text
stringlengths
0
61.5k
Read more about: palya cookery green gram masala ಪಲ್ಯ ಹೆಸರುಕಾಳು ಮಸಾಲಾ
The best part is that you can prepare it easily and quickly. You can also adjust the spiciness of the dish as per your taste. If you are at home today and confused what to prepare for lunch, check out the recipe for green gram masala.
ಖಿನ್ನತೆಯ ಈ ಲಕ್ಷಣಗಳು ನಿಮ್ಮಲ್ಲೂ ಕಾಣಿಸಿಕೊಳ್ಳಬಹುದು ಎಚ್ಚರ! – New News Kannada
ಖಿನ್ನತೆಯ ಈ ಲಕ್ಷಣಗಳು ನಿಮ್ಮಲ್ಲೂ ಕಾಣಿಸಿಕೊಳ್ಳಬಹುದು ಎಚ್ಚರ!
ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಖಿನ್ನತೆ ಅಥವಾ ಇಂಗ್ಲಿಷ್ ಅಲ್ಲಿ ಡಿಪ್ರೆಶನ್ ಅಂತ ಕರಿಯೋ ಈ ಖಿನ್ನತೆ ಒಂದುವೇಳೆ ನಿಮಗೆ ಬಂದಿದ್ದರೆ ಅಥವಾ ನೀವು ಎಲ್ಲಾದರೂ ಹೊರಗಡೆ ಅಥವಾ ನಿಮ್ಮ ಮನೆಯೊಳಗೆ ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ, ಅದನ್ನು ಹೇಗೆ ಕಂಡು ಹಿಡಿಯುವುದು ಅದರ ಲಕ್ಷಣಗಳು ಏನೇನು ಎಂದು ನೋಡೋಣ. ವಿಶ್ವದಾದ್ಯಂತ ಇರುವ ಹಬ್ಬಿರುವ ಒಂದು ಅತೀ ಮುಖ್ಯವಾದ ಹಾಗೂ ಸಾಮಾನ್ಯ ಮನೋರೋಗ ಎಂದರೆ ಅದು ಖಿನ್ನತೆ ಅಥವಾ ಡಿಪ್ರೆಶನ್. ಇನ್ನೂ ನಮ್ಮ ಸಮಾಜದಲ್ಲಿ ಎಲ್ಲರೂ ಅಷ್ಟು ಇದನ್ನು ಯಾವುದೇ ನಿರ್ಭಂಧ ಇಲ್ಲದೆ ಓಪನ್ ಆಗಿ ಈ ಮನೋರೋಗಕ್ಕೆ ಇರುವ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಬರೋದಿಲ್ಲ. ಅವರಿಗೆ ತುಂಬಾ ಮುಜುಗರ ಆಗುವಂತಹ ವಿಷ್ಯ ಆಗಿಬಿಟ್ಟಿದೆ. ನಾನು ಮನೋರೋಗಿ ಅಂತ ಪ್ರೂವ್ ಆಗಿಬಿಡುತ್ತೆ, ಒಂದುವೇಳೆ ನಾನು ಖಿನ್ನತೆ ಇಂದ ಬಳಲುತ್ತಾ ಇರುವುದು ಬೇರೆಯವರಿಗೆ ಗೊತ್ತಾದರೆ ಅವರು ನನ್ನ ಬಗ್ಗೆ ಏನು ಅಂದುಕೊಳ್ಳಬಹುದು. ನನ್ನನು ದುರ್ಬಲ ಅಂತ ತಿಳಿದುಬಿಡು ತ್ತಾರೆ. ಹೀಗೆಲ್ಲಾ ಯೋಚನೆ ಮಾಡಿ ಮುಜುಗರ ದಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಹಾಗೆ ಮನೆಯಲ್ಲಿ ಉಳಿದು ಬಿಡುತ್ತಾರೆ.
ತುಂಬಾ ಜನರು ಈ ಸಮಸ್ಯೆಯಿಂದ ಬಳಲುತ್ತಿ ರೂತ್ತಾರೆ. ಕೆಲಸದ ಮೇಲೆ ಆಸಕ್ತಿ ವಹಿಸೋಕೆ ಆಗ್ತಾ ಇರಲ್ಲ, ಏಕಾಗ್ರತೆ ಮೂಡದೇ ಅವರು ಜೀವನದಲ್ಲಿ ಒದ್ದಾಡುತ್ತಾ ಇರ್ತಾರೆ. ಇದಕ್ಕೆ ಒಳ್ಳೆಯ ನಿಮ್ಮ ಎಲ್ಲಾ ಖಿನ್ನತೆ ಯಾನ್ನಾ ಹೋಗಲಾಡಿಸುವ ಚಿಕಿತ್ಸೆ ಇದೆ. ಒಂದುವೇಳೆ ಖಿನ್ನತೆ ಗೆ ಒಳಗಾಗಿದ್ದರೆ ಯಾವ ಯಾವ ಗುಣ ಲಕ್ಷಣಗಳು ಕಾಣಿಸಬಹುದು ಎಂದು ತಿಳಿಯೋಣ. ಕೆಲವೊಬ್ಬರು ತುಂಬಾ ಸಾಮಾನ್ಯವಾಗಿ ಮತ್ತು ಸರಳವಾಗಿ ಇದನ್ನು ತೋಗೋತರೆ ಅಂದ್ರೆ ಯಾವುದೋ ಚಿಕ್ಕ ವಿಷಯಕ್ಕೆ ಬೇಜಾರಾದ್ರೆ ನಾನು ತುಂಬಾ ಡೀಪ್ ರೆಸ್ ಆಗಿದಿನಿ ಅಂತ ಹೇಳ್ತಾ ಇರ್ತಾರೆ, ಆದ್ರೆ ಖಂಡಿತ ಅದು ಖಿನ್ನತೆ ಅಲ್ಲ. ಯಾರಿಗೆ 2 ವಾರಗಳು ಸತತವಾಗಿ ಮೂಡ್ ತುಂಬಾ ಆಫ್ ಇರುತ್ತೆ ಅಥವ ಲೋ ಇರುತ್ತೆ, ತುಂಬಾ ಬೇಜಾರು ಅನ್ನೋ ಭಾವನೆ ಬರ್ತಾ ಇರುತ್ತೆ, ಇದರ ಜೊತೆಗೆ ಬರೀ ಬೇಜಾರು ಅಲ್ಲದೇ ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವುದು, ಮನಸ್ಸಿಗೆ ಖುಷಿ ಕೊಡೋ ಕೆಲಸಗಳನ್ನು ಮಾಡಿದರೂ ಅವರು ಖುಷಿಯಾಗಿ ಇರಲು ಆಗದೆ ಇರುವುದು, ಯಾರ ಜೊತೆಗೋ ಮಾತನಾಡಲು ಇಷ್ಟ ಆಗೋದಿಲ್ಲ, ಒಬ್ಬರೇ ಇರಬೇಕು, ಯಾರ ಜೊತೆಯೂ ಯಾವುದೇ ಸಂಪರ್ಕ ಬೇಡ, ಜನರಿಂದ ದೂರ ಇದ್ದು ಬಿಡೋಣ, ಯಾವ ಫ್ರೆಂಡ್ಸ್, ಫ್ಯಾಮಿಲಿ ಯಾರೂ ಬೇಡ ಅಂತ ಅನ್ನಿಸುತ್ತಾ ಇದ್ದರೆ,
ಮತ್ತು ಅವರಿಗೆ ಯಾವ ವಿಷಯದಲ್ಲೂ ಆಸಕ್ತಿ ಇರದೇ ಇರುವುದು, ಅಂದ್ರೆ ಹೊರಗಡೆ ಹೋಗೋದು, ಆಟ ಆಡುವುದು, ಬೇರೆಯವರ ಜೊತೆ ಮಾತನಾಡುವುದು ಇದ್ಯವುದರಲ್ಲಿ ಆಸಕ್ತಿ ಇರೋದಿಲ್ಲ. ತುಂಬಾ ಸುಸ್ತು ಆಗೋದು, ದೇಹ ಶಕ್ತಿಹೀನ ಆಗ್ತಿದೆ, ದುರ್ಬಲ ಮನಸ್ಸು ದೇಹ, ದೇಹದಿಂದ ಶಕ್ತಿ ಸುಮ್ ಸುಮ್ನೆ ಹೋಗ್ತಾ ಇದೆ, ಸ್ವಲ್ಪ ಕೆಲಸ ಮಾಡಿದ್ರೂ ಬೇಗ ಸುಸ್ತು ಆಗೋದು ಇವೆಲ್ಲಾ ಖಿನ್ನತೆ ಗೆ ಒಳಗಾಗಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳು. ಇನ್ನೂ ಕೆಲವು ಲಕ್ಷಣಗಳು ಎಂದರೆ ನಿದ್ದೆ ಕೆಡುವುದು, ಅಂದ್ರೆ ಏನು ಮಾಡಿದರೂ ನಿದ್ದೆ ಬರದೇ ಇರುವುದು, ಇಲ್ಲ ಅಂದ್ರೆ ಜಾಸ್ತಿ ನಿದ್ದೆ ಮಾಡೋದು, ಕಷ್ಟಗಳು, ಬೇಜಾರನ್ನು ಮರೆಯಲು ಜಾಸ್ತಿ ನಿದ್ದೆ ಮಾಡಬೇಕು ಎನ್ನುವ ಭಾವನೆ ಬರೋದು, ಅದೇ ರೀತಿ ಕೆಲವೊಮ್ಮೆ ಹಸಿವೇ ಆಗಲ್ಲ, ಇನ್ನೂ ಕೆಲವರಿಗೆ ಜಾಸ್ತಿ ಹಸಿವು, ತಿನ್ನುವುದು ಆಗುತ್ತಾ ಇರುತ್ತದೆ. ತೂಕ ಜಾಸ್ತಿ ಅಥವಾ ತೂಕ ಕಡಿಮೆ ಆಗೋದು, ಶೇಕಡಾ ಹತ್ತು ಹತ್ತಕ್ಕಿಂತ ಜಾಸ್ತಿ ದೇಹದ ತೂಕ ಜಾಸ್ತಿ ಆದ್ರೆ, ಇನ್ನೂ ಕೆಲವರಲ್ಲಿ ಜೀವನ ಸಾಕು ನಂಗೆ ಬದುಕೋಕೆ ಇಷ್ಟ ಇಲ್ಲ, ನಾನು ಏನಾದರೂ ಮಾಡಿಕೊಂಡು ಸತ್ತು ಹೋಗ್ತೀನಿ ಎನ್ನುವ ನಿರ್ಧಾರ, ಭಾವನೆಗಳು ಪದೇ ಪದೇ ಮೇಲಿಂದ ಮೇಲೆ ಮನಸ್ಸಿನಲ್ಲಿ ಮೂಡಿದರೆ ಅದನ್ನು ಖಿನ್ನತೆ ಎಂದು ಗುರುತಿಸಬಹುದು. ನಿಮ್ಮಲ್ಲೂ ಈ ತರಹದ ಸೂಚನೆಗಳು, ಸಂಶಯಗಳು ಇದ್ದರೆ ತಪ್ಪದೇ ಬೇಗ ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ. ಶುಭದಿನ.
ಋತುಚಕ್ರದ ಸಮಸ್ಯೆಯೇ? ಹಾಗಾದರೆ ಇಂದೇ ತಿನ್ನಲು ಶುರು ಮಾಡಿ ಈ ಗುಲ್ಕನ್.
ಊಟದ ಬಳಿಕ ಮಜ್ಜಿಗೆ ಸೇವಿಸ್ತಿರಾ? ಹಾಗಾದರೆ ಭೂಲೋಕದ ಅಮೃತ ಮಜ್ಜಿಗೆ ಇಂದ ಆಗುವ ಅನುಕೂಲಗಳು ಏನೇನು ಅಂತ ತಿಳಿದರೆ, ದಿನಾ ಮಜ್ಜಿಗೆ ಕುಡಿಯಲು ಶುರು ಮಾಡ್ತೀರಾ!
ಕೊರೋನ ಪ್ರಭೇದ ಕಾಣಿಸಿಕೊಂಡ ರಾಷ್ಟ್ರಗಳಿಂದ 12,300 ಪ್ರಯಾಣಿಕರು ರಾಜ್ಯಕ್ಕೆ ಆಗಮನ: ಎಚ್.ಕೆ.ಪಾಟೀಲ್ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Dec 22, 2020, 10:34 PM IST
ಬೆಂಗಳೂರು, ಡಿ.22: ಬ್ರಿಟನ್ ದೇಶದಲ್ಲಿ ಕೊರೋನ ವೈರಸ್ ಎರಡನೆ ಪ್ರಭೇದವು ಕಾಣಿಸಿಕೊಂಡಿರುವ ವರದಿಗಳು ಮತ್ತು ಈ ಎರಡನೆ ಪ್ರಭೇದವು ಹರಡುವಿಕೆಯಲ್ಲಿ ಇನ್ನಷ್ಟು ಹೆಚ್ಚು ವ್ಯಾಪಕವಾಗಿದೆ ಎಂದು ಗೊತ್ತಾಗಿ ಕಳವಳಕಾರಿ ಪರಿಸ್ಥಿತಿ ನಿರ್ಮಿಸಿದೆ. ಆದರೂ, ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಬ್ರಿಟನ್, ನೆದರ್‍ಲ್ಯಾಂಡ್ ಮತ್ತು ಇತರ ದೇಶಗಳಿಂದ ಈಗಾಗಲೆ ಭಾರತಕ್ಕೆ ಬಂದಿರುವ ಪ್ರಯಾಣಿಕರ ಚಲನವಲನವನ್ನು ನಿಯಂತ್ರಿಸುವ ಅಥವಾ ನಿಗಾವಹಿಸುವ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗೆ ಪತ್ರ ಬರೆದಿರುವ ಅವರು, ನನಗೆ ಬಂದಿರುವ ಮಾಹಿತಿಯಂತೆ 12,300 ಜನ ಪ್ರಯಾಣಿಕರು ಕೊರೋನ ಪ್ರಭೇದ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕರನ್ನು ಕನಿಷ್ಠ ಸ್ಕ್ರೀನಿಂಗ್ ಸಹ ಮಾಡಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇವರೆಲ್ಲರನ್ನು ಹೊರಗೆ ಬಂದ ಮೇಲೆ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದರೆ, ಅವರಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡು ಬಂದರೆ ಯಾವುದೇ ರೀತಿಯ ಪ್ರಯೋಜನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗದು. ಈಗ ಆರ್‍ಟಿಪಿಸಿಆರ್ ಪರೀಕ್ಷೆಗೆ ಮುಂದಾಗಿರುವುದು ರಾಜ್ಯ ಸರಕಾರದ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ. ಈ ಕೂಡಲೇ ಕಾರ್ಯಪ್ರವೃತ್ತರಾಗಿ ಕೊರೋನದ ಎರಡನೆ ಪ್ರಭೇದ ಕಂಡು ಬಂದಿರುವ ದೇಶಗಳಿಂದ ಬಂದಿರುವ ಪ್ರಯಾಣಿಕರನ್ನು ಕೂಡಲೆ ಐಸೋಲೇಷನ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಹಾವಿನಂತೆ ಕಾಣುವ ಪಡವಲಕಾಯಿ ಉಪಯೋಗಗಳು ತಿಳಿದಿದ್ದೀಯಾ? | HASSAN NEWS
Home Health/Beauty Tips ಹಾವಿನಂತೆ ಕಾಣುವ ಪಡವಲಕಾಯಿ ಉಪಯೋಗಗಳು ತಿಳಿದಿದ್ದೀಯಾ?
ಹಾವಿನಂತೆ ಇರುವ ಪಡವಲಕಾಯಿಯನ್ನು ನೀವೆಲ್ಲರೂ ನೋಡಿರುತ್ತೀರಿ. ಆದರೆ ಇದರಲ್ಲಿರುವ ಆರೋಗ್ಯಕರ ಗುಣಗಳು ನಿಮ್ಮೆಲ್ಲರಿಗೂ ಅಷ್ಟು ತಿಳಿದಿರುವುದಿಲ್ಲ. ಈ ಪಡವಲಕಾಯಿ ಬಹಳ ಆರೋಗ್ಯಕರ. ಇದರಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿದೆ.
ಇದರಲ್ಲಿರುವ ವಿಟಮಿನ್ ಎ,ಬಿ,ಸಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಅಂಶ ಎಲ್ಲಾ ರೀತಿಯಲ್ಲೂ ನಮ್ಮದೇಹಕ್ಕೆ ಸಹಾಯಕಾರಿ. ಹಾಗಾಗಿ ಪಡವಲಕಾಯನ್ನು ನಿಮ್ಮ ಆಹಾರಗಳಲ್ಲಿ ಏಕೆ ಸೇರಿಸಿ ತಿನ್ನಬೇಕು ಅನ್ನೋದು ಇಲ್ಲಿದೆ
ಪಡವಲಕಾಯಿ ಪ್ರಯೋಜನಗಳು
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಈ ಕೋವಿಡ್ ಸಮಯದಲ್ಲಿ ನಮಗೆಲ್ಲರಿಗೂ ಮುಖ್ಯವಾದದ್ದು ರೋಗನಿರೋಧಕ ಶಕ್ತಿ. ಪಡವಲಕಾಯಿ ಸಂಪೂರ್ಣ ರೋಗನಿರೋಧಕ ಗುಣಗಳಿವೆ ಹಾಗಾಗಿ ಇದರ ಸೇವನೆ ಬಹಳ ಲಾಭಕಾರಿ.
• ಹೃದಯದ ಸಮಸ್ಯೆಗಳನ್ನು ತಡೆಗಟ್ಟುತ್ತದೆ:
ವಯಸ್ಸಾದವರಲ್ಲಿ ಹೃದಯದ ಸಮಸ್ಯೆಗಳು ಹೆಚ್ಚು ಮಟ್ಟಿಗೆ ಕಾಣಬಹುದು. ಅಡಲಕಾಯಿಸೇವನೆಯಿಂದ ರಕ್ತ ಸಂಚಾರವನ್ನು ಸುಧಾರಣೆ ಮಾಡಬಹುದು ಮತ್ತು ಎಲ್ಲಾ ಹೃದಯದ ಸಮಸ್ಯೆಗಳನ್ನು ತಡೆಗಟ್ಟಬಹುದು. ಎದೆಯ ಸಮಸ್ಯೆ ಇರುವವರು ಪ್ರತಿದಿನ ಪಡವಲಕಾಯಿ ರಸವನ್ನು ಕೂಡ ಸೇವಿಸಿ ಈ ಸಮಸ್ಯೆಗಳಿಂದ ದೂರವಾಗಬಹುದು.
• ಮಧುಮೇಹ ಸಮಸ್ಯೆಗೆ ಪರಿಣಾಮಕಾರಿ:
ಕಾಲದಲ್ಲಿ ಮಧುಮೇಹ ಸಮಸ್ಯೆ ಸಾಮಾನ್ಯವಾಗಿದೆ, ಇದನ್ನು ಮಧುಮೇಹ ಔಷಧಿಗಳನ್ನು ಕೂಡ ಕೆಲವು ದೇಶಗಳಲ್ಲಿ ಬಳಸುತ್ತಾರಂತೆ ಮತ್ತು ಇದರಲ್ಲಿ ಬಹಳ ಕಡಿಮೆ ಕೊಬ್ಬಿನಂಶವಿರುವುದರಿಂದ ದೇಹದ ತೂಕವನ್ನು ಇಳಿಸಲು ಕೂಡ ಸಹಾಯಕಾರಿ.
• ದೇಹದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ:
ಪಡವಲಕಾಯಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯಲು ಉಪಯೋಗಕಾರಿ ಇದರಲ್ಲಿರುವ ಮೆಗ್ನೀಷಿಯಂ ಕನಿಜಾಂಶವು ಈ ಕಾರ್ಯದಲ್ಲಿ ಬಹಳ ಸಹಾಯಕಾರಿ.
ಹೀಗಾಗಿ ಪಡವಲಕಾಯಿ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಪಡವಲಕಾಯಿಯನ್ನು ಸೇವಿಸುಲು ಮರೆಯಬೇಡಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ನೋಡಲು ಸಣ್ಣದಾದ ಈ ಒಣ ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ?
Previous articleಕರುನಾಡಿನ ಪ್ರತಿಯೊಬ್ಬರಿಗು ಸೆಪ್ಟೆಂಬರ್ ಒಳಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಿ ಕರವೇ ಹಾಸನ ಆಗ್ರಹ
Next articleಸಕಲೇಶಪುರದಲ್ಲಿ ಎರಡು ಕಾಡಾನೆಗಳ ಸೆರೆ ಹಿಡಿದ ಸಂದರ್ಭದ ರೋಚಕತೆ
" ಸ್ವದೇಶಿ ಜಾಗರಣ ಮಂಚ್ ರೈತರಿಂದ ನೇರ ಗ್ರಾಹಕರಿಗೆ ಸಾರ್ವಭೌಮತ್ವ "°ಹಾಸನ ನಗರದಲ್ಲಿ ಸಾವಯವ ಸಂತೆ
farmers news HassanNews - October 31, 2020 0
ಹಾಸನ : (ಹಾಸನ್_ನ್ಯೂಸ್) #ರೈತಮಿತ್ರ_ಹಾಸನ್_ನ್ಯೂಸ್ !," ಸ್ವದೇಶಿ ಜಾಗರಣ ಮಂಚ್ ರೈತರಿಂದ ನೇರ ಗ್ರಾಹಕರಿಗೆ ಸಾರ್ವಭೌಮತ್ವ "°ಹಾಸನ ನಗರದಲ್ಲಿ ಸಾವಯವ ಸಂತೆ°ಇದೇ ನವಂಬರ್ ದಿನಾಂಕ: 1–11–2020 ಭಾನುವಾರ°ಸಮಯ: ಬೆಳಿಗ್ಗೆ 7-30...
ಕೇಂದ್ರದ ದಿಟ್ಟ ನಡೆ, ನಗರದಲ್ಲೂ ಹರ್ಷದ ಹೊಳೆ | VIJAYAVANI - ವಿಜಯವಾಣಿ
ಕೇಂದ್ರದ ದಿಟ್ಟ ನಡೆ, ನಗರದಲ್ಲೂ ಹರ್ಷದ ಹೊಳೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370, 35ಎ ರದ್ದುಗೊಳಿಸುವ ಪ್ರಸ್ತಾವನೆಗೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ 'ಒಂದು ದೇಶ, ಒಂದು ಸಂವಿಧಾನ' ಸಾಕಾರಗೊಂಡಿದೆ. ಆ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಗಿದ್ದು, ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ವಾಗ್ದಾನ ಈಡೇರಿಸಿದೆ. ಕಣಿವೆ ರಾಜ್ಯ ಇಡೀ ದೇಶಕ್ಕೆ ಮುಕ್ತವಾಗಿದ್ದು, ಇತರ ರಾಜ್ಯದವರು ಅಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶ ಸಿಕ್ಕಂತಾಗಿದೆ. ರಾಜ್ಯವನ್ನು 2 ಭಾಗವಾಗಿ ವಿಭಜಿಸಿ ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ, ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈ ದಿಟ್ಟಹೆಜ್ಜೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಈ ಕುರಿತು ಓದುಗರು ವಿಜಯವಾಣಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಜಮ್ಮು-ಕಾಶ್ಮೀರ ಮರುವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದು, ಐತಿಹಾಸಿಕ ನಿರ್ಧಾರ. ಈ ತೀರ್ಮಾನ ವಿಶ್ವದ ಇತರ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.
| ಕೆ. ಸತ್ಯನಾರಾಯಣ
2ನೇ ಬಾರಿ ಸ್ವಾತಂತ್ರ್ಯ ಲಭಿಸಿದೆ
ಬ್ರಿಟಿಷರಿಂದ ಮೊದಲ ಬಾರಿ ಸ್ವಾತಂತ್ರ್ಯ ಪಡೆದಿದ್ದ ಭಾರತೀಯರು, ಸಂಸತ್ತಿನಲ್ಲಿ ಐತಿಹಾಸಿಕ ಮಸೂದೆ ಮಂಡನೆಯಿಂದ 2ನೇ ಬಾರಿ ಸ್ವಾತಂತ್ರ್ಯ ಪಡೆದಿದ್ದಾರೆ. ಈ ನಿರ್ಧಾರದಿಂದ ಎಲ್ಲರಿಗೂ ಸಂತೋಷವಾಗಿದೆ.
| ಕೃಷ್ಣ
ನೆನಪಿನಲ್ಲಿ ಉಳಿಯುವ ದಿನ
ಭಾರತ ಸ್ವಾತಂತ್ರ್ಯ ಗಳಿಸಿದ ದಿನ ಹೇಗೆ ಎಲ್ಲರಲ್ಲೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆಯೋ, ಹಾಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸವಲತ್ತುಗಳನ್ನು ರದ್ದುಪಡಿಸಿದ ಈ ದಿನ ಬಹುಜನರ ಮನಸ್ಸಿನಲ್ಲಿ ಉಳಿಯಲಿದೆ.
| ಅಚ್ಯುತ್​ರಾವ್
ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಇದರಿಂದ ರಕ್ಷಣೆಗೆ ಮಾಡುತ್ತಿದ್ದ ವೆಚ್ಚ ತಗ್ಗಬಹುದು. ಎಲ್ಲ ರಾಜ್ಯಗಳ ರೀತಿ ಜಮ್ಮು-ಕಾಶ್ಮೀರ ಕೂಡ ಅಭಿವೃದ್ಧಿ ಹೊಂದಿ, ಅಲ್ಲಿ ಶಾಂತಿ ನೆಲೆಸಲಿದೆ. ಇದು ಸೂಕ್ಷ್ಮ ವಿಷಯವಾಗಿರುವದರಿಂದ ಮುಂದೆ ಏನಾಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟಸಾಧ್ಯ.
| ಪಿ.ಮರಿಯಪ್ಪ
ಬಹಳಷ್ಟು ವರ್ಷ ಹಳೆಯದಾದ ಕಾನೂನಿನಿಂದ ಜಮ್ಮು ಮತ್ತು ಕಾಶ್ಮೀರದ ಜನ ವಿಶೇಷ ಸವಲತ್ತು ಪಡೆಯುತ್ತಿದ್ದರು. ಈಗ ಹೊಸ ಮಸೂದೆ ಮೂಲಕ ಅವುಗಳನ್ನು ರದ್ದು ಮಾಡಿ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಕಾನೂನು ಜಾರಿಗೆ ತರಲಾಗಿದೆ. ಇದು ನಿಸ್ಸಂಶಯವಾಗಿಯೂ ಹೊಸ ಶಕೆಯ ಆರಂಭ. ಹೊಸ ಕಾಯ್ದೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವವೇ ನಡೆಯಲಿದೆ.
| ರಶ್ಮಿ
ಜನರ ಆಶಯ ಈಡೇರಿದೆ
ಇಷ್ಟು ಬೇಗ ಸಂಸತ್​ನಲ್ಲಿ ಮಸೂದೆ ಮಂಡಿಸಲಾಗುತ್ತದೆ ಅಂದುಕೊಂಡಿರಲಿಲ್ಲ. ಆಶ್ಚರ್ಯ ಹಾಗೂ ಸಂತೋಷ ಎರಡೂ ಆಗಿದೆ. ಭಾರತೀಯರ ಬಹುದಿನಗಳ ಆಶಯ ಈಡೇರಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ಅಭಿನಂದನೆಗಳು.
| ಲಕ್ಷಿ್ಮೕನಾರಾಯಣ್
ದೇಶ ಒಂದಾಗಿದೆ
ರಾಷ್ಟ್ರದ ಎಲ್ಲ ರಾಜ್ಯಗಳು ಒಂದಾದರೆ, ಜಮ್ಮು ಮತ್ತು ಕಾಶ್ಮೀರವೇ ಒಂದಾಗಿತ್ತು. ಜನರಲ್ಲಿ ಅದು ನಮ್ಮ ದೇಶದಲ್ಲಿ ಇಲ್ಲ ಎನ್ನುವ ಭಾವನೆ ಇತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಅಧಿಕಾರಿಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಈ ದೇಶವೇ ಒಂದಾಗಿದೆ ಎನ್ನುವ ಭಾವನೆ ಇದೆ.
| ರಮೇಶ್ ಬಾಬು
ಎಂದೋ ಆಗಬೇಕಿದ್ದ ಕೆಲಸ
ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರಗಳನ್ನು ಹಿಂದೆಯೇ ರದ್ದು ಪಡಿಸಬೇಕಿತ್ತು. ಈ ಕುರಿತಾಗಿ ಜನಸಂಘ ಹಲವು ವರ್ಷಗಳ ಆಗಿನ ಸರ್ಕಾರಗಳ ಗಮನ ಸೆಳೆದಿತ್ತು. ಅಂತೂ ಈಗ ಸಾಧ್ಯವಾಗಿದೆ. ನಿಜವಾಗಿಯೂ ಸಂತೋಷ ಪಡಬೇಕಾದ ಮಹತ್ವದ ದಿನವಿದು.
| ಶಿವಾಜಿರಾವ್
ತ್ರಿವರ್ಣ ಧ್ವಜ ಹಾರಾಡಲಿದೆ
ಭಾರತೀಯರ 70 ವರ್ಷದ ಕನಸು ಈಗ ಈಡೇರಿದೆ. ಎಲ್ಲ ರಾಜ್ಯಗಳಂತೆ ಕಣಿವೆ ರಾಜ್ಯಕ್ಕೂ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಜನರು ನೆಮ್ಮದಿಯಿಂದ ಇರಬಹುದು.
| ಶಿವಕುಮಾರ್
ಇಡೀ ಪ್ರಪಂಚ ತಿರುಗಿ ನೋಡುತ್ತಿದೆ
ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಷಾ ಮಂಡಿಸಿದ ಜಮ್ಮು-ಕಾಶ್ಮೀರ ಪುನರ್​ವಿಂಗಡಣೆ ಮಸೂದೆಯನ್ನು ವಿಶ್ವದ ನಾಯಕರು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಈ ನಿರ್ಧಾರ ರಾಷ್ಟ್ರವನ್ನು ಇತರ ರಾಷ್ಟ್ರಗಳಿಗಿಂತ 50 ವರ್ಷ ಮುಂದಕ್ಕೆ ಕೊಂಡೊಯ್ದಿದೆ.
ಕಸುಬುದಾರಿಕೆಯಿಲ್ಲದ ಕಷ್ಟ! (ಚಿತ್ರ: ಓಬವ್ವ) | Prajavani
ಕಸುಬುದಾರಿಕೆಯಿಲ್ಲದ ಕಷ್ಟ! (ಚಿತ್ರ: ಓಬವ್ವ)
ವಿಶಾಖ ಎನ್. Updated: 30 ಅಕ್ಟೋಬರ್ 2011, 01:00 IST
ನ್ಯಾಯ, ನಿಷ್ಠೆಗೆ ಹೆಸರಾದ ನಾಯಕ. ಖಳರ ಕಾರಣಕ್ಕೆ ಅವನ ಬದುಕಿನಲ್ಲೊಂದು ದುರಂತ. ಆಮೇಲೆ ಸೇಡು. ನಡುವೆ ಪ್ರೀತಿಯೆಂಬ ಉಪ್ಪಿನಕಾಯಿ. ಅದಕ್ಕೆ ಹಾಡುಗಳ ಒಗ್ಗರಣೆ- ಈ ಹಂದರದ ಸಿನಿಮಾಗಳು ಭಾರತೀಯ ಚಿತ್ರ ರಂಗದಲ್ಲಿ ಲೆಕ್ಕವಿಲ್ಲದಷ್ಟು ಸಿಗುತ್ತವೆ.
ಕನ್ನಡದಲ್ಲೂ ಈ ಚೌಕಟ್ಟಿನ ಚಿತ್ರಗಳನ್ನು ಲೆಕ್ಕಹಾಕತೊಡಗಿದರೆ ಪಟ್ಟಿ ಉದ್ದವಾಗುತ್ತದೆ. ಆಗೀಗ ಜಾಣ ನಿರ್ದೇಶಕರು ನಾಯಕನ ಈ ಗುಣಗಳನ್ನು ನಾಯಕಿಗೆ ಅನ್ವಯಿಸಿ ಸಿನಿಮಾಗಳನ್ನು ಮಾಡಿದರು. ಟೈಗರ್ ಪ್ರಭಾಕರ್ ಆ್ಯಕ್ಷನ್ ಟ್ರೆಂಡ್ ಇದ್ದ ಕಾಲದಲ್ಲಿ `ಹೊಸ ಇತಿಹಾಸ~ ಎಂಬ ಸಿನಿಮಾ ಬಂದಾಗ, ಸೇಡು ತೀರಿಸಿಕೊಳ್ಳುವ ನಾಯಕಿಯಾಗಿ ಜಯಮಾಲಾ ಮಿಂಚಿದ್ದನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ರಾಕೇಶ್ ರೋಷನ್ ಹಿಂದಿಯಲ್ಲಿ 1988ರಲ್ಲಿ ನಿರ್ಮಿಸಿದ್ದ `ಖೂನ್ ಭರಿ ಮಾಂಗ್~ ಚಿತ್ರದಲ್ಲಿ ರೇಖಾ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ಮಿಂಚಿದ ನಂತರವಂತೂ ದಕ್ಷಿಣ ಭಾರತದ ಚಿತ್ರಗಳಲ್ಲೂ ನಾಯಕಿಯನ್ನೇ ನಾಯಕನ ರೂಪದಲ್ಲಿ ಕಾಣಿಸುವ ಯತ್ನಕ್ಕೆ ಅನೇಕರು ಕೈಹಾಕಿದರು. ಆದರೆ, ಆ ಪೋಷಾಕಿನಲ್ಲಿ ಹೆಚ್ಚು ಛಾಪು ಮೂಡಿಸಿದ್ದು ವಿಜಯಶಾಂತಿ ಹಾಗೂ ಮಾಲಾಶ್ರೀ. `ಚಾಲ್‌ಬಾಜ್~ ಚಿತ್ರದಲ್ಲಿ ಶ್ರೀದೇವಿ ಕೂಡ ಮೋಡಿ ಮಾಡಿದ್ದನ್ನು ಮರೆಯುವ ಹಾಗಿಲ್ಲ.
ಈಗಲೂ ಕನ್ನಡದಲ್ಲಿ ಮಹಿಳಾ ಆ್ಯಕ್ಷನ್ ಚಿತ್ರ ಅಂದೊಡನೆ ನೆನಪಾಗುವುದು ಮಾಲಾಶ್ರೀ. ಪ್ರಿಯಾ ಹಾಸನ್ ಕೂಡ ಹಗ್ಗ ಕಟ್ಟಿಕೊಂಡು ವಿಪರೀತ ಜಿಗಿದು, ನಾಯಕನ ಗುಣ ತುಂಬಿಕೊಂಡ ನಾಯಕಿಯಾಗಲು ಯತ್ನಿಸುತ್ತಿದ್ದಾರೆ. ತೆಲುಗು ಮೂಲದ ಅಯೇಷಾ ತಮಗೆ ಸಿದ್ಧಿಸಿರುವ ಕರಾಟೆ ವಿದ್ಯೆಯನ್ನೇ ಬಂಡವಾಳವಾಗಿಟ್ಟುಕೊಂಡು ಕನ್ನಡಲ್ಲೆಗ ಆ್ಯಕ್ಷನ್ ನಾಯಕಿಯಾಗಿದ್ದಾರೆ. `ಜೈಹಿಂದ್~ ಹಾಗೂ `ಚೆನ್ನಮ್ಮ ಐಪಿಎಸ್~ ಚಿತ್ರಗಳ ಕುರಿತು ಕೇಳಿಬಂದ ಒಳ್ಳೆಯ ಮಾತುಗಳ ಕೆಟ್ಟ ಪರಿಣಾಮವೇ ಈ `ಓಬವ್ವ~.
ಕಥಾಹಂದರವನ್ನು ಹೇಳದೆ ಚಿತ್ರವನ್ನು ಬಿಡಿಸಿ ನೋಡುವುದರಲ್ಲಿ ಅರ್ಥವಿಲ್ಲ: ನಾಯಕ ಆಟೋ ಚಾಲಕ. ಅವನು ಬಾಡಿಗೆಗೆ ಇರುವ ಮನೆಯಲ್ಲೇ ನಾಯಕಿ ಉಂಟು. ಇಬ್ಬರ ನಡುವೆ ಪ್ರೇಮ. ಗುಣದಲ್ಲಿ ನಾಯಕ ಬಂಗಾರ. ಆಟೋದೊಳಗೆ ಸಾಹಿತಿಗಳ ಫೋಟೋಗಳನ್ನು ಹಾಕಿಕೊಂಡು ಕನ್ನಡ ಭಾಷೆಯ ಮಹತ್ವ ಸಾರಿಕೊಂಡು ಓಡಾಡುವುದು ಆತನ ಜಾಯಮಾನ. ತುಂಡು ಬಟ್ಟೆ ತೊಡುವ ಹುಡುಗಿಗೆ ಬುದ್ಧಿ ಹೇಳುವುದು, ಅಕಸ್ಮಾತ್ತಾಗಿ ಸಾಹಿತಿ ಆಟೋ ಹತ್ತಿದರೆ ಅವರನ್ನು ಸ್ತುತಿಸುವುದು ನಾಯಕನಿಗೆ ಇಷ್ಟವಾದ ಕೆಲಸ.
`ಸೈಲೆಂಟಾಗಿದ್ರೆ ಅನಂತ್‌ನಾಗ್, ವಯಲೆಂಟ್ ಆದ್ರೆ ಶಂಕರ್‌ನಾಗ್~ ಎಂಬುದು ಯಾರಾದರೂ ಕೆಣಕಿದಾಗ ನಾಯಕ ಹೊಡೆಯುವ ಡೈಲಾಗ್. ಆತನ ಸಾಹಿತ್ಯ ಪ್ರೀತಿಗೂ, ಕುತ್ತಿಗೆಯನ್ನು ಒಂದು ಸುತ್ತು ತಿರುಗಿಸಿ ಖಳರನ್ನು ಹೊಡೆಯುವ ಸ್ವಭಾವಕ್ಕೂ ಸರಿಯಾದ ಸಂಬಂಧವೇ ಇಲ್ಲ. ಈ ಗುಣಗಳ ನಾಯಕ ಮಧ್ಯಂತರದ ಹೊತ್ತಿಗೆ ಖಳರು ಬೆನ್ನಲ್ಲಿ ಹಾಕುವ ಚೂರಿಯಿಂದ ಸಾಯುತ್ತಾನೆ. ಆಮೇಲೆ ನಾಯಕಿ ದೇಹ ಪ್ರವೇಶಿಸಿ ಸೇಡು ತೀರಿಸಿಕೊಳ್ಳುತ್ತಾನೆ. ಎರಡನೇ ಅರ್ಧದಲ್ಲಿ ರಿಲೀಫ್‌ಗೆಂದು ಒಂದು ಐಟಂ ಗೀತೆಯನ್ನು ಅಡಕಮಾಡಿದ್ದರೂ, ಅದು ರಿಲೀಫ್ ಕೊಡುವ ಗುಣಮಟ್ಟ ಪಡೆದಿಲ್ಲ.
ನಿರ್ದೇಶಕ ಆನಂದ್ ಪಿ. ರಾಜು ಹಳೆಯ ಒರಳುಕಲ್ಲಿನ ಮುಂದೆ ಕುಳಿತು ಹದವಿಲ್ಲದ ಚಟ್ನಿ ರುಬ್ಬಿದ್ದಾರೆ. ಸಿನಿಮಾ ಕಥನ ಸಂವಹನದ ಧಾಟಿ ಬದಲಾಗಿರುವ ಈ ದಿನಮಾನದಲ್ಲಿಯೂ ಅವರು `ಕಪ್ಪು-ಬಿಳುಪು~ ತಂತ್ರದ ನಿರೂಪಣೆಗೆ ಜೋತುಬಿದ್ದಿದ್ದಾರೆ. ಕಥೆ ತೆಳುವಾಗಿದ್ದರೂ ಆ್ಯಕ್ಷನ್ ದೃಶ್ಯಗಳಲ್ಲಿ ಅದ್ದೂರಿತನ ತರುವ ಮೂಲಕವಾದರೂ ಲವಲವಿಕೆ ಮೂಡಿಸುವ ಸಾಧ್ಯತೆ ಇದೆ. ಆದರೆ, `ಓಬವ್ವ~ನಲ್ಲಿ ಅದೂ ಇಲ್ಲ.
ಬಿಲ್ಲಿನಂತೆ ಶರೀರ ಬಾಗಿಸಬಲ್ಲ ಅಯೇಷಾ ಸಾಹಸ ಕ್ಷಮತೆ ಈ ಚಿತ್ರದಲ್ಲಿ ಸದ್ಬಳಕೆಯಾಗಿಲ್ಲ. ಪಾತ್ರ ಪೋಷಣೆಯ್ಲ್ಲಲಿ ತೀವ್ರತೆ ಇಲ್ಲದಿರುವುದರಿಂದ ಹೊಡೆದಾಟಗಳಲ್ಲಿ ಸಹಜತೆ ಮಾಯವಾಗಿದೆ. ಹಾಗಿದ್ದೂ ಅಯೇಷಾ ದೇಹಭಾಷೆ ಚೆನ್ನಾಗಿದೆ. ನಾಯಕ ದೀಪಕ್ ನಟಿಸಲು ತುಂಬಾ ಕಷ್ಟ ಪಟ್ಟಿದ್ದಾರೆ. ಆಟೋ ಓಡಿಸುವ ನಾಯಕನ ಕಣ್ಣುಗಳು ನೀಲಿಯಾಗಿರುವುದನ್ನು ತಮಾಷೆಯಾಗಿಯಷ್ಟೆ ನೋಡಲು ಸಾಧ್ಯ.
ಸ್ವಸ್ತಿಕ್ ಶಂಕರ್ ನೇತೃತ್ವದ ಖಳರ ಪಡೆಯಲ್ಲಿ ಶೋಭರಾಜ್ ಮಾತ್ರ ಸಣ್ಣ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದವರ ಮಾತು-ವರ್ತನೆಗೂ ನಗೆಯುಕ್ಕಿಸುವ ಗುಣವಿರುವುದು ದುರಂತ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಗೂ ಛಾಯಾಗ್ರಾಹಕ ಗೌರಿ ವೆಂಕಟೇಶ್ ಕಸುಬುದಾರಿಕೆಗೆ ಈ ಚಿತ್ರದಲ್ಲಿ ಹೆಚ್ಚು ಉದಾಹರಣೆಗಳು ಸಿಗುವುದಿಲ್ಲ.
ಆ್ಯಕ್ಷನ್ ಮಾಡಬಲ್ಲ ನಾಯಕಿಯಷ್ಟೇ ಇದ್ದರೆ ಒಳ್ಳೆಯ ಸಿನಿಮಾ ಸಾಧ್ಯವಿಲ್ಲವೆಂಬುದನ್ನು `ಓಬವ್ವ~ ತಲೆಮೇಲೆ ತಟ್ಟಿದಂತೆ ಹೇಳುತ್ತದೆ. ಇಷ್ಟಕ್ಕೂ ಓಬವ್ವ ಎಂಬ ನಾಯಕಿಯ ಹೆಸರು ಇನ್ನೊಂದು ತಮಾಷೆ!
'); $('#div-gpt-ad-55756-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-55756'); }); googletag.cmd.push(function() { googletag.display('gpt-text-700x20-ad2-55756'); }); },300); var x1 = $('#node-55756 .field-name-body .field-items div.field-item > p'); if(x1 != null && x1.length != 0) { $('#node-55756 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-55756').addClass('inartprocessed'); } else $('#in-article-55756').hide(); } else { _taboola.push({article:'auto', url:'https://www.prajavani.net/article/ಕಸುಬುದಾರಿಕೆಯಿಲ್ಲದ-ಕಷ್ಟ-ಚಿತ್ರ-ಓಬವ್ವ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-55756', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-55756'); }); googletag.cmd.push(function() { googletag.display('gpt-text-300x20-ad2-55756'); }); // Remove current Outbrain //$('#dk-art-outbrain-55756').remove(); //ad before trending $('#mob_rhs1_55756').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-55756 .field-name-body .field-items div.field-item > p'); if(x1 != null && x1.length != 0) { $('#node-55756 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-55756 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-55756'); }); } else { $('#in-article-mob-55756').hide(); $('#in-article-mob-3rd-55756').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-55756','#in-article-710377','#in-article-708743','#in-article-708726','#in-article-708724']; var twids = ['#twblock_55756','#twblock_710377','#twblock_708743','#twblock_708726','#twblock_708724']; var twdataids = ['#twdatablk_55756','#twdatablk_710377','#twdatablk_708743','#twdatablk_708726','#twdatablk_708724']; var obURLs = ['https://www.prajavani.net/article/ಕಸುಬುದಾರಿಕೆಯಿಲ್ಲದ-ಕಷ್ಟ-ಚಿತ್ರ-ಓಬವ್ವ','https://www.prajavani.net/entertainment/movie-review/kannada-film-shikari-710377.html','https://www.prajavani.net/entertainment/movie-review/kannada-movie-anebala-708743.html','https://www.prajavani.net/entertainment/movie-review/mayabazar-official-trailer-raj-b-shetty-vasishta-simha-kannada-film-708726.html','https://www.prajavani.net/entertainment/movie-review/bicchugatthi-film-review-708724.html']; var vuukleIds = ['#vuukle-comments-55756','#vuukle-comments-710377','#vuukle-comments-708743','#vuukle-comments-708726','#vuukle-comments-708724']; // var nids = [55756,710377,708743,708726,708724]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಭವಿಷ್ಯದ ಅತ್ತೆಯಾಗುವವರೊಂದಿಗೆ ಈ ವಿಷಯಗಳ ಕುರಿತು ಪೂರ್ವ ಸಂಭಾಷಣೆ ನಡೆಸಿ. | THINGS YOU NEED TO CLEAR WITH YOUR WOULD _BE MOTHER_IN_LAW - Kannada BoldSky
ಭವಿಷ್ಯದ ಅತ್ತೆಯಾಗುವವರೊಂದಿಗೆ ಈ ವಿಷಯಗಳ ಕುರಿತು ಪೂರ್ವ ಸಂಭಾಷಣೆ ನಡೆಸಿ.
ವಿವಾಹ, ಜೀವನ, ಸಂಬಂಧ ಹಾಗೂ ಪ್ರೀತಿ ಪಾತ್ರರ ನಡುವಿನ ಒಡನಾಟ ಎಲ್ಲವೂ ಕಲ್ಪನೆಯಲ್ಲಿ ಸುಂದರವಾಗಿರುತ್ತವೆ. ಆದರೆ ವಾಸ್ತವಕ್ಕೆ ಬಂದಾಗ ಹಲವಾರು ಭಿನ್ನತೆಗಳು ಮತ್ತು ಭಿನ್ನಾಭಿಪ್ರಾಯಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವವು. ಅಲ್ಲದೆ ಅವು ನಮಗಿದ್ದ ಭರವಸೆ ಹಾಗೂ ನಂಬಿಕೆಗಳನ್ನು ಬದಲಾಯಿಸಬಹುದು. ಹಾಗಾಗಿ ಯಾವುದೇ ವಿಚಾರದಲ್ಲೂ ನಾವು ಸಾಕಷ್ಟು ಚಿಂತನೆ ಹಾಗೂ ಹೊಂದಾಣಿಕೆಯ ಪ್ರವೃತ್ತಿಯನ್ನು ಹೊಂದಿರಬೇಕು.
ವಿವಾಹ ಎಂದಾಗ ಅಲ್ಲಿ ಬರುವ ಸಂಬಂಧ ಹಾಗೂ ಹೊಂದಾಣಿಕೆಯ ವಿಚಾರಗಳು ಕೇವಲ ವಧು-ವರರಿಗೆ ಸೀಮಿತವಾಗಿರುವುದಿಲ್ಲ. ಹೊಸ ಸಂಬಂಧಗಳ ನಂಟನ್ನು ಬೆಸೆಯುವ ವಧು-ವರರ ತಂದೆ-ತಾಯಿ ಹಾಗೂ ಬಂಧು ಬಂಧವರೊಂದಿಗಿನ ಸಂಬಂಧಗಳು ಗಣನೆಗೆ ಬರುತ್ತವೆ. ಹಾಗಾಗಿ ವಧು ಆದವಳು ವಿವಾಹದ ಬಳಿಕ ಕೇವಲ ವರನೊಂದಿಗಿನ ಹೊಂದಾಣಿಕೆ ಮಾಡಿಕೊಂಡರೆ ಸಾಲದು. ವರನ ಮನೆ, ಮನೆ ಮಂದಿ ಹಾಗೂ ತಾಯಿ ಸ್ಥಾನದಲ್ಲಿ ನಿಲ್ಲುವ ಅತ್ತೆಯೊಂದಿಗೂ ಸಹಕಾರ ಹಾಗೂ ಸ್ನೇಹ ಪೂರಕವಾದ ವರ್ತನೆಯನ್ನು ತೋರಬೇಕಾಗುವುದು.
ಸಂಸಾರದ ಹಿರಿಯ ಮಹಿಳೆ ಹಾಗೂ ಮಖ್ಯಸ್ಥೆಯ ಸ್ಥಾನದಲ್ಲಿರುವ ಅತ್ತೆಯೊಂದಿಗೆ ವಧು ಸಾಕಷ್ಟು ವಿಚಾರಗಳೊಂದಿಗೆ ವಿಮರ್ಶೆ ಮಾಡಬೇಕಾಗುವುದು. ಆ ಸಂಸಾರಕ್ಕೆ ಬೇಕಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಕರಗತಮಾಡಿಕೊಳ್ಳುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಅತ್ತೆ-ಸೊಸೆಯ ನಡುವೆ ಹೊಂದಾಣಿಕೆ ಅತ್ಯಗತ್ಯ. ಇಲ್ಲವಾದರ ನರಕ ಸದೃಶವಾದ ವಾತಾವರಣ ಹಾಗೂ ಜೀವನವೇ ಸಾಕೆನಿಸುವ ಭಾವನೆಯನ್ನು ತಳೆಯಬೇಕಾಗುವುದು.
ಹಾಗಾದರೆ ನಿಮ್ಮ ಭವಿಷ್ಯದ ಅತ್ತೆಯಾಗುವವರು ನಿಮ್ಮಿಂದ ಏನು ಬಯಸುತ್ತಾರ? ಅವರೊಂದಿಗೆ ಯಾವ ಬಗೆಯ ಹೊಂದಾಣಿಕೆ ಮತ್ತು ಮಾತುಕತೆ ಹೊಂದಿರಬೇಕು? ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯೊಂದಿಗೆ ವಿಚಾರವನ್ನು ತಿಳಿದುಕೊಳ್ಳಿ...
1. ನಿಮ್ಮ ಜೀವನ ವಿಧಾನ:
ನಮ್ಮಲ್ಲಿರುವ ವರ್ತನೆ ಹಾಗೂ ಚಿಂತನೆಯ ವಿಧಾನವು ವಿವಾಹವಾದ ಬಳಿಕ ಪ್ರಮುಖ ಬದಲಾವಣೆಯನ್ನು ತರುತ್ತವೆ. ಹಾಗಾಗಿ ನಮ್ಮ ಚಿಂತನೆಗಳು ಹಾಗೂ ವರ್ತನೆಗಳು ಇತರರೊಂದಿಗೆ ಹಿತಕರವಾಗಿ ಹಾಗೂ ಹೊಂದಾಣಿಕೆಯಿಂದ ಕೂಡಿರಬೇಕು. ಪ್ರಜ್ಞಾ ಪೂರಕವಾದ ನಿರ್ಧಾರಗಳು ಬದುಕಿನಲ್ಲಿ ಬದಲಾವಣೆಯನ್ನು ತರುತ್ತವೆ. ಸಾಮಾನ್ಯವಾಗಿ ಪ್ರತಿಯೊಬ್ಬ ಅತ್ತೆಯಂದಿರು ಮನೆಗೆ ಸೊಸೆಯಾಗಿ ಬರುವವಳು ಹೊಂದಾಣಿಕೆ ಹಾಗೂ ವಿಷಯವನ್ನು ಅರ್ಥೈಸಿಕೊಳ್ಳುವ ಗುಣವನ್ನು ಹೊಂದಿರಬೇಕೆಂದು ಬಯಸುತ್ತಾರೆ. ನಮ್ಮ ಮನೆ ಮಂದಿ ಹಾಗೂ ಸಂಬಂಧಿಕರೊಂದಿಗೆ ಸೂಕ್ತ ಹೊಂದಾಣಿಕೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ನೀವು ಕೆಲಸಕ್ಕೆ ಹೋಗುವವರಾಗಿದ್ದರೆ ಕೆಲಸದ ಮುಗಿದ ಮೇಲೆ ಮನೆಗೆ ಬರುವುದು, ಮನೆಯ ಕೆಲಸವನ್ನು ನಿರ್ವಹಿಸುವುದು ಹಾಗೂ ಪ್ರೀತಿಯ ಮಾತುಕತೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ ಎನ್ನುವುದನ್ನು ತಿಳಿದಿರಬೇಕು. ಹಾಗಾಗಿ ಅತ್ತೆಯೊಂದಿಗೆ ಸ್ಪಷ್ಟವಾದ ಹಾಗೂ ಸೂಕ್ತ ರೀತಿಯಲ್ಲಿ ವಿಷಯಗಳನ್ನು ವಿನಿಮಯಮಾಡಿಕೊಳ್ಳುವುದರಿಂದ ಸಮಸ್ಯೆಯನ್ನು ದೂರ ಇಡಬಹುದು.
2. ನಿಮ್ಮ ಸ್ವಾತಂತ್ರ್ಯ:
ವಿವಾಹದ ನಂತರ ಅನೇಕ ವಿಚಾರಗಳಲ್ಲಿ ನಮ್ಮ ಸ್ವಾರ್ಥ ಕೆಲಸಗಳಿಗಿಂತ ಹೆಚ್ಚಾಗಿ ನಮ್ಮ ಸಂಸಾರಕ್ಕಾಗಿ, ನಮ್ಮವರಿಗಾಗಿ ಚಿಂತನೆಯನ್ನು ನಡೆಸಬೇಕಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಸ್ವಾತಂತ್ರ್ಯಕ್ಕೆ ಕೊಂಚ ಧಕ್ಕೆ ಉಂಟಾಗಬಹುದು ಅಥವಾ ನಮ್ಮ ಬಗ್ಗೆ ಕೊನೆಯ ಪ್ರಶಸ್ತ್ಯ ನೀಡಬೇಕಾಗಬಹುದು. ಕೆಲವು ಗಂಭೀರ ವಿಚಾರಗಳಿಗೆ ಪರಸ್ಪರ ಮನಸ್ಸಿಗೆ ನೋವುಂಟಾಗಬಹುದು. ಹಾಗಾಗಿ ವಿವಾಹ ಪೂರ್ವದಲ್ಲಿ ವರನೊಂದಿಗೆ ಹೇಗೆ ವಿಷಯಗಳ ಬಗ್ಗೆ ಸಂಭಾಷಣೆ ನಡೆಸುತ್ತೀರೋ, ಹಾಗೆಯೇ ಭವಿಷ್ಯದ ಅತ್ತೆಯೊಂದಿಗೂ ಸೂಕ್ತ ವಿಚಾರಗಳೊಂದಿಗೆ ಆರೋಗ್ಯಕರ ಸಂಭಾಷಣೆ ನಡೆಸಿ.
3. ಕುಟುಂಬ ಯೋಜನೆ:
ಸಾಮಾನ್ಯವಾಗಿ ವಿವಾಹದ ಬಳಿಕ ಬರುವ ಮಹತ್ತರವಾದ ವಿಚಾರವೆಂದರೆ ಭವಿಷ್ಯದ ಮಗು. ಹಾಗಾಗಿ ಕುಟುಂಬದ ಬಗ್ಗೆ, ಕುಟುಂಬದ ಪರಿಕಲ್ಪನೆಯ ಬಗ್ಗೆ, ಕೆಲಸದ ಪ್ರಾಮುಖ್ಯತೆ, ಮನೆಯ ನಿರ್ವಹಣೆ, ಆರ್ಥಿಕ ಸ್ಥಿತಿ-ಗತಿ ಬಗ್ಗೆ ಸರಿಯಾದ ಮಾತುಕತೆಯನ್ನು ವಿವಾಹ ಪೂರ್ವದಲ್ಲಿಯೇ ನಡೆಸುವುದು ಸೂಕ್ತ. ಇಂತಹ ವಿಚಾರಗಳು ಬಹಳ ವೈಕ್ತಿಕವಾದ್ದರಿಂದ ಮಾತನಾಡುವಾಗ ಸಭ್ಯತೆ ಹಾಗೂ ಸೂಕ್ಷ್ಮತೆಯನ್ನು ಹೊಂದಿರಬೇಕು. ವಿಷಗಯಗಳನ್ನು ಪ್ರಸ್ತಾಪಿಸುವುದು ಹಾಗೂ ಅರ್ಥೈಸುವಂತೆ ಮಾಡುವುದು ಬಹಳ ನಾಜೂಕಿನಿಂದ ಕೂಡಿರಬೇಕು. ಇವುಗಳ ಬಗ್ಗೆ ಸೂಕ್ತ ನಿರ್ಧಾರಗಳು ಅಥವಾ ಸಂಭಾಷಣೆಗಳು ಪೂರ್ವದಲ್ಲೇ ನಡೆದಿದ್ದರೆ ವಿವಾಹದ ನಂತರ ಗೊಂದಲ ಉಂಟಾಗದು.
4. ಹೊಣೆಗಾರಿಕೆಗಳು:
ವಿವಾಹ ಎನ್ನುವುದು ಕೇವಲ ಒಂದು ಸಂತೋಷದ ವಿಚಾರ ಅಥವಾ ನಾವು ಬಯಸಿದ್ದನ್ನು ಪಡೆದುಕೊಳ್ಳುವ ವಿಧಾನವೂ ಅಲ್ಲ. ವಿವಾಹ ಎನ್ನುವುದು ಒಂದು ಸುಂದರವಾದ ಬಂಧನ. ಈ ಬಂಧನದ ಬೆಸುಗೆಯ ನಂತರ ನಮ್ಮ ಜೀವನದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ನಮ್ಮ ಸಂತೋಷದ ಜೊತೆಗೆ ಸಂಸಾರದ ಆಗು-ಹೋಗುಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಮನೆಯ ರೀತಿ-ನೀತಿ, ಸಂಪ್ರದಾಯ, ಪ್ರಮುಖ ಚಿಂತನೆ ಹಾಗೂ ಬೇಕು ಬೇಡಗಳ ಬಗ್ಗೆ ಭವಿಷ್ಯದ ಅತ್ತೆಯವರೊಂದಿಗೆ ಸೂಕ್ಷ್ಮ ಹಾಗೂ ಆರೋಗ್ಯಕರ ರೀತಿಯಲ್ಲಿ ವಿಚಾರಗಳನ್ನು ವಿನಿಮಯಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಬಗ್ಗೆ ಹಾಗೂ ಸಂಬಂಧಗಳ ಬಗ್ಗೆ ಆದಷ್ಟು ಮುಕ್ತ ಹಾಗೂ ಸ್ಪಷ್ಟತೆಯನ್ನು ಹೊಂದಿರುವುದು ಪ್ರಮುಖವಾದದ್ದು.
5. ಧಾರ್ಮಿಕ ನಂಬಿಕೆಗಳು:
ಒಂದೇ ಸೂರಿನಡಿಗೆ ಬೆಳೆದವರಾದರೂ ವ್ಯಕ್ತಿ ಹಾಗೂ ವ್ಯಕ್ತಿತ್ವದ ನಡುವೆ ವಿಭಿನ್ನತೆ ಇರುತ್ತದೆ. ಇನ್ನು ವಿಭಿನ್ನವಾದ ಧರ್ಮ, ಜಾತಿ, ಊರು, ವಾತಾವರಣಗಳಲ್ಲಿ ಬೆಳೆದವರಲ್ಲಿ ಭಿನ್ನತೆ ಎನ್ನುವುದು ಸಾಮಾನ್ಯವಾಗಿರುತ್ತವೆ. ಅಂತಹ ವಿಭಿನ್ನತೆಯಲ್ಲಿ ಬೆಳೆದುಬಂದವರು ಒಮ್ಮೆಲೇ ಸಾಮ್ಯತೆಯ ವರ್ತನೆಯೊಂದಿಗೆ ಹೊಂದಾಣಿಕೆಯನ್ನು ತೋರಬೇಕು ಎನ್ನುವುದು ಸ್ವಲ್ಪ ಕಷ್ಟದ ವಿಚಾರವೆ. ಹಾಗಾಗಿಯೇ ವಿವಾಹದ ನಂತರ ಅನೇಕರಿಗೆ ಧಾರ್ಮಿಕ ನಂಬಿಕೆ ಹಾಗೂ ರೀತಿ-ನೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ವಿವಾಹ ಪೂರ್ವದಲ್ಲಿಯೇ ಅತ್ತೆಯಾಗುವವರೊಂದಿಗೆ ಧಾರ್ಮಿಕ ನಂಬಿಕೆಗಳು, ಅವರ ಮನೆಯಲ್ಲಿರುವ ಸಂಪ್ರದಾಯ ಹಾಗೂ ರೀತಿ-ನೀತಿಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದಕ್ಕಾಗಿ ನಿಮ್ಮ ಮಾನಸಿಕ ಚಿಂತನೆಗಳನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ.
Read more about: ಸಂಬಂಧ ಮದುವೆ ಪುರುಷರು
THINGS YOU NEED TO CLEAR WITH YOUR WOULD _BE MOTHER_IN_LAW