text stringlengths 0 61.5k |
|---|
ಟ್ವೀಟರ್ ಮೂಲಕ ಸ್ಪ್ಯಾಮ್ ಮೆಸೇಜ್ ಗಳನ್ನು ಹರಡುವುದು, ದುರುದ್ದೇಶಪೂರಿತ ಚಟುವಟಿಕೆಗಳನ್ನು ಮಾಡುವುದು ಮತ್ತು ನಮ್ಮ ಖಾತೆಯ ಮಂದಿಗೆ ತೊಂದರೆ ನೀಡುವ ಯಾವುದೇ ಕೆಲಸವನ್ನು ಟ್ವೀಟರ್ ಸಹಿಸುವುದಿಲ್ಲ ಎಂದು ಟ್ವೀಟರ್ ಅಧಿಕಾರಿಗಳು ತಿಳಿಸಿದ್ದಾರೆ. ಫೇಕ್ ಆಪ್ ಗಳು ಮತ್ತು ತೊಂದರೆದಾಯಕವಾಗಿರುವ ಆಪ್ ಗಳನ್ನು ತೆಗೆಯುವ ನಿಟ್ಟಿನಲ್ಲಿ ನಮ್ಮ ಕಾರ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕುಗೊಳ್ಳಲಿದೆ ಎಂಬ ಸೂಚನೆಯನ್ನೂ ಕೂಡ ಅವರು ನೀಡಿದ್ದಾರೆ. |
ಈಗಾಗಲೇ ಹಿಂತೆಗೆದುಕೊಂಡಿರುವ ಆಪ್ ಗಳ ಬಗ್ಗೆ ಟ್ವೀಟರ್ ನಿಂದ ಯಾವುದೇ ವಿವರಣೆ ಸಿಕ್ಕಿಲ್ಲ. ಆದರೆ ಟ್ವೀಟರ್ ಹಿಂತೆಗೆದುಕೊಂಡ ಆಪ್ ಗಳಿಂದ ಮರುಅವಕಾಶಕ್ಕಾಗಿ ಒತ್ತಡ ಕೇಳಿಬರುತ್ತಿದೆಯಂತೆ. ರಾಜಕೀಯ ದುರುದ್ದೇಶ ಅಥವಾ ತಪ್ಪು ಕಲ್ಪನೆಗಳನ್ನು ಹರಡುವಿಕೆ ಜೊತೆಗೆ ದುರುದ್ದೇಶಪೂರಿತ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. |
ಟ್ವೀಟರ್ ನಲ್ಲಿ ಯಾವುದೇ ಆಪ್ ನ್ನು ಸೃಷ್ಟಿ ಮಾಡುವುದೇ ಆದರೆ ಹೊಸ ಅಪ್ಲಿಕೇಷನ್ ಪ್ರೊಸೆಸ್ ನ್ನು ಅನುಸರಿಸಬೇಕು ಮತ್ತು ಹೇಗೆ ಅವರು ಆ ಅಪ್ಲಿಕೇಷನ್ ಮೂಲಕ ಸೇವೆಯನ್ನು ನೀಡುತ್ತಾರೆ ಎಂಬ ವಿವರವನ್ನು ನೀಡಬೇಕು. |
ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಟ್ವೀಟರ್ ಬದ್ಧವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬ ಡೆವಲರ್ ಗಳು ಟ್ವೀಟರ್ ಎಪಿಐ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಸಹಕಾರ ನೀಡಬೇಕು. ಟ್ವೀಟರ್ ಸೇವೆಗಳಿಂದ ಯಾವುದೇ ಕೆಟ್ಟ ಪರಿಣಾಮವೂ ಆಗಬಾರದು ಎಂಬುದು ಟ್ವೀಟರ್ ನ ಉದ್ದೇಶವಾಗಿದೆ. |
ಸ್ವಯಂಚಾಲಿತ ಖಾತೆಗಳು ಯಾವಾಗಲೂ ದುರುದ್ದೇಶದಿಂದ ಕೂಡಿರುವುದಿಲ್ಲ. ಕೆಲವು ತುರ್ತು ಎಚ್ಚರಿಕೆಗಳನ್ನು ನೀಡುವ ಉದ್ದೇಶದಿಂದ ನಿರ್ಮಿಸಿರುವ ಖಾತೆಗಳಾಗಿರುತ್ತವೆ. ಕಲಾ ಪ್ರದರ್ಶನಗಳು ಅಥವಾ ನೆಟ್ ಫ್ಲಿಕ್ಸ್ ಕಾರ್ಯಕ್ರಮದ ವಿವರಗಳಿಗಾಗಿ ತೆರೆಯಲಾಗಿರುತ್ತದೆ. ಆದರೆ ಇಂತಹದ್ದೇ ಕೆಲವು ಖಾತೆಗಳು ಟ್ವೀಟರ್ ನ ಹೆಸರಿಗೆ ಕಳಂಕ ತಂದ ಹಿನ್ನೆಲೆಯಲ್ಲಿ ಈ ಚಟುವಟಿಕೆಯನ್ನು ನಡೆಸಲಾಗಿದೆ ಎಂದು ಟ್ವೀಟರ್ ಹೇಳಿದೆ. |
ಒಟ್ಟಾರೆ ಮೋಸ, ವಂಚನೆ, ತಪ್ಪು ಮಾಹಿತಿ, ಸಮಾಜಕ್ಕೆ ಕೆಟ್ಟ ಸಂದೇಶ ಸಾರುವ ಯಾವುದೇ ಚಟುವಟಿಕೆಗಳಿಗೆ ಟ್ವೀಟರ್ ಅವಕಾಶ ಕಲ್ಪಿಸುವುದಿಲ್ಲ ಎಂಬುದು ಮಾತ್ರ ಸತ್ಯ . |
Twitter removes more than one lakh apps to counter malicious activity. To know more this visit kannada.gizbot.com |
ಈ ಬಾರಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ವಿಜಯ್ ಹಝಾರೆ ನಡೆಯಲ್ಲ | Chances only for Ranji Trophy and Syed Mushtaq Ali T20 in this season - kannada MyKhel |
» ಈ ಬಾರಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ವಿಜಯ್ ಹಝಾರೆ ನಡೆಯಲ್ಲ |
Published: Sunday, August 9, 2020, 9:41 [IST] |
ನವದೆಹಲಿ, ಆಗಸ್ಟ್ 9: ಈ ಸೀಸನ್‌ನಲ್ಲಿ ಬರೀ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮಾತ್ರ ಕಾಣ ಸಿಗಲಿದೆ. ಹಿರಿಯ ಆಟಗಾರರ ಮಟ್ಟದಲ್ಲಿ ನಡೆಯುವ ದೇಸಿ ಟೂರ್ನಿಗಳಲ್ಲಿ ಕೇವಲ ಇವೆರಡಷ್ಟೇ ನಡೆಯಲಿದೆ. ಕೊರೊನಾವೈರಸ್ ಕಾರಣ ಉಳಿದ ಪ್ರಮುಖ ದೇಸಿ ಟೂರ್ನಿಗಳು ನಡೆಯುತ್ತಿಲ್ಲ ಎನ್ನಲಾಗುತ್ತಿದೆ. |
ಸಾಮಾನ್ಯವಾಗಿ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್ ಟೂರ್ನಿಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾವೈರಸ್‌ನಿಂದಾಗಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಹೀಗಾಗಿ ದೇಸೀ ಕ್ರಿಕೆಟ್ ಟೂರ್ನಿಗಳನ್ನು ನಡೆಸಲು ತೊಂದರೆಯಾಗಿದೆ. |
ಎಂದಿನಂತೆ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್ ಟೂರ್ನಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಈ ಸೀಸನ್‌ನಲ್ಲಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಕೈ ಬಿಡಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿದೆ ಎಂದು ತಿಳಿದುಬಂದಿದೆ. |
ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ರೂಪಿಸಿರುವಂತೆ, ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 19ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಮುಷ್ತಾಕ್ ಅಲಿ ಟ್ರೋಫಿ ಡಿಸೆಂಬರ್ 7ರಂದು ಕೊನೆಗೊಂಡರೆ ಡಿಸೆಂಬರ್ 13ರಿಂದ ರಣಜಿ ಟ್ರೋಫಿ ಶುರುವಾಗಲಿದೆ. |
ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚುವುದೇ? ಪರಿಹಾರ ಇಲ್ಲಿದೆ | Webdunia Kannada |
ಬೆಂಗಳೂರು| Ramya kosira| Last Updated: ಸೋಮವಾರ, 8 ನವೆಂಬರ್ 2021 (16:54 IST) |
ಕೆಲವೊಮ್ಮೆ ಚಳಿಗಾಲದದಲ್ಲಿ, ನಿಮ್ಮ ರಕ್ತದೊತ್ತಡವು ತುಂಬಾ ಹೆಚ್ಚಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ. |
ಒಂದು ವರದಿಯ ಪ್ರಕಾರ, ಪ್ರತಿದಿನ ಒಂದು ನಿರ್ದಿಷ್ಟ ರೀತಿಯ ವ್ಯಾಯಾಮವನ್ನು ಮಾಡುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಐಸೋಮೆಟ್ರಿಕ್ ಹ್ಯಾಂಡ್ ಗ್ರಿಪ್ ಬಗ್ಗೆ ಇಲ್ಲಿದೆ ಮಾಹಿತಿ. ಹೃದಯಾಘಾತದ ಕಾರಣಗಳು |
ಅಧಿಕ ರಕ್ತದೊತ್ತಡ ರೋಗಿಗಳು ಕೆಲವೊಮ್ಮೆ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಹೃದಯಾಘಾತ ಮತ್ತು ಹೃದ್ರೋಗಗಳಿಗೆ ಕಾರಣವಾಗಬಹುದು. ಬೊಜ್ಜು, ಆಲ್ಕೋಹಾಲ್ ಸೇವನೆ, ಕಳಪೆ ಜೀವನಶೈಲಿ ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನುವುದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ವ್ಯಾಯಾಮವು ಬಿಪಿಯನ್ನು ಕಡಿಮೆ ಮಾಡುತ್ತದೆ |
ಈಗ ವ್ಯಾಯಾಮ ಮಾಡುವುದರಿಂದ ಏನಾಗುತ್ತದೆ ಎಂದು ಕಂಡುಕೊಳ್ಳಿ. ವರದಿಯ ಪ್ರಕಾರ, ಐಸೋಮೆಟ್ರಿಕ್ ಹ್ಯಾಂಡ್ ಗ್ರಿಪ್ |
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಎಂಟು ವಾರಗಳಲ್ಲಿ ರಕ್ತದೊತ್ತಡವನ್ನು 8 ರಿಂದ 10 ಎಂಎಂಎಚ್ ಜಿಗೆ ಕಡಿಮೆ ಮಾಡಬಹುದು. |
ಆರೋಗ್ಯಕರ ಜೀವನಶೈಲಿಯು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವನ್ನು ಮಾಡಿ. ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ. ಅಥವಾ ಯೋಗ |
ಮಾಡಿ, ಇಲ್ಲವೇ ಯಾವುದೇ ಎಕ್ಸರ್ ಸೈಜ್ ಮಾಡಿ. ಇದರಿಂದ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. |
ಉಪ್ಪಿನ ಸೇವನೆ ಕಡಿಮೆ ಮಾಡಿ |
ಅಲ್ಲದೆ ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಮಸ್ಯೆ ಇದೆ ಆದ್ದರಿಂದ ಆಹಾರದಲ್ಲಿನ ಉಪ್ಪನ್ನು ತಕ್ಷಣ ಕಡಿಮೆ ಮಾಡಿ. ಇದು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಹಾರ ಪದಾರ್ಥಗಳಿಗೆ ಹೆಚ್ಚುವರಿ ಉಪ್ಪನ್ನು ಸೇರಿಸಲು ಮರೆಯಬೇಡಿ. |
ತೂಕ ನಿಯಂತ್ರಿಸಿ |
ಬೊಜ್ಜು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ನೀವು ಅಧಿಕ ತೂಕವನ್ನು ಹೊಂದಿದ್ದರೆ, ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಸಾಮಾನ್ಯ ಸ್ಥಿತಿಯಲ್ಲಿರಲು ತೂಕ ನಿಯಂತ್ರಣ ಅತ್ಯಗತ್ಯ. ಆದುದರಿಂದ ಸೇವಿಸುವ ಆಹಾರ ಮತ್ತು ವ್ಯಾಯಾಮಗಳ ಬಗ್ಗೆ ಗಮನ ಹರಿಸಬೇಕು. |
ಆಹಾರದಲ್ಲಿ ಶುಂಠಿಯ ಬಳಕೆ |
ಆಹಾರದಲ್ಲಿ ಶುಂಠಿಯನ್ನು ಸೇರಿಸಿ. ಇದರಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇರುತ್ತವೆ ಮತ್ತು ಸ್ನಾಯುಗಳು ಸಡಿಲವಾಗುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುವಾಗ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. |
ಪಾಕ್ ಸೇನಾ ಮುಖ್ಯಸ್ಥನನ್ನ ತಬ್ಬಿಕೊಂಡ ಸಿದ್ದುಗೆ 'ಶಾಟ್‍ಗನ್' ಸಪೋರ್ಟ್ – EESANJE / ಈ ಸಂಜೆ |
ಪಾಕ್ ಸೇನಾ ಮುಖ್ಯಸ್ಥನನ್ನ ತಬ್ಬಿಕೊಂಡ ಸಿದ್ದುಗೆ 'ಶಾಟ್‍ಗನ್' ಸಪೋರ್ಟ್ |
August 22, 2018 Sri Raghav Shatrughan Sinha supports Navjot Singh Sidhu for hugging Pakistan's army chief |
ಕೋಲ್ಕತ್ತಾ (ಪಿಟಿಐ), ಆ.22- ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದಕ್ಕಾಗಿ ತೀವ್ರ ವಾಗ್ದಾಳಿಗೆ ಒಳಗಾಗಿರುವ ಮಾಜಿ ಕ್ರಿಕೆಟ್ ಪಟು ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಶತ್ರುಘ್ನ ಸಿನ್ಹಾ ಬೆಂಬಲ ಸೂಚಿಸಿದ್ದಾರೆ. |
ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಹವರ್ತಿಗಳನ್ನು (ಪಾಕಿಸ್ತಾನದ ಪ್ರಧಾನಮಂತ್ರಿಗಳು) ಆಲಂಗಿಸಿಕೊಂಡಿದ್ದರು. ಹೀಗಿರುವಾಗ ನವಜೋತ್ ಸಿಧು ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದರಲ್ಲಿ ಯಾವ ತಪ್ಪು ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಅಭಿನೇತ 'ಶಾಟ್‍ಗನ್'ಹೇಳಿದ್ದಾರೆ. |
ಕೊಲ್ಕತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಸಿಧು ಈಗಾಗಲೇ ಸ್ಪಷ್ಟಪಡಿಸಿದ್ಧಾರೆ. ಈ ವಿವಾದವನ್ನು ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಶತ್ರುಘ್ನ ಸಿನ್ಹಾ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ತಿರುಗೇಟು ನೀಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಬಿಜೆಪಿ ಮುಖಂಡರ ವಿರುದ್ಧ ಧ್ವನಿ ಎತ್ತುವ ಶತ್ರುಘ್ನ ಈಗ ಸಿಧು ವಿಷಯದಲ್ಲೂ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದಾರೆ. |
ರಾಮನಗರ ಕ್ಲೀನಿಂಗ್ ಮಾಡಲಿ, ಆಲ್ ದಿ ಬೆಸ್ಟ್ : ಡಿಸಿಎಂಗೆ ಡಿ.ಕೆ.ಶಿವಕುಮಾರ್ ಟಾಂಗ್ |
Wednesday, Sep 23 2020 | Time 21:27 Hrs(IST) |
KarnatakaPosted at: Dec 8 2019 1:50PM Share |
ಬೆಂಗಳೂರು, ಡಿ.8 (ಯುಎನ್ಐ) ರಾಮನಗರವನ್ನು ಕ್ಲೀನಿಂಗ್ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಕ್ಲೀನಿಂಗ್ ಮಾಡುವುದು ಒಳ್ಳೆಯ ಕೆಲಸ. ಅವರು ಬಹಳ ಉತ್ಸಾಹದಿಂದಿದ್ದಾರೆ. ಅವರ ಉತ್ಸಾಹಕ್ಕೆ ನಾವು ಏಕೆ ಬೇಡ ಅನ್ನೋಣ, ಮಾಡಲಿ ಬಿಡಿ, ಐ ವಿಷ್ ಆಲ್ ದಿ ಬೆಸ್ಟ್ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. |
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನಿಂಗ್ ಕೆಲಸ ಮಾಡುವುದು ಒಳ್ಳೆಯದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಾವು, ಸಿಂಧ್ಯಾ ಎಲ್ಲರೂ ಈ ರಾಮನಗರ ಕ್ಷೇತ್ರದಿಂದಲೇ ಗೆದ್ದುಬಂದವರು. ನಮ್ಮಿಂದ ಆಗದೇ ಇರುವ ಕೆಲಸ ಉಪ ಮುಖ್ಯಮಂತ್ರಿ ಮಾಡಲಿ, ಅವರ ಉತ್ಸಾಹಕ್ಕೆ ನಾವು ತಣ್ಣೀರೆರಚುವುದಿಲ್ಲ ಎಂದು ಕುಟುಕಿದ್ದಾರೆ. |
ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 15 ಸ್ಥಾನಗಳನ್ನು ಗೆಲ್ಲುತ್ತದೆ, ಯಾಕೆ ಎರಡು ಸ್ಥಾನಗಳಲ್ಲಿ ಸೋಲ್ತಾರೆ...?. ಅದು ಕೂಡ ಗೆಲ್ಲಲ್ಲಿ, ಪಾಪ ಎರಡು ಕ್ಷೇತ್ರಗಳಲ್ಲಿ ಸೋತು ಯಾಕೆ ಅವರಿಗೆ ಅನ್ಯಾಯ ಮಾಡ್ತಾರೆ..?. ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ, ಈಗ ಎರಡು ಕ್ಷೇತ್ರ ಸೋತು ಮತ್ಯಾಕೆ ಅನ್ಯಾಯ ಮಾಡುತ್ತಾರೆ.. ಹದಿನೈದೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿ ಬಿಡಿ... 13 ಸ್ಥಾನ ಗೆಲ್ಲುತ್ತೇವೆ ಎನ್ನುವುದು ಯಡಿಯೂರಪ್ಪ ಅವರ ಭ್ರಮೆ ಎಂದು ತಿರುಗೇಟು ನೀಡಿದರು. |
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ವಿಚಾರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಕಾಲೇಜು ನಾಳೆ ಬೆಳಗ್ಗೆ ಕಟ್ಟಿ ಮುಗಿಯುವುದಿಲ್ಲ, ಆದರು ಆವರು ಮಾಡಿದ್ದು ಸರಿ ಅಲ್ಲ. ಅವರಿಗೆ ಜ್ಞಾನೋದಯ ಆಗುತ್ತದೆ, ಅಂದುಕೊಂಡಿದ್ದೇನೆ, ನಾನು ಹೇಗೆ ಹೋರಾಟ ಮಾಡುತ್ತೇನೆ ಕಾದು ನೋಡಿ, ವಿಧಾನಸೌಧದ ಹೊರಗೂ, ಒಳಗೊ ಹೋರಾಡುತ್ತೇನೆ, ಕಾದು ನೋಡಿ ಎಂದು ಹೇಳಿದರು. |
ನಾನು ಜನರನ್ನು ಸೇರಿಸಿ ಹೋರಾಟ ಮಾಡಬೇಕಾದ ಅವಶ್ಯಕತೆ ಇಲ್ಲ, ಒಂದಿಬ್ಬರಿದ್ದಾರೆ ಅವರ ಮೂಲಕವೇ ಹೋರಾಟ ರೂಪಿಸುತ್ತೇನೆ, ಕಾದು ನೋಡಿ ಎಂದು ತಮ್ಮ ಹೋರಾಟದ ಬಗ್ಗೆ ಸೂಚ್ಯವಾಗಿ ಹೇಳಿದರು. |
ಜೈಲಿನಿಂದ ಬಿಡುಗಡೆಯಾದ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಚಿದಂಬರಂ ಮತ್ತು ತಾವು ಏನೆಲ್ಲಾ ಅನುಭವಿಸಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇದನ್ನು ಮುಂದೆ ದಾಖಲಾಗುವ ಹಾಗೆ ಮಾತಾಡುತ್ತೇನೆ, ನಾವು ಜೈಲಿನಲ್ಲಿದ್ದಾಗ ಸಂಬಂಧಿಕರನ್ನು ಅಲ್ಲಿ ಭೇಟಿ ಮಾಡುವುದಕ್ಕೆ ಬಿಡುತ್ತಿರಲಿಲ್ಲ, ನಮ್ಮ ಕಾನೂನಿನ ಕೆಲವು ವಿಚಾರ ಮಾತಾಡುವುದಿತ್ತು ಮಾತಾಡಿದ್ದೇವೆ. ಮುಂದಿನ ರಾಜಕೀಯದ ಹೋರಾಟ ಬಗ್ಗೆ ಮಾತಾಡಿದ್ದೇವೆ ಎಂದು ವಿವರಿಸಿದರು. |
ಉನ್ನಾವೊ ಪ್ರಕರಣದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಧ್ವನಿ ಎತ್ತಿದ್ದಾರೆ. ಯಾವುದೇ ಸರ್ಕಾರ ಇರಲಿ ಮಹಿಳೆಯರ ರಕ್ಷಣೆಗೆ ಆದ್ಯತೆ ಕೊಡಬೇಕು. ಮಹಿಳೆಯರನ್ನು ಕಾಪಾಡಬೇಕಾಗಿರುವುದು ನಮ್ಮ ಕರ್ತವ್ಯ, ಈ ವಿಚಾರದಲ್ಲಿ ಬಿಜೆಪಿ ಸೋತಿದೆ, ಈ ವಿಚಾರವನ್ನು ನಾನು ತೀವ್ರವಾದ ಖಂಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. |
ನೀವು ಆಧಾರ್ ಕಾರ್ಡ್ ಗ್ರಾಹಕರೆ? ಇಲ್ಲಿದೆ ಮುಖ್ಯ ಸುದ್ದಿ | Parliament passes Aadhaar amendment Bill - Kannada Goodreturns |
37 min ago ಅಂಚೆ ಕಚೇರಿ ಮಾಸಿಕ ಪ್ಲಾನ್: ತಿಂಗಳಿಗೆ 5,700 ಅಥವಾ ಐದು ವರ್ಷಕ್ಕೆ 3.4 ಲಕ್ಷ ಗಳಿಸಿ.. |
News ಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆ |
| Published: Tuesday, July 9, 2019, 10:57 [IST] |
ಆಧಾರ್ ಕಾರ್ಡ್ ಅನ್ನು ಸ್ವಯಂಪ್ರೇರಿತವಾಗಿ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಒದಗಿಸುವ ಆಧಾರ್ ಮತ್ತು ಇನ್ನಿತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಈಗ ರಾಜ್ಯಸಭೆಯಲ್ಲೂ ಒಪ್ಪಿಗೆ ದೊರೆತಿದೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಉಲ್ಲೇಖಿಸಿರುವಂತೆ ಹೊಸ ನಿಯಮಕ್ಕನುಗುಣವಾಗಿ ತೆರಿಗೆದಾರರು, ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಎರಡಲ್ಲಿ ಒಂದನ್ನು ಬಳಸಬಹುದಾಗಿದೆ. ಈ ಹಿಂದೆ ಐಟಿಆರ್ ಸಲ್ಲಿಸಲು ಎರಡನ್ನೂ ಹೊಂದಿರಬೇಕಾಗಿತ್ತು. |
1 ಕೋಟಿ ದಂಡ |
ಸೋಮವಾರದಂದು ಧ್ವನಿಮತದ ಮೂಲಕ ಈ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದ್ದು, ಆಧಾರ್ ಹೊಂದಿರುವ ಗ್ರಾಹಕರು ಸ್ವಯಂಪ್ರೇರಿತರಾಗಿ ಬ್ಯಾಂಕ್ ಖಾತೆ ತೆರೆಯುವಾಗ, ಮೊಬೈಲ್ ಸಿಮ್ ಸಂಪರ್ಕ ಪಡೆಯುವಾಗ ಹಾಗು ಇನ್ನಿತರ ಸಂದರ್ಭಗಳಲ್ಲಿ ಬಳಸಬಹುದಾಗಿದೆ. ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡರೆ 1 ಕೋಟಿ ರೂಪಾಯಿವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. |
ಪ್ಯಾನ್ ಕಾರ್ಡ್ ವಿತರಣೆ |
ಆಧಾರ್ ಕಾರ್ಡ್ ಒದಗಿಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದವರಿಗೆ ಆದಾಯ ತೆರಿಗೆ ಇಲಾಖೆಯಿಂದಲೇ ಪ್ಯಾನ್ ಕಾರ್ಡ್ ವಿತರಿಸಲಾಗುವುದು. ಐಟಿಆರ್ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ನೀಡುವಂತೆ ಕೇಂದ್ರ ಸರ್ಕಾರವು ಬಜೆಟ್ಮಂಡನೆಯ ಸಂದರ್ಭದಲ್ಲಿ ತಿಳಿಸಿತ್ತು. ಪರ್ಯಾಯ ಬಳಕೆಗೆ ಅವಕಾಶ ಕೊಟ್ಟ ಮಾತ್ರಕ್ಕೆ ಪ್ಯಾನ್ ಕಾರ್ಡ್ ಅಪ್ರಸ್ತುತವಾಗುವುದಿಲ್ಲ ಎಂದಿದೆ. |
ಆಧಾರ್ ಮೂಲಕ ಐಟಿ ರಿಟರ್ನ್ ಸಲ್ಲಿಸುವ ತೆರಿಗೆದಾರರಿಗೆ ತೆರಿಗೆ ಇಲಾಖೆ ವತಿಯಿಂದ ಪ್ಯಾನ್ ಕಾರ್ಡ್ ಅನ್ನು ಸ್ವಯಂ ವಿತರಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಪ್ರಮೋದ್ ಚಂದ್ರ ಹೇಳಿದ್ದಾರೆ. |
ಆಧಾರ್-ಪ್ಯಾನ್ ಕಡ್ಡಾಯವಾಗಿತ್ತು |
ಈ ಹಿಂದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯವಾಗಿತ್ತು. ಕೇಂದ್ರ ಸರ್ಕಾರವು, ತೆರಿಗೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಕೆಗೆ ಅವಕಾಶ ಕಲ್ಪಿಸಿದೆ. ಆದರೆ ಪ್ಯಾನ್ ಕಾರ್ಡ್ ಅಸ್ತಿತ್ವಕ್ಕೆ ತೊಡಕಾಗುವುದಿಲ್ಲ. ಹೆಚ್ಚುವರಿ ಆಯ್ಕೆಯಾಗಿ ಆಧಾರ್ ಬಳಸಲು ಅವಕಾಶ ನೀಡಲಾಗಿದೆ. |
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ 6 ಹೊಸ ನಿಯಮಗಳು ಜಾರಿ |
Read more about: ಆಧಾರ್ aadhar pan card income tax taxes tax |
rliament on Monday passed an amendment bill which allows voluntary use of Aadhaar as proof of identity for users to open bank accounts and get mobile phone connection. |
ಕಲಬುರಗಿಯಲ್ಲಿ ಯಡಿಯೂರಪ್ಪ 3 ತಿಂಗಳಲ್ಲಿ ವಿಮಾನ ನಿಲ್ದಾಣ ಕಟ್ಟಿದರೆ? |
Home ನಿಜವೋ ಸುಳ್ಳೋ Factcheck: ಕಲಬುರಗಿಯಲ್ಲಿ ಯಡಿಯೂರಪ್ಪ ಮೂರೇ ತಿಂಗಳಲ್ಲಿ ವಿಮಾನ ನಿಲ್ದಾಣ ಕಟ್ಟಿದರೆ? ನಿಜವೇನು? |
Factcheck: ಕಲಬುರಗಿಯಲ್ಲಿ ಯಡಿಯೂರಪ್ಪ ಮೂರೇ ತಿಂಗಳಲ್ಲಿ ವಿಮಾನ ನಿಲ್ದಾಣ ಕಟ್ಟಿದರೆ? ನಿಜವೇನು? |
27 November 2019, 5:28 PM |
ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಕಲಬುರಗಿ ಜಿಲ್ಲೆಯಲ್ಲಿ 40 ವರ್ಷಕ್ಕಿಂತ ಹೆಚ್ಚು ಕಾಲದಿಂದ ಆಡಳಿತ ನಡೆಸುತ್ತಿತ್ತು. ಆದರೆ ಒಂದೇ ಒಂದು ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಾಗಲಿಲ್ಲ. ಇಂದು ಕಲಬುರ್ಗಿಯಲ್ಲಿ ವಿಮಾಣ ನಿಲ್ದಾಣವಾಗಿದೆ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರಿಗೆ ಧನ್ಯವಾದಗಳು ಎಂದು 'ಪೋಸ್ಟ್ ಕಾರ್ಡ್ ಕನ್ನಡ' ವಾದ ಮಾಡಿದೆ. |
ಪೋಸ್ಟ್ ಕಾರ್ಡ್‌ನ ಆ ಸುಳ್ಳು ಸುದ್ದಿಇಯನ್ನು 826 ಜನ ಷೇರ್ ಮಾಡಿದ್ದು ಎರಡು ಸಾವಿರದಷ್ಟು ಜನ ಲೈಕ್ ಮಾಡಿದ್ದಾರೆ. |
ನವೆಂಬರ್ 22ರಂದು ಕಲಬುರಗಿಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟನೆ ಮಾಡಿದರು. ಆಗ ಅಲ್ಲಿದ್ದ ಬಹಳಷ್ಟು ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆಯವರಿಗೆ ಜೈಕಾರ ಕೂಗಿದರು. ಇದು ಯಡಿಯೂರಪ್ಪನವರಿಗೆ ಮುಜುಗರ ಉಂಟಾಯಿತು. ಆ ಕಾರ್ಯಕರ್ತರು ಹಾಗೇಕೆ ಮಾಡಿದರು? |
ಇದನ್ನು ಓದಿ: ಯಡಿಯೂರಪ್ಪನವರ ಎದುರೆ ಖರ್ಗೆಗೆ ಜೈಕಾರ : ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಗದ್ದಲ |
ಸತ್ಯ ಏನಂದರೆ, ಮಲ್ಲಿಕಾರ್ಜುನ ಖರ್ಗೆಯವರ ಅವಿರತ ಪ್ರಯತ್ನವಿಲ್ಲದಿದ್ದರೆ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವೇ ಇಲ್ಲವೆಂದು ಕಲಬುರ್ಗಿಯ ಸಣ್ಣ ಮಕ್ಕಳನ್ನು ಕೇಳಿದರೂ ಹೇಳುತ್ತಾರೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರು ಸಂಸದರಾಗಿದ್ದಾಗ 2016ರ ನವೆಂಬರ್ 5ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಖರ್ಗೆಯವರು ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದ್ದರು ಮಾತ್ರವಲ್ಲದೇ ಅಗತ್ಯವಿದ್ದ 109 ಕೋಟಿ ರೂಗಳನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು. |
ಖರ್ಗೆ ಭೇಟಿ ನೀಡಿದ್ದ ಪತ್ರಿಕಾ ವರದಿ |
ಅಲ್ಲದೇ ಕಳೆದ ವರ್ಷ ಆಗಸ್ಟ್ 25ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಅವರು ಈ ಬಾರಿ ಸೋತ ಕಾರಣ, ಪೂರ್ಣಗೊಂಡ ವಿಮಾನ ನಿಲ್ದಾಣವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟಿಸಿದ್ದಾರೆ ಅಷ್ಟೇ ಹೊರತು ಆ ನಿಲ್ದಾಣ ನಿರ್ಮಾಣದ ಪೂರ್ಣ ಶ್ರೇಯ ಖರ್ಗೆಯವರಿಗೆ ಸಲ್ಲಬೇಕು. ಪೋಸ್ಟ್ ಕಾರ್ಡ್ ನ್ಯೂಸ್ ಫೇಕ್ ಆಗಿದೆ. |
ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳಾಗಿದೆ ಅಷ್ಟೇ. ಅಷ್ಟೊಂದು ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣ ಕಟ್ಟಲಿಕ್ಕೆ ಸಾಧ್ಯವಿಲ್ಲ. ಆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿಯೇ ಸಿಟ್ಟೆಗೆದ್ದ ಆ ಕಾರ್ಯಕರ್ತರು ಖರ್ಗೆ ಪರ ಘೋಷಣೆ ಕೂಗಿದ್ದಾರೆ. |
ಫುಟ್‌ಬಾಲ್: ಎಜಿಒಆರ್‌ಸಿ ತಂಡಕ್ಕೆ ಜಯ |
ಬೆಂಗಳೂರು: ಪೋಸ್ಟಲ್ ಮತ್ತು ಸ್ಟೂಡೆಂಟ್ಸ್ ಯೂನಿಯನ್ ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲಿನ ಡ್ರಾದಲ್ಲಿ ಅಂತ್ಯಕಂಡಿತು. |
ಅಶೋಕ ನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ 43ನೇ ನಿಮಿಷದಲ್ಲಿ ಜಯವಂದನ್ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಸ್ಟೂಡೆಂಟ್ಸ್ ಯೂನಿಯನ್‌ಗೆ ಮುನ್ನಡೆ ತಂದಿತ್ತರು. ಪೋಸ್ಟಲ್‌ನ ಸುಬ್ಬಾ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. |
ಆದರೆ ಪಂದ್ಯದ 82ನೇ ನಿಮಿಷದಲ್ಲಿ ಪೋಸ್ಟಲ್ ತಂಡದ ಕೇವಲ್ ಲಾಮಾ ಚೆಂಡನ್ನು ಗುರಿ ಸೇರಿಸಿದರಲ್ಲದೆ, ಎದುರಾಳಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು. ಶ್ರೀನಿವಾಸನ್ ನೀಡಿದ ಪಾಸ್‌ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಲಾಮಾ ಎದುರಾಳಿ ಗೋಲ್‌ಕೀಪರ್‌ನ್ನು ತಪ್ಪಿಸುವಲ್ಲಿ ಯಶ ಕಂಡರು. |
ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡವು. ಇದೀಗ ಆರು ಪಂದ್ಯಗಳನ್ನು ಆಡಿರುವ ಪೋಸ್ಟಲ್ ಏಳು ಪಾಯಿಂಟ್‌ಗಳನ್ನು ಹೊಂದಿದ್ದರೆ, ಸ್ಟೂಡೆಂಟ್ಸ್ ಯೂನಿಯನ್ ಏಳು ಪಂದ್ಯಗಳಿಂದ ಐದು ಪಾಯಿಂಟ್‌ಗಳನ್ನು ಕಲೆಹಾಕಿದೆ. |
ಎಜಿಒಆರ್‌ಸಿಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಜಿಒಆರ್‌ಸಿ ತಂಡ 1-0 ಗೋಲಿನಿಂದ ಎಲ್‌ಆರ್‌ಡಿಇ ವಿರುದ್ಧ ಗೆಲುವು ಪಡೆಯಿತು. ಪಂದ್ಯದ 31ನೇ ನಿಮಿಷದಲ್ಲಿ ಮುರಳೀಧರನ್ ಗೋಲು ಗಳಿಸಿ ಎಜಿಒಆರ್‌ಸಿ ಗೆಲುವಿಗೆ ಕಾರಣರಾದರು. |
ನಿಜವಾದ "ಉದಯವಾಣಿ' ವಾರ್ಷಿಕ ದಿನಚರಿ ಭವಿಷ್ಯ | Udayavani – ಉದಯವಾಣಿ |
Monday, 26 Oct 2020 | UPDATED: 11:35 PM IST |
ನಿಜವಾದ "ಉದಯವಾಣಿ' ವಾರ್ಷಿಕ ದಿನಚರಿ ಭವಿಷ್ಯ |
Team Udayavani, Jul 31, 2019, 6:09 AM IST |
ಬೆಂಗಳೂರು: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಉದಯವಾಣಿ "ವಾರ್ಷಿಕ ದಿನಚರಿ'ಯ ಭವಿಷ್ಯ ನಿಜವಾಗಿದೆ. |
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ "ಉದಯ ವಾಣಿ' ವಾರ್ಷಿಕ ದಿನಚರಿಯಲ್ಲಿ ಹಿರಿಯ ಜ್ಯೋತಿಷಿ ಮಣಿಪಾಲದ ಎನ್.ಎಸ್. ಭಟ್ ಅವರು, ಪ್ರಸ್ತುತ ದೇಶದಲ್ಲಿ ವಿಪಕ್ಷಗಳು ರಚಿಸಿಕೊಂಡಿರುವ ಮಹಾಘಟಬಂಧನ್ ಅಷ್ಟೊಂದು ಪ್ರಸ್ತುತ ಎನಿಸುವುದಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ 235-300ರ ತನಕ ಸ್ಥಾನಗಳನ್ನು ಪಡೆಯ ಲಿದ್ದು, ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದಿದ್ದು, ಮೋದಿ ಮತ್ತೆ ಪ್ರಧಾನಿಯಾಗಿದ್ದಾರೆ. |
ಜತೆಗೆ ಮುಂದಿನ ಲೋಕಸಭಾ ಚುನಾವಣೆ ಅನಂತರ ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ಬಿದ್ದು ಹೋಗುವ ಸಾಧ್ಯತೆ ತೋರಿ ಬರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸೀಟು ಸಿಗುವ ಸಾಧ್ಯತೆ ಇದೆ. ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳು ಆತಂಕಕಾರಿಯಾಗಿ ಮುನ್ನಡೆಯಲು ಕಷ್ಟವಾದೀತು. ಆದರೂ ಅನಿರೀಕ್ಷಿತ ರೂಪದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆಯಿರುತ್ತದೆ ಎಂದು ಭವಿಷ್ಯ ನುಡಿದಿದ್ದರು. |
ಅದರಂತೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಂಡಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. |
ಮುಖಗವಸು ಧರಿಸದವರ ವಿರುದ್ಧ ದಂಡ | Udayavani – ಉದಯವಾಣಿ |
Friday, 24 Sep 2021 | UPDATED: 03:02 AM IST |
Team Udayavani, Sep 11, 2020, 8:22 PM IST |
ಮುಂಬಯಿ ಸೆ. 10: ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಈಗಾಗಲೇ ಮುಖಗವಸು ಧರಿಸದೆ ಬೀದಿಗಿಳಿಯುವ ವಿರುದ್ಧ ದಂಡನಾತ್ಮಕಕ್ರಮ ಕೈಗೊಂಡಿದೆ. ಆದರೆ ಇದರಲ್ಲಿ ಭ್ರಷ್ಟಾಚಾರ ತಡೆಯಲು ಈ ಹಿಂದಿನ ದಂಡ ಮೊತ್ತ 1,000 ರೂ.ರಿಂದ 200 ರೂ. ಗೆ ಇರಿಸಲು ನಿರ್ಧರಿಸಿ ಅಧಿಕಾರಿಗಳಿಗೆ ಆದೇಶಿಸಿದೆ. |
ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಮುಖಗವಸು ಬಳಸದವರಿಗೆ 1,000 ರೂ.ಗಳ ದಂಡ ವಿಧಿಸುವಂತೆ ಆಡಳಿತವು ಘನತ್ಯಾಜ್ಯ ನಿರ್ವಹಣಾ ಇಲಾಖೆಗೆ ಆದೇಶಿಸಿತ್ತು. ಅದರಂತೆ ಎಪ್ರಿಲ್ 9ರಿಂದ ಮುಂಬಯಿಯಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಾಗರಿಕರು ಬಿಎಂಸಿ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡುತ್ತಿವೆ ಎಂಬ ಆರೋಪಕಗಳು ವ್ಯಕ್ತವಾಗುತ್ತಿವೆ. ದಂಡದ ಪ್ರಮಾಣ ಹೆಚ್ಚಾಗಿದ್ದರಿಂದ |
ಅಲ್ಪ ಮೊತ್ತವನ್ನು ಪಾವತಿಸಿ ನಿಯಮಗಳನ್ನು ಮುರಿಯುವ ಸಾಧ್ಯತೆ ಹೆಚ್ಚುತ್ತದೆ. ಅದಲ್ಲದೆ ಸೋಂಕು ತಡೆಗಟ್ಟುವುದು ಮನಪಾದ ಮೂಲ ಉದ್ದೇಶವಾಗಿದೆ. ಆದ್ದರಿಂದ ದಂಡವನ್ನು 200 ರೂ.ಗೆ ಇರಿಸಲು ನಿರ್ಧರಿಸಿದೆ. ಈ ದಂಡ ವಸೂಲಿಗಾಗಿ ಪುರಸಭೆ ನೌಕರರನ್ನು ಮಾರ್ಷಲ್ಸ್ ಆಗಿ ನೇಮಿಸಲಾಗಿದೆ. |
ದಂಡವನ್ನು ಕಡಿಮೆ ಮಾಡಲಾಗಿದೆ ಆದರೂ ಪುರಸಭೆಯು ತನ್ನ ರಶೀದಿ ಗಳನ್ನು ಸಿದ್ಧಪಡಿಸಿಲ್ಲ. ಅವಸರದ ನಿರ್ಧಾರದಿಂದಾಗಿ ರಶೀದಿಗಳನ್ನು ಮುದ್ರಿಸಲು ಸಮಯವಿಲ್ಲ ಆದ್ದರಿಂದ ಹಳೆಯ ರಶೀದಿಗಳ ಮೂಲಕ ದಂಡ ವನ್ನು ವಸೂಲಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
2019 ಚುನಾವಣೆ: 17 ಸಮಿತಿಗಳನ್ನು ರಚಿಸಿದ ಶಾ, ಪ್ರಣಾಳಿಕೆ ನೇತೃತ್ವ ರಾಜನಾಥ್ ಸಿಂಗ್‌ಗೆ | News13 |
News13 > ಸುದ್ದಿಗಳು > ರಾಷ್ಟ್ರೀಯ > 2019 ಚುನಾವಣೆ: 17 ಸಮಿತಿಗಳನ್ನು ರಚಿಸಿದ ಶಾ, ಪ್ರಣಾಳಿಕೆ ನೇತೃತ್ವ ರಾಜನಾಥ್ ಸಿಂಗ್‌ಗೆ |
2019 ಚುನಾವಣೆ: 17 ಸಮಿತಿಗಳನ್ನು ರಚಿಸಿದ ಶಾ, ಪ್ರಣಾಳಿಕೆ ನೇತೃತ್ವ ರಾಜನಾಥ್ ಸಿಂಗ್‌ಗೆ |
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಒಟ್ಟು 17 ಗುಂಪುಗಳನ್ನು ರಚನೆ ಮಾಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಒಂದೊಂದು ಜವಾಬ್ದಾರಿಗಳನ್ನು ಒಂದೊಂದು ತಂಡ ವಹಿಸಿಕೊಳ್ಳಲಿದೆ. |
ಪಕ್ಷದ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ಅವರು, 20 ಸದಸ್ಯರನ್ನು ಒಳಗೊಂಡ 'ಸಂಕಲ್ಪ ಪತ್ರ' (ಪ್ರಣಾಳಿಕೆ) ಸಮಿತಿಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಚಾರ ಸಮಿತಿಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. |
ಸಚಿವರುಗಳಾದ ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಮುಖ್ತಾರ್ ಅಬ್ಬಾಸ್ ನಖ್ವಿ, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅವರೂ ಪ್ರಣಾಳಿಕೆ ಸಿದ್ಧಪಡಿಸಲಿರುವ ಸಮಿತಿಯಲ್ಲಿ ಇರಲಿದ್ದಾರೆ ಅರುಣ್ ಜೇಟ್ಲಿಯೂ ಇದರಲ್ಲಿ ಇರಲಿದ್ದಾರೆ. |
ಸಚಿವ ನಿತಿನ್ ಗಡ್ಕರಿಯವರು, ಸಾಮಾಜಿಕ ಮತ್ತು ಸ್ವಯಂಸೇವಕ ಸಂಘಟನೆಗಳನ್ನು ತಲುಪುವ ಜವಾಬ್ದಾರಿ ಹೊತ್ತಿರುವ ಸಮಿತಿಯ ಮುಖ್ಯಸ್ಥರಾಗಲಿದ್ದಾರೆ. ಸುಷ್ಮಾ ಸ್ವರಾಜ್ ಅವರು, ಚುನಾವಣೆಗೆ ಸಾಹಿತ್ಯಗಳನ್ನು ರಚಿಸುವ ಸಮಿತಿಯ ಹೊಣೆ ಹೊತ್ತುಕೊಳ್ಳಲಿದ್ದಾರೆ. |
Subsets and Splits
No community queries yet
The top public SQL queries from the community will appear here once available.