text stringlengths 0 61.5k |
|---|
ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿರುತ್ತದೆ. ಮೊಬೈಲ್ ಫೋನ್‌ಗಳ ಮೇಲೆ ಕೊಡುಗೆಗಳ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್20 ರೂ. 40,999/- ರಿಯಾಯತಿ ದರದಲ್ಲಿ ಲಭ್ಯವಿದ್ದು, ಇದು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಯಾಶ್ ಬ್ಯಾಕ್ ಅನ್ನೂ ಒಳಗೊಂಡಿದೆ. ಅಲ್ಲದೆ, ಹೊಸದಾಗಿ ಬಿಡುಗಡೆಯಾದ ಐಫೋನ್ 12 ಮತ್ತು ಐಫೋನ್ 12 ಪ್ರೋ ಮೇಲೂ ಕೊಡುಗೆಗಳಿವೆ. ಗ್ರಾಹಕರು ಮಾಸಿಕ 2796/-* ಮಾಸಿಕ ದರದಲ್ಲಿ 40% ವರೆಗೆ ಖಚಿತ ಬೈಬ್ಯಾಕ್ ಅಡಿಯಲ್ಲಿ ಐಫೋನ್ 11 ಅನ್ನೂ ಪಡೆಯಬಹುದು. ವೇರೆಬಲ್ ವಿಭಾಗದಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಎಲ್‌ಟಿಇ (42 ಎಂಎಂ) ರಿಯಾಯಿತಿ ದರ ರೂ. 13,950/-* ರಲ್ಲಿ ಎಚ್‌ಡಿಎಫ್‌ಸಿ ಕ್ಯಾಶ್ ಬ್ಯಾಕ್ ಒಳಗೊಂಡು ಲಭ್ಯವಿದೆ. |
ಈ ಹಬ್ಬದ ಸಮಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಎದುರು ನೋಡುತ್ತಿರುವವರು ಎಸಸ್ (Asus) ಥಿನ್ ಆಂಡ್ ಲೈಟ್ ಲ್ಯಾಪ್‌ಟಾಪ್‌ಗಳ ಮೇಲಿನ ಆಕರ್ಷಕ ಡೀಲ್‌ಗಳನ್ನು ಪಡೆಯಬಹುದು. ರೂ. 18,999/- ಬೆಲೆಯಲ್ಲಿ 2 ವರ್ಷ ವಾರಂಟಿ ಹಾಗೂ ರೂ.6,800/- ಮೌಲ್ಯದ ಲಾಭಗಳನ್ನು ಒಳಗೊಂಡಿದೆ. ಡೆಲ್ ಇಂಟೆಲ್ ಕೋರ್ ಐ3 ಲ್ಯಾಪ್‌ಟಾಪ್‌ಗಳು ರೂ. 37,499/- ರಿಂದ ಆರಂಭವಾಗುತ್ತವೆ ಮತ್ತು ಎಚ್‌ಪಿ ಎಎಂಡಿ ರೈಝೆನ್ 5 ಲ್ಯಾಪ್‌ಟಾಪ್ ರೂ. 41,290 ರಿಂದ ಆರಂಭವಾಗುತ್ತವೆ. ಇಂಟೆಲ್ 11ನೇ ಜೆನ್ ಲ್ಯಾಪ್‌ಟಾಪ್‌ಗಳು ಎಂಎಸ್ ಆಫೀಸ್ ಪ್ರಿ ಇನ್‌ಸ್ಟಾಲ್ ಆಗಿ ಲಭ್ಯವಿದ್ದು, 47,999/-* ರಿಂದ ಆರಂಭವಾಗುತ್ತವೆ. ಎಲ್ಲ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ 10% ರಿಯಾಯಿತಿ ಘೋಷಿಸಲಾಗಿದ್ದು ಗೇಮರ್‌ಗಳಿಗೆ ಖುಷಿಯಾಗಲಿದೆ. ಮನೆಯಿಂದ ಮಕ್ಕಳು ಅಭ್ಯಾಸ ಮಾಡುವುದಕ್ಕಾಗಿ, ಸ್ಯಾಮ್‌ಸಂಗ್ ಟ್ಯಾಬ್ ವಿತ್ ಎಲ್‌ಟಿಇ, ರೂ.11,999/-*ರಿಂದ ಆರಂಭವಾಗಲಿದೆ. |
ಟೆಲಿವಿಷನ್‌ಗಳ ಮೇಲೆ ಗ್ರಾಹಕರು ಹಲವು ರೀತಿಯ ಕೊಡುಗೆಗಳನ್ನು ಪಡೆಯಬಹುದು. 32 ಇಂಚಿನ ಸ್ಮಾರ್ಟ್ ಟಿವಿಗಳು (ಹೈಸೆನ್ಸ್, ತೊಶಿಬಾ, ಒನ್‌ಪ್ಲಸ್ ಮತ್ತು ಟಿಸಿಎಲ್) 3 ವರ್ಷದ ವಾರಂಟಿ ಸಮೇತ ರೂ. 12,490/-* ರಲ್ಲಿ ಲಭ್ಯವಿರುತ್ತದೆ. ಮತ್ತು ಸ್ಯಾಮ್‌ಸಂಗ್ 50 ಇಂಚಿನ ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ ರೂ. 64,990/-* ರಲ್ಲಿ 3 ವರ್ಷ ವಾರಂಟಿ ಸಹಿತ ಲಭ್ಯವಿದೆ. ಎಲ್‌ಜಿ ಒಎಲ್‌ಇಡಿ ಟಿವಿ ಖರೀದಿಸುವ ಗ್ರಾಹಕರು ರೂ. 64,990/- ಮೌಲ್ಯದ 3 ವರ್ಷ ವಾರಂಟಿ ಸಹಿತ ಪಡೆಯುತ್ತಾರೆ ಮತ್ತು 3 ತಿಂಗಳವರೆಗೆ ಉಚಿತ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಪಡೆಯುತ್ತಾರೆ. |
ಹೋಮ್ ಅಪ್ಲೈಯನ್ಸ್‌ಗಳನ್ನು ಖರೀದಿಸಲು ಬಯಸುತ್ತಿರುವವರು ರೂ. 49,990/- ರಿಂದ ಆರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್‌ಗಳು, ರೂ. 11,990/- ರಿಂದ ಟಾಪ್ ಲೋಡ್ ವಾಶಿಂಗ್ ಮಶಿನ್‌ಗಳು ಮತ್ತು ರೂ. 42,990/- ರಿಂದ ಆರಂಭವಾಗುವ ವಾಶರ್ ಡ್ರೈಯರ್‌ಗಳನ್ನು ನೋಡಬಹುದು. ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ಖರೀದಿ ಮಾಡುವ ಗ್ರಾಹಕರು ಉಚಿತವಾಗಿ ರೂ. 43,000/-* ಮೌಲ್ಯದ ನೋಟ್ 10 ಲೈಟ್ ಪಡೆಯುತ್ತಾರೆ. |
ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಈ ವರ್ಷದ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಅನುಭವವು ಇನ್ನಷ್ಟು ಉತ್ತಮವಾಗಿರುತ್ತವೆ. ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು. ಜೊತೆಗೆ ಇನ್‌ಸ್ಟಾ ಡೆಲಿವರಿ (3 ಗಂಟೆಗಳೊಳಗೆ ಡೆಲಿವರಿ) ಮತ್ತು ಸ್ಟೋರ್ ಗಳಿಂದ ಪಿಕಪ್ ಆಯ್ಕೆಗಳೂ ಇವೆ. |
ಸತ್ಯಶೋಧನೆಯ ಶ್ರೀಕಂಠಯಾನ | Prajavani |
ಸತ್ಯಶೋಧನೆಯ ಶ್ರೀಕಂಠಯಾನ |
ಎಸ್. ಸೂರ್ಯಪ್ರಕಾಶ ಪಂಡಿತ್ Updated: 05 ಜೂನ್ 2016, 01:00 IST |
ಭಾರತೀಯ ಇತಿಹಾಸವನ್ನು ನೋಡುತ್ತಿರುವ ದೃಷ್ಟಿಯಲ್ಲಿ ಇಂದು ಭಿನ್ನ ಭಿನ್ನ ನೋಟಗಳು ಎಚ್ಚರವಾಗಿವೆ. ಇಂಥ ಸಂದರ್ಭದಲ್ಲಿ ಶ್ರೀಕಂಠಶಾಸ್ತ್ರಿಗಳ ಸಂಶೋಧನ ಪ್ರಬಂಧಗಳು ಸಂಶೋಧಕರಿಗೂ ಇತಿಹಾಸತಜ್ಞರಿಗೂ ಸಮಾಜನಿರ್ಮಾತೃರಿಗೂ ಸಾಮಾನ್ಯರಿಗೂ ದಿಕ್ಸೂಚಿಗಳಾಗಬಲ್ಲಂಥವು. |
ಇತಿಹಾಸ ಎಂದರೇನು? ಈ ಶಬ್ದದ ವ್ಯುತ್ಪತ್ತಿಯನ್ನು ಹೇಳಬಹುದೆ ಹೊರತು ಇತಿಹಾಸದ ಲಕ್ಷಣವನ್ನು ನಿರೂಪಿಸುವುದು ಸುಲಭವಲ್ಲ. ಹೀಗಿದ್ದರೂ 'ಇತಿಹಾಸ' ಎನ್ನುವುದು ವರ್ತಮಾನವನ್ನು ಪ್ರಭಾವಿಸುತ್ತಲೇ ಹೊಸದಾದ ಇತಿಹಾಸವನ್ನೂ ನಿರ್ಮಿಸುತ್ತಿರುತ್ತದೆ. |
ಸಮಕಾಲೀನ ಜನಜೀವನವನ್ನು ಇತಿಹಾಸಪ್ರಜ್ಞೆ ಹಲವು ವಿಧದಲ್ಲಿ ಕಾಡುತ್ತಿರುವುದರಿಂದಲೇ ಇತಿಹಾಸಕಾರರ ಹೊಣೆಗಾರಿಕೆ ಮತ್ತು ಸಿದ್ಧತೆ–ಚಿಂತನೆಗಳು ಬಹಳ ಮುಖ್ಯವಾದ ವಿವರಗಳಾಗುತ್ತವೆ. ನಮ್ಮ ಕಾಲದ ಶ್ರೇಷ್ಠ ಇತಿಹಾಸತಜ್ಞ ಮತ್ತು ಚಿಂತಕ ವಿಲ್ ಡ್ಯುರಾಂಟ್, ಇತಿಹಾಸವನ್ನು ಕುರಿತು ಒಂದೆಡೆ ಹೀಗೆಂದಿದ್ದಾರೆ: |
'ಇತಿಹಾಸಲೇಖನ ವಿಜ್ಞಾನವಲ್ಲ; ಅದೊಂದು ಉದ್ದಿಮೆ, ಕಲೆ ಮತ್ತು ತತ್ತ್ವಜ್ಞಾನ; ತಥ್ಯಾಂಶಗಳನ್ನು ಬಯಲಿಗೆ ತರುವುದರಲ್ಲಿ ಅದೊಂದು ಉದ್ದಿಮೆ, ಲಭ್ಯ ಮಾಹಿತಿಯ ಅಸ್ತವ್ಯಸ್ತಸ್ಥಿತಿಗೆ ಅರ್ಥವತ್ತಾದ ರೂಪವೊಂದನ್ನು ಕೊಡುವುದರಿಂದ ಅದೊಂದು ಕಲೆ, ದೃಷ್ಟಿಕೋನವನ್ನೂ ತಿಳಿವಳಿಕೆಯನ್ನೂ ಒದಗಿಸುವುದರಿಂದ ಅದು ತತ್ತ್ವಜ್ಞಾನ'. |
ಹೀಗೆ ಇತಿಹಾಸವನ್ನು ಉದ್ದಿಮೆ–ಕಲೆ–ತತ್ತ್ವಜ್ಞಾನವಾಗಿ ಅನುಸಂಧಾನಿಸಿದವರು ಶ್ರೀಕಂಠಶಾಸ್ತ್ರೀ. |
ಒಬ್ಬ ಆದರ್ಶ ಇತಿಹಾತಜ್ಞನಿಗೆ ಇರಬೇಕಾದ ಅರ್ಹತೆಗಳನ್ನೆಲ್ಲ ರೂಢಿಸಿಕೊಂಡಿದ್ದವರು ಶ್ರೀಕಂಠಶಾಸ್ತ್ರೀ. ಎಳವೆಯಲ್ಲೇ ಎದುರಾದ ಶಾರೀರಿಕ ತೊಂದರೆಗಳಿಗೆ ಕುಗ್ಗದೆ, ಅಧ್ಯಯನಕ್ಕೇ ತಮ್ಮ ಜೀವನವನ್ನು ಅರ್ಪಿಸಿಕೊಂಡು ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಒಬ್ಬರು ಎಂದು ಕೀರ್ತಿತರಾದರು. |
ಇತಿಹಾಸ ಎಂದರೆ ಕೇವಲ ವರ್ಷ, ರಾಜ್ಯ, ರಾಜ, ಯುದ್ಧ ಎಂಬಂಥ ಸೀಮಿತ ಚೌಕಟ್ಟಿಗೆ ಪಕ್ಕಾಗದೆ ಹಲವು ಜ್ಞಾನಶಾಖೆಗಳಲ್ಲಿ ಪರಿಣತಿಯನ್ನು ಸಂಪಾದಿಸಿದರು. ಇತಿಹಾಸದ ಜೊತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಾಸನಶಾಸ್ತ್ರ, ಪುರಾತತ್ವ, |
ಮೂರ್ತಿಶಿಲ್ಪ, ಅಲಂಕಾರಶಾಸ್ತ್ರ, ಧರ್ಮ, ಅಧ್ಯಾತ್ಮ – ಹೀಗೆ ಬೇರೆ ಬೇರೆ ಆಯಾಮಗಳಿಂದ ಇತಿಹಾಸದ ಸಂಶೋಧನೆಯನ್ನು ಮಾಡಿ, ಇತಿಹಾಸಕ್ಕೂ ಸಂಸ್ಕೃತಿಗೂ ಇರುವ ನಂಟನ್ನು ಗಟ್ಟಿ ಮಾಡಿದರು. |
ಕನ್ನಡ, ಸಂಸ್ಕೃತ, ಇಂಗ್ಲಿಷ್, ತೆಲುಗುಭಾಷೆಗಳಲ್ಲದೆ, ಜರ್ಮನ್, ಫ್ರೆಂಚ್‌ಗಳಂಥವುಗಳನ್ನೂ ದಕ್ಕಿಸಿಕೊಂಡಿದ್ದರು. ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತ ಅವರ ಇಂಗ್ಲಿಷ್ ಪ್ರಬಂಧಗಳು ಒಂದೆಡೆ ಸಿಕ್ಕುವಂತಿರಲಿಲ್ಲ. |
ಈಗ ಆ ಎಲ್ಲ ಲೇಖನಗಳನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸಿ 'ದಿ ಮಿಥಿಕ್ ಸೊಸೈಟಿ' ಸ್ತುತ್ಯರ್ಹ ಕೆಲಸ ಮಾಡಿದೆ. ಅವರು ಕನ್ನಡದಲ್ಲಿ ಪ್ರಕಟಿಸಿದ್ದ ಸಂಶೋಧನ ಲೇಖನಗಳ ಸಂಗ್ರಹದ ಜೊತೆಗೆ ಅವರ ಪ್ರಮುಖ ಕನ್ನಡ ಪುಸ್ತಕಗಳೂ ಈಗ ಮರುಮುದ್ರಣಗೊಂಡಿವೆ. |
ಭಾರತೀಯ ಇತಿಹಾಸವನ್ನು ನೋಡುತ್ತಿರುವ ದೃಷ್ಟಿಯಲ್ಲಿ ಇಂದು ಭಿನ್ನ ಭಿನ್ನ ನೋಟಗಳು ಎಚ್ಚರವಾಗಿವೆ. ಇಂಥ ಸಂದರ್ಭದಲ್ಲಿ ಶ್ರೀಕಂಠಶಾಸ್ತ್ರಿಗಳ ಸಂಶೋಧನ ಪ್ರಬಂಧಗಳು ಸಂಶೋಧಕರಿಗೂ ಇತಿಹಾಸತಜ್ಞರಿಗೂ ಸಮಾಜನಿರ್ಮಾತೃಗಳಿಗೂ ಸಾಮಾನ್ಯರಿಗೂ ದಿಕ್ಸೂಚಿಗಳಾಗಬಲ್ಲಂಥವು. |
ಶ್ರೀಕಂಠಶಾಸ್ತ್ರಿಗಳ ಪೂರ್ವಿಕರು ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಸೊಂಡೆಕೊಪ್ಪ ಗ್ರಾಮವಾಸಿಗಳು. ಶಾಸ್ತ್ರಿಗಳು ಹುಟ್ಟಿದ್ದು ನಂಜನಗೂಡಿನಲ್ಲಿ, 1901ರ ನವೆಂಬರ್ ಐದರಂದು. ತಂದೆ ರಾಮಸ್ವಾಮಿಶಾಸ್ತ್ರೀ; ತಾಯಿ ಶೇಷಮ್ಮ. ಬಾಲ್ಯದಲ್ಲಿ ಶ್ರೀಕಂಠಶಾಸ್ತ್ರೀ ಸಿಡುಬುರೋಗಕ್ಕೆ ತುತ್ತಾಗಿ ಎಡಗಣ್ಣು ಮತ್ತು ಎಡಗಿವಿಗಳ ಶಕ್ತಿಯನ್ನು ಕಳೆದುಕೊಂಡರು. |
ಶಾಸ್ತ್ರಿಗಳದ್ದು ವಿದ್ವತ್ ಮನೆತನ; ಅವರ ಪೂರ್ವಿಕರಲ್ಲಿ ಅನೇಕರು ಸಂಸ್ಕೃತವಿದ್ವಾಂಸರಿದ್ದರು. ಕೋಲಾರದಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದ ಶಾಸ್ತ್ರಿಗಳು ಮೈಸೂರಿನ ಮಹಾರಾಜ ಕಾಲೇಜಿಗೆ ಉನ್ನತ ವಿದ್ಯಾಭ್ಯಾಸಕ್ಕೆಂದು ತೆರಳಿದರು. |
ಎನ್.ಎಸ್. ಸುಬ್ಬರಾವ್, ಎಚ್. ಕೃಷ್ಣರಾವ್, ಜೆ.ಸಿ. ರೋಲೋ, ಬಿ. ಕೃಷ್ಣಪ್ಪ. ಆರ್. ಶಾಮಶಾಸ್ತ್ರೀ, ಎಂ.ಎಚ್. ಕೃಷ್ಣ, ಎ.ಆರ್. ಕೃಷ್ಣಶಾಸ್ತ್ರಿ, ಬಿ.ಎಂ. ಶ್ರೀಕಂಠಯ್ಯ ಮುಂತಾದ ಶ್ರೇಷ್ಠ ಗುರುಗಳಲ್ಲಿ ಶಿಷ್ಯತ್ವ ಮಾಡಿದವರು ಶಾಸ್ತ್ರಿಗಳು. ಎಂ.ಎ. ವಿದ್ಯಾರ್ಥಿಯಾಗಿದ್ದಾಗಲೇ ಲಂಡನ್ನಿನ ಪ್ರತಿಷ್ಠಿತ 'ರಾಯಲ್ ಏಷ್ಯಾಟಿಕ್ ಸೊಸೈಟಿ'ಯ ಪತ್ರಿಕೆಯಲ್ಲಿ ಪ್ರಬಂಧವೊಂದು ಪ್ರಕಟವಾಗಿ ಶಾಸ್ತ್ರಿಗಳ ಪ್ರತಿಭೆಯನ್ನು ಆರಂಭದಲ್ಲಿಯೇ ವಿದ್ವತ್‌ಲೋಕ ಗುರುತಿಸುವಂತಾಯಿತು. |
'ಕಾನ್‌ಕ್ವೆಸ್ಟ್ ಆಫ್ ಶಿಲಾದಿತ್ಯ ಇನ್ ದಿ ಸೌತ್' ಎಂಬ ಪ್ರಬಂಧ ಪ್ರಕಟವಾದಾಗ ಅವರ ವಯಸ್ಸು ಕೇವಲ ಇಪ್ಪತ್ತು. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಳ್ಳಲು ಅವರಿಗೆ ವಿದ್ಯಾರ್ಥಿವೇತನವೊಂದು ದೊರಕಿತು. |
ಅದನ್ನು ಉಪಯೋಗಿಸಿಕೊಂಡು 'ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ' ಎಂಬ ಪ್ರಬಂಧವನ್ನು ಸಿದ್ಧಪಡಿಸಿದರು. ಶಾಸ್ತ್ರಿಗಳು ೧೯೪೯ರಲ್ಲಿ ಡಿ.ಲಿಟ್. ಪದವಿಗಾಗಿ ಅದುವರೆಗೂ ಅವರು ಪ್ರಕಟಿಸಿದ್ದ ಸಂಶೋಧನಪ್ರಬಂಧಗಳನ್ನು ವಿಶ್ವವಿದ್ವಾಲಯಕ್ಕೆ ಸಲ್ಲಿಸಿದರು. |
ಪರೀಕ್ಷಕರಾಗಿದ್ದ ರಾಧಾ ಕುಮುದ ಮುಖರ್ಜಿ 'ಇಷ್ಟು ದೊಡ್ಡ ಪ್ರಮಾಣದ ಸಂಶೋಧನಕಾರ್ಯಕ್ಕೆ ಡಿ.ಲಿಟ್.ನಂಥ ಪದವಿ ಅತ್ಯಲ್ಪ ಮಾತ್ರದ್ದಾಗುತ್ತದೆ' ಎಂದು ಟಿಪ್ಪಣಿ ಬರೆದಿದ್ದರಂತೆ. 1965ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. |
ಮುಂದೆ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಶಾಸ್ತ್ರಿಗಳು 1974ರ ಮೇ ಹತ್ತರಂದು ತೀರಿಕೊಂಡರು. ಹೆಚ್ಚು ಕಡಿಮೆ ಅಲ್ಲಿಯವರೆಗೂ ನಿರಂತರವಾಗಿ ಇತಿಹಾಸ ಸಂಶೋಧನೆಯನ್ನು ಮಾಡುತ್ತಲೇ ಇದ್ದರು. |
ಶಾಸ್ತ್ರಿಗಳು ಮಾಡಿದ ಸಂಶೋಧನೆಗಳು ಆ ಕಾಲದ ಎಷ್ಟೋ ಸ್ಥಾಪಿತ ನಿಲುವುಗಳನ್ನು ಬುಡಮೇಲು ಮಾಡುವಂಥದ್ದಾಗಿದ್ದವು. ಉದಾಹರಣೆಗೆ, 'ಆರ್ಯರ ಆಕ್ರಮಣ' ಸಿದ್ಧಾಂತವನ್ನು ಅವರು ಹಲವು ಸಾಕ್ಷ್ಯಗಳಿಂದ ತಿರಸ್ಕರಿಸಿದರು. |
ಅವರು ಪಾಠ ಮಾಡುವಾಗ 'ಪರೀಕ್ಷೆಯಲ್ಲಿ ಮಾರ್ಕುಗಳನ್ನು ಪಡೆಯುವುದಕ್ಕಾಗಿ ಆರ್ಯರು ಹೊರಗಿನಿಂದ ಬಂದವರು ಎಂದು ಉತ್ತರ ಬರೆಯಿರಿ; ಆದರೆ ಆರ್ಯರು ಹೊರಗಿನಿಂದ ಬಂದವರು ಎಂದು ನೀವು ನಂಬಬೇಡಿ' ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರಂತೆ. |
ಶಾಸ್ತ್ರಿಗಳು ಹತ್ತಾರು ಸಂಶೋಧನ ಗ್ರಂಥಗಳನ್ನೂ ನೂರಾರು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಈ ಒಂದೊಂದು ಬರಹಗಳಲ್ಲಿಯೂ ಅವರ ವಿದ್ವತ್ತು, ಅಧ್ಯಯನ, ಸ್ವತಂತ್ರಚಿಂತನೆ, ಅಪಾರಪರಿಶ್ರಮಗಳನ್ನು ಧಾರಾಳವಾಗಿಯೇ ಕಾಣಬಹುದು. |
ಅವರ 'ಭಾರತೀಯ ಸಂಸ್ಕೃತಿ' ಜನಪ್ರಿಯ ಶೈಲಿಯನ್ನೂ ಸಂಶೋಧನೆಯ ಶಿಸ್ತನ್ನೂ ಒಟ್ಟಾಗಿ ಮೇಳೈಸಿಕೊಂಡ ಅಪರೂಪದ ಕೃತಿ. ಅದು ಇಂದಿಗೂ ಭಾರತೀಯ ಸಂಸ್ಕೃತಿಯನ್ನು ಕುರಿತಂತೆ ಪ್ರಮುಖ ಆಕರಗ್ರಂಥವಾಗಿದೆ. |
'ರೋಮನ್ ಚಕ್ರಾಧಿಪತ್ಯದ ಇತಿಹಾಸ', 'ಪ್ರಪಂಚ ಚರಿತ್ರೆಯ ರೂಪರೇಖೆಗಳು', 'ಪುರಾತತ್ವ ಶೋಧನೆ', 'ಹೊಯ್ಸಳ ವಾಸ್ತುಶಿಲ್ಪ' – ಅವರ ಪ್ರಮುಖ ಕನ್ನಡ ಕೃತಿಗಳು. |
'ಪ್ರೊಟೊ ಇಂಡಿಕ್ ರಿಲಿಜಿಯನ್', 'ಐಕನಾಗ್ರಫಿ ಆಫ್ ವಿದ್ಯಾರ್ಣವತಂತ್ರ', 'ಅರ್ಲಿ ಗಂಗಾಸ್ ಆಫ್ ತಲಕಾಡ್', 'ಎವಲ್ಯೂಷನ್ ಆಫ್ ಗಂಢಬೇರುಂಢ' – ಇವು ಪ್ರಮುಖ ಇಂಗ್ಲಿಷ್ ಕೃತಿಗಳು. |
ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಪ್ರಬಂಧಗಳು ಜಗತ್ತಿನ ವಿವಿಧ ವಿದ್ವತ್ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಬರಹಗಳು ಆರ್.ಸಿ. ಮಜುಂದಾರ್, ಪಿ.ಕೆ. ಗೋಡೆ, ಡಿ.ಸಿ. ಸರ್ಕಾರ್, ಆ.ನೇ. ಉಪಾಧ್ಯೇ ಮುಂತಾದ ಖ್ಯಾತನಾಮರ ಮೆಚ್ಚುಗೆಯನ್ನು ಪಡೆದಿವೆ. |
ಜನಸಾಮಾನ್ಯರಿಗೂ ಇತಿಹಾಸ ಸಂಶೋಧನೆಯ ಫಲ ದಕ್ಕಬೇಕೆಂಬ ತುಡಿತದಿಂದ ಶಾಸ್ತ್ರಿಗಳು ಹಲವು ಲೇಖನಗಳನ್ನು, ಪುಸ್ತಕವಿಮರ್ಶೆಗಳನ್ನು ದಿನಪತ್ರಿಕೆಗಳಿಗೂ ಬರೆದರು. ಹೀಗೆ ಬರೆದ ಅತಿ ಹೆಚ್ಚು ಲೇಖನಗಳು 'ಪ್ರಜಾವಾಣಿ'ಯಲ್ಲಿಯೇ ಪ್ರಕಟವಾದವು. |
೧೯೫೫–೬೬ರ ನಡುವೆ 'ಪ್ರಜಾವಾಣಿ'ಯಲ್ಲಿ ಅವರ 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದವು. ಶಾಸ್ತ್ರಿಗಳು ಕನ್ನಡದಲ್ಲಿ ಬರೆದಿರುವ 112 ಸಂಶೋಧನ ಲೇಖನಗಳನ್ನು ಸೇರಿಸಿ ಒಂದು ಸಂಪುಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಡಾ. ಬಾ.ರಾ. ಗೋಪಾಲ್ ಮತ್ತು ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಸಂಪಾದಕತ್ವದಲ್ಲಿ (1975) ಪ್ರಕಟಿಸಿದೆ. ಶಾಸ್ತ್ರಿಗಳ ಶಿಷ್ಯರೂ ಅಭಿಮಾನಿಗಳೂ ಅವರಿಗೆ 'ಶ್ರೀಕಂಠಿಕಾ' ಎಂಬ ಅಭಿನಂದನಗ್ರಂಥವನ್ನು 1973ರಲ್ಲಿ ಅರ್ಪಿಸಿದರು. |
ಇತಿಹಾಸಲೇಖನಗಳು ಊಹೆಗಳಿಂದಲೂ ಪೂರ್ವಗ್ರಹದಿಂದಲೂ ಮುಕ್ತವಾಗಿರಬೇಕು ಎಂಬ ಸಿದ್ಧಾಂತವನ್ನು ವ್ರತಬುದ್ಧಿಯಿಂದ ನಂಬಿ, ಅದರಂತೆ ನಡೆದವರು ಶಾಸ್ತ್ರಿಗಳು. ಇತಿಹಾಸದ ಸಂಶೋಧನೆಗಳು ಹಾದಿ ತಪ್ಪಿ ಹೇಗೆ ಹಾಸ್ಯಾಸ್ಪದವಾಗುತ್ತದೆ ಎನ್ನುವುದನ್ನು 'ಇತಿಹಾಸದಲ್ಲಿ ಹಾಸ್ಯ' ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ. |
1963ರ 'ಪ್ರಜಾವಾಣಿ'ಯ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಈ ಲೇಖನದ ಆರಂಭವೇ ಮಾರ್ಮಿಕವಾಗಿದೆ: ''ಒಬ್ಬ ಈಜಿಪ್ಟ್ ಚರಿತ್ರೆಯಲ್ಲಿ ಪ್ರವೀಣನು ಅಸ್ಸೀರಿಯ ಚರಿತ್ರೆಯ ಪ್ರವೀಣನೊಡನೆ ಚರ್ಚೆ ಮಾಡುತ್ತಿದ್ದನು. |
'ಈಜಿಪ್ಟಿನ ಅವಶೇಷಗಳಲ್ಲಿ ತಾಮ್ರದ ತಂತಿಗಳು ಸಿಕ್ಕಿವೆ. ಇದರಿಂದ ಪ್ರಾಚೀನ ಈಜಿಪ್ಟಿನಲ್ಲಿ ಟೆಲಿಫೋನ್, ಟೆಲಿಗ್ರಾಮ್ ತಿಳಿದಿದ್ದವೆಂದು ಹೇಳಬಹುದು. ನಿಮ್ಮ ಅಸ್ಸೀರಿಯ ಸಂಸ್ಕೃತಿಗಿಂತ ಈಜಿಪ್ಟ್ ಮುಂದುವರೆದಿತ್ತು ಎಂದು ರುಜುವಾತಾಗುತ್ತದೆ' ಎಂದು. |
ಆಗ ಅಸ್ಸಿರಿಯಾಲಜಿಸ್ಟ್ ಹೇಳಿದ, 'ನಮ್ಮ ಅಸ್ಸೀರಿಯದೇಶದಲ್ಲಿ ಯಾವ ತಂತಿಗಳೂ ಸಿಕ್ಕಿಲ್ಲ. ಅದರಿಂದ ಅಸ್ಸೀರಿಯನ್ನರಿಗೆ 'ವೈರ್‌ಲೆಸ್' ತಿಳಿದಿದ್ದಿತೆಂದು ಸಿದ್ಧವಾಗುತ್ತದೆ' ಎಂದು''. |
ಶಾಸ್ತ್ರಿಗಳು ಯಾವ ಟೀಕೆಗೂ ಹೆದರದೆ ತಕ್ಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ವಾದಗಳನ್ನು ಮಂಡಿಸುತ್ತಿದ್ದರು, ಇವು ಹಲವು ಸಂದರ್ಭಗಳಲ್ಲಿ ಟೀಕೆಟಿಪ್ಪಣಿಗಳಿಗೂ ಕೋಲಾಹಲಗಳಿಗೂ ಕಾರಣವಾದವು. ಆದರೆ ಶಾಸ್ತ್ರಿಗಳು ಆ ಸಂದರ್ಭಗಳಲ್ಲಿ 'ನನ್ನ ಸಿದ್ಧಾಂತಕ್ಕೆ ತಳಪಾಯವಾದ ಸಾಕ್ಷ್ಯಗಳನ್ನು ನಾನು ಸಿದ್ಧವಾಗಿರಿಸಿಕೊಂಡಿದ್ದೇನೆ. |
ನಿಮ್ಮ ವಾದಕ್ಕೆ ಪೋಷಕವಾದ ಎವಿಡೆನ್ಸ್ ಏನಾದರೂ ಇದ್ದಲ್ಲಿ ನೀವು ಅದನ್ನು ಮುಂದೆ ತನ್ನಿ' ಎನ್ನುತ್ತಿದ್ದರು. ಶಾಸ್ತ್ರಿಗಳ ಇಂಗ್ಲಿಷ್ ಪ್ರಬಂಧಗಳನ್ನು 'ಶ್ರೀಕಂಠಯಾನ' ಎಂಬ ಹೆಸರಿನಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಡಾ. ಪಿ.ಎನ್. ನರಸಿಂಹಮೂರ್ತಿ ಸಂಪಾದಿಸಿದ್ದಾರೆ. |
ಪ್ರಾಚೀನ ಇತಿಹಾಸ, ಪುರಾತತ್ವಶಾಸ್ತ್ರ, ಕರ್ನಾಟಕ ಇತಿಹಾಸ, ಧರ್ಮ ಮತ್ತು ತತ್ತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಂಸ್ಕೃತಿ ಸಂಬಂಧಿತ ಹಾಗೂ ಮುನ್ನುಡಿಗಳು, ಪುಸ್ತಕವಿಮರ್ಶೆಗಳು ಸೇರಿ ಒಟ್ಟು 119 ಬರಹಗಳು ಇದರಲ್ಲಿವೆ. ಎಷ್ಟೋ ವಿಷಯಗಳ ಬಗ್ಗೆ ಶಾಸ್ತ್ರಿಗಳೇ ಮೊದಲ ಸಲ ಬೆಳಕನ್ನು ಚೆಲ್ಲಿದ್ದಾರೆ. ಆರ್ಯರ ಆಕ್ರಮಣದ ವಾದವನ್ನು ಹಲವು ಸಾಕ್ಷ್ಯಾಧಾರಗಳಿಂದ ನಿರಾಕರಿಸಿದ್ದಾರೆ. |
ಪ್ರಾಚೀನ ಲಿಪಿಗಳನ್ನು ಕುರಿತು ಹಲವು ಮಹತ್ವದ ಸಂಗತಿಗಳನ್ನು ತಿಳಿಸಿದ್ದಾರೆ. ತಂತ್ರಗಳ ವೇದಮೂಲ, ಪ್ರಾಚೀನ ವಿಶ್ವವಿದ್ಯಾಲಯ ತಕ್ಷಶಿಲಾ, ಕಲ್ಹಣನ ರಾಜತರಂಗಿಣಿ, ಶಾಲಿವಾಹನಶಕೆಯ ಬಗ್ಗೆ ಸಂಶೋಧನ ಪ್ರಬಂಧಗಳಿವೆ. |
ಶಂಕರಾಚಾರ್ಯರ ಕಾಲವನ್ನು ಕುರಿತು ಶಾಸ್ತ್ರಿಗಳ ಶೋಧ ಮಹತ್ವ ಪಡೆದುಕೊಂಡಿದೆ. ಜೈನಧರ್ಮದ ಹಲವು ಆಯಾಮಗಳನ್ನು ಕುರಿತು ಹತ್ತು ಪ್ರಬಂಧಗಳನ್ನು ಅವರು ರಚಿಸಿದ್ದಾರೆ. |
ವಿದ್ಯಾರ್ಣವತಂತ್ರದ ಮೂರ್ತಿಶಿಲ್ಪವನ್ನು ಕುರಿತ ಪ್ರಬಂಧ ಆ ಕಾಲಕ್ಕೆ ತುಂಬ ಚರ್ಚೆಗೆ ಒಳಗಾಗಿತ್ತು. ಕರ್ನಾಟಕದ ಇತಿಹಾಸವನ್ನು ಕುರಿತಂತೆ ತಲಕಾಡಿನ ಗಂಗರು, ಕಿತ್ತೂರು ರಾಣಿ ಚೆನ್ನಮ್ಮ, ಹಂಪಿಯ ವಿಟ್ಠಲ ದೇವಸ್ಥಾನ, ಕದಂಬರು – ಹೀಗೆ ಹತ್ತೊಂಬತ್ತು ಪ್ರಬಂಧಗಳಿವೆ; ಇವುಗಳಲ್ಲಿ ಗಂಢಬೇರುಂಢದ ಕಲ್ಪನೆಯ ವಿಕಾಸವನ್ನು ಕುರಿತ ಲೇಖವೂ ಸೇರಿದೆ. ಇಂದು ಭಾರತದಲ್ಲಿ ಅಶೋಕನ ಬಗ್ಗೆ ಮತ್ತೆ ವಿಶ್ಲೇಷಣೆ ಆರಂಭವಾಗಿದೆ. |
ಭಾರತೀಯ ಕ್ಷಾತ್ರ ಪರಂಪರೆ ಅಶೋಕನ ಅಹಿಂಸಾವಾದದಿಂದ ಶಿಥಿಲಗೊಂಡಿತು ಎಂಬಂಥ ವಾದಗಳನ್ನು ಕೇಳುತ್ತಿರುತ್ತೇವೆ. ಶಾಸ್ತ್ರಿಗಳ ಪ್ರಬಂಧ 'ದಿ ಧರ್ಮ ಆಫ್ ಅಶೋಕ ಅ್ಯಂಡ್ ಗೀತಾ' – ಈ ದೃಷ್ಟಿಯಿಂದ ಸಾಕಷ್ಟು ಒಳನೋಟಗಳನ್ನು ನೀಡಬಲ್ಲದು. 'ಕಾಂಗ್ರೆಸ್‌ನ ರಾಜಕೀಯ ಚಿಂತನೆಯ ಬೆಳವಣಿಗೆ' ಮತ್ತು 'ಇತಿಹಾಸಕಾರರಾಗಿ ನೆಹರು' – ಶಾಸ್ತ್ರಿಗಳ ಈ ಮಾದರಿಯ ಬರಹಗಳೂ ಉಲ್ಲೇಖಾರ್ಹ. |
ಸದ್ಯದ ರಾಜಕೀಯ–ಸಾಮಾಜಿಕ ಸ್ಥಿತ್ಯಂತರಗಳ ಬಿರುಗಾಳಿಗೆ ಸಿಕ್ಕು ಇತಿಹಾಸದ ವಿವರಗಳು ಹಲವು ಬದಲಾವಣೆಗಳಿಗೆ ತುತ್ತಾಗುತ್ತಲೇ ಇರುತ್ತವೆ. ಇತಿಹಾಸವನ್ನು ವರ್ತಮಾನದ ಕಣ್ಣಿನಲ್ಲಿ ನೋಡುವಾಗ ವಿವೇಕದ ಬೆಳಕು ಅನಿವಾರ್ಯ. 'ಸಾವಿರಾರು ವರ್ಷ ಹಿಂದಿನ ಸನ್ನಿವೇಶವನ್ನು ಮತ್ತೊಂದು ಕಾಲ, ದೇಶಕ್ಕೆ ವರ್ಗಾಯಿಸಿದರೆ ಹಾಸ್ಯಕ್ಕವಕಾಶ'. ಇದು ಶಾಸ್ತ್ರಿಗಳದ್ದೇ ಮಾತು. |
ಇಂದಿನ ವೈಜ್ಞಾನಿಕ ಸಾಧನೆಯೆಲ್ಲವನ್ನೂ ವೇದದಲ್ಲಿಯೇ ನೋಡುವಂಥ ಹಟಬದ್ಧಿ ಇರುವವರಿಗೆ ಈ ಮಾತು ಎಚ್ಚರಿಕೆಯಂತಿದೆ. 'ಸತ್ಯವು ಒಂದೇ. ಚರಿತ್ರಕಾರನಿಗೆ ಅದೇ ಪವಿತ್ರ ವಸ್ತು. |
ತಾತ್ಕಾಲಿಕವಾಗಿ ನಡೆದುಹೋಗುವ ವ್ಯಭಿಚಾರಭಾವಗಳು ಸಾಮಾನ್ಯ ಜನಮನಗಳನ್ನು ತೃಪ್ತಿ ಪಡಿಸಿದರೂ, ಇತಿಹಾಸ ಸತ್ಯಕ್ಕೆ ದೂರ'. ಇಂಥ ಪ್ರಾಮಾಣಿಕ ಸತ್ಯಾನ್ವೇಷಣೆಯ ಅರಿವಿನ ಮನನಕ್ಕೆ ಶ್ರೀಕಂಠಶಾಸ್ತ್ರಿಗಳ ಬರಹಗಳು ದಿಕ್ಸೂಚಿಯಂತಿವೆ. |
'); $('#div-gpt-ad-388970-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-388970'); }); googletag.cmd.push(function() { googletag.display('gpt-text-700x20-ad2-388970'); }); },300); var x1 = $('#node-388970 .field-name-body .field-items div.field-item > p'); if(x1 != null && x1.length != 0) { $('#node-388970 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-388970').addClass('inartprocessed'); } else $('#in-article-388970').hide(); } else { _taboola.push({article:'auto', url:'https://www.prajavani.net/article/ಸತ್ಯಶೋಧನೆಯ-ಶ್ರೀಕಂಠಯಾನ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-388970', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-388970'); }); googletag.cmd.push(function() { googletag.display('gpt-text-300x20-ad2-388970'); }); // Remove current Outbrain //$('#dk-art-outbrain-388970').remove(); //ad before trending $('#mob_rhs1_388970').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-388970 .field-name-body .field-items div.field-item > p'); if(x1 != null && x1.length != 0) { $('#node-388970 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-388970 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-388970'); }); } else { $('#in-article-mob-388970').hide(); $('#in-article-mob-3rd-388970').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-388970','#in-article-684576','#in-article-661737','#in-article-661720','#in-article-661656']; var twids = ['#twblock_388970','#twblock_684576','#twblock_661737','#twblock_661720','#twblock_661656']; var twdataids = ['#twdatablk_388970','#twdatablk_684576','#twdatablk_661737','#twdatablk_661720','#twdatablk_661656']; var obURLs = ['https://www.prajavani.net/article/ಸತ್ಯಶೋಧನೆಯ-ಶ್ರೀಕಂಠಯಾನ','https://www.prajavani.net/minugu-minchu-food-684576.html','https://www.prajavani.net/inetrview-661737.html','https://www.prajavani.net/ganesh-chaturthi-661720.html','https://www.prajavani.net/wodeyar-and-reservation-661656.html']; var vuukleIds = ['#vuukle-comments-388970','#vuukle-comments-684576','#vuukle-comments-661737','#vuukle-comments-661720','#vuukle-comments-661656']; // var nids = [388970,684576,661737,661720,661656]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಬಡ್ತಿ ಮೀಸಲಾತಿ: ಅಂತಿಮ ವಿಚಾರಣೆ 23ರಿಂದ | Prajavani |
ಬಡ್ತಿ ಮೀಸಲಾತಿ: ಅಂತಿಮ ವಿಚಾರಣೆ 23ರಿಂದ |
ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಅಡಕಗೊಂಡ ವಿಷಯಗಳ ಪರಿಶೀಲನೆ |
Published: 13 ಅಕ್ಟೋಬರ್ 2018, 01:26 IST |
Updated: 13 ಅಕ್ಟೋಬರ್ 2018, 01:26 IST |
ನವದೆಹಲಿ: 'ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ' ರಾಜ್ಯ ಸರ್ಕಾರದ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇದೇ 23ಕ್ಕೆ ನಿಗದಿಪಡಿಸಿದೆ. |
'ಕಾಯ್ದೆಯ ಅಗತ್ಯ, ಸಾಧಕ– ಬಾಧಕ ಮತ್ತು ಮಹತ್ವವನ್ನು ಪರಿಶೀಲಿಸಲು ಪ್ರಕರಣದ ಸಮಗ್ರ ವಿಚಾರಣೆ ನಡೆಸಲಾಗುವುದು' ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಕೆ.ಎಂ. ಜೋಸೆಫ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆಯ ವೇಳೆ ತಿಳಿಸಿತು. |
ಕಾಯ್ದೆಯ ಜಾರಿಗೆ ಯಾವುದೇ ಕ್ರಮ ಕೈಗೊಳ್ಳದೆ, ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರು ಈ ವರ್ಷದ ಜುಲೈ 27 ರಂದು ಪೀಠಕ್ಕೆ ಮೌಖಿಕ ಭರವಸೆ ನೀಡಿದ್ದರು. ಇದನ್ನು ಹಿಂತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮುಕುಲ್ ರೋಹಟ್ಗಿ ತಿಳಿಸಿದರು. |
ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡದ ನ್ಯಾಯಪೀಠ, 'ಈ ಕುರಿತು ನಾವು ಯಾವುದೇ ಆದೇಶ ನೀಡಲು ಬಯಸುವುದಿಲ್ಲ. ಬದಲಿಗೆ, ಅನೇಕ ವಿಷಯಗಳು ಅಡಕವಾಗಿರುವ ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸಲಾಗುವುದು' ಎಂದಷ್ಟೇ ತಿಳಿಸಿತು. |
ಹಿಂದುಳಿದಿರುವಿಕೆ ಹಾಗೂ ಪ್ರಾತಿನಿಧ್ಯದ ಕೊರತೆಯನ್ನು ಪರಿಗಣಿಸಿ, ಅಂತಿಮ ತೀರ್ಪು ಹೊರಬರುವ ತನಕ ಕಾಯ್ದೆಯ ಮುಂದುವರಿಕೆಗೆ ನಿರ್ದೇಶನ ನೀಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್ ಮನವಿ ಮಾಡಿದರು. ಅಂತಿಮ ಹಂತದ ವಿಚಾರಣೆಯ ವೇಳೆ ಎಲ್ಲರ ವಾದಗಳನ್ನೂ ಆಲಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು. |
ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಕಾಯ್ದೆ ಜಾರಿಯ ಅನಿವಾರ್ಯತೆಯೂ ಇದೆ ಎಂದು ರೋಹಟ್ಗಿ ಮನವರಿಕೆ ಮಾಡಲು ಪ್ರಯತ್ನಿಸಿದರು. |
ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ರಾಜೀವ್ಧವನ್ ಹಾಗೂ ಕಿರಣ್ ಸೂರಿ, 'ಸುಪ್ರೀಂ ಕೋರ್ಟ್ ತೀರ್ಪನ್ನು ಕಡೆಗಣಿಸಲೆಂದೇ ರಾಜ್ಯ ಸರ್ಕಾರಗಳು ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತಿವೆ. ಅಂತಿಮ ತೀರ್ಪು ಪ್ರಕಟ ಆಗುವವರೆಗೆ ಬಡ್ತಿಯಲ್ಲಿ ಮೀಸಲಾತಿಗೆ ಅವಕಾಶ ನೀಡಬೇಕು ಎಂದು ಕೋರುತ್ತಿರುವುದೇ ಅತಾರ್ಕಿಕ' ಎಂದರು. |
'ಸುಪ್ರೀಂ ಕೋರ್ಟ್‌ನ ತೀರ್ಪನ್ನು ದಮನಗೊಳಿಸುವ ಯಾವುದೇ ರೀತಿಯ ಕಾಯ್ದೆ ಜಾರಿಗೊಳಿಸಕೂಡದು' ಎಂದು ಮದನ್ ಮೋಹನ್ ಪಾಠಕ್ ಪ್ರಕರಣಕ್ಕೆ (1978) ಸಂಬಂಧಿಸಿದಂತೆ ಏಳು ಜನ ಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ ಎಂದೂ ಅವರು ಹೇಳಿದರು. |
ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ತೀರ್ಪು ನೀಡಿರುವ ಸಾಂವಿಧಾನಿಕ ಪೀಠ, ಕೆನೆ ಪದರದ ತತ್ವ ಅಳವಡಿಸುವಂತೆ ಸೂಚಿಸಿದೆ. ಆ ಕುರಿತೂ ನ್ಯಾಯಪೀಠ ಈ ಪ್ರಕರಣವನ್ನು ಪರಿಗಣಿಸಬೇಕಿದೆ ಎಂದು ಅವರು ಆಗ್ರಹಿಸಿದರು. |
'ಬಡ್ತಿಯಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಗೊಳಿಸಿ 2017ರ ಫೆಬ್ರುವರಿ 9ರಂದು ನೀಡಲಾದ ತೀರ್ಪನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ' ಎಂದು ದೂರಿ ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಕೋರ್ಟ್‌ನ ಮೌಖಿಕ ಆದೇಶದ ಪ್ರಕಾರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದು, ಸರ್ಕಾರ ಈ ಕುರಿತು ಯಾವುದೇ ಭರವಸೆ ನೀಡಿಲ್ಲ ಎಂದು ಸರ್ಕಾರದ ಪರ ವಕೀಲ ಬಸವಪ್ರಭು ಪಾಟಿಲ ನ್ಯಾಯಪೀಠಕ್ಕೆ ವಿವರಿಸಿದರು. |
ಕೊರೊನಾ ಚಿಕಿತ್ಸೆಗೆ ಈಜಿಕೊಂಡು ಭಾರತಕ್ಕೆ ಬಂದ ಬಾಂಗ್ಲಾದೇಶದ ಪ್ರಜೆ! | KANNADIGA WORLD |
Home ಕನ್ನಡ ವಾರ್ತೆಗಳು ಅಂತರಾಷ್ಟ್ರೀಯ ಕೊರೊನಾ ಚಿಕಿತ್ಸೆಗೆ ಈಜಿಕೊಂಡು ಭಾರತಕ್ಕೆ ಬಂದ ಬಾಂಗ್ಲಾದೇಶದ ಪ್ರಜೆ! |
ಕೊರೊನಾ ಚಿಕಿತ್ಸೆಗೆ ಈಜಿಕೊಂಡು ಭಾರತಕ್ಕೆ ಬಂದ ಬಾಂಗ್ಲಾದೇಶದ ಪ್ರಜೆ! |
Posted By: Karnataka News BureauPosted date: April 28, 2020 In: ಅಂತರಾಷ್ಟ್ರೀಯ, ರಾಷ್ಟ್ರೀಯ |
ಅಸ್ಸಾಂ: ಬಾಂಗ್ಲಾದೇಶದ ಪ್ರಜೆಯೊಬ್ಬ ಕೊರೊನಾ ವೈರಸ್ ಚಿಕಿತ್ಸೆಗಾಗಿ ಈಜಿಕೊಂಡು ಬಂದು ಭಾನುವಾರ ಅಸ್ಸಾಂ ತಲುಪಿದ್ದಾನೆ ಎಂದು ಭಾರತದ ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ. |
ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಕುಷೈರರಾ ನದಿ ಮೂಲಕ ಈಜಿಕೊಂಡು ಬಂದ ಸೋಂಕಿತ ವ್ಯಕ್ತಿ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಗೆ ಬಂದು ತಲುಪಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ಬಾಂಗ್ಲಾ ಗಡಿಯ ಸಮೀಪ ಹಲವಾರು ಗ್ರಾಮಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು ಎಂದು ಬಿಎಸ್‌ಎಎಫ್ ತಿಳಿಸಿದೆ. 30 ವರ್ಷದ ಆಸುಪಾಸಿನಲ್ಲಿರುವ ಬಾಂಗ್ಲಾದೇಶಿ ಪ್ರಜೆಯನ್ನು ಅಲ್ಲಿನ ಸುನಮ್‌ಗಂಜ್ ಜಿಲ್ಲೆಯ ಝೋರಾಬಜಾರ್ ನಿವಾಸಿ ಅಬ್ದುಲ್ ಹಕ್ ಎಂದು ಗುರುತಿಸಲಾಗಿದೆ. ಆತನನ್ನು ವಶಕ್ಕೆ ಪಡೆದ ಬಿಎಸ್ಎಫ್ ಅಧಿಕಾರಿಗಳು ಮರಳಿ ಬಾಂಗ್ಲಾದೇಶಕ್ಕೆ ಒಪ್ಪಿಸಿದ್ದಾರೆ. |
ಉಭಯ ದೇಶಗಳ ಗಡಿ ಪ್ರದೇಶವಾಗಿರುವ ಕುಶಿಯಾರಾ ನದಿಯಲ್ಲಿ ಈಜಿಕೊಂಡು ಬಂದಿರುವ ವ್ಯಕ್ತಿ ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಕರೀಮ್‌ಗಂಜ್ ನ ಮುಬಾರಕ್‌ಪುರ್ ತಲುಪಿದ್ದನು. ವಿಚಾರ ತಿಳಿದು ಸ್ಥಳೀಯ ನಿವಾಸಿಗಳು ಬಿಎಸ್‌ಎಫ್ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದರು. ಹೀಗಾಗಿ ಯೋಧರು ಆತನನ್ನು ತಡೆದು ವಿಚಾರಣೆ ನಡೆಸಿದರು. ಆತನ ಆರೋಗ್ಯ ಹದಗೆಟ್ಟಿತ್ತು. ಈಜಿ ಬಂದುದರಿಂದ ನಿತ್ರಾಣವಾಗಿತ್ತು. ತನಗೆ ಕೊರೊನಾ ವೈರಸ್ ತಗುಲಿದ್ದು ಚಿಕಿತ್ಸೆಗಾಗಿ ನದಿ ದಾಟಿ ಬಂದೆ ಎಂದು ಬಾಂಗ್ಲಾದೇಶಿ ಕ್ಷೀಣದನಿಯಲ್ಲಿ ಹೇಳಿದ್ದಾನೆ. ಬಳಿಕ ವಿಚಾರವನ್ನು ಬಾಂಗ್ಲಾದೇಶದ ಗಡಿ ರಕ್ಷಣಾಪಡೆಗೆ (ಬಿಜಿಬಿ) ವಿಷಯ ತಿಳಿಸಿ. ಬಾಂಗ್ಲಾ ರಕ್ಷಣಾಪಡೆಯ ಎರಡು ದೋಣಿ ಬಂದು ಬೆಳಗ್ಗೆ 9 ಗಂಟೆ ಹೊತ್ತಿಗೆ ಮರಳಿ ಆತನನ್ನು ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ ಎಂದು ಉನ್ನತ ಮೂಲದ ಅಧಿಕಾರಿಗಳು ತಿಳಿಸಿದ್ದಾರೆ. |
ದಕ್ಷಿಣ ಅಸ್ಸಾಂನಲ್ಲಿರುವ ಸಿಲ್ಚಾರ್ ಮತ್ತು ಕರೀಮ್‌ಗಂಜ್ ಬಾಂಗ್ಲಾದೊಂದಿಗೆ 135 ಕಿಮೀ ಗಡಿ ಪ್ರದೇಶವನ್ನು ಹಂಚಿಕೊಂಡಿದೆ. ಇದರಲ್ಲಿ 4 ಕಿಮೀ ನದಿ ಇದೆ. ಉಭಯ ದೇಶಗಳ ಜನರಿಂದ ಇಲ್ಲಿ ತಕರಾರು ಇರುವುದರಿಂದ ಇಲ್ಲಿ ಇನ್ನೂ ಕೂಡ ನದಿಗೆ ಬೇಲಿ ಹಾಕಿಲ್ಲ. ಬಾಂಗ್ಲಾದೇಶದೊಂದಿಗೆ ಅಸ್ಸಾಂ ಒಟ್ಟು 262ಕಿಮೀ ಗಡಿಯನ್ನು ಹಂಚಿಕೊಂಡಿದೆ. ನಿಗದಿತ ಬೇಲಿ ಇಲ್ಲದಿರುವುದುರಿಂದ ಗಡಿ ಪ್ರದೇಶದ ಮೂಲಕ ಕಳ್ಳಸಾಗಾಣಿಕೆ ಮತ್ತು ಒಳನುಸುಳುವಿಕೆ ನಿರಂತರವಾಗಿ ನಡೆಯುತ್ತಿದೆ. |
ಮಡಿಕೇರಿಯ ಆಸ್ಪತ್ರೆ ಗಳಲ್ಲಿ ರೋಗಿಗಳ ವಸ್ತುಗಳನ್ನು ಕದಿಯುವರ ವಿರುದ್ಧ ಕಠಿನ ಕ್ರಮಕ್ಕೆ ಸೂಚಿಸಲಾಗಿದೆ: ಅಪ್ಪಚು ರಂಜನ್ |
ಜಿಲ್ಲೆ ಕೊಡಗು May 29 / 0 ಪ್ರತಿಕ್ರಿಯೆಗಳು |
ಮಡಿಕೇರಿ:ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗಳ ಮೊಬೈಲ್ ಕಳವು ಪ್ರಕರಣದ ಕುರಿತು ತನಿಖೆ ನಡೆದು 10 ರಿಂದ 12 ಮೊಬೈಲ್‌ಗಳು ಪತ್ತೆಯಾಗಿವೆ. ಅದನ್ನು ಅವುಗಳ ವಾರಸುದಾರರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. |
ಮೊಬೈಲ್ ಕಳೆದು ಕೊಂಡವರು ದೂರು ನೀಡಿರಲಿಲ್ಲ. ನಾನೇ ಒತ್ತಾಯ ಮಾಡಿ ಕೆಲವರಿಂದ ದೂರು ಕೊಡಿಸಿದ್ದೇನೆ. ಅದರಂತೆ ಪತ್ತೆ ಕಾರ್ಯವೂ ನಡೆದಿದೆ ಎಂದರು. ಕುಶಾಲನಗರದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ತಾಯಿಯ ನೆನೆಪಿರುವ ಮೊಬೈಲ್ ಕಾಣೆಯಾಗಿರುವ ಬಗ್ಗೆ ಅಳಲು ತೋಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಡೀನ್ ಅವರನ್ನು ಕೂಡ ವಿಚಾರಿಸಿದ್ದೇನೆ. ಅವರ ಮೊಬೈಲ್ ಅನ್ನು ಮೃತರ ಬ್ಯಾಗ್ ಜೊತೆಯಲ್ಲಿಯೇ ನೀಡಲಾಗಿತ್ತು ಎಂಬ ಮಾಹಿತಿ ನೀಡಿದ್ದಾರೆ. |
ಆಸ್ಪತ್ರೆಯ ಹೊರಗೆ ಎಲ್ಲೋ ಮೊಬೈಲ್ ಕಳೆದಿರಬಹುದು ಎಂದು ಅಭಿಪ್ರಾಯಿಸಿದರಲ್ಲದೆ, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮುಂದೆ ಇಂತಹ ಘಟನೆಗಳು ಮರುಕಳುಹಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. |
ಆಸ್ಪತ್ರೆಯಲ್ಲಿ ಸೇಫ್ ಲಾಕರ್ ವ್ಯವಸ್ಥೆ, ಸೆಕ್ಯುರಿಟಿ ಸಿಬ್ಬಂದಿ ನೇಮಕಕ್ಕೆ ನಿರ್ದೇಶನ ನೀಡಲಾಗಿದೆ. ಇನ್ನು ಐಸಿಯು ವಾರ್ಡ್ ಗೆ ಸೋಂಕಿತರು ಸ್ಥಳಾಂತರವಾಗುವ ಸಂದರ್ಭ ಬೆಲೆ ಬಾಳುವ ಎಲ್ಲಾ ವಸ್ತುಗಳನ್ನು ಸೇಫ್ ಲಾಕರ್‌ಗೆ ಹಸ್ತಾಂತರಿಸಬೇಕು ಮತ್ತು ಅದಕ್ಕೆ ಟ್ಯಾಗ್ ಹಾಕಬೇಕೆಂದು ಸೂಚನೆ ನೀಡಲಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು. |
ಕೊಡಗಿನ ಮಡಿಕೇರಿಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ವಸ್ತುಗಳು ಕದಿಯುವ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಶಾಸಕರು ಹೇಳಿಕೆ ಆಡಳಿತ ವರ್ಗವನ್ನು ಚುರುಕು ಮುಟ್ಟಿಸಲು ಸಹಾಯಕವಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. |
ಪದವಿ ಪ್ರದಾನ ಸಮಾರಂಭ | News13 |
News13 > ಸುದ್ದಿಗಳು > ರಾಜ್ಯ > ಪ್ರಾದೇಶಿಕ > ಮಂಗಳೂರು > ಪದವಿ ಪ್ರದಾನ ಸಮಾರಂಭ |
ಮಂಗಳೂರು: ಇಲ್ಲಿನ ನೇತಾಜಿ ನರ್ಸಿಂಗ್ ಇನ್ಸ್ಟಿಟ್ಯೂಟ್ ಮತ್ತು ಪ್ರೇಮಕಾಂತಿ ಶೈಕ್ಷಣಿಕ ಕಾಲೇಜಿನ 'ಪದವಿ ಪ್ರದಾನ ಸಮಾರಂಭ'ವು ಡಾನ್ ಬಾಸ್ಕೋ ಹಾಲ್‌ನಲ್ಲಿ ಸೋಮವಾರ ನಡೆಯಿತು. |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಣಿಪಾಲ ವಿ.ವಿ.ಯ ಉಪಕುಲಪತಿ ಡಾ. ಸುರೇಂದ್ರ ವಿ. ಶೆಟ್ಟಿ ಗೌರವ ಅತಿಥಿಯಾಗಿ ಮಾತನಾಡಿದರು. |
ಪ್ರೇಮಕಾಂತಿ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ (ರಿ) ಅಧ್ಯಕ್ಷೆ, ಪ್ರೊ. ಎ. ಪ್ರೆಮಲತಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರೆಮಕಾಂತಿ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಎ. ರತ್ನಕಾಂತಿ ಶೆಟ್ಟಿ, ಟ್ರಸ್ಟಿಗಳಾದ ಸುಧೀರ್ ಪ್ರಸಾದ್ ಶೆಟ್ಟಿ, ಗುರುಕಿರಣ್, ಡಾ ಶಿವ ಶರಣ್, ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರಾದ ಪ್ರೊ ಹರೀಶ್ ಕೆ. ಮತ್ತು ಶೈಕ್ಷಣಿಕ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತ್ಸ್ನಾ ರಾವ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. |
ಬಿ ಎಸ್ಸಿ ನರ್ಸಿಂಗ್ ವಿಭಾಗದಲ್ಲಿ , ಡಿಸ್ಟಿಂಕ್ಷನ್ ಹೊಂದಿರುವ 27 ವಿದ್ಯಾರ್ಥಿಗಳು, 15 ಪ್ರಥಮ ದರ್ಜೆ ಉತ್ತೀರ್ಣರಾದ ವಿದ್ಯಾರ್ಥಿಗಳು, ಪಿಸಿಬಿ ವಿಜ್ಞಾನ ವಿಭಾಗದ 14 ಮೊದಲ ದರ್ಜೆ ಮತ್ತು 9 ದ್ವಿತೀಯ ದರ್ಜೆ ವಿದ್ಯಾರ್ಥಿಗಳಿಗೆ ಮತ್ತು ಬಿ.ಎಡ್ ವಿಭಾಗದಲ್ಲಿ 46 ಡಿಸ್ಟಿಂಕ್ಷನ್ ಹೊಂದಿರುವ ಮತ್ತು 30 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. |
ಗೃಹ ಸಾಲದ EMI ಮೊತ್ತ ತಗ್ಗಿಸೋದು ಹೇಗೆ? ಇಲ್ಲಿದೆ ಮಾಹಿತಿ | 5 Tips to reduce existing home loan EMI amount |
ಗೃಹ ಸಾಲ ದೀರ್ಘಾವಧಿಯದ್ದಾಗಿರೋ ಕಾರಣ ಇಎಂಐ ಮೊತ್ತ ಕೆಲವರಿಗೆ ದೊಡ್ಡ ಹೊರೆ ಅನಿಸಬಹುದು.ಆದ್ರೆ ಇಎಂಐ ಮೊತ್ತವನ್ನು ತಗ್ಗಿಸಲು ಕೂಡ ಕೆಲವು ಮಾರ್ಗಗಳಿವೆ. |
Bangalore, First Published Jul 31, 2021, 12:46 PM IST |
ಸ್ವಂತ ಸೂರು ನಿರ್ಮಿಸೋದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಕನಸಾಗಿರುತ್ತದೆ. ಉಳಿಸಿದ ಒಂದೊಂದು ಪೈಸೆಯನ್ನು ಸೇರಿಸಿ ಜೊತೆಗೆ ಸಾಲ ಮಾಡಿ ಮನೆಯನ್ನೇನೋ ಖರೀದಿಸುತ್ತೇವೆ. ಆದ್ರೆ ಮುಂದೆ ಪ್ರತಿ ತಿಂಗಳು ಆದಾಯದಲ್ಲಿ ಒಂದಿಷ್ಟು ಭಾಗ ಇಎಂಐ ರೂಪದಲ್ಲಿ ಸಾಲಕ್ಕೆ ಸಂದಾಯವಾಗುತ್ತ ಹೋಗೋವಾಗ, ದುಡಿದ ದುಡ್ಡೆಲ್ಲ ಸಾಲಕ್ಕೇ ಹೋಗುತ್ತಿದೆ ಎಂಬ ಭಾವನೆ ಮೂಡೋದಂತೂ ಸುಳ್ಳಲ್ಲ. ಗೃಹ ಸಾಲ ಜೀವನದ ಅತೀ ದೀರ್ಘಾವಧಿ ಸಾಲವಾಗಿರೋ ಕಾರಣ ಸಾಲ ಪಡೆದವರು ಇಎಂಐ ಮೊತ್ತ ಕಡಿಮೆ ಮಾಡಿಕೊಳ್ಳೋ ಮಾರ್ಗದ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಗೃಹ ಸಾಲದ ಇಎಂಐ ಮೊತ್ತವನ್ನು ಕಡಿತಗೊಳಿಸೋ 6 ಮಾರ್ಗಗಳು ಇಲ್ಲಿವೆ. |
ಬಡ್ಡಿ ದರ ಬದಲಾಯಿಸಿಕೊಳ್ಳಿ |
ಗೃಹ ಸಾಲ ಪಡೆದ ಬಹುತೇಕರು ಮಾಡೋ ದೊಡ್ಡ ತಪ್ಪೇನೆಂದ್ರೆ ಒಮ್ಮೆ ಸಾಲ ಮರುಪಾವತಿಸಲು ಪ್ರಾರಂಭಿಸಿದ ಬಳಿಕ ಇಎಂಐ ಸಂಯೋಜನೆಯನ್ನು ಪರಿಶೀಲಿಸಲು ಹೋಗೋದೇ ಇಲ್ಲ. ಉದಾಹರಣೆಗೆ ನೀವು ಗೃಹ ಸಾಲ ಪಡೆದು 10-12 ವರ್ಷಗಳಾಗಿದ್ರೆ, ಬ್ಯಾಂಕ್ ಬಡ್ಡಿ ದರ ವಿಧಿಸೋ ವಿಧಾನ ಈ ಅವಧಿಯಲ್ಲಿ ಸಾಕಷ್ಟು ಬದಲಾಗಿರುತ್ತದೆ. ಹಿಂದೆಲ್ಲ ಎಲ್ಲ ಸಾಲಗಳನ್ನು ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್)ಗೆ ಜೋಡಿಸಲಾಗಿತ್ತು. ಆದ್ರೆ ಆ ಬಳಿಕ ಅದು ಫ್ಲೋಟಿಂಗ್ ರೇಟ್‌ಗೆ ಬದಲಾಯ್ತು, ನಂತರ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಗೆ ಜೋಡಿಸಲಾಯ್ತು. 2019ರಿಂದ ಇದನ್ನು ಎಕ್ಟ್ರನಲ್ ಬೆಂಚ್ ಮಾರ್ಕ್ ರೇಟ್ ( ಇಬಿಆರ್)ಗೆ ಬದಲಾಯಿಸಲಾಗಿದೆ. ಒಂದು ವೇಳೆ ನಿಮಗೆ ಈ ಬಗ್ಗೆ ಮಾಹಿತಿಯಿಲ್ಲದೆ ನೀವು ಹೊಸ ವಿಧಾನಕ್ಕೆ ಬಡ್ಡಿ ದರವನ್ನು ಬದಲಾಯಿಸಿಕೊಳ್ಳದಿದ್ರೆ, ಬ್ಯಾಂಕ್ ಈ ಮೊದಲಿನ ವಿಧಾನದಲ್ಲೇ ನಿಮ್ಮ ಸಾಲಕ್ಕೆ ಬಡ್ಡಿ ವಿಧಿಸುತ್ತದೆ. ನೀವು ಈಗಲೂ ಬಿಪಿಎಲ್‌ಆರ್, ಎಂಸಿಎಲ್‌ಆರ್ ವಿಧಾನದಲ್ಲೇ ಇದ್ರೆ ನೀವು ಇಬಿಆರ್‌ಗೆ ಹೋಲಿಸಿದ್ರೆ ಅತ್ಯಧಿಕ ಬಡ್ಡಿ ಕಟ್ಟುತ್ತಿದ್ದೀರಿ ಎಂದೇ ಅರ್ಥ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಗಮನಿಸೋ ಜೊತೆಗೆ ಹಳೆಯ ವಿಧಾನದಿಂದ ಹೊಸ ವಿಧಾನಕ್ಕೆ ಬಡ್ಡಿ ದರ ಬದಲಾಯಿಸೋದು ಅಗತ್ಯ. ನೀವು ಬ್ಯಾಂಕ್‌ಗೆ ತೆರಳಿ ಈ ಬಗ್ಗೆ ಮನವಿ ಮಾಡಿದ್ರೆ, ಅವರು ನಿಮ್ಮ ಬಡ್ಡಿ ದರವನ್ನು ಈಗಿನ ವಿಧಾನಕ್ಕೆ ಬದಲಾಯಿಸುತ್ತಾರೆ. ಇದಕ್ಕೆ ನಿಗದಿತ ವರ್ಗಾವಣೆ ಶುಲ್ಕ ಪಾವತಿಸಿದ್ರೆ ಸಾಕು. ಆದ್ರೆ ಈ ಶುಲ್ಕ ದುಬಾರಿಯೇನೂ ಆಗಿರೋದಿಲ್ಲ. ಇದ್ರಿಂದ ನಿಮ್ಮ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತದೆ. ಹೀಗಾಗಿ ಸಹಜವಾಗಿ ನಿಮ್ಮ ಇಎಂಐ ಮೊತ್ತ ಕೂಡ ತಗ್ಗುತ್ತದೆ. |
ಹೊಸ ಸಂಸ್ಥೆಗೆ ವರ್ಗಾಯಿಸಿ |
ಅನೇಕ ಬ್ಯಾಂಕ್‌ಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುತ್ತಿವೆಯಾದ್ರೂ ಬಡ್ಡಿ ದರದಲ್ಲಿ ಸಂಸ್ಥೆಯಿಂದ ಸಂಸ್ಥೆಗೆ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಗೃಹ ಸಾಲ ತೆಗೆದುಕೊಳ್ಳೋ ಮುನ್ನ ಬಡ್ಡಿ ದರವನ್ನು ಹೋಲಿಕೆ ಮಾಡಿ ನೋಡೋದು ಅಗತ್ಯ. ಸಾಲ ತೆಗೆದುಕೊಂಡ ಬಳಿಕ ಕೂಡ ಕಡಿಮೆ ಬಡ್ಡಿ ದರ ಹೊಂದಿರೋ ಬ್ಯಾಂಕ್ ಅಥವಾ ಎಚ್‌ಎಫ್‌ಸಿಗಳಿಗೆ ಸಾಲವನ್ನು ವರ್ಗಾಯಿಸಲು ಅವಕಾಶವಿದೆ. ಒಂದು ವೇಳೆ ನೀವು ಅಧಿಕ ಬಡ್ಡಿ ಪಾವತಿಸುತ್ತಿದ್ರೂ ಕಡಿಮೆ ಬಡ್ಡಿದರ ಹೊಂದಿರೋ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸಿ. ಈ ಪ್ರಕ್ರಿಯೆಗೆ ಜಾಸ್ತಿ ವೆಚ್ಚ ಕೂಡ ಮಾಡಬೇಕಾಗಿಲ್ಲ. ಇದ್ರಿಂದ ನಿಮ್ಮ ಸಾಲದ ಮೇಲಿನ ಬಡ್ಡಿ ಇಳಿಯೋದ್ರಿಂದ ಇಎಂಐ ಮೊತ್ತ ಕಡಿಮೆಯಾಗುತ್ತದೆ. |
Subsets and Splits
No community queries yet
The top public SQL queries from the community will appear here once available.