text stringlengths 0 61.5k |
|---|
Read more about: ಜಾಕಿ ಭಾವನಾ ಪುನೀತ್ ರಾಜ್ ಕುಮಾರ್ ಬೆಂಗಳೂರು jackie bhavana puneeth rajkumar bangalore |
Actress Bhavana is now becomes as a busiest female artist in Kannada after the hit of her recently released Jackie with Punith Rajkumar. She is also planning to settle in Bangalore and concentrate fully in Kannada. Sources say that the actress is searching a bangalow in the City for her use. |
ಕೊರೊನಾ ವೈರಸ್; ರಾಜ್ಯದಲ್ಲಿ ಆರೋಗ್ಯ ಸಚಿವರ ಕ್ರಮಗಳೇನು? | Separate Ward Opened In Every District Hospital Informed Sriramulu In Mysuru - Kannada Oneindia |
6 min ago ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡಿದ ಸಾ.ರಾ.ಮಹೇಶ್ ಹಾಗೂ ಭವಾನಿ ರೇವಣ್ಣ |
11 min ago ಕಾರವಾರ; ಸಮುದ್ರದ ಆಗುಹೋಗು ತಿಳಿಸಲಿದೆ ಈ ಮುನ್ಸೂಚನಾ ಉಪಕರಣ |
17 min ago ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ: ಆರೋಗ್ಯ ಇಲಾಖೆಗೆ ಬಿಬಿಎಂಪಿ ಪತ್ರ |
ಕೊರೊನಾ ವೈರಸ್; ರಾಜ್ಯದಲ್ಲಿ ಆರೋಗ್ಯ ಸಚಿವರ ಕ್ರಮಗಳೇನು? |
| Published: Monday, February 3, 2020, 19:19 [IST] |
ಮೈಸೂರು, ಫೆಬ್ರವರಿ 03: ದಿನೇ ದಿನೇ ಆತಂಕ ಹೆಚ್ಚಿಸಿರುವ ಕೊರೊನಾ ವೈರಸ್ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ. ಕೊರೊನಾ ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. |
ಮೈಸೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, "ರಾಜ್ಯಕ್ಕೆ ವಿದೇಶದಿಂದ ಬಂದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ರಕ್ತದಲ್ಲಿ ಕೊರೊನಾ ಶಂಕೆ ಇಲ್ಲ ಎಂಬ ವರದಿ ಬಂದಿದೆ. ಉಳಿದವರ ರಕ್ತ ಪರೀಕ್ಷೆ ನಡೆಯುತ್ತಿದೆ" ಎಂದರು. |
ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ? |
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಹತ್ತು ಹಾಸಿಗೆವುಳ್ಳ ವಾರ್ಡ್ ಗಳನ್ನು ಆಸ್ಪತ್ರೆಗಳಲ್ಲಿ ಸಿದ್ಧಗೊಳಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಔಷಧಿಯನ್ನು ಹೊರ ದೇಶದಿಂದಲೂ ತರಿಸಲು ಸಿದ್ಧರಿದ್ದೇವೆ. ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧವಿದೆ ಎಂದರು. |
ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ. ವಿಮಾನ ನಿಲ್ದಾಣಗಳಿಗೆ ಚೀನಾದಿಂದ ಬರುವ ಪ್ರವಾಸಿಗರನ್ನು ಪರೀಕ್ಷೆ ಮಾಡಿ ರಾಜ್ಯಕ್ಕೆ ಬಿಡಲಾಗುವುದು. ಈ ವೈರಸ್ ಬಗ್ಗೆ ಯಾರು ಆತಂಕ ಪಡಬೇಕಾಗಿಲ್ಲ ಎಂದರು |
ಇವರೇ.. ಮೊದಲ ಏಳು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಿದ್ದು |
ಇನ್ನು ಡಿಸಿಎಂ ಹುದ್ದೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಕುರಿತು ನಾನು ಮಾತನಾಡುವುದಿಲ್ಲ. ಈಗ ಅದರ ಬಗ್ಗೆ ಮಾತನಾಡಿ ಪಕ್ಷಕ್ಕೆ, ನಾಯಕರಿಗೆ ಮುಜುಗರ ತರಲು ಬಯಸುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದಲ್ಲಿ ಇರುವವನು. ಪಕ್ಷದ ವರಿಷ್ಠರು ತಗೆದುಕೊಳ್ಳುವ ಕ್ರಮಕ್ಕೆ ನಾನು ಬದ್ಧನಾಗಿರುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾವಿಲ್ಲ. ನಾವೆಲ್ಲರು ಒಗ್ಗಟ್ಟಿನಿಂದ ಇದ್ದೇವೆ" ಎಂದಷ್ಟೇ ಹೇಳಿದರು. |
ಈ ವಾರ ಫುಲ್‍ಟೈಟ್ ಪ್ಯಾತೆ ಸಿನಿಮಾ ತೆರೆಗೆ |
LK ¦ Jul 11, 2019 09:30:21 AM (IST) |
ಚನ್ನಪಟ್ಟಣ: ಕುಡಿತಕ್ಕೆ ದಾಸರಾದವರ ಸ್ಥಿತಿ ಹಾಗೂ ಸಮಾಜ ಆತನನ್ನು ಯಾವ ರೀತಿ ನೋಡುತ್ತದೆ ಎಂಬುದರ ಕಲ್ಪನೆಯ ಆಧಾರದ ಮೇಲೆ, ಪ್ರೇಕ್ಷಕರಿಗೆ ಹಾಸ್ಯ, ಸಾಹಸ, ಕೌಟುಂಬಿಕ, ಕುತೂಹಲ, ವಿಡಂಬನೆಯ ಮುಖಾಂತರ ಸಮಾಜಕ್ಕೆ ಆರೋಗ್ಯಕರ ಸಂದೇಶವನ್ನು ನೀಡಲು ಫುಲ್‍ಟೈಟ್ ಪ್ಯಾತೆ ಸಿನಿಮಾ ಈ ವಾರ ತೆರೆ ಕಾಣಲಿದೆ ಎಂದು ಸಹಾಯಕ ನಿರ್ದೇಶಕ ಶಿವರಾಮನಗರ ತಿಳಿಸಿದರು. |
ಅವರು ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ತೆರದ ವಾಹನದಲ್ಲಿ ಸಿನಿಮಾದ ತುಣುಕು ಪ್ರದರ್ಶನ ಹಾಗೂ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿ, ರೇಷ್ಮೆನಗರಿ ಹಾಗೂ ಬೊಂಬೆನಗರಿಯ ಕಲಾವಿದರ ಸಮ್ಮಿಲನದಲ್ಲಿ, ಮಂಡ್ಯ ಮಳವಳ್ಳಿಯ ಸುತ್ತ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಅಪ್ಪಟ ಗ್ರಾಮೀಣ ಸೊಗಡಿನ ನೈಜತೆಯ ಸಿನಿಮಾವಾಗಿರುವ ಫುಲ್‍ಟೈಟ್ ಪ್ಯಾತೆ ಸಿನಿಮಾ ಇದೇ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಗರದ ಶಿವಾನಂದ ಚಿತ್ರಮಂದಿರದಲ್ಲೂ ಕೂಡ ಇದೇ ವೇಳೆ ಬಿಡುಗಡೆಯಾಗಲಿದೆ ಎಂದರು. |
ಸಿನಿಮಾದಲ್ಲಿ ಹೊಸಮುಖಗಳು ಮೇಳೈಸಲಿದ್ದು, ಜನಪ್ರಿಯ ಹಾಸ್ಯನಟ ಬೀರ್‍ದಾರ್ ಹಲವಾರು ಮಂದಿ ಹಾಸ್ಯಕಲಾವಿದರ ಹಾಸ್ಯ ತುಣುಕುಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ, ಅಲ್ಲದೆ ಈ ಸಿನಿಮಾದಲ್ಲಿ ಮೂರುಮಂದಿ ನಾಯಕರು, ಎಸ್.ಸಿ.ಜಿ.ಪುಟ್ಟಣ್ಣ, ಶಿವರಾಮನಗರ ಹಾಗೂ ಅಜೆಯ್‍ಕೃಷ್ಣ, ಚಿತ್ರದ ನಾಯಕಿಯಾಗಿ ಮಾನಸಗೌಡ ಹಾಗೂ ಖಳನಾಯಕನಾಗಿ ರಾಜು.ಟಿ. ಹಾಗೂ ಆನಂದ್, ಸಾಯಿನಾಗರಾಜು ಸಿನಿಮಾದಲ್ಲಿ ಅಭಿನಯವನ್ನು ನೀಡಿದ್ದಾರೆ. |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಕ್ಕೇರಿ - ವಿಕಿಸೋರ್ಸ್ |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಕ್ಕೇರಿ |
ಹುಕ್ಕೇರಿ - ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಚಿಕ್ಕೋಡಿ, ಪೂರ್ವದಲ್ಲಿ ಗೋಕಾಕ, ದಕ್ಷಿಣದಲ್ಲಿ ಬೆಳಗಾಂವಿ ತಾಲ್ಲೂಕುಗಳೂ ಪಶ್ಚಿಮ ಮತ್ತು ದಕ್ಷಿಣದ ಸ್ವಲ್ಪ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯವೂ ಸುತ್ತುವರಿದಿವೆ. ಎರಡು ಪಟ್ಟಣಗಳಿದ್ದು ಒಟ್ಟು 119 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 992.0 ಚ.ಕಿಮೀ. ಜನಸಂಖ್ಯೆ 3,57,127. |
ತಾಲ್ಲೂಕಿನಲ್ಲಿ ಸಹ್ಯಾದ್ರಿ ಶ್ರೇಣಿಯ ಅನೇಕ ಕವಲುಗಳು ಹಬ್ಬಿಕೊಂಡಿವೆ. ಇವನ್ನು ಘಟಪ್ರಭಾ ಶ್ರೇಣಿಗಳೆಂದೂ ಹೇಳುವುದುಂಟು. ಘಟಪ್ರಭಾ ತಾಲ್ಲೂಕಿನ ಮುಖ್ಯನದಿ. ಈ ನದಿ ತಾಲ್ಲೂಕಿನ ಶೆಟ್ಟಿಹಳ್ಳಿಯ ಬಳಿ ದಕ್ಷಿಣದ ಅಂಚಿನಲ್ಲಿ ತಾಲ್ಲೂಕನ್ನು ಮುಟ್ಟಿ ಪೂರ್ವಾಭಿಮುಖವಾಗಿ ಮತ್ತು ತಾಲ್ಲೂಕಿನ ಗಡಿಯಾಗಿ ಸ್ವಲ್ಪ ದೂರ ಹರಿಯುವುದು. ಮುಂದೆ ಮಹಾರಾಷ್ಟ್ರ ಮತ್ತು ಬೆಳಗಾಂವಿ ತಾಲ್ಲೂಕನ್ನು ಬೇರ್ಪಡಿಸಿ ಅನಂತರ ಈ ತಾಲ್ಲೂಕಿನಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ಗೋಕಾಕ ತಾಲ್ಲೂಕನ್ನು ಸ್ವಲ್ಪ ದೂರ ಪ್ರತ್ಯೇಕಿಸಿ ಅನಂತರ ಗೋಕಾಕ ತಾಲ್ಲೂಕನ್ನು ಪ್ರವೇಶಿಸುವುದು. ಮಾರ್ಕಂಡೇಯ ಮತ್ತು ಹಿರಣ್ಯಕೇಶಿ ಘಟಪ್ರಭಾದ ಉಪನದಿಗಳು. ಹಿಡಕಲ್ಲು ಬಳಿ ಘಟಪ್ರಭಾ ನದಿಗೆ ಒಂದು ದೊಡ್ಡ ಅಣೆಕಟ್ಟನ್ನು ಕಟ್ಟಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 808.19 ಮಿಮೀ. |
ಇಲ್ಲಿನ ನೆಲ ವಿಶೇಷವಾಗಿ ಕಪ್ಪು ಮಣ್ಣಿನದು. ಕಬ್ಬು, ತಂಬಾಕು, ಮೆಣಸಿನ ಕಾಯಿ, ನೆಲಗಡಲೆ, ಬತ್ತ ಮತ್ತು ಜೋಳ ಇಲ್ಲಿನ ಮುಖ್ಯ ಬೆಳೆಗಳು. ಇವುಗಳ ಜೊತೆಗೆ ಹತ್ತಿ, ಗೋದಿ, ದ್ವಿದಳ ಧಾನ್ಯ ಮುಂತಾದು ವನ್ನು ಬೆಳೆಯುತ್ತಾರೆ. ಕೃಷಿ ಹಾಗೂ ವ್ಯಾಪಾರ ತಾಲ್ಲೂಕಿನ ಮುಖ್ಯ ಉದ್ಯೋಗಗಳು. |
ತಾಲ್ಲೂಕು ಕೈಗಾರಿಕೆಯಲ್ಲೂ ಮುಂದಡಿಯಿಟ್ಟಿದೆ. ಇಲ್ಲಿ ಸಕ್ಕರೆ ಕಾರ್ಖಾನೆಯಿದ್ದು ಸಕ್ಕರೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಸ್ತುಗಳ ತಯಾರಿಕೆಯುಂಟು. ಬೆಲ್ಲ, ಪಾದರಕ್ಷೆ, ಸೇಂಗಾ ಎಣ್ಣೆ, ಅಗರಬತ್ತಿ, ಕಂಬಳಿ ಮುಂತಾದವುಗಳ ತಯಾರಿಕೆಗೆ ಈ ತಾಲ್ಲೂಕು ಹೆಸರಾಗಿದೆ. ತಾಲ್ಲೂಕಿನ ಪೂರ್ವದಅಂಚಿನಲ್ಲಿ ಸ್ವಲ್ಪ ದೂರ ಬೆಳಗಾಂವಿ-ಮೀರಜ್ ರೈಲು ಮಾರ್ಗ ಹಾದುಹೋಗಿದೆ. ಬೆಳಗಾಂವಿ-ಸಂಕೇಶ್ವರ-ನಿಪ್ಪಾಣಿ, ಬೆಳಗಾಂವಿ ಹುಕ್ಕೇರಿ-ಚಿಕ್ಕೋಡಿ, ನಿಪ್ಪಾಣಿ-ಸಂಕೇಶ್ವರ-ಹುಕ್ಕೇರಿ-ಗೋಕಾಕ ಜಿಲ್ಲಾ ಹೆದ್ದಾರಿಗಳಿದ್ದು ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ಮಾರ್ಗಸಂಪರ್ಕವಿದೆ. |
ತಾಲ್ಲೂಕಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಸಂಕೇಶ್ವರದ ಉತ್ತರಕ್ಕೆ 6 ಕಿಮೀ ದೂರದಲ್ಲಿರುವ ಅಕ್ಕಿವಾಟ ಒಂದು. ಇದು ಕೊಲ್ಲಾಪುರದ ಅರಸರಿಗೆ ಸೇರಿತ್ತು. 1777ರಲ್ಲಿ ತಾಸಗಾಂವದ ಪರಶುರಾಮ ಭಾವು ಇದನ್ನು ವಶಪಡಿಸಿಕೊಂಡ. ಮುಂದೆ ಈ ಪ್ರದೇಶ ದರೋಡೆಕೋರರಿಗೆ ವಾಸಸ್ಥಾನವಾಗಲು ಕೊಲ್ಲಾಪುರದ ರಾಜ 1827ರಲ್ಲಿ ಬ್ರಿಟಿಷರಿಗೆ ಒಪ್ಪಿಸಬೇಕಾಯಿತು. ಇಲ್ಲೊಂದು ಹಳೆಯ ಕೋಟೆಯಿದೆ. ಸಂಕೇಶ್ವರಕ್ಕೆ ಈಶಾನ್ಯದಲ್ಲಿ 10 ಕಿಮೀ ದೂರದಲ್ಲಿರುವ ಅಮ್ಮಣಗಿಯ ಮಲ್ಲೇಶ್ವರ ದೇವಸ್ಥಾನ ಬಹು ಪ್ರಸಿದ್ಧ. ಇಲ್ಲಿ ಪ್ರತಿ ಸಂಕ್ರಮಣದಲ್ಲಿ ಜಾತ್ರೆ ನಡೆಯುತ್ತದೆ. ಹುಕ್ಕೇರಿಯ ನೈಋತ್ಯದಲ್ಲಿ 5 ಕಿಮೀ ದೂರದಲ್ಲಿರುವ ಅರ್ಜುನವಾಡ ಹಿರಣ್ಯಕೇಶಿ ನದಿಯ ಎಡದಂಡೆಯ ಮೇಲಿದೆ. 12-13ನೆಯ ಶತಮಾನಗಳಲ್ಲಿ ಇದು ಕವಿಳಾಸಪುರವೆಂಬ ಪ್ರಸಿದ್ಧ ತೀರ್ಥಕ್ಷೇತ್ರವಾಗಿತ್ತೆಂದು ತಿಳಿದುಬರುವುದು. ಈಗಿನ ಅರ್ಜುನವಾಡದ ಅಡವಿಯಲ್ಲಿ ಕವಿಳಾಸಪುರದ ದೇವಸ್ಥಾನ ಹಾಗೂ ಶಾಸನಗಳಿವೆ. ಸಂಕೇಶ್ವರದ ಈಶಾನ್ಯಕ್ಕೆ 5 ಕಿಮೀ ದೂರದಲ್ಲಿರುವ ನಿಡುಸೋಸಿಯಲ್ಲಿ ಪ್ರಸಿದ್ಧ ದುರುದುಂಡೀಶ್ವರ ಮಠವಿದೆ. ಇದರ ವತಿಯಿಂದ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಅವಕಾಶವಿದ್ದು ಪ್ರೌಢಶಾಲೆ ಹಾಗೂ ಸಂಸ್ಕøತ ಪಾಠಶಾಲೆಯನ್ನು ನಡೆಸುತ್ತಿದೆ. ಹುಕ್ಕೇರಿಯ ಆಗ್ನೇಯದಲ್ಲಿ 29 ಕಿಮೀ ದೂರದಲ್ಲಿರುವ ಪಾಚ್ಛಾಪುರದಲ್ಲಿ ಹಳೆಯ ಕೋಟೆಯಿದೆ. ಶಿಲಾಶಾಸನಗಳೂ ವೀರಗಲ್ಲುಗಳೂ ಮಾಸ್ತಿಕಲ್ಲುಗಳೂ ಊರಿನಲ್ಲಿವೆ. 18ನೆಯ ಶತಮಾನದ ಕೊನೆಯಲ್ಲಿ ಇಲ್ಲಿನ ರಾಮಚಂದ್ರ ಭೋಜರಾವ್ ದೇಶಪಾಂಡೆ ಎಂಬುವರು ಸಂಸ್ಕøತದಲ್ಲಿ ಚಿದಂಬರಚರಿತ್ರ ಎಂಬ ಕಾವ್ಯವನ್ನೂ ಮರಾಠೀ ಭಾಷೆಯ ಕೆಲವು ಕೃತಿಗಳನ್ನೂ ರಚಿಸಿದುದಾಗಿ ತಿಳಿದುಬರುತ್ತದೆ. ಹುಕ್ಕೇರಿಯ ನೈಋತ್ಯಕ್ಕೆ 6 ಕಿಮೀ ದೂರದಲ್ಲಿರುವ ಬಡಕುಂದ್ರಿ ಹಿರಣ್ಯಕೇಶಿ ನದಿಯ ಬಲದಂಡೆಯಲ್ಲಿದೆ. ಇಲ್ಲಿನ ಲಕ್ಷ್ಮೀ ದೇವಸ್ಥಾನ ಪ್ರಸಿದ್ಧ. ಈ ದೇವಿಯನ್ನು ಹೊಳೆವ್ವ ಎಂದೂ ಕರೆಯುತ್ತಾರೆ. ಹುಕ್ಕೇರಿಯ ನೈಋತ್ಯದಲ್ಲಿರುವ ಯಮಕನಮರಡಿ ಬೆಳಗಾಂವಿ-ಹುಕ್ಕೇರಿ ಮಾರ್ಗದಲ್ಲಿದೆ. ಈ ಊರು ಕೊಲ್ಲಾಪುರದ ಅಧಿಕಾರಿ ಮಾಮಲೇದಾರ ವಿರುಪಣ್ ಅಂಬಾಜಿ ಎಂಬವನಿಂದ ಅಸ್ತಿತ್ವಕ್ಕೆ ಬಂತೆಂದು ತಿಳಿದುಬಂದಿದೆ. 1827ರಲ್ಲಿ ಕೊಲ್ಲಾಪುರ ದರೋಡೆಕೋರರು ಇಲ್ಲಿ ಬಂದು ಸೇರಿದ್ದರಿಂದ ಇಂಗ್ಲಿಷ್ ಅಧಿಕಾರಿಗಳು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇಲ್ಲಿ ಒಂದು ಹಳೆಯ ಕೋಟೆಯಿದೆ. ಈ ಊರಿನ ನಡುವೆ ವೇಣುಗೋಪಾಲಸ್ವಾಮಿ ದೇವಸ್ಥಾನವಿದೆ. ಇಲ್ಲಿ ಒಂದೇ ಸುತ್ತಾಲಯದಲ್ಲಿ ಐದು ಗುಡಿಗಳಿವೆ. ನೇಯ್ಗೆ ಉದ್ಯಮಕ್ಕೆ ಈ ಊರು ಪ್ರಸಿದ್ಧ. ಸಂಕೇಶ್ವರ ಈ ತಾಲ್ಲೂಕಿನ ಒಂದು ಪಟ್ಟಣ. ಸಂಕೇಶ್ವರಕ್ಕೆ ವಾಯವ್ಯದಲ್ಲಿ 3 ಕಿಮೀ ದೂರದಲ್ಲಿರುವ ಹರಗಪುರವನ್ನು ವಲ್ಲಭಗಡ ಎಂದೂ ಕರೆಯುತ್ತಾರೆ. ಇಲ್ಲಿ ಸುಮಾರು 300† ಎತ್ತರದ ಬೆಟ್ಟದ ಮೇಲೆ ವೃತ್ತಾಕಾರದ ಒಂದು ಹಳೆಯ ಕೋಟೆಯ ಅವಶೇಷವಿದೆ. ಈ ಕೋಟೆಗೆ ಎರಡು ಬಾಗಿಲುಗಳಿವೆ. ಕೋಟೆಯ ಒಳಗೆ ನೀರಿನ ನಾಲ್ಕು ಊಟೆಗಳಿವೆ. ಒಂದು ದೊಡ್ಡ ಬಾವಿಯಿದೆ. ಬೆಳಗಾಂವಿ ಜಿಲ್ಲೆಯಲ್ಲಿ ಶಿವಾಜಿ ಆಕ್ರಮಿಸಿ ವಶಪಡಿಸಿಕೊಂಡ ಹತ್ತು ಕೋಟೆಗಳಲ್ಲಿ ಇದೂ ಒಂದು. 1786ರಲ್ಲಿ ನೇಸರ್ಗಿಯ ದೊರೆ ಇದನ್ನು ಕೊಲ್ಲಾಪುರದ ಅರಸರಿಂದ ಕಸಿದುಕೊಂಡ. ಇದನ್ನು ಮತ್ತೆ 1787ರಲ್ಲಿ ಕೊಲ್ಲಾಪುರದ ಅರಸ ಗೆದ್ದುಕೊಂಡ. ಹುಕ್ಕೇರಿಯ ಆಗ್ನೇಯಕ್ಕೆ 14 ಕಿಮೀ ದೂರದಲ್ಲಿರುವ ಹಿಡಕಲ್ಲು ಬಳಿ ಘಟಪ್ರಭಾ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಘಟಪ್ರಭಾ ಯೋಜನೆಯಿಂದ ಈ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದೆ. ಇದರ ಹತ್ತಿರದಲ್ಲಿಯೇ ಘಟಪ್ರಭಾ ಆರೋಗ್ಯಧಾಮ ಇದೆ. ಇಲ್ಲಿ ದೇಶಭಕ್ತರಾದ ನಾ. ಸು. ಹರ್ಡೀಕರ ಇದ್ದರು. ಹುಕ್ಕೇರಿಗೆ ದಕ್ಷಿಣದಲ್ಲಿ 18 ಕಿಮೀ ದೂರದ ಹುನೂರಿನ ಬೆಟ್ಟದ ಮೇಲೆ ಒಂದು ಕೋಟೆಯಿದೆ. ಶಿವಾಜಿ ವಶಪಡಿಸಿಕೊಂಡಿದ್ದ ಹತ್ತು ಕೋಟೆಗಳಲ್ಲಿ ಇದೂ ಒಂದು. ಸು. 1550ರಲ್ಲಿ ಇದನ್ನು ಕೊಲ್ಲಾಪುರದ ರಾಜ ಕಟ್ಟಿಸಿದ್ದೆಂದು ತಿಳಿದುಬರುತ್ತದೆ. |
ಹುಕ್ಕೇರಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿಕ್ಕೋಡಿ-ಬೆಳಗಾಂವಿ ಮತ್ತು ನಿಪ್ಪಾಣಿ-ಗೋಕಾಕ ಮಾರ್ಗಮಧ್ಯದಲ್ಲಿ ಬೆಳಗಾಂವಿಯ ಈಶಾನ್ಯಕ್ಕೆ 48 ಕಿಮೀ ದೂರದಲ್ಲೂ ಸಂಕೇಶ್ವರದ ಆಗ್ನೇಯಕ್ಕೆ 13 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 19,906. ಪಟ್ಟಣ ಹಿರಣ್ಯಕೇಶಿ ನದಿಗೆ ಸೇರುವ ಒಂದು ಹಳ್ಳದ ದಡದಲ್ಲಿದೆ. ಈ ಪಟ್ಟಣ ಮುಖ್ಯ ವ್ಯಾಪಾರ ಕೇಂದ್ರವಾಗಿದ್ದು ಇಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. ಪಟ್ಟಣ ನಗರ ಪಂಚಾಯಿತಿಯ ಆಡಳಿತಕ್ಕೆ ಸೇರಿದೆ. |
ಹುಕ್ಕೇರಿ 14ನೆಯ ಶತಮಾನದಿಂದ ಇತಿಹಾಸಪ್ರಸಿದ್ಧ. 1327ರಲ್ಲಿ ಮಹಮ್ಮದ್‍ಬಿನ್ ತುಗಲಕ್ ಇಲ್ಲಿ ಒಬ್ಬ ಅಮೀರನನ್ನು ನೇಮಿಸಿದ್ದ. 1500ರಲ್ಲಿ ಹುಕ್ಕೇರಿ ಹಾಗೂ ಅದರ ಸುತ್ತಲಿನ ಪ್ರದೇಶ ಫತೇಬಹದ್ದೂರ ಎಂಬ ವಾಜಿದಳದ ಸೇನಾ ನಾಯಕನ ಅಧೀನದಲ್ಲಿತ್ತೆಂದೂ 1502ರಲ್ಲಿ ಇದನ್ನು ಬಿಜಾಪುರದ ಸುಲ್ತಾನ ಯುಸೂಫ್ ಆದಿಲ್‍ಷಾ ತನ್ನ ವಶಕ್ಕೆ ತೆಗೆದುಕೊಂಡನೆಂದೂ ತಿಳಿದುಬರುವುದು. ಈತನ ಕಾಲದಲ್ಲಿಯೆ ಇಲ್ಲಿದ್ದ ಅಧಿಕಾರಿ ಐನ್ ಉಲ್ ಮುಲ್ಕ ಜಿಲಾನಿ ಹುಕ್ಕೇರಿಯ ಕೋಟೆಯನ್ನೂ ಅರಮನೆಯನ್ನೂ ನೀರಿನ ಕಾರಂಜಿಗಳನ್ನೂ ಕಟ್ಟಿಸಿದ. 1542ರಲ್ಲಿ ಈತ ಅಹಮದ್ ನಗರದ ಬುರಾನ್ ನಿಜಾಮ್‍ಷಾನೊಂದಿಗೆ ಸೇರಿ ಬಿಜಾಪುರದ ಸುಲ್ತಾನನನ್ನು ವಿರೋಧಿಸಿದ. ಆದರೆ ಬುರಾನ್ ಷಾ ಸೋಲಲು ಪುನಃ ಬಿಜಾಪುರದ ಷಾನೊಂದಿಗೆ ಸ್ನೇಹವನ್ನು ಬೆಳೆಸಿದ. ಆಗ ಈತನಿಗೆ ಕಿತ್ತೂರ ಸಂಸ್ಥಾನವನ್ನು ಬಳುವಳಿಯೆಂದು ಕೊಡಲಾಯಿತು. ಐನ್ ಉಲ್ ಮುಲ್ಕನ ತರುವಾಯ ಆತನ ತಮ್ಮ ಫತೇ ಮುಲ್ಕನು ಪಟ್ಟಕ್ಕೆ ಬಂದ. ಇವನ ತರುವಾಯ ಬಿಜಾಪುರದ ರಣದುಲ್ಲಾಖಾನ್ (1569) ಹಾಗೂ ಆತನ ಪುತ್ರ ರುಸ್ತುಮ್ ಜಮಾನ್ (1616) ಹುಕ್ಕೇರಿಗೆ ಅಧಿಕಾರಿಗಳಾಗಿದ್ದರು. ರುಸ್ತುಮ್ ಇಲ್ಲಿನ ಚೀನೀ ಗುಮ್ಮಟವನ್ನೂ ಕದಮ್ ರಸೂಲ್ ಮಸೀದಿಯನ್ನೂ ಕಟ್ಟಿಸಿದ. ರುಸ್ತುಮನ ತರುವಾಯ ಅಬ್ದುಲ್ ಖಾದರ್ ಹುಕ್ಕೇರಿಗೆ ಒಡೆಯನಾದ. ಪನಹಾಲದ ದೊರೆ ಇವನನ್ನು ಅಧಿಕಾರದಿಂದ ಇಳಿಸಿದ. 1643ರಲ್ಲಿ ಈತ ಮರಣಹೊಂದಿದ. 1668-86ರ ವರೆಗೆ ಹುಕ್ಕೇರಿಯನ್ನು ಇಂದುರಾವ್ ಘೋರ್ಪಡೆ ಆಳಿದುದಾಗಿ ತಿಳಿದುಬರುತ್ತದೆ. ಅನಂತರ ಹುಕ್ಕೇರಿ ಒಂದು ದೇಶಗತಿ ಯಾಯಿತು. ಈ ದೇಸಾಯಿಯು ಸಂಸ್ಥಾನಿಕ ನೆನ್ನಿಸಿಕೊಂಡ. 1687ರಲ್ಲಿ ಮುಗಲರು ಬಿಜಾಪುರವನ್ನು ನಾಶಮಾಡಿದಾಗ ದೇಸಾಯಿ ಸ್ವತಂತ್ರನಾಗಿ ಆಳಲು ಆರಂಭಿಸಿದ. ಈ ಮನೆತನದವರೇ ವಂಟಮುರಿ ದೇಸಾಯರ ಮನೆತನದ ಪೂರ್ವಿಕರೆಂದು ತಿಳಿದುಬರುತ್ತದೆ. 1763ರಲ್ಲಿ ನಾಲ್ಕನೆಯ ಪೇಶ್ವೆ ಮಾಧವರಾವ್ ದೇಸಾಯಿಯವರ ಮನೆತನವನ್ನು ಮುರಿದು ಸಂಸ್ಥಾನವನ್ನು ಕೊಲ್ಲಾಪುರದ ದೊರೆಗೆ ಪ್ರತಿವರ್ಷ 5,00,000 ಹಣವನ್ನು ನಜರ್ ಕೊಡುವಂತೆ ತಿಳಿಸಿ ಒಪ್ಪಿಸಿಕೊಟ್ಟ. ಆದರೆ ಕೊಲ್ಲಾಪುರದ ದೊರೆ ನಜರ್ ಕೊಡದಿರಲು ಪುನಃ ಸಂಸ್ಥಾನವನ್ನು ಹಿಂತೆಗೆದುಕೊಂಡು ಒಬ್ಬ ಮಾಮಲೆದಾರನನ್ನು ನೇಮಿಸಿದ. ನಿಪ್ಪಾಣಿಯ ದೇಸಾಯಿ ಜನರಲ್ ವೆಲ್ಲಸ್ಲಿಗೆ ಸಹಾಯ ಮಾಡಿದುದಕ್ಕೆಂದು ಪೇಶ್ವೆ ಹುಕ್ಕೇರಿಯನ್ನು ಚಿಕ್ಕೋಡಿ ಹಾಗೂ ಮನೋಳಿ ಭಾಗಗಳೊಂದಿಗೆ 1804ರಲ್ಲಿ ಬಹುಮಾನವೆಂದು ದೇಸಾಯಿಗೆ ಉಂಬಳಿಯಾಗಿ ಕೊಟ್ಟ. 1827ರ ಹೊತ್ತಿಗೆ ಹುಕ್ಕೇರಿ ಪುನಃ ಕೊಲ್ಲಾಪುರದ ದೊರೆಗಳಿಗೆ ಸೇರಿತು. 1906ರಲ್ಲಿ ಬ್ರಿಟಿಷರ ಆಳಿಕೆಯಲ್ಲಿ ಇದು ಸ್ವತಂತ್ರ ತಾಲ್ಲೂಕಾಯಿತು. ಇಂದಿಗೂ ಉಳಿದು ನಿಂತಿರುವ ಇಲ್ಲಿನ ದರ್ಗಾ, ಮಸೀದಿ, ಜೋಡಿಗುಮ್ಮಟಗಳೂ ಅರಮನೆ, ಕಾರಂಜಿ ಇವು ಬಹು ಆಕರ್ಷಕವಾಗಿವೆ. (ಎಸ್.ಎಸ್.ಜೆ.ಎ.) |
"https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಹುಕ್ಕೇರಿ&oldid=89577" ಇಂದ ಪಡೆಯಲ್ಪಟ್ಟಿದೆ |
ಚಾರ್ ಧಾಮ್ ಯಾತ್ರೆ - ಋಷಿಕೇಶ ಮತ್ತು ಹರಿದ್ವಾರ (ಕೊನೆಯ ಭಾಗ) | ವಿಸ್ಮಯ ನಗರಿ - ನಿಮ್ಮ ಮೆಚ್ಚಿನ ತಾಣ |
ಚಾರ್ ಧಾಮ್ ಯಾತ್ರೆ - ಋಷಿಕೇಶ ಮತ್ತು ಹರಿದ್ವಾರ (ಕೊನೆಯ ಭಾಗ) |
ಬರೆದಿದ್ದುJuly 16, 2009 |
4ಅನಿಸಿಕೆಗಳು |
http://vismayanagari.com/node/4713 |
ಚಾರ್ ಧಾಮ್ ಯಾತ್ರೆ - ಋಷಿಕೇಶದ ಮೂಲಕ ಹರಿದ್ವಾರಕ್ಕೆ............(ಕೊನೆಯ ಭಾಗ) |
ಬೆಳಿಗ್ಗೆದ್ದು ನಾವು ನಮ್ಮ ಕೊನೆಯ ಹಂತದ ಪ್ರಯಾಣ ಮುಂದುವರೆಸಿದೆವು. ನಾವು ಚಾರ್ ಧಾಮ್ ಯಾತ್ರೆಗಾಗಿ ಹೊರಟ ಸ್ಥಳ ಹರಿದ್ವಾರಕ್ಕೆ ವಾಪಸ್ಸು ಹೊರಟಿದ್ದೆವು. ನಾವು ಹೋಗುವಾಗ ಋಷಿಕೇಶದಲ್ಲಿ ಬರಿಯ ವಾಹನದ ಪರವಾನಿಗಿ ತೆಗೆದುಕೊಂಡಿದ್ದೆವು ಸ್ಥಳ ನೋಡಿರಲಿಲ್ಲ. ಆದ್ದರಿಂದ ಈಗ ಋಷಿಕೇಶದ ಲಕ್ಷಮಣನ ದೇವಸ್ಥಾನ ಮತ್ತು ಲಕ್ಷ್ಮಣ ಜೂಲ, ಗೀತಾ ಮಂದಿರ್, ಸ್ವಾಮಿ ಶಿವಾನಂದರ ಆಶ್ರಮ ಎಲ್ಲಾ ನೋಡುವ ಅವಕಾಶ ಮಾಡಿಕೊಂಡಿದ್ದೆವು. ದಾರಿಯಲ್ಲಿ ಒಂದು ಚಿಕ್ಕ ಉಪಹಾರ ಮಂದಿರದಲ್ಲಿ, ಬೆಳಗಿನ ಉಪಹಾರ ಮಾಡಿ, ನಾವು ಋಷಿಕೇಶಕ್ಕೆ ಬಂದು ತಲುಪಿದಾಗ ಆಗಲೇ ೨ ಘಂಟೆಯ ಹತ್ತಿರವಾಗಿತ್ತು. ಪರ್ವತ ಪ್ರದೇಶದಿಂದ ಹಿಂತಿರುಗಿದ್ದ ನಮಗೆ, ಋಷಿಕೇಶದ ಬಿಸಿಲು ಅಸಾಧ್ಯ ಅನ್ನಿಸಿತು. ಊಟಕ್ಕಾಗಿ ನಮ್ಮ ಹುಡುಕಾಟ ನಡೆಯುತ್ತಿದ್ದಾಗ, ನಮಗೆ ಒಬ್ಬ ಮಾರ್ಗದರ್ಶಿ ಸಿಕ್ಕಿದ. |
ಈ ಸ್ಥಳದಲ್ಲಿ ಮಾರ್ಗದರ್ಶಿಗಳಿಲ್ಲದೆ ನಾವೇ ಸುತ್ತಿ ನೋಡಲು ನಮಗೆ ಸ್ಥಳದ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಎಲ್ಲೂ ನಮಗೆ ಊಟಕ್ಕೆ ಅನ್ನ ಸಿಕ್ಕಲಿಲ್ಲವೆಂದಾಗ, ಆ ಮಾರ್ಗದರ್ಶಿ ನಮ್ಮನ್ನು ಒಂದು ಕಡೆ ಕರೆದುಕೊಂಡು ಹೋದರು. ಅಲ್ಲಿ, ಸ್ವಲ್ಪ (ಬಿರುಸಾಗಿತ್ತು) ಅನ್ನ ಮತ್ತು ಮೊಸರು ಸಿಕ್ಕಿತು. ತಿಂದು ನಾವು ನೇರವಾಗಿ ಲಕ್ಶ್ಮಣ ಜೂಲದ ಹತ್ತಿರ ಹೋದೆವು. ಸೇತುವೆಯ ಮೇಲೆ ಈಗ ದ್ವಿಚಕ್ರ ವಾಹನಗಳನ್ನೂ ಕೂಡ ಓಡಿಸುತ್ತಾರಾದ್ದರಿಂದ, ತುಂಬಾ ಗಿಜಿಗುಟ್ಟುತ್ತಿರುತ್ತದೆ. ಅಲ್ಲಿ ನಿಂತು ಒಂದೇ ಒಂದು ಚಿತ್ರ ತೆಗೆದುಕೊಳ್ಳುವಷ್ಟರಲ್ಲಿ, ನಮಗೆ ಸಾಕು ಸಾಕಾಗಿತ್ತು. ನಾವು ಜೂಲ ದಾಟಿ, ಗೀತಾ ಮಂದಿರ, ರುದ್ರಾಕ್ಷಿ ಮರ, ಅತಿ ದೊಡ್ಡದಾದ ಈಶ್ವರನ ವಿಗ್ರಹ ಎಲ್ಲಾ ನೋಡಿಕೊಂಡು, ವಾಪಸ್ಸು ಬಂದು, ಶ್ರೀ ಲಕ್ಶ್ಮಣನ ದೇವಸ್ಥಾನ ನೋಡಿದೆವು. ಇಲ್ಲಿ ಬಿಟ್ಟರೆ, ಲಕ್ಶ್ಮಣನ ದೇವಸ್ಥಾನ ಇನ್ನೆಲ್ಲೂ ಇಲ್ಲವಂತೆ. ನಾವು ನಮ್ಮ ವಾಹನದಲ್ಲೇ ಕುಳಿತು, ನದಿ, ರಾಮ ಜೂಲ ನೋಡುತ್ತಿರುವಾಗ, ನಮಗೆ ಪಕ್ಕದಲ್ಲೇ ಶ್ರೀ ಶಿವಾನಂದ ಆಶ್ರಮದ ಫಲಕ ಕಾಣಿಸಿತು. ಅಷ್ಟುಹೊತ್ತಿಗಾಗಲೇ, ೬ ಘಂಟೆಯ ಸಮಯ. ಸರಿ ನಾವು ಆಶ್ರಮದೊಳಗೆ ಹೋದ ತಕ್ಷಣ, ಆರತಿ ಶುರುವಾಯಿತು. ಆಶ್ರಮ ಅತ್ಯಂತ ಶುದ್ಧವಾಗಿ, ಶಾಂತವಾಗಿ,, ಸುಂದರವಾಗಿದೆ. ವಿಧ ವಿಧವಾದ ಆರತಿಗಳನ್ನು, ರಾಗವಾಗಿ, ಮಂತ್ರ ಹೇಳುತ್ತಾ, ಮಾಡುವಾಗ ನೋಡುವುದೇ ಒಂದು ವೈಭೋಗ ಅನ್ನಿಸಿತು. ನಾವು ಪ್ರದಕ್ಷಿಣೆ ಹೋದಾಗ, ಪಕ್ಕದಲ್ಲಿ, ಶ್ರೀ ಶಂಕರಾಚಾರ್ಯರ ತುಂಬಾ ಮುದ್ದಾದ ಮೂರ್ತಿಯನ್ನು ನೋಡಿದೆವು. ಅಷ್ಟು ಸುಂದರವಾಗಿ, ಜೀವಕಳೆಯಿರುವ ಮೂರ್ತಿ ನಮ್ಮನ್ನು ಸ್ವಲ್ಪ ಹೊತ್ತು ಮೈ ಮರೆಯುವಂತೆ ಮಾಡಿತು. ಹೊರಗಡೆ ಬರುವ ಬಾಗಿಲಿನಲ್ಲಿ ನಮಗೆ ಹೆಸರು ಕಾಳಿನ ಉಸಳಿ, ಬೂದುಕುಂಬಳ ಕಾಯಿಯ ಮೊರಬ್ಬ, ಹೆಸರು ಬೇಳೆ ಮತ್ತು ಅಕ್ಕಿ ಬೇಯಿಸಿ ತಯಾರಿಸಿದ, ಹುಗ್ಗಿ ಯನ್ನು ಪ್ರಸಾದದ ರೂಪದಲ್ಲಿ ಕೊಟ್ಟರು. ರುಚಿಯಾಗಿತ್ತು. ಹೊರಗೆ ಬಂದು ಹತ್ತು ಹೆಜ್ಜೆ ಪಕ್ಕಕ್ಕೆ ನಡೆದರೆ ಶ್ರೀ ಶಿವಾನಂದರ ಸಮಾಧಿ ಸ್ಥಳ ಮತ್ತು ಧ್ಯಾನ ಕೇಂದ್ರ ಇದೆ. ಅಲ್ಲಿ ಒಳಗೆ ಕಾಲಿಟ್ಟಾಕ್ಷಣ ನಮ್ಮನ್ನು ಒಂಥರಾ ನೆಮ್ಮದಿ ಆವರಿಸಿಕೊಂಡು ಬಿಡತ್ತೆ. ಅನೇಕರು ಮೌನವಾಗಿ ಕುಳಿತು ಧ್ಯಾನಿಸುತ್ತಿರುತ್ತಾರೆ. ಕೆಳಗೆ ಕುಳಿತುಕೊಳ್ಳಲಾಗದವರಿಗಾಗಿ, ಕೆಲವು ಕುರ್ಚಿಗಳನ್ನೂ ಹಾಕಿದ್ದಾರೆ. ಉದ್ದನೆಯ ಕೊಠಡಿ ಮತ್ತು ಒಳಗಿನ ತುದಿಯಲ್ಲಿ, ಶ್ರೀ ಸ್ವಾಮೀಜಿಗಳ ಸಮಾಧಿ. ನಾವು ಅಲ್ಲಿ ಬರೆದು ಹಾಕಿದ್ದ ಸ್ವಾಮೀಜಿಗಳ ನುಡಿಮುತ್ತುಗಳನ್ನು ಓದಿದೆವು ಮತ್ತು ಸಮಾಧಿಗೆ ನಮಸ್ಕರಿಸಿದೆವು. ಅಮೃತಶಿಲೆಯಲ್ಲಿ ಮಾಡಿರುವ ಸಮಾಧಿಯ ಮೇಲುಗಡೆ ಸ್ವಾಮಿಗಳ ಪಾದಗಳಿವೆ. ಒಂದು ಸುತ್ತು ಬಂದು, ಪಾದಮುಟ್ಟಿ ನಮಸ್ಕರಿಸಬಹುದು. ನಾವೂ ನಮಿಸಿ, ಮೌನವಾಗಿ ಆಚೆ ಬಂದೆವು. ಅಲ್ಲಿ ಕಳೆದ ಒಂದು ೧೦ ನಿಮಿಷದ ಅವಧಿ, ನಮ್ಮ ಮನಸ್ಸಿಗೆ ನೆಮ್ಮದಿ ಕೊಟ್ಟಿತ್ತು. ನಾವು ಆಶ್ರಮದಲ್ಲಿ ಆರತಿ ನೋಡಲು ಹೋಗಿದ್ದರಿಂದ, ಗಂಗಾನದಿಯಲ್ಲಿಯ ಆರತಿ ನೋಡಲಾಗಲಿಲ್ಲ, ಆದರೆ ಆಚೆ ದಡದಲ್ಲಿ ನಿಂತು, ದೀಪಗಳನ್ನು ಹಚ್ಚಿ, ತೇಲಿ ಬಿಡುತ್ತಿದ್ದುದನ್ನು ನೋಡಿದೆವು. ನೇರವಾಗಿ ಹರಿದ್ವಾರ ತಲುಪಿ, ಹೋಟೆಲ್ ಕಿಂಗ್ಸ್ ಇನ್ ನಲ್ಲಿ ಇಳಿದು, ಬಿಸಿ ನೀರಿನ ಸ್ನಾನ ಮುಗಿಸಿ, ಊಟ ಬೇಡವೆಂದು, ಹಾಲು ಕುಡಿದು ಮಲಗಿ ಬಿಟ್ಟೆವು. |
ಬೆಳಿಗ್ಗೆ ಎದ್ದು ಹರಿದ್ವಾರದ ದೇವಸ್ಥಾನಗಳನ್ನು ನೋಡಲು ಹೊರಟೆವು. ಎದುರು ಬದುರಿನಲ್ಲಿರುವ ಎರಡು ಗುಡ್ಡಗಳಲ್ಲಿ ದೇವಿಯ ದೇವಸ್ಥಾನಗಳಿವೆ. ಎರಡೂ ಕಡೆ ಮೇಲೆ ಹೋಗಲು ಕೇಬಲ್ ಕಾರ್ಗಳಿವೆ. ನಮಗೆ ಒಂದು ಕಡೆ ಹೋಗಿ ಬರುವುದರೊಳಗೇ ಹೊತ್ತಾಗಿಹೋಯಿತು. ಅದೂ ಅಲ್ಲದೆ ಕಳೆದ ೧೦-೧೨ ದಿನಗಳಿಂದ ಆದ ಆಯಾಸ, ಹರಿದ್ವಾರದ ಬಿಸಿಲ ಜೊತೆಗೆ ನಮ್ಮನ್ನು ತುಂಬಾ ಸುಸ್ತು ಮಾಡುತ್ತಿತ್ತು. ಸರಿಯಾದ ದ್ರಾವಣದ ಸರಬರಾಜಿಲ್ಲದೆ, ನಮ್ಮ ದೇಹಗಳು ಆಯಾಸಗೊಂಡಿದ್ದವು. ನಾವು ಕೆಳಗಿಳಿದು ಬಂದಾಗ ಅಲ್ಲಿ ಮೂಸಂಬಿ ರಸ ಎರಡೆರಡು ಲೋಟ ಕುಡಿದು, ನೇರವಾಗಿ ಹೋಟೆಲ್ ಗೆ ಬಂದು, ಊಟ ಮಾಡಿ ಚೆನ್ನಾಗಿ ನೀರು ಕುಡಿದು ಮಲಗಿಬಿಟ್ಟೆವು. ಮತ್ತೆ ೪ ಘಂಟೆಗೆ ಎದ್ದು, ಮಾನಸ ದೇವಿ ದೇವಸ್ಥಾನಕ್ಕೆ ಹೋದೆವು. ಇಲ್ಲಿ ನಾವು ಸರತಿ ಸಾಲಿನಲ್ಲಿ ನಿಂತಿದ್ದಾಗ, ಬೊಂಬೆಯ ಕುಣಿತ ನಡೆಯುತ್ತಿತ್ತು. ಒಬ್ಬ ಚಿಕ್ಕ ೮-೧೦ ವರ್ಷದ ಹುಡುಗ ಹಿಂದಿ ಹಾಡುಗಳನ್ನು ಹಾಡುತ್ತಿದ್ದ, ಅವನ ತಂದೆ ಡೋಲಕ್ ನುಡಿಸುತ್ತಿದ್ದರು ಮತ್ತು ಇನ್ನೊಬ್ಬ ವ್ಯಕ್ತಿ, ಬೊಂಬೆಗಳ ದಾರ ಹಿಡಿದು ಪರದೆಯ ಹಿಂದಿನಿಂದ ಹಾಡಿನ ಗತಿಗೆ ತಕ್ಕಂತೆ ಬೊಂಬೆಗಳನ್ನು ಆಡಿಸುತ್ತಿದ್ದರು. ಸಾಲಿನಲ್ಲಿ ಕಾಯುವ ಬೇಸರ ಕಳೆದು, ಎಲ್ಲರನ್ನೂ ಆ ಹುಡುಗ ತನ್ನ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಸೆಳೆಯುತ್ತಿದ್ದ. ನಾವು ದೇವಿಯ ದರ್ಶನ ಮಾಡಿ ವಾಪಸ್ಸು ಬಂದು ಹರೀ ಕಿ ಪೌರಿಗೆ ಗಂಗೆಯ ಆರತಿ ನೋಡಲು ಹೋದೆವು. ಹರಿದ್ವಾರದಲ್ಲಿ ಈ ಗಂಗಾಮಾಯಿಯ ಆರತಿ ಅತ್ಯಂತ ಜನಪ್ರಿಯವಾಗಿದೆ. ನಾವು ಮೇಲೆ ಮಾನಸಾದೇವಿಯ ದೇವಸ್ಥಾನದಲ್ಲಿ ಇದ್ದಾಗಲೇ ಸಿಕ್ಕಾಪಟ್ಟೆ ಗಾಳಿ ಶುರುವಾಗಿತ್ತು. ಇಡೀ ಹರಿದ್ವಾರ ಮೋಡದಲ್ಲಿ ಮುಸುಕಿ ಮಳೆಯ ಮುನ್ಸೂಚನೆ ಕೊಡುತ್ತಿತ್ತು. ನಾವು ಹರೀ ಕಿ ಪೌರಿ ಹತ್ತಿರ ಬರುವ ಹೊತ್ತಿಗಾಗಲೇ ಅಲ್ಲಿ ಸಾವಿರಾರು ಜನರು ಸೇರಿದ್ದರು. ಸ್ವಲ್ಪ ಕತ್ತಲಾಗುತ್ತಿದ್ದಂತೆಯೇ ಧ್ವನಿವರ್ಧಕದಲ್ಲಿ "ಓಂ ಗಂಗೇ ಮಾಯಿ....", ನಾವು ಓಂ ಜೈ ಜಗದೀಶ ಹರೇ ಎಂದು ಹಾಡುವ ರಾಗದಲ್ಲಿ ಶುರುವಾಗುತ್ತಿದ್ದಂತೆ, ಗಂಗಾನದಿಯ ತಟದಲ್ಲಿರುವ ಎಲ್ಲಾ ಚಿಕ್ಕ ದೊಡ್ಡ ದೇವಸ್ಥಾನಗಳಲ್ಲೂ ಆರತಿ ಶುರುವಾಯಿತು. ಕತ್ತಲಾಗುತ್ತಿದ್ದ ಹಿನ್ನೆಲೆಯಲ್ಲಿ, ಈ ಆರತಿಯ ಬೆಳಕು ಮತ್ತು ಭಕ್ತರು ಗಂಗೆಯಲ್ಲಿ ತೇಲಿಬಿಟ್ಟ ಚಿಕ್ಕ ಚಿಕ್ಕ ದೀಪಗಳು ಎಲ್ಲವೂ ರೋಮಾಂಚನಗೊಳ್ಳುವಂತೆ ಮಾಡತ್ತೆ. ಸುಮಾರು ೨೦ ನಿಮಿಷದ ತನಕ ನಡೆಯುವ ಈ ಆರತಿ ನಿಜವಾಗಿ ಒಮ್ಮೆ ನೋಡಿದರೇ ನಮಗೆ ಅದರ ಆನಂದ ಅರ್ಥವಾಗುವುದು. ಜೊತೆ ಜೊತೆಯಲ್ಲಿ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾ ಬೆಳಕು ಒಂದು ಬೇರೆಯದೇ ಆದ ವಾತಾವರಣವನ್ನು ಸೃಷ್ಟಿಸಿತ್ತು. ಮಳೆ ಹನಿಗಳು ಶುರುವಾದಾಗ, ನಾವು ದೌಡಾಯಿಸಿ ನಮ್ಮ ಇನೋವಾ ಏರಿ ಹೋಟೆಲ್ ಗೆ ವಾಪಸ್ಸು ಬಂದೆವು. ಬೆಳಿಗ್ಗೆ ನಮಗಾಗಿ ವಿಶೇಷವಾಗಿ (ಅಕ್ಕಿ ಅಂಗಡಿಯಿಂದ ತರಿಸಿ) ಮಾಡಿದ್ದ ಮೊಸರನ್ನ, ಚಟ್ನಿ, ಆಲೂಗಡ್ಡೆ ಪಲ್ಯ ತಿಂದು ಮಲಗಿದರೆ ನಮ್ಮ ಕೈ ಕಾಲುಗಳು ನಮ್ಮ ವಿರುದ್ಧ ಮುಷ್ಕರ ಹೂಡಿ, ರಂಪ ಆರಂಭಿಸಿಬಿಟ್ಟಿದ್ದವು. ಕೊನೆಗೆ ತಡೆಯಲಾರದೆ ಮಾತ್ರೆ ನುಂಗಿ ನಿದ್ದೆ ಮಾಡಿದೆವು, ಏಕೆಂದರೆ ಬೆಳಿಗ್ಗೆ ಮತ್ತೆ ನಾವು ಇನೋವಾದಲ್ಲಿ ೭ - ೮ ಘಂಟೆಗಳ ಕಾಲ ಕುಳಿತು, ೩ ಘಂಟೆಯ ಒಳಗೆ ದೆಹಲಿಯ ವಿಮಾನ ನಿಲ್ದಾಣ ತಲುಪಬೇಕಿತ್ತು. |
ನಮ್ಮ ಇನೋವಾ ಸಾರಥಿ ಪೂರನ್ ಸಿಂಗ್ ನಮ್ಮನ್ನು ಈ ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕರೆದುಕೊಂಡು ಬಂದರು. ನಾವು ಪತಂಜಲಿಯವರ ಆಶ್ರಮದಲ್ಲಿ ಬೆಳಗಿನ ಉಪಹಾರ ತಿಂದೆವು ಮತ್ತು ಸುಮಾರು ೨.೩೦ಗೆ ದೆಹಲಿ ವಿಮಾನ ನಿಲ್ದಾಣ ತಲುಪಿದೆವು. ದೆಹಲಿಯ ವಾಹನ ದಟ್ಟಣೆಯ ಬಗ್ಗೆ ತಿಳಿದಿದ್ದ ನನ್ನವರು, ನಮ್ಮನ್ನು ಬೆಳಿಗ್ಗೆ ಬೇಗನೆ ಹೊರಡುವಂತೆ ಮಾಡಿದ್ದರಿಂದ, ನಾವು ಸರಿಯಾದ ಸಮಯಕ್ಕೆ ತಲುಪಿದ್ದೆವು. ನಮ್ಮ ಪ್ರಯಾಣ ಬೆಂಗಳೂರಿಗೆ, ಸ್ಪೈಸ್ ಜೆಟ್ ನಲ್ಲಿ ೫.೩೦ ಘಂಟೆಯ ವಿಮಾನದಲ್ಲಿ ಕಾಯ್ದಿರಿಸಲಾಗಿತ್ತು. ವಿಮಾನ ಹೊರಡುವ ೧೫ ನಿಮಿಷಗಳ ಮೊದಲು ಶುರುವಾದ ಗಾಳಿ ನಮ್ಮ ಪ್ರಯಾಣವನ್ನು ೧.೩೦ ಘಂಟೆ ತಡಮಾಡಿತ್ತು, ಪರಿಣಾಮ ನಾವು ಬೆಂಗಳೂರಿನಲ್ಲಿ ಇಳಿದಾಗ ರಾತ್ರಿ ೯.೩೦ ಘಂಟೆಯಾಗಿ ಹೋಗಿತ್ತು. ನಮ್ಮ ಲಗ್ಗೇಜ್ ನಲ್ಲಿ ನನ್ನ ಸೂಟ್ಕೇಸ್ ಬರದೇ, ನಾವು ಅದಕ್ಕಾಗಿ ಕಾದು, ದೂರು ಬರೆದುಕೊಟ್ಟು ವಿಮಾನ ನಿಲ್ದಾಣದಿಂದ ಆಚೆ ಬಂದಾಗ, ರಾತ್ರಿ ೧೧ ಘಂಟೆಯಾಗಿತ್ತು. ಹೊಟ್ಟೆ ತಾಳ ಮದ್ದಲೆಗಳನ್ನು ಆರಂಭಿಸಿ ಆಗಲೇ ತುಂಬಾ ಹೊತ್ತಾಗಿತ್ತು. ನಮಗಾಗಿ ಬಂದಿದ್ದ ಗಾಡಿಯಲ್ಲಿ ಕುಳಿತು, ಬೆಂಗಳೂರಿನ ಎಲ್ಲಾ ಹೋಟೆಲ್ ಗಳನ್ನೂ ನೋಡುತ್ತಾ ಬಂದಾಗ, ನಮಗೆ ಎಲ್ಲೂ ತಿನ್ನಲು ಏನೂ ಸಿಗದೆ, ಕೊನೆಗೆ ಸಜ್ಜನರಾವ್ ವೃತ್ತದ ಬಳಿ, ತೆಗೆದಿದ್ದ ಒಂದೇ ಒಂದು ಕಡೆ ಬಿಸಿ ಇಡ್ಲಿ ಮತ್ತು ಚಿತ್ರಾನ್ನ ಸಿಕ್ಕಿತು. ಅದನ್ನೇ ಪರಮಾನ್ನವೆಂದು ತಿಂದು, ನಮ್ಮ ಮನೆಗೆ ಬಂದು ಇಳಿದಾಗ, ನನ್ನವರು ನನಗೊಂದು ಶಾಕ್ ಕೊಟ್ಟರು...... "ನನ್ನ ಕೈಚೀಲ ಇಲ್ಲವೆಂದು". ಅದರಲ್ಲಿ ನಮ್ಮ ವೀಡಿಯೋ ಕ್ಯಾಮೆರಾ ಮತ್ತು ಕಾಗದಗಳು ಇದ್ದವು. ಸರಿ ನಮ್ಮನ್ನು ಬಿಟ್ಟು ಅವರು ಮತ್ತದೇ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋದರು. ದೇವರ ದಯೆಯಿಂದ ಅಲ್ಲಿಯ ಸಿಬ್ಬಂಧಿ ಹುಡುಗ ಅದನ್ನು ತಪಾಸಣೆ ಕಿಟಕಿಯಲ್ಲಿ ಕೊಟ್ಟಿದ್ದ. ಆ ಜಾಗದಲ್ಲಿ ಸಿ ಸಿ ಟಿವಿಗಳನ್ನು ಅಳವಡಿಸಿರುವುದರಿಂದ ಯಾವುದೇ ವಸ್ತು ಕಳ್ಳತನ ಆಗುವುದಿಲ್ಲವೆಂದು ತಿಳಿಯಿತು. ನಮ್ಮಂತೇ ಇನ್ನೂ ಕೆಲವರ ವಸ್ತುಗಳು ಆ ಕಿಟಕಿಯಲ್ಲಿ ಇಡಲ್ಪಟ್ಟಿದ್ದವಂತೆ. ಇವರ ಚೀಲ ಅದರ ಒಡೆಯನಿಲ್ಲದೇ ಅನಾಥವಾಗಿ ಟ್ರಾಲಿಯಲ್ಲಿ ಕುಳಿತಿತ್ತಾದ ಕಾರಣ, ನನ್ನವರು ಅಲ್ಲಿಗೆ ತಲುಪುವಷ್ಟರಲ್ಲಿ ಬಾಂಬ್ ದಳದವರು ಬಂದು ಅದನ್ನು ಪರೀಕ್ಷೆ ಮಾಡಿ, ಎಲ್ಲಾ ಅವಾಂತರವೂ, ಸಂಭ್ರಮವೂ ಮುಗಿದಿತ್ತು!!!!!!. ಆದರೆ ಅದನ್ನು ಹುಡುಕುತ್ತಾ ಹೋದ ನನ್ನವರ ಹತ್ತಿರ ತನ್ನ ಗುರುತು ಹೇಳಲು ಏನೂ ಇರಲಿಲ್ಲ. ಒಳಗೆ ನನ್ನ ಸೂಟ್ಕೇಸ್ ಗಾಗಿ ದೂರು ಸಲ್ಲಿಸಿದಾಗ, ಅದರ ಕರಡು ಪ್ರತಿಯ ಜೊತೆ ಅವರ ಬೋರ್ಡಿಂಗ್ ಪಾಸ್ ನನ್ನ ಹತ್ತಿರ ಬಂದು ಬಿಟ್ಟಿತ್ತು. ಅಂತೂ ಇಂತೂ ಅಲ್ಲಿನ ಅಧಿಕಾರಿಗಳನ್ನು ತೃಪ್ತಿಪಡಿಸಿ, {ಬೇಕಾದರೆ ವೀಡಿಯೋ ಕ್ಯಾಮೆರಾ ತೆಗೆದು ನೋಡಿ, ನನ್ನ ಚಿತ್ರ ಇದೆ, ಈಗ ಸಧ್ಯಕ್ಕೆ ನನ್ನ ಹತ್ತಿರ ಇರುವ ಗುರುತು ಅದೊಂದೇ ಎಂದು ಹೇಳಿದರಂತೆ.. :-) } ಚೀಲ ತೆಗೆದುಕೊಂಡು ಮನೆಗೆ ಬಂದು ಸೇರಿದಾಗ ಮಧ್ಯರಾತ್ರಿಯ ೩ ಘಂಟೆಯಾಗಿತ್ತು. ನಮ್ಮ ಊರಿನಿಂದ ದೂರದಲ್ಲಿ ಏನೂ ತೊಂದರೆಯಾಗದೆ, ಮನೆಗೆ ವಾಪಸ್ಸು ಬಂದಾಗ ಇಷ್ಟೆಲ್ಲಾ ಫಜೀತಿ ಅನುಭವಿಸುವಂತಾಯಿತು. ಮಾರನೆಯ ದಿನ ಸಾಯಂಕಾಲದ ವೇಳೆಗೆ, ನನ್ನನ್ನು ಬಿಟ್ಟು, ಗೋವಾಗೆ ಸುತ್ತಲು ಹೋಗಿದ್ದ ನನ್ನ ಸೂಟ್ಕೇಸ್ ಕೂಡ, ನಮ್ಮ ಮನೆ ಹುಡುಕಿಕೊಂಡು ಬಂದು ಸೇರಿತ್ತು. |
ಜೀವನದಲ್ಲೇ ಮರೆಯಲಾಗದ, ಅತ್ಯಂತ ಮಧುರವಾದ ನೆನಪುಗಳನ್ನೊಳಗೊಂಡ ನಮ್ಮ ಚಾರ್ ಧಾಮ್ ಯಾತ್ರೆ ಯಶಸ್ವಿಯಾಗಿ ಮುಗಿದಿತ್ತು. ದೇಹಕ್ಕೆ ಆಗಿದ್ದ ಆಯಾಸದಿಂದ ನಾನು, ಇನ್ನು ಯಾತ್ರೆ ಮಾಡುವ ಸಾಹಸವೇ ಬೇಡವೆಂದು ನಿರ್ಧರಿಸಿದ್ದೆ. ಆದರೆ ಈ ಅನುಭವಗಳನ್ನು ಬರೆದು ಮುಗಿಸುವ ವೇಳೆಗಾಗಲೇ, ಕಳ್ಳ ಮನಸ್ಸು ಮತ್ತೆಲ್ಲಾದರೂ ಹೋಗೋಣವಾ ಎನ್ನುವ ಕನಸು ಕಾಣುತ್ತಿದೆ......... |
ತಾಳ್ಮೆಯಿಂದ ನನ್ನೀ ಅನುಭವಗಳನ್ನು ಓದಿ, ಪ್ರೋತ್ಸಾಹಿಸಿದ ನನ್ನ ಎಲ್ಲಾ ಅಂತರ್ಜಾಲ ಸ್ನೇಹಿತರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. |
ಶಿವಕುಮಾರ ಕೆ. ಎಸ್. ಶುಕ್ರ, 07/17/2009 - 15:44 |
ಕೆಲವರಿಗೆ ಉದ್ದುದ್ದ ಅನಿಸಿದರೂ, |
ಕೆಲವರಿಗೆ ಉದ್ದುದ್ದ ಅನಿಸಿದರೂ, ನಿಮ್ಮ ಚಾರ್-ಧಾಮ ಯಾತ್ರೆಯ ಬರಹ ಚೆನ್ನಾಗಿ ಮೂಡಿಬಂತು. ಎಲ್ಲ ವಿವರಗಳನ್ನೊಳಗೊಂಡ, ಬೋರಾಗದ ವಸ್ತು-ನಿಷ್ಠ ಪ್ರವಾಸ ಕಥನ ಇದು. |
ಇನ್ನೊಂದು ಪಿಸುಮಾತು ಮಾಡಿ ಈ ಪ್ರವಾಸ ಕಥನದಲ್ಲಿ ಉಲ್ಲೇಖಗೊಂಡ ಕೆಲವು ಮುಖ್ಯ ಸ್ಥಳಗಳ ಫೋಟೋಗಳನ್ನು ಹಾಕಿದರೆ ಪರಿಪೂರ್ಣ! |
shamala ಶುಕ್ರ, 07/17/2009 - 17:52 |
ಪ್ರತಿಕ್ರಿಯಿಸಿದ್ದಕ್ಕೆ |
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶಿವಕುಮಾರ್... |
ಚಿತ್ರಗಳನ್ನು ಹಾಕಲು ಮೊದಲೂ ಪ್ರಯತ್ನಿಸಿದ್ದೆ, ಆದರೆ ಏಕೋ ನನಗೆ ಬರಲಿಲ್ಲ. ಮತ್ತೆ ಪ್ರಯತ್ನಿಸಿ ನೋಡುತ್ತೇನೆ. |
ವಿನಯ್_ಜಿ ಶುಕ್ರ, 07/17/2009 - 18:10 |
ಶ್ಯಾಮಲರವರೆ, ವಿಸ್ಮಯನಗರಿಯ |
ಶ್ಯಾಮಲರವರೆ, |
ವಿಸ್ಮಯನಗರಿಯ 'ಚಿತ್ರಶಾಲೆ" option ನಲ್ಲಿ "ಹೊಸ ಚಿತ್ರ" ನ click ಮಾಡಿ ಹಾಕಬಹುದು. ನಿಮ್ಮ ಚಾರ್ ಧಾಮ್ ಪ್ರವಾಸದ ಚಿತ್ರಗಳು ನಿಮ್ಮ ಲೇಖನಗಳಂತೆ ಚೆನ್ನಾಗಿರುತ್ತವೆ ಎಂದು ನಂಬಿರುತ್ತೇನೆ.. :) ದಯವಿಟ್ಟು ಬೇಗನೆ ಫೋಟೊಗಳನ್ನು upload ಮಾಡಬೇಕಾಗಿ ವಿನಂತಿ :) |
ಇಂತಹವರೇ ಪತ್ರಕರ್ತರಾಗಬೇಕು ಎಂದು ರಾಜಕಾರಣಿಗಳು ನಿರ್ಧರಿಸಿದರೆ? |
Home » News » ಇಂತಹವರೇ ಪತ್ರಕರ್ತರಾಗಬೇಕು ಎಂದು ರಾಜಕಾರಣಿಗಳು ನಿರ್ಧರಿಸಿದರೆ? |
ಒಮ್ಮೆ ಇದನ್ನು ನೆನಪಿಸಿಕೊಳ್ಳಿ. |
ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎನ್ನಿಸಿಕೊಂಡಿದ್ದ ಪತ್ರಿಕಾರಂಗದಲ್ಲಿ ಬ್ರಾಹ್ಮಣರೇ ಹೆಚ್ಚು. ಹೀಗೆ ಆಯಕಟ್ಟಿನ ಜಾಗಗಳಲ್ಲಿ ಅವರೇ ಹೆಚ್ಚಾಗಿರುವುದರಿಂದ ಉಳಿದ ಜಾತಿಯ ಪತ್ರಕರ್ತರು ಅವರ ಕೈ ಕೆಳಗೆ ದುಡಿಯಬೇಕೇ ಹೊರತು ತಮಗನ್ನಿಸಿದಂತೆ ಬರೆಯಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಮೊನ್ನೆ ಯಾವುದೋ ಪುಸ್ತಕ ನೋಡಿದೆ. ಪತ್ರಿಕೋದ್ಯಮದಲ್ಲಿ ದಲಿತರಿಗೆ ಹೆಚ್ಚಿನ ಅವಕಾಶ ದಕ್ಕಿಲ್ಲ ಎಂಬ ಹಳಹಳಿಕೆ ಅದರಲ್ಲಿತ್ತು. ನೋ ಡೌಟ್. ಆದರೆ ಒಂದು ವಿಷಯ ಮಾತ್ರ ನಿಜ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಪತ್ರಿಕೋದ್ಯಮದ ಆಯಕಟ್ಟಿನ ಜಾಗಗಳಲ್ಲೆಲ್ಲ ಬ್ರಾಹ್ಮಣರೇ ಬಂದು ಕೂರುವ ಕಾಲ ಹೋಗಿದೆ. ಅದೇ ರೀತಿ ದಲಿತರ ಸಂಖ್ಯೆ ಕಡಿಮೆಯಾದರೂ ಅಹಿಂದ ವರ್ಗಗಳ ಹಲವಾರು ಮಂದಿ ಮಾಧ್ಯಮ ಲೋಕಕ್ಕೆ ನುಗ್ಗಿದ್ದಾರೆ. ಇವೆಲ್ಲ ಸಹಜ ಬಿಡಿ. ಒಂದು ಸಾಮಾಜಿಕ ವ್ಯವಸ್ಥೆ ಕಾಲ ಕಾಲಕ್ಕೆ ಬದಲಾದಂತೆ ಎಲ್ಲ ರಂಗಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತವೆ. ಒಂದಷ್ಟು ಹಳಹಳಿಕೆಗಳ ನಡುವೆಯೂ ಮಾಧ್ಯಮ ರಂಗದಲ್ಲಿ ಎಲ್ಲ ಸಮುದಾಯಗಳ ಮಿಶ್ರಣವಾಗಿದೆ. |
ಆದರೆ ನನಗೆ ಆಶ್ಚರ್ಯವಾಗುತ್ತಿರುವುದು ಈ ವಿಷಯದ ಬಗೆಗಲ್ಲ. ಬದಲಿಗೆ ಮಾಧ್ಯಮ ರಂಗದಲ್ಲಿರುವ ಪ್ರಮುಖ ಟೀವಿಗಳು, ಪತ್ರಿಕೆಗಳ ಆಯಕಟ್ಟಿನ ಜಾಗಗಳಿಗೆ ಯಾರು ಬಂದು ಕೂರಬೇಕು? ಎಂಬುದನ್ನು ನಮ್ಮ ರಾಜಕೀಯ ಪಕ್ಷಗಳ ನಾಯಕರು ನಿರ್ಧರಿಸತೊಡಗಿದ್ದಾರೆ ಎಂಬುದು. ಬಿಜೆಪಿಯ ನಾಯಕರೊಬ್ಬರು ಬಯಸಿದವರೇ ಕೆಲ ಪತ್ರಿಕೆಗಳ, ಟೀವಿಗಳ ಆಯಕಟ್ಟಿನ ಜಾಗಗಳಿಗೆ ಬಂದು ಕೂರುತ್ತಿರುವುದು, ಕಾಂಗ್ರೆಸ್ ನಾಯಕರೊಬ್ಬರು ಬಯಸಿದವರೇ ಹಲವು ಜಾಗಗಳಲ್ಲಿ ಸೆಟ್ಲ್ ಆಗುತ್ತಿರುವುದು ಈಗ ಹೊಸ ವಿಷಯವಾಗಿ ಉಳಿದಿಲ್ಲ. ಆದರೆ ಹೀಗೆ ಬಂದು ಕುಳಿತವರು ಮಾಧ್ಯಮ ಲೋಕದ ಮೂಲಕ ಜನರಿಗೆ ರಾಜಕೀಯ ಲೋಕದ, ವ್ಯಾವಹಾರಿಕ ಸಾಮ್ರಾಜ್ಯದ ಸ್ಪಷ್ಟ ಚಿತ್ರಣ ನೀಡಲು ಸಾಧ್ಯವೇ? ನೋ ಛಾನ್ಸ್. ಬದಲಿಗೆ ತಮ್ಮನ್ನು ಆ ಜಾಗಕ್ಕೆ ಬಂದು ಕೂರುವಂತೆ ಮಾಡಿದವರ ವಿಷಯದಲ್ಲಿ ಇಂತಹ ಪತ್ರಕರ್ತರಿಗೆ ವಿಪರೀತ ಎಂಬಷ್ಟು ಕೃತಜ್ಞತೆ ಇರುತ್ತದೆ ಮತ್ತು ವ್ಯವಸ್ಥೆಯಲ್ಲಿ ಅದೇ ನಾಯಕ ಮೇಲೇಳಲು ಏನು ಮಾಡಬೇಕೋ? ಅದನ್ನೇ ತಮ್ಮ ಬರವಣಿಗೆಯ ಮೂಲಕ ಮಾಡುತ್ತಿರುತ್ತಾರೆ. |
ರೀ, ನಿಮ್ಮ ಪತ್ರಿಕೆಗೆ, ಟೀವಿಗೆ ಇಂತಹವರನ್ನು ಛೀಫ್ ರಿಪೋರ್ಟರರನ್ನಾಗಿ ತೆಗೆದುಕೊಳ್ರೀ ಅಥವಾ ಪೊಲಿಟಿಕಲ್ ಛೀಫ್ ಮಾಡ್ರಿ ಅಂತಲೋ, ಇನ್ನೇನೋ ಸೂಚನೆಯನ್ನು ಬಿಜೆಪಿಯ, ಕಾಂಗ್ರೆಸ್‌ನ ನಾಯಕರು ಕೊಡುತ್ತಿದ್ದಾರೆ ಎಂಬುದು ಈಗ ರಹಸ್ಯವೇನೂ ಅಲ್ಲ. ಮಾಧ್ಯಮ ಲೋಕದಲ್ಲಿ ಪದೇಪದೆ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತಿರುವುದು ಇದೇ ಕಾರಣಕ್ಕಾಗಿ. ನೀವು ಬಹುತೇಕ ಪತ್ರಕರ್ತರನ್ನು ಹಿಡಿದು ಕೇಳಿ. ರೀ, ಹೇಗಿದೆ ನಿಮ್ಮ ಮೀಡಿಯಾ? ಚೆನ್ನಾಗಿದೆಯಾ? ಅಂತ. ಈ ಪ್ರಶ್ನೆಗೆ ಬಹುತೇಕರು: ಇಲ್ಲ, ನಾನೀಗ ಆ ಮೀಡಿಯಾದಲ್ಲಿಲ್ಲ. ಬದಲಿಗೆ ಇಂತಹ ಮೀಡಿಯಾದ ಛೀಫ್ ರಿಪೋರ್ಟರು ಅಂತಲೋ? ಡೆಸ್ಕ್ ಸೀನಿಯರ್ ಅಂತಲೋ? ಪೊಲಿಟಿಕಲ್ ಛೀಫ್ ಅಂತಲೋ? ಹೇಳಿಕೊಳ್ಳುತ್ತಾರೆ. |
ಹಾಗಂತ ಅವರು ಅಲ್ಲಿ ಪರ್ಮನೆಂಟಾಗಿ ಇರುತ್ತಾರೆ ಅಂದುಕೊಳ್ಳಬೇಡಿ. ಇನ್‌ಫ್ಯಾಕ್ಟ್, ಪ್ರಜಾವಾಣಿಯಂತಹ ಕೈ ಬೆರಳೆಣಿಕೆಯಷ್ಟು ಮೀಡಿಯಾಗಳನ್ನು ಬಿಟ್ಟರೆ ಉಳಿದ ಬಹುತೇಕ ಕಡೆ ಇದೇ ಸ್ಥಿತಿ. ಇವತ್ತು ಎಂ.ಜಿ. ರೋಡಿನಲ್ಲಿದ್ದವರು ನಾಳೆ ಶಾಂತಿನಗರದಲ್ಲಿರುತ್ತಾರೆ. ಇವತ್ತು ಚಾಮರಾಜಪೇಟೆಯಲ್ಲಿದ್ದವರು ನಾಳೆ ಕ್ವೀನ್ಸ್ ರೋಡಿಗೆ ಬರುತ್ತಾರೆ. ಹೀಗೆ ಬಂದವರು ಪತ್ರಿಕೋದ್ಯಮ ಮಾಡುವುದಕ್ಕಿಂತ ಮುಖ್ಯವಾಗಿ ಎರಡು ಕೆಲಸ ಮಾಡಬೇಕಾಗುತ್ತದೆ. ಒಂದು, ತಮ್ಮನ್ನು ಆ ಜಾಗಕ್ಕೆ ತಂದು ಕೂರಿಸಿದವರಿಗೆ ಸದಾ ಕೃತಜ್ಞರಾಗಿರುವುದು ಮತ್ತು ಅದಕ್ಕೆ ಪೂರಕವಾಗಿ ಬರೆಯುವುದು. ಎರಡನೆಯದಾಗಿ, ಆ ಸಂಸ್ಥೆಯ ಮಾಲೀಕರಿಗೆ ವ್ಯಾವಹಾರಿಕವಾಗಿ ಕೆಲಸ ಮಾಡಿಕೊಡುವುದು. ಈ ಎರಡು ಕೆಲಸಗಳನ್ನು ಅವರು ಯಶಸ್ವಿಯಾಗಿ ಮಾಡಿದರೋ? ಒಂದಷ್ಟು ಕಾಲ ಅಲ್ಲಿರುತ್ತಾರೆ. ಇಲ್ಲದಿದ್ದರೆ ಯಥಾಪ್ರಕಾರ ರೋಡ್ ಛೇಂಜ್ ಮಾಡಬೇಕು ಅಷ್ಟೇ. |
ಇದರರ್ಥ, ಜಾಗತೀಕರಣದ ಭರಾಟೆ ಮಾಧ್ಯಮವನ್ನು ಯಾವ ಮಟ್ಟಿಗೆ ತಟ್ಟಿದೆ ಎಂದರೆ, ರೀ ಮಾಧ್ಯಮರಂಗಕ್ಕೆ ಬಂದಿದ್ದೇನೆ. ವಸ್ತುಸ್ಥಿತಿಯನ್ನು ಜನರಿಗೆ ಹೇಳುತ್ತೇನೆ ಎಂದು ಎದೆ ತಟ್ಟಿಕೊಂಡು ಧೈರ್ಯದಿಂದ ಹೇಳುವ ಪತ್ರಕರ್ತರ ಸಂಖ್ಯೆಯೇ ಕಡಿಮೆಯಾಗಿ ಹೋಗಿದೆ. ಕೇಳಿದರೆ ಏನು ಮಾಡೋದು? ಮೊದಲು ನಾವು ಉಳಿದುಕೊಳ್ಳಬೇಕು. ನಾವು ಉಳಿದುಕೊಳ್ಳಬೇಕು ಎಂದರೆ ಸಂಸ್ಥೆಯ ಮಾಲೀಕರು ಉಳಿದುಕೊಳ್ಳಬೇಕು. ಆಮೇಲಿನಿದ್ದರೂ ಜನರ ಬಗ್ಗೆ ಯೋಚಿಸಬಹುದು ಎಂಬ ಮಾತೇ ಹೆಚ್ಚಾಗಿ ಕೇಳಿ ಬರುತ್ತದೆ. ಮೀನ್ಸ್, ಮಾಧ್ಯಮ ರಂಗವೂ ಈಗ ದುಡ್ಡಿನ ಹಿಂದೆ ಬಿದ್ದಿದೆ. ಯಾವ ಮಟ್ಟಿಗೆ ಎಂದರೆ ಮೊದಲು ಸಂಪಾದಕೀಯ ವಿಭಾಗ ಮಾಧ್ಯಮದ ಮೇಲೆ ಹಿಡಿತ ಇರಿಸಿಕೊಂಡಿತ್ತು. ಈಗ ಸಂಪಾದಕೀಯ ವಿಭಾಗದ ಬಹುತೇಕ ಸಿಬ್ಬಂದಿ ಸಂಸ್ಥೆಯ ಒರಿಜಿನಲ್ ಡಾನುಗಳ ಥರ ಆಗಿ ಹೋಗಿರುವ ಜಾಹೀರಾತು ವಿಭಾಗದ ಛೀಫುಗಳ ಕೈಗೊಂಬೆಗಳಂತಾಗಿ ಹೋಗಿದ್ದಾರೆ. |
ರೀ, ಇಂತಹವರನ್ನು ಕಲಿಯುಗದ ಸತ್ಯ ಹರಿಶ್ಚಂದ್ರ ಅಂತ ಬರೆಯಬೇಕು ಕಣ್ರೀ ಎಂದರೆ ಸಂಪಾದಕೀಯ ವಿಭಾಗದವರು ಕಮಕ್ಕಕಿಮಕ್ಕೆನ್ನದೆ ಅದನ್ನು ಮಾಡಬೇಕು. ಮೋದಿ ಜಿಂದಾಬಾದ್, ಸಿದ್ದರಾಮಯ್ಯ ಜಿಂದಾಬಾದ್, ಯಡಿಯೂರಪ್ಪ ಜಿಂದಾಬಾದ್ ಅಂತ ನೇರವಾಗಿ ಹೇಳದೆ ಇರಬಹುದು. ಆದರೆ ಅದೇ ಅರ್ಥ ಬರುವಂಗೆ ಬರೆಯಿರಿ ಎಂದು ಜಾಹೀರಾತು ವಿಭಾಗದವರು ಹೇಳುತ್ತಾರೆ. ಅದಕ್ಕೆ ಪೂರಕವಾಗಿ ಸಂಪಾದಕೀಯ ವಿಭಾಗದವರು ವರ್ತಿಸುತ್ತಾರೆ. ಹೀಗಾಗಿ ನಿಮಗೆ ನೆನಪಿನಲ್ಲಿರಲಿ. ಇವತ್ತು ಮೇಜರ್ ಮೀಡಿಯಾಗಳು ಅಂತೇನಿವೆ? ಇದರಲ್ಲಿ ನೂರಕ್ಕೆ ತೊಂಬತ್ತೈದು ಪರ್ಸೆಂಟು ಮೀಡಿಯಾಗಳು ಪಕ್ಕಾ ವ್ಯಾಪಾರಿ ಸಂಸ್ಥೆಗಳು. ವ್ಯಾಪಾರಂ ದ್ರೋಹ ಚಿಂತನಂ ಎಂಬ ಗಾದೆಯೇ ಇಲ್ಲವೇ? ವ್ಯಾಪಾರದಲ್ಲಿ ಅದೆಲ್ಲ ಸಹಜ. ಹೀಗಾಗಿ ನಿಮಗೆ ಬರುತ್ತಿರುವ ಸುದ್ದಿಗಳೆಲ್ಲವೂ ನಿಜ ಎಂದುಕೊಳ್ಳಬೇಡಿ. ಆ ಸುದ್ದಿ ಯಾರ ಲಾಭಕ್ಕಾಗಿಯೋ ಪ್ರಕಟವಾಗಿರಬಹುದು. ಯಾರನ್ನೋ ಮೇಲೆ ತರಲು, ಇನ್ಯಾರನ್ನೋ ಕೆಳಕ್ಕೆ ತಳ್ಳಲು ಪ್ರಕಟವಾಗುತ್ತಿರಬಹುದು. ಹೀಗಾಗಿ ಜಾಗತೀಕರಣದ ಈ ದಿನಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂದರೆ ಯಾವ ಕಡೆಯಿಂದ ನಗಬೇಕು ಎಂಬುದು ಖುದ್ದು ಮಾಧ್ಯಮದವರಿಗೇ ಅರ್ಥವಾಗದಂತಾಗಿದೆ. |
ಅಲ್ರೀ, ನಿಮ್ಮ ಸಂಸ್ಥೆಯ ಟಿಆರ್‌ಪಿ ಜಾಸ್ತಿ ಮಾಡಿಕೊಳ್ಳಬೇಕು ಅಂತ ನೀವು ಸುದ್ದಿ ಮಾಡಲು ಹೋಗಿ ಒದೆ ತಿಂದು ಬಂದರೆ, ಅದಕ್ಕೇಕೆ ಇಡೀ ಮಾಧ್ಯಮ ಲೋಕ ತಲೆ ಕೊಡಬೇಕು? ಅಂತ ಕೇಳುವವರು ಹೆಚ್ಚಾಗಿದ್ದಾರೆ. ಯಾಕೆಂದರೆ ಮಾಧ್ಯಮಗಳು ಹೇಗೆ ನಡೆಯುತ್ತಿವೆ? ಎಂಬುದು ಇವರೆಲ್ಲರಿಗೂ ಗೊತ್ತಿದೆ. ಮುಂಚೆ ಪತ್ರಕರ್ತರ ಮೇಲೆ ಸಣ್ಣದೊಂದು ಹಲ್ಲೆಯಾದರೆ ಸಾಕು, ಇಡೀ ಮಾಧ್ಯಮ ಲೋಕವೇ ಮೇಲೆದ್ದು ನಿಂತುಬಿಡುತ್ತಿತ್ತು. ಆದರೆ ಈಗ ಸುಮ್ಮನೆ ಒಂದು ರೌಂಡು ನೋಡಿದಂತೆ ಮಾಡಿ ಸುಮ್ಮನಾಗಿಬಿಡುತ್ತದೆ. ಜಾಗತೀಕರಣ ಎಂಬುದು ಮಾಧ್ಯಮ ಲೋಕವನ್ನು ಈ ರೀತಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವಾಗ ನಾನು ಮಾಧ್ಯಮ ರಂಗಕ್ಕೆ ಬಂದು ಜಗತ್ತನ್ನೇ ಬದಲಿಸುತ್ತೇನೆ ಎಂಬ ಭ್ರಮೆಯೊಂದಿಗೆ ಯಾರು ಈ ಲೋಕಕ್ಕೆ ನುಗ್ಗಲು ಸಾಧ್ಯವಿಲ್ಲ. ಇನ್‌ಫ್ಯಾಕ್ಟ್, ನಾವು ಮಾಡಿದ ವರದಿ ಒಂದು ವ್ಯವಸ್ಥೆಯನ್ನು ಬದಲಿಸುತ್ತದೆ ಎಂದರೆ ಬೇರೆ ಮಾತು. ಆದರೆ ಬದಲಾವಣೆ ಎಂಬುದೇ ಬಿಜಿನೆಸ್ಸಿನ ಭಾಗವಾದರೆ, ಇಂತಹ ಬದಲಾವಣೆಗೆ ಸಾಮಾಜಿಕ ಕಾಳಜಿ ಎಂಬುದು ಇಲ್ಲವಾದರೆ ಮಾಧ್ಯಮ ರಂಗಕ್ಕೆ ಪಾವಿತ್ರ್ಯವೇ ಇಲ್ಲದಂತಾಗುತ್ತದೆ. |
ಇವತ್ತು ಜನ ರಾಜಕಾರಣಿಗಳನ್ನು ಯಾಕೆ ಕೆಟ್ಟದಾಗಿ ನೋಡುತ್ತಾರೆ? ಸಹಜವಾಗಿಯೇ ಬಹುತೇಕರು ಸ್ವಜನ ಪಕ್ಷಪಾತ ಮಾಡುತ್ತಾರೆ. ಹೀಗಾಗಿ ಅವನಾ? ಅಯ್ಯೋ, ಅವರು ಗೆದ್ದರೂ ಒಂದೇ, ಸೋತರೂ ಒಂದೇ ಬಿಡ್ರಿ. ಗೆದ್ದರೆ ತಮ್ಮ, ತಮ್ಮ ಹಿಂಬಾಲಕರ ಮನೆ ಉದ್ಧಾರವಾಗುವಂತೆ ಮಾಡುತ್ತಾರೆ. ಸೋತರೆ ಮತ್ತೊಬ್ಬರು ಬಂದು ಅದೇ ಕೆಲಸ ಮಾಡುತ್ತಾರೆ ಎಂದು ಬಿಡುತ್ತಾರೆ. ಒಂದು ಕಾಲದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ನೆಲೆಯಾಗಿದ್ದ ಈ ಭಾವನೆ ಇವತ್ತು ಮಾಧ್ಯಮ ಲೋಕದ ಮೇಲೆ ಆವರಿಸಿದೆ. ಅಯ್ಯೋ, ಆ ಪೇಪರಾ? ಆ ಟೀವಿಯಾ? ಅದು ಇಂತಹವರ ಪರ ಎಂದು ಜನ ನಿರರ್ಗಳವಾಗಿ ಮಾತನಾಡುತ್ತಾರೆ. ಹಲವು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ಮಾಧ್ಯಮ ಲೋಕದ ಜನರೆಂದರೆ ಅವರನ್ನು ಗೌರವದಿಂದ ನೋಡುವ ಕಾಲವಿತ್ತು. ಆದರೆ ಈಗ, ರೀ ನೀವೇನೇ ಮಾಡಿದರೂ ಅವರು ಇಂತಹವರ ಪರವಾಗಿಯೇ ಬರೆಯುತ್ತಾರೆ. ಇಂತಹವರ ವಿರುದ್ಧವಾಗಿಯೇ ಬರೆಯುತ್ತಾರೆ ಎಂದು ಸುಲಭವಾಗಿ ಜನ ತೀರ್ಪು ನೀಡುತ್ತಾರೆ ಎಂಬುದರ ಅರ್ಥ. |
ಇವತ್ತು ಮಾಧ್ಯಮ ಎಂಬುದು ರಂಗವಾಗಿಲ್ಲ. ಬದಲಿಗೆ ಉದ್ಯಮವಾಗಿದೆ. ಅರ್ಥಾತ್, ಬಿಜಿನೆಸ್ ಆಗಿದೆ. ಬಿಜಿನೆಸ್‌ನಲ್ಲಿ ಯಾರನ್ನಾದರೂ ಎತ್ತಬಹುದು, ಯಾರನ್ನಾದರೂ ತುಳಿಯಬಹುದು ಎಂಬ ಲೆಕ್ಕಾಚಾರ ಮುಖ್ಯವೇ ಹೊರತು ಜನ ಅನುಭವಿಸುತ್ತಿರುವ ಕಷ್ಟವಲ್ಲ. ಒಂದು ವೇಳೆ ಆ ಕಷ್ಟದಿಂದ ತಮ್ಮ ಸಂಸ್ಥೆಯ ಟಿಆರ್‌ಪಿ ಹೆಚ್ಚುತ್ತದೆ ಎಂದಾದರೆ ಮಾಧ್ಯಮಗಳು ಅದನ್ನೂ ಮಾಡುತ್ತವೆ. ನಿಮಗೆ ಗೊತ್ತಿರಲಿ. ಈ ರಿಯಾಲಿಟಿ ಷೋಗಳ ಪೈಕಿ ಬಹುತೇಕ ಷೋಗಳಿಗೆ ಇಂತಹ ಬಿಜಿನೆಸ್ ಮನೋಭಾವವೇ ಮುಖ್ಯ. ಯಾವುದೋ ಬಡ ಕುಟುಂಬದ ಗಂಡ- ಹೆಂಡತಿಯನ್ನು ತಂದು ಟೀವಿಗಳಲ್ಲಿ ಚರ್ಚೆಗೆ ಕೂರಿಸುವುದು, ಅವರಿಗೆ ಇಂತಿಷ್ಟು ಅಂತ ಹಣ ಕೊಟ್ಟು, ಮಾತಿನ ಮಧ್ಯೆ ಧಡಾರನೆ ಮೇಲೆದ್ದು ಹೆಂಡತಿ ತನ್ನ ಗಂಡನನ್ನು ರಪ್ಪ ರಪ್ಪ ಅಂತ ಬಾರಿಸುವಂತೆ ಮಾಡುವುದು ಕೂಡ ಆಳದಲ್ಲಿ ಜಾಗತೀಕರಣದ ಒಂದು ಭಾಗವೇ. ಫೈನಲಿ, ಸಂಬಂಧಗಳನ್ನೂ ಅಲ್ಲಿ ವ್ಯಾಪಾರಕ್ಕಿಡಲಾಗುತ್ತದೆ. ಯಾವುದು ಹೈಯೆಸ್ಟ್ ಬಿಜಿನೆಸ್ಸು ಮಾಡುತ್ತದೆ ಎಂಬುದನ್ನು ಉದ್ಯಮಪತಿಗಳು ಗಮನಿಸುತ್ತಾರೆ. ಹೀಗೆ ಮಾಧ್ಯಮ ಲೋಕವೆಂಬುದು ಇವತ್ತು ಸಿಂಗಲ್ ಡಿಜಿಟ್ ಲಾಟರಿಯಂತೆ ಒಂದು ಉದ್ಯಮವಾಗಿ ಬದಲಾಗುತ್ತಿದೆಯೇ ಹೊರತು ಇನ್ನೇನಲ್ಲ. |
ಅಲ್ರೀ, ಇಂತಹ ಮೀಡಿಯಾಕ್ಕೆ ಇಂತಹವರೇ ಛೀಫ್ ಆಗಬೇಕು ಎಂಬಲ್ಲಿಗೆ ನಮ್ಮ ರಾಜಕೀಯ ನಾಯಕರು, ಬಿಜಿನೆಸ್ ಸಾಮ್ರಾಟರು ನಿರ್ಧರಿಸುತ್ತಾರೆ ಎಂದರೆ ಮಾಧ್ಯಮ ರಂಗ ಯಾವ ಲೆವೆಲ್ಲಿಗೆ ತಲುಪಿರಬೇಕು. ಒಂದು ಕಾಲದಲ್ಲಿ ತಮಿಳುನಾಡಿನ ಕರುಣಾನಿಧಿ ಫ್ಯಾಮಿಲಿ 'ಉದಯ' ಟೀವಿ ಆರಂಭಿಸಿತು. ಅದರ ಬೆನ್ನಲ್ಲೇ ಜೈಕಾರ ಹಾಕಿಸಿಕೊಳ್ಳಲು ಜಯಲಲಿತಾ ಕೂಡ 'ಜಯಾ' ಟೀವಿ ಮೇಲೇಳಲು ಕಾರಣರಾದರು. ಕ್ರಮೇಣ ಈ ಪರಂಪರೆ ದೇಶದುದ್ದ ಯಾವ ರೀತಿ ಹರಡಿದೆ ಎಂದರೆ ಒಂದೋ, ಬಹುತೇಕ ಮಾಧ್ಯಮಗಳು ಉದ್ಯಮಿಗಳ ಕೈಲಿದೆ. ಇಲ್ಲವೇ ರಾಜಕಾರಣಿಗಳ ಕೈಲಿದೆ. ನಿಜವಾದ ಮಾಲೀಕನೇ ಸಂಪಾದಕನಾಗಿರುವ, ತನ್ನಿಚ್ಛೆಯಂತೆ ನಡೆಸುವ ಮಾಧ್ಯಮಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿ ಹೋಗಿದೆ. ಇದು ಕ್ರಮೇಣ ಮರೆಯಾಗುತ್ತಾ, ಮರೆಯಾಗುತ್ತಾ ಹೋದರೆ ಏನಾಗುತ್ತದೆ? ಯೋಚಿಸಿದರೆ ನಿಜಕ್ಕೂ ಗಾಬರಿಯಾಗುತ್ತದೆ. |
ಮಹಿಳೆಯರಿಗಾಗಿ ಹೋಮ್ ಲೋನ್, ಕಡಿಮೆ ಬಡ್ಡಿ ದರಗಳು, ಹೌಸಿಂಗ್ ಲೋನ್ ಯೋಜನೆಗಳು |
ಮಹಿಳೆಯರಿಗಾಗಿನ ಹೋಮ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು ಈ ಕೆಳಗಿನಂತಿವೆ |
ಮಹಿಳೆಯರಿಗಾಗಿನ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೋಮ್ ಲೋನ್ ಒಂದು ಹಣಕಾಸಿನ ಸಾಧನವಾಗಿದ್ದು, ಇದು ನಿಮ್ಮ ಮನೆ ಮಾಲೀಕರಾಗುವ ಕನಸನ್ನು ನನಸಾಗಿಸಲು ನಿಮಗೆ ಸಹಾಯ ಮಾಡುತ್ತದೆ. ಅದರ ವಿಶ್ರಾಂತಿ ಮತ್ತು ಕನಿಷ್ಠ ಅವಶ್ಯಕತೆಗಳಿಂದಾಗಿ ಅಕ್ಸೆಸ್ ಮಾಡುವುದು ಸುಲಭ ಮತ್ತು ನೀವು ಅದಕ್ಕಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಇನ್ನೇನು ಬೇಕು, ಈ ಲೋನ್ ಫ್ಲೆಕ್ಸಿಬಲ್ ಅವಧಿಯಲ್ಲಿ ಸಾಕಷ್ಟು ಮಂಜೂರಾತಿಯನ್ನು ನೀಡುತ್ತದೆ ಮತ್ತು ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ಆಕರ್ಷಕ ಬಡ್ಡಿ ದರವನ್ನು ಹೊಂದಿದೆ. |
ನಿಮಗಾಗಿ ಸೂಕ್ತವಾದ ಲೋನ್ ನಿಯಮಗಳನ್ನು ಕಂಡುಹಿಡಿಯಲು, ನಮ್ಮ ಆನ್ಲೈನ್ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಈ ಉಚಿತ ಸಾಧನವು ವಿವಿಧ ಲೋನ್ ವಿವರಗಳಿಗೆ ಪಾವತಿಸಬೇಕಾದ ಬಡ್ಡಿ ಮತ್ತು ಇಎಂಐ ಗಳನ್ನು ತ್ವರಿತವಾಗಿ ಮತ್ತು ನಿಖರವಾಗಿ ಲೆಕ್ಕ ಹಾಕಲು ನಿಮಗೆ ಅನುಮತಿ ನೀಡುತ್ತದೆ. |
ಮಹಿಳೆಯರಿಗಾಗಿ ಹೋಮ್ ಲೋನ್: ಅರ್ಹತಾ ಮಾನದಂಡ |
ನೀವು ತ್ವರಿತವಾಗಿ ಫಂಡಿಂಗ್‌ಗೆ ಅರ್ಹರಾಗಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು, ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ. ಇದು ಒಂದು ಸರಳ ಸಾಧನವಾಗಿದೆ, ಮತ್ತು ನೀವು ಎಷ್ಟು ಅರ್ಹರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ನೀವು ಮೂಲಭೂತ ವೈಯಕ್ತಿಕ ವಿವರಗಳನ್ನು ಮಾತ್ರ ಭರ್ತಿ ಮಾಡಬೇಕು. ನಮ್ಮ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.* |
ಸಂಬಳ ಪಡೆಯುವ ವ್ಯಕ್ತಿಗಳಿಗೆ 23 ರಿಂದ 62 ವರ್ಷಗಳು |
ಸ್ವಯಂ ಉದ್ಯೋಗಿ ಸಾಲಗಾರರಿಗೆ 25 ರಿಂದ 70 ವರ್ಷಗಳು |
ಸಂಬಳ ಪಡೆಯುವ ವ್ಯಕ್ತಿಗಳಿಗೆ ಕನಿಷ್ಠ 3 ವರ್ಷಗಳ ಅನುಭವ |
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ನಿರಂತರತೆ |
*ನಮೂದಿಸಿದ ಅರ್ಹತಾ ನಿಯಮಗಳ ಪಟ್ಟಿಯು ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. |
ಹೌಸಿಂಗ್ ಲೋನ್ ಬಡ್ಡಿ ದರ ನಾವು ಆಫರ್ ಮಾಡುತ್ತೇವೆ ಮತ್ತು ಕಾಲಾವಧಿಯುದ್ದಕ್ಕೂ ವೆಚ್ಚ-ಪರಿಣಾಮಕಾರಿ ಬಡ್ಡಿ ಹೊರಹೋಗುವಿಕೆಯನ್ನು ನಿರ್ವಹಿಸಲು ನಿಮಗೆ ಅನುಮತಿ ನೀಡುತ್ತದೆ. |
ಮಹಿಳೆಯರಿಗಾಗಿನ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವುದು ಹೇಗೆ |
ಅಪ್ಲೈ ಮಾಡಲು, ಮೂಲಭೂತ ಮಾಹಿತಿಯನ್ನು ನಮೂದಿಸುವ ಮೂಲಕ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ. ಪ್ರಕ್ರಿಯೆಯನ್ನು ಸರಳಗೊಳಿಸಲು ಹಂತವಾರು ಮಾರ್ಗದರ್ಶಿ ಇಲ್ಲಿದೆ. |
3 ಸೂಕ್ತ ಲೋನ್ ಮೊತ್ತ ಮತ್ತು ಅವಧಿಯನ್ನು ಸೆಟಲ್ ಮಾಡಲು ಇಎಂಐ ಕ್ಯಾಲ್ಕುಲೇಟರ್ ಬಳಸಿ |
ಒಮ್ಮೆ ನೀವು ಈ ಫಾರ್ಮ್ ಅನ್ನು ಪೂರ್ಣಗೊಳಿಸಿದ ನಂತರ, ನಮ್ಮ ಅಧಿಕೃತ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಲೋನ್ ಪ್ರಕ್ರಿಯೆಯೊಂದಿಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ. |
'ಕೋವಿದ್–19' ವೈರಸ್ : ಏರ್‌ಲೈನ್ಸ್‌ಗಳ ವಹಿವಾಟಿಗೆ ಧಕ್ಕೆ | Prajavani |
ಚೀನಾಗೆ ವಿಮಾನಗಳ ಹಾರಾಟ ಸ್ಥಗಿತ: ಆದಾಯದಲ್ಲಿ ಕುಸಿತ: ಮತ್ತೆ 97 ಮಂದಿ ಸಾವು |
ಪಿಟಿಐ/ಎಪಿ/ಎಎಫ್‌ಪಿ/ರಾಯಿಟರ್ಸ್ Updated: 13 ಫೆಬ್ರವರಿ 2020, 01:15 IST |
ಬೀಜಿಂಗ್, ಸಿಂಗಪುರ: ಚೀನಾದಲ್ಲಿ 'ಕೋವಿದ್–19' ವೈರಸ್ ಹಬ್ಬಿದ ಬಳಿಕ ವೈಮಾನಿಕ ಕ್ಷೇತ್ರದ ವಹಿವಾಟಿಗೆ ತೀವ್ರ ಧಕ್ಕೆಯಾಗಿದೆ. |
ಏರ್‌ಲೈನ್ಸ್ ಮತ್ತು ವಿಮಾಗಳ ತಯಾರಿಕೆ ಕ್ಷೇತ್ರಗಳ ಆರ್ಥಿಕ ವಹಿವಾಟು ಕುಸಿಯುತ್ತಿರುವುದು ಆತಂಕ ಮೂಡಿಸಿದೆ. |
'ಕೋವಿದ್–19' ವೈರಸ್ ಕಾಣಿಸಿಕೊಂಡ ಬಳಿಕ ಹಲವು ಏರ್‌ಲೈನ್ಸ್‌ಗಳು ಚೀನಾಗೆ ತೆರಳುವ ಸಾವಿರಾರು ವಿಮಾನ |
ಗಳ ಸಂಚಾರವನ್ನು ರದ್ದುಪಡಿಸಿವೆ. ಇದರಿಂದ, ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆಯಿಂದ ದೊರೆಯುತ್ತಿದ್ದ ಆದಾಯಕ್ಕೆ ಪೆಟ್ಟು ನೀಡಿದೆ. ಚೀನಾದ ಬಹುತೇಕ ನಗರಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದೆ. |
ಜನವರಿ ತಿಂಗಳಲ್ಲಿ ಬೋಯಿಂಗ್ ಕಂಪನಿಗೆ ವಿಮಾನ ಖರೀದಿಸುವ ಒಂದೂ ಆದೇಶ ಬಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಿಮಾನಗಳ ಖರೀದಿಗೂ ಯಾರೂ ಆಸಕ್ತಿ ವಹಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ, ವಹಿವಾಟಿನಲ್ಲಿ ಕುಸಿಯಬಹುದು ಎಂದು ಬೋಯಿಂಗ್ ಕಂಪನಿಯ ಉಪಾಧ್ಯಕ್ಷ ರ‍್ಯಾಂಡಿ ಟಿನ್ಸೆಥ್ ತಿಳಿಸಿದ್ದಾರೆ. |
ಮತ್ತೆ 97 ಮಂದಿ ಸಾವು: 'ಕೋವಿದ್–19' ವೈರಸ್‌ನಿಂದ ಚೀನಾದಲ್ಲಿ ಮತ್ತೆ 97 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ, ಇದುವರೆಗೆ ಸಾವಿಗೀಡಾದವರ ಸಂಖ್ಯೆ 1,113ಕ್ಕೆ ಏರಿದೆ. |
ವೈರಸ್ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲೇ 94 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ, ಒಟ್ಟು 44,653 ಮಂದಿ ವೈರಸ್ ಸೋಂಕಿಗೆ ಒಳಗಾಗಿದ್ದು,. 8,204 ಮಂದಿ ಪರಿಸ್ಥಿತಿ ಗಂಭೀರವಾಗಿದೆ. |
ಸಿಂಗಪುರ ಬ್ಯಾಂಕ್ ಕಚೇರಿ ತೆರವು: ಸಿಬ್ಬಂದಿಯೊಬ್ಬರಿಗೆ ವೈರಸ್ ಸೋಂಕು ಕಾಣಿಸಿಕೊಂಡಿದ್ದರಿಂದ ಸಿಂಗಪುರ ಬ್ಯಾಂಕ್ 'ಡಿಬಿಎಸ್' ಇಲ್ಲಿನ ತನ್ನ ಕಚೇರಿಯನ್ನು ತೆರವುಗೊಳಿಸಿದೆ. |
ಮನೆಯಿಂದಲೇ ಕಾರ್ಯನಿರ್ವಹಿಸುವಂತೆ 300 ಸಿಬ್ಬಂದಿಗೆ ಬ್ಯಾಂಕ್ ಸೂಚಿಸಿದೆ.ಸಿಂಗಪುರದಲ್ಲಿ 47 ಮಂದಿಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. |
ಆತ್ಮಹತ್ಯೆ ಬೆದರಿಕೆ: ಬೀಜಿಂಗ್ ಜನ್ಮ ದಿನ ಆಚರಿಸಿಕೊಳ್ಳಲು ಅವಕಾಶ ನೀಡದಿರುವುದಕ್ಕೆ ಬೇಸರಗೊಂಡ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಮತ್ತು ಸೊಂಟಕ್ಕೆ ಪಟಾಕಿ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೀನಾದ ಚೊಂಗ್‌ಕಿಂಗ್ ಪ್ರಾಂತ್ಯದಲ್ಲಿ ನಡೆದಿದೆ. |
ವಿಯಟ್ನಾಂ: ₹43 ಕೋಟಿ ಡಾಲರ್ ನಷ್ಟ |
ಹನೋಯಿ: 'ಕೋವಿದ್–19' ವೈರಸ್‌ನಿಂದ ವಿಯಟ್ನಾಂ ಏರ್‌ಲೈನ್ಸ್‌ಗೆ 43 ಕೋಟಿ ಡಾಲರ್ (₹30,701.42) ನಷ್ಟವಾಗಿದೆ. |
ವಿಯಟ್ನಾಂ ಮತ್ತು ಚೀನಾ ನಡುವೆ ಸಂಪರ್ಕ ಸ್ಥಗಿತಗೊಳಿಸಿರುವುದರಿಂದ ವಿಯಟ್ನಾಂ ಏರ್‌ಲೈನ್ಸ್ ಆದಾಯದಲ್ಲಿ ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ. |
ಫೆಬ್ರುವರಿ 1ರಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದ ವಿಯಟ್ನಾಂ, ಚೀನಾಗೆ ತೆರಳುವ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿತು. ಈ ನಿಷೇಧದಿಂದ ಪ್ರತಿ ತಿಂಗಳು 4 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ. ಎಲ್ಲ ಅಂತರರಾಷ್ಟ್ರೀಯ ವಿಮಾನಗಳಲ್ಲಿಯೂ ಫೆಬ್ರುವರಿ ಮೊದಲ ವಾರದಲ್ಲಿ ಶೇಕಡ 14.1ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದೆ. |
Subsets and Splits
No community queries yet
The top public SQL queries from the community will appear here once available.