text
stringlengths
0
61.5k
Worrying about your dreams after marriage? There are certain things you need to do before you marry the guy either you fell in love with or arranged for you. One of the main things to do is having a clear concept of what your mother-in-law wants from you. It is true that marriage is between families and not between the couple itself. Keeping in-laws happy in the relationship is the biggest task for any daughter-in-law
ಮೂರು ದಿನ ಅದ್ಧೂರಿ ದಶಮಾನೋತ್ಸವ | Prajavani
ಮೂರು ದಿನ ಅದ್ಧೂರಿ ದಶಮಾನೋತ್ಸವ
Published: 31 ಜನವರಿ 2018, 15:06 IST
Updated: 31 ಜನವರಿ 2018, 15:06 IST
ಚಿಕ್ಕಬಳ್ಳಾಪುರ: 'ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು 10 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ನಗರದ ಸರ್‌.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರುವರಿ 2 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಫೆ.2ರಂದು ಬೆಳಿಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಾಂಕೇತಿಕವಾಗಿ ದಶಮಾನೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ಸುಲ್ತಾನ್‌ಪೇಟೆ ಬಳಿ ಇರುವ ನಂದಿ ಬೆಟ್ಟದ ನಡಿಗೆ ಮಾರ್ಗದ ಮೂಲಕ 'ನಂದಿಗಿರಿ ಪಾರಂಪರಿಕ ನಡಿಗೆ'ಯಲ್ಲಿ ಬೆಟ್ಟ ಹತ್ತಲಾಗುತ್ತದೆ. ಇದರಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಹೆಜ್ಜೆ ಹಾಕಲಿದ್ದಾರೆ' ಎಂದರು.
'ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕಂದವಾರ ಕೆರೆಯಲ್ಲಿ ಪ್ಯಾರಾಸೇಲಿಂಗ್ ಮತ್ತು ಶ್ರೀನಿವಾಸ ಸಾಗರ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಗಳ ಕಾಲ ಇವು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ದಶಮಾನೋತ್ಸವದ ಮೂರೂ ದಿನಗಳ ಕಾಲ ಇವು ನಡೆಯಲಿವೆ' ಎಂದು ಹೇಳಿದರು.
'ಅಂಬೇಡ್ಕರ್ ಭವನದಲ್ಲಿ ಮೂರೂ ದಿನಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ವಿಚಾರಗೋಷ್ಠಿಗಳು ನಡೆಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ, ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಕೃಷಿ ಮತ್ತು ಅವಲಂಬಿತ ಚಟುವಟಿಕೆಗಳ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ಮಧ್ಯಾಹ್ನ 3ಕ್ಕೆ ತಾಲ್ಲೂಕು ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ದಶಮಾನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಆ ಮೆರವಣಿಗೆ ದಶಮಾನೋತ್ಸವದ ಮುಖ್ಯ ವೇದಿಕೆ ವರೆಗೆ ನಡೆಯಲಿದೆ' ಎಂದು ತಿಳಿಸಿದರು.
'ಬಳಿಕ ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಇದರಿಂದ ದಶಮಾನೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಮತ್ತು ಜಿಲ್ಲೆಯ ಪ್ರವಾಸೋದ್ಯಮ ಸ್ಥಳ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ಜೈಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಂಜೆ 5ಕ್ಕೆ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ' ಎಂದರು.
'ಮೂರು ದಿನಗಳ ಕಾಲ ನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 11.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 7ರ ವರೆಗೆ ಸ್ಥಳೀಯ ಕಲಾವಿದರಿಗೆ ಜಿಲ್ಲೆಯ ಮುಖ್ಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ರಾಜ್ಯ ಮತ್ತು ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ' ಎಂದು ಹೇಳಿದರು.
'ಫೆ.2 ರಂದು ಮುಖ್ಯವೇದಿಕೆಯಲ್ಲಿ ರಾತ್ರಿ ಮೊದಲು ವಿನಯ್‌ ನಾಡಿಗ್‌ ತಂಡದವರಿಂದ 'ಭಾವ ಲಹರಿ' ಎಂಬ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಒಡಿಶಾದ ಪ್ರಿನ್ಸ್ ಡ್ಯಾನ್ಸ್ ಅಕಾಡೆಮಿ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಬಳಿಕ ಬೀಟ್ ಗುರೂಸ್‌ ತಂಡದವರಿಂದ ಪಾಪ್‌ ಸಂಗೀತ ಕಛೇರಿ ನಡೆಯಲಿದೆ. ಪ್ರಹ್ಲಾದ್ ಆಚಾರ್ಯ ಅವರಿಂದ ಮರಳು ಮತ್ತು ನೆರಳು ಕಲೆಯ ಪ್ರದರ್ಶನವಿರಲಿದೆ. ಪ್ರಭಾತ್ ಕಲಾವಿದರಿಂದ ನೃತ್ಯ ರೂಪಕ ಪ್ರದರ್ಶನವಾಗಲಿದೆ' ಎಂದು ತಿಳಿಸಿದರು.
'ಫೆ.3 ರಂದು ಬೆಳಿಗ್ಗೆ 11ಕ್ಕೆ ದಶಮಾನೋತ್ಸವದ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಜಾನುವಾರು, ಕುರಿಗಳ ಪ್ರದರ್ಶನ ನಡೆಯಲಿದೆ. ಸಂಜೆ 5ಕ್ಕೆ ಹಾಲು ಕರೆಯುವ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ. ರಾತ್ರಿ 7ರ ನಂತರ ಚಿಂತಲಪಲ್ಲಿ ಪರಂಪರಾ ಟ್ರಸ್ಟ್‌ನ ಶ್ರೀಕಾಂತಶಾಸ್ತ್ರಿ ಅವರಿಂದ ಶಾಸ್ತ್ರೀಯ ಸಂಗೀತ, ಅಭಿನವ್ ಡ್ಯಾನ್ಸ್‌ ಕಂಪನಿ ಕಲಾವಿದರಿಂದ ನೃತ್ಯ ಪ್ರದರ್ಶನ, ಬಳಿಕ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ರಸಸಂಜೆ, ನಂತರ ರಘು ದೀಕ್ಷಿತ್ ತಂಡದವರಿಂದ ಸಂಗೀತದೌತಣ ಇರಲಿದೆ' ಎಂದರು.
'ಫೆ.4 ರಂದು ಬೆಳಿಗ್ಗೆ 10ಕ್ಕೆ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಯಂ ಆತ್ಮರಕ್ಷಣಾ ಕಲೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾತ್ರಿ 7ರ ನಂತರ ಆಕ್ಸಿಜನ್ ತಂಡದವರಿಂದ ನೃತ್ಯ ಕಾರ್ಯಕ್ರಮ, ಸಮೀರ್ ರಾವ್‌ ಮತ್ತು ತಂಡದವರಿಂದ ಶಾಸ್ತ್ರೀಯ ಜುಗಲ್ಭಂದಿ ನಡೆಯಲಿದೆ. ಬಳಿಕ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಒಡಿಶಾದ ಎಸ್.ಎಂ.ಎಸ್ ಅವರಿಂದ ಮರಳು ಕಲೆ ಪ್ರದರ್ಶನ. ಅಂತಿಮವಾಗಿ ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ' ಎಂದು ಹೇಳಿದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, 'ಇದು ನಮ್ಮೆಲ್ಲರ ಹಬ್ಬ. ಜಿಲ್ಲೆಯ ಹಬ್ಬ. ವಿದ್ಯಾರ್ಥಿಗಳು, ರೈತರು, ಮಹಿಳೆಯರು ಇದು ನಮ್ಮ ಕಾರ್ಯಕ್ರಮ ಎಂದು ಭಾವಿಸಿಕೊಂಡು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಫೂರ್ತಿ ನೀಡಬೇಕು. ಎಲ್ಲಾ ಚಟುವಟಿಕೆಗಳಲ್ಲಿ ಜನರು ಭಾಗವಹಿಸಿದರೆ ದಶಮಾನೋತ್ಸವ ಅರ್ಥಪೂರ್ಣವಾಗಿ ನಡೆಯಲಿದೆ' ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಮಾತನಾಡಿ, 'ದಶಮಾನೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದ ಬಳಿ ಸುಮಾರು 100 ಮಳಿಗೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 20 ಆಹಾರ ಪದಾರ್ಥಗಳು, ತಿಂಡಿ, ತಿನಿಸುಗಳ ಮಳಿಗೆಗಳು ಇರಲಿವೆ. ಉಳಿದಂತೆ ಬಟ್ಟೆ, ಕರಕುಶಲವಸ್ತುಗಳು, ಗುಡಿಕೈಗಾರಿಕೆ ಉತ್ಪನ್ನಗಳು, ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇರಲಿವೆ' ಎಂದರು. ಎಸ್‌ಪಿ ಕಾರ್ತಿಕ್‌ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಹೂವಿನಲ್ಲಿ ಮೈದಳೆಯುವ ಜಗತ್ತಿನ ಏಳು ಅದ್ಭುತಗಳು
ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ಶಾಲೆಯ ಸಮೀಪ ಫಲಪುಷ್ಪ ಪ್ರದರ್ಶನಕ್ಕಾಗಿ ಭರದ ಸಿದ್ಧತೆ ನಡೆದಿದೆ. ಆಗ್ರಾದ ತಾಜ್‌ಮಹಲ್‌, ಇಟಲಿಯ ಪೀಸಾ ಗೋಪುರ, ರೋಮನ್‌ ಕಲೋಸಿಯಂ, ಈಜಿಪ್ಟ್‌ನ ಪಿರಮಿಡ್‌, ಫ್ರಾನ್ಸ್‌ನ ಐಫಲ್‌ ಗೋಪುರ, ಬ್ರೆಸಿಲ್‌ನ ಕ್ರೈಸ್ಟ್ ದಿ ರಿಡೀಮರ್ ಹಾಗೂ ಚೀನಾದ ಮಹಾಗೋಡೆ ಪ್ರತಿಕೃತಿಗಳು ಮೈದಾನದಲ್ಲಿ ಹೂವಿನಲ್ಲಿ ಮೈದಳೆಯಲಿವೆ. ಇದರ ಸಿದ್ಧತೆಗಾಗಿ ಕೋಲ್ಕತ್ತಾದ 35 ಕಾರ್ಮಿಕರು ಕ್ರೀಡಾಂಗಣದಲ್ಲಿಯೇ ಠಿಕಾಣಿ ಹೂಡಿ ಭರದಿಂದ ಕೆಲಸ ಮಾಡುತ್ತಿದ್ದಾರೆ. ಸುಮಾರು 2.50 ಲಕ್ಷ ಹೂವುಗಳು, ದೊಣ್ಣೆ ಮೆಣಸಿನಕಾಯಿ ಬಳಸಿ ಏಳು ಅದ್ಭುತಗಳ ಮಾದರಿಯನ್ನು ಅಲಂಕರಿಸಲಾಗುತ್ತದೆ ಎಂದು ಗುತ್ತಿಗೆದಾರ ಎಸ್.ಪಿ.ಅಗರ್‌ವಾಲ್‌ ತಿಳಿಸಿದರು.
ಜಿಲ್ಲೆ ದಶಕ ಪೂರೈಸಿದ ಸ್ಮರಣಾರ್ಥ ಇಲ್ಲಿನ ಕಲೆ, ಸಂಸ್ಕೃತಿ, ಇತಿಹಾಸದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಈ ಹಬ್ಬದಲ್ಲಿ ಜಿಲ್ಲೆಯ ಜನತೆ ಭಾಗವಹಿಸಬೇಕು
ಶ್ರೀನಿವಾಸಪುರದ ವೈ ಹೊಸಕೋಟೆ ಸರಕಾರಿ ಶಾಲೆ; ಅಧಿಕಾರಿಗಳ ಗಿಳಿಪಾಠದ ಉತ್ತರ | Srinivasapura government school in horrible condition - Kannada Oneindia
37 min ago Jharkhand Assembly Elections 2019 Polling LIVE : 2ನೇ ಹಂತದ ಮತದಾನ ಅಪ್ಡೇಟ್ಸ್
42 min ago ರೇಸ್‌ಕೋರ್ಸ್ ಮೇಲೆ ಸಿಸಿಬಿ ದಾಳಿ: 96 ಲಕ್ಷ ರೂ ನಗದು ಜಪ್ತಿ
By ಶ್ರೀನಿವಾಸಪುರ ಪ್ರತಿನಿಧಿ
| Updated: Thursday, July 25, 2019, 21:52 [IST]
ಶ್ರೀನಿವಾಸಪುರ (ಕೋಲಾರ ಜಿಲ್ಲೆ), ಜುಲೈ 25: ಸರಕಾರಿ ಶಾಲೆಯೊಂದು ಹಾಳು ಕೊಂಪೆಯಂತೆ ಬಿದ್ದಿರುವುದನ್ನು ಶ್ರೀನಿವಾಸಪುರ ತಾಲೂಕಿನ ವೈ. ಹೊಸಕೋಟೆಯಲ್ಲಿ ಕಾಣಬಹುದು. ಇದು ಅನೇಕ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರತಿನಿಧಿಸುವಂತಿದೆ. ಹಾಗೆಯೇ ಇನ್ನು 8-10 ವರ್ಷಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜುಗಳ ಪರಿಸ್ಥಿತಿಗೆ ಕನ್ನಡಿಯೂ ಆಗಲಿದೆ.
ಈ ಪ್ರೌಢಶಾಲೆಯನ್ನು ಈ ಶೈಕ್ಷಣಿಕ ವರ್ಷದ ಆರಂಭವಾದ ಜೂನ್ ನಿಂದ ಮುಚ್ಚಲಾಗಿದ್ದರೆ ಇದೇ ಪ್ರಾಂಗಣದಲ್ಲಿ ಇರುವ ಹಿರಿಯ ಪ್ರಾಥಮಿಕ ಶಾಲೆಯನ್ನು ಕಳೆದ ಶೈಕ್ಷಣಿಕ ವರ್ಷದಿಂದ ಲಾಕೌಟ್ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇರುವ ಸಾಮಾನ್ಯ ಕಾರಣವೆಂದರೆ; ಮಕ್ಕಳು ಈ ಶಾಲೆಗೆ ಬಾರದೆ ಇರುವುದು. ಈ ಹೇಳಿಕೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಗಿಳಿಪಾಠವಾಗಿದೆ.
ಇದನ್ನು ಶಿಕ್ಷಣ ಇಲಾಖೆಯಿಂದ ಶಿಕ್ಷಕರು ಬಾಯಿಪಾಠ ಮಾಡಿಕೊಂಡಿದ್ದಾರೆ. ಇಲ್ಲಿಯ ಒಳ ಕಾರಣಗಳನ್ನು ಈ ಎರಡು ವರ್ಗ ಹುಡುಕಿದ್ದಿಲ್ಲ. ತಮ್ಮ ತಪ್ಪುಗಳನ್ನು ಸೇರಿಕೊಂಡು, ಎಲ್ಲ ತಪ್ಪುಗಳನ್ನು ಸಾರ್ವಜನಿಕರ ತಲೆಗೆ ಕಟ್ಟುವುದು ಇಷ್ಟೇ ಸಾಮಾನ್ಯವಾಗಿದೆ. ಈ ಬಗ್ಗೆ ಸೂಕ್ಷ್ಮ ಪ್ರಜ್ಞೆಯಿಂದ ಆಲೋಚಿಸಿದರೆ ಸಿಗುವ ಉತ್ತರವೆಂದರೆ ಶಿಕ್ಷಕರಾಗಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯಾಗಲಿ ಪೋಷಕರಲ್ಲಿ ನಂಬಿಕೆ ಹುಟ್ಟಿಸುತ್ತಿಲ್ಲ.
ಭಾವಿ ಶಿಕ್ಷಕ- ಶಿಕ್ಷಕಿಯರ ಕನಸಿಗೆ ಕಲ್ಲು
ಇದು ಸಮಸ್ಯೆಯ ಗಾಂಭೀರ್ಯ ಬಲ್ಲವರಿಗೆ ಮಾತ್ರ ಅರ್ಥವಾಗುತ್ತದೆ. ಇಲಾಖೆ ಮತ್ತು ಶಿಕ್ಷಕರು ನಿಜಕ್ಕೂ ಸರಕಾರಿ ಶಾಲೆಗಳ ಸರ್ವಾಂಗೀಣ ಆರೋಗ್ಯದತ್ತ ಕ್ರೀಯಾಶೀಲರಾಗದಿದ್ದರೆ ಶಿಕ್ಷಕರಾಗಲು ಬೇಕಿರುವ ಆರ್ಹತಾ ತರಬೇತಿ ಪಡೆದ ಲಕ್ಷಾಂತರ ಭಾವಿ ಶಿಕ್ಷಕ ಯುವಕ-ಯುವತಿಯರ ಕನಸುಗಳಿಗೆ ಕಲ್ಲು ಹಾಕಿದವರಾಗುತ್ತಾರೆ ಎಂಬುದಂತೂ ಸೂರ್ಯನಷ್ಟೇ ಸತ್ಯ.
ಸರಕಾರದ ಪರಿಣಾಮ ಚಿಂತನೆಯ ಬಂಜೆತನದಿಂದಾಗಿ. ಇಲ್ಲಿ ಸಮಸ್ಯೆಗಳು ಹುಟ್ಟಲ್ಲ, ಕಾರಣವಾಗಿದೆ ಎಂಬುದು ಶಿಕ್ಷಣ ಸೂಕ್ಷ್ಮಮತಿಗಳ ಅಭಿಪ್ರಾಯ. ಇದೇ ಸರಕಾರ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವಿ ರಾಜಕಾರಣಿ, ಬಂಡವಾಳಶಾಹಿ ಹಿತ ರಕ್ಷಕ ಎಂಬಂತೆ 'ಪ್ರತಿಷ್ಠ ಶಾಲೆಗಳೆಂದು ಆ ಶಾಲೆಗಳನ್ನು ಪ್ರಮೋಟ್ ಮಾಡಿದ್ದು ಸರ್ಕಾರಿ ಶಾಲೆಗಳು ಖಾಲಿ ಹೊಡೆಯಲು ಮುಖ್ಯ ಕಾರಣ'.
ಇಲ್ಲಿ ಸರಕಾರ ತನ್ನ ವ್ಯವಸ್ಥೆಯ ಯಾವ ಸರಕಾರಿ ಶಾಲೆಯನ್ನೂ ಪ್ರತಿಷ್ಠಿತ ಶಾಲೆಯೆಂದು ಸಾರ್ವಜನಿಕರಿಗೆ ಹೇಳಲೇ ಇಲ್ಲ. ಒಂದು ರೀತಿಯಲ್ಲಿ ಸರಕಾರವು ಶ್ರೀಮಂತ ಖಾಸಗಿ ಶಾಲೆಗಳ ರಾಯಭಾರಿ ಏನೋ ಎಂಬ ಅನುಮಾನ ಹುಟ್ಟುವಂತಾದುದು ವರ್ತಮಾನದ ಸತ್ಯವೂ ಆಗಿದೆ.
ಸಮಸ್ಯೆಯ ಮುಳ್ಳನ್ನು ತೆಗೆಯದೇ ಬಿಟ್ಟಿದೆ
ಅಕ್ಷರ ದಾಸೋಹ, ಹಾಲುಭಾಗ್ಯ, ಸಮವಸ್ತ್ರ ದಾನ, ಉಚಿತ ಪಠ್ಯ ಪುಸ್ತಕ, 8ನೇ ತರಗತಿಯಿಂದ ಸೈಕಲ್, ವಿದ್ಯಾರ್ಥಿನಿಲಯ ವ್ಯವಸ್ಥೆ, ವಿವಿಧ ವೇತನಗಳು ಹೀಗೆ ಪಟ್ಟಿಯ ಬಾಲ ಬೆಳೆಸುತ್ತದೆ. ಆದರೆ ಸಮಸ್ಯೆಯ ಮುಳ್ಳನ್ನು ತೆಗೆಯದೇ ಬಿಟ್ಟಿದೆ.
ಅನೇಕ ಅಧಿಕಾರಿಗಳಿಗೆ ಖಾಸಗಿ ಶಾಲೆಗಳ ಬಗೆಗೆ ಇರುವ ಒಲವು ತನಗೆ ಅನ್ನ ಬಟ್ಟೆ ನೀಡುವ ಸರಕಾರಿ ಶಾಲೆಗಳ ಬಗ್ಗೆ ಇರದಿರುವುದು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯ ಮುಗಿಸಿರುವ ಅನೇಕ ಶಿಕ್ಷಕರ ಅನುಭವದಲ್ಲಿದೆ. ಇವರು ಸರಕಾರಿ ಶಾಲೆಗಳಿಗೆ ಬಂದಾಗ ಇರುವ ಲೋಪದೊಂದಿಗೆ ಇಲ್ಲದ ಲೋಪಗಳನ್ನು ಸೇರಿಸಿ, ಶಿಕ್ಷಕರನ್ನು ಟೀಕಿಸಿ ನಿರಾಸಕ್ತರನ್ನಾಗಿ ಮಾಡುವುದುಂಟು. ಇದರಿಂದಾಗಿ ಕ್ರೀಯಾಶೀಲ ಶಿಕ್ಷಕರು ಮಂಕಾಗುತ್ತಾರೆ.
ನಲಿ-ಕಲಿ ಪೋಷಕರ ಮನಸ್ಸನ್ನು ಗೆದ್ದುದ್ದಿಲ್ಲ. ಇದು ರಾಜಕಾರಣಿ- ಇಲಾಖೆ ಅಧಿಕಾರಿಗಳಷ್ಟೆ ಪ್ರಿಯವಾದುದು. ಈ ಬಗ್ಗೆ ಶಿಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ನಲಿ-ಕಲಿ ಬಗ್ಗೆ "ನಲಿ-ಕಲಿ-ಮರಿ" ಎಂಬ ಮಾತು ಜೋಕಾಗಿ ಹರಿದಾಡುತ್ತಿರುತ್ತದೆ. ಇಲ್ಲಿ ಪ್ರತಿಷ್ಠೆಗೆ ಬೀಳದೆ ಕ್ರಮಬದ್ಧ ಅಕ್ಷರಮಾಲೆ ಕಲಿಕೆಯನ್ನು ಆರಂಭಿಸಿದ್ದೇ ಆದರೆ ಪೋಷಕರ ಮನಸ್ಸನ್ನು ಸ್ಪಲ್ಪ ಪ್ರಮಾಣದಲ್ಲಿ ಇತ್ತ ಸೆಳೆಯಬಹುದು.
ಸರಕಾರಿ ಶಾಲೆಗಳ ಪತನದ ಹಾದಿಯಲ್ಲಿ ಎಸ್.ಡಿ.ಎಂ.ಸಿ.ಗಳತ್ತಲೂ ಗಮನ ಹರಿಸಬಹುದು. ಇವನ್ನು ರೂಪಿಸಿದ ಉದ್ದೇಶ ಘನವಾದುದು. ಆದರೆ ಬಳಸಿಕೊಳ್ಳುವಾಗ ಆ ಉದ್ದೇಶದಲ್ಲಿ ಆ ಘನತೆ ಉಳಿಯಲಿಲ್ಲ. ಒಂದು ರೀತಿಯಲ್ಲಿ ಎಸ್.ಡಿ.ಎಂ.ಸಿಗಳು ಗ್ರಾಮ ಪಂಚಾಯತಿ ರಾಜಕೀಯದ ತರಬೇತಿ ಕೇಂದ್ರಗಳು ಎಂಬ ಸಾರ್ವಜನಿಕ ಟೀಕೆಯನ್ನು ಗಮನಿಸಬೇಕು.
ರಾಜಕೀಯ ಕಾರಣಗಳಿಂದ ವಿಫಲ ಆಗಿರುವುದಕ್ಕೆ ಉದಾಹರಣೆ
ಶಾಲೆಗಳಿಗೆ ಪಕ್ಷ ರಾಜಕಾರಣ ಪ್ರವೇಶವಾದುದು ಎಸ್.ಡಿ.ಎಂ.ಸಿಗಳ ಮೂಲಕ. ಒಂದು ಮಹತ್ವವಾದ ಸಂಸ್ಥೆ ರಾಜಕೀಯ ಕಾರಣಗಳಿಂದ ವಿಫಲವಾಗುವುದು ಹೇಗೆ ಎಂಬುದಕ್ಕೆ ಎಸ್.ಡಿ.ಎಂ.ಸಿಗಳು ಜೀವಂತ ನಿದರ್ಶನಗಳು.
ಇಷ್ಟೇ ಮುಖ್ಯವಾಗಿ ಪಾಠ ಬೋಧನೆಯ ಕರ್ತವ್ಯ ನಿರ್ವಹಿಸುವವರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬಿಟ್ಟಿದ್ದಾರೆಯೇ, ತಮ್ಮ ಭೋಧನಾ ವ್ಯವಸ್ಥೆಯಲ್ಲಿ ಉಳಿಸಿಕೊಂಡಿದ್ದಾರೆಯೇ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಸರಕಾರಿ ಶಾಲೆಗಳ ಅವಸಾನದ ಸಮಸ್ಯೆಗಳಲ್ಲಿ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ.
ಅಂದರೆ, ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ನಂಬಿಕೆ ಹುಟ್ಟಿಸುವಂತಹ ಜವಾಬ್ದಾರಿಯನ್ನು ಶಿಕ್ಷಣ ಮಂತ್ರಿ, ಶಿಕ್ಷಣ ಇಲಾಖೆ, ಶಿಕ್ಷಕರು ಸಾರ್ವಜನಿಕವಾಗಿ ವಹಿಸಿಕೊಳ್ಳಬೇಕಾಗುತ್ತದೆ. ಆಗಷ್ಟೆ ವೈ. ಹೊಸಕೋಟೆಯಲ್ಲಿನ ಶಾಲಾ ಪರಿಸ್ಥಿತಿಗೆ ಸರಕಾರಿ ಶಾಲೆಗಳು ತಲುಪದಂತೆ ಮಾಡಬಹುದು.
ಭಯದಲ್ಲಿ ಅಂಗನವಾಡಿ: ಊರಿನ ಮಧ್ಯದಲ್ಲಿದ್ದ ಅಂಗನವಾಡಿಯನ್ನು ಮಸಣ ಮೌನದಂತಿರುವ ಈ ಶಾಲೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಏಳು ಪುಟ್ಟಪುಟ್ಟ ಮಕ್ಕಳು ಹಾಗೂ ಸಹಾಯಕಿಯನ್ನು ಕಟ್ಟಿಕೊಂಡು ಏಗುತ್ತಿರುವ ನೇತ್ರಾವತಮ್ಮನವರು ಭಯದ ನಡುವೆ ಕೆಲಸ ಮಾಡುವಂತಾಗಿದೆ.
ಮುಚ್ಚಿದ ಶಾಲೆ ಊರ ಹೊರಗಿದೆ. ಇತ್ತಿಚಿನ ದಿನಗಳಲ್ಲಿ ಹಗಲಿನಲ್ಲಿಯೂ ಕುಡುಕರ ಹಾಗೂ ಅನ್ಯ ಚಟುವಟಿಕೆಯ ಜನ ಇಂಥ ಸ್ಥಳಗಳನ್ನು ಆಯ್ದುಕೊಳ್ಳುವುದು ಹಳ್ಳಿಗಳಿಗೂ ಹಬ್ಬಿದೆ. ಅಂಗನವಾಡಿ ಕೇಂದ್ರವನ್ನು ಹಿಂದಿನ ಸ್ಥಳಕ್ಕೆ ಸ್ಥಳಾಂತರಿಸುವುದು ಕ್ಷೇಮವೆಂಬುದು ಆಕೆಯ ಅಭಿಪ್ರಾಯವಾಗಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆಯ ನಾಯಕ – ಮೊದಲ ಭಿನ್ನಮತ ಸ್ಫೋಟ – KANNADIGA WORLD
Home ಕನ್ನಡ ವಾರ್ತೆಗಳು ಮುಂಬೈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆಯ ನಾಯಕ – ಮೊದಲ ಭಿನ್ನಮತ ಸ್ಫೋಟ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆಯ ನಾಯಕ – ಮೊದಲ ಭಿನ್ನಮತ ಸ್ಫೋಟ
05/01/2020 By Karnataka News Bureau 2 Mins Read
ಮುಂಬೈ: ಕಾಂಗ್ರೆಸ್ ಹಾಗೂ ಕೆಲ ಶಿವಸೇನೆ ನಾಯಕರಲ್ಲಿ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಇನ್ನೊಂದು ಆಘಾತ ಉಂಟಾಗಿದ್ದು, ಶಿವಸೇನೆ ನಾಯಕ ಅಬ್ದುಲ್ ಸತ್ತಾರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ರಾಜೀನಾಮೆಯನ್ನು ಅಂಗೀಕರಿಸಿಲ್ಲ, ಬದಲಿಗೆ ನಾಳೆ ಮಾತುಕತೆ ನಡೆಸುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡದೇ ಕೇವಲ ರಾಜ್ಯ ಸಚಿವರನ್ನಾಗಿ ಮಾಡಿರುವುದು ಅಬ್ದುಲ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್ ಅವರು ಕಾಂಗ್ರೆಸ್ ತೊರೆದು ಶಿವಸೇನೆಗೆ ಸೇರ್ಪಡೆಯಾಗಿದ್ದರು.
ಔರಂಗಬಾದ್ ಶಾಸಕ ಅಬ್ದುಲ್ ಸತ್ತಾರ್ ಅವರ ರಾಜೀನಾಮೆಯನ್ನು ಶಿವಸೇನೆ ಅಂಗೀಕರಿಸಿಲ್ಲ. ಈ ಕುರಿತು ಶಿವಸೇನೆಯ ಹಿರಿಯ ನಾಯಕ ಎಕ್ನಾಥ್ ಶಿಂಧೆ ಮಾಹಿತಿ ನೀಡಿ, ಅವರ ರಾಜೀನಾಮೆಯನ್ನು ನಾವು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದ ಹಾಗೂ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಬ್ದುಲ್ ಅವರೊಂದಿಗೆ ಮಾತನಾಡಲಿದ್ದಾರೆ. ಸಚಿವ ಸಂಪುಟ ರಚನೆ ವೇಳೆ ಇದೆಲ್ಲ ಸಾಮಾನ್ಯ. ಸೂಕ್ತ ಸ್ಥಾನಮಾನ ಸಿಗದ್ದಕ್ಕೆ ಕೆಲವು ನಾಯಕರು ಅಸಮಾಧಾನಗೊಂಡಿರುವುದು ಸತ್ಯ. ಇದು ಶಿವಸೇನೆ ಸರ್ಕಾರವಲ್ಲ, ಬದಲಿಗೆ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಎಂಬುದನ್ನು ಎಲ್ಲ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಹೊರಗಿನಿಂದ ಬಂದರೂ ಸಹ ಸಚಿವ ಸಂಪುಟದಲ್ಲಿ ಅಬ್ದುಲ್ ಅವರಿಗೆ ಸ್ಥಾನ ನೀಡಲಾಗಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ ನಂತರ ಸತ್ತಾರ್ ಅವರ ಅಸಮಾಧಾನ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಎಲ್ಲ ಸಚಿವರೊಂದಿಗೆ ಸತ್ತಾರ್ ಸಹ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಚಿವ ಸ್ಥಾನ ಸಿಗದ್ದಕ್ಕೆ ಕಾಂಗ್ರೆಸ್ ನಾಯಕರು ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಸೇನೆ ಶಾಸಕ ಸಹ ಆಕ್ರೋಶಗೊಂಡಿದ್ದಾರೆ.
ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಸಹಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ನಂತರ ಕಾಂಗ್ರೆಸ್ ನಾಯಕರು ಸಹ ಅಸಮಾಧಾನ ಹೊರ ಹಾಕಿ, ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು.
ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌವ್ಹಾಣ್ ಸೇರಿದಂತೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಚೌವ್ಹಾಣ್, ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೋಪ್ಟೆ, ಅಮಿನ್ ಪಟೇಲ್ ಹಾಗೂ ರೋಹಿದಾಸ್ ಪಾಟೀಲ್ ಅವರು ಸೋಮವಾರ ಸಂಜೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು.
ಡಿ.30ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಹಾಗೂ 34 ಇತರ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ಸರ್ಕಾರ ರಚನೆಯಾಗಿ ಒಂದು ತಿಂಗಳ ನಂತರ ಸಚಿವ ಸಂಪುಟ ರಚನೆಯ ಪ್ರಹಸನಕ್ಕೆ ವಿರಾಮ ಬಿದ್ದಿತ್ತು. ಇದೀಗ ಕಾಂಗ್ರೆಸ್ ಹಾಗೂ ಸ್ವತಃ ಕೆಲ ಶಿವಸೇನೆ ನಾಯಕರಲ್ಲಿಯೇ ಅಸಮಾಧಾನ ಭುಗಿಲೆದ್ದಿದ್ದು, ಇದು ಸಿಎಂ ಉದ್ಧವ್ ಠಾಕ್ರೆಗೆ ಸವಾಲಾಗಿ ಪರಿಣಮಿಸಿದೆ.
ಸಿಎಂ ಕುಮಾರಸ್ವಾಮಿ ಮೌನದ ಹಿಂದಿನ ಮರ್ಮವೇನು? | Chief Minister Kumaraswamy is right now silent - Kannada Oneindia
2 min ago ಕೊರೊನಾ ಲಾಕ್‌ಡೌನ್ ಬಗ್ಗೆ ನಿಮ್ಮ ಮಕ್ಕಳಿಗೆಷ್ಟು ಗೊತ್ತು?: ಅಭಿಪ್ರಾಯ ಕಳುಹಿಸಿ
19 min ago Fact Check: ಪ್ರಧಾನಿ ಮೋದಿ ಅಭಿನಂದಿಸಲು 5 ನಿಮಿಷ ಎದ್ದುನಿಲ್ಲಬೇಕೆ?
37 min ago ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶಶಿ ತರೂರ್ ಪ್ರಶ್ನೆ
ಸಿಎಂ ಕುಮಾರಸ್ವಾಮಿ ಮೌನದ ಹಿಂದಿನ ಮರ್ಮವೇನು?
| Published: Monday, May 13, 2019, 10:44 [IST]
ಎಚ್ ಡಿ ಕುಮಾರಸ್ವಾಮಿ ಮೌನದ ಹಿಂದಿನ ಕಾರಣವೇನು?
ಲೋಕಸಭಾ ಚುನಾವಣೆ ನಂತರ ವಿಶ್ರಾಂತಿಗಾಗಿ ರೆಸಾರ್ಟ್ ಸೇರಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೆಸಾರ್ಟ್‌ನಿಂದ ಹೊರ ಬಂದು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅವರ ಕಾರ್ಯದರ್ಶಿ ರಘುಕುಮಾರ್ ಮದುವೆಯ ಬೀಗರ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದರು.
ಬರದಿಂದ ಜನ ತತ್ತರಿಸುತ್ತಿದ್ದರೂ ಮುಖ್ಯಮಂತ್ರಿಗಳು ದುಬಾರಿ ರೆಸಾರ್ಟ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಕೇಳಿ ಬಂದಿದ್ದವು. ಆದರೆ ಮುಖ್ಯಮಂತ್ರಿಗಳು ಮಾತ್ರ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅದರಲ್ಲೂ ಮಾಧ್ಯಮಗಳಿಂದ ದೂರವೇ ಇದ್ದು ಬಿಟ್ಟಿದ್ದರು.
ಜೆಡಿಎಸ್ ನಾಯಕರ ಮೇಲೆ ಬೆಂಕಿ ಉಗುಳಿದ ಸಿದ್ದರಾಮಯ್ಯ
ಲೋಕಸಭಾ ಚುನಾವಣೆ ಮುಗಿದಿದ್ದರೂ ಅದರ ಕಾವು ಇನ್ನೂ ಕೂಡ ಹಾಗೆಯೇ ಇರುವುದರಿಂದ ಮತ್ತು ಚುನಾವಣಾ ಫಲಿತಾಂಶ ಬರಬೇಕಾಗಿರುವುದರಿಂದ ಮಗನ ರಾಜಕೀಯ ಭವಿಷ್ಯ ಏನಾಗಬಹುದೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈಗಾಗಲೇ ಗುಪ್ತಚರ ಮಾಹಿತಿ ಪಡೆದುಕೊಂಡಿದ್ದಲ್ಲದೆ, ಜ್ಯೋತಿಷಿಗಳನ್ನು ಕೂಡ ಭೇಟಿ ಮಾಡಿ ಭವಿಷ್ಯ ಕೇಳಿದ್ದಾರೆ.
ಇಷ್ಟೇ ಅಲ್ಲದೆ, ತಮ್ಮ ಹರಕೆಯಂತೆ ದೇವಾಲಯಗಳಿಗೂ ಹೋಗಿ ಬಂದಿದ್ದಾರೆ. ಆದರೂ ಅವರಿಗೆ ನೆಮ್ಮದಿ ಮಾತ್ರ ಸಿಕ್ಕಿಲ್ಲ. ಇದೆಲ್ಲ ಜಂಜಾಟಗಳ ನಡುವೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಮೈತ್ರಿ ಪಾಲನೆ ಮಾಡಿ ಚುನಾವಣೆಯಲ್ಲಿ ಪ್ರಚಾರ ನಡೆಸಬೇಕಾಗಿದ್ದ ಸಿಎಂ ಕುಮಾರಸ್ವಾಮಿಗಳು ಸದ್ಯ ದೂರವಾಗಿದ್ದಾರೆ.
ಇಷ್ಟರಲ್ಲೇ ಅಲ್ಲಿಗೆ ತೆರಳಿ ಸಭೆಗಳನ್ನು ನಡೆಸಿ ಮೈತ್ರಿ ಅಭ್ಯರ್ಥಿ ಪರ ಮಾತನಾಡಬೇಕಾಗಿತ್ತು. ಆದರೆ ಅದ್ಯಾಕೋ ಮೌನಕ್ಕೆ ಜಾರಿದ್ದಾರೆ. ಇದು ಬಹುಶಃ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.
ನಾಯಕರಲ್ಲಿಯೇ ಕಿತ್ತಾಟವಿರುವುದು ಬಯಲಾಗಿದೆ
ಮುಖ್ಯಮಂತ್ರಿಯಾಗಿ ಒಂದು ವರ್ಷವಾಗುತ್ತಾ ಬಂದಿದ್ದು, ಅವರಿಗೆ ಅದು ಮುಳ್ಳಿನ ನಡಿಗೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಅವಧಿ ಪೂರ್ಣ ಸರ್ಕಾರ ನಡೆಸಿದ ಇತಿಹಾಸವಿಲ್ಲ. ಅದರಲ್ಲೂ ಆಡಳಿತಾವಧಿಯಲ್ಲಿ ಲೋಕಸಭಾ ಚುನಾವಣೆ ಬಂದಿರುವುದು ಮೈತ್ರಿ ಧರ್ಮ ಪಾಲನೆಗೊಂದು ಸತ್ವ ಪರೀಕ್ಷೆಯಾಗಿತ್ತು. ಜತೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಒಗ್ಗಟ್ಟಾಗಿಲ್ಲ. ನಾಯಕರಲ್ಲಿಯೇ ಕಿತ್ತಾಟವಿದೆ ಎಂಬುದು ಕೂಡ ಈ ಚುನಾವಣೆಯಲ್ಲಿ ಬಯಲಾಗಿದೆ. ಫಲಿತಾಂಶದ ಬಳಿಕ ಒಳಜಗಳಗಳು ಭುಗಿಲೇಳುವ ಎಲ್ಲ ಲಕ್ಷಣಗಳು ಈಗ ಕಾಣಲಾರಂಭಿಸಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸುವುದಕ್ಕಿಂತ ಎರಡು ಪಕ್ಷಗಳ ನಾಯಕರನ್ನು ಒಟ್ಟಾಗಿ ಮುನ್ನಡೆಸುವುದೇ ಸವಾಲ್ ಆಗಿ ಪರಿಣಮಿಸಿದೆ.
ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಕೂಗು
ಇದರ ನಡುವೆ ಬಿಜೆಪಿ ಕೂಡ ಸರ್ಕಾರ ಬೀಳಿಸಲು ಏನೆಲ್ಲ ತಂತ್ರಗಳನ್ನು ಮಾಡಬಹುದು ಎಂಬುದರಲ್ಲಿಯೇ ಮಗ್ನವಾಗಿದೆ. ಇನ್ನು ಲೋಕಸಭಾ ಚುನಾವಣೆ ಫಲಿತಾಂಶ ದೇಶದ ರಾಜಕಾರಣಕ್ಕೆ ಸಂಬಂಧಿಸಿದ್ದಾಗಿದ್ದರೂ ಕರ್ನಾಟಕದ ರಾಜಕೀಯದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಕೂಗುಗಳು ಕೂಡ ಹೆಚ್ಚಾಗುತ್ತಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಶೀತಲ ಸಮರಕ್ಕೂ ದಾರಿ ಮಾಡಿಕೊಡುತ್ತಿದೆ.
ಮೌನಮುರಿದ ಜೆಡಿಎಸ್ ರಾಜ್ಯ ಅಧ್ಯಕ್ಷ ವಿಶ್ವನಾಥ್
ಜೆಡಿಎಸ್‌ನ ರಾಜ್ಯ ಅಧ್ಯಕ್ಷರಾಗಿ ಪಕ್ಷಕ್ಕೆ ಮತ್ತು ತಮ್ಮ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಷ್ಠರಾಗಿರುವ ಎಚ್.ವಿಶ್ವನಾಥ್ ಅವರು ಇದೀಗ ಮೌನಮುರಿದಿದ್ದಾರೆ. ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರದು ಎಣ್ಣೆ ಸೀಗೆಕಾಯಿ ಸಂಬಂಧ. ಹೀಗಿರುವಾಗ ಮೇಲಿಂದ ಮೇಲೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಕೇಳಿಸುತ್ತಿದ್ದರೆ ಅವರು ಬಾಯಿ ಮುಚ್ಚಿ ಕೂರುವ ಅಸ್ಸಾಮಿ ಅಂತು ಅಲ್ಲವೇ ಅಲ್ಲ. ಹೀಗಾಗಿ "ಕಾಂಗ್ರೆಸ್ ಶಾಸಕರು ಹಾಗೂ ಮಂತ್ರಿಗಳು ತಮ್ಮ ವರ್ತನೆ ಬಿಡಬೇಕು. ಸುಖಾ ಸುಮ್ಮನೆ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ಕೊಡೋದನ್ನು ನಿಲ್ಲಿಸಬೇಕು. 2022ಕ್ಕೆ ಸಿಎಂ ಆಗಲಿ ಯಾರು ಬೇಡ ಅಂತಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿದ್ದು ಮತ್ತು ಸಿಎಂ ಆಗೋ ವಾತಾವರಣ ಕಲ್ಪಿಸಿದ್ದು ನಾನು" ಎಂದಿದ್ದಾರೆ.
ಪ್ರಬಲ ನಾಯಕರಿಂದ ಆರೋಪಗಳ ಸುರಿಮಳೆ
ವಿಶ್ವನಾಥ್ ಮಾತಿಗೂ ಅಷ್ಟೇ ಖಡಕ್ ಆಗಿ ಉತ್ತರಿಸಿರುವ ಸಿದ್ದರಾಮಯ್ಯ, ವಿಶ್ವನಾಥ್ ಅವನಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇರುವಾಗ ಎರಡು ಪಕ್ಷಗಳ ಪ್ರಬಲ ನಾಯಕರು ಹೀಗೆ ಆರೋಪಗಳ ಮಳೆ ಸುರಿಸುತ್ತಿದ್ದು, ಇವರಿಂದ ಸುಭದ್ರ ಸರ್ಕಾರ ನೀಡಲು ಸಾಧ್ಯನಾ? ಮೈತ್ರಿ ಮುಂದುವರೆದು ಸರ್ಕಾರ ಆಡಳಿತ ಪೂರ್ಣಗೊಳಿಸುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಭುಗಿಲೇಳುವುದು ಸಾಮಾನ್ಯ. ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿದ್ದಾರೆ. ಮಾಧ್ಯಮಗಳಿಂದ ದೂರವಿದ್ದಾರೆ.
lok sabha elections 2019 hd kumaraswamy result ಲೋಕಸಭಾ ಚುನಾವಣೆ 2019 ಕುಮಾರಸ್ವಾಮಿ ಫಲಿತಾಂಶ
Chief Minister Kumaraswamy is right now silent. No one knows secret behind it. We will get the answer after the election results.
" ಅನಂತನ ಹುಣ್ಣಿಮೆ "ಪೂಜಾ ಸಮಯ ಮತ್ತು ಪೂಜಾ ವಿಧಾನ – Upayuktamahiti.com
" ಅನಂತನ ಹುಣ್ಣಿಮೆ "ಪೂಜಾ ಸಮಯ ಮತ್ತು ಪೂಜಾ ವಿಧಾನ
September 19, 2021 September 19, 2021 adminLeave a Comment on " ಅನಂತನ ಹುಣ್ಣಿಮೆ "ಪೂಜಾ ಸಮಯ ಮತ್ತು ಪೂಜಾ ವಿಧಾನ
ಭದ್ರಪದ ಮಾಸದ ಅನಂತನ ಹುಣ್ಣಿಮೆಯನ್ನು ಈ ರೀತಿ ಆಚರಣೆ ಮಾಡಿದರೆ ತುಂಬಾ ಒಳ್ಳೆಯದು.ಭದ್ರಪದ ಮಾಸದ ಅನಂತನ ಹುಣ್ಣಿಮೆ ತುಂಬಾನೇ ವಿಶೇಷವಾದದ್ದು.ಇದಕ್ಕೆ ಮುಖ್ಯವಾಗಿ ನದಿ ಸ್ನಾನ ಮಾಡಬೇಕು.ತೀರ್ಥ ಕ್ಷೇತ್ರಕ್ಕೆ ಹೋಗುವ ಅವಕಾಶ ಸಿಕ್ಕರೆ ಅಲ್ಲಿ ನೀವು ಹೋಗಿ ನದಿ ಸ್ನಾನ ಮಾಡಿಕೊಂಡು ಶ್ರೀ ರಂಗನಾಥ ದೇವಸ್ಥಾನಕ್ಕೆ ಹೋದರೆ ತುಂಬಾನೇ ಒಳ್ಳೆಯದು.
ಈ ಹುಣ್ಣಿಮೆ ದಿನ ಶ್ರೀಮನ್ ನಾರಾಯಣ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟರ್ಥ ಈಡೇರುತ್ತದೆ.ಅಷ್ಟು ರಂಗನಾಥ ದೇವಸ್ಥಾನಕ್ಕೆ ಹೋದರೆ ತುಂಬಾ ಒಳ್ಳೆಯದು.ಇನ್ನು ಯಾವುದೇ ತೀರ್ಥ ಕ್ಷೇತ್ರದಲ್ಲಿ ನದಿ ಸ್ನಾನ ಮಾಡುವುದರಿಂದ ಯಾವುದೇ ಒಂದು ದೃಷ್ಟಿ ದೋಷ ಇದ್ದರು ಕೂಡ ನಿವಾರಣೆ ಆಗುತ್ತದೆ.ಒಂದು ವೇಳೆ ಕುಟುಂಬದಲ್ಲಿ ಏನಾದರು ಸಮಸ್ಸೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಭದ್ರಪದ ಮಾಸದ ಅನಂತನ ಹುಣ್ಣಿಮೆ ಆಚರಣೆ ಮಾಡುವುದರಿಂದ ನಿಮಗೆ ತುಂಬಾನೇ ಉಪಯೋಗ ಆಗಲಿದೆ.
ತೀರ್ಥ ಸ್ನಾನ ಮಾಡಿಕೊಂಡು ದೇವರ ದರ್ಶನ ಮಾಡುವುದು ತುಂಬಾನೇ ಒಳ್ಳೆಯದು.ಇನ್ನು ಸತ್ಯ ನಾರಾಯಣ ಪೂಜೆಯನ್ನು ಈ ದಿನ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಕಳಸದ ನೀರನ್ನು ಬದಲಾಯಿಸಿ ಅದರಮೇಲೆ ಐದು ವಿಳೇದೆಲೆ ಇಡಬೇಕು. ನಂತರ ಅಮಾವಾಸ್ಯೆ ದಿನ ಇಟ್ಟ ಕಾಯಿಯನ್ನು ಇಟ್ಟು ಪೂಜೆಯನ್ನು ಮಾಡಬೇಕು.ಮನೆಯಲ್ಲಿ ಪೂಜೆ ಮುಗಿಸಿಕೊಂಡು ನಂತರ ದೇವಸ್ಥಾನಕ್ಕೆ ಹೋಗಿ ಬನ್ನಿ.
ಪ್ರತಿಯೊಂದು ದೇವಸ್ಥಾನದಲ್ಲಿ ಅವತ್ತಿನ ದಿನ ವಿಶೇಷವಾದ ಪೂಜೆಯನ್ನು ಮಾಡುತ್ತಾರೆ. ಯಾವುದೇ ರೀತಿಯ ಕೆಟ್ಟ ದೃಷ್ಟಿ ಮನೆಯ ಮೇಲೆ ಬಿದ್ದರೂ ಸಹ ಹುಣ್ಣಿಮೆ ದಿನ ಆಚರಣೆ ಮಾಡುವುದರಿಂದ ತುಂಬಾ ಒಳ್ಳೆಯದು.ಈ ಪೂಜೆಯನ್ನು ಸೋಮವಾರ 20 ನೇ ತಾರೀಕು ಬೆಳಗ್ಗೆ 4:02 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಹಾಗೂ ಮುಕ್ತಾಯ 21ನೇ ತಾರೀಕು ಮಂಗಳವಾರ ಬೆಳಗ್ಗೆ 4:34 ನಿಮಷದವರೆಗೂ ಇರುತ್ತದೆ.ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು.ಆದಷ್ಟು ತೀರ್ಥ ಕ್ಷೇತ್ರಕ್ಕೆ ಭೇಟಿ ಮಾಡಿ ನದಿ ಸ್ನಾನ ಮಾಡಿ ದೇವರ ದರ್ಶನ ಮಾಡಿದಾರೆ ತುಂಬಾ ಒಳ್ಳೆಯದು.
ಸರ್ಕಾರ ಉಳಿಸಿಕೊಳ್ಳುವುದು ಎರಡೂ ಪಕ್ಷಕ್ಕೆ ಅನಿವಾರ್ಯ: ಜಿಟಿಡಿ | inevitable to save coalition government: gt devegowda - Kannada Oneindia
just now ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನಿಯಮ ತಿದ್ದುಪಡಿಗೆ ಚಿಂತನೆ
ಸರ್ಕಾರ ಉಳಿಸಿಕೊಳ್ಳುವುದು ಎರಡೂ ಪಕ್ಷಕ್ಕೆ ಅನಿವಾರ್ಯ: ಜಿಟಿಡಿ
By ಬೆಳಗಾವಿ ಪ್ರತಿನಿಧಿಯಿಂದ
| Updated: Friday, June 29, 2018, 19:48 [IST]
ಬೆಳಗಾವಿ, ಜೂನ್ 29: ಬಿಜೆಪಿಗೆ ಅನುಕೂಲ ಮಾಡಿಕೊಡಬಾರದು ಎಂಬ ಸಲುವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.
ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿ ಬಯಸಿದೆ. ಇದಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಕಾಂಗ್ರೆಸ್‌ನವರು ಸಮ್ಮಿಶ್ರ ಸರ್ಕಾರ ನಡೆಸಲು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ.
ಜಾತ್ಯತೀತ ಶಕ್ತಿಗಳು ಒಂದಾಗಬೇಕು ಹಾಗೂ ಕೋಮುವಾದಿಗಳಿಗೆ ಅಧಿಕಾರ ನೀಡಬಾರದು ಎಂದು ಪಕ್ಷದ ವರಿಷ್ಠ ದೇವೇಗೌಡ ಅವರು ಕಾಂಗ್ರೆಸ್ ಜತೆಗಿನ ಮೈತ್ರಿಗೆ ಒಪ್ಪಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಉಳಿಯಬೇಕಿದೆ. ಅದು ಕರ್ನಾಟಕದಿಂದ ಮಾತ್ರ ಸಾಧ್ಯವಿದೆ. ಸರ್ಕಾರ ಬೀಳುವುದಕ್ಕೆ ಎರಡೂ ಪಕ್ಷಗಳ ನಾಯಕರು ಬಿಡುವುದಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ ಎಂದು ಜಿಟಿಡಿ ಹೇಳಿದರು.
ಮಗಳನ್ನು ಶಾಲೆಗೆ ಸೇರಿಸಲು ಹೋದವರು ಮಸಣ ಸೇರಿದರು
ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ನಡುವೆ ದ್ವೇಷವಿಲ್ಲ. ದ್ವೇಷ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ರಚನೆಯೇ ಆಗುತ್ತಿರಲಿಲ್ಲ. ದೇವೇಗೌಡ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿದ್ದಾರೆ ಎಂಬುದು ಸತ್ಯವಲ್ಲ ಎಂದರು.
ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಹಿಂದೆ ಘೋಷಣೆ ಮಾಡಿದ್ದ ಮಹತ್ವದ ಯೋಜನೆಗಳನ್ನು ಮುಂದುವರಿಸುವ ಕುರಿತು ಸಮನ್ವಯ ಸಭೆಯಲ್ಲಿ ಚರ್ಚಿಸಲಾಗಿದೆ.
ಬಜೆಟ್ ಮಂಡನೆ ಮತ್ತು ರೈತರ ಸಾಲ ಮನ್ನಾಕ್ಕೆ ಸಿದ್ದರಾಮಯ್ಯ ತಕರಾರು ತೆಗೆದಿಲ್ಲ. ಸಚಿವ ಸ್ಥಾನ ಸಿಗದೆ ಇರುವವರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದರು.
ನಾನು ಸಿದ್ದರಾಮಯ್ಯ ಅವರನ್ನು ಸೋಲಿಸಿಲ್ಲ. ಅವರು ನರೇಂದ್ರ ಮೋದಿ ಜತೆ ಯುದ್ಧ ಮಾಡಲು ಹೋಗಿ ಸೋತಿದ್ದಾರೆ ಎಂದು ಹೇಳಿದರು.
ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಬೇಕು, ಏಳನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಸಂಬಳ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೋರಿರುವುದಾಗಿ ತಿಳಿಸಿದರು.
belagavi district news gt devegowda congress jds bjp ಬೆಳಗಾವಿ ಜಿಲ್ಲಾಸುದ್ದಿ ಜಿಟಿ ದೇವೇಗೌಡ ಕಾಂಗ್ರೆಸ್ ಜೆಡಿಎಸ್ ಬಿಜೆಪಿ