text stringlengths 0 61.5k |
|---|
ಅಂದಹಾಗೆ ಕಳೆದ ಜೂನ್ನಲ್ಲಿ ಈ ಇಬ್ಬರ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆಯಲ್ಲಿ ಹೆಚ್ಚು ದಿನಗಳ ಕಾಲ ದಂಪತಿ ವಾಸ್ತವ್ಯ ಹೂಡಿದ್ದರು. ಆದ್ರೆ ದಸರಾ ಹಿನ್ನೆಲೆಯಲ್ಲಿ ಮಹರಾಜ ಹಾಗೂ ರಾಣಿ ಶತಾಬ್ದಿ ರೈಲಿನಲ್ಲಿ ಸಂಚರಿಸಿದ್ದರು. ಇನ್ನು ಅ.1ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ ವಂಶಸ್ಥರಿಗೆ ಆಹ್ವಾನ ನೀಡಲಾಗಿದೆ. ದಸರಾದಲ್ಲಿ ಭಾಗವಹಿಸಿದ ಬಳಿಕ ತ್ರಿಷಿಕಾ ತಮ್ಮ ತವರು ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪದೆ ಪದೆ ತಿರುಗಾಟ ಬೇಡವೆಂದು, ಭಾನುವಾರವೇ ಶ್ರೀಮಂತ ಕಾರ್ಯ ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. |
Previous articleಬಡ ಮಕ್ಕಳಿಗೆ ಪಾಠ ಕಲಿಸುತ್ತಿರುವವರಿಗೆ ಘನ ಸರ್ಕಾರದಿಂದ ನೋಟಿಸ್!! ಸಮಾಜಕ್ಕೆ ಒಳ್ಳೆಯದು ಮಾಡುವುದೇ ತಪ್ಪೇ..? |
ಮಹಿಳೆಯರ ಆಪ್ತಸಖಿ | Prajavani |
Updated: 21 ಆಗಸ್ಟ್ 2019, 11:02 IST |
ಅಮೆಜಾನ್ ಆನ್‌ಲೈನ್ ಶಾಪಿಂಗ್ ಕಂಪನಿ 'ಅಮೆಜಾನ್ ಕೇರ‍್ಸ್' ' ಎಂಬ ಹೆಸರಿನಲ್ಲಿ ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗ ತರಬೇತಿ ಹಾಗೂ ಆರೋಗ್ಯ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆರೋಗ್ಯ ಮತ್ತು ಸ್ವಚ್ಛತೆ, ಮಹಿಳಾ ಸಬಲೀಕರಣ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಗರದ ಕೆ. ಮಲ್ಲಸಂದ್ರ ಹಾಗೂ ಬೆಸ್ತಮನಹಳ್ಳಿಯಲ್ಲಿನ ಅಮೆಜಾನ್ ಸಮುದಾಯ ಕೇಂದ್ರಗಳಲ್ಲಿ ಆಯೋಜಿಸುತ್ತಾ ಬಂದಿದೆ. |
2017ರ ಏಪ್ರಿಲ್‌ನಲ್ಲಿ ಆರಂಭವಾದ ಅಮೆಜಾನ್ ಕಮ್ಯೂನಿಟಿ ಸೆಂಟರ್‌ನಲ್ಲಿ ಈ ಕಾರ್ಯಕ್ರಮದಡಿ ಸ್ಪೋಕನ್ ಇಂಗ್ಲಿಷ್, ಡಿಜಿಟಲ್ ಶಿಕ್ಷಣ, ಲೈಬ್ರೆರಿ, ಕೆರಿಯರ್ ಕೌನ್ಸೆಲಿಂಗ್, ಇ– ಲರ್ನಿಂಗ್ ಪ್ರೋಗ್ರಾಂಗಳ ಬಗ್ಗೆ ಉಚಿತ ತರಗತಿ ನಡೆಸಲಾಗುತ್ತದೆ. |
ಉಚಿತ ಆರೋಗ್ಯ ಶಿಬಿರ, ಪ್ರಥಮ ಚಿಕಿತ್ಸೆ, ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸಲಾಗುತ್ತದೆ. ಮಹಿಳೆಯರಿಗೆ ಟೇಲರಿಂಗ್, ಬ್ಯೂಟಿ ಪಾರ್ಲರ್, ಕಸೂತಿ ಕಲೆ, ಡ್ರೈವಿಂಗ್, ಕ್ಯಾಂಟೀನ್ ಸರ್ವೀಸ್ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತದೆ. |
ಅಮೆಜಾನ್ ಸಮುದಾಯ ಕೇಂದ್ರದಲ್ಲಿ ಟೇಲರಿಂಗ್ ಕಲಿತು ಈಗ ಸ್ವಂತ ಅಂಗಡಿ ತೆರೆದಿದ್ದಾರೆ ಬೆಸ್ತಮನಹಳ್ಳಿಯ ಶೋಭಾ ಎಸ್.ಎನ್. |
ಪತಿಯ ಸಂಬಳದಿಂದ ನಾಲ್ಕು ಜನರ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಶೋಭಾ 10ನೇ ತರಗತಿ ಅಷ್ಟೇ ಓದಿದ್ದರಿಂದ ಯಾವ ಕೆಲಸವೂ ಸಿಗಲಿಲ್ಲ. ಅವರು ಅಮೆಜಾನ್‌ನ ಈ ಕಾರ್ಯಕ್ರಮದ ಬಗ್ಗೆ ಸ್ನೇಹಿತರ ಮೂಲಕ ತಿಳಿದುಕೊಂಡರು.ಆರು ತಿಂಗಳ ಕೋರ್ಸ್‌ನಲ್ಲಿ ಟೇಲರಿಂಗ್ ಕಲಿತುಕೊಂಡರು. ಕುಚ್ಚು, ಕಸೂತಿ ಹಾಕುವುದನ್ನೂ ಕಲಿತರು. ಈಗ ತಿಂಗಳಿಗೆ ₹10 ಸಾವಿರ ದುಡಿಯುತ್ತಿದ್ದಾರೆ. 'ಇದೆಲ್ಲಾ ಸಾಧ್ಯವಾಗಿದ್ದು ಉಚಿತ ತರಬೇತಿಯಿಂದ' ಎಂದು ವಿನಮ್ರವಾಗಿ ನುಡಿಯುತ್ತಾರೆ. |
ಸದ್ಯ ಸ್ವಂತ ಅಂಗಡಿ ಜೊತೆಗೆ ಶೋಭಾ ಸಾಮೇತಹಳ್ಳಿಯಲ್ಲಿ ಅಮೆಜಾನ್ ಸ್ಕಿಲ್ ಡೆವಲಪ್‌ಮೆಂಟ್ ಕೇಂದ್ರದಲ್ಲಿ 27 ಮಹಿಳೆಯರಿಗೆ ಟೇಲರಿಂಗ್ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಬೆಸ್ತಮನಹಳ್ಳಿ ಹಾಗೂ ಕೆ. ಮಲ್ಲಸಂದ್ರದಲ್ಲಿ ಈ ಕೇಂದ್ರಗಳಿವೆ. |
ಮುಂಬೈನ ಅಂಧೇರಿಯಲ್ಲಿ ಪುನೀತ್ 'ನಿನ್ನಿಂದಲೇ' ಹಾಡು | Puneeth Ninnindale song shot in Mumbai Andheri - Kannada Filmibeat |
13 min ago ದಸರಾ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ |
43 min ago ಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಖಡಕ್ ಲುಕ್ ಅನಾವರಣ |
48 min ago ಸ್ಯಾಂಡಲ್ ವುಡ್ ಗೆ 'ಲಕ್ಕಿ' ನಾಯಕನನ್ನು ಪರಿಚಯಿಸಿದ ನಟ ದುನಿಯಾ ವಿಜಯ್ |
News ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೈನಿಕರ ಬಳಿ ಆಯುಧವೂ ಇರಲಿಲ್ಲ: ನವಾಜ್ ಷರೀಫ್ |
ಮುಂಬೈನ ಅಂಧೇರಿಯಲ್ಲಿ ಪುನೀತ್ 'ನಿನ್ನಿಂದಲೇ' ಹಾಡು |
| Updated: Thursday, March 26, 2015, 13:09 [IST] |
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದ ಹಾಡೊಂದನ್ನು ಮುಂಬೈನಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಅಂಧೇರಿಯಲ್ಲಿರುವ ಪೋವೈ ಲಾಕ್ ಏರಿಯಾದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. |
ಈ ಹಾಡಿನ ಭಾಗದ ಚಿತ್ರೀಕರಣದಲ್ಲಿ ಪುನೀತ್ ಜೊತೆಗೆ 15 ವಿದೇಶಿ ನರ್ತಕಿಯರು ಸೇರಿದಂತೆ ಒಟ್ಟು 30 ಮಂದಿ ಹೆಜ್ಜೆ ಹಾಕಿದರು. ಬಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕ ಅಹ್ಮದ್ ಖಾನ್ ಕೊರಿಯೋಗ್ರಫಿಯಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. [ನಿನ್ನಿಂದಲೇ ಧ್ವನಿಸುರುಳಿ ವಿಮರ್ಶೆ] |
ಘಜನಿ, ರೇಸ್ 2, ಜಬ್ ವೆ ಮೆಟ್, ಮೌಸಮ್, ಖಮೀನೆ ಚಿತ್ರಗಳಿಗೆ ಅಹ್ಮದ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕವಿರಾಜ್ ಅವರ ಸಾಹಿತ್ಯ ಇರುವ ಹಾಡನ್ನು ವಿಶಾಲ್ ದದ್ಲಾನಿ ಸುಶ್ರಾವ್ಯವಾಗಿ ಹಾಡಿದ್ದಾರೆ. ತೆಲುಗಿನ ಜಯಂತ್ ಸಿ ಪರಾಂಜೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. |
ವಿಶಾಲ್ ದದ್ಲಾನಿ ಅವರು ಪರಾಂಜೆ ಅವರ ಆಪ್ತಮಿತ್ರರಂತೆ. ಹಾಗಾಗಿ ಅವರು ಈ ಹಾಡಿಗೆ ಯಾವುದೇ ಸಂಭಾವನೆಯನ್ನೂ ಪಡೆದೆಯದೆ ಹಾಡಿದ್ದಾರೆ. ಪುನೀತ್ ಅವರ ಡಾನ್ಸಿಂಗ್ ಸಾಮರ್ಥ್ಯಕ್ಕೆ ತಕ್ಕಂತೆ ಈ ಹಾಡನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೆ ಹಾಡಿನ ಧ್ವನಿಸುರುಳಿ ಬಿಡುಗಡೆಯಾಗಿದ್ದು ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. |
ಮೂಲಗಳ ಪ್ರಕಾರ 'ನಿನ್ನಿಂದಲೇ' ಚಿತ್ರ ಜನವರಿ 9, 2014ಕ್ಕೆ ರಿಲೀಸ್ ಆಗುತ್ತಿದೆ. 'ಯಾರೇ ಕೂಗಾಡಲಿ' ಚಿತ್ರದ ಬಳಿಕ ತೆರೆಕಾಣುತ್ತಿರುವ ಪುನೀತ್ ಚಿತ್ರ ಇದಾಗಿದೆ. ಸದ್ಯಕ್ಕೆ ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಬೇಕಿದೆ. ಚಿತ್ರಕ್ಕೆ ಕ್ಲೀನ್ ಸರ್ಟಿಫಿಕೇಟ್ ಸಿಕ್ಕೇಸಿಗುತ್ತದೆ ಭರವಸೆಯಲ್ಲಿ ಚಿತ್ರತಂಡವಿದೆ. ಏಕೆಂದರೆ ಅಣ್ಣಾವ್ರ ಕುಟುಂಬದ ಚಿತ್ರಗಳು ಯಾವತ್ತೂ ಸದಭಿರುಚಿಯ ಚೌಕಟ್ಟನ್ನು ಮೀರಿಲ್ಲ. |
ಮುಂಬೈ ಚೆಲುವೆ, ಮಾಜಿ ಮಿಸ್ ಇಂಡಿಯಾ ಎರಿಕಾ ಫರ್ನಾಂಡೀಸ್ ಚಿತ್ರದ ನಾಯಕಿ. ಇದೇ ಮೊಟ್ಟಮೊದಲ ಬಾರಿಗೆ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ಪಾತ್ರವರ್ಗದಲ್ಲಿ ತಿಲಕ್ ಶೇಖರ್, ವಿನಾಯಕ ಜೋಶಿ, ಅವಿನಾಶ್ ಮುಂತಾದವರಿದ್ದಾರೆ. |
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೆರಿಕಾದಲ್ಲಿ ನೆಲೆನಿಂತ ಭಾರತೀಯ ಕುಟುಂಬ, ಅಲ್ಲಿಗೆ ಬರುವ ಮತ್ತೊಂದು ಕುಟುಂಬದ ನಡುವಿನ ಕಥಾಹಂದರವನ್ನು 'ನಿನ್ನಿಂದಲೇ' ಒಳಗೊಂಡಿದೆ. (ಏಜೆನ್ಸೀಸ್) |
Read more about: puneeth rajkumar audio music songs ಪುನೀತ್ ರಾಜ್ ಕುಮಾರ್ ಆಡಿಯೋ ಹಾಡು ಸಂಗೀತ erica fernandes ಎರಿಕಾ ಫರ್ನಾಂಡಿಸ್ |
Power Star Puneeth Rajkumar and Erica Fernandes starer upcoming Kannada movie 'Ninnindale' song shooting is progressing in Mumbai. The shooting is taking place on the 13th floor of a building in the Powai Lakh area of Andheri in Mumbai. Music by Mani Sharma. |
ಮೇಟಿ ರಾಸಲೀಲೆ ಸಂತ್ರಸ್ಥೆಯ ಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ರಾ! |
December 18, 2016 EnSuddi Author meti, sex scandal, vijayalakshmi |
ಮಾಜಿ ಸಚಿವ ಎಚ್.ವೈ.ಮೇಟಿರವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ್ದ ಸಂತ್ರಸ್ಥ ಮಹಿಳೆ ರಾತ್ರೋ ರಾತ್ರಿ ಪೊಲೀಸ್ ಠಾಣೆಗೆ ಆಗಮಿಸಿ ನಾಲ್ವರ ಮೇಲೆ ದೂರು ದಾಖಲಿಸಿದ್ದಾರೆ. |
ಶನಿವಾರ ರಾತ್ರಿ ಬಾಗಲಕೋಟೆಯ ನವನಗರ ಠಾಣೆಯಲ್ಲಿ ಜೀವ ಬೆದರಿಕೆ ಆರೋಪದಲ್ಲಿ ಡಿಎಆರ್ ಪೇದೆ ಸುಭಾಷ್ ಮುಗಳಖೋಡ, ಮಾರುತಿ ಮೀರಜ್‌ಕರ್, ಸಿದ್ದಲಿಂಗ ಅಬಲಕಟ್ಟಿ ಮತ್ತು ಅಶೋಕ್ ಲಾಗಲೋಟಿ ಎನ್ನುವವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೀಡಿ ಬಿಡುಗಡೆಗೂ ಮುನ್ನಾ ಈ ಮಹಿಳೆ ದಿನಕ್ಕೊಂದೊಂದು ಹೇಳಿಕೆ ಹೇಳುವ ಮೂಲಕ ಸುದ್ದಿವಾಹಿನಿಗಳಿಗೆ ಸುದ್ದಿಯಾಗಿದ್ದರು. |
ಇನ್ನೂ ದೂರು ದಾಖಲಿಸುತ್ತಿದ್ದಂತೆ ಸಂತ್ರಸ್ಥೆಯ ಅಸಲಿ ಕತೆ ಹೊರಬಿದ್ದಿದೆ. ಸಂತ್ರಸ್ಥೆಯ ಗಂಡ ಈಕೆಯ ನಡವಳಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸಂತ್ರಸ್ಥೆಯ ಗಂಡ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೂರು ದಿನಗಳ ಕಾಲ ಅರೆ ಪ್ರಜ್ಞಾವಸ್ಠೆಯಲ್ಲಿದ್ದ ಪತಿರಾಯನನ್ನು ಐಸಿಯುನಲ್ಲಿ ಇಡಲಾಗಿತ್ತು. ತದ ನಂತರ ಚೇತರಿಸಿಕೊಂಡ ನಂತರ ಡಿಸ್ಚಾರ್ಜ್ ಮಾಡಲಾಗಿತ್ತು ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಇನ್ನೂ ಸಂತ್ರಸ್ಥೆ ಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದನ್ನು ವೈದ್ಯರು ಪೊಲೀಸರಿಗೂ ತಿಳಿಸಿದ್ದರು ಎಂದು ತಿಳಿದುಬಂದಿದೆ. |
← ಅಮೆಜಾನ್ ಗೆ ಸಂಕಟ: ಫ್ಲಿಪ್ ಕಾರ್ಟನಲ್ಲಿ ಒನ್ ಪ್ಲಸ್ 3 ಕೇವಲ 18999ಕ್ಕೆ |
ಶತಕ ದಾಖಲಿಸಿದ ಕನ್ನಡಿಗ ರಾಹುಲ್! → |
ಮೇಟಿ ಪ್ರಕರಣವನ್ನು ಆತ್ಯಾಚಾರ ಎಂದ ಮಹಿಳಾ ಆಯೋಗದ ಅಧ್ಯಕ್ಷೆ! |
December 15, 2016 EnSuddi Author 443 |
December 23, 2016 EnSuddi Author 123 |
ಮೇಟಿ ಪ್ರಕರಣ ಅನುಪಮಾ ಶಣೈ ಮತ್ತು ಮುಮಾಲಿ ವಿಚಾರಣೆ! |
February 8, 2017 Sunil Sirasangi 1,247 |
10 thoughts on "ಮೇಟಿ ರಾಸಲೀಲೆ ಸಂತ್ರಸ್ಥೆಯ ಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ರಾ!" |
Excellent post. I was checking constantly this blog and I'm impressed! Extremely useful info particularly the last part 🙂 I care for such information much. I was seeking this certain information for a long time. Thank you and good luck.| |
Very great post. I just stumbled upon your blog and wished to mention that I have really loved surfing around your weblog posts. After all I'll be subscribing in your rss feed and I'm hoping you write once more soon!| |
Thank you a bunch for sharing this with all folks you really understand what you're speaking approximately! Bookmarked. Kindly additionally consult with my website =). We can have a hyperlink alternate agreement among us| |
Wonderful article! That is the type of information that should be shared around the web. Shame on the search engines for no longer positioning this publish higher! Come on over and seek advice from my web site . Thanks =)| |
made to make this particular submit extraordinary. Great |
Woah! I'm really loving the template/theme of this site. It's simple, yet effective. A lot of times it's challenging to get that "perfect balance" between usability and visual appearance. I must say you have done a excellent job with this. Also, the blog loads super quick for me on Firefox. Exceptional Blog!| |
ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ; ಎಲ್ಲಿದೆ ಈ ಸಾಮಾಜಿಕ ಪಿಡುಗಿನ ಮೂಲ? |
ಪ್ರತಿನಿತ್ಯ ಭಾರತದಲ್ಲಿ ವರದಕ್ಷಿಣೆಯ ಕಿರುಕುಳ ತಾಳಲಾರದೇ ಅತ್ಮಹತ್ಯೆಯನ್ನು ಮುಖ ಮಾಡುತ್ತಿರುವ ಮಹಿಳೆಯರ ಸಂಖ್ಯೆ 21. ವರದಕ್ಷಿಣೆಯ ಹೆಸರಿನಲ್ಲಿ ಮಹಿಳೆಯರು ಅನುಭವಿಸುವ ನೋವಿನ ಮೂಲವೇನು? |
04 Aug, 2018 at 09:43 AM |
ವರದಕ್ಷಿಣೆಯ ಪಿಡುಗು ಶುಕ್ರವಾರ ತಡರಾತ್ರಿ ಮೈಸೂರಿನ ಮಹಿಳೆಯೊಬ್ಬರನ್ನು ಬಲಿ ಪಡೆದಿದೆ. ಅವರೊಟ್ಟಿಗೆ 2 ವರ್ಷದ ಹಾಲ್ಗೆನ್ನೆಯ ಮಗೂ ಕೂಡ ಬೆಂಕಿಗೆ ಆಹುತಿಯಾಗಿದೆ. |
ಗೌರಮ್ಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದವರು. ಇನ್ನು 24 ವರ್ಷದ ಯುವತಿ, ಮದುವೆಯಾಗಿ ಮೂರು ವರ್ಷಗಳು ಕಳೆದಿದ್ದವು. ಪತಿ ಲೋಹಿತ್ ಅಶಿಕ್ಷಿತನೇನೂ ಅಲ್ಲ. ಮಾಲೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಮಕ್ಕಳಿಗೆ ಜ್ಞಾನ ತುಂಬುವ ಕೆಲಸದಲ್ಲಿ ನಿರತನಾಗಿದ್ದ. ಆದಾಗ್ಯೂ ಕೂಡ ಮದುವೆ ಸಂದರ್ಭದಲ್ಲಿ ಸಾಕ್ಷಷ್ಟು ವರದಕ್ಷಿಣೆ ಪಡೆದಿದ್ದ. |
ಅವರಿಬ್ಬರಿಗೆ 2 ವರ್ಷದ ನಿಯಾಲ್ ಎಂಬ ಮುದ್ದಾದ ಗಂಡು ಮಗುವಿತ್ತು. ಮೈಸೂರಿನ ಮಹದೇವಪುರದಲ್ಲಿ ಈ ಕುಟುಂಬ ಬದುಕು ಸಾಗಿಸುತ್ತಿತ್ತು. ಮದುವೆಯಾಗಿ, ಕಂಕುಳಲ್ಲಿ ಮಗುವನ್ನು ಕೂಡಿಸಿಕೊಂಡು ತುತ್ತುಣಿಸುತ್ತಿದ್ದ ಗೌರಿಗೆ 'ಸುಶಿಕ್ಷಿತ' ಗಂಡನಿಂದ ನೆಮ್ಮದಿಯೇನು ದೊರೆತಿರಲ್ಲ. ಧನದಾಹಿ ಪತಿಯಿಂದ ಪ್ರತಿನಿತ್ಯ ನೋವಷ್ಟೇ ದೊರೆಯುತ್ತಿತ್ತು. ತವರಿನಿಂದ ಮತ್ತಷ್ಟು ವರದಕ್ಷಿಣೆಯನ್ನು ತರಬೇಕು ಎನ್ನುವುದು ಪತಿಯ ಬೇಡಿಕೆಯಾಗಿತ್ತು. ಅಷ್ಟೇನೂ ಭದ್ರವಲ್ಲದ ತವರಿನವರಿಂದ ವರದಕ್ಷಿಣೆ ಕೇಳುವುದೂ ಕೂಡ ಗೌರಿಗೆ ನುಂಗಲಾರದ ತುತ್ತಾಗಿತ್ತು. |
ದಿನದಿಂದ ದಿನಕ್ಕೆ ಹೆಚ್ಚತೊಡಗಿದ ವರದಕ್ಷಿಣೆ ಕಿರುಕುಳವನ್ನು ಗೌರಿ ಸಹಿಸದಾದಳು. ವರದಕ್ಷಿಣೆ ಕಿರುಕುಳ ಎನ್ನುವುದು ಕೌಟುಂಬಿಕ ಹಿಂಸೆ ಎನ್ನುವುದನ್ನು ಸಂಪೂರ್ಣವಾಗಿ ಅರಿಯದ ಗೌರಿಗೆ ಈ ಹಿಂಸೆಯಿಂದ ಹೊರಬರಲು ಕಂಡ ಏಕೈಕ ದಾರಿಯೆಂದರೆ ತನ್ನನ್ನು ತಾನು ನಾಶಪಡಿಸಿಕೊಳ್ಳುವುದು. |
ಶುಕ್ರವಾರ (ಆಗಸ್ಟ್ 4) ತಡರಾತ್ರಿ ಗೌರಿಗೆ ತಾನು ಕಂಡುಕೊಂಡ ದಾರಿಯೇ ಉತ್ತಮವೆನಿಸಿದೆ. ಮೈಸೂರಿನ ಮಹದೇವಪುರದ ತಮ್ಮ ಮನೆಯಲ್ಲಿಯೇ ಬೆಂಕಿಗಾಹುತಿಯಾಗುವ ನಿರ್ಧಾರ ತಳೆದಿದ್ದಾಳೆ. ತಾನು ಸತ್ತರೆ ಮಗುವಿನ ಭವಿಷ್ಯಕ್ಕೆ ಅಡ್ಡಿಯಾಗುತ್ತದೆಂಬ ಕಾರಣಕ್ಕೆ 2 ವರ್ಷದ ಕಂದಮ್ಮನನ್ನೂ ತನ್ನೊಂದಿಗೆ ಕರೆದೊಯ್ಯುವ ನಿರ್ಧಾರಕ್ಕೆ ಬಂದಿದ್ದಾಳೆ. ಪರಿಣಾಮವಾಗಿ ಶನಿವಾರ ಬೆಳಗ್ಗೆ ಮನೆಯೊಳಗೆ 24 ಪ್ರಾಯದ ಗೌರಮ್ಮ ಮತ್ತು ಮುದ್ದಾದ 2 ವರ್ಷದ ನಿಯಾಲ್‌ರ ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. |
ಆತ್ಮಹತ್ಯೆಗೆ ಒಳಗಾದ ಮಹಿಳೆ ಗೌರಮ್ಮ. |
ಇದು ಕೆ.ಆರ್.ಪೇಟೆಯ ಗೌರಮ್ಮ ಒಬ್ಬರ ಕತೆಯಲ್ಲ. ಭಾರತದ ಬಹುಸಂಖ್ಯಾತ ಮಹಿಳೆಯರ ನಿತ್ಯದ ವ್ಯಥೆ. ಕೆಲವು ಮಹಿಳೆಯರು ಹಿಂಸೆಯ ಮಧ್ಯೆಯೇ ಬದುಕು ಸಾಗಿಸುತ್ತಿದ್ದರೆ, ಗೌರಿಯಂತಹ ಮೃದು ಮನಸ್ಸಿನ ಮಹಿಳೆಯರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ದಾರಿಯೇ ಕಾಣದಾದಾಗ ತಮ್ಮನ್ನು ತಾವು ಸಾಯಿಸಿಕೊಳ್ಳುತ್ತಾರೆ. ಇಂತಹ ಅದೆಷ್ಟೋ ಸಂದರ್ಭಗಳಲ್ಲಿ ಇದ್ಯಾವುದರ ಪರಿವೆಯೇ ಇಲ್ಲದ ಹಾಲುಗಲ್ಲದ ಕಂದಮ್ಮಗಳೂ ಕೂಡ ಜಗತ್ತಿನ ವ್ಯವಹಾರಕ್ಕೆ ಬಾರದೆಯೇ ಬದುಕನ್ನು ಕೊನೆಗೊಳಿಸಿಕೊಳ್ಳುತ್ತವೆ. |
ಅಂಕಿ ಅಂಶಗಳು ಏನು ಹೇಳುತ್ತವೆ?: |
ವರದಕ್ಷಿಣೆ ಸಾವುಗಳಲ್ಲಿ ಇಡೀ ವಿಶ್ವದಲ್ಲೆ ಭಾರತ ಮೊದಲ ಸ್ಥಾನದಲ್ಲಿದೆ. 2005ರಲ್ಲಿ ಭಾರತದಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೇ 6,787 ಮಹಿಳೆಯರು ಸಾವನ್ನಪ್ಪಿದ್ದರು. 2010ರಲ್ಲಿ 8,391 ಮಹಿಳೆಯರು ತಮ್ಮನ್ನು ತಾವು ನಾಶಗೊಳಿಸಿಕೊಂಡಿದ್ದರು. 2011ಕ್ಕೆ ಈ ಸಂಖ್ಯೆ 8,618ನ್ನು ತಲುಪಿತ್ತು. 2015ರಲ್ಲಿ 7,634 ಮಹಿಳೆಯರು ಮತ್ತು 2016ರಲ್ಲಿ 7,621 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ. |
ಇದನ್ನು ಹೊರತುಪಡಿಸಿ ವರದಕ್ಷಿಣೆ ಕಿರುಕುಳ ಅನುಭವಿಸುವ 20 ಮಹಿಳೆಯರ ಪೈಕಿ ಕನಿಷ್ಟ ಇಬ್ಬರು ಮಹಿಳೆಯರಾದರೂ ಆತ್ಮಹತ್ಯೆ ಕಡೆಗೆ ಮುಖ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ. 90 ನಿಮಿಷಕ್ಕೊಮ್ಮೆ ಭಾರತದ ಮಹಿಳೆಯೊಬ್ಬಳು ವರದಕ್ಷಿಣೆಯ ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾಳೆ. 2015ರ ವೇಳೆ ಪ್ರತಿನಿತ್ಯ ಸಾಯುವ ಮಹಿಳೆಯರ ಸಂಖ್ಯೆ 12ರಷ್ಟಿತ್ತು. 2016ಕ್ಕೆ ಈ ಸಂಖ್ಯೆ 20ನ್ನು ತಲುಪಿದೆ. 2017ರಲ್ಲಿ ಪ್ರತಿನಿತ್ಯ 21 ಜನ ಮಹಿಳೆಯರು ವರದಕ್ಷಿಣೆಯ ಹಿಂಸೆ ತಾಳಲಾರದೇ ಸಾವನ್ನಪ್ಪುತ್ತಿದ್ದಾರೆ. |
ಸಾವುಗಳ ಸಂಖ್ಯೆ ಒಂಡೆದೆಯಾದರೆ, ದಿನನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಸಂಖ್ಯಾತ ಮಹಿಳೆಯರ ನೋವುಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ವರದಕ್ಷಿಣೆಗಾಗಿ ದೈಹಿಕ ಹಿಂಸೆ ನೀಡುವುದು ಹಿಂದೆ ಸಾಮಾನ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ವರದಿಯಾದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪತ್ನಿಯ ನಗ್ನ ಚಿತ್ರಗಳನ್ನು ಸೆರೆಹಿಡಿದಿದ್ದ ಗಂಡ, ವರದಕ್ಷಿಣೆ ತಾರದಿದ್ದರೆ ಫೋಟೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ. ಕಳೆದ ತಿಂಗಳಲ್ಲಿ ಇದೇ ವಿಚಾರವಾಗಿ ಬೆಂಗಳೂರಿನ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಒಂದು ಕಡೆ ವರದಕ್ಷಿಣೆಗಾಗಿ ಗಂಡ ದೈಹಿಕ ಹಿಂಸೆ ನೀಡಿದರೆ ಮತ್ತೊಂದೆಡೆ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದ ಮಹಿಳೆ ಪ್ರಕರಣ ದಾಖಲಿಸಿದ್ದರು. |
ಜುಲೈ ತಿಂಗಳಲ್ಲಿ ಸೋಮವಾರಪೇಟೆಯಲ್ಲಿ ಪೊಲೀಸ್ ಪೇದೆಯೊಬ್ಬ ಮನೆಯವರ ಜತೆ ಕೂಡಿಕೊಂಡು ವರದಕ್ಷಿಣೆ ತರದ ಹೆಂಡತಿಯ ಗುಪ್ತಾಂಗಗಳಿಗೆ ಚಾಕುವಿನಿಂದ ಘಾಸಿಗೊಳಿಸಿ, ಖಾರದಪುಡಿ ಎರಚಿದ್ದಲ್ಲದೇ ವಿಷವನ್ನೂ ಕುಡಿಸಲು ಪ್ರಯತ್ನಿಸಿದ್ದ. ಫೆಬ್ರವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಗಂಡನೊಬ್ಬ ಹೆಂಡತಿ ವರದಕ್ಷಿಣೆಯನ್ನು ತರದಿದ್ದಕ್ಕಾಗಿ ಆಕೆಗೇ ತಿಳಿಯದಂತೆ ಅವಳ ಕಿಡ್ನಿ ಮಾರಿದ್ದ. ಇವು ಬೆಳಕಿಗೆ ಬಂದ ಪ್ರಕರಣಗಳು. ಹೊರಜಗತ್ತಿಗೆ ತಿಳಿಯದ, ಮನೆಯ ಗೋಡೆಗಳ ಮಧ್ಯೆಯೇ ನಡೆಯುತ್ತಿರುವ ವರದಕ್ಷಿಣೆ ಕಿರುಕುಳಗಳಿಗೆ ಅಂಕುಶವೇ ಇಲ್ಲದಂತಾಗಿದೆ. |
ದೇಶದಲ್ಲಿ ಕೌಟುಂಬಿಕ ಹಿಂಸೆ ಹೆಸರಿನಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ.93.7 ರಲ್ಲಷ್ಟೇ ವಿಚಾರಣೆ ನಡೆಯುತ್ತದೆ. ಉಳಿದ ಶೇ.6.3 ಮಹಿಳೆಯರ ನೋವುಗಳಿಗೆ ಬೆಲೆಯೇ ಇಲ್ಲ. ಶಿಕ್ಷೆ ದೊರೆಯುವುದು ಕೇವಲ ಶೇ.34.7 ಪ್ರಕರಣಗಳಲ್ಲಷ್ಟೇ. ಉಳಿದ ಆರೋಪಿಗಳು ಆರಾಮವಾಗಿ ಸುತ್ತಾಡಿಕೊಂಡಿದ್ದಾರೆ. ಸುಪ್ರಿಂ ಕೋರ್ಟ್ ಕೂಡ ಈ ಕಾಯ್ದೆಗಳಡಿಯಲ್ಲಿ ಸುಳ್ಳು ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗಿದ್ದು, ಏಕಾಏಕಿ ಆರೋಪಿಗಳನ್ನು ಬಂಧಿಸುವಂತಿಲ್ಲ ಎಂದಿದೆ. ಈ ಅಂಶವೂ ಕೂಡ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರದೆ ಹಿಂದುಳಿಯುವಂತೆ ಮಾಡಿದೆ. |
ಏನು ಹೇಳುತ್ತದೆ ವರದಕ್ಷಿಣೆ ಕಾನೂನು?: |
ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಕೂಡ ಅಪರಾಧ ಎಂಬ ಕಾನೂನು 1961ರಿಂದಲೇ ಜಾರಿಗೆ ಬಂದಿದೆ. ಹೀಗಿದ್ದೂ ಈ ಪಿಡುಗು ಅವ್ಯಾಹತವಾಗಿ ನಡೆಯುತ್ತಿದೆ. ಈ ವರದಕ್ಷಿಣೆಯಿಂದಾಗಿಯೇ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೊಲೆಗಳು ಕೂಡ ನಡೆಯುತ್ತಿವೆ. 1961ರಲ್ಲಿಯೇ 'ವರದಕ್ಷಿಣೆ ನಿಷೇಧ ಅಧಿನಿಯಮ' ಜಾರಿಗೆ ತರಲಾಗಿದ್ದರೂ, ಈವರೆಗೆ ವರದಕ್ಷಿಣೆ ಪಿಡುಗು ನಿಯಂತ್ರಣ ಸಾಧ್ಯವಾಗಿಲ್ಲ. |
ವರದಕ್ಷಿಣೆ ಪಿಡುಗು ತೊಲಗಬೇಕು ಎಂದರೆ ಮೊದಲು ಆಡಳಿತ ಸ್ಥಾನಗಳಲ್ಲಿರುವ ಜನರು ಸಾಮಾನ್ಯ ಜನರಿಗೆ ಮಾದರಿಯಾಗಿ ನಿಲ್ಲಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕೆ. ನೀಲಾ. |
ಕಾನೂನುಗಳನ್ನು ತರುವ ಶಾಸಕರು, ಸಂಸದರು ಮೊದಲು ವರದಕ್ಷಿಣೆ ತೆಗೆದುಕೊಳ್ಳುವುದನ್ನು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ನಂತರದಲ್ಲಿ ಅಧಿಕಾರಿ ವರ್ಗ ಈ ಕಾರ್ಯಕ್ಕೆ ಮುಂದಾಗಬೇಕು. ಆದರೆ ಇವರಲ್ಲಿ ಬಹುಪಾಲು ಮಂದಿಗೆ ಕಾನೂನುಗಳು ಬೇಕಾಗಿಲ್ಲ. ರಾಜಕಾರಣಿಯೊಬ್ಬ ಇತ್ತೀಚೆಗೆ ಕೋಟಿ ಕೋಟಿ ಖರ್ಚು ಮಾಡಿ, ಮಗಳ ಮೈತುಂಬಾ ಒಡವೆಗಳನ್ನು ಹೇರಿ ಮದುವೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಅವರೆಲ್ಲರೂ ಈ ಕಾನೂನಿನ ವಿರುದ್ಧ ನಿಂತಿದ್ದಾರೆ. ಇನ್ನು ಸಾಮಾನ್ಯ ಜನರಿಂದ ಕಾನೂನುಗಳ ಪಾಲನೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ? |
-ಕೆ. ನೀಲಾ, ಸಾಮಾಜಿಕ ಕಾರ್ಯಕರ್ತರು |
ಕಾಯ್ದೆಯನ್ನು ಸರಿಯಾಗಿ ಅನುಷ್ಟಾನಕ್ಕೆ ತಂದರೆ ವರದಕ್ಷಿಣೆ ನಿಲ್ಲುತ್ತದೆ ಎಂದೇನೂ ಭರವಸೆಯಿಲ್ಲ. ಆದರೆ ವರದಕ್ಷಿಣೆ ಕೊಡುವವರು ಮತ್ತು ತೆಗೆದುಕೊಳ್ಳುವವರಲ್ಲಿ ಭಯವಂತೂ ಜಾಗೃತವಾಗುತ್ತದೆ. ಜತೆಗೆ ವರದಕ್ಷಿಣೆ ಎನ್ನುವುದು ತೆರೆಮರೆಯ ಕೆಲಸ. ವರದಕ್ಷಿಣೆ ಪಡೆದ ಹೆಚ್ಚಿನ ಸಾಕ್ಷಿಗಳು ದೊರೆಯುವುದು ಯಾರಾದರೂ ಮಹಿಳೆ ಕಿರುಕುಳ ತಾಳಲಾರದೇ ಪತ್ರ ಬರೆದಿಟ್ಟು ಸತ್ತಾಗಲಷ್ಟೇ. |
ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಸಾಕ್ಷಿಗಳಿಲ್ಲದೇ ಎನೂ ನಡೆಯುವುದಿಲ್ಲ. ವರದಕ್ಷಿಣೆಯ ಬೆನ್ನು ಹತ್ತಿ ಸಾಗುವುದೂ ಕೂಡ ಕಷ್ಟ. ಇದಕ್ಕೆ ಸುಲಭವಾದ ದಾರಿ ಎಂದರೆ ಅದ್ಧೂರಿ ಮದುವೆಗಳಿಗೆ ತಡೆಯೊಡ್ಡುವುದು ಎನ್ನುತ್ತಾರೆ ಕೆ ನೀಲಾ. "ಅದ್ದೂರಿ ಮದುವೆಗಳು ನಿಂತರೆ ಅದ್ದೂರಿಯಾಗಿ ಮದುವೆ ಮಾಡುವ ಕನಸು ಕಟ್ಟಿಕೊಂಡವರೆಲ್ಲಾ ಸುಮ್ಮನಾಗುತ್ತಾರೆ. ವಧುವಿನ ಮೈಗೆಲ್ಲಾ ಬಂಗಾರ ಹಾಕಿ ಕಳುಹಿಸುವುದು ತಪ್ಪುತ್ತದೆ. ಉಡುಗೊರೆಯ ರೂಪದಲ್ಲಿ ತರಹೇವಾರಿ ಸರಕು ಸರಂಜಾಮುಗಳು ಹೋಗುವುದು ತಪ್ಪುತ್ತದೆ," ಎಂಬ ಅಭಿಪ್ರಾಯ ಅವರದ್ದು. |
ಒಟ್ಟಾರೆ ವರದಕ್ಷಿಣೆ ಎನ್ನುವುದಕ್ಕೆ ಕೇವಲ ಅತಿಯಾದ ಅಸೆಯಷ್ಟೇ ಕಾರಣವಾಗಿಲ್ಲ. ಇದರ ಹಿಂದೆ ಪುರುಷ ಪ್ರಧಾನ್ಯತೆ ಕೂಡಾ ಕೆಲಸ ಮಾಡುತ್ತಿದೆ. ಜತೆಗೇ ಬಂಡವಾಳ ಶಾಹಿಗಳ ಧೋರಣೆಗಳಿವೆ. ಕೊಳ್ಳುಬಾಕ ಸಂಸ್ಕೃತಿ ಇದೆ. ಆಡಳಿತ ಮತ್ತು ಅಧಿಕಾರಿ ವರ್ಗಗಳ ಉಡಾಳತನವೂ ಕಾರ್ಯ ನಿರ್ವಹಿಸುತ್ತಿದೆ. ಇದೆಲ್ಲದರಿಂದ ಸಮಾಜ ಮುಕ್ತವಾಗುವವರೆಗೂ ಪ್ರತಿನಿತ್ಯ ಗೌರಮ್ಮನಂತಹ ಯುವತಿಯರ ಸಾವು ತಪ್ಪದು. |
ಆತ್ಮಹತ್ಯೆಲೈಂಗಿಕ ಕಿರುಕುಳSexual abuseವರದಕ್ಷಿಣೆವರದಕ್ಷಿಣೆ ನಿಷೇಧ ಕಾಯ್ದೆಪುರುಷ ಪ್ರಾಧಾನ್ಯತೆDowryDowry prohibition actMale Dominant SocietyDowry death |
ಜಯನಗರ : ಮಹಿಳಾ ಗೃಹಾಲಂಕಾರಪ್ರಿಯರಿಗೊಂದು ಆಹ್ವಾನ! | Project Eve The She Sessions Dreamcatcher Workshop Jayanagar - Kannada Oneindia |
ಜಯನಗರ : ಮಹಿಳಾ ಗೃಹಾಲಂಕಾರಪ್ರಿಯರಿಗೊಂದು ಆಹ್ವಾನ! |
| Published: Thursday, June 21, 2018, 20:19 [IST] |
ಬೆಂಗಳೂರು, ಜೂನ್ 21: ಪ್ರೊಜೆಕ್ಟ್ ಈವ್ ತನ್ನ 'ದಿ ಶಿ ಸೆಶನ್ಸ್' ಡ್ರೀಮ್ ಕ್ಯಾಚರ್ ಕಾರ್ಯಾಗಾರವನ್ನು ಜೂನ್ 23, 2018ರಂದು ತನ್ನ ಜಯನಗರದ ಮಳಿಗೆಯಲ್ಲಿ ಹಮ್ಮಿಕೊಂಡಿದೆ. |
ಬೆಂಗಳೂರಿನ ಎಲ್ಲಾ ಮಹಿಳಾ ಗೃಹಾಲಂಕಾರಪ್ರಿಯರಿಗೊಂದು ಆಹ್ವಾನ! ತಜ್ಞರು ನಡೆಸಿಕೊಡುವ ಡ್ರೀಮ್ ಕ್ಯಾಚರ್ ಆರ್ನ್‍ಮೆಂಟ್ ತಯಾರಿಸುವ ಕಾರ್ಯಾಗಾರದಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ಒಳಾಂಗಣದ ಅಲಂಕಾರಕ್ಕೆ ಕಣ್ಮನ ಸೆಳೆಯುವ ಡ್ರೀಮ್ ಕ್ಯಾಚರ್ ನೊಂದಿಗೆ ಒಂದು ಅದ್ಭುತವಾದ ಆಭರಣವೊಂದನ್ನು ಸೇರಿಸಿ! |
ಡ್ರೀಮ್ ಕ್ಯಾಚರ್ ನಿಮ್ಮ ಮನೆಯ ಅಲಂಕಾರ ಹೆಚ್ಚಿಸುವುದಷ್ಟೇ ಅಲ್ಲ, ನಿಮ್ಮ ಕೆಟ್ಟ ಕನಸುಗಳು ಮತ್ತು ಋಣಾತ್ಮಕ ಶಕ್ತಿಯನ್ನು ತಡೆಯುವಂತಹ ಮ್ಯಾಜಿಕ್ ಕೆಲಸವನ್ನು ಮಾಡುತ್ತದೆ ಎನ್ನುತ್ತಾರೆ ತಜ್ಞರು. |
ಕಾರ್ಯಾಗಾರದಲ್ಲಿ, ಕೆಟ್ಟ ಕನಸುಗಳನ್ನು ಹಿಡಿದಿಡುವ ಮಾಂತ್ರಿಕ ವೆಬ್‍ಗಳ ನೇಯ್ಗೆಯ ಕಲೆಯನ್ನು ಕಲಿಯಿರಿ. |
ನಿಮ್ಮ ಫೇವರಿಟ್ ಡ್ರೀಮ್ ಕ್ಯಾಚರ್ ಅನ್ನು ನೇಯ್ಗೆ ಮಾಡಲು ಆಸಕ್ತಿಯುಳ್ಳವರು ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ! |
ದಿನಾಂಕ: 23ನೇ ಜೂನ್, 2018, ಶನಿವಾರ |
'ಪ್ರಾಜೆಕ್ಟ್ ಈವ್ ಬಗ್ಗೆ': ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ. |
ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25 ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ. |
ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್ ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ! |
jayanagar women house workshop ಜಯನಗರ ಮಹಿಳೆ ಮನೆ |
Project Eve Presents An Exclusive "The She Sessions" Dreamcatcher Workshop at its Jayanagar outlet on June 23rd, 2018. Calling all home decor - loving Eves of Bengaluru! To indulge yourselves in an exclusive dreamcatcher ornament making workshop by experts. |
ಮೈಸೂರು: ಡ್ರೋನ್ ಸರ್ವೇ ವೇಳೆ ಗ್ರಾ.ಪಂ ಕಾರ್ಯದರ್ಶಿಗೆ ಛತ್ರಿ ಹಿಡಿದಿರುವ ನೌಕರ | Mysore: Employee Holding Umbrella To The Gram Panchayat Secretary During Drone Survey; Pic Goes Viral - Kannada Oneindia |
| Published: Tuesday, October 20, 2020, 12:47 [IST] |
ಮೈಸೂರು, ಅಕ್ಟೋಬರ್ 20: ಡ್ರೋನ್ ಸರ್ವೇ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರಿಗೆ ಕೆಳ ದರ್ಜೆಯ ನೌಕರನೊಬ್ಬ ಕೊಡೆ ಹಿಡಿದು ನಿಂತಿರುವ ಫೋಟೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. |
ಮೈಸೂರಿನ ಗುಂಗ್ರಲ್ ಛತ್ರದ ಗ್ರಾ.ಪಂ ಮಹಿಳಾ ಕಾರ್ಯದರ್ಶಿಯೊಬ್ಬರು ಡ್ರೋನ್ ಸರ್ವೇಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ನೌಕರ ಕೊಡೆ ಹಿಡಿದಿದ್ದ. ಇವರು ಮಾಸ್ಕ್ ಕೂಡ ಧರಿಸಿಲ್ಲ. ಈ ಚಿತ್ರ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ. |
ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಜ್ಯೋತಿ ಆತ್ಮ ಎಂಬ ನೆಟ್ಟಿಗರು, ""ತಮ್ಮ್ ಕೆಳ ದರ್ಜೆಯ ವ್ಯಕ್ತಿಗಳನ್ನು ಈ ಅಧಿಕಾರಿಗಳು ನೋಡೋ ರೀತಿ ಇದು. ಕಾರ್ಯದರ್ಶಿ ಬದಲು ಫಿಲ್ಮ್ ಆ್ಯಕ್ಟರ್ ಆಗಬೇಕಿತ್ತು. ಒಬ್ಬ ಪಿಡಿಒ ನೋಡ್ರಪ್ಪ ಅವರ ಶೋಕಿನ. ಮಾಸ್ಕ್ ಇಲ್ಲ. ಅವರ ಕೈಲಿ ಛತ್ರಿ ಇಡಿಯೋಕು ಶಕ್ತಿ ಇಲ್ಲ ಪಾಪ, ಇವರು ಬ್ರಿಟಿಷ್ ಆಡಳಿತಾಧಿಕಾರಿ ಇಂತಹವರನ್ನು ಹೇಳೋರೂ ಇಲ್ಲ, ಕೇಳೋರು ಇಲ್ಲ. ತನ್ನ ತಾನು ರಕ್ಷಣೆ ಮಾಡಿಕೊಳ್ಳೋಕೆ ಛತ್ರಿ ಇಡ್ಕೊಳೋಕ್ಕೆ ಆಗದಿರುವವರು ಇನ್ನು ಪೆನ್ ಇಡ್ಕೊಂಡು ಗ್ರಾಮ ಪಂಚಾಯತಿ ಉದ್ಧಾರ ಮಾಡ್ತಾರೆ. ಇದೆ ನಮ್ಮ ವ್ಯವಸ್ಥೆ'' ಎಂದು ಟೀಕಿಸಿದ್ದಾರೆ. |
ʻಇಂತವರು ಎಷ್ಟೇ ವಿದ್ಯಾವಂತರು ಆದರೂ ವ್ಯಕ್ತಿತ್ವದಲ್ಲಿ ಅವಿದ್ಯಾವಂತರು. ನಾಗರಿಕ ಸಮಾಜದ ಅನಾಗರಿಕರು' ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. |
ʻಕೆಲ ಸಂದರ್ಭದಲ್ಲಿ ಕೆಲವು ಚಿತ್ರಗಳು ನಮ್ಮನ್ನು ದಾರಿತಪ್ಪಿಸುತ್ತಿವೆ. ವಾಸ್ತವವಾಗಿ ನಾವು ಗ್ರಾಮೀಣ ಪ್ರದೇಶದಲ್ಲಿ ಸ್ವಾಮಿತ್ವ ಕಾರ್ಡ್ ನೀಡುವ ಡ್ರೋನ್ ಏರಿಯಲ್ ಸಮೀಕ್ಷೆಯನ್ನು ಮಾಡುತ್ತಿದ್ದೇವೆ. ಈ ಡ್ರೋನ್‌ಗಳನ್ನು ನೆರಳಿನಲ್ಲಿ ಯಾವಾಗಲೂ ಬಳಸಬೇಕಾಗುತ್ತದೆ. ಆ ಕಾರಣದಿಂದಾಗಿ ಛತ್ರಿಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರವೇ ಸ್ಪಷ್ಟನೆ ನೀಡಲಿದೆ' ಎಂದು ಕೃಷ್ಣಕುಮಾರ್ ಸಿ.ಆರ್. ಸ್ಪಷ್ಟಪಡಿಸಿದ್ದಾರೆ. |
ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಟ್ಯಾಗ್ ಮಾಡಿ, ""ಹೈಟೆಕ್ ಪಿಡಿಒ ಮೇಡಮ್ನ ಅವರೂ ಸ್ವಲ್ಪ ನೋಡಲಿ, ಗ್ರಾಮ ಪಂಚಾಯತಿಗಳನ್ನು ಹೈಟೆಕ್ ಮಾಡಬೇಕಿದೆ ಅಧಿಕಾರಿಗಳನ್ನಲ್ಲ' ಎಂದು ಮತ್ತೊಬ್ಬರು ಟ್ವಿಟಿಗರು ಕುಟುಕಿದ್ದಾರೆ. |
ಚಿತ್ರದಲ್ಲಿರುವವರು ಗ್ರಾ.ಪಂ ಕಾರ್ಯದರ್ಶಿಯಾಗಿದ್ದು, ಟ್ವಿಟ್ಟರ್ ನಲ್ಲಿ ಕೆಲವರು ಪಿಡಿಒ ಎಂದು ಭಾವಿಸಿ ಟ್ವೀಟ್ ಮಾಡಿದ್ದಾರೆ. |
gram panchayat employee drone mysuru ಗ್ರಾಮ ಪಂಚಾಯತಿ ನೌಕರ ಡ್ರೋನ್ ಫೋಟೋ ಮೈಸೂರು |
A photo of a employee holding Umbrella To Gram Panchayat secretary during a drone survey has gone viral on Twitter. |
ಮಲ್ಲು ಬೆಡಗಿ ಭಾವನಾಗೆ ಬೆಂಗಳೂರಿನಲ್ಲಿ ಬಂಗಲೆ ಬೇಕಂತೆ | Actress Bhavana | Looking Banglow in Bangalore | Bhavana busy Kannada | ಜಾಕಿ ನಟಿ ಭಾವನಾ | ಬೆಂಗಳೂರು ಮನೆ - Kannada Filmibeat |
| Published: Tuesday, March 15, 2011, 13:00 [IST] |
ಮಲ್ಲು ಬೆಡಗಿ ಭಾವನಾ ಗಂಟು ಮೂಟೆ ಸಮೇತ ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಜಾಕಿ' ಚಿತ್ರದಲ್ಲಿ ಮಿಂಚಿದ್ದ ಈ ಬೆಡಗಿಗೆ ಈಗ ಕನ್ನಡದಲ್ಲಿ ಹೇರಳ ಅವಕಾಶಗಳ ಸುರಿಮಳೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಬೆಂಗಳೂರಿನಲ್ಲಿ ಈಗ ಬಂಗಲೆಯೊಂದನ್ನು ಹುಡುಕುತ್ತಿದ್ದಾರೆ. |
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಬಿಜಿಯಾಗಿದ್ದ ಈಕೆಗೆ 'ಜಾಕಿ' ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದರು ದುನಿಯಾ ಸೂರಿ. ಈಗ ತಮಿಳು, ಮಲಯಾಳಂ ಸೇರಿದಂತೆ ಕನ್ನಡದಲ್ಲಿ ಅವಕಾಶಗಳು ಬರುತ್ತಿರುವ ಕಾರಣ ಬೆಂಗಳೂರಿಗೆ ಅನ್ಯಥಾ ಶರಣಂ ನಾಸ್ತಿ ಎಂದಿದ್ದಾರೆ. ಆದರೆ ಬಂದ ಎಲ್ಲ ಅವಕಾಶಗಳನ್ನು ಭಾವನಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಿಲ್ಲ. |
ಈ ಹಿಂದೆ ದ್ವಾರಕೀಶ್ ನಿರ್ಮಿಸುತ್ತಿರುವ ಸುದೀಪ್ ಅಭಿನಯದ 'ವಿಷ್ಣುವರ್ಧನ' (ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ) ಚಿತ್ರಕ್ಕೆ ಭಾವನಾ ಸಹಿ ಹಾಕಿರುವುದಾಗಿ ಈ ಹಿಂದೆ ಸುದ್ದಿ ಇತ್ತು. ಆದರೆ ತಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ ಭಾವನಾ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಇದಕ್ಕೆ ಕಾರಣವಂತೆ. |
Subsets and Splits
No community queries yet
The top public SQL queries from the community will appear here once available.