text
stringlengths
0
61.5k
It is enveitable for JDS and Congress to continue the coalition government to avoid communal BJP form government.
ಎಂಟಿಬಿ ಚಿನ್ನ, ಬೆಳ್ಳಿ ಆಮಿಷ ಒಡ್ಡಿದರೆ ಪರೀಕ್ಷಿಸಿ ತೆಗೆದುಕೊಳ್ಳಿ; ಮತದಾರರಿಗೆ ಶರತ್​ ಬಚ್ಚೇಗೌಡ ಸಲಹೆ |Sharath Bachegowda sugestion to the voter to take things from mtb– News18 Kannada
ಎಂಟಿಬಿ ಚಿನ್ನ, ಬೆಳ್ಳಿ ಆಮಿಷ ಒಡ್ಡಿದರೆ ಪರೀಕ್ಷಿಸಿ ತೆಗೆದುಕೊಳ್ಳಿ; ಮತದಾರರಿಗೆ ಶರತ್​ ಬಚ್ಚೇಗೌಡ ಸಲಹೆ
ಇನ್ನು ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಮತದಾರರನ್ನು ಸೆಳೆಯಲು ಚಿನ್ನ, ಬೆಳ್ಳಿ ಉಡುಗೊರೆ ನೀಡುತ್ತಿರುವುದಾಗಿ ಶರತ್​ ಬಚ್ಚೇಗೌಡ, ಆಪಾದಿಸಿದ್ದು, ವಸ್ತುಗಳ ಆಮಿಷಕ್ಕೆ ಬಲಿಯಾಗುವ ಮುನ್ನ ಅಸಲಿಯತ್ತು ಪರೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.
Updated:December 2, 2019, 9:47 PM IST
Last Updated: December 2, 2019, 9:47 PM IST
ಬೆಂಗಳೂರು (ಡಿ.02): ಉಪಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿಇದ್ದು, ಚುನಾವಣಾ ಅಖಾಡ ರಂಗೇರಿದೆ. ಮತದಾರರ ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದು, ಎದುರಾಳಿಗಳ ವಿರುದ್ಧ ವಾಕ್ಸಮರ ಮುಂದುವರೆಸಿದ್ದಾರೆ.
ಇನ್ನು ಜಿದ್ದಾಜಿದ್ದಿಯ ಕಣವಾದ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದು, ಅನರ್ಹ ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಜಡಿಗೇನಹಳ್ಳಿ ಹೋಬಳಿಯ ಪ್ರಚಾರ ಭಾಷಣ ಮಾಡಿದ ಅವರು, ಎಂಟಿಬಿ ನಾಗರಾಜ್​ ಮತದಾರರ ಸೆಳೆಯಲು ಚಿನ್ನದ ಉಂಗುರ, ಬೆಳ್ಳಿ ನಾಣ್ಯ ಹಚ್ಚುತ್ತಿದ್ದಾರೆ. ಇವುಗಳನ್ನು ಪಡೆಯುವ ಮುನ್ನ ಎಚ್ಚರವಹಿಸಿ. ಕಾರಣ ನಂದಗುಡಿ ಹೋಬಳಿಯ ಕೆಲವೆಡೆ ಬೆಳ್ಳಿ ನಾಣ್ಯ ಹಂಚಿದ್ದಾರೆ, ಮರುದಿನವೇ ನಾಣ್ಯಗಳೆಲ್ಲಾ ಕಪ್ಪಾಗಿದೆ. ಹಾಗಾಗಿ ವಸ್ತುಗಳನ್ನು ತೆಗೆದುಕೊಳ್ಳುವಾಗ ಹುಷಾರು ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನು ಓದಿ: ನೀತಿ ಸಂಹಿತೆ ಉಲ್ಲಂಘನೆ ಸಿಎಂ ಯಡಿಯೂರಪ್ಪ ಮೇಲೆ ದೂರು​ ದಾಖಲು; ಚುನಾವಣಾಧಿಕಾರಿ ಸಂಜೀವ್​ ಕುಮಾರ್
ರಾತ್ರಿ ಸಮಯದಲ್ಲಿ ಉಂಗುರಗಳನ್ನು ತೆಗೆದುಕೊಳ್ಳುವಾಗ ಎಚ್ಚರ. ಲೈಟ್​ ಆನ್​ ಮಾಡಿ ಕಲ್ಲಿಗೋ, ಗೋಡೆಗೋ ಉಜ್ಜಿ ನೋಡಿ. ನಕಲಿ ಉಂಗುರ ನೀಡಿ ಯಮಾರಿಸಿದರೆ ಕಷ್ಟ ಎಂದಿದ್ದಾರೆ.
ಜವಾಬ್ದಾರಿ ಅರಿತು ಮತ ಚಲಾಯಿಸಿ | udayavani
04:40 PM Nov 30, 2021 | Team Udayavani |
ಚಿಕ್ಕಮಗಳೂರು: ಚುನಾಯಿತ ಪ್ರತಿನಿ ಧಿಗಳು ತಮ್ಮ ಜವಾಬ್ದಾರಿ ಅರಿತು ಮತ ಚಲಾಯಿಸಬೇಕು ಎಂದು ಮಾಜಿ ಸಚಿವ ಹಾಗೂ ಚಿಕ್ಕಮಗಳೂರು ಕಾಂಗ್ರೆಸ್‌ ವಿಧಾನ ಪರಿಷತ್‌ ಚುನಾವಣೆ ಉಸ್ತುವಾರಿ ಸಗೀರ್‌ ಅಹಮದ್‌ ಕರೆ ನೀಡಿದರು.
ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಕುರುವಂಗಿ ಮತ್ತು ಜಾಗರ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಚುನಾಯಿತ ಜನಪ್ರತಿನಿಧಿ ಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯಸಿದ್ದ ಎಂ.ಕೆ.ಪ್ರಾಣೇಶ್‌ ಅವರ ಮುಖ ನೋಡಿದ್ದೀರಾ ಎಂದು ಗ್ರಾಪಂ ಸದಸ್ಯರಿಗೆ ಕೇಳಿದರೆ ಪತ್ರಿಕೆಗಳಲ್ಲಿ ಮಾತ್ರ ನೋಡಿದ್ದೇವೆ ಎಂದು ಉತ್ತರಿಸುತ್ತಾರೆ ಎಂದರು.
ಗಾಯತ್ರಿ ಶಾಂತೇಗೌಡ ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಜಾತಿ, ಪಕ್ಷಬೇಧ ಮರೆತು ಎಲ್ಲಾರ ಸಮಸ್ಯೆಗಳಿಗೆ ಸ ಂದಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಡಾ| ಡಿ.ಎಲ್‌. ವಿಜಯಕುಮಾರ್‌ ಮಾತನಾಡಿ, ಜನಪ್ರತಿನಿ ಧಿಗಳು ತಮ್ಮ ಅಧಿ ಕಾರ, ಜವಾಬ್ದಾರಿ ಅರಿತುಕೊಳ್ಳಬೇಕು. ಆಸೆ- ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದರು. ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಲ್‌. ಮೂರ್ತಿ ಮಾತನಾಡಿ, ಜನಪ್ರತಿನಿಧಿಗಳು ವಿಧಾನ ಪರಿಷತ್‌ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಜನಪ್ರತಿನಿಧಿಗಳು ಈ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ ತಮ್ಮ ಅಧಿಕಾರ ಅವಧಿಯಲ್ಲಿ ಹುಲಿಯೋಜನೆ, ಒತ್ತುವರಿ ಸಮಸ್ಯೆ ಸೇರಿದಂತೆ ಅತಿವೃಷ್ಠಿ ಸಂದರ್ಭದಲ್ಲಿ ಚಕಾರವೆತ್ತದವರು. ಚುನಾವಣೆ ಘೋಷಣೆಯಾದ ಬಳಿಕ ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಬೇಕೆಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಬಿ.ಎಲ್‌.ಶಂಕರ್‌, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್‌. ಮಹೇಶ್‌, ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್‌ ನಾಯ್ಡು, ಸಿ. ಎನ್‌.ಅಕ್ಮಲ್‌, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಇದ್ದರು.
ಭಾರತ್ ಬಂದ್: ದಕ್ಷಿಣ ಕನ್ನಡದಲ್ಲಿ ಕೆಲವೆಡೆ ಬೆಂಬಲ, ಹಲವೆಡೆ ವಿರೋಧ | Bharat Bandh has received huge support from Dakshina Kannada - Kannada Oneindia
4 min ago ಕೃಷ್ಣನಗರಿಯಲ್ಲಿ ಹಲವು ದಿನಗಳ ನಂತರ ಕೊರೊನಾ ಪ್ರಕರಣ ಹೆಚ್ಚಳ
25 min ago ಚೀನಾ ವಿರುದ್ಧ ಭಾರತವನ್ನು ಟ್ರಂಪ್ ಬೆಂಬಲಿಸುವ ಗ್ಯಾರೆಂಟಿಯೇ ಇಲ್ಲ
36 min ago ರಾಜಸ್ಥಾನ, ಸಚಿನ್ ಪೈಲಟ್ ಸಂಚಿಗೆ ಬೇಸ್ತು ಬಿದ್ದ ಗೆಹ್ಲೋಟ್: ಭಾರೀ ಸಂಕಷ್ಟದಲ್ಲಿ ಕಾಂಗ್ರೆಸ್?
ಭಾರತ್ ಬಂದ್: ದಕ್ಷಿಣ ಕನ್ನಡದಲ್ಲಿ ಕೆಲವೆಡೆ ಬೆಂಬಲ, ಹಲವೆಡೆ ವಿರೋಧ
| Published: Sunday, September 9, 2018, 11:06 [IST]
ಮಂಗಳೂರು, ಸೆಪ್ಟೆಂಬರ್ 09: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಬೆಂಬಲ ವ್ಯಕ್ತವಾಗುವ ಸೂಚನೆ ದೊರಕಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಸೋಮವಾರ (ಸೆ.10) ಖಾಸಗಿ ಬಸ್
ಸೇವೆ, ಆಟೋರಿಕ್ಷಾ ಸೇರಿದಂತೆ ಕೆಎಸ್ ಆರ್ ಟಿಸಿ ಬಸ್ ಸೇವೆ ಬಂದ್ ಆಗಲಿದೆ.
ಟ್ಯಾಕ್ಸಿ ಅಸೋಸಿಯೇಷನ್ ಕೂಡ ಬೆಂಬಲ ಘೋಷಿಸಿದ್ದು, ಈ ನಡುವೆ ಮಂಗಳೂರು ನಗರದಲ್ಲಿ ಕೆಲವೆಡೆ ಬಂದ್ ಗೆ ಬೆಂಬಲ ನೀಡದಿರಲು ತೀರ್ಮಾನಿಸಲಾಗಿದೆ.
ನಗರದ ಹಂಪನಕಟ್ಟೆ, ರಥ ಬೀದಿ, ಬಂದರ್ ನ ಕೆಲಭಾಗ ಸೇರಿದಂತೆ ಇನ್ನಿತರ ಕಡೆ ಬಂದ್ ಗೆ ಬೆಂಬಲವಿಲ್ಲ ಎನ್ನುವ ಬರಹಗಳು ಪೋಸ್ಟರ್ ನಲ್ಲಿ ರಾರಾಜಿಸ ತೊಡಗಿವೆ. ನಾಳೆಯ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ. ಸೆಪ್ಟೆಂಬರ್ 10 ರಂದು ನಮ್ಮ ಅಂಗಡಿ ಎಂದಿಗಿಂತಲೂ ಒಂದು ಗಂಟೆ ಹೆಚ್ಚು ತೆರೆದಿರುತ್ತದೆ ಎಂದು ಬರೆದ ಪೋಸ್ಟರ್ ಗಳನ್ನು ಅಂಗಡಿಗಳ ಮುಂದೆ ಅಂಟಿಸಲಾಗಿದೆ.
ಭಾರತ ಬಂದ್ ಸಂದರ್ಭದಲ್ಲಿ ನಾವು ಅಂಗಡಿ ಮುಂಗಟ್ಟು ತೆರೆದಿಟ್ಟು ವ್ಯಾಪಾರ ನಡೆಸಲು ನಿರ್ಧರಿಸಿದ್ದೇವೆ ಎಂದು ಓಲ್ಡ್ ಬಂದರ್ ಹೋಲ್ ಸೇಲ್ ಕಿರಾಣಿ ಅಂಡ್ ಅಲೈಟ್ ಮಾರ್ಚೆಂಟ್ಸ್ ಅಸೋಸಿಯೇಷನ್ ಘೋಷಿಸಿದೆ.
ನಾಳೆಯ ಭಾರತ್ ಬಂದ್ ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಆರೋಪಿಸಿದ್ದು, ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್, ಜನತಾದಳ ಮೈತ್ರಿ ಸರ್ಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂಪಾಯಿ ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಈ ಕುರಿತು ಕಣ್ಣು ಮುಚ್ಚಿ ಕುಳಿತ ಕಾಂಗ್ರೆಸ್ ಮುಖಂಡರು ನಾಳೆ ಬಂದ್ ಕರೆ ನೀಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ.
bharat bandh support dakshina kannada district news ksrtc bus service auto ಭಾರತ್ ಬಂದ್ ದಕ್ಷಿಣ ಕನ್ನಡ ವಿರೋಧ ಜಿಲ್ಲಾಸುದ್ದಿ ಕಾಂಗ್ರೆಸ್ ಬಿಜೆಪಿ
Bharat Bandh has received huge support from Dakshina Kannada district. Including Mangalore in Dakshina kannada district private and KSRTC bus service, auto rickshaw service will be closed on Monday (September 10).
ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಡೆಡ್‌ಲೈನ್‌..! – EESANJE / ಈ ಸಂಜೆ
February 27, 2020 Sunil Kumar illegal BPL card holders, minister K Gopalaiah
ಬೆಂಗಳೂರು, ಫೆ.27-ಅರ್ಹರಲ್ಲದವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹಿಂತಿರುಗಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಪಡಿತರ ಚೀಟಿ ವಾಪಸ್ ಮಾಡದ ಅನರ್ಹರಿಗೆ ದಂಡ ವಿಧಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉನ್ನತಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳೊಳಗೆ ಅನರ್ಹರು ಪಡಿತರ ಚೀಟಿ ವಾಪಸ್ ಮಾಡದಿದ್ದರೆ ಪಡಿತರ ಪಡೆದ ದಿನಾಂಕದಿಂದ ಇಂದಿನವರೆಗೆ ಪಡೆದ ಪಡಿತರದ ಪ್ರಮಾಣದ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಎರಡು ತಿಂಗಳ ನಂತರ ಅನರ್ಹರು ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಸಿವಿನಿಂದ ಯಾರೂ ಇರಬಾರದು ಎಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಪಡಿತರವನ್ನು ನೀಡಲಾಗುತ್ತಿದೆ. ಅಗತ್ಯವಿಲ್ಲದವರು ಪಡಿತರವನ್ನು ಪಡೆಯಬಾರದು. ಏಕೆಂದರೆ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು. ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಮಾಡುವ ಚಿಂತನೆ ಇದೆ ಎಂದರು.
ಮಾ.5ರಂದು ಮಂಡನೆಯಾಗುವ ರಾಜ್ಯ ಬಜೆಟ್ ನಂತರ ಅನ್ನಭಾಗ್ಯ ಯೋಜನೆಯಲ್ಲಾಗುವ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಕಾನೂನು ಮಾಪನ ಇಲಾಖೆಯಲ್ಲಿ ಇರುವ ಇ-ಮಾಪನ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಇ ಮಾಪನ್ ಟ್ಯಾಪ್-2ನ್ನು ಮಾಡಲಾಗುವುದು. ಸತ್ಯಾಪನಾ ಪ್ರಮಾಣ ಪತ್ರ, ಶುಲ್ಕ, ದಂಡಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಹಣ ಸಂದಾಯ ರಸೀದಿ, ಮೊಕದ್ದಮೆ ಹೂಡಿಕೆ, ಜಪ್ತಿ ರಸೀದಿ, ತೂಕ ಮತ್ತು ಅಳತೆಗಳ ಲೈಸೆನ್ಸ್ ನೀಡುವಿಕೆ, ಪೆÇಟ್ಟಣ, ಸಾಮಾಗ್ರಿ ಅಡಿಯಲ್ಲಿ ನೀಡಲಾಗುವ ನೋಂದಣಿ ಪ್ರಮಾಣಪತ್ರ ಮೊದಲಾದವನ್ನು ಆನ್‍ಲೈನ್ ಮೂಲಕ ನೀಡಲಾಗುತ್ತಿದೆ.
ಲೋಕಸಭೆ ಚುನಾವಣೆಗೆ ಎಲ್ ಕೆ ಅಡ್ವಾಣಿ ಸ್ಪರ್ಧಿಸುತ್ತಾರಾ? | No decision yet on Advani contesting Lok Sabh Elections - Kannada Oneindia
ನವದೆಹಲಿ, ಮಾರ್ಚ್ 20: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸ್ಪಷ್ಟವಾಗಿಲ್ಲ.
ಚುನಾವಣೆಗಳಲ್ಲಿ ಸ್ಪರ್ಧಿಸಲು 75 ವರ್ಷ ವಯಸ್ಸಿನ ಮಿತಿ ಹೇರಿಲ್ಲ. ಈ ವಯೋಮಿತಿ ಸಚಿವ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ ಎಂದು ಬಿಜೆಪಿ ಪ್ರಕಟಿಸಿದ ಬಳಿಕ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರು ಸ್ಪರ್ಧಿಸುತ್ತಾರೆ ಎಂಬಾ ಆಶಯ ವ್ಯಕ್ತವಾಗಿತ್ತು.
ಅಡ್ವಾಣಿ (91) ಮತ್ತು ಜೋಶಿ (84) ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿರ್ಧಾರವನ್ನು ಅವರಿಗೇ ಬಿಡಲು ಪಕ್ಷ ನಿರ್ಧರಿಸಿದ್ದಾರೆ. ಪಕ್ಷ ಬಯಸಿದ್ದನ್ನು ತಾವು ಮಾಡಲು ಸಿದ್ಧರಿರುವುದಾಗಿ ಜೋಶಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ
2014ರ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಜಯಗಳಿಸಿದ್ದರು. ವಾರಣಾಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದ ಮುರಳಿ ಮನೋಹರ ಜೋಶಿ ಕಾನ್ಪುರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗಾಗಲೇ ಆರೋಗ್ಯದ ಕಾರಣವೊಡ್ಡಿ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಅಡ್ವಾಣಿ ಅವರ ಸ್ಪರ್ಧೆಯ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ದೀಪಕ್ ಛೋಪ್ರಾ ಅವರು ಪ್ರತಿಕ್ರಿಯಿಸಿ, ' ಅಡ್ವಾಣಿ ಅವರ ಸ್ಪರ್ಧೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ, ಈ ಬಗ್ಗೆ ಶೀಘ್ರವೇ ನಿರ್ಣಯ ಕೈಗೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ. ಗಾಂಧಿನಗರದಿಂದ ಸ್ಪರ್ಧಿಸಲಿ ಎಂದು ಅಡ್ವಾಣಿ ಅವರಿಗೆ ಬಿಜೆಪಿಯಿಂದ ಯಾರೂ ಆಫರ್ ಮಾಡಿಲ್ಲ. ಅಡ್ವಾಣಿ ಅವರ ನಿರ್ಧಾರದ ಮೇಲೆ ಈ ಬಗ್ಗೆ ಬಿಜೆಪಿಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ ಎಂದರು.
ನಾಡಿನೆಲ್ಲೆರೆ ರಂಜಾನ್ ಸಡಗರ; ಶುಭಾಶಯಗಳ ವಿನಿಮಯ | NavaKarnataka
ನಾಡಿನೆಲ್ಲೆರೆ ರಂಜಾನ್ ಸಡಗರ; ಶುಭಾಶಯಗಳ ವಿನಿಮಯ
May 24, 2020 NavaKarnataka
ಬೆಂಗಳೂರು: ನಾಡಿನಾದ್ಯಂತ ಇದೀಗ ಮುಸ್ಲಿಮರ ಪವಿತ್ರ ರಂಜಾನ್ ಸಡಗರ. ಲಾಕ್'ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಸರಳ ಆಚರಣೆಯಷ್ಟೇ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಕೇರಳ ಮಲಬಾರ್ ತೀರದಲ್ಲಿ ಇಂದೇ ಈದ್ ಉಲ್ ಫಿತ್ರ್ ಆಚರಿಸಲಾಗುತ್ತಿದ್ದು, ಇನ್ನುಳಿದೆಡೆ ಸೋಮವಾರ ಈ ಹಬ್ಬವನ್ನು ಆಸಿಗರಿಸಲಾಗುತ್ತಿದೆ.
ಇದೇ ವೇಳೆ, ನಾಡಿನ ಮುಸ್ಲಿಂ ಬಾಂಧವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಶುಭಾಶಯ ಕೋರಿದ್ದಾರೆ.
'ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸುವ ಪವಿತ್ರ ರಂಜಾನ್ ಹಬ್ಬ ಶುಭ ತರಲಿ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ರಂಜಾನ್ ಎಂದರೆ ಕೇವಲ ಉಪವಾಸ ಮಾತ್ರವಲ್ಲ. ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವುದಾಗಿದೆ. ಸದ್ಯ ಜಗತ್ತಿನಲ್ಲಿ ಮಾನವಕುಲಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಮೆಟ್ಟಿನಿಲ್ಲಬೇಕಿದೆ. ಭಾರತ ಸರ್ವ ಧರ್ಮಗಳ ಭೂಮಿಯಾಗಿದ್ದು, ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕಲು ಈ ಹಬ್ಬ ವೇದಿಕೆಯಾಗಲಿ' ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಪ್ರದೇಶ ಕಾಂಗ್ರೆಸ್ ಪಕ್ಷ ಕೂಡ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಹಾರೈಸಿದೆ.
ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಪವಿತ್ರ ಕುರ್ಆನ್ ಅವತೀರ್ಣಗೊಂಡ ಗೌರವಾರ್ಥ,
ಮನುಷ್ಯನನ್ನು ಸ್ವೇಚ್ಛೆ, ಸ್ವಾರ್ಥ, ಅತ್ಯಾಗ್ರಹಗಳಂತಹ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಉದ್ದೇಶದ,
ಒಂದು ತಿಂಗಳ ಕಠಿಣ ವ್ರತಾಚರಣೆಯ ಬಳಿಕ ಬರುವ ರಂಜಾನ್ ಹಬ್ಬದ ಹಾರ್ದಿಕ ಶುಭಾಷಯಗಳು.#Ramadan #EidMubarak pic.twitter.com/4JK8IrnViG
ಪ್ರಸ್ತುತ IPL – Prasthutha
ಐಪಿಎಲ್'ನಲ್ಲಿ ಹೊಸ ತಂಡ ಖರೀದಿಸಲು ಮುಂದಾದ ಬಾಲಿವುಡ್ ತಾರಾ ದಂಪತಿ!
►ಎರಡು ತಂಡಗಳಿಗೆ 15 ಕಂಪನಿಗಳಿಂದ ಬಿಡ್!? ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್-2022ರಲ್ಲಿ ಹೊಸ ಎರಡು ತಂಡಗಳು ಸೇರ್ಪಡೆಯಾಗಲಿದ್ದು, ತಂಡಗಳನ್ನು ಖರೀದಿಸಲು ತುದಿಗಾಲಲ್ಲಿ ನಿಂತಿರುವವರ ಪಟ್ಟಿಗೆ ಇದೀಗ ಬಾಲಿವುಡ್'ನ ತಾರಾ ದಂಪತಿ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಕೂಡ ಸೇರಿದ್ದಾರೆ ಎಂದು ಔಟ್'ಲುಕ್ ವರದಿ ಮಾಡಿದೆ. ಐಪಿಎಲ್'ನಲ್ಲಿ ಈಗಾ...
ದುಬೈ ; ಇಂಡಿಯನ್ ಪ್ರೀಮಿಯರ್ ಲೀಗ್​ -ಐಪಿಎಲ್ 14ನೇ ಆವೃತ್ತಿಗೆ ತೆರೆ ಬಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ - ಕೆಕೆಆರ್ ತಂಡವನ್ನು 27 ರನ್​ಗಳಿಂದ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಚೆನ್ನೈ ಚಾಂಪಿಯನ್ ಪಟ್ಟಕ್ಕೇರಿದೆ. ...
ಧೋನಿ @300 : IPL-14ಫೈನಲ್'ನಲ್ಲಿ ಎಂಎಸ್ ಧೋನಿ ವಿಶೇಷ ಮೈಲಿಗಲ್ಲು..!
ದುಬೈ ; ಇಂಡಿಯನ್ ಪ್ರೀಮಿಯರ್ ಲೀಗ್ - ಐಪಿಎಲ್'ನ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ನಾಯಕನಾಗಿ ಮೈದಾನಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅಪರೂಪದ ದಾಖಲೆಯೊಂದನ್ನು ತನ್ನದಾಗಿಸಿಕೊಳ್ಳಲಿದ್ದಾರೆ. ಧೋನಿ ನಾಯಕತ್ವದಲ್ಲಿ ಐಪಿಎಲ್'ನಲ್ಲಿ ಚೆನ್ನೈ ದಾಖಲೆಯ 9ನೇ ಬಾರಿ ಫೈನಲ್ ಪ್ರವೇಶಿಸಿದ್ದು, ಇದರಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟವ...
IPL 2021 | ಇಂದು ಕೆಕೆಆರ್ – ಚೆನ್ನೈ ಫೈನಲ್ ಫೈಟ್
ದುಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದು ಅಂತಿಮ ಹಂತ ತಲುಪಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್ ಫೈಟ್ ನಡೆಸಲಿದೆ. ಉಭಯ ತಂಡಗಳು ಐಪಿಎಲ್ ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 17 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ...
IPL 2021 | ಲೀಗ್ ಪಂದ್ಯಗಳಿಗೆ ತೆರೆ; ಪ್ಲೇ ಆಫ್ ಪಂದ್ಯಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ದುಬೈ; ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 14ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದ್ದು, ಪ್ಲೇ ಆಫ್ ಪ್ರವೇಶಿಸಿರುವ ನಾಲ್ಕು ತಂಡಗಳ ಸ್ಪಷ್ಟ ಚಿತ್ರಣ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ , ಚೆನ್ನೈ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅಂತಿಮ ನಾಲ್ಕರ ಘಟ್ಟ ಪ್ರವೇಶ...
ಐಪಿಎಲ್' ನಲ್ಲಿ 'ಶತಕ' ಬಾರಿಸಲು ಆರ್'ಸಿಬಿ ಸಿದ್ಧತೆ
ಅಬುಧಾಬಿ; ಐಪಿಎಲ್ 14ನೇ ಸೀಸನ್ ನ 52ನೇ ಪಂದ್ಯದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ. ಬುಧವಾರ ಸಂಜೆ ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡವು ಗೆಲುವು ಸಾಧಿಸಿದರೆ ಐಪಿಎಲ್ ನಲ್ಲಿ ದಾಖಲೆಯೊಂದು...
ಚೊಚ್ಚಲ ಪಂದ್ಯದಲ್ಲೇ ಐಪಿಎಲ್' ನಲ್ಲಿ ವೇಗದ ದಾಖಲೆ ಬರೆದ ಉಮ್ರಾನ್ ಮಲಿಕ್
ದುಬೈ: ಯುಎಇನಲ್ಲಿ ನಡೆಯುತ್ತಿರುವ 14ನೇ ಸೀಸನ್ ಐಪಿಎಲ್' ಯುವ ಕ್ರಿಕೆಟಿಗರ ಅತ್ಯುತ್ತಮ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಭಾನುವಾರ ನಡೆದ ಕೆಕೆಆರ್ ಹಾಗೂ ಸನ್ ರೈಸರ್ಸ್ ನಡುವಿನ ಪಂದ್ಯದಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಯುವ ಬೌಲರ್ ವೇಗದ ಬೌಲಿಂಗ್'ನಲ್ಲಿ ದಾಖಲೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಮ್...
IPL 2021 | ಪಂಜಾಬ್ ಕಿಂಗ್ಸ್ ಗೆ ಆಘಾತ : ತಂಡದಿಂದ ಹೊರ ನಡೆದ 'ಯುನಿವರ್ಸ್ ಬಾಸ್'
ದುಬೈ: ಟೂರ್ನಿಯಲ್ಲಿ ಸತತ ಸೋಲನುಭವಿಸಿ ಕಂಗಾಲಾಗಿರುವ ಪಂಜಾಬ್ ಕಿಂಗ್ಸಿಗೆ ಮತ್ತೊಂದು ದೊಡ್ಡ ಆಘಾತವಾಗಿದೆ. ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಟೂರ್ನಿಯಿಂದ ದಿಢೀರನೆ ಹೊರ ನಡೆದಿದ್ದಾರೆ. ಈ ಬಗ್ಗೆ ಸ್ವತ ಪಂಜಾಬ್ ಕಿಂಗ್ಸ್ ಸ್ವತಹ ತನ್ನ ಟ್ವಿಟರ್ ಖಾತೆಯಲ್ಲಿ ದೃಡಪಡಿಸಿದ್ದು ಮುಂಬರುವ ಪಂದ್ಯಗಳಿಗೆ ಕ್ರಿಸ್ ಗೇಲ್ ಅಲಭ್ಯವಾಗಲಿದ್ದ...
ಐಪಿಎಲ್ ನಲ್ಲಿ ಇಂದು ಡಬಲ್ ಧಮಾಕ: ಪ್ಲೇ ಆಫ್ ಪ್ರವೇಶಿಸಲು ಡೂ ಆರ್ ಡೈ ಹೋರಾಟ..!
ದುಬೈ : 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಅಭಿಮಾನಿಗಳಿಗೆ ಡಬಲ್ ಧಮಾಕ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ರಾತ್ರಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ...
IPL 2021; ಕ್ಯಾಪ್ಟನ್ ಕೂಲ್ ವರ್ಸಸ್ ಕಿಂಗ್ ಕೊಹ್ಲಿ..!
ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಶುಕ್ರವಾರ ಶಾರ್ಜಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. 14ನೇ ಆವೃತ್ತಿಯ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವಾಡಿದ್ದು, &nbs...
ನವೋದಯದ ನಾಲ್ಕನೆಯ ಕೇಂದ್ರ - ವಿಕಿಪೀಡಿಯ
ನವೋದಯದ ನಾಲ್ಕನೆಯ ಕೇಂದ್ರ
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ತಮ್ಮ ಸಂಶೋಧನೆ ಬಗ್ಗೆ ತಾನೇ ಬರೆದುಕೊಂಡ ಲೇಖನ
೧ ಹೊಸ ಸಂಶೋಧನೆ :ನವೋದಯ ಕಾವ್ಯ
೨ ನವೋದಯದ ನಾಲ್ಕನೆಯ ಕೇಂದ್ರ
೩ ಹಲಸಂಗಿ ಜಾನಪದದ 'ಮಕ್ಕಾ'
ಹೊಸ ಸಂಶೋಧನೆ :ನವೋದಯ ಕಾವ್ಯ[ಬದಲಾಯಿಸಿ]
''ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕುರಿತು ಡಾ.ಪ್ರಕಾಶ ಗ.ಖಾಡೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರೋ ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ 2005 ರಲ್ಲಿ ಕೈಕೊಂಡ ಪಿಎಚ್.ಡಿ. ಪದವಿ ಅಧ್ಯಯನದ ಮೂಲಕ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಿದ್ದಾರೆ.2007ರಲ್ಲಿ ಇವರ ಸಂಶೋಧನಾ ಮಹಾಪ್ರಬಂಧ 'ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಪ್ರಕಟವಾಗಿದೆ. ಇದುವರೆಗಿನ ನವೋದಯ ಕಾವ್ಯದ ಬಗೆಗಿನ ಅಧ್ಯಯನ ವಿಮರ್ಶೆ ಚರ್ಚೆಗಳೆಲ್ಲ ಮೈಸೂರು ಕರ್ನಾಟಕದ ಪರಂಪರೆಯ ಸುತ್ತ ನಡೆದು 'ನವೋದಯ ಕಾವ್ಯ'ವೆಂದರೆ ಅದಷ್ಟೇ ಎಂಬ ಭಾವನೆ ಮೂಡಿರುವ ಹೊತ್ತಿನಲ್ಲಿ ಧಾರವಾಡ ಹಲಸಂಗಿ ನೆಲೆಗಳಿಂದ ಜಾನಪದದಿಂದ ಪ್ರಭಾವಿತ ನವೋದಯ ಕಾವ್ಯ ಕನ್ನಡವನ್ನು ಹೇಗೆ ಪ್ರವೇಶ ಮಾಡಿತು ಎಂಬುದನ್ನು ಈ ಅಧ್ಯಯನದಿಂದ ಡಾ.ಖಾಡೆಅವರು ಸ್ಪಷ್ಟಪಡಿಸಿದ್ದಾರೆ. ಇಂಗ್ಲಿಷ್ ಕಲಿತವರಿಂದಲೇ ಹಾಗೂ ಸಂಸ್ಕೃತ ಮಾರ್ಗ ಅರಿತವರಿಂದಲೇ 'ನವೋದಯ' ಚಳವಳಿ ಪ್ರಭಾವಶಾಲಿಯಾಯಿತು ಎನ್ನುವುದೆಷ್ಟು ನಿಜವೋ ಇಂಗ್ಲಿಷ್ ಕಲಿಯದ ಅದರ ಸೋಂಕಿಲ್ಲದ ಸ್ವಂತಿಕೆ, ಆಂತರಿಕ ಒತ್ತಡಗಳಿಂದ ಬರೆದ ಆನಂದಕಂದ, ಮಧುರಚೆನ್ನ (ಇವರಿಗೆ ಇಂಗ್ಲಿಷ್ ಬರುತ್ತಿತ್ತು ಆದರೆ ಪ್ರಭಾವದಿಂದ ದೂರವಿದ್ದರು) ಬೇಂದ್ರೆ, ಶ್ರೀಧರ, ಖಾನೋಳಕರ, ಶಾಂತಕವಿ ಮತ್ತಿತರರು 1900 ರಿಂದ 1925-30ರ ಅವದಿsಯಲ್ಲಿ ಬರೆದ ಕಾವ್ಯ ಕನ್ನಡ ಜಾನಪದವನ್ನು ಧ್ವನಿಸಿದ ಶಿಷ್ಟ ಕಾವ್ಯ ಮುಂದೆ ಕಂಬಾರ, ಕಣವಿ, ಇಮ್ರಾಪುರ, ವಾಲೀಕಾರ ಅವರು ಇದನ್ನು ಮುಂದುವರೆಸಿದ್ದು ಕೂಡ ಚಾರಿತ್ರಿಕ ಸಂಗತಿ. ಹೀಗಾಗಿ ಈವರೆಗಿನ ನವೋದಯ ಕಾವ್ಯ ಬಗೆಗಿನ ವಿಮರ್ಶೆ, ಅವಲೋಕನ, ಅಧ್ಯಯನಗಳಿಂದ ತೀವ್ರತರವಾಗಿ ಉಪೇಕ್ಷೆಗೆ ಒಳಗಾಗಿರುವ ಸಾಂಸ್ಕøತಿಕ ಸತ್ಯವನ್ನು ಶೋದಿsಸಿ ಮರು ವಿಮರ್ಶೆಗೆ ಓಳಪಡಿಸಿದ ಈ ಅಧ್ಯಯನವುಅತ್ಯಂತ ಮಹತ್ವದ್ದಾಗಿದೆ .
ನವೋದಯದ ನಾಲ್ಕನೆಯ ಕೇಂದ್ರ[ಬದಲಾಯಿಸಿ]
ಕನ್ನಡ ನವೋದಯ ಸಾಹಿತ್ಯ ಚರಿತ್ರೆಕಾರರು ಮುಖ್ಯವಾಗಿ ಮೈಸೂರು, ಮಂಗಳೂರು, ಧಾರವಾಡ ಮೂರು ನವೋದಯ ಕೇಂದ್ರಗಳನ್ನು ಗುರುತಿಸಿದ್ದಾರೆ. ಆದರೆ ಡಾ.ಪ್ರಕಾಶ ಖಾಡೆ ಅವರು ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸಿಕೊಂಡು ನವೋದಯ ಕಾವ್ಯಕ್ಕೆ ಜಾನಪದದ ಶಕ್ತಿ ತುಂಬಿ ಹೊಸದೊಂದು ಕಾವ್ಯ ಮಾರ್ಗವನ್ನು ತೆರೆದು ತೋರಿದ ಮಧುರಚೆನ್ನರ 'ಹಲಸಂಗಿ'ಯನ್ನು ನಾಲ್ಕನೆಯ ಕೇಂದ್ರವಾಗಿ ಸೃಜಿಸಿ ಇದು ಕನ್ನಡ ನವೋದಯದ ದೇಸಿಯತೆಗೆ ಸಾಕ್ಷಿಯಾದ ಸಾಂಸ್ಕøತಿಕ ಸಂದರ್ಭವನ್ನು ಈ ಅಧ್ಯಯನದಿಂದ ರೂಪಿಸಿಕೊಟ್ಟಿದ್ದಾರೆ.
ಕನ್ನಡ ನವೋದಯ ಪೂರ್ವ ಮೈಸೂರು ಕರ್ನಾಟಕದಲ್ಲಿದ್ದ ಸ್ಥಿತಿಗೂ ಉತ್ತರ ಕರ್ನಾಟಕದಲ್ಲಿದ್ದ ಪರಿಸ್ಥಿತಿಗೂ ಗಮನಾರ್ಹ ವೆತ್ಯಾಸಗಳಿದ್ದವು. ಶಾಸ್ತ್ರ ಪರಂಪರೆ ಮತ್ತು ಪ್ರಭುತ್ವ ಪರಂಪರೆ ಮೇಲಾಗಿದ್ದ ಮೈಸೂರು ಕರ್ನಾಟಕಭಾಗದಲ್ಲಿ ಬಿ.ಎಂ.ಶ್ರೀ ಅವರ 'ಅವಳ ತೊಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು ನೋಡ ಬಯಸಿ, ಹಾಡ ಬಯಸಿ' ಕನ್ನಡ ನುಡಿಗೆ ತಂದ ಇಂಗ್ಲಿಷ್ ರಚನೆಗಳು ಆ ಕಾಲಕ್ಕೆ ಪಡೆದ ಜನಪ್ರಿಯತೆ ಎಲ್ಲರ ಪ್ರಶಂಸೆಗೆ ಪಾತ್ರವಾದವು. ಮೈಸೂರು ಭಾಗದಲ್ಲಿ ನಡೆಯುತ್ತಿದ್ದ ಈ ಕೆಲಸಕ್ಕೆ ಹಿನ್ನೆಲೆಯಾಗಿ ಕನ್ನಡತನದ ಗಟ್ಟಿಯಾದ ಭಾಷಾ ನೆಲೆ ಇತ್ತು. ಬೆನ್ನು ತಟ್ಟಿ ಪೆÇ್ರೀತ್ಸಾಹಿಸಲು ಕನ್ನಡ ರಾಜ ಮನೆತನದ ಮೈಸೂರು ಅರಸರಿದ್ದರು. ಬರಹದ ಶ್ರೇಷ್ಠತೆಯನ್ನು ಗುರುತಿಸಲು ಪಂಡಿತ ಮಂಡಳಿ ಇತ್ತು. ಹೀಗಾಗಿ ಮೈಸೂರು ಭಾಗದಲ್ಲಿ ಬಂದ ಸಾಹಿತ್ಯ ಈ ನಾಡಿನ ಕೀರ್ತಿಗೆ ಭಾಜನವಾಗಲು ಕಾಯಬೇಕಿರಲಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಇತ್ತು. ಈ ನೆಲವನ್ನಾಳುವ ಪ್ರಭುಗಳ ಭಾಷೆ ಬೇರೆ ಬೇರೆಯಾಗಿದ್ದವು, ಮೊಗಲರ ಕಾಲಕ್ಕೆ ಉರ್ದು ಫಾರಸಿ ಭಾಷೆಗಳು, ಪೇಶವೆಯರ ಕಾಲಕ್ಕೆ ಮರಾಠಿ ರಾಜ ಭಾಷೆಗಳಾಗಿದ್ದವು. ಅದರಂತೆ ಬ್ರಿಟಿಷರ ಕಾಲಕ್ಕೆ ಇಂಗ್ಲಿಷ್ ರಾಜ ಭಾಷೆಯಾಯಿತು. ಹೀಗೆ ನೆಲಕಚ್ಚಿದ ಕನ್ನಡವನ್ನು ತನ್ನೆಲ್ಲಾ ಶಕ್ತಿಯೊಂದಿಗೆ ಎದ್ದುನಿಲ್ಲಿಸಬೇಕಾದ ಜರೂರು ಇತ್ತು. ಈ ಕೆಲಸದಲ್ಲಿ ನಿಂತ ಕನ್ನಡ ಕೈಂಕರ್ಯದ ಬಂಟರು ಕೆಲವು ಕನ್ನಡ ಪ್ರೇಮಿ ಆಂಗ್ಲ ವಿದ್ವಾಂಸರೊಂದಿಗೆ ಕನ್ನಡ ಶಾಲೆಗಳನ್ನು ತೆರೆದರು. ಕನ್ನಡ ಪಠ್ಯಪುಸ್ತಕ ರಚಿಸಿದರು. ಮರಾಠಿ ಝಳಕ್ಕೆ ಬಾಡಿ ಹೋಗುತ್ತಿದ್ದ ಕನ್ನಡವನ್ನು ನಳನಳಿಸುವಂತೆ ಮಾಡಿದರು. ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ,ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕಕ್ಕೆ ದೇಸೀ ಕಾವ್ಯದ ಉತ್ಕøಷ್ಟ ಸ್ಥಾನ ನೀಡಿದರು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರ ಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಈ ಸಾಧನೆಯ ಪ್ರತೀಕವಾಗಿ ಹೊರಬಂದ 'ಗರತಿಯ ಹಾಡು'(1931), ಜೀವನ ಸಂಗೀತ(1933), ಮಲ್ಲಿಗೆ ದಂಡೆ(1935), ಜನಪದ ಗೀತ ಸಂಕಲನಗಳು ಕನ್ನಡ ಕಾವ್ಯಲೋಕದಲ್ಲಿ ಸಂಚಲನ ಉಂಟುಮಾಡಿದವು. ಹಲಸಂಗಿ ಗೆಳೆಯರ 'ಜೀವನ ಸಂಗೀತ' ಲಾವಣಿ ಸಂಕಲನವು ಹಲವು ನೆಲೆಯಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಇಲ್ಲಿನ ಖಾಜಾಭಾಯಿಯ ಲಾವಣಿಗಳು ಮಧುರಚೆನ್ನರ ಕಾವ್ಯಕ್ಕೆ ಸ್ಪೂರ್ತಿ ನೀಡಿದವು. 'ಜೀವನ ಸಂಗೀತ'ವು ಕನ್ನಡ ಲಾವಣಿ ಸಾಹಿತ್ಯದ ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧ ಉಂಟು. ರಗಳೆಯ ಲಯ, ಅಂಶ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತೆಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು ಡಾ.ಪ್ರಕಾಶ ಖಾಡೆ ಸ್ಪಷ್ಟಪಡಿಸಿದ್ದಾರೆ.
ಹಲಸಂಗಿ ಜಾನಪದದ 'ಮಕ್ಕಾ'[ಬದಲಾಯಿಸಿ]
ನವೋದಯ: ಹಲಸಂಗಿ ಕೇಂದ್ರ'ವನ್ನು ಈ ಅಧ್ಯಯನದಲ್ಲಿ ಹೊಸದಾಗಿ ಸೃಷ್ಟಿಸಿಕೊಂಡು ಈ ಕೇಂದ್ರವು ನವೋದಯ ಕಾವ್ಯಕ್ಕೆ ಜಾನಪದ ಸತ್ವ, ಸೌಂದರ್ಯ ತುಂಬಿ ಅಪ್ಪಟ ದೇಸೀ ಕವಿತೆಗಳನ್ನು ನೀಡಿದ ಆಧುನಿಕ ಕನ್ನಡ ಕಾವ್ಯದ ಶ್ರೇಷ್ಠತೆಯನ್ನು ಗುರುತಿಸಲಾಗಿದೆ. ಹಲಸಂಗಿ ಗೆಳೆಯರು ಹೊಸಗನ್ನಡ ಕಾವ್ಯದ ಪೂವಾರ್ಧದಲ್ಲಿಯೇ ಜನಪದ ಕಾವ್ಯದ ಅನಘ್ರ್ಯ ರತ್ನತ್ರಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಲ್ಲದೆ ಆ ಮೂಲಕ ನೆಲದ ಬದುಕು, ಭಾಷೆ, ಭಾವ, ನಾದ ಆಡುನುಡಿಯ ಮೋಡಿಗಳಿಗಾಗಿ ಪರಿತಪಿಸುತ್ತಿದ್ದ ಕನ್ನಡ ಶಿಷ್ಟ ಕಾವ್ಯದ ಹೊಸತನಕ್ಕೆ ಹೊಸ ರಕ್ತ ಮಾಂಸಕೊಟ್ಟ ಶ್ರೇಯಸ್ಸಿಗೂ ಕಾರಣರಾದರು. ಹಲಸಂಗಿ ಎಂದರೆ ಕರ್ನಾಟಕದಲ್ಲಿ ಜಾನಪದದ 'ಮಕ್ಕಾ' ಎಂಬಷ್ಟು ಪ್ರಸಿದ್ದಿಯಾಯಿತು. (ಸೋಮಶೇಖರ ಇಮ್ರಾಪುರ, ಜಾನಪದ ಆಲೋಕನ, 2002) ಹಲಸಂಗಿ ಹಲವು ಸಂಸ್ಕøತಿಗಳ ಸಂಗಮ ಸ್ಥಾನ. ಸೂಪಿsೀ, ಮರಾಠಿ ಭಕ್ತಿ ಕಾವ್ಯ ವಚನ ಸಾಹಿತ್ಯ ಹಾಗೂ ಹಲಸಂಗಿ ಜಾನಪದ ಹೀಗೆ ಕನ್ನಡಕ್ಕೆ ಇದು ಈ ಎಲ್ಲದರ ಶ್ರೇಷ್ಠತೆಯನ್ನು ಜಾನಪದ ಮೂಲವಾಗಿ ತಂದಿದೆ. ಸಿದ್ದಯ್ಯ ಪುರಾಣಿಕರು 'ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವವರು ಹಲಸಂಗಿಯ ಹೆಸರನ್ನು ಮರೆಯುವಂತಿಲ್ಲ. ಕನ್ನಡ ನುಡಿಯ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಅದೊಂದು ಎಂದಿದ್ದಾರೆ.'
ಜಿ.ಎಸ್.ಶಿವರುದ್ರಪ್ಪನವರು 'ನವೋದಯದ ಮೂರು ಕೇಂದ್ರಗಳ ಜೊತೆಗೆ ಮಧುರಚೆನ್ನರ ಗೆಳೆಯರ ಬಳಗದ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ.ಧೂಲಾ ಇವರನ್ನು ಒಳಗೊಂಡ ಹಲಸಂಗಿಯನ್ನು ನವೋದಯದ ನಾಲ್ಕನೆಯ ಕೇಂದ್ರವೆಂದು ಪರಿಗಣಿಸುವುದು ಅಗತ್ಯವಾಗಿದೆ' (ಜಿ.ಎಸ್.ಶಿವರುದ್ರಪ್ಪ, 2003) ಎಂದಿದ್ದಾರೆ. ಈ ನಾಲ್ಕನೆಯ ಕೇಂದ್ರ ಕನ್ನಡ ನವೋದಯಕ್ಕೆ ಅನುಭಾವ ಕಾವ್ಯಧಾರೆಯೊಂದನ್ನು ಸೇರಿಸಿದ್ದಲ್ಲದೆ ಜಾನಪದ ಜೀವಸತ್ವವನ್ನು ತುಂಬುವ ಜನಪದ ಸಾಹಿತ್ಯ ಸಂಗ್ರಹ ಹಾಗೂ ಆ ಕುರಿತ ಅಧ್ಯಯನವನ್ನು ಕನ್ನಡದ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಮಾಡಿತು. ಹೀಗಾಗಿ ನವೋದಯ ಕುರಿತು ಈ ಹೊತ್ತು ವಿಚಾರ ಮಾಡುವ ಈ ಸಂದರ್ಭದಲ್ಲಿ ಅದರ ಬಹುಮುಖತ್ವವನ್ನು ಇಲ್ಲಿ ಮೊದಲ ಬಾರಿಗೆ ವಿಸ್ತೃತವಾಗಿ ಡಾ.ಖಾಡೆ ಕಟ್ಟಿಕೊಟ್ಟಿದ್ದಾರೆ.
ಹಲಸಂಗಿ ಗೆಳೆಯರ ಗುಂಪು ಧಾರವಾಡ ಗೆಳೆಯರ ಗುಂಪಿನಿಂದ ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳುವ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ. ಹಲಸಂಗಿ ಗೆಳೆಯರು ಕೈಕೊಂಡ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯದ ಮಹತ್ವ ಸಾರಲಾಗಿದೆ. ಹಲಸಂಗಿಯ ಜಾನಪದ ಪರಿಸರ, ಖಾಜಾಬಾಯಿಯ ಲಾವಣಿಗಳ ಮೋಡಿ, ಹಲಸಂಗಿ ಕಡೆಗೆ ಆಕರ್ಷಿತರಾದ ಗಣ್ಯ ಕವಿಗಳ ಸದಾಶಯಗಳನ್ನು ದಾಖಲಿಸಲಾಗಿದೆ. ಹಲಸಂಗಿ ಗೆಳೆಯರು ಸಂಪಾದಿಸಿದ 'ಗರತಿಯ ಹಾಡು' ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಇದಕ್ಕೆ ಪ್ರಸ್ತಾವನೆ ಬರೆದ ಬಿ.ಎಂ.ಶ್ರೀ ಅವರು 'ಮೊದಲು ಹುಟ್ಟಿದುದು ಜನವಾಣಿ. ಅದು ಬೆಳೆದು ಪರಿಷ್ಕøತವಾಗಿ ವೃದ್ಧಿಯಾದುದು ಕವಿವಾಣಿ. ''ಜನವಾಣಿ ಬೇರು, ಕವಿವಾಣಿ ಹೂವು' ಎಂದು ಸಾರಿದರು. 'ಗರತಿಯ ಹಾಡು' ಸಂಕಲನದ ಪರಿಚಯದಲ್ಲಿ ಬೇಂದ್ರೆಯವರು 'ಗರತಿಯರ ಹಾಡುಗಳೇ ನಿಜವಾದ ಕಾವ್ಯ, ಉಳಿದದು ಕಾವ್ಯ ಛಾಯೆ' ಎಂದಿದ್ದಾರೆ. ಡಾ.ಗುರುಲಿಂಗ ಕಾಪಸೆ ಅವರು ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವಿತೀಯವಾದ ಸಂಗ್ರಹವೂ ಅಹುದು ಎಂದಿದ್ದಾರೆ. ಜೊತೆಗೆ ಕಾಪಸೆ ರೇವಪ್ಪನವರು ಸಂಪಾದಿಸಿದ 'ಮಲ್ಲಿಗೆ ದಂಡೆ' ಜನಪದ ಹಬ್ಬ, ಆಚರಣೆಗಳ ಸಾಂದಬಿರ್sಕ ಹಾಡುಗಳ ಕೃತಿ ನವೋದಯ ಕಾವ್ಯಕ್ಕೆ ನೀಡಿದ ಪ್ರೇರಣೆ, ಪ್ರಭಾವಗಳನ್ನು ಅವುಗಳ ವಿಶಿಷ್ಟ ಜಾನಪದೀಯ ನೆಲೆಯಲ್ಲಿ ತುಂಬಾ ಮೌಲಿಕವಾಗಿ ಇಲ್ಲಿ ಡಾ.ಖಾಡೆ ವಿಶ್ಲೇಷಿಸಿದ್ದಾರೆ.
ಒಟ್ಟಾರೆ,ಬಿ.ಎಂ.ಶ್ರೀ ಅವರನ್ನು ಈ ಹೊತ್ತಿಗೂ ನವೋದಯ ಕಾವ್ಯದ ಅಧ್ವರ್ಯು ಎಂಬ ಗೃಹಿತದಿಂದಲೇ ವಿಶ್ಲೇಷಣೆ ಮಾಡುತ್ತಿರುವುದನ್ನು ಬದಿಗಿಟ್ಟು ಹತ್ತೊಂಬತ್ತನೆಯ ಶತಮಾನದಿಂದಲೇ ಈ ದಿಕ್ಕಿನಲ್ಲಿ ತೊಡಗಿಕೊಂಡ ಹಲವಾರು ಕವಿಗಳನ್ನು ಮೊದಲ ಬಾರಿಗೆ ಇಲ್ಲಿ ಒಂದೆಡೆ ತಂದು ಅವರ ಕಾವ್ಯಸಿದ್ದಿಯನ್ನು ಪ್ರಕಟಪಡಿಸಿ 'ಅಕೆಡೆಮಿಕ್' ಆದ ಮನೋಧರ್ಮದಿಂದ ರೂಪುಗೊಂಡ ಕಾವ್ಯದಿಂದಲೇ 'ಆಧುನಿಕ ಕನ್ನಡ ಕಾವ್ಯದ ಹೆಬ್ಬಾಗಿಲು' ತೆರೆಯಿತೆಂಬ ವಾದವನ್ನು ಅಲ್ಲಗಳೆದು ನವೋದಯ ಆರಂಭದ ಕನ್ನಡ ಕಾವ್ಯದ ಕೃಷಿಕಾರರು ಜಾನಪದ ಸತ್ವವನ್ನು ಮೈಗೂಡಿಸಿಕೊಂಡ ಲಾವಣಿಕಾರರು, ತತ್ತ್ವಪದಕಾರರು ಹಾಗೂ ಈ ಬಗೆಯ ರಚನಾಕಾರರು ಎಂಬುದನ್ನು ತಮ್ಮ ಅಧ್ಯಯನದ ಮೂಲಕ ಡಾ.ಪ್ರಕಾಶ ಖಾಡೆ ಸಾದಿsಸಿ ತೋರಿಸುವದರೊಂದಿಗೆ ಜಾನಪದ,ಅನುಭಾವ,ವಚನ ಹಾಗೂ ಸೂಫೀ ಸಾಹಿತ್ಯದ ಸಮನ್ವತೆಯ ಸಂಗಮವಾದ ಹಲಸಂಗಿ ಮೂಲಕ ಕನ್ನಡ ಸಾಹಿತ್ಯದ ಹೊಸ ಚರಿತ್ರೆಯನ್ನು ದಾಖಲಿಸಲು ರಾಜಮಾರ್ಗ ಹಾಕಿಕೊಟ್ಟಿದ್ದಾರೆ.ಸರಕಾರವು ಈಗ ಹಲಸಂಗಿ ಕೇಂದ್ರ ಒಳಗೊಂಡು ಮಧುರಚೆನ್ನ,ಸಿಂಪಿ ಲಿಂಗಣ್ಣವರ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಸ್ಥಾಪಿಸಿ ಆದೇಶ ಹೊರಡಿಸಿರುವುದು ಈ ಭಾಗದ ಅಧ್ಯಯನಕ್ಕೆ ಮತ್ತಷ್ಟು ವ್ಯಾಪಕತೆ ಪ್ರಾಪ್ತವಾದಂತಾಗಿದೆ. ವಿಕ್ರಮ ಬಸನಗೌಡರ.-[೧]
↑ ವಿಕ್ರಮ ಬಸನಗೌಡರ--ಹೊಸ ಸಂಶೋಧನೆ :ನವೋದಯ ಕಾವ್ಯ;. ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕುರಿತು ಡಾ.ಪ್ರಕಾಶ ಗ.ಖಾಡೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರೋ ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ 2005 ರಲ್ಲಿ ಕೈಕೊಂಡ ಪಿಎಚ್.ಡಿ.
ಈ ದಸರಾ ಮೈಸೂರು ಸಂಸ್ಥಾನಕ್ಕೆ ತುಂಬಾ ವಿಶೇಷವಾದದ್ದು, 5 ದಶಕಗಳ ನಂತರ ಮಹಾರಾಣಿ ಗರ್ಭಿಣಿಯಾಗಿದ್ದರೆ... - TheNewsism \n
Home ಕರ್ನಾಟಕ ಈ ದಸರಾ ಮೈಸೂರು ಸಂಸ್ಥಾನಕ್ಕೆ ತುಂಬಾ ವಿಶೇಷವಾದದ್ದು, 5 ದಶಕಗಳ ನಂತರ ಮಹಾರಾಣಿ ಗರ್ಭಿಣಿಯಾಗಿದ್ದರೆ…
ದಸಾರ ಹಬ್ಬದ ಸಡಗರ ಮೈಸೂರಿನಲ್ಲಿ ನಿನ್ನೆ ಅಷ್ಟೆ ಕೊನೆಗೊಂಡಿದೆ. ಇನ್ನು ಅಲ್ಲಿನ ಜನರ ಬಾಯಲ್ಲಿ, ಹಬ್ಬದ ಸಿಹಿ ಊಟದ ಪರಿಮಳ ಹಾಗೆ ಇದೆ. ಆಗಲೇ ಮೈಸೂರು ಅರಮನೆಯಲ್ಲಿ ಮತ್ತೊಂದು ಸಿಹಿ ಊಟದ ತಯಾರಿ ಹಾಗೆ ಇದೆ. ಏನಪ್ಪ ಅದು ಅಂದುಕೊಂಡ್ರಾ..
ನಿಮ್ಮ ಊಹೆ ಖಂಡಿತವಾಗಿಯೂ ಸತ್ಯ ಮೈಸುರು ಅರಮನೆಯ ಮಹಾರಾಣಿ ತ್ರಿಷಿಕಾ ಶ್ರೀಮಂತ ಕಾರ್ಯ ನಡೆಯುತ್ತಿದೆ. ಹೌದು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿಯಾಗಿದ್ದು, ಶ್ರೀಮಂತ ಕಾರ್ಯಕ್ಕೆ ಅರಮನೆ ನಗರಿ ಶೃಂಗಾರಗೊಂಡಿದೆ. ಈ ಕಾರ್ಯಕ್ರಮ ವಿಶೇಷ ಏನಪ್ಪಾ ಅಂದ್ರೆ ಗರ್ಭಿಣಿ ದಸರಾ ಪೂಜೆಯಲ್ಲಿ ತೊಡಗಗಿದ್ದೇ ವಿಶೇಷ. ಸುಮಾರು 56ರು ವರ್ಷಗಳ ಬಳಿಕ ಇಂತಹ ಸನ್ನಿವೇಶ ನಡೆದಿದೆ. ಅಂದಹಾಗೆ 1961 ಮಹರಾಣಿ ತ್ರಿಪುರ ಸುಂದರಿ ಅಮ್ಮಣಿ ಅವರು ನವರಾತ್ರಿಯ ಪೂಜೆ ಸಂದರ್ಭದಲ್ಲಿ ಗರ್ಭಿಣಿ ಯಾಗಿದ್ದರು. ಈಗ ಅಂತಹದ್ದೇ ಒಂದು ಸನ್ನಿವೇಶಕ್ಕೆ ಅರಮನೆ ಸಾಕ್ಷಿಯಾಗಿದೆ.
ಐತಿಹಾಸಿಕ ಖಾಸಗಿ ದರ್ಬಾನಲ್ಲಿ ಭಾಗವಹಿಸಿದ ಈ ಜೋಡಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು. ಅಲ್ಲದೆ ಮಹರಾಜ ಪೂಜೆ ಮಾಡುವಾಗ, ಅವರ ಧರ್ಮಪತ್ನಿ ಸಹ ತನ್ನ ಕರ್ತವ್ಯವನ್ನು ಮಾಡಬೇಕಾಗಿದ್ದರಿಂದ ತ್ರಿಷಿಕಾ ಮೈಸೂರಿಗೆ ಬಂದಿದ್ದರು.