text
stringlengths
0
61.5k
ಟೆಸ್ಟ್‌ ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ವಿರಾಟ್‌ ಕೊಹ್ಲಿ | Udayavani – ಉದಯವಾಣಿ
Team Udayavani, Jan 25, 2020, 1:27 AM IST
ದುಬಾೖ: ಐಸಿಸಿ ಶುಕ್ರವಾರ ನೂತನವಾಗಿ ಪ್ರಕಟಿಸಿದ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವಿಭಾಗದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಜಿಂಕ್ಯ ರಹಾನೆ 8ನೇ ಸ್ಥಾನಕ್ಕೇರಿದ್ದಾರೆ.
ವಿರಾಟ್‌ ಕೊಹ್ಲಿ ಒಟ್ಟು 928 ಅಂಕಗಳೊಂದಿಗೆ ನಂ.1 ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಇವರಿಗಿಂತ 17 ಅಂಕ ಹಿಂದಿರುವ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ 2ನೇ ಸ್ಥಾನದಲ್ಲಿದ್ದಾರೆ. ರಹಾನೆ ಒಂದು ಸ್ಥಾನ ಮೇಲೇರಿ 8ಕ್ಕೆ ಬಂದಿದ್ದಾರೆ (759 ಅಂಕ). ಚೇತೇಶ್ವರ್‌ ಪೂಜಾರ ಆರರಲ್ಲಿದ್ದಾರೆ.
ಬೌಲಿಂಗ್‌ನಲ್ಲಿ ಪ್ಯಾಟ್‌ ಕಮಿನ್ಸ್‌ (904 ಅಂಕ) ಅಗ್ರಸ್ಥಾನಕ್ಕೆ ಅಂಟಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿರುವವರು ನ್ಯೂಜಿಲ್ಯಾಂಡ್‌ನ‌ ನೀಲ್‌ ವ್ಯಾಗ್ನರ್‌ (852 ಅಂಕ). ಜಸ್‌ ಪ್ರೀತ್‌ ಬುಮ್ರಾ 6ನೇ, ಆರ್‌. ಅಶ್ವಿ‌ನ್‌ 8ನೇ ಹಾಗೂ ಮೊಹಮ್ಮದ್‌ ಶಮಿ 10ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಆಲ್‌ರೌಂಡರ್‌ಗಳ ಯಾದಿಯಲ್ಲಿ ರವೀಂದ್ರ ಜಡೇಜ 3ನೇ ಸ್ಥಾನದಲ್ಲಿ ಉಳಿದಿದ್ದಾರೆ (438 ಅಂಕ).
ಕತಾರ್ ನಲ್ಲಿ ಕನ್ನಡ ಡಿಂಡಿಮ. ಕತಾರ್ ಕನ್ನಡಿಗರು ಪುನೀತ್ ಗೆ ಕೊಟ್ಟ ಬಿರುದೇನು ಗೊತ್ತಾ ? - Suddi Mane
Home Suddi Mane ಕತಾರ್ ನಲ್ಲಿ ಕನ್ನಡ ಡಿಂಡಿಮ. ಕತಾರ್ ಕನ್ನಡಿಗರು ಪುನೀತ್ ಗೆ ಕೊಟ್ಟ ಬಿರುದೇನು ಗೊತ್ತಾ ?
ಕತಾರ್ ನಲ್ಲಿ ಕನ್ನಡ ಡಿಂಡಿಮ. ಕತಾರ್ ಕನ್ನಡಿಗರು ಪುನೀತ್ ಗೆ ಕೊಟ್ಟ ಬಿರುದೇನು ಗೊತ್ತಾ ?
ಕತಾರ್‌ನಲ್ಲಿರುವ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಾಹಿತಿಯಾದ ಎಸ್.ಎಲ್ ಭೈರಪ್ಪನವರಿಗೆ ಮತ್ತು ನಟ ಪುನೀತ್‍ ರಾಜ್‍ಕುಮಾರ್ ಅವರಿಗೆ ಬಿರುದು ನೀಡಿ ಸತ್ಕರಿಸಲಾಗಿದೆ. ಅಲ್ ವಕ್ರಾದ ಡಿ.ಪಿ.ಎಸ್.ಎ.ಐ.ಎಸ್. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರೂ ಕನ್ನಡ ನಾಡಿನ ಗಣ್ಯರಿಗೆ 2019 ನೇ ಸಾಲಿನ `ಕತಾರ್ ಕನ್ನಡ ಸಮ್ಮಾನ್' ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು "ಕಲಾ ಸಾರ್ವಭೌಮ" ಬಿರುದಿನಿಂದ ಸನ್ಮಾನಿಸಲಾಗಿದೆ.
ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಪುನೀತ್ ದಂಪತಿ ಹಾಗೂ ಹಿರಿಯ ಸಾಹಿತಿ ಭೈರಪ್ಪ ಅವರನ್ನು ವಾದ್ಯಗೋಷ್ಠಿಯ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆ ತರಲಾಯಿತು. ಈ ಸಂಘವು ಅಂಗೀಕೃತಗೊಂಡು 20 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಟಿವಿ ನಟ ಹಾಗೂ ನಿರೂಪಕ ವಿಜಯೇಂದ್ರ ಅಥಣೀಕರ್ ನಿರೂಪಿಸಿದರೆ, ಹಿನ್ನೆಲೆ ಗಾಯಕರಾದ ಹರ್ಷಾ ಹಾಗೂ ಕು. ಮೈತ್ರಿ ಐಯ್ಯರ್ ಅವರು ಹಾಡಿನ ಮೂಲಕ ಎಲ್ಲರನ್ನು ರಂಜಿಸಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಡಾ. ಸಂಜಯ್ ಶಾಂತಾರಾಮ್‍ರವರ ಶಿವಪ್ರಿಯ ತಂಡ ಒಂದು ಆಕರ್ಷಕ ನೃತ್ಯ ರೂಪಕವನ್ನು ಪ್ರದರ್ಶನ‌ ನೀಡುವ ಮೂಲಕ ಎಲ್ಲರನ್ನು ರಂಜಿಸಿತು. ಕಾರ್ಯಕ್ರಮವನ್ನು ಭಾರತೀಯ ರಾಯಭಾರಿಯವರಾದ ಪಿ.ಕುಮರನ್ ಅತಿಥಿಯಾಗಿ ಆಗಮಿಸಿದ್ದು ಉದ್ಘಾಟನೆ ಮಾಡಿದರು.
ಅಲ್ಲದೆ ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠನ್ ಅವರು, ನಿಕಟಪೂರ್ವ ಅಧ್ಯಕ್ಷೆ ಮಿಲನ್ ಅರುಣ್, ಐ.ಸಿ.ಬಿ.ಫ್.ನ ಉಪಾಧ್ಯಕ್ಷರಾದ ಮಹೇಶ ಗೌಡ ಹಾಗೂ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ಉಪಸ್ಥಿತರಿದ್ದರು. ಅಲ್ಲದೆ ಶ್ರೀಗಂಧ ಸ್ಮರಣ ಸಂಚಿಕೆಯನ್ನು ಕೂಡಾ ಬಿಡುಗಡೆ ಮಾಡಲಾಯಿತು.
ಟೀ – ಏನಂತೀರೀ? Enantheeri?
Tag: ಟೀ
ಟೀ.. ಚಾಯ್… ಕಾಪೀ.. ಕಾಪೀ…
ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ.
ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ ಒಂದು ಗುಟುಕನ್ನು ಸವಿದು ಕಾಫಿಯ ಘಮಲು ಬಹಳ ಚೆನ್ನಾಗಿದ್ದರಿಂದ ಅವನನ್ನು ಹಾಗೆಯೇ ಅಭಿನಂದಿಸಿ ಎಷ್ಟಪ್ಪಾ ಕೊಡಬೇಕು? ಎಂದು ಕೇಳುತ್ತಾರೆ. ಆಗ ಆ ಕಾಫೀ ಮಾರುವವನು ಸರ್ 20 ರೂಪಾಯಿಗಳನ್ನು ಕೊಡಿ ಎಂದಾಗ, ತಮ್ಮ ಪರ್ಸಿನಿಂದ 200 ರೂಪಾಯಿಯ ನೋಟೊಂದನ್ನು ಆತನಿಗೆ ಕೊಡುತ್ತಾರೆ.
ಸರ್ ಚಿಲ್ಲರೇ ಇಲ್ಲವೇ? ಎಂದು ಕೇಳಿ, ತನ್ನ ಕೈನಿಂದ ಕಾಫಿಯ ಕೆಟಲನ್ನು ಇಳಿಸಿ ಚಿಲ್ಲರೆಗಾಗಿ ಶರ್ಟಿನ ಜೇಬನ್ನೆಲ್ಲಾ ತಡಗಾಡುವ ಸಮಯದಲ್ಲಿ ರೈಲು ಹೊರಡಲು ಅನುವಾದಾಗ, ಲಗುಬಗನೇ ಚಿಲ್ಲರೆಯನ್ನು ಕೊಡದೆಯೇ ಚಲಿಸುತ್ತಿದ್ದ ರೈಲನಿಂದ ಇಳಿದು ಕಿಟಕಿಯಿಂದ ಚಿಲ್ಲರೆ ಕೊಡಲು ಪ್ರಯತ್ನಿಸಿದನಾದರೂ, ಇವರ ಬೋಗಿ ಇಂಜಿನ್ನಿನ ಪಕ್ಕದಲ್ಲೇ ಇದ್ದ ಕಾರಣ ಚಿಲ್ಲರೆಯನ್ನು ಪಡೆದುಕೊಳ್ಳಲು ರಾಯರಿಗೆ ಸಾಧ್ಯವಾಗಲಿಲ್ಲ. ಕಾಫೀ ಚಟದ ನೆಪದಲ್ಲಿ ಚಿಲ್ಲರೆ ಇದೆಯೋ ಎನ್ನುವುದನ್ನೂ ಗಮನಿಸದೇ ಅನ್ಯಾಯವಾಗಿ ಬೆಳ್ಳಂಬೆಳಿಗ್ಗೆಯೇ 180 ರೂಪಾಯಿಗಳನ್ನು ಕಳೆದುಕೊಂಡನಲ್ಲಾ ಎಂದು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾರೆ.
ಕಾಫೀ ಕುಡಿಯುತ್ತಲೇ ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ, ಇಷ್ಟು ವಯಸ್ಸಾಗಿ ಅನುಭವ ಪಡೆದಿದ್ದರೂ, ಈ ರೀತಿಯಾಗಿ ದುಡ್ಡನ್ನು ಕಳೆದುಕೊಂಡಿರಲ್ಲಾ. ಕಾಫಿ ಕುಡಿಯುವ ಮೊದಲೇ ಹಣವನ್ನೇಕೆ ಕೊಡಬೇಕಿತ್ತು ಎಂದು ಮೂದಲಿಸಿದಾಗ, ಹೇ ಇದರಲ್ಲಿ ನನ್ನದು ಮತ್ತು ಅವನದ್ದೇನೂ ತಪ್ಪಿಲ್ಲ. ಆತ ಬೇಕೇಂದೇನೂ ಚಿಲ್ಲರೇ ಕೊಡದೇ ಓಡಿ ಹೋಗಲಿಲ್ಲ. ರೈಲು ವೇಗವಾಗಿ ಚಲಿಸಿದ ಕಾರಣ ಹೀಗಾಯಿತು. 180 ರೂಪಾಯಿಗಳೇನು ಹೆಚ್ಚಿನ ನಷ್ಟವೇನಿಲ್ಲ ಎಂದು ಸಮಜಾಯಿಸಿ ಕೊಡಲು ಪ್ರಯತ್ನಿಸುತ್ತಾರೆ.
ಆದರೆ ಗಂಡನ ತಪ್ಪನ್ನು ಸದಾಕಾಲವು ಎತ್ತಿ ಆಡಲು ಸಿದ್ಧವಿರುವ ಪತ್ನಿಯರಂತೆ ರಾಯರ ಪತ್ನಿಯೂ ನಮ್ಮ ಹತ್ತಿರ ಪೈಸೆ ಪೈಸೆಗೂ ಲೆಖ್ಖಾ ಕೇಳುತ್ತೀರಿ. ಹೀಗೆ ಹೊರಗೆಲ್ಲೋ ಕಳೆದುಕೊಳ್ಳುತ್ತೀರಿ. ಬೆಳಗಿನಿಂದ ಹತ್ತಾರು ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ಪ್ರತಿಯೊಂದು ರೈಲಿನಲ್ಲಿಯೂ ನಿಮ್ಮಂತಹ ಹತ್ತಾರು ಬಕರಾಗಳು ಸಿಕ್ಕರೂ ಸಾಕು ಅವನಿಗೆ ಕಾಫೀ ಮಾರಿದ ಹಣಕ್ಕಿಂತಲೂ ಹೆಚಿನ ಹಣವನ್ನು ಸಂಪಾದಿಸಿಬಿಡುತ್ತಾನೆ ಎಂದು ಕುಹಕವಾಡುತ್ತಾರೆ.
ನೋಡಮ್ಮಾ ನಾವು ಜನರನ್ನು ನಂಬಬೇಕು, ರೈಲು ಇದ್ದಕ್ಕಿದ್ದಂತೆಯೇ ಆರಂಭವಾದರೆ ಅವನು ತಾನೇ ಏನು ಮಾಡಬಲ್ಲ? ಅವನು ನಮ್ಮ ಹಣದಲ್ಲಿ ಎಷ್ಟು ದಿನ ತಾನೇ ಬದುಕುತ್ತಾನೆ? ಎಂದು ಶಾಂತ ಚಿತ್ತದಲ್ಲಿ ರಾಯರು ಹೇಳುತ್ತಿದ್ದರೆ, ಅವರ ಪತ್ನಿ ದಿನಕ್ಕೆ ನಿಮ್ಮಂತಹ ನಾಲ್ಕು ಜನರು ಸಿಕ್ಕರೆ ಸಾಕು ಅವರು ಚೆನ್ನಾಗಿಯೇ ಬದುಕುತ್ತಾನೆ ಎಂದು ದುರುಗುಟ್ಟಿ ನೋಡುತ್ತಾರೆ.
ಅಲ್ಲಿಂದ ಮುಂದೆ ರೈಲು ವೇಗವಾಗಿ ಹೋಗುತ್ತಾ ನೋಡ ನೋಡುತ್ತಿದ್ದಂತೆಯೇ, ಮುಂದಿನ ನಿಲ್ದಾಣವಾದ ಅಣ್ಣಾವರಂ ದಾಟಿದರೂ ರಾಯರ ಮಡದಿಯ ಬುಸುಗುಟ್ಟುವಿಕೆ ಕಡಿಮೆ ಯಾಗಿರಲಿಲ್ಲ. ಎಲ್ಲಿಯವರೆಗೂ ನಿಮ್ಮಂತಹ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಲೇ ಇರುತ್ತಾರೆ. ನೀವು ಸುಖಾ ಸುಮ್ಮನೇ ಎಲ್ಲರನ್ನೂ ನಂಬಿ ಮೋಸಹೋಗುತ್ತೀರಿ ಎಂದು ಹೇಳುತ್ತಲೇ ಹೋದರೂ ರಾಯರು ಬಿಡು ಮಾರಾಯ್ತೀ, ಅವರು ಬಡವರು! ನಮ್ಮ ಹಣದಿಂದ ಅರಮನೆಯನ್ನೇನು ಕಟ್ಟಲು ಸಾಧ್ಯವೇ? ಎಂದು ಸಮಾಧಾನಪಡಿಸಲು ಪ್ರಯತ್ನಿಸುತ್ನಿಸಿದರಾದರು ಆಕೆಯ ಕೋಪ ಇನ್ನೂ ಇಳಿದಿರಲಿಲ್ಲ. ಅಷ್ಟರಲ್ಲಿ ಇಡೀ ಬೋಗಿ ತುಂಬಿಕೊಂಡು ಅನೇಕರು ನಿಂತು ಕೊಂಡು ಪ್ರಯಾಣಿಸುವಷ್ಟು ಭರ್ತಿಯಾಗಿತ್ತು.
ರಾಯರು ಕಿಟಕಿಯಿಂದ ರೈಲಿನೊಂದಿಗೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಗಿಡಮರಗಳನ್ನೂ ಮತ್ತು ಹೊಲ ಗದ್ದೆಗಳನ್ನು ನೋಡುತ್ತಾ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದರೆ, ಅಕ್ಕ ಪಕ್ಕದ ಸಹ ಪ್ರಯಾಣಿಕರು ಇವರನ್ನು ಕಂಡು ಅವರವರ ಭಾವಕ್ಕೆ ತಕ್ಕಂತೆ ಊಹಿಸಿಕೊಂಡು ರಾಯರನು ಮೌಲ್ಯಮಾಪನ ಮಾಡುತ್ತಿದ್ದರು. ಕೆಲವರು ರಾಯರನ್ನು ಮೂರ್ಖರೆಂದು ಭಾವಿಸುತ್ತಿದ್ದರೆ ಇನ್ನೂ ಕೆಲವರು ಸಹಾನುಭೂತಿ ಮತ್ತು ಕರುಣೆಯಿಂದ ನೋಡುತ್ತಿದ್ದರು. ಇನ್ನೂ ಕೆಲವರು ಗಂಡ ಹೆಂಡತಿಯ ಮುನಿಸನ್ನು ಕಂಡು ಉಚಿತ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದರು.
ರೈಲು ಪೀತಾಪುರದ ಹೊರವಲಯವನ್ನು ತಲುಪುವ ಹೊತ್ತಿಗೆ, ಎಲ್ಲರೂ ಆ ಘಟನೆಯನ್ನು ಮರೆತು ತಮ್ಮ ತಮ್ಮ ಪಾಡಿಗೆ ಇರುವಾಗಲೇ, ಅಷ್ಟು ಜನರ ಮಧ್ಯೆ ಒಬ್ಬ ಚಿಗುರು ಮೀಸೆಯ ಹದಿ ಹರೆಯದ ಹುಡುಗ ಟೀ.. ಚಾಯ್… ಕಾಪೀ.. ಕಾಪೀ… ಎನ್ನುತ್ತಲೇ, ರಾಯರ ಬಳಿ ಬಂದು "ಸರ್, ಎರಡು ಕಾಫಿ ಖರೀದಿಸಿ 200 ರೂಪಾಯಿ ನೋಟು ಕೊಟ್ಟಿದ್ದು ನೀವೇನಾ? ಎಂದಾಗ, ರಾಯರು ಒಂದು ಕ್ಷಣ ಆನಂದಿತರಾದರೂ, ಅರೇ ನನಗೆ ಕಾಫಿ ಕೊಟ್ಟಿದ್ದು ವಯಸ್ಸಾದ ವ್ಯಕ್ತಿಯಲ್ಲವೇ? ಈತನಲ್ಲ ಎಂದೆನಿಸಿದರೂ, ಹೌದಪ್ಪಾ, ನಾನೇ 200 ರೂಪಾಯಿ ನೋಟೊಂದನ್ನು ಕಾಫಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ನೀಡಿ ಚಿಲ್ಲರೆ ಸ್ವೀಕರಿಸುವ ಮುನ್ನವೇ ರೈಲು ಹೊರಟು ಹೋಯಿತು ಎಂದು ಹೇಳುತ್ತಾರೆ.
ಅದು ಸರೀ, ಸ್ವಾಮೀ, ಟುನಿ ನಿಲ್ದಾಣದಲ್ಲಿ ಕಾಫಿ ಕುಡಿದ ವ್ಯಕ್ತಿನೀವೇನಾ? ಎಂದು ಮತ್ತೊಮ್ಮೆ ಆ ಹುಡುಗ ಕೇಳಿದಾಗ, ನಾನು ಯಾಕೆ ಸುಳ್ಳು ಹೇಳಲೀ? ಬೇಕಾದರೆ ಇವರೆಲ್ಲರನ್ನೂ ಕೇಳು ಎಂದು ಅಕ್ಕ ಪಕ್ಕದವರತ್ತ ಕೈ ತೋರಿಸುತ್ತಾರೆ.
ಇಲ್ಲ! ಇಲ್ಲ ಸ್ವಾಮೀ! ನಾನು ನಿನ್ನನ್ನು ಅನುಮಾನಿಸುತ್ತಿಲ್ಲ ಆದರೆ ನಾನು ಚಿಲ್ಲರೆ ಕೊಡ ಬೇಕಾದ ವ್ಯಕ್ತಿ ನೀವೇನಾ? ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ಪದೇ ಪದೇ ಕೇಳಿದೆ ಕ್ಷಮಿಸಿ ಎಂದು ಹೇಳುತ್ತಾ ತನ್ನ ಜೇಬಿನಿಂದ 180 ರೂಪಾಯಿಗಳ ಚಿಲ್ಲರೆಯನ್ನು ತೆಗೆದು ರಾಯರ ಕೈಗಿಡುತ್ತಾನೆ
ರಾಯರಿಗೆ ಒಂದು ಕಡೇ ಸಂತೋಷ ಮತ್ತೊಂದು ಕಡೆ ಆಶ್ಚರ್ಯದಿಂದ ನೀನು ಯಾರಪ್ಪಾ? ಎಂದು ಕೇಳಿದರು. ಸ್ವಾಮೀ ನಾನು ಅವರ ಮಗ. ಟುನಿ ನಿಲ್ಡಾಣದಲ್ಲಿ ರೈಲು ಹೆಚ್ಚಿನ ಹೊತ್ತು ನಿಲ್ಲದ ಕಾರಣ, ಪ್ರತಿ ದಿನವೂ ಈ ರೀತಿಯ ಒಂದು ಅಥವಾ ಎರಡು ಘಟನೆಗಳು ಟುನಿ ನಿಲ್ದಾಣದಲ್ಲಿ ನಡೆಯುತ್ತವೆ. ಚಿಲ್ಲರೆ ಕೊಡುವಾಗ ಇಲ್ಲವೇ ಪಡೆಯುವಾಗ ರೈಲು ಪ್ರಾರಂಭವಾಗುತ್ತದೆ. ಎಷ್ಟೋ ಬಾರಿ ನಾವು ಸಹಾ ಹಣವನ್ನೂ ಕಳೆದುಕೊಳ್ಳುತ್ತೇವೆ.
ಅದಕ್ಕಾಗಿಯೇ, ನಾನು ಸಹಾ ಅದೇ ರೈಲಿನಲ್ಲಿ ಕಾಫೀ ಟೀ ಮಾರುತ್ತಾ ಇರುತ್ತೇನೆ. ನಮ್ಮ ತಂದೆ ರೈಲಿನಿಂದ ಇಳಿದ ನಂತರ ನನಗೆ ಕರೆ ಮಾಡಿ ಚಿಲ್ಲರೆ ಕೊಡಬೇಕಾದ ವಿವರ ವ್ಯಕ್ತಿಯ ವಿವರದ ಜೊತೆಗೆ ಭೋಗಿ ಮತ್ತು ಸೀಟ್ ವಿವರಗಳನ್ನು ತಿಳಿಸುತ್ತಾರೆ. ನಾನು ಹಾಗೆಯೇ ಕಾಫೀ, ಟೀ ಮಾರುತ್ತಲೇ ಬೋಗಿಯಿಂದ ಬೋಗಿಯಾನ್ನು ದಾಟುತ್ತಾ. ಚಿಲ್ಲರೆಯನ್ನು ಕೊಟ್ಟು ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿನಲ್ಲಿ ಪುನಃ ಟುನಿಗೆ ಮರಳುತ್ತೇನೆ. ನಮಗೆ ಬೇರೆಯವರು ದುಡ್ಡು ಕೊಡದಿದ್ದರೂ ಪರವಾಗಿಲ್ಲ. ಆದರೆ ನಾವು ಬೇರೆಯವರ ಹಣದ ಋಣದಲ್ಲಿ ಇರಬಾರದು ಎಂದು ನಮ್ಮ ತಂದೆ ನಂಬಿರುವ ಕಾರಣ, ನಾವಿಬ್ಬರೂ ಈ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾ, ಸರಿ ಸಾರ್ ನಾನು ಬರುತ್ತೇನೆ ಎನ್ನುತ್ತಾನೆ.
ಅವನ ಉತ್ತರಿಂದ ಆಶ್ಚರ್ಯಚಕಿತರಾದ ರಾಯರು ಏನಪ್ಪಾ ನೀನು ಓದುತ್ತಿಲ್ಲವೇ? ಎಂದಾಗ, ಹೌದು ಸಾರ್, ನಾನು ಹತ್ತನೇ ತರಗತಿಯನ್ನು ಓದುತ್ತಿದ್ದೇನೆ, ನಾನು ಬೆಳಿಗ್ಗೆ ಅಪ್ಪನೊಂದಿಗೆ ಈ ರೀತಿಯಾಗಿ ಸಹಾಯ ಮಾಡಿದರೆ, ನನ್ನ ಅಣ್ಣ ಮಧ್ಯಾಹ್ನ ತಂದೆಗೆ ಸಹಾಯ ಮಾಡುತ್ತಾನೆ ಎಂದು ಹೇಳಿದಾಗ, ಇಂತಹ ಸಂಸ್ಕಾರವನ್ನು ಕಲಿಸಿರುವ ನಿಮ್ಮ ತಂದೆಯೊಂದಿಗೆ ಮಾತನಾಡ ಬೇಕು ಎನಿಸಿದೆ, ದಯವಿಟ್ಟು ಕರೆ ಮಾಡಿಕೊಡುವೆಯಾ? ಎಂದು ಹೇಳಿದಾಗ ಆ ಹುಡುಗ ಬಹಳ ಮುಜುಗರದಿಂದಲೇ ತನ್ನ ತಂದೆಗೆ ಕರೆ ಮಾಡಿ ಮೊದಲು ಚಿಲ್ಲರೆ ಕೊಟ್ಟ ವಿಷಯವನ್ನು ತಿಳಿಸಿ, ನಂತರ ರಾಯರು ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ ಫೋನನ್ನು ರಾಯರ ಕೈಗಿಡುತ್ತಾನೆ.
ಸ್ವಾಮೀ, ನಿಮ್ಮ ಮಗ 200 ರೂ.ಗಳ ನೋಟಿಗೆ ಚಿಲ್ಲರೆ ಕೊಟ್ಟಿದ್ದಾನೆ. ನಿಮ್ಮೀ ಪ್ರಾಮಾಣಿಕತೆಗೆ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಲುವಾಗಿ ನಾನು ನಿಮ್ಮೊಂದಿಗೆ ಮಾತನಾಡಲು ಇಚ್ಚಿಸಿದೆ. ನೀವು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಅವರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿರುವುದು ನನಗೆ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ ನಾನು ನಿಮ್ಮ ಇಡೀ ಕುಟುಂಬವನ್ನು ಅಭಿನಂದಿಸುತ್ತೇನೆ ಎನ್ನುತ್ತಾರೆ.
ಸರ್ ನಿಮ್ಮೀ ಅಭಿಮಾನಕ್ಕೆ ತುಂಬಾ ಸಂತೋಷವಾಗುತ್ತದೆ. ನಾನು ಕೇವಲ ಐದನೇ ತರಗತಿಯವರೆಗೆ ಮಾತ್ರ ಓದಿರಬಹುದು ಆದರೆ ಆ ದಿನಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಜೀವನದ ಮೌಲ್ಯಗಳನ್ನು ಪಂಚತಂತ್ರ ಸಣ್ಣ ಸಣ್ಣ ಕಥೆಗಳ ಮೂಲಕ ನಮಗೆ ಕಲಿಸಿಕೊಡಲಾಗುತ್ತಿತ್ತು. ಪಠ್ಯಪುಸ್ತಕಗಳಲ್ಲಿಯೂ ಸಹ ಪ್ರಾಮಾಣಿಕತೆ ಮತ್ತು ಸಮಗ್ರತೆಯಂತಹ ಮೌಲ್ಯಗಳನ್ನು ಬಲಪಡಿಸುವಂತಹ ವಿಷಯಗಳನ್ನು ಹೊಂದಿದ್ದವು ಆದರಿಂದಗಿಯೇ ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ವ್ಯತ್ಯಾಸ ತಿಳಿಯುವುದರಲ್ಲಿ ಸಹಕಾರಿಯಾಗಿದೆ. ಆ ತತ್ವಗಳೇ ಇಂದಿಗೂ ನಮಗೆ ಪ್ರಾಮಾಣಿಕ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದೆ. ದುರಾದೃಷ್ಟವಶಾತ್ ಇಂದಿನ ಶಾಲೆಗಳ ಶಿಕ್ಷಣದಲ್ಲಿ ಅಂತಹ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಜೀವನದ ಮೌಲ್ಯಕ್ಕಿಂತಲು ಅಂಕಗಳ ಬೆನ್ನೆತ್ತಿ ಹೋಗುತ್ತಿರುವುದು ನಿಜಕ್ಕೂ ಬೇಸವಾಗುತ್ತಿದೆ.
ನನ್ನ ಮಕ್ಕಳು ಮನೆಯಲ್ಲಿ ಓದುತ್ತಿದ್ದಾಗ, ಅದನ್ನು ಕೇಳಿಸಿಕೊಂಡಿದ್ದೇನೆ. ಅವರ ಪಠ್ಯಕ್ರಮದಲ್ಲಿ ನೈತಿಕ ಕಥೆಗಳು, ಸ್ಫೂರ್ತಿದಾಯಕ ಕವನಗಳು, ಪಂಚತಂತ್ರ, ರಾಜರತ್ನಂ ಅವರ ಮಕ್ಕಳ ಕಥೆಗಳ ಬದಲಾಗಿ, ಮೌಲ್ಯವಿಲ್ಲದ ಗೊಡ್ಡು ವಿಷಯಗಳನ್ನು ಕಲಿಯುತ್ತಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿಯೇ ನನಗೆ ತಿಳಿದಿರುವ ಕೆಲವು ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ನಾನು ಈ ರೀತಿಯ ಸರಳ ಕಾರ್ಯಗಳನ್ನು ಅವರಿಂದ ಮಾಡಿಸುತ್ತೇನೆ.
ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಕಾಫೀ ಮಾರಾಟಗಾರನ ದೂರದೃಷ್ಟಿ ಮತ್ತು ಅದನ್ನು ಅನೂಚಾನಾಗಿ ಪಾಲಿಸುತ್ತಿರುವ ಅವರ ಮಕ್ಕಳ ಕುರಿತಾಗಿ ಆಶ್ಚರ್ಯಚಕಿತರಾಗಿ ಅಭಿನಂದನಾಪೂರ್ವಕವಾಗಿ ಆ ಹುಡುಗನ ಬೆನ್ನನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ ಒಂದು ಕ್ಷಣ ಇಂಗು ತಿಂದ ಮಂಗನಂತಾದರೂ ನಂತರ ಸಾವರಿಸಿಕೊಂಡು ರಾಯರತ್ತ ಕ್ಷಮೆಯಾಚಿಸುವ ರೀತಿಯಲ್ಲಿ ದೇಶಾವರಿ ನಗೆ ಬೀರಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.
ಬಂದ ಕೆಲಸವನ್ನು ಮುಗಿಸಿಕೊಂಡ ಹುಡುಗ ಇದಾವುದಕ್ಕೂ ತಲೆ ಕೆಡಸಿಕೊಳ್ಳದೇ ತನ್ನ ಪಾಡಿಗೆ ತಾನು ರೈಲಿನಿಂದ ಇಳಿದು ಹೋಗುತ್ತಿದ್ದಂತೆಯೇ, ಮನಸ್ಸಿನಲ್ಲಿಯೇ ಆ ಹುಡುಗನ ಸಂಸ್ಕಾರಕ್ಕೆ ವಂದಿಸುತ್ತಾ, ಇಂತಹ ಕಲಿಯುಗದಲ್ಲೂ ಈ ರೀತಿಯ ಪ್ರಾಮಾಣಿಕರು ಸದಾಚಾರವನ್ನು ಪಾಲಿಸುತ್ತಿರುವುದರಿಂದಲೇ ಧರ್ಮವು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕೊಂಡು ನಿಟ್ಟುಸಿರು ಬಿಟ್ಟರೆ, ಅದುವರೆವಿಗೂ ಈ ಘಟನೆಯ ಬಗ್ಗೆ ತಲಾ ತಟ್ಟಿ ಮಾತನಾಡುತ್ತಿದ್ದ ಸಹಪ್ರಯಾಣಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಗರ ಬಡಿದವರಂತೆ, ಈಗಲೂ ಇಂತಹ ಸಹೃದಯದವರು ಇದ್ದಾರೆಯೇ? ಎಂದು ಮಾತನಾಡಿಕೊಂಡರು.
ಇದೇ ಅಲ್ಲವೇ ನಮ್ಮ ಧರ್ಮ, ಇದನ್ನೇ ಅಲ್ಲವೇ ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದು ಮತ್ತು ಇದನ್ನೇ ಅಲ್ಲವೇ ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಕೊಡಬೇಕಾಗಿರುವುದು.
ಈ ಲೇಖನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಮತ್ತು ತೆಲುಗಿನ ಖ್ಯಾತ ಬರಹಗಾರಾದ ಶ್ರೀ ಜೆ.ಪಿ.ಶರ್ಮಾ ಅವರ ಲೇಖನವೊಂದರ ಭಾವಾನುವಾದವಾಗಿದೆ.
Author ಶ್ರೀಕಂಠ ಬಾಳಗಂಚಿPosted on September 3, 2021 September 3, 2021 Categories ಕಥೆTags ಕಾಫಿ, ಚಾಯ್, ಜೀವನ ಮೌಲ್ಯ, ಟೀ, ಪ್ರಾಮಾಣಿಕತೆ, ರೈಲು, ರೈಲ್ವೇ, ಶಿಕ್ಷಣ3 Comments on ಟೀ.. ಚಾಯ್… ಕಾಪೀ.. ಕಾಪೀ…
ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು? - Public TV
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನ 10ನೇ ಆವೃತ್ತಿಯ ಪಂದ್ಯಾಟಗಳು ಏಪ್ರಿಲ್ 5ರಿಂದ ಆರಂಭವಾಗಲಿದೆ. ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಪಂದ್ಯ ಬುಧವಾರ ಹೈದರಾಬಾದ್‍ನಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯ ಐಪಿಎಲ್‍ನಲ್ಲಿ ಜಯಗಳಿಸುವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ? ಫ್ರಾಂಚೈಸಿಗಳಿಗೆ ಏನು ಲಾಭ? 10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ನಗದು ಬಹುಮಾನ ಎಷ್ಟು?
ಪ್ರತಿಬಾರಿಯೂ ಐಪಿಎಲ್‍ನಲ್ಲಿ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಈ ಬಾರಿ ಚಾಂಪಿಯನ್ ತಂಡಕ್ಕೆ 21 ಕೋಟಿ ರೂ. ನಿಗದಿ ಪಡಿಸಿದರೆ, ರನ್ನರ್ ಅಪ್ ತಂಡಕ್ಕೆ 12 ಕೋಟಿ ಸಿಗಲಿದೆ. ಮೂರನೇ ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದ ತಂಡಗಳಿಗೆ 8 ಕೋಟಿ ರೂ. ಸಿಗಲಿದೆ.
2016ರಲ್ಲಿ ಬಹುಮಾನ ಎಷ್ಟಿತ್ತು?
ಚಾಂಪಿಯನ್ ಆಗಿದ್ದ ಹೈದರಾಬಾದ್ ತಂಡಕ್ಕೆ 20 ಕೋಟಿ ಸಿಕ್ಕಿದ್ದರೆ, ಆರ್‍ಸಿಬಿಗೆ 11 ಕೋಟಿ ಸಿಕ್ಕಿತ್ತು. ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ತಲಾ 7.5 ಕೋಟಿ ರೂ. ಹಣ ಸಿಕ್ಕಿತ್ತು.
ಬಿಸಿಸಿಐಗೆ ಎಷ್ಟು ಹಣ ಸಿಗುತ್ತೆ?
ಪ್ರತಿವರ್ಷ 1200 ಕೋಟಿ ರೂ ಆದಾಯ ಐಪಿಎಲ್‍ನಿಂದ ಬರುತ್ತದೆ. ಈ ಆದಾಯದಲ್ಲಿ ಬಿಸಿಸಿಐಗೆ ಶೇ. 40 ರಷ್ಟು ಲಾಭ ಸಿಗಲಿದೆ. 2007ರಲ್ಲಿ ಬಿಸಿಸಿಐಗೆ 235 ಕೋಟಿ ರೂ. ಲಾಭ ಸಿಕ್ಕಿತ್ತು. 2016 ರಲ್ಲಿ ಬಿಸಿಸಿಐ ಬೌಂಡರಿ ಲೈನಿನಲ್ಲಿನ ಜಾಹಿರಾತಿನಿಂದ ಒಟ್ಟು 250 ಕೋಟಿ ರೂ. ಹಣವನ್ನು ಗಳಿಸಿತ್ತು.
ಚಾನೆಲ್‍ಗೆ ಎಷ್ಟು ಹಣ ಸಿಗುತ್ತೆ?
ಐಪಿಎಲ್ ಪಂದ್ಯಾಟಗಳು ಪ್ರೈಮ್ ಟೈಂನಲ್ಲಿ ನಡೆಯಲಿರುವುದರಿಂದ ಹೆಚ್ಚಿನ ಪ್ರಮಾಣದ ವೀಕ್ಷಕರು ಕ್ರಿಕೆಟ್ ವೀಕ್ಷಿಸುತ್ತಾರೆ. 2008 ರಿಂದ 2017ರವರೆಗಿನ ಅವಧಿ ವರೆಗಿನ ನೇರ ಸಾರದ ಹಕ್ಕನ್ನು ಸೋನಿ, ಇಎಸ್‍ಪಿಎನ್ ಚಾನೆಲ್ ಖರೀದಿಸಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಐಪಿಎಲ್ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಆದಾಯಗಳಿಸುವ ಪ್ರಮಾಣ ಶೇ.5.7 ರಿಂದ ಶೇ.28.8ಕ್ಕೆ ಏರಿಕೆ ಆಗುತ್ತದೆ. ಸೋನಿಯ ವಾರ್ಷಿಕ ಆದಾಯ 9 ಸಾವಿರ ಕೋಟಿ ರೂ. ಇದ್ದರೆ, ಈ ಆದಾಯದ ಶೇ.7ರಷ್ಟನ್ನು ಐಪಿಎಲ್‍ನ 45 ದಿನಗಳಲ್ಲಿ ಗಳಿಸುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಕೋಚ್‍ ಗಳಿಗೆ ಎಷ್ಟು ಹಣ ಸಿಗುತ್ತೆ?
10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.?
ಟೂರ್ನಿಯ ಆರಂಭಿಕ ದಿನಗಳಲ್ಲಿ 10 ಸೆಕೆಂಡ್‍ನ ಜಾಹಿರಾತಿಗೆ ಅಂದಾಜು 5 ಲಕ್ಷ ರೂ. ಇದ್ದರೆ, ಫೈನಲ್ ವೇಳೆಗೆ ಈ ಮೊತ್ತ 10 ಲಕ್ಷ ರೂ. ಏರಿಕೆಯಾಗುತ್ತದೆ. ಟಿ20 ವಿಶ್ವಕಪ್‍ನ ಫೈನಲ್ ಪಂದ್ಯದ ವೇಳೆ 10 ಸೆಕೆಂಡ್ ಜಾಹಿರಾತಿಗೆ 8 ಲಕ್ಷ ರೂ. ಇತ್ತು.
10 ಸೆಕೆಂಡಿನ ಜಾಹೀರಾತಿನಲ್ಲೂ ವಿಭಾಗಗಳಿವೆ. ಒಂದು ಕಂಪೆನಿ ಒಂದು ಪಂದ್ಯದ 300 ಸೆಕಂಡ್‍ಗಳನ್ನು ಖರೀದಿ ಮಾಡಿದರೆ ಪ್ರತಿ 10 ಸೆಕೆಂಡಿಗೆ 5.2 ಲಕ್ಷ ರೂ. ನೀಡಬೇಕಾಗುತ್ತದೆ. ಇದಕ್ಕಿಂತಲೂ ಕಡಿಮೆ ಅವಧಿಯನ್ನು ಖರೀದಿಸಿದರೆ ಅವರಿಗೆ 10 ಸೆಕೆಂಡ್‍ಗೆ 5.75 ಲಕ್ಷ ರೂ. ಇದರುತ್ತದೆ. ಇನ್ನು ಸ್ಪಾಟ್ ಜಾಹಿರಾತು ಖರೀದಿ ಮಾಡಿದರೆ ಅವರು 6 ಲಕ್ಷ ರೂ. ನೀಡಬೇಕಾಗುತ್ತದೆ.
ಒಟ್ಟಿನಲ್ಲಿ 30 ಸೆಕಂಡ್ ಜಾಹಿರಾತಿನಲ್ಲಿ ವಾಹಿನಿ ಅಂದಾಜು 18 ಲಕ್ಷ ರೂ. ಹಣವನ್ನು ಒಂದು ಪಂದ್ಯದಿಂದ ಗಳಿಸುತ್ತದೆ. ಒಂದು ಪಂದ್ಯದಿಂದ ಅಂದಾಜು 12 ಕೋಟಿ ಹಣ ಬಂದರೆ ಎಲ್ಲ ಐಪಿಎಲ್ ಪಂದ್ಯಗಳಿಂದ ಒಟ್ಟು 720 ಕೋಟಿ ರೂ. ಹಣ ಜಾಹಿರಾತಿನಿಂದಲೇ ಬರುತ್ತದೆ.
ಇದನ್ನೂ ಓದಿ: ಐಪಿಎಲ್ ಮ್ಯಾಚ್‍ಗಳಲ್ಲಿ ಅಂಪೈರ್‍ಗಳಿಗೆ ಎಷ್ಟು ಸಂಬಳ ಸಿಗುತ್ತೆ? ಇಲ್ಲಿದೆ ಮಾಹಿತಿ
ಫ್ರಾಂಚೈಸಿಗಳಿಗೆ ಎಷ್ಟು ಲಾಭ ಸಿಗುತ್ತೆ?
ಬಿಸಿಸಿಐ ನೇರಪ್ರಸಾರದಿಂದ ಸಿಗುವ ಲಾಭವನ್ನು ಫ್ರಾಂಚೈಸಿಗಳಿಗೆ ಹಂಚುತ್ತದೆ. ಇದರ ಜೊತೆಗೆ ಟಿಕೆಟ್ ಮಾರಾಟದಲ್ಲೂ ಫ್ರಾಂಚೈಸಿಗಳಿಗೆ ಹೆಚ್ಚಿನ ಪಾಲು ಸಿಗುತ್ತದೆ. ಅತಿಥೇಯ ಮೈದಾನದಲ್ಲಿ ಪಂದ್ಯ ನಡೆದರೆ ಶೇ.80 ಎಷ್ಟು ಹಣ ಫ್ರಾಂಚೈಸಿಗೆ ಸಿಗಲಿದೆ.
ಪ್ರಾಯೋಜಕರಿಗೂ ಏನು ಲಾಭ?
ಬೌಂಡರಿ, ಸಿಕ್ಸರ್, ಗರಿಷ್ಠ ಸಿಕ್ಸರ್ ಹೊಡೆದವರಿಗೆ ಪ್ರಶಸ್ತಿಯನ್ನು ಪ್ರಯೋಜಕರು ನೀಡುತ್ತಾರೆ. ಮೂರನೇ ಅಂಪೈರ್ ತೀರ್ಪಿನಲ್ಲೂ ಪ್ರಾಯೋಜಕರ ಲೋಗೋ ಇರುತ್ತದೆ. ಐಪಿಎಲ್ ಅನ್ನು ಹೆಚ್ಚು ಜನ ವೀಕ್ಷಿಸುವ ಕಾರಣ ಕಂಪೆನಿಗಳಿಗೂ ಚೆನ್ನಾಗಿ ಪ್ರಚಾರ ಸಿಗುತ್ತದೆ.
ಹಿರಿಯ ನಟ ಶಿವರಾಮ್ ಸ್ಥಿತಿ ಗಂಭೀರ: ICUನಲ್ಲಿ ಚಿಕಿತ್ಸೆ – ಅರಳಿ ಕಟ್ಟೆ
ಕನ್ನಡ ಚಿತ್ರರಂಗದ ಹಿರಿಯ ನಟ ಶಿರಾಮ್ ಅವರ ಅರೋಗ್ಯ ಸ್ಥಿತಿ ಗಂಭೀರ ವಾಗಿದೆ. ಶಿವರಾಮ್ ಆರೋಗ್ಯ ಗಂಭೀರವಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಿವರಾಮ್ ಅವರನ್ನು ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ತಂದೆಯ ಆರೋಗ್ಯದ ಬಗ್ಗೆ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿ, ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಂದು ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೀವಿ. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದ್ರು. ಆದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು.
ಸಮಶೀತೋಷ್ಣ: 2010
Posted by ಗುರುಪ್ರಸಾದ್ ಕಾಗಿನೆಲೆ at 2:22 PM 2 comments:
Posted by ಗುರುಪ್ರಸಾದ್ ಕಾಗಿನೆಲೆ at 7:04 PM 2 comments:
Posted by ಗುರುಪ್ರಸಾದ್ ಕಾಗಿನೆಲೆ at 9:38 PM 2 comments:
ಒಬ್ಬ ಬರಹಗಾರ ಒಂದು ಚರಿತ್ರೆಯನ್ನು ಕಲ್ಪಿತ ಬರಹಕ್ಕೆ ಅದರಲಿಯೂ ಕಾದಂಬರಿಯಂತಹ ಪ್ರಕಾರಕ್ಕೆ ಹೇಗೆ ಉಪಯೋಗಿಸಿಕೊಳ್ಳಬಲ್ಲ? ಅದೂ ನಾನೂರು ವರ್ಷಗಳಿಗೂ ಮೀರಿದ ಒಂದು ಸಮುದಾಯದ ಚರಿತ್ರೆಯನ್ನು ಅಧ್ಯಯನ ಮಾಡಿ ಅದನ್ನು ಆಧರಿಸಿ ಕಾದಂಬರಿ ಬರೆದಾಗ ಅದರಿಂದ ನಾವು ಏನನ್ನು ನಿರೀಕ್ಷಿಸಬಹುದು? ಕಾದಂಬರಿಕಾರನ ಸವಾಲುಗಳೇನು? ಬರೇ ಕಾಲಘಟ್ಟದ ಪಲ್ಲಟವನ್ನು ಸೆರೆಹಿಡಿಯುವುದೇ ಇಲ್ಲಿ ಮುಖ್ಯವಾಗುತ್ತದೆಯೇ? ಲೇಖಕ ಚರಿತ್ರೆಗೆ ಎಷ್ಟು ನಿಷ್ಟನಾಗಬಲ್ಲ? ಬರೇ ಶಾಸನಗಳಿಂದ ಅಥವಾ ಯಾರೋ ಚರಿತ್ರಕಾರರು ಬರೆದ ಪುಸ್ತಕಗಳಿಂದ, ಸ್ಥಳಪುರಾಣದಿಂದ ಅಥವಾ ಇನ್ಯಾವುದೇ ಆಕರಗಳಿಂದ ಸಿಕ್ಕ ಚರಿತ್ರೆಯನ್ನು ಆಧರಿಸಿ ಅಂದಂದಿನ ಸಾಮಾನ್ಯ ಜನಗಳ ಜೀವನವನ್ನು ಪುನರ್ರ್ರಚಿಸುವುದು ಸಾಧ್ಯವೇ?
ಇಲ್ಲಿ ಕಲೆ ಮತ್ತು ವಾಸ್ತವಗಳೆರಡೂ ಪೂರಕವಾಗಿ ಕೆಲಸ ಮಾಡಬಹುದು, ಕೆಲವೊಮ್ಮೆ ಮಾರಕವಾಗಿಯೂ ಬಹುದು. ಕಲೆ ಚರಿತ್ರೆಯ ದಾಖಲಾತಿ ಅಲ್ಲ. ಹಾಗಾಗಿ 'ಕಲ್ಪಿತ' ದ ನೆವದಲ್ಲಿ ಕೆಲವೊಂದು ಚಾರಿತ್ರಿಕ ಘಟನೆಗಳು ಮಸುಕಾಗಬಹುದು. ಕೆಲವೊಂದು ಘಟನೆಗಳನ್ನು ದಾಖಲಿಸದೇ ಇರುವ ಅನುಕೂಲವನ್ನೂ ಬರಹಗಾರ ಪಡೆಯಬಹುದು. ಆದರೆ, ಕಾದಂಬರಿಯ ವಸ್ತುವೇ ಈ ಕಾಲಘಟ್ಟದ ಪಲ್ಲಟಗಳನ್ನು ಒಂದುಮಟ್ಟದಲ್ಲಿ ದಾಖಲಿಸುವುದಾಗಿರುವುದರಿಂದ ಸತ್ಯ, ವಾಸ್ತವವೆಂದು ಯಾವ ಆಕರಗ್ರಂಥಗಳಲ್ಲಿ ನಿರೂಪಿತವಾಗಿರುವ ಚಾರಿತ್ರಿಕ ಘಟನೆಯಿದೆಯೋ ಅದನ್ನು ಉಪೇಕ್ಷಿಸುವುದೂ ಕಷ್ಟ.
ಇಂತ ಒಂದು ಸಾಹಸಕ್ಕೆ ಗೋಪಾಲಕೃಷ್ಣಪೈಯವರು ಕೈಹಾಕಿದ್ದಾರೆ ತಮ್ಮ ಚೊಚ್ಚಲ ಕಾದಂಬರಿ 'ಸ್ವಪ್ನ ಸಾರಸ್ವತ' ದಲ್ಲಿ. ಗೋವಾದಲ್ಲಿ ಸಮಾಧಾನವಾಗಿ ಜೀವನ ನಡೆಸುತ್ತಿದ್ದ ಸಾರಸ್ವತ ಬ್ರಾಹ್ಮಣರ ಒಂದು ಸಮುದಾಯ ತಮ್ಮ ಧರ್ಮ ಹಾಗೂ ನಂಬಿದ್ದ ಜೀವನ ಶೈಲಿಯನ್ನು ಉಳಿಸಿಕೊಳ್ಳಲು ದಕ್ಷಿಣಕ್ಕೆ ವಲಸೆ ಬರುತ್ತಾರೆ. ಹೀಗೆ ಶುರುವಾದ ವಲಸೆ ಕೊನೆಗೆ ನೆಲೆಸೇರುವುದು ಕಾಸರಗೋಡಿನ ಸಮೀಪದ ಬಳ್ಳಂಬೆಟ್ಟಿನಲ್ಲಿ. ಇದ್ದ ಜಾಗವನ್ನು ಬಿಟ್ಟು ಬರುವುದು, ನಂತರದ ವಲಸೆಯ ಕ್ರಿಯೆ ಮತ್ತು ಅದರ ಜತೆಗೇ ಹಾಸುಹೊಕ್ಕಾಗಿ ಇರುವ ಮಾನವ ಸಹಜ ತಲ್ಲಣಗಳು ಮೊದಲ ಭಾಗಗಳಲ್ಲಿ, ಈ ಹೊಸಾ ನಾಡಿನಲ್ಲಿ ಇರಬೇಕಾದ ಅನಿವಾರ್ಯತೆ, ಜೀವನೋಪಾಯಕ್ಕೆ ಬೇಕಾದ ದುಡ್ಡು, ಭೂಮಿ ಮತ್ತು ಅದನ್ನು ಬೆಳೆಸುವ ಕ್ರಿಯೆ- ಅನಿವಾರ್ಯವಾಗುವ ಅವಶ್ಯಕತೆಗಳು ಮತ್ತು ಸಂಸಾರ ಬೆಳೆದಂತೆ ಅದರ ಜತೆಗೇ ಹುಟ್ಟುವ ರಾಗದ್ವೇಷಗಳು ನಂತರದ ಭಾಗಗಳಲ್ಲಿ ಅಸಂಖ್ಯಾತ ಪಾತ್ರಗಳಿಂದ ನಿರೂಪಿತವಾಗಿವೆ.
ವೆರಣೆಯ ನರಸಪ್ಪಯ್ಯನವರಿಂದ ಶುರುವಾದ ಈ ವಂಶದ ಕಥಾನಕ ರಾಮಚಂದ್ರಪೈಯ ಮೊಮ್ಮಗ ವೆಂಕಟೇಶ ಪೈನ ಜನನದವರೆಗೆ ಮತ್ತು ನಾಗ್ಡೊ ಬೇತಾಳ ಅವನನ್ನು ಎತ್ತಿಕೊಂಡು ಕಾಪಾಡುತ್ತಾನೆ ಎನ್ನುವ ಸದಾಶಯದೊಂದಿಗೆ ಮತ್ತು ಆತನ ಸಂತತಿ ಇಪ್ಪತ್ತೆರಡು ತಲೆಮಾರಿನ ತನಕ ಬದುಕುವ ಜವಾಬುದಾರಿಯನ್ನು ದೈವಕ್ಕೆ ಬಿಟ್ಟು ರಾಮಚಂದ್ರ ಪೈ ಸಾಯುವವರೆಗೆ ಈ ಕಥೆ ಬರೆಯಲ್ಪಟ್ಟಿದೆ ಎಂದು ಕಥೆಯನ್ನು ಸರಳೀಕರಿಸಿ ಹೇಳಿಬಿಟ್ಟರೆ ಕಾದಂಬರಿಕಾರನ ಶ್ರಮಕ್ಕೇ ಅನುಮಾನ ಮಾಡಿದ ಹಾಗಾಗುತ್ತದೆ. ಒಂದು ಕಾಲದ ವಾಸ್ತವ ಚರಿತ್ರೆಯಾಗುತ್ತಾ ಹಾಗೇ ಪುರಾಣವಾಗುವುದನ್ನು ಪೈರವರು ವಾಸ್ತವ, ಫ಼್ಯಾಂಟಸಿಗಳನ್ನು ಸೇರಿಸಿ ಬಹಳ ಆಪ್ತ ಶೈಲಿಯಲ್ಲಿ ಕಟ್ಟುಕೊಡುತ್ತಾರೆ. ಈ ಶೈಲಿ ಹೃದ್ಯವಾಗಿದೆ, ವೇದ್ಯವಾಗುತ್ತದೆ. ಓದಿಸಿಕೊಳ್ಳುತ್ತದೆ, ಖುಷಿಕೊಡುತ್ತದೆ. ಅಷ್ಟೇ ಅಲ್ಲ, ಕಾದಂಬರಿಯ ಪಾತ್ರವೊಂದಾದ ಜಾಹ್ನವಿ ತನ್ನ ಜತೆಗಿದ್ದವಳನ್ನೇ ಹರಿದು ತಿನ್ನುವುದೂ, ನಾಗ್ಡೊ ಬೇತಾಳ ಕಾಲಪುರುಷನಂತೆ ಮತ್ತೆ ಮತ್ತೆ ಹುಟ್ಟುಬರುವುದೂ ವರ್ತಮಾನಕ್ಕೆ ಭೂತದ ಕಥೆಗಳನ್ನೂ ಮತ್ತು ಭವಿಷ್ಯದಲ್ಲಿ ಹೀಗೇ ಆಗುತ್ತದೆ ಎಂದು ಹೇಳುವ ಅತಿವಾಸ್ತವಗಳನ್ನೂ ಪ್ರಶ್ನಾತೀತವನ್ನಾಗಿಸುತ್ತದೆ.
ಇದು ಸುಮಾರು ನಾಲ್ಕುನೂರುವರ್ಷಗಳ ಕಾಲ ಏಳು ತಲೆಮಾರುಗಳ ಅವಧಿಯಲ್ಲಿ ನಡೆಯುವ ಕಥೆ. ಕಾಲವನ್ನು ಅಕ್ಷರಗಳಲ್ಲಿ ಹಿಡಿದಿಡಬೇಕಾದಾಗ ಬರಹಗಾರನು ಎದುರಿಸುವ ಸವಾಲುಗಳು ಹಲವು. ನಮ್ಮ ಸಂಸ್ಖ್ರುತಿಯ ಮತ್ತು ಕಾಲದ ಪಲ್ಲಟಗಳು ಇತಿಹಾಸದಲ್ಲಿ ದಾಖಲಾಗಿರುವುದು ರಾಜಮಹಾರಾಜರುಗಳ ಕಥನದಲ್ಲಿ,ಮಹಾಯುದ್ಧಗಳ ದಾಖಲಾತಿಯಲ್ಲಿ. ಕಾಲೆರಾ, ಪ್ಲೇಗು ಮುಂತಾದ ಮಹಾಮಾರಿಗಳು ಸೃಷ್ಟಿಸಿದ ಮೃತ್ಯುಕೂಪದಲ್ಲಿ. ಆದರೆ ಈ ಶತಮಾನಗಳ ಸ್ಥಿತ್ಯಂತರಗಳನ್ನು ಹೇಳಲು ಪೈರವರು ಆರಿಸಿಕೊಂಡಿರುವುದು ಒಂದು ಕುಟುಂಬದ ಕತೆಯನ್ನು ಹೇಳುವುದರ ಮೂಲಕ. ಯಾವ ಕಾರಣಕ್ಕೂ ತಂತಮ್ಮ ಕುಟುಂಬದ ಹೊರತಾದ ಯಾವ ವಿದ್ಯಮಾನಗಳಿಗೂ ತನ್ನನ್ನು ಒಡ್ಡಿಕೊಳ್ಳದಿರುವ ಒಂದು ಸಾಮಾನ್ಯ ಸಾರಸ್ವತ ಕುಟುಂಬ ಕೇವಲ ತನ್ನ ದೈವವನ್ನು ಉಳಿಸಿಕೊಳ್ಳುವುದಕ್ಕಾಗಿ ಇದ್ದ ಊರನ್ನೇ ಸಂಸಾರ ಸಮೇತ ಬಿಟ್ಟು ಹೋಗುವ ಈ ಕಾಯಕ ದೈವ, ಧರ್ಮ ಮತ್ತು ನಂಬಿಕೆಗಳು ಜೀವನದ ಮೇಲೆ ಪ್ರಬಾವಿಸುವ ರೀತಿಯನ್ನು ಪ್ರಸ್ತಾಪಿಸುತ್ತದೆ .
ದಶಕಗಳ ಕಾಲ ತಮ್ಮ ಹರಹನ್ನು ವಿಸ್ತರಿಸಿಕೊಂಡಿರುವ ಯಾವ ಕಥೆಯೂ, ಒಂದು ವ್ಯಕ್ತಿಯ ಅಥವಾ ಸಂಸಾರದ ಕಥೆಯಾಗಿರುವುದಿಲ್ಲ. ಸುತ್ತಣ ಸಮಾಜದಲ್ಲಿಯಾಗುವ ಪಲ್ಲಟಗಳಿಂದ ಪ್ರಭಾವಿತವಾಗಿಲ್ಲದೇ ಇರಲು ಸಾಧ್ಯವೇ ಇಲ್ಲ. ಕಾರಂತರ 'ಮರಳಿ ಮಣ್ಣಿಗೆ' ಕಾದಂಬರಿಯ ಕರಾವಳಿಯ ಜನಜೀವನದ ವಿವರಗಳಿರಲಿ, ಮಲೆಗಳಲ್ಲಿ ಮದುಮಗಳು ವಿನ ೧೯ನೆಯ ಶತಮಾನದ ಅಂತ್ಯದ ಮಲೆನಾಡಿನ ಕಥನವಿರಲಿ, ಹೊರಗಿನ ಪ್ರಪಂಚದ ಅರಿವನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವ ಎಂಥ ಸಾಮಾನ್ಯ ಮನುಷ್ಯನ ಜೀವನವೂ ಆ ಪಲ್ಲಟಗಳಿಂದ, ಸ್ಥಿತ್ಯಂತರಗಳಿಂದ ಪ್ರಭಾವಿತವಾಗದೇ ಇರಲು ಸಾಧ್ಯವೇ ಇಲ್ಲ ಎಂದೇ ಪ್ರತಿಪಾದಿಸುತ್ತದೆ. ಸಲ್ಮಾನ್ ರಶ್ದೀಯಂತೂ ತನ್ನ ಮಿಡ್‌ನೈಟ್ಸ್ ಚಿಲ್ಡ್ರನ್ ನಲ್ಲಿ ಕಾದಂಬರಿಯ ನಾಯಕನ ಜೀವನದ ಪ್ರತಿ ಮುಖ್ಯ ಘಟನೆಯೂ ಇಂಡಿಯಾ ದೇಶದ ಚಾರಿತ್ರಿಕ ಘಟನೆಗಳೊಂದಿಗೆ ಹೇಗೆ ಥಳುಕುಹಾಕಿಕೊಂಡಿತ್ತು ಎನ್ನುವುದನ್ನು ಫ಼್ಯಾಂಟಸಿಯಂತೆ ವರ್ಣಿಸುತ್ತಾನೆ.
ಅಂದರೆ ಒಟ್ಟು, ಮನುಷ್ಯ 'ತಂಪಾಡಿಗೆ' ತಾನು ಇರುವುದಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ 'ಸ್ವಪ್ನ ಸಾರಸ್ವತ'ದಲ್ಲಿಯೂ ಗೋವಾದಲ್ಲಿಯಾದ ಪೋರ್ಚುಗೀಸರ ದಾಳಿ ನಂತರದ ಕಾಲವನ್ನು ಮತ್ತು ಒಂದು ಸಮುದಾಯವನ್ನು ನೇರವಾಗಿ ತಟ್ಟಿದ್ದಲ್ಲದೇ ಅವರ ಜೀವನದ ಗತಿಯನ್ನೇ ಪೂರಕ್ಕೆ ಪೂರ ಬದಲಿಸಿಬಿಡುತ್ತದೆ. ಸೆಪ್ಟೆಂಬರ್ ೧೧, ನಮ್ಮ ಕಾಲದ ಒಂದು ಮುಖ್ಯ ಪಲ್ಲಟಕ್ಕೆ ಮತ್ತು ನಂತರದ ಘಟನೆಗಳಿಗೆ ಹೇಗೆ ಕಾರಣವಾಗಿದೆಯೋ ಮತ್ತು ಅದಿಲ್ಲದೇ ನ್ಯೂ ಯಾರ್ಕ್ ನಗರವನ್ನಾಗಲೀ ಅಥವಾ ಪ್ರಪಂಚದ ವಿದ್ಯಮಾನಗಳನ್ನಾಗಲೀ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೇ ಈ ಪೋರ್ಚುಗೀಸರ ಆಕ್ರಮಣವಿಲ್ಲದ ಗೋವೆಯನ್ನೂ ನಾವು ಕಲ್ಪಿಸಿಕೊಳ್ಳಲಾಗದು. ಅಫ಼್ಗಾನಿಸ್ತಾನವೆಂದರೆ ಎಲ್ಲಿದೆಯೆಂದು ಗೊತ್ತಿಲ್ಲದ ಅಮೆರಿಕನ್ನರಿಗೂ ಮನೆಯಬಾಗಿಲಿನಲ್ಲಿಯೇ ವಿಮಾನಗಳು ಕಟ್ಟಡಗಳನ್ನು ಹೊಡೆದು ಕೆಡವಿದಾಗ ತಮ್ಮ ಅರಿವಿನ ವಿಸ್ತಾರ ಅನಿವಾರ್ಯವಾಗಿತ್ತು. ಹಾಗೆಯೇ ಮತ್ತುತಮ್ಮ ಸಂಸಾರದ ಉಸಾಬರಿಯನ್ನು ಬಿಟ್ಟು ಬೇರೇ ಯಾವ ರಾಜಕೀಯ ಆಸಕ್ತಿಯೂ ಇಲ್ಲದ ಗೋವೆಯ ಸಾರಸ್ವತ ಬ್ರಾಹ್ಮಣರು ಇಂಥಾ ಒಂದು ಸನ್ನಿವೇಶವನ್ನು ಎದುರಿಸಿದಾಗ ವಲಸೆ ಅನಿವಾರ್ಯವಾಯಿತು.
ಚರಿತ್ರೆಯಲ್ಲಿ ಇಂಥ ದುರಂತಗಳು ಮತ್ತು ನಂತರದ ವಲಸೆಗಳೂ ಹಲವಾರು ಬಾರಿ ನಡೆದಿದೆ. ಉದಾಹರಣೆಗೆ ಹಿಟ್ಲರನ ಮಾರಣಹೋಮದ ನಂತರದ ಯಹೂದಿಗಳ ವಲಸೆ. ಇಡೀ ಪ್ರಪಂಚದಾದ್ಯಂತ ಯಹೂದಿಗಳು ವಲಸೆಹೋದರು. ಹೋದರಷ್ಟೇ ಅಲ್ಲ, ತಮ್ಮ ನಂಬಿಕೆಗಳನ್ನು, ಧರ್ಮವನ್ನು ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಈ ಯಹೂದಿಗಳ ವಲಸೆಗೂ ಮತ್ತು ಪೈಗಳ ಸಾರಸ್ವತ ವಲಸೆಯಲ್ಲಿಯೂ ಕೆಲವು ಸಾಮ್ಯತೆಗಳಿವೆ. ಎರಡಕ್ಕೂ ಈ ಸಾವುನೋವುಗಳ ಮತ್ತು ಹಿಂಸೆಯ ಮಟ್ಟದಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೆ, ಒಂದು ವ್ಯಕ್ತಿಯ ಮಟ್ಟದಲ್ಲಿ ಅಥವಾ ಒಂದು ಕುಟುಂಬದ ಮಟ್ಟದಲ್ಲಿ ಈ ಆಘಾತ ಒಂದೇ ಎಂದು ನನ್ನ ಭಾವನೆ. ಒಂದು, ಇಬ್ಬರೂ ತಮ್ಮ ದೈವವನ್ನು, ನಂಬಿಕೆಯನ್ನು ನಂಬಿಯೇ ಅದರ ಬುಡಕ್ಕೇ ಪೆಟ್ಟುಬಿದ್ದಾಗ ವಲಸೆ ಹೊರಡಲು ನಿರ್ಧರಿಸಿದ್ದು, ಎರಡನೆಯದು ಈ ವಲಸೆಯೆಂಬ ಕ್ರಿಯೆಯ ಅನೇಕ ಏಳುಬೀಳುಗಳನ್ನು ಅನುಭವಿಸಿದ್ದು. ಮೂರನೆಯದಾಗಿ ವಲಸೆಹೋದ ನಾಡಲ್ಲಿ ಬೀಡು ಬಿಟ್ಟರೂ ತಮ್ಮ ದೈವದ ಬಗ್ಗೆ ಪೀಳಿಗೆಗಳ ನಂತರವೂ ಅಪಾರ ನಂಬುಗೆಯನ್ನು ಉಳಿಸಿಕೊಳ್ಳುವುದು. ಈಗಲೂ ಜಗತ್ತಿನ ಅನೇಕ ಜಗತ್ತಿನ ಮಹಾನಗರಗಳಲ್ಲಿ ಅನೇಕ ದೊಡ್ಡದೊಡ್ಡ ವ್ಯವಹಾರಗಳ ಸ್ವಾಮ್ಯವನ್ನು ಈ ಯಹೂದಿಗಳು ಹೊಂದಿದ್ದಾರೆ, ಅಷ್ಟೇ ಅಲ್ಲ ಈಗಲೂ ತಮ್ಮ ವೇಷಭೂಷಣಗಳಿಂದ ಹಿಡಿದು ಸಂಪ್ರದಾಯಗಳಲ್ಲಿಯೂ ಹೇಗೆ ತಮ್ಮತನವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ತಾವೆಲಿ ನೆಲೆಸಿದ್ದಾರೋ ಆ ಸಮಾಜದ ಜನಜೀವನವನ್ನು ಕೂಡ ಒಂದು ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಸದರ್ನ್ ಬ್ಯಾಪ್ಟಿಸ್ಟ್, ಲ್ಯುಥೆರನ್ ಇತ್ಯಾದಿ ಕ್ರಿಶ್ಚಿಯನ್ ಪಂಗಡಗಳಂತೆ ಈ ಯಹೂದಿಗಳದ್ದೂ ಇನ್ನೊಂದು ಪಂಗಡವೆಂಬಂತೆ ಕಾಣುತ್ತದೆ. ಯಾವುದೇ ವಲಸೆಯಲ್ಲಿ ಇದು ಅನಿವಾರ್ಯ ಕೂಡ..
ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಯಿಡುವುದು ಮತ್ತು ಆ ಕ್ರಿಯೆಯಲ್ಲಿ ಆತನ ಅನುಭವ ವ್ಯಕ್ತಿಯ ಮಟ್ಟದಲ್ಲಿ ಇದಕ್ಕಿಂತಾ ಹೊರತಾದುದೇನಲ್ಲ. ಒಂದು ಕುಟುಂಬದ ಅನುಭವ ಸಮಷ್ಟಿಗೆ ಸಮೀಕೃತವಾಗುವುದು ಹೀಗಲ್ಲವೇ?
ಆದರೆ, ಪೈರವರ ಆಸಕ್ತಿ ಬರೇ ವಲಸೆಗೆ ಮಾತ್ರ ಸೀಮಿತವಾದುದಲ್ಲ. ನಂತರದ ಕಥನ ಮಹಾಭಾರತದಂತೆ ವಿರಾಟ ಸ್ವರೂಪವನ್ನು ಪಡೆಯುತ್ತದೆ. ರಾಮಚಂದ್ರ ಪೈನ ತಾತ ವಿಟ್ಟುಪೈ ನ ಕಥನ ಮುಕ್ಕಾಲುವಾಸಿ ವಲಸೆ ಮತ್ತು ಆ ಕ್ರಿಯೆಯಲ್ಲಿನ ಸಂಕೀರ್ಣತೆಯನ್ನು ಹೇಳುತ್ತಾ ಹೋಗುತ್ತದೆ. ಒಂದಿಷ್ಟು ಸಾವು, ಕಳ್ಳತನ, ನಾಗೇಶಹೆಗಡೆಯ ಹುಚ್ಚು ಇತರೇ ಸಂಗತಿಗಳ ಮೂಲಕ ಪ್ರಯಾಣ ಮತ್ತು ವಲಸೆ ರುದ್ರಭೀಕರವಾಗಿ ಮುಂದುವರೆಯುತ್ತದೆ. ಲೇಖಕರು ಕಾಲವನ್ನು ಜತೆಜತೆಗೂ ಬೆಳೆಸುವುದಕ್ಕೆ ಆಯಾಕಾಲದ ಚಾರಿತ್ರಿಕ ಘಟನೆ ಮತ್ತು ವ್ಯಕ್ತಿಗಳನ್ನು ಸೂಕ್ತವಾಗಿ ಹೆಸರಿಸುತ್ತಾ ಹೋಗುತ್ತಾರೆ,..
ಇಲ್ಲಿ ಮತ್ತೆ ಮತ್ತೆ ಗಮನಿಸಬೇಕಾದ ವಿಷಯವೆಂದರೆ ಪೈರವರ ಶೈಲಿ. ಗೋವಾದಲ್ಲಿ ಆಲ್ಬುಕೇರ್ಕನ ಕಥೆಯನ್ನು ಹೇಳುತ್ತಿರಲಿ, ಮಂಜೇಶ್ವರದ ಸ್ವಾಮಿಗಳು ಚಾತುರ್ಮಾಸಕ್ಕೆ ಕೂತಿರಲಿ, ವಿಟ್ಟು ಪೈ ಭಿಕ್ಷೆ ಬೇಡಲಿ ಅಥವಾ ರಾಮಚಂದ್ರ ಪೈ ನಾಗ್ಡೋ ಬೇತಾಳನ ಜತೆ ತೀವ್ರವಾಗಿ ಸಂಭಾಷಿಸುತ್ತಿರಲಿ, ಒಂದೊಂದೇ ಭಾಗವನ್ನು ಬಿಡಿಡಿಯಾಗಿ ಓದಿದರೆ ಅದು ವರ್ತಮಾನದಲ್ಲಿ ನಡೆದಂತೇ ಕಾಣುತ್ತದೆ. ಉದಾಹರಣೆಗೆ ಕಾದಂಬರಿಯ ಮೊದಲ ಭಾಗದಲ್ಲಿ ಪೋರ್ಚುಗೀಸ ಆಲ್ಬುಕೇರ್ಕನ ನ ಕಥೆಯಿದೆ, ಕೊನೆಗೆ ಸಿದ್ದು ಪೈ ಹಾವು ಕಚ್ಚಿ ಸಾಯುವ ಘಟನೆಯಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪುಟ ತಿರುಗಿಸಿ ಓದಿದಾಗ ಯಾವುದೋ ಬೇರೆ ಕಾಲದಲ್ಲಿ ನಡೆದಂತೆ ಅನಿಸುವುದಿಲ್ಲ. ಮಧ್ಯೆ ನಾನೂರು ವರ್ಷಗಳ ಅಂತರವಿದೆ ಎನ್ನುವುದನ್ನು ನಾವು ಗಮನಿಸಬೇಕು. ಇದು ಅಕ್ಷರಗಳ ಸೌಂದರ್ಯ. ಇದನ್ನೇ ದೃಶ್ಯ ಮಾಧ್ಯಮದಲ್ಲಿ ಸೆರೆಹಿಡಿಯಲು ನೋಡಿದ್ದಲ್ಲಿ ನಾನೂರು ವರ್ಷಗಳ ಹಿಂದಿನ ಕಾಲವನ್ನು ಪುನರ್ನಿರ್ಮಿಸಲು ನಮ್ಮ ಪ್ರಸಾಧನಕಾರರು, ಮತ್ತು ಸೆಟ್ ಹಾಕುವವರು ಮಾಡುವ ಸರ್ಕಸ್ಸನ್ನು ಕಲ್ಪಿಸಿಕೊಳ್ಳಬಹುದು. (ಕೆಲವೊಂದು ಪಿರಿಯಡ್ ಸಿನೆಮಾಗಳನ್ನು ನೋಡಿದಲ್ಲಿ ಈ ಘಟನೆ ಸ್ಪಷ್ಟವಾದೀತು.) ಆದರೆ, ದೃಶ್ಯಗಳಲ್ಲಿ ಕಾಲವನ್ನು ಪರಿಣಾಮಕಾರಿಯಾಗಿ ಪುನರ್ನಿರ್ಮಿಸಿದಂತೆ ಅಕ್ಷರಗಳಲ್ಲಿ ನಿರ್ಮಿಸಲು ಸಾಧ್ಯವಾಗದು. ನಾವೇನೇ ಬರೆದರೂ ವರ್ತಮಾನದ ಓದುಗನನ್ನು ಗಮನದಲ್ಲಿಟ್ಟುಕೊಂದೇ ಬರೆಯುವುದರಿಂದ, ಅವನಿಗೆ ನನ್ನ ಈ ಕಥೆ ಹೇಗೆ ಕನೆಕ್ಟ್ ಆಗುತ್ತದೆ ಎನ್ನುವುದು ಮುಖ್ಯವಾದಾಗ ಅಲ್ವೀರಾಳ ಕಥನವಾಗಲೀ, ನರಸಪ್ಪನವರ ಸಾವಾಗಲೀ, ರಾಮಚಂದ್ರ ಪೈ ಹೊಂದಿಸುವ ಸಂಬಂಧಗಳಾಗಲೀ ಎಲ್ಲವೂ ಅವು ನಡೆಯುವ ಕಾಲದ ಹಂಗಿಲ್ಲದೇ ಇದೀಗ ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ ಎಂದು ಓದಿಕೊಳ್ಳುವುದು ಸಾಧ್ಯ. ಕಾದಂಬರಿಯ ಪ್ರಕಾರದಲ್ಲಿ ಈ ಕಾಲವನ್ನು ಒಂದು ಎಳೆಯಿಂದ ಒಂದುಗೂಡಿಸುವ ಕಾರ್ಯ ಸುಲಭಸಾಧ್ಯವಲ್ಲ. ಅದಕ್ಕೆ ತಪಸ್ಸಿನಂತಹ ಧ್ಯಾನ ಮತ್ತು ಏಕಾಗ್ರತೆಯ ಅವಶ್ಯಕತೆಯಿದೆ. ನಾಲ್ಕೇ ದಿನಗಳಲ್ಲಿ ನಡೆಯುವ ಕಥೆಯನ್ನೂ ಬರೆದಾಗ ಈ ಏಕಾಗ್ರತೆಯಿಲ್ಲದಿದ್ದರೆ ಹಳಿತಪ್ಪುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಪೈಯವರ ಯಶಸ್ಸಿದೆ.
ಒಬ್ಬ ಕಾದಂಬರಿಕಾರನಿಗೆ ಇಂಥ ಬೃಹತ್ ಕಾದಂಬರಿಯನ್ನು ಬರೆಯಬೇಕಾದರೆ ಅದಕ್ಕೆ ಬೇಕಾದ ಸಿದ್ಧತೆ ಮತ್ತು ಶ್ರಮ ಎಷ್ಟಿದೆಯೆಂಬ ಕಲ್ಪನೆಯೇ ನನ್ನನ್ನು ವಿನಮ್ರನನ್ನಾಗಿಸಿದೆ. ನಾನೂರು ವರ್ಷದ ಚರಿತ್ರೆಯನ್ನು ಓದಿದರೆ ಸಾಲದು, ರಾಜರುಗಳ ಚರಿತ್ರೆಯನ್ನು ಓದಿ ಆ ಕಾಲದಲ್ಲಿ ಜನಜೀವನ ಹೇಗಿತ್ತು ಎಂದು ಕಲ್ಪಿಸಿಕೊಂಡು ಅದನ್ನು ಮುಂದುವರೆಸುತ್ತ ಹೋಗುವುದು ಒಂದು ಸವಾಲಾದರೆ, ಬರೇ ಕಾದಂಬರಿಯ ವ್ಯಾಪ್ತಿಗಾಗಿಯೇ ಸೃಷ್ಟಿಸಿಕೊಂಡ ಅನೇಕ ಪಾತ್ರಗಳನ್ನು ಮುಂದುವರೆಸುವುದಲ್ಲದೇ ಅನೇಕ ಸಡಿಲ ಎಳೆಗಳನ್ನು ತಾಂತ್ರಿಕ ಕಾರಣಗಳಿಗಾಗಿಯಾದರೂ ಒಂದು ಗೂಡಿಸಬೇಕಾಗುತ್ತದೆ. ನಾಲ್ಕುನೂರು ವರ್ಷಗಳ ಅವಧಿಯಲ್ಲಿ ಸಹಜವಾದ ಹುಟ್ಟುಸಾವುಗಳು ಕಾದಂಬರಿಯಲ್ಲಿ ಸತತವಾಗಿ ಬರತೊಡಗಿದಾಗ ಕೆಲವೊಮ್ಮೆ ಬೋರುಹೊಡೆಸಬಹುದು. ಕೆಲವೊಮ್ಮೆ ಕಥೆಗಾರರು ಕಥಾನುಕೂಲಕ್ಕೆ ಪಾತ್ರಗಳನ್ನು ಸೃಷ್ಟಿಸಿದರು ಮತ್ತು ಸಾಯಿಸಿದರು ಎಂದು ಅನಿಸಬಹುದು. ಎಷ್ಟೋ ಪಾತ್ರಗಳ ಅವಶ್ಯಕತೆಯ ಬಗ್ಗೆಯೇ ಅನುಮಾನ ಬರಬಹುದು.
ಸ್ಪೇನಿನ ಕಾದಂಬರಿಕಾರ 'ಮರಿಯೋ ವಾರ್ಗಸ್ ಲೋಸ' ನ ಒಂದು ಮಾತು ನೆನಪಿಗೆ ಬರುತ್ತದೆ. ಒಂದು ಮಹತ್ವದ ಕಾದಂಬರಿ ಏನೂ ಮಹತ್ವವಾದದ್ದನ್ನು ಹೇಳುತ್ತಿದೆ ಎಂದು ಹೇಳಿಕೊಂಡು ಬರೆಯಲ್ಪಡುವುದಿಲ್ಲ. ಹೀಗೆ ಮಹತ್ತರವಾದುದನ್ನು ಮಹತ್ತರವಾದ ಘಟನೆಗಳ ಮೂಲಕ ವರ್ಣಿಸದೇ ಪ್ರತಿ ಸಾಮಾನ್ಯ ಘಟನೆಗಳನ್ನೂ ಸಾಮಾನ್ಯವಾಗಿಯೇ ಸೆರೆಹಿಡಿಯುವುದರಿಂದ ಅದು ಮಹತ್ತರವಾಗುತ್ತದೆ.' ನಮ್ಮ ಜೀವನವನ್ನೇ ಉದಾಹರಣೆಗೆ ತೆಗೆದುಕೊಂಡರೆ ಒಂದು ವರ್ಷದಲ್ಲಿ ನಮ್ಮ ಲೆಕ್ಕದಿಂದ ಮಹತ್ವವಾದ ಘಟನೆಗಳು ನಡೆಯುವುದು ಪಾಯಶಃ ಕೇಲವೇ ಕೆಲವು ದಿನಗಳಲ್ಲಿ- ಮಕ್ಕಳ ಹುಟ್ಟುಹಬ್ಬ, ಒಂದು ಪ್ರೊಮೋಶನ್, ಒಂದಿಷ್ಟು ಪಾರ್ಟಿಗಳು, ನಾಲ್ಕು ಮದುವೆ, ಓದಿದ ಪುಸ್ತಕಗಳು, ನೋಡಿದ ಸಿನೆಮಾ, ಹುಟ್ಟು ಮತ್ತು ಸಾವು. ಹುಟ್ಟು ಸಾವುಗಳು ಯಾವಾಗಲೂ ಬರುವುದಿಲ್ಲ. ಪರಿಚಿತರ, ಬಂಧುಗಳ ಹುಟ್ಟು ಸಾವುಗಳು ಅನಿರೀಕ್ಶಿತವಾಗಿದ್ದರೆ ಮಾತ್ರ ಮುಖ್ಯವಾಗುತ್ತದೆ, ಮಕ್ಕಳ ಹುಟ್ಟುಹಬ್ಬಗಳು, ವಿವಾಹದ ವಾರ್ಷಿಕೋತ್ಸವ್ವ ಎಲ್ಲವೂ ಕೊಂಚ ಕಾಲದನಂತರ ಪೇಲವವಾಗಿಯಾದರೂ ಮುಖ್ಯವಾಗಿ ನೆನಪಿನಲ್ಲಿ ನಿಂತುಕೊಳ್ಳುತ್ತವೆ.
ಒಬ್ಬ ಕಾದಂಬರಿಕಾರನೂ ಮನುಷ್ಯನಾದ್ದರಿಂದ ಆತ ಏನೇ ಓದಿ ಬರೆದರೂ ಅಥವಾ ತನ್ನ ಅನುಭವದ ಮೇಲೆ ಕಾದಂಬರಿ ಬರೆದರೂ ಈ ನೆನಪಿರುವ ಮಹತ್ವದ ಘಟನೆಗಳ ರೋಚಕತೆಗೆ ಮತ್ತು ಅವುಗಳನ್ನು ದಾಖಲಿಸುವ ಆಮಿಷದಿಂದ ದೂರವಿರುವುದು ಕೊಂಚ ಕಷ್ಟ. ಅದು ಬಿಟ್ಟು ದೈನಿಕವನ್ನು, ಋತುವನ್ನು, ಎಂದೋ ನಡೆದ ಚಾತುರ್ಮಾಸ ಪೂಜೆಯನ್ನು, ಮದುವೆ ಸಂಬಂಧದ ಮಾತುಕತೆಗಳನ್ನು, ಹುಟ್ಟು ಸಾವುಗಳನ್ನು ದೈನಿಕದ ವಿವರಗಳಂತೆ ಬರೆಯುವುದು ಅಷ್ಟು ಸುಲಭವಲ್ಲ. ಇದು ವಿಶೇಷವಾದದ್ದೇನೂ ನಡೆಯದ ನಮ್ಮ ದಿನವೊಂದರ ಬಗ್ಗೆ ಬರೆದಂತೆ. ಇಂಥ ವಿಷಯ ಬಂದಾಗ ನಾಲ್ಕುನೂರಕೂ ಹೆಚ್ಚುವರ್ಷಗಳ ಕಾಲದ ದೈನಿಕವನ್ನು ದೈನಿಕವಾಗಿಯೇ ಚಿತ್ರಿಸಿರುವುದರಲ್ಲಿ ಪೈರವರ ಯಶಸ್ಸಿದೆ. ಹಾಗಾಗಿ ಪೋರ್ಚುUಗಿಸರಿಂದಾದ ಮುಸ್ಲಿಮರ ನರಮೇಧ, ನಂತರವಾದ ಕ್ರೈಸ್ತಮತದ ಮತಾಂತರ, ಅವರ ವಲಸೆ, ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಸಿದ್ದು ಮತ್ತು ಅವನ ಜೀವನ ಇವೆಲ್ಲ ಇಲ್ಲಿನ ಅಸಂಖ್ಯ ಪಾತ್ರಗಳ ದೈನಿಕರೇಖೆಯನ್ನು ಸೇರಿಸುವ ಚುಕ್ಕಿಗಳಾಗಿ ಮಾತ್ರ ಕಾಣುತ್ತವೆ. ಆ ರೇಖೆಯ ಅಂದ ಚುಕ್ಕಿಗಳಿಂದ ಮಾಸಿಲ್ಲ.
ರೇಖೆಯೊಂದು ಅನೇಕ ಚುಕ್ಕಿಗಳ ಗಣವೇ ಆದರೂ ರೇಖೆ ರೇಖೆಯಂತೆ ಕಾಣಲು ಚುಕ್ಕಿಗಳು ಮಸುಕಾಗಲೇಬೇಕು. ಇಂಥ ಒಂದು ರೇಖೆಯ ಸೃಷ್ಟಿಯಲ್ಲಿ ಪೈರವರು ಯಶಸ್ವಿಯಾಗಿದ್ದಾರೆ.
ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲು | Will CBI be able to crack Techie Ajitab missing case - Kannada Oneindia
12 min ago ಗುಂಡು ತಗುಲಿದ್ದರೂ ಆಂಬುಲೆನ್ಸ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಟಿಡಿಪಿ ಅಭ್ಯರ್ಥಿ
17 min ago ಲೋಹಿಯಾಗೆ ಮೋಸ ಮಾಡಿದವ್ರು ದೇಶ ಬಿಡ್ತಾರಾ? ಮೋದಿ ಚಾಟಿಯೇಟು
30 min ago ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಗೆಲುವು ಸುಲಭವಲ್ಲ
35 min ago ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುವೆ: ಪ್ರಮೋದ್ ಮಧ್ವರಾಜ್
ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲು
| Updated: Thursday, December 6, 2018, 14:03 [IST]
ಬೆಂಗಳೂರು, ಡಿಸೆಂಬರ್ 06 : ಎಫ್‌ಐಆರ್ ದಾಖಲು ಮಾಡಿಕೊಂಡು ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. 2017ರ ಡಿಸೆಂಬರ್‌ನಿಂದ ಟೆಕ್ಕಿ ನಾಪತ್ತೆಯಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ಆದೇಶದಂತೆ ಸಿಐಡಿ ಕುಮಾರ್ ಅಜಿತಾಬ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಿದೆ. ಎಸ್‌ಐಟಿ ಮತ್ತು ಸಿಐಡಿ ಒಂದು ವರ್ಷಗಳ ಕಾಲ ತನಿಖೆ ನಡೆಸಿದರೂ ಟೆಕ್ಕಿ ನಾಪತ್ತೆ ಪ್ರಕರಣ ಚಿದಂಬರ ರಹಸ್ಯವಾಗಿ ಉಳಿದಿದೆ.
ಬೆಂಗಳೂರು ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ, ಸಿಬಿಐನಲ್ಲಿ ಎಫ್‌ಐಆರ್‌
ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಸಿಐಡಿ ಪೊಲೀಸರು 1000 ಪುಟಗಳ ತನಿಖಾ ವರದಿಯನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದಾರೆ.
ಅಜಿತಾಬ್ ಓಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕೆ ಇಟ್ಟಿದ್ದರು. ಕಾರು ನೋಡಲು ಕರೆ ಮಾಡಿದ ವ್ಯಕ್ತಿ ಜೊತೆ ಕೊನೆಯದಾಗಿ ಅವರು ಮಾತನಾಡಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್‌ ಆಫ್‌ ಆಗಿದ್ದು, ಅವರು ಸಹ ನಾಪತ್ತೆಯಾಗಿದ್ದಾರೆ.
1.45 ಲಕ್ಷ ಫೋನ್ ನಂಬರ್
ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್‌ ಪೊಲೀಸರು ಎಸ್ಐಟಿ ರಚನೆ ಮಾಡಿದ್ದರು. ನಂತರ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಯಿತು. ತನಿಖೆಯ ವೇಳೆ ಇಬ್ಬರೂ ಸೇರಿ ಸುಮಾರು 1.45 ಲಕ್ಷ ಫೋನ್ ಸಂಖ್ಯೆಗಳ ಬಗ್ಗೆ ತನಿಖೆ ನಡೆಸಿದ್ದಾರೆ. ಆದರೆ, ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕೋಲಾರದಲ್ಲಿ ಸಿಮ್ ಖರೀದಿ
ತನಿಖೆ ನಡೆಸಿದ ಪೊಲೀಸರಿಗೆ ಕೋಲಾರದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿದ ಮಾಹಿತಿ ಲಭ್ಯವಾಗಿತ್ತು. ತನಿಖೆ ನಡೆಸಿದಾಗ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಸಿಮ್ ಖರೀದಿ ಮಾಡಿದ್ದ. ಆದರೆ, ನೀಡಿದ್ದ ದಾಖಲೆಗಳು ನಕಲಿಯಾಗಿದ್ದವು. ಕೋಲಾರದಲ್ಲಿ ಖರೀದಿ ಮಾಡಿದ್ದ ಸಿಮ್‌ನಿಂದ ಅಜಿತಾಬ್‌ಗೆ ಕೊನೆಯದಾಗಿ ಕರೆ ಬಂದಿತ್ತು.
2 ಬಾರಿ ವಾಟ್ಸಪ್ ಕರೆ
ಅನಾಮಧೇಯ ವ್ಯಕ್ತಿ ಮತ್ತು ಅಜಿತಾಬ್ ನಡುವೆ 2 ಬಾರಿ ವಾಟ್ಸಪ್ ಕರೆ ಮೂಲಕ ಸಂಭಾಷಣೆ ನಡೆದಿತ್ತು ಎಂಬ ಮಾಹಿತಿಯನ್ನು ಸಿಐಡಿ ಕಲೆ ಹಾಕಿತ್ತು. ಡಿಸೆಂಬರ್ 17ರ ರಾತ್ರಿ 7.30ಕ್ಕೆ ಕೊನೆಯ ಕರೆ ಬಂದಿದೆ. ಬಳಿಕ ಆ ನಂಬರ್ ಸ್ವಿಚ್‌ ಆಫ್‌ ಆಗಿದೆ. ಅಜಿತಾಬ್ ನಾಪತ್ತೆಯಾಗಿದ್ದಾರೆ.
ಲಾರಿಯಲ್ಲಿ ಸಿಕ್ಕ ಫೋನ್
ಅಜಿತಾಬ್‌ಗೆ ಕರೆ ಮಾಡಿದ ವ್ಯಕ್ತಿಯ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರಿಗೆ ಹೆಬ್ಬಾಳದಲ್ಲಿ ಕೊನೆಯದಾಗಿ ಲೋಕೇಷನ್ ಪತ್ತೆಯಾಗಿತ್ತು. ಪೋನ್ ಸ್ವಿಚ್‌ ಆಫ್‌ ಮಾಡಿ ಲಾರಿ ಮೇಲೆ ಎಸೆಯಲಾಗಿತ್ತು. ಲಾರಿ ಚಾಲಕನನ್ನು ವಿಚಾರಣೆ ನಡೆಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಸಿಬಿಐ ಪ್ರಕರಣವನ್ನು ಬಯಲು ಮಾಡಲಿದೆಯೇ?.