ಎರಡೆರಡು ಆಗಿ ಹೋಯ್ತು! ಎರಡು ಹೆಂಡತಿ! ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಸಿಗರೇಟ್ ಮತ್ತು ಹೆಂಡ ಎರಡು ವ್ಯಸನಗಳು!…." |
ಅವರೇ ಹೇಳಿದ ಹಾಗೆ "ನನಗೆ ನನ್ನ ಬದುಕಿನ ಬಗ್ಗೆ ಯಾವುದೇ ರಿಗ್ರೆಟ್ಸ್ ಇಲ್ಲ. ನಾನು ಜೀವನದ ಪ್ರತೀ ಕ್ಷಣವನ್ನು ಕೂಡ ಎಂಜಾಯ್ ಮಾಡಿದ್ದೇನೆ. THATS ALL!" ಹೋಗಿ ಬನ್ನಿ ರವಿ. ನಾವು ಕಾಯುತ್ತೇವೆ. |
ಫಿಟ್ನೆಸ್‌ಗಾಗಿ ಚಳಿಗಾಲದಲ್ಲಿ ಈ 5 ಯೋಗಾಸನ ಬೆಸ್ಟ್ | Top 5 Easiest Yoga To Fit In Winter - Kannada BoldSky |
ಯೋಗ ಎನ್ನುವುದು ಅದ್ಭುತವಾದ ಕಲೆಯಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವ ಸಾಮರ್ಥ್ಯ ಯೋಗಕ್ಕಿದೆ. ಯಾರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೊ ಅವರು ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಕೆಲಸದ ಜಾಗದಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗದೆ ಕೆಲಸವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿರುತ್ತದೆ, ಇನ್ನು ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. |
ಚಳಿಗಾಲದಲ್ಲಿ ಬೆಳಗ್ಗೆ ಬೇಗನೆ ಏಳಲು ಮನಸ್ಸಾಗುವುದಿಲ್ಲ, ಬೆಚ್ಚಗಿನ ಹೊದಿಕೆಯನ್ನು ಮೈ ತುಂಬಾ ಹೊದ್ದು ಹಾಗೇ ಮಲಗಬೇಕು ಅನಿಸುವುದು. ಆದರೆ ಈ ರೀತಿ ಮಾಡುತ್ತಿದ್ದರೆ ಚಳಿಗಾಲ ಮುಗಿಯುವಷ್ಟರಲ್ಲಿ ಒಂದು ರೌಂಡ್ ದಪ್ಪಗಾಗಿರುತ್ತೀರಿ. ಇಲ್ಲಿ ನಿಮಗೆ ಸಮಯ ಸಿಕ್ಕಾಗ ಮಾಡಬಹುದಾದ ಸರಳವಾದ 5 ಯೋಗಾಸನ ಬಗ್ಗೆ ಹೇಳಿದ್ದೇವೆ. ಈ ಯೋಗಾಸನ ಫಿಟ್ನೆಸ್ ಮೈ ಕಟ್ಟು ನೀಡುವುದು ಮಾತ್ರವಲ್ಲ, ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯಿಂದಲೂ ರಕ್ಷಣೆ ನೀಡುತ್ತದೆ. |
ಈ ಯೋಗಾಸನಗಳನ್ನು ಮಾಡುವುದರಿಂದ ಮತ್ತೊಂದು ಪ್ರಯೋಜನವೆಂದರೆ ಬೊಜ್ಜು ಬಾರದ ಕಾರಣ ಆಕರ್ಷಕ ಮೈಕಟ್ಟನ್ನು ಹೊಂದಬಹುದು. ಯೋಗಾಭ್ಯಾಸ ಮಾಡುವುದರಿಂದ ಮುಖದಲ್ಲಿ ಬೇಗನೆ ನೆರಿಗೆ ಮೂಡುವುದಿಲ್ಲ, ಇದರಿಂದ ವಯಸ್ಸಾಗುತ್ತಿದ್ದರೂ ಯೌವನ ಕಳೆಯನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. |
ಚಳಿಗಾಲದಲ್ಲಿ ಯೋಗ ಮಾಡುವುದರಿಂದ ಮೈ ಬೆಚ್ಚಗಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು, ಇನ್ನು ಚಳಿಗಾಲದಲ್ಲಿ ತ್ವಚೆಯನ್ನು ರಕ್ಷಣೆ ಮಾಡುತ್ತದೆ. |
ಇಲ್ಲಿ ಚಳಿಗಾಲದಲ್ಲಿ ಅಭ್ಯಾಸ ಮಾಡಲು ಸೂಕ್ತವಾದ ಹಾಗೂ ಸರಳವಾದ ಯೋಗ ಭಂಗಿಗಳ ಬಗ್ಗೆ ಹೇಳಿದ್ದೇವೆ ನೋಡಿ: |
ಮೇಲಿನ ಆಸನಗಳನ್ನು ಮಾಡಿದ ಬಳಿಕ ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಈ ಆಸನವನ್ನು ಮಾಡಿ. ಈ ಆಸನದಲ್ಲಿ ಮ್ಯಾಟ್ ಮೇಲೆ ಅಂಗಾತ ಮಲಗಬೇಕು, ಕೈಗಳು ಪಕ್ಕಕ್ಕೆ, ಆಕಾಶಕ್ಕೆ ಮುಖ ಮಾಡಿರಲಿ, ಕಾಲುಗಳು ಸ್ವಲ್ಪ ಅಗಲವಾಗಿರಲಿ, ಈಗ ಕಣ್ಣುಗಳನ್ನು ಮುಚ್ಚಿಕೊಂಡಿರಲಿ, ಉಸಿರಾಟ ನಿರಂತರವಾಗಿರಲಿ, ಈ ಸ್ಥಿತಿಯಲ್ಲಿ 'ಅ'ಕಾರ ಹಾಗು 'ಉ' ಕಾರವನ್ನು ಉಚ್ಛಾರಣೆ ಮಾಡಿ, ನಂತರ 'ಮ' ಕಾರವನ್ನು ಉಚ್ಛಾರಣೆ ಮಾಡಿದರೆ ಒಳ್ಳೆಯದು. ಈ ರೀತಿ ಮೂರು ಬಾರಿ ನಂತರ ಓಂಕಾರ ಹೇಳಿ, ಮೆಲ್ಲನೆ ಎದ್ದು ಕುಳಿತುಕೊಳ್ಲಿ, ಕಣ್ಣುಗಳು ಮುಚ್ಚಿದ ಸ್ಥಿತಿಯಲ್ಲಿಯೇ ಇರಲಿ, ಈಗ ಕೈಗಳನ್ನು ಉಜ್ಜಿ, ಆ ಬಿಸಿಯನ್ನು ಕಣ್ಣಿಗೆ ಒತ್ತಿ ನಂತರ ನಿಧಾನಕ್ಕೆ ಕಣ್ಣು ತೆಗೆಯಿರಿ. |
Read more about: yoga exercise winter season ಯೋಗ ವ್ಯಾಯಾಮ ಚಳಿಗಾಲ |
Top 5 Easiest Yoga To Fit In Winter |
When winter comes freezing temperatures,snow, if you feel lazy outside to go gym or walking no worry, still you can maintain your fitness by following simple yoga pose. Here are few yoga pose help you to loose weight in winter. |
ಅಭಿನಯ ಶಾರದೆಯ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ಅನು ಪ್ರಭಾಕರ್ - Kannada Updates |
ತಮ್ಮ ಮಾಜಿ ಅತ್ತೆ ನಿಧಾನಕ್ಕೆ ಅನು ಪ್ರಭಾಕರ್ ಅವರು ಕೂಡ ಕಣ್ಣೀರು ಹಾಕಿದ್ದಾರೆ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ಸಧಾ ನನ್ನ ಹೃದಯದಲ್ಲಿ ಇರುತ್ತೆ ಅಮ್ಮ. ನಿಮ್ಮಿಂದ ಕಲಿತ ಜೀವನದ ಪಾಠಗಳನ್ನ ನಾನೆಂದಿಗೂ ಮರೆಯುವುದಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. |
https://m.facebook.com/story.php?story_fbid=374143220749131&id=100044603671867 |
ಚಂದನ ವನದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರು ಇನ್ನು ನೆನಪು ಮಾತ್ರ.ಇಂದು ಜುಲೈ 26 ಬೆಳಗಿನ ಜಾವ ಜಯಂತಿ ಅವರು ನಮ್ಮನ್ನೆಲ್ಲ ಬಿಟ್ಟು ಹೋದರು.ಜಯಂತಿ ಅವರನ್ನ ಈಗಾಗಲೇ ಅನೇಕ ಬಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ರಾಜಕೀಯದ ಗಣ್ಯರು ಸೇರಿದಂತೆ ಚಿತ್ರರಂಗದ ಗಣ್ಯರು ಕೂಡ ಸಂತಾಪವನ್ನು ಸೂಚಿಸಿದ್ದಾರೆ. |
ಇದೀಗ ಮಾಜಿ ಸೊಸೆ ಯೂ ಕೂಡ ಸೋಷಿಯಲ್ ಮಿಡಿಯಾದಲ್ಲಿ ಅತ್ತೆ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅತ್ತೆಯ ಜೊತೆ ಕಳೆದಂತಹ ಪ್ರತಿ ಕ್ಷಣವನ್ನ ಈಗ ಮೆಲಕು ಹಾಕುತ್ತಿದ್ದಾರೆ.ಜಯಂತಿ ಅವರನ್ನ ಪ್ರೀತಿಯಿಂದ ಅನು ಪ್ರಭಾಕರ್ ಅವರು ಅಮ್ಮ ಎಂದು ಕರೆಯುತ್ತಿದ್ದರು. 2002 ರಲ್ಲಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರನ್ನ ಅನು ಪ್ರಭಾಕರ್ ಅವರು ಮದುವೆಯಾಗಿದ್ದರು. |
2014 ರಲ್ಲಿ ವಿಚ್ಛೇಧನವನ್ನ ಪಡೆದುಕೊಂಡು. ನಂತರ 2014ರಲ್ಲಿ ರಘು ಮುಖರ್ಜಿ ಅವರನ್ನ ಮದುವೆಯಾದರು.ಕೆಲವು ಭಿನ್ನಾಭಿಪ್ರಾಯಗಳು ಇದ್ದ ಕಾರಣ ಜಯಂತಿ ಅವರ ಮಗನಿಂದ ಧೂರವಾದರು ಅನು ಪ್ರಭಾಕರ್. ಅತ್ತೆಯ ನಿಧನಕ್ಕೆ ಕಂಬನಿ ಮಿಡಿದ್ದಿದ್ದಾರೆ ಅನು ಪ್ರಭಾಕರ್. |
`ಗ್ರಾಮಾಭಿವೃದ್ಧಿಯಿಂದ ಮಹಿಳೆ ಸ್ವಾವಲಂಬಿ' | Prajavani |
`ಗ್ರಾಮಾಭಿವೃದ್ಧಿಯಿಂದ ಮಹಿಳೆ ಸ್ವಾವಲಂಬಿ' |
Published: 02 ಏಪ್ರಿಲ್ 2013, 15:31 IST |
Updated: 02 ಏಪ್ರಿಲ್ 2013, 15:31 IST |
ಕಳಸ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಫಲವಾಗಿ ಮಹಿಳೆಯರು ಸ್ವಾವ ಲಂಬಿಗಳಾಗಿದ್ದಾರೆ. ಕೀಳರಿಮೆ ತೊರೆದು ಸಂಸಾರದ ಜವಾಬ್ದಾರಿ ಹೊತ್ತಿರುವ ಮಹಿಳೆಯರು ಸಂಸಾರದ ಬೆಳಕಾಗಿದ್ದಾರೆ ಎಂದು ಕಾರ್ಕಳದ ತರಬೇತು ದಾರ ರಾಜೇಂದ್ರ ಭಟ್ ಅಭಿ ಪ್ರಾಯಪಟ್ಟರು. |
ಪಟ್ಟಣದ ದುರ್ಗಾ ಮಂಟಪದಲ್ಲಿ ಭಾನುವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪದ ಫಲವಾಗಿ ಧರ್ಮಸ್ಥಳ ಯೋಜನೆಯು ಇಂದು ಲಕ್ಷಾಂತರ ಮಹಿಳೆಯರಿಗೆ ದಾರಿದೀಪವಾಗಿದೆ. ಅಶಕ್ತರಾಗಿದ್ದ ಮಹಿಳೆಯರು ಕೂಡ ಸಂಸಾರದ ಕಣ್ಣಾಗಿದ್ದಾರೆ ಎಂದು ರಾಜೇಂದ್ರ ಭಟ್ ವಿವರಿಸಿದರು. |
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಹೊರನಾಡಿನ ಜಿ.ಭೀಮೇಶ್ವರ ಜೋಷಿ, ಧರ್ಮಸ್ಥಳ ಸಂಘಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತಿದೆ. ವಿಶೇಷವಾಗಿ ಮಹಿಳೆಯರ ಮೂಲಕ ಸಮಾ ಜದಲ್ಲಿ ಅಪೂರ್ವ ಎನ್ನಬಹು ದಾದ ಬದಲಾವಣೆ ಕಂಡು ಬರುತ್ತಿದೆ ಎಂದರು. |
ನೂತನ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಮಾಡಲಾಯಿತು. |
ತಾಲ್ಲೂಕು ಯೋಜನಾಧಿಕಾರಿ ನಾಗರತ್ನ ಹೆಗಡೆ, ಡಾ.ವಿಕ್ರಮ್ ಪ್ರಭು, ಚಂಪಾ ಎಂ.ರಾವ್, ಶ್ರೆಧರ ಶೆಟ್ಟಿ, ವಲಯ ಮೇಲ್ವಿಚಾರಕ ರಾಘವೇಂದ್ರ ಮತ್ತಿತ ರರು ಭಾಗವಹಿಸಿದ್ದರು. ಮಧ್ಯಾಹ್ನದ ನಂತರ ಒಕ್ಕೂಟದ ಸದಸ್ಯರು ಆಕರ್ಷಕ ಸಾಂಸ್ಕ್ರತಿಕ ಪ್ರದರ್ಶನ ನೀಡಿದರು. |
ರಾಜೇಶ್ವರಿ ಗಾಯಕ್ವಾಡ್ - ವಿಕಿಪೀಡಿಯ |
ರಾಜೇಶ್ವರಿ ಶಿವನಂದ್ ಗಾಯಕ್ವಾಡ್ |
ವಿಜಯಪುರ, ಕರ್ನಾಟಕ, ಭಾರತ |
ಬಲಗೈ ಬ್ಯಾಟ್ಸ್ಮನ್ |
ನಿಧಾನ ಎಡಗೈ ಆರ್ಥೊಡಾಕ್ಸ್ |
ಕೇವಲ ಟೆಸ್ಟ್ |
Subsets and Splits
No community queries yet
The top public SQL queries from the community will appear here once available.