text
stringlengths
0
61.5k
ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳು ಸಿದ್ದರಾಗಿ ವೈದ್ಯಾಧಿಕಾರಿ ಡಾ ರಾಜು
ಚನ್ನಪಟ್ಟಣ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹರೂರು ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆರೋಗ್ಯ
ಕೂಡ್ಲೂರು ಸೋಪಾನ ಕಾಮಗಾರಿಯಲ್ಲಿ ಎರಡೂವರೆ ಲಕ್ಷ ಗುಳುಂ ಮಾಡಿದ ಶಂಕರ್
ಚನ್ನಪಟ್ಟಣ: ಶಂಕರ್ ಎಂದರೆ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ತುಂಡು ಗುತ್ತಿಗೆ ಕಾಮಗಾರಿಗಳೆಲ್ಲ ಕಿಸಕ್ ಎಂದು‌ ನಗುತ್ತವೆ,* ಅವರಿಂದ ಬಿಲ್ ಬಿಡುಗಡೆ ಮಾಡ
ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಟ್ವಿಟರ್ ಸಹಸಂಸ್ಥಾಪಕ | Twitter co-founder Williams steps down from board | Kannadaprabha.com
Monday, July 22, 2019 7:50 AM IST
Published: 23 Feb 2019 08:21 PM IST
ಟ್ವಿಟರ್ ನ ನಿರ್ದೇಶಕ ಮಂಡಳಿ ಸದಸ್ಯತ್ವದ ಹುದ್ದೆಯನ್ನು ಸಂಸ್ಥೆಯ ಸಹಸಂಸ್ಥಾಪಕ ಇವಾನ್ ವಿಲಿಯಮ್ಸ್ ತ್ಯಜಿಸಿದ್ದಾರೆ.
ಕಳೆದ 12 ವರ್ಷಗಳಿಂದ ಟ್ವಿಟರ್ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಅದೃಷ್ಟ ಎಂದು ಟ್ವೀಟ್ ಮೂಲಕ ತಮ್ಮ ರಾಜೀನಾಮೆಯನ್ನು ವಿಲಿಯಮ್ಸ್ ಘೋಷಿಸಿದ್ದಾರೆ. ಇದೇ ವೇಳೆ ಟ್ವಿಟರ್ ನ ಉದ್ಯೋಗಿಗಳ ಶ್ರಮಕ್ಕೆ ವಿಲಿಯಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಉತ್ತೇಜನ ತುಂಬುವ ಕೆಲಸವನ್ನು ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
2008 ರಲ್ಲಿ ಸಂಸ್ಥೆಯ ಸಿಇಒ ಆಗಿದ್ದ ಜಾಕ್ ಡಾರ್ಸೆ ನಂತರ ವಿಲಿಯಮ್ಸ್ ಆ ಹುದ್ದೆಯನ್ನು ನಿರ್ವಹಿಸಿದ್ದರು. ಈಗ 2012 ರಲ್ಲಿ ಪ್ರಾರಂಭವಾದ ಸ್ಯಾನ್ ಫ್ರಾನ್ಸಿಸ್ಕೋದ ಆನ್ ಲೈನ್ ಪಬ್ಲಿಶಿಂಗ್ ಟೆಕ್ ಸಂಸ್ಥೆ ಮೀಡಿಯಮ್ ಗೆ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಡುಪಿ: ರೋಗ ಹರಡುವ ತಾಣವಾಗುತ್ತಿರುವ ಇನ್ನೂ ಉದ್ಘಾಟನೆಯಾಗದ ನರ್ಮ್ ಬಸ್ ನಿಲ್ದಾಣ! | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Sep 24, 2020, 6:29 PM IST
ಉಡುಪಿ, ಸೆ.24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ನಗರ ಸಾರಿಗೆ(ನರ್ಮ್) ಬಸ್ ನಿಲ್ದಾಣವು ಉದ್ಘಾಟನೆಗೆ ಮೊದಲೇ ನಿರ್ವಹಣೆ ಇಲ್ಲದೆ ಕುಡುಕರ ತಾಣವಾಗುತ್ತಿದೆ. ಸ್ವಚ್ಛತೆ ಇಲ್ಲದ ಪರಿಣಾಮ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.
ಬಸ್ ನಿಲ್ದಾಣದಲ್ಲಿ ಕುಡುಕರು ಮದ್ಯ ಸೇವನೆ ಮಾಡುತ್ತಿರುವುದು, ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿವೆ. ಇಲ್ಲಿ ನೆಲೆ ಕಂಡಿರುವ ವಲಸೆ ಕಾರ್ಮಿಕರು ಗುಟ್ಕಾ ತಿಂದು ಅಲ್ಲಲ್ಲಿ ಉಗಿದು ಹೊಸದಾಗಿ ನಿರ್ಮಿಸ ಲಾದ ಬಸ್ ನಿಲ್ದಾಣದ ಅಂದವನ್ನು ಕೆಡಿಸಿದ್ದಾರೆ. ಎಲ್ಲೆಂದರಲ್ಲಿ ಕಸ ತ್ಯಾಜ್ಯಗಳ ರಾಶಿಯೇ ಬಿದ್ದುಕೊಂಡಿದೆ. ಇಲ್ಲಿ ಕಸ ತ್ಯಾಜ್ಯಗಳ ವಿಲೇವಾರಿಯು ಸರಿಯಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾ ನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
ಮಾರಕ ಸೊಳ್ಳೆಗಳ ಉತ್ಪತ್ತಿಗೂ ಇಲ್ಲಿಯ ಪರಿಸರವು ಕಾರಣವಾಗಿದ್ದು, ಡೆಂಗ್, ಮಲೇರಿಯಾ ಮುಂತಾದ ಕಾಯಿಲೆಗಳು ಹರಡುವ ಭೀತಿ ಎದು ರಾಗಿದೆ. ಪರಿಸರದಲ್ಲಿ ಕೊರೊನಾ ಸೋಂಕು ಹರಡುವ ಅವಕಾಶ ಕೂಡ ಮಾಡಿ ಕೊಡಲಾಗುತ್ತಿದೆ. ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಗುಂಪು ಸೇರಿಕೊಂಡು, ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ. ನಿಲ್ದಾಣದ ವಠಾರವು ಬಯಲು ಶೌಚಾಲಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ನರ್ಮ್ ಬಸ್ ನಿಲ್ದಾಣದಲ್ಲಿ ತಕ್ಷಣ ಸುವ್ಯವಸ್ಥೆ ಕಾಪಾಡಬೇಕು. ಆದಷ್ಟು ಬೇಗ ನಗರಸಭೆ ನಿಲ್ದಾಣ ಪರಿಸರವನ್ನು ಶುಚಿತ್ವಗೊಳಿಸಬೇಕು ಮತ್ತು ಕಾವಲುಗಾರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು 259 ಮಂದಿಗೆ ಕೋವಿಡ್ ಲಸಿಕೆ ವಿತರಣೆ: ಡಾ. ಶ್ರೀನಿವಾಸ್- Kannada Prabha
Published: 16th January 2021 08:00 PM | Last Updated: 16th January 2021 08:00 PM | A+A A-
ಲಸಿಕೆ ನೀಡುತ್ತಿರುವ ದೃಶ್ಯ
ಬೆಂಗಳೂರು: ಇಂದು ಪ್ರಾರಂಭಗೊಂಡ ಕೋವಿಡ್ ಲಸಿಕಾ ಕಾರ್ಯಕ್ರಮದಡಿ ಬೆಂಗಳೂರಿನಲ್ಲಿ ಒಟ್ಟು ಐದು ಕೇಂದ್ರಗಳಲ್ಲಿ ಲಸಿಕೆ ವಿತರಣೆಯಾಗಿದ್ದು, ಒಟ್ಟು 259 ಜನ ಕೊರೋನಾ ಸೈನಿಕರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ಒಟ್ಟು 403 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ದಿನದ ಅಂತ್ಯಕ್ಕೆ 259 ಮಂದಿಗೆ ಇಲಾಖೆಯಿಂದ ಲಸಿಕೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಶೇ. 65 ರಷ್ಟು ಯಶಸ್ಸನ್ನು ಮೊದಲ ದಿನ ಸಾಧಿಸಲಾಗಿದೆ ಎಂದು ತಿಳಿಸಿದರು.
ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ 52 ಜನರಿಗೆ, ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ 81 ಜನರಿಗೆ, ಈಸ್ಟ್ ಪಾಯಿಂಟ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 40 ಜನರಿಗೆ, ಕಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಸೇರಿದಂತೆ ನಿಮ್ಹಾನ್ಸ್ ನಲ್ಲಿ 56 ಮಂದಿಗೆ ಇಂದು ಲಸಿಕೆ ವಿತರಣೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಆರೋಗ್ಯ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗ ಸೂಚಿಗಳ ಅನ್ವಯ ಪ್ರತಿ ಲಸಿಕಾ ಕೇಂದ್ರಗಳು ಮೂರು ಕೊಠಡಿಗಳನ್ನು ಹೊಂದಿದ್ದು. ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಹೊಂದಿರುತ್ತವೆ. ಫಲಾನುಭವಿಗಳು ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಇದ್ದು. ಕೈ ತೊಳೆಯಲು ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಲಸಿಕಾ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಪರಿವೀಕ್ಷಣೆ ಹಾಗೂ ಕುಂದು-ಕೊರತೆಗಳಾಗದಂತೆ ಮುನ್ನಚ್ಚೆರಿಕೆ ಕ್ರಮವನ್ನು ವಹಿಸಲು ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಡಾ. ಮನೋಹರ , ಕೆ.ಆರ್.ಪುರಂ ಸಾರ್ವಜನಿಕ ಆಸ್ಪತ್ರೆಗೆ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಣ್ಣೂರಿಗೆ ಡಾ. ನದೀಂ ಅಹಮದ್, ಈಸ್ಟ್ ಪಾಯಿಂಟ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಡಾ. ಖಲೀಲ್ ಅಹಮದ್, ಮತ್ತು ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ಡಾ. ಚನ್ನಕೃಷ್ಣ ಇವರುಗಳನ್ನು ನೇಮಿಸಲಾಗಿದೆ.
ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಡ್ಡ ಪರಿಣಾಮಗಳ ನಿರ್ವಹಣೆ ಮಾಡಲು ಅರಿವಳಿಕೆ ತಜ್ಞರು ಹಾಗೂ ಚಿಕಿತ್ಸಕರನ್ನು ಕಾರ್ಯಕ್ರಮ ಮುಗಿಯುವರೆಗೆ ಕಾರ್ಯ ಸ್ದಳದಲ್ಲಿ ಲಭ್ಯವಿರುವಂತೆ ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯಲೇನ್ಸ್ (108) ವ್ಯವಸ್ಥೆ ಮಾಡಿಕೊಳ್ಳುವುದು ಅಡ್ಡ ಪರಿಣಾಮ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಸರ್ಕಾರಿ ಮೇಲ್ದರ್ಜೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರಗಳಿಗೆ ರವಾನಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
Coronavirus Frontline Warriors Covid vaccine Bengaluru ಕೊರೋನಾ ವೈರಸ್ ಕೊರೋನಾ ವಾರಿಯರ್ಸ್ ಕೋವಿಡ್ ಲಸಿಕೆ ಬೆಂಗಳೂರು
ನಗರಸಭೆ ಬಜೆಟ್ ಮಂಡನೆ - Sanjevani
Home ಜಿಲ್ಲೆ ಬೆಂಗಳೂರು ನಗರಸಭೆ ಬಜೆಟ್ ಮಂಡನೆ
ನಗರಸಭೆ ಬಜೆಟ್ ಮಂಡನೆ
ಗೌರಿಬಿದನೂರು.ಮಾ೨೪: ನಗರದ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್ ನೇತೃತ್ವದಲ್ಲಿ ೨೦೨೧-೨೨ ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಅಪರ ನಗರಸಭೆ ಆಯುಕ್ತರಾದ ರೇಣುಕಾ ಮಾತನಾಡಿ, ನಗರಸಭೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನಗಳು, ಸ್ಥಳೀಯ ಹುಟ್ಟುವಳಿ ಆದಾಯ, ಬಾಡಿಗೆ ಕಟ್ಟಡಗಳಿಂದ ಬರುವ ಹಣ, ಕಂದಾಯ ಸಂಗ್ರಹ, ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಮೂಲಗಳಿಂದ ಬರುವ ಹಣವನ್ನು ಒಂದು ವರ್ಷದಲ್ಲಿ ವಿವಿಧ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು. ಈ ಬಾರಿಯ ಆಯವ್ಯಯ ಗಾತ್ರವು ೩೫, ೦೯, ೩೦,೦೦೦ ರೂಗಳಾಗಿರುತ್ತದೆ. ಮುಂದಿನ ವರ್ಷದ ಅಭಿವೃದ್ಧಿ ಕಾರ್ಯಗಳು ಹಾಗೂ ಇನ್ನಿತರ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಎಲ್ಲ ಸದಸ್ಯರ ತೀರ್ಮಾನದ ಮೇರೆಗೆ ಈ ಬಾರಿಯ ಬಜೆಟ್ ನ್ನು ಮಂಡನೆ ಮಾಡಲಾಗುವುದು. ಈ ವಿಚಾರವಾಗಿ ಸದಸ್ಯರ ಅಭಿಪ್ರಾಯ ಹಾಗೂ ಮಾರ್ಗದರ್ಶನಗಳನ್ನು ಸಭೆಗೆ ನೀಡಬಹುದಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷರಾದ ಕೆ.ಎಂ.ಗಾಯತ್ರಿ ಬಸವರಾಜ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿನ ೩೧ ವಾರ್ಡ್ ಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಹಣಕಾಸಿನ ಆಯವ್ಯಯ ವನ್ನು ಎಲ್ಲ ಸದಸ್ಯರ ಸಮ್ಮುಖದಲ್ಲಿ ತೀರ್ಮಾನಿಸಲಾಗುವುದು. ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಅದರಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿವುದು. ಇದಕ್ಕಾಗಿ ಎಲ್ಲ ಸದಸ್ಯರ ಸಹಕಾರ ಮತ್ತು ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಸದಸ್ಯರಾದ ವಿ.ರಮೇಶ್, ಖಲೀಂ ಉಲ್ಲಾ, ಗೋಪಿನಾಥ್ ಸೇರಿದಂತೆ ಇತರರು ಸಭೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷರಾದ ಭಾಗ್ಯಮ್ಮ, ಇಂಜಿನಿಯರ್ ಚಕ್ರಪಾಣಿ, ಎಇಇ ಸುಭಾಷ್ ಕಾಂಬ್ಳಿ, ಲೆಕ್ಕಾಧಿಕಾರಿ ಗೋವಿಂದಪ್ಪ, ವ್ಯವಸ್ಥಾಪಕ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕರಾದ ಸುರೇಶ್, ಸುಜಾತ, ಕಂದಾಯ ಅಧಿಕಾರಿ ಸಂತೋಷ್ ಇತರರು ಭಾಗವಹಿಸಿದ್ದರು.
ಡಿ.12: ಸರಕಾರಿ ಎನ್‌ಪಿಎಸ್ ನೌಕರರಿಂದ ಬೆಳಗಾವಿ ಚಲೋ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Dec 07, 2018, 5:34 PM IST
ಪುತ್ತೂರು, ಡಿ.7: ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ದ.ಕ. ಜಿಲ್ಲಾ ಹಾಗೂ ತಾಲೂಕು ಸಮಿತಿ ಘಟಕಗಳ ಸಹಯೋಗದಲ್ಲಿ ಡಿ.12ರಂದು 'ಬೆಳಗಾವಿ ಚಲೋ' ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇಬ್ರಾಹೀಂ ಎಂ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಮಂದಿ ಭಾಗವಹಿಸಲಿದ್ದು, ದ.ಕ. ಜಿಲ್ಲೆಯಿಂದ 3 ಸಾವಿರ ಮಂದಿ ಭಾಗವಹಿಸಲಿದ್ದಾರೆ. ನೌಕರರ ಇಳಿವಯಸ್ಸಿನಲ್ಲಿ ಸಾಮಾಜಿಕ ಭದ್ರತೆಗಾಗಿ ಹಿಂದೆ ಸರಕಾರ ಅನುಸರಿಸುತ್ತಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವಂತೆ ಹಾಗೂ ಷೇರು ಮಾರುಕಟ್ಟೆ ಆಧಾರಿತ, ವಂತಿಗೆ ಆಧಾರಿತ ಅನಿಶ್ಚಿತ ಹೊಸ ಪಿಂಚಣಿ ಯೋಜನೆಯನ್ನು ರುದ್ದುಗೊಳಿಸುವಂತೆ ಆಗ್ರಹಿಸಲಾಗುವುದು. ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಈಗಾಗಲೇ ರಾಜ್ಯಾದ್ಯಂತ 200 ಕಾರ್ಯಾಗಾರಗಳು, ತಾಲೂಕು, ಜಿಲ್ಲಾ ಹಾಗೂ ನಾಲ್ಕು ವಿಭಾಗೀಯ ಸಮಾವೇಶಗಳು, ಮೂರು ಬಾರಿ ದಿಲ್ಲಿ ಸಂಸತ್ ಚಲೋ ಮತ್ತು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ 'ರಕ್ತ ಕೊಟ್ಟೇವು ಪಿಂಚಣಿ ಬಿಡೇವು' ಎಂಬ ಹೋರಾಟ ನಡೆಸಿದ್ದೇವೆ. ಇದೀಗ ಎಲ್ಲಾ ಎನ್‌ಪಿಎಸ್ ನೌಕರರನ್ನು ಸಂಘಟಿಸಿ ಬೆಳಗಾವಿ ಚಲೋ, ಬ್ರಹತ್ ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ವಿದ್ಯಾಧರ ರೈ, ಜಿಲ್ಲಾ ಪ್ರತಿನಿಧಿಗಳಾದ ರಾಘವೇಂದ್ರ ಗೌಡ, ಚಂದ್ರು ನಾಯ್ಕಾ, ತಾಲೂಕು ಪ್ರತಿನಿಧಿ ಮಲ್ಲಿಕ್ ಕುಮಾರ್ ಉಪಸ್ಥಿತರಿದ್ದರು.
ಬಿಡುಗಡೆಯಾಗುತ್ತಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು; ಟೆಸ್ಲಾಗೆ ಪೈಪೋಟಿ! | bengaluru based pravaig extinction mk1 electric car will lanch soon ckm
ಬಿಡುಗಡೆಯಾಗುತ್ತಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು; ಟೆಸ್ಲಾಗೆ ಪೈಪೋಟಿ!
Bengaluru, First Published 16, Nov 2020, 3:33 PM
ಬೆಂಗಳೂರು(ನ.16): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪಾದನ ಕಂಪನಿ, ಅತ್ಯಂತ ಆಕರ್ಷಕ ವಿನ್ಯಾಸ, ಸರಿಸಾಟಿ ಇಲ್ಲದ ಮೈಲೇಜ್ ಹೀಗೆ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮವಾಗಿರುವ ವಿಶ್ವದ ಏಕೈಕ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಗೆ ಅಮೆರಿಕ ಟೆಸ್ಲಾ ಕಾರು ಪಾತ್ರವಾಗಿದೆ. ಇದೀಗ ಈ ಟೆಸ್ಲಾ ಕಾರಿಗೆ ಪೈಪೋಟಿ ನೀಡಲು ನಮ್ಮ ಬೆಂಗಳೂರಿನ ಪ್ರವೈಗ್ ಡೈನಾಮಿಕ್ಸ್ ಸ್ಟಾರ್ಟ್ ಅಪ್ ಕಂಪನಿ ರೆಡಿಯಾಗಿದೆ.
ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!.
ಪ್ರವೈಗ್ ಎಕ್ಸ್‌ಟಿನ್ಶನ್ MK1 ಎಲೆಕ್ಚ್ರಿಕ್ ಕಾರು ಸರಿಸಾಟಿಯಿಲ್ಲದ ಡಿಸೈನ್, ಮೈಲೇಜ್‌ನಲ್ಲೂ ಅದ್ಬುತ, ಹಾಗೂ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಕಾರಾಗಿದೆ. ಬೆಂಗಳೂರಿನ ಪ್ರವೈಗ್ ಡೈನಾಮಿಕ್ಸ್ ಸ್ಟಾರ್ಟ್ ಅಪ್ ಕಂಪನಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಅನಾವರಣವಾಗಲಿದೆ.
ಪ್ರವೈಗ್ ಎಕ್ಸ್‌ಟಿನ್ಶನ್ MK1 ಎಲೆಕ್ಚ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 504 ಕಿ.ಮೀ ಮೈಲೇಜ್ ನೀಡಲಿದೆ. ಕಾರಿನ ಗರಿಷ್ಠ ವೇಗ 196 ಕಿ.ಮೀ ಪ್ರತಿ ಗಂಟೆಗೆ. ಇನ್ನು ಕೇವಲ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. 0-100 ಕಿ.ಮೀ ಕೇವಲ 5.4 ಸೆಕೆಂಡ್‌ಗಳಲ್ಲಿ ತಲುಪಲಿದೆ.
96kwh ಲಿ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. 200hp ಪವರ್ ಹೊಂದಿದೆ. 2021ರ ಆರಂಭದಲ್ಲೇ ನೂತನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇನ್ನು ಆರಂಭಿಕ ಹಂತದಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕಾರು ಲಭ್ಯವಿದೆ. ವಿಶೇಷ ಅಂದರೆ ಆನ್‌ಲೈನ್ ಸೇಲ್ಸ್ ಗೆ ಹೆಚ್ಚಿನ ಒತ್ತು ನೀಡುವ ಕಾರಣ ಡೀಲರ್‌ಶಿಪ್ ಸಂಪ್ರದಾಯಕ್ಕೆ ಅಂತ್ಯಹಾಡಲಿದೆ.
ರಾಫೆಲ್ ಒಪ್ಪಂದ- ಏಕ್ ಮಾರ್ ಚಾರ್ ತುಕಡಾ! | Readoo Kannada | ರೀಡೂ ಕನ್ನಡ
ರಾಫೆಲ್ ಒಪ್ಪಂದ- ಏಕ್ ಮಾರ್ ಚಾರ್ ತುಕಡಾ!
ಹದಿನಾರು ವರ್ಷಗಳ ಹಿಂದೆ ಭಾರತೀಯ ವಾಯು ಸೇನೆ ತಮ್ಮಲ್ಲಿರುವ ಮಿಗ್ ವಿಮಾನಗಳು ಹಳೆಯದಾಗಿವೆ. ಯುದ್ಧಕ್ಕೆ ಸಜ್ಜಾಗಿರಲು ಹೊಸ ತಂತ್ರಜ್ಞಾನವುಳ್ಳ ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದಿತ್ತು. ಹದಿನಾರು ವರ್ಷಗಳಿಂದ ಮೂಲೆಯಲ್ಲಿ ಬಿದ್ದಿದ್ದ ಯುದ್ಧ ವಿಮಾನದ ಖರೀದಿ ವಿಚಾರ ಕೊನೆಗೂ ಶುಕ್ರವಾರ ಶುಕ್ರದೆಸೆ ಕಂಡಿದೆ. ರಾಫೆಲ್ ಯುದ್ಧ ವಿಮಾನದ ಒಪ್ಪಂದವು, ಮೋದಿ ಫ್ರಾನ್ಸ್'ಗೆ ಯಾಕೆ ಹೋಗಿದ್ದರು? ಇಷ್ಟು ವರ್ಷ ಆಗದ ಯುದ್ಧ ವಿಮಾನದ ಖರೀದಿ ಒಪ್ಪಂದ ಇನ್ನು ಸಾಧ್ಯವಿಲ್ಲ? ಎನ್ನುವವರ ಬಾಯಿಗೆ ಬೀಗ ಹಾಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಒಪ್ಪಂದ ಫ್ರಾನ್ಸ್ ನಿರ್ಧರಿಸಿದ್ದ ಮೊತ್ತಕ್ಕಿಂತ 5,618 ಕೋಟಿ ಕಡಿಮೆ ದರದಲ್ಲಿ ನಡೆದಿದೆ. ರಕ್ಷಾ ಮಂತ್ರಿ ಮನೋಹರ್ ಪಾರಿಕರ್ ನೇತ್ರತ್ವದಲ್ಲಿ ನಡೆದ ಒಪ್ಪಂದದಲ್ಲಿ ಭಾರತಕ್ಕೆ ಇನ್ನು ಕೇವಲ 36 ತಿಂಗಳಲ್ಲಿ ಫ್ರಾನ್ಸ್ 36ಹೊಸ, ಅತ್ಯಾಧುನಿಕ ಯುದ್ಧ ವಿಮಾನಗಳ ಸರಬರಾಜು ಶುರುಮಾಡಲಿದೆ. ಇದರಿಂದಾಗಿ ದಶಕಗಳಿಂದ ಕಾಯುತ್ತಿರುವ ಭಾರತದ ಏರೋಸ್ಪೇಸ್ ಡಿಪೆನ್ಸ್ ಹಾಗೂ ಟೆಕ್ನಾಲಜಿ ರಂಗದಲ್ಲಿ ಮಹತ್ತರ ಬದಲಾವಣೆ ನಡೆಯಲಿದೆ.
ಅಧಿಕೃತ ಮೂಲಗಳ ಪ್ರಕಾರ ಮೂವತ್ತಾರು ಅತ್ಯಾಧುನಿಕ ವಿಮಾನಗಳ ಬೆಲೆ ಬರೀ 25 ಸಾವಿರ ಕೋಟಿ. ಶಸ್ತ್ರಾಸ್ತ್ರಗಳ ಬೆಲೆ ಐದು ಸಾವಿರ ಕೋಟಿ, ನಂತರ ಭಾರತಕ್ಕೆ ತಕ್ಕಂತೆ ಬದಲಾವಣೆ ಮಾಡಲು ಮತ್ತು ಇಸ್ರೇಲಿ ಮೌಂಟಿಂಗ್ ಡಿಸ್ಪ್ಲೆ ಇವೆಲ್ಲ ಸೇರಿ ಇನ್ನು ಹನ್ನೆರಡು ಸಾವಿರ ಕೋಟಿ. ಉಳಿದ ಹಣ ಸ್ಪೇರ್ ಪಾರ್ಟ್ಸ್ ಹಾಗೂ ಮೆಂಟೆನೆನ್ಸ್ ನೋಡಿಕೊಳ್ಳಲು ಎಂದು ನಿರ್ಧಾರವಾಗಿದೆ. ಒಪ್ಪಂದದ ನಿಜವಾದ ಗೆಲವು ಅಂದರೆ 50% Offset Claus.ಅಂದರೆ 30% ಭದ್ರತಾ, ರಕ್ಷಣಾ ಕಾರ್ಯಕ್ರಮಗಳಿಗೆ ನೆರವು ನೀಡುವುದು ಹಾಗೂ 20% ಏರೋಸ್ಪೇಸ್ ಬಿಡಿ ಭಾಗಗಳ ತಯಾರಿಕೆಗೆ ಸಹಾಯ ಮಾಡುವುದು. ಇದಲ್ಲದೆ ಒಪ್ಪಂದದ ಪ್ರಕಾರ ಒಂದು ವಿಮಾನದ ಶೇಕಡಾ 74% ಭಾಗ ಭಾರತದಿಂದ ಫ್ರಾನ್ಸ್ ಗೆ ರಫ್ತಾಗಬೇಕು. ಇದರಿಂದ ಭಾರತದ ದೊಡ್ಡ ಹಾಗೂ ಸಣ್ಣ ಕಂಪನಿಗಳಿಗೆ ಸುಮಾರು 25,000 ಕೋಟಿಗಳ ಬ್ಯುಸಿನೆಸ್ ಸಿಗುತ್ತದೆ. ಇದಲ್ಲದೆ ಮೇಕ್‌ ಇನ್ ಇಂಡಿಯಾ ಆಗಿದ್ದರಿಂದ ಭಾರತದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ. ಈ ಶ್ರೇಯ ಮೋದಿ ಹಾಗೂ ಪಾರಿಕರ್'ಗೆ ಸಲ್ಲಬೇಕು. ಇದಲ್ಲದೇ ಒಪ್ಪಂದದ ಪ್ರಕಾರ ಭಾರತದ ಯಶಸ್ವಿಯಾಗಿರದ ಕಾವೇರಿ ಇಂಜಿನನ್ನು ಪ್ರಾನ್ಸ್ ಹೊಸತಾಗಿ ಡಿಸೈನ್ ಮಾಡಲು ಸಹಕಾರ ನೀಡಲು ಒಪ್ಪಿದೆ. ಅಂದರೆ ಈಗ ಹಾಲಿ ಬದಿಗೊತ್ತಿರುವ 72 kNಕಾವೇರಿ ಇಂಜಿನ್'ನ್ನು 90 kN ಒತ್ತಡಕ್ಕೆ ವಿನ್ಯಾಸಗೊಳಿಸಲಾಗುವುದು. ಹಾಗಾದರೆ ಈಗ ಹಾಗೂ ಮುಂದೆ ಭಾರತದ ತೇಜಸ್ ಯುದ್ಧ ವಿಮಾನದಲ್ಲಿ ಬಳಸುತ್ತಿರುವ ಅಮೇರಿಕಾದ ಇಂಜಿನ್ ಬದಲು ಸ್ವದೇಶಿ ಕಾವೇರಿ ಇಂಜಿನ್ ಬಳಸಬಹುದು! ಯುಪಿಎ ಸರ್ಕಾರ 120 ರೆಫಾಲ್ ಯುದ್ಧ ವಿಮಾನಗಳು ಬೇಕು ಎಂಬ ಪಟ್ಟಿ ತಯಾರಿ ಮಾಡಿತ್ತು. ಬರೀ ವಿಮಾನಗಳ ಮೊತ್ತ ತೊಂಬತ್ತು ಸಾವಿರ ಕೋಟಿ ರೂಪಾಯಿಗಳು. ಈ ಮೊತ್ತ ನೋಡಿ ಯಾರೂ ಅದರ ಬಗ್ಗೆ ಲಕ್ಷ್ಯ ವಹಿಸಿರಲಿಲ್ಲ, ಹೀಗಾಗಿ ರಾಫೆಲ್ ವಿಷಯ ಎಲ್ಲಿತ್ತೋ ಅಲ್ಲೇ ಇತ್ತು, ವಾಯು ಸೇನೆಯ ಯೋಧರು ಪ್ರತಿ ವರ್ಷ ಮಿಗ್ ವಿಮಾನದ ತಾಂತ್ರಿಕ ದೋಷದಿಂದ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದರು.
ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಯಸದೆ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 52,000 ಕೋಟಿ ವೆಚ್ಚದ ಈ ಒಪ್ಪಂದಕ್ಕೆ ಸರ್ಕಾರ ಬರುವುದು ಅಸಾಧ್ಯವೆಂದು ಬಹಳಮಂದಿ ಬುದ್ಧಿವಂತ ವಿಶ್ಲೇಷಕರು ಭವಿಷ್ಯ ನುಡಿದಿದ್ದರು. ಒಪ್ಪಂದ ಆದ ಮೇಲೂ ಕೆಲವು ಅಸಹಿಷ್ಣುಗಳ ಪ್ರಶ್ನೆ, "ನೂರಾ ಇಪ್ಪತ್ತು ವಿಮಾನ ಖರೀದಿ ಮಾಡುವ ಯೋಜನೆ ಬರೀ ಮೂವತ್ತಾರಕ್ಕೆ ಯಾಕೆ ಕೊನೆಯಾಯಿತು?" ಅದಕ್ಕೆ ರಕ್ಷಾ ಮಂತ್ರಿ ಪಾರಿಕರ್ ಹೇಳುತ್ತಾರೆ, "ನನಗೂ BMW, ಮರ್ಸಿಡಿಸ್ ಬೆಂಜ್ ಕಾರುಗಳೇ ಬೇಕು…ಆದರೆ ಅಷ್ಟು ದುಬಾರಿ ಕಾರು ಖರೀದಿ ಮಾಡುವ ಸಾಮರ್ಥ್ಯ ಇಲ್ಲ ಹಾಗೂ ಅದರ ಅವಶ್ಯಕತೆ ಕೂಡಾ ಇಲ್ಲ..ನಮಗೆ ಈಗ ಅವಶ್ಯಕತೆ ಇರುವುದು ಸುಸಜ್ಜಿತ, ಆಧುನಿಕ36 ಯುದ್ಧ ವಿಮಾನಗಳು!". ಈ ಮೂವತ್ತಾರು ಆಧುನಿಕ ಯುದ್ಧ ವಿಮಾನಗಳಲ್ಲಿ ಲಾಂಗ್ ರೇಂಜ್ ಮಿಸೈಲ್ ಉದಾಹರಣೆಗೆ 'ಮೆಟಿಯೊರ್' 'ಸ್ಕಾಲ್ಪ್' ಗಳಂತ ತಂತ್ರಜ್ಞಾನ ಇದೆ. ನಿನ್ನೆಯಷ್ಟೆ ಭಾರತೀಯ ವಾಯು ಸೇನೆ ಎರ್-ಟು-ಏರ್ ಮಿಸೈಲ್ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಇದರ ಜೊತೆ ಈ ಯಶಸ್ವಿ ರೇಫಾಲ್ ಖರೀದಿ ಒಪ್ಪಂದ ಶತ್ರು ರಾಷ್ಟಗಳ ನಿದ್ದೆಗೆಡಸಿದೆ. ಇದನ್ನು ಒತ್ತಿ ಹೇಳಲು ಕಾರಣ ಅಂದರೆ ಈಗಿರುವ ಏರ್-ಟು-ಏರ್ ನೂರಾ ಐವತ್ತು ಕಿಮೀ ದೂರದ BVR(Beyond Visual Range) ಮೆಟಿಯೊರ್ ತಂತ್ರಜ್ಞಾನದ ಮಿಸೈಲ್ ಜೊತೆ ರೆಫಾಲ್ ಯುದ್ಧ ವಿಮಾನ ಬಳಸಿದರೆ ಭಾರತದ ಗಡಿಯೊಳಗಿದ್ದುಕೊಂಡೇ ( ಪರಿಸ್ಥಿತಿ ಎದುರಾದಾಗ) ಪಾಕಿಸ್ತಾನದಂತಹ ವೈರಿ ರಾಷ್ಟ್ರಗಳ ಮೇಲೆ ದಾಳಿ ನೆಡೆಸಬಹುದು. ಪಾಕಿಸ್ತಾನದ ಹತ್ತಿರ ಬರೀ 80 ಕಿಲೋಮೀಟರ್BYR ತಂತ್ರಜ್ಞಾನವಿದೆ ಅಷ್ಟೇ. ಇವತ್ತು ಅಫ್ಘಾನಿಸ್ತಾನ, ಲಿಬಿಯಾ,ಮಾಲಿ, ಇರಾಕ್, ಹಾಗೂ ಸಿರಿಯಾಗಳಲ್ಲಿ ಭಯೋತ್ಪಾದಕರು ಹಾಗೂ ಐಸಿಸ್'ಗಳನ್ನು ಸದೆ ಬಡಿಯಲು ಇದೇ ಯುದ್ಧ ವಿಮಾನ ಬಳಸಲಾಗುತ್ತಿದೆ. ಇದಲ್ಲದೆ ಒಪ್ಪಂದದ ಪ್ರಕಾರ ಶೇಕಡಾ 75% ರಷ್ಟು ವಿಮಾನಗಳು ಯಾವಾಗಲೂ ಯುದ್ಧಕ್ಕೆ ಹೋಗಲು ರೆಡಿ ಆಗಿರಬೇಕು, ಇದಕ್ಕೆ ಪ್ರಾನ್ಸ್ ಕಂಪನಿಗಳ ಸಹಮತವಿದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ ರಾಫೆಲ್ ಒಪ್ಪಂದದಿಂದ ಭಾರತದ ವಾಯು ಸೇನೆ ಪ್ರಬಲವಾಗುವುದರ ಜೊತೆ ಜೊತೆಗೆ ತಂತ್ರಜ್ಞಾನ, ಉದ್ಯೋಗ, ವ್ಯಾಪಾರ ಕೂಡ ಹೆಚ್ಚಲಿದೆ. ಏಕ್ ಮಾರ್ ಚಾರ್ ತುಕಡಾ !
ಎ. 20: ಸ್ಪೋರ್ಟ್ಸ್ ಕ್ಲಬ್‌ ನ ನೂತನ ಕಟ್ಟಡ ಉದ್ಘಾಟನೆ | Suddi9 |Kannada News | A news portal of Coastal Karnataka | Mangalore News | Bajpe | Suddi Nine
ಎ. 20: ಸ್ಪೋರ್ಟ್ಸ್ ಕ್ಲಬ್‌ ನ ನೂತನ ಕಟ್ಟಡ ಉದ್ಘಾಟನೆ
ತೋಕೂರು: ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಎ.20ರಂದು ಇಲ್ಲಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್‌ ತಿಳಿಸಿದ್ದಾರೆ.
ತೋಕೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ನೂತನವಾಗಿ ನಿರ್ಮಾಣಗೊಂಡ ಈ ಕಟ್ಟಡವನ್ನು ಎ.20ರಂದು ಕಲ್ಬುರ್ಗಿ ಕೇಂದ್ರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್‌.ಆರ್‌. ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದು, ಕಾರ್ಯಕ್ರಮವನ್ನು ಎಂಆರ್‌ ಪಿಎಲ್‌ನ ಲಕ್ಷ್ಮೀ ಕುಮಾರನ್‌ ಉದ್ಘಾಟಿಸಲಿದ್ದಾರೆ ಎಂದವರು,ಎ. 21ರಂದು ಧ್ವಜಸ್ತಂಭವನ್ನು ಜೈ ಕೃಷ್ಣ ಬಿ. ಕೋಟ್ಯಾನ್‌ ಉದ್ಘಾಟಿಸಲಿದ್ದು, ಸುನೀಲ್‌ ಡಿ. ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ರತನ್‌ ಶೆಟ್ಟಿ, ಪದ್ಮನಾಭ ಶೆಟ್ಟಿ, ಸುರೇಶ್‌ ಶೆಟ್ಟಿ, ಪ್ರಶಾಂತ್‌ ಕುಮಾರ್‌ ಬೇಕಲ್‌, ಜಿ.ಕೆ. ನಾರಾಯಣ, ಸಂತೋಷ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.
ಇಂದಿನಿಂದ ದುಲೀಪ್‌ ಟ್ರೋಫಿ | Prajavani
ಇಂದಿನಿಂದ ದುಲೀಪ್‌ ಟ್ರೋಫಿ
ಪ್ರಶಸ್ತಿಗಾಗಿ ಮೂರು ತಂಡಗಳ ಪೈಪೋಟಿ; ಗುಲಾಬಿ ವರ್ಣದ ಚೆಂಡು ಬಳಕೆ
ದಿಂಡಿಗಲ್‌, ತಮಿಳುನಾಡು: ಯುವ ಆಟಗಾರರ ಪ್ರತಿಭಾನ್ವೇಷಣೆಗೆ ವೇದಿಕೆಯಾಗಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಶುಕ್ರವಾರದಿಂದ ಆರಂಭವಾಗಲಿದೆ.
ನಾಥಮ್‌ನ ಎನ್‌ಪಿಆರ್‌ ಕಾಲೇಜಿನ ಮೈದಾನದಲ್ಲಿ ಹೊನಲು ಬೆಳಕಿನಡಿ ನಡೆಯುವ ಟೂರ್ನಿಯಲ್ಲಿ ಇಂಡಿಯಾ ರೆಡ್‌, ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಟೂರ್ನಿಯಲ್ಲಿ ಗುಲಾಬಿ ವರ್ಣದ ಚೆಂಡನ್ನು ಬಳಸಲಾಗುತ್ತಿದೆ.
ರೌಂಡ್‌ ರಾಬಿನ್‌ ಹಂತದ ಮೊದಲ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಇಂಡಿಯಾ ರೆಡ್‌ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಸೆಣಸಲಿವೆ. ಆಗಸ್ಟ್‌ 23ರಿಂದ 26ರವರೆಗೆ ನಿಗದಿಯಾಗಿರುವ ಎರಡನೆ ಪಂದ್ಯದಲ್ಲಿ ಇಂಡಿಯಾ ರೆಡ್‌ ಮತ್ತು ಇಂಡಿಯಾ ಬ್ಲೂ ಆಡಲಿವೆ. ಇಂಡಿಯಾ ಗ್ರೀನ್‌ ಮತ್ತು ಇಂಡಿಯಾ ಬ್ಲೂ ನಡುವಣ ಮೂರನೆ ಪಂದ್ಯ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 1ರವರೆಗೆ ಜರುಗಲಿದೆ. ಫೈನಲ್‌ ಹೋರಾಟ (ಸೆಪ್ಟೆಂಬರ್‌ 4ರಿಂದ 8) ಐದು ದಿನ ನಡೆಯಲಿದೆ.
ಮಿಥುನ್‌ಗೆ ಸ್ಥಾನ: ಕರ್ನಾಟಕದ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ ಅವರು ಟೂರ್ನಿಯಲ್ಲಿ ಇಂಡಿಯಾ ರೆಡ್‌ ತಂಡದ ಪರ ಆಡಲಿದ್ದಾರೆ.
ತಂಡಗಳು ಇಂತಿವೆ: ಇಂಡಿಯಾ ಬ್ಲೂ: ಫೈಜ್‌ ಫಜಲ್‌ (ನಾಯಕ), ಅಭಿಷೇಕ್‌ ರಾಮನ್‌, ಅನ್‌ಮೋಲ್‌ಪ್ರೀತ್‌ ಸಿಂಗ್‌, ಗಣೇಶ್‌ ಸತೀಶ್‌, ನಿಖಿಲ್‌ ಗಂಗ್ಟಾ, ಧ್ರುವ ಶೋರೆ, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌), ಅಕ್ಷಯ್‌ ವಾಖರೆ, ಸೌರವ್‌ ಕುಮಾರ್‌, ಸ್ವಪ್ನಿಲ್‌ ಸಿಂಗ್‌, ಬಸಿಲ್‌ ಥಂಪಿ, ಬಂಡಾರು ಅಯ್ಯಪ್ಪ, ಜಯದೇವ್‌ ಉನದ್ಕತ್‌ ಮತ್ತು ಧವಳ್‌ ಕುಲಕರ್ಣಿ.
ಇಂಡಿಯಾ ರೆಡ್‌: ಅಭಿನವ್‌ ಮುಕುಂದ್‌ (ನಾಯಕ), ಸಂಜಯ್‌ ರಾಮಸ್ವಾಮಿ, ಆಶುತೋಷ್‌ ಸಿಂಗ್‌, ಬಾಬಾ ಅಪರಾಜಿತ್‌, ವೃತ್ತಿಕ್‌ ಚಟರ್ಜಿ, ಭವನಕ ಸಂದೀಪ್‌, ಅಕ್ಷಯ್‌ ವಾಡಕರ್‌ (ವಿಕೆಟ್‌ ಕೀಪರ್‌), ಶಹಬಾಜ್‌ ನದೀಮ್‌, ಮಿಹಿರ್‌ ಹಿರ್ವಾನಿ, ಪರ್ವೇಜ್‌ ರಸೂಲ್‌, ರಜನೀಶ್‌ ಗುರುಬಾನಿ, ಅಭಿಮನ್ಯು ಮಿಥುನ್‌, ಇಶಾನ್‌ ಪೊರೇಲ್‌ ಮತ್ತು ಯರ‍್ರಾ ಪೃಥ್ವಿರಾಜ್‌.
ಇಂಡಿಯಾ ಗ್ರೀನ್‌: ಪಾರ್ಥೀವ್‌ ಪಟೇಲ್‌ (ನಾಯಕ ಮತ್ತು ವಿಕೆಟ್‌ ಕೀಪರ್‌), ಪ್ರಶಾಂತ್‌ ಚೋಪ್ರಾ, ಪ್ರಿಯಾಂಕ್‌ ಪಾಂಚಾಲ್‌, ಸುದೀಪ್‌ ಚಟರ್ಜಿ, ಗುರುಕೀರತ್‌ ಸಿಂಗ್‌ ಮಾನ್‌, ಬಾಬಾ ಇಂದ್ರಜಿತ್‌, ವಿ.ಪಿ.ಸೋಳಂಕಿ, ಜಲಜ್‌ ಸಕ್ಸೇನಾ, ಕರಣ್‌ ಶರ್ಮಾ, ವಿಕಾಸ್‌ ಮಿಶ್ರಾ, ಕೆ.ವಿಘ್ನೇಶ್‌, ಅಂಕಿತ್‌ ರಜಪೂತ್‌, ಅಶೋಕ್‌ ದಿಂಡಾ ಮತ್ತು ಅತಿತ್‌ ಸೇಠ್‌.
ತುಂಗಾ ನಾಲೆಗೆ ನೀರು : ಸಾರ್ವಜನಿಕರಿಗೆ ಎಚ್ಚರಿಕೆ | Shivamogga | Upper Tunga project | Irrigation | District news - ತುಂಗಾ ನಾಲೆಗೆ ನೀರು : ಸಾರ್ವಜನಿಕರಿಗೆ ಎಚ್ಚರಿಕೆ - Kannada Oneindia
ತುಂಗಾ ನಾಲೆಗೆ ನೀರು : ಸಾರ್ವಜನಿಕರಿಗೆ ಎಚ್ಚರಿಕೆ
| Published: Friday, September 11, 2009, 19:01 [IST]
ಶಿವಮೊಗ್ಗ, ಸೆ.11 : ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ನಾಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಯಾವುದೇ ಜನ-ಜಾನುವಾರುಗಳು ನಾಲೆಗೆ ಇಳಿಯದಂತೆ ನೋಡಿಕೊಳ್ಳಲು ಹಾಗೂ ನಾಲೆಯಲ್ಲಿ ನೀರು ಹರಿಯಬಿಡುವಾಗ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕೆಂದು ತುಂಗಾ ಮೇಲ್ದಂಡೆ ಯೋಜನೆ ವಲಯದ ಮುಖ್ಯ ಇಂಜಿನಿಯರ್ ಆರ್.ರುದ್ರಯ್ಯ ತಿಳಿಸಿದ್ದಾರೆ.
ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಯ ಕಾಮಗಾರಿಯು 272 ಕಿ.ಮೀಟರ್‌ನಷ್ಟಿದ್ದು, ಈಗ ಅದರಲ್ಲಿ 156 ಕಿ.ಮೀ.ನಷ್ಟು ನಾಲೆ ಕಾಮಗಾರಿಯು ಮುಗಿದಿದೆ. ಹೀಗಾಗಿ ಇಂದಿನಿಂದ 156 ಕಿ.ಮೀ.ನಷ್ಟು ನಾಲೆಯಲ್ಲಿ ನೀರು ಹರಿಸಲಾಗುವುದೆಂದರು.
ಈ ಯೋಜನೆಯಡಿ ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಅಡಿಯಲ್ಲಿ ಬರುವ 80,434 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು 1991ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಪ್ರಾರಂಭಿಸಲಾಯಿತು. ಈ ಯೋಜನೆಯ ಅಂದಾಜು ವೆಚ್ಚ 1,052.33 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 987ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸುಮಾರು 22 ಸಾವಿರ ಹೆಕ್ಟೇರ್‌ನಷ್ಟು ನೀರಾವರಿ ಸಾಮರ್ಥ್ಯದ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 686 ಹೆಕ್ಟೇರ್, ಹೊನ್ನಾಳಿ ತಾಲ್ಲೂಕಿನ 5976 ಹೆಕ್ಟೇರ್, ಹರಿಹರ ತಾಲ್ಲೂಕಿನಲ್ಲಿ 593 ಹೆಕ್ಟೇರ್, ಹಿರೇಕೆರೂರು ತಾಲ್ಲೂಕಿನಲ್ಲಿ 8391 ಹೆಕ್ಟೇರ್ ಹಾಗೂ ರಾಣೆಬೆನ್ನೂರು ತಾಲ್ಲೂಕಿನ 6404 ಹೆಕ್ಟೇರ್ ಗಳಷ್ಟು ಕೃಷಿ ಭೂಮಿಗೆ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಜೊತೆಗೆ ನಾಲೆ ನಿರ್ಮಿಸುವ ಸಲುವಾಗಿ ಭೂಮಿ ಕಳೆದುಕೊಂಡ ಫಲಾನುಭವಿಗಳಿಗೆ 13.32 ಕೋಟಿ ರೂ. ಪರಿಹಾರ ಕೊಡಬೇಕಾಗಿದ್ದು, ಇಲ್ಲಿಯವರೆಗೆ ಸುಮಾರು 9.19 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಹಾಗೆಯೇ, 146 ಫಲಾನುಭವಿಗಳಿಗೆ 158 ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಮುಖ್ಯ ನಾಲೆಯಡಿಯಲ್ಲಿ ಬರುವ ಕೆಲವು ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇಂಧನ ಸಚಿವರ ಆದೇಶದಂತೆ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ಕೈಗೊಂಡು ಪ್ರಾಯೋಗಿಕವಾಗಿ ಇಂದಿನಿಂದ ನೀರು ಹರಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಹೀಗಾಗಿ ಜಾಗರೂಕತೆಯಿಂದ ಇರಲು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ಸುದ್ದಿ ನೀರಾವರಿ agriculture ಕೃಷಿ irrigation ಪಾಶಾ pasha district news canal shivamogga
ಬಡ ಕುಟುಂಬಗಳ ಸ್ವಾಸ್ಥ್ಯರಕ್ಷಣೆಗೆ ಆನ್‍ಲೈನ್ ಜೂಜು ನಿಷೇಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Oct 21, 2021, 7:27 PM IST
ಹುಬ್ಬಳ್ಳಿ, ಅ. 21: `ಬಡಕುಟುಂಬಗಳ ಸ್ವಾಸ್ಥ್ಯ ಹಾಗೂ ಮನಃಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಆನ್‍ಲೈನ್ ಗೇಮಿಂಗ್ ಮತ್ತು ಜೂಜಿನ ವಿರುದ್ಧ ಕಠಿಣ ಕಾಯಿದೆಯನ್ನು ಜಾರಿಗೆ ತರಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ನಗರದ ಹಳೆಯ ಸಿ.ಎ.ಆರ್.ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಮಾತನಾಡಿದ ಅವರು, `ಯುವಕರು ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ನೂತನ ಕಾಯ್ದೆಯನ್ನು ತರಲಾಗಿದೆ. ಗ್ಯಾಂಬ್ಲಿಂಗ್ ಕ್ಲಬ್‍ಗಳ ವಿರುದ್ಧ ಸಶಕ್ತ ಕಾನೂನು ತರಲಾಗಿದೆ ಎಂದು ಹೇಳಿದರು.
`ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಶಾಂತಿಪಾಲನೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ದೇಶದ ಪ್ರಗತಿಗೆ ಶಾಂತಿ ಅವಶ್ಯಕ. ಶಾಂತಿ ಇಲ್ಲದಿದ್ದರೆ ದೇಶದ ಪ್ರಗತಿ ಇಲ್ಲ. ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಪ್ರಗತಿಗೆ ಪೊಲೀಸ್ ಸೇವೆ ಅಗತ್ಯ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
`ಪೊಲೀಸರಿಗೆ ಕಾನೂನಿನ ಬಲವನ್ನು ನೀಡಿದಾಗ ಅವರು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯ. ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್.ಎಸ್.ಎಲ್.)ಗಳನ್ನು ಪ್ರಾದೇಶಿಕ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆಫೀಸರ್ ಆನ್‍ಕ್ರೈಮ್ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರು ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ. ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದರು.
`ಇಲಾಖೆಯಲ್ಲಿ ನನೆಗುದಿಗೆ ಬಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಪೊಲೀಸರ ಸೇವೆ ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತ್ರ ಪದೋನ್ನತಿ ಎಂಬ ಭಾವನೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇತ್ತು. ಆದರೆ, ಕೆಳಹಂತದ ಸಿಬ್ಬಂದಿಗಳಿಗೆ ಪದೋನ್ನತಿ ನೀಡಲಾಗಿದೆ. 16 ಸಾವಿರ ಪೊಲೀಸರ ನೇಮಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರು ಚಿಕಿತ್ಸೆ ಪಡೆಯಲು ಅನುದಾನ ಒದಗಿಸಲಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ' ಎಂದು ಹೇಳಿದರು.
`ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷಗಳಲ್ಲಿ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪೊಲೀಸರು ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಬೇಕು. ಪ್ರತಿಯೊಂದು ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಸ್ವರಕ್ಷಣೆಗೆ ತರಬೇತಿ ನೀಡಲಾಗುವುದು' ಎಂದು ಅವರು ತಿಳಿಸಿದರು.
`ವಿಶ್ವದ ಹಲವು ರಾಷ್ಟ್ರಗಳು ಆಂತರಿಕ ಕ್ಷೋಭೆ, ಭಯೋತ್ಪಾದಕರ ಕೈಗೆ ಸಿಲುಕಿದೆ, ಅಲ್ಲಿನ ನಾಗರಿಕ ಬದುಕು ಶಾಂತಿಯುತವಾಗಿಲ್ಲ. ದೇಶದ ಎಲ್ಲ ಹಂತದ ಪೊಲೀಸರು ಜನರ ಭಯರಹಿತ ಜೀವನಕ್ಕಾಗಿ ಶ್ರಮ ಪಡುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ವಿದೇಶದಿಂದ ಎದುರಾಗುವ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕರು ಕಾನೂನು ಕಾಪಾಡುವಲ್ಲಿ ಪೊಲೀಸರಿಗೆ ಸಹರಿಸಬೇಕು' ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಪೊಲೀಸ್ ಆಯುಕ್ತ ಲಾಭೂರಾಮ್ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ದೇಶದಾದ್ಯಂತ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಾಚಿಸಿ, ಗೌರವಿಸಿದರು. 2020ರ ಅಕ್ಟೋಬರ್ 1 ರಿಂದ 2021ರ ಆಗಸ್ಟ್ 31ರ ವರೆಗೆ ದೇಶದಲ್ಲಿ 377 ಪೊಲೀಸರು ಕರ್ತವ್ಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ 16 ಪೊಲೀಸರು ವೀರ ಮರಣ ಹೊಂದಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಪೊಲೀಸ್ ಪಥಸಂಚಲನ ತುಕಡಿಯ ಪರೇಡ್ ನೇತೃತ್ವ ವಹಿಸಿದ್ದರು. ಹುತಾತ್ಮರ ನೆನಪಿನಲ್ಲಿ ಮೂರು ಬಾರಿ ವಾಲಿ ಫೈರಿಂಗ್ ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಶಾಸಕ ಪ್ರಸಾದ್ ಅಬ್ಬಯ್ಯ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕುಮಾರ್, ಆರ್‍ಪಿಎಫ್ ಐಜಿಪಿ ಅಲೋಕ್ ಕುಮಾರ್ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದರು.
ನವೆಂಬರ್ ಬಂತೆಂದರೆ ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ ನೆನಪು... - kalpa.news
ನವೆಂಬರ್ ಬಂತೆಂದರೆ ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ ನೆನಪು…
Read - 5 minutes
ಕಲ್ಪ ಮೀಡಿಯಾ ಹೌಸ್ | |
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಅವರು, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾಗಿದ್ದು, 2000ನೇ ವರ್ಷದಲ್ಲಿ ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.
ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ. ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನವರು ಎಂದರೆ 1930-1950 ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು.
ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ಡಾ. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ. ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ "ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯ ನವರು ಗುಬ್ಬಿ ಕಂಪನಿ ತೊರೆದು ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ "ಅಂಬರೀಷ" ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು.
ಅನಂತರ "ಕುರುಕ್ಷೇತ್ರ" ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗ ತಾಲೀಮು. 1951ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ "ಭೂ ಕೈಲಾಸ" ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿ ಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
1953ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್. ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್‌ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು.
ನಂತರ ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್ ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ ರಾಜಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು.