text stringlengths 0 61.5k |
|---|
ಯಾವಾಗ ಜಿಯೋ ಎಂಬ ದೂರವಾಣಿ ದೈತ್ಯ ಬಂದು, ಮೆಗಾಬೈಟುಗಳ ಪ್ರಪಂಚದಿಂದ ಗಿಗಾಬೈಟುಗಳ ಅಗಾಧ ಅಂತರ್ಜಾಲ ಪ್ರಪಂಚವನ್ನು ದರ್ಶನ ಮಾಡಿಸಿತೋ, ಅಲ್ಲಿಂದಾಚೆಗೆ ನಡೆದದ್ದು ಮನರಂಜನೆಯ ಮೇಘಸ್ಪೋಟ! ಆಮೇ ವೇಗದಲ್ಲಿ ದಿನಕ್ಕೆ ಐವತ್ತು ಅರವತ್ತು ಎಂಬೀಗಳಲ್ಲಿ ಬದುಕುತ್ತಿದ್ದ ಜಂಗಮಜೀವಿಗಳಿಗೆ ಒಮ್ಮೆಗೇ ತಿಂಗಳುಗಳ ಕಾಲ ಉಚಿತವಾಗಿ ನಾಲ್ಕಾರು ಜೀಬಿಗಳ ಡಾಟಾ ಪ್ಯಾಕ್, ಅದೂ ಭರಪೂರ ವೇಗದಲ್ಲಿ! ನಿತ್ಯ ಗಂಜಿಯುಣ್ಣುತ್ತಿದ್ದವನಿಗೆ ಮೃಷ್ಟಾನ್ನ ಭೋಜನದ ಸಂಭ್ರಮ. ಇದೇನು ಭ್ರಮೆಯೋ ಸತ್ಯವೋ ಅರಿಯಲಾಗದ ಪರಿಸ್ಥಿತಿ. ಮೊದಮೊದಲು ಹೀಗಳೆದವರೂ ಕೊನೆಗೆ ಅದೇ ದಾರಿಗೆ ಬಂದರು. ಒಂದು ಜೀಬಿ ಇಂಟರ್ ನೆಟ್‌ಗೆ ನಾಲ್ಕುನೂರು ರೂಪಾಯಿಗಳಿಂದ ನಾಲ್ಕೆಂಟು ರೂಪಾಯಿಗೆ ಇಳಿದದ್ದು ಪವಾಡ ಸದೃಶವಾಗಿತ್ತು. ಇದಾದಮೇಲೆ ಭಾರತದ ಸಕಲೆಂಟು ದೂರವಾಣಿ ಕಂಪನಿಗಳೂ ತಮ್ಮ ಅಂತರ್ಜಾಲ ದರವನ್ನು ಇಳಿಸಲೇಬೇಕಾಯಿತು. |
ಈ ಮೊಬೈಲ್ ಕಂಪನಿಗಳ ಡಾಟಾಸಮರದಲ್ಲಿ ಕೊನೆಗೂ ಗೆದ್ದಿದ್ದು, ಬಳಕೆದಾರನೇ. ತಿಂಗಳಿಗೆ ಸಾಕಾಗುತ್ತಿದ್ದ ಒಂದು ಜಿಬಿ ಎಂಬ ಮಾಯಾಂಗನೆ, ಈಗ ಒಂದನೇ ದಿನ ಸಂಜೆಯವರೆಗೂ ಬರುವುದಿಲ್ಲ ಎಂಬಲ್ಲಿಗೂ ಬಂತು! ಹೆಚ್ಚೂಕಡಿಮೆ ಉಚಿತವಾಗಿ ದೊರಕಿದ ಈ ೪ಜಿ ಇಂಟರ್ ನೆಟ್ ಭಾರತದ ಮನರಂಜನಾ ಪ್ರಪಂಚದ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಕುಟುಂಬವೆಲ್ಲ ಕೂತು ಸಂಜೆಯಿಂದ ರಾತ್ರಿಯವರೆಗೆ ಮನೆಯಲ್ಲಿ ಟೀವಿ ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡುವ ಕಾಲ, ನಿಧಾನಕ್ಕೆ ಮಾಯವಾಗುತ್ತಿದೆ. ಯಾಕೆಂದರೀಗ ಅಪ್ಪ ಅಮ್ಮ ಮಗ ಮಗಳು, ಎಲ್ಲರ ಕೈಯಲ್ಲೂ ೪ಜಿ ಮೊಬೈಲು. ಪ್ರತೀ ಮೊಬೈಲುಗಳಲ್ಲೂ ಹತ್ತಾರು ಅಪ್ಲಿಕೇಶನ್ನುಗಳು. ರಾತ್ರಿ ನೋಡಲಾಗದ ಸೀರಿಯಲ್ಲು ಅಲ್ಲೇ ಕೈಯಂಚಿನ ಮೊಬೈಲ್ ನಲ್ಲಿ ಈ ಕ್ಷಣ ಪ್ರತ್ಯಕ್ಷ. ಹೆಂಡತಿ ಸೀರಿಯಲ್ ನೋಡಿದರೆ ನೋಡಿಕೊಳ್ಳಲಿ, ಐಪಿಎಲ್ ಮ್ಯಾಚು ಕರತಲದಲ್ಲೇ ಕಾಣಿಸುತ್ತದೆ. |
ರಿಮೋಟ್ ಗಾಗಿ ಹೋರಾಟವಿಲ್ಲ, ಇಷ್ಟದ ಕಾರ್ಯಕ್ರಮಕ್ಕಾಗಿ ಕಾದಾಟವಿಲ್ಲ. ಗಂಡ ಹೆಂಡಿರಿಬ್ಬರೇ ಇರುವ ನ್ಯೂಕ್ಲಿಯರ್ ಕುಟುಂಬ ಕೂಡ ಮತ್ತೂ ವಿಭಜನೆಗೆ ಒಳಗಾಗಿ ಸೋಫಾದ ಒಂದೊಂದು ಮೂಲೆಗೆ ಸೇರಿ ಹೋಗಿವೆಮತ್ತು ತಮ್ತಮ್ಮ ಮೊಬೈಲು ಸ್ಕ್ರೀನುಗಳೊಳಗೆ ಕಣ್ಣು ಕೀಲಿಸಿವೆ. ಮೊಬೈಲ್ ಎಂಬ ತೀರದ ದಾಹದಲ್ಲಿರುವ ಬಳಕೆದಾರರ ಬಾಯಾರಿಕೆ ತಣಿಸಲೆಂದೇ, ಮನರಂಜನೆಯ ಕಂಟೆಂಟ್ ಸೃಷ್ಟಿ ಮಾಡುವ ದೊಡ್ಡದೊಂದು ಸಮೂಹವೇ ನಮ್ಮಲ್ಲಿ ತಯಾರಾಗಿ ಕುಳಿತಿದೆ. ಮುಂದೊಂದು ದಿನ ಭಾರತದಲ್ಲಿ ಇಂತಹ ನೆಟ್ ಕ್ರಾಂತಿ ಆಗುತ್ತದೆ ಎಂಬ ಅಂದಾಜಿದ್ದ ಕಂಪನಿಗಳು ಹಲವು. |
ಅವರುಗಳ ದೂರದೃಷ್ಟಿ, ನಮ್ಮ ಮಾರುಕಟ್ಟೆಯನ್ನು ಮೊದಲೇ ಅಧ್ಯಯನ ಮಾಡಿತ್ತು ಕೂಡ. ಜಿಯೋ ಗುಲ್ಲೆಬ್ಬಿಸಿದ ಹೊತ್ತಲ್ಲೇ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂತು, ಅದರ ಬೆನ್ನಿಗೇ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ಬಂದವು. ಈ ಆಪ್ ಗಳೀಗ ನಮ್ಮ ಮೊಬೈಲು ಗಳಲ್ಲಿ ವಿರಾಜಮಾನರಾಗಿ ಒಂದೆರಡು ವರುಷಗಳೇ ಕಳೆದಿವೆ. ಇವರಿಗೆ ಸೆಡ್ಡು ಹೊಡೆಯಲೆಂದೇ ನಮ್ಮ ನೆಲದ ಮಂದಿಯೂ ಎದ್ದು ನಿಂತಿದ್ದಾರೆ. |
ರಂಜನಾತ್ಮಕ ಆಪ್ ಅನ್ನು ಎಕ್ತಾಕಪೂರ್ ಹೊರ ತಂದಿದ್ದರೆ, ಎರೋಸ್ ನೌ ಸೇರಿದಂತೆ ಹಲ ಸಿನಿಮಾ ತಯಾರಿಕಾ ಕಂಪನಿಗಳು ಅಪ್ಲಿಕೇಶನ್ ತಂದಿವೆ, ಜಿಯೋ ಟೀವಿ, ಏರ್‌ಟೆಲ್ ಟಿವಿ, ಮೊದಲಾದ ಆಪ್‌ಗಳು ಶುರುವಾಗಿದೆ. ಪ್ರಾಯಶಃ ಹೆಚ್ಚಿನೆಲ್ಲ ಪ್ರಮುಖ ಮನರಂಜನಾ ಟಿವಿ ವಾಹಿನಿಗಳಂತೂ ತಮ್ಮ ಅಪ್ಲಿಕೇಶನ್ ಈಗಾಗಲೇ ಹೊರತಂದಿವೆ. ಕಲರ್ಸ್ ನ ವೂಟ್, ಝೀ ವಾಹಿನಿಯ ಝೀ 5, ಸನ್ ನೆಟ್ ವರ್ಕ್ ನ ಸನ್ ನೆಕ್ಸ್ಟ್, ಸ್ಟಾರ್ ಚಾನಲುಗಳ ಹಾಟ್ ಸ್ಟಾರ್, ಸೋನಿಯ ಸೋನಿಲೈವ್, ಹೀಗೆ ಎಲ್ಲ ಮನರಂಜನಾ ವಾಹಿನಿಗಳ ಧಾರಾವಾಹಿಗಳು, ಸಿನಿಮಾಗಳು ಮೊಬೈಲ್ ನಲ್ಲೇ ಲಭ್ಯ ಈಗ. |
ಕನ್ನಡದ ಧಾರಾವಾಹಿಯೊಂದು ಅನಾಯಾಸವಾಗಿ ಮೊಬೈಲ್ ನಲ್ಲೇ ನೋಡಲು ಸಿಕ್ಕರೆ, ಅದೂ ಹೆಚ್ಚಿನ ಜಾಹೀರಾತುಗಳ ಕಿರಿಕಿರಿ ಇಲ್ಲದೇ- ಟಿವಿಯಲ್ಲಿ ನೋಡುವ ರಗಳೆ ಯಾಕೆ ಬೇಕು ಹೇಳಿ? ಇಷ್ಟವಾದ ಸಂಚಿಕೆಗಳ ಮರುವೀಕ್ಷಣೆ, ಸರಳವಾಗಿ ಇತರರೊಡನೆ ಹಂಚಿಕೊಳ್ಳುವ ಅವಕಾಶ, ಹೊಸ ಎಪಿಸೋಡು ಬಂದರೆ ಠಣ್ಣೆನ್ನುವ ನೋಟಿಫಿಕೇಷನ್ನು! ಇನ್ನೇನು ಬೇಕು? ಇಂತಹ ಎಲ್ಲ ಅಪ್ಲಿಕೇಶನ್ನುಗಳ ಡೌನ್ ಲೋಡ್ ಸಂಖ್ಯೆಯನ್ನು ಗಮನಿಸಿದಾಗ ದಿನೇ ದಿನೇ ಇವುಗಳ ಜನಪ್ರಿಯತೆ ಹೆಚ್ಚುತ್ತಿರುವುದಂತೂ ಸ್ಪಷ್ಟ. |
ವಿದೇಶೀ ಸಿನಿಮಾಗಳು, ಸೀರಿಸ್ ಗಳಿಗಷ್ಟೇ ಸೀಮಿತವಾದ ಅಪ್ಲಿಕೇಶನ್ ಗಳಾಗಿದ್ದ ನೆಟ್ ಫ್ಲಿಕ್ಸ್, ಅಮೇಜಾನ್ ಕೂಡ ಈಗ ಇದೇ ಜಾಡು ಹಿಡಿದಿವೆ. ಭಾರತದ ಮಂದಿ ತಮ್ಮ ಮಣ್ಣಿನ ಇಲ್ಲಿನ ಕಥೆಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಅರಿತುಕೊಂಡಿರುವ ಇವರುಗಳು ಈಗ ಇಲ್ಲಿನದೇ ಕಥೆಗಳನ್ನು ಧಾರಾವಾಹಿ, ಸಿನಿಮಾಗಳ ರೂಪದಲ್ಲಿ ನೇರವಾಗಿ ಮೊಬೈಲ್ ತೆರೆಗೆ ತರುತ್ತಿದ್ದಾರೆ. 'ಒರಿಜಿನಲ್ಸ್' ಎಂದೇ ಪ್ರಸಿದ್ಧವಾಗಿರುವ ಈ ಮಾದರಿಯನ್ನು ನಮ್ಮ ಜನ ಇಷ್ಟಪಟ್ಟು ಸ್ವೀಕರಿಸುತ್ತಿದ್ದಾರೆ. ಶಾರುಕ್ ಖಾನ್, ನವಾಜುದ್ದೀನ್ ಸಿದ್ದಿಕಿ, ಸೈಫ್ ಅಲಿ ಖಾನ್, ವಿವೇಕ್ ಒಬೆರಾಯ್- ಇವರುಗಳೆಲ್ಲ ಈ ಕಿರುಸ್ಕ್ರೀನಲ್ಲಿ ಕಾಣಿಸಿಕೊಂಡಿದ್ದಾರೆ, ಕಾಣಿಸಿಕೊಳ್ಳುತ್ತಿದ್ದಾರೆ. |
ಹೆಚ್ಚಿನೆಲ್ಲ ಬಾಲಿವುಡ್ ನಟರು, ಅಷ್ಟೇಕೆ- ನಮ್ಮ ದಕ್ಷಿಣ ಭಾರತದ ನಟರುಗಳು ಕೂಡ ಒಂದಿಲ್ಲೊಂದು ಬಗೆಯಲ್ಲಿ ಈ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಹೊಂದಲು ಪ್ರಯತ್ನ ಮಾಡುತ್ತಿದ್ದಾರೆ. ಬಾಹುಬಲಿಯಂತ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಬಂದ ಕೂಡಲೇ ರಾಣಾ ದಗ್ಗುಬಾಟಿ ಮಾಡಿದ್ದು, 'ಸೋಶಿಯಲ್' ಎಂಬ ವೆಬ್ ಸೀರೀಸ್! ಹಿರಿತೆರೆಯ ಅನೇಕ ಕಲಾವಿದರು ಈಗಾಗಲೇ ಮೊಬೈಲ್ ಮನರಂಜನೆಯ ಕಡೆಗೆ ಹೈಜಂಪ್ ಮಾಡಿದ್ದು, ಮುಂಬರುವ ದಿನಗಳಲ್ಲಿ ಇವರೆಲ್ಲ ಸಿನಿಮಾಗಳಿಗಿಂತ ಜಾಸ್ತಿ ಈ ಜಗತ್ತಿನಲ್ಲೇ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಮೊಬೈಲ್ ಬಳಕೆ ಶರವೇಗದಲ್ಲಿ ಹೆಚ್ಚುತ್ತಿದ್ದು, ಭವಿಷ್ಯದ ರಂಜನೆಯ ಜಾಗ ಇದೇ ಅಂಗೈ ಅಗಲದ ಅರಮನೆಯಲ್ಲಿದೆ! |
ಓವರ್ ದಿ ಟಾಪ್ ಎಂದು ಕರೆಯಲ್ಪಡುವ ಈ ತರಹದ ಆಪ್‌ಗಳಿಗಾಗಿ ರಂಜನಾತ್ಮಕ ಕಂಟೆಂಟ್ ಸಿದ್ದಪಡಿಸಲು ಹೊರಟಿರುವ ಹೊಸ ಬಳಗವೇ ಕಣ್ಣೆದುರಿಗೆ ಇದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೆಬ್ ಸೀರೀಸ್ ಮಾಡಲು ದಂಡೇ ಸಜ್ಜಾಗಿದೆ. ಬೇರೆ ಭಾಷೆಗಳಿಗೆ ಸೇರಿದರೆ ಕನ್ನಡದಲ್ಲಿ ಪ್ರಯತ್ನಗಳಿನ್ನೂ ಜೋರಾಗಿಲ್ಲ. ಅಲ್ಲೊಂದು ಇಲ್ಲೊಂದು ವೆಬ್ ಸೀರೀಸ್ ಗಳು ಯೂಟ್ಯೂಬ್ ನಲ್ಲಿವೆಯಷ್ಟೇ.'ಲೂಸ್ ಕನೆಕ್ಷನ್' ಎಂಬ ಸೀರೀಸ್ ಕೊಂಚ ಸದ್ದು ಮಾಡಿದ್ದು ಬಿಟ್ಟರೆ, ಇನ್ನು ಮೇಲಷ್ಟೇ ಈ ಯತ್ನಗಳು ತೆರೆಗಾಣಬೇಕಿವೆ. ಜಾಹೀರಾತು ಕ್ಷೇತ್ರ ಕೂಡ ಈಗ ಟೀವಿಯಿಂದಾಚೆಗೆ ಯೋಚನೆ ಮಾಡಲು ಆರಂಭಿಸಿದ್ದು ತಮ್ಮ ಬಂಡವಾಳದ ಬಹುಪಾಲನ್ನು ಅಂತರ್ಜಾಲಕ್ಕೆ-ಮೊಬೈಲ್ ಅಪ್ಲಿಕೇಶನ್ ಗಳಿಗೆ ಮೀಸಲಿಟ್ಟಿವೆ. |
ಇನ್ನು ಕೇವಲ ಎರಡೇ ವರುಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಐವತ್ತು ಕೋಟಿ ಮಂದಿ ಮೊಬೈಲ್‌ನಲ್ಲಿ ಇಂಟರ್ ನೆಟ್ ಬಳಕೆದಾರರಾಗಿರು ತ್ತಾರೆ ಎಂದು ಸರ್ವೇಯೊಂದು ಹೇಳುತ್ತದೆ. ಎಂದರೆ, ದೇಶದ ಸುಮಾರು ನಲವತ್ತು ಶೇಕಡಾ ಮಂದಿ, ಅಂತರ್ಜಾಲದ ನೇರ ಸಂಪರ್ಕ ಹೊಂದಿರುತ್ತಾರೆ. ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು ಎಂಬ ಪುರಾತನ ಗಾದೆಯನ್ವಯ-ಇವರೆಲ್ಲರೂ ಕೂಡ ಮೊಬೈಲ್ ಮಾಯಾಜಾಲದ ಪ್ರಮುಖ ಅಂಗವಾದ ವೀಡಿಯೋ ಸ್ಟ್ರೀಮಿಂಗ್ ಸೌಲಭ್ಯವನ್ನು ಬಳಸಲು ಆರಂಭಿಸುತ್ತಾರೆ. ದಿಲ್ಲಿಯಿಂದ ಹಳ್ಳಿಯವರೆಗೆ ಈಗಾಗಲೇ ವ್ಯಾಪಿಸಿರುವ ಈ ಹವ್ಯಾಸವು ಆಳಕ್ಕೆ ತನ್ನ ಬೇರುಗಳನ್ನು ಇಳಿಸಿ, ಇನ್ನೂ ಸುಭದ್ರಗೊಳ್ಳಲಿದೆ. |
ಹೀಗೇ ಮುಂದುವರಿದರೆ, ಸರಿಸುಮಾರು ಮುಂದಿನ ದಶಕದ ಮಧ್ಯಭಾಗದಲ್ಲಿ ಟಿವಿ ವೀಕ್ಷಣೆಯನ್ನೂ ಮೀರಿ ಡಿಜಿಟಲ್ ಜಗತ್ತು ತನ್ನ ಪಾರಮ್ಯವನ್ನು ಮೆರೆ ಯಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಇಂದು ಮನರಂಜನೆಗೆ ಯಾವುದೇ ಪರದೆಯ ಹಂಗಿಲ್ಲ. ದೊಡ್ಡ ಥಿಯೇಟರಿನಲ್ಲಿ ನೋಡಿದರೂ, ಮೊಬೈಲ್ ಪರದೆಯಲ್ಲಿ ನೋಡಿದರೂ, ಕೊನೆಗೆ ಮನದಲ್ಲಿ ಉಳಿಯುವುದು ಅಭಿನಯ, ಕಥೆ ಮಾತ್ರ. |
ಇದನ್ನೇ ಮನಗಂಡಿರುವ ನೆಟ್ ಫಿಕ್ಸ್ ತರದ ಅಪ್ಲಿಕೇಶನ್ ಹೊಸ ಚಿತ್ರಗಳನ್ನು ಇದಕ್ಕಾಗಿಯೇ ನಿರ್ಮಿಸುತ್ತಿದ್ದಾರೆ. ಯಾವುದೇ ಮಾಲು, ಥಿಯೇಟರುಗಳನ ಹಂಗಿಲ್ಲದೇ ನೇರವಾಗಿ ನಮ್ಮ ಮೊಬೈಲ್‌ಗೇ ರಿಲೀಸ್ ಆಗುವ ಚಿತ್ರಗಳನ್ನು ನೋಡದೇ ಇರಲು ಯಾವ ಕಾರಣವೂ ಇಲ್ಲ. ಅಷ್ಟೇ ಅಲ್ಲದೇ, ಇತ್ತೀಚಿಗೆ ಗಮನಿಸಿದಂತೆ- ಈಗ ತಾನೇ ಬಿಡುಗಡೆಗೊಂಡ ಚಿತ್ರಗಳು ಕೂಡ ಒಂದು-ಎರಡು ತಿಂಗಳ ಅಂತರದಲ್ಲಿ ನೆಟ್ ಫಿಕ್ಸಲ್ಲೋ, ಅಮೇಜಾನ್ ಪ್ರೈಮ್ ನಲ್ಲೋ ಲಭ್ಯವಾಗಿರುತ್ತವೆ ಬೇರೆ. ಹೆಚ್ಚಿನ ದುಡ್ಡು ಪಾವತಿಸದೇ, ತಿಂಗಳ ಚಂದಾ ದುಡ್ಡಲ್ಲಿ ನೂತನ ಸಿನಿಮಾಗಳನ್ನು ನೋಡುವ ಭಾಗ್ಯವನ್ನು ಬಿಟ್ಟುಕೊಳ್ಳುವರುಂಟೇ? |
ಹೀಗೆ, ಮೇಲಿಂದ ಮೇಲೆ ಲಭ್ಯವಾಗುತ್ತಿರುವ ಬಗೆಬಗೆಯ ಮನರಂಜನೆಯ ಸರಕು, ಇಂಟರ್ ನೆಟ್ ಡಾಟಾದ ಕಡಿಮೆ ಬೆಲೆ, ಉತ್ತಮ ಸಿಗ್ನಲ್ ವ್ಯವಸ್ಥೆ ಒಟ್ಟಾರೆ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸು ತ್ತಿದೆ. ನೀವು ಈ ಬರಹವನ್ನು ಓದುವ ಹೊತ್ತಿಗೆ ನೂರಾರು ಗಂಟೆಗಳ ಹೊಸ ಸರಕು ಸಿದ್ಧವಾಗಿ ಮೊಬೈ ಲಿನೊಳಕ್ಕೆ ಬಂದು, ನಿಮ್ಮ ಬೆರಳತುದಿಯು ತನ್ನನ್ನು ಮುಟ್ಟುವುದನ್ನೇ ಕಾಯುತ್ತಿದೆ! ಇನ್ನೊಂದು ನೂರು ಮಂದಿ ಹೊಸ ಸಿಮ್ ಕಾರ್ಡನ್ನು ಮೊಬೈಲಿಗೆ ತೂರಿ ಸುತ್ತ ಅಗಾಧ ವೈಶಾಲ್ಯತೆಯ ಜಾಲ ಪ್ರಪಂಚದ ಹೊಸ್ತಿಲಲ್ಲಿ ನಿಂತಿದ್ದಾರೆ. ಬನ್ನಿ, ಒಳಗೆ ಬನ್ನಿ. ಒಮ್ಮೆ ಒಳಗೆ ಬಂದ ಮೇಲೆ ಹೊರ ಹೋಗುವ ದಾರಿ ಕಾಣಿಸುವುದಿಲ್ಲ. ಕಂಡರೂ ನಿಮಗದು ಬೇಕಿರುವುದಿಲ್ಲ! |
ಬಂಟ್ವಾಳಕ್ಕೆ 30 ಕೋಟಿ ರೂ ಪರಿಹಾರ ನೀಡಲು ಸಿಎಂಗೆ ಮನವಿ — Bantwalnews.com |
ಬಂಟ್ವಾಳಕ್ಕೆ 30 ಕೋಟಿ ರೂ ಪರಿಹಾರ ನೀಡಲು ಸಿಎಂಗೆ ಮನವಿ |
ಪ್ರವಾಹದಿಂದ ತೊಂದರೆಗೊಳಗಾದ ಬಂಟ್ವಾಳ ತಾಲೂಕಿಗೆ 30 ಕೋಟಿ ರೂಗಳ ಪರಿಹಾರ ನೀಡುವಂತೆ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. |
ಸೋಮವಾರ ದ.ಕ.ಜಿಲ್ಲಾ ಪ್ರವಾಸ ನಡೆಸಿದ ಸಿಎಂ, ಬೆಳ್ತಂಗಡಿ ತಾಲೂಕಿನಿಂದ ಹಿಂತಿರುಗುವ ವೇಳೆ ಬಂಟ್ವಾಳ ಬಪಾಸ್ ಜಂಕ್ಷನ್‌ನಲ್ಲಿ ಕಾರು ನಿಲ್ಲಿಸಿ, ಶಾಸಕರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗೆ ಸ್ವಾಗತ ಕೋರಿದರು. |
ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳದ ಹಾನಿಯ ಕುರಿತಂತೆ ಸಂಪೂರ್ಣ ದಾಖಲೆಗಳನ್ನೊಳಗೊಂಡು ಪರಿಹಾರ ಮೊತ್ತದ ಬೇಡಿಕೆ ಸಲ್ಲಿಸಲಾಗಿದ್ದು, ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಸಣ್ಣಪುಟ್ಟ ಅಂಗಡಿಯವರಿಗೂ ಪರಿಹಾರ ನೀಡಲು ಮನವಿಯಲ್ಲಿ ತಿಳಿಸಲಾಗಿದೆ ಎಂದರು. |
ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಪ್ರಮುಖರಾದ ಎ.ಗೋವಿಂದ ಪ್ರಭು, ಪ್ರಕಾಶ್ ಅಂಚನ್, ದಿನೇಶ್ ಅಮ್ಟೂರು ಸಹಿತ ಪಕ್ಷ ಪ್ರಮುಖರು ಉಪಸ್ಥಿತರಿದ್ದರು. ಸಿಎಂ ಆಗಮನ ಹಿನ್ನೆಲೆಯಲ್ಲಿ ಎಎಸ್ಪಿ ಸೈದುಲು ಅದಾವತ್, ಸಿಐ ನಾಗರಾಜ್, ಎಸ್ಸೈ ಚಂದ್ರಶೇಖರ್ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. |
ಕಲಬುರಗಿಯಲ್ಲಿ ಮಳೆ ಪರಿಹಾರ ಕಾರ್ಯ ಚುರುಕು: ಕಾಳಜಿ ಕೇಂದ್ರದಲ್ಲಿ 7,603 ಜನರಿಗೆ ಆಶ್ರಯ | Udayavani – ಉದಯವಾಣಿ |
ಕಲಬುರಗಿಯಲ್ಲಿ ಮಳೆ ಪರಿಹಾರ ಕಾರ್ಯ ಚುರುಕು: ಕಾಳಜಿ ಕೇಂದ್ರದಲ್ಲಿ 7,603 ಜನರಿಗೆ ಆಶ್ರಯ |
Team Udayavani, Oct 15, 2020, 8:57 AM IST |
ಕಲಬುರಗಿ: ಜಿಲ್ಲೆಯಲ್ಲಿ ಬುಧವಾರದಿಂದ ಮಳೆ ಪ್ರಮಾಣ ತಗ್ಗಿದ್ದು, ಎಲ್ಲೆಡೆ ಪರಿಹಾರ ಕಾರ್ಯ ಆರಂಭವಾಗಿದೆ. ಮಂಗಳವಾರ ರಾತ್ರಿ ಸುರಿದ ಭೀಕರ ಮಳೆಗೆ ಸಿಲುಕಿದ್ದ ಜನರನ್ನು ಎನ್ ಡಿಆರ್ ಎಫ್, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಬುಧವಾರ ರಾತ್ರಿಯವರೆಗೆ ರಕ್ಷಿಸುವ ಕಾರ್ಯ ಮಾಡಿದರು. ಇತ್ತ, ಗುರುವಾರ ಬೆಳಿಗ್ಗೆಯಿಂದ ಸ್ವಚ್ಚತಾ ಸಿಬ್ಬಂದಿ ರಸ್ತೆಗಳಿಗೆ ಹರಿದು ಬಂದ ಕಸ ಮತ್ತು ಮುಳ್ಳುಕಂಟಿಗಳ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. |
ಮಳೆಯ ಪ್ರವಾಹದಿಂದ ಮಳೆಗಳಿಗೆ ನೀರು ನುಗ್ಗಿ ಅತಂತ್ರರಾಗಿದ್ದ ಒಟ್ಟು ಇಲ್ಲಿಯವರೆಗೆ 77 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ ಮೂವರು, ಶಹಾಬಾದ ಪಟ್ಟಣದ ಜೆ.ಪಿ.ಕಾಲೋನಿ ಪ್ರದೇಶದ ಐವರು ಮತ್ತು ಹಳೆ ಶಹಾಬಾದ ಪ್ರದೇಶದ ಆರು ಜನರು ಹಾಗೂ ತಾಲೂಕಿನ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ. |
ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿ ಗ್ರಾಮದಲ್ಲಿ ಇಬ್ಭರು ಮತ್ತು ಮಳಖೇಡ್ ಗ್ರಾಮದಲ್ಲಿ 26 ಜನರು ಹಾಗೂ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣದಲ್ಲಿ ನಾಲ್ವರು ಐನೊಳ್ಳಿಯಲ್ಲಿ ಮೂವರು ಮತ್ತು ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ. |
ಬುಧವಾರ ರಾತ್ರಿ 8 ಗಂಟೆ ವರೆಗಿನ ಅಂದಾಜಿನ ಪ್ರಕಾರ ಜಿಲ್ಲೆಯ 4,819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ-ಪಾತ್ರೆಗಳು ಹಾನಿಗೊಳಗಾಗಿವೆ. 1,058 ಮನೆಗಳಿಗೂ ಭೀಕರ ಮಳೆ ಹಾನಿ ಮಾಡಿದೆ. ಇದಲ್ಲದೇ 518 ಜಾನುವಾರಗಳ ಜೀವ ಹಾನಿ ಬಗ್ಗೆಯೂ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ. |
ಇದನ್ನೂ ಓದಿ:ಕಲಬುರಯಲ್ಲಿ ವ್ಯಾಪಕ ಮಳೆ: ಜಲಾಶಯಗಳಿಂದ ನೀರು ಬಿಡುಗಡೆ! ಜನರು ಎಚ್ಚರಿಕೆಯಿಂದಿರಲು ಸೂಚನೆ |
48 ಕಾಳಜಿ ಕೇಂದ್ರ ಆರಂಭ: ಮಳೆ ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಕಲಬುರಗಿ, ಕಮಲಾಪೂರ ಹಾಗೂ ಅಫಜಲಪುರ ತಾಲೂಕಿನಲ್ಲಿ ತಲಾ ಮೂರು, ಆಳಂದ ತಾಲೂಕಿನಲ್ಲಿ ನಾಲ್ಕು, ಜೇವರ್ಗಿ ತಾಲೂಕಿನಲ್ಲಿ ಒಂದು, ಚಿತ್ತಾಪುರ ಮತ್ತು ಸೇಡಂ ತಾಲೂಕಿನಲ್ಲಿ ತಲಾ ಐದು, ಶಹಾಬಾದ ತಾಲೂಕಿನಲ್ಲಿ ನಾಲ್ಕು, ಕಾಳಗಿ ತಾಲೂಕಿನಲ್ಲಿ ಎಂಟು ಹಾಗೂ ಚಿಂಚೋಳಿ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟಾರೆ 48 ಕಾಳಜಿ ಕೇಂದ್ರ ತೆರೆದು 7,603 ಜನರಿಗೆ ಆಶ್ರಯ ನೀಡಲಾಗಿದೆ. |
ಈಗ ಮಹಾ ನೀರಿನ ಭೀತಿ: ಈಗಾಗಲೇ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜನರ ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಮಹಾ ನೀರಿನ ಭೀತಿ ಎದುರಾಗಿದೆ. |
ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1,08,000 ಕ್ಯೂಸೆಕ್ ಮತ್ತು ವೀರ್ ಜಲಾಶಯದಿಂದ 15,000 ಕ್ಯೂಸೆಕ್ ಸೇರಿದಂತೆ 1,23,000 ಕ್ಯೂಸೆಕ್ ನೀರು ಭೀಮಾ ನದಿಗೆ ಬುಧವಾರ ಸಾಯಂಕಾಲ ಹರಿಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ. |
ಈ ನೀರು ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ಬರಲಿದೆ. ಭೀಮಾ ಜಲಾನಯನ ಪ್ರದೇಶದಲ್ಕಿ ಹೀಗೆ ಮಳೆ ಮುಂದುವರೆದಿದ್ದಲ್ಲಿ ಮುಂದಿನ 48 ಗಂಟೆಯಲ್ಲಿ ಸುಮಾರು 2.5 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ ಗೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. |
11ಕ್ಕೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ | Prajavani |
11ಕ್ಕೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ |
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅ. 11ರಂದು ಸಂಜೆ 6.30ಕ್ಕೆ ನಗರದ ವಿನೋಬನಗರ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ 76ನೆಯ ಸಾಹಿತ್ಯ ಹುಣ್ಣಿಮೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. |
ಸಾಹಿತ್ಯ ಹುಣ್ಣಿಮೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಉದ್ಘಾಟಿಸಲಿದ್ದಾರೆ. ಶಾಸಕ ಕೆ. ಜಿ. ಕುಮಾರಸ್ವಾಮಿ, ಶುಭಮಂಗಳಾ ಟ್ರಸ್ಟ್ ಅಧ್ಯಕ್ಷ ಕೆ. ಇ. ಕಾಂತೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಅತಿಥಿಗಳಾಗಿ ಭಾಗವಹಿಸುವರು. |
ಬಿ.ಎಸ್. ರಾಮಭಟ್ಟ ಅವರು ರಚಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಗರ ಪ್ರಾಂತ್ಯದ ರೈತರ ಬಂಡಾಯ ಕೃತಿಯನ್ನು ಸಾಹಿತಿ ಪ್ರೊ.ಕೆ. ಓಂಕಾರಪ್ಪ ಅವರು ಪರಿಚಯಿಸುವರು. ಇದೇ ಸಂದರ್ಭದಲ್ಲಿ ಮಂಜುನಾಥ ವಿ. ಶೇಟ್ ಅವರು ಬರೆದ ಭಕ್ತಿ ಭಜನಾಮತ ಕೃತಿ ಬಿಡುಗಡೆಯಾಗಲಿದೆ. ಕವಿಗಳಾದ ಬಿ.ಟಿ.ಎಂ. ಗುರುಸಿದ್ಧಶಾಸ್ತ್ರಿ, ಮಾರ್ಪಳ್ಳಿ ಆರ್. ಮಂಜುನಾಥ, ಎನ್. ಎಂ. ದತ್ತಾತ್ರಿ ಜೋಯ್ಸ ಕವನ ವಾಚಿಸಲಿದ್ದಾರೆ. ಮಂಜುನಾಥ ಭಟ್ಟ ಮತ್ತು ಡಿ. ಗಣೇಶ್ ಚುಟುಕು ವಾಚಿಸುವರು. |
ಸಾಮೂಹಿಕ ವಿವಾಹ ಆಯೋಜಿಸುವ ಸಂಘಟಕರು ಇನ್ನು ಮುಂದೆ ಕಡ್ಡಾಯವಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನೋಂದಣಿ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. |
ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‌ಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಇಲಾಖೆ ಗಮನಿಸಿದ್ದು, ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳನ್ನು ಸಮರ್ಪಕವಾಗಿ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಆಯೋಜಿಸುವ ಹಾಗೂ ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಠವನ್ನು ತಡೆಗಟ್ಟುವ ದೃಷ್ಟಿಯಿಂದ ಕೆಲವು ಮಾರ್ಗ ಸೂಚಿ ಅನುಸರಿಸಬೇಕು ಎಂದು ಸೂಚಿಸಿದೆ. |
ಪ್ರತಿ ಐದು ವರ್ಷಕ್ಕೆ ಒಮ್ಮೆ ನೋಂದಣಿ ನವೀಕರಿಸಿಕೊಳ್ಳಬೇಕು. ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವ ವಧೂ- ವರರ ಸಂಪೂರ್ಣ ವಿವರವನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಸಲ್ಲಿಸಿ, ಅನುಮತಿ ಪಡೆದು, ನಿಯಮಾನುಸಾರ ಕಾರ್ಯಕ್ರಮ ಏರ್ಪಡಿಸಬೇಕು. ಸಾಮೂಹಿಕ ವಿವಾಹ ಸಂಘಟಕರು ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಉಪ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. |
9ಕ್ಕೆ ನಾಗಶ್ರೀ ಯಕ್ಷಗಾನ |
ಧಾರೇಶ್ವರ ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಸಂಘದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಅ. 9ರಂದು ಸಂಜೆ 6ರಿಂದ 10ರವರೆಗೆ ನಾಗಶ್ರೀ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ. |
ವಿಶೇಷವಾಗಿ ಶಿಥಿಲ ಮಹಾರಾಜನ ಪಾತ್ರದಲ್ಲಿ ನಾಟ್ಯಸಾಮ್ರೋಟ ಕಣ್ಣೀಮನೆ ಗಣಪತಿ ಹೆಗಡೆ ಭಾಗವಹಿಸಲಿದ್ದು, ನಿಲ್‌ಕೋಡಾ ಶಂಕರ ಹೆಗಡೆ, ನಾಗಶ್ರೀ, ಹಳ್ಳಾಡಿ ಜಯರಾಮ ಶೆಟ್ಟಿ ಕೈರವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. |
ವಿದ್ವಾನ್ ದತ್ತಮೂರ್ತಿ ಭಟ್, ಮಂದರ್ತಿ ಪ್ರಸನ್ನ ಶೆಟ್ಟಿಗಾರ್, ಹಕ್ಲಾಡಿ ರವೀಂದ್ರ ಶೆಟ್ಟಿ, ಮತ್ತಿತರರು ವಿವಿಧ ಪಾತ್ರ ನಿರ್ವಹಿಸಲಿದ್ದಾರೆ. |
ಜಿ.ಆರ್. ಕಾಳಿಂಗ ನಾವುಡರ ಶೈಲಿಯಲ್ಲಿ ರಾಘವೇಂದ್ರ ಆಚಾರ್ಯ ಭಾಗವತಿಕೆ, ಮದ್ದಳೆ ಕಡತೋಕ ಸುನೀಲ್ ಭಂಡಾರಿ, ಚೆಂಡೆ ಮೂರೂರು ಸುಬ್ರಹ್ಮಣ್ಯ ಹೆಗಡೆ ಸಹಕರಿಸಲಿದ್ದಾರೆ. ಆದಿಚುಂಚನಗಿರಿ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸುವರು. |
ಗುಂಡು-ತುಂಡು ತಿಂದು ಕಚ್ಚೆಬಿಚ್ಚುವ ತೊನೆಯಪ್ಪನಂತವರು ಶಂಕರರ ಹೆಸರಿನಲ್ಲಿ ಬದುಕುತ್ತಿದ್ದಾರೆ | havyakarigagi |
← ಸಾಕ್ಷಿದಾರರ ನೋವಿಗೆ ಹೈಕೋರ್ಟ್ ಸ್ಪಂದನೆ |
PIL Copy ಮತ್ತು ಯಾಕಾಗಿ PIL ಹಾಕಲಾಗಿದೆ → |
ಪೀಠದೆದುರು ಬಂದು ಕೇಳಿ ಎನ್ನುವ ಕಚ್ಚೆಶೀಗಳಿಗೆ ಬಹಳ ಹಿಂದೆಯೇ ವಿದ್ವಾಂಸರು ಪ್ರಶ್ನೆಗಳನ್ನು ಕೇಳಿದ್ದರು. ಬಹುತೇಹ ಪ್ರಶ್ನೆಗಳಿಗೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉತ್ತರಿಸ್ತೀವಿ ಅಂತಾರೆ; ಪ್ರಶ್ನೆ ಕೇಳಿದವ ಇನ್ನೊಂದು ಜನ್ಮ ಎತ್ತಿದರೂ ಉತ್ತರ ಬರೋದಿಲ್ಲ! ಗಂಡೆದೆ ಇದ್ದರೆ ತೊನೆಯಪ್ಪ ವಿದ್ವತ್ ಪರೀಕ್ಷೆಗೆ ತಯಾರಾಗಲಿ, ಈಗಲೂ ಪ್ರಶ್ನೆಕೇಳಲು ಯಾವ ತೊಂದರೆಯೂ ಇಲ್ಲ; ಕೇಳಲು ಹೋಗುವಾಗ ಪೋಲೀಸ್ ರಕ್ಷಣೆ ಬೇಕಾಗಬಹುದಷ್ಟೆ!: |
ತನಗೆ ಸಿಗಬೇಕೆಂದು ಬಯಸುವ ಗೌರವ ಮತ್ತು ಅಲ್ಲಾಡಿಸುವ ಬಿರುದುಬಾವುಲಿಗಳ ಸಲುವಾಗಿ ತೊನೆಯಪ್ಪನವರಿಗೆ ಎಲ್ಲ ಪ್ರೊಟೋಕಾಲ್ ಗೊತ್ತಾಗುತ್ತದೆ; ಜನ ಹೀಗೇ ನಡೆದುಕೊಳ್ಳಬೇಕು ಅಂತ ಹೇಳ್ತಾನೆ. ಆದರೆ ಲಲನೆಯರ ಅಂಗಸಂಗಕ್ಕೆ ತೊಡಗುವಾಗ ಮಾತ್ರ ಮಠದ ಪ್ರೊಟೋಕಾಲ್ ಎಲ್ಲ ಮರೆತುಹೋಗುತ್ತದೆ; ಅವರಿಗೆಲ್ಲ ಏನು ಬೇಕಾದರೂ ಕೊಡಬಹುದಾಗುತ್ತದೆ! ಮಠಗಳ ಪ್ರೊಟೋಕಾಲ್ ಯತಿಯೆನಿಸಿದವ ಬಲವಾಗಿ ಹೇರುವುದಲ್ಲ; ಅದು ಅನಾಯಾಸವಾಗಿ ಜನರಿಂದ ತಂತಾನೇ ಪಾಲನೆಯಾಗಬೇಕು. ಹಾವಾಡಿಗ ಮಠದಲ್ಲಿ ಅದೆಲ್ಲ ಕಳೆದುಹೋಗಿ ಬಹಳ ವರ್ಷಗಳಾದವು. ದುಷ್ಟರಿಗೆ ಮೊದಲು ಕೈಮುಗಿ ಎಂಬ ಸುಭಾಷಿತದಂತೆ ಈಗ ನಡೆದುಕೊಳ್ಳುವವರೆಲ್ಲ ಕೇವಲ ಭಯದಿಂದ ಹಾಗೆ ನಡೆದುಕೊಳ್ತಿದ್ದಾರೆ. |
ಒಂದು ಕಾಲದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಜನರೇ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೊಟ್ಟಿದ್ದಾರೆ. ಯಾಕೆ ಕೊಟ್ಟರು? ಅವರಿಗೂ ಒಂದೆರಡು ಕೋಟಿಗಳನ್ನು ಪಡೆಯುವ ಆಸೆಯೇ? ಅಥವಾ ಪೀಠವನ್ನು ನುಂಗುವ ಇಚ್ಛೆಯೇ? ಅರ್ಜಿಯಲ್ಲಿ ಆಮ್ನಾಯ ಮಠದ ಕೆಳಹಂತದಲ್ಲಿ ತುಂಡುಮಠಗಳು ಬರುತ್ತವೆ ಎನ್ನಲಾಗಿದೆಯೇ ಹೊರತು ಪರಂಪರೆಗೆ ಸಂಬಂಧಿಸಿದ್ದಲ್ಲ ಎನ್ನಲಿಲ್ಲ ಎಂಬುದನ್ನು ತೊನೆಯಪ್ಪನ ಬಳಗ ಓದಿ ತಿಳಿದುಕೊಳ್ಳಬೇಕು. |
ಈ ಜಗತ್ತಿನಲ್ಲಿ ಯಾವುದರಿಂದ ಸುಖ? ಚಂದದ ವಸ್ತು ಕಂಡರೆ ನಮ್ಮಲ್ಲಿರಲಿ ಎನ್ನುತ್ತೇವೆ; ಆ ವಸ್ತು ನಮ್ಮದಾದ ಕೆಲವು ಸಮಯ ಸುಖ, ಮತ್ತೆ ಮೊದಲಿನಂತೆ ಬೇರೊಂದರೆಡೆಗೆ ಮನಸ್ಸು. ಸುಶ್ರಾವ್ಯ ಸಂಗೀತ ಕೇಳಿಬರುತ್ತಿರುವಾಗ ಕಿವಿಗೆ ಅದೊಂದು ಸುಖ; ಅದೇ ರಾಗದ ಸಂಗೀತ ನಿತ್ಯವೂ ಕೇಳಿಬಂದರೆ ಕೊನೆಕೊನೆಗೆ ಅದೊಂದು ದುಃಖ! ನಾಲಿಗೆಗೆ ರುಚಿಯೆನಿಸಿದ್ದು ದೊರಕಿದಾಗ ಹೊಟ್ಟೆ ತುಂಬುವವರೆಗೆ ಅದೊಂದು ಸುಖ. ಹೊಟ್ಟೆ ಖಾಲಿಯಾದಾಗ ಮತ್ತೆ ದುಃಖ. |
ದೂರದೊಂದು ತೀರದಿಂದ ತೇಲಿ ಪಾರಿಜಾತದ ಗಂಧ ಬಂದಾಗ ಮೂಗಿಗೆ ಸುಖ ಅಥವಾ ಘಮವನ್ನು ಪೂಸಿಕೊಂಡ ಲಲನೆಯರು ಹಾದುಹೋದಾಗ ಮೂಗರಳಿಸುವ ತೊನೆಯಪ್ಪನವರಿಗೆ ಸುಖ; ಮರುಕ್ಷಣ ಘಮ ನಿರ್ಗಮಿಸಿದ ಮೇಲೆ ಮತ್ತೆ ದುಃಖ. ಸುಂದರ ಹೆಣ್ಣುಗಳನ್ನು ಕಂಡ ತೊನೆಯಪ್ಪನಂತ ಗಂಡಸರಿಗೆ ಮನದಲ್ಲೇ ಮಿಲನ ಸುಖ-ನಂತರ ಸಾಮೀಪ್ಯ ಮತ್ತು ಸಂಭೋಗ ಸುಖ; ಅವರು ಸಂಭೋಗಕ್ಕೆ ಸಿಗದಾಗ ಮತ್ತೆ ದುಃಖ. ರೂಪ, ರಸ, ಗಂಧ, ಸ್ಪರ್ಶ, ಶ್ರವಣ ಯಾವುದರಲ್ಲೂ ಶಾಶ್ವತ ಸುಖವೆಂಬುದಿಲ್ಲ. ಹಾಗಾದರೆ ಸುಖವೆಲ್ಲಿದೆ? |
ಆತ್ಮ ತನ್ನ ಮೂಲವನ್ನು ಹುಡುಕುತ್ತದಂತೆ. ನೀರಿನಿಂದ ಬೇರ್ಪಟ್ಟ ನೀರಿನ ಭಾಗ ಬೇರೆ ಬೇರೆ ಪಾತ್ರೆಗಳಲ್ಲಿ ಅದದೇ ಆಕಾರದಲ್ಲಿ ಕಂಡರೂ ಆಕಾರ ರಹಿತವಾದ ನೀರು ಅದರ ಮೂಲವನ್ನು ಸೇರಿದಾಗ ಅಲ್ಲಿರುವ ನೀರಿನೊಡನೆ ಸೇರಿಹೋಗುತ್ತದೆ. ಯಾವುದೇ ಮೂಲವಸ್ತುವನ್ನು ತೆಗೆದುಕೊಂಡರೂ ಅದರಿಂದುಂಟಾಗುವ ರೂಪಾಂತರಗಳು ಹಲವು. ಲೋಹಗಳಿರಲಿ, ಪ್ಲಾಸ್ಟಿಕ್ ಇರಲಿ, ಗ್ರಾಫೈಟ್ ಇರಲಿ ಅಥವಾ ಸಹಜವಾಗಿ ಸಿಗುವ ಮಣ್ಣೇ ಇರಲಿ, ಕೈಗಾರಿಕೆಯಿಂದ ರೂಪಾಂತರಗೊಂಡಾಗ ಹಲವು ರೀತಿಯಲ್ಲಿ ಗೋಚರವಾಗುತ್ತದೆ; ಆದರೆ ಮೂಲ ಒಂದೇ. |
ಪರಮಾತ್ಮನಿಂದ ಭಿನ್ನಗೊಂಡು ಹೊರಟು ಜೀವಾತ್ಮಗಳಾಗಿ ಮಿಥ್ಯಾ ಪ್ರಪಂಚದಲ್ಲಿ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಆತ್ಮಗಳೆಲ್ಲ ತಮ್ಮ ಮೂಲವನ್ನು ಹುಡುಕುತ್ತವಂತೆ. ಮೂಲದಲ್ಲಿ ಸಿಗುವ ಸುಖವೇ ಶಾಶ್ವತ ಸುಖ; ಅದು ಇಲ್ಲಿ ನಾವು ಅಳೆಯುವ ರೂಪ, ರಸ, ಗಂಧ, ಸ್ಪರ್ಶ, ಶ್ರವಣಕ್ಕೆ ಸಂಬಂಧಿಸಿದ ಸುಖವಲ್ಲ; ಅದು ಅವರ್ಣನೀಯ ಸುಖ; ಆತ್ಮ ಪರಮಾತ್ಮವಾಗುವ ಸುಖ. ಅಲ್ಲಿಯವರೆಗೂ ಮಾರ್ಗದಲ್ಲಿ ಸಿಗುವ ಪಂಚೇಂದ್ರಿಯಗಳ ಮೂಲಕ ಸುಖವನ್ನು ಹುಡುಕುತ್ತದಂತೆ-ಆತ್ಮ. |
ಭಗವಂತನೆಲ್ಲಿದ್ದಾನೆ? ಜೀವಿಯ ದೇಹಗಳಲ್ಲಿ ಆಹ್ರಯ ಪಡೆದ ಆತ್ಮಕ್ಕೆ ಪರಮಾತ್ಮನಿರುವ ಸ್ಥಳ ಮರೆತುಹೋಗುತ್ತದಂತೆ. ಮಳೆಗಾಲದ ದಟ್ಟ ಮೋಡಕವಿದ ವಾತಾವರಣದಲ್ಲಿ ಸೂರ್ಯದರ್ಶನವೆಂಬುದು ಹೇಗೆ ಕಷ್ಟವೋ ಹಾಗೆಯೇ ದಟ್ಟವಾಗಿ ಭ್ರಾಂತಿಯ ಮಂಜುಮುಸುಕಿರುವುದರಿಂದ ಆತ್ಮಕ್ಕೆ ಈ ಪ್ರಪಂಚದ ಮೇಲೆಯೇ ವ್ಯಾಮೋಹವಂತೆ. ಈ ಪರಿಧಿಯನ್ನು ಹರಿದು, ತೊರೆದು, ಹೊರಹೋಗಲು ಅದು ಯೋಚಿಸುವುದೇ ಇಲ್ಲವಂತೆ. ಗಂಡ, ಹೆಂಡತಿ, ಮನೆ, ಮಕ್ಕಳು, ಅಮ್ಮ, ಅಪ್ಪ, ಅಕ್ಕ, ತಂಗಿ, ಬೆಳ್ಳಿ, ಬಂಗಾರ ಎಲ್ಲದರಲ್ಲೂ ಅದಕ್ಕೆ ಆಸಕ್ತಿ; ಭಗವಂತನೆಡೆಗೆ ತೆರಳಲು ನಿರಾಸಕ್ತಿ ಏಕೆಂದರೆ ಇಲ್ಲಿ ಇವುಗಳನ್ನೆಲ್ಲ ಬಿಟ್ಟು ಅಲ್ಲಿಗೆ ಹೋದರೆ ಇದೆಲ್ಲ ತಪ್ಪಿಹೋಗುವುದಲ್ಲ ಎಂಬ ವ್ಯಾಮೋಹ. |
ಕೃತಕ ಉಪಗ್ರಹವನ್ನು ಆಕಾಶಕ್ಕೆ ಕಳಿಸುವಾಗ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಹಾರಬಲ್ಲ ರಾಕೆಟ್ ಬಳಸಲಾಗುತ್ತದಲ್ಲ? ಅಂತಹ ಸಚ್ಚಾರಿತ್ರ್ಯ ಮತ್ತು ತಪಸ್ಸಿನ ರಾಕೆಟ್ ಇಲ್ಲಿನ ವ್ಯಾಮೋಹವನ್ನು ಕಡಿದುಕೊಳ್ಳುವಾಗ ಬೇಕಾಗುತ್ತದೆ. ಇಂಥದ್ದೊಂದು ವ್ಯಾಮೋಹವನ್ನು ಕಳಚಿಕೊಳ್ಳುವುದೇ ಮೋಕ್ಷ ಅಥವಾ ಅದೇ ಜೀವನ್ಮುಕ್ತಿ. |
ನಾನು ಅವನಲ್ಲದೇ ಬೇರಲ್ಲ. "ಅಹಂ ಬ್ರಹ್ಮಾಸ್ಮಿ" ಅಂದು ಶಂಕರರು ಹೇಳಿದ್ದು ಅದಕ್ಕೇ. ಇಲ್ಲೆಲ್ಲೋ ಎಣ್ಣೆಕುಡಿದವನೂ ಅದನ್ನು ಬಾಹ್ಯವಾಗಿ ಹೇಳಬಹುದು; ಆದರೆ "ಅಹಂ ಬ್ರಹ್ಮಾಸ್ಮಿ" ಎನ್ನಲು ಬೇಕಾದ ಅರ್ಹತೆಗಳೇನು? ಅದರ ಔಚಿತ್ಯವನ್ನು ತಿಳಿದುಕೊಳ್ಳಬೇಕು. ಅದು ಅನೇಕವಲ್ಲ ಏಕ-ಹಾಗಾಗಿಯೇ ಅದು ಅದ್ವೈತ. ನೋಡುವುದಕ್ಕೆ ನಾವು ನೀವೆಲ್ಲರೂ ಬೇರೆ ಬೇರೆ, ಆದರೆ ನಮ್ಮೊಳಗಿನ ಆತ್ಮಗಳ ಮೂಲಮಾತ್ರ ಒಂದೇ. ನಾನು ಇನ್ನೊಬ್ಬನಿಗೆ ಮೋಸ ಮಾಡೋದು ನನಗೇ ನಾನು ಮೋಸಮಾಡಿಕೊಂಡಂತೆ ಎಂದು ಸನಾತನ ಧರ್ಮ ಹೇಳುತ್ತದೆ. |
ಹೇಗೂ ಮೋಸಮಾಡುವುದು ಇದ್ದಿದ್ದೇ, ಅಂದಮೇಲೆ ಆತ್ಮವಂಚನೆ ಮಾಡಿಕೊಳ್ಳೋದರಲ್ಲಿ ತಪ್ಪೇನಿದೆ ಎಂದುಕೊಂಡವರು ಜಗದ್ಗುರು ತೊನೆಯಪ್ಪಾಚಾರ್ಯರು. ಹಾಗಾಗಿ ಅವರು ಹಲವು ಮಹಿಳೆಯರನ್ನು ಭೋಗಿಸಿದರು ಮತ್ತು "ನಾವು ಹಾಗಲ್ಲ" ಅಂತ ಕುಳ್ಳ ಬಾವಯ್ಯನೊಡನೆ ಸೇರಿ ಪೀಠದ ಮೇಲೆ ಕುಳಿತೇ ಅಪ್ಪಟ ಸುಳ್ಳುಗಳನ್ನು ಹೇಳುತ್ತ ಬಂದರು. |
ಶಂಕರರಿಗೆ ಹೋದಲ್ಲೆಲ್ಲ ಮಠಗಳನ್ನು ಸ್ಥಾಪಿಸುವುದೇ ಕೆಲಸವಾಗಿರಲಿಲ್ಲ; ಅವರ ಉದ್ದೇಶವೇ ಬೇರೆ, ಇಂದು ನಡೆಯುತ್ತಿರುವುದೇ ಬೇರೆ. ಅವರು ಸ್ಥಾಪಿಸಿದ್ದು ಕೇವಲ ನಾಲ್ಕು ಆಮ್ನಾಯ ಮಠಗಳನ್ನು ಮಾತ್ರ. ಉಳಿದ ಮಠಗಳೆಲ್ಲ ಕಾಲಕಾಲಕ್ಕೆ ಆಯಾ ಪ್ರದೇಶಗಳ ಮುಖಂಡರಿಗೆ ಬೇಕಾಗಿ ಊರ್ಜಿತಾವಸ್ಥೆಗೆ ಬಂದವು. |
ಮೈಸೂರು ಅರಸರು ಹಿಂದೆ ಇಂತಹ ತುಂಡುಮಠಗಳ ಸನ್ಯಾಸಿಗಳ ಹಾರಾಟಗಳನ್ನು ನಿಲ್ಲಿಸಿ ಎಂದು ಆಜ್ಞೆ ಹೊರಡಿಸಿದ್ದು ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಮತ್ತು ಅದು ನಿಜವೂ ಹೌದು. ಮೂಲ ಪರಂಪರೆಗೆ ತಿರುಮಂತ್ರ ಹಾಕಿದ್ದರ ಜೊತೆಗೆ ಅವರನ್ನೂ ಮೀರಿಸಿ ಹಾರಲು ಮುಂದಾದರೆ ಇದೇ ಗತಿ ಬರುತ್ತದೆ ಎಂಬುದನ್ನು ಉಳಿದ ತುಂಡುಮಠಗಳವರೆಲ್ಲ ಗಮನಿಸಬೇಕು. |
ತುಂಡುಮಠಗಳಲ್ಲಿ ಅವರು ಪರಂಪರೆ ಹೇಳುವಾಗ ಶಂಕರರ ಹೆಸರನ್ನು ತೆಗೆದುಬಿಡಿ, ಆಗ ಯಾವ ಬೆಲೆ ಸಿಗುತ್ತದೆ ನೋಡಿ! ರಾಜಪ್ರಭುತ್ವದ ಸಮಯದಲ್ಲಿ ಹಲವು ಗ್ರಾಮಗಳಲ್ಲಿ ಅಲ್ಲಲ್ಲಿ ಮರಿಪುಢಾರಿಗಳು ಇರುತ್ತಿದ್ದರು. ಆಮ್ನಾಯ ಮಠದಲ್ಲಿ ತಮಗೆ ಗೌರವ ಸಿಗುತ್ತಿಲ್ಲ ಅಂತಲೋ ಅಥವಾ ಆ ಮಠದ ಗುರುಗಳು ತಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಅನ್ನೋದಕ್ಕೋ, ಆಹಂಕಾರಕ್ಕೆ ಧಕ್ಕೆ ಬಂದಾಗ ತುಂಡುಮಠಗಳನ್ನು ಸ್ಥಾಪಿಸಿದವರು ಅಂತಹ ಜನಗಳು. |
ಶಂಕರರೇ ಅವುಗಳನ್ನೆಲ್ಲ ಸ್ಥಾಪಿಸಿದರು ಎನ್ನಲಿಕ್ಕೆ ಯಾವ ಆಧಾರಗಳೂ ಇಲ್ಲ. ಮೇಲಾಗಿ, ಶಂಕರರು, ಮಠಗಳ ಸಂಖ್ಯೆಯನ್ನು ಜನಸಂಖ್ಯೆಗಿಂತ ಹೆಚ್ಚಿಗೆ ಮಾಡುವಷ್ಟು ಮೂರ್ಖರಾಗಿರಲಿಲ್ಲ. ಹಾಗಿದ್ದರೆ ಅವರು ತತ್ತ್ವಜ್ಞಾನಿ ಎಂದು ಗುರುತಿಸಲ್ಪಡುತ್ತಿರಲಿಲ್ಲ. ಧರ್ಮ-ಅಧರ್ಮಗಳ ಅಂತರ ಜನರಿಗೆ ತಿಳಿಯಬೇಕು, ಧರ್ಮದ ಹೆಸರಿನಲ್ಲಿ ಕುರುಡು ಸಂಪ್ರದಾಯಗಳು ಆಚರಣೆಯಲ್ಲಿರಬಾರದು. ಮತ್ತು ಅಂದು ಹಲವು ಕಡೆಗೆ ಅತಿಯಾಗಿ ಬಳಕೆಯಲ್ಲಿದ್ದ ಪ್ರಾಣಿಬಲಿಗಳು ಇನ್ನೂ ಕೆಲವು ಕಡೆ ಮಾನವಬಲಿಗಳು ನಡೆಯಬಾರದು ಎಂಬುದು ಅವರ ಉದ್ದಿಶ್ಯವಾಗಿತ್ತು. |
ಜೊತೆಗೆ ಸನಾತನ ಧರ್ಮವು ವೈದಿಕಮಯವಾಗಿದೆ; ಅದು ವೇದಗಳನ್ನೇ ಆಧರಿಸಿದೆ ಎಂಬುದನ್ನು ಜನರೆಲ್ಲ ಅರಿಯಬೇಕಾಗಿತ್ತು. ಶಂಕರರು ಬರುವುದಕ್ಕೂ ಮುನ್ನ ವೇದಗಳೆಲ್ಲ ಅಪಮೌಲ್ಯಕ್ಕೆ ಒಳಗಾಗಿದ್ದವು. ಯಾವುದು ಯಾವ ವೇದ ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ಹಲವು ಜನ ಹಲವು ರೂಪದಲ್ಲಿ ಹೇಳುತ್ತಿದ್ದರು. ಯಾವುದು ಸತ್ಯ ಮತ್ತು ಯಾವುದು ಅಸತ್ಯ ಎಂಬುದನ್ನು ಜನತೆ ಅರಿತುಕೊಳ್ಳಬೇಕಾಗಿತ್ತು. ಅದಕ್ಕಾಗಿಯೇ ಶಂಕರರು ಅವರ ಮೂವತ್ತೆರಡು ವರ್ಷಗಳ ಜೀವಿತಾವಧಿಯೊಳಗೆ 153 ಕೃತಿಗಳನ್ನು ರಚಿಸಿದರು. |
ಧರ್ಮದ ಪುನರುಜ್ಜೀವನಕ್ಕೆ ಅವರು ಆಯ್ದುಕೊಂಡದ್ದು-ವೇದಗಳು ಅಥವಾ ವೇದಾಂತಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಈ ಮೂರನ್ನು ಮಾತ್ರ. ಇವುಗಳನ್ನೆ ಪ್ರಸ್ಥಾನತ್ರಯಗಳು ಎನ್ನಲಾಗುತ್ತದೆ. ಶ್ರುತಿ ಮತ್ತು ಸ್ಮೃತಿಗಳಲ್ಲಿ ಶ್ರುತಿಯೇ ಪ್ರಮಾಣಬದ್ಧ ಎಂದು ಮೀಮಾಂಸಕರು ನಿರ್ಧರಿಸಿದ್ದರಿಂದ ಶ್ರುತಿಯೆನಿಸಿದ ವೇದಗಳನ್ನೇ ಪ್ರಧಾನವಾಗಿಟ್ಟುಕೊಂಡರು. |
ವಿಪರ್ಯಾಸವೆಂದರೆ ಇಂದು ಜೈಕಾರ ಕೂಗುವ ಹಲವು ಜನರಿಗೆ ಶಂಕರರ ಕಾಲಮಾನವಾಗಲೀ, ಅವರ ಕೃತಿಗಳಾಗಲೀ ಗೊತ್ತಿಲ್ಲ. ಪ್ರಸ್ಥಾನತ್ರಯಗಳ ಬಗ್ಗೆ ಅಸಕ್ತಿಯಿಲ್ಲ; ಸ್ವತಃ ತೊನೆಯಪ್ಪಾಚಾರ್ಯರೇ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಹೇಳುವಾಗ ಪುಸ್ತಕ ಇರಿಸಿಕೊಂಡೇ ಹೇಳುತ್ತಾರೆ ಮತ್ತು ಅಲ್ಲಿ ಕೊಟ್ಟಿರುವ ಕನ್ನಡದ ಅರ್ಥಬಿಟ್ಟರೆ ವಿಸ್ತಾರವಾದ ಅರ್ಥ ಅವರಿಗೂ ಗೊತ್ತಿಲ್ಲ! ಹಲವು ಹೆಣ್ಣುಮಕ್ಕಳನ್ನು ಮದುವೆಗೆ ಮೊದಲೇ ಸಂಭೋಗಿಸಿ ಅವರ ಪ್ರಸ್ಥವನ್ನೆ ಕದ್ದಿದ್ದರಿಂದ ಶೀಗಳಿಗೆ "ಮಹಾಪ್ರಸ್ಥಾಚಾರ್ಯ" ಎಂಬ ಬಿರುದು ಅಘೋಷಿತವಾಗಿ ದೊರಕಿಬಿಟ್ಟಿದೆ! |
ರಾಜಕೀಯ ಹೇಳಿ ಗೊತ್ತು, ಸಿನಿಮಾ ಹೇಳಿ ಗೊತ್ತು, ಸಿನಿಮಾ ನಟಿಯರ ಬಗ್ಗೆ ಹೇಳಿ-ಎಳೆ ಎಳೆಯಾಗಿ ಅವರ ರಾಸಲೀಲೆಗಳ ಬಗ್ಗೆ ಮಾತನಾಡ್ತಾರೆ. ಆದರೆ ಧರ್ಮಸಂಸ್ಥಾನದಲ್ಲಿ ಸೇರಿಕೊಂಡ ಈ ಲಂಪಟರಿಗೆ ದೇವರು ಮತ್ತು ಧರ್ಮ ಎಂಬುದು ದುಡ್ಡುಮಾಡುವ ದಂದೆಯಾಗಿದೆ! ತುಂಡು ಮಠಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಆಮ್ನಾಯ ಮಠಗಳವರು ಅನಗತ್ಯವಾಗಿ ಹೋಗೋದಿಲ್ಲ; ಅಲ್ಲಿ ಹೇಗೂ ಅವರಿದ್ದಾರಲ್ಲ ಅಂತ ಸುಮ್ಮನಾಗ್ತಾರೆ. |
ತುಂಡುಮಠಗಳ ಪೈಕಿ ಸದ್ಯ ಉರಿಯುತ್ತಿರುವ ಹಾವಾಡಿಗ ಮಹಾಸಂಸ್ಥಾನದ ಶೋಭರಾಜಾಚಾರ್ಯರಿಗೆ ಪ್ರಸ್ಥಾನತ್ರಯಗಳನ್ನು ಬೋಧಿಸುವ ಆಸಕ್ತಿಯಿಲ್ಲ ಏಕೆಂದರೆ ಹಾಗಂದರೇನೆಂದೇ ಅವರಿಗಿನ್ನೂ ಅರ್ಥವಾಗಲಿಲ್ಲ!! "ವಾತ್ಸಾಯಾನನ ಕಾಮಸೂತ್ರದ ಬಗ್ಗೆ ಪ್ರವಚನ ಮಾಡಿ ಮಹಾಸ್ವಾಮಿಗಳೆ" ಅಂದರೆ ಸವ್ಯಸಾಚಿ ಎನಿಸುವಂತೆ ಅಥವಾ ಅದ್ವಿತೀಯ ಎನಿಸುವಂತೆ ಪ್ರವಚನ ಮಾಡಬಲ್ಲರು ಅವರು. ಯಾಕೆಂದರೆ ಯಾವ ಹೆಂಗಸರನ್ನೆಲ್ಲ ಅವರ ಗಂಡಂದಿರು ಎಷ್ಟೆಲ್ಲ ನೋಡಬೇಕೋ ಅದಕ್ಕಿಂತ ಹೆಚ್ಚಿಗೆ ನೋಡಿದ, ಭೋಗಿಸಿದ ಕಾಮಧುರಂಧರರು ಅವರು. |
ಗಿಳಿಯ ಮರಿಯನು ತಂದು ಪಂಜ |
ರದೊಳಗೆ ಪೋಷಿಸಿ, ಕಲಿಸಿ ಮೃದು ನುಡಿ |
ಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ ! |
ತಿಳುಹಿ ಮತಿಯನು ಎನ್ನ ಜಿಹ್ವೆಗೆ |
ಮೊಳಗುವಂದದಿ ನಿನ್ನ ನಾಮಾ |
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ || |
ಒಡಹುಟ್ಟಿದ ಗಿಳಿಗರೆಡರಲ್ಲಿ ಕಟುಕನ ಮನೆ ಸೇರಿದ್ದೊಂದು, ತಾಪಸರ ಮನೆಗೆ ಸೇರಿದ್ದಿನ್ನೊಂದು. ಕಟುಕ ಸಾಕಿದ ಗಿಳಿ ಯಾರೇ ಬಂದರೂ "ಕೊಚ್ಚು", "ಕಡಿ", "ಕತ್ತರಿಸು" ಎಂದುಲಿಯುತ್ತಿತ್ತು; ತಾಪಸರ ಆಶ್ರಮವಾಸಿಯಾದ ಗಿಳಿ ಯಾರೇ ಬಂದರೂ "ಬನ್ನಿ", "ಕುಳಿತುಕೊಳ್ಳಿ", "ಇನ್ನೇನು ಗುರುಗಳು ಬರುತ್ತಾರೆ ಅಲ್ಲಿಯತನಕ ವಿಶ್ರಮಿಸಿ" ಎನ್ನುತ್ತಿತ್ತು. ಎರಡರ ಉಲಿಯುವಿಕೆಯಲ್ಲಿ ಅವುಗಳಿಗೆ ದೊರಕಿದ ಸಂಸ್ಕಾರ ಎಂಥದ್ದು ಎಂಬುದು ಸ್ಪಷ್ಟವಾಗುತ್ತದೆ. |
ಹಾವಾಡಿಗ ಮಠದಲ್ಲಿ ಅವರವರೊಳಗೆ ರಾಮನ ಹೆಸರುಗಳನ್ನು ಸಿಕ್ಕಸಿಕ್ಕಲ್ಲೆಲ್ಲ ಬಳಸುತ್ತಾರೆ. ಅಧರ್ಮ ನಡೆಯುವುದನ್ನು ಪ್ರಶ್ನಿಸಲು ಯಾರಾದರೂ ಹೋದರೆ ಅಲ್ಲಿರುವವರೆಲ್ಲ ಕಟುಕ ಸಾಕಿದ ಗಿಳಿಗಳಂತೆ ವರ್ತಿಸುವುದನ್ನು ವಾಹಿನಿಯೊಂದರಲ್ಲಿ ಕಣ್ಣಾರೆ ಕಂಡಿದ್ದೀರಲ್ಲವೇ? |
ಹಲವು ಶಿಷ್ಯಂದಿರಿಗೆ ಬಾಳೆಯ ಹಣ್ಣುಗಳನ್ನು ಕೊಟ್ಟು, ಯಾರೂ ಕಾಣದ ಜಾಗದಲ್ಲಿದ್ದು ತಿಂದು ಬರುವಂತೆ ಸೂಚಿಸಿದಾಗ ಮಿಕ್ಕ ಶಿಷ್ಯಶಿರೋಮಣಿಗಳೆಲ್ಲ, ಬಾಗಿಲ ಮರೆಯಲ್ಲಿ, ಬಾವಿಕಟ್ಟೆಯ ಸಂದಿಯಲ್ಲಿ, ಮರದ ಹಿಂದುಗಡೆಯಲ್ಲಿ, ಕೋಣೆಯೊಳಗಡೆಗೆ ಹೀಗೆಲ್ಲ ಅಡಗಿಕೊಂಡು ತಿಂದು ಬಂದರು. ಕನಕ ಮಾತ್ರ ಹಾಗೇ ತಂದ."ಯಾಕಪ್ಪಾ ಕನಕ? ತಿನ್ನಲಿಲ್ಲವೇ? ಯಾರೂ ಕಾಣದ ಜಾಗ ಸಿಗಲೇ ಇಲ್ಲವೇನೋ?"-ಪ್ರಶ್ನಿಸಿದರು ಗುರುಗಳು. "ಬ್ರಹ್ಮಾಂಡದಲ್ಲಿ ಸರ್ವವ್ಯಾಪಿಯಾದ ಭಗವಂತ ಇರುವಾಗ ಅವನ ಕಣ್ತಪ್ಪಿಸಿ ಹೇಗೆ ತಿನ್ನಲಿ ಗುರುಗಳೇ? ಇಲ್ಲಿ ಯಾರಿಗೆ ಎಷ್ಟೆಷ್ಟು ಜ್ಞಾನ, ಸ್ವಯಂಪ್ರಜ್ಞೆ ಮತ್ತು ಯಾರಿಗೆ ಎಷ್ಟೆಷ್ಟು ಭಾವನೆಗಳಿವೆ ಎಂಬುದು ಗೊತ್ತಾಗುತ್ತದೆ. |
ದಾನಿ ನೀನು ವಿಚಾರಿಸಲು ಮತಿ- |
ಹೀನ ನಾನು ಮಹಾಮಹಿಮ ಕೈವಲ್ಯ ಪತಿ ನೀನು | |
ಏನ ಬಲ್ಲೆನು ನಾನು? ನೆಲೆಸು- |
ಜ್ಞಾನ ಮೂರುತಿ ನೀನು ನಿನ್ನ ಸ- |
ಮಾನರುಂಟೇ ದೇವ ರಕ್ಷಿಸು ನಮ್ಮನನವರತ || |
"ಮತಿಹೀನನಾಗಿ ಅಂಡಲೆಯುತ್ತಿದ್ದ ನನ್ನನ್ನು ಗಿಳಿಯ ಮರಿಯನ್ನು ಪಂಜರದೊಳಗಿಟ್ಟು ಪೋಷಿಸುತ್ತ ಮೃದುನುಡಿಗಳನ್ನಾಡಲು ಕಲಿಸಿ, ಕೇಳಿ, ಆನಂದಿಸುವ ಆನಂದಘನ ಪರಮಾತ್ಮನೇ, ದೀನನಾದ ನನಗೆ ಮೋಕ್ಷವನ್ನು ಅನುಗ್ರಹಿಸುವ ದಾನಿ ನೀನಪ್ಪಾ, ಅಷ್ಟಾಗಿ ನಾನೇನು ಬಲ್ಲೆ? ಇಂತಹ ನನ್ನಲ್ಲಿ ನೆಲೆಸಿ ನಮ್ಮನ್ನೆಲ್ಲ ರಕ್ಷಿಸು" ಎಂದು ಬೇಡಿದ ಕನಕರ ಭಾವತಲ್ಲೀನತೆಯಲ್ಲಿ ಅದೆಷ್ಟು ವಿನಮ್ರ ನಡೆಯಿದೆ ಎಂಬುದನ್ನು ಹೃದಯವಂತರಾದ ನೀವೆಲ್ಲ ಬಲ್ಲಿರಷ್ಟೇ? |
ಯಾರೂ ಕಾಣದ ಜಾಗದಲ್ಲಿ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ತೊನೆಯಪ್ಪ ಶೀಗಳು ಏಕಾಂತ ನಡೆಸಿದ್ದರು, ನಡೆಸುತ್ತಿದ್ದಾರೆ, ಹಾಗೇ ಬಿಟ್ಟರೆ ನಡೆಸುತ್ತಲೇ ಇರ್‍ತಾರೆ. ಅವರ ಕಾಮಲೀಲೆಗಳು ಭಗವಂತನ ಕಣ್ಣಿಗೂ ಕಾಣಲಾರದು ಅಂದುಕೊಂಡಿದ್ದಾರೆ. "ಅನೈತಿಕ ಸಂಬಂಧ"ವೆಂದಾಗ ಕಾನೂನಿನ ಪ್ರಕಾರ ಪ್ರತಿರೋಧಿಸಲೂ ಇಲ್ಲ, ಮಾನಹಾನಿ ಕೇಸು ದಾಖಲಿಸಲೂ ಇಲ್ಲ! ಯಾವುದನ್ನು ಕೈಗೆತ್ತಿಕೊಂಡರೂ ಸಾರ್ವಜನಿಕರೆದುರು ಇಡಿಯಾಗಿ ಕಚ್ಚೆಬಿಚ್ಚಿಸಿ ಎಲ್ಲಾ ಪರೀಕ್ಷೆಗಳನ್ನೂ ಹೊಸದಾಗಿ ನಡೆಸುತ್ತಾರೆಂದು ಚಂಬು, ಲೋಟಗಳು ಸಾರಿದ ಮೇಲೆ ಮಹಾಸ್ವಾಮಿಗಳು ತಣ್ಣಗಾಗಿದ್ದಾರೆ! |
ಒಪ್ಪಿಕೊಳ್ಳೋಣ, ಏನೋ ಆ ಕಾಲಕ್ಕೆ ಮಠಮಾನ್ಯಗಳನ್ನು ಕಟ್ಟುವ ಹುಚ್ಚು, ಊರಿಗೆ ಹದಿನಾರು ದೇವಸ್ಥಾನಗಳನ್ನು ಕಟ್ಟುವ ಹುಚ್ಚು ಎಲ್ಲವೂ ನಮ್ಮ ಕೆಲವು ಮುಖಂಡರಲ್ಲಿತ್ತು. ಅಂತಹ ಕೆಲಸಗಳಲ್ಲಿ ತೊಡಗಿಕೊಂಡು ಅವರು ತಮ್ಮ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳುತ್ತಿದ್ದರು. ಅದೇನೇ ಇದ್ದರೂ, ಇಂದಿನ ದಿನಮಾನದಲ್ಲಿ ತುಂಡು ಮಠದಲ್ಲಿ ಪೀಠಾರೂಢರಾಗುವ ಸನ್ಯಾಸಿಗಳು ತಮಗೆ ಸಂಬಂಧಿಸುವ ಪ್ರಧಾನ ಆಮ್ನಾಯ ಮಠ ಯಾವುದೆಂಬುದನ್ನು ತಿಳಿದು, ಒಪ್ಪಿಕೊಂಡು, ಅಲ್ಲಿನವರ ಮಾರ್ಗದರ್ಶನಗಳನ್ನು ಪಡೆದುಕೊಳ್ಳುತ್ತ ನಡೆದರೆ ಇಂತಹ ಪರಿಸ್ಥಿತಿಗಳು ಬರುತ್ತಿರಲಿಲ್ಲ. |
ತುಂಡುಮಠದ ತೊನೆಯಪ್ಪನವರಿಗೆ ತಲೆಗಿಂತ ಮುಂಡಾಸು ದೊಡ್ಡದಾಗಿ, ಸುಂದರಿಯರೆದುರು ದೇಹವೆಲ್ಲ ತೂಗಿ, ಆಮ್ನಾಯ ಮಠಕ್ಕೂ ನಮಗೂ ಸಂಬಂಧವೇ ಇಲ್ಲ, ನಾವೇ ಬೇರೇ, ನಮ್ಮ ಸ್ಟೈಲೇ ಬೇರೆ ಅನ್ನೋ ಹಾಗೆ ವರ್ತಿಸತೊಡಗಿದರು. ಹಿಂದೆ ಹಲವು ಲೇಖನಗಳಲ್ಲಿ ತುಮರಿ ಹೇಳುತ್ತ ಬಂದಂತೆ ಮಠದಲ್ಲಿ ವಿದ್ವತ್ತಿಗಿಂತ ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಿಗೆ ಹೆಚ್ಚಿನ ಗಮನ ನೀಡುತ್ತೇವೆ ಎಂದರು, ತಪಸ್ಸು, ಕಾಲಕ್ಕೆ ಸರಿಯಾದ ಪೂಜೆ ಇವುಗಳಿಗೆಲ್ಲ ತಿಲಾಂಜಲಿ ಇತ್ತರು. |
ದುಡ್ಡುಕೊಡುತ್ತೇನೆ ಎಂದ ಶ್ರೀಮಂತರ ಮುಂದೆ ಅಗತ್ಯಕ್ಕಿಂತ ಅತಿಯಾಗಿ ಹಲ್ಲುಕಿಸಿದು ಅವರಿಂದಲೂ, ಸನ್ಯಾಸಿ ಪೂಜಿಸುವ ದೇವವಿಗ್ರಹಗಳಿಗೆ ಪೂಜೆ ಮಾಡಿಸಿದರು. ಇದನ್ನೆಲ್ಲ ಮೂಕಪ್ರೇಕ್ಷಕನಾಗಿ ನೊಡುತ್ತಿದ್ದ ವಿಗ್ರಹದೊಳಗಿನ ದೇವರು ಈ ಜಾಗ ತನಗೆ ಸರಿಯಲ್ಲವೆಂದು ಹೊರಟ. ಭಿನ್ನವಾದ ವಿಗ್ರಹಗಳನ್ನು ವಿಸರ್ಜಿಸುವಾಗ ವಿಶಿಷ್ಟ ಅಂತ್ಯವಿಧಿಗಳನ್ನು ನಡೆಸುತ್ತಾರೆ. ಯಾಕೆಂದರೆ ಇಲ್ಲಿಯವರೆಗೆ ಅದರಲ್ಲೊಂದು ಚೇತನವಿತ್ತು, ಅದೀಗ ಬಿಟ್ಟು ಬೇರೆಡೆಗೆ ಆಶ್ರಯ ಪಡೆಯಿತು ಎಂದರ್ಥ. ಹಾಗಾದರೆ ವಿಗ್ರಹಗಳಲ್ಲಿ ಚೇತನವಿರುತ್ತದೆ ಎಂಬುದು ಸ್ಪಷ್ಟವಾಗುತ್ತದಲ್ಲವೇ? |
ನಾವು ವೇದೋಕ್ತವಾಗಿ ಬಳಸುವ ಮಂಡಲಗಳು, ಕಲಶಗಳು ಮತ್ತು ಆಗಮೋಕ್ತವಾಗಿ ಬಳಸುವ ಪ್ರತಿಮೆಗಳು[ಸಾಲಿಗ್ರಾಮ, ಬಾಣಲಿಂಗ ಇತ್ರಾದಿ], ವಿಗ್ರಹಗಳು, ಚಿತ್ರಪಟಗಳು ಎಲ್ಲದರಲ್ಲಿಯೂ ಅದೇ ಚೇತನವನ್ನು ನಾವು ಆವಾಹಿಸುತ್ತೇವಷ್ಟೇ? ಆವಾಹನೆಯ ಹಿಂದೊಂದು ಭಾವನೆಯಿದೆ, ಭಕ್ತಿಯಿದೆ, ಅದರ ಮೂಲದಲ್ಲಿ ಶ್ರದ್ಧೆಯಿರುತ್ತದೆ. ಯಾವುದೇ ಭಾವನೆ-ಭಕ್ತಿಗಳಿಲ್ಲದೆ ಢಾಂಬಿಕ ಪೂಜೆ ಮಾಡಿದರೆ ಅದರಿಂದೇನು ಫಲ? |
ನಂದಿಯನು ಏರಿದನ | ಚಂದಿರನ ಸೂಡಿದನ | |
ಕಂದನ ಬೇಡಿ ನಲಿದಾನು ನೆನೆವುತ್ತ | |
ಮುಂದೆ ಪೇಳುವೆನು ಸರ್ವಜ್ಞ|| |
ಅಪ್ಪ ಪರಶಿವ ಮತ್ತು ಮಗ ಗಣಪ ಇಬ್ಬರನ್ನೂ ನೆನೆಯುತ್ತ ಮುಂದುವರಿಯುತ್ತೇನೆನ್ನುವ ಸರ್ವಜ್ಞನ ಸರಳ ಕವಿತ್ವಕ್ಕೆ ತುಮರಿ ಮನಸೋತಿದ್ದಾನೆ. |
ಸಾರಾಯದ ನಿಜವ ತೋರುವ ಗುರುವು ತಾ | |
ಸಾಸಿವೆಗಳಲ್ಲಿ ಸಾಗರಗಳನ್ನು ಹುದುಗಿಸುವ ಶಕ್ತಿ ಕೆಲವರಿಗೆ ಮಾತ್ರ ಇರುವುದಂತೆ. ಸರ್ವಜ್ಞನ ವಚನಗಳಲ್ಲಿ ಅಂತಹ ಕೆಲವು ಅಮರ ನುಡಿಗಟ್ಟುಗಳು ಸಿಗುತ್ತವೆ. ಗಂಡ-ಹೆಂಡತಿ ಅಥವಾ ಪ್ರೇಮಿ-ಪ್ರೇಮಿಕೆಯರು ಪರಸ್ಪರ ಕಣ್ಣುಗಳನ್ನು ನೋಡಿದಾಗಲೆ ಅರ್ಥಮಾಡೊಕೊಳ್ತಾರಂತೆ. ಸರ್ವಜ್ಞ ವಚನಗಳೂ ಹಾಗೆಯೇ ಎನ್ನಬಹುದು. ಇದು ಓದುಗ ಮತ್ತು ಅಕ್ಷರಗಳ ನಡುವಿನ ಸರಳ ನೋಟ; ಅಕ್ಷರಗಳು ಕಣ್ಣಿಗೆ ಬಿದ್ದರೆ ಸಾಕು-ಅವುಗಳಿಗಲ್ಲೆ ಅರ್ಥ. |
ಇದೇ ಸರ್ವಜ್ಞ, |
ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು? |
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ | |
ಸುತ್ತಿಬಂದಂತೆ ಸರ್ವಜ್ಞ.|| |
ಸದಾಶಿವನಿಗೆ ಅದೇ ಧ್ಯಾನ ಎಂಬಂತೆ, ಹಾವಾಡಿಗ ತುಂಡುಮಠದ ಮಹಾಸ್ವಾಮಿಗಳಿಗೆ ಸದಾ ಮಹಿಳೆಯರ ಜೊತೆಗೆ ಏಕಾಂತ ನಡೆಸುವುದರ ಬಗ್ಗೆಯೇ ಚಿಂತೆ. ಊರುಮನೆಗಳಲ್ಲಿ ಹಿಂದಿನಕಾಲದಲ್ಲಿ, ಯುವಕರ ಸಂಘಗಳು ವಾರ್ಷಿಕವಾಗಿ ಒಂದು ರಾತ್ರಿ ನಾಟಕ ನಡೆಸುತ್ತಿದ್ದವು. ತಾನೂ ಪಾತ್ರ ನಿರ್ವಹಿಸಿ ಪ್ರೇಕ್ಷಕರ ನಡುವಿರುವ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಳ್ಳುವ ಬಯಕೆ ಹಲವು ಯುವಕರಲ್ಲಿರುತ್ತಿತ್ತು. ಅದರಂತೆಯೇ, ರಾಜಕೀಯವಾಗಿ, ಸಾಮಾಜಿಕವಾಗಿ ತಾನೊಬ್ಬ ಮಹಾಸಮರ್ಥ ಎಂದು ಸಖಿಯರಿಗೆ ತೋರಿಸಿಕೊಳ್ಳುವ ಬಯಕೆ ಈ ಹಾವಾಡಿಗ ತೊನೆಯಪ್ಪ ಶೀಗಳಿಗೆ. |
ಆಮ್ನಾಯ ಮಠಗಳ ಯಾವುದೋ ಸನ್ಯಾಸಿಗಳು ಹಿಂದೆ ತಮ್ಮ ಪೀಠವನ್ನು ಒಪ್ಪಿದ್ದರು, ಲಿಖಿತವಾಗಿ ತಮ್ಮ ಪೀಠವನ್ನು ಸಮ್ಮಿತಿಸಿದ್ದರು ಎಂದುಕೊಂಡರೂ ಅದು ಶಂಕರರ ಸ್ಥಾಪನೆಯೇ ಎನ್ನಲು ಸಾಧ್ಯವಾಗುವುದಿಲ್ಲ. ಶಂಕರರು ಮುಖ್ಯ ದಿಕ್ಕುಗಳಿಗೊಂದೊಂದರಂತೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದು ಮಾತ್ರ ನಿಜ. |
ಮಹಾಜ್ಞಾನಿಗಳಾಗಿದ್ದ ಶಂಕರರು ಪ್ರಾಂತಭೇದವನ್ನು ಹೋಗಲಾಡಿಸುವ ಸಲುವಾಗಿ ಉತ್ತರದ ಕಡೆಯವರನ್ನು ದಕ್ಷಿಣಕ್ಕೂ ದಕ್ಷಿಣದವರನ್ನು ಉತ್ತರಕ್ಕೂ, ಪೂರ್ವದವರನ್ನು ಪಶ್ಚಿಮಕ್ಕೂ ಮತ್ತು ಪಶ್ಚಿಮದವರನ್ನು ಪೂರ್ವಕ್ಕೂ ಯತಿಗಳನ್ನಾಗಿ ನೇಮಿಸಿದರು. [ಅವರಾರೂ ಈರುಳ್ಳಿ ಉಪ್ಪಿಟ್ಟು ತಿನ್ನುವ 'ಯತಿ'ಗಳಾಗಿರಲಿಲ್ಲ |
Subsets and Splits
No community queries yet
The top public SQL queries from the community will appear here once available.