text stringlengths 0 61.5k |
|---|
ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ | Udayavani – ಉದಯವಾಣಿ |
Thursday, 23 Sep 2021 | UPDATED: 11:39 AM IST |
Team Udayavani, Jul 26, 2021, 9:02 PM IST |
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿನಲ್ಲಿ ಸಂಜೆ 7 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರ ವಾಹನಗಳಿಗೆ ಅನುಮತಿ ನೀಡುವ ಮೂಲಕ ಪೊಲೀಸರು ಆದೇಶ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ. |
ಚಾರ್ಮಾಡಿಯ ದಟ್ಟ ಕಾನನದಲ್ಲಿ ವರುಣ ಅಬ್ಬರ ನಿಂತಿಲ್ಲ. ಹಾಗಾಗಿ, ಕಳೆದ ಎರಡ್ಮೂರು ವರ್ಷದಿಂದ ಪ್ರತಿ ವರ್ಷ ಚಾರ್ಮಾಡಿಯಲ್ಲಿ ಬೆಟ್ಟ-ಗುಡ್ಡ, ಭೂ ಕುಸಿತ ಸಾಮಾನ್ಯವಾಗಿತ್ತು. ದುರಸ್ಥಿಗೆ ತಿಂಗಳುಗಳೇ ಬೇಕಾಗಿತ್ತು. ಹಾಗಾಗಿ, ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಚಾರ್ಮಾಡಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಜರ್ನಿಗೆ ಸಂಪೂರ್ಣ ಬ... |
ಆದರೆ, ಶಾಸಕ ಹರೀಶ್ ಪೂಂಜಾ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಫೋನ್ ಮಾಡಿದ ಕೂಡಲೇ ಅವರ ಬೆಂಬಲಿಗರ ವಾಹನಗಳಿಗೆ ಅನುಮತಿ ಕೊಡಲಾಯಿತು. ಇದು ಜನ ಸಾಮಾನ್ಯರ ಕಣ್ಣು ಕೆಂಪಾಗಿಸಿದ್ದು, ಸಾಮಾನ್ಯರಿಗೆ ಒಂದು ನ್ಯಾಯ ರಾಜಕಾರಣಿಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸುತ್ತಿದ್ದಾರೆ. |
ಹಣಕ್ಕಾಗಿ ಅಪಹರಣ: ಮೂವರ ಬಂಧನ | Udayavani – ಉದಯವಾಣಿ |
Tuesday, 19 Oct 2021 | UPDATED: 06:32 PM IST |
Team Udayavani, Dec 13, 2018, 12:00 PM IST |
ಬೆಂಗಳೂರು: ಚೈನ್ ಲಿಂಕ್ ಮಾರ್ಕೆಟಿಂಗ್ ಕಂಪನಿ ಯೊಂದರ ಉದ್ಯೋಗಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಗೌಸ್‌ಫಿರ್, ಶೇಖ್ ಹಫಿಜ್, ಎಸ್.ಶೇಖ್ ಬಂಧಿತರು. |
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡೈರೆಕ್ಟ್ಸೆ ಲ್ಲಿಂಗ್ ಕಂಪನಿಯ ಉದ್ಯೋಗಿ ಕಿರಣ್ ಎಂಬಾತನನ್ನು ಡಿ.9ರಂದು ರಾತ್ರಿ ಅಪಹರಿಸಿದ್ದ ಆರೋಪಿಗಳು, ಚಿತ್ತೂರಿನಲ್ಲಿ ಕೂಡಿ ಹಾಕಿದ್ದರು. ಬಳಿಕ ಕಂಪನಿಯ ಮತ್ತೂಬ್ಬ ಉದ್ಯೋಗಿ ಸಂಜೀವ್ ನಾಯ್ಕಗೆ ಕರೆ ಮಾಡಿ ಅಪಹರಣ ವಿಷಯ ತಿಳಿಸಿ ಹಣ ಕೊಡದೆ ಹೋದರೆ ಕಾರ್ತಿಕ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. |
ಈ ಕುರಿತು ಸಂಜೀವ್ ನಾಯ್ಕ ನೀಡಿದ ದೂರಿನ ಅನ್ವಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇನ್ಸ್‌ಪೆಕ್ಟರ್ ತಬ್ರೇಜ್ ಹಾಗೂ ಪಿಎಸ್‌ಐ ಆರ್.ಶೀಲಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮುಳಬಾಗಿಲು ಪಟ್ಟಣದಲ್ಲಿ ಸ್ನೇಹಿತನ ಮನೆಯಲ್ಲಿ ಹಫಿಜ್ |
ಇರುವುದು ಸಿಡಿಆರ್ ಮಾಹಿತಿಯಿಂದ ಗೊತ್ತಾಯಿತು. |
ಹೀಗಾಗಿ ದೂರುದಾರ ಸಂಜೀವ್ ನಾಯ್ಕನಿಂದ ಕರೆ ಮಾಡಿಸಿ ಹಣ ತರುತ್ತಿರುವುದಾಗಿ ತಿಳಿಸಿ ಮಫ್ತಿಯಲ್ಲಿ ಅಲ್ಲಿಗೆ ತೆರಳಿದ ತಂಡ, ಹಫಿಜ್ ಹಾಗೂ ಗೌಸ್ ಫಿರ್‌ನನ್ನು ಬಂಧಿಸಿದೆ. ಬಳಿಕ ಅವರು ನೀಡಿದ ಮಾಹಿತಿ ಮೇರೆಗೆ ಚಿತ್ತೂರಿನಲ್ಲಿ ಕಾರ್ತಿಕ್ ನನ್ನು ರಕ್ಷಿಸಿ ಮತ್ತೂಬ್ಬ ಆರೋಪಿ ಶೇಖ್‌ನನ್ನು ಕೂಡ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. |
ಹಣ ವಾಪಸ್ ನೀಡದ್ದಕ್ಕೆ ಸಂಚು: ಒಬ್ಬರನ್ನು ಕಂಪನಿಯ ಸದಸ್ಯನನ್ನಾಗಿ ಸೇರಿಸಿದರೆ ಕಮಿಷನ್ ನೀಡುವ ಚೈನ್ ಲಿಂಕ್ ಮಾದರಿಯ ಮಾರ್ಕೆಟಿಂಗ್ ವ್ಯವಹಾರ ನಡೆಸುತ್ತಿದ್ದ ವಿಹಾನ್ ಡೈರೆಕ್ಟ್ ಸೆಲ್ಲಿಂಗ್ ಕಂಪನಿಯಲ್ಲಿ ಹಸೀನಾ ಎಂಬಾಕೆ ಕೆಲಸ ಮಾಡುತ್ತಿದ್ದಳು. ಆಕೆಯ ಮಾತು ಕೇಳಿದ್ದ ಶೇಖ್ ಹಫಿಜ್, ಶೇಖ್ ಮುಜಾಹೀದ್, ಆದಂ ಬಾಷಾ, ಪಿ.ಫಯಾಜ್, ಅಬ್ದುಲ್ ಖಯಾಮ್, ಕಿರಣ್ ಕುಮಾರ್ ಆಚಾರ್ಯ, ಐದ... |
ಬಂಧಿತ ಆರೋಪಿಗಳು ಕೆಲವರನ್ನು ಕಂಪನಿಗೆ ಸೇರಿಸಿದ್ದಕ್ಕೆ ಎರಡು ವಾರ ಕಮಿಷನ್ ಕೂಡ ಬಂದಿತ್ತು. ಆದರೆ ಹೊಸ ಸದಸ್ಯರು ನೋಂದಣಿ ಮಾಡದ ಕಾರಣ ಕಂಪನಿ ಕಮಿಷನ್ ನಿಲ್ಲಿಸಿತ್ತು. ಹೀಗಾಗಿ ಆರೋಪಿಗಳು ಕಂಪನಿಗೆ ತೆರಳಿ ವಿಚಾರಿಸಿದಾಗ ಇದೊಂದು ಚೈನ್ ಲಿಂಕ್ ವ್ಯವಹಾರ ಹಾಗೂ ಹಸೀನಾ ಕೆಲಸ ಬಿಟ್ಟಿರುವುದು ಗೊತ್ತಾಗಿತ್ತು. ಈ ವೇಳೆ ಹಸೀನಾ ನಮಗೆ ಸುಳ್ಳು ಹೇಳಿ ಹಣ ಕಟ್ಟಿಸಿಕೊಂಡು ವಂಚಿಸಿದ್ದಾರೆ. ಚೈನ್ ಲ... |
ಹಸಿರು ವಲಯದ ಜಿಲ್ಲೆಯ ಜನರನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧಾರ! – suddimitra |
ಹಸಿರು ವಲಯದ ಜಿಲ್ಲೆಯ ಜನರನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧಾರ! |
ಕೊರೋನಾ ಇಲ್ಲ ಎಂದು ಖಾತ್ರಿಪಡಿಸಲು ನಿರ್ಧಾರ |
ಸರ್ಕಾರವು ಕೆಂಪು ಮತ್ತು ಹಳದಿ ವಲಯಗಳೊಂದಿಗೆ, ಹಸಿರು ವಲಯಗಳಲ್ಲಿನ ಜನರನ್ನೂ ಕೊರೊನಾವೈರಸ್ ಪರೀಕ್ಷೆಗಳಿಗೆ ಒಳಪಡಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಪ್ರತಿದಿನ ಬೆಳಕಿಗೆ ಬರುವ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಬೆಳಕಿನಲ್ಲಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. |
ಇಲ್ಲಿಯವರೆಗೆ, ಹಸಿರು ವಲಯಗಳಿಂದ ಕರೋನವೈರಸ್ ಸೋಂಕಿನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಇದಲ್ಲದೆ, ಈ ಸ್ಥಳಗಳಲ್ಲಿ ಎಲ್ಲಿಯೂ ಸಂಪರ್ಕತಡೆಯನ ಹೊಂದಿಲ್ಲ. ಆದರೆ ಇತ್ತೀಚೆಗೆ, ಸೋಂಕಿನ ಯಾವುದೇ ಲಕ್ಷಣಗಳನ್ನು ತೋರಿಸದ ಜನರಲ್ಲಿ ಈ ವೈರಸ್ ಕಂಡುಬರುವ ಘಟನೆಗಳು ಹೆಚ್ಚುತ್ತಿವೆ. ಈ ವಲಯಗಳು ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ, ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡ... |
ಎಡಚರು, ಗುಲಾಮರು, ಕಮ್ಮಿನಿಷ್ಟರು, ಅತಿಬುದ್ಧಿವಂತರು, ಪ್ರಗತಿಪರರು, ಜಾತ್ಯಾತೀತರನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ನಿಲ್ಲಿಸಿದ ನಿಮಗೆ ಅಭಿನಂದನೆಗಳು.... | Civic News |
ಎಡಚರು, ಗುಲಾಮರು, ಕಮ್ಮಿನಿಷ್ಟರು, ಅತಿಬುದ್ಧಿವಂತರು, ಪ್ರಗತಿಪರರು, ಜಾತ್ಯಾತೀತರನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ನಿಲ್ಲಿಸಿದ ನಿಮಗೆ ಅಭಿನಂದನೆಗಳು.... |
22 May 2019 6:18 AM | |
ನೀವು 'ಭಾಳಾ ಬುದ್ವಂತ್ರು. ಓದ್ಕೊಂಡೋರು. ಮೈಯೆಲ್ಲಾ ಮಿದುಳೇ ತುಂಬ್ಕೊಂಡಿರುವ ವಿಚಿತ್ರ ವಿಶೇಷ ಜನ' ಎಂದು ಭಾವಿಸಿದ್ದ ಎಡಗಡೆಯ ಪತ್ರಕರ್ತ/ಕರ್ತೆಯರು ಅದೊಂದು ಕಾಲದಲ್ಲಿ 'ಮೋದಿಯಿಂದಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಅಸಹಿಷ್ಣುತೆಯಿಂದಾಗಿ ದೇಶ ಧಗಧಗನೆ ಹೊತ್ತಿ ಉರಿಯುತ್ತಿದೆ. ಕೋಮು ಸಂಘರ್ಷದ ಜ್ವಾಲೆ ಆಕಾಶ ಮುಟ್ಟಿದೆ. ಮೋದಿಯಿಂದಾಗಿ ಜನ ರಸ್ತೆ ರಸ್ತೆಗಳಲ್ಲಿ ಸಾಯುತ್ತಿದ್ದಾರೆ. ಬಡವರು... |
ಆದರೆ ನೀವು ಮೋದಿಯ ಮೇಲೆ ವಿಶ್ವಾಸವಿಟ್ಟಿದ್ದಿರಿ. ನಿಮ್ಮ ವಿಶ್ವಾಸವನ್ನು ಅಲುಗಾಡಿಸಲು ನೂರೆಂಟು ಯತ್ನಗಳಾದವು. ದೇಶ ಅಸಹಿಷ್ಣುತೆಯ ಬೆಂಕಿಯಲ್ಲಿ ಬೆಂದು ಬೋಗಾರು ಬಿದ್ದಿದೆ ಎಂದು ಬುದ್ಧಿವಂತರೆಲ್ಲ ತಂತಮ್ಮ ಕಪಾಟಿನ ತಗಡುಗಳನ್ನು ವಾಪಸು ಮಾಡುತ್ತಿದ್ದಾಗ ನಿಮಗೆ ಅಸಹಿಷ್ಣುತೆಯ ಅರ್ಥವೇ ಗೊತ್ತಿರಲಿಲ್ಲ! ಡಿಕ್ಷನರಿ ನೋಡಿ, 'ಓ ಅಸಹಿಷ್ಣುತೆ ಅಂದರೆ ಇದಾ? ಇದೀಗ ಈ ದೇಶದಲ್ಲಿ ಉಂಟಾ? ನಮಗೆಲ್ಲೂ ಕಾಣ್... |
ನಿಮಗೆ ಸಾಹಿತಿಗಳ ಬಗ್ಗೆ ಭಯ, ಭಕ್ತಿ ಇತ್ತು. ಅವರು ಏನಾದರೂ ಹೇಳಿದರೆ ವೇದವಾಕ್ಯ, ಕಣ್ಮುಚ್ಚಿ ನಂಬಬಹುದು ಅಂತ ಅಂದುಕೊಂಡಿದ್ದಿರಿ ನೀವು. ನಾವು ಹತ್ತು ಜನ್ಮದಲ್ಲಿ ಓದುವಂಥಾದ್ದನ್ನೆಲ್ಲ ಅವರು ಒಂದೇ ಜನ್ಮದಲ್ಲಿ ಓದಿ ಬಿಟ್ಟಿದ್ದಾರೆ ಎಂಬ ಭಯಮಿಶ್ರಿತ ಗೌರವ ನಿಮಗೆ ಆ ಸಾಹಿತಿಗಳ ಮೇಲೆ ಇತ್ತು. ಆದರೆ ಅದೇ ಸಾಹಿತಿಗಳು ಶುರುವಿಟ್ಟುಕೊಂಡರು. "ಈ ದೇಶದಲ್ಲಿ ಈಗ ನಮ್ಮ ಇಷ್ಟದ ಬಟ್ಟೆ ಹಾಕೋದಕ್ಕೆ ಹೆದರ... |
ನಿಮಗೆ ಭಯಭಕ್ತಿ ಇತ್ತು ವಿಜ್ಞಾನಿಗಳನ್ನು ಕಂಡರೆ, ಅರ್ಥಶಾಸ್ತ್ರಜ್ಞರನ್ನು ಕಂಡರೆ. ಅವರೂ ಹೇಳಿದರು, "ದೇಶ ಲಗಾಡಿ ಹೋಗುತ್ತಿದೆ. ಅರ್ಥವ್ಯವಸ್ಥೆ ಕುಸಿಯುತ್ತಿದೆ. ಡಿಮಾನಿಟೈಸೇಶನ್ ಆದ ಮೇಲೆ ನೂರು ಜನ ಸತ್ತಿದ್ದಾರೆ. ಬಡವರು ಬೀದಿಗೆ ಬಿದ್ದಿದ್ದಾರೆ. ದೇಶ ದಿವಾಳಿಯಾಗುವ ಅಂಚಿನಲ್ಲುಂಟು. ಇಂದೋ ನಾಳೆಯೋ ದಿವಾಳಿ ಆಗೇಹೋಗಲಿಕ್ಕುಂಟು. ವಿಜ್ಞಾನಿಗಳ ಕೈಕಾಲು ಕಟ್ಟಿಹಾಕಿದ್ದಾನೆ ಈ ಮೋದಿ. ಇವನ ಕಾಲದಲ... |
ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞರು ಹೇಳಿದರು, "ಈ ಮೋದಿ ಗದ್ದುಗೆಯಲ್ಲಿ ಕೂತರೆ ದೇಶದಲ್ಲಿ ಪ್ರಳಯ! ಮೂರನೇ ಮಹಾಯುದ್ಧ!". ಆದದ್ದು ಉಲ್ಟಾ! ಈತನನ್ನು ಪ್ರಪಂಚದ ಎಲ್ಲ ದೇಶಗಳವರು ಬೆರಗುಗಣ್ಣಿಂದ ನೋಡಿದರು, ಹತ್ತಿರ ಕರೆದರು, ಅಪ್ಪಿದರು, ಮುತ್ತಿಕ್ಕಿದರು. "ಈತ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಸರ್ವನಾಶ!!", ಹೇಳಿದರು ಜಾತಿ-ಧರ್ಮಗಳ ವಿಷಯದಲ್ಲಿ ಡಬ್ಬಲ್ ಡಿಗ್ರಿ ಪಡೆದ ಜಾತ್ಯತೀತ ಪಂಡಿತರು. ಆಗಲೇ ಇ... |
ಅರ್ಥಶಾಸ್ತ್ರಿಗಳು, ವಿಜ್ಞಾನಿಗಳು, ಪದ್ಮ ಪ್ರಶಸ್ತಿಗಳನ್ನು ಹೊಡೆದ ಸಾಹಿತಿಗಳು, ವಿಚಾರವಾದಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಮಾನವತಾವಾದಿಗಳು, ಪರಿಸರವಾದಿಗಳು, ಸಮತಾವಾದಿಗಳು, ಪತ್ರಕರ್ತರು, ನಟರು, ನಾಯಕರು.... ಎಲ್ಲರೂ ಎಲ್ಲರೂ ತಂತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದರು. ಅಸಹಿಷ್ಣುತೆ ಇದೆ ಎಂದರವರು. ನೀವು ಹೇಳಿದ್ದು, 'ತೋರಿಸಿ!'. ಮೂರನೇ ಮಹಾಯುದ್ಧ ನಡೆದೇ ಬಿಡುತ್ತೆ, ಎ... |
ಈ ಐದು ವರ್ಷದಲ್ಲಿ ಮೋದಿ ಏನು ಮಾಡಿದ ಎಂಬುದನ್ನು ನಾನು ಹೇಳಬೇಕಿಲ್ಲ. ಆದರೆ ಅದಕ್ಕಿಂತ ದೊಡ್ಡ ಸಾಧನೆ ನಿಮ್ಮದು! ಈ ಐದು ವರ್ಷಗಳಲ್ಲಿ ಈ ದೇಶದ ಅತಿಬುದ್ಧಿವಂತರ ಬಂಡವಾಳವನ್ನೆಲ್ಲ ನೀವು, ಸಾಮಾನ್ಯ ಜನ, ಸೈಲೆಂಟಾಗಿ ಬಯಲು ಮಾಡಿ ಆ ಅತಿಬುದ್ಧಿವಂತರನ್ನೆಲ್ಲ ಬೀದಿಯಲ್ಲಿ ಬೆತ್ತಲೆ ನಿಲ್ಲಿಸಿಬಿಟ್ಟಿದ್ದೀರಿ. ಈ ಸಾಧನೆ ಕಡಿಮೆಯದೇನಲ್ಲ! ಶುಭಾಶಯಗಳು ನಿಮಗೆ. |
ಆಶಾಭಾವನೆ ಇದೆ, ಬಂಡಾಯ ಏಳುವುದಿಲ್ಲ; ಶಾಸಕ ತಿಪ್ಪಾರೆಡ್ಡಿ | No Rebell Against Government Said Thippereddy In Chitradurga - Kannada Oneindia |
ಚಿತ್ರದುರ್ಗ, ಆಗಸ್ಟ್ 23: "ಮಂತ್ರಿ ಆದ ಮಾತ್ರಕ್ಕೆ ಯಾರೂ ದೊಡ್ಡವರಾಗುವುದಿಲ್ಲ. ಆದರೆ ಅಧಿಕಾರವನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುವ ಆಸೆಯಿತ್ತು" ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ. |
ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಂತರ ಅಸಮಾಧಾನಗೊಂಡಿರುವ ಶಾಸಕ ತಿಪ್ಪಾರೆಡ್ಡಿ, "ಸಚಿವ ಸ್ಥಾನ ಪಡೆಯಲು ಹತ್ತಾರು ದಾರಿಗಳಿವೆ. ಮುಂದೆ ಅವಕಾಶ ಸಿಗುವ ಆಶಾಭಾವನೆ ಇದೆ. ಹೀಗಾಗಿ ಬಂಡಾಯ ಏಳುವ ಪ್ರಶ್ನೆಯಿಲ್ಲ, ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಾಗಿರುವುದರಿಂದ ಸ್ವಲ್ಪ ವ್ಯತ್ಯಾಸ ಆಗಿದೆ, ಬಿಎಸ್ ವೈ ಕೂಡ ಭರವಸೆ ನೀಡಿರೋದ್ರಿಂದ ಮುಂದಿನ ಪಟ್ಟಿಯಲ್ಲ... |
ಅಸಮಾಧಾನಗೊಂಡಿರುವ ಹಿರಿಯ ಶಾಸಕರ ಸಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ನಮ್ಮ ಆಂತರಿಕ ವಿಷಯಗಳನ್ನು ಒಂದೆಡೆ ಸೇರಿ ಚರ್ಚೆ ನಡೆಸಿದ್ದೇವೆ, ಈ ಕುರಿತು ಸಿಎಂ ಯಡಿಯೂರಪ್ಪ ಜೊತೆ ಕೂಡ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಅವಕಾಶವಿದೆ, ಆತುರ ಪಡಬೇಡಿ, ನಿಮ್ಮ ಪರವಾಗಿ ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು. |
cabinet expansion minister chitradurga ಸಂಪುಟ ವಿಸ್ತರಣೆ ಸಚಿವ ಚಿತ್ರದುರ್ಗ |
"There are more ways to get a minister position. There is hope that there will be an opportunity. There is no question of rebell against government"said Thippareddy in Chitradurga. |
ಅನಗತ್ಯವಾಗಿ ಓಡಾಡಿದರೆ ಜೋಕೆ; ಸಿಲಿಕಾನ್ ಸಿಟಿ ಜನರಿಗೆ ಪೊಲೀಸ್ ಆಯುಕ್ತರ ಎಚ್ಚರಿಕೆ | NavaKarnataka |
ಬೆಂಗಳೂರು: ರಾಜ್ಯದಲ್ಲಿ ನಿತ್ಯವೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ವೈರಾಣು ಹರಡದಂತೆ ತಡೆಯಲು ರಾಜಧಾನಿ ಬೆಂಗಳೂರು ಹಾಗೂ ಕೆಲವು ಜಿಲ್ಲೆಗಳಲ್ಲಿ ಲಾಕ್'ಡೌನ್ ಜಾರಿಗೊಳಿಸಲಾಗಿದೆ. ಆದರೆ ರಾಜಧಾನಿ ಬೆಂಗಳೂರಿನ ವಿದ್ಯಮಾನಗಳತ್ತ ಗಮನಹರಿಸಿದರೆ ಲಾಕ್'ಡೌ ಸನ್ನಿವೇಶ ಕಂಡುಬರುತ್ತಿಲ್ಲ. ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಎಂದಿನಂತಿದ್ದರೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಬಳಿ ಭಾರೀ ... |
ಈ ನಡುವೆ ಅನಗತ್ಯವಾಗಿ ಓಡಾಡಿದರೆ ಜೋಕೆ ಎಂಬ ಸಂದೇಶವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರವಾನಿಸಿದ್ದಾರೆ. |
ಲಾಕ್'ಡೌನ್ ಜಾರಿಯಾದ ನಂತರ ಮೊದಲ ದಿನವಾದ ಇಂದು ಬೆಳಗ್ಗೆ ಆಯುಕ್ತ ಎನ್. ಭಾಸ್ಕರ್ ರಾವ್ ನಗರ ಸುತ್ತಾಡಿ ಲಾಕ್ ಡೌನ್ ಹೇಗೆ ಜಾರಿಗೆ ಬಂದಿದೆ ಎಂದು ಪರಿಶೀಲನೆ ನಡೆಸಿದರು. |
ಈ ಸಂದರ್ಭದಲ್ಲಿ ಉದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರು ಸಹಕರಿಸಬೇಕಿದೆ ಎಂದರು. ಅಗತ್ಯ ವಸ್ತುಗಳು, ಸೇವೆಗಳನ್ನು ಪಡೆಯಲು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವಿದೆ ಎಂದರು. |
ಕನ್ಹಯ್ಯ ಕುಮಾರ್‌ಗೆ ಹೈದರಾಬಾದ್ ವಿವಿ ಪ್ರವೇಶಕ್ಕೆ ತಡೆ | Kanhaiya not allowed to enter HCU; dubs it attack on democracy - Kannada Oneindia |
» ಕನ್ಹಯ್ಯ ಕುಮಾರ್‌ಗೆ ಹೈದರಾಬಾದ್ ವಿವಿ ಪ್ರವೇಶಕ್ಕೆ ತಡೆ |
Updated: Thursday, March 24, 2016, 12:27 [IST] |
ಹೈದರಾಬಾದ್, ಮಾರ್ಚ್, 24: ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಗೆ ಹೈದರಾಬಾದ್ ಸಂಶೋಧನಾ ವಿವಿ ಪ್ರವೇಶಿಸದಂತೆ ತಡೆ ಒಡ್ಡಲಾಗಿದೆ. |
ಬುಧವಾರ ಸಂಜೆ ವಿವಿಯ ಆವರಣದಲ್ಲಿ ಭಾಷಣ ಮಾಡಲು ಕನ್ಹಯ್ಯ ಕುಮಾರ್ ಅವರಿಗೆ ಬಿಡಲಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಮಾತನಾಡಿ ಕನ್ಹಯ್ಯ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಆತ್ಮಹತ್ಯೆ ತೆಡೆಗೆ ರೋಹಿತ್ ವೇಮುಲ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದರು.[ರೋಹಿತ್ ವೇಮುಲ ಪರ ಕನ್ಹಯ್ಯ ಕುಮಾರ್ ಬ್ಯಾಟಿಂಗ್] |
ಇದಾದ ಮೇಲೆ ಕನ್ಹಯ್ಯ ಕುಮಾರ್ ವಿವಿಯ ಕಡೆ ತೆರಳಿದಾಗ ಅವರನ್ನು ಪೊಲೀಸರು ಗೇಟ್ ಬಳಿಯೇ ತಡೆದರು. ಈ ವೇಳೆ ಪೊಲೀಸರ ಹಾಗೂ ಕನ್ಹಯ್ಯ ಕುಮಾರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?] |
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಪ್ಪರಾವ್ ಅವರ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರಿಗೆ ವಿವಿ ಆವರಣ ಪ್ರವೇಶಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ. |
Read in English: Kanhaiya not allowed in HCU:What he said |
As unrest continued at the Hyderabad Central University, the varsity authorities today prevented JNU student leader Kanhaiya Kumar from entering the campus to address the students agitating over the suicide of Dalit scholar Rohith Vemula. Kanhaiya, who came with Rohith's mother and brother to express solidarity with th... |
ನೆಕ್ಕಿಲಾಡಿಯಲ್ಲಿ ಮಳೆ ನೀರು ಕಾಲುವೆ ವಿವಾದ: ನೋಟಿಸ್ | udayavani |
09:42 PM Jan 27, 2022 | Team Udayavani | |
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದಲ್ಲಿ ಮಳೆ ನೀರು ಕಾಲುವೆ ನಿರ್ಮಾಣಕ್ಕೆ ತೆಗೆಯಲಾಗಿರುವ ಮಣ್ಣನ್ನು ಆಟದ ಮೈದಾನಲ್ಲಿ ಸುರಿಯಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಪುತ್ತೂರು ತಹಶೀಲ್ದಾರ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. |
ಈ ಬಗ್ಗೆ ನೆಕ್ಕಿಲಾಡಿ ನಿವಾಸಿ ಎ. ಜತೀಂದ್ರ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸ್ವಲ್ಪ ಹೊತ್ತು ವಾದ ಆಲಿಸಿದ ಬಳಿಕ ಪುತ್ತೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಪಿಡಿಒಗೆ ನೋಟಿಸ್ ಜಾರಿಗೊಳಿಸಿತು. |
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಕೇತನ್ ಕುಮಾರ್ ಅವರು, ನೆಕ್ಕಿಲಾಡಿ ಗ್ರಾಮದ ಸರ್ವೇ ನಂಬರ್ 88/1 ಮತ್ತು 34ರ ಜಾಗವನ್ನು ಆಟದ ಮೈದಾನಕ್ಕೆ ಮೀಸಲಿರಿಸಿ 2021ರ ಜು. 29ರಂದು ಸರಕಾರ ಆದೇಶಿಸಿದೆ. ಆದರೆ, ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಅವರು 2021ರ ಮೇ ತಿಂಗಳಲ್ಲಿ ಗ್ರಾಮದಲ್ಲಿ ಮಳೆನೀರು ಕಾಲುವೆ ಕಾಮಗಾರಿ ಕೈಗೊಂಡಿದ್ದರು. ಕಾಲುವೆ ನಿರ್ಮಾಣಕ್ಕೆ ತೆಗೆದಿದ್ದ ಮಣ್ಣನ್ನು ಆಟದ ಮೈ... |
ಮನವಿ ತಿರಸ್ಕರಿಸಿದ ಆರೋಪ: |
ಮೈದಾನದಲ್ಲಿ ಹಾಕಲಾಗಿರುವ ಮಣ್ಣನ್ನು ತೆರವುಗೊಳಿಸಿ ಮೊದಲಿನ ಸ್ಥಿತಿಗೆ ತರುವಂತೆ ಕೋರಿ 2021ರ ಜುಲೈ 20ರಂದು ನೀಡಿರುವ ಮನವಿ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಹೇಳಿದರು. |
ಸರಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ತಿಳಿಸಿರುವಂತೆ ಒಂದು ವೇಳೆ ಮಳೆ ನೀರು ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಎಂದಾದರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. |
ಸ್ವಂತ ಮನೆ ಮಾಡ್ಕೊಬೇಕು ಅಂತ ಫ್ಲಾಟ್ ಖರೀದಿ ಮಾಡಿ ಮೋಸ ಹೋಗೋ ಮುಂಚೆ ಈ ಐದು ಅಂಶಗಳನ್ನ ತಿಳಿದುಕೊಳ್ಳಿ!! TheNewsism | Kannada Useful Information \n |
Home ಉಪಯುಕ್ತ ಸ್ವಂತ ಮನೆ ಮಾಡ್ಕೊಬೇಕು ಅಂತ ಫ್ಲಾಟ್ ಖರೀದಿ ಮಾಡಿ ಮೋಸ ಹೋಗೋ ಮುಂಚೆ ಈ ಐದು... |
ಸ್ವಂತ ಮನೆ ಖರೀದಿಸುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಖರೀದಿಗೆ ಮುಂದಾಗುವುದು ಒಳ್ಳೆಯದು. ಏಕೆಂದರೆ ಭಾರತೀಯರ ಗುಣದಲ್ಲಿರುವ ಸ್ವಭಾವದಂತೆ ಒಂದು ಮಾವಿನ ಹಣ್ಣು ಕೊಳ್ಳುವ ಮುನ್ನ ಅದನ್ನು ಹೇಗೆ ಮುಟ್ಟಿ, ವಾಸನೆ ನೋಡಿ, ಬಣ್ಣ ನೋಡಿ, ಸರಿಯಾಗಿ ತೋಕ ಅಥವಾ ಏಣಿಕೆ ಮಾಡಿ ತೆಗೆದುಕೊಳ್ಳುವುದು ಇದೇ. ಅದ್ರಂತೆ ದೊಡ್ಡ ಹಣ ಹೂಡಿಕೆ ಮಾಡಿ ಮನೆ ಖರೀದಿಸುವ ಮುನ್ನ ಆಸ್ತಿಗೆ ಸಂಬಂಧಪಟ್ಟ ... |
1. ಕಾನೂನಿನ ಪ್ರಕಾರ ಎನ್ಎ ಪಡೆದ ಭೂಮಿಯೇ? |
Also read: ಬೆಂಗಳೂರಿನಲ್ಲಿ ಸ್ವಂತ ಮನೆ ಖರೀಧಿಸುವುದು ಒಳ್ಳೆಯದ? ಇಲ್ಲ ಬಾಡಿಗೆ ಮನೆಯ ವಾಸವೇ ಉತ್ತಮ, ಎನ್ನುವ ಗೊಂದಲಕ್ಕೆ ಅರ್ಥಿಕ ತಜ್ಞರ ಅಭಿಪ್ರಾಯ ಇಲ್ಲಿದೆ ನೋಡಿ.! |
ಭಾರತದಲ್ಲಿ ಯಾವುದೇ ಪ್ಲಾಟ್ ಖರೀದಿಸುವ ಮುನ್ನ ಅದು ಕೃಷಿ ಭೂಮಿಯಿಂದ ಬೇರ್ಪಟ್ಟು ಕಾನುನಾತ್ಮಕವಾಗಿ ಎನ್ಎ ಆಗಿದೆ ಎನ್ನುವುದು ಮೊದಲು ತಿಳಿಯಬೇಕು, ಅದರಂತೆ ಭೂಮಿಗೆ ಸಂಬಂಧಪಟ್ಟ ಸರ್ವೇ ನಂಬರ್ ಪಡೆದು ಅದರ ಮಾಲಿಕತ್ವದ ಮಾರಾಟ ಮಾಡಿದವರ ಬಗ್ಗೆ ಕಾನೂನು ಪರಿಶೀಲನೆ ನಡೆಸುವ ಅಗತ್ಯವಿದೆ. ಏಕೆಂದರೆ ಭೂಮಿಯನ್ನು ಖರೀದಿಸಿದ ನಂತರ ಯಾವುದೇ ಸಮಯದಲ್ಲಿ ನಿಮ್ಮನ್ನು ಬೀದಿಗೆ ತಳ್ಳುವ ಅವಕಾಶವನ್ನು ಮಾಡಿಕೊಳ... |
2. ಪ್ಲಾಟ್ ಕಟ್ಟಡ ಪ್ರಾರಂಭ ಅಥವಾ ಮುಕ್ತಾಯದ ದಿನಾಂಕ; |
ಒಂದು ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಭರವಸೆಯಂತೆ ಆಸ್ತಿಯಲ್ಲಿ ಖರೀದಿಸಿವಾಗ ಅಭಿವೃದ್ದಿಗಾಗಿ ಪ್ರಾರಂಭ ದಿನಾಂಕ ಮತ್ತು ಕಟ್ಟಡ ಮುಕ್ತಾಯದ ದಿನಾಂಕ ಪತ್ರದಲ್ಲಿರುವಂತೆ ಹಕ್ಕುಗಳನ್ನು ನೀವು ಅರ್ಥಮಾಡಿಕೊಳ್ಳಬೇಕು, ಅದರಂತೆ ನಿರ್ಮಾಣ-ಸಂಬಂಧಿತ ಯೋಜನೆಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೆ ಖರೀದಿಸಲು ಹೋಗಬೇಡಿ. |
3. ಪ್ಲಾಟ್ ಕಾಯ್ದಿರಿಸಿದ ಭೂಮಿಯಲ್ಲಿ ನಿರ್ಮಿಸಲಾಗಿದೆಯೇ? |
ಕೆಲವು ಭೂಮಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಆಗುವುದಿಲ್ಲ ಅಂತಹ ಭೂಮಿಗಳು ಅಂದರೆ ಪುರಾತತ್ತ್ವ ಶಾಸ್ತ್ರದ ಸಂಶೋಧನೆಯ ಸ್ಥಳದ ನೀರಾವರಿ ಮುಂತಾದ ಸರ್ಕಾರಿ ಯೋಜನೆಗಳಿಗೆ ಮಾತ್ರ ಮೀಸಲಾಗಿರುವ ಮಿಸಲಾಗಿರುತ್ತೇವೆ, ಅಲ್ಲಿ ಯಾವುದೇ ರಿಯಲ್ ಎಸ್ಟೇಟ್ ನಡೆಸಲು ಸಧ್ಯ ಇರುವುದಿಲ್ಲ, ಅದಕ್ಕಾಗಿ ಮೊದಲು ತಿಳಿಯವುದು ಉತ್ತಮ ಒಂದು ಮೀಸಲಿಟ್ಟ ಭೂಮಿಯಾದರೆ ಖರೀದಿಸಲೇ ಬೇಡಿ. |
4. ಡೆವಲಪರ್ ಇತಿಹಾಸ ಪರಿಶೀಲಿಸಿ; |
ಬಿಲ್ಡರ್-ಗಳು ಆಕರ್ಷಣೆಯ ಕಟ್ಟಡಗಳನ್ನು ತೋರಿಸಿ ನಿಮಗೆ ಮೋಸ ಮಾಡುವುದು ಹೆಚ್ಚಿರುತ್ತದೆ, ಅದಕ್ಕಾಗಿ ಒಂದೇ ಭಾರಿಗೆ ಡೆವಲಪರ್ ನಂಬಲು ಹೋಗಬೇಡಿ. ಆಯ್ಕೆ ಮಾಡಿದ ಡೆವಲಪರ್‌ನ ಹೆಸರು ಮತ್ತು ಆಪರೇಟಿಂಗ್ ಇತಿಹಾಸವನ್ನು ಕ್ರಾಸ್ ಚೆಕ್ ಮಾಡಿ. ಈ ಹಿಂದೆ ಅವರು ಎಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ, ಮತ್ತು ಆ ಡೆವಲಪರ್‌ನೊಂದಿಗೆ ಆಸ್ತಿಯನ್ನು ಖರೀದಿಸಿರುವ ಜೊತೆಗೆ ಮಾತನಾಡಿ ಸಂಪೂರ್ಣ ಮಾಹಿ... |
5. ಖರೀದಿಯ ಮುನ್ನ ಯಾವೆಲ್ಲ ದಾಖಲೆ ನೋಡಬೇಕು? |
ಡೆವಲಪರ್ ತನ್ನ ಫೈಲ್‌ಗಳಲ್ಲಿ ನೀವು ಖಚಿತಪಡಿಸಿಕೊಳ್ಳಬೇಕಾದ ಹಲವು ದಾಖಲೆಗಳಿರಬೇಕು. 7/12 ದಸ್ತಾವೇಜಿನಿಂದ, ಭೂ ಕಂದಾಯ ತೆರಿಗೆ ರಶೀದಿಗಳು, ಶೀರ್ಷಿಕೆ ಪತ್ರ, ಸ್ಟಾಂಪ್ ಡ್ಯೂಟಿ ಡಾಕ್ಯುಮೆಂಟ್, ಎನ್ಕಂಬ್ರನ್ಸ್ ಸರ್ಟಿಫಿಕೇಟ್, ಮುನ್ಸಿಪಲ್ ಕಾರ್ಪೊರೇಶನ್ ಅನುಮೋದನೆಗಳು, ಬ್ಯಾಂಕಿನಿಂದ ಹಣ ಬಿಡುಗಡೆಯಾದ ಪ್ರಮಾಣಪತ್ರ, ಹಂಚಿಕೆ ಪತ್ರ ಮತ್ತು ಅಭಿವೃದ್ಧಿ ಒಪ್ಪಂದದ ಹಕ್ಕು ಪತ್ರ. ಪರೀಕ್ಷಿಸಿ ಇನ್ನ... |
Also read: ಮನೆ ಖರೀದಿಸುವಾಗ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂದ್ರೆ, ಜೀವನ ಪೂರ್ತಿ ದುಡಿದ ದುಡ್ಡು ಹಾಳುಮಾಡಿಕೊಳ್ತೀರಿ ಎಚ್ಚರ !!! |
Previous articleದಿನ ಭವಿಷ್ಯ: 22 ಜನವರಿ, 2020!! |
Next articleಶೋಕಿಗಾಗಿ ಪ್ರೀತಿ ಮಾಡುವವರಿಗೆ ಇದನ್ನು ತೋರಿಸಿ, ತನ್ನ ಜೀವನವನ್ನೇ ಮುಡಿಪಿಟ್ಟು, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪ್ರಿಯತಮೆಯ ಜೀವ ಉಳಿಸಿದ ಪ್ರೇಮಿ.! |
ಷೇರುಪೇಟೆ: ಸೆನ್ಸೆಕ್ಸ್ 265 ಪಾಯಿಂಟ್ಸ್ ಕುಸಿತ, ನಿಫ್ಟಿ ಕೂಡ ಇಳಿಕೆ | Indices Open Lower Amid Mixed Global Cues - Kannada Goodreturns |
27 min ago ಇಂದಿನಿಂದ ಸವರನ್ ಗೋಲ್ಡ್ ಬಾಂಡ್ ಚಂದಾದಾರಿಕೆ ಶುರು: ಪ್ರತಿ ಗ್ರಾಂಗೆ 4,777 ರೂಪಾಯಿ |
| Published: Friday, April 23, 2021, 10:10 [IST] |
ಭಾರತೀಯ ಷೇರುಪೇಟೆ ಶುಕ್ರವಾರ ಇಳಿಮುಖದೊಂದಿಗೆ ಪ್ರಾರಂಭಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 217 ಪಾಯಿಂಟ್ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಕುಸಿದಿದೆ. |
ಬೆಳಿಗ್ಗೆ 9.54ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.55ರಷ್ಟು ಅಥವಾ 265.84 ಪಾಯಿಂಟ್ಸ್ ಕುಸಿದು 47,814 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.40ರಷ್ಟು ಅಥವಾ 57.85 ಪಾಯಿಂಟ್ಸ್ ಇಳಿಕೆಗೊಂಡು 14,351 ಪಾಯಿಂಟ್ಸ್ ತಲುಪಿದೆ. |
ಇಂದು ಸುಮಾರು 572 ಷೇರುಗಳು ಏರಿಕೆಗೊಂಡರೆ, 307 ಷೇರುಗಳು ಕುಸಿದರೆ, 70 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. |
ಯಾವೆಲ್ಲಾ ಷೇರುಗಳು ಏರಿಕೆಗೊಂಡಿವೆ? |
ಟಾಟಾ ಸ್ಟೀಲ್ ಷೇರುಗಳು ಸುಮಾರು 12 ರೂಪಾಯಿ ಹೆಚ್ಚಾಗಿ 933.75 ರೂ. ತಲುಪಿದ್ದು, ಡಾ. ರೆಡ್ಡಿ ಲ್ಯಾಬ್‌ನ ಷೇರುಗಳು ಸುಮಾರು 47 ರೂ.ಗಳಿಂದ 5,246.75 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 5 ರಿಂದ 645.30 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 3 ರೂ ಗಳಿಸಿ 206.40 ರೂ., ಏಷ್ಯನ್ ಪೇಂಟ್ಸ್ ಷೇರುಗಳು 19 ರೂ.ಗಳಿಂದ 2,530.40 ರೂ. ತಲುಪಿದೆ. |
ಯಾವೆಲ್ಲಾ ಷೇರುಗಳು ಕುಸಿದಿವೆ? |
ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 8 ರೂ.ಗಳ ಕುಸಿತ ಕಂಡು 571.10 ರೂ., ವಿಪ್ರೋ ಷೇರುಗಳು ಸುಮಾರು 6 ರೂ.ಗಳ ಕುಸಿತ ಕಂಡು 480.45 ರೂ., ಹೀರೋ ಮೊಟೊಕಾರ್ಪ್ ಷೇರುಗಳು ಸುಮಾರು 30 ರೂ.ಗಳನ್ನು ಕಳೆದುಕೊಂಡು 2,821.00 ರೂ., ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 52 ರೂ.ಗಳ ಕುಸಿತ ಕಂಡು 4,637.10 ರೂ., ಎಸ್‌ಬಿಐ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 332.90 ರೂ. ತಲುಪಿದೆ. |
Indices Open Lower Amid Mixed Global Cues |
Sensex was up 265.84 points or 0.55% at 47,814, and the Nifty was down 57.85 points or 0.40% at 14,351 |
ಸಮೋಸ ಮಾರಾಟಗಾರನ ಮನೆಗೆ ಜಿಎಸ್‌ಟಿ ದಾಳಿ ! | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಸಮೋಸ ಮಾರಾಟಗಾರನ ಮನೆಗೆ ಜಿಎಸ್‌ಟಿ ದಾಳಿ ! |
in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಪ್ರಚಲಿತ ಸುದ್ದಿ, ರಾಜ್ಯ ಸುದ್ದಿ |
ಸಾಮಾನ್ಯವಾಗಿ ಆದಾಯ ತೆರಿಗೆ ಅಧಿಕಾರಿಗಳು, ಜಿಎಸ್‌ಟಿ ಅಧಿಕಾರಿಗಳು ಉದ್ಯಮಿಗಳ, ತೆರಿಗೆ ವಂಚಿಸಿದ ಸಂಸ್ಥೆಗಳ ಮೇಲೆ ದಾಳಿ ನಡೆಸುವುದನ್ನು ನಾವು ಕೇಳಿರುತ್ತೇವೆ. ಆದರೆ ಅಲಿಘರ್‌ನಲ್ಲಿ ಜಿಎಸ್‌ಟಿ ಅಧಿಕಾರಿಗಳು ಸಮೋಸ ಮಾರಾಟಗಾರನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಮೋಸ ಮಾರಾಟಗಾರನ ಹೆಸರು ಮುಕೇಶ್ ಕುಮಾರ್, ಈತನ ವಾರ್ಷಿಕ ಆದಾಯ 70 ಲಕ್ಷ ರೂ !. ಆದಾಯ ಮೀರಿದ್ದರೂ ಜಿಎಸ್‌ಟಿ ಕಾಯ್ದೆಯಡಿ ನೋಂದಾ... |
ಇಜ್ಞಾನ ಡಾಟ್ ಕಾಮ್: ಪದಗಳ ಆಟದ ಒಂದು ಶತಮಾನ |
ಪದಬಂಧಗಳನ್ನು ಬಿಡಿಸುವ ಹವ್ಯಾಸವೂ ವ್ಯಾಪಕವಾಗಿ ಬೆಳೆಯಿತು. ಈ ಹವ್ಯಾಸದಿಂದಾಗಿ ಗ್ರಂಥಾಲಯಗಳಲ್ಲಿ ನಿಘಂಟುಗಳಿಗಿದ್ದ ಬೇಡಿಕೆ ದಿಢೀರನೆ ಹೆಚ್ಚಿತಂತೆ; ಹೆಚ್ಚಿದ ಬೇಡಿಕೆ ನಿಭಾಯಿಸಲಿಕ್ಕಾಗಿ ಕೆಲವೊಂದು ಕಡೆ ಓದುಗರು ನಿಘಂಟನ್ನು ಕೇವಲ ಐದು ನಿಮಿಷಗಳಷ್ಟೇ ಬಳಸಬಹುದು ಎನ್ನುವಂತಹ ನಿರ್ಬಂಧಗಳೂ ಜಾರಿಗೆ ಬಂದವು. |
ಅಂದಹಾಗೆ ಪದಬಂಧದ ಜನಪ್ರಿಯತೆ ಪತ್ರಿಕೆಗಳಿಂದಲಷ್ಟೇ ಬರಲಿಲ್ಲ. ರಿಚರ್ಡ್ ಸೈಮನ್ ಎಂಬಾತನ ಚಿಕ್ಕಮ್ಮನಿಗೆ ಪದಬಂಧಗಳು ಬಹಳ ಹಿಡಿಸಿದ್ದವಂತೆ. ಆಕೆಯ ಒತ್ತಾಯದ ಮೇರೆಗೆ ಸೈಮನ್ ೧೯೨೪ರಲ್ಲಿ ಪದಬಂಧಗಳ ಒಂದು ಪುಸ್ತಕವನ್ನು ಪ್ರಕಟಿಸಿದ. ಇಂತಹುದೊಂದು ಸಾಹಿತ್ಯಕವಲ್ಲದ ಪ್ರಯತ್ನದೊಡನೆ ತನ್ನ ಪ್ರಕಾಶನ ಸಂಸ್ಥೆಯ ಹೆಸರನ್ನು (ಮುಂದೆ 'ಸೈಮನ್ ಆಂಡ್ ಶೂಸ್ಟರ್' ಎಂದು ಹೆಸರುಮಾಡಿದ್ದು ಇದೇ ಸಂಸ್ಥೆ) ಜೋಡಿಸಲು... |
ಕೆಲವೇ ಸಮಯದಲ್ಲಿ ಆತನ ಹಾಗೂ ಆತನ ಚಿಕ್ಕಮ್ಮನ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಆ ಪುಸ್ತಕದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು, ಪದಬಂಧದ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. |
[ಜಾಹೀರಾತು] ಪದಬಂಧ ಕುರಿತ ಪುಸ್ತಕಗಳು, ಆಟಿಕೆಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ! |
ಆ ಸಮಯದಿಂದ ಇಲ್ಲಿಯವರೆಗಿನ ಒಂದು ಶತಮಾನದಲ್ಲಿ ಪದಬಂಧದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ, ನಿಜ. ಆದರೆ ಈ ಅವಧಿಯಲ್ಲಿ ತಂತ್ರಜ್ಞಾನದೊಡನೆ ಪದಬಂಧದ ಸಂಬಂಧ ಬೆಳೆದಿರುವ ರೀತಿ ಕುತೂಹಲಕರವಾದದ್ದು. |
ಮುದ್ರಣದ ತಂತ್ರಜ್ಞಾನ ಬೆಳೆದಂತೆ ಪದಬಂಧದ ರಚನೆಯಲ್ಲಿ ತಂತ್ರಜ್ಞಾನದ ಹೊಸಹೊಸ ಸಲಕರಣೆಗಳ ಬಳಕೆ ಸಾಧ್ಯವಾಯಿತು. ಇಡೀ ಪತ್ರಿಕೆಯ ಮುದ್ರಣವೇ ಕಂಪ್ಯೂಟರೀಕರಣವಾಗಿದೆ ಎಂದಮೇಲೆ ಇನ್ನೇನು, ಪದಬಂಧದ ವಿನ್ಯಾಸವೂ ಕಂಪ್ಯೂಟರ್ ಬಳಸಿಯೇ ಆಗಬೇಕು. ಪದಗಳ ಆಯ್ಕೆ ಹಾಗೂ ಸುಳಿವುಗಳ ಯೋಜನೆಯನ್ನು ವಿನ್ಯಾಸಕಾರರೇ ಮಾಡಿದರೂ ಕೂಡ ಅವರು ಪದಬಂಧವನ್ನು ಮುದ್ರಣಕ್ಕೆ ಸಿದ್ಧಪಡಿಸುವುದು ಕಂಪ್ಯೂಟರಿನಲ್ಲೇ. |
ವಿನ್ಯಾಸ ಮಾತ್ರವಲ್ಲ, ಪದಗಳ ಆಯ್ಕೆಯನ್ನೂ ಮಾಡಿಕೊಡಬಲ್ಲ ತಂತ್ರಾಂಶಗಳು ಇದೀಗ ಸಿದ್ಧವಾಗಿವೆ. ಪದಬಂಧದ ವಿನ್ಯಾಸ ಹೀಗಿರಬೇಕು ಎಂದು ಹೇಳಿದರೆ ಸಾಕು, ಅದರಲ್ಲಿನ ಚೌಕಗಳಿಗೆ ಸರಿಯಾಗಿ ಹೊಂದುವ ಪದಗಳನ್ನು ಇಂತಹ ತಂತ್ರಾಂಶಗಳೇ ಕೊಟ್ಟುಬಿಡಬಲ್ಲವು. ದೊಡ್ಡ ಸಂಖ್ಯೆಯ ಪದಗಳ ದತ್ತಸಂಚಯವನ್ನು (ಕಾರ್ಪಸ್ ಅಥವಾ ಪಠ್ಯಕಣಜ) ಬಳಸಿಕೊಳ್ಳುವ ಇಂತಹ ತಂತ್ರಾಂಶಗಳಲ್ಲಿ ಪದಗಳನ್ನು ಸೂಚಿಸುವುದಷ್ಟೇ ಅಲ್ಲ, ಅದಕ್ಕೆ... |
Subsets and Splits
No community queries yet
The top public SQL queries from the community will appear here once available.