text stringlengths 0 61.5k |
|---|
ರಾವಣನಿಗೆ ದುಃಖ ತುಂಬಿ ಬಂದಿತು, ಕೋಪ ಜ್ವಾಲಾಮುಖಿಯಂತೆ ಸ್ಫೋಟಿಸಿತು. ತನ್ನಂತಹ ಅಸಮಾನ ವೀರನ ತಂಗಿಗೆ – ತಮ್ಮನಿಗೆ ಇಂತಹ ಗತಿಯೇ ಎಂದು ಕೆರಳಿದ. ಜೊತೆಗೆ, ಶೂರ್ಪಣಖಿ ಸೀತೆಯ ಸೌಂದರ್ಯವನ್ನು ವರ್ಣಿಸಿದುದನ್ನು ಕೇಳಿ ಕೆಟ್ಟ ಯೋಚನೆಯೊಂದು ಮನಸ್ಸಿನಲ್ಲಿ ಹೊಳೆಯಿತು – ಆಕೆಯನ್ನು ಕದ್ದು ತರಬೇಕು! |
ರಾವಣ ಹಲವು ಯೋಚನೆಗಳನ್ನು ಮಾಡಿದ. ಕಡೆಗೆ ಮಾರೀಚ ಎಂಬವನ ಸಹಾಯವನ್ನು ಬೇಡುವುದು ಎಂದು ತೀರ್ಮಾನಿಸಿದ. ಮಾರೀಚ ಅವನ ನೆಂಟ. ಶ್ರೀರಾಮನ ಹೆಸರನ್ನು ಕೇಳುತ್ತಲೇ ಮಾರೀಚನಿಗೆ ಮೈ ನಡುಗಿತು. ರಾಮಬಾಣದ ಮಹಿಮೆಯನ್ನು ಅವನು ರಾವಣನಿಗೆ ವಿವರಿಸಿದ. "ಸೀತೆಯನ್ನು ಕದ್ದು ತರುವುದು ಕೆಟ್ಟ ಯೋಚನೆ. ಇದನ್ನು ಬಿಟ್ಟುಬಿಡು" ಎಂದು ಬುದ್ಧಿ ಹೇಳಿದ. |
ರಾವಣನು ಅವನ ಮಾತಿಗೆ ಕಿವಿಗೊಡಲಿಲ್ಲ. ಒಂದೇ ಹಟ ಹಿಡಿದ "ನೀನು ನನ್ನ ಮಾತಿನಂತೆ ನಡೆಯದಿದ್ದರೆ ನಿನ್ನ ಆಯುಷ್ಯ ಮುಗಿಯಿತು. ನಿನ್ನನ್ನು ಕೊಂದುಬಿಡುತ್ತೇನೆ" ಎಂದು ಬೆದರಿಸಿದ. ರಾವಣನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ ಎಂದು ಮಾರೀಚನಿಗೆ ಅರ್ಥವಾಯಿತು. |
ಸೀತೆಯನ್ನು ತಾನು ಕದಿಯಲು ಶ್ರೀರಾಮನೂ ಲಕ್ಷ್ಮಣನೂ ಆಶ್ರಮವನ್ನು ಬಿಟ್ಟುಹೋಗುವಂತೆ ಮಾಡಬೇಕು ಎಂದು ರಾವಣನ ಯೋಚನೆ. ಅದಕ್ಕಾಗಿ ಒಂದು ಉಪಾಯವನ್ನು ಯೋಚಿಸಿದ್ದ. ಮಾರೀಚನು ಅವನು ಹೇಳಿದಂತೆಯೇ ಮಾಡಿದ. |
ಮಾರೀಚನು ಸುಂದರ ಜಿಂಕೆಯಾದ. ಬಂಗಾರದಂತೆ ಥಳಥಳ ಹೊಳೆಯುವ ಮನೋಹರ ಜಿಂಕೆಯಾದ. ಸೀತೆಯ ಮುಂದೆ ಸುಳಿದಾಡಿದ. |
ವನದಲ್ಲಿ ಕುಸುಮಗಳನ್ನು ಬಿಡಿಸುತ್ತಿದ್ದ ಸೀತಾದೇವಿ ಆ ಮೃಗವನ್ನು ಕಂಡಳು. ಆಶ್ಚರ್ಯದಿಂದ ಅದನ್ನು ನೋಡುತ್ತಾ, "ರಾಮಚಂದ್ರಾ! ನೋಡು ಬಾ ಇತ್ತ, ಎಂತಹ ರೂಪರಾಶಿ? ಇದನ್ನು ಹಿಡಿದು ಸಾಕಿದರೆ ನಮ್ಮ ಅಯೋಧ್ಯೆಗೆ ಅಲಂಕಾರವಾಗಿರುವುದಲ್ಲವೆ?" ಎಂದಳು. |
ಲಕ್ಷ್ಮಣನು "ಅಣ್ಣ! ಇದು ನಿಜವಾದ ಜಿಂಕೆಯಲ್ಲ, ಮಾಯಾಮೃಗ. ರಾಕ್ಷಸಮಾಯೆಗೆ ಮರುಳಾಗಬಾರದು" ಎಂದು ಎಚ್ಚರಿಸಿದ. |
ಆದರೆ, ಸೀತೆಯ ಆಸೆಯನ್ನು ಪೂರೈಸಬೇಕು ಎಂದು ಶ್ರೀರಾಮನಿಗೆ ಎನ್ನಿಸಿತು. ಜಿಂಕೆಯನ್ನು ಹಿಡಿದು ತರುವೆನೆಂದು ಅದರ ಹಿಂದೆಯೇ ಹೊರಟ. |
ಮಾಯಾಮೃಗವು ಕೈಗೆ ಸಿಗದೆ ಬಹುದೂರಕ್ಕೆ ಶ್ರೀರಾಮನನ್ನು ಕೊಂಡೊಯ್ದಿತು. ಕಡೆಗೆ ಬೇಸರಗೊಂಡು ಶ್ರೀರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಿದ. ಶ್ರೀರಾಮನ ಬಾಣ ಮಾರೀಚನಿಗೆ ತಗುಲಿತು. ಅವನು ಪ್ರಾಣ ಬಿಡುವಾಗ "ಹಾ ಲಕ್ಷ್ಮಣಾ! ಹಾ ಸೀತಾ!" ಎಂದು ರಾಮನ ಕಂಠಧ್ವನಿಯನ್ನೇ ಹಿಡಿದು ಚೀತ್ಕಾರ ಮಾಡಿದ. |
ಶ್ರೀರಾಮನು ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಸೀತಾದೇವಿ ಆತಂಕದಿಂದ ಕಾಯುತ್ತಿದ್ದಳು. ಅವಳ ಕಿವಿಗೆ ಕೇಳಿಸಿತು ಕೂಗು: "ಹಾ ಲಕ್ಷ್ಮಣ! ಹಾ ಸೀತಾ!" |
ಇದನ್ನು ಕೇಳುತ್ತಲೇ ಸೀತಾದೇವಿ ಭಯಾಕ್ರಾಂತಳಾಗಿ "ಲಕ್ಷ್ಮಣಾ! ಶ್ರೀರಾಮನಿಗೇಕೋ ಅಪಾಯ ಸಂಭವಿಸಿದೆ. ಬೇಗ ಹೋಗಿ ರಕ್ಷಿಸು" ಅಂದಳು. |
ಲಕ್ಷ್ಮಣನು "ತಾಯೇ! ಲೋಕರಕ್ಷಕನಾದ ನಮ್ಮಣ್ಣನಿಗೆ ಅಪಾಯವೆಂದರೇನು? ಇನ್ನೊಬ್ಬರು ರಕ್ಷಿಸುವುದೆಂದರೇನು? ಅಂಜಬೇಡ. ಇದೆಲ್ಲಾ ರಾಕ್ಷಸರ ತಂತ್ರ" ಎಂದು ಸಮಾಧಾನ ಹೇಳಿದ. ಸೀತೆ ಲಕ್ಷ್ಮಣನ ಮಾತನ್ನು ನಂಬಲಿಲ್ಲ. ಲಕ್ಷ್ಮಣ ಎಷ್ಟೋ ರೀತಿಗಳಲ್ಲಿ ಅವಳಿಗೆ ಧೈರ್ಯ ಹೆಳಿದ. ಸೀತೆ ಕೇಳಲಿಲ್ಲ. ಕಡೆಗೆ ಅವಳಿಗೆ ಕೋಪವೇ ಬಂದಿತು. ಲಕ್ಷ್ಮಣನ ಮೇಲೆ ಅನ್ಯಾಯದ ಆಪಾದನೆಗಳನ್ನು ಹೊರಿಸಿ, "ದುರಾಸೆಯಿಂದ ನೀನು ನಮ್ಮನ್... |
ಸೀತೆ ಒಬ್ಬಳೇ ಉಳಿದಳು. ಚಿಂತೆಯಲ್ಲಿ ಮುಳುಗಿದಳು. |
ಯಾರು ಈ ಸಂನ್ಯಾಸಿ |
ಸಂನ್ಯಾಸಿಯೊಬ್ಬ ಆಶ್ರಮದ ಬಾಗಿಲಿಗೆ ಬಂದ. |
ತಲೆಯಲ್ಲಿ ಜಟೆ, ಕೈಯಲ್ಲಿ ದಂಡ ಕಮಂಡಲು, ಮೈಮೇಲೆ ಕಾವಿಯ ಬಟ್ಟೆ, ಬಾಯಿಯಲ್ಲಿ ವೇದದ ಮಂತ್ರಗಳು. |
ಸೀತಾದೇವಿ ತಲೆ ಎತ್ತಿ ನೋಡಿದಳು. |
ಸಂನ್ಯಾಸಿಯು "ಇಷ್ಟು ಸುಂದರಿಯಾದ ನೀನು ಕಾಡಿನಲ್ಲಿ ಒಬ್ಬಳೇ ಏಕೆ ದುಃಖಪಡುತ್ತಿದ್ದೀಯೆ?" ಎಂದು ಕೇಳಿದನು. |
ಸೀತೆ ಪೂಜ್ಯನಾದ ಸಂನ್ಯಾಸಿ ಬಂದಿದ್ದಾನೆ ಎಂದು ಅವನಿಗೆ ಸತ್ಕಾರ ಮಾಡಿದಳು. ತನ್ನ ಕಥೆಯನ್ನೆಲ್ಲ ಹೇಳಿಕೊಂಡಳು. |
ರಾವಣನೇ ಸಂನ್ಯಾಸಿಯ ವೇಷದಲ್ಲಿ ಬಂದಿದ್ದಾನೆ ಎಂದು, ಪಾಪ, ಸೀತಾದೇವಿಗೆ ತಿಳಿಯಲಿಲ್ಲ. |
ಸಂನ್ಯಾಸಿ ಹೇಳಿದ: "ನಾನು ರಾವಣೇಶ್ವರ, ಮೂರು ಲೋಕಗಳೂ ನನ್ನ ಹೆಸರನ್ನು ಕೇಳಿದರೇ ನಡುಗುತ್ತವೆ. ನಿನ್ನಂತಹ ಸುಂದರಿಯನ್ನು ನಾನು ನೋಡಿಯೇ ಇಲ್ಲ ನೀನು ನನ್ನ ಪಟ್ಟದ ರಾಣಿಯಾಗು, ಸುಖ ಸಂತೋಷಗಳಿಂದ ಬಾಳು." |
ಸೀತಾದೇವಿ ಈ ಮಾತುಗಳನ್ನು ಕೇಳಿ ಕೆಂಡಕೆಂಡವಾದಳು. "ಅಯ್ಯೋ ಪಾಪಿ, ನಾನು ಪುರುಷಸಿಂಹನಾದ ಶ್ರೀರಾಮನ ಹೆಂಡತಿ. ನನ್ನನ್ನು ಮುಟ್ಟುವುದು ಉರಿಯುವ ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿದಂತೆ" ಎಂದು ಛೀಮಾರಿ ಹಾಕಿದಳು. |
ಅವಳು ಎಷ್ಟು ಬೈದರೂ, ಅತ್ತರೂ ರಾವಣ ಬಿಡಲಿಲ್ಲ. ಆಕೆಯನ್ನು ಹಿಡಿದೆತ್ತಿ ತನ್ನ ರಥದಲ್ಲಿ ಹಾಕಿಕೊಂಡು ಹೊರಡಲನುವಾದ. ಸೀತಾದೇವಿ ಅವನನ್ನು ಬಗೆಬಗೆಯಾಗಿ ನಿಂದಿಸಿದಳು. ತನ್ನ ರಕ್ಷಣೆಗಾಗಿ ತರುಗಳನ್ನು, ಗಿರಿಗಳನ್ನು, ನದಿಗಳನ್ನು, ವನ್ಯಜೀವಿಗಳನ್ನೆಲ್ಲಾ ಅಂಗಲಾಚಿದಳು. |
ಸೀತಾದೇವಿಯ ಆರ್ತಸ್ವರವನ್ನು ಕೇಳಿ ಮರದ ಮೇಲೆ ನಿದ್ರಿಸುತ್ತಿದ್ದ ಜಟಾಯುವಿಗೆ ಎಚ್ಚರವಾಯಿತು. ಅವನು ಥಟ್ಟನೆ ಹಾರಿಬಂದು ರಥವನ್ನು ಅಡ್ಡಗಟ್ಟಿದ. ರಥವನ್ನೂ ಸಾರಥಿಯನ್ನೂ ತನ್ನ ರೆಕ್ಕೆಗಳಿಂದ ಬಡಿದು ಕೊಕ್ಕಿನಿಂದ ತಿವಿದು ನಾಶಮಾಡಿದ. ರಾವಣಿಗೆ ಮಿತಿ ಮೀತಿ ಕೋಪ ಬಂದಿತು. ಆ ಪಕ್ಷಿರಾಜನೊಂದಿಗೆ ಹೋರಾಡುತ್ತಾ ಕಡೆಗೆ ಅವನ ರೆಕ್ಕೆಗಳನ್ನು ಕಡಿದು ಹಾಕಿದ. ನೆಲಕ್ಕೆ ಬಿದ್ದ ಜಟಾಯುವನ್ನು ಕಂಡು ಸೀತಾದೇವ... |
ಸೀತೆ ಎಲ್ಲಿ? |
ಮಾರೀಚನ ಆರ್ತಸ್ವರವನ್ನು ಕೇಳಿದಾಗಲೇ ಶ್ರೀರಾಮನಿಗೆ ಇದೇನೋ ವಿಪತ್ತು ಸಂಭವಿಸಿತೆಂದು ತೋರಿತು. ಬೇಗಬೇಗ ಹೆಜ್ಜೆ ಹಾಕುತ್ತ ಹಿಂದಕ್ಕೆ ಹೊರಟ. ಮಾರ್ಗಮಧ್ಯದಲ್ಲಿ ಲಕ್ಷ್ಮಣನು ಸಿಕ್ಕಿದ. ಶ್ರೀರಾಮನ ಸಂದೇಹ ಭಯಗಳಿನ್ನೂ ಹೆಚ್ಚಾದುವು, ಅಪಶಕುನಗಳಾದುವು. "ತಮ್ಮಾ! ಇದೇನು? ನೀನೇಕೆ ಬಂದೆ? ಸೀತೆಯ ಗತಿಯೇನು? ನಾವು ಹೋಗುವ ವೇಳೆಗೆ ಆಕೆಯು ಜೀವದಿಂದಿರುವಳೇ? ನಮಗೆ ಕಾಣಸಿಗುವಳೇ?" ಎಂದು ಹಂಬಲಿಡುತ್ತಾ ಆಶ... |
ರಾಮ ಲಕ್ಷ್ಮಣರಿಗೆ ಬಹು ದುಃಖವಾಯಿತು. ಶಾಸ್ತ್ರೀಯವಾಗಿ ಜಟಾಯುವನ್ನು ದಹನ ಮಾಡಿದರು. |
ರಾವಣಾ, ನಿನಗೆ ಆಯಸ್ಸು ಮುಗಿದಿದೆ. |
ರಾವಣನು ಸೀತೆಯನ್ನು ಎತ್ತಿಕೊಂಡು ಓಡಿ ಲಂಕೆಯನ್ನು ಸೇರಿದನು. ಅವಳಿಗೆ ತನ್ನ ಅರಮನೆಯನ್ನೂ ಐಶ್ವರ್ಯವನ್ನೂ ತೋರಿಸಿದನು. ತನ್ನ ರಾಕ್ಷಸರ ಸೈನ್ಯವನ್ನು ತೋರಿಸಿದನು. "ನೋಡು, ಇಲ್ಲಿಗೆ ರಾಮ ಬರಲಾರ. ಅವನನ್ನು ಮರೆತುಬ ಇಡು. ನನ್ನಂತಹ ಪರಾಕ್ರಮಶಾಲಿ, ಐಶ್ವರ್ಯವಂತ ಯಾರಿದ್ದಾರೆ? ನನ್ನ ರಾಣಿಯಾಗಿ ಸುಖವಾಗಿರು" ಎಂದನು. |
ಸೀತೆಗೆ ರಾವಣನ ಜೊತೆಗೆ ಮಾತನಾಡಲೂ ಇಷ್ಟವಿರಲಿಲ್ಲ. ಒಂದು ಹುಲ್ಲುಕಡ್ಡಿಯನ್ನು ಕೈಯಲ್ಲಿ ಹಿಡಿದು ಅದನ್ನು ನೋಡುತ್ತ ಹೇಳಿದಳು: "ರಾವಣಾಸುರ, ಶ್ರೀರಾಮನು ಇಲ್ಲದಿದ್ದಾಗ ಕಳ್ಳತನದಲ್ಲಿ ನನ್ನನ್ನು ಎತ್ತಿಕೊಂಡು ಬಂದೆ. ಅವನು ಇದಿರಿನಲ್ಲಿ ಇದ್ದಿದ್ದರೆ ನೀನು ಪುಡಿಪುಡಿಯಾಗುತ್ತಿದ್ದೆ. ನಿನಗೆ ಆಯ೮ಸ್ಸು ಮುಗಿದಿದೆ ಎಂದು ತೋರುತ್ತದೆ." |
ರಾವಣನು ಕೋಪದಿಂದ ಹಲ್ಲು ಕಡಿದನು. ಸೀತಾದೇವಿಯನ್ನ ಅಶೋಕವನದಲ್ಲಿಟ್ಟನು. ಅವಳ ಕಾವಲಿಗೆ ರಾಕ್ಷಸಿಯರನ್ನು ನೇಮಿಸಿದನು. |
ಶ್ರೀರಾಮನೂ ಲಕ್ಷ್ಮಣನೂ ಸೀತೆಯನ್ನು ಹುಡುಕುತ್ತಾ ಅಲೆದಾಡಿದರು. ಹೀಗೆ ಅಲೆಯುವಾಗ ಋಷ್ಯಮೂಕ ಎಂಬ ಪರ್ವತದ ಬಳಿಗೆ ಬಂದರು. ಆ ಪರ್ವತದ ಮೇಲಿಂದ ಇವರನ್ನು ನೋಡಿ ಸುಗ್ರೀವ ಎಂಬ ಕಪಿರಾಜನು ತನ್ನ ಆಪ್ತಮಂತ್ರಿಯಾದ ಆಂಜನೇಯನನ್ನು ಕಳಿಸಿ ಇವರನ್ನು ತನ್ನಲ್ಲಿಗೆ ಬರಮಾಡಿಕೊಂಡನು. |
ತನ್ನ ಅಣ್ಣನಾದ ವಾಲಿಯಿಂದ ಸುಗ್ರೀವನು ರಾಜ್ಯ ಭ್ರಷ್ಟನಾಗಿದ್ದನು. ಅವನ ಹೆಂಡತಿಯನ್ನೂ ವಾಲಿಯು ತನ್ನವಳನ್ನಾಗಿ ಮಾಡಿಕೊಂಡಿದ್ದನು. ಈ ದುಃಖವನ್ನು ರಾಮನಲ್ಲಿ ತಿಳಿಸಿ ಅವನು ರಾಮನ ಸಹಾಯವನ್ನು ಬೇಡಿದನು. ಶ್ರೀರಾಮನೂ ತನ್ನ ದುಃಖವನ್ನು ಹೇಳಿಕೊಂಡು ಸುಗ್ರೀವನ ಸಹಾಯವನ್ನು ಕೇಳಿದನು. ಒಬ್ಬರಿಗೊಬ್ಬರು ಸಹಾಯ ಮಾಡಲು ಮಾತು ಕೊಟ್ಟರು. ಅಗ್ನಿಸಾಕ್ಷಿಯಾಗಿ ಇವರು ಸ್ನೇಹಿತರಾದರು. |
ಶ್ರೀರಾಮನು ವಾಲಿಯನ್ನು ಕೊಂದು ಸುಗ್ರೀವನನ್ನು ರಾಜನನ್ನಾಗಿ ಮಾಡಿದನು. ಸುಗ್ರೀವನು ಸೀತಾದೇವಿಯನ್ನು ಹುಡುಕಲು ನಾಲ್ಕು ದಿಕ್ಕುಗಳಿಗೂ ತನ್ನ ಸೈನ್ಯವನ್ನು ಕಳುಹಿಸಿದನು. ಶ್ರೀರಾಮನು ಆಂಜನೇಯನನ್ನು ಹತ್ತಿರಕ್ಕೆ ಕರೆದು "ವಾಯು ಕುಮಾರಾ! ಈ ಸಂದರ್ಭದಲ್ಲಿ ನೀನು ಕೃತಕಾರ್ಯನಾಗಿ ಬರುವೆಯೆಂದು ನನಗೆ ನಂಬಿಕೆಯಿದೆ. ಲಂಕೆಗೆ ಹೋಗಲು ನೀನೊಬ್ಬನೇ ಸಮರ್ಥನು. ಅಲ್ಲಿ ಸೀತೆಯನ್ನು ನೋಡಿದಾಗ ನಮ್ಮ ಕುಶಲವನ್ನ... |
ವಾನರ ಸೈನ್ಯ ಸಮುದ್ರತೀರಕ್ಕೆ ಬಂದಿತು. |
ಅಗಾಧವಾದ ಈ ಸಮುದ್ರವನ್ನು ದಾಟುವುದು ಹೇಗೆ? ಹಾರಬೇಕು. ಅಷ್ಟು ಸಾಮರ್ಥ್ಯ ನಮ್ಮಲ್ಲಿ ಯಾರಿಗುಂಟು? ಎಂದು ವಿಚಾರಮಾಡಿ ಎಲ್ಲರೂ ಒಮ್ಮತದಿಂದ ಆಂಜನೇಯನೊಬ್ಬನೇ ಇದಕ್ಕೆ ಸಮರ್ಥನೆಂದು ತೀರ್ಮಾನಿಸಿದರು. ಅವರೆಲ್ಲರ ಇಷ್ಟದಂತೆ ಆಂಜನೇಯನು ವಾಯುವೇಗದಿಂದ ನೂರು ಯೋಜನದ ಸಮುದ್ರವನ್ನು ಲಂಘಿಸಿ ಲಂಕೆಗೆ ಬಂದನು. ರಾವಣನ ಅಂತಃಪುರವನ್ನು ಹೊಕ್ಕು ಅಲ್ಲೆಲ್ಲ ಹುಡುಕಿದನು. ಕಡೆಗೆ ಸೀತೆಯನ್ನು ಅಶೋಕವನದಲ್ಲಿ ಕಂಡ... |
'ಭಾಗ್ಯವೋ ಬಡತನವೋ ರಾಮನ ಜೊತೆಗೇ |
ಒಂದು ಶಿಂಶುಪಾ ವೃಕ್ಷದ ಕೆಳಗೆ ಶ್ರೀರಾಮನ ಪ್ರಿಯಸತಿ ಕುಳಿತಿದ್ದಾಳೆ. ದುಃಖದಿಂದ ದೇಹ ಸಣ್ಣಗಾಗಿದೆ. ಮಾಸಿದ ಸೀರೆ. ಬರಿ ನೆಲದ ಮೇಲೆ ಕುಳಿತಿದ್ದಾಳೆ. ಎಡೆಬಿಡದೆ ಕಣ್ಣೀರುಗರೆಯುತ್ತಾ "ರಾಮಚಂದ್ರಾ" ಕೃಪಾನಿಧೇ! ನನ್ನೀ ದುರ್ಗತಿಯನ್ನು ನೀನು ತಿಳಿಯಲಾರೆಯಾ? ಈ ಹತಭಾಗಿನಿಗೆ ನಿನ್ನನ್ನು ನೋಡುವ ಭಾಗ್ಯವಿರುವುದೋ ಇಲ್ಲವೋ!" ಎಂದು ಹಲಬುತ್ತಿದ್ದಾಳೆ. ಆಕೆಯ ಸುತ್ತ ವಿಕಾರರೂಪದ ರಕ್ಕಸಿಯರು, "ರಾಮನನ್... |
ಆಂಜನೇಯನು ಗಿಡದ ಮೇಲೆ ಕುಳಿತು ಎಲ್ಲವನ್ನೂ ನೋಡುತ್ತಿದ್ದ, ಕೇಳುತ್ತಿದ್ದ. |
ಬೆಳಗಾಗುತ್ತಲೇ ಅಲ್ಲಿಗೆ ರಾವಣನೂ ಬಂದ. ಪದ್ಧತಿಯಂತೆ ಅವನೊಂದಿಗೆ ಅಂತಃಪುರಸ್ತ್ರೀಯರೂ ಬಂದರು. |
ರಾವಣನು "ಸೀತೆ, ಮಾಸಿದ ಸೀರೆಯುಟ್ಟು ಉಪವಾಸ ಮಾಡುತ್ತ ಹೀಗೇಕೆ ಕಷ್ಟಪಡುತ್ತಿ? ನಾನು ಮೂರು ಲೋಕದ ರಾಜ. ನನ್ನ ಅರಮನೆ, ಐಶ್ವರ್ಯ, ವೈಭವ ಎಲ್ಲ ನಿನ್ನದು, ಅರಮನೆಗೆ ಬಾ. ಕಾಡಿನಲ್ಲಿ ತಪಸ್ವಿಯಂತೆ ವಾಸಿಸುವ ರಾಮನು ಬದುಕಿರುವನೋ, ಸತ್ತೇಹೋದನೋ! ಅವನನ್ನು ಮರೆತುಬಿಡು" ಎಂದ. |
ಸೀತೆ ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಹೇಳಿದಳು: "ಅಯ್ಯಾ, ನಾನು ಶ್ರೀರಾಮನ ಹೆಂಡತಿ. ಭಾಗ್ಯವೋ ಬಡತನವೋ ಅವನ ಜೊತೆಗೇ ನನಗಿರಲಿ. ನಾನು ನಿನ್ನ ಕಡೆ ನೋಡುವುದೂ ಇಲ್ಲ. ನನ್ನನ್ನು ಹೊತ್ತು ತಂದು ನೀನೂ ನಿನ್ನ ಕುಲವೂ ಹಾಳಾಗುವಂತೆ ಮಾಡಿಕೊಂಡೆ." |
ರಾವಣನು ಇನ್ನೂ ಅವಳನ್ನು ಮಾತನಾಡಿಸಲು ಹೋದ. ಮೂರು ಲೋಕಗಳೂ ರಾವಣನೆಂದರೆ ನಡುಗುತ್ತಿದ್ದವು. ಅಂತಹ ಪರಾಕ್ರಮಿ ಅವನು. ಆದರೆ ಅವಳು ಅವನನ್ನು ಹೇಡಿ, ಪಾಪಿ ಎಂದು ತಿರಸ್ಕರಿಸಿದಳು. |
ರಾವಣನಿಗೆ ಕೋಪ ಬಂದಿತು. ಅವಳನ್ನು ಕೊಂದುಬಿಡುತ್ತೇನೆ ಎಂದು ನುಗ್ಗಿದ. ಧಾನ್ಯಮಾಲಿನಿ ಎಂಬ ಅವನ ಹೆಂಡತಿ ಅವನನ್ನು ತಡೆದಳು. ರಾವಣನು ಸೀತೆಗೆ ಎರಡು ತಿಂಗಳ ಅವಕಾಶ ಕೊಟ್ಟ. "ಅಷ್ಟರಲ್ಲಿ ನೀನು ಮನಸ್ಸು ಬದಲಾಯಿಸದೆ ಹೋದರೆ ನಿನ್ನನ್ನು ತಿಂದುಬಿಡುತ್ತೇನೆ" ಎಂದು ಗುಡುಗಿ ಹಿಂದಕ್ಕೆ ಹೋದ. |
ರಾವಣನು ಹೋದನಂತರ ರಾಕ್ಷಸಿಯರು ಮನಬಂದಂತೆ ಮಾತನಾಡುತ್ತಾ ಸೀತೆಯನ್ನು ಪೀಡಿಸತೊಡಗಿದರು. ಸೀತಾದೇವಿಗೆ ಬಹು ದುಃಖವಾಯಿತು. ರಾಕ್ಷಸರು ಆಹಾರಕ್ಕಾಗಿ ತನ್ನ ದೇಹವನ್ನು ಕಿತ್ತು ಮೊದಲು ತಾನೇ ತನ್ನ ಜೀವನವನ್ನು ಮುಗಿಸುವುದು ಒಳ್ಳೆಯದು ಎಂದು ನಿಶ್ಚಯಿಸಿದಳು. ಆಗ ತ್ರಿಜಟೆಯೆಂಬ ಮುದಿ ರಕ್ಕಸಿಯೊಬ್ಬಳು ತನ್ನವರನ್ನು ಗದರಿಸಿದಳು. ತನಗಾದ ಒಂದು ಕೆಟ್ಟ ಸ್ವಪ್ನವನ್ನು ತಿಳಿಸಿ, "ಈ ಪತಿವ್ರತೆಯನ್ನು ಹೀಗೆ ... |
ಸಂತೋಷದ ಅರುಣೋದಯ |
ಮರದ ಮೇಲಿಂದ ಹನುಮಂತನು ಇದನ್ನೆಲ್ಲ ಕಣ್ಣಾರೆ ನೋಡಿದ. ಶ್ರೀರಾಮನ ಗುಣಗಾನ ಮಾಡುತ್ತಾ ಮರದಿಂದಿಳಿದು ಸೀತಾದೇವಿಯ ಮುಂದೆ ನಿಂತ. |
ಸೀತಾದೇವಿ ಬೆಚ್ಚಿದಳು. ಇದೂ ರಾವಣನ ತಂತ್ರ ಎಂದು ಹೆದರಿದಳು. ಆದರೆ ಆಂಜನೇಯನು ಪ್ರಮಾಣಮಾಡಿ ನಿಜರೂಪವನ್ನೂ ತೋರಿದ ಮೇಲೆ ಆಕೆಗೆ ನಂಬಿಕೆಯಾಯಿತು. ಆಂಜನೇಯನು ರಾಮ ಲಕ್ಷ್ಮಣರ ಕುಶಲವನ್ನು ತಿಳಿಸಿ ಮುದ್ರೆಯುಂಗುರವನ್ನು ಒಪ್ಪಿಸಿದ. ಸೀತಾದೇವಿಗೆ ತುಂಬಾ ಸಂತೋಷವಾಯಿತು. ಉಂಗುರವನ್ನು ಕಣ್ಣಿಗೊತ್ತಿಕೊಂಡಳು. ವಿವರವಾಗಿ ತನ್ನ ವಿಷಯವನ್ನೆಲ್ಲಾ ಆಂಜನೇಯನಿಗೆ ತಿಳಿಸಿದಳು. "ಎರಡು ತಿಂಗಳೊಳಗೆ ಶ್ರೀರಾಮನ... |
ಹನುಮಂತನು "ತಾಯೇ! ಅದುವರೆಗೆ ಕಾಯುವುದೇಕೆ? ಈಗಲೇ ನಾನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ವಾಯುವೇಗದಲ್ಲಿ ಶ್ರೀರಾಮನೆಡೆಗೆ ಕೊಂಡೊಯ್ಯುತ್ತೇನೆ" ಎಂದನು. ದೇವಿಯು ಅದನ್ನು ಒಪ್ಪಲಿಲ್ಲ. "ಆಂಜನೇಯ, ಅದು ಶ್ರೀರಾಮನ ಕರ್ತವ್ಯ, ಅದಕ್ಕೆ ಕೊರತೆಯುಂಟಾಗಬಾರದು. ಆತನು ಬರುವವರೆಗೆ ಹೇಗಾದರೂ ನಾನು ಕಷ್ಟವನ್ನು ಸಹಿಸುತ್ತೇನೆ. ಗುರುತಿಗಾಗಿ ಇದನ್ನು ನನ್ನ ಪತಿಗೆ ಕೊಡು" ಎಂದು ಚೂಡಾಮಣಿ ಎಂಬ ಒಡವೆಯನ್ನು ಕ... |
ಸ್ವಲ್ಪವೂ ಕಾಲಹರಣ ಮಾಡದೆ ಶ್ರೀರಾಮನು ಕಪಿ ವೀರರೊಂದಿಗೆ ಲಂಕೆಗೆ ಹೊರಟನು. ಸಮುದ್ರವನ್ನು ದಾಟಲು ಸೇತುವೆ ನಿರ್ಮಾಣವಾಯಿತು. |
ರಾಮನ ಸೈನ್ಯಕ್ಕೂ ರಾವಣನ ಸೈನ್ಯಕ್ಕೂ ಬಹು ಘೋರವಾದ ಯುದ್ಧ ನಡೆಯಿತು. ರಾವಣನೂ ಅಸಾಧಾರಣ ಪರಾಕ್ರಮಿ. ಆವನ ಮಗ ಇಂದ್ರಜಿತು, ತಮ್ಮ ಕುಂಬಕರ್ಣ, ಸೇನಾಪತಿ ಪ್ರಹಸ್ತ ಮೊದಲಾದವರೂ ಶೂರರು. ಅವರೆಲ್ಲ ದೃಢಮನಸ್ಸಿನಿಂದ ಹೋರಾಡಿದರು. ಆದರೆ ರಾವಣನ ಸೈನ್ಯಕ್ಕೆ ಸೋಲಿನ ಮೇಲೆ ಸೋಲಾಯಿತು. ಪ್ರಹಸ್ತ, ಇಂದ್ರಜಿತು, ಕುಂಭಕರ್ಣ ಎಲ್ಲ ಸತ್ತರು. ರಾವಣನು ಅಷ್ಟೆಲ್ಲಾ ಸರ್ವನಾಶವಾಗಿದ್ದರೂ ತನ್ನ ಹಟವನ್ನು ಬಿಡಲಿಲ್ಲ... |
'ಎಲ್ಲಿಯಾದರೂ ಹೋಗು' |
ಸೀತಾದೇವಿ ರಾಮನ ಧ್ಯಾನದಲ್ಲಿಯೇ ಕಾಲ ಕಳೆದಿದ್ದಳು. ರಾವಣನ ಅಸಹ್ಯದ ಮಾತುಗಳು, ಬೆದರಿಕೆ, ರಾಕ್ಷಸಿಯರ ಗರ್ಜನೆ, ಮೂದಲಿಕೆ ಎಲ್ಲವನ್ನೂ ಸಹಿಸಿದ್ದಳು. ರಾಮನು ಬರುತ್ತಾನೆ, ರಾವಣನನ್ನು ಗೆದ್ದು ತನ್ನನ್ನು ಬಿಡಿಸಿಕೊಳ್ಳುತ್ತಾನೆ. ಮತ್ತೆ ತಾನು ಸಂತೋಷವನ್ನು ಕಾಣುತ್ತೇನೆ ಎಂದು ನೆಚ್ಚಿದ್ದಳು. |
ರಾಮನು ಗೆದ್ದ, ರಾವಣನು ಸತ್ತ. |
ಆದರೆ ಸೀತೆಗೆ ಸಂತೋಷ ಲಭ್ಯವಾಗಲಿಲ್ಲ. |
ವಿಭೀಷನು ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಬಂದನು. |
ಸುಗ್ರೀವನ ಸೈನ್ಯ, ವಿಭೀಷಣನ ಸೈನ್ಯ ನಿಂತಿವೆ. |
ಸೀತಾದೇವಿ ಪಲ್ಲಕ್ಕಿಯಿಂದ ಇಳಿದಳು. ಶ್ರೀರಾಮನ ಬಳಿಗೆ ಹೋದಳು. 'ಆರ್ಯಪುತ್ರ!' ಎಂದಷ್ಟೆ ನುಡಿದಳು. ಸಂತೋಷದಿಂದ ಗಂಟಲು ಕಟ್ಟಿತು. |
ಶ್ರೀರಾಮನು ಆಕೆಗೆ ಹೇಳಿದ: "ಎಲೆ ಕಲ್ಯಾಣಿ! ನೀನು ನಿರ್ಬಂಧದಿಂದ ಮುಕ್ತಳಾಗಿರುವೆ. ರಾಜಧರ್ಮವನ್ನು ಹಿಡಿದು ನಾನು ನಿನ್ನನ್ನು ಬಿಡಿಸಲು ಬಂದೆ. ನಿನ್ನ ಮೇಲಿನ ಮೋಹದಿಂದಲ್ಲ. ರಾಕ್ಷಸನ ವಶದಲ್ಲಿ ವರ್ಷಕಾಲವಿದ್ದ ನಿನ್ನನ್ನು ಮೊದಲಿನಂತೆ ಹೆಂಡತಿ ಎಂದು ನಾನು ಕರೆದುಕೊಳ್ಳಲಾರೆ. ಈಗ ನೀನು ಸ್ವತಂತ್ರಳು. ಎಲ್ಲಿಯಾದರೂ ಹೋಗಿ ಬದುಕು." |
ಶ್ರೀರಾಮನಂತಹ ದಯಾಳು. ಇಂತಹ ಕಠೋರ ಮಾತುಗಳನ್ನಾಡುವನೇ? ಸೀತಾ ತನ್ನ ಕಿವಿಗಳನ್ನೇ ನಂಬಲಾರದೆ ಹೋದಳು. |
"ಇದು ನನ್ನ ಸತ್ವಪರೀಕ್ಷೆ. ಆಗಲಿ. ಪತಿಗೆ ಬೇಡವಾದ ನಾನು ಇರುವುದೇ ಬೇಡ. ಈ ದೇಹವನ್ನು ಅಗ್ನಿದೇವನಿಗೆ ಅರ್ಪಿಸುತ್ತೇನೆ" ಎಂದು ನಿಶ್ಚಯ ಮಾಡಿದಳು. |
ಲಕ್ಷ್ಮಣನತ್ತ ನೋಡಿ, "ವತ್ಸ ಲಕ್ಷ್ಮಣಾ! ಅಗ್ನಿಯನ್ನು ಹೊತ್ತಿಸು, ಈ ದೇಹವು ಅಗ್ನಿಗೆ ಅರ್ಪಿತವಾಗಲಿ" ಅಂದಳು. |
ಲಕ್ಷ್ಮಣನು ಅಣ್ಣನನ್ನು ದುರುಗುಟ್ಟಿ ನೋಡಿದ ಸುಗ್ರೀವಾದಿ ವೀರರೆಲ್ಲಾ ನಡುಗಿಹೋದರು. ಶ್ರೀರಾಮನು ದಿಟ್ಟವಾಗಿ ಅಚಲ ಪರ್ವತದಂತೆ ನಿಂತಿದ್ದಾನೆ. ಕಣ್ಣೀರಿಡುತ್ತಾ ಲಕ್ಷ್ಮಣನು ಅಗ್ನಿಯನ್ನು ಸಿದ್ಧ ಮಾಡಿದ. |
ಸೀತಾದೇವಿ ಪತಿಯ ಕಡೆ ನೋಡಿ ಕೈಮುಗಿದು "ಅಗ್ನಿದೇವಾ! ನಾನು ಸದಾ ಶ್ರೀರಾಮನೇ ನನ್ನ ಪತಿಯೆಂದು ಯೋಚಿಸುತ್ತ ಪರಿಶುದ್ಧೆಯಾಗಿದ್ದರೆ ನನ್ನನ್ನು ರಕ್ಷಿಸು" ಎಂದಳು. ಅಗ್ನಿಗೆ ಪ್ರದಕ್ಷಿಣೆ ಮಾಡಿದಳು. ಧಗಧಗನೆ ಉರಿಯುತ್ತಿದ್ದ ಬೆಂಕಿಯಲ್ಲಿ ಪ್ರವೇಶ ಮಾಡಿದಳು. |
'ಅಗ್ನಿದೇವಾ, ನಾನು ಪರಿಶುದ್ದೆಯಾಗಿದ್ದರೆ ನನ್ನನ್ನು ರಕ್ಷಿಸು.' |
ನೋಡುತ್ತಿದ್ದವರಿಗೆ ಎದೆ ಝಲ್ ಎಂದಿತು. ವಾನರರೂ ರಾಕ್ಷಸರೂ ನಡುಗಿಹೋದರು. ಹೆಂಗಸರು ಹಾಹಾಕಾರ ಮಾಡಿದರು. |
ಆದರೆ ಅಗ್ನಿ ಶಮನವಾಯಿತು. ಅಗ್ನಿಪುರುಷನು ಸೀತಾದೇವಿಯನ್ನೆತ್ತಿಕೊಂಡು ಮೇಲೆದ್ದು ಬಂದು "ರಾಮಚಂದ್ರಾ! ಈ ಸತಿ ದೋಷರಹಿತಳು! ಈಕೆಯಲ್ಲಿ ನೀನು ಸಂದೇಹಪಡುವುದೇ? ಇದೋ ಈ ಮಂಗಾಳಾಂಗಿಯನ್ನು ಸ್ವೀಕರಿಸು" ಎಂದು ಶ್ರೀರಾಮನಿಗೆ ಸೀತೆಯನ್ನು ಒಪ್ಪಿಸಿದನು. ಮೇಲಿನಿಂದ ಮಂಗಳವಾದ್ಯಗಳು ಮೊಳಗಿದುವು. ಹೂಮಳೆಗರೆಯಿತು. ಶ್ರೀರಾಮನು "ಸೀತೆಯು ಪರಿಶುದ್ಧೆಯೆಂದು ನಾನು ಬಲ್ಲೆ. ಆದರೂ ಜನರು ಕೆಟ್ಟಮಾತು ಆಡದೆ ಇರಲ... |
ಅಲ್ಲಿಗೆ ವನವಾಸದ ಅವಧಿ ಮುಗಿಯಿತು. ಶ್ರೀರಾಮನು ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಹೊರಟನು. ಮಹಾ ಸಂಭ್ರಮದಿಂದ ಭರತನೂ ಪ್ರಜೆಗಳೂ ಸ್ವಾಗತವಿತ್ತರು. ಎಲ್ಲರ ಮುಖಗಳಲ್ಲಿ ಭಾನುಪ್ರಕಾಶ, ಎಲ್ಲರ ಬಾಯಲ್ಲೂ ಸೀತಾವೃತ್ತಾಂತ. ಪಟ್ಟಾಭೀಷೇಕಕ್ಕೆ ಸರ್ವಸಿದ್ಧತೆಯಾಗಿತ್ತು. ಶ್ರೀರಾಮಚಂದ್ರನು ಪಟ್ಟಾಭಿಷಿಕ್ತನಾದನು. |
ಕೊಟ್ಟ ಮಾತಿಗೆ ತಪ್ಪಿದವರು ಯಾರು? | udupibits |
ಕೊಟ್ಟ ಮಾತಿಗೆ ತಪ್ಪಿದವರು ಯಾರು? |
Posted: ಜೂನ್ 25, 2014 in Uncategorized |
# ಚುನಾವಣಾ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾತನಾಡುವ ಭರದಲ್ಲಿ 'ಬಿಜೆಪಿ ನನಗೆ ಮಾತೃ ಸ್ವರೂಪಿ' ಎಂದಿದ್ದರು. ಅದು ಅವರ ಭಾವೋದ್ವೇಗದ ಹೇಳಿಕೆ ಎಂದು ನಾನು ಭಾವಿಸಿದ್ದೆ. ಅವರು ಪ್ರಧಾನ ಮಂತ್ರಿಯಾದ ನಂತರ ಮಾತನಾಡುತ್ತಾ 'ಈ ದೇಶದ 125 ಕೋಟಿ ಜನರನ್ನು ನಾನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವೆ' ಎಂದಿದ್ದೂ |
ಅರ್ಥಪೂರ್ಣವಾಗಿತ್ತು. |
ಈಚೆಗೆ ಆ ಪಕ್ಷದ ಕಾರ್ಯಕ್ರಮಗಳ ವಿವರಗಳನ್ನು ನೋಡಿದಾಗ ಎಲ್ಲವೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯಕ್ಕೆ ಪೂರಕವಾಗಿವೆ ಎಂದೆನಿಸುವಂತಿದೆ. ಆರ್ಎಸ್ಎಸ್ ತನ್ನ ನಂಬಿಕಸ್ಥರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕುಳ್ಳಿರಿಸುವ ಪ್ರಕ್ರಿಯೆಗೆ ಇದೀಗ ಚಾಲನೆ ಸಿಕ್ಕಂತಿದೆ. ಕೆಳಸ್ತರದ ಕಾರ್ಯಕ್ರಮಗಳಿಗೆ ಆರ್‌ಎಸ್‌ಎಸ್‌ನ |
ಕಾರ್ಯಕರ್ತರನ್ನೇ ನೇಮಿಸಲಾಗುತ್ತಿದೆ. ಅಧಿಕಾರಿ ವರ್ಗವಂತೂ ಯಾವತ್ತೂ ಗಾಳಿ ಬಂದತ್ತ ತೂರಿಕೊಳ್ಳುವ ಸ್ವಭಾವ ಹೊಂದಿರುತ್ತದೆ ತಾನೆ. ಹೀಗಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತನ್ನ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಯಾವುದೇ ಅಡ್ಡಿ ಇಲ್ಲ. |
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ್ ಮಾತನಾಡುತ್ತಾ 'ಬಿಜೆಪಿಯ ಗೆಲುವಿನ ನಂತರ ದೇಶದ ಎಲ್ಲೆಡೆಯೂ ಕೋಮುವಾದ ಎದ್ದು ಕಾಣತೊಡಗಿದೆ' ಎಂದಿರುವುದು ಗಮನಾರ್ಹ. |
ಮೋದಿಯವರು ಅಧಿಕಾರದ ಗದ್ದುಗೆಗೆ ಏರಿ ಕೆಲವು ದಿನಗಳಾಗಿವೆ ಅಷ್ಟೆ. ಅವರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಇನ್ನೂ ಬಲು ದೂರ ಸಾಗುವುದಿದೆ. ಅಷ್ಟರಲ್ಲಿಯೇ ನಡೆದಿರುವ ಕೆಲವು ಘಟನೆಗಳು ಆತಂಕ ಕಾರಿಯಾಗಿವೆ. ಅವುಗಳಲ್ಲಿ ಪುಣೆಯಲ್ಲಿ ನಡೆದಿರುವ ಘಟನೆಯೂ ಒಂದು. ಮಹಾರಾಷ್ಟ್ರದ ಮಟ್ಟಿಗೆ ಅತ್ಯಂತ ಪ್ರಶಾಂತವಾದ ನಗರ ಪುಣೆಯಲ್ಲಿ ನಡೆದ ಘಟನೆಯೊಂದು ಈಚೆಗೆ ಎಂಥವರನ್ನೂ ಭಯಭೀತರನ್ನಾಗಿಸ... |
ಬಿಜೆಪಿಯೂ ಈ ಕಗ್ಗೊಲೆಯನ್ನು ಖಂಡಿಸಿದೆ, ನಿಜ. ಆದರೆ ಪ್ರಧಾನಿ ಮೋದಿಯವರಿಗೆ ಈಗ ಒಂದು ಸುವರ್ಣ ಅವಕಾಶ ಲಭಿಸಿದೆ. ಈ ಕೊಲೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮೋದಿಯವರು ನೋಡಿಕೊಳ್ಳಬೇಕಿದೆ. ಇದರಿಂದ ಮುಸ್ಲಿಮ್ ಸಮುದಾಯದ ಒಡಲಲ್ಲಿ ಭದ್ರತೆಯ ಮನೋಭಾವ ಮೂಡಿಸಲು ಸಾಧ್ಯವಿದೆ. ಕೊಲೆಯಾದ ಮೊಹಿಸಿನ್ ಅವರ ಕುಟುಂಬವನ್ನು ಸಂಪರ್ಕಿಸಿ ಕನಿಷ್ಠ ಸಹಾನುಭೂತಿಯ ಮಾತುಗಳನ್ನಾದರೂ ಮೋದಿಯವರು ... |
ಇವತ್ತು ನನ್ನಂತಹವರು ಮುಸಲ್ಮಾನ ಸಮುದಾಯಕ್ಕೆ ಭದ್ರತೆಯ ಮತ್ತು ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕಿದೆ. ಸುಮಾರು 15ರಿಂದ 16 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಈ ಸಮುದಾಯ ಯಾವುದೇ ಕಾರಣಕ್ಕೂ ಎದೆಗುಂದಬಾರದು, ತಲ್ಲಣಗೊಳ್ಳಬಾರದು ಎಂಬ ಭರವಸೆ ನೀಡಬೇಕಿದೆ. ಈ ದೇಶದ ಸಂವಿಧಾನ, ಇಲ್ಲಿಯ ಕಾನೂನುಗಳು ಈ ನೆಲದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬ ನೆಲೆಯಲ್ಲಿಯೇ ರೂಪುಗೊಂಡಿವೆ. ಅದರ ಚೌಕಟ್ಟ... |
ಜಮ್ಮು ಮತ್ತು ಕಾಶ್ಮೀರ ರಾಜ್ಯವು ಮುಸ್ಲಿಮ್ ಸಮುದಾಯವೇ ಬಹುಸಂಖ್ಯಾತರಾಗಿರುವ ಪ್ರದೇಶ. ಅಲ್ಲಿಗೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ಸ್ವತಂತ್ರ ಭಾರತಕ್ಕೆ ಇರುವಷ್ಟೇ ಇತಿಹಾಸವನ್ನು ಹೊಂದಿದೆ. ಇದೀಗ ಮೋದಿ ಸರ್ಕಾರ ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ಉಂಟು ಮಾಡಬಹುದೇ ಎಂಬ ಅನುಮಾನ ಆ ರಾಜ್ಯದ ಜನರನ್ನು ಕಾಡುತ್ತಿದೆ. |
1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ತೊರೆದು ಹೋದರು. ಆ ಸಂದರ್ಭದಲ್ಲಿ ಈ ದೇಶದಲ್ಲಿ ಸುಮಾರು 560ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳಿದ್ದವು. ಆ ಸಂಸ್ಥಾನಗಳ ರಾಜರು ಒಂದೋ ಭಾರತದ ಜತೆಗೆ ನಿಲ್ಲಬಹುದಿತ್ತು, ಇಲ್ಲವೇ ಪಾಕಿಸ್ತಾನದ ಜತೆಗೆ ಹೋಗಬಹುದಿತ್ತು. ಧರ್ಮ ಅಥವಾ ಇನ್ನಾವುದೇ ಅಂಶಗಳನ್ನು ಮುಂದಿಟ್ಟುಕೊಂಡು ಆ ಆಡಳಿತಗಾರರು ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು. ಸ್ವತ... |
ಅಂದು ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದರು. ಆದರೆ ಅಲ್ಲಿ ಮಹಾರಾಜಾ ಹರಿಸಿಂಗ್ ಎಂಬುವವರು ಆಡಳಿತ ನಡೆಸುತ್ತಿದ್ದರು. ಅವರು ಭಾರತ ಒಕ್ಕೂಟವನ್ನು ಸೇರಿಕೊಂಡರು. ಆ ಸಂದರ್ಭದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗನ್ನಿಸುತ್ತಿದೆ, ಒಂದು ವೇಳೆ ಪಾಕಿಸ್ತಾನ ತಾಳ್ಮೆಯಿಂದ ಇದ್ದು ಬಿಟ್ಟಿದ್ದರೆ, ಆ ಪ್ರದೇಶ ಪಾಕ್‌ನೊಳಗೆ ಸೇರುವ ಸಾಧ್ಯತೆಯೂ ಇತ್ತು. ಆದರೆ ಅಂದು ಪಾಕ... |
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದ ಅಷ್ಟೊಂದು ಸರಳವಾಗಿಲ್ಲ. ಅದಕ್ಕೊಂದು ಸೂಕ್ತ ಪರಿಹಾರ ಹುಡುಕಬೇಕೆಂದರೆ, ಅದಕ್ಕೆ ಭಾರತ, ಪಾಕಿಸ್ತಾನ ಅಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಒಪ್ಪಿಗೆಯೂ ಬೇಕಾಗುತ್ತದೆ. ಒಂದು ವೇಳೆ ಇವತ್ತು ಜನಮತಗಣನೆ ನಡೆಯಿತು ಎಂದಿಟ್ಟುಕೊಳ್ಳಿ, ಆಗ ಕಾಶ್ಮೀರ ಕಣಿವೆಯ ಮಂದಿ ಸ್ವತಂತ್ರ ಕಾಶ್ಮೀರದ ಬಗ್ಗೆಯೇ ಒಲವು ತೋರಬಹುದು. ಜಮ್ಮು ಪ್ರದೇಶದಲ್ಲಿ ಹಿಂದೂಗಳೇ ಬಹು |
ಸಂಖ್ಯೆಯಲ್ಲಿರುವುದರಿಂದ ಅವರು ಭಾರತದ ಜತೆಗೇ ಇರಲು ಇಷ್ಟಪಡುತ್ತಾರೆ. ಲಡಾಖ್ ಪ್ರದೇಶದಲ್ಲಿ ಬೌದ್ಧ ಧರ್ಮೀಯರೇ ಬಹುಸಂಖ್ಯಾತರು. ಅವರು ನವದೆಹಲಿಯ ಆಡಳಿತಗಾರರ ಜತೆಗೆ ನೇರ ಸಂಪರ್ಕವಿರಿಸಿಕೊಂಡು ಕೇಂದ್ರಾಡಳಿತ ಪ್ರದೇಶವಾಗಿರಲು ಇಚ್ಛಿಸಬಹುದು. ಈ ಎಲ್ಲಾ ಅಂಶಗಳು ಕಾಶ್ಮೀರ ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವಂತಹದ್ದಾಗಿವೆ. ಅದೇನೇ ಇರಲಿ, ಇಂತಹ ಯಾವುದೇ ವಿಚಾರಗಳಲ್ಲಿ ರಾಷ್ಟ್ರೀಯ ಸ... |
1948ರ ಜನವರಿ 30ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದವರು ಎನ್ನಲಾಗಿದ್ದ ನಾಥೂರಾಮ್ ಗೋಡ್ಸೆ ಎನ್ನುವವರು ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದ್ದರೆಂಬ ಕಾರಣಕ್ಕಾಗಿ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ತೆಗೆಯಬೇಕೆಂದು ಆರ್ಎಸ್ಎಸ್ ಸಂಘಟನೆಯವರು ನಂತರ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆಗ ವಲ್ಲಭಭಾಯ್ ಪಟೇಲ್ ಅವರು ಕೇಂದ್ರ ಗೃಹ ಸಚಿವರಾಗಿದ್ದರು.... |
ಅಷ್ಟಾದರೂ ಪಟೇಲ್ ಅವರಿಗೆ ತೃಪ್ತಿ ಆಗಿರಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಸಂವಿಧಾನದಲ್ಲಿಯೇ ಈ ಬದಲಾವಣೆ ಬಗ್ಗೆ ಸ್ಪಷ್ಟಪಡಿಸುವಂತೆ ಕೋರಿದ್ದರು. ಆಗ 'ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆ. ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ' ಎಂದು ಖಚಿತಪಡಿಸಿದ ಮೇಲೆಯೇ ನಿಷೇಧ ತೆರವುಗೊಳಿಸಲಾಯಿತು ಎನ್ನುವುದು ಈಗ ಇತಿಹಾಸ. ಆದರೆ ಈಗ ಏನಾಗಿದೆ ನೋಡಿ.... |
ಈಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕ್ ಮೋಹನ್ ಭಾಗವತ್ ಅವರೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರಲ್ಲ. ಹಿಂದೆ |
ಆರ್‌ಎಸ್‌ಎಸ್ ಪ್ರಚಾರಕ್ ಆಗಿದ್ದ ನರೇಂದ್ರ ಮೋದಿಯವರನ್ನು ಪ್ರಧಾನಿ |
ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ದುಡಿದಿರುವುದು ಸತ್ಯ ತಾನೆ? ಫಲಿತಾಂಶ ಈಗ ಎಲ್ಲರ ಮುಂದಿದೆ. – ಕುಲದೀಪ್ ನಯ್ಯರ್. (ಕೃಪೆ: ಪ್ರಜಾವಾಣಿ, 25.06.14.) |
ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ | ಮಾಹಿತಿ ಗುರು |
Home ಅರೋಗ್ಯ ಮಾಹಿತಿ ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ |
ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ |
ಯಾವುದೇ ವೆಚ್ಚವಿಲ್ಲದೆ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ಚರ್ಮ ಕಪ್ಪು ಅಂದರೆ ಟಾನ್ ಅನ್ನು ತೆಗೆಯುವ ಸುಲಭ ವಿಧಾನಗಳು ಹಲವುಗಳು, ಇನ್ನು ಕತ್ತಿನ ಮೇಲೆ ಹಾಗು ಹಿಂಬಾಗದಲ್ಲಿ ಕಪ್ಪು ಕಲೆ ಅತಿಯಾಗಿ ಕಾಣಿಸುತ್ತದೆ, ಇದರಿಂದ ನಿಮ್ಮ ಶರ್ಟ್ ನ ಕಾಲರ್ ಗಳು ಸಹ ಬೇಗನೆ ಕೊಳೆಯಾಗುತ್ತವೆ, ನೀವು ದಿನ ನಿತ್ಯ ಬಳಸುವ ಸ್ನಾನದ ಸೋಪಿನಿಂದ ಎಷ್ಟೇ ತೊಳೆದರು ಕಪ್ಪು ಹಾಗೆಯೇ ಇರುವುದನ್ನು ನ... |
ಈ ನಾವು ತಿಳಿಸುವ ವಸ್ತು ಗಳನ್ನೂ ಬಳಸಿ ಕುತ್ತಿಗೆ ಮೇಲಿನ ಕಪ್ಪು ಕಲೆಯನ್ನು ತೊಲಗಿಸ ಬಹುದು, ಇದಕ್ಕೆ ಬೇಕಾಗುವುದು 3 ವಸ್ತುಗಳು ಯಾವುದಾದರು ಕಾಫಿಪುಡಿ, ನಿಂಬೆ ಹಣ್ಣು ಮತ್ತು ರೋಸ್ ವಾಟರ್, ಇನ್ನು ಇವುಗಳನ್ನು ಹೇಗೆ ಬಳಸಿ ನಿಮ್ಮ ಚರ್ಮದ ಟಾನ್ ತೆಗಿಯಬಹುದು ಮುಂದೆ ಓದಿ. |
ಒಂದು ಕಪ್ ನಲ್ಲಿ ಕಾಫಿಪುಡಿ ಮತ್ತು ರೋಸ್ ವಾಟರ್ ನ ಮಿಶ್ರಣ ಮಾಡಿ ಅದನ್ನು ನಿಂಬೆ ಹಣ್ಣಿನ ಚಿಪ್ಪೆಯ ಸಹಾಯದಿಂದ ಟಾನ್ ಆದ ಜಾಗ ಅಂದರೆ ಕುತ್ತಿಗೆ ಕೆಳಗಿನ ಕಪ್ಪು, ಕಣ್ಣಿನ ಕೆಳಗಿನ ಕಪ್ಪು, ಕೈ ಚರ್ಮ ಹೀಗೆ 10 ನಿಮಿಷದ ವರೆಗೂ ಚೆನ್ನಾಗಿ ಮಸಾಜ್ ಮಾಡಿ, ನಂತರ ತಕ್ಷಣ ತಣ್ಣಗಿನ ನೀರಿಂದ ತೊಳೆಯಿರಿ ಮತ್ತು ಕಪ್ಪು ಚರ್ಮದಿಂದ ಮುಕ್ತಿ ಪಡೆಯಿರಿ. |
ಕಾಫಿ ಪುಡಿಯಲ್ಲಿ ಆಂಟಿ ಅಕ್ಸಿಡೆಂಟ್ ಗಳು ಹೆಚ್ಚಿದ್ದು ರಕ್ತ ಸಂಚಾರ ಮತ್ತು ಟಾನ್ ತೆಗೆಯಲು ಒಳ್ಳೆ ಉಪಕಾರಿಯಾಗಿ ಕೆಲಸ ಮಾಡುತ್ತದೆ. |
ಬೆಂಬಲ ವಾಪಸ್: ಮುಲಾಯಂ ಬೆದರಿಕೆ | Prajavani |
ಬೆಂಬಲ ವಾಪಸ್: ಮುಲಾಯಂ ಬೆದರಿಕೆ |
ಎಸ್‌ಸಿ, ಎಸ್ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ವಿರೋಧ |
ಮೈನಾಪುರಿ (ಉತ್ತರ ಪ್ರದೇಶ) (ಪಿಟಿಐ): ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಮಾಜವಾದಿ ಪಕ್ಷ (ಎಸ್‌ಪಿ), ಈ ಮಸೂದೆ ಅಂಗೀಕೃತವಾದರೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಆಲೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ. |
Subsets and Splits
No community queries yet
The top public SQL queries from the community will appear here once available.