text stringlengths 0 61.5k |
|---|
ಶನಿ ದೇವರು ಮತ್ತು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ | KANNADA KING |
Home ದೇವರು ಶನಿ ದೇವರು ಮತ್ತು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ |
ಶನಿ ದೇವರು ಮತ್ತು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ |
ಶುಭ ಶನಿವಾರ ರಾಶಿ ಭವಿಷ್ಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490 |
ಮೇಷ: ಈ ದಿನ ಅನವಶ್ಯಕ ಮಾತುಗಳು ಮಾತನಾಡಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಟೀಕೆಗೆ ಗುರಿ ಆಗುತ್ತೀರಿ ಮಾತಿನ ಪರಿಣಾಮ ಹೆಚ್ಚಿನ ರೀತಿಯಲ್ಲಿ ಆದರೆ ನೀವು ಕೆಲ್ಸ ಕೆಡುಕೊಳ್ಳುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತ ಧನ ಆಗಮನ ಮನಸಲ್ಲಿ ಸಂತಸ ತರುತ್ತದೆ. ಪ್ರೀತಿ ದಾಂಪತ್ಯ ಮತ್ತು ಸಾಂಸಾರಿಕ ಜೀವನದಲ್ಲಿ ಅಭಿವೃದ್ಧಿ ಸಿಗುತ್ತದೆ. |
ವೃಷಭ: ಪ್ರೀತಿಯಲ್ಲಿ ತಡಗಿರುವ ಯುವಕ ಮತ್ತು ಯುವತಿಯರಿಗೆ ಈ ದಿನ ಬಾಳಲ್ಲಿ ಹೊಸ ಬೆಳವಣಿಗೆ ತರಲಿದೆ. ಮನೆಗೆ ಸಂಬಂಧ ಪಟ್ಟ ಹಲವು ರೀತಿಯ ಖರ್ಚುಗಳು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ. |
ಮಿಥುನ: ಅತೀ ಹೆಚ್ಚಿನ ಒತ್ತಡ ನಿಮಗೆ ಹಲವು ಆರೋಗ್ಯ ಸಂಬಂಧ ಪಟ್ಟ ಸಮಸ್ಯೆಗಳು ಉಂಟು ಮಾಡುತ್ತದೆ. ಸ್ನೇಹಿತರ ಸಹಕಾರ ಮತ್ತು ಕುಟುಂಬ ಜನರ ಸಹಾಯ ನಿಮ್ಮನ್ನು ಹಲವು ಇಕ್ಕಟ್ಟಿನ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಸಂಜೆ ಸಮಯದಲ್ಲಿ ಪಕ್ಷಿಗಳಿಗೆ ಧಾನ್ಯಗಳನ್ನು ನೀಡಿರಿ ನಿಮಗೆ ಶುಭ ಆಗಲಿದೆ. |
ಕರ್ಕಾಟಕ: ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇರುತ್ತದೇ ಆದರಿಂದ ಕೆಲ್ಸ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಆಗಲು ಹತ್ತು ನಿಮಿಷ ಮುಂಚಿತವಾಗಿ ಶುರು ಮಾಡುವುದು ಒಳ್ಳೆಯದು. ಗೃಹಿಣಿಯರಿಗೆ ತೃಪ್ತಿಪರ ದಿನ ಎಂದರೆ ತಪ್ಪಾಗುವುದಿಲ್ಲ. ಕೈ ಹಾಕಿದ ಕೆಲ್ಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. |
ಸಿಂಹ: ನಿಮಗೆ ಈ ದಿನ ನಂಬಿಕಸ್ಥ ಜನರಿಂದ ಮೋಸ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಮುಂಚೆಯೇ ಪೂರ್ವ ತಯಾರಿಗಳು ಅತೀ ಮುಖ್ಯ. ಕೆಲಸದಲ್ಲಿ ಮೂರನೇ ವ್ಯಳ್ತಿಗಳಿಂದ ಅಡ್ಡಿ ಮತ್ತು ಆತಂಕ ಹೆಚ್ಚಾಗಲಿದೆ. ಶನಿ ದೇವರ ಪ್ರಾರ್ಥನೆ ಮಾಡಿರಿ. ನಿಮಗೆ ಶುಭ ಫಲ ಸಿಗಲಿದೆ. |
ಕನ್ಯಾ: ನಿಮ್ಮ ಮಾತುಗಳಿಗೆ ಈ ದಿನ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ನಿರ್ಮಾಣ ಆಗುತ್ತದೆ. ದುಂದು ವೆಚ್ಚಗಳ ಬಗ್ಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. |
ತುಲಾ: ಸ್ತ್ರೀಯರಿಗೆ ಅತ್ಯಂತ ಹೆಚ್ಚಿನ ಅನುಕೂಲ ದಿನ ಆಗಲಿದೆ. ನಿಮ್ಮ ಮಾತುಗಳಿಗೆ ಕುಟುಂಬದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಲಿದೆ. ಬೆಳ್ಳಿ ಮತ್ತು ಬಂಗಾರದ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತೀರಿ. ಆರೋಗ್ಯದಲ್ಲಿ ಅಭಿವೃದ್ಧಿ ಕಾಣುತ್ತದೆ ಇದರಿಂದ ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಾಗುವುದು. ನಿಮ್ಮ ಕೋರಿಕೆಗಳು ಬೇಗನೆ ಈಡೇರಲು ನಿಮ್ಮ ಇಷ್ಟ ದೇವರ ಪಾರ್ಥನೆ ಮಾಡುವುದು ಮರೆಯಬೇಡಿ. |
ವೃಶ್ಚಿಕ : ಧಾರ್ಮಿಕ ಕ್ಷೇತ್ರಗಳ ದರ್ಶನದ ಅನುಭೂತಿ ಪಡೆಯುತ್ತೀರಿ. ಮಾನಸಿಕ ನೆಮ್ಮದಿ ಸಿಗುವುದರಿಂದ ಮನಸಲ್ಲಿ ಹೆಚ್ಚಿನ ಸಂತೋಷ ಇರುತ್ತದೆ. ಹಿರಿಯರು ನಿಮ್ಮ ಮನೆಗೆ ಆಗಮನ ದಿಂದ ಮಾನಸಿಕ ತೃಪ್ತಿ ಕಾಣುತ್ತೀರಿ. ವಿದೇಶಿ ಪ್ರಯಾಣದ ಬಗ್ಗೆ ಆಸಕ್ತಿ ಹೊಂದಿರುವ ಜನಕ್ಕೆ ಅನುಕೂಲ ಸನ್ನಿವೇಶ ಬರಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. |
ಧನಸ್ಸು: ನಿಮಗೆ ಇಂದು ಅದೃಷ್ಟ ಹೆಚ್ಚಾಗಲಿದೆ. ಯುಗಾದಿ ಹಬ್ಬದ ದಿನ ಶುಭ ದಿನ ನಿಮ್ಮ ಮನಸಿನ ಅನೇಕ ರೀತಿಯ ಕೋರಿಕೆಗಳು ನೆರವೇರುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನ ಮಾನ ನಿಮಗೆ ದೊರೆಯಲಿದೆ. ವ್ಯಾಪಾರ ಮತ್ತು ಹೊಸ ರೀತಿಯ ವ್ಯವಹಾರದಲ್ಲಿ ಹೂಡಿಕೆ ಮಾಡುವ ಜನರು ಗಣಪತಿಯ ಆಶೀರ್ವಾದ ಪಡೆದುಕೊಂಡು ಶುರು ಮಾಡಿರಿ. |
ಮಕರ : ಹೊಸ ವ್ಯಾಪಾರ ಮಾಡುವ ನಿಮಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಶುಭ ಸುದ್ದಿ ಸಿಗುತ್ತದೆ. ಕೆಲ್ಸ ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುತ್ತೀರಿ. ಮನೆಯಲ್ಲಿ ಇರುವ ಗಣಪತಿ ವಿಗ್ರಹಕ್ಕೆ ಗರಿಕೆ ಹುಲ್ಲಿನಿಂದ ಸಂತೃಪ್ತಿಗೊಳಿಸಿರಿ ನಿಮ್ಮ ಇಷ್ಟಾರ್ಥ ಮತ್ತು ಕಾರ್ಯಗಳು ಸಿದ್ದಿ ಆಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. |
ಕುಂಭ: ಈ ದಿನ ನೀವು ಆರೋಗ್ಯದ ಸಲುವಾಗಿ ಒಂದಿಷ್ಟು ಹಣದ ವೆಚ್ಚ ಮಾಡುತ್ತೀರಿ. ಬೆಳ್ಳಗೆ ಎದ್ದೇಳುವ ಸಮಯದಲ್ಲಿ ಸೂರ್ಯದೇವನ ಆಶೀರ್ವಾದ ಪಡೆಯುವುದು ಮರೆಯಬೇಡಿ. ಕ್ಲಿಷ್ಟಕರ ಸನ್ನಿವೇಶದಲ್ಲಿ ನಿಮ್ಮ ಬುದ್ಧಿವಂತಿಕೆಗೆ ಹೆಚ್ಚಿನ ಮಾನ್ಯತೆ ನೀಡಿರಿ. ಬಿಳಿ ವಸ್ತ್ರದ ವಸ್ತ್ರಧಾರಣೆ ಮಾಡಿರಿ ನಿಮಗೆ ಶುಭ ಫಲ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. |
ಮೀನ: ಈ ದಿನ ಕುಲ ದೇವರ ಪ್ರಾರ್ಥನೆ ಮಾಡಿರಿ ಜೊತೆಗೆ ನಿಮ್ಮ ತಂದೆ ತಾಯಿಯ ಆಶೀರ್ವಾದ ಪಡೆದುಕೊಳ್ಳಿರಿ ನಿಮಗೆ ಹೆಚ್ಚಿನ ಶುಭ ಫಲ ಪ್ರಾಪ್ತಿ. ಈ ಶುಭ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ವೇಗ ಪಡೆಯಲಿದೆ. ಧನಾತ್ಮಕ ಶಕ್ತಿ ಹೆಚ್ಚಾಗಲು ಈಶ್ವರನ ಸ್ಮರಣೆ ಮಾಡಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. |
ಪ್ರಸ್ತುತ ಮೇಕೆದಾಟು ಪಾದಯಾತ್ರೆಯನ್ನು ಕೊರೊನಾ ನೆಪದಲ್ಲಿ ತಡೆಯಲು ಬಿಜೆಪಿಯಿಂದ ಹುನ್ನಾರ: ಡಿಕೆಶಿ – Prasthutha |
ಮೇಕೆದಾಟು ಪಾದಯಾತ್ರೆಯನ್ನು ಕೊರೊನಾ ನೆಪದಲ್ಲಿ ತಡೆಯಲು ಬಿಜೆಪಿಯಿಂದ ಹುನ್ನಾರ: ಡಿಕೆಶಿ |
Prasthutha: January 3, 2022 |
ಮೈಸೂರು: ಬಿಜೆಪಿ, ಕೊರೊನಾ ವಿಚಾರವನ್ನು ಮುಂದಿಟ್ಟುಕೊಂಡು ಮೇಕೆದಾಟು ಪಾದಯಾತ್ರೆಯನ್ನು ತಡೆಯಲು ಹುನ್ನಾರ ನಡೆಸುತ್ತಿದೆ. ನಮ್ಮನ್ನು ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ ಪಾದಯಾತ್ರೆ ಮುಂದುವರಿಯಲಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ. |
ಲಾಕ್‌ಡೌನ್ ಸೃಷ್ಟಿಸಲು ಯತ್ನಿಸುತ್ತಿದ್ಧಾರೆ. ಲಾಕ್‌ಡೌನ್ ಮಾಡಲಿ ಅಥವಾ ಬೇರೆ ಏನೂ ಮಾಡಲಿ ಆದರೆ, ಪಾದಯಾತ್ರೆ ಮಾತ್ರ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕೊರೊನಾ ಇದ್ದರು ಸಿಎಂ ವಿವಾದಲ್ಲಿ ಪಾಲ್ಗೊಂಡು ಮಾರ್ಗಸೂಚಿಯನ್ನು ಉಲ್ಲಂಘಿಸಿಲ್ಲವೇ?. ಸಿಎಂ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗಿದೆ" ಎಂದು ಕೇಳಿದ್ದಾರೆ. |
"ನಾವು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಪಾದಯಾತ್ರೆ ನಡೆಸುತ್ತೇವೆ. 1 ಲಕ್ಷ ಮಾಸ್ಕ್ ತರಿಸಲಿದ್ದೇವೆ. 10 ವೈದ್ಯಕೀಯ ತಂಡ ಇರಲಿದ್ದು, 100 ವೈದ್ಯರು ಭಾಗವಹಿಸುತ್ತಾರೆ" ಎಂದಿದ್ದಾರೆ. |
ಕನ್ನಡಿಗನ ನೇತೃತ್ವದಲ್ಲಿ ಕಪ್ಪು ಶಿಲೀಂಧ್ರ ಕಾಯಿಲೆಗೆ ಔಷಧ - SuddiKirana.com |
Home ಲೋಕಾಭಿರಾಮ ಕನ್ನಡಿಗನ ನೇತೃತ್ವದಲ್ಲಿ ಕಪ್ಪು ಶಿಲೀಂಧ್ರ ಕಾಯಿಲೆಗೆ ಔಷಧ |
ಕುಂದಾಪುರ: ಕರ್ನಾಟಕವೂ ಸೇರಿದಂತೆ ದೇಶವೇ ಕೊರೊನಾ ಎರಡನೇ ಅಲೆಯಲ್ಲಿ ಕಂಗಾಲಾಗಿರುವಂತೆಯೇ ಧುತ್ತೆಂದು ಪ್ರತ್ಯಕ್ಷವಾದ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಕಾಯಿಲೆಗೆ ಪರಿಣಾಮಕಾರಿ ಔಷಧ ಕಂಡುಹಿಡಿಯುವಲ್ಲಿ ಮುಂಚೂಣಿಯಲ್ಲಿರುವವರು ಓರ್ವ ಕನ್ನಡಿಗ, ಉಡುಪಿ ಜಿಲ್ಲೆಯ ಕುಂದಾಪುರ ಬಾಂಡ್ಯ ಶ್ರೀಕಾಂತ ಪೈ ಎಂಬುದು ಹೆಮ್ಮೆಯ ಸಂಗತಿ. |
ಕಪ್ಪು ಶಿಲಿಂಧ್ರ ಕಾಯಿಲೆ ವಾಸಿಮಾಡಲು ಬಳಸುತ್ತಿರುವ ಔಷಧಿಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ ಎನ್ನುವ ಔಷಧಿ. ಈ ಔಷಧಿ ಕಂಡುಹಿಡಿಯಲು ಶ್ರಮಪಟ್ಟಿರುವ ಭಾರತ ಸೀರಮ್ಸ್ ಆಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಇಲ್ಲಿಗೆ ಸಮೀಪದ ಬಾಂಡ್ಯದವರಾದ ಶ್ರೀಕಾಂತ ಪೈ. |
ಗಂಗೊಳ್ಳಿ ಮೂಲದ ಬಾಂಡ್ಯ ಶ್ರೀಕಾಂತ ಪೈ, ಗಂಗೊಳ್ಳಿ ಹಾಗೂ ಕುಂದಾಪುರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಮುಗಿಸಿ, ಬೆಂಗಳೂರಿನಲ್ಲಿ 1975ರಲ್ಲಿ ಬಿ. ಫಾರ್ಮ್ ಮತ್ತು ಮಣಿಪಾಲದಲ್ಲಿ 1977ರಲ್ಲಿ ಎಂ.ಫಾರ್ಮ್ ಶಿಕ್ಷಣ ಪೂರೈಸಿ, ಮುಂಬೈನ ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿ ಸೇರಿದರು. |
ವ್ಯಾಪಕ ಸಂಶೋಧನ ಕಾರ್ಯದ ಬಳಿಕ ಭಾರತ್ ಸೀರಮ್ಸ್ ಮತ್ತು ವ್ಯಾಕ್ಸಿನ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಆಂಬಿಸೋಮ್ ಔಷಧಿಯ ಸಾಮಾನ್ಯ ಆವೃತ್ತಿಯನ್ನು 2012ರಲ್ಲಿ ಶ್ರೀಕಾಂತ್ ಪೈ ಮತ್ತವರ ತಂಡ ಅಭಿವೃದ್ಧಿಪಡಿಸಿರುವುದು ಇದೀಗ ಸರ್ವರ ಗಮನ ಸೆಳೆದಿದೆ. |
ಲಿಪೊಸೋಮಲ್ ಆ್ಯಂಪೊಟೆರಿಸಿನ್ ಬಿ ಔಷಧದ ದಕ್ಷತೆ ಮತ್ತು ವಿಷತ್ವವನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಪ್ರಮುಖ ಉತ್ಪನ್ನವಾಗಿದ್ದು, ಅದರ ಬೆಲೆ 6ರಿಂದ 7 ಸಾವಿರ ರೂ. ಆಗಿದೆ. |
ಇದೀಗ ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ಸ್ ಕಂಪೆನಿಯಿಂದ ನಿವೃತ್ತರಾದ ಬಿ. ಶ್ರೀಕಾಂತ ಪೈ ಪ್ರಸ್ತುತ ಮುಂಬೈಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಫಾರ್ಮುಲೇಶನ್ ನಲ್ಲಿ ಪೇಟೆಂಟ್ ಪಡೆದ 16 ಸಂಶೋಧನೆ ನಡೆಸಿರುವ ಅವರು ಈ ಕ್ಷೇತ್ರದಲ್ಲಿ ಸುಮಾರು 3 ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ |
29ರಂದು ಕಾರ್ಮಿಕರ ಸಂಘಗಳ ಒಕ್ಕೂಟ ಉದ್ಘಾಟನಾ ಸಮಾರಂಭ | VIJAYAVANI - ವಿಜಯವಾಣಿ |
29ರಂದು ಕಾರ್ಮಿಕರ ಸಂಘಗಳ ಒಕ್ಕೂಟ ಉದ್ಘಾಟನಾ ಸಮಾರಂಭ |
ಹಾಸನ:ಹೇಮಾವತಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಒಕ್ಕೂಟ ವತಿಯಿಂದ ಜ. 29 ರಂದು ನಗರದ ಸಾಹಿತ್ಯ ಪರಿಷತ್ತು ಭವನದಲ್ಲಿ ನೂತನ ಒಕ್ಕೂಟದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮಂಜೇಗೌಡ ಹೇಳಿದರು. |
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಯಡಿ ಸಂಘಟಿತರಾಗಿ ಕೆಲಸ ಮಾಡುವ ಉದ್ದೇಶದಿಂದ ನೂತನ ಒಕ್ಕೂಟ ರಚಿಸಲಾಗಿದೆ ಎಂದು ತಿಳಿಸಿದರು. |
ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು ಇದುವರೆಗೂ ಜಿಲ್ಲಾ ಹಾಗೂ ತಾಲೂಕು ಮಟ್ಟಡದಲ್ಲಿ ವಿವಿಧ ಸಂಘಗಳನ್ನು ರಚಿಸಿಕೊಂಡು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸುತ್ತಿದ್ದರು. ಇದರಿಂದ ಬಹುತೇಕ ಕಟ್ಟಡ ಕಾರ್ಮಿಕರು ಸೌಲಭ್ಯ ದಿಂದ ವಂಚಿತರಾಗುತ್ತಿದ್ದರು ಇದನ್ನು ಮನಗಂಡು ಜಿಲ್ಲೆಯ ಎಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಲು ಗುತ್ತಿದೆ ಎಂದರು. |
ಕಾರ್ಯಕ್ರದಲ್ಲಿ ಫಲಾನುಭವಿಗಳಿಗೆ ಕಾರ್ಮಿಕ ಮಂಡಳಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಹಾಗೂ ಸೌಲಭ್ಯಗಳನ್ನು ವಿತರಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು. |
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ನಾಗೇಶ್, ಜಿಲ್ಲಾ ಸಂಚಾಲಕ ಪಿ.ಜಿ ರಾಮಸ್ವಾಮಿ, ನಿರ್ದೇಶಕ ಧರಣಯ್ಯ ಇತರರು ಹಾಜರಿದ್ದರು. |
ಉಚಿತ ಲ್ಯಾಪ್‌ಟಾಪ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ |
ಹಾಸನ: ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಸಂಘಟನೆ (ಎಐಡಿಎಸ್‌ಒ) ನೇತೃತ್ವದಲ್ಲಿ ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು... |
ಶೀತಲನಾಥ ದಿಗಂಬರ ಮೂರ್ತಿಗೆ ಜಿನಾಲಯ ನಿರ್ಮಿಸಿ |
ಹಳೇಬೀಡು: ಸಮಾಜದಲ್ಲಿ ಧಾರ್ಮಿಕ ಮನೋಭಾವ ಹಾಗೂ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪರ್ವ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಜೈನರಗುತ್ತಿ ಕ್ಷೇತ್ರದಲ್ಲಿ ಆಯೋಜಿಸುವುದು ಶ್ರೇಯಸ್ಕರ ಎಂದು ಮುನಿಶ್ರೀ ಪುಣ್ಯಸಾಗರ ಮಹಾರಾಜ್ ಅಭಿಪ್ರಾಯಪಟ್ಟರು. ಶೀತಲನಾಥ... |
ದೇಶದಲ್ಲಿ 10 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ - News Karkala |
Homeದೇಶದೇಶದಲ್ಲಿ 10 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ |
ದೇಶದಲ್ಲಿ 10 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ |
ದಿಲ್ಲಿ : ಯಾವುದು ಆಗಬಾರದು, ಆಗಲಾರದು ಎಂದು ಭಾವಿಸಿದ್ದೆವೋ ಅದು ಆಗಿದೆ. ದೇಶದಲ್ಲಿ ಕೊರೊಜಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ್ದು, ಆರ್ಥಿಕತೆಯನ್ನು ರಕ್ಷಿಸುವ ಹೆಸರಿನಲ್ಲಿ ಸಾಮಾಜಿಕ ನಿಯಮಗಳನ್ನು ಸಡಿಲಗೊಳಿಸಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಜನರ ಬೇಜವಾಬ್ದಾರಿ ವರ್ತನೆಯೂ ಸೇರಿ ಈಗ ಸೋಂಕು ನಿಯಂತ್ರಣಕ್ಕೆ ಸಿಗದ ಸ್ಥಿತಿಗೆ ತಲುಪಿದ್ದೇವೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. |
ಇದಲ್ಲದೆ ಗುರುವಾರ 687 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 6,35,756 ಜನ ಮಾತ್ರ. ದೇಶದಲ್ಲಿ ಇನ್ನೂ 3,42,473 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ. |
ನಾಳೆ `ವೆನಿಲ್ಲಾ' ತೆರೆಗೆ | Prajapragathi |
Home ಸಿನಿಮಾ ನಾಳೆ `ವೆನಿಲ್ಲಾ' ತೆರೆಗೆ |
ನಾಳೆ `ವೆನಿಲ್ಲಾ' ತೆರೆಗೆ |
ಜಯರಾಮು ಅವರು ನಿರ್ಮಿಸಿರುವ `ವೆನಿಲ್ಲಾ` ಚಿತ್ರ ಜೂ.1 ರಂದು (ನಾಳೆ) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಉಡುಪಿ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಹಾಡೊಂದರ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ. |
ಜಯತೀರ್ಥ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. |
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಹಾಗೂ ಚಂಚಲ ಭಟ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. |
ಅವಿನಾಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಸ್ವಾತಿ ಅಭಿನಯಿಸಿದ್ದಾರೆ. ರವಿಶಂಕರ್ ಗೌಡ, ಪಾವನ, ಬಿ.ಸುರೇಶ್, ರೆಹಮಾನ್, ಗಿರಿ, ನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. |
ಪ್ರೀತಿ ಸದಾ ಇರಲಿ ಅಂತರಾಳದಿಂದ – ಗ್ರಾಂಡ್ ಫಿನಾಲೆಯಲ್ಲಿ ನಿಧಿಗೆ ಕ್ಷಮೆಯಾಚಿಸಿದ ಅರವಿಂದ್ - ಸವಿ ಕನ್ನಡ ನ್ಯೂಸ್ |
ಬಿಗ್‍ಬಾಸ್ ಸೀಸನ್ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಕೆ.ಪಿ. ಅರವಿಂದ್ ನಿಧಿ ಸುಬ್ಬಯ್ಯಗೆ ಬಹಿರಂಗವಾಗಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ. |
ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನ ಟಾಸ್ಕ್ ವೇಳೆ ನಿಧಿ ಸುಬ್ಬಯ್ಯ ಹಾಗೂ ಕೆ.ಪಿ ಅರವಿಂದ್ ಮಧ್ಯೆ ಮಾತಿನ ಚಕಮಕಿ ನಡೆದು ಜಗಳ ಆಗಿತ್ತು. ಅಲ್ಲದೇ ಸೆಕೆಂಡ್ ಇನ್ನಿಂಗ್ಸ್ ವೇಳೆ ಕೂಡ ನಿಧಿ ಹಾಗೂ ಅರವಿಂದ್ ಮತ್ತೆ ಜಗಳ ಮಾಡಿಕೊಂಡಿದ್ದರು. ಇದೀಗ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡ ಅರವಿಂದ್ ಪತ್ರ ಬರೆಯುವ ಮೂಲಕ ನಿಧಿ ಸುಬ್ಬಯ್ಯಗೆ ಕ್ಷಮೆಯಾಚಿಸಿದ್ದಾರೆ. |
ಹಾಯ್ ಗೆಳತಿ, ಬಿಗ್‍ಬಾಸ್ ನೀಡಿರುವ ಅವಕಾಶದಲ್ಲಿ ನಾನು ನಿನ್ನ ಬಳಿ ಕ್ಷಮೆ ಕೇಳಲು ಇಚ್ಛಿಸುತ್ತೇನೆ. ನಿನ್ನಲ್ಲಿ ಒಂದು ಒಳ್ಳೆಯ ಸ್ನೇಹಿತೆಯನ್ನು ಕಂಡಿದ್ದೇನೆ. ಗೊತ್ತೊ, ಗೊತ್ತಿಲ್ಲದೆಯೋ ನನ್ನ ಮಾತು ನಿನಗೆ ನೋವುಂಟು ಮಾಡಿದೆ. ನೀನು ನೀಡಿದ ಸಲುಗೆಯನ್ನು ನಾನು ದುರುಪಯೋಗ ಮಾಡಿಕೊಂಡ ಬೇಸರ ನನಗಿದೆ. ಎಲ್ಲಾ ಸಂದರ್ಭದಲ್ಲಿ ಸಲುಗೆಯಿಂದ ಮಾತನಾಡಬಾರದು ಎಂಬ ಅರಿವು ನನಗಾಗಿದೆ. ನಿನ್ನಲ್ಲಿ ಬಂದು ಕ್ಷಮೆ ಕೇಳಿದಾಗ ನಾನು ನಿಜವಾಗಿಯೂ ಹೃದಯದಿಂದ ಬಂದು ನಿನಗೆ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಬೇಕಾಗಿತ್ತು ಮತ್ತು ಅದನ್ನು ಕಾಟಾಚಾರಕ್ಕೋಸ್ಕರ ಕೇಳಿದ್ದಲ್ಲ. ಈ ಸ್ನೇಹ ಜೀವನ ಪರ್ಯಂತ ಸಾಗಲಿ ಎಂದು ಅಂದುಕೊಳ್ಳುತ್ತೇನೆ. ಪ್ರೀತಿ ಸದಾ ಇರಲಿ ಅಂತರಾಳದಿಂದ, ಇಂತಿ ನಿನ್ನ ಸ್ನೇಹಿತ ಕೆ.ಪಿ ಅರವಿಂದ್ ಎಂದು ಪತ್ರ ಬರೆದಿದ್ದಾರೆ. |
ಪತ್ರ ಓದಿದ ನಂತರ ಸಂತಸದಿಂದ ನಿಧಿ ಸುಬ್ಬಯ್ಯ, ಖಂಡಿತ ನಾವಿಬ್ಬರು ಲೈಫ್ ಲಾಂಗ್ ಫ್ರೆಂಡ್ ಆಗಿರುತ್ತೇವೆ. ಇದನ್ನು ಇಷ್ಟು ದಿನ ನೀನು ನೆನಪಿನಲ್ಲಿಟ್ಟುಕೊಂಡು ಈಗ ಕ್ಷಮೆ ಕೇಳುತ್ತಿರುವುದು ನನಗೆ ಬೇಸರವಾಗುತ್ತಿದೆ. ಎಲ್ಲವನ್ನು ಮರೆತು ನಾವು ಹೊಸದಾಗಿ ಸ್ನೇಹವನ್ನು ಆರಂಭಿಸೋಣ. ಲವ್ ಯೂ ಆಲ್‍ವೇಸ್ ಮ್ಯಾನ್.. ಇದನ್ನು ನಿನ್ನ ಹಣೆಯ ಮೇಲೆ ಬರೆದುಕೊಂಡು ನೆನಪಿಟ್ಟುಕೋ ಎಂದಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್ |
೦೦:೨೦, ೨೯ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ |
೨೨,೯೪೬ bytes added , ೨ ವರ್ಷಗಳ ಹಿಂದೆ |
೧೫:೫೭, ೨೮ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ (ಬದಲಾಯಿಸಿ) |
೦೦:೨೦, ೨೯ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ (ಬದಲಾಯಿಸಿ) (ರದ್ದುಗೊಳಿಸಿ) |
ಆಧ್ಯಾತ್ಮಿಕವಾಗಿ ಭೂಮಿಯ ಪವಿತ್ರತೆ:- |
"ವಂದಿಪೆನು ಈ ಭೂಮಿಗೆ ಭೂಮಿಯ ಸಮಸ್ತ ಜನತೆಗೆ ನಮಿಪೆನು ಭೂಮಿ ತಾಯಿಗೆ" |
• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. |
• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. |
ಸ್ವಾಮಿ ವಿವೇಕಾನಂದರ ದಿವ್ಯ ವಾಣಿ |
ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ 'ಸ್ವಾಮಿ ವಿವೇಕಾನಂದ'ರು ಜನವರಿ 12, 1863ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು. ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು. ಅವರು ನುಡಿಯುತ್ತಾರೆ "ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ." ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು. |
ಸ್ವಾಮಿ ವಿವೇಕಾನಂದರ ಬಗ್ಗೆ ಈ ದೇಶದ ಮಹಿಮಾನ್ವಿತರ ಮಾತುಗಳು ಹೀಗಿವೆ. |
"ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದುದು ಯಾವುದೂ ಇಲ್ಲ" – ರವೀಂದ್ರನಾಥ ಠಾಕೂರ್ |
"ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಾಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿತು" – ಮಹಾತ್ಮ ಗಾಂಧಿ |
"ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮ ಗೌರವವನ್ನೂ, ಆತ್ಮವಿಶ್ವಾಸವನ್ನೂ ಹಾಗೂ ಆತ್ಮಬಲವನ್ನೂ ಪಡೆದಿದ್ದಾರೆ" – ಸುಭಾಷ್ ಚಂದ್ರಬೋಸ್ |
"ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯ ವಿದ್ರಾವಕವಾದ ಗಾನಮಾಧುರ್ಯ ಇವೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ." - ಡಿ.ವಿ.ಜಿ. |
"ಸ್ವಾಮೀಜಿಯವರ ತಪಃಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ" – ಕುವೆಂಪು. |
ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಹೇಳುವುದಕ್ಕಿಂತ ಅವರನ್ನು ಕೇಳುವುದೇ ಸರಿಯಾದದ್ದು. ಬನ್ನಿ ರಾಷ್ಟ್ರಕವಿ ಕುವೆಂಪು ಅವರು ಹೇಳುವ ಹಾಗೆ, ಅವರು ನಮಗೆ ನೀಡಿರುವ ಜ್ಞಾನ ಜ್ಯೋತಿಯ ಖನಿಯಲ್ಲಿ ಒಂದಷ್ಟು ಹೊಕ್ಕು ಪ್ರಬುದ್ಧತೆಯನ್ನು ಬೇಡೋಣ. ಈ ಭಕ್ತಿಭಾವಗಳೊಂದಿಗೆ ಸ್ವಾಮಿ ವಿವೇಕಾನಂದರ ಹಲವು ಮನೋಜ್ಞ ಮಾತುಗಳನ್ನು ತಮ್ಮೊಡನೆ ನೆನಪಿಸಿಕೊಳ್ಳ ಬಯಸುತ್ತೇನೆ. |
• ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನು ಮಾಡಲು ಶಕ್ತನಾಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿ ಕ್ಷಣಮಾತ್ರದಲ್ಲಿ ಸ್ವರ್ಗವನ್ನೇ ಕೊಡಬಲ್ಲದು. ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ತಲುಪುವವರೆಗೂ ನಿಲ್ಲದಿರು. |
• ನಿಮ್ಮೊಬ್ಬರ ಮೇಲೇ ಸಮಸ್ತ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ. |
• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು – ಇದೇ ಧರ್ಮದ ಸರ್ವಸ್ವ. |
• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ. |
• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ. |
• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು. |
• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ. |
• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. 'ನಾನು ಸಮುದ್ರವನ್ನೇ ಪಾನಮಾಡುತ್ತೇನೆ', ಎಂದು ಪ್ರಯತ್ನಶೀಲನು ಹೇಳುತ್ತಾನೆ. 'ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ' ಎನ್ನುತ್ತಾನವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ. |
• ಪ್ರತಿಯಾಗಿ ಏನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೇ ಹೆಚ್ಚು ಬರುತ್ತದೆ. |
• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ. |
• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ. |
• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು? |
• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು. |
• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ. |
• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. |
• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ. |
• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು. |
• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು. |
• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. |
• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ. |
• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ. |
• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. |
• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. |
• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ. |
• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ. |
Subsets and Splits
No community queries yet
The top public SQL queries from the community will appear here once available.