text
stringlengths
0
61.5k
ಕಡಕೊಳದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಅವರ ಕೈಹಿಡಿದು ಆತ್ಮೀಯವಾಗಿ ಮಾತನಾಡುವ ಚಿತ್ರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲೂ ಪ್ರಕಟಿಸಿದ್ದಾರೆ.
ಒಬ್ಬರೇ ಪ್ರಚಾರ ಕೈಗೊಳ್ಳಬೇಕಿತ್ತು: ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಜೆಡಿಎಸ್‌ ಕಾರ್ಯಕರ್ತರ ಒಲವು ಮೈತ್ರಿ ಅಭ್ಯರ್ಥಿಯ ಪರ ಮೂಡಿಸುವ ಪ್ರಯತ್ನ ನಡೆಸಬೇಕಿತ್ತು ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕರೊಬ್ಬರು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ತಮ್ಮ ಗಮನವನ್ನು ಮಂಡ್ಯ ಕ್ಷೇತ್ರದತ್ತ ಕೇಂದ್ರೀಕರಿಸಿದ್ದಾರೆ. ಅವರಿಗೂ ಮೈಸೂರಿನಲ್ಲಿ ಹೆಚ್ಚಿನ ಪ್ರಚಾರ ನಡೆಸಲು ಆಗಲಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನಷ್ಟು ಆಸಕ್ತಿ ವಹಿಸಬೇಕಿತ್ತು ಎಂಬುದು ಅವರ ಹೇಳಿಕೆ.
ಮೈಸೂರು ಕ್ಷೇತ್ರದ ಟಿಕೆಟ್‌ ಕಾಂಗ್ರೆಸ್‌ಗೆ ಒದಗಿಸಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಆದ್ದರಿಂದ ಈ ಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಹಿರಂಗ ಪ್ರಚಾರ ಮಂಗಳವಾರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಪ್ರಚಾರದ ಕೊನೆಯ ದಿನ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಮತ್ತೆ ಜತೆಯಾಗಿ ಕಾಣಿಸಿಕೊಳ್ಳುವರೇ ಎಂಬ ಕುತೂಹಲ ಕಾರ್ಯಕರ್ತರದ್ದು.
ತಲಕಾವೇರಿಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್! | Ramnath Kovind today left HAL in Bengaluru with his wife to Talakaveri in Kodagu district - Kannada Oneindia
ರಾಷ್ಟ್ರಪತಿ ಕೋವಿಂದ್ ಆರೋಗ್ಯ ಸ್ಥಿರ: ಏಮ್ಸ್‌ಗೆ ದಾಖಲಿಸಲು ಸಲಹೆ
ತಲಕಾವೇರಿಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್!
| Published: Saturday, February 6, 2021, 11:31 [IST]
ಬೆಂಗಳೂರು, ಫೆ. 06: ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಇಂದು ಸಂಸಾರ ಸಮೇತರಾಗಿ ಕೊಡಗು ಜಿಲ್ಲೆಯ ಅಧಿಕೃತ ಬೇಟಿಗಾಗಿ ಭಾರತೀಯ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.
ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ಕೋವಿಂದ ಅವರೂ ರಾಷ್ಟ್ರಪತಿಗಳ ಜೊತೆಯಲ್ಲಿ ಇಂದು ಕಾವೇರಿ ಉಗಮಸ್ಥಾನ ತಲಾಕಾವೇರಿಗೆ ಬೇಟಿ ನೀಡುವರು. ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆಗಳಿಗೆ. ಜೊತೆಗೆ ಕಾವೇರಿ ನದಿ ಉಗಮ ಸ್ಥಳವನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪತ್ನಿ ಸಮೇತರಾಗಿ ವೀಕ್ಷಣೆ ಮಾಡಲಿದ್ದಾರೆ.
ಭಾಗಮಂಡಲದ ಕಾವೇರಿ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಲಿರುವ ರಾಮನಾಥ ಕೋವಿಂದ್‌ ನಂತರ ಕಾವೇರಿ ನದಿ ಉಗಮಸ್ಥಾನ ತಲಕಾವೇರಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಡಿಕೇರಿಯ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಮಡಿಕೇರಿಗೆ ಆಗಮಿಸಿದ ನಂತರ ರಾಷ್ಟ್ರಪತಿ ಸರಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಜನರಲ್‌ ತಿಮ್ಮಯ್ಯ ಸ್ಮಾರಕ ಭವನ, ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಿದ್ದಾರ...
ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಜೊತೆಗೆ ಭಿಗಿ ಭದ್ರತೆ ಮಾಡಿಕೊಳ್ಳಲಾಗಿದ್ದು, ತಲಕಾವೇರಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿ ತನಕ 8 ಕಿ.ಮೀ. ಅಂತರದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರ‌ ನಿಯೋಜನೆ ಮಾಡಲಾಗಿದೆ. ಮಡಿಕೇರಿಯಲ್ಲಿ ಜನರಲ್‌ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನಾ ಸಮಾರ...
ಕೊಡಗು ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರು ಸಹ ರಾಷ್ಟ್ರಪತಿಗಳ ಜೊತೆಗೆ ಬೆಂಗಳೂರಿನಿಂದ ಪ್ರಯಾಣಿಸಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಅವರಿಗೆ ಬೀಳ್ಕೊಡುಗೆ ನೀಡಿದರು.
ಇನ್ನಷ್ಟು ramnath kovind ಸುದ್ದಿಗಳು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸ್ಪತ್ರೆಗೆ ದಾಖಲು, ಆಗಿದ್ದೇನು?
ರಾಷ್ಟ್ರಪತಿ ಭೇಟಿ; ಮಡಿಕೇರಿಯ ಹಲವು ಅಂಗಡಿ ಬಂದ್!
ramnath kovind talakaveri kodagu ರಾಮನಾಥ್ ಕೋವಿಂದ್ ತಲಕಾವೇರಿ ಕೊಡಗು
President Ramnath Kovind today left HAL in Bengaluru with his wife to Talakaveri in Kodagu district. Know more,
ವೈರಸ್ ಮೂಲದ ತನಿಖೆಗೆ ಒಪ್ಪಿರುವ ಚೀನಾದ ನಿರ್ಧಾರದ ಕುರಿತು ಅಭಿಪ್ರಾಯವೇನು | Udayavani – ಉದಯವಾಣಿ
Team Udayavani, May 21, 2020, 5:24 PM IST
ಮಣಿಪಾಲ: ಕೋವಿಡ್ ಪೀಡಿತ ವಿಶ್ವದ ರಾಷ್ಟ್ರಗಳ ಒತ್ತಾಯಕ್ಕೆ ಮಣಿದು ವೈರಸ್ ಮೂಲದ ತನಿಖೆಗೆ ಸಹಕಾರ ನೀಡಲು ಒಪ್ಪಿಕೊಂಡಿರುವ ಚೀನಾದ ನಿರ್ಧಾರದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಸಣ್ಣಮಾರಪ್ಪ. ಚಂಗಾವರ: ತನಿಖೆ ಆಗಲೇಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೇಶ ದೇಶಗಳ ಮಧ್ಯೆ ವೈರಸ್ ಯುದ್ಧ ಪ್ರಾರಂಭವಾಗಿ ಮಾನವ ಕುಲದ ನಾಶಕ್ಕೆ ನಾಂದಿಯಾಗಬಹುದು. ಇಲ್ಲಿ ಚೀನಾ ತಪ್ಪು ಮಾಡಿದೆಯೋ ಅಥವಾ ಇಲ್ಲವೋ ಯಾರಿಗೂ ಗೊತ್ತಿಲ್ಲ. ತನಿಖೆಯಿಂದ ಸತ್ಯ ಹೊರಬರಬೇಕು
ಚಂದ್ರಶೇಖರ್ ಸುನಗಡ: ಎಲ್ಲಾ ದೇಶಗಳು ರೋಗಿಷ್ಟ ದೇಶಗಳು ಆದ ಮೇಲೆ ತನ್ನ ರೋಗದ ತೀವ್ರತೆಯನ್ನು ಎಷ್ಟು ಪರಿಣಾಮಕಾರಿಯಾಗಿ ಹರಡಿಸಿದ ಮೇಲೆ ಬೇರೆ ಹಾಗೂ ತನ್ನ ದೇಶದವರ ಹೆಣಗಳನ್ನು ರಾಶಿಯ ಮೇಲೆ ನಿಮ್ಮಲ್ಲಿ ತನಿಖೆ ಮಾಡಿ ನಮ್ಮಲ್ಲಿನು ತನಿಖೆ ಮಾಡಲಿ ಅಂತ ಅವಕಾಶ ಸಹಕಾರ ಕೊಟ್ಟಿರಬಹುದು ಸಾವಿನ ಮನೆ ಚೀನಾ ದೇಶ
ವಿಶು ಕೆ ಶೆಟ್ಟಿ: ಎಲ್ಲಾ ಸಾಕ್ಷಿ ಗಳನ್ನು ಯಶಸ್ವಿಯಾಗಿ ನಾಶ ಮಾಡಿಯಾಗಿರ್ಬೇಕು. ಈಗ ತನಿಖೆಗೆ ರೆಡಿ ಇದ್ದಾರೆ
ಉಮೇಶ್ ಗಂಗಾ: ಕಳ್ಳ, ಮೋಸಗಾರ ಕೊಲೆಗಾರ ಯಾವತ್ತೂ ತನ್ನ ತಪ್ಪನ್ನ ಒಪ್ಪಿಕೊಳ್ಳಲ್ಲ, ಚೀನಾ ತನ್ನ ನರಿ ಬುದ್ದಿಯನ್ನ ತನಿಖೆ ದಿವಸ ಹೇಗೆ ಬೇಕೋ ಹಾಗೇ ಪ್ರೆಸಂಟ್ ಮಾಡುತ್ತೆ
ಗೋವಿಂದಪ್ಪ: ಸತ್ಯ ಯಾವತ್ತು ಹೊರಬರಲು ಸಾಧ್ಯವೇ ಇಲ್ಲ.ಇಡೀ ವಿಶ್ವಕ್ಕೆ ಬೆಂಕಿ ಇಟ್ಟು ಬಿಸಿ ಕಾಯಿಸಿಕೊಳ್ಳುತ್ತಿದೆ ಚೀನಾ.
ನಿರಂಜನ - ವಿಕಿಪೀಡಿಯ
ನಿರಂಜನ :-
ಕುಳಕುಂದ ಶಿವರಾಯ
ಅರವತ್ತರ ದಶಕದಲ್ಲಿ ನಿರಂಜನ
15ನೇ ಜೂನ್ 1926
ಕುಳಕುಂದ, ದಕ್ಷಿಣ ಕನ್ನಡ ಜಿಲ್ಲೆ
ಮೆಟ್ರಿಕ್ಯುಲೇಶನ್
ಕಥೆ, ಕಾದಂಬರಿ ಮತ್ತು ಅಂಕಣ ಬರಹ
ಸೀಮಂತಿನಿ ಮತ್ತು ತೇಜಸ್ವಿನಿ
ತಾಯಿ ಚೆನ್ನಮ್ಮ
ಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಿರಂಜನ (೧೯೨೪-೧೯೯೫) ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ ಕುಳಕುಂದ ಶಿವರಾಯ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ ಮಾರ್ಕ್ಸ ,ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾ...
೨ ಪತ್ರಿಕೆಗಳ ಜೊತೆ ನಂಟು
೩ ಕೃತಿ ವಿಮರ್ಶೆ
೪.೨ ಕಥಾ ಸಂಕಲನಗಳು
೪.೩ ಪತ್ರ ಸಂಕಲನ
೪.೩.೧ ಲೇಖನ ಸಂಕಲನ
೪.೪ ಭಾಷಾಂತರ
೫ ಅಂಕಣ ಬರಹಗಳು
ಹುಟ್ಟಿದ ಸ್ಥಳ ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರ ಕುಳಕುಂದದಲ್ಲಿ ಕುಳಕುಂದ (೧೫ನೇ ಜೂನ್ ೧೯೨೪). ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ದಿನಾಂಕ ೦೫-೦೨-೧೯೫೬ ರಂದು ಸಜ್ಜನರಾವ್ ಕಲ್ಯಾಣ ಮಂಟಪ, ವಿಶ್ವೇಶ್ವರಪುರ, ಬೆಂಗಳೂರು ಇಲ್ಲಿ ಮದುವೆ - (ಮ...
ಪತ್ರಿಕೆಗಳ ಜೊತೆ ನಂಟು[ಬದಲಾಯಿಸಿ]
೧೯೪೨ ರಿಂದ ಮೂರು ವರ್ಷ ರಾಷ್ಟ್ರಬಂಧು ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.
ಬಸವರಾಜ ಕಟ್ಟೀಮನಿ ಯವರು ಉಷಾ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಅದಕ್ಕೂ ನಿರಂಜನ ಅವರ ಲೇಖನಗಳ ಸುರಿಮಳೆಯಾಯ್ತು.
ಚಿತ್ರಗುಪ್ತ, ತಾಯಿನಾಡುವಿನ ಸಹೋದರ ಪತ್ರಿಕೆಗೆ ನಿಯಮಿತವಾಗಿ ಕತೆ ಮತ್ತು ಲೇಖನಗಳನ್ನು ಬರೆಯುತ್ತಿದ್ದರು.
ಜನಪ್ರಗತಿ ಪತ್ರಿಕೆಗೆ ಅವರು ತಮ್ಮ `ಕಾಲ್ಪನಿಕ' ಗೆಳತಿ `ಸಾಧನಾ'ಗೆ ಬರೆಯುತ್ತಿದ್ದ ಸಾಹಿತ್ಯಿಕ ಪತ್ರಗಳು ಸಾಧನ ಸಂಚಯ ಅಂಕಣವಾಗಿತ್ತು. ಮುಂದೆ ಪುಷ್ಪಹಾರ, ಸಾಧನಾ ಪುಸ್ತಕಗಳಾದವು.
ಕರ್ಮವೀರ ವಾರಪತ್ರಿಕೆಗೆ ರಾಜಧಾನಿಯಿಂದ ಅಂಕಣ ಬರೆಯುತ್ತಿದ್ದರು.
ಪ್ರಜಾಮತ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು ಕೆಲವುಕಾಲ.
ಕಮ್ಯೂನಿಸ್ಟ್ ಪಕ್ಷದ ಜನಶಕ್ತಿ ಯ ಸಂಪಾದಕರಾಗಿ ದುಡಿದರು.
'ತಾಯಿನಾಡು' ಮತ್ತು 'ಚಿತ್ರಗುಪ್ತ' ಪತ್ರಿಕೆಗಳಿಗೆ ೫೦-೬೦ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದವರು - 'ಪುಸ್ತಕಪ್ರಿಯ' ಹೆಸರಿನ ಹೆಚ್.ಆರ್.ನಾಗೇಶರಾವ್. ಐದು ದಶಕಗಳ ಹಿಂದಿನ ವಿಮರ್ಶೆಯ ಸ್ವರೂಪದ ಸ್ಯಾಂಪಲ್‍ಗಳು ಇಲ್ಲಿದೆ. ರಂಗಮ್ಮನ ವಠಾರ (ಕಾದಂಬರಿ. ಲೇಖಕರು: ಶ್ರೀ 'ನಿರಂಜನ', ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)
- ಪುಸ್ತಕಪ್ರಿಯ ತಾಯಿನಾಡು, 'ಪ್ರಕಟಣ ಪ್ರಪಂಚ' ಅಂಕಣ; ೨೫-೯-೧೯೫೪
ವಾಸ್ತವಿಕ ಪ್ರಪಂಚದ ಬಗ್ಗೆ ಕಲ್ಪನೆಯ ಪ್ರೇಯಸಿಗೆ ಕಾಗದಗಳು!
ಸಾಧನಾ ಲೇಖಕರು - ನಿರಂಜನ; ಪ್ರಕಾಶಕರು - ಪುರೋಗಾಮಿ ಪ್ರಕಾಶನ, ಬಸವನಗುಡಿ,ಬೆಂಗಳೂರು-೪; ಬೆಲೆ-ರೂ.೧-೮-೦
ಪ್ರಚಲಿತ ಜಗತ್ತಿನಲ್ಲಿ - ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ಹೆಸರಾದ ಶ್ರೀ `ನಿರಂಜನ'ರು ತಮ್ಮ ಕಲ್ಪನೆಯ (?) ಪ್ರೇಯಸಿ `ಸಾಧನಾ'ಳಿಗೆ `ಜನಪ್ರಗತಿ'ಯ ಮೂಲಕ ಕಳಿಸಿ ಕೊಟ್ಟ `ಮೇಘ ಸಂದೇಶ'ದ ಆರಿಸಿದ ಸಂಗ್ರಹ ಈ ಪುಸ್...
ಯಾವುದೇ ಪ್ರಮುಖ ವಿಷಯದ ಬಗ್ಗೆ ಎಷ್ಟೇ ವಿಚಾರಪೂರಿತವೂ ಗ೦ಭೀರವೂ ಆದ ಪ್ರಬ೦ಧವನ್ನು ಬರೆದರೂ ಅದು ಎಲ್ಲಾ ಓದುಗರಿಗೂ ಹಿಡಿಸದು; ಆದರೆ ಅದಕ್ಕೆ ಪ್ರಣಯ ಪತ್ರದ ಚೌಕಟ್ಟು ಹಾಕಿದರೆ ಎ೦ತಹ ತೀವ್ರ ವಿಷಯವನ್ನಾಗಲೀ ಓದುಗರು ಆಸಕ್ತಿಯಿ೦ದ ಓದುತ್ತಾರೆ. `ಜನಪ್ರಗತಿ'ಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಈ ಪತ್ರಮಾಲೆಯೇ ಕನ್ನಡ ಓದುಗರ ಮೇಲಿನ ಈ ಸತ್ವ ಪರೀಕ್ಷೆಗೆ ಸಾಕ್ಷಿ. ಪ್ರತಿ ಯುವಕ ಯುವತಿಯೂ ಈ ಸ೦ಕಲನವನ್...
ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕಂಡು ಬ೦ದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸಿದ್ದಾರೆ. ಕುತೂಹಲಕರ, ಕೋಲಾಹಲಕರ ಪ್ರಸ೦ಗ-ವಿಷಯಗಳನ್ನ೦ತೂ ಅವರು ಸು೦ದರವಾಗಿ, ಸ್ವಾರಸ್ಯವಾಗಿ `ಸಾಧನಾ'ಗೆ ವರ್ಣಿಸುವುದನ್ನು ಓದಿದಾಗ ವಾಚಕರನ್ನು ಮಾ೦ತ್ರಿಕನ ಮಾತಿಗೆ ಮುಗ್ಧರಾಗುವ ರೀತಿ ಮಾಡುವುದು. ಇ೦ತಹ ಸಿದ್ಧ ಹಸ್ತವನ್ನುಳ್ಳ ಶ್ರೀ `ನಿರ೦ಜನ'ರು ಇತ್ತೀಚಿಗೆ...
- "ಪುಸ್ತಕಪ್ರಿಯ" ತಾಯಿನಾಡು, ೨೮-೧೧-೧೯೫೩
ಜಸ್ಟಿನ ರೊಮಿತ್ (1954)
ಪತ್ರ ಸಂಕಲನ[ಬದಲಾಯಿಸಿ]
'ನಿರಂಜನ' ಅವರು ಬರೆಯುತ್ತಿದ್ದ 'ಸಾಧನ ಸಂಚಯ' ಎಂಬ ವಿಶಿಷ್ಟ ಅಂಕಣದ ಎರಡನೆಯ ಸಂಕಲನವಾದ 'ಪುಷ್ಪಹಾರ'ದಿಂದ ಆಯ್ದ ಲೇಖನವಿದು. ಅದು 'ಜನಪ್ರಗತಿ'ಯ ೧೯೫೪ರ ಅಕ್ಟೋಬರ್-ನವೆಂಬರ್ ನಡುವಣ ಒಂದು ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಹಿರಿಯ ವ್ಯಕ್ತಿಯ ವಿನಯಶೀಲತೆ
ಒಡತಿ- ಬಿಡುವು ಮಾಡಿಕೊಂಡು ನೀನು ಬರೆದ ನಾಲ್ಕು ಸಾಲುಗಳ ಕಾಗದ ಬಂತು. 'ಮರೆತು ಬಿಡಬೇಡ' ಎಂದಿದೀಯಾ. ಅದೊಳ್ಳೇ ಎಚ್ಚರಿಕೆ! ಇಲ್ಲಿ ನಿತ್ಯ ಸ್ಮರಣೆ ನಡೆದಿರುವಾಗಲೂ ಎಂತಹ ಮಾತು!
ಆದರೂ, ಮರೆತು ಹೋಗದ ವಿಷಯಗಳೇ ಇಲ್ಲ ಎನ್ನಲಾರೆ. ಉದಾಹರಣೆಗೆ ಎಂದೋ ಏನೋ ಎಲ್ಲಿಯೋ ಓದಿದ್ದು. ಅಷ್ಟೇ ಅಲ್ಲ, ಒಮ್ಮೊಮ್ಮೆ ಬಲು ಚೆನ್ನಾಗಿ ನಮಗೆ ತಿಳಿದಿದೆ ಎನ್ನುವಂತಹ ವಿಷಯವನ್ನೂ ನಾವೂ ಮರೆತಿರುವುದುಂಟು.
ಹಿಂದೆಯೊಮ್ಮೆ ನಾನು ನಿನಗೆ ಬರೆದಾಗ ಮಾಡಿದ ಸಣ್ಣ ತಪ್ಪು, ಸೀತಾದೇವಿಯ ಅಗ್ನಿ ಪರೀಕ್ಷೆಯ ಸ್ಥಳ-ಕಾಲಗಳನ್ನೇ ಬದಲಿಸಿಬಿಟ್ಟಿದ್ದೆ! ನನ್ನ ಬರವಣಿಗೆಯಲ್ಲಿ ಯಾರಿಗೂ ಕಾಣದುದನ್ನು ಯಾವಾಗಲೂ ಕಂಡು ಹಿಡಿಯುವ ಸೂಕ್ಷ್ಮದರ್ಶಿ ನೀನು. ಆ ಸಾರೆ ಮಾತ್ರ ಮೋಸ ಹೋದೆ. ಆದರೆ ನನಗೇ ನೆನಪಾಗಿ ತಪ್ಪು ತಿಳಿದಾಗ ಎಷ್ಟೋ ಕೆಡುಕೆನಿಸಿತು. ನಮ್ಮ ಪ್ರಾಚೀನ ಸಾಹಿತ್ಯ ಕೃತಿರತ್ನಗಳನ್ನೇ ನಾವು ತಿಳಿದಿರುವ ಬಗೆ ಎಷ್ಟೊಂದು...
ಈ ಸಂದರ್ಭದಲ್ಲಿ ಸ್ವಾರಸ್ಯಕರವಾದೊಂದು ಪತ್ರವ್ಯವಹಾರದ ವಿಷಯ ನಿನಗೆ ಬರೆಯಬೇಕು. ಇದು ನಡೆದುದು 'ಪ್ರಜಾವಾಣಿ'ಯಲ್ಲಿ. ಆ ಪತ್ರ ವ್ಯವಹಾರ, ಮರೆತುಹೋಗಿ ಆಗುವ ಪ್ರಮಾದಗಳಿಗೆ ಸಂಬಂಧಿಸಿದ್ದು. ಈ ಪತ್ರಿಕೆಯಲ್ಲಿ 'ವಾಚಕರ ವಾಣಿ' ಎಂಬ ವಿಭಾಗವಿದೆ. ಇಲ್ಲಿ ಕಲೆ-ಸಾಹಿತ್ಯ-ಕೆಂಗಲ್ ಹನುಮಂತಯ್ಯ ರಸ್ತೆ-ಮೋಟರ್ ಅಪಘಾತ, ಮದ್ಯಪಾನ ನಿಷೇಧ-ಪಕ್ಷ ರಾಜಕೀಯ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಓದುಗರ ಓಲೆಗಳು ಪ್ರಕ...
ಕೆಲವು ದಿನಗಳ ಹಿಂದೆ ಈ ವಿಭಾಗದಲ್ಲಿ 'ಮಗನೋ ಮೊಮ್ಮೊಗನೋ?' ಎಂಬ ಶೀರ್ಷಿಕೆಯನ್ನು ಕಂಡೆ. ಕುತೂಹಲದಿಂದ ಅದರ ಕೆಳಗಿದ್ದುದನ್ನೋದಿದೆ. ಬಿ.ವಿ.ಮೂರ್ತಿ ಎಂಬುವರು ಬರೆದ ಆ ಕಾಗದ ಹೀಗಿತ್ತು:
ಸ್ವಾಮಿ, ಮಾಧ್ಯಮಿಕ ಶಾಲೆಯ ೪ನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ೧೨ನೇ ಪುಟದ ೧೪ನೇ ಸಾಲಿನಲ್ಲಿ "ಹಿಂದೆ ಬಲಿಯು ತನ್ನ ತಂದೆಯಾದ ಪ್ರಹ್ಲಾದನನ್ನು 'ಕ್ಷಮೆ ಒಳ್ಳೆಯದೇ' ಎಂದು ಕೇಳಿದನಂತೆ.." ಎಂದು ಮುಂತಾಗಿ ಉಲ್ಲೇಖಿಸಿದೆ. ಇದನ್ನು ಶ್ರೀ ಎ.ಆರ್.ಕೃಷ್ಣಶಾಸ್ತ್ರಿ ಅವರ ವಚನ ಭಾರತದಿಂದ ಆಯ್ದು ಕೊಳ್ಳಲಾಗಿದೆಯೆಂದು ಪಠ್ಯ ಪುಸ್ತಕದ ಸಂಪಾದಕರು ನಿವೇದಿಸಿಕೊಂಡಿದ್ದಾರೆ. ಶ್ರೀ ಶಾಸ್ತ್ರಿಗಳ "ವಚನ ಭಾರತ"...
- ಬಿ.ವಿ.ಮೂರ್ತಿ ಎ.ಆರ್.ಕೃಷ್ಣಶಾಸ್ತ್ರಿಯವರಿಂದ ಆಗಿರಬಹುದಾದ ಪ್ರಮಾದಕ್ಕೆ ಸಂಬಂಧಿಸಿ ಓದುಗರಿಂದ ಓಲೆ! ಸೋಮಾರಿಯಾದ ನಾನು ಸ್ವತಃ ಸತ್ಯಾನ್ವೇಷಣೆಗೆ ಹೋಗದೆ, ಬಲ್ಲವರು ಯಾರಾದರೂ ಹೇಳಬಹುದೆಂದು ಇಮ್ಮಡಿ ಕುತೂಹಲದಿಂದ ಕಾದು ಕುಳಿತೆ. ಅದಾಗಿ ಕೆಲವು ದಿನಗಳ ಬಳಿಕೆ ಅದೇ ವಿಭಾಗದಲ್ಲಿ 'ಮಗನಲ್ಲ, ಮೊಮ್ಮಗ' ಎಂಬ ಶೀರ್ಷಿಕೆ ಕಣ್ಣಿಗೆ ಬಿತ್ತು. ಅದರಡಿಯಲ್ಲಿ ಎರಡು ಓಲೆಗಳಿದ್ದವು. ಒಂದನ್ನು ಸ್ವತಃ ಎ.ಆರ...
ಹೀಗಿತ್ತು ಎ.ಸುಬ್ರಹ್ಮಣ್ಯಂರವರ ಕಾಗದ: "ಸ್ವಾಮಿ, ತಮ್ಮ ೨೨-೧೦-೧೯೫೪ ರ ಪತ್ರಿಕೆಯಲ್ಲಿ ಬಿ.ವಿ.ಮೂರ್ತಿ ಎಂಬುವರು ಬಲಿಯು ಪ್ರಹ್ಲಾದನ ಮಗನೋ ಮೊಮ್ಮಗನೋ ಬಲ್ಲವರು ತಿಳಿಸಬೇಕು ಎಂಬುದಾಗಿ ವಾಚಕರ ಗಮನಕ್ಕೆ ತಂದಿರುವರು. ಈ ವಿಷಯವಾಗಿ ನನಗೆ ತಿಳಿದಿರುವಂತೆ ಮಹಾ ಭಾಗವತದಲ್ಲಿ ಷಷ್ಠಸ್ಕಂದ ೧೮ ನೇ ಅಧ್ಯಾಯದ ೫೯ ನೇ ಪೇಜಿನಲ್ಲಿ ಪ್ರಹ್ಲಾದನಿಗೆ ವಿಮೋಚನನೆಂಬ ಮಗನೂ ವಿಮೋಚನನಿಗೆ ಬಲಿ ಎಂಬ ಮಗನೂ ಸಿಂಹಿಕೆ...
- ಎ.ಸುಬ್ರಹ್ಮಣ್ಯಂ" ಓದುಗರೊಬ್ಬರು ತಮ್ಮ ತಿಳಿವಳಿಕೆಯಿಂದ ಹೀಗೆ ಬರೆದರಲ್ಲಾ ಎಂದು ನನಗೆ ಸಂತೋಷವಾಯಿತು. ಅಷ್ಟರಲ್ಲೇ ಬಿ.ವಿ.ಮೂರ್ತಿಯವರ ಓಲೆಗೆ ಉತ್ತರವಾಗಿ ಸ್ವತಃ ಕೃಷ್ಣಶಾಸ್ತ್ರಿಯವರೇ ಬರೆದಿದ್ದರು:
"ಸ್ವಾಮಿ, ಶ್ರೀ ಬಿ.ವಿ.ಮೂರ್ತಿಯವರು 'ವಚನ ಭಾರತ'ದಲ್ಲಿರುವ ಒಂದು ತಪ್ಪನ್ನು ತೋರಿಸಿಕೊಟ್ಟುದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಬಲಿಯು ವಿಮೋಚನನ ಮಗ, ಪ್ರಹ್ಲಾದನ ಮೊಮ್ಮಗ. ಸಂಸ್ಕೃತ ಮೂಲದಲ್ಲಿ 'ಪ್ರಹ್ಲಾದಂ ವಿತರಂ ಪಿತುಃ' ಎಂದಿದೆ. ಈ ತಪ್ಪನ್ನು ಮುಂದಿನ ಮುದ್ರಣದಲ್ಲಿ ತಿದ್ದಿಕೊಳ್ಳುತ್ತೇನೆ.
- ಎ.ಆರ್.ಕೃಷ್ಣಶಾಸ್ತ್ರಿ" ನಿಜಾಂಶ ತಿಳಿಯಿತು. ಕನ್ನಡದ ಹಿರಿಯ ವ್ಯಕ್ತಿಯೊಬ್ಬರು 'ಪ್ರಜಾವಾಣಿ' ಸಂಪಾದಕರಿಗೆ ಬರೆದ ನಾಲ್ಕು ವಾಕ್ಯಗಳ ಓಲೆ. ಆ ವಿನಯ.. ಅದನ್ನೋದುತ್ತ ವಿವರಿಸಲಾಗದಂತಹ ಅನುಭವ ನನಗಾಯಿತು. ಕನ್ನಡದ ದೊಡ್ಡ ವಿದ್ವಾಂಸರೊಬ್ಬರಿಂದ ಸಣ್ಣ ತಪ್ಪಾಯಿತೆಂಬುದು ಮಹತ್ವದ ವಿಷಯವಲ್ಲ. ಆದರೆ 'ತಪ್ಪಾಯಿತು, ತಿದ್ದಿಕೊಳ್ಳುತ್ತೇನೆ' ಎನ್ನುವ ವಿನಯಶೀಲತೆ ಮಹತ್ವದ್ದು. ಆ ಮಾತಿನ ಹಿಂದಿನ ಮನೋಭಾ...
ನಮ್ಮ ಎಲ್ಲ ಸಾಹಿತಿಗಳೂ ಹೀಗೆ ವಿನಯ ಗುಣ ಸಂಪನ್ನರಾದರೆ ಎಷ್ಟೊಂದು ಒಳಿತಾದೀತು! ಬಿ.ವಿ.ಮೂರ್ತಿಯವರು.. ಈ ಮಹಾನುಭಾವ ಯಾರೋ ನನಗೆ ತಿಳಿಯದು. ಆದರೆ, ಮಗನೋ ಮೊಮ್ಮಗನೋ .... ಸಮಸ್ಯೆಯ ಇತ್ಯರ್ಥದೊಡನೆ ಅವರು ಸುಮ್ಮನಾಗುವರೆಂದು ಭಾವಿಸುವುದು ಮಾತ್ರ ತಪ್ಪಾದೀತು! ಎಂ.ಆರ್.ಶ್ರೀಯವರ ಅಧ್ಯಕ್ಷತೆಯಲ್ಲಿ ೧೯೫೨ ರಲ್ಲಿ ಪ್ರಕಟವಾದ ಪ್ರಾಥಮಿಕ ಶಾಲೆಯ ಎರಡನೆಯ ತರಗತಿ ಪಠ್ಯ ಪುಸ್ತಕದಲ್ಲಿ, ಸುಮಿತ್ರೆ ದಶರಥನ...
ಆದರೆ ನಿಜವಾಗಿ ಸುಮಿತ್ರೆ ಎಷ್ಟನೆಯ ಮಡದಿ? .... ಇದೀಗ ಬಿ.ವಿ.ಮೂರ್ತಿಯವರ ಪ್ರಶ್ನೆ. ಪ್ರಾಜ್ಞರು ತಿಳಿಸಬೇಕೆಂದು ಅವರು ಕೇಳಿದ್ದಾರೆ.
ರಾಮಾಯಣಕ್ಕೆ ಸಂಬಂಧಿಸಿ ಒಮ್ಮೆ ತಪ್ಪು ಮಾಡಿದ ಮೇಲೆ ಈ ವಿಷಯವಾಗಿ ಮಾತನಾಡಲು ನನಗೆ ಒಂದು ರೀತಿಯ ಅಳುಕು. ಆದರೂ ನೆನಪು ಹೇಳುತ್ತಿದೆ. ಕೈಕೆಯೇ ಕಿರಿಯ ಹೆಂಡತಿ; ಕಿರಿಯ ಹೆಂಡತಿಯ ಬಲೆಗೆ ದಶರಥ ಬಿದ್ದುದರಿಂದಲೇ ರಾಮಾಯಣದ ಕಥೆ ಸಾಧ್ಯವಾಯಿತು. ಕೌಸಲ್ಯೆಯಂತೂ ಪಟ್ಟದ ರಾಣಿಯಾದುದರಿಮ್ದ ಸುಮಿತ್ರೆ ಎರಡನೆಯವಳೇ ಆಗಿರಬೇಕು.
ಆದರೆ ಇದು ಪ್ರಾಜ್ಞರ ಉತ್ತರವಲ್ಲ! ಈ ಮಡದಿಯರ ವಿಷಯ.. ನಿನಗೇನಾದರೂ ಗೊತ್ತೆ ಒಡತಿ? "ದಶರಥ ಮೂರು ಮದುವೆ ಮಾಡಿಕೊಂಡುದೇ ಉಂಟಂತೆ. ಸುಮಿತ್ರೆ ಎರಡನೆಯವಳಾದರೇನು? ಮೂರನೆಯವಳಾದರೇನು?" ಎನ್ನಬೇಡ ಸದ್ಯ!
ನಾನಂತೂ ಮತ್ತೊಮ್ಮೆ ರಾಮಾಯಣವನ್ನು ಅಭ್ಯಸಿಸಬೇಕೆಂದು ನಿರ್ಧರಿಸಿದ್ದೇನೆ. ಕುವೆಂಪುಕೃತ "ಜನಪ್ರಿಯ ವಾಲ್ಮೀಕಿ ರಾಮಾಯಣ"ವನ್ನು ಓದಿಗೆ ಮೊದಲ ಪೀಠಿಕೆಯಾಗಿ ಕೊಂಡು ತಂದಿದ್ದೇನೆ. ನಿನಗೂ ಬೇಕಿದ್ದರೆ ಹೇಳು. "ಬೇಡ, ಇಲ್ಲಿಯ ರಾಮಾಯಣವೇ ಸಾಕಾಗಿದೆ" ಎನ್ನುವಿ ಯೇನೋ.
ಅಂತೂ ಇದೀಗ ಮರೆತು ಹೋಗುವುದರ ಪರಿಣಾಮ, ಎಂತಹ ಅವಾಂತರಗಳು! ಈ ಬಿ.ವಿ.ಮೂರ್ತಿಯವರೂ ಅವರಂತಹ ಬೇರೆ ಕೆಲವರೂ ಇದೇ ರೀತಿಯಾಗಿ ಎಕ್ಸ್ ರೇ ಪ್ರಯೋಗವನ್ನು ಇನ್ನೂ ನಡಸಿದ್ದೇ ಆದರೆ, ಗತಕಾಲದ ಸಾಹಿತ್ಯವನ್ನು ತಿಂದು ನೀರು ಕುಡಿದಿರುವ ಭಾರತದ ಜಠರದಲ್ಲಿ ಅದೇನೇನನ್ನು ಅವರು ಕಾಣುವರೊ!
... ಒಪ್ಪಿದೆ. ಮರೆಯುವುದು ತಪ್ಪು. ಇಗೋ ಕೈ ಚಾಚು. ವಾಗ್ದಾನ ತಗೋ. ಬೇಕಾದುದನ್ನು, ಒಳ್ಲೆಯದನ್ನು, ಎಂದೂ ಮರೆಯದಂತೆ ಎಚ್ಚರದಿಂದಲೆ ಇರುವೆ.
ಹೀಗೆ ಇಪ್ಪತೈದು ಕಾದಂಬರಿಗಳನ್ನು ಬರೆದರು. ಹನ್ನೊಂದು ಕಥಾಸಂಕಲನಗಳು. ಜೀವನ ವೃತ್ತಗಳು ಎರಡು. ಇವಲ್ಲದೇ, ವ್ಯಕ್ತಿ ಚಿತ್ರ ಸಂಕಲನಗಳು, ರಾಜಕೀಯ ಲೇಖನಗಳು,ಭಾಷಾಂತರಗಳು, ಸಂಪಾದಿತ ಕೃತಿಗಳು .....ಹೀಗೆ ಹಲವಾರು.[೨][೩]
ಸಂತ್ರಸ್ತರಿಗೆ ನ್ಯಾಯ ದೊರಕುವುದೇ...? - Uttaraprabha.com
namma kodagu,
ನೌಶಾದ್ ಜನ್ನತ್ತ ಮೂಲತಃ ಕೊಡಗಿನವರು. ನೆರೆ ಸಂದರ್ಭದಿಂದ ಈವರೆಗೆ ಕೊಡುಗಿನ ನೋವಿಗೆ ತಮ್ಮ ತಂಡದೊಂದಿದೆ ಧ್ವನಿಯಾಗುತ್ತಿದ್ದಾರೆ. ನಮ್ಮ ಕೊಡಗು ಎನ್ನುವ ತಂಡ ಜೀವಪರ ಕಾರ್ಯದ ಮೂಲಕ ಜಿಲ್ಲೆಯ ಜನರ ನೋವಿಗೆ ಸ್ಪಂದಿಸುತ್ತಿದೆ. ಸಮಾನ ಆಸಕ್ತರ ನಮ್ಮ ಕೊಡಗು ತಂಡ ಜಿಲ್ಲೆಯ ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೌಶಾದ್ ಬರೆದ ಸಂತ್ರಸ್ತರಿಗೆ ನ್ಯ...
ಕಳೆದೆರಡು ದಿನಗಳ ಹಿಂದೆ ನಡೆದ ಘಟನೆಯ ವಿಚಾರವಾಗಿ ಸಾರ್ವಜನಿಕವಾಗಿ ನಾನು ನನ್ನ ನಿಲುವೇನು ಮತ್ತು ಅಭಿಪ್ರಾಯ ಏನು ಎಂಬುದನ್ನು ತಿಳಿಸಬೇಕೆಂದು ಹಲವಾರು ಪತ್ರಕರ್ತರು, ಸಂಘಟನೆಗಳು, ರಾಜಕೀಯ ಪಕ್ಷಗಳ ನೇತಾರರು, ಹಾಗೂ ಪ್ರೀತಿಸುವ ಮನಸ್ಸುಗಳು ಕೇಳುವಾಗ ನಾನು ಮೌನ ವಹಿಸಿದ್ದೆ. ಮೇಲಾಗಿ ಆ ಸಂದರ್ಭದಲ್ಲಿ ನುಣುಚಿಕೊಂಡಿದ್ದೆ. ಆದರೆ ಸತ್ಯ ಎಲ್ಲರಿಗೂ ಗೊತ್ತಾಗಬೇಕೆಂದು ಮನಸು ಹೇಳಿದಾಗ, ಎಲ್ಲರ ಮನಸ್ಸ...
19ನೇ ತಾರೀಖಿನಂದು ತಂಡದಲ್ಲಿ ಗುರುತಿಸಿಕೊಂಡಿದ್ದ ಕೆಲವು ಸಂತ್ರಸ್ತರ ಕೋರಿಕೆಯ ಮೇರೆಗೆ ತಂಡ ಮತ್ತು ಕೆಲವು ಮಾಧ್ಯಮ ಮಿತ್ರರು ಸ್ಥಳಕ್ಕೆ ಭೇಟಿ ನೀಡಿದ್ದೆವು. ಹೊರನೋಟಕ್ಕೆ ಹಸ್ತಾಂತರಕ್ಕೆ ಸಿದ್ಧವಾಗಿ ಮದುಮಗಳಂತೆ ಸಿದ್ಧವಾಗಿ ನಿಂತಿದ್ದ ಆ ಮನೆಗಳ ಹೊಳ ಹೊಕ್ಕು ನೋಡಿದಾಗ ನಾವಲ್ಲಿ ಕಂಡ ದೃಶ್ಯ ಪ್ರತಿಯೊಬ್ಬರನ್ನು ದಂಗು ಬಡಿಸಿತು.
ಕೆಲವೊಂದು ಮನೆಗಳು ಒಂದೊಂದು ಕಡೆ ತಗ್ಗಿ ಬಗ್ಗಿ ವಕ್ರವಾಗಿದ್ದವು. ಕಳಪೆ ಮಾದರಿಯ ಮರದ ಬಾಗಿಲುಗಳು, ಕೆಲವೊಂದು ಫೌಂಡೇಶನ್ ಗಳ ಒಳಗೆ ಚೀಲ, ಮರದ ಬೇರುಗಳು ಕೆಲವೊಂದು ಗೋಡೆಗಳು ಮತ್ತು ಮೆಟ್ಟಿಲುಗಳ ಮೇಲೆ ಬಿರುಕು ಹೀಗೆ ಕಂಡು ಬಂದಾಗ ನಾನೊಬ್ಬ ಸಮಾಜ ಸೇವಕನಾಗಿ ಅಥವಾ 2018ರಿಂದ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ತಂಡದ ನೇತಾರನಾಗಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ, ಆ ರೀತಿಯಾಗಿ ನನ್ನ ಇತಿಮ...
ಆ ದಿನ ಮಾಧ್ಯಮದಲ್ಲಿ ಬಿತ್ತರವಾದ (ನೀವು ನೋಡಬಹುದು) ನನ್ನ ವಿಡಿಯೋದಲ್ಲಿ ನಾನು ಯಾವುದೇ ಪಕ್ಷದ ಅಥವಾ ಸೀಮಿತ ಪಂಗಡದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಈ ಅನಾಚಾರವನ್ನು ಯಾರು ಮಾಡಿದ್ದರೂ ಖಂಡಿತವಾಗಿ ವಿರೋಧಿಸುತ್ತಿದ್ದೆವು ಎಂದು 19ರ ತಾರೀಕಿನ ನನ್ನ ಹೇಳಿಕೆಯಲ್ಲಿ ಹೇಳಿದ್ದೆ.
ನಾವುಗಳು ಬಂದು ಹೋದ ನಂತರದ ಮಾರನೆಯ ದಿನ ಅಧಿಕಾರಿಗಳು ಬಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಕಂಡುಬಂದ ಅಷ್ಟು ತೂತುಗಳಿಗೆ ತೇಪೆ ಹಚ್ಚಿದ್ದು ಮತ್ತು ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ (ಸಂತೋಷದ ವಿಚಾರ )ಎಂಬ ಹೇಳಿಕೆಗಳು ರಿಯಾಲಿಟಿ ಚೆಕ್ ಗೆ ಬಂದಿದ್ದ ಮಾಧ್ಯಮಕ್ಕೆ ಹೇಳಿಕ್ಕೆ ನೀಡಿದ್ದರು. ಅದು ಮಾಧ್ಯಮದಲ್ಲಿ ಬಿತ್ತರವಾಗಿತ್ತು.
ಈ ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಮಾನ್ಯ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಉದ್ದೇಶದಿಂದ ಆ ಮೊದಲ ಕಳಪೆ ಕಾಮಗಾರಿಯ ಕೆಲವು ಫೋಟೋಗಳೊಂದಿಗೆ ಒಂದು ಮನವಿ ಕೊಟ್ಟು, ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಮನೆಯನ್ನು ಕೊಡಲು ಅಧಿಕಾರಿಗಳಿಗೆ ಸೂಚಿಸಿ ಎಂದು ಮನವಿ ಮಾಡಿಕೊಳ್ಳುವ ಸಲುವಾಗಿ ನಾನು ಮತ್ತು ತಂಡದ ಕೆಲವು ಸದಸ್ಯರು ಭೇಟಿ ಕೊಟ್ಟಿದ್ದೆವು.
ಆದರೆ ಈ ಎಲ್ಲಾ ವಿಚಾರಗಳ ಪೂರ್ಣ ಮಾಹಿತಿಯನ್ನು ಹೊಂದಿದ್ದ ಜಿಲ್ಲಾಡಳಿತ ಮತ್ತು ಶಾಸರು, ಸಚಿವರು, ನನ್ನಲ್ಲಿ ನಾನು ಯಾವುದೇ ಫೋಟೋ ಮತ್ತು ವಿಡಿಯೋ ಗಳನ್ನು ನೋಡುವುದಿಲ್ಲ, ಐ ಆಮ್ ಎ ಪ್ರಾಕ್ಟಿಕಲ್ ಮ್ಯಾನ್. ನನಗೆ ನೇರ ತೋರಿಸು ಎಂದು ರಾತ್ರೋ ರಾತ್ರಿ ತೇಪೆ ಹಚ್ಚಿದ್ದ ಜಾಗಕ್ಕೆ ಕರೆದುಕೊಂಡು ಹೋದರು. ತದನಂತರದಲ್ಲಿ ಅಲ್ಲಿ ನಡೆದ ಸನ್ನಿವೇಶದ ವಿಡಿಯೋ ಇಡೀ ರಾಜ್ಯವೇ ನೋಡಿದೆ.
ನೀನು ಯಾರು? ಫಲಾನುಭವಿಯೇ? ಊರು ಯಾವುದು? ಸಂತ್ರಸ್ತರ ಏಜೆಂಟಾ? ಇದನ್ನು ನೋಡಿಕೊಳ್ಳಲು ಶಾಸಕರಿದ್ದಾರೆ. ಮೇಲಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಜನರಿಂದ ಆಯ್ಕೆಯಾದ ಒಬ್ಬ ವ್ಯಕ್ತಿ ಒಂದು ಸೀಮಿತ ಪಂಗಡಕ್ಕೆ ಸೇರಿದವನು ಎಂದು ನನ್ನನ್ನು ಅವಮಾನ ಮಾಡಿದ್ದು ನನ್ನೊಳಗಿನ ಸಾಮಾಜಿಕ ಕಳಕಳಿ, ಮತ್ತು ನೊಂದವರ ಪರವಾಗಿ ಧ್ವನಿಯಾಗುವ ನನ್ನ ಮನಸ್ಸನ್ನೇ ಕೊಂದು ಹಾಕಿತು.
ಆಡಳಿತ ನಡೆಸುವವರು ಮತ್ತು ಅಧಿಕಾರಿಗಳಲ್ಲಿ ತಪ್ಪು ಕಂಡುಬಂದರೆ ಯಾರೂ ಪ್ರಶ್ನಿಸಬಾರದೆಂಬ ನಿಮ್ಮ ನಿಲುವನ್ನು ಕಂಡು ರಾಜ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ತನ್ನ ಕ್ಷೇತ್ರದ ಪ್ರತಿ ಮತದಾರರನ್ನು ಹೆಸರಿಡಿದು ಕರೆಯುವ ನೀವೇನಾ ಎಂದು ಚಿಂತಾಕ್ರಾಂತನಾದೆ.
ಮೇಲಾಗಿ ನೀವೆಲ್ಲಾ ಒಬ್ಬರ ಮೇಲೊಬ್ಬರು ನನ್ನ ಮೇಲೆ ಮುಗಿ ಬಿದ್ದು, ನನ್ನ ಧ್ವನಿಯನ್ನು ವ್ಯವಸ್ಥಿತವಾಗಿ ಅಡಗಿಸಿದಿರಿ ಎಂಬುದನ್ನು ಮಾರನೆಯ ದಿನ ಆ ವಿಡಿಯೋ ನೋಡಿದಾಗ ನನಗೆ ಮನವರಿಕೆಯಾಯಿತು.
ಅದಲ್ಲದೇ ಮಾಧ್ಯಮದವರು ನಿಮ್ಮ ಬಳಿ ನಾವುಗಳೇ ಮಾಡಿದ ವಿಡಿಯೋ ಎಂದು ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದಾಗ, ನೀವು ಈವಾಗ ಸರಿ ಆಯ್ತಲ್ಲಮ್ಮ, ಸುಮ್ನಿರು! ಯಾವನೋ ಒಬ್ಬ ಕುಶಾಲನಗರದ ವ್ಯಕ್ತಿ ವಿಧಾನಸೌಧ ಡೊಂಕಾಗಿದೆ ಎಂದು ವಿಡಿಯೋ ತಂದು ತೋರಿಸಿದರೆ, ಅದನ್ನು ನಂಬುವುದಾ? ಎಂದು ನೀವು ವಿಷಯಾಂತರ ಮಾಡಿದ ರೀತಿ ನೀವು ಉದ್ದೇಶ ಪೂರ್ವಕವಾಗಿ ಯಾರನ್ನೋ ಅಥವಾ ಕಳಪೆಯನ್ನೋ ಮುಚ್ಚಿ ಹಾಕುವ ಪ್ರಯತ್ನ ಮಾಡಿ...
ಹಗರಣ ನಡೆಸಿದ ಮಹಾನ್ ವ್ಯಕ್ತಿಗಳನ್ನು ಸಂರಕ್ಷಿಸುವ ಸಲುವಾಗಿ, ಸಂತ್ರಸ್ತರ ಸೋಗಿನಲ್ಲಿರುವ ಕಳ್ಳ ಬಣ್ಣ ಬದಲಿಸುವ ಗೂಸುಂಬೆಗಳ ಪರವಾಗಿ ಒಂದು ದಿನದ ಮೊದಲು ಗೋಡೆ ಮತ್ತು ಫೌಂಡೇಶನ್ ನಡುವೆ ಹಾಕಿಸಿದ ಹೊಸ ಗಾರೆಯನ್ನು ನೀವು ತೋರಿಸಿ, ಕೆರೆಸಿ. ಅದು ಹಳೆಯ ವಿಡಿಯೋ ಎಂದಿರಲ್ಲಾ…
ನೀವು ಹೋದ ನಂತರದಲ್ಲಿ ಪ್ರತಿಯೊಬ್ಬರು ವಾಸ್ತವವನ್ನು, ಸತ್ಯವನ್ನು ಅರಿತು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಕೊಡಗಿನ ಪ್ರತಿಯೊಬ್ಬರಿಗೂ ಸತ್ಯ ಗೊತ್ತಾಗಿದೆ. ಅದರ ಫಲಶೃತಿಯೇ ಮರುದಿನ ಮಾಧ್ಯಮ ಮತ್ತು ಪತ್ರಿಕೆಯವರು ಆ ಸನ್ನಿವೇಶ ಮತ್ತು ನನ್ನ ಪರವಾಗಿ ಬರೆಯಲು ಕಾರಣ… ಸಂತ್ರಸ್ತರಿಗೆ ನ್ಯಾಯ ದೊರಕುವುದೇ…?