text
stringlengths
0
61.5k
• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.
• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.
• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ಸ್ವತ: ನಾವೇ ಆಗಿರುತ್ತೇವೆ.
• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.
• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?
• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.
• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವುದೇ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.
• ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಾಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದನ್ನೆಲ್ಲವನ್ನೂ ಸ್ವೀಕರಿಸಿ.
• ಇತರರಿಗೆ ಸ್ವಾತ್ಯಂತ್ರ್ಯವನ್ನು ಕೊಡಲು ಇಚ್ಚಿಸದವನು ಸ್ವಾತ್ಯಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ.
• ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳೂ ಬಿದ್ದುಹೊಗುತ್ತವೆ.
• ಮಹಾಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.
• ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ.
• ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.
• ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವ ಪ್ರಯೋಜನಕ್ಕೂ ಬಾರದು.
• ನೀವು ಆಧ್ಯಾತ್ಮೀಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಳ್ಳಿ;
• ಅವಿದ್ಯಾವಂತರಿಗೆ ಬೆಳಕು ತನ್ನಿ, ವಿದ್ಯಾವಂತರಿಗೆ ಹೆಚ್ಚು ಬೆಳಕು ತನ್ನಿ. ಏಕೆಂದರೆ ವಿದ್ಯಾಮಧ ಇಂದು ಹೆಚ್ಚು ಭಯಂಕರವಾಗಿದೆ.
"ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಭೋಧತ" - ಎಚ್ಚರಗೊಳ್ಳಿ, ಜಾಗೃತರಾಗಿ, ಎಲ್ಲಕ್ಕಿಂತ ಮಹತ್ವವಾದುದಕ್ಕೆ ನಿಮ್ಮನ್ನು ಅನುವುಗೊಳಿಸಿಕೊಳ್ಳಿ.
ಸ್ವಾಮಿ ವಿವೇಕಾನಂದರ ದಿವ್ಯಚರಣಗಳಿಗೆ ಸಾಷ್ಟಾಂಗ ನಮನಗಳು
ಭೂಕಾಲ/ದೇಹಕಾಲ (Earth time/Body-time) ಎಂದರೆ ನಾವು ಈ ಭೂಮಿಯ ಮೇಲೆ ಮಾನವ ಶರೀರವನ್ನು ಪಡೆದು ಕಳೆಯುವ ಸಮಯ. ಈ ಸಮಯದಲ್ಲಿ ನಾವು ಸ್ವಚ್ಛವಲ್ಲದ, ಸ್ಪಷ್ಟವಲ್ಲದ, ಮಸುಕಾದ ಅನುಭವಗಳನ್ನು ಪಡೆಯುತ್ತೇವೆ. ನಮ್ಮ ನೈಜಸ್ವಭಾವವನ್ನು ನಾವು ಮರೆತುಬಿಡುತ್ತೇವೆ. ಇದೆಲ್ಲವು ಕೇವಲ ಲೋಕದಾಟದಲ್ಲಿ ಪುಳಕಿತಗೊಳ್ಳುವಂಥ ಅನುಭವಕ್ಕಾಗಿಯೇ ಮಾಡುತ್ತೇವೆ.
ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಶಾಕ್; ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಘೋಷಣೆ – ಮೈಸೂರು ಟುಡೆ
Home/ ಪ್ರಮುಖ ಸುದ್ದಿ/ ಕರ್ನಾಟಕ/ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಶಾಕ್; ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಘೋಷಣೆ
ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಶಾಕ್; ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಘೋಷಣೆ
CT BUREAU March 5, 2020
ಬೆಂಗಳೂರು,ಮಾ.5-ಈ ಬಾರಿಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ.
ರಾಜ್ಯದ ಅಬಕಾರಿ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಿಸಲಾಗಿದೆ. ಅಬಕಾರಿ ಇಲಾಖೆಗೆ 22,700 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆಯ ಗುರಿ ನೀಡಲಾಗಿದೆ. ಅಂದರೆ, ರಾಜ್ಯದಲ್ಲಿ ಮದ್ಯದ ದರದಲ್ಲಿ ಶೇ.6ರಷ್ಟು ಏರಿಕೆಯಾಗಲಿದೆ ಎಂದರು.
ಈ ಮೊದಲೇ ರಾಜ್ಯ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಲಿರುವ ಕುರಿತು ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಈಗ ಅಬಕಾರಿ ಸುಂಕ ಏರಿಸಲಾಗಿದ್ದು, ಏಪ್ರಿಲ್‌ 1 ರಿಂದಲೇ ಜಾರಿಗೆ ಬರಲಿದೆ.
ಬಿಎಸ್‌ವೈ ಸರ್ಕಾರ ಅಬಕಾರಿ ಸುಂಕದಲ್ಲಿ ಶೇ.10 ಹೆಚ್ಚಳ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ತೆರಿಗೆ ಸಂಗ್ರಹದ ಟಾರ್ಗೆಟ್‌ ಹೆಚ್ಚಿಸಲಾಗಿದೆ. ಒಟ್ಟಾರೆ, ಮದ್ಯದ ಬೆಲೆಯಲ್ಲಿ ಈಗಿರುವ ಬೆಲೆಗಿಂತ ಶೇ. 6ರಷ್ಟು ಹೆಚ್ಚಾಗಲಿದೆ.
ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ: ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕಾಗಿ 1.5 ಕೋಟಿ ರೂ. ವೆಚ್ಚದಲ್ಲಿ `ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ'ಜಾರಿಗೆ ಘೋಷಣೆ ಮಾಡಲಾಗಿದೆ. ಅಲ್ಲದೆ ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿಯೂ ಕೆಲವೊಂದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೀನುಗಾರರಿಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಪ್ರಮುಖ ಅನುದಾನಗಳು ಹಾಗೂ ಯೋಜನೆಗಳ ವಿವರ ಇಲ್ಲಿದೆ.
`ಮಹಿಳಾ ಮೀನುಗಾರರ ಸಬಲೀಕರಣ' ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ. ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾ...
ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು...
ಮಕ್ಕಳ ಬ್ಯಾಗ್ ಹೊರೆ ತಪ್ಪಿಸಲು ಕ್ರಮ: ಇದೇ ಮೊದಲ ಬಾರಿಗೆ ಮಕ್ಕಳ ಬಜೆಟ್‌ ಮಂಡನೆ ಮಾಡಲಾಗಿದೆ. ಬಜೆಟ್ ನಲ್ಲಿ ಮಕ್ಕಳಿಗೂ ಆದ್ಯತೆ ನೀಡಿ ಪ್ರತಿ ತಿಂಗಳ ಎರಡು ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ ಎಂಬ ಹೊಸ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಶಾಲಾ ಮಕ್ಕಳ ಬ್ಯಾಗ್‌ ಹೊರೆಯನ್ನು ತಪ್ಪಿಸಲು ರಾಜ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಯೋಜನೆಗೆ ಆದ್ಯತೆ ನೀಡಿದ್ದರು. ಇದಕ್ಕೆ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿ ಶನಿವಾರ ಬ್ಯಾಗ್‌ ರಹಿತ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರತಿ ತಿಂಗಳ ಎರಡು ಶನಿವಾರ ಸಂಭ್ರಮ ಶನಿವ...
ಪುಸ್ತಕಗಳ ಬದಲು ಶನಿವಾರ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಇಲಾಖೆ ರೂಪಿಸಿರುವ ಮಾರ್ಗಸೂಚಿಯನ್ವಯ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಿಂದ ಬ್ಯಾಗ್‌ ಹೊರೆ ತಪ್ಪುವ ಜತೆಗೆ ಮಕ್ಕಳಲ್ಲಿ ಪಠ್ಯದ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಯ ಮಹತ್ವದ ಅರಿವು ಮೂಡಿಸಲಾಗುತ್ತದೆ. ಅಲ್ಲದೆ, ಮಕ್ಕಳ ಹಾಜರಾತಿಯೂ ಹೆಚ್ಚಾ...
ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು...! | Readoo Kannada | ರೀಡೂ ಕನ್ನಡ
ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ ಮೊದಲು ಒಂದಿನ ಬೇಕಾಯಿತು....
ವಾರದ ನಂತರವೂ ಅಂಥಾ ದೊಡ್ಡ ಮಟ್ಟದ ಯಾವ ತೊಂದರೆಯೂ ದೇಶದ ಯಾವ ಭಾಗದಲ್ಲೂ ಆಗಿಯೇ ಇಲ್ಲ. ಇವತ್ತಿಗೂ ಬೆಂಗಳೂರು, ಮೈಸೂರು, ಬೆಳಗಾಂವಿ, ಹುಬ್ಬಳ್ಳಿ ಹೀಗೆ ಜನ ಬಾಹುಳ್ಯ ಇರುವ ಪ್ರದೇಶದಲ್ಲಿ, ನಿಗದಿತ ಮಿತಿಗಿಂತ ಹೆಚ್ಚು ಹಣ ಜೋಬಲ್ಲಿ ಇಟ್ಟುಕೊಂಡು ಓಡಾಡುವ ಕಲ್ಚರ್ ಪ್ರದೇಶದಲ್ಲೇ ಸ್ವಲ್ಪ ಹುಂಯ್ಯೋ ಹುಂಯ್ಯೋ ಎನಿಸಿದ್ದು ಹೌದು. ಅದರೆ ಅದು ಅನಗತ್ಯದ ವೆಚ್ಚಕ್ಕಾಗಿ ಬೇಕಿರುವ ಹಣವಾಗಿತ್ತು. ಅವರೂ ಎರಡ...
ಸೈಕಲ್ ತುಳಿಯುವವ, ಆಟೊ ಡ್ರೈವರು, ಪೆಟ್ರೋಲ್ ಬಂಕ್‍ ಹುಡುಗ, ಪೇಪರ್ ಬಾಯ್, ಹಾಲಿನ ನಾರಾಯ್ಣ, ಸರಕು ಸಾಗಾಟದ ಮಾದೇವ, ಮೋಟರ್ ಸೈಕಲ್ ಅಂಗಡಿ ಬಷೀರ್, ಹೂವಿನ ಸುಶೀಲಾ, ಟೀ ಸ್ಟಾಲ್ ಮಲೆಯಾಳಿ ನಾಯರ್ರು, ಬಸ್ ಸ್ಟ್ಯಾಂಡ್ ಅಂಗಡಿ ಪೀಟರು, ಟೈಲರ್ ಅಂಬಿಕಾ, ದಕ್ಷಿಣೆಯಿಂದಲೇ ಬದುಕು ತೆಗೆಯುವ ಭಟ್ಟರು, ಚಿಕನ್ ಅಂಗಡಿ ಲಿಂಗರಾಜು, ಜ್ಯೋತಿಷಿ ಹೆಗಡೆರು, ಬುಕ್‍ಶಾಪ್ ಸುಬ್ರಮಣ್ಯ, ನಾಟಕದ ನಂದಿನಿ ಕೊನೆಗೆ...
ಸಾಮಾಜಿಕ ಕಾಳಜಿ ಮತ್ತು ದೇಶದ ಬಗೆಗಿನ ಕಿಂಚಿತ್ತಾದರೂ ಸಂವೇದನೆ ಎನ್ನುವುದನ್ನೇ ಮಾಧ್ಯಮಗಳಲ್ಲಿ ಕಳೆದು ಹೋಗಿದೆ ಎನ್ನಿಸುತ್ತಿಲ್ಲವೇ..? ಜನ ಸಾಮಾನ್ಯರು ಹೇಗೆಲ್ಲಾ ಸಮಸ್ಯೆಯನ್ನು ನಿಭಾಯಿಸಬಹುದು, ಎಲ್ಲೆಲ್ಲಿ ಹೇಗೆ ಬ್ಯಾಂಕ್‍ನವರು ಕೆಲಸ ನಿರ್ವಹಿಸಿ ಹಣ ವಹಿವಾಟು ನೇರ್ಪುಗೊಳಿಸುತ್ತಿದ್ದಾರೆ, ಹೇಗೆ ಮಾಡಿದರೆ ಜನ ಸಾಮಾನ್ಯರ ಮತ್ತು ಅಕೌಂಟು ಇಲ್ಲದವರ ಸಮಸ್ಯೆ ಸರಿಹೋಗುತ್ತದೆ, ಯಾವ್ಯಾವ ಜಾಗದಲ್ಲ...
ಆದರೆ ಅತಿ ರಂಜನೀಯ ಸುದ್ದಿಗಾಗಿ ಮೀಡಿಯಾಗಳು ಮಾಡುವ ಕರಾಳ ಮುಖ ದಿನವೂ ಜಾಹೀರಾಗತೊಡಗಿದೆ ನೋಡಿ. ಇವರೆಲ್ಲ ಬರೆಯುತ್ತಿರುವುದು ಮತ್ತು ಅತಿ ಹೆಚ್ಚು ಬಾರಿ ತೋರಿಸಿದ್ದು, ಈಗಲೂ ತೋರಿಸುತ್ತಿರುವುದು, ಜನ ಸರತಿ ಸಾಲಿನಲ್ಲಿ ಕಷ್ಟಪಡುತ್ತಿದ್ದಾರೆ, ದುಡ್ಡು ಸಿಗುತ್ತಿಲ್ಲ, ಜನರ ಪರಿಸ್ಥಿತಿ ಗಂಭೀರವಾಗಿದೆ, ಸರಕಾರ ಸರಿಯಾದ ತಯಾರಿ ಮಾಡಿಕೊಂಡಿಲ್ಲ, ರಾಜಕೀಯ ನಾಯಕನೊಬ್ಬ ಸರದಿ ಸಾಲಿನಲ್ಲಿ ನಿಂತು ಬೆವರೊ...
ತೀರ ತಾವೇ ಪ್ರಪಂಚದ ಸರ್ವ ಮಾಹಿತಿಯ ಭಂಡಾರದ ಅಂತಿಮ ವಿಶ್ಲೇಷಕರು ಎಂದು ಚರ್ಚೆಯ ಮಧ್ಯೆ ಮಧ್ಯೆ ಊಳಿಡುತ್ತಾ ಕೂಡುವ ಚಾನೆಲ್ ಸುದ್ದಿ ಸಂಪಾದಕರುಗಳೇ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿಕೊಂಡಿರುವ ನನಗೇ, ಈ ಪರಿಸ್ಥಿತಿಯ ಕಾರಣ ಭವಿಷ್ಯತ್ತಿನಲ್ಲಿ ಗಣನೀಯವಾಗಿ ಬೆಲೆ ಇಳಿಕೆ ಸೇರಿದಂತೆ ದೇಶಾದ್ಯಂತದ ಆರ್ಥಿಕ ಪ್ರಗತಿ ದುಪ್ಪಟ್ಟಾಗುತ್ತದೆ ಎನ್ನುವ ಸಣ್ಣ ಅಂದಾಜು ದಕ್ಕುವಾಗ ಮೇಧಾವಿಗಳಿಗೆಲ್...
(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಅವನ ಕುಟುಂಬ ಕೊನೆಯ ಕ್ಷಣದಲ್ಲಿ ಏನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸ...
ಕನಿಷ್ಟ ಸುಪ್ರಿಂಕೋರ್ಟಿನ ಆದೇಶ ಮತ್ತು ಆಶಯವನ್ನಾದರೂ ರಿಪೀಟೆಡ್ಲಿ ತೋರಿಸಿ ಕಾನೂನಿನ ದೃಷ್ಟಿಯಲ್ಲೂ ಇದು ಸರಿಯಾದ ನಿರ್ಧರವೇ ಎನ್ನುವ ಧನಾತ್ಮಕ ಧೋರಣೆ ಬಿತ್ತರಿಸಿ ಸಾಲಿನಲ್ಲಿ ನಿಲ್ಲುತ್ತಿರುವವರ ಮತ್ತು ಕ್ರಮೇಣ ಸಹನೆ ಕಳೆದುಕೊಳ್ಳುವ ಸಿಡುಕರ ಮನಸ್ಸಿಗೆ ಮುದ ಒದಗಿಸಬಹುದಿತ್ತು. ಆದರೇನು ಅಂಥಾ ಯಾವ ಪ್ರಯತ್ನಗಳೂ ಮೀಡಿಯಾಗಳಿಂದ ಆಗುತ್ತಲೇ ಇಲ್ಲ. ನಟಿಯೊಬ್ಬಳ ರಂಕುಗಳಿಗೆ ದಿನವಿಡೀ ಸಮಯ ಕೊಡುವ ಚ...
ಇತ್ತ ಪತ್ರಿಕೆಗಳೂ ನಂ.1 ಎನ್ನುವ ಪೈಪೋಟಿಗೆ ಬೀಳುತ್ತಿರುವುದನ್ನು ಹೊರತಾಗಿಸಿದರೆ ಯಾವ ರೀತಿಯಲ್ಲೂ ಧನಾತ್ಮಕ ವರದಿಯ ಮುಖಗಳು ಎದ್ದು ಕಾಣುತ್ತಲೇ ಇಲ್ಲ. ಅದರಲ್ಲೂ ಇವತ್ತು ಐದಾರು ಲಕ್ಷದ ಆಸುಪಾಸಿನಲ್ಲಿರುವ ಪ್ರಸಾರಕ್ಕೆ ಕನಿಷ್ಟ ಇಬ್ಬರಂತೆ ಹಿಡಿದರೂ ಹತ್ತು ಲಕ್ಷ ಓದುಗರಿರುತ್ತಾರೆ. ಹಾಗಿದ್ದಾಗ ದಿನವೂ "… ಬ್ಯಾಂಕಿನ್ ಮುಂದೆ ತಪ್ಪದ ಸಾಲು, ಖಾಲಿಯಾದ ಏ.ಟಿ.ಎಮ್., ಎಲ್ಲೊ ದೊರೆಯುತ್ತಿಲ್ಲ ಹಣ, ...
ತೀರ ಬೆರಳೆಣಿಕೆಯ ನಗರ ಹೊರತು ಪಡಿಸಿದರೆ ಎಲ್ಲೂ ಅನಾಮತ್ತು ಎರಡ್ಮೂರು ಗಂಟೆ ಕ್ಯೂ ನಿಂತಿದ್ದ ಉದಾ ಇಲ್ಲವೇ ಇಲ್ಲ. ಅದರಲ್ಲೂ ಬೆಂಗಳೂರು,ಮೈಸೂರು,ಹುಬ್ಬಳ್ಳಿ,ಮಂಗಳೂರು ಮಾತ್ರವೇನಾ ಕರ್ನಾಟಕ ಎಂದರೆ ಎನ್ನುವುದನ್ನು ವಾಹಿನಿಗಳು ಮೊದಲು ಪ್ರಶ್ನಿಸಿಕೊಳ್ಳಬೇಕು. ನೆನಪಿರಲಿ ಅದು ಮುದ್ರಣ ಮಾಧ್ಯಮವೋ, ಚಾನೆಲ್‍ನ ಪ್ರಸಾರವೋ ಎರಡೂ ಕಡೆಯಲ್ಲಿ ಸಂಪಾದಕನ ತೀರ್ಮಾನ ಅಂತಿಮವಾಗುತ್ತದಾದರೂ, ಸ್ವಂತದ ಅಭಿಪ್ರಾ...
ಹಾಗೇಯೆ ಪ್ರತಿಯೊಬ್ಬ ಪರ – ವಿರೋಧ ಅಬ್ಬರದ ಚರ್ಚೆ ಜತೆಗೆ ಪೇಡ್ ಪುಟನಿರ್ವಾಹಕರ ಅಕ್ಷರ ಹಾದರತನವೂ ಇಂತಹ ಸಂದರ್ಭದಲ್ಲಿ ಬೇತ್ತಲಾಗುತ್ತಲೇ ಇರುತ್ತದೆ. ಕಾರಣ ಎನೇ ಇವತ್ತು ಪ್ರಧಾನಿ ಕಾರ್ಯಾಲಯ ಕೆಲಸ ಮಾಡುತ್ತಿದೆ ಮತ್ತದು ಈ ದೇಶದ ಪ್ರಗತಿಗೆ ಕಟಿಬದ್ಧವಾಗಿದೆ ಎನ್ನುವುದನ್ನು ಪಬ್ಲಿಕಾಗಿ ಮಾಡುತ್ತಿದ್ದರೂ ಅದು ಗಂಜಿ ಗಿರಾಕಿಗಳಿಗೆ ಪಥ್ಯವಾಗುವುದಿಲ್ಲ ಅವರೆಂದಿಗೂ ಗಂಜಲದಲ್ಲಿ ಬಿದ್ದ ನೊಣಗಳಂತೆ ಪತ...
ಬರೀ ಟಿ.ಆರ್.ಪಿ. ಮಾತ್ರ ನಿಮ್ಮ ಉಸಿರಾ..? ನೆನಪಿರಲಿ. ಪುಟಗೋಸಿ ನೂರೈವತ್ತು ಕ್ಯಾಮೆರಾ ಪಾಯಿಂಟುಗಳು ಜನಾಭಿಪ್ರಾಯವನ್ನು ನಿರ್ಧರಿಸಲಾರವು. ಹಾಗಾಗೇ ಅಧ್ಬುತ ಪ್ರೊಗ್ರಾಂ ಆಗಬಹುದೆಂದು ಏಣಿಸಿದ ಕಾನ್ಸೆಪ್ಟುಗಳು ಅಷ್ಟೆ ಬೇಗ ಮಕಾಡೆ ಮಲಗಿದ ಉದಾ. ಗಳು ಎದುರಿಗಿವೆ.
ಏನೇ ಇರಲಿ. ಜನರು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಬರುವುದನ್ನು ಸುಲಭಕ್ಕೆ ನಂಬುವ ಪರಿಸ್ಥಿತಿ ಇರುವಾಗ ಕನಿಷ್ಟ ಜರೂರತ್ತಿನ ಸಮಯದಲ್ಲಾದರೂ ಅತಿಮಾನುಷ, ಅತಿ ರಂಜನೀಯ ಸುದ್ದಿಗಳ ಹಸಿವು ಕಡಿಮೆ ಮಾಡಿಕೊಳ್ಳಿ. ಆಫ್ಟರ್‍ಆಲ್ ನೀವೆಲ್ಲರೂ ಈ ದೇಶಕಾಯುವ ಅಥವಾ ನಿರ್ಧಾರ ರೂಪಿಸುವಂತಹ ಎರಡೂ ಆಯಕಟ್ಟಿನ ಜಾಗದಲ್ಲೂ ಇಲ್ಲ. ನೀವೇನಿದ್ದರೂ ಬರೀ ಚಿತ್ರಣ ಕೊಡುವ ಮಂದಿ. ಈಗಾಗಲೇ ಸಾರ್ವಜನಿಕರಿಗೆ ನಿಮ್ಮ ಹಣೆಬರಹ...
ಜನರು ಹಿಂದೆಯೂ ಆಧಾರ ಕಾರ್ಡಿಗೆ, ರೇಶನ್ನಿಗೆ, ಪಂಚಾಯತ್ ಸೌಲಭ್ಯಕ್ಕೆ, ಪಹಣಿ ಪತ್ರಕ್ಕೆ, ರೇಲ್ವೆ ಟಿಕೇಟ್ಟಿಗೆ (ತತ್ಕಾಲಗಾಗಿ ಬೆಳಿಗ್ಗೆ ಐದಕ್ಕೆ ಸರದಿ ಹಿಡಿಯುವವರೂ ಇವತ್ತಿಗೂ ಇದ್ದಾರೆ) ಹೀಗೆ ಸತತವಾಗಿ ಬದುಕಿನಲ್ಲಿ ಆಗಾಗ ಸರದಿ ಕಾಯುತ್ತಲೇ ಇದ್ದಾರೆ. ನೆನಪಿರಲಿ ವೈದ್ಯರೊಬ್ಬರ ಭೇಟಿಗೆ ದಿನವೂ ಕನಿಷ್ಟ ನಾಲ್ಕೈದು ಗಂಟೆಯೂ ಕಾಯಬೇಕಾಗುತ್ತದೆ. ಮುಂದೂ ಕಾಯುತ್ತಾರೆ ಇದರಲ್ಲಿ ಡೌಟೇ ಇಲ್ಲ. ಆದರೆ...
ಸರತಿ ಸಾಲಿನಲ್ಲಿ ನಿಂತು ಸತ್ತದ್ದೇ ದೊಡ್ಡ ಸುದ್ದಿ ಮಾಡಿದ ಮಾಧ್ಯಮಗಳು, ನಂತರದಲ್ಲಿ ಅದಾಗಿದ್ದು ಸಹಜ ಸಾವು ಎನ್ನುವ ಫ್ಯಾಕ್ಟ್‍ನ್ನು ಬಿತ್ತರಿಸುವುದೇ ಇಲ್ಲವಲ್ಲ. ಏನಾಗಿದೆ ನಿಮಗೆ ಧಾಡಿ..? ಪಿಂಕ್ ನೋಟಿನ ಕಲರ್ರು ತುಟಿಗೆ ಸಖತ್ತಾಗಿದೆ ಎನ್ನುವುದೇ ಪ್ರಮುಖ ಸುದ್ದಿಯಾ ಅಥವಾ ನೋಟು ಒರಿಜಿನಲ್, ಅದರಲ್ಲಿ ಮೋದಿ ಆಪ್ ಮೂಲಕ ಒರಿಜಿನಾಲಿಟಿ ನೋಡಬಹುದು ಎನ್ನುವುದನ್ನು ಪ್ರಮುಖ ಸರಕಾಗಿಸಬೇಕಾ..?
ಈ ಬ್ಯಾನ್ ಮೂಲಕ ದೊಡ್ಡ ಮಟ್ಟದ ಭ್ರಷ್ಠಾಚಾರ ತಡೆಯಲಾಗುತ್ತಿದೆ ಇದಕ್ಕಾಗಿ ನಾವು ಏನು ಮಾಡಬೇಕು..? ದೇಶದ ಕೊನೆಯ ವ್ಯಕ್ತಿಯವರೆಗೂ ಇದರ ಪ್ರಕ್ರಿಯೆ ಹೇಗೆ ತಲುಪಬೇಕು ಮತ್ತು ಇದನ್ನು ಸರಿದೂಗಿಸಲು ಬ್ಯಾಂಕು ಹೇಗೆ ತತಕ್ಷಣಕ್ಕೆ ಚುರುಕಾಗಿ ಕೆಲಸ ನಿರ್ವಹಿಸದರೆ ಇನ್ನೂ ಅನುಕೂಲವಾದೀತು ಎನ್ನುವುದನ್ನು ಚಿಂತಿಸಿ ತರ್ಕಿಸಿ ಜನರ ಬಳಿಗೆ ಮಾಹಿತಿ ಕೊಡಬೇಕಿದ್ದವರೆಲ್ಲರೂ, ಇಲ್ಲ ಇದನ್ನು ಮೊದಲೇ ಹೇಳಿ ಮಾಡಬ...
"ಪರಿಸರ ಮಿತ್ರ ಶಾಲೆ" ಪ್ರಶಸ್ತಿ ಸ್ಪರ್ಧೆ : ನ.15ರೊಳಗೆ ಸಂಪರ್ಕಿಸಲು ಸೂಚನೆ – ಮೈಸೂರು ಟುಡೆ
Home/ ನಮ್ಮೂರು/ ಮೈಸೂರು/"ಪರಿಸರ ಮಿತ್ರ ಶಾಲೆ" ಪ್ರಶಸ್ತಿ ಸ್ಪರ್ಧೆ : ನ.15ರೊಳಗೆ ಸಂಪರ್ಕಿಸಲು ಸೂಚನೆ
"ಪರಿಸರ ಮಿತ್ರ ಶಾಲೆ" ಪ್ರಶಸ್ತಿ ಸ್ಪರ್ಧೆ : ನ.15ರೊಳಗೆ ಸಂಪರ್ಕಿಸಲು ಸೂಚನೆ
CTBUREAU_NB November 7, 2017
ಮೈಸೂರು (ನ.7): ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ "ಪರಿಸರ ಮಿತ್ರ ಶಾಲೆ" ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ಫರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಯಲ್ಲಿ ಆಯ್ದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ಸೇರಿ ತಮ್ಮ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವ-ಮೌಲ್ಯಮಾಪನ ಮಾಡಿ ಪರಿಸರ ನಿರ್ವಹಣೆಯಲ್ಲಿ ಸ್ಪರ್ಧಾತ್ಮಕ ಪ್ರಗತಿ ಹೊಂದಿದ್ದೆವೆಯೇ ಎಂದು ನಿರ್ಣಯಿಸಿ ನಿಗದಿತ ಪ್ರಶ್ನಾವಳಿಯಲ್ಲಿ ಪ್ರಯತ್ನ ಮತ್ತು ಸಾಧನೆಗಳನ್ನು ವಿವರಿಸಬೇಕಾಗುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಗಳ ಮುಖ್ಯಾಧ್ಯಾಪಕರು ನ.15ರೊಳಗಾಗಿ ದೂರವಾಣಿ, ಎಸ್‍ಎಮ್‍ಎಸ್, ಪೋಸ್ಸ್ ಕಾರ್ಡ್ ಮೂಲಕ ಹೆಸರನ್ನು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರಲ್ಲಿ ನೊಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡ ಇಬ್ಬರು ಶಿಕ್ಷಕರಿಗೆ ನವಂಬರ್ 30 ರ ಒಳಗಾಗಿ ತರಬೇತಿ ನೀಡಿ ಪ್ರಶ್ನಾವಳಿಯನ್ನು ಹಂಚಲಾಗುವುದು.
ಶಾಲೆಗಳಿಂದ ಸ್ವ-ಮೌಲ್ಯಮಾಪನ ಮಾಹಿತಿ ತುಂಬಿದ ಪ್ರಶ್ನಾವಳಿಯನ್ನು ಡಿ.30 ರ ಒಳಗೆ ಮರಳಿ ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ – ಮೈಸೂರು ಇವರಿಗೆ ನೀಡಬೇಕು. ಮೌಲ್ಯಮಾಪಕರನ್ನು ಆಯ್ದ ಮೌಲ್ಯಮಾಪನ ಮಾಡಿ 30 ಶಾಲೆಗಳ ವಿವರವನ್ನು ಜ.10ರಂದು ಸಿದ್ಧಪಡಿಸಲಾಗುವದು. ಆಯ್ದ ಶಾಲೆಗಳಿಗೆ ಮೌಲ್ಯಮಾಪನ ಮಾಡಿದ ಪರಿಣಿತರು ಭೇಟಿ ನೀಡಿ 21 ಶಾಲೆಗಳನ್ನು ಪ್ರಶಸ್ತಿಗಾಗಿ ಜನವರಿ 20 ರಂದು ಆಯ್ಕೆ ಮಾಡುವರು. ಮ...
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೊದಲ ಜಿಲ್ಲಾ ಮಟ್ಟದ "ಪರಿಸರ ಮಿತ್ರ ಶಾಲೆ"ಗೆ 30 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. 2 ರಿಂದ 11ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ತಲಾ ರೂ. 5 ಸಾವಿರ, 12 ರಿಂದ 21ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ತಲಾ ರೂ. 4 ಸಾವಿರ ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಪರಿಸರ ಅಧಿಕಾರಿ, ಪ್ರಾದೇಶಿಕ ಕಛೇರಿ –1, ಮೈಸೂರು (ನಗರ), # 436 – ಡಿ, ಹೆಬ್ಬಾಳ್ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್. ರಸ್ತೆ, ಮೇಟಗಳ್ಳಿ, ಮೈಸೂರು – 570 016. ದೂರವಾಣಿ ಸಂಖ್ಯೆ: 0821-2519411, ಮೊಬೈಲ್ ಸಂಖ್ಯೆ: 9844972002 ಮತ್ತು ಕಾರ್ಯನಿರ್ವಹಕ ನಿರ್ದೇಶಕರು, ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ನಂ. 29, 11 ನೇ ಕ್ರಾಸ್ 1 ನೇ ಮುಖ್ಯ ರಸ್ತೆ, ಬಿ.ಎಂ.ಶ್...
ಸ್ಮಾರ್ಟ್‌ಫೋನಿನಲ್ಲಿ ಡಿಎಸ್‌ಎಲ್ಆರ್ ರೀತಿಯ ಫೋಟೋ ಕ್ಲಿಕ್ಕಿಸುವುದು ಹೇಗೆ? -Gizbot-Latest-Kannada-WSFDV
Gizbot | 16th Mar, 2019 01:24 PM
1. ಪೋರ್ಟ್ರೈಟ್ ಇಮೇಜ್‌ಗಳು
ನಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚಿನವರು ಫೋಟೋ ಕ್ಲಿಕ್ಕಿಸುವ ಒಂದು ಸಾಮಾನ್ಯ ವಿಧಾನವೆಂದರೆ ಅದು ಪೋರ್ಟ್ರೈಟ್ ಮೋಡ್ ಆಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಈ ಫೋಟೋಗಳು ಚೆನ್ನಾಗಿ ಬಂದಿಲ್ಲ ಅಂತ ಡಿಲೀಟ್ ಮಾಡುವುದೇ ಆಗಿರುತ್ತದೆ. ಆದರೆ ಹೀಗೆ ಪೋರ್ಟ್ರೈಟ್ ನಲ್ಲಿ ಛಾಯಾಚಿತ್ರ ತೆಗೆಯುವಾಗ ನಾವು ಕೆಲವು ಅಂಶಗಳ ಬಗ್ಗೆ ಗಮನ ಹರಿಸಿದರೆ ಉತ್ತಮ ಫೋಟೋಗಳನ್ನು ಪಡೆಯಬಹುದು.
a ಬೆಳಕಿನ ಮೂಲದ ಬಗ್ಗೆ ತಿಳಿಯಿರಿ
ಪೊಟ್ರೈಟ್ ಫೋಟೋಗಳನ್ನು ಕ್ಲಿಕ್ಕಿಸುವಾಗ ಬೆಳಕಿನ ಮೂಲವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಯಾವಾಗಲೂ ಫೋಟೋ ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತು ಅಥವಾ ವ್ಯಕ್ತಿಯ ಮೇಲೆ ಬೆಳಕಿನ ಕಿರಣಗಳು ನೇರವಾಗಿ ಮುಖಕ್ಕೆ ಬೀಳುವಂತಿದ್ದರೆ ಆಗ ಉತ್ತಮ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತದೆ ಅಥವಾ ವಸ್ತುವನ್ನು ಬೆಳಕಿನ ಮೂಲದ ಬದಿಯಲ್ಲಿ ಇರುವಂತೆ ನೋಡಿಕೊಂಡರೂ ಕೂಡ ಆರ್ಟಿಸ್ಟಿಕ್ ಆಗಿರುವ ಚಿತ್ರವನ...
b ಮುಖದ ಅಕ್ಕಪಕ್ಕ, ತಲೆಯ ಮೇಲ್ಬಾಗದಲ್ಲಿ ಸ್ವಲ್ಪ ಜಾಗ ಬಿಡಿ.
ಯಾವುದೇ ವಸ್ತು ಅಥವಾ ವ್ಯಕ್ತಿಯ ಫೋಟೋ ಕ್ಲಿಕ್ಕಿಸುವಾಗ ತಲೆಯ ಮೇಲ್ಬಾಗದಲ್ಲಿ ಮತ್ತು ಮುಖದ ಅಕ್ಕಪಕ್ಕ ಸ್ವಲ್ಪ ಜಾಗವಿರುವಂತೆ ಸೆಟ್ ಮಾಡಿ ಫೋಟೋ ಕ್ಲಿಕ್ಕಿಸಬೇಕು. ಹೀಗೆ ಮಾಡುವುದರಿಂದಾಗಿ ಚಿತ್ರದ ಹಿಂಭಾಗವು ಸರಿಯಾದ ರೀತಿಯಲ್ಲಿ ಫೋಟೋದೊಡನೆ ಹೊಂದಿಕೊಂಡಂತೆ ಗೋಚರವಾಗುತ್ತದೆ ಮತ್ತು ಫೋಟೋ ಅಂದವಾಗಿ ಇರುತ್ತದೆ. ಒಟ್ಟಾರೆ, ಬೆಳಕಿನ ಕಿರಣಗಳ ಸ್ಪರ್ಷದ ಜೊತೆ ಚಿತ್ರದ ಹಿಂಭಾಗವು ಸರಿಯಾದ ರೀತಿಯಲ್ಲಿ...
c ಟ್ಯಾಪ್ ಟು ಫೋಕಸ್ ಬಳಸಿ.
ಆಟೋಫೋಕಸ್ ಯಾವಾಗಲೂ ನೀವು ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತುವನ್ನೇ ಫೋಕಸ್ ಮಾಡುವುದಿಲ್ಲ. ಹಾಗಾಗಿ ಯಾವಾಗಲೂ ನೀವು ನೀವು ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತುವನ್ನು ಟ್ಯಾಪ್ ಮಾಡಿ ಮತ್ತು ಶುದ್ಧವಾದ, ಸೂಕ್ಷ್ಮವಾದ ಚಿತ್ರವನ್ನು ಪಡೆಯಿರಿ. ಈ ವೇಳೆಯಲ್ಲಿ ಬಿಲ್ಟ್ ಇನ್ ಫ್ಲ್ಯಾಶ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಫ್ಲ್ಯಾಶ್ ಬಳಕೆಯಿಂದಾಗಿ ನಿಮ್ಮ ಚಿತ್ರವು ನೈಸರ್ಗಿಕವಾಗಿ ಕಾಣಿಸುವ...
a ಬ್ರಷ್ಟ್ ಮೋಡ್ ಬಳಸಿ
ಹೆಚ್ಚಿನ ಎಲ್ಲಾ ಸ್ಮಾರ್ಟ್ ಪೋನ್ ಗಳಲ್ಲೂ ಬ್ರಷ್ಟ್ ಮೋಡ್ ಇದ್ದೇ ಇರುತ್ತದೆ. ಇದು ಒಂದೇ ಕ್ಷಣಕ್ಕೆ ಹಲವು ಫೋಟೋಗಳನ್ನು ಕ್ಲಿಕ್ಕಿಸಲು ಸಹಾಯ ಮಾಡುತ್ತದೆ ಮತ್ತು ನಂತರ ನೀವು ಸರಿಯಾದ ಫೋಟೋವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.ಚಲಿಸುತ್ತಿರುವ ಸಂದರ್ಭದ ಫೋಟೋ ಕ್ಲಿಕ್ಕಿಸುವಾಗಾ ಬಹಳ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ನಾವು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಸುತ್ತಮುತ್ತ...
b ಪ್ರೋ ಮೋಡ್ ಬಳಸಿ
a ಬೆಳಕು ಬಹಳ ಮುಖ್ಯ
ಛಾಯಾಗ್ರಹಣ ಅನ್ನುವುದು ಬೆಳಕಿನಿಂದಲೇ ಆಗುವಂತದ್ದು. ಛಾಯಾಗ್ರಹಣದಲ್ಲಿ ಬೆಳಕಿನ ಜೊತೆ ಆಟವಾಡುವುದು ಹೇಗೆ ಎಂದು ತಿಳಿದಿದ್ದರೆ ಖಂಡಿತ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು. ಲ್ಯಾಂಡ್ ಸ್ಕೇಪ್ ಫೋಟೋಗಳನ್ನು ಕ್ಲಿಕ್ಕಿಸಲು ಸೂರ್ಯೋದಯದ ಕೆಲವು ಕ್ಷಣಗಳ ಮುನ್ನ ಮತ್ತು ಸೂರ್ಯಾಸ್ತದ ನಂತರದ ಕೆಲವು ಕ್ಷಣಗಳವರೆಗಿನ ಸಮಯವನ್ನು "ಚಿನ್ನದ ಸಮಯ" ಎಂದು ಹೇಳಲಾಗುತ್ತದೆ. ಅಂದರೆ ಆ ಸಮಯದಲ್ಲಿ ಕ್ಲಿ...
b ಎಕ್ಸ್‌ಪೋಷರ್ ಸರಿದೊಂದಿಸಿ (Adjust exposure)
ಆಟೋ ಮೋಡ್ ನಲ್ಲೂ ಕೂಡ ಎಕ್ಸ್ ಫೋಷರ್ ನ್ನು ಹೊಂದಿಕೆ ಮಾಡುವ ಅವಕಾಶವಿರುತ್ತದೆ. ಛಾಯಾಗ್ರಹಣದ ಸಮಯವನ್ನು ನೋಡಿಕೊಂಡು ಅದಕ್ಕೆ ಸರಿಹೊಂದುವಂತೆ ಬೆಳಕಿನ ಹೊಳಪನ್ನು ನೀಡಿದರೆ ಫೋಟೋ ಎದ್ದುಕಾಣುವಂತ ಅನುಭವವನ್ನು ನೀಡುತ್ತದೆ. ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ, ನೀರು, ಪ್ರತಿಫಲನ ಅಥವಾ ಇತರೆ ಯಾವುದೇ ದೃಶ್ಯದ ಅಂಶಗಳು ಕಂಡು ಬಂದಲ್ಲಿ ಅದನ್ನು ನಿಮ್ಮ ಫೋಟೋಗೆ ಬಳಕೆ ಮಾಡುವುದು ಹೇಗೆ ಎಂಬುದನ್...
ನೀವು ಕೂಡ ಇತ್ತಿಚಿನ ಒಂದು ಸ್ಮಾರ್ಟ್ ಫೋನ್ ಖರೀದಿಸಿದ್ದೀರಿ ಎಂದರೆ, ಅದರಲ್ಲಿ ತುಂಬಾ ಪ್ರಮುಖವಾಗಿ ಎಲ್ಲರೂ ಗಣನೆಗೆ ತೆಗೆದುಕೊಳ್ಳೋದು ಕ್ಯಾಮರಾ ಹೇಗಿದೆ ಎಂಬುದೇ ಆಗಿರುತ್ತದೆ. ಇತ್ತೀಚೆಗಿನ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳೂ ಕೂಡ ತಮ್ಮ ಫೋನಿನ ಕ್ಯಾಮರಾವನ್ನು ಅತ್ಯುತ್ತಮಗೊಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿ ದಿನದಿಂದ ದಿನಕ್ಕೆ ಅತ್ಯುದ್ಭುತ ಫೋಟೋಗಳನ್ನು ಸೆರೆ ಹಿಡಿಯುವ ತಾಕತ...
ಆದರೆ, ಅತ್ಯುತ್ತಮ ಕ್ಯಾಮರಾ ಫೋನ್ ಗಳೂ ಕೂಡ ಸರಿಯಾದ ಸೆಟ್ಟಿಂಗ್ ನಲ್ಲಿ ಫೋಟೋಗಳನ್ನು ಸೆರೆಹಿಡಿಯದೇ ಇದ್ದಾಗ ಕೆಟ್ಟ ಫೋಟೋಗಳನ್ನು ಕ್ಯಾಪ್ಚರ್ ಆಗುವಂತೆ ಮಾಡಿ ಬಿಡುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇತ್ತೀಚೆಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸಾಕಷ್ಟು ವೈಶಿಷ್ಟ್ಯತೆಗಳನ್ನೊಳಗೊಂಡ ಕ್ಯಾಮರಾ ಸೌಲಭ್ಯವನ್ನು ಬಳಸುವುದು ಹೇಗೆ ಮತ್ತು ನಾವು ದೈನಂದಿನ ಜೀವನದಲ್ಲಿ ಕ್ಲಿಕ್ಕಿಸುವ ವಿಭಿನ...
ಕಾಳುಮೆಣಸು ಕನಿಷ್ಟ ಆಮದು ಬೆಲೆ 500 ರೂ. ನಿಗದಿ: ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ - Varthabharati
ಕಾಳುಮೆಣಸು ಕನಿಷ್ಟ ಆಮದು ಬೆಲೆ 500 ರೂ. ನಿಗದಿ: ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ
ಚಿಕ್ಕಮಗಳೂರು, ಡಿ.7: ಕಾಳುಮೆಣಸಿನ ಕನಿಷ್ಟ ಆಮದು ಬೆಲೆಯನ್ನು 500 ರೂ.ಗಳಿಗೆ ನಿಗದಿಪಡಿಸಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಬೆಳಗಾರರಾದ ಕೆಂಜಿಗೆ ಕೇಶವ್ ಮತ್ತಿತರರು ತಿಳಿಸಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾಳುಮೆಣಸಿನ ಆಮದು ಬೆಲೆಯನ್ನು ಕನಿಷ್ಟ 500 ರೂ.ಗಳಿಗೆ ನಿಗದಿಪಡಿಸಿ ಬೆಳೆಗಾರರ ಹಿತರಕ್ಷಣೆ ಮಾಡಬೇಕೆಂಬ ಸಾಂಬಾರ ಮಂಡಳಿಯ ಪ್ರಸ್ತಾವನೆಯನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ತಕ್ಷಣಕ್ಕೆ ಜಾರಿ ಬರುವಂತೆ ಆಮದು ದರವನ್ನು 500 ರೂ.ಗಳಿಗೆ ನಿಗದಿಪಡಿಸಿದೆ. ವಿದೇಶಗಳಿಂದ ಕನಿಷ್ಟ ಬೆಲೆಗೆ ಕಳಪೆ ಗುಣಮಟ್ಟದ ಕಾಳುಮೆಣಸು ದೇಶೀಯ ಮಾರುಕಟ್ಟೆ ಪ್ರವೇಶಿಸಿದೆ. ಇದರಿಂದ ...
ಇದರಿಂದ ಕಾಳುಮೆಣಸು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಕಾಳುಮೆಣಸು ಬೆಳೆಯುವ ಏಷ್ಯಾದ ಕೆಲವು ದೇಶಗಳು ಶ್ರೀಲಂಕಾದ ಮೂಲಕ ಭಾರತಕ್ಕೆ ತಮ್ಮ ಮೆಣಸನ್ನು ರಫ್ತು ಮಾಡುವ ಮೂಲಕ ಭಾರತದ ಕಾಳುಮೆಣಸು ಮಾರುಕಟ್ಟೆಯನ್ನು ಹಾಳು ಮಾಡುತ್ತಿದ್ದವು. ಭಾರತ ಸರ್ಕಾರ ಶ್ರೀಲಂಕಾ ದೇಶದಿಂದ ಭಾರತಕ್ಕೆ ರಫ್ತಾಗುವ ವಸ್ತುಗಳ ಮೇಲೆ ನೀಡುತ್ತಿದ್ದ ರಿಯಾಯಿತಿ ಆಮದು ಶುಲ್ಕವನ್ನು ದುರುಪಯೋಗಪಡಿಸಿಕೊಳ್ಳುತ್ತಿದ...
ಇದರಿಂದ ಕಂಗಾಲಾಗಿದ್ದ ಭಾರತದ ಕಾಳುಮೆಣಸು ಬೆಳೆಗಾರರು ಮತ್ತು ಬೆಳೆಗಾರರ ಸಂಘಟನೆಗಳು ವಿದೇಶದಿಂದ ಆಮದಾಗುವ ಕಾಳು ಮೆಣಸಿಗೆ ಗರಿಷ್ಟ ಬೆಲೆ ನಿಗಧಿಪಡಿಸಬೇಕು. ಭಾರತೀಯ ಬೆಳೆಗಾರರ ಹಿತರಕ್ಷಣೆ ಮಾಡುವ ಮೂಲಕ ಉತ್ತಮ ಗುಣಮಟ್ಟ ಹೊಂದಿರುವ ನಮ್ಮ ಕಾಳುಮೆಣಸಿಗೆ ಗರಿಷ್ಟ ಬೆಲೆ ಸಿಗುವಂತೆ ಮಾಡಬೇಕೆಂದು ಸತತವಾಗಿ ಕೇಂದ್ರ ಸರ್ಕಾರವನ್ನು ಕೆಜಿಎಫ್, ಕೆಪಿಎ ಹಾಗೂ ಬ್ಲಾಕ್ ಗೋಲ್ಡ್‍ಲೀಗ್ ಪದಾಧಿಕಾರಿಗಳು ಕೇಂದ...
ಇದೆಲ್ಲವನ್ನು ಪರಿಗಣಿಸಿದ ಕೇಂದ್ರ ವಾಣಿಜ್ಯ ಸಚಿವಾಲಯ ಕಾಳುಮೆಣಸು ಆಮದಿನ ಕನಿಷ್ಟ ಬೆಲೆಯನ್ನು 500 ರೂ.ಗಳಿಗೆ ನಿಗಧಿಪಡಿಸಿ ಆದೇಶ ಹೊರಡಿಸಿದೆ. 700 ರೂ.ಗಳ ಆಸುಪಾಸಿನಲ್ಲಿದ್ದ ಕಾಳುಮೆಣಸಿನ ಬೆಲೆ ದಿಡೀರಾಗಿ 350 ರಿಂದ 400 ರೂ.ಗಳಿಗೆ ಕುಸಿತ ಕಂಡಿದ್ದು ಈಗ ಆಮದಿನ ಮೇಲೆ ನಿರ್ಬಂಧ ವಿಧಿಸಿ 500 ರೂ. ನಿಗಧಿ ಪಡಿಸಿರುವುದರಿಂದ ಕಾಳುಮೆಣಸಿನ ಬೆಲೆ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಮೂಡಿದೆ.
ಕಾಳುಮೆಣಸು ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಕೇಂದ್ರ ವಾಣಿಜ್ಯ ಸಚಿವರು ಮತ್ತು ಇದಕ್ಕಾಗಿ ಸಹಕರಿಸಿದ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಅಡಿಕೆಗೆ ಆಮದು ಬೆಲೆ ನಿಗಧಿ: ಕಾಳುಮೆಣಸಿನಂತೆ ಅಡಿಕೆ ಸಹ ಬೇರೆ ದೇಶಗಳಿಂದ ರಿಯಾಯಿತಿ ಶುಲ್ಕವನ್ನು ದುರುಪಯೋಗ ಮಾಡಿಕೊಂಡು 162 ರೂ. ಬೆಲೆಯಲ್ಲಿ ಆಮದಾಗುತ್ತಿದ್ದು ಅದನ್ನು ಸಹ ಪರಿಷ್ಕರಿಸಿರುವ ಕೇಂದ್ರ ವಾಣಿಜ್ಯ ಸಚಿವಾಲಯ ಅಡಿಕೆಗೆ ಕಿ.ಲೋ 1ಕ್ಕೆ 250 ರೂ. ಆಮದು ಬೆಲೆಯನ್ನು ನಿಗಧಿಪಡಿಸಿ ಆದೇಶ ಹೊರಡಿಸಿದೆ. ಇದು ಅಡಿಕೆಗೆ ಉತ್ತಮ ಬೆಲೆ ಸಿಗಲು ನೆರವಾಗುವುದು ಎಂದು ಬೆಳೆಗಾರರು ಮತ್ತು ಇದರ ಪರ ...
ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ… – ಅರಳಿಮರ
ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ…
ಜುಲೈ 9, 2018 By ಅರಳಿ ಮರ
ಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ. ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿದುಕೊಳ್ಳುತ್ತದೆ. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ ಶರೀರ ದುರ್ಬಲವಾಗುವುದಷ್ಟೇ ಅಲ್ಲ, ದೀರ್ಘ ಕಾಲದವರೆಗೆ ಬಾಳುವುದೂ ಇಲ್ಲ ~ Whosoever Ji
ಚೇತನ…
ಯಾವುದಕ್ಕೆ ರೂಪವಿಲ್ಲವೋ,
ಯಾವುದು ದೇಹ ವಿಶೇಷದೊಂದಿಗೆ ತಾದಾತ್ಮ್ಯಗೊಳ್ಳುತ್ತದೆಯೋ ಮತ್ತು ಆ ಮೂಲಕ ದೇಹ ರೂಪಧಾರಣೆ ಮಾಡುತ್ತದೆಯೋ – ಅದು.
ದೇಹವು ಹೆಣ್ಣಿನದಾದರೆ ಚೇತನವು ತನ್ನನ್ನು ತಾನು ಹೆಣ್ಣೆಂದು ಭಾವಿಸತೊಡಗುತ್ತದೆ. ಅದು ಗಂಡಿನದಾಗಿದ್ದರೆ ತಾನು ಗಂಡೆಂದು. ತೃತೀಯ ಲಿಂಗಿಯ ದೇಹ ಧರಿಸಿದಾಗಲೂ ಅಷ್ಟೇ. ಅದು ಯಾವ ದೇಹದಲ್ಲಿದೆಯೋ ಅದೇ ತಾನೆಂದು ಬಗೆಯುತ್ತದೆ.
ಬೆಳಕು ಈ ಕೋಣೆಯೊಂದಿಗೆ ತಾದಾತ್ಮ್ಯಗೊಂಡರೆ ಅದು ಕೋಣೆಯೇ ಆಗಿಬಿಡುತ್ತದೆ. ಆದರೆ ಇದು ತಾದಾತ್ಮ್ಯಗೊಂಡರೆ ಮಾತ್ರ ಸಾಧ್ಯವಾಗುತ್ತದೆ. ತಾದಾತ್ಮ್ಯಗೊಳ್ಳದೆ ಹೋದರೆ ಬೆಳಕಿನ ಅವಸ್ಥೆಯ ಅರಿವಾಗುವುದಿಲ್ಲ. ಅಂತಹದೊಂದು ಅನುಭವವಾಗಬೇಕೆಂದರೆ, ಅದಕ್ಕೊಂದು ಸರಿಯಾದ ಆಧಾರ ಒದಗಬೇಕಾಗುತ್ತದೆ. ಸದ್ಯಕ್ಕೆ ಇಲ್ಲಿ, ಈ ನಾಲ್ಕು ಗೋಡೆಗಳೇ ಬೆಳಕಿನ ಅಸ್ತಿತ್ವ ಸಾರುವ ಆಧಾರಗಳು.