text
stringlengths
0
61.5k
ಮುಂಡರಗಿ–ಶಿರಹಟ್ಟಿ ರಸ್ತೆಯ ಕಣವಿ ದುರುಗಮ್ಮನ ಗುಡಿಯ ಸಮೀಪ ಶುಕ್ರವಾರ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಎರಡು ವರ್ಷ ಪ್ರಾಯದ ತೋಳವೊಂದು ತೀವ್ರವಾಗಿ ಗಾಯಗೊಂಡಿತ್ತು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತೋಳದ ಬೆನ್ನುಮೂಳೆ ಮುರಿದಿತ್ತು. ಮುಂಗಾಲಿನ ಬೆರಳುಗಳು ತುಂಡಾಗಿದ್ದವು. ನಡೆಯಲು ಸಾಧ್ಯವಾಗದ ತೋಳ ರಸ್ತೆ ಬದಿಯಲ್ಲಿ ಬಿದ್ದು, ನರಳುತ್ತಿತ್ತು.
ರಾತ್ರಿ ಮುಂಡರಗಿಯಿಂದ ಡೋಣಿ ತಾಂಡಾಕ್ಕೆ ಹೋಗುತ್ತಿದ್ದ ಮುರುಡಿ ತಾಂಡಾದ ರಾಜು ಡಾವಣಗೇರಿ ಮತ್ತು ಕೆಲವು ಯುವಕರು ಗಾಯಗೊಂಡಿದ್ದ ಈ ತೋಳವನ್ನು ಗಮನಿಸಿ ತಕ್ಷಣ ಅದರ ನೆರವಿಗೆ ಬಂದರು. ಅರಣ್ಯ ಇಲಾಖೆಗೆ ಸಿಬ್ಬಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಯುವಕರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿ ಆರ್.ಜೆ.ಲಮಾಣಿ ಸ್ಥಳಕ್ಕೆ ಬಂದು, ಗಾಯಗೊಂಡಿದ್ದ ತೋಳವನ್ನು ವಾಹನದಲ್ಲಿ ಮುಂಡರಗಿ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ವೈದ್ಯಾಧಿಕಾರಿ ಡಾ.ಪಿ.ಬಿ.ಮುದ್ನಾಳ ಅವರು ತೋಳಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗದುಗಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಕಳಹಿಸಿದರು.
ತೋಳಕ್ಕೆ ಸಕಾಲದಲ್ಲಿ ಚಿಕಿತ್ಸೆಗೆ ನೆರವಾದ ಮುರುಡಿ ತಾಂಡಾದ ಉಮೇಶ ಚನ್ನಪ್ಪ ಲಮಾಣಿ. ಲಾಲು ಠಾಕ್ರೆ ಪೂಜಾರ, ಉಮೇಶ ಪಾಂಡಪ್ಪ ಪೂಜಾರ, ಆನಂದ ಪವಾರ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವಕರ ಮಾನವೀಯತೆ ಒಂದು ಪ್ರಾಣಿಯ ಆಯಸ್ಸನ್ನು ಹೆಚ್ಚಿಸಿದೆ. ಗಂಭೀರ ಗಾಯಗಳೊಂದಿಗೆ ನರಳುತ್ತಿರುವ ತೋಳದ ಜೀವ ಉಳಿಸಲು ಮೃಗಾಲಯದ ವೈದ್ಯರು ಶ್ರಮಿಸುತ್ತಿದ್ದಾರೆ
ಯೂ ಟ್ಯೂಬ್'ನಿಂದ ಹಣ ಗಳಿಸಬಹುದೇ ? - Vishwavani Kannada Daily
Vishwavani Kannada Daily > ಪುರವಣಿ > ಗೆಜೆಟಿಯರ್ > ಯೂ ಟ್ಯೂಬ್'ನಿಂದ ಹಣ ಗಳಿಸಬಹುದೇ ?
ಯೂ ಟ್ಯೂಬ್'ನಿಂದ ಹಣ ಗಳಿಸಬಹುದೇ ?
ಮೋಹನದಾಸ ಕಿಣಿ, ಕಾಪು
ಯಾರು ಬೇಕಾದರೂ ವಿಡಿಯೋ ಅಪ್‌ಲೋಡ್ ಮಾಡಬಹುದಾದಂತಹ ಯುಟ್ಯೂಬ್‌ನ್ನು 2005ರಲ್ಲಿಚಾಡ್ ಹರ್ಲಿ, ಸ್ಟೀವ್ ಚೆನ್ ಮತ್ತು ಜಾವೇದ್ ಕರೀಮ್ ಎಂಬವರು ಕ್ಯಾಲಿಫೋರ್ನಿಯಾ ನಗರ ಉಪಾಹಾರ ಗೃಹದ ಕೊಠಡಿಯೊಂದರಲ್ಲಿ ಯಾವುದೇ ನಿರ್ದಿಷ್ಟ ನಿರೀಕ್ಷೆ, ಗುರಿಯಿಲ್ಲದೆ ಆರಂಭಿಸಿದರು. ಸಣ್ಣ ದಾಗಿ ಆರಂಭವಾದ ಯೂಟ್ಯೂಬ್ ಇಂದು ವಿಶ್ವದ ನಾಲ್ಕನೇ ಅತಿ ದೊಡ್ಡ ಜಾಲತಾಣವಾಗಿದೆ.
ಜಾವೇದ್ ಕರೀಂ ಸೃಷ್ಟಿಸಿದ 'ಮಿ ಅಟ್ ದಿ ಝೂ' ಈ ಜಾಲತಾಣದ ಮೊತ್ತ ಮೊದಲ ವೀಡಿಯೊ. 2006ರಲ್ಲಿ ಗೂಗಲ್ ಯುಟ್ಯೂಬ್‌ನ್ನು ಖರೀದಿಸಿತು. ಬಳಕೆದಾರರೇ ನಿರ್ವಾಹಕರಾಗಿಯೂ-ವೀಕ್ಷಕರಾಗಿಯೂ ಇರುವ ವಿಶಿಷ್ಟ ಜಾಲತಾಣವಿದು. ಕೋಟ್ಯಂತರ ವೀಕ್ಷಕರಿರುವ ಯೂ ಟ್ಯೂಬ್ ವ್ಯಾಪಾರ, ಉದ್ಯಮಗಳಿಗೆ ಜಾಹೀರಾತು ನೀಡಲು ಉತ್ತಮ ವೇದಿಕೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಗ್ರಾಹಕರು ಮತ್ತು ಉದ್ಯಮಗಳ ಜತೆಯಲ್ಲಿ ವೀಕ್ಷಕರೂ ಇದರಿಂದ ಆದಾಯ ಗಳಿಸಬಹುದು. ಜನಸಾಮಾನ್ಯರೂ ಯಾವುದೇ ವಿಷಯದಲ್ಲಿ ವೀಡಿಯೊ ಮಾಡಿ ಈ ಜಾಲತಾಣದಲ್ಲಿ ಅಳವಡಿಸಬಹುದು. ಇದರಲ್ಲಿ ಅಳವಡಿ ಸಲಾಗುವ ವೀಡಿಯೋಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ನೋಡಬಹುದು.
ಪ್ರಮುಖ ಚುನಾವಣೆಗಳಲ್ಲಿ ರಾಜಕೀಯ ಧುರೀಣರು ಪಕ್ಷದ ಪ್ರಚಾರದ ಜಾಹೀರಾತು ರೂಪದಲ್ಲೂ ಈ ವೇದಿಕೆಯನ್ನು ವಿಶ್ವಾ ದ್ಯಂತ ಉಪಯೋಗಿಸುತ್ತಾರೆ. ಆದರೆ ಉತ್ತರ ಕೊರಿಯಾ, ಚೀನಾ, ಇರಾನ್ ಸೇರಿದಂತೆ ಕೆಲವೊಂದು ರಾಷ್ಟ್ರಗಳಲ್ಲಿ ಇದಕ್ಕೆ ನಿಷೇಧ ವಿದೆ. ಈ ಕೆಳಗಿನ ಅಂಕಿಅಂಶಗಳು ಯೂಟ್ಯೂಬ್ ಎಷ್ಟು ಬೃಹತ್ ಜಾಲತಾಣವೆಂಬುದನ್ನು ತೋರಿಸುತ್ತದೆ.
*ತಲಾ ಹತ್ತು ಲಕ್ಷಕ್ಕೂ ಹೆಚ್ಚಿನ ವೀಕ್ಷಕರಿರುವ 16,000ಕ್ಕೂ ಹೆಚ್ಚು ಚಾನಲ್‌ಗಳು ಸಕ್ರಿಯವಾಗಿವೆ.
*ಪ್ರತೀ ತಿಂಗಳು 8 ರಿಂದ 15 ಲಕ್ಷದಷ್ಟು ವೀಡಿಯೋ ಸೇರ್ಪಡೆಯಾಗುತ್ತಿವೆ.
*ವಾರ್ಷಿಕ ಆದಾಯ ಸುಮಾರು 90,000 ಕೋಟಿ ಡಾಲರ್.
*ಪ್ರತಿದಿನ 500 ಕೋಟಿ ವೀಡಿಯೋಗಳನ್ನು ವೀಕ್ಷಿಸಲಾಗುತ್ತದೆ. ದಿನವೊಂದರ ವೀಕ್ಷಕರ ಸಂಖ್ಯೆ ಸುಮಾರು 30 ದಶಲಕ್ಷ.
*2007ರಿಂದೀಚೆಗೆ ಯೂಟ್ಯೂಬ್ ತನ್ನ ಬ್ಲಾಗರುಗಳಿಗೆ (ವೀಡಿಯೊ ಮಾಡಿ ಹಾಕುವವರು) ಪಾವತಿಸಿದ ಮೊತ್ತ ಸುಮಾರು 1.50ಲಕ್ಷ ಕೋಟಿ ಡಾಲರ್.
ಯಾರು ವಿಡಿಯೋ ಹಾಕುವವರು?
*ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹಾಕುವವರದ್ದು ಒಂದು ವರ್ಗವಾದರೆ, ಕುತೂಹಲಕ್ಕೆೆಂದು ಆರಂಭಿಸಿ, ಆಗೊಮ್ಮೆ ಈಗೊಮ್ಮೆ ವೀಡಿಯೊ ಮಾಡಿ ಹಾಕುವ ವರ್ಗ ಇನ್ನೊಂದು. ಒಂದೋ ಎರಡೋ ವೀಡಿಯೊ ಹಾಕಿ ತೆಪ್ಪಗೆ ಇರು ವವರೂ ಸಾಕಷ್ಟು ಜನರಿದ್ದಾರೆ.
*ಕೆಲವರು ತಮ್ಮ ಉತ್ಪನ್ನಗಳ ವೀಡಿಯೊಗಳನ್ನು ಹಾಕಿದರೆ, ಜಾಹೀರಾತು ನೀಡುವವರದ್ದು ಇನ್ನೊಂದು ವರ್ಗ. ವೀಡಿಯೊ ಗಳನ್ನು ಹಾಕಲು ಶುಲ್ಕವಿಲ್ಲ; ಆದರೆ ಜಾಹೀರಾತು ಹಾಕಲು ಶುಲ್ಕವಿದೆ.
*ಜಾಹೀರಾತುಗಳ ಮೂಲಕ ಬರುವ ಆದಾಯದ ಒಂದಂಶವನ್ನು, ವೀಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆೆಗನುಣವಾಗಿ, ವಿಡಿಯೋ ಹಾಕಿದವರಿಗೆ ಸಂಭಾವನೆ ರೂಪದಲ್ಲಿ ನೀಡಲಾಗುತ್ತದೆ. ಆದರೆ ಸಂಭಾವನೆ ಸಿಗಬೇಕಾದರೆ, ವೀಕ್ಷಕರ ಸಂಖ್ಯೆ ಮತ್ತು ಜಾಹೀರಾತು ವೀಕ್ಷಕರ ಸಂಖ್ಯೆ ಇಷ್ಟೇ ಇರಬೇಕೆಂಬ ಶರ್ತವಿದೆ.
10,000 ಜನ ನೋಡುವ ತನಕ ಯಾವುದೇ ಆದಾಯ ಗಳಿಸಲು ಸಾಧ್ಯವಿಲ್ಲ. ಕೆಲವರು ಪಡೆಯುವ ಆದಾಯ ಲಕ್ಷಗಳಲ್ಲಿ ಇರು ವುದೂ ಇದೆ! ಈ ಮೂಲಕ ಬರುವ ಆದಾಯವೇ ಕೆಲವರಿಗೆ ಜೀವನೋ ಪಾಯ. ನಾನು ನೋಡಿದ ಒಂದು ಚಾನಲಿನ ಬ್ಲಾಗರ್ ತನ್ನ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಇದರಿಂದ ಬರುವ ಆದಾಯದ ಮೂಲಕವೇ ಸಂಪಾದಿಸಿದ್ದರಂತೆ!
ವಿಡಿಯೋ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು, ಅದರಿಂದ ಹಣ ಗಳಿಸುವವರು ತಮ್ಮ ವಿಡಿಯೋಗಳನ್ನು ಹೆಚ್ಚು ಜನ ನೋಡುವಂತೆ ನಾನಾ ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ. ಅದರ ವಿವರ ಮುಂದಿನ ವಾರ ನೊಡೋಣ.
ಹಾಸನ ಜಿಪಂಗೆ ರಾಷ್ಟ್ರೀಯ ಪ್ರಶಸ್ತಿ | Udayavani – ಉದಯವಾಣಿ
Friday, 01 Jul 2022 | UPDATED: 01:28 AM IST
ಹಾಸನ ಜಿಪಂಗೆ ರಾಷ್ಟ್ರೀಯ ಪ್ರಶಸ್ತಿ
Team Udayavani, Apr 2, 2021, 2:11 PM IST
ಹಾಸನ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯು ಪಂಚಾಯತಿಗಳ ಸಬಲೀಕರಣಕ್ಕೆ ನೀಡುವ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಪಂ ಆಯ್ಕೆಯಾಗಿದೆ.
ಗ್ರಾಪಂ ಹಾಗೂ ತಾಪಂಗಳನ್ನು ಎಲ್ಲಾ ಸ್ವರೂಪಗಳಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಹಾಸನ ಜಿಪಂ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಗ್ರಾಮೀಣಾ ಭಿವೃದ್ಧಿಇಲಾಖೆ ನೀಡುವ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತಿ ಸಶಕ್ತೀರಣ ಪುರಸ್ಕಾರಕ್ಕೆ ಪಾತ್ರವಾಗಿದೆ. ಗ್ರಾಮ ಹಾಗೂ ತಾಪಂಗಳಿಗೆ ಸರ್ಕಾರದಿಂದಬಿಡುಗಡೆಯಾದ ಅನುದಾನ ಹಾಗೂಅನುಷ್ಠಾನಗೊಂಡ ಯೋಜನೆ ಗಳನ್ನು ಜನರಿಗೆತಲುಪಿಸುವಲ್ಲಿ ಹಾಸನ ಜಿಲ್ಲೆ ಯಶಸ್ವಿಯಾಗಿದೆ. ಜತೆಗೆಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರು, ನೈರ್ಮಲ್ಯ,ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನುಒದಗಿಸುವಲ್ಲಿ ಹೆಚ್ಚಿನ ಒತ್ತನ್ನು ನೀಡಿರುವುದೂ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಂಡಕ್ಕೆ ಮೀಸಲಿರಿಸಿದ ಸರ್ಕಾರದ ಎಲ್ಲಾ ಸೌಲಭ್ಯ ಹಾಗೂ ಅನುದಾನವನ್ನುಸಂಪೂರ್ಣವಾಗಿ ವಿನಿಯೋಗಿಸಿ ಆ ವರ್ಗಗಳ ಕಲ್ಯಾಣಕ್ಕೆಹೆಚ್ಚಿನ ಒತ್ತನ್ನು ನೀಡಿ ಅಭಿವೃದ್ಧಿಗೊಳಿಸಿರುವುದುಹಾಗೂ ಗ್ರಾಪಂಗಳಲ್ಲಿ ಹೆಚ್ಚಿನ ಗ್ರಾಮಸಭೆಗಳನ್ನುಕೈಗೊಂಡು ಸ್ಥಳೀಯರು, ಮಹಿಳೆಯರು ಹಾಗೂಹಿರಿಯ ನಾಗರಿಕರ ಸಲಹೆ ಸೂಚನೆಗಳನ್ನು ಸ್ವೀಕರಿಸಿಗ್ರಾಮಗಳ ಸಮಗ್ರ ಅಭಿವೃದ್ಧಿ ಒತ್ತು ನೀಡಲಾಗಿರುವಅಂಶಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಪರಿಗಣಿಸಲಾಗಿದೆ.
ಜಿಲ್ಲೆಯ ಶಾಲೆಗಳಲ್ಲಿ ಮೂಲ ಸೌಕರ್ಯ ಹಾಗೂ ಹೆಚ್ಚಿನ ನಿಗಾವಹಿಸಿ ಶಾಲಾ ಮಕ್ಕಳಿಗೆ ಗ್ರಂಥಾಲಯ, ಆಟದ ಮೈದಾನ, ಕುಡಿವ ನೀರಿನ ವ್ಯವಸ್ಥೆ, ಉತ್ತಮಶೌಚಾಲಯ ಸೌಲಭ್ಯ ಕಲ್ಪಿಸಿಕೊಟ್ಟು ಪರಿಣಿತ ಶಿಕ್ಷಕರನ್ನು ಒದಗಿಸಿ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆ ಆಕರ್ಷಿತರನ್ನಾಗಿ ಮಾಡುತ್ತಿರುವುದೂ ಗಮನಾರ್ಹ ಅಂಶವಾಗಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಸ್ವತ್ಛಭಾರತ ಅಭಿಯಾನವನ್ನು ಎಲ್ಲಾ ಗ್ರಾಪಂ ಮಟ್ಟದಲ್ಲಿಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಸಾರ್ವಜನಿಕರಿಗೆ ಅರಿವು ಮೂಡಿಸಿ ಸ್ವತ್ಛತೆಯನ್ನುಕಾಪಾಡಲು ಅನೇಕ ಕಾರ್ಯಕ್ರಮಗಳನ್ನುಕೈಗೊಂಡಿರುವುದೂ ಪ್ರಶಸ್ತಿಗೆ ಸಹಕಾರಿಯಾಗಿದೆ.ಜಿಪಂನಿಂದ ಸಾರ್ವಜನಿಕರ 863 ಅರ್ಜಿಗಳನ್ನುಹಾಗೂ ಆರ್‌ಟಿಐ ಯಡಿಯಲ್ಲಿ ಬಂದಂತಹಅರ್ಜಿಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ತಕ್ಷಣಸ್ಪಂದಿಸಿರುವುದು, ಜೊತೆಗೆ ಎಲ್ಲ ಯೋಜನೆಗಳಅನುಷ್ಠಾನದ ಬಗ್ಗೆ ಮಾಹಿತಿಯನ್ನು ಸರ್ಕಾರಕ್ಕೆಸಕಾಲದಲ್ಲಿ ಒದಗಿಸಿ ಉತ್ತಮ ಕಾರ್ಯನಿರ್ವಹಣೆ ಮಾಡಿವುದನ್ನು ಪರಿಗಣಿಸಲಾಗಿದೆ.
ಏ.24 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಮಾಡಲಾಗುವುದು ಮತ್ತು ಪ್ರಶಸ್ತಿಯ ಮೊತ್ತವನ್ನುನೇರ ವರ್ಗಾವಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಮುಖಪುಟ » ಇತ್ತೀಚಿನ ಸುದ್ದಿ ಲೇಖನಗಳು » ಏರ್ಲೈನ್ಸ್ » ಎಫ್‌ಆರ್‌ಎಯಲ್ಲಿ ಹೊಸ ಪ್ರಯಾಣಿಕರ ದಾಖಲೆ ಸಾಧಿಸಲಾಗಿದೆ
ಏರ್ಲೈನ್ಸ್ • ವಿಮಾನ ನಿಲ್ದಾಣ • ಬ್ರೆಜಿಲ್ ಬ್ರೇಕಿಂಗ್ ನ್ಯೂಸ್ • ಬ್ರೇಕಿಂಗ್ ಪ್ರಯಾಣ ಸುದ್ದಿ • ಬಲ್ಗೇರಿಯಾ ಬ್ರೇಕಿಂಗ್ ನ್ಯೂಸ್ • ವ್ಯಾವಹಾರಿಕ ಪ್ರವಾಸ • ಜರ್ಮನಿ ಬ್ರೇಕಿಂಗ್ ನ್ಯೂಸ್ • ಗ್ರೀಸ್ ಬ್ರೇಕಿಂಗ್ ನ್ಯೂಸ್ • ಸುದ್ದಿ • ಪೆರು ಬ್ರೇಕಿಂಗ್ ನ್ಯೂಸ್ • ಪತ್ರಿಕಾ ಪ್ರಕಟಣೆಗಳು • ರಷ್ಯಾ ಬ್ರೇಕಿಂಗ್ ನ್ಯೂಸ್ • ಸ್ಲೊವೇನಿಯಾ ಬ್ರೇಕಿಂಗ್ ನ್ಯೂಸ್ • ಪ್ರವಾಸೋದ್ಯಮ • ಸಾರಿಗೆ • ಪ್ರಯಾಣ ಗಮ್ಯಸ್ಥಾನ ನವೀಕರಣ • ಟ್ರಾವೆಲ್ ವೈರ್ ನ್ಯೂಸ್
ಫ್ರಾಪೋರ್ಟ್-ಸ್ಟೀಗರ್ಟ್-ಗೆವಿನ್
ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣ (ಎಫ್‌ಆರ್‌ಎ) 69.5 ರಲ್ಲಿ 2018 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸಿತು, ಹೀಗಾಗಿ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ದಾಖಲಿಸಿದೆ.
2017 ಕ್ಕೆ ಹೋಲಿಸಿದರೆ, ಜರ್ಮನಿಯ ಅತಿದೊಡ್ಡ ವಿಮಾನ ನಿಲ್ದಾಣದಲ್ಲಿ ದಟ್ಟಣೆಯು ಸುಮಾರು 5 ಮಿಲಿಯನ್ ಪ್ರಯಾಣಿಕರು ಅಥವಾ ಶೇಕಡಾ 7.8 ರಷ್ಟು ಹೆಚ್ಚಾಗಿದೆ. ಈ ಬಲವಾದ ಬೆಳವಣಿಗೆಯು ಎಫ್‌ಆರ್‌ಎಯಿಂದ ಹೊಸ ಸ್ಥಳಗಳಿಗೆ ಹೆಚ್ಚಿನ ಮಾರ್ಗಗಳನ್ನು ಪ್ರಾರಂಭಿಸುವುದರಿಂದ ಮತ್ತು ವಿಮಾನಯಾನ ಆವರ್ತನಗಳನ್ನು ಹೆಚ್ಚಿಸುತ್ತದೆ.
2018 ರ ಸಂಚಾರ ಅಂಕಿಅಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಫ್ರಾಪೋರ್ಟ್ ಎಜಿಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಟೀಫನ್ ಶುಲ್ಟೆ ಅವರು ಹೀಗೆ ಹೇಳಿದರು: "ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಮುಂದುವರೆದಿದೆ ಎಂದು ಹಿಂದಿನ ವರ್ಷ ಮತ್ತೊಮ್ಮೆ ಸಾಬೀತಾಗಿದೆ. ಫ್ರಾಂಕ್‌ಫರ್ಟ್‌ನಲ್ಲಿ, ನಮ್ಮ ಇತಿಹಾಸದಲ್ಲಿ ನಾವು ಅತಿ ಹೆಚ್ಚು ಪ್ರಯಾಣಿಕರ ಬೆಳವಣಿಗೆಯನ್ನು ಸಾಧಿಸಿದ್ದೇವೆ. ಇದು ಯುರೋಪಿನ ಪ್ರಮುಖ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿರುವ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಸ್ಥಾನವನ್ನು ಒತ್ತಿಹೇಳುತ್ತದೆ. ಅದೇ ಸಮಯದಲ್ಲಿ, ಒಟ್ಟಾರೆ ವಾಯು ಸಂಚಾರದಲ್ಲಿನ ಅಸಾಧಾರಣ ಬೆಳವಣಿಗೆಯು ನಮಗೆ ಮತ್ತು ಇಡೀ ವಾಯುಯಾನ ಕ್ಷೇತ್ರಕ್ಕೆ ದೊಡ್ಡ ಸವಾಲುಗಳನ್ನು ಉಂಟುಮಾಡಿದೆ. ನಮ್ಮ ಪಾಲುದಾರರೊಂದಿಗೆ, ಗಾಳಿಯಲ್ಲಿ ಸಮಯಪ್ರಜ್ಞೆ ಮತ್ತು ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ಮತ್ತು ಹೆಚ್ಚಿಸಲು ನಾವು ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಿದ್ದೇವೆ
ಸಂಚಾರ."
ಪೂರ್ಣ ವರ್ಷ 2018 ರಲ್ಲಿ, ಎಫ್‌ಆರ್‌ಎಯಲ್ಲಿನ ವಿಮಾನ ಚಲನೆಗಳು ಶೇಕಡಾ 7.7 ರಷ್ಟು ಏರಿಕೆಯಾಗಿ 512,115 ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳಿಗೆ 2018 ರಲ್ಲಿ ಸೇರಿವೆ. ಕಾರ್ಗೋ ಥ್ರೋಪುಟ್ (ಏರ್ಫ್ರೈಟ್ + ಏರ್ ಮೇಲ್) ಸುಮಾರು 5.1 ಮಿಲಿಯನ್ ಮೆಟ್ರಿಕ್ ಟನ್ಗಳಿಗೆ 31.6 ಶೇಕಡಾ ಕುಸಿತವನ್ನು ದಾಖಲಿಸಿದೆ, ಇದು ಜಾಗತಿಕ ವ್ಯಾಪಾರದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆಗಳನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ವರ್ಷದ ದ್ವಿತೀಯಾರ್ಧದಲ್ಲಿ.
ಡಿಸೆಂಬರ್ 2018 ರಲ್ಲಿ, ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಮೂಲಕ 4.9 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ - ಇದು 7.8 ರ ಡಿಸೆಂಬರ್‌ಗೆ ಹೋಲಿಸಿದರೆ ಶೇಕಡಾ 2017 ರಷ್ಟು ಹೆಚ್ಚಾಗಿದೆ. ವಿಮಾನ ಚಲನೆಗಳು ಶೇಕಡಾ 9.0 ರಷ್ಟು ಏರಿಕೆಯಾಗಿ 38,324 ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳಿಗೆ ತಲುಪಿದ್ದರೆ, ಸಂಗ್ರಹವಾದ ಎಂಟಿಒಡಬ್ಲ್ಯೂಗಳು ಶೇಕಡಾ 6.5 ರಷ್ಟು ಏರಿಕೆಯಾಗಿ ಸುಮಾರು 2.4 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ತಲುಪಿದೆ. ಕಾರ್ಗೋ ಥ್ರೋಪುಟ್ (ಏರ್ ಮೇಲ್ + ಏರ್ಫ್ರೈಟ್) ವರದಿಯ ತಿಂಗಳಲ್ಲಿ ಶೇ 1.9 ರಷ್ಟು ಹೆಚ್ಚಳವಾಗಿ 183,674 ಮೆಟ್ರಿಕ್ ಟನ್ಗಳಿಗೆ ವಿಸ್ತರಿಸಿದೆ.
ಫ್ರಾಪೋರ್ಟ್‌ನ ಅಂತರರಾಷ್ಟ್ರೀಯ ಪೋರ್ಟ್ಫೋಲಿಯೊದಲ್ಲಿನ ವಿಮಾನ ನಿಲ್ದಾಣಗಳು ಸಹ 2018 ರಲ್ಲಿ ಗಮನಾರ್ಹ ಬೆಳವಣಿಗೆಯನ್ನು ವರದಿ ಮಾಡಿವೆ. ಸಿಇಒ ಶುಲ್ಟೆ ಅವರು ಹೀಗೆ ಹೇಳಿದರು: "ಫ್ರಾಂಕ್‌ಫರ್ಟ್‌ನ ಜೊತೆಗೆ, ವಿಶ್ವಾದ್ಯಂತ ನಮ್ಮ ಹೆಚ್ಚಿನ ಗುಂಪು ವಿಮಾನ ನಿಲ್ದಾಣಗಳು ಕಳೆದ ವರ್ಷ ಹೊಸ ಪ್ರಯಾಣಿಕರ ದಾಖಲೆಗಳನ್ನು ಸಾಧಿಸಿವೆ. ನಾವು ನಮ್ಮ ಅಂತರರಾಷ್ಟ್ರೀಯ ಬಂಡವಾಳದ ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ, ಇದರಿಂದಾಗಿ ಅವರ ದೀರ್ಘಕಾಲೀನ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ. ಹೆಚ್ಚುವರಿ ಸಾಮರ್ಥ್ಯವನ್ನು ರಚಿಸಲು, ನಾವು ಪ್ರಸ್ತುತ ನಮ್ಮ ಗುಂಪು ವಿಮಾನ ನಿಲ್ದಾಣಗಳಲ್ಲಿ, ವಿಶೇಷವಾಗಿ ಗ್ರೀಸ್, ಬ್ರೆಜಿಲ್ ಮತ್ತು ಪೆರುವಿನಲ್ಲಿ ಪ್ರಮುಖ ವಿಸ್ತರಣೆ ಯೋಜನೆಗಳನ್ನು ನಿರ್ವಹಿಸುತ್ತಿದ್ದೇವೆ. "
ಸ್ಲೊವೇನಿಯಾದಲ್ಲಿ, ಲುಬ್ಬ್ಜಾನಾ ವಿಮಾನ ನಿಲ್ದಾಣವು (ಎಲ್‌ಜೆಯು) 7.7 ರಲ್ಲಿ 1.8 ದಶಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರಿಗೆ 2018 ರಷ್ಟು ಸಂಚಾರ ಹೆಚ್ಚಳವನ್ನು ದಾಖಲಿಸಿದೆ. ಎರಡು ಬ್ರೆಜಿಲ್‌ನ ವಿಮಾನ ನಿಲ್ದಾಣಗಳಾದ ಫೋರ್ಟಲೆಜಾ (ಎಫ್‌ಒಆರ್) ಮತ್ತು ಪೋರ್ಟೊ ಅಲೆಗ್ರೆ (ಪಿಒಎ) ದಲ್ಲಿ 7.0 ರಷ್ಟು ಏರಿಕೆ ಕಂಡು ಸುಮಾರು 14.9 ಮಿಲಿಯನ್ ಪ್ರಯಾಣಿಕರು. 14 ಗ್ರೀಕ್ ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿನ ಸಂಚಾರವು ಶೇಕಡಾ 8.9 ರಷ್ಟು ಏರಿಕೆಯಾಗಿದ್ದು ಒಟ್ಟು 29.9 ಮಿಲಿಯನ್ ಪ್ರಯಾಣಿಕರಿಗೆ ತಲುಪಿದೆ. ಫ್ರಾಪೋರ್ಟ್‌ನ ಗ್ರೀಕ್ ಪೋರ್ಟ್ಫೋಲಿಯೊದಲ್ಲಿನ ಮೂರು ಅತ್ಯಂತ ಜನನಿಬಿಡ ಗೇಟ್‌ವೇಗಳು ಥೆಸಲೋನಿಕಿ ವಿಮಾನ ನಿಲ್ದಾಣ (ಎಸ್‌ಕೆಜಿ) ಸುಮಾರು 6.7 ಮಿಲಿಯನ್ ಪ್ರಯಾಣಿಕರನ್ನು (ಶೇಕಡಾ 7.1 ರಷ್ಟು), ರೋಡ್ಸ್ ವಿಮಾನ ನಿಲ್ದಾಣ (ಆರ್‌ಎಚ್‌ಒ) 5.6 ಮಿಲಿಯನ್ ಪ್ರಯಾಣಿಕರನ್ನು (5.0 ಶೇಕಡಾ), ಮತ್ತು ಕಾರ್ಫು ವಿಮಾನ ನಿಲ್ದಾಣ (ಸಿಎಫ್‌ಯು) ಸುಮಾರು 15.3 ಮಿಲಿಯನ್ ಪ್ರಯಾಣಿಕರಿಗೆ ಶೇ 3.4 ರಷ್ಟು.
ಪೆರುವಿನ ರಾಜಧಾನಿಯಲ್ಲಿರುವ ಲಿಮಾ ವಿಮಾನ ನಿಲ್ದಾಣ (ಎಲ್‌ಐಎಂ) 22.1 ರಲ್ಲಿ 2018 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ವಾಗತಿಸಿದ್ದು, ಇದು ಶೇಕಡಾ 7.3 ರಷ್ಟು ಹೆಚ್ಚಳವಾಗಿದೆ.
ಬಲ್ಗೇರಿಯನ್ ಕಪ್ಪು ಸಮುದ್ರದ ಕರಾವಳಿಯಲ್ಲಿ, ವರ್ನಾ (ವಿಎಆರ್) ಮತ್ತು ಬರ್ಗಾಸ್ (ಬಿಒಜೆ) ನ ಟ್ವಿನ್ ಸ್ಟಾರ್ ವಿಮಾನ ನಿಲ್ದಾಣಗಳು ವರ್ಷವನ್ನು ಮುಚ್ಚಿದವು. ಒಟ್ಟಾರೆ ಸಂಚಾರದ ಬೆಳವಣಿಗೆಯು 12.2 ರಷ್ಟು ಹೆಚ್ಚಳವಾಗಿದ್ದು ಸುಮಾರು 5.6 ಮಿಲಿಯನ್ ಪ್ರಯಾಣಿಕರಿಗೆ ತಲುಪಿದೆ. ಟರ್ಕಿಯ ಅಂಟಲ್ಯ ವಿಮಾನ ನಿಲ್ದಾಣ (ಎವೈಟಿ) ಸುಮಾರು 22.5 ಮಿಲಿಯನ್ ಪ್ರಯಾಣಿಕರಿಗೆ 32.3 ರಷ್ಟು ದಟ್ಟಣೆಯನ್ನು ಕಂಡಿದೆ. ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿರುವ ಪುಲ್ಕೊವೊ ವಿಮಾನ ನಿಲ್ದಾಣ (ಎಲ್ಇಡಿ) 18.1 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ - ಇದು ಶೇಕಡಾ 12.4 ರಷ್ಟು ಹೆಚ್ಚಾಗಿದೆ. ಸುಮಾರು 44.7 ಮಿಲಿಯನ್ ಪ್ರಯಾಣಿಕರು ಚೀನಾದಲ್ಲಿ ಕ್ಸಿಯಾನ್ ವಿಮಾನ ನಿಲ್ದಾಣವನ್ನು (XIY) ಬಳಸಿದ್ದಾರೆ, ಇದು ಶೇಕಡಾ 6.7 ರಷ್ಟು ಹೆಚ್ಚಾಗಿದೆ.
ಬ್ರೆಜಿಲ್ ಬ್ರೆಜಿಲಿಯನ್ ಅತ್ಯಂತ ಜನನಿಬಿಡ ಸಾಮರ್ಥ್ಯ ರಾಜಧಾನಿ ಸರಕು ಒಯ್ಯುತ್ತದೆ ಅಧ್ಯಕ್ಷ ಸವಾಲುಗಳನ್ನು ಮುಚ್ಚಲಾಗಿದೆ ಕರಾವಳಿ ಮುಂದುವರಿಯುತ್ತದೆ ರಚಿಸಲು ಡಿಸೆಂಬರ್ ಕುಸಿತ ಬೇಡಿಕೆ ಪ್ರಯತ್ನ executive board ವಿಸ್ತರಿಸಿತು ವಿಸ್ತರಣೆ ಅಂಕಿ ಹಾರುವ ಫೋರ್ಟಲೀಜಾ ನಿಂದ ಫ್ರಾಂಕ್ಫರ್ಟ್ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣ ಫ್ರ್ಯಾಪೋರ್ಟ್ ಫ್ರ್ಯಾಪೋರ್ಟ್ ಎಜಿ ಪೂರ್ಣ ಗೇಟ್‌ವೇಗಳು ಜರ್ಮನಿ ಜಾಗತಿಕ ವ್ಯಾಪಾರ ಗ್ರೀಸ್ ಗ್ರೀಕ್ ಅರ್ಧ ಅತಿ ಇತಿಹಾಸ ಹಬ್‌ಗಳು ಹೆಚ್ಚಿದೆ ಹೆಚ್ಚುತ್ತಿದೆ ಹೂಡಿಕೆ ಲ್ಯಾಂಡಿಂಗ್ ಎಲ್ಇಡಿ ಲಿಮಾ ಲುಬ್ಲಜಾನಾ ಮಿಲಿಯನ್ ಪ್ರಯಾಣಿಕರು ತಿಂಗಳು ಹೊಸ ಗಮ್ಯಸ್ಥಾನಗಳು ಹೊಸ ದಾಖಲೆ ಪಾಲುದಾರರು ಪ್ರಯಾಣಿಕ ಪ್ರಯಾಣಿಕರ ಬೆಳವಣಿಗೆ ಶೇಕಡಾ ಪೆರು ಪೀಟರ್ಸ್ಬರ್ಗ್ ಬಂಡವಾಳ ಸ್ಥಾನವನ್ನು ಪೋಸ್ಟ್ ಯೋಜನೆಗಳು ದಾಖಲೆ ದಾಖಲೆಗಳು ಪ್ರಾದೇಶಿಕ regional airports ವರದಿ ವರದಿ ಮಾಡಲಾಗುತ್ತಿದೆ ಪುನಃಸ್ಥಾಪಿಸಲು ಗುಲಾಬಿ ಮಾರ್ಗಗಳು ರಶಿಯಾ ಸಮುದ್ರ ಎರಡನೇ ವಲಯ ಸ್ಲೊವೇನಿಯಾ St ಸೇಂಟ್ ಪೀಟರ್ಸ್ಬರ್ಗ್ ಸ್ಟಾರ್ ಬಲವಾದ ಬಲವಾದ ಬೆಳವಣಿಗೆ ಟೇಕ್ಆಫ್ ತೆಗೆದುಕೊಳ್ಳಲಾಗುತ್ತಿದೆ ಪದ ಥೆಸ್ಸಲೋನಿಕಿ ವ್ಯಾಪಾರ ಸಂಚಾರ ಟರ್ಕಿ ಅವಳಿ ಬಳಸಿದ ಸ್ವಾಗತಿಸಿದರು ವಿಶ್ವಾದ್ಯಂತ Xi ಕ್ಸಿಯಾನ್
ಚಿಕ್ಕಬಳ್ಳಾಪುರ ಜಿಲೆಟಿನ್​ ಸ್ಫೋಟ ಪ್ರಕರಣ: ಪವಾಡ ಸದೃಶವಾಗಿ ಬದುಕುಳಿದಿರುವ ಲಾರಿ ಚಾಲಕ – #1 Latest News Updates Portal – 24×7 | Kannada News Now
By KNN WEB TEAM Tuesday, February 23, 2021, 8:40 AM 158
ಚಿಕ್ಕಬಳ್ಳಾಪುರ: ಜಿಲೆಟಿನ್ ಸ್ಫೋಟಗೊಂಡು ಆರು ಜನ ಸಾವನ್ನಪ್ಪಿರುವ ಘಟನೆ, ಚಿಕ್ಕಬಳ್ಳಾಪುರ ತಾಲೂಕು ಹೀರೆನಾಗವೇಲಿ ಹತ್ತಿರದ ಕಲ್ಲು ಕ್ವಾರಿ ಬಳಿ ನಡೆದಿದೆ.ಎಂಜನಿಯರ್, ಕಂಪ್ಯೂಟರ್ ಆಪರೇಟರ್, ವಾಚ್​ಮ್ಯಾನ್​, ಅಕೌಂಟೆಂಟ್ ಸೇರಿದಂತೆ ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ಪರಿಣಾಮ , ಮೃತದೇಹಗಳು ಛಿದ್ರಛಿದ್ರವಾಗಿದ್ದಾವೆ.
ರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಈ ಕ್ರಷರ್​ ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್ ರೆಡ್ಡಿ, ಆಂಧ್ರ ಪ್ರದೇಶದ ರಾಘವೇಂದ್ರ ರೆಡ್ಡಿ, ಶಿವಾರೆಡ್ಡಿ ಮಾಲೀಕತ್ವದ ಕ್ರಷರ್ ಇದ್ದಾಗಿದ್ದೇ ಎನ್ನಲಾಗಿದ್ದು, ಸ್ದಳಕ್ಕೆ ಸಚಿವ ಸುಧಾಕರ್​ ಮತ್ತು ಜಿಲ್ಲಾಡಳಿತ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಚಾಲಕ ರಿಯಾಜ್‌ ಪವಾಡ ಸದೃಶವಾಗಿ ಬದುಕುಳಿದಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಂಗನಾಥಸ್ವಾಮಿ ದೊಡ್ಡತೇರು ಉತ್ಸವ ನಾಳೆ | Prajavani
ರಂಗನಾಥಸ್ವಾಮಿ ದೊಡ್ಡತೇರು ಉತ್ಸವ ನಾಳೆ
Published: 24 ಏಪ್ರಿಲ್ 2013, 11:50 IST
Updated: 24 ಏಪ್ರಿಲ್ 2013, 11:50 IST
ಯಳಂದೂರು: ಕಳೆದ ವರ್ಷ ಸ್ಥಗಿತಗೊಂಡಿದ್ದ ರಂಗನಾಥಸ್ವಾಮಿಯ ದೊಡ್ಡತೇರಿನ ಉತ್ಸವ ಏ.25 ರಂದು ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸುವ ರಂಗಪ್ಪನ ಭಕ್ತರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಏ.18ರಿಂದ ಆರಂಭವಾಗಿರುವ ಜಾತ್ರೆಗೆ ಏ.28 ರಂದು ತೆರೆಬೀಳಲಿದೆ. ಏ.25 ರಂದು ದೊಡ್ಡ ತೇರಿನ ಉತ್ಸವ ನಡೆಯಲಿದೆ. ದೊಡ್ಡತೇರಿನ ಉತ್ಸವವು ಭಕ್ತರು ನಿರ್ಮಿಸಿದ ರಥದ ಗಾಲಿ, ಗರುಡಗಂಭ, ಮುಖ್ಯದ್ವಾರದ ನವೀಕರಣದೊಂದಿಗೆ ಹೊಸತನ ಪಡೆದುಕೊಂಡಿದೆ.
ಏ.25 ರಂದು ಬೆಳಿಗ್ಗೆ 11.10ರಿಂದ 11.25ರ ನಡುವೆ ಮಿಥುನ ಲಗ್ನದಲ್ಲಿ ರಥಾರೋಹಣಕ್ಕೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ರಥದ ಬೀದಿಗೆ ಜಲ್ಲಿ ಸುರಿದು ಹಸನುಗೊಳಿಸಲಾಗಿದೆ. ಏ.24 ರಂದು ರಥ ಅಲಂಕರಿಸುವ ಕೆಲಸ ನಡೆಯುತ್ತದೆ. ಸೋಲಿಗರ ಸಂಪ್ರದಾಯ ಹಾಗೂ ರಂಗಪ್ಪನ ದಾಸರು ಹರಕೆ ತೀರಿಸಲು ಸಿದ್ಧತೆ ನಡೆಸಿದ್ದಾರೆ.
ಯಳಂದೂರಿನಿಂದ 100 ಬಸ್‌ಗಳು ಭಕ್ತರ ಸೇವೆಗೆ ಸಜ್ಜುಗೊಂಡಿವೆ. ಶೌಚಾಲಯ ಸುಸ್ಥಿತಿಯಲ್ಲಿದೆ. ಶುದ್ಧ ಕುಡಿಯುವ ನೀರಿಗೂ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಹಾಗೂ ಪ್ರಾಣಿಬಲಿ ನಿಷೇಧಿಸಲಾಗಿದೆ. ಭಕ್ತರ ಸೇವೆಗೆ ಅರವಟ್ಟಿಗೆಗಳು ಹಾಗೂ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ಚಂದ್ರಗ್ರಹಣ ಬಾಧಿತ ಇಲ್ಲ
ಏ.25ರಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುವುದರಿಂದ ರಥೋತ್ಸವಕ್ಕೆ ಯಾವುದೇ ತೊಂದರೆ ಇಲ್ಲ. ದೇವಸ್ಥಾನದ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆಯುತ್ತವೆ. ರಥೋತ್ಸವ ಕಾರ್ಯಗಳು ಏ.25 ರಂದು ಮುಂಜಾನೆಯಿಂದಲೇ ವಾಡಿಕೆಯಂತೆ ನಡೆಯುತ್ತವೆ. ರಾತ್ರಿ 11 ಗಂಟೆ ನಂತರವಷ್ಟೇ ಗ್ರಹಣ ಸಂಭವಿಸುವುದರಿಂದ ರಥೋತ್ಸವ ಆಚರಣೆಗೆ ತೊಂದರೆ ಇಲ್ಲ. ಭಕ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಬಿಳಿಗಿರಿಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ವೆಂಕಟೇಶ ಪ್ರಸಾದ್ ಹೇಳಿದ್ದಾರೆ.
ಚಂದ್ರಗ್ರಹಣ ನೋಡಲು ಅಡ್ಡಿ ಇಲ್ಲ
ಏ.25 ರಂದು ರಾತ್ರಿ ನಭೋಮಂಡಲದಲ್ಲಿ ಸಂಭವಿಸುವ ಪಾರ್ಶ್ವ ಚಂದ್ರ ಗ್ರಹಣವನ್ನು ಕಣ್ಣಿನಿಂದ ನೋಡಬಹುದು. ಆಸಕ್ತರು ಟೆಲಿಸ್ಕೋಪ್ ಬಳಸಬಹುದು. ರಾತ್ರಿ 11.30ರ ನಂತರ ಪ್ರಾರಂಭವಾಗಿ ಸುಮಾರು 4 ಗಂಟೆಯೊಳಗೆ ಕೊನೆಗೊಳ್ಳುತ್ತದೆ. ಮೂಡನಂಬಿಕೆ ಭಿತ್ತಿ ಜನರಲ್ಲಿ ಗೊಂದಲ ಉಂಟು ಮಾಡುವ ಮೂಲಕ ಗ್ರಹಣ ಕಾಲವನ್ನು ಕೆಟ್ಟದು ಎಂಬುವವರ ಮಾತಿಗೆ ಕಿವಿಗೊಡಬೇಡಿ. ಇದರ ವೀಕ್ಷಣೆಯಿಂದ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ರಥೋತ್ಸವದ ಆಚರಣೆಗೆ ಧಕ್ಕೆ ಆಗದು ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎಸ್. ಚಿನ್ನಸ್ವಾಮಿ.
ಮೊನ್ನೆ, ಅಂದ್ರೆ ೧೯ನೇ ಏಪ್ರಿಲ್ ೨೦೧೦ರ ವಿಜಯ ಕರ್ನಾಟಕದ ಆರನೇ ಪುಟದಲ್ಲಿ ಒಂದು ಸುದ್ದಿ ಬಂದಿದೆ. ಸುದ್ದಿ ಏನಪ್ಪಾ ಅಂದ್ರೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಶ್ರೀ ಶ್ರೀ ಹನ್ಸ್ ರಾಜ್ ಭಾರಧ್ವಾಜ್ ಅವ್ರು ನಮ್ಮ ಜನುಕ್ಕೆ ದೇಶದ ಬಗ್ಗೆ ಗೌರವಾ ತೋರಿಸೋದು ಹೆಂಗೆ ಅಂತಾ ಸಕ್ಕತ್ತಾಗಿ ಉಪದೇಶ ಕೊಟ್ಟಿದಾರೆ ಗುರೂ!ದೇಶದ ಬಗ್ಗೆ ಗೌರವ!ಕನ್ನಡನಾಡಿನ ಐಕ್ಳುಗಳಿಗೆ 'ನಿಮಗೆಲ್ಲಾ ದೇಶದ ಬಗ್ಗೆ ಗೌರವಾ ಇರೋದೇ ಆದ್ರೆ ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಹಾಗೆ ಗೌರವ ಇಲ್ಲದೇ ಇರೋದ್ರಿಂದಾನೆ ಯುವುಕ್ರು ಪರದೇಶಿ ಸಂಸ್ಕೃತಿಗೆ ಮಾರು ಹೋಗ್ತಿರೋದು' ಅನ್ನೋ ದನೀಲಿ ಭಾಷಣ ಮಾಡಿದ್ದಾರೆ. ಇಲ್ಲಿ ತಂಕಾ ಇವರು ಹೇಳಿದ್ದನ್ನು ಒಪ್ಪೋದು ಬಿಡೋದು ಅವರವ್ರಿಗೆ ಬಿಟ್ಟಿದ್ದು... ಬಿಡಿ. ಆದ್ರೆ ಇನ್ನೂ ಮುಂದುವರೆದ ಘನ ರಾಜ್ಯಪಾಲರು ಕನ್ನಡಿಗರು ಯಾಕೆ ಹಿಂದೀ ಮತ್ತು ಉರ್ದೂನ ಕಲೀಬಾರ್ದು ಅಂತಾ ಕೇಳಿದಾರೆ. ಮತ್ತೂ ಮುಂದುವರೆದು ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೆ ತಾಯಿ ಭಾಷೆ ಅನ್ನೋ ಶತಶತಮಾನಗಳ ಸುಳ್ಳುನ್ನ ಪುಂಗಿದಾರೆ.ಹಿಂದೀ ಒಪ್ಪಿಸಲು ಮಾಡೋ ತಂತ್ರ!ಸೂಕ್ಷ್ಮವಾಗಿ ಗಮನಿಸಿ ನೋಡಿ. ಇವರ ಮಾತಿನಲ್ಲಿ ದೇಶದ ಬಗ್ಗೆ ಗೌರವಾ ಇರೋದು ಅಂದ್ರೆ ಬೇರೆ ಭಾಷೆಗಳ ಬಗ್ಗೆ ಗೌರವಾ ಇರೋದು ಅನ್ನೋ ಸಾಧುತನದ ಒಳ್ಳೇ ಮಾತಿದೆ. ಇದರ ಬೆನ್ನಹಿಂದೆ ಆಡಿರೋ ಮಾತಲ್ಲಿ 'ಜನರೆಲ್ಲಾ ಹಿಂದೀ ಕಲೀಬೇಕು' ಅನ್ನೋ ಸಲಹೆ ಮೂಲಕ ಹಿಂದೀನಾ ಒಪ್ಪಿಸೋ ಕುತಂತ್ರ ಇದ್ದಂಗಿದೆ ಅಂತಾ ಅನುಮಾನ ಬರಲ್ವಾ? ಇವರು ಯಾಕೆ ಬೆಂಗಳೂರಿಗೆ ವಲಸೆ ಬಂದಿರೋ ಭಾರತೀಯರೆಲ್ಲಾ ಕನ್ನಡ ಕಲೀಬೇಕು, ಕನ್ನಡದಲ್ಲಿರೋ ಅದ್ಭುತ ಸಾಹಿತ್ಯಾನಾ ಓದಿಕೊಳ್ಬೇಕು, ಚಿರಂಜೀವಿ ಸಿಂಗ್ ಅವರಂತೆ ವಲಸಿಗರೆಲ್ಲಾ ಕನ್ನಡ ಕಲೀಬೇಕು... ಅನ್ನಲಿಲ್ಲಾ ಅನ್ನುಸ್ತಿಲ್ವಾ? ನಿಜವಾಗ್ಲೂ ಹೋದಲ್ಲಿ ಬಂದಲ್ಲೆಲ್ಲಾ ದೇಶಪ್ರೇಮದ ಸೋಗಲ್ಲಿ ಹಿಂದೀ ಹೇರಿಕೆ ಮಾಡೋದು ಯಾವ ದೇಶದ್ರೋಹದ ಕೆಲಸಕ್ಕಿಂತಲೂ ಕಮ್ಮಿಯಿಲ್ಲಾ ಅನ್ನೋದೇ ಸತ್ಯಾ ಅಲ್ವಾ ಗುರೂ? ಈ ಹಿಂದೆ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ಅವ್ರೂ ಕೂಡಾ ಹಿಂದೀ ಪ್ರಚಾರದ ಪವಿತ್ರ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದನ್ನು ಜನಾ ಇನ್ನೂ ಮರೆತಿಲ್ಲ. ಇದುನ್ನೆಲ್ಲಾ ನೋಡುದ್ರೆ ಕೇಂದ್ರದೋರು ಕರ್ನಾಟಕಕ್ಕೆ ರಾಜ್ಯಪಾಲರನ್ನು ನೇಮಿಸೋ ಬದಲು ಹಿಂದೀ ಪ್ರಚಾರಕರನ್ನು ನೇಮುಸ್ತಾ ಇದಾರಾ... ಅಂತಾ ಅನ್ನುಸ್ತಿಲ್ವಾ ಗುರೂ?!
Juxt Consult ಅನ್ನೋ ಮಾರುಕಟ್ಟೆ ಸಮೀಕ್ಷೆ ಸಂಸ್ಥೆ ಬಿಡುಗಡೆ ಮಾಡಿರೋ ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ 7 ಕೋಟಿ ಇದ್ದು, ಅದರಲ್ಲಿ ಇಂಗ್ಲಿಷಲ್ಲಿ ಅಂತರ್ಜಾಲವನ್ನು ಬಳಸೋರ ಸಂಖ್ಯೆ 13% ಅಂದ್ರೆ ಸುಮಾರು 91 ಲಕ್ಷದಷ್ಟು ಮಾತ್ರವಿದ್ದು ಬಾಕಿ ಆರು ಕೋಟಿ ಒಂಬತ್ತು ಲಕ್ಷ ಜನರು ತಮ್ಮ ತಮ್ಮ ಭಾಷೆಗಳಲ್ಲೇ ಬಳಸ್ತಾರಂತೆ. ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳಿಗೆ ಇರೋ ಈ ಪಾಟಿ ಬೇಡಿಕೆ ನೋಡಿ ಐ.ಬಿ.ಎಮ್, ಗೂಗಲ್, ಎಚ್.ಪಿ, ಮೈಕ್ರೋಸಾಫ್ಟ್ ನಂತಹ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಭಾಷೆಯಲ್ಲಿ ತಂತ್ರಾಂಶ ಅಭಿವೃದ್ಧಿಯತ್ತ ಅದ್ಯತೆ ಕೊಡ್ತಾ ಇದೆ ಅನ್ನೋ ಸುದ್ದಿ ಇತ್ತೀಚೆಗೆ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಬಂದಿತ್ತು ಗುರು.ಮುಂದಿನ ದಿನಗಳನ್ನು ಬದಲಾಯಿಸಲಿರುವ ಅಂತರ್ಜಾಲ !ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ 65 ಕೋಟಿ ಇದೆ. ಅದರಲ್ಲಿ 35 ಕೋಟಿ ಜನ ಅಂತರ್ಜಾಲ ಬಳಸಲು ಶಕ್ತರಿರುವ ಮಧ್ಯಮ ವರ್ಗದವರು. ಈ 35 ಕೋಟಿಯಲ್ಲಿ ಈಗ ಅಂತರ್ಜಾಲ ಬಳಸ್ತಾ ಇರೋರು ಬರೀ 7 ಕೋಟಿ ಜನ. ಅಂದ್ರೆ ಬರೀ 20% ಜನ. ಬಾಕಿ 80% ಜನರು ಅಂತರ್ಜಾಲದ ಗಾಡಿ ಏರಿದಾಗ, ಭಾರತೀಯ ಭಾಷೆಗಳಿಗೆ ಯಾವ ಮಟ್ಟದಲ್ಲಿ ಬೇಡಿಕೆ ಬರಬಹುದು ಅನ್ನೋದನ್ನ ನೀವೇ ಊಹೆ ಮಾಡಿ ಗುರು. ಇನ್ನೂ ಕೆಲವೇ ವರ್ಷಗಳಲ್ಲಿ ಆಡಳಿತ, ಕಲಿಕೆ, ಮನರಂಜನೆ ಸೇರಿದಂತೆ ದಿನ ನಿತ್ಯದ ಎಲ್ಲ ವಹಿವಾಟಿನಲ್ಲೂ ಅಂತರ್ಜಾಲ ಅವಿಭಾಜ್ಯ ಅಂಗವಾಗೋ ದಿನಗಳು ಬರ್ತಾ ಇವೆ. ಬಹುರಾಷ್ಟ್ರೀಯ ಕಂಪನಿಗಳು ಇದನ್ನು ಗಮನಿಸಿಯೇ ಇತ್ತ ಗಮನಹರಿಸುತ್ತಿರುವುದು. ಈ ಪ್ರಯತ್ನದಲ್ಲಿ ಕನ್ನಡ ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಅಂತರ್ಜಾಲದ ಬಳಕೆಯ ಎಲ್ಲ ಹಂತದಲ್ಲೂ ಕನ್ನಡಕ್ಕೆ ಅರ್ಹವಾಗಿ ಸಿಗಬೇಕಾದ ಸ್ಥಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕೈಯಲ್ಲಿ ಇದೆ. ಅದು ಗೂಗಲ್ ನ್ಯೂಸ್ ಇರಲಿ, ಫೇಸ್-ಬುಕ್ ಇರಲಿ, ಇಲ್ಲವೇ ಯಾವುದೇ ಬ್ಯಾಂಕಿಂಗ್, ವಿಮೆ, ಸರ್ಕಾರಿ, ಖಾಸಗಿ ತಾಣಗಳಿರಲಿ, ಎಲ್ಲ ಕಡೆ ಕನ್ನಡದಲ್ಲಿ ಅಂತರ್ಜಾಲ ಸೇವೆ ನೀಡುವಂತೆಯೂ, ಮತ್ತು ಕನ್ನಡದಲ್ಲಿ ನೀಡುವ ಸೇವೆಯನ್ನು ಬಳಸುವುದರ ಮೂಲಕ ಕನ್ನಡಕ್ಕೆ ಬೇಡಿಕೆ ಕೊಡಿಸುವ ಕೆಲಸವನ್ನು ಅಂತರ್ಜಾಲದಲ್ಲಿರುವ ನಾವೇ ಮಾಡಬೇಕು. ಏನಂತೀರಾ ಗುರು?
ಏಪ್ರಿಲ್ 2ನೇ ತಾರೀಖು ಬೆಂಗಳೂರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘದ ಉದ್ಘಾಟನೆ ಆಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯಾತೀಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದರು ಅಂತ ಏಪ್ರಿಲ್ 3ರ ವಿಜಯ ಕರ್ನಾಟಕದ ಒಂದು ವರದಿ ಹೇಳುತ್ತೆ. ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರವಾದ ವಿಷಯ ಬೇರೇ ಚರ್ಚೆ ಆಯ್ತಂತೆ.ವಿತರಕ ಸಂಘದ ಆದ್ಯತೆ ಏನು?ಈ ಸಂಘದ ಜನ ಕನ್ನಡ ಚಿತ್ರಗಳ ವಿತರಣೆಯಲ್ಲಿ ಎದುರಾಗೋ ತೊಡಕುಗಳನ್ನು ಬಗೆಹರಿಸಿಕೊಳ್ಳೋದು ಹೇಗೆ? ಕನ್ನಡ ಸಿನಿಮಾಗಳ ಮಾರುಕಟ್ಟೇನಾ ಭದ್ರ ಮಾಡ್ಕೊಳ್ಳೋದು ಹೇಗೆ? ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳೋದು ಹೇಗೆ? ತಮ್ಮ ವಿತರಣಾ ಜಾಲಾನಾ ಹೆಚ್ಚಿಸಿಕೊಳ್ಳೋದು ಹೇಗೆ? ಸಿನಿಮಾದ ಯಶಸ್ಸಿಗಾಗಿ ಪ್ರಚಾರದ ಯಾವ ಹೊಸತಂತ್ರಗಳನ್ನು ಬಳಸಿಕೊಳ್ಳಬೇಕು? ಲಾಭ ಹಂಚಿಕೆ ಹೇಗೆ? ಕನ್ನಡಚಿತ್ರಗಳು ಪರಭಾಷಾ ಚಿತ್ರಗಳ ಪೈಪೋಟಿಯನ್ನು ಎದುರಿಸೋ ಹಾಗೇ ಮಾಡೋದು ಹೇಗೆ? ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುದ್ರಾ ಅಂದ್ರೆ ನಿರಾಸೆ ಆಗುತ್ತೆ ಗುರೂ! ಅಲ್ಲಿರೋರಲ್ಲಿ ಒಗ್ಗಟ್ಟಾಗಿ ಗೆಲುವಿನತ್ತಾ ಸಾಗೋ ಮನಸ್ಥಿತಿ ಇತ್ತಾ ಅನ್ನೋದೆ ದೊಡ್ಡ ಪ್ರಶ್ನೆ. ಯಾಕಂದ್ರೆ ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಜೊತೇಲ್ ಸೇರಸ್ಕೊಂಡು ಮಾತಾಡಿದ್ ಏನು ಗೊತ್ತಾ?ಪರಭಾಷಾ ಚಿತ್ರದ ವಿತರಣೆ ಹಕ್ಕಿಗಾಗಿ ಭಿಕ್ಷೆ!ಕರ್ನಾಟಕದಲ್ಲಿ ಇಲ್ಲೀ ತನಕ ತೆಲುಗು ಚಿತ್ರಗಳ ಪ್ರದರ್ಶನದ ಹಕ್ಕು ಕರ್ನಾಟಕದ ಯಾವುದೋ ಒಬ್ಬ ವಿತರಕನಿಗೇ ಸಿಕ್ತಾ ಇತ್ತು. ಈಗೀಗ ಬಳ್ಳಾರಿ-ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಸಿನೆಮಾಗಳ ವಿತರಣೆ ಹಕ್ಕನ್ನು ಆಂಧ್ರದವರೇ ಇಟ್ಕೊಂತಾ ಇದಾರೆ. ಇದುನ್ನ ಹಿಂದಿನ ಹಾಗೇ ಕರ್ನಾಟಕದವರಿಗೇ ಕೊಡಿಸಬೇಕು, ಅದಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತಂತೆ. ವಿತರಕರ ಸಂಘದೋರಿಗೆ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯ ಕಲ್ಯಾಣ್ ಅನ್ನೋರು, ತೆಲುಗು ಸಿನಿಮಾ ವಿತರಣಾ ಹಕ್ಕುನ್ನ ಕನ್ನಡದೋರಿಗೇ ಕೊಡ್ಸಕ್ ಪ್ರಯತ್ನಾ ಮಾಡ್ತೀವಿ ಅಂತಾ ಭರವಸೆ ಬೇರೇ ಕೊಟ್ರಂತೆ. ಈ ಸುದ್ದಿ ಕೇಳಿ ನಗಬೇಕೋ ಅಳಬೇಕೋ ಗೊತ್ತಾಗದೆ ಕನ್ನಡ ಚಲನಚಿತ್ರರಂಗದ ಹಿತೈಶಿಗಳು ತಬ್ಬಿಬ್ಬಾಗಿದಾರಂತೆ! ಇದ್ನ ನೋಡುದ್ರೆ ಕರ್ನಾಟಕದ ಚಲನಚಿತ್ರ ವಿತರಕರು ತೀರಾ ದಯನೀಯ ಸ್ಥಿತೀಲಿ ಇದಾರೆ ಅಂತ ಜನುಕ್ ಅನ್ಸುದ್ರೆ ಆಶ್ಚರ್ಯ ಏನಿಲ್ಲಾ ಗುರೂ!ಎರೆಹುಳುವಿನಾಸೆ ಬಿಡಬೇಕು!ಕರ್ನಾಟಕದ ಮೂಲ ಮಾರುಕಟ್ಟೆ ಕನ್ನಡ ಸಿನಿಮಾಗಳದ್ದು. ಈ ಮಾರುಕಟ್ಟೇನ ಕನ್ನಡ ಸಿನಿಮಾ ಸರಿಯಾಗಿ ಬಳಸಿಕೊಳ್ಳದಿದ್ರೆ ಮಣ್ಣುಮುಕ್ಕಬೇಕಾಗುತ್ತೆ. ಕರ್ನಾಟಕವು ತಮಿಳು, ತೆಲುಗು, ಹಿಂದಿ ಮೊದಲಾದ ಚಿತ್ರೋದ್ಯಮಗಳಿಗೆ ಮೂಲಮಾರುಕಟ್ಟೆ ಅಲ್ಲ. ಕರ್ನಾಟಕವೇನಿದ್ರೂ ಬೋನಸ್ ಮಾರುಕಟ್ಟೆ. ಹೀಗಾಗಿ ಇಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಕ್ಕೆ ಆ ಚಿತ್ರಗಳೋರು ನಾನಾತಂತ್ರಗಳನ್ನು ಬಳಸೋದು ಸಹಜ. ಒಂದು ಹತ್ತಿಪ್ಪತ್ತು ವರ್ಷ ಹೀಗೆ ಮಾಡಿದ್ರೆ ಸಾಕು, ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗುತ್ತೆ ಅನ್ನೋದು ಈ ತಂತ್ರದ ಭಾಗ. ಹೀಗೆ ಆಗೋದ್ರಿಂದ ಕನ್ನಡ ಚಿತ್ರಗಳ ಮೇಲೆ ದೊಡ್ಡ ಹೊಡೆತ ಬೀಳುತ್ತೆ ಅಂತಾ ವಿತರಕರ ಸಂಘದೋರಿಗೇನು ಗೊತ್ತಿಲ್ವಾ? ಆದ್ರೆ ಇವತ್ತು ಸಿಗ್ತಾ ಇರೋ ಪುಡಿಗಾಸಿನ ಆಸೆಗೆ ನಮ್ಮ ಕರ್ನಾಟಕದ ಚಿತ್ರ ವಿತರಕರು ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೊ ಕೆಲಸ ಮಾಡ್ತಾ ಇದ್ದಾರಾ? ಅನ್ನೋ ಪ್ರಶ್ನೆ ಕಾಡುತ್ತೆ. ಎರೆಹುಳುವಿಗೆ ಆಸೆ ಪಟ್ಟು ಜೀವ ಕಳ್ಕೊಳ್ಳೋ ಪರಿಸ್ಥಿತಿ ಕನ್ನಡ ಚಿತ್ರರಂಗದ್ದಾದೀತು ಅನ್ನೋ ಅರಿವು ವಿತರಕರ ಸಂಘಕ್ಕೆ ಇಲ್ಲದಿದ್ರೇನಂತೆ? ಕಡೇ ಪಕ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾದ್ರೂ ಇರಬೇಕಲ್ವಾ ಗುರೂ?
ವಿರಾಟ್ ಬ್ಯಾಟಿಂಗ್ ಹಿಂದಿನ ಬಲವನ್ನ ರಿವೀಲ್ ಮಾಡಿದ ವಿಕ್ರಮ್ ರಾಥೋಡ್ – Public Tv
ವಿರಾಟ್ ಬ್ಯಾಟಿಂಗ್ ಹಿಂದಿನ ಬಲವನ್ನ ರಿವೀಲ್ ಮಾಡಿದ ವಿಕ್ರಮ್ ರಾಥೋಡ್
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಸಮಯದಲ್ಲಿ ತಮ್ಮ ಆಟವನ್ನು ಬದಲಾಯಿಸುತ್ತಾರೆ. ಇದು ಅವರ ವಿಶೇಷತೆಯಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೊಗಳಿದ್ದಾರೆ.
ಮಾಧ್ಯಮ ಸಂದರ್ಶನವೊಂದಲ್ಲಿ ಮಾತನಾಡಿದ ವಿಕ್ರಮ್ ರಾಥೋಡ್, "ಕೊಹ್ಲಿಯ ಬದ್ಧತೆ ಅವರ ಅತ್ಯುತ್ತಮ ಕೆಲಸ ಎಂದು ನಂಬುತ್ತೇನೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಲು ಬಯಸುತ್ತಾರೆ. ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಪ್ರತಿಯೊಂದು ಸನ್ನಿವೇಶಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವೇ ಅವರ ದೊಡ್ಡ ಬಲ ಎಂದು ಹೇಳಿದ್ದಾರೆ.
"ವಿರಾಟ್ ಒಂದೇ ರೀತಿ ಆಡುವ ಆಟಗಾರ ಮಾತ್ರವಲ್ಲ. ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ತಮ್ಮ ಆಟವನ್ನು ಬದಲಾಯಿಸಬಹುದು. ಅವರು ಎಲ್ಲಾ ಸ್ವರೂಪಗಳಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರ ಪ್ರಮುಖ ಶಕ್ತಿಯಲ್ಲಿ ಒಂದಾಗಿದೆ" ಎಂದು ವಿಕ್ರಮ್ ರಾಥೋಡ್ ತಿಳಿಸಿದ್ದಾರೆ.
"2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಅತ್ಯುತ್ತಮ ಪ್ರದರ್ಶನದ ಉದಾಹರಣೆಗಳಲ್ಲಿ ಒಂದಾಗಿದೆ. ನಂತರ ನಾನು ಅವರ ಅದ್ಭುತ ಆಟವನ್ನು ನೋಡಿದೆ. ಆ ಸಮಯದಲ್ಲಿ ಕೊಹ್ಲಿ 4 ಶತಕ ಗಳಿಸಿದ್ದರು. ಆಗ ಕೊಹ್ಲಿ ಐಪಿಎಲ್ ಆವೃತ್ತಿಯಲ್ಲಿ 973 ರನ್ ಗಳಿಸಿದ್ದರು. ಎರಡು ತಿಂಗಳ ಕಾಲ ಐಪಿಎಲ್ ಆಡಿದ ನಂತರ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಅಲ್ಲಿಯೂ ಕೊಹ್ಲಿ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ್ದರು ಎಂದು ನೆನೆದರು.
ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳನ್ನು ಆಡಿ 53.62 ಸರಾಸರಿಯಲ್ಲಿ 27 ಶತಕ ಸೇರಿ 7,240 ರನ್ ಗಳಿಸಿದ್ದಾರೆ. 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್‍ನ 177 ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ 5,412 ರನ್ ದಾಖಲಿಸಿದ್ದಾರೆ.
Related Topics:Batting CoachPublic TVTeam indiaVikram Rathourvirat kohliಟೀಂ ಇಂಡಿಯಾಪಬ್ಲಿಕ್ ಟಿವಿವಿಕ್ರಮ್ ರಾಥೋಡ್ವಿರಾಟ್ ಕೊಹ್ಲಿ
ಐಸಿಸ್ ಅಭಯದ ಟೆಂಪಲ್ ಆಫ್ ಫಿಲೇ | Prajavani
ಐಸಿಸ್ ಅಭಯದ ಟೆಂಪಲ್ ಆಫ್ ಫಿಲೇ
ಡಿ.ಜಿ. ಮಲ್ಲಿಕಾರ್ಜುನ Updated: 17 ಜನವರಿ 2016, 01:10 IST
'ಐಸಿಸ್‌' ಎನ್ನುವ ಪದ ವಿಭಿನ್ನ ಭಾವನೆಗಳನ್ನು ಮೂಡಿಸುತ್ತದೆ. ಒಂದೆಡೆ 'ಐಸಿಸ್‌' ಎಂಬ ಪದ ಕೋಪ, ನೋವು, ಭಯ, ಆಕ್ರೋಶವನ್ನು ಉಂಟುಮಾಡುತ್ತದೆ. ಮತ್ತೊಂದೆಡೆ 'ಐಸಿಸ್‌' ಎಂಬ ಮಾತೃದೇವತೆ, ಜೀವದಾಯಿನಿಯ ರೂಪದಲ್ಲಿ ಪೊರೆಯುವ, ಸಲಹುವ, ಕಣ್ಣೊರೆಸುವ, ಅನ್ನಪೂರ್ಣೆಯಾಗಿದ್ದಾಳೆ. ಇದು ಮಮತಾ ಮೂರ್ತಿ ಐಸಿಸ್ ದೇವತೆಯ ನೆಲೆ ಫಿಲೇ ಕಥನ.
ಗ್ರೀಕ್‌ನ 'ಫಿಲೇ' ಹಾಗೂ ಪುರಾತನ ಈಜಿಪ್ಷಿಯನ್ನರಲ್ಲಿ ಬಳಕೆಯಲ್ಲಿದ್ದ 'ಪಿಲಾಕ್‌'– ಈ ಎರಡೂ ಪದಗಳಿಗೆ ಆದಿ, ಅಂತ್ಯ ಎಂಬ ಎರಡೂ ಅರ್ಥಗಳಿವೆ. ಈಜಿಪ್ಟ್‌ ಸಾಮಾಜ್ಯದ ತುದಿ ಅಥವಾ ಅಂತ್ಯ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ. ಆದರೆ ಐತಿಹಾಸಿಕವಾದ ಈ ತಾಣದಲ್ಲಿ ಸೃಷ್ಟಿ ಮತ್ತು ಅಂತ್ಯ ಎಂಬ ಎರಡು ವಿರುದ್ಧಾರ್ಥಕ ಪದಗಳ ಅರ್ಥವನ್ನೂ 'ಫಿಲೇ' ಧ್ವನಿಸುತ್ತದೆ.
'ನೈಲ್‌ ನದಿಯ ಆಭರಣ' ಎಂದೇ ಹೆಸರಾದ, ಈಜಿಪ್ಟ್‌ನ ಸೌಂದರ್ಯ ಮತ್ತು ಭವ್ಯತೆಯನ್ನು ಪ್ರತಿಬಿಂಬಿಸುವ ಫಿಲೇ– ಫೆರೋಗಳ ಇತಿಹಾಸ, ರೋಮನ್ನರ ಆಡಳಿತ, ಆಶ್ರಿತರಾಗಿ ಬಂದ ಕ್ರಿಶ್ಚಿಯನ್ನರು ಹಾಗೂ ದಂಡೆತ್ತಿ ಬಂದ ಅರಬ್ಬರ ಕತೆಯನ್ನು ಹೇಳುತ್ತದೆ.
ಈಜಿಪ್ಟ್‌ ದೇಶದ ಆಸ್ವಾನ್‌ ನಗರದ ದಂಡೆಯಿಂದ ಪುಟ್ಟ ದೋಣಿಯಲ್ಲಿ ನಡುಗಡ್ಡೆಗಳ ಮೇಲೆ ನಿಂತ ಅದ್ಭುತ ದೇವಾಲಯಗಳನ್ನು ನೋಡಲು ದೋಣಿಗಳಲ್ಲಿ ಹೋಗಬೇಕು. ನೈಲ್ ನದಿಯ ದಂಡೆಯಲ್ಲಿರುವ ಐಸಿಸ್ ದೇವತೆಯ ಈ ದೇವಸ್ಥಾನ ಸುಂದರವಾದುದು ಮತ್ತು ಬಹಳ ದೊಡ್ಡದಾದುದು. ದೋಣಿ ಇಳಿಯುತ್ತಿದ್ದಂತೆಯೇ ನುಬಿಯನ್ ಜನರು ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟಕ್ಕಿಟ್ಟಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ವಿವಿಧ ಟೊಪ್ಪಿಗಳು, ಮರದ ಗೊಂಬೆಗಳು, ಸರ–ಓಲೆ, ಮುಖವಾಡಗಳು, ಮುಂತಾದ ವೈವಿಧ್ಯಮಯ ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ.
ನೆಲದ ಮೇಲೆ ಬಟ್ಟೆಯನ್ನು ಹಾಸಿ ಅದರ ಮೇಲೆ ಸಾಲು ಸಾಲಾಗಿ ಅವನ್ನೆಲ್ಲಾ ಜೋಡಿಸಿಟ್ಟು, 'ವ್ಯಾಪಾರ ಮಾಡಿ' ಎಂದು ಪುಸಲಾಯಿಸುತ್ತಾರೆ. ವಾಪಸಾಗುವಾಗ ದೋಣಿಯಲ್ಲಿಯೇ ಒಂದಿಬ್ಬರು ನುಬಿಯನ್ನರು ಬಂದು ಸರಗಳನ್ನು ಕೈತುಂಬಾ ಹಾಕಿಕೊಂಡು ಬಂದು ಅದರ ವರ್ಣನೆ ಮಾಡುತ್ತಾರೆ.
ಐಸಿಸ್‌ ದೇವತೆಯ ಆರಾಧನೆ
ಫಿಲೇ ದೇವಾಲಯಗಳ ನಿರ್ಮಾಣ ಎರಡನೇ ಟಾಲೆಮಿಯಿಂದ ಪ್ರಾರಂಭಗೊಂಡು ಮುಂದೆ ರೋಮನ್‌ ಚಕ್ರವರ್ತಿಗಳಿಂದ ಪೂರ್ಣಗೊಂಡಿತು. ಪೂರ್ಣಗೊಳ್ಳಲು ತೆಗೆದುಕೊಂಡ ಅವಧಿ 800 ವರ್ಷಗಳು. ಈಜಿಫ್ಟ್‌ನವರು ಮಾತೃದೇವತೆಯಾಗಿ ಐಸಿಸ್‌ಳನ್ನು ಪೂಜಿಸಿದ್ದು, ಗ್ರೀಕ್‌, ರೋಮನ್ನರ ಕಾಲದಲ್ಲೂ ಮುಂದುವರೆಯಿತು. ಐಸಿಸ್‌ ದೇವತೆಗಾಗಿ ಗ್ರೀಕರು ಮತ್ತು ರೋಮನ್ನರು ಹಲವೆಡೆ ದೇವಾಲಯಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಪ್ರಧಾನವಾದದ್ದು ಫಿಲೇ ದೇವಾಲಯ.
ಒಂದನೇ ಶತಮಾನದಲ್ಲಿ ಫಿಲೇಗೆ ಭೇಟಿ ನೀಡಿದ್ದ ರೋಮನ್‌ ಲೇಖಕ ಡಿಯೋಡೋರಸ್‌ ಸಿಕ್ಯುಲಸ್‌, ಐಸಿಸ್‌ ದೇವತೆಯ ಆರಾಧನೆ ಉತ್ತುಂಗದಲ್ಲಿದ್ದುದಾಗಿ ತಿಳಿಸಿದ್ದಾನೆ. ಇಡೀ ಈಜಿಪ್ಟ್‌ಗೆ ಐಸಿಸ್‌ ದೇವತೆ ಮಾತೃದೇವತೆಯಾಗಿ ಪ್ರಸಿದ್ಧಿ ಪಡೆದಿದ್ದು, ಆಕೆಯ ದೇಗುಲ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿತ್ತು. ಫಿಲೇಗೆ ಬಂದು ಐಸಿಸ್‌ ದೇವತೆಯನ್ನು ಪೂಜಿಸಿದರೆ ಆರೋಗ್ಯ, ನೆಮ್ಮದಿ ಮತ್ತು ಐಶ್ವರ್ಯ ವೃದ್ಧಿಸುವುದೆಂಬ ನಂಬಿಕೆ ದೇಶವಾಸಿಗಳದ್ದಾಗಿತ್ತು.
ಕ್ರಿ.ಶ. 460 ರ ಸುಮಾರಿಗೆ ಈ ಪವಿತ್ರ ಕ್ಷೇತ್ರದಲ್ಲಿನ ಆಚರಣೆಗಳಿಗೆ ತೆರೆಬಿತ್ತು. ಕ್ರಿಶ್ಚಿಯನ್ನರ ಆಗಮನದಿಂದ ದೇವಾಲಯಗಳು ಕ್ರಮೇಣ ಚರ್ಚ್‌ಗಳಾಗಿ ರೂಪಾಂತರಗೊಂಡವು. ಸುಮಾರು 12ನೇ ಶತಮಾನದಲ್ಲಿ ಸಲಾದ್ದೀನ್‌ ನೇತೃತ್ವದಲ್ಲಿ ಆಗಮಿಸಿದ ಅರಬ್ಬರು ಸ್ಥಳೀಯರನ್ನು ಸಂಪೂರ್ಣವಾಗಿ ಇಸ್ಲಾಮೀಕರಣಗೊಳಿಸಿದರು. 1799ರಲ್ಲಿ ನೆಪೋಲಿಯನ್‌ ತನ್ನ ಸೇನೆಯೊಂದಿಗೆ ಬಂದಾಗಲೂ ಫಿಲೇ ತನ್ನ ಅಂತಃಸತ್ವವನ್ನು ಉಳಿಸಿಕೊಂಡಿರುವುದು ದಾಖಲಾಗಿದೆ.
ಮುಳುಗಿದ್ದ ದೇವಾಲಯ
ನಲವತ್ತು ವರ್ಷಗಳ ಹಿಂದೆ 'ಟೆಂಪಲ್ ಆಫ್ ಫಿಲೇ' ನೋಡಲು ಫಿಲೇ ದ್ವೀಪಕ್ಕೆ ದೋಣಿಯಲ್ಲೇ ಹೋದರೂ ನೀರಿನಲ್ಲಿ ಅರ್ಧಕ್ಕರ್ಧ ಮುಳುಗಿದ್ದ ದೇವಾಲಯ ಸಮುಚ್ಛಯವನ್ನು ನೋಡಿ ಹಿಂದಿರುಗಬೇಕಾಗಿತ್ತು. ಅದಕ್ಕೆ ಕಾರಣ 19ನೇ ಶತಮಾನದಲ್ಲಿ ನಿರ್ಮಾಣವಾದ ಆಸ್ವಾನ್‌ ಅಣೆಕಟ್ಟು.
ಆಸ್ವಾನ್‌ನಲ್ಲಿ ಅಣೆಕಟ್ಟನ್ನು ನಿರ್ಮಿಸಲು ತೀರ್ಮಾನಿಸಿದಾಗ ಫಿಲೇ ಮುಳುಗಡೆಯ ಭೀತಿಯನ್ನು ಎದುರಿಸಿತು. ದೇವಾಲಯವನ್ನು ಸ್ಥಳಾಂತರಿಸಲು ಸಾಕಷ್ಟು ಚರ್ಚೆ ನಡೆದು ಕಡೆಗೆ ಯಥಾಸ್ಥಿತಿಯಲ್ಲಿ ಉಳಿಸಲಾಯಿತು. ಆದರೆ ಡ್ಯಾಂನಿಂದಾಗಿ ನೀರಿನ ಮಟ್ಟ ಏರುವುದರಿಂದ ವರ್ಷಕ್ಕೆ ಆರು ತಿಂಗಳು ದೇವಾಲಯವು ನೈಲ್‌ ನೀರಿನಲ್ಲಿ ಮುಳುಗಿರುವಂತಾಯಿತು. ಮುಂದೆ ಎರಡು ಬಾರಿ ಆಸ್ವಾನ್‌ ಅಣೆಕಟ್ಟನ್ನು ಎತ್ತರಿಸಿದ್ದರಿಂದ 'ಟೆಂಪಲ್ ಆಫ್ ಫಿಲೇ' ಸಂಪೂರ್ಣ ನೀರಿನಲ್ಲಿ ಮುಳುಗಿಹೋಯಿತು. ಆಗ ದೇವಾಲಯವನ್ನು ಸ್ಥಳಾಂತರಿಸದೆ ಅನ್ಯ ಮಾರ್ಗವಿರಲಿಲ್ಲ.
1972ರಲ್ಲಿ ಅಗಿಲ್‌ಖಿಯ್ಯಾ ಎಂಬ ದ್ವೀಪಕ್ಕೆ ಫಿಲೇ ದೇವಾಲಯ ಸಮುಚ್ಚಯದ ಸ್ಥಳಾಂತರ ಕಾರ್ಯ ಪ್ರಾರಂಭವಾಯಿತು. ಸುಮಾರು ಎರಡೂವರೆ ವರ್ಷಗಳ ಕಾಲ ದೇವಾಲಯದ ಕಟ್ಟಡವನ್ನು 40 ಸಾವಿರ ತುಂಡುಗಳನ್ನಾಗಿಸಿ ದೋಣಿಗಳಲ್ಲಿ ಸಾಗಿಸಲಾಯಿತು. ಯುನೆಸ್ಕೋ ಮತ್ತು ಈಜಿಫ್ಷಿಯನ್‌ ಸರ್ಕಾರ ಜಂಟಿಯಾಗಿ ಸುಮಾರು ಹತ್ತು ವರ್ಷಗಳ ಕಾಲ ಶ್ರಮವಹಿಸಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯದ ಸಾಹಸವನ್ನು ನಡೆಸಿದವು.
ಐಸಿಸ್‌ ದೇವತೆ
'ರಾ' ಎಂದು ಕರೆಯಲಾಗುವ ಸೂರ್ಯದೇವ ಈಜಿಪ್ಟ್‌ನ ಪ್ರಧಾನ ದೇವತೆ. 'ರಾ'ನ ಮಕ್ಕಳಾದ ಷು ಮತ್ತು ಟೆಫ್ನುತ್ ದಾಂಪತ್ಯದ ಫಲವಾಗಿ ಭೂಮಿಯ ದೇವತೆ 'ಸೆಬ್' ಹಾಗೂ ಆಕಾಶದ ದೇವಿ 'ನುತ್' ಜನಿಸಿದರು. ಬೆಳೆದ ನಂತರ ಇವರ ದಾಂಪತ್ಯದಿಂದ ಈಜಿಪ್ಟ್‌ನ ಪ್ರಧಾನ ದೇವತೆಗಳು– ಗಂಡು ಮಕ್ಕಳಾದ ಒಸೈರಿಸ್ ಹಾಗೂ ಸೆತ್, ಹೆಣ್ಣುಮಕ್ಕಳಾದ ಐಸಿಸ್ ಮತ್ತು ನೆಫ್ತಿಸ್– ಹುಟ್ಟಿದರು. ಒಸೈರಿಸ್ ಐಸಿಸ್‌ಳನ್ನು ಮದುವೆಯಾದರೆ, ಸೆತ್ ನೆಫ್ತಿಸ್‌ಳನ್ನು ಮದುವೆಯಾದ. ಒಸೈರಿಸ್ ಮತ್ತು ಐಸಿಸ್‌ರ ಮಗನೇ 'ಹೋರಸ್'.
ಒಸೈರಿಸ್ ಸಿಂಹಾಸನವನ್ನು ಅಲಂಕರಿಸಿದ. ಜ್ಞಾನಿ ಮತ್ತು ಪ್ರಜಾನುರಾಗಿಯಾಗಿದ್ದ ಒಸೈರಿಸ್ ಬಗ್ಗೆ ಪ್ರಜೆಗಳು ಅತೀವ ಪ್ರೀತಿ ವಿಶ್ವಾಸವನ್ನು ಹೊಂದಿದ್ದರು. ಆದರೆ ಐಸಿಸ್‌ಳ ಸೋದರ ಸೆತ್ ಅಸೂಯಾಪರನಾಗಿದ್ದು ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಂಚೊಂದನ್ನು ರೂಪಿಸಿದ. ಒಸೈರಿಸ್‌ನನ್ನು ಶವಪೆಟ್ಟಿಗೆಯಲ್ಲಿ ಮಲಗುವಂತೆ ಮಾಡಿ ಇತರ ಸಂಚುಕೋರರ ಸಹಾಯದಿಂದ ಅದರ ಮುಚ್ಚಳ ಹಾಕಿದ. ಬಲವಾದ ಮೊಳೆಗಳಿಂದ ಮುಚ್ಚಳವನ್ನು ಭದ್ರಪಡಿಸಿದ. ಉಸಿರಾಡಲು ಸಾಧ್ಯವಾಗದೆ ಒಸೈರಿಸ್ ಪ್ರಾಣ ಬಿಟ್ಟ. ನಂತರ ಸೆತ್ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ನೈಲ್ ನದಿಯಲ್ಲಿ ಎಸೆದ.
ಗಂಡನ ಕೊಲೆಯ ವಿಷಯ ತಿಳಿದು ಐಸಿಸ್ ದುಃಖದಿಂದ ನೈಲ್ ನದಿಯಲ್ಲಿ ತೇಲಿಬಿಟ್ಟ ಶವದ ಪೆಟ್ಟಿಗೆಯನ್ನು ಹುಡುಕುತ್ತಾ ಹೊರಟಳು. ಐಸಿಸ್‌ಳಿಗೆ ಸಹಾಯಕಳಾಗಿ ಅವಳ ತಂಗಿ ನೆಫ್ತಿಸ್ ಬಂದಳು. ತನ್ನ ಗಂಡ ಸೆತ್ ಮಾಡಿದ್ದ ದುಷ್ಕೃತ್ಯ ಅವಳಿಗೆ ಹಿಡಿಸಿರಲಿಲ್ಲ. ಅಲ್ಲದೆ ನೆಫ್ತಿಸ್‌ಗೆ ಒಸೈರಿಸ್ ವಿಷಯದಲ್ಲಿ ಪ್ರೇಮವಿದ್ದು ಅವನಿಂದ ಅನೂಬಿಸ್ ಎಂಬ ಮಗನನ್ನೂ ಪಡೆದಿರುತ್ತಾಳೆ. ಆದರೆ ಸೆತ್‌ನ ಭಯದಿಂದ ಆ ಮಗುವನ್ನು ಬೇರೆಡೆ ಬಿಟ್ಟಿರುತ್ತಾಳೆ.
ಐಸಿಸ್ ಮತ್ತು ನೆಫ್ತಿಸ್ ಒಸೈರಿಸ್ ಇರುವ ಶವದ ಪೆಟ್ಟಿಗೆಯನ್ನು ಪತ್ತೆ ಹಚ್ಚುತ್ತಾರೆ. ಪೆಟ್ಟಿಗೆಯನ್ನು ತೆರೆದು ಒಸೈರಿಸ್‌ನ ಮೃತದೇಹವನ್ನು ಕಂಡು ದುಃಖಿಸುತ್ತಾರೆ. ಇಬ್ಬರೂ ದೇವತೆಗಳಾದ್ದರಿಂದ ಮಂತ್ರಶಕ್ತಿಯಿಂದ ಒಸೈರಿಸ್‌ಗೆ ಜೀವ ಬರೆಸಲು ಪ್ರಯತ್ನಿಸುತ್ತಾರೆ. ಇವರಿಬ್ಬರ ಪ್ರಯತ್ನದಿಂದ ಒಸೈರಿಸ್‌ಗೆ ಕೆಲವು ಕ್ಷಣಗಳು ಮಾತ್ರ ಜೀವ ಬರುತ್ತದೆ. ಜೀವ ಪಡೆದ ಒಸೈರಿಸ್‌ನ ದೇಹದ ಸುತ್ತ ಐಸಿಸ್ ಸಂತೋಷದಿಂದ ಪಕ್ಷಿಯಾಗಿ ಹಾರಾಡುತ್ತಾಳೆ. ಒಸೈರಿಸ್ ಮತ್ತು ಐಸಿಸ್‌ರ ಅಂದಿನ ಸಂಗಮದ ಫಲವಾಗಿ ಐಸಿಸ್ ಗರ್ಭವತಿಯಾಗುತ್ತಾಳೆ. ಅವಳು ಹುಟ್ಟಿದ ತನ್ನ ಮಗನಿಗೆ 'ಹೋರಸ್' ಎಂದು ಹೆಸರಿಡುತ್ತಾಳೆ.
ಇತ್ತ ಸೆತ್, ಒಸೈರಿಸ್‌ನ ದೇಹವನ್ನು ಹದಿನಾಲ್ಕು ತುಂಡುಗಳನ್ನಾಗಿ ಮಾಡಿ ಈಜಿಪ್ಟ್ ತುಂಬಾ ಹರಡುತ್ತಾನೆ. ಕೆಲವನ್ನು ನೈಲ್ ನದಿಯಲ್ಲಿ ಮುಳುಗಿಸುತ್ತಾನೆ. ಈ ವಿಷಯ ತಿಳಿದ ಐಸಿಸ್ ತನ್ನ ಮಗ ಹೋರಸ್, ತಂಗಿಯ ಮಗ ಅನೂಬಿಸ್ ಮತ್ತು ಥೋಥ್‌ರ ಸಹಾಯ ಪಡೆದು ತನ್ನ ಗಂಡನ ದೇಹದ ಭಾಗಗಳನ್ನು ಹುಡುಕಿ ಒಂದುಗೂಡಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಅವಳ ಮಂತ್ರಶಕ್ತಿಯ ಬಲದಿಂದ ಈ ಬಾರಿ ಒಸೈರಿಸ್‌ಗೆ ಜೀವ ಬರುವುದಿಲ್ಲ. ಶವಲೇಪನ ಕ್ರಿಯೆಯಿಂದ ಒಸೈರಿಸ್‌ನ ದೇಹವನ್ನು ಕಾಪಿಡಲಾಗುತ್ತದೆ.
ಬೆಳೆದ ಹೋರಸ್‌, ಸೆತ್ ಮೇಲೆ ಯುದ್ಧ ಸಾರುತ್ತಾನೆ. ಘನಘೋರ ಯುದ್ಧ ನಡೆಯುತ್ತದೆ. ಮೊಸಳೆ ವೇಷ ಧರಿಸಿದ್ದ ಸೆತ್‌ನನ್ನು ತುಳಿದು ಅವನ ಕಣ್ಣುಗಳನ್ನು ಕೀಳುತ್ತಾನೆ. ಆ ಕಣ್ಣುಗಳನ್ನು ತೆಗೆದುಕೊಂಡು ಬಂದು ಶವಲೇಪನ ಕ್ರಿಯೆಯಿಂದ ಕಾಪಿಟ್ಟಿದ್ದ ಒಸೈರಿಸ್‌ನ ದೇಹದ ಬಾಯಿಯಲ್ಲಿ ಹಾಕುತ್ತಾನೆ. ಆಗ ಒಸೈರಿಸ್‌ಗೆ ಜೀವ ಬರುತ್ತದೆ!
ಜೀವ ಬಂದ ಒಸೈರಿಸ್ 'ಸತ್ತವರ ಲೋಕ'ದ ಒಡೆಯನಾಗುತ್ತಾನೆ. ಅಲ್ಲಿಯ ಧರ್ಮದೇವತೆಯಾಗುತ್ತಾನೆ. ಸಿಂಹಾಸನದ ಮೇಲೆ ಕುಳಿತು ಪ್ರತಿಯೊಂದು ಆತ್ಮದ ಶಿಕ್ಷೆಯನ್ನು ನಿಗದಿಪಡಿಸುವವನಾಗುತ್ತಾನೆ. ಅವನ ಅಕ್ಕಪಕ್ಕದಲ್ಲಿ ಅನೂಬಿಸ್ ಮತ್ತು ಹೋರಸ್ ನಿಲ್ಲುತ್ತಾರೆ. ಧರ್ಮಪೀಠದ ಮೇಲೆ ಕುಳಿತ ಒಸೈರಿಸ್‌ನ ಹಿಂದೆ ಐಸಿಸ್ ಹಾಗೂ ನೆಫ್ತಿಸ್ ನಿಂತಿರುತ್ತಾರೆ.
ಉಚ್ಛ್ರಾಯ ಸ್ಥಿತಿ
ಟಾಲೆಮಿಗಳ ಕಾಲದಲ್ಲಿ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಫಿಲೇ, ಮೆಡಿಟರೇನಿಯನ್‌ ಜಲಾನಯನ ಪ್ರದೇಶದ ಯಾತ್ರಿಕರ ಆಕರ್ಷಣೀಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿತ್ತು. ಕ್ರಿಶ್ಚಿಯನ್‌ ಯುಗದಲ್ಲೂ ಈ ಐಸಿಸ್‌ ದೇವಾಲಯ ಉಳಿಯಲು ಆಕೆಯ ಭಕ್ತವೃಂದವೇ ಕಾರಣ. ಕ್ರಿ.ಶ. 550 ರ ನಂತರ ಕ್ರಿಶ್ಚಿಯನ್ನರು ದೇವಾಲಯದ ಕೆಲ ಭಾಗಗಳನ್ನು ಚರ್ಚ್‌ ಆಗಿ ಮಾರ್ಪಡಿಸಿದರೂ ಮುಂದೆ ಅದು ಉಳಿಯಲಿಲ್ಲ.