text
stringlengths
0
61.5k
lok sabha elections 2019: Uttar Pradesh Chief Minister Yogi Adityanath said that if the opposition parites have faith in Ali, BJP had faith in Bajrang Bali. SP, BSP and Congress spreading green virus in the country.
ಕುಕ್ಕೆ, ಧರ್ಮಸ್ಥಳ, ಕಟೀಲ್‍ನಲ್ಲಿ ದರ್ಶನಕ್ಕೆ ಮಾತ್ರ ಅವಕಾಶ – ಜನಮಿತ್ರ
– ವೀಕೆಂಡ್‍ನಲ್ಲಿ ಸಂಪೂರ್ಣ ಬಂದ್
ಮಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಾಗಾಗಿ ಕರಾವಳಿ ಪ್ರಸಿದ್ದ ಪುಣ್ಯಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ದ.ಕ ಜಿಲ್ಲೆಯಲ್ಲಿ ಅನೇಕ ಹೆಸರಾಂತ ದೇವಾಲಯಗಳಿದ್ದು ದೇವಸ್ಥಾನಕ್ಕೆ ಬರುವ ಭಕ್ತರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು ಇಟ್ಟಿದೆ. ಆಗಸ್ಟ್ 15 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ಯಾವುದೇ ಸೇವೆಗಳು ಇರೋದಿಲ್ಲ. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಈ ಮೂರು ದೇವಸ್ಥಾನದಲ್ಲಿ ದರ...
ದೇವಸ್ಥಾನದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ದೇವಸ್ಥಾನದಲ್ಲಿ ತೀರ್ಥಪ್ರಸಾದ, ಸೇವೆ ಸೇರಿದಂತೆ ಅನ್ನಸಂತರ್ಪಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಕೇಂಡ್‍ನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನದ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು 72 ಗಂಟೆಗಳ ಒಳಗಿನ ನೆಗಟಿವ್ ವರದಿ ಕಡ್ಡಾಯಗೊಳಿಸಿದ್ದು. ...
ಬೆಳೆ ವಿಮೆ: ಬರ ಪರಿಹಾರ, ಬೆಳೆ ವಿಮೆ ಕೊಡಿಸಲು ಆಗ್ರಹ - drought relief and crop insurance | Vijaya Karnataka
drought relief and crop insurance
ವಿಜಯ ಕರ್ನಾಟಕ | Updated: Jun 15, 2019, 10:01PM IST
ಬೀದರ್‌ :ರೈತರಿಗೆ ಸರಕಾರದಿಂದ ಬರಬೇಕಾದ ಬರ ಪರಿಹಾರ, ಬೆಳೆ ವಿಮೆ, ಸಾಲ ಮನ್ನಾ ಹಾಗೂ ಕೇಂದ್ರ ಸರಕಾರದಿಂದ 6 ಸಾವಿರ ರೂಪಾಯಿ ಅನುದಾನ ಇನ್ನಿತರ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ರೈತ ಸಂಘ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ 1 ವರ್ಷವಾಗಿದ್ದರೂ ಬರ ಪರಿಹಾರ ಸಿಕ್ಕಿಲ್ಲ. ಸಾಲ ಮನ್ನಾ ಮಾಡಿ ಒಂದು ವರ್ಷವಾದರೂ ಸಂಪೂರ್ಣ ಎಲ್ಲ ರೈತರ ಸಾಲ ಮನ್ನಾ ಆಗಿಲ್ಲ. 2018-19ನೇ ಸಾಲಿನ ಮುಂಗಾರಿನಲ್ಲಿ ಜಿಲ್ಲೆಯ 1.81 ಲಕ್ಷ ಜನ ರೈತರು ಬೆಳೆ ವಿಮೆ ಮಾಡಿಸಿ 9 ಕೋಟಿಗೂ ಅಧಿಕ ಪ್ರೀಮಿಯಂ ಭರಿಸಿದ್ದಾರೆ. ಹಿಂಗಾರಿಗೆ 74 ಸಾವಿರ ರೈತರು 1.45 ಕೋಟಿ ಪ್ರೀಮಿಯಂವನ್ನು ವಿಮೆಗೆ ಭರಿಸಿದ್ದಾರೆ. ಆದರೆ...
2018-19ನೇ ಸಾಲಿನಲ್ಲಿ ಕಾರಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ 8 ತಿಂಗಳಾದರೂ ಪೂರ್ಣ ಹಣ ಸಂದಾಯ ಮಾಡಿಲ್ಲ. ಕೇಂದ್ರ ಸರಕಾರದಿಂದ ವರ್ಷಕ್ಕೆ 6 ಸಾವಿರ ರೂ. ಅನುದಾನವನ್ನು ತಲಾ 2 ಸಾವಿರ ರೂ. ಕಂತಿನಂತೆ ಘೋಷಣೆ ಮಾಡಲಾಗಿದ್ದು, ಇಂದಿಗೂ ಯಾವೊಬ್ಬ ರೈತರಿಗೂ ಬಂದಿಲ್ಲ. ಈ ಮೇಲಿನ ಸೌಲಭ್ಯಗಳ ಕುರಿತು ಸರಕಾರದವರಿಗೆ ತಮ್ಮ ಮೂಲಕ (ಡಿಸಿ) ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರತಿ...
ನೆಪ ಹೇಳದೇ ಸರಕಾರದಲ್ಲಿ ಈ ವರೆಗೆ ಯಾವ್ಯಾವ ಸೌಲಭ್ಯಗಳನ್ನು ದೊರಕಿಸಿ ಕೊಟ್ಟಿದ್ದೀರಿ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕೋರಿದರು. ಮುಂದಿನ ದಿನಗಳಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ವಿಶ್ವನಾಥ ಕೌಠಾ, ಕಾರ‍್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ವೈಜನಾಥ ಭುಯ್ಯಾ, ಸುರೇಶ್‌ ಜನಶೆಟ್ಟಿ, ಅಮತಪ್ಪ ಕೊಳಾರ, ಸಿದ್ದಣ್ಣ ಸಣಮಣಿ, ಶಂಕ್ರಪ್ಪ ಪಾರಾ, ಪ್ರಭುರಾವ್‌ ಪಾಟೀಲ್‌ ಹಾಗೂ ಮತ್ತಿತರೆ ರೈತರು ಇದ್ದರು.
ಆರೋಗ್ಯ ಸುಧಾರಣೆಗೆ ಆಯುರ್ವೇದ, ಯೋಗಕ್ಕೂ ಉತ್ತೇಜನಜಿಲ್ಲೆಗೊಂದು ವೈದ್ಯಕೀಯ ಮಹಾವಿದ್ಯಾಲಯ - MyArogya
ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆ ನಡುವಣ ಅಂತರ ಕುಗ್ಗಿದೆ. ಸರ್ಕಾರವು ಆರೋಗ್ಯ ಕ್ಷೇತ್ರದ ಸುಧಾರಣೆಯ ಜೊತೆಗೆ ಆಯುರ್ವೇದ ಮತ್ತು ಯೋಗಕ್ಕೂ ಉತ್ತೇಜನ ನೀಡುತ್ತಿದೆ. ಕಳೆದ ೬ ವರ್ಷಗಳಲ್ಲಿ 170ಕ್ಕೂ ಹೆಚ್ಚು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. 100ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕಾರ್ಯವು ತ್ವರಿತಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ...
ಈಗ 22ಕ್ಕೂ ಹೆಚ್ಚು ಏಮ್ಸ್‌ಗಳು ಇವೆ. ಏಮ್ಸ್ ಇರಲಿ, ವೈದ್ಯಕೀಯ ಕಾಲೇಜು ಇರಲಿ, ಅದರ ಸಂಪರ್ಕ ಜಾಲ ದೇಶದ ಪ್ರತಿ ಮೂಲೆಗೂ ವಿಸ್ತರಣೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದಿನ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕಾರ್ಯವೈಖರಿಯ ಹಾಗೂ ಅದರ ತೀರ್ಮಾನಗಳ ಬಗ್ಗೆ ಪ್ರಶ್ನೆಗಳು ಮೂಡುತ್ತಿದ್ದವು. ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕುರಿತಂತೆ ಅನುಮಾನಗಳಿದ್ದವು, ಇದರಿಂದಾಗಿ ವೈದ್ಯಕೀಯ...
ಸಾಕಷ್ಟು ಪ್ರಯತ್ನ, ಅನೇಕ ಸವಾಲುಗಳ ನಂತರ ಸರ್ಕಾರ ಅಂತಿಮವಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಎಂಸಿಐ ಬದಲಾಗಿ ಸ್ಥಾಪಿಸುವ ಮೂಲಕ ಸುಧಾರಣೆಗೆ ಮುಂದಾಗಿದೆ. ಆಯೋಗದ ಶ್ರಮ ಈಗ ಕಾಣಿಸಲು ಆರಂಭಿಸಿದೆ ಎಂದರು.
20 ವರ್ಷದ ಹಿಂದೆ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಸೌಲಭ್ಯ ಕುರಿತು ಅನೇಕ ಸವಾಲುಗಳಿದ್ದವು. ಸವಾಲುಗಳನ್ನು ಸ್ವೀಕರಿಸಿ ಸಂಘಟಿತ ಪ್ರಯತ್ನಗಳ ಮೂಲಕ ಪರಿಸ್ಥಿತಿಯಲ್ಲಿ ಒಟ್ಟು ಬದಲಾವಣೆಯನ್ನು ತರಲು ಒತ್ತು ನೀಡಲಾಯಿತು ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ತಾವು ಈ ಕ್ಷೇತ್ರದಲ್ಲಿ ಗುರುತಿಸಿದ್ದ ಲೋಪಗಳನ್ನು ಈಗ ದೇಶದಲ್ಲಿ ನಿವಾರಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಸುಧಾರಣೆಗೆ ಒತ್ತು ನೀಡಿದ್ದು, ಪರಿವರ್ತನೆಗೆ ರಾಷ್ಟ್ರೀಯ ನೀತಿಗೆ ಆದ್ಯತೆ ನೀಡಲಾಗಿದೆ ಎಂದರು.
ಆರೋಗ್ಯ ಕ್ಷೇತ್ರ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಆ ಕ್ಷೇತ್ರದ ಸಮಸ್ಯೆಗಳ ಅರಿವು ತಮಗಿದೆ. ಏಕೆಂದರೆ ನಾನು ಮುಖ್ಯಮಂತ್ರಿ ಆಗಿದ್ದೆ. ಆರೋಗ್ಯ ವ್ಯವಸ್ಥೆ ವಿಭಜನೆಗೊಂಡಿದ್ದು, ಸಂಪರ್ಕದ ಕೊರತೆ ಇದೆ. ಸುಧಾರಣೆಗೆ ರಾಷ್ಟ್ರ ಮಟ್ಟದಲ್ಲಿಯೇ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.
ಸುಧಾರಣೆಯ ದೃಷ್ಟಿಯಿಂದ ಸ್ವಚ್ಛ ಭಾರತ್ ಅಭಿಯಾನ್‌ನಿಂದ ಆಯುಷ್ಮಾನ್ ಭಾರತ್, ಆಯುಷ್ಕಾನ್ ಭಾರತ್ ಡಿಜಿಟಲ್ ಮಿಷನ್ ಒಳಗೊಂಡು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರತದಲ್ಲಿ ಸೀಟ್‌ಬೆಲ್ಟ್ ಧರಿಸದವರೇ ಹೆಚ್ಚು | Prajavani
ಭಾರತದಲ್ಲಿ ಸೀಟ್‌ಬೆಲ್ಟ್ ಧರಿಸದವರೇ ಹೆಚ್ಚು
Published: 30 ನವೆಂಬರ್ 2017, 01:00 IST
Updated: 30 ನವೆಂಬರ್ 2017, 01:00 IST
ಕಾರು ಚಾಲನೆಯ ಸುರಕ್ಷಿತ ಸಾಧನಗಳಲ್ಲಿ ಸೀಟ್‌ಬೆಲ್ಟ್ ಪಾತ್ರ ಪ್ರಮುಖ. ಅದರಲ್ಲೂ ಅಸುರಕ್ಷಿತ ರಸ್ತೆಗಳಿಗೆ ಹೆಸರಾದ ಭಾರತದಲ್ಲಿ ಇದರ ಅವಶ್ಯಕತೆ ಹೆಚ್ಚೇ ಇದೆ. 2016ರಲ್ಲಿ ಭಾರತದಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಸೀಟ್‌ಬೆಲ್ಟ್ ಧರಿಸದ ಕಾರಣಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ 5,638 ಮಂದಿ (ಮೂಲ: ರೋಡ್ ಆಕ್ಸಿಡೆಂಟ್ ರಿಪೋರ್ಟ್‌ –2016, ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್‌ ಅಂಡ್ ಹೈವೇಸ...
ಹೀಗೆಂದು ವರದಿ ನೀಡಿರುವುದು ಇತ್ತೀಚಿನ ಸಮೀಕ್ಷೆ. ಭಾರತದಲ್ಲಿ ಶೇ 75 ಮಂದಿ ಸೀಟ್‌ಬೆಲ್ಟ್ ಧರಿಸುವುದಿಲ್ಲ ಎಂಬ ಮಾಹಿತಿಯನ್ನು ಈ ಸಮೀಕ್ಷೆ ಹೊರಹಾಕಿದೆ. ಮಾರುತಿ ಸುಜುಕಿ, ಕಾಂತಾರ್ ಗ್ರೂಪ್‌ ಜೊತೆ ಸೇರಿ ಇತ್ತೀಚೆಗೆ 'ಸೀಟ್‌ಬೆಲ್ಟ್ ಯೂಸ್ ಇನ್ ಇಂಡಿಯಾ' ಸರ್ವೇ ನಡೆಸಿತು. ಅದರಲ್ಲಿ ಸೀಟ್‌ಬೆಲ್ಟ್ ಧರಿಸುವ ಕುರಿತು ಅಂಕಿಅಂಶ, ಹಾಗೆಯೇ ಧರಿಸದೇ ಇರುವುದಕ್ಕೆ ಕೆಲವು ಕಾರಣಗಳನ್ನೂ ಕಂಡುಕೊಂಡಿದೆ. ಹ...
* ಕಾರು ಪ್ರಯಾಣ ಮಾಡುವವರಲ್ಲಿ ಕೇವಲ ಶೇ 25 ಮಂದಿ ನಿರಂತರವಾಗಿ ಸೀಟ್‌ ಬೆಲ್ಟ್ ಧರಿಸುವುದು.
* ಭಾರತದಲ್ಲಿ ಕಾನೂನು ಕ್ರಮಗಳಿದ್ದರೂ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕುವವರೇ ಹೆಚ್ಚು. ಸೆಂಟ್ರಲ್ ಮೋಟಾರ್ ವೆಹಿಕಲ್ಸ್‌ ಆ್ಯಕ್ಟ್‌ 1989ರ 4ನೇ ಅಧ್ಯಾಯದ ಪ್ರಕಾರ, ಪ್ರಯಾಣಿಕರು ಇದ್ದಾಗ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದರೆ, ಸಾವಿರ ರೂಪಾಯಿವರೆಗೂ ದಂಡ ಹಾಕಬಹುದು. ಶೇ 32 ಜನರು, ಅಸಮರ್ಪಕ ಕಾನೂನು ಇದಕ್ಕೆ ಮುಖ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
* ಸೀಟ್‌ಬೆಲ್ಟ್ ಧರಿಸಿದರೆ, ಸುಲಭವಾಗಿ ಕಾರು ಚಾಲನೆ ಮಾಡಲು ಆತ್ಮವಿಶ್ವಾಸವಿಲ್ಲದವ ಅಥವಾ ಸರಿಯಾಗಿ ಚಾಲನೆ ಮಾಡಲು ಬರುವುದಿಲ್ಲ ಎಂದು ತಿಳಿದು ಕೊಳ್ಳುವ ಕಾರಣಕ್ಕೆ ಬೆಲ್ಟ್‌ ಧರಿಸುವುದಿಲ್ಲ ಎಂಬ ಕಾರಣವನ್ನು ಶೇ 23 ಮಂದಿ ನೀಡಿದ್ದಾರೆ.
*ಶೇ 22 ಚಾಲಕರು ತಮ್ಮ ಬಟ್ಟೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಸೀಟ್ ಬೆಲ್ಟ್ ಧರಿಸುವುದಿಲ್ಲ.
*ದಕ್ಷಿಣ ಭಾರತದಲ್ಲಿ ಜೀವರಕ್ಷಕ ತಂತ್ರಜ್ಞಾನವನ್ನು ಬಳಸುವವರ ಸಂಖ್ಯೆ ಕಡಿಮೆ.
*ಸೀಟ್‌ಬೆಲ್ಟ್ ಧರಿಸುವುದರಿಂದ, ಸಾವಿನ ಪ್ರಮಾಣ ವನ್ನು ಶೇ 45ರಷ್ಟು ತಗ್ಗಿಸಬಹುದು. ಗಂಭೀರ ಗಾಯ ವಾಗುವುದನ್ನು ಶೇ 50ರಷ್ಟು ತಪ್ಪಿಸಬಹುದು. ಅಪಘಾತ ವಾದಾಗ ಸೀಟ್‌ಬೆಲ್ಟ್ ಧರಿಸದವರು ಹೊರಗೆ ಬೀಳುವ ಸಂಭವ 30 ಪಟ್ಟು ಹೆಚ್ಚಿರುತ್ತದೆ.
*ಮಹಾರಾಷ್ಟ್ರದ ನಾಗಪುರದಲ್ಲಿ ಶೇ 90ರಷ್ಟು ಚಾಲಕರು, ಜೈಪುರ ಹಾಗೂ ಛಂಡೀಗಡದಲ್ಲಿ ಶೇ 80ರಷ್ಟು ಚಾಲಕರು ಸೀಟ್‌ಬೆಲ್ಟ್ ಧರಿಸುತ್ತಾರೆ. ಮಧ್ಯಪ್ರದೇಶದ ಇಂದೋರ್ ಹಾಗೂ ಕರ್ನಾಟಕದ ಬೆಂಗಳೂರು ಅನುಸರಣೆಯಲ್ಲಿ ತುಂಬಾ ಹಿಂದಿದೆ.
*ಕಾರಿನ ಹಿಂಭಾಗದಲ್ಲಿ ಕೂರುವವರಂತೂ ಸೀಟ್‌ಬೆಲ್ಟ್ ಧರಿಸುವ ಸಾಧ್ಯತೆ ವಿರಳ. ಏರ್‌ಬ್ಯಾಗ್ ಇರುವುದರಿಂದ ತಾವು ಸೀಟ್‌ಬೆಲ್ಟ್ ಧರಿಸುವ ಅವಶ್ಯಕತೆಯಿಲ್ಲ ಎಂದೂ ಧರಿಸದೇ ಇರುವವರು ಇದ್ದಾರೆ.
ಮಂಗಳೂರು: ವಿವಿಧ ಕಳವು ಪ್ರಕರಣ ; ಮೂವರು ಆರೋಪಿಗಳ ಬಂಧನ; ರೂ. 4.55 ಲಕ್ಷ ಮೌಲ್ಯದ ಸೊತ್ತು ವಶ
Home Mangalorean News Kannada News ಮಂಗಳೂರು: ವಿವಿಧ ಕಳವು ಪ್ರಕರಣ ; ಮೂವರು ಆರೋಪಿಗಳ ಬಂಧನ; ರೂ. 4.55 ಲಕ್ಷ ಮೌಲ್ಯದ...
ಮಂಗಳೂರು: ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾದ ಮೂರು ಮಂದಿ ಕಳ್ಳರನ್ನು ಪಾಂಡೇಶ್ವರ ಠಾಣಾ ಪೋಲಿಸರು ಸಪ್ಟೆಂಬರ್ 15 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಶನ್ ಬಳಿ ಬಂಧಿಸಿ ಸುಮಾರು ರೂ. 4.55 ಲಕ್ಷ ಮೌಲ್ಯ ಬೆಳೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನಿಸ್ಸೀಮರಾದ ಹಾವೇರಿಯ ನಾಗಿನಮಟ್ಟಿ ನಿವಾಸಿ ಕಿರಣ್ (21), ಮಂಗಳೂರು ಬಜ್ಪೆ ಪೊರ್ಕೋಡಿ ನಿವಾಸಿ ಸಂದೀಪ್(23) ಹಾಗೂ ತಮಿಳುನಾಡಿನ ಅಶೋಕ್ ಕುಮಾರ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಕಿರಣ್ ಮತ್ತು ಅಶೋಕ್ ಕುಮಾರ್ ರವರು ಟೆಂಟ್ ವಾಸಿಗಳಾಗಿದ್ದು, ಊರೂರು ಅಲೆಯುತ್ತಾ ಅಪರಾಧಗಳನ್ನು ಎಸಗುವ ಪ್ರವೃತ್ತಿಯವರಾಗಿರುತ್ತಾರೆ. ಇವರಿಗೆ ಮಂಗಳೂರಿನಲ್ಲಿ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಆರೋಪಿ ಸಂದೀಪ್ ನ ಪರಿಚಯವಾಗಿರುತ್ತದೆ. ಬಳಿಕ ಇವರುಗಳು ಗುಜುರಿ ಹೆಕ್ಕುವ ನೆಪದಲ್ಲಿ ಊರೂರು ಅಲೆದಾಡಿ ಹಗಲು ಸಮಯ ಜನರು ವಾಸ್ತವ್ಯವಿಲ್ಲದ ಮನೆಯನ್ನು ಹಾಗೂ ದೈವಸ್ಥಾನಗಳನ್ನು ಗುರುತಿ...
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಠಾಣೆ, ಸುರತ್ಕಲ್ ಠಾಣೆ, ಪೂರ್ವ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಹಾಸನ ಜಿಲ್ಲೆಯ ಠಾಣೆಗಳಲ್ಲಿ ವರದಿಯಾದ ಒಟ್ಟು 11 ಕನ್ನ ಕಳವು ಪ್ರಕರಣಗಳನ್ನು ಸಂಬಧಿಸಿ ಬಂಧಿತರಿಂದ, 128 ಗ್ರಾಂ ತೂಕದ ಚಿನ್ನಾಭರಣಗಳು, ತಾಮ್ರದ ಕಟಾರಗಳು-10, ಘಂಟೆಗಳು-5, ಕಾಲುದೀಪ 20, ಲ್ಯಾಪ್ ಟಾಪ್ -2 ಒಟ್ಟು ಸುಮಾರು 4,55,000/- ರೂ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊ...
ಪೊಲೀಸ್ ಆಯುಕ್ತರಾದ ಶ್ರೀ ,ಎಸ್ ಮುರುಗನ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ ಶಾಂತರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ| ಸಂಜೀವ .ಎಂ ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್,ಆರ್ ಕಲ್ಯಾಣ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರ...
ಮಾರ್ಕನು 5 KAN - ಆ ಮೇಲೆ ಅವರು ಸಮುದ್ರದ ಆಚೇದಡದಲ್ಲಿದ್ದ - Bible Search
ಮಾರ್ಕನು 4 ಮಾರ್ಕನು 6
ಮಾರ್ಕನು 5
ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟವನನ್ನು ಬಿಡಿಸಿದ್ದು
(ಮತ್ತಾ. 8:28-34; ಲೂಕ 8:26-39)
1ಆ ಮೇಲೆ ಅವರು ಸಮುದ್ರದ ಆಚೇದಡದಲ್ಲಿದ್ದ ಗೆರಸೇನರ ಸೀಮೆಗೆ ತಲುಪಿದರು. 2ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು. 3-4ಅವನಿಗೆ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. ಅವನನ್ನು ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದ...
5ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಗಾಯಮಾಡಿಕೊಳ್ಳುತ್ತಾ ಇದ್ದನು. 6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು, 7ಮಹಾಶಬ್ದದಿಂದ ಆರ್ಭಟಿಸಿ, "ಯೇಸುವೇ, + ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ+ ನಿನಗೇಕೆ? ದೇವರಾಣೆ ನನ್ನನ್ನು ಹಿಂಸಿಸಬೇಡ ಎಂದು ನಿನ್ನನ್ನು ನಾನು ಬೇಡಿಕೊಳ್ಳುತ್ತೇನ...
9ಯೇಸು, "ನಿನ್ನ ಹೆಸರು ಏನೆಂದು" ಅವನನ್ನು ಕೇಳಿದ್ದಕ್ಕೆ ಅವನು, "ನನ್ನ ಹೆಸರು + ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ" ಎಂದು ಹೇಳಿ, 10ನಮ್ಮನ್ನು ಈ ಪ್ರಾಂತದಿಂದ+ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು.
11ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು+ ಮೇಯುತ್ತಿತ್ತು. 12ಆ ಅಶುದ್ಧಾತ್ಮಗಳು, "ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು" ಎಂದು ಆತನನ್ನು ಬೇಡಿಕೊಂಡವು. 13ಆತನು ಅವುಗಳಿಗೆ ಅನುಮತಿಸಲು ಆ ದೆವ್ವಗಳು ಆ ಮನುಷ್ಯನಿಂದ ಹೊರಗೆ ಬಂದು ಹಂದಿಗಳೊಳಗೆ ಪ್ರವೇಶಿಸಿದವು; ಅಲ್ಲಿ ಹೆಚ್ಚುಕಡಿಮೆ ಎರಡು ಸಾವಿರ ಹಂದಿಗಳಿದ್ದವು. ಆ ಹಂದಿಗಳು ಓಡಿ ಹೋಗಿ ಇಳಿಜಾರು ಸ್ಥಳದಿಂದ ಸಮು...
14ಅವುಗಳನ್ನು ಮೇಯಿಸುವವರು ಓಡಿಹೋಗಿ ನಡೆದಿರುವ ಸಂಗತಿಯನ್ನು ಆ ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು. 15ಆ ದೆವ್ವಹಿಡಿದಿದ್ದವನು ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು.
16ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದವನಿಗೆ ಸಂಭವಿಸಿದೆಲ್ಲವನ್ನು ಮತ್ತು ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಿದರು. 17ಆಗ ಅವರು ಯೇಸುವಿಗೆ ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.
18ಆತನು ದೋಣಿಯನ್ನು ಹತ್ತುವಾಗ ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿದನು. 19ಆದರೆ ಯೇಸು ಅವನ ಬೇಡಿಕೆಯನ್ನು ಒಪ್ಪದೆ ಅವನಿಗೆ, "ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು" ಅಂದನು. 20+ ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕ...
ಸತ್ತಹುಡುಗಿಯ ಮತ್ತು ರಕ್ತಕುಸುಮ ರೋಗಿಯ ಸ್ವಸ್ಥತೆ
(ಮತ್ತಾ. 9:18-26; ಲೂಕ 8:40-56)
21ಯೇಸು ತಿರುಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು. 22ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯಿರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು, 23"ನನ್ನ ಚಿಕ್ಕ ಮಗಳು ಈಗ ಸಾವಿನ ಅಂಚಿನಲ್ಲಿದ್ದಾಳೆ; ಆಕೆಯು ಗುಣಹೊಂದಿ ಬದುಕುವಂತೆ ದಯಮಾಡಿ ನೀನು ಬಂದು ಆಕೆಯ ಮೇಲೆ ನಿನ್ನ ಕೈಯಿಡಬೇಕು" ಎಂದು ಆತನ...
25ಆಗ ಅಲ್ಲಿ ಹನ್ನೆರಡು ವರುಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು. 26ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ.
27-28ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, "ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು" ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. 29ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು.
30ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, "ನನ್ನ ಉಡುಪನ್ನು ಮುಟ್ಟಿದವರು ಯಾರು?" ಎಂದು ಕೇಳಲು 31ಆತನ ಶಿಷ್ಯರು ಆತನಿಗೆ, "ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ 'ನನ್ನನ್ನು ಮುಟ್ಟಿದವರು ಯಾರು' ಎಂದು ಕೇಳುತ್ತೀಯಲ್ಲಾ?" ಎಂದರು. 32ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು...
33ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. 34ಆತನು ಆಕೆಗೆ, "ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ" ಎಂದು ಹೇಳಿದನು.
35ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, "ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?" ಅಂದರು.
36ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, "ಅಂಜಬೇಡ, ನಂಬಿಕೆ ಮಾತ್ರ ಇರಲಿ" ಎಂದು ಹೇಳಿದನು. 37ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ. 38ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನ...
39ಆತನು ಒಳಕ್ಕೆ ಹೋಗಿ, "ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ" ಅನ್ನಲು, 40ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ,
41ಅವಳ ಕೈಹಿಡಿದು, "ತಲಿಥಾಕೂಮ್" ಅಂದನು. ಈ ಮಾತಿಗೆ "+ ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ" ಎಂದರ್ಥ. 42ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರುಷ ವಯಸ್ಸಿನವಳು. 43+ ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ, ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು. ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು.
ಅರಂತೋಡು ತಾ.ಪಂ. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಲವರು ಬಿ.ಜೆ.ಪಿ.ಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ | ಸುದ್ದಿ ಬೆಳ್ತಂಗಡಿ
ಅರಂತೋಡು ತಾಲೂಕು ಪಂಚಾ ಯತ್ ಕ್ಷೇತ್ರದ ಸಂಪಾಜೆ, ಅರಂತೋಡು ಹಾಗೂ ತೊಡಿಕಾನ ಗ್ರಾಮದ ಕಾಂಗ್ರೆ ಸ್ ಪಕ್ಷದ ಕಾರ್ಯಕರ್ತರ ಸಭೆಯು ಅ.೨೮ರಂದು ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈಯವರ ಅಧ್ಯ ಕ್ಷತೆಯಲ್ಲಿ ನಡೆಯಿತು.
ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನಾ ಉಸ್ತುವಾರಿ ಮಹಮ್ಮದ್ ಕುಂಞ ಗೂನಡ್ಕರವರು ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಕಾರ್ಯ ಕರ್ತರು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಬೇಕೆಂದು ಮನವಿ ಮಾಡಿ ಕೊಂಡರು.
ಅರಂತೋಡು ಗ್ರಾಮ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಡ್ಕಬಳೆ ಜನಾರ್ಧನ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮೇರ್ಕಜೆ ವೆಂಕಟ್ರಮಣ ಗೌಡರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಅರಂತೋಡಿನ ಹಿರಿಯ ಕಾಂಗ್ರೆಸ್ಸಿಗ ರಾದ ದಿ| ಮೇರ್ಕಜೆ ಪದ್ಮಯ್ಯ ಗೌಡ, ಕೆ.ಪಿ.ಗುಂಡಪ್ಪ ಗೌಡ, ದಿ| ಗೂನಡ್ಕದ ಆದಂ ಕುಂಞಿ ಮತ್ತು ರಾಮಯ್ಯ ಮಾಸ್ತರ್ ಕುಂಟುಕಾಡು ಇವರಿಗೆ ಒಂದು ನಿಮಿಷದ ಮೌನಪ್ರಾರ್ಥನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತೇಜಪ್ರಸಾದ್ ಗೌಡ ಅಜ್ಜನಗದ್ದೆ, ಚಂದ್ರಶೇಖರ್ ಗೌಡ ಶೆಟ್ಟಿಯಡ್ಕ, ಚಂಗಪ್ಪಗೌಡ ಕಲ್ಲಗದ್ದೆ, ಮೋಹನ್ ದಾಸ್ ಗೌಡ ಕಲ್ಲಗದ್ದೆ, ಕೃಷ್ಣ ಕುಮಾರ್ ಅಡ್ಯಡ್ಕ ಸಿ.ಆರ್. ಕಾಲನಿ, ರಮೇಶ ಗೌಡ ನಾರ್ಕೋಡು ಅರಂತೋಡು ಅಲ್ಲದೆ ಅರಂತೋಡು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಮನ್ಸ ಮುಗೇರ ಬಾಜಿನಡ್ಕ ಹೀಗೆ ಹಲವರು ಭಾರತೀಯ ಜನತಾ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಪಕ್ಷ ಸಂಘಟನೆಯ ಬಗ್ಗೆ ಅರಂತೋಡು ಮಾಜಿ ಮಂಡಲ ಪ್ರಧಾನರಾದ ಪಿ.ಬಿ.ದಿವಾಕರ್ ರೈ, ಅರಂತೋಡು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೋಮಶೇಖರ್ ಕೊಂಗಾಜೆ, ಕೆ.ಪಿ.ಸಿ.ಸಿ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಡಾ.ರಘು, ಮಾಜಿ ಶಾಸಕರಾದ ಕೆ.ಕುಶಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪಿ.ಸಿ. ಜಯರಾಮ, ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಘಟಕದ ...
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಗ್ರಾ.ಪಂ. ಸದಸ್ಯೆ ಮೋಹಿನಿ ಪೆಲ್ತಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ಶ್ರೀಧರ, ಉಪಾಧ್ಯಕ್ಷೆ ಆಶಾ ವಿನಯ್ ಕುಮಾರ್, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಯೋಗೇಶ್ವರಿ ವೇದಿಕೆಯಲ್ಲಿದ್ದರು. ನೂರಾರು...
ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ ದರು. ಗ್ರಾಮ ಪಂಚಾಯತ್ ಸದಸ್ಯ ಪಿ.ಕೆ.ಅಬೂಸಾಲಿ ವಂದಿಸಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯ ದರ್ಶಿ ಜಿ.ಕೆ.ಹಮೀದ್ ಕಾರ್ಯಕ್ರಮ ನಿರೂಪಿಸಿದರು.
ನಾವು ಕಾಂಗ್ರೆಸ್ ಸೇರಿಲ್ಲ
ನಾನೂ ಮೊಗೇರ ಸಂಘಕ್ಕೆ ಸಂಬಂಧಿಸಿ ಮನವಿ ನೀಡಲೆಂದು ಕಾಂಗ್ರೆಸ್ ಸಭೆಯಲ್ಲಿಗೆ ಹೋಗಿದ್ದೆ. ಆಗ ಅವರು ಕರೆದು ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆಂದು ಹೇಳಿದ್ದಾರೆ. ಆದರೆ ನಾನು ಬಿಜೆಪಿಯಲ್ಲೆ ಇzನೆ. ಕಾಂಗ್ರೆಸ್‌ಗೆ ಸೇರಿಲ್ಲ ಎಂದು ಅರಂತೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮನ್ಸ ಮುಗೇರ ಪತ್ರಿಕಾ ಕಚೇರಿಗೆ ಬಿಜೆಪಿ ನಾಯಕರೊಂದಿಗೆ ಬಂದು ತಿಳಿಸಿದ್ದಾರೆ.
ಮಾಜಿ ಸೈನಿಕ ಚಂಗಪ್ಪ ಕಲ್ಲಗದ್ದೆ ಯವರು ಸ್ಪಷ್ಟನೆ ನೀಡಿ ಗನ್‌ಲೈಸೆನ್ಸ್‌ಗೆ ಸಂಬಂಧಿಸಿ ಅರ್ಜಿ ಕೊಡಲೆಂದು ನಾನು ಹೋಗಿದ್ದೆ. ಆದರೆ ನಾನು ಯಾವ ಪಕ್ಷದ ಕಾರ್ಯಕರ್ತನಾಗಿಯೂ ಇಲ್ಲ. ಒಳ್ಳೆ ವ್ಯಕ್ತಿಗೆ ಮತ ನೀಡುವವನಾಗಿರುತ್ತೇನೆ ಎಂದಿದ್ದಾರೆ.
ಕೊರೋನಾ ಮುಕ್ತರ ಅನುಭವ ಕೊರೋನಾ ಬಗ್ಗೆ ಭೀತಿ ಬೇಡ : ವೈದ್ಯರ ಸೂಚನೆ ಪಾಲಿಸಿ · ವಾರ್ತಾ ಮಿತ್ರ
Homeರಾಷ್ಟ್ರೀಯಕೊರೋನಾ ಮುಕ್ತರ ಅನುಭವ ಕೊರೋನಾ ಬಗ್ಗೆ ಭೀತಿ ಬೇಡ : ವೈದ್ಯರ ಸೂಚನೆ ಪಾಲಿಸಿ
ಕೊರೋನಾ ಮುಕ್ತರ ಅನುಭವ ಕೊರೋನಾ ಬಗ್ಗೆ ಭೀತಿ ಬೇಡ : ವೈದ್ಯರ ಸೂಚನೆ ಪಾಲಿಸಿ
April 8, 2020 Varta Mitra News - RN ರಾಷ್ಟ್ರೀಯ Comments Off on ಕೊರೋನಾ ಮುಕ್ತರ ಅನುಭವ ಕೊರೋನಾ ಬಗ್ಗೆ ಭೀತಿ ಬೇಡ : ವೈದ್ಯರ ಸೂಚನೆ ಪಾಲಿಸಿ
ಹೊಸದಿಲ್ಲಿ : ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿತ ಪಾಸಿಟಿವ್ ರೋಗಿಗಳ ಸಂಖ್ಯೆ ದಿನೇ ದಿನೇ ಒಂದೇ ರೀತಿ ಏರುತ್ತಲೇ ಇರುವಾಗ ವೈರಸ್ ಪಾಸಿಟಿವ್ ರೋಗಿಗಳು 14 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿ ತಮ್ಮ ಅನುಭವಗಳನ್ನು ವೈರಸ್ ಬಗ್ಗೆ ಆತಂಕಿತರಾದವರೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ತಾವು ಚಿಕಿತ್ಸೆ ಪಡೆಯುತ್ತಿದ್ದಾಗ ಹೇಗೆ ತಾವು ಸಮಯವನ್ನು ಸದುಪಯೋಗಿಸಿಕೊಂ...
ಕೋವಿಡ್-19 ಸೋಕಿನಿಂದ ಪಾಸಿಟಿವ್ ರೋಗಿಗಳಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸಂಖ್ಯಾತ ಜನರಲ್ಲಿ 14 ದಿನಗಳ ಚಿಕಿತ್ಸೆಯಿಂದ ಸಹಸ್ರಾರು ಮಂದಿ ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ. ತಮಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಕೊರೋನಾ ವೈರಸ್ ವ್ಯಾ ಬಗ್ಗೆ ಅವರಿತ್ತ ಅನುಭವದ ಮಾತುಗಳಿವು.
1.ಕೊರೋನಾ ವೈರಸ್ ಬಗ್ಗೆ ಭಯ ಬೇಡ, ಜಾಗೃತರಾಗಿರಿ. ಕರಾಳ ವ್ಯಾ ಸೋಂಕು ಪೀಡಿತನೆಂಬ ಭಯಬೇಡ. ಧೈರ್ಯವಂತರಾಗಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹೇಳಿದ ಎಚ್ಚರಿಕೆಯ ಸಾಂತ್ವನದ ನುಡಿಗಳಂತೆ ನಡೆದು ಚಿಕಿತ್ಸೆ ಹೊಂದಿರಿ ಎಂದು ಕೊರೋನಾ ಪಾಸಿಟಿವ್ ವ್ಯಾಯಿಂದ ಚಿಕಿತ್ಸೆ ಪಡೆದ 35 ವರ್ಷ ಪ್ರಾಯದ ಪಂಜಾಬಿನ ಫತೇಸಿಂಗ್ ಹೇಳಿದ್ದಾರೆ. ಅವರು ಏ.4 ಮತ್ತು 5ರಂದು ಎರಡು ಬಾರಿಯ ಪರೀಕ್ಷೆಯಲ್ಲಿ ನೆಗೆ...
2.ಮಹಾಮಾರಿ ಎಂಬ ದಿಗಿಲು ಬೇಡ. ಮುಂಜಾಗ್ರತೆ ಅಗತ್ಯ : ಕೊರೋನಾ ವೈರಸ್ ಔಷಧ ರಹಿತ ಮಹಾಮಾರಿ ಎಂಬ ಭೀತಿಗೊಳಗಾಗಿ ಕುಗ್ಗದಿರಿ. ಈ ಮಹಾಮಾರಿ ಕೂಡ 14 ದಿನಗಳ ಅಥವಾ 28 ದಿನಗಳ ಚಿಕಿತ್ಸೆಗೆ ಗುಣಮುಖವಾಗಲಿದೆ. ಕೊರೋನಾ ವೈರಾಣು ಪಾಸಿಟಿವ್ ಪ್ರಕರಣ ಚಿಕಿತ್ಸೆಯ ಬಳಿಕ ನೆಗೆಟಿವ್ ಫಲಿತಾಂಶ ನೀಡಲಿದೆ ಎಂಬುದಕ್ಕೆ ನಾನೇ ಜ್ವಲಂತ ನಿದರ್ಶನ ಎಂದು ಫತೇ ಸಿಂಗ್ ಕೊರೋನಾ ಪಾಸಿಟಿವ್ ರೋಗಿಗಳಲ್ಲಿ ಧೈರ್ಯ ತುಂಬಿದ್...
3.ನೈರ್ಮಲ್ಯವನ್ನು ರಕ್ಷಿಸಿಕೊಳ್ಳಿ, ಕೈಗಳನ್ನು ತೊಳೆದು ಸ್ವಚ್ಛವಾಗಿರಿ. ಕೊರೋನಾ ವೈರಸ್ ಸೋಂಕನ್ನು ನಮ್ಮಿಂದ ದೂರವಿರಿಸಲು ನಾವು ನೈರ್ಮಲ್ಯ ರಕ್ಷಿಸೋಣ ಮತ್ತು ನಮ್ಮ ಕೈಗಳನ್ನು ಆಗಾಗ ತೊಳೆದು ಸ್ವಚ್ಛವಾಗಿರಿಸೋಣ ಎನ್ನುವ ಕಿವಿಮಾತನ್ನು ಫತೇ ಸಿಂಗ್ ಹೇಳಿದ್ದಾರೆ.
4.ಏಕಾಂತವಾಸ ಕೋವಿಡ್-19 ವ್ಯಾಯನ್ನು ಸೋಲಿಸುತ್ತದೆ. ಕೊರೋನಾ ವೈರಸ್ ಸೋಂಕಿನಿಂದ ಪಾರಾಗಲು ಏಕಾಂತವಾಸವೇ ಉತ್ತಮ ಉಪಾಯ. ಈ ವೇಳೆ ನೀವು ಖಿನ್ನತೆಗೊಳಗಾಗದಿರಲು ಪತ್ನಿಗೆ ವಿಡಿಯೋ ಕರೆ ಅಥವಾ ಮೂವಿಗಳ ಮೂಲಕ ಕ್ರಿಯಾಚೈತನ್ಯ ಪಡೆಯಿರಿ ಎಂದೂ ಫತೇ ಸಿಂಗ್ ಸಲಹೆ ಕೊಟ್ಟಿದ್ದಾರೆ.
ಹರ್ಯಾಣ ಗುರುಗ್ರಾಮದ ಪೊರ್ಟಿಸ್ ಸ್ಮಾರಕ ಆಸ್ಪತ್ರೆಯಿಂದ ಅನಾಮಿಕನಾಗಿ ಉಳಿಯಲಿಚ್ಛಿಸಿದ ಇನ್ನೋರ್ವ ಕೊರೋನಾ ವೈರಸ್ ಪಾಸಿಟಿವ್ ರೋಗಿ 14 ದಿನಗಳ ಚಿಕಿತ್ಸೆ ಬಳಿಕ ಎರಡು ಬಾರಿ ನೆಗೆಟಿವ್ ಫಲಿತಾಂಶ ಬಂದ ನಂತರ ಏ.1ರಂದು ಗುಣಮುಖರಾಗಿ ತನ್ನ ಮನೆಗೆ ತೆರಳಿದ್ದಾರೆ. ಈತ ಬ್ರಿಟನಿಗೆ ಪ್ರವಾಸಕ್ಕೆ ತೆರಳಿದಾಗ ಕೊರೋನಾ ಸೋಂಕಿತರಾಗಿ ಭಾರತಕ್ಕೆ ವಾಪಸಾದ ಕೂಡಲೇ ನೇರವಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆ...
ಪ್ರಚಾರ ಒಂದೇ ದಿನಕ್ಕೆ ಸೀಮಿತ | Prajavani
ಪ್ರಚಾರ ಒಂದೇ ದಿನಕ್ಕೆ ಸೀಮಿತ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಣಿಸದ ಪ್ರಚಾರದ ಭರಾಟೆ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಜೋರಾಗಿತ್ತು. ಆದರೆ ಸೋಮವಾರ ಎಲ್ಲವೂ ಶಾಂತವಾಗಿತ್ತು. ಪ್ರಚಾರದ ಭರಾಟೆ ಎಲ್ಲೂ ಕಾಣಿಸಲಿಲ್ಲ. ಪ್ರಮುಖ ನಾಯಕರ ಸುಳಿವು ಇರಲಿಲ್ಲ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಭಾನುವಾರ ಇಡೀ ದಿನ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್ ಪರ ಪ್ರಚಾರ ಕೈಗೊಂಡು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರು.
ಕ್ಷೇತ್ರದ ವ್ಯಾಪ್ತಿಯ ಕಡಕೊಳ, ಜಯಪುರ, ಸಿದ್ದಲಿಂಗಪುರ, ಇಲವಾಲದಲ್ಲಿ ಪ್ರಚಾರ ಕೈಗೊಂಡಿದ್ದರು. 13 ವರ್ಷಗಳ ಮುನಿಸು ಮರೆತು ಪರಸ್ಪರ ಜತೆಯಾಗಿದ್ದ ನಾಯಕರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಬಲ ತುಂಬುವ ಕೆಲಸ ಮಾಡಿದ್ದರು. ಆದರೆ ಈ ಅಬ್ಬರದ ಪ್ರಚಾರ ಒಂದೇ ದಿನಕ್ಕೆ ಸೀಮಿತವಾಯಿತು.
ಸಿದ್ದರಾಮಯ್ಯ ಅವರು ಸೋಮವಾರ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ನಡೆದ ಸಮಾವೇಶಗಳಲ್ಲಿ ಪಾಲ್ಗೊಂಡರು. ಇದರಿಂದ ಮೈಸೂರಿನಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಮತ್ತೊಂದೆಡೆ ಜಿ.ಟಿ.ದೇವೇಗೌಡ ಅವರು ನಗರದಲ್ಲಿದ್ದರೂ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ.
ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ದಿನವಿಡೀ ಬಿರುಸಿನ ಪ್ರಚಾರ ಮಾಡಿದರು. ಆದರೆ ಅವರಿಗೆ ಜೆಡಿಎಸ್‌ನ ಪ್ರಮುಖ ನಾಯಕರಾರೂ ಸಾಥ್‌ ನೀಡಲಿಲ್ಲ.
ಜಿ.ಟಿ.ದೇವೇಗೌಡ ಅವರು ಸೋಮವಾರ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರ ಜತೆ ಸಭೆ ನಡೆಸಿದರು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಜತೆ ಚರ್ಚಿಸಿದರು. ಅವರು ಯಾವುದೇ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ವೇಳಾಪಟ್ಟಿ ಇರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ಜಂಟಿ ಪ್ರಚಾರವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮುಖಂಡರ ನಡುವಿನ ಒಂದು ದಿನದ ಒಗ್ಗಟ್ಟು ಕಾರ್ಯಕರ್ತರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡಬೇಕಿದೆ.
ಸೋಮವಾರ ಬೆಳಿಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಸಿದ್ದರಾಮಯ್ಯ, 'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಸಿದ ಪ್ರಚಾರ ಯಶಸ್ವಿಯಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕೈಜೋಡಿಸಲಿದ್ದಾರೆ. ಈ ಬಾರಿ ಗೆಲುವು ನಮ್ಮದೇ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.