text
stringlengths
0
61.5k
ಚಿತ್ರವು 1954ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ ನಿರ್ಮಾಪಕ ಎ.ವಿ.ಎಂ. ಚೆಟ್ಟಿಯಾರ್ ಅವರು ಹೆಚ್.ಎಲ್.ಎನ್. ಸಿಂಹ ಅವರ ಬಳಿ ಹೋಗಿ ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್. ಸಿಂಹ ಅವರು ನಿರ್ಮಾಪಕರಿಗೆ ಎ.ವಿ.ಎಂ. ಚೆಟ್ಟಿಯಾರ್, ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. 200 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು.
1968 ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ 999) ಅಭಿನಯಿಸಿದರು. ಈ ಸರಣಿ ಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. 999, ಗೋವಾದಲ್ಲಿ ಸಿ.ಐ.ಡಿ. 999 ಹಾಗು ಆಪರೇಷನ್ ಡೈಮಂಡ್ ರಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.
ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು 1968ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು.
ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ 1971ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು.
ರಾಜ್‌ಕುಮಾರ್ ಅವರ ನೂರೈವತ್ತನೇ ಚಿತ್ರ, 1973ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. 1974ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ.
ಇದೇ ವರ್ಷ ಬಿಡುಗಡೆ ಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು. 1975ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. 1976ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.
ಡಾ.ರಾಜ್ ಅವರ ಇನ್ನೂರನೇ ಚಿತ್ರವು 1988ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿ ಯವರು ಡಾ.ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು.
ಡಾ.ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ, ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಕಾಂಚನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ವಾಣಿಶ್ರೀ, ಜಿ.ವಿ.ಲತಾ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಜಯಚಿತ್ರಾ, ಗಾಯತ್ರಿ, ಸರಿತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ.
ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು.
ವಿಶೇಷ ಲೇಖನ: ಜಿ. ಕೆ. ಹೆಬ್ಬಾರ್, ಶಿಕಾರಿಪುರ.
Tags: Dr RajkumarKannada Film IndustryKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadasandalwoodSpecial Articleಕನ್ನಡ ಚಿತ್ರರಂಗಡಾ.ರಾಜ್‌ಕುಮಾರ್
ಪಾಕಿಸ್ಥಾನಕ್ಕೆ ಸಿಂಧು ನದಿ ನೀರು ಸ್ಥಗಿತ ? | News13
News13 > ಸುದ್ದಿಗಳು > ರಾಷ್ಟ್ರೀಯ > ಪಾಕಿಸ್ಥಾನಕ್ಕೆ ಸಿಂಧು ನದಿ ನೀರು ಸ್ಥಗಿತ ?
ಪಾಕಿಸ್ಥಾನಕ್ಕೆ ಸಿಂಧು ನದಿ ನೀರು ಸ್ಥಗಿತ ?
ನವದೆಹಲಿ: ಉರಿ ಉಗ್ರರ ದಾಳಿ ಮತ್ತು ಕಾಶ್ಮೀರ ಗಲಭೆಯಿಂದಾಗಿ ಪಾಕಿಸ್ಥಾನದೊಂದಿಗಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯೋಜನೆಯನ್ನು ಭಾರತವು ತಳ್ಳಿ ಹಾಕಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ನೀರು ಹಂಚಿಕೆ ಒಪ್ಪಂದಕ್ಕೆ ಎರಡೂ ಕಡೆಯಿಂದ ಸಹಕಾರ ಮತ್ತು ವಿಶ್ವಾಸದ ಅಗತ್ಯವಿದೆ. ಇದು ಏಕಪಕ್ಷೀಯವಾಗಿ ನೋಡಲಾಗದು ಎಂದು ಹೇಳಿದ್ದಾರೆ.
ಸಿಂಧು ನದಿ ನೀರು ಹಂಚಿಕೆ ಒಪ್ಪಂದವು 1960 ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಡಿಯಲ್ಲಿ ಸಹಿ ಮಾಡಲಾಗಿತ್ತು. ಒಪ್ಪಂದದ ಮೇರೆಗೆ, ಮೂರು ಪೂರ್ವ ನದಿಗಳಾದ ಬೀಸ್, ರವಿ ಮತ್ತು ಸಟ್ಲೇಜ್ ಇವು ಭಾರತದ ನಿಯಂತ್ರಣದಲ್ಲಿದ್ದರೆ, ಮೂರು ಪಶ್ಚಿಮದ ನದಿಗಳಾದ ಸಿಂಧೂ, ಚೆನಾಬ್ ಮತ್ತು ಝೀಲಂಗಳು ಪಾಕಿಸ್ಥಾನದ ನಿಯಂತ್ರಣಕ್ಕೆ ಹೋದವು.
ಭಾರತದ ಮೂಲಕ ಮೊದಲು ಹರಿಯುವ ಸಿಂಧು ನದಿಯ ನೀರನ್ನು ಒಪ್ಪಂದದಂತೆ ಭಾರತವು ಕೇವಲ 20% ರಷ್ಟು ನೀರನ್ನು ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬಹುದು.
ಇದೀಗ ಒಂದೊಮ್ಮೆ ಭಾರತವೇನಾದರೂ ಪಾಕಿಸ್ಥಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಿದರೆ ಪಾಕಿಸ್ಥಾನ ಸಂಕಷ್ಟದಲ್ಲಿ ಸಿಲುಕಲಿದೆ. ಒಪ್ಪಂದದ ಹಿನ್ನಲೆಯಲ್ಲಿ ಭಾರತ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕು.
ರಿಪೋರ್ಟರ್ ಕರ್ನಾಟಕ ಶ್ರೀನಿವಾಸಪುರ: ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ, ಪ್ರಯಾಣಿಕರ ಸಂಖ್ಯೆ ಇಳಿಮುಖ – Reporter Karnataka
7:02 PM Monday18 - January 2021
ಶ್ರೀನಿವಾಸಪುರ: ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ, ಪ್ರಯಾಣಿಕರ ಸಂಖ್ಯೆ ಇಳಿಮುಖ
ಕೋಲಾರ(reporterkarnataka news): ಶ್ರೀನಿವಾಸಪುರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಆರಂಭಗೊಂಡಿತು. ಆದರೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ನಿಲ್ದಾಣದಲ್ಲಿದ್ದರು.
ಬೆಳಿಗ್ಗೆಯಿಂದ ಪಟ್ಟಣದಿಂದ ಹೊರಗೆ ಹೋಗುವ ಪ್ರಯಾಣಿಕರು, ಖಾಸಗಿ ಬಸ್‌, ಆಟೋ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ದರು. ಸಂಜೆಯ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು. ಬಸ್‌ ಪ್ರಯಾಣ ಆರಂಭಗೊಳ್ಳುವುದು ಅನಿಶ್ಚಿತವಾಗಿದ್ದ ಕಾರಣ ನಿಲ್ದಾಣ ಬರಿದಾಗಿತ್ತು.
ಮೊದಲ ಬಸ್‌ ಡಿಪೋದಿಂದ ಪೊಲೀಸ್‌ ಬೆಂಗಾವಲಿನಲ್ಲಿ ನಿಲ್ದಾಣ ಪ್ರವೇಶಿಸಿತು. ಆದರೆ ಬಸ್‌ ನಿಲ್ದಾಣ ನಿರ್ಜನವಾಗಿತ್ತು. ಬಹಳ ಹೊತ್ತು ಕಾದ ಬಳಿಕ ಒಂದಿಬ್ಬರು ಪ್ರಯಾಣಿಕರು ಬಸ್‌ ಹತ್ತಿದರು. ರಸ್ತೆ ಸಾರಿಗೆ ಬಸ್‌ ಸಂಚಾರ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಜಗಳೂರು ಅಭಿವೃದ್ಧಿ, ಕೆರೆಗಳಿಗೆ ನೀರು: ಎಸ್‌ವಿಆರ್ | Prajavani
ಜಗಳೂರು ಅಭಿವೃದ್ಧಿ, ಕೆರೆಗಳಿಗೆ ನೀರು: ಎಸ್‌ವಿಆರ್
Published: 06 ಜನವರಿ 2011, 15:15 IST
Updated: 06 ಜನವರಿ 2011, 15:15 IST
ಜಗಳೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸಕ್ತ ಜಿಲ್ಲಾ ಹಾಗೂ ತಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಶೇ. 72ರಷ್ಟು ಮತಗಳು ಬಂದಿವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಎಸ್.ವಿ. ರಾಮಚಂದ್ರ ಹೇಳಿದರು. ಇನ್ನು ಕ್ಷೇತ್ರದ ಅಭಿವೃದ್ಧಿಗೆ ಸರ್ವ ರೀತಿಯಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
'ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವ ಪ್ರಮುಖ ಉದ್ದೇಶದಿಂದ ಕಾಂಗ್ರೆಸ್ ತೊರೆದು ನಾನು ಬಿಜೆಪಿಗೆ ಸೇರ್ಪಡೆಯಾದೆ. ಕೆಎಸ್‌ಆರ್‌ಟಿಸಿ ಡಿಪೊ ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಿದ್ದಾರೆ' ಎಂದರು.
ರೂ.53 ಕೋಟಿ ವೆಚ್ಚದ ಫ್ಲೋರೈಡ್‌ಪೀಡಿತ ತಾಲ್ಲೂಕಿನ 108 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ 22 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಯೋಜನೆಗಳಿಗೆ ಸರ್ಕಾರ ಶೀಘ್ರ ಚಾಲನೆ ನೀಡಲಿದೆ. ಬಿಳಿಚೋಡು ಗ್ರಾಮದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಗುರುಸಿದ್ದನಗೌಡ ಹೇಳಿದರು.
ದೇವಿಕೆರೆ ತಾ.ಪಂ. ಕ್ಷೇತ್ರದಲ್ಲಿ ಪಕ್ಷೇತರರಾಗಿ ಜಯಗಳಿಸಿರುವ ಶ್ರೀನಿವಾಸ್ ಅವರು ಬಿಜೆಪಿಗೆ ಬರಲು ಇಚ್ಛಿಸಿದ್ದಾರೆ. ತಾ.ಪಂ.ನಲ್ಲಿ ಬಿಜೆಪಿ 7 ಸ್ಥಾನ ಪಡೆದಿದ್ದು, ಬಹುಮತಕ್ಕೆ ಒಂದು ಸ್ಥಾನದ ಅಗತ್ಯವಿತ್ತು. ಶ್ರೀನಿವಾಸ್ ಅವರ ಸೇರ್ಪಡೆಯಿಂದ ಪಕ್ಷ ಇಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗುರುಸಿದ್ದನಗೌಡ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ. ಮಂಜುನಾಥ್, ಜಿ.ಪಂ. ಸದಸ್ಯ ನಾಗರಾಜ್, ಮಹೇಶ್ ಹಾಜರಿದ್ದರು.
ಬಾಕ್ಸಿಂಗ್‌‌‌ ಡೇ ಟೆಸ್ಟ್‌ ಪಂದ್ಯ - ಆಸ್ಟ್ರೇಲಿಯಾ ವಿರುದ್ದ 8 ವಿಕೆಟ್‌ಗಳ ಜಯ ಸಾಧಿಸಿದ ಭಾರತ
Tue, Dec 29 2020 09:35:38 AM
ಮೆಲ್ಬರ್ನ್, ಡಿ. 29 (DaijiworldNews/MB) : ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ ಎಂಟು ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ.
ಈ ಮೊದಲು ಆಸ್ಟ್ರೇಲಿಯಾದ 195 ರನ್‌ಗಳಿಗೆ ಪ್ರತಿಯಾಗಿ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲದೊಂದಿಗೆ ಭಾರತವು 326 ರನ್‌ ಪೇರಿಸಿತ್ತು. ಈ ಮೂಲಕ 131 ರನ್‌ಗಳ ಭಾರೀ ಮುನ್ನಡೆ ಸಾಧಿಸಿತ್ತು.
ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 200 ರನ್‌ ಪಡೆದು ಆಲೌಟ್‌ ಆಗಿತ್ತು. ಭಾರತದ ಗೆಲುವಿಗಾಗಿ 70 ರನ್ ಗಳಿಸಬೇಕಾದ ಅಗತ್ಯವಿತ್ತು. ಈಗ ಭಾರತವು 15.5 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ ಈ ಗುರಿ ಮುಟ್ಟುವ ಮೂಲಕ ಗೆಲುವು ದಾಖಲಿಸಿದೆ.
ಮಯಂಕ್ ಅಗರವಾಲ್ (5) ಹಾಗೂ ಚೇತೇಶ್ವರ ಪೂಜಾರ (3) ಪಡೆದಿದ್ದು 19 ರನ್ ಗಳಿಸುವಷ್ಟರಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ರನ್‌ ಬಾರಿಸಿದ ಶುಭಮನ್ ಗಿಲ್ (35) ಹಾಗೂ ನಾಯಕ ಅಜಿಂಕ್ಯ ರಹಾನೆ (27) 51 ರನ್‌ಗಳ ಜೊತೆಯಾಟವಾಡಿ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.
ಕಿಚ್ಚ ಸುದೀಪ್ ಮ್ಯಾನೇಜರ್ ಆಗಿ ದ್ವಾರಕೀಶ್ ಪುತ್ರ | Kannada Actor Sudeep | Personal Manager | Dwarakish Son Yogish | ಕನ್ನಡ ನಟ ಸುದೀಪ್ | ಪರ್ಸನಲ್ ಮ್ಯಾನೇಜರ್ | ದ್ವಾರಕೀಶ್ ಪುತ್ರ ಯೋಗೀಶ್ - Kannada Filmibeat
ಕಿಚ್ಚ ಸುದೀಪ್ ಮ್ಯಾನೇಜರ್ ಆಗಿ ದ್ವಾರಕೀಶ್ ಪುತ್ರ
| Updated: Friday, November 30, 2012, 15:28 [IST]
ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ಪುತ್ರ ಡಿ.ಯೋಗೀಶ್ ಅವರು ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಇಷ್ಟು ದಿನ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಈಗವರು ಮ್ಯಾನೇಜರ್ ಆಗಿ ಹೊಸ ವೃತ್ತಿಗೆ ಸ್ವೀಕರಿಸಿದ್ದಾರೆ.
ಅವರು ಮ್ಯಾನೇಜರ್ ಆಗುತ್ತಿರುವುದು ಯಾವುದೋ ಬ್ಯಾಂಕಿಗೋ, ಇನ್ಯಾವುದೋ ಸಂಸ್ಥೆಗೋ ಅಲ್ಲ. ಅಭಿನಯ ಚಕ್ರವರ್ತಿ ಬಿರುದಾಂಕಿತ ನಟ ಕಿಚ್ಚ ಸುದೀಪ್ ಅವರಿಗೆ ಪರ್ಸನಲ್ ಮ್ಯಾನೇಜರ್ ಆಗಿ ನೇಮಕವಾಗಿದ್ದಾರೆ.
ಇನ್ನು ಮುಂದೆ ಸುದೀಪ್ ಅವರ ಎಲ್ಲಾ ವ್ಯವಹಾರಗಳನ್ನು ಯೋಗೀಶ್ ಅವರೇ ನೋಡಿಕೊಳ್ಳಲಿದ್ದಾರೆ. ಅದು ಡೇಟ್ಸ್ ಹೊಂದಾಣಿಕೆ ಇರಬಹುದು, ಸಂಭಾವನೆ ವಿಚಾರ ಆಗಿರಬಹುದು, ಕಥೆಯನ್ನು ಓಕೆ ಮಾಡುವುದು ಹೀಗೆ ಸುದೀಪ್ ಅವರ ಮುಕ್ಕಾಲು ಭಾಗದ ಜವಾಬ್ದಾರಿಯನ್ನು ಹೊರಲಿದ್ದಾರೆ.
ಯೋಗೀಶ್ ನಿರ್ಮಾಣದ ಪ್ರಿಯಾಮಣಿ ಅಭಿನಯದ 'ಚಾರುಲತಾ' ಚಿತ್ರ ಅದ್ಯಾಕೋ ಏನೋ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಸಯಾಮಿಗಳ ಕಥೆಯನ್ನು ಒಳಗೊಂಡಿದ್ದ ಈ ಚಿತ್ರ ಸದ್ದಿಲ್ಲದಂತೆ ಮಕಾಡೆ ಮಲಗಿದ್ದೊಂದು ದುರಂತ.
ದ್ವಾರಕೀಶ್ ಅವರ 50 ವರ್ಷಗಳ ಸಿನಿ ಜೀವನದಲ್ಲಿ 'ಚಾರುಲತಾ' ಚಿತ್ರ ಭಾರಿ ನಿರಾಸೆ ಮೂಡಿಸಿತು. ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಯೋಗೀಶ್ ಹೊತ್ತಿದ್ದರು. ಚಿತ್ರ ಯಾಕೋ ಏನೋ ಎಲ್ಲರ ನಿರೀಕ್ಷೆಯನ್ನೂ ಉಲ್ಟಾಪಲ್ಟಾ ಮಾಡಿತು.
ಯೋಗೀಶ್ ಅವರು ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ 'ವಿಷ್ಣುವರ್ಧನ' ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಯೋಗೀಶ್ ಅವರ ಕಾರ್ಯಕ್ಷಮತೆಯನ್ನು ಹತ್ತಿರದಿಂದ ಕಂಡಿದ್ದ ಸುದೀಪ್ ಈಗ ಅವರನ್ನು ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)
Read more about: ಸುದೀಪ್ ಸಂಭಾವನೆ ದ್ವಾರಕೀಶ್ sudeep remuneration dwarakish
Kannada actor Sudeep has reportedly appointed a personal manager. It is reported that hereafter, the personal manager D Yogish (Senior actor Dwarakish son) will manage his schedules about TV shows, shooting interviews and fixing appointments for other purposes.
ಪ್ರಮುಖ ಪ್ರವಾಸೋದ್ಯಮ ಸ್ಥಳ ತ್ರಿಪುರಾ | Kannada Dunia | Kannada News | Karnataka News | India News
HomeLatest Newsಪ್ರಮುಖ ಪ್ರವಾಸೋದ್ಯಮ ಸ್ಥಳ ತ್ರಿಪುರಾ
27-07-2018 6:35AM IST / No Comments / Posted In: Latest News, Tourism
ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರಾ ಭವ್ಯ ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯವಾಗಿದೆ. ಹಚ್ಚ ಹಸಿರಿನ ಕಣಿವೆ, ಬೆಟ್ಟಗುಡ್ಡಗಳಿಂದಾಗಿ ಕಣ್ಮನ ಸೆಳೆಯುತ್ತದೆ. ಬಾಂಗ್ಲಾ ಗಡಿಯಲ್ಲಿರುವ ತ್ರಿಪುರಾ ದೇಶದ 3 ನೇ ಚಿಕ್ಕರಾಜ್ಯಗಳಲ್ಲಿ ಒಂದಾಗಿದೆ.
ತ್ರಿಪುರಾದಲ್ಲಿ ಸುಮಾರು 19 ವಿವಿಧ ಬುಡಕಟ್ಟು ಸಮುದಾಯಗಳು ವಾಸವಾಗಿವೆ. ತ್ರಿಪುರ್ ಎಂಬ ರಾಜ ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾರಣಕ್ಕೆ ತ್ರಿಪುರಾ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಬ್ರಿಟೀಷರ ಕಾಲದಲ್ಲಿ ಇದು ಉತ್ತಮ ಸ್ಥಾನದಲ್ಲಿತ್ತು ಎನ್ನಲಾಗಿದೆ. ವಿವಿಧ ಭಾಷೆಗಳ ಜನರು ಇಲ್ಲಿ ನೆಲೆಸಿದ್ದಾರೆ. ಪ್ರತಿ ಬುಡಕಟ್ಟು ಜನಾಂಗದವರು ತಮ್ಮ ಸಂಸ್ಕೃತಿಯ ಅನುಸಾರ ವೈವಿಧ್ಯಮಯವಾಗಿ ಹಬ್ಬ ಆಚರಿಸುತ್ತಾರೆ. ಇಲ್ಲಿನ, ನೃತ್ಯ, ಸಂಗೀತಗಳು ಕೂಡ ಪ್ರಮುಖವಾಗಿವೆ.
ಗೋರಿಯಾ ನೃತ್ಯ, ಹೊಜ್ಜಗಿರಿ ನೃತ್ಯ, ಲಿಬಂಗ್ ನೃತ್ಯ, ಮೋಸ್ಕ್ ಸುಲ್ಮನಿ ನೃತ್ಯಗಳು ಗಮನಸೆಳೆಯುತ್ತವೆ. ಅಲ್ಲದೇ, ಕರಕುಶಲ ವಸ್ತುಗಳಿಗೂ ತ್ರಿಪುರಾ ಹೆಸರುವಾಸಿಯಾಗಿದೆ. ಅಗರ್ತಲಾದಲ್ಲಿರುವ ಜಗನ್ನಾಥ ದೇವಾಲಯ, ಉಮಾಮಹೇಶ್ವರಿ ದೇವಾಲಗಳು ಐತಿಹಾಸಿಕ ದೇವಾಲಗಳಾಗಿದ್ದು, ಶ್ರೀಮಂತ ಪರಂಪರೆ ಹೊಂದಿವೆ.
ರೋಸ್ ವ್ಯಾಲಿ ಅಮ್ಯೂಸ್ ಮೆಂಟ್ ಪಾರ್ಕ್ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ದಲಾಯಿ, ಕೈಲಾಶಹರ್, ಉದಯಪುರದ ತ್ರಿಪುರ ಸುಂದರಿ ದೇವಾಲಯ, ಟೀ ಎಸ್ಟೇಟ್ ಗಳು, ಅರಮನೆ, ಮ್ಯೂಸಿಯಂ ಸೇರಿದಂತೆ ಅನೇಕ ನೋಡಬಹುದಾದ ಸ್ಥಳಗಳು ಇಲ್ಲಿವೆ. ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಪಡೆದು ಹೋಗಬಹುದಾಗಿದೆ.
'ಬಿಜೆಪಿ ಆಡಳಿತದಲ್ಲಿ ಕೋಮು ಗಲಭೆ ನಡದೇ ಇಲ್ಲ' | No Communal Voilance During BJP Government Says CC Patil grg
'ಬಿಜೆಪಿ ಆಡಳಿತದಲ್ಲಿ ಕೋಮು ಗಲಭೆ ನಡದೇ ಇಲ್ಲ'
Bengaluru, First Published Mar 15, 2021, 1:15 PM IST
ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ| ಕಾಂಗ್ರೆಸ್‌ನವರು ಮಾತ್ರ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಆರೋಪಿಸುತ್ತಿರುವುದು ಅಸಮಂಜಸ| ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ಗಾಗಿ ಬಳಸಿಕೊಂಡಿದೆ| ಬಿಜೆಪಿಯಲ್ಲಿರುವುದು ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತ: ಸಿಸಿ ಪಾಟೀಲ್‌|
ನರಗುಂದ(ಮಾ.15): ಇಸ್‌ ದೇಶ ಕಾ ಖಾನಾ-ಪೀನಾ, ಸೋಚ್‌ ಥಾ ಪಾಕಿಸ್ತಾನ ಕಾ ಎನ್ನುವವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನಗಳಿಲ್ಲ. ಈ ಹಿಂದೆ ಬಿ.ಆರ್‌. ಯಾವಗಲ್ಲ ಅಧಿಕಾರದಲ್ಲಿದ್ದಾಗ ಹಿಂದೂ-ಮುಸ್ಲಿಂ ಗಲಾಟೆಗಳಾಗಿವೆಯೇ ಹೊರತು ಬಿಜೆಪಿ ಸರ್ಕಾರದಲ್ಲಿ ನಡೆದಿಲ್ಲ ಎಂಬುದನ್ನು ಕ್ಷೇತ್ರದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದಲ್ಲಿ ಪ್ರಕಾಶಗೌಡ ತಿರುಕನಗೌಡ್ರ ನೇತೃತ್ವದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ನೂರಾರು ಕಾರ್ಯಕರ್ತರಿಗೆ ಶುಕ್ರವಾರ ಪಕ್ಷದ ಧ್ವಜವನ್ನು ನೀಡಿ ಅವರು ಮಾತನಾಡಿದರು. ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಈ ಪಕ್ಷದಲ್ಲಿ ಎಲ್ಲ ಸಮಾಜದವರನ್ನು ಸಮಾನ ರೀತಿಯಲ್ಲಿ ಕಾಣಲಾಗುತ್ತದೆ. ಆದರೆ, ಕಾಂಗ್ರೆಸ್‌ನವರು ಮಾತ್ರ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಆರೋಪಿಸುತ್ತಿರುವುದು ಅಸಮಂಜಸವಾದದ್ದು. ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ಗಾಗಿ ಬಳಸಿಕೊಂಡಿದ್ದಾರೆ. ಬಿಜೆಪಿಯಲ್ಲಿರುವುದು ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತ. ಇದಕ್ಕಾಗಿಯೇ ರಾಜ್ಯದ ಜನರು ಬಿಜೆಪಿ ಪ್ರೀತಿಸುತ್ತಿದ್ದಾರೆ ಎಂದರು.
40 ವರ್ಷ ಕಾಂಗ್ರೆಸ್‌ನಲ್ಲಿದ್ದ ಹಿರಿಯ ಮುಖಂಡ ಬಿಜೆಪಿಗೆ ಸೇರ್ಪಡೆ
ರಾಷ್ಟ್ರೀಯ ಬದ್ಧತೆ, ಸಮರ್ಥ ನಾಯಕತ್ವ ಹೊಂದಿರುವ ಬಿಜೆಪಿ ಮುಂದಿನ 20 ವರ್ಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದೇ ಅಧಿಕಾರವನ್ನು ನಿರ್ವಹಿಸಲಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಬೇಕಾಗಿದೆ. ಇದಕ್ಕೆ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ . 150 ಕೋಟಿ ಮೀಸಲಿಟ್ಟಿದೆ. ಅದರಂತೆ ಎಲ್ಲ ಸಮಾಜದವರಿಗೂ ಆದ್ಯತೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಎಂ.ಎಸ್‌. ಕರಿಗೌಡ್ರ ಮಾತನಾಡಿದರು. ನಿಂಗಣ್ಣ ಗಾಡಿ, ಬಾಬಣ್ಣ ಹಿರೇಹೊಳಿ, ಲಾಲಸಾಬ್‌ ಅರಗಂಜಿ, ಬಾಬುಗೌಡ ತಿಮ್ಮನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಗುರುದೇವಿ ಶಾನವಾಡಮಠ, ನೇತಾಜಿಗೌಡ ಕೆಂಪನಗೌಡ್ರ, ಶಾರದಾ ಜವಳಿ, ವಿ.ಕೆ. ಮರಿಗುದ್ದಿ, ಎಂ.ಎಸ್‌. ಪಾಟೀಲ, ಅನಿಲ್‌ ಧರಿಯಣ್ಣವರ, ಉಮೇಶಗೌಡ ಪಾಟೀಲ, ಜಗದೀಶ ಬ್ಯಾಡಗಿ, ಅಶೋಕ ಹೆಬ್ಬಳ್ಳಿ, ಶ್ರೀದೇವಿ ಗುಂಡ್ಲೂರ, ಸಿದ್ದಯ್ಯ ಹೊಸಮನಿ, ಗುರುಬಸಯ್ಯ ನಾಗಲೋಟಿಮಠ, ಬೀರಪ್ಪ ಕಾಡಪ್ಪನವರ ಉಪಸ್ಥಿತರಿದ್ದರು.
ಸಹಕಾರ ಸಂಘಕ್ಕೆ 15 ಕೋಟಿ ವಹಿವಾಟು ಏರಿಕೆ ಗುರಿ | Udayavani – ಉದಯವಾಣಿ
Friday, 22 Jan 2021 | UPDATED: 01:38 AM IST
ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ ಭಾರೀ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಶಿವಮೊಗ್ಗ ಜನತೆ ನಿಗದಿಯಂತೆ ಕಾಮನ್‌ವೆಲ್ತ್‌ ಗೇಮ್ಸ್‌: ಸಿಡಬ್ಲ್ಯುಜಿ ಫೆಡರೇಶನ್‌ ವಿಶ್ವಾಸ ಸಿಸಿಬಿ ಪೊಲೀಸರ ಕಾರ್ಯಾಚರಣೆ : 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್ ಪರೀಕ್ಷೆ ಪಾಸಾಯ್ತು ಹಾಕ್‌-ಐ ಯುದ್ಧ ವಿಮಾನ : ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕ: ಮೂಲ ಕಡತ ಹಾಜರುಪಡಿಸಲು ಹೈಕೋರ್ಟ್ ಸೂಚನೆ ಹಕ್ಕಿ ಜ್ವರದ ಹಿನ್ನೆಲೆ: ಅರ್ಧ ಬೇಯಿಸಿದ ಮೊಟ್ಟೆ ತಿನ್ನಬೇಡಿ ಎಂದ ಆಹಾರ ಪ್ರಾಧಿಕಾರ ಅಕ್ರಮ ಕಸಾಯಿಖಾನೆಗೆ ಪೋಲೀಸರ ದಾಳಿ : ಓರ್ವನ ಬಂಧನ, ಗೋ ಮಾಂಸ ವಶ ಗ್ರಾಹಕರ ಬರ್ಗರ‌ನ್ನೇ ಸ್ವಾಹಾ ಮಾಡಿದ ಡೆಲಿವರಿ ಬಾಯ್‌! ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ ! ಮಲೇಷಿಯಾಕ್ಕೆ ರಫ್ತಾಗುತ್ತಿದ್ದ 400ಟನ್ ಗೂ ಅಧಿಕ ಅಕ್ರಮ ಪಡಿತರ ಅಕ್ಕಿ ವಶ : ತನಿಖೆ ಚುರುಕು
Team Udayavani, Dec 2, 2020, 11:35 AM IST
ಹೊಸಕೋಟೆ: ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ‌ ಸಹಕಾರ ಸಂಸ್ಥೆಯು ಮುಂದಿನ ಹಣಕಾಸು ವರ್ಷದಲ್ಲಿ ವಹಿವಾಟನ್ನು 15 ಕೋಟಿ ರೂ.ಗಳಿಗೆ ಏರಿಸುವ ಗುರಿ ಹೊಂದಿದ್ದು, ಸದಸ್ಯರು ಸಹಕರಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷೆ ಪಿ.ಮೈತ್ರಿದೇವಿ ಮನವಿ ಮಾಡಿದರು.
ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 2018ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1600 ಸದಸ್ಯರಿದ್ದು, 39 ಲಕ್ಷ ರೂ.ಷೇರು ಬಂಡವಾಳ ಹೊಂದಿದೆ. 2019-20ರಲ್ಲಿ 6.5 ಕೋಟಿ ರೂ. ವಹಿವಾಟು ನಡೆಸಿದ್ದು, ಸದಸ್ಯರಿಗೆ ವ್ಯವಹಾರದ ಸಾಲವಾಗಿ 1.28 ಕೋಟಿ ರೂ., 27 ಲಕ್ಷ ರೂ. ಚಿನ್ನಾಭರಣ ಆಧಾರ, ಸ್ವಸಹಾಯ ಸಂಘಗಳಿಗೆ 13 ಲಕ್ಷ ರೂ. ಸಾಲ ವಿತರಿಸ ‌ಲಾಗಿದೆ. ಶೇ.96ರಷ್ಟು ವಸೂಲಾತಿ ದಾಖಲಿಸಿದೆ. ಸದಸ್ಯತ್ವ ವೃದ್ಧಿಗೆ ಯೋಜಿಸಿದ್ದು, ಸದಸ್ಯರಿಗೆ ಮತ್ತಷ್ಟು ಸಾಲ ವಿತರಿಸ ‌ಲು ಸಾಧ್ಯವಾಗಲಿದೆ ಎಂದರು.
ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಸಿ.ರುದ್ರಾರಾಧ್ಯ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರು ‌ ಹಾಗೂ ಆಡ‌ಳಿತ ಮಂಡಳಿಯಪರಸ್ಪರಸಹಕಾರಅತ್ಯವಶ್ಯವಾಗಿದೆ. ಆಡಳಿತ ಮಂಡಳಿಯ ನಿಸ್ವಾರ್ಥ ಸೇವಾ ಮನೋಭಾವದಿಂದ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯ. ಸಹಕಾರ ‌ ಸಂಘಗಳಿಗೆ ಅನ್ವಯಿಸುವ ನಿಯಮಾವಳಿಗಳನ್ನು ರಚಿಸಿಕೊಂಡು ಸದಸ್ಯರ ವಿಶ್ವಾಸ ಗಳಿಸಿಕೊಂಡು ಬಲಿಷ್ಠವಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಂಸ್ಥೆಯ ಅಧಿಕಾರಿ ಬಿ.ಎಂ. ಲಕ್ಷ್ಮೀ ವರದಿ ಮಂಡಿಸಿದರು. ಉಪಾಧ್ಯಕ್ಷೆ ಶಾರದ ಅಯ್ಯರ್‌, ಸಲಹೆಗಾರರಾದ ‌ ಮುನಿವೀರಪ್ಪ, ಎಚ್‌. ಕೆ.ಭೀಮಯ್ಯ, ಷರಾಬ್‌ ಮುನಿಶಾಮಯ್ಯ ಟ್ರಸ್ಟಿನ ನಿರ್ದೇಶಕ ಎಚ್‌.ವಿ.ರಮೇಶ್‌, ವಕೀಲರಾದ ‌ ನಾಗಜ್ಯೋತಿ, ಸಿಇಒ ಎಂ.ಎಸ್‌. ಶಿವರಾಮ್‌, ನಿರ್ದೇಶಕರಾದ ಅಮೂಲ್ಯ, ಪ್ರಭಾಮಣಿ, ರಾಜೇಶ್ವರಿ, ಸಂಪಮ್ಮ,ಹೇಮಲತಾ, ದೀಪಿಕ, ಯಶೋಧ, ಅಶ್ವತ್ಥಮ್ಮ ಇತರರಿದ್ದರು.
ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು » Kudroli Gokarnanatha Kshetra
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಅನುಕರಣೀಯ ಹೆಜ್ಜೆ
ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು
ಮಾನವತೆಯ ಹರಿಕಾರ, ಯುಗಪುರುಷ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ದಿವ್ಯ ಹಸ್ತದಿಂದಲೇ ಪ್ರತಿಷ್ಠಾಪನೆಗೊಂಡು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಸಹಾಯ, ಸಹಕಾರ ಬೆಂಬಲದೊಂದಿಗೆ ನವೀಕರಣಗೊಂಡು ವಿಶ್ವವಿಖ್ಯಾತಿ ಗಳಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರ ಕರೋನಾ ಸಂದರ್ಭ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಅಪೂರ್ವ ಸೇವೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಈ ಅನುಕರಣೀಯ ನಡೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.
ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಬೆಂಬಲದೊಂದಿಗೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್‍ರವರ ಉಪಸ್ಥಿತಿಯಲ್ಲಿ , ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‍ರವರ ವಿಶೇಷ ಮುತುವರ್ಜಿಯಿಂದ ಭಕ್ತರ ಸಹಕಾರದಲ್ಲಿ ಕರೋನಾ ಲಾಕ್‍ಡೌನ್ ಸಂದರ್ಭ ಊಟಕ್ಕೂ ತೊಂದರೆ ಅನುಭವಿಸಿದ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಸುಮಾರು 350 ಕಿಂಟ್ವಾಲ್ ಅಕ್ಕಿ ನೀಡಿದಲ್ಲದೆ, ಸುಮಾರು 1250 ಮಂದಿಗೆ 42 ದಿನಗಳ ಕಾಲ ಶ್ರೀ ಕ್ಷೇತ್ರದಿಂದಲೇ ಅನ್ನದಾನಕ್ಕೆ ವ್ಯವಸ್ಥೆ ಮಾಡಿ, ಅಸಹಾಯಕರ ನೋವಿಗೆ ಸ್ಪಂದಿಸುವ ಮೂಲಕ ಧಾರ್ಮಿಕ ಕ್ಷೇತ್ರದ ಇತಿಹಾಸದಲ್ಲೊಂದು ಮೈಲುಗಲ್ಲು ನಿರ್ಮಿಸಿ ಇತರರಿಗೆ ಮೇಲ್ಪಂಕ್ತಿಯಾಯಿತು. ಒಟ್ಟು 12.80 ಲಕ್ಷ ರೂಪಾಯಿಯನ್ನು ದಾನಿಗಳ ಮೂಲಕ ಸಂಗ್ರಹಿಸಿ ಅಶಕ್ತರ ಆಶಾಕಿರಣವಾಗಿದೆ.
ಒಂದು ಧಾರ್ಮಿಕ ಕ್ಷೇತ್ರದಿಂದ ಈ ರೀತಿಯಲ್ಲೂ ಅವಶ್ಯಕತೆಯಿದ್ದಾಗ ಅಸಹಾಯಕರ ಸೇವೆ ಸಾಧ್ಯ ಎಂಬುದನ್ನು ಶ್ರೀಕ್ಷೇತ್ರ ತೋರಿಸಿಕೊಟ್ಟಿದೆ. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳನ್ನು ಪೂರ್ಣ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಶ್ರೀಕ್ಷೇತ್ರ ಜನಾರ್ದನ ಪೂಜಾರಿಯವರಿಂದ ಆನೇಕ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳು ಈ ಕ್ಷೇತ್ರದಿಂದ ನಡೆಯುತ್ತಿರುವುದು ಸಮಾಜಕ್ಕೆ ಹೆಮ್ಮೆಯೆನಿಸಿದೆ.
ಶ್ರೀಕ್ಷೇತ್ರದಿಂದ ನಡೆಯುತ್ತಿರುವ ಬಡವರ ಮಕ್ಕಳ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ವೈದ್ಯಕೀಯ ಸಹಾಯಧನ, ಅನ್ನದಾನ, ಸೇರಿದಂತೆ ಹತ್ತು ಹಲವು ಸಾಮಾಜಿಕ ಸೇವಾಕಾರ್ಯಗಳೊಂದಿಗೆ ಕರೋನಾದಂತ ಸಾಂಕ್ರಾಮಿಕ ರೋಗದಿಂದಾಗಿ ನಲುಗಿದ ಅಸಹಾಯಕ ಜನತೆಯ ಕಣ್ಣೀರು ಒರೆಸುವ ಮೂಲಕ ದೇವರ ಸೇವೆ ಸಾಧ್ಯ ಎಂದು ತೋರಿಸಿಕೊಟ್ಟ ಶ್ರೀ ಗೋಕರ್ಣನಾಥ ಕ್ಷೇತ್ರದ ಈ ಮಾನವೀಯ ಸಾಮಾಜಿಕ ಸೇವೆ ಸಮಾಜಕ್ಕೆ ಮೇಲ್ಪಂಕ್ತಿಯಾಗಿ ಹೆಮ್ಮೆ ಗೌರವ ತಂದಿದೆ.
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳಂತೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೊಂದವರ, ಶೋಷಿತರ, ಬಡವರ ಕಣ್ಣೀರು ಒರೆಸಿ ಅವರ ಬಾಳಿಗೆ ಬೆಳಕು ನೀಡುವ ಇಂತಹ ಮಾನವೀಯ ಸೇವೆ ನಡೆಯುವಲ್ಲಿ ಸರ್ವ ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಜನಾರ್ದನ ಪೂಜಾರಿಯವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಜನಾರ್ದನ ಪೂಜಾರಿಯವರ ಆಶಯದಂತೆ ಈ ಅಭೂತ ಪೂರ್ವ ಸೇವಾ ಕೈಂಕರ್ಯ ನಡೆಯುವಲ್ಲಿ ಮುನ್ನಡೆದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್, ಅದನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯಂತ ಮುತುವರ್ಜಿಯಿಂದ ಶ್ರಮಿಸುತ್ತಿರುವ ಕೋಶಾಧಿಕಾರಿ ಪದ್ಮರಾಜ್, ಸಹಕಾರ ನೀಡುತ್ತಿರುವ ಆಡಳಿತ ಮಂಡಳಿ ಟ್ರಸ್ಟಿಗಳು, ಸದಸ್ಯರು, ಈ ಬೃಹತ್ ಅಭಿಯಾನಕ್ಕೆ ಕೈ ಜೋಡಿಸಿದ ಶ್ರೀ ಕ್ಷೇತ್ರದ ಹಾಗೂ ಶ್ರೀ ನಾರಾಯಣ ಗುರುವರ್ಯರ ಸಮಸ್ತ ಭಕ್ತರಿಗೆ ಶ್ರೀದೇವರ, ಶ್ರೀಗುರುಗಳ ಅನುಗ್ರಹದ ಜತೆಗೆ ಸಹಾಯ ಪಡೆದ ಅಸಹಾಯಕ ಹಾರೈಕೆಯೇ ಶಕ್ತಿಯಾಗಿದೆ.
ಅಂಚೆಯಲ್ಲಿ ಪತ್ರ ಮಾತ್ರವಲ್ಲ ಮಾವಿನ ಹಣ್ಣು ಕೂಡ ನಿಮ್ಮ ಮನೆಗೆ ಬರುತ್ತೆ! | You will get the mangos via post too - Kannada Oneindia
17 min ago ಯುಗಾದಿ ವಿಶೇಷ: ಪ್ರಕೃತಿಯೇ ತೋರಣ ಕಟ್ಟಿ ಸ್ವಾಗತಿಸುವ ಹಬ್ಬ
26 min ago ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿ; ವಲಸೆ ಕಾರ್ಮಿಕರ ಗುಳೆ
56 min ago ಭಾರತದಲ್ಲಿ 24 ಗಂಟೆಯಲ್ಲಿ 1,61,736 ಹೊಸ ಕೋವಿಡ್ ಪ್ರಕರಣ
mango lalbagh bengaluru post ಮಾವು ಲಾಲ್‌ಬಾಗ್ ಬೆಂಗಳೂರು ಅಂಚೆ
| Published: Wednesday, May 29, 2019, 8:48 [IST]
ಬೆಂಗಳೂರು, ಮೇ 29: ಅಂಚೆಯಲ್ಲಿ ಪತ್ರ ಮಾತ್ರವಲ್ಲ ಮಾವಿನ ಹಣ್ಣನ್ನೂ ಕೂಡ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಅಂಚೆ ಇಲಾಖೆ ಮಾಡಿದ್ದು ಕೊನೆಗೂ ಫಲ ಸಿಕ್ಕಿದೆ. ಗ್ರಾಹಕರು ಬುಕ್ ಮಾಡಿದ ನಂತರ ರೈತರು ಆ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿಕೊಡಲು ನಾಲ್ಕು ದಿನಗಳ ಕಾಲ ಸಮಯಾವಕಾಶ ಬೇಕಾಗುತ್ತದೆ. ಮಂಗಳವಾರ ಆರ್ಡರ್ ಮಾಡಿದರೆ ಶುಕ್ರವಾರ ಹಣ್ಣು ನಿಮ್ಮನ್ನು ಬಂದು ತಲುಪುತ್ತದೆ.
ಕನಿಷ್ಠ ಮೂರು ಕೆಜಿ ಹಣ್ಣುಗಳನ್ನು ಬುಕ್ ಮಾಡಬಹುದಾಗಿದೆ. ಕಾರ್ ಸಿರಿ ಬ್ರ್ಯಾಂಡ್ ಯೋಜನೆ ಮೂಲಕ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾವು ಖರೀದಿಸಬೇಕಾದರೆ www.karisirimangos.karnataka.gov.inಗೆ ಭೇಟಿ ನೀಡಬಹುದಾಗಿದೆ.
ಲಾಲ್‌ಬಾಗ್‌ನಲ್ಲಿ ಮೇ 30ರಿಂದ ಮಾವು ಮತ್ತು ಹಲಸು ಹಣ್ಣಿನ ಮೇಳ ಆರಂಭವಾಗಲಿದೆ. ಬಾದಾಮಿ, ಮಲ್ಲಿಕಾ, ಕಾಲಪ್ಪಾಡು ಸೇರಿದಂತೆ 10-12 ಜಾತಿಯಮಾವಿನ ಹಣ್ಣುಗಳು ಮೇಳದಲ್ಲಿರಲಿವೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 8 ಜಿಲ್ಲೆಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. 112 ಮಳಿಗೆಗಳಲ್ಲಿ ಮಾವು ಹಾಗೂ 10 ಮಳಿಗೆಗಳಲ್ಲಿ ಹಲಸು ಮರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳ್ಗೆ 11.30ಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜೂ.24ರವರೆಗೂ ಮೇಳ ನಡೆಯಲಿದೆ.
Horticulture department and Mango board took initiative to deliver mangos to the doors of the customers via postal department
ಟಿವಿ ಬಿಟ್ರು - ನೆಟ್ಟಿಗೆ ಬಂದ್ರು : ನೆಟ್ ಫಿಕ್ಸ್ ಏನಿದು..?
ಸಿನಿಮಾ ಥೇಟರು, ಮಲ್ಟಿಪ್ಲೆಕ್ಸು, ಟೀವಿಗಳನ್ನು ಮೀರಿ ಮನರಂಜನೆಯೆಂಬುದು ಅಂಗೈಯೆಂಬ ಅಮರಾವತಿಗೆ ಬಂದು ತಲುಪಿರುವ ಹೊತ್ತಲ್ಲಿ, ಎಲ್ಲ ದಾರಿಗಳೂ ನೆಟ್ಟಗೆ ನೆಟ್‌ನತ್ತ ಸಾಗುತ್ತಿರುವ ದಿನಗಳ ಕುರಿತು ಒಂದು ಚಿಂತನೆ.
ಶ್ರೀನಿಧಿ ಡಿ.ಎಸ್
ಬೆಂಗಳೂರು : ವಿಧಾನಸೌಧ ಸ್ಟಾಪಿನಲ್ಲಿ ಮೆಟ್ರೋ ನಿಂತಾಗ, ನನ್ನ ಪಕ್ಕದಲ್ಲೇ ಒಬ್ಬರು ಹಿರಿಯ ಮಹಿಳೆ ಬಂದು ನಿಂತರು. ಲಗುಬಗೆಯಿಂದ ಮೊಬೈಲು ತೆಗೆದೋರೇ, ಹೆಡ್ ಸೆಟ್ಟು ಸಿಕ್ಕಿಸಿಕೊಂಡು, ಅದ್ಯಾವುದೋ ಸಿನಿಮಾ ನೋಡಲು ಶುರುಮಾಡಿದರು. ಅಷ್ಟು ಗಡಿಬಿಡಿಯಿಂದ ಅದೇನು ನೋಡುತ್ತಿದ್ದಾರೆ ಎಂದು ಸಹಜ ಕುತೂಹಲದಿಂದ ಕಣ್ಣಾಡಿಸಿದರೆ, ಆಪ್ ಒಂದರಲ್ಲಿ ಮೊದಲೇ ಡೌನ್ ಲೋಡು ಮಾಡಿಟ್ಟುಕೊಂಡಿದ್ದ ಹಾಲಿವುಡ್ ಸಿನಿಮಾ, ಐರನ್ ಮ್ಯಾನ್. ನನ್ನಮ್ಮನ ವಯಸ್ಸಿನ ಮಹಿಳೆಯೊಬ್ಬರು ಈ ಚಿತ್ರ ನೋಡುತ್ತಿದ್ದಾರಲ್ಲ ಎಂದು ಅಚ್ಚರಿಯೂ, ಖುಷಿಯೂ ಆಯಿತು.
ಹಾಂ, ಇಂತಹ ಅನುಭವ ಇದೇ ಮೊದಲೇನೂ ಅಲ್ಲ. ಬೆಂಗಳೂರಿನ ಮೆಟ್ರೋ ಹತ್ತಿದ ಕೂಡಲೇ, ಅದರ ಅಂದ ಚಂದ ಗಮನ ಸೆಳೆಯುತ್ತದೋ ಇಲ್ಲವೋ, ಇದೊಂದು ವಿಚಾರ ಮಾತ್ರ ಸಟ್ಟನೆ ತಲೆಗೆ ಹೋಗುತ್ತದೆ. ಏರು ಹೊತ್ತಿನ ಕಿಕ್ಕಿರಿದ ಸಂದಣಿಯಲ್ಲೂ ವಯಸ್ಸಿನ ಯಾವುದೇ ಬೇಧಭಾವ ಇಲ್ಲದೇ, ಎಲ್ಲರೂ ಎರಡೂ ಕಿವಿಗಳಿಗೆ ಹೆಡ್ಫೋನು ಸಿಕ್ಕಿಸಿಕೊಂಡು ತಮ್ಮದೇ ಏಕಾಂತವನ್ನು ಸೃಷ್ಟಿ ಮಾಡಿಕೊಂಡು ಮೊಬೈಲಿನೊಳಗೆ ಕಳೆದು ಹೋಗಿರುತ್ತಾರೆ.
ತಮ್ಮಕ್ಕಷ್ಟೆ ತಾವು ನಗುತ್ತ, ಪೆಚ್ಚುಮೋರೆ ಹಾಕುತ್ತ ಪಕ್ಕದವನ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದ ಹಾಗೆ ನಿಂತಿರುತ್ತಾರೆ. ಯೂಟ್ಯೂಬು, ಫೇಸ್ ಬುಕ್ಕು, ಹಾಟ್ ಸ್ಟಾರುಗಳೇ ಮೊದಲಾದ ಥರಹೇವಾರಿ ಅಪ್ಲಿಕೇಶನ್ನುಗಳಲ್ಲಿನ ರಂಜನೆಯ ಲೋಕದಲ್ಲಿ ಸೇರಿಕೊಂಡಿರುತ್ತಾರೆ. ಬೆಂಗಳೂರು ಮಾತ್ರವಲ್ಲ, ಜಗತ್ತಿನ ಎಲ್ಲಕಡೆ ಇವತ್ತಿನ ಹೊತ್ತಿನಲ್ಲಿ ಕಾಣುವ ಸರಳ ದೃಶ್ಯ ಇದು. ಬೇರೆಡೆಗಳಲ್ಲಿ ಕೊಂಚ ಬೇಗ ಶುರುವಾಗಿದ್ದು, ಭಾರತಕ್ಕೆ ಮಾತ್ರ ತಡವಾಗಿ ಬಂದಿದೆ, ಅಷ್ಟೆ.
ಅಂತರ್ಜಾಲ ಬಳಕೆಯ ಕ್ರಾಂತಿ ಭಾರತದಲ್ಲಿ ಇಪ್ಪತ್ತನೇ ಶತಮಾನದ ಅಂತ್ಯದಲ್ಲಾಯಿತು. ಸ್ಮಾರ್ಟ್ ಫೋನುಗಳು ಇಲ್ಲಿಗೆ ಲಿಟ್ಟದ್ದೂ ಅಲ್ಲಿಂದ ಕೆಲ ವರುಷಗಳ ನಂತರ. ಮೊಬೈಲ್ ಫೋನೆಂಬುದರಲ್ಲಿ ಕರೆ ಮಾಡುವ ಸೌಲಭ್ಯಕ್ಕಿಂತ ಬೇರೆಲ್ಲ ವಿಚಾರಗಳು ಮಹತ್ವ ಪಡೆದುಕೊಳ್ಳಲು ಆರಂಭವಾಗಿದ್ದೂ ಆವಾಗಲೇ. ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಗಳೆಂಬ ಥರಹೇವಾರಿ ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿದ ಸ್ಮಾರ್ಟ್ ಫೋನುಗಳು ಭಾರತೀಯ ತಂತ್ರಜ್ಞಾನ ಮಾರು ಕಟ್ಟೆಯ ಮೇಲೆ ಅಕ್ಷರಶಃ ದಾಳಿಯನ್ನೇ ನಡೆಸಿ, ಇಲ್ಲಿನ ಗ್ರಾಹಕರಿಗೆ ದಿಗಿಲಾಗುವ ಮಟ್ಟದ ಆಕರ್ಷಕ ಆಯ್ಕೆಗಳು ಲಭ್ಯವಾದವು. ಬೆರಳಂಚಿನ ಸ್ಪರ್ಶಕ್ಕೆ ಜಗತ್ತೇ ತೆರೆದುಕೊಳ್ಳುವ ಈ ರೋಮಾಂಚನ ಯಾವಾಗ ಆರಂಭವಾಯಿತೋ, ಅಂದಿನಿಂದ ಇಂದಿನವರೆಗೂ, ತೋರು ಬೆರಳ ತುದಿಗೆ ಮಾಹಿತಿ ಪ್ರವಾಹವೇ ಹರಿದು ಬರುತ್ತಿದೆ. ಬೇಕೋ ಬೇಡವೋ ಧಂಡಿಯಾಗಿ ಮೊಬೈಲು ತುಂಬ ಮನೋರಂಜನೆ ತುಂಬಿಕೊಂಡಿದೆ.