text stringlengths 0 61.5k |
|---|
ಈ ನಾಲ್ಕು ಗೋಡೆಗಳು ಕೋಣೆಯ ದೇಹ – ಅಂಗಾಂಗಗಳು. ದೇಹ ಇದ್ದಾಗ ಮಾತ್ರ "ನಾನು ಇದ್ದೇನೆ" ಎಂಬ ಭಾವದ ಉದಯವಾಗೋದು. ಚೇತನವು ಎಲ್ಲೆಡೆ ಇರುತ್ತದೆ. ಅದು ಸರ್ವವ್ಯಾಪಿಯಾಗಿರುತ್ತದೆ. ಆದರೆ ದೇಹದ ಅಭಾವದಿಂದ ಅದು ಅಪ್ರಕಟವಾಗಿರುತ್ತದೆ. ಯಾವಾಗ ಅದಕ್ಕೆ ದೇಹವು ಒದಗುತ್ತದೆಯೋ ಆಗ ಚೇತನವು ಪ್ರಕಟಗೊಳ್ಳುತ್ತದೆ. ಅವ್ಯಕ್ತವಾಗಿದ್ದ ಚೇತನವು ವ್ಯಕ್ತಗೊಳ್ಳುತ್ತದೆ. |
ಮನೆಯ ಯಾವುದಾದರೊಂದು ತೇವದ ಮೂಲೆಯಲ್ಲಿ ಬ್ರೆಡ್ ಚೂರೊಂದನ್ನು ಇಡಿ. ಎರಡು ಮೂರು ದಿನಗಳಲ್ಲಿ ಅದರಲ್ಲಿ ಹುಳುಹುಪ್ಪಟೆಗಳು ಹುಟ್ಟಿಕೊಳ್ಳುತ್ತವೆ. ಅವು ಹೇಗೆ ಹುಟ್ಟಿಕೊಳ್ಳುತ್ತವೆ? |
ಎಲ್ಲಿ ಆಹಾರ ಇರುತ್ತದೆಯೋ ಅಲ್ಲಿ ಜೀವಿಗಳು ಉದ್ಭವಿಸುತ್ತವೆ. ಅಲ್ಲಿ ಜೀವ ಪ್ರಕಟಗೊಳ್ಳುತ್ತದೆ. ಚೇತನ ಪ್ರಕಟಗೊಳ್ಳಲು ಯಾವುದಾದರೊಂದು ಶರೀರದ ಅವಶ್ಯಕತೆ ಇರುತ್ತದೆ, ಹಾಗೆಯೇ ಶರೀರ ನಿರ್ಮಾಣಕ್ಕೆ ಆಹಾರದ ಅಗತ್ಯವಿರುತ್ತದೆ. |
ದೇಹವೆಂದರೆ ಏನು? ಅದು ಯಾವ ವಸ್ತುವಿನಿಂದ ನಿರ್ಮಿತವಾಗಿದೆ? ಅದು ಹುಟ್ಟಿಕೊಳ್ಳುವುದು, ಬೆಳೆಯುವುದು ಯಾತರಿಂದ? ದೇಹ ನಿರ್ಮಾಣವಾಗಿರುವುದು ಆಹಾರದಿಂದ. ಅದು ಬೆಳೆಯುವುದು ಕೂಡಾ ಆಹಾರದ ಪೋಷಣೆಯಿಂದಲೇ. |
ಮಕ್ಕಳಿಗೆ ಮೊದಲು ಹಾಲು ಕುಡಿಸಲಾಗುತ್ತದೆ. ಆ ವಯಸ್ಸಿನವರಿಗೆ ಹಾಲೇ ಆಹಾರ. ಕೆಲವು ತಿಂಗಳ ನಂತರ ಅದರಲ್ಲಿ ಬಾಳೆ ಹಣ್ಣು ಅಥವಾ ಏನಾದರೂ ಹಣ್ಣು ಬೆರೆಸಿ ಕೊಡಲಾಗುತ್ತದೆ. ಅದು ಕೂಡ ಆಹಾರವೇ. ಮುಂದೆ ಕ್ರಮೇಣ ಸೊಪ್ಪು – ತರಕಾರಿ, ಅನ್ನ ಇತ್ಯಾದಿ ಕೊಡಲಾಗುತ್ತದೆ. ಮುಂದೆ ಮಗು ಬೆಳೆದು, ಇತರರೆಲ್ಲ ಏನು ತಿನ್ನುತ್ತಾರೋ ತಾನೂ ಅದನ್ನೆ ತಿನ್ನಲು ಆರಂಭಿಸುತ್ತದೆ. ಹೀಗೆ ಮಗುವಿನ ದೇಹದ ಪೋಷಣೆ ಹಾಗೂ ಬೆಳವಣಿಗೆಗೆ ಆಹಾರದ ಬಗೆ ಮತ್ತು ಪ್ರಮಾಣಗಳು ಪೂರಕವಾಗಿರುತ್ತವೆ, ಸಹಾಯಕವಾಗಿರುತ್ತವೆ. |
ಇಷ್ಟಕ್ಕೂ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ – ಮೂರು ಹೊತ್ತು ಊಟ ಮಾಡುವ ಅಗತ್ಯ ಏನಿದೆ ಹೇಳಿ? ಅದು ಕೂಡ ಪ್ರತೀ ದಿನ! ಸ್ವಲ್ಪ ಯೋಚಿಸಿ. ಕೆಲವು ದಿನಗಳ ಕಾಲ ಆಹರವನ್ನೆ ತಿನ್ನದೆ ಹೋದರೆ ಏನಾಗುತ್ತದೆ? ಈ ಶರೀರವು ಉಳಿಯುತ್ತದೆಯೇನು? ಚೇತನವು ದೇಹದೊಳಗೆ ಉಳಿದುಕೊಳ್ಳುವುದೇನು? ಅಕಸ್ಮಾತ್ ನಲವತ್ತೈವತ್ತು ದಿನಗಳ ಕಾಲ ಆಹಾರವೇ ದೊರಕದೆ ಹೋದರೆ ಏನಾಗುತ್ತದೆ? ಹೀಗಾದರೆ ದೇಹವು ಹಂತಹಂತವಾಗಿ ದುರ್ಬಲಗೊಳ್ಳುತ್ತಾ ಹೋಗುತ್ತದೆ ಮತ್ತು ಚೇತನವು ದೇಹದಿಂದ ದೂರವಾಗುವ ಘಳಿಗೆ ಹತ್ತಿರವಾಗತೊಡಗುತ್ತದೆ. |
ಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ ಎಂದಾಯ್ತು. ಹಾಗೂ ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿಯಲು ಸಾಧ್ಯ ಎನ್ನುವುದು ಸ್ಪಷ್ಟವಾಯ್ತು. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ ಶರೀರ ದುರ್ಬಲವಾಗುವುದಷ್ಟೇ ಅಲ್ಲ, ದೀರ್ಘ ಕಾಲದವರೆಗೆ ಬಾಳುವುದೂ ಇಲ್ಲ. |
ಇದರಿಂದ ತಿಳಿದು ಬರುವುದೇನು? ಶರೀರವೆಂದರೆ ಯಾವುದು ಆಹಾರದಿಂದ ನಿರ್ಮಿತವಾಗಿ ಆಹಾರದಿಂದ ಪೋಷಣೆ ಪಡೆದು ಬೆಳೆಯುತ್ತದೆಯೋ ಅದು. ಅಲ್ಲವೆ? |
ಕಾಡಿನಲಲ್ಲಿ ನಿಮ್ಮ ಶರೀರ ಯಾವುದಾದರೂ ಹುಲಿ – ಸಿಂಹಕ್ಕೆ ಸಿಕ್ಕಿ ಹಾಕಿಕೊಂಡರೆ ನಿಮ್ಮ ಗತಿ ಏನಾಗುತ್ತದೆ? ತೋಟದಲ್ಲಿ ಅಡ್ಡಾಡುವಾಗ ನಿಮ್ಮ ಕಣ್ಣಿಗೆ ಹಣ್ಣು ಕಂಡರೆ, ಆ ಹಣ್ಣಿನ ಗತಿ ಏನಾಗುತ್ತದೆ!? |
ಇದರರ್ಥ, ನಿಮ್ಮ ಶರೀರ ಯಾವುದೋ ಹುಲಿ, ಸಿಂಹ, ಚಿರತೆ ಅಥವಾ ಕರಡಿಗೆ ಒಂದು ಹಣ್ಣಿಗಿಂತ ಹೆಚ್ಚಿನದೇನಲ್ಲ! ಅಲ್ಲವೆ? ನೀವು ಆ ಪ್ರಾಣಿಗಳಿಗೆ ಕೇವಲ ಆಹಾರ ಮಾತ್ರವಾಗಿದ್ದೀರಿ. |
ನಮ್ಮ ಈ ಶರೀರವೂ ಹಣ್ಣು – ತರಕಾರಿಗಳಂತೆ, ದವಸ – ಧಾನ್ಯಗಳಂತೆ ; ಅಥವಾ ಮಾಂಸಾಹಾರಿಗಳ ಮೀನು, ಕುರಿ, ಕೋಳಿಗಳಂತೆ ಮತ್ಯಾವುದೋ ಜೀವಿಯ ಪಾಲಿಗೆ ಕೇವಲ ಆಹಾರವೇ ಆಗಿದೆ. |
ಈ ಇಡಿಯ ಸೃಷ್ಟಿಯಲ್ಲಿ ಪ್ರತಿಯೊಂದು ಪ್ರಾಣಿಯೂ ಒಂದಲ್ಲ ಮತ್ತೊಂದು ಪ್ರಾಣಿಯ ಆಹಾರವಾಗಿದೆ. ಇದು ಅಚ್ಚರಿಯ ಸಂಗತಿ, ಹಾಗೂ ಕಟು ಸತ್ಯ ಕೂಡಾ. ಈ ಇಡೀ ಸೃಷ್ಟಿಯು ಸ್ವಾವಲಂಬಿಯಾಗಿದೆ. ಸೃಷ್ಟಿಯ ಪ್ರತಿಯೊಂದೂ ಪುನರ್ಬಳಕೆಗೆ ನಿಯೋಜಿತವಾಗಿದೆ. |
ಟೀವಿಯಲ್ಲಿ ನಾವು ಜಿಯಾಗ್ರಫಿಕಲ್ ಚಾನೆಲ್ ಅಥವಾ ಅನಿಮಲ್ ಪ್ಲಾನೆಟ್ ನೋಡಿದರೆ, ಒಂದು ಪ್ರಾಣಿಯು ಇನ್ನೊಂದು ಪ್ರಾಣಿಗೆ ಹೇಗೆ ಆಹಾರವಾಗುತ್ತದೆ ಎನ್ನುವುದನ್ನು ಕಣ್ಣಾರೆ ಕಾಣಬಹುದು. ಇಲ್ಲಿ ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ. |
ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ಕಾಡಿನಲ್ಲಿ ಜಿಂಕೆಯೊಂದು ತನ್ನ ಜೀವ ಉಳಿಸಿಕೊಳ್ಳಲೋಸುಗ ಓಡುತ್ತಿದೆ. ಮತ್ತು ಹಾಗೆ ಓಡುತ್ತಿರುವ ಜಿಂಕೆಯನ್ನು ಹಿಡಿಯಲು ಹುಲಿಯೊಂದು ಅಟ್ಟಿಸಿಕೊಂಡು ಹೋಗುತ್ತಿದೆ. ಜೀವ ಉಳಿಸಿಕೊಳ್ಳಲು ಓಡುತ್ತಿರುವ ಹಾಗೂ ಜೀವ ತೆಗೆಯಲು ಓಡಿಸಿಕೊಂಡು ಹೋಗುತ್ತಿರುವ ಈ ಎರಡೂ ಜೀವಿಗಳಲ್ಲಿಯೂ ಇರುವ ಚೇತನ ಒಂದೇ. ಇದು ಜಿಂಕೆ ಹಾಗೂ ಹುಲಿ – ಇವೆರಡರಲ್ಲೂ ಸಮಾನವಾಗಿದೆ. ಯಾವ ಚೇತನವು ಹುಲಿಗೆ ಆಕ್ರಮಣ ಮಾಡುವಂತೆ ಪ್ರೇರೇಪಿಸುತ್ತದೆಯೋ ಅದೇ ಚೇತನವು ಜಿಂಕೆಗೆ ಜೀವ ಉಳಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತದೆ. ಅದರೆ ವ್ಯತ್ಯಾಸವಿರುವುದು ದೇಹಗಳಲ್ಲಿ. ಉಪಕರಣ ಹೇಗಿರುತ್ತದೆಯೋ ಕೆಲಸ ಹಾಗೆ ನಡೆಯುತ್ತದೆ. |
ಪ್ರತಿ ದೇಹದ ಗುಣಧರ್ಮವು ವಿಭಿನ್ನವಾಗಿರುತ್ತದೆ. ಪ್ರತಿ ದೇಹದ ವ್ಯವಹಾರಗಳೂ ಬೇರೆಬೇರೆಯಾಗಿರುತ್ತವೆ. ಇದು ಪ್ರಕೃತಿದತ್ತವಾಗಿ ಆಗಿರುವಂಥದ್ದು. ಪ್ರಕೃತಿಯಿಂದ ನಿಯೋಜನೆಯಾಗಿರುವುದೇ ಹೀಗೆ. ಪ್ರತಿ ದೇಹದ ಕಾರ್ಯಪ್ರಣಾಳಿಕೆ ಬೇರೆಯೇ ಇರುತ್ತದೆ. ಆದ್ದರಿಂದ ಪ್ರತಿ ದೇಹವು ತನ್ನ ಗುಣಧರ್ಮ ಹಾಗೂ ಕಾರ್ಯ ಪ್ರಣಾಳಿಕೆಗೆ ಅನುಗುಣವಾಗಿ ವ್ಯವಹರಿಸಲು ಬದ್ಧವಾಗಿರುತ್ತದೆ. ಆದರೆ ಈ ಎಲ್ಲ ಜೀವಿಗಳಲ್ಲಿಯೂ ದೇಹಗಳಲ್ಲಿಯೂ ಸಮಾನವಾದ ಅಂಶವೊಂದಿರುತ್ತದೆ. ಅದುವೇ 'ಚೇತನ'. |
ಜೈಲು ಕೋಣೆಯಲ್ಲಿ 400ಲೀ. ನೀರು ತುಂಬಿಟ್ಟ ಇಂದ್ರಾಣಿ | Udayavani – ಉದಯವಾಣಿ |
Monday, 03 Aug 2020 | UPDATED: 06:15 PM IST |
Team Udayavani, Nov 19, 2019, 10:38 PM IST |
ಮುಂಬಯಿ: ಬೈಕುಲ್ಲಾ ಜೈಲಿನಲ್ಲಿರುವ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ತಮ್ಮ ಜೈಲು ಕೊಠಡಿಯಲ್ಲಿ ಬರೋಬ್ಬರಿ 400 ಲೀಟರ್ ನೀರು ಸಂಗ್ರಹಿಸಿ ಇಟ್ಟಿರುವುದು ಜೈಲಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಪ್ರತಿ ವಾರ ಇಂದ್ರಾಣಿ 20 ಲೀಟರ್‌ನ ನೀರಿನ ಬಾಟಲಿಗಳನ್ನು ಜೈಲಿನ ಕ್ಯಾಂಟೀನಿನಲ್ಲಿ ಕೊಳ್ಳುತ್ತಿದ್ದಾರೆ. ಈವರೆಗೂ ಸುಮಾರು 4,000ರೂ.ಗಳನ್ನು ನೀರು ಖರೀದಿಸುವುದಕ್ಕೆಂದೇ ವ್ಯಯಿಸಿದ್ದಾರೆ. |
ಏಕೆ ನೀರು ಸಂಗ್ರಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದರೆ 'ನನಗೆ ಅವುಗಳ ಅಗತ್ಯವಿದೆ' ಎಂದಷ್ಟೇ ಉತ್ತರಿಸುತ್ತಾರೆ ಎಂದಿದ್ದಾರೆ. ಜೈಲಧಿಕಾರಿ ಗಳು. ಕೆಲ ದಿನಗಳ ಹಿಂದಷ್ಟೇ ಇಂದ್ರಾಣಿ ಪರ ವಕೀಲರು, ಇಂದ್ರಾ ಣಿಯ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ ಎಂದಿದ್ದರು. |
ಜೋಗಿಮನೆ: ಫಸ್ಟ್ ಹಾಫ್ |
ಫಸ್ಟ್ ಹಾಫ್ |
ಗೆಳೆಯ ರವಿ ಬೆಳಗೆರೆಗೆ ಐವತ್ತು. ಲೇಖಕರಿಗೆ ಕ್ರಿಯಾಶೀಲರಿಗೆ ಐವತ್ತೆಂದರೆ ಏರುಜವ್ವನ. ಐವತ್ತರ ತನಕದ ಬಾಲಲೀಲೆ, ಹುಡುಗಾಟ , ತಾರುಣ್ಯದ ಸೆಳೆತಗಳಿಂದ ಪಾರಾಗುವ ವಯಸ್ಸಲ್ಲದೇ ಹೋದರೂ, ಇವೆಲ್ಲದರ ಜೊತೆಗೇ ತನ್ನನ್ನು ತಾನು ಮೀರುವುದಕ್ಕೆ ಹಂಬಲಿಸುವ ವಯಸ್ಸಂತೂ ಹೌದು. |
ಫಸ್ಚ್ ಹಾಫ್ ಭರ್ಜರಿಯಾಗಿದ್ದಾಗಲೇ ನೆಕ್ಸ್ಟ್ ಹಾಫ್ ರೋಚಕವಾಗಿರುತ್ತದೆ. ಮೊದಲ ಇನ್ನಿಂಗ್ಸಿನಲ್ಲಿ ಬಾರಿಸಿದ ರನ್ನುಗಳೇ ಎರಡನೆಯ ಇನ್ನಿಂಗ್ಸನ್ನು ಕುತೂಹಲಕಾರಿ ಆಗಿಸುವುದು. ಫಸ್ಟ್ ಹಾಫ್ ಹೇಗಿತ್ತು ಎಂದು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ, ಒಂದು ಸುಂದರ ಪುಸ್ತಕ- ಫಸ್ಟ್ ಹಾಫ್. |
ಶರತ್ ಕಲ್ಕೋಡ್ ಸಂಪಾದಕತ್ವದಲ್ಲಿ, ನಿವೇದಿತಾ ಅಕ್ಕರೆ ಮತ್ತು ಶ್ರಮದೊಂದಿಗೆ, ರವಿ ಅಜ್ಜೀಪುರ ಪುಟವಿನ್ಯಾಸಗೊಂದಿಗೆ ಸಿದ್ಧವಾಗಿರುವ ಪುಸ್ತಕದ ಪುಟಗಳನ್ನು ನೋಡುತ್ತಲೇ ದಂಗಾಗಿಬಿಟ್ಟೆ. ನಿವೇದಿತಾ ಪುಸ್ತಕ ಮಾಡುತ್ತಿದ್ದೇವೆ ಅಂದಾಗ ಅದೂ ಇನ್ನೊಂದು ನೂರಿನ್ನೂರು ಪುಟಗಳ ಪುಸ್ತಕವಾಗುತ್ತೆ ಅಂದುಕೊಂಡಿದ್ದೆ. ಆದರೆ ಅದು ಪ್ರತಿ ಮನೆಯ ಕಪಾಟನ್ನು ಚೆಂದವಾಗಿಸಬಲ್ಲ, ಪ್ರತಿ ಟೇಬಲ್ಲಿಗೂ ಕಳೆಕೊಡಬಲ್ಲ, ಮತ್ತೆ ಮತ್ತೆ ಓದಬಲ್ಲ ಕೃತಿಯಾಗುತ್ತೆ ಅನ್ನುವ ಅರಿವಿರಲಿಲ್ಲ. |
ಪುಸ್ತಕದ ಮುಖಪುಟ ಇಲ್ಲಿದೆ. ಅಭಿನಂದನ ಗ್ರಂಥ ಎಂದು ಕರೆಯುವುದಕ್ಕೆ ಮನಸ್ಸಾಗುತ್ತಿಲ್ಲ. ಅದು ರವಿಯನ್ನು ಪ್ರೀತಿಸುವ ಎಲ್ಲರ ಅಕ್ಕರೆಯೂ ಒಂದೆಡೆ ಸೇರಿದ ಚಾಕಲೇಟ್ ಬುಟ್ಟಿ. |
ಮುಖಪುಟವೇ ಎಲ್ಲಾ ಹೇಳುತ್ತದೆ, ನೋಡಿರಲ್ಲ. |
Posted by ಗಿರೀಶ್ ರಾವ್, ಎಚ್ (ಜೋಗಿ) at 6:48 PM |
Jogi is back!. |
Regarding the new book by Ravi belagere I have few concerns. |
Does the book contain anything new that has not yet been told/known to Karnataka people?. The point of asking is, Hi Bangalore has created enormous number of readers all over the country and few abroad as well. By a large number of Ravi anna's writings, most of his life-story is already revealed. I wonder does the book convey some new stuffs or the same old ones?. |
The reason for my concern is, I know Ravi belagere personally and met him few times as well (needless to say, he knows me as well). I am sure people would be more interested in knowing anything new than the old ones. |
ಪುಸ್ತಕದ ಬಗ್ಗೆ ಕೇಳಿ ತುಂಬ ಖುಶಿಯಾಯಿತು.ಮೇಲಿನ ಕಮೆಂಟು ಸಮರ್ಥನೀಯವಾದುದು. |
ನಮಗೆಲ್ಲಾ ರವೀ ಸಾರ್ ಒಂಥರಾ ಓಪನ್ ಸೀಕ್ರೆಟ್ ಆಗಿ ಹೋಗಿದ್ದಾರೆ. |
ಅವರ ಈ 'first half'ನಲ್ಲಿ ಅವರೊಂದಿಗೆ ಓಡಾಡಿದವರು,ನೋಡಿದವರು, |
ಬಿದ್ದವರು,ಎದ್ದವರು-ಹೀಗೆ ಎಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನ |
ಹಂಚಿಕೊಂಡರೆ ಎಷ್ಟು ಚೆಂದ! |
ಒಟ್ಟಿನಲ್ಲಿ ಬುಟ್ಟಿ ಗಟ್ಟಿಯಾಗಿ ಹೆಣೆದುಬರಲಿ ಎಂಬ ಹಾರೈಕೆಯೊಂದಿಗೆ... |
ಚಾಕಲೇಟಿನಂತಹ ಸಿಹಿ ಸುದ್ದಿ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು. |
ರವಿಬೆಳೆಗೆರೆಯವರೆಂದರೆ ಪ್ರತಿ ಮನ ಮನೆಗಳಲ್ಲಿಯೂ ಒಬ್ಬರಾಗಿರುವಂಥವರು ಇಂದು. |
ಒಮ್ಮೆಯೂ ಅವರನ್ನು ಕಂಡಿಲ್ಲವಾದರೂ ತಮ್ಮ ಬರಹಗಳಿಂದಲೇ ಹತ್ತಿರವಾಗಿಬಿಡುತ್ತಾರವರು. |
ರವಿಬೆಳೆಗೆರೆಯವರ ಐವತ್ತನೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. 'ಫಸ್ಟ್ ಹಾಫ್' ಎಂಬ ಚಾಕಲೇಟ್ ಬುಟ್ಟಿ ತರುತ್ತಿರುವುದಕ್ಕೆ, ತರುತ್ತಿರುವವರಿಗೆ , ಅಭಿವಂದನೆಗಳು,ಅಭಿನಂದನೆಗಳು. |
ಮಾಲ್ದೀವ್ಸ್: ಅಂತಾರಾಷ್ಟ್ರೀಯ ವಕೀಲರ ಬಂಧನ, ಗಡಿಪಾರು | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Feb 28, 2018, 11:11 PM IST |
ಕೊಲಂಬೊ, ಫೆ. 28: ಮಾಲ್ದೀವ್ಸ್‌ನಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿಯ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಅಲ್ಲಿಗೆ ತೆರಳಿದ್ದ ಅಂತಾರಾಷ್ಟ್ರೀಯ ವಕೀಲರ ಗುಂಪೊಂದನ್ನು ಅಲ್ಲಿನ ಪೊಲೀಸರು ಬಂಧಿಸಿ ಗಡಿಪಾರು ಮಾಡಿದ್ದಾರೆ ಎಂದು ಅವರ ಸಂಘಟನೆ 'ಲಾ ಏಶ್ಯ' ಹೇಳಿದೆ. |
ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಎರಡು ದಿನಗಳ ಬಳಿಕ, ಅಲ್ಲಿನ ಸರಕಾರ ನೀಡಿರುವ ಆಹ್ವಾನದಂತೆ ನಾಲ್ವರು ಸದಸ್ಯರನ್ನು ಅಲ್ಲಿಗೆ ಕಳುಹಿಸಿರುವುದಾಗಿ ಪ್ರಾದೇಶಿಕ ವಕೀಲರ ಸಂಘಟನೆ ಲಾ ಏಶ್ಯ ಹೇಳಿದೆ. |
ನಾಲ್ವರು ವಕೀಲರು ರವಿವಾರ ಮಾಲೆ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಾಗ ಬಂಧಿಸಲಾಯಿತು ಹಾಗೂ ಬಳಿಕ ಅಲ್ಲಿಂದಲೇ ಅವರನ್ನು ಗಡಿಪಾರುಗೊಳಿಸಲಾಯಿತು ಎಂದು 'ಲಾ ಏಶ್ಯ' ತಿಳಿಸಿದೆ. |
''ಇಂಥ ಕೃತ್ಯದ ಮೂಲಕ, ಯಾವುದೇ ವ್ಯಕ್ತಿಗಳ ಪ್ರಾಯೋಜಕತ್ವ ಹೊಂದಿರದ ಸತ್ಯ ಶೋಧಕ ತಂಡವೊಂದರ ಸ್ವತಂತ್ರ ಹಾಗೂ ತಾರತಮ್ಯರಹಿತ ವಿಶ್ಲೇಷಣೆಯ ಲಾಭ ಹೊಂದುವ ಅವಕಾಶದಿಂದ ಮಾಲ್ದೀವ್ಸ್ ಸರಕಾರ ವಂಚಿತವಾಗಿದೆ'' ಎಂದಿದೆ. |
ತುರ್ತು ಪರಿಸ್ಥಿತಿಯಡಿಯಲ್ಲಿ ಮಾಲ್ದೀವ್ಸ್‌ನ ಪರಿಸ್ಥಿತಿಯನ್ನು ಅಂದಾಜಿಸಲು ಹಾಗೂ ಮಾಲೆಯಲ್ಲಿನ ಸುರಕ್ಷತೆ ಮತ್ತು ಭದ್ರತೆಗೆ ಸಾಕ್ಷಿಯಾಗಲು ಪ್ರತಿನಿಧಿಗಳನ್ನು ಕಳುಹಿಸಲು ಮಾಲ್ದೀವ್ಸ್ ಸರಕಾರ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ಆಹ್ವಾನ ಕಳುಹಿಸಿರುವುದನ್ನು ಸ್ಮರಿಸಬಹುದಾಗಿದೆ. |
ಜೈಲಿನಲ್ಲಿರುವ ಪ್ರತಿಪಕ್ಷಗಳ 9 ನಾಯಕರನ್ನು ಬಿಡುಗಡೆ ಮಾಡುವಂತೆ ಹಾಗೂ ಅಮಾನತುಗೊಂಡಿರುವ 12 ಸಂಸದರ ಸದಸ್ಯತ್ವ ಮರಳಿಸುವಂತೆ ಮಾಲ್ದೀವ್ಸ್ ಸುಪ್ರೀಂ ಕೋರ್ಟ್ ಈ ತಿಂಗಳ ಆದಿ ಭಾಗದಲ್ಲಿ ಸರಕಾರಕ್ಕೆ ಆದೇಶ ನೀಡಿದಂದಿನಿಂದ ಮಾಲ್ದೀವ್ಸ್‌ನಲ್ಲಿ ಅನಿಶ್ಚಿತತೆ ನೆಲೆಸಿದೆ. |
ತೀರ್ಪನ್ನು ಪಾಲಿಸಲು ನಿರಾಕರಿಸಿದ ಅಧ್ಯಕ್ಷ ಯಮೀನ್ ಫೆಬ್ರವರಿ 5ರಂದು 15 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಿದರು. ಬಳಿಕ, ಅದನ್ನು ಇನ್ನೂ ತಿಂಗಳಿಗೆ ವಿಸ್ತರಿಸಲಾಯಿತು. |
ಆರೋಗ್ಯ ಸಚಿವೆ ರಾಜೀನಾಮೆ: ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ |
ಮಾಲ್ದೀವ್ಸ್ ಆರೋಗ್ಯ ಸಚಿವೆ ದುನ್ಯಾ ವೌಮೂನ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬೆನ್ನಿಗೇ, ದೇಶವನ್ನು ರಾಜಕೀಯ ಬಿಕ್ಕಟ್ಟಿನಿಂದ ಪಾರು ಮಾಡಲು ದೇಶದ ಜನತೆಗೆ ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. |
ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರ ಸೊಸೆಯಾಗಿರುವ ದುನ್ಯಾ, ಮಾಜಿ ಅಧ್ಯಕ್ಷ ವೌಮೂನ್ ಅಬ್ದುಲ್ ಗಯೂಮ್‌ರ ಮಗಳಾಗಿದ್ದಾರೆ. ತನ್ನ ತಂದೆಯ ಬಂಧನದ ಬಳಿಕ ದುನ್ಯಾ ಭಾರೀ ಒತ್ತಡದಲ್ಲಿ ಸಿಲುಕಿದ್ದರು ಎನ್ನಲಾಗಿದೆ. |
ತುರ್ತು ಪರಿಸ್ಥಿತಿ ಹೇರಿದ ಬೆನ್ನಿಗೇ ಪೊಲೀಸರು 3 ದಶಕಗಳ ಕಾಲ ದೇಶವನ್ನು ಆಳಿದ ವೌಮೂನ್ ಮತ್ತು ಅವರ ಸಹೋದರ ಅಹ್ಮದ್ ಫಾರಿಸ್ ವೌಮೂನ್‌ರನ್ನು ಬಂಧಿಸಿದ್ದರು. |
ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್ ಟ್ರೈನ್.. ಡ್ರ್ಯಾಗನ್ ರಾಷ್ಟ್ರದ ಮತ್ತೊಂದು ತಂತ್ರ! – ಸವಿ ಕನ್ನಡ ನ್ಯೂಸ್ |
ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್ ಟ್ರೈನ್.. ಡ್ರ್ಯಾಗನ್ ರಾಷ್ಟ್ರದ ಮತ್ತೊಂದು ತಂತ್ರ! |
ಭಾರತದೊಂದಿಗೆ ಗಡಿ ತಗಾದೆಯನ್ನು ಜೀವಂತಾಗಿಸುವ ಪ್ರಯತ್ನದಲ್ಲಿರುವ ಚೀನಾ ಈಗ ಟಿಬೆಟ್ನಲ್ಲಿ ಇನ್ನೊಂದು ರಣ ತಂತ್ರ ರೂಪಿಸಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಪೂರ್ವ ಲಡಾಖ್ನಲ್ಲಿ ಸೈನ್ಯವನ್ನು ಮುನ್ನುಗಿಸಿ ಬೆನ್ನಿಗೆ ಚೂರಿ ಹಾಕಿದ್ದ ಚೀನಾ, ಸದ್ಯ ಸೈನ್ಯವನ್ನು ವೇಗವಾಗಿ ಗಡಿ ಪ್ರದೇಶಗಳಿಗೆ ತೆರಳುವಂತೆ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಟಿಬೆಟ್ ಭೂ-ಪ್ರದೇಶದಲ್ಲಿ ವಿದ್ಯುದ್ದೀಕೃತ ಬುಲೆಟ್ ಟ್ರೈನ್ಗಳನ್ನು ಪ್ರಾರಂಭಿಸಿದೆ. ಇದರಿಂದ ಸೇನೆಯನ್ನು ತ್ವರಿತವಾಗಿ ಗಡಿ ಪ್ರದೇಶಕ್ಕೆ ಸಾಗಿಸಲು ಸಾಧ್ಯವಾಗಲಿದೆ. |
"Fuxing" bullet trains are put into service as a new railway linking two cities in China's #Tibet starts operation on Friday. |
With a designed speed of 160 km/h, the 435-km Lhasa-Nyingchi railway is China's first electrified railroad operating on the plateau region. pic.twitter.com/TlTFkkIpWH |
ಟಿಬೆಟ್ ರಾಜಧಾನಿ ಹಸಾದಿಂದ ನಿಯಿಂಗ್ಚಿ ಪ್ರದೇಶಕ್ಕೆ ಬುಲೆಟ್ ಟ್ರೈನ್ ಸೇವಗಳನ್ನು ಆರಂಭ ಮಾಡಿದ್ದು, ಸುಮಾರು 435.5 ಕಿಮೀ ಉದ್ದದ ಹೈಸ್ಪೀಡ್ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಿದೆ. ಈ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಎರಡನೇ ರೈಲ್ವೆ ಲೈನ್ ಇದಾಗಿದೆ. ಸದ್ಯ ಬುಲೆಟ್ ಟ್ರೈನ್ ಸೇವೆ ಆರಂಭ ಮಾಡಿರುವ ಕಾರಣ ಚೆಂಗ್ಡೂ ನಿಂದ ಲಾಸಾಗೆ 13 ಗಂಟೆಗಳಲ್ಲಿ ಪ್ರಯಾಣ ಮಾಡಬಹುದು. ಈ ಹಿಂದೆ ಇದಕ್ಕೆ 48 ಗಂಟೆಗಳು ಅಗತ್ಯವಿತ್ತು ಮಾಧ್ಯಮಗಳು ವರದಿ ಮಾಡಿದೆ. |
ಈಗಾಗಲೇ ಚೀನಾ, ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಭಾಗ ಎಂದು ವಾದ ಮಾಡುತ್ತಿದೆ. ಆದ್ದರಿಂದಲೇ ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಈ ಹಿಂದೆಯೂ ಕೂಡ ಚೀನಾ ಅರುಣಾಚಲ ಪ್ರದೇಶದ ಸಮೀಪ ಗ್ರಾಮವೊಂದನ್ನ ನಿರ್ಮಾಣ ಮಾಡಿತ್ತು. ಆದರೆ ಈ ಗ್ರಾಮವನ್ನು ತಮ್ಮ ಪ್ರದೇಶದಲ್ಲೇ ನಿರ್ಮಾಣ ಮಾಡಿಕೊಂಡಿರುವುದಾಗಿ ಚೀನಾ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು. |
The post ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್ ಟ್ರೈನ್.. ಡ್ರ್ಯಾಗನ್ ರಾಷ್ಟ್ರದ ಮತ್ತೊಂದು ತಂತ್ರ! appeared first on News First Kannada. |
ಕಾಸರಗೋಡು ಹಿಂದಿಕ್ಕಿದ ಬೆಳಗಾವಿಗೆ 70 ನೇ ಸಾಹಿತ್ಯಸಮ್ಮೇಳನದ ಕುಂದಾ | ThatsKannada.com -> 70th Kannada Sahithya will be held in Belgaum - Kannada Oneindia |
12 min ago ಸದನದಲ್ಲಿ ಆಸನ ಬದಲು: ಹಂಗೇ ಒಂದು ಡೈಲಾಗ್ ಬಿಟ್ಟ ಸಚಿನ್ ಪೈಲಟ್ |
23 min ago ಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತ |
40 min ago ವಿಶ್ವ ಒಂದಾಗಿ ಕೋವಿಡ್ ವಿರುದ್ಧ ಹೋರಾಡುತ್ತಿದೆ : ರಾಮನಾಥ್ ಕೋವಿಂದ್ |
ಕಾಸರಗೋಡು ಹಿಂದಿಕ್ಕಿದ ಬೆಳಗಾವಿಗೆ 70 ನೇ ಸಾಹಿತ್ಯಸಮ್ಮೇಳನದ ಕುಂದಾ |
ತುಮಕೂರು : 70 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ನಿರ್ಧರಿಸಿದ್ದಾರೆ. |
ಡಾ.ಯು.ಆರ್.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ನಡೆಯುತ್ತಿರುವ 69 ನೇ ಸಾಹಿತ್ಯ ಸಮ್ಮೇಳನದ ಮೂರನೇ ಹಾಗೂ ಅಂತಿಮ ದಿನವಾದ ಭಾನುವಾರ ಬೆಳಗಾವಿಯಲ್ಲಿ ಮುಂದಿನ ಸಮ್ಮೇಳನವನ್ನು ನಡೆಸುವ ತೀರ್ಮಾನವನ್ನು ಕಸಾಪ ಪದಾಧಿಕಾರಿಗಳ ಸಭೆ ಕೈಗೊಂಡಿತು. ಸಭೆಯಲ್ಲಿ ಭಾಗವಹಿಸಿದ್ದ 25 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಬೆಳಗಾವಿಯಲ್ಲಿ ಸಮ್ಮೇಳನ ನಡೆಸಲು ಬಹುಮತದಿಂದ ನಿರ್ಣಯಿಸಿದರು. |
ಈ ಮುನ್ನ ಕಾಸರಗೋಡು ಅಥವಾ ಉಡುಪಿಯಲ್ಲಿ 70 ನೇ ಸಾಹಿತ್ಯ ಸಮ್ಮೇಳನ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು . ಕನ್ನಡದ ಕೊಂಡು ಓದುವ ಮೊದಲ ವೆಬ್ ಪಾಕ್ಷಿಕ |
ಟೆಕ್ನೋ ಸ್ಮಾರ್ಕ್ 6 ಏರ್ 3GB RAM + 64GB ವೇರಿಯೆಂಟ್ ಸ್ಮಾರ್ಟ್‌ಫೋನ್ ಲಾಂಚ್! | Tecno Smart 6 Air 3GB + 64GB Variant Smartphone Launch! - Kannada Gizbot |
| Published: Monday, September 21, 2020, 17:57 [IST] |
ಟೆಕ್ನೋ ಕಂಪನಿಯು ಈಗಾಗಲೇ ಹಲವು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ನೆಲೆಯೂರಿದೆ. ಇನ್ನು ಇತ್ತೀಚಿಗಷ್ಟೇ ಟೆಕ್ನೋ ಸಂಸ್ಥೆಯು ತನ್ನ ಹೊಸ ಟೆಕ್ನೋ ಸ್ಪಾರ್ಕ್ 6 ಏರ್ ಸ್ಮಾರ್ಟ್‌ಫೋನ್ ಅನ್ನು ಮಾಡಿತ್ತು. ಇದೀಗ ಅದರ 3GB RAM + 64GB ಸಂಗ್ರಹ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ಒಳಗೊಂಡಿದೆ. |
ಹೌದು, ಟೆಕ್ನೋ ಕಂಪನಿಯು ಇದೇ ವರ್ಷ ಜೂನ್ ತಿಂಗಳ ಕೊನೆಯಲ್ಲಿ ಟೆಕ್ನೊ ಸ್ಪಾರ್ಕ್ 6 ಏರ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಅದರ 3GB RAM+64GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನ ಸಹ ಪರಿಚಯಿಸಿದೆ. ಇದು ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್ ಅನ್ನು ಹೊಂದಿದ್ದು, ಇದರ ಬೆಲೆ 9,000 ರೂ ಆಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. |
ಟೆಕ್ನೋ ಸ್ಮಾರ್ಕ್ 6 ಏರ್ 720x1,640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 7 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡಾಟ್-ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಜೊತೆಗೆ 90.6% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇಯು 20.5: 9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್ ಅನ್ನು ಒಳಗೊಂಡಿದೆ. |
ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ A25SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಜೊತೆಗೆ HIOS 6.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 3GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. |
ಟೆಕ್ನೋ ಸ್ಪಾರ್ಕ್ 6 ಏರ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. |
ಇದು 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ V5.0 ಅನ್ನು ಬೆಂಬಲಿಸಲಿವೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. |
ಟೆಕ್ನೋ ಸ್ಪಾರ್ಕ್ 6 ಏರ್ ಸ್ಮಾರ್ಟ್‌ಫೋನ್ 3GB RAM + 64GB ಹೊಸ ವೇರಿಯೆಂಟ್ ಆಯ್ಕೆಯ ಬೆಲೆ ರೂ. 8,699 ಆಗಿದೆ. ಇದು ಕ್ಲೌಡ್ ವೈಟ್, ಕಾಮೆಟ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಹೊಸ ರೂಪಾಂತರವು ಸೆಪ್ಟೆಂಬರ್ 25 ರಂದು ಅಮೆಜಾನ್ ಮೂಲಕ ಮಾರಾಟವಾಗಲಿದೆ. |
Tecno Spark 6 Air's new variant is powered by the MediaTek Helio A25 SoC while the other two variants come with the Helio A22 quad-core SoC.to know more visit to kannada.gizbot.com |
ರಾಜಸ್ಥಾನದಲ್ಲಿ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆ – EESANJE / ಈ ಸಂಜೆ |
ರಾಜಸ್ಥಾನದಲ್ಲಿ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆ |
June 10, 2022 Sunil Kumar Rajya Sabha: Close contest expected in Rajasthan |
ಜೈಪುರ, ಜೂ.10- ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಮತದಾನದಲ್ಲಿ ಕಾಂಗ್ರೆಸ್‍ನ ರಣದೀಪ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಭವಿಷ್ಯ ನಿರ್ಧಾರವಾಗಲಿದೆ. ತಲಾ ಅಭ್ಯರ್ಥಿಯ ಗೆಲುವಿಗೆ 41 ಮತಗಳ ಅಗತ್ಯವಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣೆ ಕುತೂಹಲ ಕೆರಳಿಸಿದೆ. ಹೆಚ್ಚುವರಿ ಅಭ್ಯರ್ಥಿಯ ಗೆಲುವಿನ ವೇಳೆಯ ರಾಜಕೀಯ ಬೆಳವಣಿಗೆಗಳು ಮುಂದಿನ ರಾಜಕೀಯ ದಿಕ್ಸೂಚಿಯಾಗಲಿವೆ ಎನ್ನಲಾಗಿದೆ. |
ಮೂವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಅವರನ್ನು ಗೆಲ್ಲಿಸಿಕೊಳ್ಳಲು 123 ಶಾಸಕರಿಂದ ಮತ ಹಾಕಿಸಬೇಕಿತ್ತು. ತನ್ನ ಪಕ್ಷದ 108 ಶಾಸಕರು ಸೇರಿ ಒಟ್ಟು 126 ಶಾಸಕರ ಸಂಖ್ಯಾಬಲವಿದೆ ಎಂದು ಹೇಳಿಕೊಂಡಿತ್ತು. ಬಿಜೆಪಿ 71 ಶಾಸಕರನ್ನು ಹೊಂದಿದ್ದು ಒಂದು ಸ್ಥಾನವನ್ನು ನಿರಾಯಾಸವಾಗಿ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ 30 ಉಳಿಯಲಿವೆ. ಆರ್‍ಎಲ್‍ಪಿಯ ಮೂರು ಸೇರಿ ಒಟ್ಟು 33 ಸಂಖ್ಯಾಬಲವನ್ನು ಬಿಜೆಪಿ ಕ್ರೋಢಿಕರಿಸಿದೆ. ಹೆಚ್ಚುವರಿ ಅಭ್ಯರ್ಥಿಗಳ ಗೆಲುವಿಗೆ ಎಂಟು ಶಾಸಕರ ಕೊರತೆಯಿದೆ. |
ಕಾಂಗ್ರೆಸ್ 108 ಶಾಸಕರ ಮೂಲಕ ಎರಡು ಸ್ಥಾನಗಳನ್ನು ಗೆದ್ದ ನಂತರ ಹೆಚ್ಚುವರಿ 26 ಮತಗಳನ್ನು ಹೊಂದಿದೆ. ಮೂರನೇ ಸ್ಥಾನ ಗೆಲ್ಲಲು 15 ಮತಗಳ ಅಗತ್ಯವಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ ಮೂರರಲ್ಲಿ ಸುಲಭವಾಗಿ ಗೆಲ್ಲಲಿದೆ ಎಂದು ಹೇಳಿದ್ದಾರೆ. |
ಬಿಜೆಪಿ ಬಹುಮತ ಇಲ್ಲದಿದ್ದರೂ ಸುಭಾಷ್ ಚಂದ್ರ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. |
ಆದರೆ ಬಿಜೆಪಿ ತನ್ನ ಅಕೃತ ಅಭ್ಯರ್ಥಿ ಘನಶ್ಯಾಮ್ ತಿವಾರಿ ಮತ್ತು ಸ್ವತಂತ್ರ ಅಭ್ಯರ್ಥಿ ಚಂದ್ರ ಇಬ್ಬರೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದೆ. |
"ಇಂಚು… ಯೂ ಆರ್ ವೆರಿ ಲಕ್ಕಿ": ಹೃದಯಕೆ ನವಿಲುಗರಿ ಸವರಿದ ಮನ್ಮಥ ! | Udayavani – ಉದಯವಾಣಿ |
Team Udayavani, Feb 14, 2021, 2:00 PM IST |
ಸ್ನೇಹವು ಪ್ರೀತಿಯಾಚೆ ಸೆಳೆದಾಗ ತುಂಟತನದೊಳಗೊಂದು ಪ್ರೀತಿ, ಕಾಳಜಿ, ಮಮತೆ ಹುಟ್ಟಿ ಆ ಪ್ರೀತಿಯೊಂದಿಗೆ ಹೆಜ್ಜೆ ಹಾಕಿದಾಗ ಬದುಕೇ ಸುಂದರವಾದಂತೆ. ಇಂತಹ ಪ್ರೀತಿಯು ನನ್ನ ಬಾಳಲ್ಲಿ ಅನುರಾಗ ತಂದ ಸಂಗಮಜ್ಯೋತಿ. ಹೀಗೆ ಪ್ರೀತಿಯ ಬಗ್ಗೆ ಬರೆಯುತ್ತಾ ಹೋದರೆ ಪದಪುಂಜಗಳಿಗೆ ಮಿತಿಯೇ ಇರುವುದಿಲ್ಲ. ಅವನನ್ನು ನೆನೆಸಿಕೊಂಡು ಪ್ರೀತಿ ಅಂತ ನಾನು ಬರೆಯಲು ಶುರು ಮಾಡಿದ ಮೇಲೆ ನನಗೆ ತಿಳಿದದ್ದು ಪ್ರೀತಿ ಅನ್ನೋದು ಎಷ್ಟೋ ಪವಿತ್ರವಾದ ಬಂಧನ. ಈ ಬಂಧನಕ್ಕೆ ನಾನು ಭಾವನೆಗಳ ಬಣ್ಣ ಹಚ್ಚುತ್ತಾ ಗೆಳೆಯನಿಗೆ ಪ್ರೀತಿಯಲ್ಲಿ ಪದಪುಂಜಗಳೊಂದಿಗೆ ನನ್ನ ಪ್ರೀತಿಯ ವರ್ಣಿಸುತ್ತಿರುವೆ. |
ನನ್ನೆಲ್ಲಾ ಭಾವನೆಗಳಿಗೆ ಬಣ್ಣ ಹಚ್ಚಲು, ಜೀವ ತುಂಬಲು ನೀ ಎಲ್ಲಿರುವೆಯೋ ಗೊತ್ತಿಲ್ಲ. ನಿನ್ನ ಬರುವಿಕೆಗಾಗಿ ನಾನು ಕಾಯುತ್ತಿರುವೆ, ನನ್ನ ಹಾಗೆ ನೀ ನನ್ನ ಬರುವಿಕೆಗೆ ಕಾಯುತ್ತಿರುವೆಯೇನೋ ನನಗೆ ಗೊತ್ತಿಲ್ಲ. ಆದರೆ ಪ್ರೀತಿಯ ಋಣ ಇದ್ರೆ ನೀನು ನನ್ನನ್ನು ಹುಡುಕಿಕೊಂಡು ಬಂದೆ ಬರುವೆ. ಪ್ರೀತಿ ಎಂಬ ತೇರಲ್ಲಿ ನನ್ನನ್ನು ನಿನ್ನ ಹೃದಯದರಸಿ ಮಾಡಿಕೊಂಡು ಹೃದಯವೆಂಬ ಊರಲ್ಲಿ ನನ್ನನ್ನು ಎತ್ತಿಕೊಂಡು ತಿರುಗುವೆ ಅನ್ನೋ ಬಲವಾದಂತಹ ನಂಬಿಕೆ. ಆದರೆ, ನೀ ಬಂದ ಮೇಲೆ ಇನ್ನೆಷ್ಟು ನನ್ನ ಪ್ರೀತಿಯ ಬರಹಗಳ ಸಂಖ್ಯೆ ಹೆಚ್ಚುವುದೋ ಹಾಗೆಯೇ ಆ ಪ್ರೀತಿಯ ಪುಂಜಗಳ ವರದಿಯ ಜನರು ಓದಿ ಅವರು ಪ್ರೀತಿಯಲ್ಲಿ ತೇಲಾಡುವರೋ ಎಂಬುವುದನ್ನು ಕಲ್ಪನೆ ಮಾಡಿದರೆ ನನಗೆ ಹರುಷವೆನಿಸುತ್ತದೆ. |
ಗೆಳೆಯ ಸುಮ್ಮನೇ ಹೇಗಿರಲಿ, ನಿನ್ನನ್ನೇ, ನೋಡುತ ಕುಳಿತುಕೊಳ್ಳಬೇಕೆಂದು ಈ ಮನ ಸದಾ ಗುನುಗುತ್ತಿದೆ. ನಿನ್ನ ನೋಡುವಾಗಲ್ಲೆಲ್ಲಾ, ನೆನಪಾದಗೆಲ್ಲಾ ಅದೇನೋ ಮಳೆಹನಿಯಲ್ಲಿ ನಾ ನೆನೆಯುತ್ತಿರುವಾಗ ನೀ ಬಳಿ ನನ್ನನ್ನು ಬಿಗಿದಪ್ಪಿಕೊಂಡಂತೆ, ನೋಡು ಗೆಳೆಯ ನಿನ್ನ ನೆನಪು ಎಲ್ಲೆಡೆ ಕಾಡುತ್ತೆ ಎಂದು ನಾನು ವಿವರಿಸುವೆ. ನೀ ಈ ಲೇಖನವನ್ನು ಓದಿ ಖುಷಿಪಡುವೆ ಎಂದು ಭಾವಿಸಿ ಗೀಚುವೆ. ಗುಲಾಬಿ ಹೂವನ್ನು ಮುಡಿಗೇರಿಸಿಕೊಳ್ಳುವಾಗ, ಕನ್ನಡಿ ಮುಂದೆ ನಿಂತು ಸೀರೆಯ ನೆರಿಗೆ ಸರಿಮಾಡಿಕೊಳ್ಳುವಾಗ, ಪ್ರೇಮಿಗಳು ಅವರವರ ಜೋಡಿಯೊಂದಿಗೆ ಕೈ ಹಿಡಿದುಕೊಂಡು ನಡೆದಾಗ, ದೇವಸ್ಥಾನದಿ ಕಣ್ಮುಚ್ಚಿ ಧ್ಯಾನಿಸುವಾಗ, ಮಕ್ಕಳೊಂದಿಗೆ ಕಣ್ಣ-ಮುಚ್ಚಾಲೆ ಆಡುವಾಗ ಹೀಗೆ, ಅದೆಷ್ಟೋ ಬಾರಿ ನಿನ್ನ ನೆನೆಸಿಕೊಂಡಾಗ ನನ್ನ ನಿಯತ್ತನ್ನೇ ಕೆಡಿಸಿ ಬಿಡುತ್ತದೆ. ನಿನ್ನ ಪ್ರೇಮ ಪಾಶದಿ ಸಿಹಿಯಾಗಿ ನರಳುವ ಬಡಪಾಯಿ ನಾನು. |
ಬರೀ ಫೋಟೋದಲ್ಲಿ ನೋಡುವಾಗ ನನಗೆ ಹತ್ತಿರದಿಂದ ನಿನ್ನ ನೋಡುವ ಸಮಯ ಬಂತು, ನವಿಲಿನ ನರ್ತನದಂತೆ ನಿನ್ನ ಸುಂದರ ನಗು, ಮೊಗವನ್ನು ವರ್ಣಿಸಲು ಸಾವಿರಾರು ಪದಗಳ ಪೋಣಿಸಿ ಬರೆದೆ, ಮತ್ತೆ ಬರೆದೆ, ಇನ್ನು ಬರೆಯುತ್ತಲೇ ಇದ್ದೇನೆ. ಬೆಟ್ಟದಷ್ಟು ಇರುವ ನಿನ್ನ ಪ್ರೀತಿಯನ್ನು ನೆನಪಿಸಿಕೊಳ್ಳುವಾಗ, ಮೆಸೆಜ್ ಮಾಡುವಾಗ, ಫೋನ್ ಕರೆಯಲ್ಲಿ ಮಾತನಾಡಿದಾಗ ಇದನ್ನೆಲ್ಲಾ ನೆನೆಸಿಕೊಂಡು ಪ್ರೀತಿಯ ಬಗ್ಗೆ ಬರೆಯುತ್ತಿರುವಾಗ ನನ್ನ ಲೇಖನಿಯು ಖುಷಿಯಾಗಿ ಕಣ್ಣು ಹೊಡೆದು, "ಇಂಚು… ಯೂ ಆರ್ ವೆರಿ ಲಕ್ಕಿ" ಎನ್ನುತ್ತದೆ. ಸಾವಿರ ಜನುಮ ಇರಲಿ,ಇರದಿರಲಿ ನಿನ್ನ ಪ್ರೀತಿಯ ಮೋಹಕೆ ಸೋತ ಈ ಜನುಮ ಮಾತ್ರ ನಿನಗಾಗಿ ಇರುತ್ತದೆ ನೋಡು. |
ಆದರೆ ನೀ ನನ್ನ ಎದೆ ಮೇಲೆ ಮಲಗಿ ನನ್ನ ಕಂಗಳಲ್ಲಿ ನಿನ್ನ ನೋಟ ಬೆರೆಸಿ ಪ್ರೀತಿಸುತ್ತಾ ಇರುವಾಗ ಒಂದಂತೂ ನಿಜ ಕಣೋ ನಿನ್ನ ಮೇಲಿನ ರಸಮಯ ಒಲವಿನ ಪ್ರೀತಿಯಲ್ಲಿ ಮಿಂದು ಮತಿ ಕಳೆದುಕೊಂಡ ಪ್ರೇಮಿಯ ಚಡಪಡಿಕೆ ಈ ನನ್ನ ಹೃದಯ ಭಾವನೆಯ ಪದ ಸಂಗಮ. ಈಗ ನೀನು ಹೇಳು ಗೆಳೆಯ… ಸುಮ್ಮನೆ ನಾ ಹೇಗಿರಲಿ, ನಿನ್ನನೆ ನಾ ನೋಡುತ ಕುಳಿತುಕೊಳ್ಳಲಿ. ಹೀಗೆ ನಿನ್ನ ಫೋಟೋ ನೋಡುತ್ತಾ ನನ್ನ ಕನಸಿನ ಲೋಕದಲ್ಲಿ ತೇಲುತ್ತಿರುವಾಗ ಹನಿ ಹನಿ ಮಳೆ ಬಂದಂತಾಯಿತು. ನೀನು ನಿನ್ನ ನೆನಪು ಮಳೆ ಎಲ್ಲವೂ ಸೇರಿ ನನ್ನನ್ನು ಇನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಿರಲು ಅದರೊಂದಿಗೆ ಖುಷಿಯಿಂದ ಕುಣಿದು ನಿನ್ನನ್ನೇ ತಬ್ಬಿ ಹಿಡಿದುಕೊಳ್ಳುವ ಬಯಕೆಯಲ್ಲಿ ಹಣೆಗೊಂದು ಮುತ್ತು ನೀಡುವ ಆಸೆಯಲ್ಲಿ ನಿನ್ನ ಬಳಿಗೆ ನಾ ಓಡೋಡಿ ಬರುತಿರಲು, ಮಳೆರಾಯನ ಆರ್ಭಟ ಜೋರಾಗಲು… ನನ್ನನ್ನೇ ನಾ ಮರೆತು ನಿನ್ನ ನೆನಪಲ್ಲೆ ಗೀಚುತ್ತಿರುವಾಗ ನಿದ್ದೆ ಬಂದು ಆ ನಿದ್ದೆಯಲ್ಲೂ ನೀ ಬಂದು ನನ್ನ ಕನಸನ್ನು ಕದಿಯುತ್ತಿರುವಾಗ….."ಸಾಕು ನಿಲ್ಸೆ ಹೊರಡು ನಿನ್ನ ಗೆಳೆಯ ಕಾಲೇಜಿನಲ್ಲಿ ನಿಂತು ಕಾಯುತ್ತಾ ಇರುತ್ತಾನೆ" ಎಂಬ ನನ್ನ ಗೆಳತಿಯ ಮಾತನ್ನು ಕೇಳಿ ಸವಿಗನಸಿನ ಸಿಹಿ ನಿದ್ದೆಯಿಂದ ಮೆಲ್ಲನೆದ್ದೆ ನಾನು. ನೋಡು ಗೆಳೆಯ ನೀ ಎಲ್ಲೇ ಇದ್ದರೂ ಬಳಿ ಬಂದು ನನ್ನ ಹೃದಯದೊಳಗೆ ಸೇರಿಕೊ ನಿನಗಾಗಿ ಕಾಯುತ್ತಿರುವಳು ಇಂಚು… |
ವೇದಿಕೆಯಲ್ಲಿ ಶಿಕ್ಷಕಿಗೆ ಮುತ್ತು ಕೊಟ್ಟ ಶಿಕ್ಷಕ – KANNADIGA WORLD |
Home ಕನ್ನಡ ವಾರ್ತೆಗಳು ರಾಷ್ಟ್ರೀಯ ವೇದಿಕೆಯಲ್ಲಿ ಶಿಕ್ಷಕಿಗೆ ಮುತ್ತು ಕೊಟ್ಟ ಶಿಕ್ಷಕ |
ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೌಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತ್ತಿದ್ದ ಶಿಕ್ಷಕನೋರ್ವ ತನ್ನ ಪಕ್ಕದಲ್ಲಿದ್ದ ಶಿಕ್ಷಕಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ವಿದ್ಯಾರ್ಥಿಗಳ ಎದುರೇ ಶಿಕ್ಷಕಿಗೆ ಶಿಕ್ಷಕ ಮುತ್ತಿಟ್ಟ ದೃಶ್ಯವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. |
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ರಾಜಸ್ಥಾನದ ಶಿಕ್ಷಣ ಸಚಿವರನ್ನು ಪ್ರಶ್ನಿಸಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುರ್ವರ್ತನೆ ತೋರಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವರು ತಲೆಕೆಡಿಸಿಕೊಂಡಿಲ್ಲ. ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. |
Subsets and Splits
No community queries yet
The top public SQL queries from the community will appear here once available.